Tag: wheeling

  • ವೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರಿಂದ ಗೂಸಾ

    ವೀಲಿಂಗ್ ಮಾಡ್ತಿದ್ದ ನಾಲ್ವರು ಯುವಕರಿಗೆ ಗ್ರಾಮಸ್ಥರಿಂದ ಗೂಸಾ

    ಬೆಂಗಳೂರು: ವೀಲಿಂಗ್ ಮಾಡುತ್ತಿದ್ದ ನಾಲ್ವರಿಗೆ ಗ್ರಾಮಸ್ಥರು ಗೂಸಾ ಕೊಟ್ಟ ಘಟನೆ ಕೆಂಗೇರಿಯ ಹೆಮ್ಮಿಗೆಪುರ ಗ್ರಾಮದಲ್ಲಿ ನಡೆದಿದೆ.

    ಕೆಎ 01 ಜೆಡಿ 4109 ಹಾಗೂ ಕೆಎ 05 ಕೆಪಿ 4474 ನಂಬರಿನ ಸ್ಕೂಟಿಗಳಲ್ಲಿ ಯುವಕರು ಇಂದು ಮಧ್ಯಾಹ್ನ ನೈಸ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದರು. ಇದನ್ನು ನೋಡಿದ ಹೆಮ್ಮಿಗೆಪುರದ ಗ್ರಾಮಸ್ಥರು ಯುವಕರನ್ನು ತಡೆದು, ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಮ್ಮೆ ವೀಲಿಂಗ್ ಮಾಡದಂತೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    ಗ್ರಾಮಸ್ಥರಿಂದ ಗೂಸಾ ತಿಂದ ಯುವಕರ ಹೆಸರು ತಿಳಿದು ಬಂದಿಲ್ಲ. ಗ್ರಾಮಸ್ಥರು ಯುವಕರನ್ನು ಥಳಿಸಿದ್ದು ಅಷ್ಟೇ ಅಲ್ಲದೆ ಸ್ಕೂಟಿಗಳಿಗೆ ಕಲ್ಲು, ಕೋಲಿನಿಂದ ಹೊಡೆದು ಜಖಂಗೊಳಿಸಿದ್ದಾರೆ.

    ಇತ್ತೀಚೆಗಷ್ಟೇ ಹೆಮ್ಮಿಗೆಪುರ ಗ್ರಾಮದ ಸಿದ್ದಪ್ಪ ಎಂಬವರಿಗೆ ಸ್ಕೂಟಿ ಮೂಲಕ ವೀಲಿಂಗ್ ಮಾಡುತ್ತಿದ್ದ ಯುವಕರ ಗುದ್ದಿದ್ದರು. ಪರಿಣಾಮ ಸಿದ್ದಪ್ಪ ಅವರ ಕಾಲು ಮುರಿದಿತ್ತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ವೀಲಿಂಗ್ ಮಾಡುವ ಯುವಕರಿಗೆ ಪಾಠ ಕಲಿಸಲು ಕಾಯುತ್ತಿದ್ದರು. ಭಾನುವಾರ ಮಧ್ಯಾಹ್ನ ಕೈಗೆ ಸಿಕ್ಕ ನಾಲ್ಕು ಜನ ಯುವಕರಿ ಹಿಗ್ಗಾಮುಗ್ಗಾ ಥಳಿಸಿ ಬುದ್ಧಿ ಕಲಿಸಿದ್ದಾರೆ.

  • ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನ ಬಂಧನ

    ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನ ಬಂಧನ

    ಬೆಂಗಳೂರು: ಪ್ರೇಯಸಿ ಜೊತೆ ವೀಲ್ಹಿಂಗ್ ಮಾಡಿದ್ದ ಯುವಕನನ್ನು ಹೆಬ್ಬಾಳ ಟ್ರಾಫಿಕ್ ಪೊಲೀಸರು ಬಂಧಿಸಿದ್ದಾರೆ.

