Tag: wheel

  • ಚಲಿಸುತ್ತಿರುವಾಗಲೇ ಕಳಚಿ ಬಿತ್ತು ಬಸ್‌ನ ಹಿಂಬದಿ ಚಕ್ರ

    ಚಲಿಸುತ್ತಿರುವಾಗಲೇ ಕಳಚಿ ಬಿತ್ತು ಬಸ್‌ನ ಹಿಂಬದಿ ಚಕ್ರ

    ಗದಗ: ಬಸ್ (Bus) ಒಂದು ಚಲಿಸುತ್ತಿರುವಾಗಲೇ ಅದರ ಹಿಂಬದಿ ಚಕ್ರ (Tire) ಕಳಚಿ ಬಿದ್ದಿರುವ ಘಟನೆ ಗದಗ (Gadag) ತಾಲೂಕಿನ ಹೊಂಬಳ ಗ್ರಾಮದ ಬಳಿ ನಡೆದಿದೆ.

    ಗದಗದಿಂದ ನರಗುಂದಕ್ಕೆ ಹೊರಟಿದ್ದ ಬಸ್‌ನ ಚಕ್ರ ಕಳಚಿ ಬಿದ್ದರೂ ಹತ್ತಾರು ಮೀಟರ್ ಮುಂದಕ್ಕೆ ಚಲಿಸಿದೆ. ಹಿಂಬದಿಯ ಡಬಲ್ ಚಕ್ರದ ಪೈಕಿ ಒಂದು ಚಕ್ರ ದಿಢೀರ್ ಕಳಚಿರುವ ದೃಶ್ಯ ಹಿಂಬದಿಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದವರು ತಮ್ಮ ಮೊಬೈಲಿನಲ್ಲಿ ಸೆರೆಹಿಡಿದಿದ್ದಾರೆ. ಇದನ್ನೂ ಓದಿ: ಜಮೀನಿನಲ್ಲಿ ಧರೆಗುರುಳಿದ ಚಾಲಕ ರಹಿತ ತಪಸ್ ಯುಎವಿ

    ಬಸ್ ಗದಗ ಡಿಪೋಗೆ ಸೇರಿದ್ದು, ಘಟನೆ ವೇಳೆ ಸುಮಾರು 50 ಜನರು ಅದರಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ವಿದ್ಯಾರ್ಥಿಗಳು ಚಕ್ರ ಕಳಚಿದ ವೇಳೆ ಬೆಚ್ಚಿಬಿದ್ದಿದ್ದಾರೆ. ಇದನ್ನೂ ಓದಿ: ಕುಡಿಯಲು ಶಿಕ್ಷಕ ಹಣ ಕೇಳ್ತಾನೆ.. ವಾಚ್‍ಮ್ಯಾನ್‍ನಿಂದ ಕಿರುಕುಳ – ಪೊಲೀಸ್ ಕಮಿಷನರ್‌ಗೆ ವಿದ್ಯಾರ್ಥಿನಿಯರ ಪತ್ರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾರಿನ ಚಕ್ರ ತೆಗೆದು ತನ್ನ ಕಾರಿಗೆ ಜೋಡಿಸಿ ಪರಾರಿಯಾದ

    ಕಾರಿನ ಚಕ್ರ ತೆಗೆದು ತನ್ನ ಕಾರಿಗೆ ಜೋಡಿಸಿ ಪರಾರಿಯಾದ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನೀವು ಕಾರನ್ನು ರಸ್ತೆ ಬದಿಯಲ್ಲಿ ಪಾರ್ಕ್ ಮಾಡುತ್ತೀರಾ? ಹಾಗಾದ್ರೆ ಇನ್ನು ಮುಂದೆ ಬಹಳ ಎಚ್ಚರದಿಂದ ಇರುವುದು ಒಳಿತು. ರಾತ್ರಿ ವೇಳೆ ಕಳ್ಳನೊಬ್ಬ ಬೇರೊಂದು ಕಾರಿನ ಚಕ್ರವನ್ನು ತನ್ನ ಕಾರಿಗೆ ಜೋಡಿಸಿ ಪರಾರಿಯಾದ ಘಟನೆ ಯಲಹಂಕದಲ್ಲಿ ನಡೆದಿದೆ.

    ಅಕ್ಟೋಬರ್ 25 ರಂದು ಮಾಲೀಕ ದೀಪಕ್ ಕಾರನ್ನು ನೋಡಿದಾಗ ಚಕ್ರದ ಬೋಲ್ಟ್ ನಟ್ ಫಿಟ್ ಮಾಡಿರಲಿಲ್ಲ. ಅನುಮಾನ ಬಂದು ಪರೀಕ್ಷಿಸಿದಾಗ ಟಯರ್ ತೆಗೆದಿರುವುದು ಗೊತ್ತಾಗಿದೆ. ಬಳಿಕ ಸಿಸಿಟಿವಿಯನ್ನು ಪರೀಕ್ಷಿಸಿದಾಗ ವ್ಯಕ್ತಿಯೊಬ್ಬ ಕಾರಿನ ಚಕ್ರವನ್ನು ತೆಗೆದು ಪರಾರಿಯಾಗಿರುವುದು ದೃಢಪಟ್ಟಿದೆ.

