Tag: wheeling

  • Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

    Ramanagara | ರಸ್ತೆಯಲ್ಲಿ ವೀಲ್ಹಿಂಗ್ ಮಾಡಿ ವಾಹನ ಸವಾರರಿಗೆ ತೊಂದರೆ – ನಾಲ್ವರ ಬಂಧನ

    -3 ವಾಹನಗಳು ಸೀಜ್

    ರಾಮನಗರ: ರಸ್ತೆಗಳಲ್ಲಿ ವೀಲ್ಹಿಂಗ್ (Wheeling) ಮಾಡಿ ವಾಹನ ಸವಾರರಿಗೆ ತೊಂದರೆ ಕೊಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಮಾಗಡಿ-ಬೆಂಗಳೂರು ಹೆದ್ದಾರಿಯಲ್ಲಿ ಬೈಕ್ ವೀಲ್ಹಿಂಗ್ ಮಾಡ್ತಿದ್ದ ನಾಲ್ವರು ಆರೋಪಿಗಳನ್ನ ಮಾಗಡಿ ಪೊಲೀಸರು (Magadi Police) ಬಂಧಿಸಿದ್ದಾರೆ.

    ಹೆದ್ದಾರಿಯಲ್ಲಿ ಮೂರು ಬೈಕ್‌ಗಳಲ್ಲಿ ವೀಲ್ಹಿಂಗ್ ಮಾಡುತ್ತಾ ಇತರ ವಾಹನ ಸವಾರರಿಗರ ತೊಂದರೆ ಮಾಡುವುದಲ್ಲದೇ ಅದನ್ನ ವೀಡಿಯೋ ಮಾಡ್ತಿದ್ದ ವಾಹನ ಸವಾರರಿಗೆ ಪುಂಡರು ಬೆದರಿಕೆ ಹಾಕಿದ್ದಾರೆ. ಕೂಡಲೇ ವಾಹನ ಸವಾರರು ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಸ್ಥಳಕ್ಕೆ ಬಂದ ಮಾಗಡಿ ಪೊಲೀಸರು, ಮೂರು ಬೈಕ್ ಗಳನ್ನ ಸೀಜ್ ಮಾಡಿ, ಓರ್ವ ಯುವಕ ಸೇರಿ ಮೂವರು ಅಪ್ರಾಪ್ತ ಬಾಲಕರನ್ನ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪ್ರೇಯಸಿಯ ಒತ್ತಡಕ್ಕೆ ಮಣಿದು ಪತ್ನಿಯನ್ನೇ ಹತ್ಯೆಗೈದ ಬಿಜೆಪಿ ನಾಯಕ

    ಭಾರತೀಯ ನ್ಯಾಯ ಸಂಹಿತೆ 281, 128, 177 ಐಎಂವಿ ಕಾಯ್ಡೆಯಡಿ ಪ್ರಕರಣ ದಾಖಲು ಮಾಡಿದ್ದಾರೆ. ಇದನ್ನೂ ಓದಿ: 71‌ ಜಿಲ್ಲಾಧ್ಯಕ್ಷರ ಪಟ್ಟಿ ಬಿಡುಗಡೆ ಬೆನ್ನಲ್ಲೇ ಭಿನ್ನಮತ ಸ್ಫೋಟ – ʻಕೈʼಗೆ ತಟ್ಟಿದ ಸಾಮೂಹಿಕ ರಾಜೀನಾಮೆ ಬಿಸಿ

  • ವ್ಹೀಲಿಂಗ್‌ ಮಾಡುತ್ತಾ ಜಲಮಂಡಳಿ ಗುಂಡಿಗೆ ಬಿದ್ದು ಯುವಕ ಸಾವು, ಇಬ್ಬರು ಗಂಭೀರ

    ವ್ಹೀಲಿಂಗ್‌ ಮಾಡುತ್ತಾ ಜಲಮಂಡಳಿ ಗುಂಡಿಗೆ ಬಿದ್ದು ಯುವಕ ಸಾವು, ಇಬ್ಬರು ಗಂಭೀರ

    ಬೆಂಗಳೂರು: ಕೆಂಗೇರಿ ಬಳಿಯ ಕೊಮ್ಮಘಟ್ಟ ಸರ್ಕಲ್‌ನಲ್ಲಿ ಜಲಮಂಡಳಿ (BWSSB) ತೋಡಿದ ಗುಂಡಿಗೆ ಬಿದ್ದು ಓರ್ವ ಯುವಕ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆಗೆ ಟ್ವಿಸ್ಟ್‌  ಸಿಕ್ಕಿದೆ.  ವ್ಹೀಲಿಂಗ್‌ (Wheeling) ಮಾಡಲು ಹೋಗಿ ಈ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿ ಸಂತೋಷ್‌ ಪಬ್ಲಿಕ್‌ ಟಿವಿಗೆ ತಿಳಿಸಿದ್ದಾರೆ.

