Tag: whatsapp message

  • ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ

    ಮನೆಗೆ ನುಗ್ಗಿ, ಕಾರು ಸ್ಫೋಟಿಸಿ ಕೊಲೆ ಮಾಡುವುದಾಗಿ ನಟ ಸಲ್ಮಾನ್‌ ಖಾನ್‌ಗೆ ಬೆದರಿಕೆ

    ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ಗೆ (Salman Khan) ಸೋಮವಾರ ಮತ್ತೆ ಕೊಲೆ ಬೆದರಿಕೆ ಸಂದೇಶ ಬಂದಿದೆ. ವಿಷಯ ತಿಳಿದು ನಟನ ಫ್ಯಾನ್ಸ್‌ ಆತಂಕಕ್ಕೆ ಒಳಗಾಗಿದ್ದಾರೆ.

    ಮುಂಬೈನ ಬಾಂದ್ರಾದಲ್ಲಿರುವ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗೆ (Galaxy Apartments) ನುಗ್ಗಿ ಅವರ ಕಾರನ್ನು ಬಾಂಬ್‌ನಿಂದ ಸ್ಫೋಟಿಸುವ ಮೂಲಕ ಕೊಲ್ಲುವುದಾಗಿ ವರ್ಲಿಯಲ್ಲಿರುವ ಸಾರಿಗೆ ಇಲಾಖೆ ವಾಟ್ಸಪ್‌ ಸಂಖ್ಯೆಗೆ ಬೆದರಿಕೆ ಸಂದೇಶ ಬಂದಿದೆ. ಬೆದರಿಕೆ ಸಂದೇಶ ಕಳುಹಿಸಿದ ಅಪರಿಚಿತ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಬೆದರಿಕೆಯ ಹೊಣೆಯನ್ನೂ ಯಾರೂ ಹೊತ್ತುಕೊಂಡಿಲ್ಲ. ಸಲ್ಮಾನ್‌ ಖಾನ್‌ ಅವರಾಗಲಿ, ಅವರ ಕುಟುಂಬಸ್ಥರಾಗಲಿ ಯಾವುದೇ ಪ್ರತಿಕ್ರಿಯೆ ಸಹ ನೀಡಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಖಳನಟ ಶೇಷಗಿರಿ ಬಸವರಾಜು ವಿರುದ್ಧ ರೇಪ್ ಆರೋಪ ಪ್ರಕರಣ‌; ಬಿ-ರಿಪೋರ್ಟ್ ಸಲ್ಲಿಕೆ

    ಈ ಸಂದೇಶವನ್ನು ಕಳುಹಿಸಿದ ವ್ಯಕ್ತಿಯ ವಿರುದ್ಧ ವರ್ಲಿ ಪೊಲೀಸ್ ಠಾಣೆಯಲ್ಲಿ ಸಂಖ್ಯೆ 118/25 ರಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 351(2)(3) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬೆದರಿಕೆ ಸಂದೇಶದ ಮೂಲ ಮತ್ತು ಅದರ ಸತ್ಯಾಸತ್ಯತೆಯ ಬಗ್ಗೆ ಅಧಿಕಾರಿಗಳು ಪ್ರಸ್ತುತ ತನಿಖೆ ನಡೆಸುತ್ತಿದ್ದಾರೆ, ಆರೋಪಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

    ಕಳೆದ ಕೆಲವು ವರ್ಷಗಳಿಂದ, ಬಾಲಿವುಡ್ ನಟನಿಗೆ 1998 ರ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನಿಂದ ಹಲವಾರು ಬೆದರಿಕೆಗಳು ಬಂದಿವೆ. ಕಳೆದ ವರ್ಷ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಹೊರಗೆ ಇಬ್ಬರು ದುಷ್ಕರ್ಮಿಗಳು ಮೋಟಾರ್‌ ಬೈಕಿನಲ್ಲಿ ಬಂದು ಗುಂಡು ಹಾರಿಸಿದ್ದರು.

    ಈ ಘಟನೆ ಬಳಿಕ ಸಲ್ಮಾನ್‌ಗೆ Y+ ಭದ್ರತೆಯನ್ನು ಒದಗಿಸಲಾಗಿದೆ. ಸಲ್ಮಾನ್ ಖಾನ್‌ರ ಭದ್ರತೆಗಾಗಿ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮನೆಯ ಗಾಜಿನ ಕಿಟಕಿಗಳನ್ನು ಬುಲೆಟ್‌ಪ್ರೂಫ್‌ನಿಂದ ಬದಲಾಯಿಸಲಾಗಿದೆ ಮತ್ತು CCTV ಕ್ಯಾಮೆರಾಗಳನ್ನು ಸ್ಥಾಪಿಸಲಾಗಿದೆ. ಇದನ್ನೂ ಓದಿ: ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್‌ ಗೌಡ3

