Tag: whatsapp status

  • Tumakuru | ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕ್ – ಯುವತಿ ನೇಣಿಗೆ ಶರಣು

    Tumakuru | ಸ್ಟೇಟಸ್‌ಗೆ ರೀಲ್ಸ್ ಅಪ್ಲೋಡ್ ಮಾಡಿದ್ದಕ್ಕೆ ಪ್ರಿಯಕರ ಕಿರಿಕ್ – ಯುವತಿ ನೇಣಿಗೆ ಶರಣು

    ತುಮಕೂರು: ಸ್ಟೇಟಸ್‌ಗೆ ರೀಲ್ಸ್ (Reels) ಅಪ್ಲೋಡ್ ಮಾಡಿದ ವಿಚಾರವಾಗಿ ಪ್ರೇಮಿಗಳ ನಡುವೆ ಜಗಳ ಉಂಟಾಗಿ ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರಿನಲ್ಲಿ (Tumakuru)  ನಡೆದಿದೆ.

    ಚೈತನ್ಯ (22) ನೇಣಿಗೆ ಶರಣಾದ ಯುವತಿ. ಸೋಮವಾರ ರಾತ್ರಿ 10 ಘಂಟೆ ಸುಮಾರಿಗೆ ಘಟನೆ ನಡೆದಿದೆ. ತುಮಕೂರು ಗ್ರಾಮಾಂತರದ ಹೊಸಹಳ್ಳಿಯಲ್ಲಿ ತಾಯಿ ಜೊತೆ ವಾಸವಿದ್ದ ಚೈತನ್ಯ ಫೈನಲ್ ಇಯರ್ ಡಿಗ್ರಿ ವ್ಯಾಸಂಗ ಮಾಡುತಿದ್ದಳು. ಅಲ್ಲದೇ ಮೇಕಪ್ ಆರ್ಟಿಸ್ಟ್ ಕೂಡ ಆಗಿದ್ದಳು. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಪಕ್ಕದ ಊರಿನ ವಿಜಯ್ ಹಾಗೂ ಚೈತನ್ಯ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇದನ್ನೂ ಓದಿ: ಸರ್ಕಾರ, ನಮ್ಮ ನಡುವಿನದ್ದು ಗಂಡ-ಹೆಂಡತಿ ಜಗಳವಿದ್ದ ಹಾಗೆ: ಬಿ.ಆರ್ ಪಾಟೀಲ್

    ಸೋಮವಾರ ಚೈತನ್ಯ ರೀಲ್ಸ್‌ವೊಂದನ್ನು ಸ್ಟೇಟಸ್‌ನಲ್ಲಿ ಅಪ್ಲೋಡ್ ಮಾಡಿದ್ದಳು. ಇದೇ ವಿಚಾರವಾಗಿ ಪ್ರಶ್ನಿಸಲು ರಾತ್ರಿ ಚೈತನ್ಯ ಮನೆ ಬಳಿ ವಿಜಯ್ ಬಂದಿದ್ದ. ಆಗ ಚೈತನ್ಯ ತಾಯಿ ಸೌಭಾಗ್ಯಮ್ಮ ರೂಂನಲ್ಲಿ ಇದ್ದರು. ತಾಯಿ ಇದ್ದ ರೂಂ ಬಾಗಿಲಿನ ಚಿಲಕ ಹಾಕಿ ಕಿಟಕಿ ಬಳಿ ಇಬ್ಬರು ಜಗಳವಾಡಿದ್ದಾರೆ. ಆ ಬಳಿಕ ಚೈತನ್ಯ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವಿಚಾರವನ್ನು ವಿಜಯ್ ಚೈತನ್ಯ ಸಂಬಂಧಿಗೆ ಕರೆ ಮಾಡಿ ತಿಳಿಸಿದ್ದಾನೆ. ಸಂಬಂಧಿ ಬಂದು ನೋಡಿದಾಗ ಚೈತನ್ಯ ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಜಮೀರ್ ಹೃದಯವಂತ ಸಚಿವ, ದಿಲ್‌ದಾರ್.. ಶ್ಹಾನ್‌ದಾರ್ ಮನುಷ್ಯ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಬ್ಯಾಟಿಂಗ್

    ಘಟನೆ ಸಂಬಂಧ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಚೈತನ್ಯ ಸಾವಿಗೆ ವಿಜಯ್ ಕುಮಾರ ಕಾರಣ ಎಂದು ದೂರು ದಾಖಲಾಗಿದ್ದು, ಪ್ರಿಯಕರ ವಿಜಯ್‌ನನ್ನು ತುಮಕೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಮೊದಲ ಬಾರಿಗೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಸ್ಥಗಿತವಾಗಿರುವ ಪರಿಸ್ಥಿತಿ ಕಾಣುತ್ತಿದ್ದೇವೆ: ಶೋಭಾ ಕರಂದ್ಲಾಜೆ ಆರೋಪ

  • ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

    ಬಿಜೆಪಿ ಬೆಂಬಲಿಸಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಗಲಾಟೆ – ಮಾರಕಾಸ್ತ್ರ ಹಿಡಿದು ಎರಡು ಗುಂಪುಗಳು ಹೊಡೆದಾಟ

    ರಾಯಚೂರು: ಬಿಜೆಪಿಗೆ (BJP) ಬೆಂಬಲಿಸುವುದಾಗಿ ವಾಟ್ಸಪ್ ಸ್ಟೇಟಸ್‌ನಲ್ಲಿ (Whatsapp Status) ಅನುಮತಿಯಿಲ್ಲದೆ ಫೋಟೋ ಬಳಸಿದ್ದ ಹಿನ್ನೆಲೆ ರಾಯಚೂರಿನಲ್ಲಿ (Raichuru) ಎರಡು ಗುಂಪುಗಳ ನಡುವೆ ಮಾರಾಮಾರಿ (Clash) ನಡೆದಿದೆ.

    ನಗರದ ಅಂದ್ರೂನ್ ಕಿಲ್ಲಾ ಪ್ರದೇಶದಲ್ಲಿ ಯುವಕರ ನಡುವೆ ಹೊಡೆದಾಟವಾಗಿದೆ. ಬಿಜೆಪಿ ಬೆಂಬಲಿಗ ಅಹ್ಮದ್ ಬೇಗ್ ಕಾಂಗ್ರೆಸ್ ಬೆಂಬಲಿಗ ಎಂಡಿ ಅಹ್ಮದ್ ಫೋಟೋ ಬಳಕೆ ಮಾಡಿಕೊಂಡು ಹಾಲಿ ಶಾಸಕ ಡಾ. ಶಿವರಾಜ್ ಪಾಟೀಲ್‌ಗೆ ನಮ್ಮ ಬೆಂಬಲ ಅನ್ನೋ ಸ್ಟೇಟಸ್ ಹಾಕಿಕೊಂಡಿದ್ದ. ಇದರಿಂದ ಆಕ್ರೋಶಗೊಂಡ ಎಂಡಿ ಅಹ್ಮದ್ ಅಣ್ಣನ ಮಗ ಹಾಗೂ ಆತನ ಸ್ನೇಹಿತರು ಫೋಟೋ ಹಾಕಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಬೃಹತ್ ಜಾಹೀರಾತು ಕಂಬವೇರಿ ಯುವಕ ಪುಂಡಾಟ

    ಘಟನೆಯಲ್ಲಿ ವಾಸಿಮ್, ರಫಿ ಸೇರಿ ಹಲವರಿಗೆ ಗಾಯಗಳಾಗಿವೆ. ಘಟನೆಗೆ ಸಂಬಂಧಿಸಿದಂತೆ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಒಟ್ಟು 22 ಜನರ ವಿರುದ್ಧ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರಕಾಸ್ತ್ರ ಹಿಡಿದು ಹೊಡೆದಾಡಿದ್ದ ಇಬ್ಬರನ್ನು ಬಂಧಿಸಲಾಗಿದ್ದು ಉಳಿದವರು ಪರಾರಿಯಾಗಿದ್ದಾರೆ. ಇದನ್ನೂ ಓದಿ: ಮದುವೆ ಸಂಭ್ರಮದಲ್ಲಿ ಗುಂಡು ಹಾರಿಸಿದ ವಧುವಿಗೆ ಬಂತು ಕುತ್ತು- ಪೊಲೀಸರಿಂದ ಹುಡುಕಾಟ

  • ಪತ್ನಿ ಕೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ; ಕೊನೆಗೆ ತಾನೂ ನೇಣಿಗೆ ಶರಣು

    ಪತ್ನಿ ಕೊಂದು ವಾಟ್ಸಾಪ್ ಸ್ಟೇಟಸ್ ಹಾಕಿದ ಪತಿ; ಕೊನೆಗೆ ತಾನೂ ನೇಣಿಗೆ ಶರಣು

    ಚಾಮರಾಜನಗರ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕೊಲೆ ಮಾಡಿ ವಾಟ್ಸಾಪ್ ಸ್ಟೇಟಸ್ (WhatsApp status) ಹಾಕಿ ಬಳಿಕ ತಾನು ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಜಿಲ್ಲೆಯ ಮಹದೇಶ್ವರ ಬೆಟ್ಟದ (Mahadeshwara Hills) ನಾಗಮಲೆಯಲ್ಲಿ ನಡೆದಿದೆ.