    ನೂರ್ ಅಹಮ್ಮದ್(21) ಬಂಧನಕ್ಕೊಳಗಾದ ಯುವಕ. ನೂರ್ ಅಹಮ್ಮದ್ ಯಲಹಂಕದ ಸರ್ಕಾರಿ ಕಾಲೇಜಿನಲ್ಲಿ ಬಿ.ಕಾಂ ಪದವಿ ಪೂರ್ಣಗೊಳಿಸಿ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದನು. ಇತ್ತೀಚೆಗೆ ನೂರ್ ತನ್ನ ಸ್ನೇಹಿತ ಇಮ್ರಾನ್ ಬಳಿ ಸ್ಕೂಟಿ ಪಡೆದು ಕಳೆದ ಗುರುವಾರ ಅಂದರೆ ಜೂನ್ 6ರಂದು ತನ್ನ ಪ್ರೇಯಸಿ ಜೊತೆ ನಂದಿಬೆಟ್ಟಕ್ಕೆ ತೆರಳಿದ್ದನು.

    ಈ ವೇಳೆ ನೂರ್ ಅಹಮ್ಮದ್ ದೇವನಹಳ್ಳಿ ಮುಖ್ಯ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದಾನೆ. ಇವರಿಬ್ಬರು ವೀಲ್ಹಿಂಗ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಈ ವೈರಲ್ ವಿಡಿಯೋ ನೋಡಿದ ಹೆಬ್ಬಾಳ ಪೊಲೀಸರು ಯುವಕನನ್ನು ಬಂಧಿಸಿ ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ.

    ಹೆಬ್ಬಾಳ ಸಂಚಾರ ಪೊಲೀಸರು ಭಾನುವಾರ ಕಾರ್ಯಚರಣೆ ನಡೆಸುತ್ತಿದ್ದಾಗ ಅಹ್ಮದ್ ಸ್ನೇಹಿತ ಇಮ್ರಾನ್ ಪೊಲೀಸರನ್ನು ಕಂಡು ಪರಾರಿಯಾಗಿದ್ದನು. ಈ ವೇಳೆ ಪೊಲೀಸರು ಆತನ ಸ್ಕೂಟಿ ನಂಬರ್ ಬರೆದುಕೊಂಡು ತನಿಖೆ ನಡೆಸಿದ್ದಾಗ ಸ್ಕೂಟಿ ಇಮ್ರಾನ್ ಅವರ ತಾಯಿಯ ಹೆಸರಿನಲ್ಲಿ ಇತ್ತು.

    ವೈರಲ್ ಆಗಿರುವ ವಿಡಿಯೋದಲ್ಲಿ ಹಾಗೂ ಇಮ್ರಾನ್ ಅವರ ತಾಯಿಯ ಸ್ಕೂಟಿ ಒಂದೇ ರೀತಿ ಕಂಡ ಬಂತು. ಆಗ ಪೊಲೀಸರು ಇಮ್ರಾನ್‍ನನ್ನು ವಿಚಾರಣೆ ನಡೆಸಿದರು. ಆಗ ಇಮ್ರಾನ್ ಸತ್ಯವನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಬಳಿಕ ಪೊಲೀಸರು ನೂರ್ ಅಹಮ್ಮದ್‍ನನ್ನು ಬಂಧಿಸಿ ಸ್ಕೂಟಿಯನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಏನಿದು ಪ್ರಕರಣ?
    ನೂರ್ ಅಹಮ್ಮದ್ ಸ್ಕೂಟಿ ಹಿಂದೆ ತನ್ನ ಪ್ರೇಯಸಿಯನ್ನು ಕೂರಿಸಿಕೊಂಡು ದೇವನಹಳ್ಳಿ ರಸ್ತೆಯಲ್ಲಿ ವೀಲ್ಹಿಂಗ್ ಮಾಡಿದ್ದನು. ಇದನ್ನು ಹಿಂದೆ ಬರುತಿದ್ದವರು ವಿಡಿಯೋ ಮಾಡಿದ್ದರು. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ `ಹಲೋ’ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಯುವತಿಯೊಬ್ಬಳು ಪೋಸ್ಟ್ ಮಾಡಿದ್ದಳು. ಸೋನು ಎಂಬ ಅಕೌಂಟ್‍ನಿಂದ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಲ್ಹಿಂಗ್ ದೃಶ್ಯ ವೈರಲ್ ಆಗಿತ್ತು.