    ಸಲ್ಮಾನ್ ಮನೆ ಮೇಲೆ ಗುಂಡಿನ ದಾಳಿ
    ಕಳೆದ ವರ್ಷ ನಟನ ಮನೆ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿ ನಡೆದಿತ್ತು. ಬೆಳಗ್ಗಿನ ಜಾವ ಸುಮಾರು 5 ಗಂಟೆ ವೇಳೆಯಲ್ಲಿ ದಾಳಿ ನಡೆದಿತ್ತು. ದಾಳಿಕೋರರು ಒಟ್ಟು 5 ಸುತ್ತು ಗುಂಡು ಹಾರಿಸಿದ್ದರು. ಈ ಪೈಕಿ ಸಲ್ಮಾನ್ ಮನೆ ಕಡೆಗೆ 4 ಗುಂಡು ಹಾರಿಸಲಾಗಿತ್ತು, 1 ಗುಂಡು ಗುಂಡು ನೆಲಕ್ಕೆ ಬಿದ್ದಿತ್ತು. 7.65 ಎಂಎಂ ಬೋರ್ ಪಿಸ್ತೂಲ್‌ನಿಂದ ಈ ಗುಂಡಿನ ದಾಳಿ ನಡೆಸಲಾಗಿತ್ತು. ಅದೃಷವಶಾತ್‌ ಸಲ್ಮಾನ್‌ ಖಾನ್‌ ಅಂದು ಮನೆಯಲ್ಲೇ ಇದ್ದರೂ ಯಾವುದೇ ಅಪಾಯ ಸಂಭವಿಸಿರಲಿಲ್ಲ ಎಂಬಹುದು ಗಮನಾರ್ಹ. ಇದನ್ನೂ ಓದಿ: ‘ಅಯ್ಯನ ಮನೆ’ ಕಥೆ ಹೇಳಲು ಬಂದ ‘ದಿಯಾ’ ನಟಿ- ರಮೇಶ್ ಇಂದಿರಾ ಆ್ಯಕ್ಷನ್ ಕಟ್

  • ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ

    ಉಚಿತ ಫೋನ್, ರೀಚಾರ್ಜ್: ಸರ್ಕಾರದ ಹೆಸರಲ್ಲಿ ನಕಲಿ ವಾಟ್ಸಪ್ ಮೆಸೇಜ್ – ಗ್ರಾಹಕರೇ ಎಚ್ಚರ

    ನವದೆಹಲಿ: ಡಿಜಿಟಲ್ ಬ್ಯಾಂಕಿಂಗ್ ಯಾವಾಗಿನಿಂದ ಹೆಚ್ಚಳವಾಯಿತೋ ವಂಚಕರು ಅಮಾಯಕರನ್ನು ಗುರಿಯಾಗಿಸಿಕೊಂಡು, ಅವರು ಕಷ್ಟಪಟ್ಟು ದುಡಿದ ಹಣವನ್ನು ದೋಚಲು ಹೊಸ ಹೊಸ ಐಡಿಯಾಗಳನ್ನು ಹುಡುಕುತ್ತಲೇ ಇದ್ದಾರೆ. ಇಂತಹ ವಂಚನೆಗೆ ಪ್ರಮುಖ ಬ್ಯಾಂಕ್‌ಗಳ ಗ್ರಾಹಕರೇ ಒಳಗಾಗಿದ್ದಾರೆ. ಕಳೆದೆರಡು ತಿಂಗಳಿಂದ ಇಂತಹ ವಂಚನೆಗಳು ಹೆಚ್ಚಾಗಿ ವರದಿಯಾಗಿದೆ.

    ಇದೀಗ ಭಾರತ ಸರ್ಕಾರ ಭಾರತೀಯ ಬಳಕೆದಾರರಿಗೆ ಉಚಿತ ಫೋನ್ ಹಾಗೂ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ಹೊಸ ಮೋಸದ ಸಂದೇಶಗಳನ್ನು ವಾಟ್ಸಪ್‌ನಲ್ಲಿ (Whatsapp Message) ಕಳುಹಿಸಲಾಗುತ್ತಿದೆ.

    ವರದಿಗಳ ಪ್ರಕಾರ ಕೇಂದ್ರ ಸರ್ಕಾರ ಎಲ್ಲಾ ಭಾರತೀಯ ಬಳಕೆದಾರರಿಗೆ 239 ರೂ. ಮೌಲ್ಯದ ಉಚಿತ ಫೋನ್ ರೀಚಾರ್ಜ್ ಅನ್ನು ನೀಡುತ್ತಿದೆ ಎಂದು ಹೇಳುವ ವಾಟ್ಸಪ್ ಸಂದೇಶವನ್ನು ಕಳುಹಿಸಲಾಗುತ್ತಿದೆ. ಈ ರೀಚಾರ್ಜ್ 28 ದಿನಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಈ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ರೀಚಾರ್ಜ್ ಅನ್ನು ಪಡೆಯಬಹುದು ಎಂದು ನಕಲಿ ಸಂದೇಶದಲ್ಲಿ (Fake Message) ತಿಳಿಸಲಾಗುತ್ತಿದೆ.

    ಆದರೆ ಈ ಸಂದೇಶಗಳು ಸಂಪೂರ್ಣ ನಕಲಿಯಾಗಿದ್ದು, ಅಂತಹ ಯಾವುದೇ ಯೋಜನೆಯನ್ನು ಸರ್ಕಾರ ಘೋಷಿಸಿಲ್ಲ ಎಂದು ಪಿಬಿಐ (ಪತ್ರಿಕಾ ಮಾಹಿತಿ ಬ್ಯೂರೋ) ಫ್ಯಾಕ್ಟ್ ಚೆಕ್ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಟ್ವಿಟ್ಟರ್‌ನಲ್ಲಿ ಮತ್ತೊಂದು ಮಹತ್ತರ ಬದಲಾವಣೆ ತಂದ ಎಲಾನ್ ಮಸ್ಕ್

    ವಂಚನೆಗಳಿಂದ ದೂರ ಉಳಿಯುವುದು ಹೇಗೆ?
    ವಾಟ್ಸಪ್ ಮೂಲಕ ಬರುವ ಇಂತಹ ವಂಚನೆಗಳಿಗೆ ಬೀಳುವುದು ಸುಲಭ. ಮುಖ್ಯವಾಗಿ ಜನರು ತಮ್ಮ ಕುಟುಂಬ ಅಥವಾ ಸ್ನೇಹಿತರಿಂದ ಬರುವ ಇಂತಹ ನಕಲಿ ಸಂದೇಶಗಳನ್ನು ತಕ್ಷಣವೇ ನಂಬಿಬಿಡುತ್ತಾರೆ. ಆದರೆ ಇವು ನಕಲಿ ಹೌದೋ ಅಲ್ಲವೋ ಎಂಬುದನ್ನು ಕಂಡು ಹಿಡಿಯಲು ನೀವು ಕೆಲವು ಹಂತಗಳನ್ನು ಅನುಸರಿಸಿ.

    ಮೊದಲನೆಯದಾಗಿ ಸಂದೇಶದ ಭಾಷೆಗೆ ಗಮನ ಕೊಡಿ. ಅಂತಹ ಸಂದೇಶಗಳ ಭಾಷೆ ಸಾಮಾನ್ಯವಾಗಿ ಪರಿಪೂರ್ಣವಾಗಿರುವುದಿಲ್ಲ. ಅವುಗಳಲ್ಲಿ ಹೆಚ್ಚಾಗಿ ವ್ಯಾಕರಣ ದೋಷಗಳು ಇರುತ್ತವೆ. ಅಧಿಕೃತ ಸಂದೇಶಗಳು ಸಾಮಾನ್ಯವಾಗಿ ಭಾಷೆ ಮತ್ತು ವಾಕ್ಯ ರಚನೆಯ ವಿಷಯದಲ್ಲಿ ಸ್ಪಷ್ಟವಾಗಿರುತ್ತದೆ. ಸಂದೇಶವನ್ನು ನಂಬಲರ್ಹವಲ್ಲದ ಮೂಲದಿಂದ ಬರೆಯಲಾಗಿದೆ ಎಂಬುದಕ್ಕೆ ಇದು ಅತ್ಯಂತ ಸ್ಪಷ್ಟವಾದ ಸಂಕೇತವಾಗಿರುತ್ತದೆ.

    whatsapp

    ಲಿಂಕ್ ಅನ್ನು ಕ್ಲಿಕ್ ಮಾಡಲು ಕೇಳುವ ಯಾವುದೇ ಸಂದೇಶವನ್ನು ನೀವು ಎಚ್ಚರಿಕೆಯಿಂದ ನೋಡಬೇಕು. ಲಿಂಕ್ ಸ್ವತಃ ಅಧಿಕೃತವಲ್ಲದ ಮೂಲದಿಂದ ಬಂದಿದ್ದರೆ ಅದರ ಮೇಲೆ ಕ್ಲಿಕ್ ಮಾಡುವುದನ್ನು ನೀವು ತಡೆಯಲೇ ಬೇಕು. ಅದೇ ರೀತಿ ನೀವು ಇತರರಿಗೂ ಮಾಡಲು ಹೇಳಿ. ಕೆಲವು ಬಾರಿ ಸರಳವಾಗಿ ನೀವು ಗೂಗಲ್ ಸರ್ಚ್ ಮಾಡಿದರೆ ಸಾಕು. ಈ ಸಂದೇಶ ನಕಲಿಯೇ ಅಥವಾ ಅಸಲಿಯೇ ಎಂಬುದನ್ನು ಸುಲಭವಾಗಿ ಕಂಡುಹಿಡಿಯಬಹುದು. ಇದನ್ನೂ ಓದಿ: ಡಿಸ್ನಿಯಲ್ಲೂ ಶುರುವಾಯ್ತು ಜಾಬ್ ಕಟ್ – ಮುಂದಿನ 4 ದಿನದಲ್ಲಿ 7,000 ಉದ್ಯೋಗಿಗಳು ವಜಾ

  • ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ನನ್ನನ್ನು ವೇಶ್ಯಾವಾಟಿಕೆಗೆ ಒತ್ತಾಯಿಸ್ತಿದ್ರು- ಅಂಕಿತಾ ಭಂಡಾರಿ ವಾಟ್ಸಾಪ್ ಸಂದೇಶ ವೈರಲ್

    ಡೆಹ್ರಾಡೂನ್: ಇತ್ತೀಚೆಗಷ್ಟೇ ನಾಪತ್ತೆಯಾಗಿ ತಾನು ಕೆಲಸ ಮಾಡುತ್ತಿದ್ದ ರೆಸಾರ್ಟ್‌ನಲ್ಲಿಯೇ (Resort) ಶವವಾಗಿ ಪತ್ತೆಯಾಗಿದ್ದ ಉತ್ತರಾಖಂಡದ (Uttarakhand) ಯುವತಿ (Young Women) ಅಂಕಿತಾ ಭಂಡಾರಿ ಸಾವಿಗೂ ಮುನ್ನ ತನ್ನ ಸ್ನೇಹಿತರಿಗೆ ಕಳುಹಿಸಿದ್ದ ವಾಟ್ಸಾಪ್ ಸಂದೇಶಗಳು (WhatsApp Message) ಬಹಿರಂಗಗೊಂಡಿವೆ.

    ಹೌದು.. ಹತ್ಯೆಗೀಡಾದ ಉತ್ತರಾಖಂಡದ (Uttarakhand Murder) ಯುವತಿ `ನನ್ನನ್ನು ವೇಶ್ಯಾವಾಟಿಕೆ (Prostitute) ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ಎಲ್ಲರೂ ನನ್ನನ್ನು ವೇಶ್ಯೆಯಾಗಿ ಮಾಡಲು ಪ್ರಯತ್ನಿಸುತ್ತಿದ್ದಾರೆ’ ಎಂದು ಸಾಯುವ ಮುನ್ನ ಸ್ನೇಹಿತರಿಗೆ ಕಳುಹಿಸಿದ್ದ ಸಂದೇಶಗಳು ಬೆಳಕಿಗೆ ಬಂದಿವೆ. ಈ ಸಂದೇಶಗಳು ಆರೋಪವನ್ನು ಬಲವಾಗಿ ದೃಢಪಡಿಸುವಂತೆ ಸೂಚಿಸುತ್ತಿವೆ.

    ಯುವತಿ ಸಂದೇಶ ಏನಿತ್ತು?
    ಸಾಯವ ಮುನ್ನ ಯುವತಿ `10 ಸಾವಿರ ಹಣ ನೀಡಿ ನನ್ನನ್ನು ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸುತ್ತಿದ್ದಾರೆ, ವ್ಯಕ್ತಿಯೊಬ್ಬ ಅನುಚಿತವಾಗಿ ಸ್ಪರ್ಶಿಸುತ್ತಿದ್ದಾನೆ ಎಂಬುದಾಗಿ ವಾಟ್ಸಾಪ್ (WhatsApp Message) ಮಾಡಿದ್ದಾಳೆ. ಸಂತ್ರಸ್ತೆಯ ವಾಟ್ಸಾಪ್‌ ಸಂದೇಶದ ಸ್ಕ್ರೀನ್‌ಶಾಟ್‌ಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಸಂದೇಶಗಳು ಸಾಯುವ ಮುನ್ನ ಮೃತ ಯುವತಿಯಿಂದಲೇ ಬಂದಿವೆ ಎಂಬುದನ್ನು ಪ್ರಾಥಮಿಕ ತನಿಖೆ ದೃಢಪಡಿಸಿದೆ. ಅದರ ಹೊರತಾಗಿಯೂ ವಿಧಿ ವಿಜ್ಞಾನ (Forensic Investigation) ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಸಂತ್ರಸ್ತ ಮಹಿಳೆಯಿಂದ ರೆಸಾರ್ಟ್ ಉದ್ಯೋಗಿಯೊಬ್ಬರಿಗೆ ಕರೆ ಮಾಡಿದ ಕಾಲ್ ರೆಕಾರ್ಡ್ ಕ್ಲಿಪ್ ಸಹ ಪೊಲೀಸರಿಗೆ ಲಭ್ಯವಾಗಿದೆ. ರೆಸಾರ್ಟ್ ಅತಿಥಿಗಳಿಗೆ ವಿಶೇಷ ಲೈಂಗಿಕ ಸೇವೆ ಒದಗಿಸುವಂತೆ ರೆಸಾರ್ಟ್ ಮಾಲೀಕ ಒತ್ತಡ ಹೇರುತ್ತಿದ್ದರು ಎಂಬ ಸ್ಫೋಟಕ ಸತ್ಯ ಆಡಿಯೋನಲ್ಲಿ ಕೇಳಿಬಂದಿದೆ ಎಂದು ಉತ್ತರಾಖಂಡದ ಉನ್ನತ ಪೊಲೀಸ್ ಅಶೋಕ್ ಕುಮಾರ್ ಹೇಳಿದ್ದಾರೆ.

    ಏನಿದು ಪ್ರಕರಣ?
    ಇತ್ತೀಚೆಗೆ ಉತ್ತರಾಖಂಡದ ಬಿಜೆಪಿ ಮುಖಂಡನ ಮಾಲೀಕತ್ವದಲ್ಲಿದ್ದ ರೆಸಾರ್ಟ್‌ನಲ್ಲಿ ಅಂಕಿತಾ ಭಂಡಾರಿ (19) ಯುವತಿ ಶವವಾಗಿ ಪತ್ತೆಯಾಗಿದ್ದಳು. ಈ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ಬಿಜೆಪಿ ಮುಖಂಡ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ಸಂದೇಶ ಕಳುಹಿಸಿದ ಬಳಿಕವೂ ಎಡಿಟ್‌ಗೆ ಅವಕಾಶ ನೀಡಲಿದೆ ವಾಟ್ಸಪ್

    ವಾಷಿಂಗ್ಟನ್: ಹಲವು ದಿನಗಳಿಂದ ಟ್ವಿಟ್ಟರ್ ಬಳಕೆದಾರರು ಎಡಿಟ್ ಬಟನ್ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಟ್ವಿಟ್ಟರ್ ಈ ಎಡಿಟ್ ಬಟನ್ ಅನ್ನು ತರುತ್ತದೋ ಇಲ್ಲವೋ ಗೊತ್ತಿಲ್ಲ. ಆದರೆ ವಾಟ್ಸಪ್ ಟ್ವಿಟ್ಟರ್‌ಗೂ ಮೊದಲೇ ಬಳಕೆದಾರರಿಗೆ ಎಡಿಟ್ ಆಪ್ಶನ್ ನೀಡುವ ಸಾಧ್ಯತೆ ಇದೆ.

    ಹೌದು, ವಾಟ್ಸಪ್ ತನ್ನ ಬೀಟಾ ಆವೃತ್ತಿಯಲ್ಲಿ ಎಡಿಟ್ ಬಟನ್ ಅನ್ನು ಪರೀಕ್ಷಿಸುತ್ತಿದೆ. ಇದರ ಪ್ರಕಾರ ಬಳಕೆದಾರರು ಯಾರಿಗಾದರೂ ಸಂದೇಶ ಕಳುಹಿಸಿದಾಗ ಅಕ್ಷರಗಳು ತಪ್ಪಾಗಿದ್ದಲ್ಲಿ, ಅದನ್ನು ಎಡಿಟ್ ಮಾಡಲು ಸಾಧ್ಯವಿದೆ.

    whatsapp

    ಈ ಹಿಂದೆ ಬಳಕೆದಾರರು ತಪ್ಪಾಗಿ ಸಂದೇಶವನ್ನು ಯಾರಿಗಾದರೂ ಕಳುಹಿಸಿದಾಗ, ಅದನ್ನು ಎಡಿಟ್ ಮಾಡಲು ಅವಕಾಶ ಇರಲಿಲ್ಲ. ಬದಲಿಗೆ ಆ ಸಂದೇಶವನ್ನು ಡಿಲೀಟ್ ಫಾರ್ ಎವ್ರಿವನ್ ಮೂಲಕ ಅಳಿಸಿ, ಹೊಸದಾಗಿ ಸಂದೇಶ ಕಳುಹಿಸಲಾಗುತ್ತಿತ್ತು. ಆದರೆ ಇದೀಗ ಹೊಸ ಫೀಚರ್ ಮೂಲಕ ತಪ್ಪಾಗಿ ಕಳುಹಿಸಿದ ಸಂದೇಶವನ್ನು ಅಳಿಸದೇ ಅಲ್ಲಿಂದಲ್ಲಿಗೇ ಸರಿಪಡಿಸಲು ಸಾಧ್ಯವಾಗಲಿದೆ. ಇದನ್ನೂ ಓದಿ: ವಿಶ್ವದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಟಾಪ್ 10 ಸಿಇಒಗಳ ಪಟ್ಟಿ ಔಟ್ – ಮಸ್ಕ್ ನಂ.1

    ವಾಟ್ಸಪ್ ಈ ಎಡಿಟ್ ಬಟನ್ ತರುವ ಬಗ್ಗೆ 5 ವರ್ಷಗಳ ಹಿಂದೆಯೇ ಯೋಜಿಸಿತ್ತು ಎಂದು ವರದಿಯಾಗಿದೆ. ಇತ್ತೀಚೆಗೆ ಟ್ವಿಟ್ಟರ್ ಎಡಿಟ್ ಬಟನ್ ತರುವ ಬಗ್ಗೆ ಪ್ರಸ್ತಾಪಿಸಿದ ಬಳಿಕ ವಾಟ್ಸಪ್ ಕೂಡಾ ಮತ್ತೆ ಈ ಎಡಿಟ್ ಬಟನ್ ಮೇಲೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ.

    ಸದ್ಯ ವಾಟ್ಸಪ್ ಅಭಿವೃದ್ಧಿಪಡಿಸುತ್ತಿರುವ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ವೆಬಿಟೈನ್‌ಫೋ ಹಂಚಿಕೊಂಡಿದೆ. ಬಳಕೆದಾರರು ಕಳುಹಿಸಿದ ಸಂದೇಶವನ್ನು ಲಾಂಗ್ ಪ್ರೆಸ್ ಮೂಲಕ ಆಯ್ಕೆ ಮಾಡಿದಾಗ, ಸಂದೇಶವನ್ನು ನಕಲಿಸು(ಕಾಪಿ), ಫಾರ್ವರ್ಡ್ ಆಯ್ಕೆಯೊಂದಿಗೆ ಎಡಿಟ್ ಆಯ್ಕೆಯೂ ಗೋಚರಿಸಲಿದೆ. ಎಡಿಟ್ ಬಟನ್ ಆಯ್ಕೆ ಮಾಡಿದ ಬಳಿಕ ಕಳುಹಿಸಲಾದ ಸಂದೇಶದಲ್ಲಿ ಅಕ್ಷರ ದೋಷವಿದ್ದರೆ, ಅದನ್ನು ಸರಿಪಡಿಸಬಹುದು.

    ಆದರೆ ಸಂದೇಶವನ್ನು ಎಡಿಟ್ ಮಾಡಿದ ಬಳಿಕ ಹಿಂದೆ ಕಳುಹಿಸಿದ ಸಂದೇಶದ ಬಗ್ಗೆ ಯಾವುದೇ ಎಡಿಟ್ ಹಿಸ್ಟರಿ ಇತಿಹಾಸವನ್ನು ತೋರಿಸುವುದಿಲ್ಲ. ಇದು ಅಭಿವೃದ್ಧಿ ಹಂತದಲ್ಲಿರುವುದರಿಂದ ವಾಟ್ಸಪ್ ಈ ಬಗ್ಗೆ ಬಿಡುಗಡೆಗೂ ಮೊದಲು ಫೀಚರ್‌ನಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಇದನ್ನೂ ಓದಿ: ಭಾರತದಲ್ಲಿ ಟೆಸ್ಲಾ ಘಟಕ ತೆರೆಯುತ್ತೇನೆ, ಆದ್ರೆ ನನ್ನ ಷರತ್ತು ಮೊದಲು ಪೂರ್ಣಗೊಳ್ಳಬೇಕು: ಮಸ್ಕ್

