Tag: Wheel Chair Romeo

  • ಸಂಭಾಷಣೆಗಾರನಿಂದ ನಿರ್ದೇಶಕನವರೆಗೆ… ‘ವೀಲ್ ಚೇರ್ ರೋಮಿಯೋ’ ಸೂತ್ರಧಾರನ ಪರಿಶ್ರಮದ ಕಥೆ ಗೊತ್ತಾ ನಿಮಗೆ?

    ಸಂಭಾಷಣೆಗಾರನಿಂದ ನಿರ್ದೇಶಕನವರೆಗೆ… ‘ವೀಲ್ ಚೇರ್ ರೋಮಿಯೋ’ ಸೂತ್ರಧಾರನ ಪರಿಶ್ರಮದ ಕಥೆ ಗೊತ್ತಾ ನಿಮಗೆ?

    ಸಿನಿಮಾ ರಂಗದಲ್ಲಿ ಈಜುವ ಕನಸು ಇಟ್ಟುಕೊಂಡು ಬರುವ ಅದೆಷ್ಟೋ ಪ್ರತಿಭೆಗಳು ದಡ ಸೇರಲು ನಾನಾ ರೀತಿಯ ಸರ್ಕಸ್ ಮಾಡ್ತಾರೆ. ಪ್ರತಿಭೆ ಜೊತೆಗೆ ಪರಿಶ್ರಮ ಇದ್ದವರು ಮಾತ್ರ ಇಲ್ಲಿ ಗೆಲುವು ದಕ್ಕಿಸಿಕೊಳ್ಳುತ್ತಾರೆ. ನಿರ್ದೇಶಕನಾಗಬೇಕು ಎಂಬ ಸ್ಪಷ್ಟ ನಿಲುವು ಹೊಂದಿದ್ದ ವೀಲ್ ಚೇರ್ ರೋಮಿಯೋ ಸೂತ್ರಧಾರಿ ನಟರಾಜ್‌ಗೆ ಅಷ್ಟು ಸುಲಭವಾಗಿ ನಿರ್ದೇಶಕನಾಗುವ ಅವಕಾಶ ಸಿಗಲಿಲ್ಲ. ಈ ಅವಕಾಶಕ್ಕಾಗಿ ನಟರಾಜ್ ಪಟ್ಟ ಶ್ರಮ ಅಷ್ಟಿಷ್ಟಲ್ಲ.

    ಕಳೆದ ಹದಿನೈದು ವರ್ಷಗಳ ಹಿಂದೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟರಾಜ್, ಆರಂಭಿಕ ದಿನಗಳಲ್ಲಿ ಕಷ್ಟವನ್ನು ನುಂಗಿಕೊಂಡು ಬಂದವರು. ಆ ನಂತರ ಮಠ ಗುರುಪ್ರಸಾದ್, ಪಿ.ಸಿ.ಶೇಖರ್, ಪ್ರಶಾಂತ್ ರಾಜ್ ಹೀಗೆ ಹಲವು ನಿರ್ದೇಶಕರ ಗರಡಿಯಲ್ಲಿ ಪಳಗಿದ ನಟರಾಜ್, ಗಣೇಶ್ ನಟನೆಯ ಜೂಮ್, ಆರೆಂಜ್, ರೋಮಿಯೋ ಮುಂತಾದ ಚಿತ್ರಗಳಿಗೆ ಸಂಭಾಷಣೆ ಬರೆಯುವ ಮೂಲಕ ಯಶಸ್ವೀ ಸಂಭಾಷಣಾಕಾರರಾಗಿಯೂ ಚಿತ್ರರಂಗಕ್ಕೆ ಪರಿಚಿತರಾದರು. ಇದನ್ನೂ ಓದಿ: ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು

    ದಶಕಕ್ಕೂ ಹೆಚ್ಚು ಕಾಲ ನಿರ್ದೇಶನ ವಿಭಾಗದಲ್ಲಿ, ಸಂಭಾಷಣೆಗಾರನಾಗಿಯೂ ತಮ್ಮ ಕಲಾಚಾಕಚಕತ್ಯೆ ತೋರಿಸಿದ ನಟರಾಜ್, ವೀಲ್ ಚೇರ್ ರೋಮಿಯೂ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟರು. ಪ್ರೇಕ್ಷಕರ ರುಚಿಗೆ ತಕ್ಕಂತೆ, ಅವರನ್ನು ಮನರಂಜಿಸುವ ಸಿನಿಮಾ ಮಾಡಲೇಬೇಕು ಎಂಬ ಛಲ ತೊಟ್ಟು ನಟರಾಜ್ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ತಯಾರಿಸಿದ್ದಾರೆ.