    https://www.youtube.com/watch?v=6DX7fyJxZt8

  • ಬೆಂಗ್ಳೂರಿನಲ್ಲಿ ಲವರ್ಸ್ ಡೇಂಜರಸ್ ವೀಲ್ಹಿಂಗ್- ವಿಡಿಯೋ ವೈರಲ್

    ಬೆಂಗ್ಳೂರಿನಲ್ಲಿ ಲವರ್ಸ್ ಡೇಂಜರಸ್ ವೀಲ್ಹಿಂಗ್- ವಿಡಿಯೋ ವೈರಲ್

    ಬೆಂಗಳೂರು: ಲವರ್ ಬೈಕ್‍ನಲ್ಲಿ ತಬ್ಬಿಕೊಂಡು ಜಾಲಿ ರೈಡ್ ಮಾಡೋದು ಕಾಮನ್. ಆದ್ರೆ ಬೆಂಗಳೂರು ಹೊರವಲಯದಲ್ಲಿ ಯುವಕನೊಬ್ಬ ತನ್ನ ಪ್ರೇಯಸಿಯನ್ನು ಸ್ಕೂಟಿ ಹಿಂದೆ ಕೂರಿಸಿಕೊಂಡು ಅಪಾಯಕಾರಿ ವಿಲ್ಹಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಹೌದು. ಏನೋ ಸಿನಿಮಾಗಳಲ್ಲಿ ತೋರಿಸುವ ಹಾಗೇ ಬೈಕ್‍ನಲ್ಲಿ ಸ್ಟಂಟ್ಸ್ ಗಳನ್ನು ಮಾಡಲು ಹೋಗಿ ಆಸ್ಪತ್ರೆ ಸೇರಿದವರ ಸಂಖ್ಯೆಯೇ ಹೆಚ್ಚು. ಅಲ್ಲದೆ ವಿಲ್ಹಿಂಗ್, ಸ್ಟಂಟ್ಸ್ ಗಳನ್ನು ಮಾಡಿ ಬಹಳಷ್ಟು ಮಂದಿ ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಈ ವಿಲ್ಹಿಂಗ್, ಸ್ಟಂಟ್ಸ್ ಗಳನ್ನು ರೋಡ್‍ಗಳಲ್ಲಿ ಮಾಡಬೇಡಿ ಎಂದು ಎಷ್ಟು ಸಾರಿ ಸಂಚಾರಿ ಪೊಲೀಸರು ಹೇಳಿದರೂ ಯುವಕರು ಕ್ಯಾರೆ ಅಂತಿಲ್ಲ. ಇದಕ್ಕೆ ದೇವನಹಳ್ಳಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿದ್ದ ಲವರ್ಸ್ ವಿಡಿಯೋ ತಾಜಾ ಉದಾಹರಣೆಯಾಗಿದೆ.

    ಓರ್ವ ಯುವಕ ಸ್ಕೂಟಿ ಹಿಂದೆ ಪ್ರೇಯಸಿಯನ್ನು ಕೂರಿಸಿಕೊಂಡು ದೇವನಹಳ್ಳಿ ರಸ್ತೆಯಲ್ಲಿ ವಿಲ್ಹಿಂಗ್ ಮಾಡಿದ್ದಾನೆ. ಇದನ್ನು ಹಿಂದೆ ಬರುತಿದ್ದವರು ವಿಡಿಯೋ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಾಮಾಜಿಕ ಜಾಲತಾಣ ‘ಹಲೋ’ ಆ್ಯಪ್‍ನಲ್ಲಿ ಈ ವಿಡಿಯೋವನ್ನು ಯುವತಿಯೊಬ್ಬಳು ಪೋಸ್ಟ್ ಮಾಡಿದ್ದಾಳೆ. ಸೋನು ಎಂಬ ಅಕೌಂಟ್‍ನಿಂದ ವಿಡಿಯೋ ಅಪ್ಲೋಡ್ ಮಾಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಲ್ಹಿಂಗ್ ದೃಶ್ಯ ವೈರಲ್ ಆಗುತ್ತಿದೆ.

