Tag: Wheat Usli

  • ಒಂದೊಳ್ಳೆ ಸ್ನ್ಯಾಕ್ಸ್ ರೆಸಿಪಿ – ಗೋಧಿ ಉಸ್ಲಿ

    ಒಂದೊಳ್ಳೆ ಸ್ನ್ಯಾಕ್ಸ್ ರೆಸಿಪಿ – ಗೋಧಿ ಉಸ್ಲಿ

    ರೋಗ್ಯಕ್ಕೆ ಹಿತ ಎನಿಸುವ ಹಾಗೂ ರುಚಿಕಟ್ಟಾದ ರೆಸಿಪಿಯೊಂದನ್ನು ನಾವಿಂದು ಹೇಳಿಕೊಡುತ್ತೇವೆ. ಈ ಗೋಧಿ ಉಸ್ಲಿ (Wheat Usli) ರೆಸಿಪಿಯನ್ನು ನೀವು ಬೇಕೆಂದರೆ ಸ್ನ್ಯಾಕ್ಸ್ ಆಗಿಯೂ ಬೆಳಗ್ಗಿನ ಉಪಾಹಾರವಾಗಿಯೂ ಮಾಡಿ ಸವಿಯಬಹುದು. ಹೊಸ ಹೊಸ ಅಡುಗೆ ಮಾಡಲು ಬಯಸುವವರು ಒಮ್ಮೆ ಈ ರೆಸಿಪಿಯನ್ನು ಖಂಡಿತಾ ಟ್ರೈ ಮಾಡಿ.

    ಬೇಕಾಗುವ ಪದಾರ್ಥಗಳು:
    ಗೋಧಿ – 1 ಕಪ್
    ತುರಿದ ಕ್ಯಾರೆಟ್ – ಕಾಲು ಕಪ್
    ತೆಂಗಿನ ತುರಿ – ಕಾಲು ಕಪ್
    ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
    ನಿಂಬೆ ರಸ – ಅರ್ಧ
    ಎಣ್ಣೆ – 1 ಟೀಸ್ಪೂನ್
    ಸಾಸಿವೆ – 1 ಟೀಸ್ಪೂನ್
    ಜೀರಿಗೆ – ಅರ್ಧ ಟೀಸ್ಪೂನ್
    ಕರಿಬೇವಿನ ಎಲೆ – ಕೆಲವು
    ಹಿಂಗ್ – ಚಿಟಿಕೆ
    ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ – 1 ಟೀಸ್ಪೂನ್
    ಉಪ್ಪು – ರುಚಿಗೆ ತಕ್ಕಷ್ಟು ಇದನ್ನೂ ಓದಿ: ಪ್ಯಾನ್‌ಕೇಕ್ ಗೊತ್ತು, ಡ್ಯಾನಿಶ್ ಪ್ಯಾನ್‌ಕೇಕ್ ಎಂದಾದ್ರೂ ಮಾಡಿದ್ದೀರಾ?

    ಮಾಡುವ ವಿಧಾನ:
    * ಮೊದಲಿಗೆ ಗೋಧಿಯನ್ನು ಸುಮಾರು 6-8 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.
    * ನಂತರ ಕುಕ್ಕರ್‌ನಲ್ಲಿ ಗೋಧಿ ಮೃದುವಾಗುವವರೆಗೆ ಬೇಯಿಸಿಕೊಳ್ಳಿ ಮತ್ತು ನೀರು ಬಸಿದು ಪಕ್ಕಕ್ಕಿಡಿ.
    * ಈಗ ಒಂದು ದಪ್ಪ ತಳದ ಪಾತ್ರೆಯನ್ನು ತೆಗೆದುಕೊಂಡು, ಅದರಲ್ಲಿ ಎಣ್ಣೆ ಬಿಸಿ ಮಾಡಿ.
    * ಸಾಸಿವೆ, ಜೀರಿಗೆ, ಕರಿಬೇವಿನ ಸೊಪ್ಪು ಮತ್ತು ಹಿಂಗ್ ಸೇರಿಸಿ.
    * ಸಾಸಿವೆ ಸಿಡಿದ ಬಳಿಕ ಬೇಯಿಸಿದ ಗೋಧಿ, ಮೆಣಸಿನಕಾಯಿ, ಕ್ಯಾರೆಟ್ ಹಾಗೂ ತೆಂಗಿನ ತುರಿ ಹಾಕಿ ಮಿಶ್ರಣ ಮಾಡಿ.
    * ಒಂದು ನಿಮಿಷ ಹುರಿದ ಬಳಿಕ ಉಪ್ಪು, ನಿಂಬೆ ರಸ ಸೇರಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ.
    * ಇದೀಗ ರುಚಿಕರವಾದ ಗೋಧಿ ಉಸ್ಲಿ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ. ಇದನ್ನೂ ಓದಿ: ಬೇಕರಿಯಲ್ಲಿ ಸಿಗುವ ಡೋನಟ್ ಮನೆಯಲ್ಲೂ ಮಾಡ್ಬೋದು ತುಂಬಾ ಸುಲಭವಾಗಿ