    ಹೊಡಿ ಬಡಿ ಸಿನಿಮಾಗಳ ಹಾವಳಿ ನಡುವೆ ಎಲ್ಲಾ ಚಿತ್ರಪ್ರೇಮಿಗಳಿಗೆ ಇಷ್ಟವಾಗುವ, ಇಡೀ ಕುಟುಂಬ ಕುಳಿತು ನೋಡುವಂತಹ ಚಿತ್ರವನ್ನು ನಟರಾಜ್ ಕಟ್ಟಿಕೊಟ್ಟಿದ್ದಾರೆ ಅನ್ನೋದು ಈಗಾಗಲೇ ಟ್ರೇಲರ್ ಹಾಗೂ ಹಾಡುಗಳಿಗೆ ಸಿಕ್ಕ ಯಶಸ್ಸು ಉದಾಹರಣೆ. ನಮ್ಮ ನಿಮ್ಮ ಮಧ್ಯೆ ನಡುವೆಯ ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ವೀಲ್ ಚೇರ್ ರೋಮಿಯೋ ಸಿನಿಮಾವನ್ನು ನಟರಾಜ್ ನಿರ್ದೇಶನ ಮಾಡಿದ್ದಾರೆ. ಕಣ್ಣು ಕಾಣದ ವೇಶ್ಯೆ ಮತ್ತು ಸದಾ ವೀಲ್ ಚೇರ್ ಮೇಲೆ ಕುಳಿತುಕೊಳ್ಳುವ ರೋಮಿಯೋ ನಡುವಿನ ಪ್ರೀತಿ ಜೊತೆಗೆ ತಂದೆ-ಮಗನ ಸೆಂಟಿಮೆಂಟ್‌ನ ಈ ಸಿನಿಮಾ ಇದೇ 27ರಂದು ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ರೋಮಿಯೋ ಆಗಿ ರಾಮ್ ಚೇತನ್ ನಟಿಸಿದ್ದು, ಜೂಲಿಯಟ್ ಆಗಿ ಮಯೂರಿ ಕಾಣಿಸಿಕೊಂಡಿದ್ದಾರೆ. ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಪ್ರೇಕ್ಷಕರಿಗೆ ಪಕ್ಕಾ ಮನರಂಜನೆ ನೀಡುವುದು ಸತ್ಯ. ಇದನ್ನೂ ಓದಿ: ನಿರ್ದೇಶಕ ಆರ್‌ಜಿವಿ ವಿರುದ್ಧ 56 ಲಕ್ಷ ವಂಚನೆ ಪ್ರಕರಣ ದಾಖಲು

  • ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು

    ಈ ವಾರ ಜಾಕ್ ಮಾಮನಾಗಿ ಬರ್ತಿದ್ದಾರೆ ರಂಗಾಯಣ ರಘು

    ನಿದು ಜಾಕ್ ಮಾಮಾ ಅಂತ ಯೋಚನೆ ಮಾಡುತ್ತಾ ಇದ್ದೀರಾ. ಇಂಥ ಡಿಫರೆಂಟ್ ಹೆಸರು ಕೇಳಿದರೆ ಆಶ್ಚರ್ಯ ಹುಟ್ಟಲಿಲ್ಲ ಎಂದರೆ ಹೇಗೆ ಹೇಳಿ. ಜಾಕ್ ಮಾಮಾ ಅಂತ ಖುಷಿಯಲ್ಲಿ ಎಲ್ಲರ ನಾಲಿಗೆ ಮೇಲೆ ಓಡಾಡುವ ಪಾತ್ರ ಮಾಡಿರುವುದು ನಮ್ಮ ರಂಗಾಯಣ ರಘು. ಇವರು ಇದ್ದಾರೆ ಎಂದರೆ ನಗು, ಮನರಂಜನೆ, ಸಂದೇಶ, ಸಿನಿಮಾವಂತು ಖಂಡಿತ ಎಲ್ಲರ ಮನಸ್ಸಲ್ಲೂ ಉಳಿದುಕೊಳ್ಳುವಂತ ಸನ್ನಿವೇಶ ಹುಟ್ಟಿಕೊಂಡಿರುತ್ತದೆ ಎಂಬುದು ಗ್ಯಾರಂಟಿ.