    CRIME 2

    ಲಕ್ಷ್ಮಿ ಕೊಲೆಯಾದ (Murder) ದುರ್ದೈವಿ. ತಮಿಳುನಾಡಿನ ( Tamil Nadu) ಧರ್ಮಪುರಿ ಜಿಲ್ಲೆಯ ಎರಭಯ್ಯನ ಹಳ್ಳಿಯ ಮುನಿರಾಜ್ ಎಂಬವರನ್ನು ಮದುವೆಯಾಗಿದ್ದಳು. ಬಳಿಕ ತನ್ನ ಗಂಡನನ್ನು ತೊರೆದು ಬೇರೊಬ್ಬನೊಂದಿಗೆ ನಾಗಮಲೆಯಲ್ಲಿ ವಾಸವಾಗಿದ್ದಳು. ಇದರಿಂದ ಬೇಸತ್ತಿದ್ದ ಗಂಡ ಮುನಿರಾಜ್ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿರುದ್ಧ ಅಕ್ರಮ ಆಸ್ತಿ ಆರೋಪ- IAS ಅಧಿಕಾರಿ ಆಸ್ತಿಯ Exclusive ಡೀಟೆಲ್ಸ್ ಇಲ್ಲಿದೆ

    ಪತ್ನಿಯ ಮೇಲೆ ಕಲ್ಲು ಎತ್ತಿಹಾಕಿ ಆಕೆಯ ರಕ್ತ ಸಿಕ್ತ ದೇಹವನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡಿ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾನೆ. ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಹದೇಶ್ವರ ಬೆಟ್ಟ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮುಸ್ಲಿಂನನ್ನು ಸ್ವರಾ ಭಾಸ್ಕರ್‌ ಮದುವೆಯಾಗಿದ್ದಕ್ಕೆ ಶ್ರದ್ಧಾ ವಾಕರ್‌ ಪ್ರಕರಣ ನೆನಪಿಸಿದ ಸಾಧ್ವಿ

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿ – ವಾಟ್ಸಪ್‌ ಸ್ಟೇಟಸ್‌ ಹಾಕಿದ ಸರ್ಕಾರಿ ಶಾಲಾ ಶಿಕ್ಷಕ

    ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿ – ವಾಟ್ಸಪ್‌ ಸ್ಟೇಟಸ್‌ ಹಾಕಿದ ಸರ್ಕಾರಿ ಶಾಲಾ ಶಿಕ್ಷಕ

    ಕೊಪ್ಪಳ: ಪುಲ್ವಾಮಾ ದಾಳಿ (Pulwama Attack) ಒಂದು ವ್ಯವಸ್ಥಿತ ಪಿತೂರಿ ಎಂದು ಸರ್ಕಾರಿ ಶಾಲಾ ಶಿಕ್ಷಕರೊಬ್ಬರು ವಾಟ್ಸಪ್‌ ಸ್ಟೇಟಸ್‌ ಹಾಕಿದ್ದ ಘಟನೆ ಕೊಪ್ಪಳದಲ್ಲಿ ನಡೆದಿದೆ.

    ಕೊಪ್ಪಳ (Koppala) ಜಿಲ್ಲೆ ಕನಕಗಿರಿ ತಾಲೂಕಿನ ಗೋಡಿನಾಳ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ತಮ್ಮ ಸ್ಟೇಟಸ್‌ನಲ್ಲಿ ಪುಲ್ವಾಮಾ ದಾಳಿ ಕುರಿತು ಪೋಸ್ಟ್‌ ಹಾಕಿದ್ದಾರೆ. ಇದನ್ನೂ ಓದಿ: ಪುಲ್ವಾಮಾ ದಾಳಿಗೆ 4 ವರ್ಷ: ಆ ಒಂದು ಕರಾಳ ದಿನದಲ್ಲಿ ನಡೆದಿದ್ದೇನು?

    ಸ್ಟೇಟಸ್‌ನಲ್ಲಿ ಏನಿದೆ?
    ಪುಲ್ವಾಮಾ ದಾಳಿ ಒಂದು ವ್ಯವಸ್ಥಿತ ಪಿತೂರಿ. ಇಲ್ಲಿ ಅಧಿಕಾರಕ್ಕಾಗಿ ಏನೆಲ್ಲ ನಡೆಯುತ್ತದೆ ಎನ್ನುವುದಕ್ಕೆ ಇದೊಂದು ಜ್ವಲಂತ ಉದಾಹರಣೆ. ಮಡಿದ ವೀರರಿಗೆ ಸ್ಮರಣೆಗಳು. ಇದೇ ವ್ಯವಸ್ಥೆ ಮುಂದುವರಿದರೆ ಭಾರತದ ಭವಿಷ್ಯವೂ ಬ್ಲ್ಯಾಕ್‌ ಡೇ ಆಗಿ ಪರಿಣಮಿಸಬಹುದು. ಈಗ ನಾವು ಎಚ್ಚೆತ್ತುಕೊಳ್ಳಬೇಕು. ದೇಶ ಮೊದಲು ಎಂದು ಸ್ಟೇಟಸ್‌ನಲ್ಲಿ ಬರೆದುಕೊಂಡಿದ್ದರು.