    ಟ್ರಾಫಿಕ್ ಪೊಲೀಸರು ಎಷ್ಟೇ ಈ ರೀತಿ ಅಪಾಯಕಾರಿ ವಿಲ್ಹಿಂಗ್‍ಗಳನ್ನ ಮಾಡಬೇಡಿ, ಅದು ನಿಮ್ಮ ಜೀವಕ್ಕೆ ಕುತ್ತು ಎಂದು ಜಾಗೃತಿ ಮೂಡಿಸಿದರು ಪುಂಡರು ಮಾತ್ರ ನಮ್ಮ ಬೈಕ್, ನಮ್ಮ ಜೀವ ನಿಮಗೇನು ಎಂದು ಸಂಚಾರಿ ನಿಯಮವನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

    https://www.youtube.com/watch?v=6DX7fyJxZt8

  • ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡ್ತಿದ್ದ 30 ಬೈಕ್‍ಗಳು ಜಪ್ತಿ

    ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡ್ತಿದ್ದ 30 ಬೈಕ್‍ಗಳು ಜಪ್ತಿ

    ಬೆಂಗಳೂರು: ಹೆಬ್ಬಾಳ ಸಂಚಾರಿ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ವಿಕೆಂಡ್ ಮಸ್ತಿಯಲ್ಲಿ ವೀಲಿಂಗ್, ಸ್ಟಂಟ್ ಮಾಡುತ್ತಿದ್ದ ಮೂವತ್ತು ಬೈಕ್‍ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ವಿಕೆಂಡ್ ಮಸ್ತಿ ಎಂದು ಯುವಕರು ಹೆಬ್ಬಾಳ, ಏರ್ ಪೊರ್ಟ್ ರೋಡ್ ನಾಗವಾರ ರಿಂಗ್ ರಸ್ತೆಯಲ್ಲಿ ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿದ್ದರು. ಹೀಗಾಗಿ ಹೆಬ್ಬಾಳ ಸಂಚಾರಿ ಪೊಲೀಸರು 30 ಬೈಕ್‍ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

    ಯುವಕರು ವೀಲಿಂಗ್ ಹಾಗೂ ಸ್ಟಂಟ್ ಮಾಡುತ್ತಿರುವುದನ್ನು ತಡೆಯಲು ಹೆಬ್ಬಾಳ ಸಂಚಾರಿ ಪೊಲೀಸರು ವಿಕೆಂಡ್‍ನಲ್ಲಿ ವಿಶೇಷ ಕಾರ್ಯಚಾರಣೆ ನಡೆಸಿದ್ದರು. ಬೈಕ್ ಸ್ಟಂಟ್ ಹಾಗೂ ವಿಲೀಂಗ್ ಮಾಡಲು ಕಾಲೇಜಿನ ಯುವಕರು ಬೈಕ್‍ಗಳನ್ನು ಮಾಡಿಫೈ ಮಾಡಿಸಿ ಸ್ಟಂಟ್ ಮಾಡುತ್ತಿದ್ದರು.

    ಪೊಲೀಸರು ಕಾರ್ಯಚರಣೆ ನಡೆಸಿದ್ದಾಗ ಬೈಕ್ ಸವಾರರು ಯಾವುದೇ ದಾಖಲಾತಿಗಳನ್ನು ಹೊಂದಿರಲಿಲ್ಲ. ಸದ್ಯ ಪೊಲೀಸರು ಬೈಕ್ ಜಪ್ತಿ ಪಡೆದುಕೊಂಡು ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಟ್ವಿಟ್ಟರ್‌ನಿಂದ ವೀಲಿಂಗ್ ನಡೆಸಿದ್ದ ಬೆಂಗಳೂರಿನ ಇಬ್ಬರು ಯುವಕರು ಅರೆಸ್ಟ್!

    ಟ್ವಿಟ್ಟರ್‌ನಿಂದ ವೀಲಿಂಗ್ ನಡೆಸಿದ್ದ ಬೆಂಗಳೂರಿನ ಇಬ್ಬರು ಯುವಕರು ಅರೆಸ್ಟ್!

    ಬೆಂಗಳೂರು:ನಗರದ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿದ್ದ ಯುವಕರಿಬ್ಬರು ಟ್ವಿಟ್ಟರ್ ಬಳಕೆದಾರಿಂದಾಗಿ ಅರೆಸ್ಟ್ ಆಗಿದ್ದಾರೆ.

    ಹೆಗಡೆ ನಗರದಲ್ಲಿ ಇಬ್ಬರು ಯುವಕರು ಡಿಯೋದಲ್ಲಿ ವೀಲಿಂಗ್ ಮಾಡುತ್ತಿದ್ದರು. ಇಬ್ಬರು ವೀಲಿಂಗ್ ಮಾಡುತ್ತಿದ್ದ ದೃಶ್ಯವನ್ನು ನರಸಿಂಹ ಮೂರ್ತಿ ಸೆರೆ ಹಿಡಿದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ಟ್ವಿಟ್ಟರ್ ನಲ್ಲಿ ಟ್ಯಾಗ್ ಮಾಡಿ ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದರು.

    ಹೆಗಡೆ ನಗರದಲ್ಲಿ ಸಂಜೆ 5 ಗಂಟೆಯ ವೇಳೆ ಇವರು ಬೈಕಿನಲ್ಲಿ ವೀಲಿಂಗ್ ಮಾಡುತ್ತಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಗಮನಿಸಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಹಿತೇಂದ್ರ ಉತ್ತರ ವಲಯದ ಡಿಸಿಪಿಗೆ ಟ್ಯಾಗ್ ಮಾಡಿ ಕೂಡಲೇ ಕ್ರಮಕೈಗೊಳ್ಳಿ ಎಂದು ಸೂಚಿಸಿದ್ದರು.

    ಈ ಸೂಚನೆ ಬಂದ ಕೂಡಲೇ ಹೆಬ್ಬಾಳ ಟ್ರಾಫಿಕ್ ಪೊಲೀಸರು, ವೀಲಿಂಗ್ ನಡೆಸಿದ್ದ ಇಬ್ಬರನ್ನು ಬಂಧಿಸಲಾಗಿದೆ, ಡಿಯೋವನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಂಗಳವಾರ ಟ್ವೀಟ್ ಮಾಡಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡಿ ಕ್ರಮಕೈಗೊಂಡ ಬೆಂಗಳೂರು ಸಂಚಾರ ಪೊಲೀಸರ ಕ್ರಮಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

    https://twitter.com/murthycool/status/1014141528376258561

    https://twitter.com/hebbaltrafficps/status/1026447046251819008

     

  • ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ವೀಲ್ಹಿಂಗ್ ಕ್ರೇಜ್!

    ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕರ ವೀಲ್ಹಿಂಗ್ ಕ್ರೇಜ್!

    ಬೆಂಗಳೂರು: ಪೋಲಿ ಪುಂಡ ಯುವಕರ ವೀಲ್ಹಿಂಗ್ ಕ್ರೇಜ್‍ಗೆ ಪ್ರತಿನಿತ್ಯ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರು ಹೈರಾಣಾಗಿದ್ದಾರೆ. ಬೆಂಗಳೂರು ಹೊರವಲಯ ನೆಲಮಂಗಲದಲ್ಲಿ ಯುವಕರ ಗುಂಪು ಮೋಜು ಮಸ್ತಿಗಾಗಿ ಡೇಂಜರಸ್ ವೀಲ್ಹಿಂಗ್ ಮಾಡುತ್ತಿದ್ದಾರೆ.

    ಯುವಕರ ಮೋಜು ಮಸ್ತಿಗೆ ಹೆದ್ದಾರಿಯಲ್ಲಿ ಸಂಚರಿಸುವ ಇತರೆ ಸವಾರರು ಭಯದಿಂದಲೇ ಹೈರಾಣಾಗಿದ್ದಾರೆ. ಇನ್ನೂ ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪ್ರತಿದಿನ ಈ ಬೈಕ್ ವೀಲ್ಹಿಂಗ್ ಪುಂಡರ ಹಾವಳಿ ಹೆಚ್ಚುತ್ತಿದೆ.