    ಈ ಫೀಚರ್ ಸದ್ಯ ಆಂಡ್ರಾಯ್ಡ್ ಬೀಟಾ ಬಳಕೆದಾರರಿಗೆ ಮಾತ್ರವೇ ಲಭ್ಯವಿದೆ. ವಾಟ್ಸಪ್ ಐಒಎಸ್ ಬೀಟಾ ಬಳಕೆದಾರರಿಗೂ ಫೀಚರ್ ಅನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗುತ್ತಿದೆ. ಕೊನೆಯದಾಗಿ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಾಗ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದು ಕಾದು ನೋಡಬೇಕಿದೆ.

  • ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

    ಆಡಿಯೋ ವೈರಲ್ ಬೆನ್ನಲ್ಲೇ ಪೀಠತ್ಯಾಗಕ್ಕೆ ಮುಂದಾದ ಕಣ್ವಮಠದ ಸ್ವಾಮೀಜಿ

    -ಕೆಲವರ ಷಡ್ಯಂತ್ರಕ್ಕೆ ಬಲಿಪಶು ಆಗಿದ್ದೇನೆ

    ಯಾದಗಿರಿ: ಜಿಲ್ಲೆಯ ಕಣ್ವಮಠ ಕಾಮಿಸ್ವಾಮಿಯ ಕಾಮಪುರಾಣ ಆಡಿಯೋ ಸ್ಥಳೀಯ ಮಟ್ಟದಲ್ಲಿ ಬಾರಿ ಸುದ್ದಿಯಲ್ಲಿದೆ. ಆದರೆ ಇದರಲ್ಲಿ ನಂದೇನು ತಪ್ಪಿಲ್ಲ, ಇದೆಲ್ಲಾ ಷಡ್ಯಂತ್ರ ಎಂದು ಕಣ್ವಮಠದ ವಿದ್ಯಾವಾರೀಧಿತೀರ್ಥ ಸ್ವಾಮೀಜಿ ಪೀಠತ್ಯಾಗ ಮಾಡಲು ಮುಂದಾಗಿದ್ದಾರೆ.

    ಸುರಪುರ ತಾಲೂಕಿನ ಹುಣಸಿಹೊಳಿ ಗ್ರಾಮದ ಪ್ರಸಿದ್ಧ ಕಣ್ವಮಠ, ಪೀಠಾಧಿಪತಿ ಶ್ರೀ 1008 ವಿದ್ಯಾವಾರೀಧಿತೀರ್ಥ ಸ್ವಾಮಿಯ ಅಕ್ರಮ ಸಂಬಂಧ ಬಟಾ ಬಯಲಾಗಿದೆ. ಸಾಕ್ಷಿಗಳು ಸ್ವಾಮಿಯ ವಿರುದ್ಧವೇ ಇದ್ದರೂ ಇದರಲ್ಲಿ ನಂದೇನು ತಪ್ಪಿಲ್ಲ ಎಂದು ಸ್ವಾಮೀಜಿ ಹೇಳುತ್ತಿದ್ದಾರೆ. ಸ್ವಾಮೀಜಿ ಮೈಸೂರು ಮೂಲದ ಮಹಿಳೆ ಜೊತೆ ಅಸಭ್ಯಕರವಾಗಿ ವಾಟ್ಸಪ್‍ನಲ್ಲಿ ಚಾಟಿಂಗ್ ಮಾಡಿದ್ದಾರೆ ಎನ್ನಲಾಗಿದ್ದು, ಮಹಿಳೆ ಜೊತೆ ಸ್ವಾಮೀಜಿ ನಡೆಸಿರುವ ಚಾಟಿಂಗ್ ಫೋಟೋಗಳು, ವೀಡಿಯೋಗಳು ಮತ್ತು ಕಾಲ್ ರೆಕಾರ್ಡ್ ಅನಾಮಧೇಯ ವ್ಯಕ್ತಿಗಳಿಂದ ಹೊರ ಬಂದಿವೆ. ಇದನ್ನೂ ಓದಿ:ಈಗ ಬರ್ತಿಯಾ, ನಾನು ಬೇಡ್ವಾ- ಕಾಮಿಸ್ವಾಮಿಯ ಆಡಿಯೋ ಔಟ್