    ಘಟನೆಯಲ್ಲಿ ಸದ್ದಾಂ ಪಾಷಾ(20) ಸಾವನ್ನಪ್ಪಿದ್ದರೆ, ಉಮ್ರಾನ್ ಪಾಷಾ ಮತ್ತು ಮುಬಾರಕ್‌ ಪಾಷಾ ಗಂಭೀರವಾಗಿ ಗಾಯಗೊಂಡಿದ್ದಾರೆ. ಜೆಜೆ ನಗರ (JJ Nagara) ಮೂಲದ ಇವರು ಒಂದೇ ಸ್ಕೂಟರಿನಲ್ಲಿ  ಸಂಚರಿಸುತ್ತಿದ್ದಾಗ ಈ ದುರ್ಘಟನೆ ನಡೆದಿದೆ.  ಇದನ್ನೂ ಓದಿ: `ಲೋಕ’ ಅಖಾಡದಲ್ಲಿ ಮತ್ತೆ ಮೋದಿ-ಗೌಡರ ಜೋಡಿ ಕಮಾಲ್ – ಏ.20ಕ್ಕೆ ದೇವನಹಳ್ಳಿಯಲ್ಲಿ ಬೃಹತ್‌ ಮೈತ್ರಿ ಸಮಾವೇಶ

    ಜಲ ಮಂಡಳಿಯವರು ಪೈಪ್ ಹಾಕಲು ಹಳ್ಳ ತೆಗೆದು ಬ್ಯಾರಿಕೇಡ್ ಹಾಕಿದ್ದರು. ಕೊಮ್ಮಘಟ್ಟ ಸರ್ಕಲ್‌ ಬಳಿ ಬರುವಾಗ ಬ್ಯಾರಿಕೇಡ್‌ ನಡುವಿನ ಸಣ್ಣ ಜಾಗದಲ್ಲಿ ವೇಗವಾಗಿ ದ್ವಿಚಕ್ರ ಚಲಾಯಿಸಿದ ಪರಿಣಾಮ ಸವಾರ ಸದ್ದಾಂ ಪಾಷಾ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ. ಕೂಡಲೇ ನೆರವಿಗೆ ದಾಖಲಿಸಿದ ಸ್ಥಳೀಯರು ಗಾಯಾಳುಗಳನ್ನು ಗುಂಡಿಯಿಂದ ಮೆಲಕ್ಕೆ ಎತ್ತು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು.  ಇದನ್ನೂ ಓದಿ: ಯಡಿಯೂರಪ್ಪನವ್ರೇ ನೀವು ಕರೆದಲ್ಲಿ ಬಂದು ಪ್ರಚಾರ ಮಾಡ್ತೀನಿ: ಹೆಚ್‍ಡಿಡಿ

    ಸಂತೋಷ್‌ ಹೇಳಿದ್ದೇನು?
    ಭಾನುವಾರ ರಾತ್ರಿ 8:45ರ ಸಮಯದಲ್ಲಿ ನಾನು ಕೂಡ ಕೆಂಗೇರಿ ರಸ್ತೆಯಲ್ಲಿ ಬರುತ್ತಿದೆ. ನನ್ನನ್ನು ಓವರ್ ಟೇಕ್ ಮಾಡಿಕೊಂಡು ಮೂವರು ಯುವಕರು ಸ್ಕೂಟರ್‌ನಲ್ಲಿ ಬಂದರು. ಅದೇ ವೇಗದಲ್ಲಿ ವ್ಹೀಲಿಂಗ್‌ ಮಾಡುತ್ತಾ ಮುಂದೆ ಸಾಗುತ್ತಿದ್ದರು.

    ವ್ಹೀಲಿಂಗ್‌ ಮಾಡುವ ವೇಳೆ ಸ್ಕೂಟರ್‌ ಹೆಡ್‌ಲೈಟ್‌ ಮೇಲಕ್ಕೆ ಹೋಗಿದೆ.  ಆಗ ಗುಂಡಿ ಮುಂದಕ್ಕೆ ಇರುವುದು ಕಾಣಿಸದೇ ನೇರವಾಗಿ ಬಂದು ಒಳಗಡೆ ಬಿದ್ದಿದ್ದಾರೆ. ನಾವೇ ಮೇಲಕ್ಕೆ ಎತ್ತಿ, ಆಸ್ಪತ್ರೆಗೆ ಸೇರಿಸಿದ್ದೆವು. ಯುವಕರ ಪುಂಡಾಟಕ್ಕೆ ಜೀವ ತೆತ್ತಿದ್ದಾರೆ. ಜಲ ಮಂಡಳಿಯವರು ಬ್ಯಾರಿಕೇಡ್‌ ಹಾಕಿದ್ದರು. ಆದರೆ ಅವರು ವೇಗವಾಗಿ ಬಂದು ಬ್ಯಾರಿಕೇಡ್‌ಗೆ ಗುದ್ದಿ ಗುಂಡಿಗೆ ಬಿದ್ದಿದ್ದಾರೆ ಎಂದು ವಿವರಿಸಿದರು.

     

  • ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್‌ – ಯುವಕರ ಪೋಷಕರಿಗೆ 25 ಸಾವಿರ ದಂಡ

    ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್‌ – ಯುವಕರ ಪೋಷಕರಿಗೆ 25 ಸಾವಿರ ದಂಡ

    ಬೆಂಗಳೂರು: ದೆವ್ವದ ಹೆಸರಿನಲ್ಲಿ ಡೆಡ್ಲಿ ವೀಲ್ಹಿಂಗ್‌ (Deadly Wheeling) ಮಾಡುತ್ತಿದ್ದ ಯುವಕರಿಗೆ ಸಂಚಾರಿ ಪೊಲೀಸರು (Traffic Police) ಚಳಿ ಬಿಡಿಸಿದ್ದಾರೆ.

