Tag: Wheel Chair

  • ಸಿಎಂ ತವರೂರಿನ ದೊಡ್ಡಾಸ್ಪತ್ರೆಯಲ್ಲಿ ವ್ಹೀಲ್ ಚೇರ್ ಅವ್ಯವಸ್ಥೆ – ಶಾಸಕ ಹರೀಶ್‌ಗೌಡ ತೀವ್ರ ತರಾಟೆ!

    ಸಿಎಂ ತವರೂರಿನ ದೊಡ್ಡಾಸ್ಪತ್ರೆಯಲ್ಲಿ ವ್ಹೀಲ್ ಚೇರ್ ಅವ್ಯವಸ್ಥೆ – ಶಾಸಕ ಹರೀಶ್‌ಗೌಡ ತೀವ್ರ ತರಾಟೆ!

    – ಎಂಎಲ್‌ಎ ಪ್ರಶ್ನಿಸಿದ್ದಕ್ಕೆ ರಾಜೀನಾಮೆ ಕೊಡ್ತೀನಿ ಎಂದ ಆಸ್ಪತ್ರೆ ಸೂಪರಿಂಟೆಂಡೆಂಟ್
    – ಆಸ್ಪತ್ರೆ ಅದ್ವಾನ ನೋಡಿಯೂ ಆಡಳಿತಧಿಕಾರಿಗಳಿಗೆ ಕ್ಲೀನ್ ಚಿಟ್

    ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವ‌ರು ಜಿಲ್ಲೆಯ ದೊಡ್ಡಾತ್ರೆಯಲ್ಲೇ ವ್ಹೀಲ್‌ ಚೇರ್‌ ಅವ್ಯವಸ್ಥೆ ಕಂಡುಬಂದಿದೆ. 4 ಜಿಲ್ಲೆಗಳ ಕೇಂದ್ರಬಿಂದು ಆಗಿರುವ ಮೈಸೂರಿನ ಕೆ.ಆರ್‌ ಆಸ್ಪತ್ರೆಯಲ್ಲೇ ವ್ಹೀಲ್‌ ಚೇರ್‌ ಇಲ್ಲದೇ ರೋಗಿಗಳು ಪರದಾಡುವ ಸ್ಥಿತಿ ಉಂಟಾಗಿದೆ. ವ್ಹೀಲ್‌ ಚೇರ್‌ ಇಲ್ಲದೇ ಪ್ಲಾಸ್ಟಿಕ್ ಚೇರ್‌ನಲ್ಲಿ ಚಿಕಿತ್ಸೆಗಾಗಿ ವೃದ್ಧೆಯೊಬ್ಬರನ್ನ ಕರೆದೊಯ್ದಿರುವ ದೃಶ್ಯ ಮನ ಕಲುಕುವಂತೆ ಮಾಡಿದೆ.

    ಹೌದು. ನಾಲ್ಕು ಜಿಲ್ಲೆಗಳಿಗೆ ಆಧಾರವಾಗಿರುವ ಪ್ರತಿಷ್ಠಿತ ಕೆ.ಆರ್ ಆಸ್ಪತ್ರೆಯಲ್ಲಿ ರೋಗಿಯನ್ನ ಚೇರ್‌ನಲ್ಲಿ ಕೂರಿಸಿಕೊಂಡು ಕರೆದೊಯ್ದಿರುವ ದೃಶ್ಯ ʻಪಬ್ಲಿಕ್‌ ಟಿವಿʼ ಕ್ಯಾಮೆರಾದಲ್ಲಿ ಸೆರೆಯಾಗಿದೆ. ʻಪಬ್ಲಿಕ್‌ ಟಿವಿʼ ಈ ಅವ್ಯವಸ್ಥೆಯನ್ನು ಬಯಲಿಗೆಳೆಯುತ್ತಿದ್ದಂತೆ ಸ್ಥಳೀಯ ಶಾಸಕ ಹರೀಶ್‌ ಗೌಡ, ಸ್ಥಳಕ್ಕೆ ದೌಡಾಯಿಸಿದ್ದಾರೆ. ಬಳಿಕ ವ್ಹೀಲ್‌ ಚೇರ್‌ ಇಟ್ಟಿದ್ದ ಕೊಠಡಿಯ ಬೀಗ ಒಡೆಸಿದ್ದಾರೆ. ದುಸ್ಥಿತಿಯಲ್ಲಿದ್ದ ವ್ಹೀಲ್‌ ಚೇರ್‌ಗಳನ್ನು ಕಂಡ ಶಾಸಕರು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಶೋಭಾರನ್ನ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನಾನೇ ರಾಜೀನಾಮೆ ಕೊಡ್ತಿನಿ ಅಂತ ಸೂಪರಿಂಟೆಂಡೆಂಟ್ ಅಲ್ಲಿಂದ ತೆರಳಿದ್ದಾರೆ.