    ಈ ಸ್ವಾಮೀಜಿಗೆ ಈಗಾಗಲೇ ಎರಡು ಮದುವೆ ಆಗಿದ್ದು, ಮಕ್ಕಳು ಸಹ ಇದ್ದಾರೆಂದು ಹೇಳಲಾಗುತ್ತಿದೆ. ಹಲವು ಜಿಲ್ಲೆಗಳಲ್ಲಿರುವ ಕಣ್ವ ಮಠದ ಆಸ್ತಿಯನ್ನು, ಅಕ್ರಮವಾಗಿ ಮಾರಾಟ ಮಾಡಿರುವ ಆರೋಪ ಸ್ವಾಮಿ ಮೇಲಿದೆ. ಎಷ್ಟೇಲ್ಲಾ ಸಾಕ್ಷಿಗಳು ಸ್ವಾಮೀಜಿಯ ವಿರುದ್ಧವಿದ್ದರೂ ನಾನೇನು ಮಾಡಿಲ್ಲ, ನನ್ನ ಹೆಸರನ್ನು ಹಾಳು ಮಾಡಲು ಮಠವನ್ನು ಕಂಡರೆ ಆಗದವರು ಈ ರೀತಿ ಮಾಡುತ್ತಿದ್ದಾರೆ. ನನ್ನನ್ನು ಬಲಿಪಶು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಸ್ವಾಮೀಜಿ, ನನಗೆ ಗೊತ್ತಿರದ ಮಹಿಳೆಯರು ಈ ರೀತಿ ಮೆಸೆಜ್ ಮಾಡಿದ್ದಾರೆ. ಆದರೆ ನಾನು ಅವರ ಬಳಿ ಅಸಭ್ಯವಾಗಿ ವರ್ತಿಸಿಲ್ಲ. ಅವರೇ ನನಗೆ ಮೊದಲು ಫೋಟೋ, ವಿಡಿಯೋ ಕಾಲ್ ಮಾಡಿದ್ದು ಎಂದು ಹೇಳಿದರು. ಪೀಠದಲ್ಲಿ ಇದ್ದುಕೊಂಡು ಈ ಆರೋಪವನ್ನು ನಾನು ಎದುರಿಸುವುದು ಸರಿಯಲ್ಲ. ಆದ್ದರಿಂದ ಪೀಠತ್ಯಾಗ ಮಾಡಿ ಆರೋಪವನ್ನು ಎದುರಿಸಿ, ಹೋರಾಡುತ್ತೇನೆ. ನಾನು ಯಾವ ತಪ್ಪು ಮಾಡಿಲ್ಲ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

    ಅಲ್ಲದೆ ನನ್ನ ಮೊಬೈಲ್‍ಗೆ ಲಾಕ್ ಇಟ್ಟಿಲ್ಲ. ಆದ್ದರಿಂದ ನನ್ನ ಫೋನ್ ತೆಗೆದುಕೊಂಡು ಯಾರೋ ನನ್ನ ವಿರುದ್ಧ ಈ ರೀತಿ ಷಡ್ಯಂತ್ರ ನಡೆಸಿದ್ದಾರೆ. ನನ್ನ ಧ್ವನಿಯಲ್ಲಿ ಕಾಲ್ ಮಾಡಿದ್ದಾರೆ, ನನ್ನ ಹೆಸರಿನಲ್ಲಿ ಮಹಿಳೆಯರೊಂದಿಗೆ ಚಾಟ್ ಮಾಡಿದ್ದಾರೆ. ನಾನು ಚಾಚುರ್ಮಾಸದ ಕಾರ್ಯಕ್ರಮಗಳಲ್ಲಿ ಇದ್ದಾಗ ಹೆಚ್ಚಾಗಿ ಮೊಬೈಲ್ ಬಳಸುತ್ತಿರಲಿಲ್ಲ. ಬೇಕಾದ ವ್ಯಕ್ತಿಗಳಿಗೆ ಕರೆ ಮಾಡಲು ಬಳಸುತ್ತಿದ್ದೆ. ಆದರೆ ನಾನು ಯಾರಿಗೂ ಚಾಟ್, ವಿಡಿಯೋ ಕಾಲ್ ಮಾಡಿಲ್ಲ ಎಂದರು.

    ಆಡಿಯೋ ಹೊರಬಂದಿರುವ ಬಗ್ಗೆ ಮಾತನಾಡಿ, ನನ್ನ ಧ್ವನಿಯಲ್ಲಿ ಯಾರೋ ಮಾತನಾಡಿ ಆಡಿಯೋ ಬಿಡುಗಡೆ ಮಾಡಿದ್ದಾರೆ. ಇದು ನಾನು ಮಾತನಾಡಿರುವುದು ಅಲ್ಲ ಎಂದು ಆರೋಪ ತಳ್ಳಿಹಾಕಿದ್ದಾರೆ. ನಿಮಗೆ ಕೇವಲ ಒಂದೆರಡು ನಂಬರ್‍ಗಳ ಚಾಟ್ ಮಾತ್ರ ಸಿಕ್ಕಿದೆ. ಆದ್ರೆ ಮೊದಲು ಮೂರ್ನಾಲ್ಕು ನಂಬರ್‍ಗಳಿಂದ ಏನು ಚಾಟ್ ಮಾಡಿದ್ದರು, ಏನೆಲ್ಲಾ ಫೋಟೋ ವಿಡಿಯೋ ಕಳುಹಿಸಿದ್ದರು ಎಂದು ನಿಮಗೆ ಗೊತ್ತಿಲ್ಲ. ಸಂಚು ರೂಪಿಸಿದ್ದಾರೆ ಅದ್ಯಾವುದನ್ನು ನಿಮಗೆ ತಲುಪಿಸಿಲ್ಲ. ಇದೆಲ್ಲಾ ಒಂದು ಸಂಚು, ನನ್ನ ಹೆಸರು ಹಾಳು ಮಾಡಲು ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದರು.