    ಮೂವರನ್ನು ಬಂಧಿಸಿದ ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸರು ಗಾಡಿಯನ್ನು ಜಪ್ತಿ ಮಾಡಿ ಪೋಷಕರಿಗೆ 25 ಸಾವಿರ ರೂ. ದಂಡ (Fine) ವಿಧಿಸಿದ್ದಾರೆ.  ಇದನ್ನೂ ಓದಿ: World Cup Semifinal: ಸಿಕ್ಸರ್‌ನಿಂದಲೇ ವಿಶ್ವದಾಖಲೆ ನಿರ್ಮಿಸಿದ ಹಿಟ್‌ಮ್ಯಾನ್‌

    ವೀಲ್ಹಿಂಗ್ ಮಾಡುವಾಗ ದೆವ್ವದ ಮುಖವಾಡ ಧರಿಸುತ್ತಿದ್ದ ಇವರು ʼಡೆವಿಲ್ಸ್ ಆನ್ ರೋಡ್ʼ ಎಂದು ತಮ್ಮನ್ನ ತಾವು ಕರೆದುಕೊಳ್ಳುತ್ತಿದ್ದರು. ಈಗ ಡೆಡ್ಲಿ ವೀಲ್ಹಿಂಗ್‌ ಮಾಡುತ್ತಿದ್ದ ವೀಲರ್ಸ್‌ಗಳ ವಿರುದ್ಧ 14 ಪ್ರಕರಣ ದಾಖಲಾಗಿದೆ.


    ಬೈಕ್‌ಗಳನ್ನ (Bike) ವಶಕ್ಕೆ ಪಡೆದು ಅದರ ಬಿಡಿಭಾಗವನ್ನು ಪೊಲೀಸರು ತೆಗೆದಿದ್ದಾರೆ. ಅಷ್ಟೇ ಅಲ್ಲದೇ ಆರೋಪಿಗಳ ಪ್ರೊಫೈಲ್ ತೆರೆದು ಅವರ ಚಟುವಟಿಕೆಗಳ ಬಗ್ಗೆ ಗಮನ ಹರಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

  • ವ್ಹೀಲಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

    ವ್ಹೀಲಿಂಗ್ ವಿಚಾರಕ್ಕೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

    ಹಾಸನ: ವ್ಹೀಲಿಂಗ್ (Wheeling) ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಹಾಸನದ ಗವೇನಹಳ್ಳಿಯಲ್ಲಿ ನಡೆದಿದೆ. ಆಟೋ ಚಾಲಕ ಸುಮಂತ್ (20) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ.

    ಹಾಸನ (Hassan) ನಗರದ ನಿವಾಸಿ ಸುಮಂತ್ ಗವೇನಹಳ್ಳಿ (Gavenhalli) ಬಳಿ ತನ್ನ ಬೈಕ್‍ನಲ್ಲಿ (Bike) ವ್ಹೀಲಿಂಗ್ ಮಾಡುತ್ತಿದ್ದ. ವ್ಹೀಲಿಂಗ್ ಮಾಡದಂತೆ ಗವೇನಹಳ್ಳಿ ಗ್ರಾಮದ ಯುವಕರು ಹೇಳಿದ್ದಾರೆ. ಇದೇ ವಿಚಾರಕ್ಕೆ ಸುಮಂತ್ ಹಾಗೂ ಗವೇನಹಳ್ಳಿ ಗ್ರಾಮದ ಯುವಕರ ನಡುವೆ ಗಲಾಟೆ ಶುರುವಾಗಿದೆ. ಅಲ್ಲೇ ಇದ್ದ ಸ್ಥಳೀಯರು ಗಲಾಟೆ ಬಿಡಿಸಿ ಕಳುಹಿಸಿದ್ದರು. ಇದನ್ನೂ ಓದಿ: ಪತ್ರಕರ್ತ ಪ್ರಸಾದ್ ಹೆಗ್ಡೆ ನಿಧನ

    CRIME 2

    ಇಷ್ಟಕ್ಕೆ ಸುಮ್ಮನಾಗದ ಸುಮಂತ್ ಲಾಂಗ್ ಹಾಗೂ ಚಾಕುಗಳ ಜೊತೆ ತನ್ನ ಇಬ್ಬರು ಸ್ನೇಹಿತರನ್ನು ಕರೆದಕೊಂಡು ಗವೇನಹಳ್ಳಿಗೆ ಬಂದಿದ್ದಾನೆ. ವ್ಹೀಲಿಂಗ್ ಮಾಡುವುದನ್ನು ತಡೆದವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಗ್ರಾಮದ ಪ್ರಜ್ವಲ್ ಮತ್ತು ಕೆಲವು ಯುವಕರು ಚಾಕು, ಲಾಂಗ್ ಕಿತ್ತುಕೊಂಡ ಸುಮಂತ್ ಎದೆ ಮತ್ತು ಹೊಟ್ಟೆಗೆ ಇರಿದಿದ್ದಾರೆ. ತಕ್ಷಣ ಗಾಯಾಳು ಸುಮಂತ್‍ನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