    ನಿರ್ಲಕ್ಷ್ಯ ಮಾಡಿದವರ ಮೇಲೆ 100ಕ್ಕೆ 100 ಕ್ರಮ:
    ಬಳಿಕ ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ ಶಾಸಕ ಹರೀಶ್‌ ಗೌಡ, ಪ್ರಕರಣದಲ್ಲಿ ಆಸ್ಪತ್ರೆಯ ಆಡಳಿತಾಧಿಕಾರಿಗಳು, ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯ ಎದ್ದು ಕಾಣ್ತಿದೆ. ಈ ನಿರ್ಲಕ್ಷ್ಯ ಮಾಡಿದವರ ಮೇಲೆ 100ಕ್ಕೆ 100 ಕ್ರಮ ಜರುಗಿಸುತ್ತೇನೆ. ಕ್ರಮಕ್ಕೆ ಆಗ್ರಹಿಸಿ ಸಚಿವರಿಗೂ ಪತ್ರ ಬರೆಯುತ್ತೇನೆ ಎಂದು ಜೋರು ದನಿಯಲ್ಲಿ ಮಾತನಾಡಿದರು.

    ಎಲ್ಲರ ಅಮಾನತ್ತಿಗೆ ಸರ್ಕಾರಕ್ಕೆ ಪತ್ರ ಬರಿತೀನಿ:
    ಕೆ.ಆರ್ ಆಸ್ಪತ್ರೆಯ ಆಡಳಿತಾಧಿಕಾರಿ ದ್ರಾಕ್ಷಾಯಿಣಿ ಪ್ರತಿಕ್ರಿಯಿಸಿ, ಘಟನೆಗೆ ಸಂಬಂಧಪಟ್ಟ ಎಲ್ಲರ ಅಮಾನತ್ತಿಗೆ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ. ಇವತ್ತೇ ಎಲ್ಲರಿಗೂ ನೋಟಿಸ್ ಕೊಡ್ತೀನಿ. ಸಂಜೆಯೊಳಗೆ ಕೆಟ್ಟು ಹೋಗಿರುವ ಲಿಫ್ಟ್ ರಿಪೇರಿ ಮಾಡಿಸುತ್ತೇನೆ, ಮೂರು ದಿನಗಳಲ್ಲಿ ಮುರಿದಿರುವ ಎಲ್ಲಾ ವ್ಹೀಲ್‌ ಚೇರ್‌ಗಳನ್ನ ದುರಸ್ತಿ ಮಾಡಿಸುತ್ತೇನೆ ಎಂದು ಹೇಳಿದ್ದಾರೆ.

    ಆರ್‌ಟಿಐ ಕಾರ್ಯಕರ್ತರ ಬೆದರಿಕೆ ಇದೆ:
    ಕೆ.ಆರ್ ಆಸ್ಪತ್ರೆ ಮೇಲ್ವಿಚಾರಕಿ ಶೋಭಾ ಈ ವಿಚಾರ ಕುರಿತು ಮಾತನಾಡಿ, ನನಗೆ ಆರ್‌ಟಿಐ ಕಾರ್ಯಕರ್ತರ ಬೆದರಿಕೆ ಇದೆ. 10 ತಿಂಗಳಿಂದ ಕೆಲಸ ಮಾಡುತ್ತಿದ್ದೇನೆ. ಸೆಕ್ಯೂರಿಟಿ ಸೇರಿ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವುದಿಲ್ಲ. ಇದರ ಬಗ್ಗೆ ಪತ್ರ ಬರೆದರೆ 20ಕ್ಕೂ RTI ಕಾರ್ಯಕರ್ತರು ಬಂದು ಪ್ರಶ್ನೆ ಮಾಡ್ತಾರೆ. ಇಲ್ಲಿ ವ್ಯವಸ್ಥೆ ಮೊದಲಿನಿಂದ ಹಾಳಾಗಿದೆ. ಡೀನ್ ಸೇರಿದಂತೆ ಎಲ್ಲರಿಗೂ ಮಾಹಿತಿ ಕೊಟ್ಟಿದ್ದೇನೆ. ಎಲ್ಲರಿಗೂ ಇದರ ಬಗ್ಗೆ ಮಾಹಿತಿ ಇದೆ ಎಂದು ತಿಳಿಸಿದ್ದಾರೆ.