    ಯುವಕರ ಪುಂಡಾಟಿಕೆಯ ನಡುವೆ ದ್ವಿಚಕ್ರ ವಾಹನ ಸವಾರರು ತಮ್ಮ ಜೀವ ಕೈಯಲ್ಲಿ ಹಿಡಿದು ಹೆದ್ದಾರಿಯಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ. ಇನ್ನು ಪೊಲೀಸ್ ಇಲಾಖೆಯವರು ಹೆದ್ದಾರಿಯಲ್ಲಿ ಸಿಸಿಟಿವಿಯನ್ನು ಅಳವಡಿಸಿ ಬೈಕ್ ವೀಲ್ಹಿಂಗ್ ಮಾಡುವ ಪುಂಡರ ವಿರುದ್ಧ ಸೂಕ್ತ ಕ್ರಮ ಜರುಗಿಸಿ, ಬೈಕ್ ವೀಲ್ಹಿಂಗ್ ಹಾವಳಿಗೆ ಕಡಿವಾಣ ಹಾಕಬೇಕಿದೆ ಎಂದು ವಾಹನ ಸವಾರರು ಆಗ್ರಹಿಸಿದ್ದಾರೆ.

    ಯುವಕರು ಈ ಬೈಕ್ ವೀಲ್ಹಿಂಗ್ ಮೋಜಿನಿಂದ ಸಲ್ಪ ಯಾಮಾರಿದ್ದರೂ ಅವರ ಜೀವಕ್ಕೂ ಕುತ್ತು ಬರುವ ಅಪಾಯ ಕೂಡ ಎದುರಾಗಲಿದೆ.

  • ತುಮಕೂರಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ- ಟಚ್ ಮಾಡಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ಸ್ಥಳೀಯರು

    ತುಮಕೂರಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ- ಟಚ್ ಮಾಡಿದ್ದಕ್ಕೆ ಬೈಕಿಗೆ ಬೆಂಕಿ ಹಚ್ಚಿದ ಸ್ಥಳೀಯರು

    ತುಮಕೂರು: ನಗರದಲ್ಲಿ ಮತ್ತೆ ಬೈಕ್ ವೀಲಿಂಗ್ ಹಾವಳಿ ಶುರುವಾಗಿದ್ದು, ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆದ ಪರಿಣಾಮ ಸ್ಥಳೀಯರು ಬೈಕಿಗೆ ಬೆಂಕಿ ಹಚ್ಚಿದ ಘಟನೆ ತುಮಕೂರು ನಗರದ ಟೌನ್ ಹಾಲ್ ಸರ್ಕಲ್ ಬಳಿ ನಡೆದಿದೆ.

    ಫಾರೂಕ್(23), ಶಮೀರ್(19) ಹಾಗೂ ಸಲ್ಮಾನ್(20) ಬೈಕ್ ವೀಲಿಂಗ್ ಮಾಡಿದ ಯುವಕರು. ಮೂವರು ಮರಳೂರು ದಿಣ್ಣೆ ಸಮೀಪದ ನಜಬಾದ್ ನಿವಾಸಿಗಳಾಗಿದ್ದು, ಭಾನುವಾರ ರಾತ್ರಿ ವೀಲಿಂಗ್ ಮಾಡಬೇಕಾದರೆ ವ್ಯಕ್ತಿಗೆ ಬೈಕ್ ಟಚ್ ಆಗಿದೆ.

    ಮೂವರು ಯುವಕರು ಸೇರಿ ಎರಡು ಬೈಕಿನಲ್ಲಿ ವೀಲಿಂಗ್ ಮಾಡಿಕೊಂಡು ಬಂದಿದ್ದಾರೆ. ಕಂಟ್ರೋಲ್ ಸಿಗದೆ ದಾರಿಹೋಕನಿಗೆ ಬೈಕ್ ಟಚ್ ಮಾಡಿದ್ದಾರೆ. ಟಚ್ ಮಾಡಿದ ಪರಿಣಾಮ ಸ್ಥಳೀಯರು ಬೈಕ್ ಸವಾರರಿಗೆ ಥಳಿಸಿ ಬೈಕಿಗೆ ಬೆಂಕಿ ಹಚ್ಚಿದ್ದಾರೆ.

    ಸದ್ಯ ಮೂವರು ಯುವಕರನ್ನು ಸ್ಥಳೀಯರು ಟೌನ್ ಠಾಣೆ ಪೊಲೀಸರಿಗೆ ಒಪ್ಪಿಸಿದ್ದು, ನಗರ ಠಾಣಾ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

     

  • ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರ ಅಪಾಯಕಾರಿ ವೀಲಿಂಗ್! ವಿಡಿಯೋ ನೋಡಿ

    ತುಮಕೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸವಾರರ ಅಪಾಯಕಾರಿ ವೀಲಿಂಗ್! ವಿಡಿಯೋ ನೋಡಿ

    ತುಮಕೂರು: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಪಡ್ಡೆ ಹುಡುಗರ ಬೈಕ್ ವೀಲಿಂಗ್ ಮೀತಿ ಮೀರಿದೆ. ಅಪಾಯಕಾರಿ ಬೈಕ್ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ.

    ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇತರ ಪಡ್ಡೆ ಹೈಕ್ಳು ನಿರಂತರವಾಗಿ ಬೈಕ್ ವೀಲಿಂಗ್ ಮಾಡಿ ವಿಡಿಯೋವನ್ನು ಸೆರೆ ಹಿಡಿದು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಡುತ್ತಿದ್ದಾರೆ. ಶಹಬ್ಬಾಸ್ ಗಿರಿ ಪಡೆಯುತಿದ್ದಾರೆ.

    ಹುಡುಗರ ಈ ಅಪಾಯಕಾರಿ ಸಾಹಸ ಸಹ ವಾಹನ ಚಾಲಕರಿಗೆ ಭಯ ಹುಟ್ಟುವಂತೆ ಮಾಡಿದೆ. ಪೊಲೀಸರು ಈ ವಿಡಿಯೋ ನೋಡಿ ಎಚ್ಚೆತ್ತು ಈ ಸವಾರರಿಗೆ ಬಿಸಿ ಮುಟ್ಟಿಸಬೇಕಿದೆ.

    https://www.youtube.com/watch?v=0wIuLyK_N54

  • ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ಬಲಿ

    ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ಬಲಿ

    ಚಿಕ್ಕಬಳ್ಳಾಪುರ: ಬೈಕ್ ಸವಾರನ ವೀಲ್ಹಿಂಗ್ ಹುಚ್ಚಿಗೆ 11 ವರ್ಷದ ಬಾಲಕಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ದೇವನಹಳ್ಳಿ ತಾಲೂಕಿನ ಅವತಿ ಬಳಿ ನಡೆದಿದೆ.

    ಬುಳ್ಳಹಳ್ಳಿಯ ವೇಣುಗೋಪಾಲ್ ಎಂಬುವರ ಮಗಳು ಅಂಜು ಮೃತ ಬಾಲಕಿ. ಬೆಂಗಳೂರು ಮೂಲದ ನಿಕಿತ್ ಸ್ನೇಹಿತರೊಂದಿಗೆ ಬೈಕ್ ರೇಸಿಂಗ್ ಮಾಡುತ್ತಾ ಕೋಲಾರದ ಅಂತರಗಂಗೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಅಂಜು ಅವತಿಯಿಂದ ಕುಡಿಯುವ ನೀರು ತೆಗೆದುಕೊಂಡು ಗ್ರಾಮಕ್ಕೆ ತೆರಳುವ ವೇಳೆ ಈ ಘಟನೆ ನಡೆದಿದೆ.

    ಘಟನೆ ಬಳಿಕ ಸಾರ್ವಜನಿಕರು ಬೈಕ್ ಸವಾರನನ್ನು ಹಿಡಿದು ಥಳಿಸಿದ್ದಾರೆ. ಇನ್ನು ಸ್ಥಳೀಯರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದರಿಂದ ಸುಮಾರು 2 ಕಿ.ಮೀಗೂ ಅಧಿಕ ಟ್ರಾಫಿಕ್ ಜಾಮ್ ಆಗಿತ್ತು. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

  • ಹೆದ್ದಾರಿಯಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಯುವಕರ ಮೋಜು-ಮಸ್ತಿ, ವ್ಹೀಲಿಂಗ್: 70ಕ್ಕೂ ಹೆಚ್ಚು ಬೈಕ್ ವಶ

    ಹೆದ್ದಾರಿಯಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳಲ್ಲಿ ಯುವಕರ ಮೋಜು-ಮಸ್ತಿ, ವ್ಹೀಲಿಂಗ್: 70ಕ್ಕೂ ಹೆಚ್ಚು ಬೈಕ್ ವಶ

    ಬೆಂಗಳೂರು: ರಾತ್ರಿ ವೇಳೆಯಲ್ಲಿ ರಸ್ತೆಯಲ್ಲಿ ಮೋಜು ಮಸ್ತಿ ಮಾಡುವ ಬೈಕ್ ಹಾಗೂ ಕಾರು ಸವಾರರಿಗೆ ಬೆಂಗಳೂರು ಪೀಣ್ಯ ಸಂಚಾರಿ ಪೊಲೀಸರು ಶಾಕ್ ನೀಡಿದ್ದಾರೆ.