    ಸ್ಥಳಕ್ಕೆ ಬಡಾವಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಅಕಾಲಿಕ ಮಳೆಗೆ ಮಹಾರಾಷ್ಟ್ರದಲ್ಲಿ 5 ಸಾವು- ಹಿಮಾಚಲ ಪ್ರದೇಶದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

  • ವ್ಹೀಲಿಂಗ್- ಎರಡು ಕೋಮುಗಳ ನಡುವೆ ಗಲಾಟೆ: 6 ಮಂದಿ ವಶ

    ವ್ಹೀಲಿಂಗ್- ಎರಡು ಕೋಮುಗಳ ನಡುವೆ ಗಲಾಟೆ: 6 ಮಂದಿ ವಶ

    ಚಾಮರಾಜನಗರ: ವ್ಹೀಲಿಂಗ್ ವಿಚಾರವಾಗಿ ಎರಡು ಕೋಮುಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ತಲಾ ಮೂವರು ಯುವಕರ ಮೇಲೆ ಪ್ರಕರಣ ದಾಖಲಿಸಿ ಒಟ್ಟು 6 ಮಂದಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ತಿಳಿಸಿದರು.

    ಈ ಬಗ್ಗೆ ಸುದ್ದಿಗರರೊಂದಿಗೆ ಮಾತನಾಡಿ ಅವರು, ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ವ್ಹೀಲಿಂಗ್ ನಡೆಯುತ್ತಿರುವುದು ಗಮನಕ್ಕೆ ಬಂದಿದೆ. ವ್ಹೀಲಿಂಗ್ ನಿಗ್ರಹಕ್ಕೆ ವಿಶೇಷ ತಂಡ ರಚನೆ ಮಾಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಜನರಲ್ಲಿ ಎಚ್ಚರಿಕೆ ಮೂಡಿಸಲು ನಗರದ ಪ್ರಮುಖ ಬೀದಿಗಳಲ್ಲಿ ಪೊಲೀಸರಿಂದ ರೂಟ್ ಮಾರ್ಚ್ ನಡೆಸಲಾಯಿತು ಎಂದು ಹೇಳಿದರು.

    ಕೆ.ಎಸ್.ಆರ್.ಪಿ, ಡಿ.ಎ.ಆರ್ ಮತ್ತು ಸಿವಿಲ್ ಪೊಲೀಸ್ ಅಧಿಕಾರಿಗಳಿಂದ ಪಥಸಂಚಲನ ನಡೆಸಿ ಕೋಮುಗಲಭೆಗೆ ಪ್ರಚೋದನೆ ಹಾಗೂ ಕಾನೂನುಬಾಹಿರ ಚಟುವಟಿಕೆ ನಡೆಸುವವರಿಗೆ ಎಚ್ಚರಿಕೆಯ ಸಂದೇಶ ರವಾನಿಸಲಾಯಿತು. ಇದನ್ನೂ ಓದಿ: ಎಲ್ಲಾ ನಾಶ ಮಾಡಿದ್ದಾರೆ, ಶ್ರೀಗಳು ಯಾವುದೇ ಸಾಕ್ಷ್ಯ ಉಳಿಸಿಲ್ಲ: ಹೆಚ್. ವಿಶ್ವನಾಥ್

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಅಡಿಷನಲ್ ಎಸ್ಪಿ ಸುಂದರ್‌ರಾಜು, ಡಿವೈಎಸ್ಪಿ ಪ್ರಿಯದರ್ಶಿನಿ ಸಾಣೆಕೊಪ್ಪ ಸೇರಿದಂತೆ 250ಕ್ಕೂ ಹೆಚ್ಚು ಮಂದಿ ಪೊಲೀಸ್ ಸಿಬ್ಬಂದಿ ಪಥಸಂಚಲನದಲ್ಲಿ ಭಾಗಿಯಾಗಿದ್ದರು. ವ್ಹೀಲಿಂಗ್ ವಿಚಾರವಾಗಿ ನಿನ್ನೆ ರಾತ್ರಿ ಎರಡು ಕೋಮುಗಳ ನಡುವೆ ಗಲಾಟೆ ಯಾಗಿತ್ತು ಸಂತೇಮರಹಳ್ಳಿ ವೃತ್ತದ ಸುತ್ತಮುತ್ತ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ. ಇದನ್ನೂ ಓದಿ: ಓದುವುದರಲ್ಲಿ ಕಾಂಪಿಟೇಷನ್ ನೀಡ್ತಿದ್ದಕ್ಕೆ ಮಗನ ಸಹಪಾಠಿಗೆ ವಿಷ ಕೊಟ್ಟು ಸಾಯಿಸಿದ್ಲು

    Live Tv
    [brid partner=56869869 player=32851 video=960834 autoplay=true]

  • ಹಾಫ್ ಹೆಲ್ಮೆಟ್, ಶೋಕಿ ಸೈಲನ್ಸರ್ ಮೇಲೆ ಉರುಳಿದ ರೋಡ್‌‌ ರೋಲರ್

    ಹಾಫ್ ಹೆಲ್ಮೆಟ್, ಶೋಕಿ ಸೈಲನ್ಸರ್ ಮೇಲೆ ಉರುಳಿದ ರೋಡ್‌‌ ರೋಲರ್

    ಚಿಕ್ಕಮಗಳೂರು: ಶೋಕಿ ಸೈಲನ್ಸರ್ ಹಾಗೂ ಹಾಫ್ ಹೆಲ್ಮೆಟ್‌ಗಳ ಮೇಲೆ ಪೊಲೀಸರು ರೋಡ್‌‌ ರೋಲರ್ ಹತ್ತಿಸಿರುವ ಘಟನೆ ನಗರದ ಸಂಚಾರಿ ಪೊಲೀಸ್ ಠಾಣೆ ಬಳಿ ನಡೆದಿದೆ.