    2019ರ ಫೆಬ್ರವರಿ 14ರಂದು ಭಾರತೀಯ ಸೇನೆ (Indian Army) ಭದ್ರತಾಪಡೆಗಳ ಮೇಲೆ ನಡೆದ ದಾಳಿಯಲ್ಲಿ 40 ಸಿಆರ್‌ಪಿಎಫ್ (CRPF) ಯೋಧರು ಹುತಾತ್ಮರಾಗಿದ್ದರು. ಜೈಶ್-ಎ-ಮೊಹಮ್ಮದ್ (JEM) ಸಂಘಟನೆಯ ಉಗ್ರಗಾಮಿಗಳು ನಡೆಸಿದ್ದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಸೇನೆಯ ವಾಹನದಲ್ಲಿ ಹೋಗುತ್ತಿದ್ದ ಯೋಧರು ಕ್ಷಣಾರ್ಧದಲ್ಲಿ ಜೀವ ಕಳೆದುಕೊಂಡರು. ಇದನ್ನೂ ಓದಿ: ಪುಲ್ವಾಮಾ ದಾಳಿಯನ್ನು ಸಂಭ್ರಮಿಸಿದ್ದ ಎಂಜಿನಿಯರಿಂಗ್‌ ವಿದ್ಯಾರ್ಥಿಗೆ 5 ವರ್ಷ ಜೈಲು

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

    ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

    ಹುಬ್ಬಳ್ಳಿ: ಇಲ್ಲಿನ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ. ಪೊಲೀಸರ ಸೂಚನೆಯಂತೆ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಅವರ ಕೈಯಲ್ಲಿದ್ದ ಮೈಕ್ ತೆಗೆದುಕೊಂಡು ಮಾತನಾಡಿದೆ ಅಷ್ಟೇ ಎಂದು ಹುಬ್ಬಳ್ಳಿ ಗಲಭೆ ಬಳಿಕ ನಾಪತ್ತೆಯಾಗಿರುವ ವಾಸಿಂ ಹೇಳಿದ್ದಾನೆ.

    ಹುಬ್ಬಳ್ಳಿ ಗಲಭೆಯ ನಂತರ ಕಾಣೆಯಾಗಿದ್ದ ಮಾಸ್ಟರ್‌ಮೈಂಡ್ ವಾಸಿಂ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಅಜ್ಞಾತ ಸ್ಥಳದಿಂದ ವೀಡಿಯೋವೊಂದನ್ನು ಹರಿಯಬಿಟ್ಟಿದ್ದಾನೆ. ವೀಡಿಯೋದಲ್ಲಿ ಸುಮಾರು 4 ನಿಮಿಷಗಳ ಕಾಲ ಮಾತನಾಡಿದ್ದು, ಪೊಲೀಸರೇ ನನಗೆ ಫೋನ್ ಮಾಡಿ ಕರೆದು ಅಲ್ಲಿ ಮಾತನಾಡಲು ಹೇಳಿದ್ರು ಎಂದಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಕಿಡಿಗೇಡಿಗಳು

    HUBBALLI_ MOULVI 3

    ಬಂದಿದ್ದ ಜನರನ್ನು ಕರೆದು ದೂರು ಕೊಡಲು ಅವರೇ ಹೇಳಿದ್ರು. ಯಾವಾಗ ಗಲಭೆಗೆ ತಿರುಗಿತ್ತೋ ಆಗ ನನಗೆ ಎಲ್ಲರನ್ನು ಸಮಾಧಾನ ಪಡಿಸಲು ಜೀಪ್ ಮೇಲೆ ಹತ್ತುವಂತೆ ಹೇಳಿದರು. ಅವರ ಸೂಚನೆಯಂತೆಯೇ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಮುಂದಾದೆ. ಪೊಲೀಸರ ಕೈಯಲ್ಲಿದ್ದ ಮೈಕ್ ಅನ್ನು ತೆಗೆದುಕೊಂಡು ಮಾತನಾಡಿದೆ. ಇದೇ ವೇಳೆ ಅಚಾನಕ್ಕಾಗಿ ಕರೆಂಟ್ ಕಟ್ ಆಯ್ತು. ನಾನೂ ಅಲ್ಲೇ ಇದ್ದರಿಂದ ನನ್ನ ಮೇಲೆ ಆರೋಪ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರು ಮುಗ್ಧ ಜನರು, ಅಮಾಯಕರು: ಆನಂದ್ ಸಿಂಗ್

    HUBBALLI INCIDENT

    ನಾನು ಜನರಿಗೆ ಸಮಾಧಾನ ಮಾಡಿದ ವೀಡಿಯೋ ಯಾವುದೂ ಜಾಲತಾಣದಲ್ಲಿ ಬಂದಿಲ್ಲ. ಅದು ಬಿಟ್ಟು ಬೇರೆ ಬೇರೆ ವೀಡಿಯೋ ಬಂದಿವೆ. ನನಗೆ ಪೊಲೀಸರ ಮೇಲೆ ಹಾಗೂ ಕಾನೂನಿನ ಮೇಲೆ ಭರವಸೆಯಿದೆ. ಆದಷ್ಟು ಬೇಗ ಪೊಲೀಸರ ಮುಂದೆ ಹಾಜರಾಗುತ್ತೇನೆ. ಜಮಾತ್ ಮುಂದೆ ಸಹ ನಿಲ್ಲುತ್ತೇನೆ ಎಂದು ವೀಡಿಯೋನಲ್ಲಿ ಹೇಳಿಕೊಂಡಿದ್ದಾನೆ.

    ಹುಬ್ಬಳ್ಳಿಯಲ್ಲಿನ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ. ವಾಟ್ಸಪ್‌ನಲ್ಲಿ ಹಾಕಿದ್ದ ಸ್ಟೇಟಸ್ ಗಲಭೆಗೆ ಕಾರಣ. ನನ್ನ ಮೇಲಿನ ಆರೋಪಗಳಿಂದ ನನ್ನ ಕುಟುಂಬಕ್ಕೂ ನಾನು ಕೆಟ್ಟವನಾಗಿ ಕಾಣಿಸುತ್ತಿದ್ದೇನೆ. ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೀರಿ ಅಂದುಕೊಂಡಿದ್ದೇನೆ ಎಂದು ಮನವಿ ಮಾಡಿದ್ದಾನೆ.

  • ತಲ್ವಾರ್‌ನಿಂದ ಕೇಕ್ ಕತ್ತರಿಸಿ ಮಾಜಿ ಸಚಿವರ ಆಪ್ತನ ದರ್ಬಾರ್

    ತಲ್ವಾರ್‌ನಿಂದ ಕೇಕ್ ಕತ್ತರಿಸಿ ಮಾಜಿ ಸಚಿವರ ಆಪ್ತನ ದರ್ಬಾರ್

    ಬೆಂಗಳೂರು: ಮುಸಲ್ಮಾನರ ಪವಿತ್ರ ಈದ್ ಮಿಲಾದ್ ಹಬ್ಬದ ದಿನ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತನೊಬ್ಬ ಸಾರ್ವಜನಿಕ ಸ್ಥಳದಲ್ಲಿ ತಲ್ವಾರ್ ಮೂಲಕ ಕೇಕ್ ಕತ್ತರಿಸಿ ದರ್ಪ ಮೆರೆದಿದ್ದಾನೆ.

    ಭಾನುವಾರ ಮುಸ್ಲಿಮರ ಪವಿತ್ರ ಈದ್ ಮಿಲಾದ್ ಹಬ್ಬವಿತ್ತು, ಜೊತೆಗೆ ಟಿಪ್ಪು ಜಯಂತಿಯನ್ನು ಕೂಡ ಮುಸಲ್ಮಾನರು ಅದ್ಧೂರಿ ಮೆರವಣಿಗೆ ಮೂಲಕ ಆಚರಿಸಿದರು. ಹಾಗೆಯೇ ಅಯೋಧ್ಯೆ ತೀರ್ಪಿನ ಹಿನ್ನೆಲೆಯಲ್ಲಿ ಅಹಿತಕರ ಘಟನೆಗಳು ನಡೆಯಬಾರದು ಎಂದು ನಗರದಾದ್ಯಂತ ಬಿಗಿ ಪೋಲಿಸ್ ಬಂದೋಬಸ್ತ್ ಒದಗಿಸಲಾಗಿತ್ತು. ಆದರೆ ಈ ನಡುವೆ ಜಮೀರ್ ಅವರ ಆಪ್ತ ವಾಸಿಂ ಬೆಂಬಲಿಗರೊಂದಿಗೆ ಸೇರಿ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಾನೆ. ಇದನ್ನೂ ಓದಿ:ತಲ್ವಾರ್ ಹಿಡಿದು ಕೇಕ್ ಕಟ್ ಮಾಡಿ ಮೆರೆದವನನ್ನ ಜೈಲಿಗಟ್ಟಿದ್ರು