    ಸಿಸಿಟಿವಿಯಲ್ಲಿ ಏನಿದೆ?
    24ರ ರಾತ್ರಿ 9 ಗಂಟೆಗೆ ಪಾರ್ಕ್ ಆಗಿದ್ದ ಕಾರಿನ ಬಳಿ ವ್ಯಕ್ತಿಯೊಬ್ಬ ಬಂದಿದ್ದಾನೆ. ಅಲ್ಲೇ ಸಮೀಪ ಸುತ್ತಾಡಿದ್ದ ಆತ ರಾತ್ರಿ 11 ಗಂಟೆಯ ವೇಳೆಗೆ ತನ್ನ ಕಾರಿನ ಚಕ್ರವನ್ನು ತೆಗೆದು ಪಾರ್ಕ್ ಆಗಿದ್ದ ಕಾರಿನ ಮುಂದುಗಡೆ ಚಕ್ರವನ್ನು ತೆಗೆದಿದ್ದಾನೆ. ಎಡಭಾಗದಲ್ಲಿದ್ದ ಚಕ್ರವನ್ನು ತೆಗೆದು ತನ್ನ ಕಾರಿನ ಚಕ್ರವನ್ನು ಇಟ್ಟಿದ್ದಾನೆ. ಬಳಿಕ ತನ್ನ ಕಾರಿಗೆ ಕದ್ದ ಚಕ್ರವನ್ನು ಜೋಡಿಸಿ ಪರಾರಿಯಾಗಿದ್ದಾನೆ.

    ಸಿಸಿಟಿವಿ ದೃಶ್ಯವನ್ನು ಆಧಾರಿಸಿ ಕಾರು ಮಾಲೀಕ ದೀಪಕ್ ಅವರು ಯಲಹಂಕ ನ್ಯೂ ಟೌನ್ ಠಾಣೆಯಲ್ಲಿ ದೂರು ನೀಡಿದ್ದು ಅನಾಮಿಕ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ.

  • ಲಾರಿಯಡಿ ಸಿಲುಕಿ ನರಳಾಡಿದ ಯುವಕ – ಮಾರ್ಗಮಧ್ಯೆ ಸಾವು

    ಲಾರಿಯಡಿ ಸಿಲುಕಿ ನರಳಾಡಿದ ಯುವಕ – ಮಾರ್ಗಮಧ್ಯೆ ಸಾವು

    ಹಾಸನ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಲಾರಿಯಡಿ ಸಿಲುಕಿ ನರಳಾಡಿ ಪ್ರಾಣ ಬಿಟ್ಟ ಘಟನೆ ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ನಡೆದಿದೆ.

    ಸಕಲೇಶಪುರದ ಬಿಎಂ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದೆ. 23 ವರ್ಷದ ಪ್ರವೀಣ್‍ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಅಂಬುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯಲ್ಲಿ ಪ್ರವೀಣ್ ಕೊನೆಯುಸಿರೆಳೆದಿದ್ದಾನೆ.

    ಅಪಘಾತ ನಡೆದು 15 ನಿಮಿಷಗಳ ಆದರೂ ಸ್ಥಳಕ್ಕೆ ಅಂಬುಲೆನ್ಸ್ ಬಾರದಿದ್ದರಿಂದ ಲಾರಿಯ ಚಕ್ರದಡಿಗೆ ಸಿಲುಕಿದ ಯುವಕ ಒದ್ದಾಡುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರೆದಿದ್ದವರ ಮನಕಲಕುವಂತಿತ್ತು. ಅಪಘಾತದ ಹಿನ್ನೆಲೆಯಲ್ಲಿ ಬಿ.ಎಂ ರಸ್ತೆಯಲ್ಲಿ ಅರ್ಧ ಕಿಲೋಮೀಟರಿಗೂ ಹೆಚ್ಚಿನ ದೂರ ವಾಹನಗಳು ಸಾಲುಗಟ್ಟಿ ನಿಂತು ಸಂಚಾರದಲ್ಲಿ ವ್ಯವಸ್ಥೆಯಲ್ಲಿ ಅಸ್ತವ್ಯಸ್ತವಾಗಿತ್ತು.