    ಚಿಕ್ಕಮಗಳೂರು ನಗರದಲ್ಲಿ ಕೆಲ ಯುವಕರು ಬೈಕಿನ ಸೈಲನ್ಸರ್‌ಗಳನ್ನು ಮೋಡಿಫೈ ಮಾಡಿಸಿಕೊಂಡು ನಗರದಲ್ಲಿ ಕರ್ಕಶ ಶಬ್ದದೊಂದಿಗೆ ಓಡಾಡುತ್ತಿದ್ದರು. ಇದರಿಂದ ಸ್ಥಳೀಯರಿಗೂ ಕೂಡ ತೊಂದರೆಯಾಗುತ್ತಿತ್ತು. ಶಾಲಾ-ಕಾಲೇಜುಗಳ ಆವರಣದಲ್ಲಿ ಜೋರಾಗಿ ಎಕ್ಸ್‌ಲೇಟರ್ ರೈಸ್ ಮಡುತ್ತಾ, ವಿಚಿತ್ರ ಶಬ್ದದೊಂದಿಗೆ ಓಡಾಡುತ್ತಿದ್ದರು. ಜೊತೆಗೆ ಯುವಕರು ಬೈಕ್‍ಗಳಲ್ಲಿ ನಗರದೊಳಗೆ ವ್ಹೀಲಿಂಗ್ ಮಾಡುತ್ತಿದ್ದರು. ಇದಕ್ಕೆ ಉದಾಹರಣೆ ಎಂಬಂತೆ ನಿನ್ನೆ ಕೂಡ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಮಧ್ಯೆಯೇ ಐದಾರು ಯುವಕರು ವ್ಹೀಲಿಂಗ್ ಮಾಡುತ್ತಿದ್ದರು.

    ನಡು ರಸ್ತೆ ರೇಸಿಗೆ ಬಿದ್ದ ಯುವಕರು ವ್ಹೀಲಿಂಗ್ ಮಾಡಿಕೊಂಡು ಇತರ ಪ್ರಯಾಣಿಕರಿಗೂ ತೊಂದರೆ ಕೊಡುತ್ತಿದ್ದರು. ಇದರಿಂದ ಸ್ಥಳೀಯರು ಹಾಗೂ ವಾಹನ ಸವಾರರು ಕೂಡ ಗಾಬರಿಯಾಗಿದ್ದರು. ಯುವಕರ ಈ ಹುಚ್ಚಾಟದ ವೀಡಿಯೋವನ್ನು ಸೆರೆ ಹಿಡಿದು ಪೊಲೀಸ್ ವರಿಷ್ಠಾಧಿಕಾರಿಗೆ ಕಳುಹಿಸಿದ್ದರು. ಎಸ್ಪಿ ಸೂಚನೆ ಮೇರೆಗೆ ನಿನ್ನೆ 5 ಬೈಕ್‍ಗಳನ್ನು ಕಡೂರು ತಾಲೂಕಿನ ಸಕರಾಯಪಟ್ಟಣ ಸಮೀಪದ ಅಯ್ಯನಕೆರೆ ಬಳಿ ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ

    ಆ ಬೈಕ್‍ಗಳಿಗೆ ಇನ್ಶೂರೆನ್ಸ್ ದಾಖಲೆಗಳು ಯಾವುದು ಇರಲಿಲ್ಲ. ಯುವಕರ ಬಳಿ ಡಿಎಲ್ ಕೂಡ ಇರಲಿಲ್ಲ. ಹಾಗಾಗಿ ಒಂದು ದಾಖಲೆಗಳಿಲ್ಲ. ಮತ್ತೊಂದು ಸೈಲನ್ಸರ್‌ಗಳನ್ನು ಮಾಡಿಫೈಡ್ ಮಾಡಿಕೊಂಡಿದ್ದ ಬೈಕ್‍ಗಳು ಹಾಗೂ ಹಾಫ್ ಹೆಲ್ಮೆಟ್‌ಗಳ ಮೇಲೆ ರೋಡ್‌‌ ರೋಲರ್ ಹತ್ತಿಸಿ ಬೈಕ್ ಸವಾರರಿಗೆ ಎಚ್ವರಿಕೆ ನೀಡಿದ್ದಾರೆ. ಹಾಫ್ ಹೆಲ್ಮೆಟ್‌ ಹಾಕುವವರಿಗೆ ಹೆಲ್ಮೆಟಿನ ಮಹತ್ವ ತಿಳಿಸಿ ಫುಲ್ ಹೆಲ್ಮೆಟ್‌ ಹಾಕುವಂತೆ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು

    Live Tv

  • ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ ಬೈಕ್ ವ್ಹೀಲಿಂಗ್, 5 ಬೈಕ್ ಸೀಜ್

    ರಾಷ್ಟ್ರೀಯ ಹೆದ್ದಾರಿಯ ನಡು ರಸ್ತೆಯಲ್ಲಿ ಬೈಕ್ ವ್ಹೀಲಿಂಗ್, 5 ಬೈಕ್ ಸೀಜ್

    ಚಿಕ್ಕಮಗಳೂರು: ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದ 5 ಬೈಕ್‍ಗಳನ್ನು ಸಖರಾಯಪಟ್ಟಣ ಪೊಲೀಸರು ಸೀಜ್ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ.

    ನಗರದಲ್ಲಿ ಮಧ್ಯಾಹ್ನ 12 ಗಂಟೆಗೆ 5 ಬೈಕ್‍ಗಳಲ್ಲಿ 10 ಯುವಕರು ನಡುರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡಿದ್ದಾರೆ. ಆ ಬೈಕ್‍ಗಳು ಚಿಕ್ಕಮಗಳೂರು ನಗರ ದಾಟಿ ಕಡೂರು ತಾಲೂಕಿನ ಸಖರಾಯಪಟ್ಟಣ ಠಾಣಾ ವ್ಯಾಪ್ತಿಗೆ ಹೋಗುವಷ್ಟರಲ್ಲಿ ಸಖರಾಯಪಟ್ಟಣ ಪೊಲೀಸರು ಬೈಕ್‍ಗಳನ್ನು ಸೀಜ್ ಮಾಡಿದ್ದಾರೆ. ಚಿಕ್ಕಮಗಳೂರು ನಗರದ ದಂಟರಮಕ್ಕಿ ಕೆರೆ ಏರಿ, ಎಐಟಿ ವೃತ್ತ ಹಾಗೂ ಜಿಪಂ ರಸ್ತೆಯಲ್ಲಿ ಯುವಕರು ರೇಸ್‍ನಲ್ಲಿ ವ್ಹೀಲಿಂಗ್ ಮಾಡಿದ್ದರು. ಬೈಕ್‍ಗಳನ್ನು ವೇಗ ಹಾಗೂ ಅಬ್ಬರ ಕಂಡ ಇತರೆ ವಾಹನಗಳ ಸವಾರರು ಆತಂಕದಿಂದ ತಮ್ಮ ವಾಹನಗಳನ್ನು ರಸ್ತೆ ಬದಿಗೆ ನಿಲ್ಲಿಸಿಕೊಂಡು ಅವರು ಹೋದ ಮೇಲೆ ಹೋಗಿದ್ದಾರೆ.

    ಯುವಕರ ಈ ಬೈಕ್ ವ್ಹೀಲಿಂಗ್ ದೃಶ್ಯವನ್ನು ಸ್ಥಳೀಯ ವಾಹನ ಸವಾರರು ರೆಕಾರ್ಡ್ ಮಾಡಿದ್ದರು. ಮಧ್ಯಾಹ್ನ ರಸ್ತೆ ಮಧ್ಯೆಯೇ ಈ ರೀತಿ ಬೈಕ್ ವ್ಹೀಲಿಂಗ್ ಮಾಡುವುದನ್ನು ಕಂಡು ಸಾರ್ವಜನಿಕರು ಇವರಿಗೆ ಯಾರ ಭಯವೂ ಇಲ್ಲ. ಹೇಳೋರು-ಕೇಳೋರು ಯಾರಿಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಇದನ್ನೂ ಓದಿ: ಹೆದ್ದಾರಿಯಲ್ಲಿ ಗಜಪಡೆ ಹಾವಳಿ – ಕಾರಿನ ಮೇಲೆ ದಾಳಿ, ಚಾಲಕ ಜಸ್ಟ್ ಮಿಸ್

    ಯುವಕರು ಇಂತಹ ಮೋಜು-ಮಸ್ತಿನ ಹುಚ್ಚಾಟದಿಂದ ಯಾರಿಗಾದರೂ ಡಿಕ್ಕಿ ಹೊಡೆದರೆ ಏನಾಗಬಹುದು ಎಂದು ಗಾಬರಿಯಾಗಿದ್ದರು. ಬೇರೆಯವರಿಗೆ ತೊಂದರೆಯಾಗುವುದರ ಜೊತೆ ವ್ಹೀಲಿಂಗ್ ಮಾಡುವಾಗ ಬೈಕಿನಲ್ಲಿ ಬಿದ್ದರೆ ಅವರಿಗೂ ಕೈಕಾಲು ಮುರಿದು ಹೋದರೆ ಹೇಗೆ ಎಂದು ಜನರೇ ಆತಂಕಕ್ಕೀಡಾಗಿದ್ದರು. ಆದರೆ ಕೂಡಲೇ ಪೊಲೀಸರು ಅವರನ್ನು ಬಂಧಿಸಿ ಗಾಡಿಗಳನ್ನು ಸೀಜ್ ಮಾಡಿದ್ದರಿಂದ ಸ್ಥಳೀಯರು ಪೊಲೀಸ್ ಇಲಾಖೆ ಭೇಷ್ ಎಂದಿದ್ದಾರೆ. ಇದನ್ನೂ ಓದಿ: ಬೈಕ್‍ಗೆ ಲಾರಿ ಡಿಕ್ಕಿ: ಇಬ್ಬರು ಸ್ಥಳದಲ್ಲೇ ಸಾವು, ಒಬ್ಬನಿಗೆ ಗಂಭೀರ ಗಾಯ