    ಗೋರಿ ಪಾಳ್ಯದ ಮುಖ್ಯರಸ್ತೆಯಲ್ಲಿ ವಾಸೀಂ ತಲ್ವಾರ್‌ನಿಂದ ಕೇಕ್ ಕತ್ತರಿಸಿದ್ದಲ್ಲದೇ ತನ್ನ ಶೌರ್ಯ ಜನರಿಗೆಲ್ಲ ತಿಳಿಯಲಿ ಎಂದು ತನ್ನ ವಾಟ್ಸಾಪ್ ಸ್ಟೇಟಸ್‍ಗೆ ಫೋಟೋ ಹಾಕಿಕೊಂಡು ಬಿಲ್ಡಪ್ ಕೊಟ್ಟಿದ್ದಾನೆ. ಸಾರ್ವಜನಿಕ ಸ್ಥಳದಲ್ಲಿ ಮಾರಕಾಸ್ತ್ರವನ್ನ ಬಳಸೋದು ಕಾನೂನು ರೀತಿಯಲ್ಲಿ ಅಪರಾಧ. ಇಷ್ಟೆಲ್ಲಾ ಆದರೂ ಪೊಲೀಸರು ಮಾತ್ರ ಆತನ ವಿರುದ್ಧ ಯಾವ ಕ್ರಮ ಕೈಗೊಂಡಿಲ್ಲ.

  • ವಾಟ್ಸಪ್ ಸ್ಟೇಟಸ್‍ಗೆ ಗೆಳತಿ ಕಮೆಂಟ್ ಮಾಡಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ವಾಟ್ಸಪ್ ಸ್ಟೇಟಸ್‍ಗೆ ಗೆಳತಿ ಕಮೆಂಟ್ ಮಾಡಲಿಲ್ಲವೆಂದು ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

    ಹಾವೇರಿ: ಪ್ರೇಮ ವೈಫಲ್ಯದಿಂದ ವಿದ್ಯಾರ್ಥಿಯೊಬ್ಬ ಕಾಲೇಜು ಮೈದಾನದಲ್ಲೇ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಜಿ.ಎಚ್.ಕಾಲೇಜಿನಲ್ಲಿ ನಡೆದಿದೆ.

    ಹಾವೇರಿ ತಾಲೂಕಿನ ದೇವಗಿರಿ ಗ್ರಾಮದ ನಿವಾಸಿ ಜಗದೀಶ್ ಯಲ್ಲಾಪುರ (19) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಜಗದೀಶ್ ಜಿ.ಎಚ್.ಕಾಲೇಜು ವಿದ್ಯಾರ್ಥಿಯಾಗಿದ್ದು, ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದ. ಆದರೆ ಬುಧವಾರ ಸಂಜೆ ವಿಷ ಸೇವಿಸಿ, ಸಾವನ್ನಪ್ಪಿದ್ದಾನೆ.

    ಜಗದೀಶ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ ಈ ವಿಚಾರವನ್ನು ಆಕೆಗೆ ನೇರವಾಗಿ ಹೇಳಿರಲಿಲ್ಲ. ಯುವತಿಯ ಮೊಬೈಲ್ ನಂಬರ್ ಪಡೆದಿದ್ದ ಜಗದೀಶ್ ಆಗಾಗ ವಾಟ್ಸಪ್‍ನಲ್ಲಿ ಚಾಟ್ ಮಾಡುತ್ತಿದ್ದ. ಈ ಮಧ್ಯೆ ಜಗದೀಶ್ ತನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ಅರಿತ ಯುವತಿ ಆತನಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು. ಜಗದೀಶ್ ಪ್ರೀತಿಯ ಸಂದೇಶ ತಿಳಿಸುವ ಹಾಡು, ಬರಹಗಳನ್ನು ವಾಟ್ಸಪ್ ಸ್ಟೇಟಸ್‍ಗೆ ಹಾಕುತ್ತಿದ್ದ. ಇದ್ಯಾವುದಕ್ಕೂ ಯುವತಿ ಕಮೆಂಟ್ ಮಾಡುತ್ತಿರಲಿಲ್ಲ.

    ಗೆಳತಿ ನನ್ನ ವಾಟ್ಸಪ್ ಸ್ಟೇಟಸ್‍ಗಳಿಗೆ ಕಮೆಂಟ್ ಮಾಡುತ್ತಿಲ್ಲ. ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲವೆಂದು ಜಗದೀಶ್ ಗೆಳೆಯ ಮುಂದೆ ಹೇಳಿಕೊಂಡಿದ್ದ. ಅಷ್ಟೇ ಅಲ್ಲದೆ ಕಾಲೇಜಿನಲ್ಲಿ ಒಬ್ಬನೆ ಕುಳಿತು ಏನನ್ನೋ ಯೋಚನೆ ಮಾಡುತ್ತಿದ್ದ ಎನ್ನಲಾಗಿದೆ. ಆದರೆ ಬುಧವಾರ ಸಂಜೆ ಕಾಲೇಜು ಮುಗಿದ ಬಳಿಕ ಮೈದಾನದಲ್ಲಿಯೇ ಕುಳಿತಿದ್ದ. ಕತ್ತಲಾದ ಬಳಿಕ ಅಲ್ಲಿಂದ ಸ್ವಲ್ಪ ದೂರ ಬಂದು ನಿರ್ಜನ ಪ್ರದೇಶದಲ್ಲಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಕಾಲೇಜಿನಿಂದ ಹಾಸ್ಟೇಲ್‍ಗೆ ಹೋಗುತ್ತಿದ್ದ ಕೆಲ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಜಗದೀಶ್ ಮೃತದೇಹವನ್ನು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಹಾವೇರಿ ನಗರ ಠಾಣೆ ಸಿಪಿಐ ಎಂ.ಐ.ಗೌಡಪ್ಪಗೌಡರ್ ಹಾಗೂ ಪೊಲೀಸ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಜಗದೀಶ್ ಮೃತದೇಹವನ್ನು ಜಿಲ್ಲಾಸ್ಪತ್ರೆ ಸಾಗಿಸಲಾಗಿದೆ.