    ಅದ್ವಾನ ನೋಡಿಯೂ ಆಡಳಿತಧಿಕಾರಿಗಳಿಗೆ ಕ್ಲೀನ್ ಚಿಟ್:
    ದೊಡ್ಡಾಸ್ಪತ್ರೆಯಲ್ಲಿ ವ್ಹೀಲ್‌ ಚೇರ್‌ ಇಲ್ಲದೇ ರೋಗಿಗಳ ಪರದಾಟವನ್ನು ಕಂಡ ಶಾಸಕ ಹರೀಶ್‌ಗೌಡ ಕೆಳ ಹಂತದ ಸಿಬ್ಬಂದಿ ವಿರುದ್ಧ ರೇಗಾಡಿದರು. ಆದ್ರೆ ಆಡಳಿತಧಿಕಾರಿಗಳಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಇಲ್ಲಿ ಡೀನ್ ಮತ್ತು ಸೂಪರಿಂಟೆಂಡೆಂಟ್ ಎಲ್ಲರೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿ ಅಧಿಕಾರಿಗಳ ಮಾತು ಕೇಳುತ್ತಿಲ್ಲ ಎಂದು ಅಲ್ಲಿಂದ ಹೊರಟ್ಟಿದ್ದಾರೆ.

  • ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ

    ರಾಷ್ಟ್ರಪತಿ ಚುನಾವಣೆ – ಮೊದಲ ಬಾರಿ ಸಾರ್ವಜನಿಕವಾಗಿ ವ್ಹೀಲ್ ಚೇರ್‌ನಲ್ಲಿ ಕಾಣಿಸಿಕೊಂಡ ಹೆಚ್‌ಡಿಡಿ

    ನವದೆಹಲಿ: ಭಾರತದ 15ನೇ ರಾಷ್ಟ್ರಪತಿ ಚುನಾವಣೆ ಸೋಮವಾರ ಭರದಿಂದ ಸಾಗಿದ್ದು, ದೇಶಾದ್ಯಂತ ಗಣ್ಯರು ಮತ ಚಲಾಯಿಸಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಇಂದು ರಾಷ್ಟ್ರಪತಿ ಚುನಾವಣೆಯಲ್ಲಿ ಮತ ಚಲಾಯಿಸಿದ್ದು, ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ವ್ಹೀಲ್‌ಚೇರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

    ಸಂಸತ್ತಿನ ಆವರಣದಲ್ಲಿ ಚುನಾವಣೆಗೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ದೇವೇಗೌಡರು ಕಾಲು ನೋವಿನ ಹಿನ್ನೆಲೆ ವ್ಹೀಲ್ ಚೇರ್‌ನಲ್ಲಿ ಮತ ಚಲಾಯಿಸಲು ಆಗಮಿಸಿದ್ದರು. ಮತದಾನ ಮಾಡಿದ ಬಳಿಕ ದೇವೇಗೌಡರು ವಾಪಸ್ಸಾಗಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ- ವ್ಹೀಲ್ ಚೇರ್‌ನಲ್ಲಿ ಬಂದು ಮತ ಹಾಕಿದ ಮನಮೋಹನ್ ಸಿಂಗ್

    ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಪಕ್ಷದ ರಾಜಕಾರಣವನ್ನು ಮೀರಿ ಬೆಂಬಲ ನೀಡುವುದಾಗಿ ಜೆಡಿಎಸ್ ಸರ್ವಾನುಮತದ ನಿರ್ಣಯ ಕೈಗೊಂಡಿತ್ತು. ಇದನ್ನೂ ಓದಿ: ದ್ರೌಪದಿ ಮುರ್ಮು, ಸಿನ್ಹಾ ಇಬ್ಬರಿಗೂ ವೋಟು ಹಾಕಲ್ಲ: ರಾಷ್ಟ್ರಪತಿ ಚುನಾವಣೆ ಬಹಿಷ್ಕರಿಸಿದ ಅಕಾಲಿ ದಳ ಶಾಸಕ

    ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾದ ಮರುದಿನವೇ ಹೆಚ್.ಡಿ ದೇವೇಗೌಡರಿಗೆ ದೂರವಾಣಿ ಕರೆ ಮಾಡಿ ಬೆಂಬಲ ಯಾಚಿಸಿದ್ದರು. ದ್ರೌಪದಿ ಮುರ್ಮು ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭ ಖುದ್ದಾಗಿ ದೇವೇಗೌಡ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮತ ಕೇಳಿದ್ದರು.

    Live Tv
    [brid partner=56869869 player=32851 video=960834 autoplay=true]

  • ರೋಗಿಗಳಿಗಾಗಿ ವ್ಹೀಲ್‍ಚೇರ್ ಸಂಶೋಧನೆ-ಯಾವ ಭಾಷೆಯಲ್ಲಿ ಹೇಳಿದ್ರೂ ಚಲಿಸುತ್ತೆ

    ರೋಗಿಗಳಿಗಾಗಿ ವ್ಹೀಲ್‍ಚೇರ್ ಸಂಶೋಧನೆ-ಯಾವ ಭಾಷೆಯಲ್ಲಿ ಹೇಳಿದ್ರೂ ಚಲಿಸುತ್ತೆ

    -ಧಾರವಾಡ ಎಸ್‍ಡಿಎಂ ಸ್ಟೂಡೆಂಟ್ಸ್ ಸಾಧನೆ

    ಧಾರವಾಡ: ಈ ಚೇರ್ ಲೆಫ್ಟ್ ಅಂದ್ರೆ ಎಡಕ್ಕೆ ಹೋಗುತ್ತೆ. ರೈಟ್ ಅಂದ್ರೆ ಬಲಕ್ಕೆ ಹೋಗುತ್ತೆ. ಹೋಗುವಾಗ್ಲೆ ನಿಲ್ಲು ಅಂದ್ರೆ ನಿಂತೇ ಬಿಡುತ್ತದೆ. ಹೌದು. ಧಾರವಾಡದ ಇಂಜಿನಿಯರಿಂಗ್ ವಿದ್ಯಾರ್ಥಿಗಳು ರೋಗಿಗಳಿಗಾಗಿ ಈ ಹೊಸ ಮೂವಿಂಗ್ ಚೇರನ್ನ ತಯಾರಿಸಿದ್ದಾರೆ.

    ಧಾರವಾಡದ ಎಸ್‍ಡಿಎಂ ಇಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಾನಿಕ್ಸ್ ವಿದ್ಯಾರ್ಥಿಗಳು ಈ ಆವಿಷ್ಕಾರವನ್ನ ಮಾಡಿದ್ದಾರೆ. ಇದನ್ನ ವಿಶೇಷವಾಗಿ ವೃದ್ಧ ಹಾಗೂ ಅಂಗವಿಕಲರನ್ನ ಗಮನದಲ್ಲಿಟ್ಟುಕೊಂಡು ಆವಿಷ್ಕರಿಸಲಾಗಿದೆ. ಪುಷ್ಪಾ ಚೌಹಾಣ್, ಕಿರಣ್, ವೈಷ್ಣವಿ ಹಾಗೂ ಕೃತಿಕಾ ಎಂಬ ವಿದ್ಯಾರ್ಥಿನಿಯರ ಒಂದು ವರ್ಷದ ಪರಿಶ್ರಮದಿಂದ ಈ ಚೇರ್ ಅನ್ನು ತಯಾರಿಸಿದ್ದಾರೆ.

    ವಿಶೇಷತೆ: 12 ವ್ಯಾಟಿನ ಚಾರ್ಜೇಬಲ್ ಬ್ಯಾಟರಿ ಮೇಲೆ ಓಡಾಡುವ ಈ ವ್ಹೀಲ್‍ಚೇರ್, ಒಟ್ಟು 7 ಆಯಾಮಗಳ ಕಡೆ ಚಲಿಸುತ್ತದೆ. ಈ ಕುರ್ಚಿ ಮೆಮೊರಿಯಲ್ಲಿ ಒಟ್ಟು 80 ಜನರ ಧ್ವನಿಯನ್ನ ಮುದ್ರಿಸಿ ಇಡಬಹುದು. ವಿಶ್ವದ ಯಾವುದೇ ಭಾಷೆಯಲ್ಲಿ ಮೂಮೆಂಟ್ ಆಗಲು ಹೇಳಿದ್ರೂ ಇದು ಚಲಿಸುತ್ತೆ. ಭಾಷೆ ಬದಲಿಸಲು ಕೇವಲ 30 ಸೆಕೆಂಡು ಸಾಕು. 75 ಕೆಜಿ ತೂಕದ ಮನುಷ್ಯ ಇದರ ಮೇಲೆ ಕುಳಿತುಕೊಂಡು ಓಡಾಡಬಹುದು. ಈ ಮೂವಿಂಗ್ ಚೇರ್ ತಯಾರಿಸಲು 48 ಸಾವಿರ ರೂ. ಖರ್ಚಾಗಿದೆ.

    ಸತತ ಒಂದು ವರ್ಷಗಳ ಕಾಲ ಪ್ರಯತ್ನ ಪಟ್ಟು ವಿದ್ಯಾರ್ಥಿಗಳು ಮೂವಿಂಗ್ ವ್ಹೀಲ್ ಚೇರ್ ಆವಿಷ್ಕರಿಸಿದ್ದಾರೆ. ವಿದ್ಯಾರ್ಥಿನಿಗಳ ಈ ಆವಿಷ್ಕಾರಕ್ಕೆ ಇನ್ನಷ್ಟು ಉತ್ತೇಜನ ಸಿಕ್ಕಿದ್ರೆ ವಿಶ್ವಖ್ಯಾತಿ ಪಡೆಯಬಹುದು.

    https://youtu.be/WZLElPCcUNs