    ಅಂದಿನಿಂದ ಇಂದಿನವರೆಗೂ ನಗಿಸಿಕೊಂಡು ಬಂದಿರುವ ಪರಿಪೂರ್ಣ ನಟ ರಂಗಾಯಣ ರಘು ಅವರು ವೀಲ್‌ಚೇರ್ ರೋಮಿಯೋ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಅದೇ ಜಾಕ್ ಮಾಮಾ. ತನ್ನ ವಿಶಿಷ್ಟ ನಟನೆಯಿಂದಲೂ ಎಲ್ಲರನ್ನು ಸೆಳೆದಿರುವ ನಟ, ವೀಲ್‌ಚೇರ್ ರೋಮಿಯೋ ಮೂಲಕವೂ ವಿಭಿನ್ನವಾಗಿ ಎಲ್ಲರ ಮನಸ್ಸಲ್ಲೂ ಉಳಿದುಕೊಳ್ಳಲಿದ್ದಾರೆ. ಇದೇ 27ಕ್ಕೆ ಸಿನಿಮಾ ತೆರೆಗೆ ಬರಲಿದೆ. ಜಾಕ್ ಮಾಮಾ ಹೆಸರೇ ಇಷ್ಟೊಂದು ಚೆನ್ನಾಗಿರುವಾಗ ಪಾತ್ರ ಇನ್ನೆಷ್ಟು ಪರಿಣಾಮಕಾರಿಯಾಗಿ ಕಾಡುತ್ತದೆ ಎಂಬ ಕ್ಯೂರಿಯಾಸಿಟಿ ಹುಟ್ಟಿಕೊಂಡಿದೆ. ಇದನ್ನೂ ಓದಿ: ನಯನತಾರಾಗೆ ಲೋಕಲ್ ಫುಡ್ ತಿನ್ನಿಸಿದ ಭಾವಿಪತಿ ವಿಘ್ನೇಶ್ 

    ಸಿನಿಮಾ ಎಂದು ಬಂದಾಗ ಕಥೆ ಬರೆಯುವಾಗ ಕಲಾವಿದರು ಕಣ್ಣ ಮುಂದೆ ಬರುತ್ತಾರೆ. ಈ ಪಾತ್ರಕ್ಕೆ ಇವರೇ ಸೂಕ್ತ ಎಂಬುದು ನಿರ್ದೇಶಕರ ತಲೆಯಲ್ಲಿ ಅಚ್ಚೊತ್ತಿ ಕುಳಿತು ಬಿಟ್ಟಿದೆ. ಹಾಗೆಯೇ ನಿರ್ದೇಶಕರ ಮನಸ್ಸಿನ ಕನ್ನಡಿಯಲ್ಲಿ ರಂಗಾಯಣ ರಘು ಅವರ ಭಾವಚಿತ್ರ ಹಾಗೇ ಕಂಗೊಳಿಸುತ್ತಿತ್ತು. ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ಈ ಪಾತ್ರಕ್ಕೆ ಅವರೇ ಸೂಕ್ತ ಎಂಬುದು ಫಿಕ್ಸ್ ಆಗಿತ್ತು. ಹೀಗಾಗಿ ಅವರನ್ನೇ ಆ ಪಾತ್ರಕ್ಕೆ ಅಪ್ರೋಚ್ ಮಾಡಿ, ನಿರೀಕ್ಷೆಗೆ ತಕ್ಕಂತೆ ಎಕ್ಸಿಕ್ಯೂಟ್ ಮಾಡಲಾಗಿದೆ.

    Wheel Chair Romeo

    ನಟನೆಯನ್ನೇ ಕರಗತ ಮಾಡಿಕೊಂಡಿರುವ ರಂಗಾಯಣ ರಘು ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರ ಪಾತ್ರ ಎಂಥದ್ದು, ಜಾಕ್ ಮಾಮಾ ಏನು ಮಾಡಲಿದ್ದಾರೆ ಎಂಬುದನ್ನು ಇದೇ ತಿಂಗಳ 27ಕ್ಕೆ ಆನಾವರಣಗೊಳ್ಳಲಿದೆ. ಟೈಟಲ್‍ಗೆ ತಕ್ಕಂತೆ ವೀಲ್ ಚೇರ್ ಮೇಲೆ ನಾಯಕ ನಟನ ಪಾತ್ರ ಸಾಗುತ್ತೆ. ಕಿರುತೆರೆ ನಟ ರಾಮ್ ಚೇತನ್ ವೀಲ್ ಚೇರ್ ರೋಮಿಯೋ ಆಗಿ ಕಾಣಿಸಿಕೊಂಡಿದ್ದಾರೆ. ವೇಶ್ಯಾ ವೃತ್ತಿಯಲ್ಲಿ ಸಾಗುವ ನಾಯಕಿ ಪಾತ್ರವನ್ನು ಮಯೂರಿ ನಿಭಾಯಿಸಿದ್ದಾರೆ.

    ಬಿ.ಜೆ.ಭರತ್ ಅವರ ಸಂಗೀತ, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ.ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರ ಪ್ರಸಾದ್, ತಬಲನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇದನ್ನೂ ಓದಿ: ಮೇ 26 ರಿಂದ ಮಸೀದಿ ಪರ ಅರ್ಜಿ ವಿಚಾರಣೆ, ಯಥಾಸ್ಥಿತಿ ಕಾಯ್ದುಕೊಳ್ಳಿ: ಕೋರ್ಟ್ ಆದೇಶ 

  • ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ವೀಲ್‍ಚೇರ್ ರೋಮಿಯೋಗೆ ಮಯೂರಿ ಜೂಲಿಯಟ್ – ‘ಆ’ ಸವಾಲಿನ ಪಾತ್ರ ಒಪ್ಪಿಕೊಂಡಿದ್ದರ ಹಿಂದಿದೆ ಒಂದು ಕಥಾನಕ!