    ಜಗದೀಶ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಜಗದೀಶ್ ಸಾವಿಗೆ ಸಹಪಾಠಿಗಳು ಕೂಡ ಕಣ್ಣೀರಿಟ್ಟಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

  • ವಾಟ್ಸಪ್‍ನಲ್ಲಿ ಹಳೇ ಶೈಲಿಯ text status ಮಿಸ್ ಮಾಡಿಕೊಳ್ತಿದ್ದೀರಾ? ನಿಮಗಾಗಿ ಇಲ್ಲಿದೆ ಸಿಹಿ ಸುದ್ದಿ

    ವಾಟ್ಸಪ್‍ನಲ್ಲಿ ಹಳೇ ಶೈಲಿಯ text status ಮಿಸ್ ಮಾಡಿಕೊಳ್ತಿದ್ದೀರಾ? ನಿಮಗಾಗಿ ಇಲ್ಲಿದೆ ಸಿಹಿ ಸುದ್ದಿ

    ಬೆಂಗಳೂರು: ಇತ್ತೀಚೆಗಷ್ಟೆ ವಾಟ್ಸಪ್‍ನಲ್ಲಿ ಟೆಕ್ಸ್ಟ್ ಸ್ಟೇಟಸ್ ಬದಲಿಗೆ ಸ್ನ್ಯಾಪ್‍ಚ್ಯಾಟ್ ರೀತಿಯ ಫೋಟೋ ಮತ್ತು ವೀಡಿಯೋ ಸ್ಟೇಟಸ್ ಹಾಕುವಂತಹ ಫೀಚರನ್ನು ಪರಿಚಯಿಸಲಾಗಿತ್ತು. ಆದ್ರೆ ಈ ಹೊಸ ಫೀಚರ್ ಬಹಳಷ್ಟು ಜನರಿಗೆ ಇಷ್ಟವಾಗಿರಲಿಲ್ಲ. ಹಾಡಿನ ಸಾಲುಗಳನ್ನ, ತಮಗಿಷ್ಟವಾದ ಸಾಲುಗಳನ್ನ ಸ್ಟೇಟಸ್ ಆಗಿ ಹಾಕುತ್ತಿದ್ದವರಿಗೆ ಹೊಸ ಸ್ಟೇಟಸ್ ಫೀಚರ್ ಇಷ್ಟವಾಗಿರಲಿಲ್ಲ. ನಮಗೆ ಹಳೇ ಟೆಕ್ಸ್ಟ್ ಸ್ಟೇಟಸ್ ವಾಪಸ್ ಬೇಕು ಅಂತ ಬಳಕೆದಾರರು ಒತ್ತಾಯಿಸಿದ್ದರು. ಅಂತಹವರಿಗೆ ಇದೀಗ ಸಿಹಿ ಸುದ್ದಿ ಸಿಕ್ಕಿದೆ. ಇದೀಗ ವಾಟ್ಸಪ್‍ನ ಆಂಡ್ರಾಯ್ಡ್ ಬೀಟಾ ವರ್ಷನ್‍ನಲ್ಲಿ ಹಳೆಯ ಟೆಕ್ಸ್ಟ್ ಸ್ಟೇಟಸ್ ವಾಪಸ್ ಬಂದಿದೆ.