    ಗುರುವಾರ ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿ 150ಕ್ಕೂ ಹೆಚ್ಚು ದ್ವಿಚಕ್ರವಾಹನಗಳಲ್ಲಿ ಜಾಲಿ ರೈಡ್ ಹೋಗುತ್ತಿದ್ದ ಯುವಕರನ್ನು ತಡೆದು ನಿಲ್ಲಿಸಿದ ಸಂಚಾರಿ ಪೊಲೀಸರು 70ಕ್ಕೂ ಹೆಚ್ಚು ಬೈಕ್ ಸೀಜ್ ಮಾಡಿದ್ದಾರೆ.

    ಪೊಲೀಸರಿಗೂ ಕ್ಯಾರೆ ಎನ್ನದೆ ಬೈಕ್ ಸವಾರರು ಹೆದ್ದಾರಿಯಲ್ಲಿ ಕರ್ಕಶ ಶಬ್ಧ ಮಾಡಿಕೊಂಡು, ವೀಲಿಂಗ್ ಮಾಡುವ ಮೂಲಕ ಆತಂಕ ಸೃಷ್ಠಿಸಿದ್ದರು. ಬೆಂಗಳೂರು ನಗರದ ವಿವಿಧ ಏರಿಯಾದ ಯುವಕರು ಪೀಣ್ಯ, ಚಿಕ್ಕಬಿದರಕಲ್ಲು, ಮಾದವಾರ, ನೆಲಮಂಗಲ, ಡಾಬಸ್‍ಪೇಟೆ ಭಾಗದಲ್ಲಿ ಬೆಳಗಿನ ಜಾವದವರೆಗೂ ಭಯಾನಕ ವೀಲಿಂಗ್ ಸಾಹಸದಲ್ಲಿ ನಿರತರಾಗಿದ್ದರು.

    ಮುನ್ನೆಚ್ಚರಿಕಾ ಕ್ರಮವಾಗಿ ಗೊರಗುಂಟೆಪಾಳ್ಯದಿಂದ ಆರಂಭವಾಗುವ ನೆಲಮಂಗಲ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ನಿರ್ಬಂಧಿಸಿ ರಸ್ತೆಯುದ್ದಕ್ಕೂ ಪೊಲೀಸ್ ನಿಲ್ಲಿಸಿದ್ದರು. ಇದ್ಯಾವುದನ್ನೂ ಲೆಕ್ಕಿಸದೇ ಕೆಳರಸ್ತೆಯಲ್ಲೇ ಯರ್ರಾಬಿರ್ರಿ ಸಾಗುತ್ತಿದ್ದಾಗ ತುಮಕೂರು ರಸ್ತೆಯ ಪಾರ್ಲೆ ಫ್ಯಾಕ್ಟರಿ ಬಳಿ ಕಾದು ಕುಳಿತು ಪೊಲೀಸರು ಬೈಕ್‍ಗಳನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ಅರ್ಧದಷ್ಟು ಬೈಕ್ ಸವಾರರು ಹಿಂದಕ್ಕೆ ಚಲಿಸಿದ್ರೆ, ಇನ್ನೊಂದಿಷ್ಟು ಮಂದಿ ರಸ್ತೆ ಡಿವೈಡರ್ ಮೇಲೆ ಬೈಕ್ ಹತ್ತಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ.

    ಈ ಭಯಾನಕ ಬೈಕ್ ವೀಲಿಂಗ್‍ನಿಂದ ಸಾರ್ವಜನಿಕರು ಆತಂಕಗೊಂಡು ಆಕ್ರೋಶ ವ್ಯಕ್ತಪಡಿಸಿದ್ದು, ಬೆಂಗಳೂರು ನಗರ ಹಾಗೂ ಗ್ರಾಮಾತಂರ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.