    ವೀಲ್ ಚೇರ್ ರೋಮಿಯೋ ಹೀಗೊಂದು ಸಿನಿಮಾ ಸ್ಯಾಂಡಲ್ ವುಡ್‍ನ ದಶ ದಿಕ್ಕುಗಳಲ್ಲಿಯೂ ಭಾರೀ ಸದ್ದು ಮಾಡುತ್ತಿದೆ. ವಿಭಿನ್ನ ಶೀರ್ಷಿಕೆ ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಇದೇ ತಿಂಗಳ 27ರಂದು ಥಿಯೇಟರ್ ಅಂಗಳಕ್ಕೆ ಲಗ್ಗೆ ಇಡ್ತಿರುವ ವೀಲ್ ಚೇರ್ ರೋಮಿಯೋ ಸಿನಿಮಾ ಟ್ರೇಲರ್ ಹಾಗೂ ಹಾಡುಗಳ ಮೂಲಕ ಚಿತ್ರರಸಿಕರ ಮನದಲ್ಲಿ ಅಚ್ಚೊತ್ತಿದ್ದು, ಕುತೂಹಲದ ಕೋಟೆಯನ್ನು ಕಟ್ಟಿದೆ.

    ಗಾಂಧಿನಗರದಲ್ಲಿ ಹೊಸ ನಿರೀಕ್ಷೆ ಅಲೆ ಎಬ್ಬಿಸಿರುವ ವೀಲ್ ಚೇರ್ ರೋಮಿಯೋ ಸಿನಿಮಾದಲ್ಲಿ ಕಿರುತೆರೆ ಮೂಲಕ ಮನೆ ಮಾತಾದ ರಾಮ್ ಚೇತನ್ ನಾಯಕನಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಟಿ ಮಯೂರಿ ತಮ್ಮ ಅಮೋಘ ಅಭಿನಯದ ಮೂಲಕ ನಾಯಕಿ ಪಾತ್ರ ಪೋಷಣೆ ಮಾಡಿದ್ದಾರೆ. ಇಡೀ ಸಿನಿಮಾದಲ್ಲಿ ವಿಶೇಷ ಅನಿಸುವ ಪಾತ್ರವನ್ನು ಮಯೂರಿ ಒಪ್ಪಿಕೊಂಡಿದ್ದರ ಹಿಂದೆ ಒಂದು ರೋಚಕ ಕಥಾನಕವಿದೆ. ಇದನ್ನೂ ಓದಿ: ಗೋಮಾಂಸವನ್ನು ಹಿಂದೂಗಳು, ಕ್ರಿಶ್ಚಿಯನ್ ಕೂಡ ತಿನ್ನುತ್ತಾರೆ: ಸಿದ್ದರಾಮಯ್ಯ

    ನಿರ್ದೇಶಕ ನಟರಾಜ್ ಸ್ವಾತಂತ್ರ್ಯ ನಿರ್ದೇಶಕರಾಗಿ ಒಂದೊಳ್ಳೆ ಸಿನಿಮಾ ಮಾಡಬೇಕು ಎಂದು ಕಥೆ ತಯಾರಿಸಿ, ಅದಕ್ಕೆ ತಕ್ಕುದಾದ ಪಾತ್ರಗಳನ್ನು ರೆಡಿ ಮಾಡಿಕೊಂಡಿದ್ದರು. ಒಂದು ಸೂಕ್ಷ್ಮ ಎಳೆಯನ್ನು ಇಟ್ಟುಕೊಂಡು ವೀಲ್‍ಚೇರ್ ರೋಮಿಯೋ ಚಿತ್ರವನ್ನು ಹೆಣೆದಿದ್ದರು. ಅದ್ಭುತ ಪಾತ್ರಗಳನ್ನು ಸೃಷ್ಟಿಸಿದ್ದರು. ಕಾಲಿಲ್ಲದ ನಾಯಕನ ಪಾತ್ರಕ್ಕೆ ಸೂಕ್ತ ಪ್ರತಿಭೆ ಹುಡುಗಾಟದಲ್ಲಿದ್ದಾಗ ಸಿಕ್ಕಿದ್ದು ರಾಮ್ ಚೇತನ್. ಆದರೆ ನಟರಾಜ್ ಅವರಿಗೆ ನಾಯಕಿ ಪಾತ್ರಕ್ಕೆ ಯಾರನ್ನು ಆಯ್ಕೆ ಮಾಡುವುದು ಅನ್ನೋದು ದೊಡ್ಡ ಸವಾಲಾಗಿತ್ತು.

