Tag: wheat dosa

  • ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ದೋಸೆ

    ಮನೆಯಲ್ಲಿ ಮಾಡಿ ಗೋಧಿ ಹಿಟ್ಟಿನ ದೋಸೆ

    ನೀವು ಖಾಲಿ ದೋಸೆ, ಮಸಾಲ್ ದೋಸೆ, ಸೆಟ್ ದೋಸೆಯನ್ನು ಹೋಟೆಲ್‍ಗಳಲ್ಲಿ ತಿಂದಿರುತ್ತೀರ. ಆದರೆ ಇಂದು ಮನೆಯಲ್ಲಿ ರುಚಿಕರ ಮತ್ತು ಆರೋಗ್ಯಕರ ಗೋಧಿಹಿಟ್ಟಿನ ದೋಸೆಯನ್ನು ಹೇಗೆ ಮಾಡುವುದು ಹೇಗೆ ಎಂದು ನೋಡಿ.


    ಬೇಕಾಗುವ ಸಾಮಗ್ರಿಗಳು:
    *ಇಡಿಯ ಗೋಧಿ- ಎರಡು ಕಪ್
    *ಕಾಯಿತುರಿ: ಎರಡು ದೊಡ್ಡ ಚಮಚ
    *ನೀರು -ಒಂದು ಕಪ್
    *ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:
    * ಗೋಧಿಯನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ. ಒಂದು ತಟ್ಟೆಯಲ್ಲಿ ಹರಡಿ ಅರ್ಧ ಗಂಟೆ ಒಣಗಲು ಬಿಡಿ.

    * ಬಳಿಕ ಮಿಕ್ಸಿಯ ಜಾರಿನಲ್ಲಿ ಹಾಕಿ ತೀರ ನುಣ್ಣಗಾಗದಂತೆ ರುಬ್ಬಿಕೊಳ್ಳಿ.
    * ಇದಕ್ಕೆ ಕೊಂಚ ನೀರು ಮತ್ತು ಕಾಯಿತುರಿಯನ್ನು ಹಾಕಿ ಮಿಶ್ರಣ ಮಾಡಿ ಮಿಕ್ಸಿಯಲ್ಲಿ ರುಬ್ಬುವುದನ್ನು ಮುಂದುವರೆಸಿ. ನೀರು ಅತಿ ಹೆಚ್ಚು ಇರದಂತೆ ಎಚ್ಚರಿಕೆ ವಹಿಸಿ. ಕೊಂಚ ಉಪ್ಪು ಹಾಕಿ ದೋಸೆಯ ಹಿಟ್ಟು ತಯಾರಿಸಿ.

     

    * ದೋಸೆಯ ಕಾವಲಿಯನ್ನು ಮಧ್ಯಮ ಉರಿಯಲ್ಲಿ ಬಿಸಿಮಾಡಿ. ಕಾವಲಿ ಬಿಸಿಯಾದ ಬಳಿಕ ಒಂದು ಸೌಟು ದೋಸೆಹಿಟ್ಟನ್ನು ಕಾವಲಿಯ ನಡುವೆ ಹಾಕಿ ಕೂಡಲೇ ಕಾವಲಿಯನ್ನು ವೃತ್ತಾಕಾರದಲ್ಲಿ ವಾಲಿಸಿ ದೋಸೆಹಿಟ್ಟು ಕಾವಲಿಯಿಡೀ ಹರಡುವಂತೆ ಮಾಡಿ ಸುಮಾರು ಕಂದುಬಣ್ಣ ಬೇಯಿಸಿದರೆ ಬಿಸಿ ಬಿಸಿಯಾದ ಗೋಧಿ ದೋಸೆ ಸವಿಯಲು ಸಿದ್ಧವಾಗುತ್ತದೆ.