Tag: whatsappweb

  • ವಾಟ್ಸಪ್‌ ಮೂಲಕ 50 ಮಂದಿ ಜೊತೆ ವಿಡಿಯೋ ಚಾಟ್‌ ಮಾಡಿ

    ವಾಟ್ಸಪ್‌ ಮೂಲಕ 50 ಮಂದಿ ಜೊತೆ ವಿಡಿಯೋ ಚಾಟ್‌ ಮಾಡಿ

    ಕ್ಯಾಲಿಫೋರ್ನಿಯಾ: ವಿಶ್ವದ ನಂಬರ್‌ ಒನ್‌ ಮೆಸೇಂಜಿಂಗ್‌ ಅಪ್ಲಿಕೇಶನ್‌ ವಾಟ್ಸಪ್‌ನಲ್ಲಿ 50 ಮಂದಿ ಜೊತೆ ವಿಡಿಯೋ ಚಾಟ್‌ ಮಾಡಬಹುದು.

    ಫೇಸ್‌ಬುಕ್‌ ತನ್ನ ಮಸೇಂಜರ್‌ ರೂಂ ವಿಶೇಷತೆಯನ್ನು ವಾಟ್ಸಪ್‌ಗೆ ನೀಡಿದೆ. ಹೀಗಾಗಿ ಗರಿಷ್ಟ 50 ಮಂದಿಯ ಜೊತೆ ವಿಡಿಯೋ ಚಾಟ್‌ ಮಾಡಬಹುದು.

    ಆದರೆ ಎಲ್ಲ ಬಳಕೆದಾರರಿಗೆ ಈ ಸೇವೆ ಈಗ ಲಭ್ಯವಿಲ್ಲ. ಡೆಸ್ಕ್‌ಟಾಪ್‌ ಮೂಲಕ ವಾಟ್ಸಪ್‌ ವೆಬ್‌ ಬಳಸುವ ಮಂದಿಗೆ ಈ ವಿಶೇಷತೆ ಲಭ್ಯವಾಗಿದೆ ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್‌ ಮತ್ತು ಐಓಎಸ್‌ ಬಳಕೆದಾರರಿಗೆ ಈ ವಿಶೇಷತೆ ನೀಡಲು ವಾಟ್ಸಪ್‌ ಮುಂದಾಗಿದೆ ಎಂದು ವರದಿ ತಿಳಿಸಿದೆ.

    ಹೇಗೆ ಬಳಕೆ ಮಾಡಬೇಕು?
    ಮೊದಲು ಡೆಸ್ಕ್‌ಟಾಪ್‌/ ಲ್ಯಾಪ್‌ಟಾಪ್‌ನಲ್ಲಿ ವಾಟ್ಸಪ್‌ ವೆಬ್ ಮತ್ತು ಫೇಸ್‌ಬುಕ್‌ ಮೆಸೇಂಜರ್‌ ಓಪನ್‌ ಮಾಡಿರಬೇಕು. ಮಸೇಂಜರ್‌ ಓಪನ್‌ ಆಗಬೇಕಾದರೆ ಫೇಸ್‌ಬುಕ್‌ ಲಾಗಿನ್‌ ಆಗಿರಬೇಕು. ನಂತರ ಫೋನಿನಲ್ಲಿ ವಾಟ್ಸಪ್‌ ಓಪನ್‌ ಮಾಡಿದಾಗ ಬಲಗಡೆ ಇರುವ ಮೂರು ಚುಕ್ಕೆಗಳನ್ನು ಒತ್ತಬೇಕು. ಈಗ ವಾಟ್ಸಪ್‌ ವೆಬ್‌ ಕಾಣಿಸುತ್ತದೆ. ನಂತರ ಕಂಪ್ಯೂಟರ್‌ನಲ್ಲಿ ಕಾಣುತ್ತಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿದಾಗ ಡೆಸ್ಕ್‌ಟಾಪ್‌ನಲ್ಲಿ ವಾಟ್ಸಾಪ್‌ ವೆಬ್‌ ಕಾಣಿಸುತ್ತದೆ.

     

    ವಾಟ್ಸಪ್‌ ವೆಬ್‌ ಪೇಜ್‌ ಓಪನ್‌ ಆದ ಬಳಿಕ ಬಲ ಭಾಗದಲ್ಲಿರುವ ಮೂರು ಚುಕ್ಕೆಗಳನ್ನು ಒತ್ತಿದಾಗ ಕ್ರಿಯೆಟ್‌ ರೂಮ್‌ ಕಾಣಿಸುತ್ತದೆ. ಇಲ್ಲಿ ಹೋಸ್ಟ್‌ ಮಾಡುವ ವ್ಯಕ್ತಿ ಮೇನ್‌ ಅಡ್ಮಿನ್‌ ಆಗಿದ್ದು ಯಾರನ್ನು ಸೇರಿಸಬೇಕೋ ಅವರನ್ನು ಸೇರಿಸಬಹುದು. ಇದು ವಾಟ್ಸಪ್‌ ಹೊರಗಡೆಯಿಂದ ನಡೆಯುವ ಕಾರಣ ಫೇಸ್‌ಬುಕ್‌ ನಿಯಮಗಳು ಅನ್ವಯವಾಗುತ್ತದೆ.

    ಬಳಕೆದಾರರು ಯಾವುದೇ ಸಮಯದಲ್ಲಿ ಎಷ್ಟು ಹೊತ್ತು ಬೇಕಾದರೂ ಚಾಟ್‌ ಮಾಡಬಹುದು. ಹೋಸ್ಟ್‌ ಮಾಡಿದ ವ್ಯಕ್ತಿ ಯಾರನ್ನು ಬೇಕಾದರೂ ಸೇರಿಸಬಹುದು. ತೆಗೆದು ಹಾಕಬಹುದು. ಗ್ರೂಪಿನಲ್ಲಿ ಚಾಟ್‌ ಮಾಡಬಹುದು ಅಥವಾ ಖಾಸಗಿಯಾಗಿ ಚಾಟ್‌ ಮಾಡಬಹುದು.