    ಕಣ್ಣಿಲ್ಲದ ವೇಶ್ಯೆ ಪಾತ್ರಕ್ಕೆ ಜೀವ ತುಂಬಲು ಯಾವ ನಟಿಯರು ತಾನೇ ಮುಂದೆ ಬರುತ್ತಾರೆ. ಇಂತಹ ಪಾತ್ರ ಅಭಿನಯಿಸಲು ಸಹಜವಾಗಿ ಮುಜುಗರ ಇದ್ದೇ ಇರುತ್ತದೆ. ಆದರೆ ಒಳ್ಳೆ ಪಾತ್ರಕ್ಕಾಗಿ ಕಾತುರದಿಂದ ಕಾಯ್ತಿದ್ದ ಮಯೂರಿ ಕೂಡ ಒಂದು ಕ್ಷಣ ಪಾತ್ರ ಕೇಳಿ ಬೆರಗಾಗಿದ್ದರು. ಸಿನಿಮಾದ ಭಾಗದ ನಂತರ ಮಯೂರಿ ತಮ್ಮ ಪಾತ್ರಕ್ಕೆ ಮನಸೋತರು. ಕೆಲ ಡೈಲಾಗ್ ಹೇಳುವಾಗ ಕೊಂಚ ಹಿಂದೇಟು ಹಾಕಿದ್ದರೂ ಸಹ ಒಂದೊಳ್ಳೆ ಪಾತ್ರದಲ್ಲಿ ಅಭಿನಯಿಸಿರುವ ಸಂತೃಪ್ತಿ ಮಯೂರಿಗಿದೆ. ಆದರೆ ಇಂತಹ ಪಾತ್ರ ಕೈಬಿಟ್ಟುವ ನಾಯಕಿರು ಈಗ ಒಳಗೊಳಗೆ ಬೇಸರಪಟ್ಟುಕೊಳ್ಳುವುದುಂಟು.

  • ಜೂಲಿಯಟ್ ಪ್ರೀತಿಯಲ್ಲಿ ಬಂಧಿಯಾದ ವೀಲ್ ಚೇರ್ ರೋಮಿಯೋ – ಗುಂಗು ಹಿಡಿಸಿದ ರಂಗು ರಾಟೆ ರಂಗು ಸಿಂಗಿಂಗು

    ಜೂಲಿಯಟ್ ಪ್ರೀತಿಯಲ್ಲಿ ಬಂಧಿಯಾದ ವೀಲ್ ಚೇರ್ ರೋಮಿಯೋ – ಗುಂಗು ಹಿಡಿಸಿದ ರಂಗು ರಾಟೆ ರಂಗು ಸಿಂಗಿಂಗು

    ನ್ನಡ ಚಿತ್ರರಂಗದ ಉದ್ಯಾನವನದಲ್ಲಿ ಬೆಳೆದು ನಿಂತಿರುವ ವೀಲ್ ಚೇರ್ ರೋಮಿಯೋ ಬೆಳ್ಳಿತೆರೆ ಬಾನಂಗಳ ಪ್ರವೇಶಿಸಲು ಸನ್ನದ್ಧನಾಗಿದ್ದಾನೆ. ಈ ತಿಂಗಳ 27ರಂದು ಚಿತ್ರ ಪ್ರೇಮಿಗಳನ್ನು ರಂಜಿಸಲು ಬರುತ್ತಿರುವ ವೀಲ್ ಚೇರ್ ರೋಮಿಯೋ ಅಂಗಳದಿಂದ ಮನ ತಣಿಸಿ ಕುಣಿಸುವ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರ ಹೃದಯದಲ್ಲಿ ಅರಮನೆ ಕಟ್ಟಿದೆ.

    ರಂಗು ರಾಟೆ ರಂಗು ರಾಟೆ ಎಂದು ಶುರುವಾಗುವ ಅದ್ಭುತ ಹಾಡಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಅಷ್ಟೇ ಸೊಗಸಾದ ಸಂಗೀತವನ್ನು ಭರತ್ ಜಿ.ಜೆ ನೀಡಿದ್ದು, ವಿಜಯ್ ಪ್ರಕಾಶ್ ಹಾಡಿಗೆ ಧ್ವನಿಯಾಗಿದ್ದಾರೆ. ನಾಯಕ ನಾಯಕಿಯನ್ನು ಪ್ರೀತಿಸುವ ಪರಿಯನ್ನು ವಿವರಿಸುವ ಬಗೆಯ ಹಾಡು ಇದಾಗಿದ್ದು, ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ : ಕ್ರಿಕೆಟ್ ಪಂದ್ಯದ ಮಧ್ಯ ಗಮನ ಸೆಳೆದಿದ್ದ ಈ ಸುಂದರಿ, ಸಿನಿಮಾ ರಂಗಕ್ಕೆ ಎಂಟ್ರಿ