    ತೇಜಸ್ವಿ ಚಿತ್ರಮಂದಿರದ ಬಳಿ ಇರುವ ವೃತ್ತ ತೀರಾ ಕಿರಿದಾಗಿದ್ದು ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಂಗಳೂರು ಜಿಲ್ಲೆಗಳಿಗೆ ಸಂಪರ್ಕಿಸುವ ವೃತ್ತವಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತಿರುತ್ತವೆ. ಜನಸಂದಣಿಯ ಹೆಚ್ಚಾಗಿರುವುದರಿಂದ ಪದೇ ಪದೇ ಈ ಸ್ಥಳದಲ್ಲಿ ಅಪಘಾತವಾಗುತ್ತದೆ. ಆದ್ದರಿಂದ ಈ ವೃತ್ತವನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

  • ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ

    ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿವಿಧ ರೀತಿಯಲ್ಲಿ ಕಳ್ಳತನಗಳು ನಡೆಯುತ್ತಲೇ ಇರುತ್ತವೆ. ಅದರಲ್ಲೂ ಟ್ರಾಫಿಕ್ ಪೊಲೀಸ್ ದಂಡ ಹೆಚ್ಚಾದ ಮೇಲೆ ಈ ಡಿಫರೆಂಟ್ ಕಳ್ಳತನ ಚುರುಕಾಗಿದೆ.

    ಹೌದು. ಸಾರ್ವಜನಿಕರ ಸರ್ವಿಸ್‍ಗೆ ಸಿಗುವ ಬೈಕ್‍ಗಳನ್ನ ಬಾಡಿಗೆ ಪಡೆಯುವ ಹಲವರಲ್ಲಿ ಕೆಲವರು ಚಿಲ್ಲರೆ ಕಳ್ಳತನ ಶುರು ಮಾಡಿದ್ದಾರೆ. ಅದು ಟ್ರಾಫಿಕ್ ದಂಡ ದುಬಾರಿಯಾದ ಮೇಲೆ ಕಳ್ಳತನ ದುಪ್ಪಾಟಾಗಿದೆ. ಪೊಲೀಸಪ್ಪನಿಗೆ ಹೆದರಿ ದಂಡ ತಪ್ಪಿಸಿಕೊಳ್ಳಲು ಹೆಲ್ಮೆಟ್, ಮಿರರ್ ಹಾಗೂ ಚಕ್ರಗಳನ್ನ ಕದಿಯುತ್ತಿದ್ದಾರೆ. ಕದ್ದ ವಸ್ತುಗಳ ಬಗ್ಗೆ ಕೇಳಿದರೆ ಕೆಲವರು ಮುಖ ಮುಚ್ಚಿಕೊಳ್ಳುತ್ತಾ ಹೋದರೆ ಮತ್ತೆ ಕೆಲವರು ಗಾಡಿ ಸ್ಪೀಡ್ ಆಗಿ ಓಡಿಸುವುದು ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್ ವೇಳೆ ಬಯಲಾಗಿದೆ.

    ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಖಾಸಗಿ ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತಿವೆ. ಕಿ.ಮೀಗೆ 4 ರಿಂದ 6 ರೂ. ಗೆ ಈ ವಾಹನಗಳು ಸಿಗುತ್ತಿವೆ. ಇದನ್ನ ಬಳಸಿಕೊಂಡು ಹಾಗೇ ಬೈಕ್ ಬಿಟ್ಟರೆ ಸಮಸ್ಯೆಯಾಗಲ್ಲ. ಆದರೆ ಹಲವರು ಉಂಡು ಹೋದ ಕೊಂಡು ಹೋದ ಎಂಬಂತೆ ಮೊದಲು ಹೆಲ್ಮೆಟ್, ಮಿರರ್, ವ್ಹೀಲ್‍ಗಳನ್ನೂ ಎಗರಿಸ್ತಾರೆ. ಇದನ್ನು ಚಿಲ್ಲರೆಗೆ ಕದ್ದು ಚಿಲ್ಲರೆ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ.

    ಹೀಗೆ ಹೆಲ್ಮೆಟ್ ಕದಿಯೋರಿಗೆ ಶಾಕ್ ಕೊಡಲು ಬೌನ್ಸ್ ಕಂಪನಿ ಸಿಬ್ಬಂದಿ ಫೀಲ್ಡ್ ಗೆ ಇಳಿದಿದ್ದರು. ಕದ್ದ ಮಾಲು ವಾಪಸ್ ಕೊಡಿ. ನಮ್ ಹೆಲ್ಮೆಟ್ ವಾಪಸ್ ಕೊಡಿ ಎಂದು ದಿಢೀರ್ ದಾಳಿ ಮಾಡಿದರು. ಈ ಬಗ್ಗೆ ಬೇರೆ ಬೇರೆ ಕಂಪನಿಗಳು ಕೂಡ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದಾರೆ.