ನವದೆಹಲಿ: ಡಿಜಿಟಲ್ ಪೇಮೆಂಟ್ ಆಯ್ತು, ಈಗ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್‌ನಲ್ಲಿ (Whatsapp Down) ವ್ಯತ್ಯಯ ಕಂಡುಬಂದಿದೆ. ವಾಟ್ಸಪ್ ಸರಿಯಾಗಿ ಕೆಲಸ ಮಾಡುತ್ತಿಲ್ಲ.. ಸೇವೆಯಲ್ಲಿ ವ್ಯತ್ಯಯವಾಗಿದೆ ಎಂದು ಕೆಲವು ಬಳಕೆದಾರರು ದೂರಿದ್ದಾರೆ.
ಬಳಕೆದಾರರು ಸಲ್ಲಿಸಿದ ದೋಷಗಳು ಸೇರಿದಂತೆ ಹಲವಾರು ಮೂಲಗಳಿಂದ ಸ್ಥಿತಿ ವರದಿಗಳನ್ನು ಒಟ್ಟುಗೂಡಿಸಿ ಸ್ಥಗಿತಗಳನ್ನು ಪತ್ತೆಹಚ್ಚುವ ಡೌನ್‌ಡೆಕ್ಟರ್ ಪ್ರಕಾರ, ಸಂಜೆ 5:13 ರವರೆಗೆ ವಾಟ್ಸಾಪ್ ವಿರುದ್ಧ ಕನಿಷ್ಠ 463 ದೂರುಗಳು ದಾಖಲಾಗಿವೆ. 80% ಕ್ಕಿಂತ ಹೆಚ್ಚು ದೂರುಗಳು ಸಂದೇಶಗಳನ್ನು ಕಳುಹಿಸುವುದಕ್ಕೆ ಸಂಬಂಧಿಸಿವೆ. 15% ಜನರು ಅಪ್ಲಿಕೇಶನ್‌ನಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ. 4% ಲಾಗಿನ್ ಸಮಯದಲ್ಲಿ ತೊಂದರೆಗಳನ್ನು ಅನುಭವಿಸಿದ್ದಾರೆ.
Hey @WhatsApp , is the app down? I’m having trouble sending messages – they’re just not going through. Anyone else facing this? #WhatsAppDown
ಕೆಲವು ಬಳಕೆದಾರರು ತಮ್ಮ ಸ್ಟೇಟಸ್‌ಗಳನ್ನು ವಾಟ್ಸಾಪ್‌ನಲ್ಲಿ ಅಪ್‌ಲೋಡ್ ಮಾಡಲು ಸಾಧ್ಯವಾಗಲಿಲ್ಲ ಎಂದು ದೂರಿದ್ದಾರೆ. ಇತರರು ಗ್ರೂಪ್‌ಗಳಲ್ಲಿ ಸಂದೇಶಗಳನ್ನು ಕಳುಹಿಸುವಾಗ ಸಮಸ್ಯೆಯಾಗಿದೆ ಎಂದು ವರದಿ ಮಾಡಿದ್ದಾರೆ. ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ #Whatsappdown ಚರ್ಚೆ ಟ್ರೆಂಡಿಂಗ್ ಆಯಿತು.
‘ಇದು ನನ್ನದು ಮಾತ್ರವೇ ಅಥವಾ ನಿಮ್ಮ ವಾಟ್ಸಾಪ್ ಕೂಡ ಡೌನ್ ಆಗಿದೆಯೇ? ನಾನು ಸ್ಟೇಟಸ್ ಅಪ್‌ಲೋಡ್ ಮಾಡಲು ಪ್ರಯತ್ನಿಸುತ್ತಿದ್ದೇನೆ. ಅಪ್ಲೋಡ್ ಆಗೋದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಿದೆ’ ಎಂದು ಬಳಕೆದಾರರೊಬ್ಬರು ಎಕ್ಸ್‌ನಲ್ಲಿ ಸಮಸ್ಯೆ ಹೇಳಿಕೊಂಡಿದ್ದಾರೆ. ಹೀಗೆ ಅನೇಕರು, ವಾಟ್ಸಪ್ ಬಳಕೆ ವೇಳೆ ತಾವು ಅನುಭವಿಸಿದ ಸಮಸ್ಯೆಗಳ ಬಗ್ಗೆ ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಅದಕ್ಕೆ ಅನೇಕರು ಕಾಮೆಂಟ್ ಮಾಡಿ, ‘ನಾವು ಕೂಡ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ’ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ಗೆಸ್ಟ್ ಹೌಸ್‌ನಲ್ಲಿ ಮಹಿಳೆ ಸ್ನಾನ ಮಾಡುವ ವೀಡಿಯೋ ಸೆರೆ ಹಿಡಿದವ ಅರೆಸ್ಟ್
ನವದೆಹಲಿ: ವಾಟ್ಸಪ್‌ನಲ್ಲಿ (WhatsApp) ಬರುವ ಎಲ್ಲಾ ಚಿತ್ರಗಳನ್ನು (Photo) ಡೌನ್‌ಲೋಡ್ ಮಾಡುವ ಮುನ್ನ ಎಚ್ಚರವಾಗಿರಿ. ಡೌನ್‌ಲೋಡ್ ಆದ ಚಿತ್ರದಿಂದಲೇ ನಿಮ್ಮ ಫೋನ್ (Phone) ಹ್ಯಾಕ್ ಆಗುವ ಸಾಧ್ಯತೆಯಿದೆ.
ಹೌದು. ಇಲ್ಲಿಯವರೆಗೆ ಲಿಂಕ್, ಇತ್ಯಾದಿಗಳನ್ನು ಕಳುಹಿಸಿ ಸೈಬರ್ ಕಳ್ಳರು ಫೋನ್ ಹ್ಯಾಕ್ (Hack) ಮಾಡುತ್ತಿದ್ದರು. ಆದರೆ ತಂತ್ರಜ್ಞಾನ ಮುಂದುವರಿದಂತೆ ಫೋಟೋವನ್ನು ಕಳುಹಿಸಿ ಹ್ಯಾಕ್ ಮಾಡುತ್ತಿರುವ ಪ್ರಕರಣ ಈಗ ಬೆಳಕಿಗೆ ಬಂದಿದೆ.
ಈ ಮಾಲ್ವೇರ್ (Malware) ಪಾಸ್‌ವರ್ಡ್, ಒಟಿಪಿ ಮತ್ತು UPI ವಿವರಗಳು ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಕದಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಕೆಲವೊಮ್ಮೆ ಸೈಬರ್ ಕ್ರಿಮಿನಲ್‌ಗಳು ಫೋನನ್ನೇ ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವಾಟ್ಸಪ್ ಸಂದೇಶದಲ್ಲಿ ಫೋಟೋದಲ್ಲಿರುವ ಯಾರನ್ನಾದರೂ ಗುರುತಿಸಲು ಸಹಾಯ ಮಾಡುವಂತೆ ಕೋರಲಾಗಿತ್ತು. ಆ ಸಂಖ್ಯೆಯಿಂದ ಪದೇ ಪದೇ ಫಾಲೋ-ಅಪ್ ಕರೆಗಳ ನಂತರ, ಆ ವ್ಯಕ್ತಿ ಅಂತಿಮವಾಗಿ ಚಿತ್ರದ ಮೇಲೆ ಕ್ಲಿಕ್ ಮಾಡಿದ್ದಾರೆ. ಫೋಟೋ ಕ್ಲಿಕ್ ಮಾಡಿದ ಕೂಡಲೇ ಫೋನ್ ಹ್ಯಾಕ್ ಆಗಿದೆ. ಮಾಲ್ವೇರ್ ತಕ್ಷಣವೇ ಫೋನ್ ಪ್ರವೇಶಿಸಿ ವ್ಯಕ್ತಿಗೆ ತಿಳಿಯದೇ ಹಣಕಾಸಿನ ವಹಿವಾಟು ನಡೆಸಿದೆ.
ಏನಿದು ಮಾಲ್ವೇರ್?
ಮಾಲ್ವೇರ್ ಎಂಬುದು ಮ್ಯಾಲಿಶಿಯಸ್ ಸಾಫ್ಟ್‌ವೇರ್ ಎಂಬುದರ ಸಂಕ್ಷಿಪ್ತ ರೂಪ. ಇದು ಫೋನ್ ಮಾಲೀಕನ ಒಪ್ಪಿಗೆ ಇಲ್ಲದೇ ಆತನ ಫೋನ್ ಒಳಗೆ ಕದ್ದು ನುಸುಳುವಂತೆ ಅಥವಾ ಅದಕ್ಕೆ ಹಾನಿಯೆಸಗುವಂತೆ ವಿನ್ಯಾಸಗೊಳಿಸಲಾಗಿರುವ ಒಂದು ತಂತ್ರಾಂಶ.
ಮಾಲ್ವೇರ್‌ನಿಂದ ಪಾರಾಗೋದು ಹೇಗೆ?
– ಅಪರಿಚಿತ ಅಥವಾ ಪರಿಶೀಲಿಸದ ಸಂಖ್ಯೆಗಳಿಂದ ಬರುವ ಚಿತ್ರಗಳು, ವಿಡಿಯೋಗಳನ್ನು ಡೌನ್‌ಲೋಡ್ ಮಾಡಬೇಡಿ ಅಥವಾ ಲಿಂಕ್‌ಗಳನ್ನು ಕ್ಲಿಕ್ ಮಾಡಲು ಹೋಗಲೇಬೇಡಿ.