    Wheel Chair Romeo

    ಕಾಲಿಲ್ಲದ ಯುವಕ, ಕಣ್ಣುಕಾಣದ ವೇಶ್ಯೆಯ ಪ್ರೀತಿಯಲ್ಲಿ ಬಿದ್ದಾಗ ಏನಾಗುತ್ತದೆ ಎಂಬ ಒಂದೊಳ್ಳೆ ಕಂಟೆಂಟು ಜೊತೆಗೆ, ಅಪ್ಪ ಮಗನ ಬಾಂಧವ್ಯವನ್ನು ವಿವರಿಸುವ ವೀಲ್ ಚೇರ್ ರೋಮಿಯೋ ಸಿನಿಮಾಗೆ ಹಲವು ಸ್ಟಾರ್ ಚಿತ್ರಗಳಿಗೆ ಸಂಭಾಷಣೆ ಬರೆದಿರುವ ಜಿ. ನಟರಾಜ್, ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕನಾಗಿ ರಾಮ್ ಚೇತನ್ ಅಭಿನಯಿಸಿದ್ದರೆ, ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್, ತಬಲನಾಣಿ ಗಿರೀಶ್ ಸೇರಿದಂತೆ ಒಂದಷ್ಟು ಹಿರಿಯ ಕಲಾಬಳಗ ಸಿನಿಮಾದಲ್ಲಿದೆ. ಇದನ್ನೂ ಓದಿ : Exclusive- ಅಮೆಜಾನ್ ಪ್ರೈಮ್ನಲ್ಲಿ ‘ಕೆಜಿಎಫ್ 2’ : ಫಸ್ಟ್ ಟೈಮ್ ಮೆಂಬರ್ ಅಲ್ಲದವರೂ ಸಿನಿಮಾ ನೋಡಬಹುದು

    Wheel Chair Romeo

    ಜೆ. ಭರತ್ ಸಂಗೀತವಿರುವ ವೀಲ್ ಚೇರ್ ರೋಮಿಯೋ ಚಿತ್ರಕ್ಕೆ ಸಂತೋಷ್ ಛಾಯಾಗ್ರಹಣ, ಕಿರಣ್ ಸಂಕಲನವಿದ್ದು, ಗುರುಪ್ರಸಾದ್ ಸಂಭಾಷಣೆ ಇದ್ದು, ಟಿ.ವೆಂಕಟಾಚಲಯ್ಯ ಹಾಗೂ ಭಾರತಿ ವೆಂಕಟೇಶ್ ನಿರ್ಮಾಣ ಮಾಡಿದ್ದಾರೆ. ಒಂದಷ್ಟು ಪಂಚಿಂಗ್ ಡೈಲಾಗ್, ವಿಭಿನ್ನತೆಯಿಂದ ಗಮನಸೆಳೆದಿರುವ ಟ್ರೇಲರ್ ಮೂಲಕ ಸಿನಿಮಾದ ಕಂಟೆಂಟು, ಕ್ವಾಲಿಟಿ ಮೇಲೆ ಬೆಳಕು ಚೆಲ್ಲಿರುವ ವೀಲ್ ಚೇರ್ ರೋಮಿಯೋ ಮೇ 27ಕ್ಕೆ ತೆರೆ ಮೇಲೆ ಬರಲಿದೆ.

  • ವೀಲ್ ಚೇರ್ ರೋಮಿಯೋಗೆ ಒಲಿದು ಬಂದ ಅದೃಷ್ಟ: ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಕಮಾಲ್ ಮಾಡಲು ರೋಮಿಯೋ ರೆಡಿ..!!!

    ವೀಲ್ ಚೇರ್ ರೋಮಿಯೋಗೆ ಒಲಿದು ಬಂದ ಅದೃಷ್ಟ: ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಕಮಾಲ್ ಮಾಡಲು ರೋಮಿಯೋ ರೆಡಿ..!!!

    ವೀಲ್ ಚೇರ್ ರೋಮಿಯೋ’..ಹೀಗೊಂದು ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡ್ತಿರೋದು ಎಲ್ಲರ ಗಮನಕ್ಕೂ ಬಂದಿದೆ. ಡಿಫ್ರೆಂಟ್ ಟೈಟಲ್, ಅಷ್ಟೇ ಡಿಫ್ರೆಂಟ್ ಕಾನ್ಸೆಪ್ಟ್‌ನೊಂದಿಗೆ ಬರ್ತಿರೋ ಈ ರೋಮಿಯೋ ಈಗಾಗಲೇ ಹಾಡು ಮತ್ತು ಟ್ರೇಲರ್ ಮೂಲಕ ಒಂದಷ್ಟು ಸಿನಿಪ್ರಿಯರ ಮನದಲ್ಲೂ ಅಚ್ಚೊತ್ತಿದ್ದಾನೆ. ಒಂದಿಷ್ಟು ಕುತೂಹಲವನ್ನು ಕೆರಳಿಸಿದ್ದಾನೆ. ಅದ್ರಲ್ಲೂ ಟ್ರೇಲರ್ ಬಿಡುಗಡೆಯಾದ ಮೇಲಂತೂ ಚಿತ್ರದ ಮೇಲಿನ ಹೋಪ್ಸ್ ಸಿನಿಪ್ರಿಯರಲ್ಲಿ ದುಪ್ಪಟ್ಟಾಗಿದೆ. ಮಾಮೂಲಿ ಕಥೆ ಅಲ್ಲ ಸಂಥಿಂಗ್ ಈಸ್ ದೇರ್ ಅನ್ನೋ ಟಾಕ್ ಜೋರಾಗಿದೆ. ಈ ಪಾಸಿಟಿವ್ ಟಾಕ್ ನೋಡಿದ್ರೇನೆ ಗೊತ್ತಾಗುತ್ತೆ ವೀಲ್ ಚೇರ್ ರೋಮಿಯೋ ಹೊಸ ಬಝ್ ಕ್ರಿಯೇಟ್ ಮಾಡೋದ್ರಲ್ಲಿ ಡೌಟೇ ಇಲ್ಲ ಎಂದು. ಸದ್ಯ ಬಿಡುಗಡೆಯಾಗಿ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿರೋ ವೀಲ್ ಚೇರ್ ರೋಮಿಯೋಗೆ ಈಗ ಬಂಪರ್ ಆಫರ್ ಸಿಕ್ಕಿದೆ. ಅದುವೇ ಬೆಂಗಳೂರು ಫಿಲ್ಮಂ ಫೆಸ್ಟ್.

    ಎಸ್,, ಈ ಬಾರಿಯ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಅದ್ಧೂರಿ ವೇದಿಕೆ ಸಜ್ಜಾಗುತ್ತಿದೆ. ಮಾರ್ಚ್‌ನಲ್ಲಿ ನಡೆಯಲಿರೋ ಬೆಂಗಳೂರು ಫಿಲ್ಮಂ ಫೆಸ್ಟ್‌ನಲ್ಲಿ ಬೇರೆ ಬೇರೆ ದೇಶದ ನೂರಾರು ಸಿನಿಮಾಗಳು ಆಯ್ಕೆಯಾಗಿ ತೆರೆ ಕಾಣಲಿವೆ. ಈ ಚಲನಚಿತ್ರೋತ್ಸವಕ್ಕೆ ‘ವೀಲ್ ಚೇರ್ ರೋಮಿಯೋ’ ಸಿನಿಮಾ ಆಯ್ಕೆಯಾಗಿದೆ. ಸಿನಿಮಾದಲ್ಲಿರೋ ಕಂಟೆಂಟ್, ಚಿತ್ರ ಮೂಡಿ ಬಂದ ರೀತಿ ಆಯ್ಕೆದಾರರ ಮನಸ್ಸಿಗೆ ಇಷ್ಟವಾಗಿದೆ. ಆದ್ದರಿಂದ ನಮ್ಮ ಸಿನಿಮಾ ಕೂಡ ಬೆಂಗಳೂರು ಫಿಲ್ಮಂ ಫೆಸ್ಟ್‌ಗೆ ಸೆಲೆಕ್ಟ್ ಆಗಿದೆ ಎಂದು ಚಿತ್ರದ ನಿರ್ದೇಶಕ ನಟರಾಜ್ ಸಂತಸ ಹಂಚಿಕೊಂಡಿದ್ದಾರೆ.

    ‘ವೀಲ್ ಚೇರ್ ರೋಮಿಯೋ’ ಹೆಸರಿಗೆ ತಕ್ಕಂತೆ ಚಿತ್ರದ ನಾಯಕ ವೀಲ್ ಚೇರ್ ಮೇಲೆ ಕುಳಿತು ಪ್ರೀತಿಯಲ್ಲಿ ಬೀಳುತ್ತಾನೆ. ಆತ ಪ್ರೀತಿಯಲ್ಲಿ ಬೀಳೋದು ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಅಂಧ ಹುಡುಗಿ ಜೊತೆ. ಈ ವಿಚಾರ ನಾಯಕನ ಮನೆಯಲ್ಲಿ ಗೊತ್ತಾದಾಗ ಏನೆಲ್ಲ ಆಗಬಹುದು ಎನ್ನೋದು ಚಿತ್ರದ ಒನ್ ಲೈನ್ ಕಹಾನಿ. ಹಾಗಂತ ಇದು ಸೀರಿಯಸ್ ಸಬ್ಜೆಕ್ಟ್ ಸಿನಿಮಾ ಅಲ್ಲ ಬದಲಾಗಿ ಪಕ್ಕಾ ಕಾಮಿಡಿ ಎಂಟಟೈನ್ಮೆಂಟ್ ಸಿನಿಮಾ. ಈ ಕಾಮಿಡಿಯೊಂದಿಗೆ ಕೊಂಚ ಸೆಂಟಿಮೆಂಟ್ ಕೂಡ ಆಡ್ ಆಗಿದ್ದು ಎಲ್ಲೂ ಬೋರ್ ಹೊಡಿಸದೇ ನೋಡುಗರನ್ನು ನಗಿಸಲಿದ್ದಾನೆ ರೋಮಿಯೋ. ಇದನ್ನೂ ಓದಿ : ಉಪೇಂದ್ರ ಅಣ್ಣನ ಮಗನ ಬೆನ್ನುಬಿದ್ದ ಸ್ಯಾಂಡಲ್ ವುಡ್

    ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡಿತಿರೋ ನಟರಾಜ್ ಸಿನಿಮಾ ಮೇಲೆ ಅಪಾರ ಭರವಸೆ ಇಟ್ಟುಕೊಂಡಿದ್ದಾರೆ. ಕಥೆ, ಚಿತ್ರಕಥೆ ಬರೆದು ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ನಟರಾಜ್ ರೋಮಿಯೋ, ಜೂಮ್, ಆರೆಂಜ್ ಸೇರಿದಂತೆ ಹಲವು ಸಿನಿಮಾಗಳಿಗೆ ಡೈಲಾಗ್ ರೈಟರ್ ಆಗಿ, ಸಹಾಯಕ ನಿರ್ದೇಶಕನಾಗಿ ಸಿನಿಮಾ ನಿರ್ದೇಶನದ ಪಟ್ಟುಗಳನ್ನು ಕರಗತ ಮಾಡಿಕೊಂಡಿದ್ದಾರೆ. ವೀಲ್ ಚೇರ್ ರೋಮಿಯೋ ಸಿನಿಮಾ ಕೂಡ ಅಷ್ಟೇ ಪ್ಯಾಶನ್ ನಿಂದ, ಶ್ರದ್ಧೆವಹಿಸಿ ತೆರೆ ಮೇಲೆ ತಂದಿದ್ದಾರೆ ಎನ್ನೋದಕ್ಕೆ ಚಿತ್ರದ ಸ್ಯಾಂಪಲ್ ಗಳೇ ಸಾಕ್ಷಿ. ಇದನ್ನೂ ಓದಿ: ಮುದ್ದಾದ ಹುಡುಗಿ ಅನುಶ್ರೀಗೆ ಸೈತಾನ್ ಅಂದೋರು ಯಾರು?

    ಚಿತ್ರದಲ್ಲಿ ಸೀರಿಯಲ್‌ನಲ್ಲಿ ನಟಿಸಿ ಅನುಭವ ಹೊಂದಿರುವ ಹೊಸ ಪ್ರತಿಭೆ ರಾಮ್ ಚೇತನ್ ನಾಯಕನಾಗಿ ನಟಿಸಿದ್ದು, ಮಯೂರಿ ನಾಯಕಿಯಾಗಿ ತೆರೆ ಹಂಚಿಕೊಂಡಿದ್ದಾರೆ. ಬಿ.ಜೆ.ಭರತ್ ಸಂಗೀತ ನಿರ್ದೇಶನದಲ್ಲಿ ಹಾಡು ಹಾಗೂ ಹಿನ್ನೆಲೆ ಸಂಗೀತ ಮೂಡಿ ಬಂದಿದ್ದು, ಗುರುಕಶ್ಯಪ್ ಸಂಭಾಷಣೆ, ಸಂತೋಷ್ ಪಾಂಡಿ ಕ್ಯಾಮೆರಾ ವರ್ಕ್, ವಿ ನಾಗೇಂದ್ರ ಪ್ರಸಾದ್, ಜಯಂತ್ ಕಾಯ್ಕಿಣಿ ಸಾಹಿತ್ಯ ಕೃಷಿ ಚಿತ್ರಕ್ಕಿದೆ. ಸುಚೇಂದ್ರಪ್ರಸಾದ್, ತಬಲ ನಾಣಿ, ರಂಗಾಯಣ ರಘು ಚಿತ್ರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅಗಸ್ತ್ಯ ಕ್ರಿಯೇಷನ್ಸ್ ಬ್ಯಾನರ್ ನಡಿ ವೆಂಕಟಾಚಲಯ್ಯ ಚಿತ್ರಕ್ಕೆ ಬಂಡವಾಳ ಹೂಡಿ ಚಿತ್ರ ನಿರ್ಮಾಣ ಮಾಡಿದ್ದಾರೆ. ಬೆಂಗಳೂರು, ಮಹರಾಷ್ಟ್ರ, ಪುಣೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು ಮೇನಲ್ಲಿ ವೀಲ್ ಚೇರ್ ರೋಮಿಯೋ ಪ್ರೇಕ್ಷಕರ ಮನಸ್ಸಿಗೆ ಕಚಗುಳಿ ಇಡಲು ತೆರೆಗೆ ಬರಲಿದ್ದಾನೆ.