    Live Tv

  • ಯುವಕರಿಗೆ ಸಂಚಾರಿ ಅರಿವು ಮೂಡಿಸಲು ಮಾಸ್ಟರ್ ಪ್ಲಾನ್ – ಬೈಕ್ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

    ಯುವಕರಿಗೆ ಸಂಚಾರಿ ಅರಿವು ಮೂಡಿಸಲು ಮಾಸ್ಟರ್ ಪ್ಲಾನ್ – ಬೈಕ್ ಸೈಲೆನ್ಸರ್ ನಾಶಪಡಿಸಿದ ಪೊಲೀಸರು

    ಕೋಲಾರ: ನಗರದಲ್ಲಿ ಕರ್ಕಶ ಶಬ್ದ ಮಾಡುತ್ತಿದ್ದ ನೂರಾರು ಬೈಕ್‌ಗಳ ಸೈಲೆನ್ಸರ್‌ಗಳನ್ನು ನಾಶ ಮಾಡುವ ಮೂಲಕ ಪೊಲೀಸರು ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ನೀಡಿದ್ದಾರೆ.

    ಜಿಲ್ಲಾ ರಕ್ಷಣಾಧಿಕಾರಿ ಡಿ ದೇವರಾಜ್ ನೇತೃತ್ವದಲ್ಲಿ ಪೊಲೀಸರ ತಂಡ ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜು ವೃತ್ತದಲ್ಲಿ ನೂರಾರು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಬೈಕ್ ಸೈಲೆನ್ಸರ್‌ಗಳನ್ನು ನಾಶ ಮಾಡಿದರು. ಭಾರೀ ಕರ್ಕಶ ಸದ್ದು ಹಾಗೂ ವ್ಹೀಲಿಂಗ್ ಮಾಡುತ್ತಿದ್ದ ಬೈಕ್‌ಗಳ ಸೈಲೆನ್ಸರ್‌ಗಳ ಮೇಲೆ ರೋಡ್ ರೋಲರ್ಸ್ ಹರಿಸಿ ನಾಶಪಡಿಸಲಾಯಿತು. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ

    ಕಳೆದ ಒಂದೂವರೆ ತಿಂಗಳನಿಂದ ಟ್ರಾಫಿಕ್ ಪೊಲೀಸರು ಕಾರ್ಯಾಚರಣೆ ನಡೆಸಿ ಸುಮಾರು 85 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದರು. ವ್ಹೀಲಿಂಗ್ ಮಾಡುವವರಿಂದ ಕಾನೂನು ಸುವ್ಯವಸ್ಥೆ ಹಾಳಾಗುತ್ತಿದ್ದು, ಕೋಲಾರ ಗ್ರಾಮಾಂತರ ಪೊಲೀಸರು ವಿಶೇಷ ರೈಡ್ ಮಾಡಿದ್ದರು. ಅದರಂತೆ ಸುಮಾರು 1.85 ಲಕ್ಷ ರೂ. ದಂಡ ಹಾಕಿ ಬೈಕ್‌ಗಳನ್ನು ವಶಕ್ಕೆ ಪಡೆದಿದ್ದರು.

    ಯುವಕರು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡಿದರೆ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಹಾಗೂ ವ್ಹೀಲಿಂಗ್ ಮಾಡಿದವರ ಬೈಕ್ ಸೀಜ್ ಮಾಡಿ ಐಪಿಸಿ ಸೆಕ್ಷನ್ ಪ್ರಕಾರ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗುವುದು. ಮುಂದೆ ಅಂತಹ ಸೈಲೆನ್ಸರ್‌ಗಳ ಮಾರಾಟ ಮಾಡುವವರ ಮೇಲೂ ನಿಗಾ ಇಟ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಉಕ್ರೇನ್‌ನಿಂದ ಮರಳಿದ ವಿದ್ಯಾರ್ಥಿಗಳಿಗೆ ಡೀಮ್ಡ್ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶ: ಡೀಮ್ಡ್ ಅಧ್ಯಕ್ಷ

    ಟ್ರಾಫಿಕ್ ಸಿಬ್ಬಂದಿಗೆ ನೆರವಾಗುವ ನಿಟ್ಟಿನಲ್ಲಿ ಬಾಡಿ ಕ್ಯಾಮೆರಾ ಅಳವಡಿಸಲಾಗಿದ್ದು, ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವವರ ಮೇಲೆ ನಿಗಾ ಇಡಲಾಗುವುದು. ಹೀಗಾಗಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದು ಕೋಲಾರ ಎಸ್ಪಿ ದೇವರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

  • ನೆಲಮಂಗಲದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ವ್ಹೀಲಿಂಗ್ ಪುಂಡರ ಪುಂಡಾಟ

    ನೆಲಮಂಗಲದಲ್ಲಿ ದಿನೇ ದಿನೇ ಹೆಚ್ಚುತ್ತಿದೆ ವ್ಹೀಲಿಂಗ್ ಪುಂಡರ ಪುಂಡಾಟ

    ಬೆಂಗಳೂರು: ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನೇ ದಿನೇ ಬೈಕ್‍ನಲ್ಲಿ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚುತ್ತಿದೆ.