    ಕಳೆದ 4-5 ವರ್ಷಗಳಿಂದಲೂ ಈ ರೀತಿ ಸಂಚುಗಳು ನನ್ನ ವಿರುದ್ಧ ನಡೆಯುತ್ತಲೇ ಬಂದಿದೆ. ನಾನು ಈ ಪೀಠವನ್ನು ಆರೋಹಣ ಮಾಡುತ್ತಿದ್ದಾಗ ಗಲಾಟೆ ಮಾಡಿದ ವ್ಯಕ್ತಿಗಳೇ ಇದರ ರುವಾರಿಗಳಾಗಿದ್ದಾರೆ. ಅವರೇ ನನ್ನ ವಿರುದ್ಧ ಸಂಚು ಹೂಡಿದ್ದಾರೆ. ಮಠದ ಟ್ರಸ್ಟ್ ಮುಖಾಂತರ, ಭಕ್ತರ ಸಹಾಯ ಪಡೆದು ಇದರ ತನಿಖೆ ನಡೆಸುತ್ತೇವೆ ಎಂದರು.

  • ಶಿವಮೊಗ್ಗ ಬುರ್ಖಾ ವಿವಾದ- ವಾಟ್ಸಪ್ ಮೆಸೇಜ್ ಶೇರ್ ಮಾಡ್ಬೇಡಿ!

    – ದುಬೈನಿಂದ ಸಂದೇಶ ಕಳಿಸಿದವರಿಗೆ ಲುಕ್ ಔಟ್ ನೋಟಿಸ್
    – ಸ್ಥಳೀಯ ಯುವಕ ನಾಪತ್ತೆ, ಪೊಲೀಸರಿಂದ ತನಿಖೆ ಮುಂದುವರಿಕೆ

    ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ಕಾಲೇಜಿನಲ್ಲಿ ಆರಂಭಗೊಂಡ ವಸ್ತ್ರ ಸಂಹಿತೆ ವಿವಾದ ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದುವರೆಗೂ ಕ್ಯಾಂಪಸ್‍ನ ಒಳಗಿದ್ದ ವಿವಾದ ಈ ಹೊರಗೂ ವ್ಯಾಪಿಸಿದೆ. ಪರ-ವಿರೋಧ ಚರ್ಚೆ, ವಾಗ್ವಾದ ಆರಂಭಗೊಂಡಿವೆ. ಬೆಂಕಿಗೆ ತುಪ್ಪ ಹಾಕುವಂತೆ ಎರಡು ವಾಟ್ಸಪ್ ವಿಡಿಯೋಗಳು ವಾಟ್ಸಪ್‍ಗಳಲ್ಲಿ ವ್ಯಾಪಕವಾಗಿ ಹರಡುತ್ತಿವೆ.

    ಶಿವಮೊಗ್ಗ ಮೂಲದ ದುಬೈನಲ್ಲಿ ಇರುವ ಇಬ್ಬರು ಯುವಕರು ಅತ್ಯಂತ ಅಶ್ಲೀಲವಾಗಿ ಒಂದು ಧರ್ಮದವರ ಅವಹೇಳನ ಮಾಡಿ ವಾಟ್ಸಪ್ ವಿಡಿಯೋ ಕಳಿಸಿದ್ದಾರೆ. ಇದು ವ್ಯಾಪಕವಾಗಿ ಹರಡುತ್ತಿದ್ದಂತೆ, ಇದಕ್ಕೆ ಪ್ರತಿಯಾಗಿ ಶಿವಮೊಗ್ಗದ ಯುವಕ ಅತ್ಯಂತ ಕೀಳು ಭಾಷೆಯಲ್ಲಿ ಇನ್ನೊಂದು ವಿಡಿಯೋ ಮಾಡಿ ಹಂಚಿದ್ದಾನೆ. ಈ ಎರಡೂ ವಿಡಿಯೋಗಳು ವ್ಯಾಪಕವಾಗಿ ಹರಡುತ್ತಿದ್ದು, ಪೆÇಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕೋಟೆ ಠಾಣೆಯಲ್ಲಿ ಸ್ವಯಂದೂರು ದಾಖಲಿಸಿಕೊಂಡಿದ್ದಾರೆ. ಇಂತಹ ವೀಡಿಯೋ ಹರಡಿ ಸಾಮಾಜಿಕ ನೆಮ್ಮದಿಗೆ ಭಂಗ ತರುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದೆ.

    ಈ ವಿವಾದದ ಹಿನ್ನೆಲೆಯಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಸಂದೇಶವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಶಿವಮೊಗ್ಗ ಎಸ್ಪಿ ಅಭಿನವ್ ಖರೆ ತಿಳಿಸಿದ್ದಾರೆ.

    ವಾಟ್ಸಪ್ ಗ್ರೂಪ್‍ಗಳಲ್ಲಿ ಇಂಥ ಸಂದೇಶ ಹಾಕಿದರೆ ಅಡ್ಮಿನ್ ಮೇಲೆ ಹೊಣೆ ಹೊರಿಸಿ, ಕ್ರಮ ಜರುಗಿಸುತ್ತೇವೆ. ಈಗಾಗಲೇ ವಾಟ್ಸಪ್ ವಿಡಿಯೋ ಮೆಸೇಜ್‍ಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಲಾಗಿದೆ. ದುಬೈನಿಂದ ಧಮ್ಕಿ ಹಾಕಿದ ಯುವಕರಿಗೆ ಲುಕೌಟ್ ನೋಟಿಸ್ ಜಾರಿಯಾಗಿದೆ. ಸ್ಥಳೀಯ ಯುವಕ ನಾಪತ್ತೆ ಅಗಿದ್ದು, ಆತನ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.