                                          

    ಆಂಡ್ರಾಯ್ಡ್ ಬೀಟಾ ವರ್ಷನ್ 2.17.95 ಬಳಕೆದಾರರು ಹಳೆಯ ಸ್ಟೇಟಸ್ ಮೆಸೇಜ್ ಫೀಚರ್ ಬಳಸುತ್ತಿದ್ದಾರೆ. ಈ ಫೀಚರನ್ನು ಪರೀಕ್ಷೆ ಮಾಡಲಾಗುತ್ತಿದ್ದು, ಶೀಘ್ರದಲ್ಲೇ ಎಲ್ಲಾ ವಾಟ್ಸಪ್ ಬಳಕೆದಾರರಿಗೂ ಸಿಗೋ ನಿರೀಕ್ಷೆ ಇದೆ. ಒಂದು ವೇಳೆ ನೀವು ಹಳೇ ಸ್ಟೇಟಸ್ ಫೀಚರ್ ಬಳಸಬೇಕಾದ್ರೆ ಗೂಗಲ್ ಪ್ಲೇಸ್ಟೋರ್‍ನಿಂದ ವಾಟ್ಸಪ್ ಬೀಟಾ ವರ್ಷನ್ ಡೌನ್‍ಲೋಡ್ ಮಾಡಿಕೊಳ್ಳಬೇಕು.

    ಬೀಟಾ ಬಳಕೆದಾರರು ಆ್ಯಪ್‍ನ ಎಡಭಾಗದ ತುದಿಯಲ್ಲಿರುವ ಮೂರು ಚುಕ್ಕಿಗಳ ಐಕಾನ್ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ಸ್ ಗೆ ಹೋಗಿ ಅಲ್ಲಿ ಅಬೌಟ್, ನಂತರ ಫೋನ್ ನಂಬರ್ ಸೆಕ್ಷನ್‍ಗೆ ಹೋದ್ರೆ ಹಳೇ ಸ್ಟೇಟಸ್ ಆಯ್ಕೆ ಕಾಣುತ್ತದೆ. ಅವೈಲೆಬಲ್, ಬ್ಯುಸಿ, ಅಟ್ ಸ್ಕೂಲ್, ಅಟ್ ಮೂವೀಸ್ ಎಂಬ ಹಳೇ ಡೀಫಾಲ್ಟ್ ಸ್ಟೇಟಸ್ ಆಯ್ಕೆಗಳೂ ಕೂಡ ಕಾಣುತ್ತದೆ. ಅಲ್ಲದೆ ಇದು ಹೊಸದಾಗಿ ಬಂದಿರೋ ಫೋಟೋ ಹಾಗೂ ವೀಡಿಯೋ ಸ್ಟೇಟಸ್‍ನಂತೆ 24 ಗಂಟೆಗಳಲ್ಲಿ ಕಣ್ಮರೆಯಾಗುವುದಿಲ್ಲ. ಆದ್ರೆ ಅಬೌಟ್ ಮತ್ತು ಫೋನ್ ನಂಬರ್ ಸೆಕ್ಷನ್ ಆಯ್ಕೆಗಳು ಕೆಲವು ಫೋನ್‍ಗಳಲ್ಲಿ ಕಾಣಿಸುತ್ತಿಲ್ಲ ಎಂದು ಕೂಡ ವರದಿಯಾಗಿದೆ.

    ಇದನ್ನೂ ಓದಿ: ಈ ಫೋನ್‍ಗಳಿಗೆ ಜೂನ್ 30ರ ನಂತ್ರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಹಳೇ ಸ್ಟೇಟಸ್ ವಾಪಸ್ ಬಂದರೂ ಹೊಸದಾಗಿ ಪರಿಚಯಿಸಲಾಗಿರೋ ಫೋಟೋ, ವೀಡಿಯೋ ಸ್ಟೇಟಸ್ ಇರಲ್ಲ ಎಂದರ್ಥವಲ್ಲ. ಹೊಸ ಸ್ಟೇಟಸ್ ಫಿಚರ್ ಕೂಡ ಪ್ರತ್ಯೇಕ ಟ್ಯಾಬ್‍ನಲ್ಲಿ ಲಭ್ಯವಿರುತ್ತದೆ.

                      

    ಬೀಟಾ ಅವೃತ್ತಿ ಆ್ಯಪ್‍ ಬೇಕಾದರೆ ಈಗ ನೀವು ಬಳಸುತ್ತಿರುವ ಆಂಡ್ರಾಯ್ಡ್ ಆ್ಯಪ್‍ ಅನ್ ಇನ್‍ಸ್ಟಾಲ್ ಮಾಡಿ ಪ್ಲೇ ಸ್ಟೋರ್‍ನಿಂದ ಬೀಟಾ ಆವೃತ್ತಿಯನ್ನು ಇನ್‍ಸ್ಟಾಲ್ ಮಾಡಬೇಕಾಗುತ್ತದೆ. ಹೊಸ ವಿಶೇಷತೆಯನ್ನು ಬಳಕೆದಾರರಿಗೆ ನೀಡುವ ಮುನ್ನ ಬೀಟಾ ಆವೃತ್ತಿಯ ಬಳಕೆದಾರರಿಗೆ ನೀಡಿ ಬಳಿಕ ಎಲ್ಲ ಗ್ರಾಹಕರಿಗೆ ಆ ವಿಶೇಷತೆಯನ್ನು ವಾಟ್ಸಪ್ ನೀಡುತ್ತದೆ.