    ಬೆಂಗಳೂರು ಹೊರವಲಯ ನೆಲಮಂಗಲ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುವವರ ಶೋಕಿ ಜಾಸ್ತಿಯಾಗಿದೆ. ಇವರ ಭಯಾನಕ ಡೆಡ್ಲಿ ವ್ಹೀಲಿಂಗ್‍ಗೆ ವಾಹನ ಸವಾರರಿಗೆ ಆತಂಕ ಶುರುವಾಗಿದೆ.

    ಪ್ರತಿನಿತ್ಯ ರಾತ್ರಿಯಾಯ್ತು ಅಂದರೆ ಬೆಂಗಳೂರು ನಗರದಿಂದ ಬೈಕ್ ಹಾವಳಿ ಪುಂಡರು ಬರುತ್ತಾರೆ. ಈ ಪುಂಡರು ಒಂದೇ ಚಕ್ರದಲ್ಲಿ ಭಯಾನಕ ಡೆಡ್ಲಿ ವ್ಹೀಲಿಂಗ್ ಮಾಡುತ್ತಾರೆ.

    ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಈ ಭಯಾನಕ ವೀಡಿಯೋವನ್ನ ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದು ಬೆಂಗಳೂರು ನಗರ ಹಾಗೂ ನೆಲಮಂಗಲ ಪೊಲೀಸರು ಈ ಹುಚ್ಚಾಟಕ್ಕೆ ಕಡಿವಾಣ ಹಾಕುವಂತೆ ಮನವಿ ಮಾಡಿದ್ದಾರೆ.

    ಈಗಾಗಲೇ ನೆಲಮಂಗಲ ಪೊಲೀಸರು, ಸಾಕಷ್ಟು ಡೆಡ್ಲಿ ವ್ಹೀಲಿಂಗ್ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದರೂ, ಬಂಧನಕ್ಕೆ ಒಳಗಾಗಿದ್ದರೂ ಸಹ ಪುಂಡರ ಹಾವಳಿ ನಿಲ್ಲುತ್ತಿಲ್ಲ. ಹೀಗಾಗಿ ಪೋಷಕರು ಸಹ ಮಕ್ಕಳ ಬಗ್ಗೆ ಜಾಗೃತಿ ವಹಿಸಿ ಕಡಿವಾಣ ಹಾಕಬೇಕಿದೆ.

  • ಬೈಕ್‌ ಮೇಲೆ ಒಂದೇ ಕಾಲಿನಲ್ಲಿ ನಿಂತು ಯುವಕರ ಹುಚ್ಚಾಟ

    ಬೈಕ್‌ ಮೇಲೆ ಒಂದೇ ಕಾಲಿನಲ್ಲಿ ನಿಂತು ಯುವಕರ ಹುಚ್ಚಾಟ

    ಕೋಲಾರ: ಎಷ್ಟೇ ಅಪಘಾತಗಳು ಸಂಭವಿಸಿ ಪ್ರಾಣಾಹಾನಿಯಾದರೂ ಯುವಕರಿಗೆ ಬುದ್ದಿ ಬಂದಂತೆ ಕಾಣುತ್ತಿಲ್ಲ. ಬೈಕ್ ವ್ಹೀಲಿಂಗ್ ಹುಚ್ಚಾಟ ನಿಂತಿಲ್ಲ. ಕೋಲಾರ ಜಿಲ್ಲೆಯಲ್ಲಿ ಸಹ ವ್ಹೀಲಿಂಗ್ ಗುಂಪುಗಳ ಕಿರಿಕಿರಿ ಮಿತಿಮೀರಿದೆ.

    ಬೆಂಗಳೂರು – ತಿರುಪತಿ ರಾಷ್ಟ್ರೀಯ ಹೆದ್ದಾರಿಯ ನರಸಾಪುರ ಕೈಗಾರಿಕಾ ವಲಯದ ಬಳಿ ಯುವಕರ ಗುಂಪು ಈ ವ್ಹೀಲಿಂಗ್ ಮಾಡುವ ಮೂಲಕ ಸಾರ್ವಜನಿಕರಿಗೆ ಕಿರಿ ಕಿರಿ ಮಾಡುತ್ತಿರುವ ಬಗ್ಗೆ ದೂರು ಬಂದಿದೆ.

    ಬೈಕ್ ಮೇಲೆ ಒಂದು ಕಾಲಿನಲ್ಲಿ‌ ನಿಂತು ಒಂದೇ ಚಕ್ರದಲ್ಲಿ ಚಲಿಸುವ ಬೈಕ್ ಸವಾರನ ವೀಲಿಂಗ್‌ ದೃಶ್ಯಾವಳಿ ಮೊಬೈಲಿನಲ್ಲಿ ಸೆರೆಯಾಗಿದೆ. ಇದರಿಂದ ಇತರೆ ಅಕ್ಕಪಕ್ಕದ ವಾಹನ ಚಾಲಕರು ಆತಂಕದಲ್ಲಿಯೇ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಒದಗಿ ಬಂದಿದೆ. ಜಿಲ್ಲೆಯ ಪೊಲೀಸರು ಈ ಬೈಕ್ ವ್ಹೀಲಿಂಗ್ ಪುಂಡರನ್ನು ಎಚ್ಚರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.