– ವಾಟ್ಸಪ್ ಸೆಟ್ಟಿಂಗ್ಸ್‌ನಲ್ಲಿ ಮೀಡಿಯಾಗೆ ಹೋಗಿ auto-download ಅನ್ನು ಆಫ್ ಮಾಡಿ.
– ಅನುಮಾನಾಸ್ಪದ ಸಂಖ್ಯೆಗಳನ್ನು ತಕ್ಷಣ ರಿಪೋರ್ಟ್ ಮಾಡಿ ಮತ್ತು ನಿರ್ಬಂಧಿಸಿ.
– ಸ್ನೇಹಿತರು ಮತ್ತು ಕುಟುಂಬಕ್ಕೆ, ವಿಶೇಷವಾಗಿ ತಂತ್ರಜ್ಞಾನದ ಬಗ್ಗೆ ಕಡಿಮೆ ಜ್ಞಾನವಿರುವವರಿಗೆ ಈ ರೀತಿಯ ಅಪಾಯಗಳ ಬಗ್ಗೆ ಮಾಹಿತಿ ನೀಡಿ.
– ನಿಮ್ಮನ್ನು ಗುರಿಯಾಗಿಸಿಕೊಂಡಿದ್ದರೆ, ಘಟನೆಯನ್ನು ಸೈಬರ್ ಕ್ರೈಮ್ ಪೋರ್ಟಲ್‌ನಲ್ಲಿ ವರದಿ ಮಾಡಿ: www.cybercrime.gov.in
ಮುಂಬೈ: ಮಹಿಳೆಯೊಬ್ಬರು ತಮ್ಮ ಪತಿಯ ವಾಟ್ಸಪ್ ಖಾತೆಯನ್ನು ಹ್ಯಾಕ್ (WhatsApp Hack) ಮಾಡಿದ್ದು, ಪರ ಸ್ತ್ರೀಯರೊಂದಿಗೆ ಗಂಡನ ರಾಸಲೀಲೆಗಳನ್ನು ಕಂಡು ಶಾಕ್ ಆಗಿರುವ ಘಟನೆ ಮಹಾರಾಷ್ಟ್ರದ (Maharashtra) ನಾಗ್ಪುರದಲ್ಲಿ (Nagpur) ನಡೆದಿದೆ.
33 ವರ್ಷದ ಪತಿ ಅಬ್ದುಲ್ ಶರೀಖ್ ಖುರೇಷಿಯ ರಾಸಲೀಲೆಗಳನ್ನು ನೋಡಿ ಶಾಕ್ ಆದ ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಆತ ಈಗ ಅರೆಸ್ಟ್ ಆಗಿದ್ದಾನೆ. ಅಶ್ಲೀಲ ಚಟುವಟಿಕೆಗಳಿಗೆ ಗಂಡನ ನಿರಂತರ ಬೇಡಿಕೆಗಳಿಂದ ಬೇಸತ್ತ ಪತ್ನಿ ಆತನ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಳು. ಆದರೆ ಸುಪ್ರೀಂ ಕೋರ್ಟ್ನ ಗೈಡ್‌ಲೈನ್ಸ್ ಪ್ರಕಾರ ಆತನನ್ನು ಬಂಧಿಸಲಾಗಲಿಲ್ಲ. ಈ ಹಿನ್ನೆಲೆ ದಾಖಲೆಗಳಿಗಾಗಿ ಪತ್ನಿ ಆತನ ವಾಟ್ಸಪ್ ಹ್ಯಾಕ್ ಮಾಡಿದ್ದಾಳೆ. ಆತನ ಚಾಟ್ ಹಿಸ್ಟರಿಯನ್ನು ಪರಿಶೀಲಿಸಿದ ವೇಳೆ ಪತಿಯ ಕಾಮಪುರಾಣಗಳು ಒಂದೊಂದಾಗಿ ಹೊರಬಿದ್ದಿದೆ. ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಕೇಸ್ – ಸುಪ್ರೀಂನಲ್ಲಿ ನಾಳೆ ದರ್ಶನ್ ಜಾಮೀನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ
ಅಬ್ದುಲ್ ಶಾರಿಕ್ ಖುರೇಷಿ ತನಗೆ ಮದುವೆಯಾಗಿ 3 ವರ್ಷದ ಮಗಳಿರುವ ವಿಷಯವನ್ನು ಮರೆಮಾಚಿ, ಅನೇಕ ಮಹಿಳೆಯರನ್ನು ಪರಿಚಯ ಮಾಡಿಕೊಂಡು ಡೇಟಿಂಗ್ ಮಾಡುತ್ತಿದ್ದ. ಅಲ್ಲದೇ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಸಾಧಿಸಿ, ಖಾಸಗಿ ಕ್ಷಣಗಳ ವೀಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಕೂಡ ಮಾಡುತ್ತಿದ್ದ. ಇದನ್ನೂ ಓದಿ: ಗ್ಯಾರಂಟಿ ಸರ್ಕಾರದಿಂದ ಶಾಕ್ – ಡೀಸೆಲ್ ದರ 2 ರೂ. ಏರಿಕೆ
ಕಳೆದ ವರ್ಷ ‘ಮಹಾಪ್ರಸಾದ್’ ಕಾರ್ಯಕ್ರಮದಲ್ಲಿ 19 ವರ್ಷದ ಹುಡುಗಿಯನ್ನು ಭೇಟಿಯಾದ ಅಬ್ದುಲ್ ಶಾರಿಕ್ ತನ್ನನ್ನು ‘ಸಾಹಿಲ್ ಶರ್ಮಾ’ ಎಂದು ಗುರುತಿಸಿಕೊಳ್ಳುವ ಮೂಲಕ ಆಕೆಯ ಸ್ನೇಹ ಬೆಳೆಸಿದ್ದ. ಅಲ್ಲದೇ ತಾನೊಬ್ಬ ಅವಿವಾಹಿತ ಎಂದು ಬಿಂಬಿಸಿ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಪದೇ ಪದೇ ಹೋಟೆಲ್ ರೂಂಗಳಿಗೆ ಕರೆಸಿಕೊಂಡು ದೈಹಿಕ ಸಂಪರ್ಕ ಕೂಡ ಸಾಧಿಸಿದ್ದ. ಅಲ್ಲದೇ ಆಕೆಯ ನಗ್ನ ಫೋಟೋ ಹಾಗೂ ವೀಡಿಯೋಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಆಕೆಯ ತಾಯಿ ಕೊಡಿಸಿದ್ದ ಚಿನ್ನದ ಉಂಗುರ ಮಾರುವಂತೆ ಒತ್ತಾಯಿಸಿ ಆಕೆಯಿಂದ 30,000 ರೂ. ಹಣವನ್ನು ಕೂಡ ಪಡೆದಿದ್ದ. ಇದನ್ನೂ ಓದಿ: ಕಲಬುರಗಿ ನಗರವನ್ನು ಸ್ಮಾರ್ಟ್ ಸಿಟಿಯಾಗಿಸಲು ಶಾಸಕರು, ಅಧಿಕಾರಿಗಳೊಂದಿಗೆ ಪ್ರಿಯಾಂಕ್ ಖರ್ಗೆ ಚರ್ಚೆ
ಶೋಷಣೆಗೊಳಗಾದ 19 ವರ್ಷದ ಹುಡುಗಿಯನ್ನು ಭೇಟಿ ಮಾಡಿದ ಪತ್ನಿ ಆಕೆಯ ಮನವೊಲಿಸಿ ದೂರು ನೀಡುವಂತೆ ಒತ್ತಾಯಿಸಿದ್ದಾಳೆ. ಹುಡುಗಿ ನೀಡಿದ ದೂರಿನ ಆಧಾರದ ಮೇಲೆ, ಅಬ್ದುಲ್ ಶಾರಿಕ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ ಮತ್ತು ಆತನನ್ನು ಬಂಧಿಸಲಾಗಿದೆ ಎಂದು ಪಚ್‌ಪಾವೊಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್ಪೆಕ್ಟರ್ ಬಾಬುರಾವ್ ರಾವುತ್ ತಿಳಿಸಿದ್ದಾರೆ. ಇದನ್ನೂ ಓದಿ: ಡೆಲ್ಲಿಗೆ ಸಿಎಂ, ಡಿಸಿಎಂ: ಮಹತ್ವದ 2 ಕೇಸ್ ಬಗ್ಗೆ ರಿಪೋರ್ಟ್ ಸಲ್ಲಿಕೆ ಸಾಧ್ಯತೆ
ವಾಷಿಂಗ್ಟನ್: ವಾಟ್ಸಪ್‌ಗೆ (Whatsapp) ಬಂದಿರುವ ಲಿಂಕ್ ಓಪನ್ ಮಾಡದೇ ಇದ್ದರೂ ಇನ್ನು ಮುಂದೆ ನಿಮ್ಮ ಫೋನ್ (Phone) ಹ್ಯಾಕ್ (Hack) ಆಗಬಹುದು.
ಹೌದು. ಇಲ್ಲಿಯವರೆಗೆ ವಾಟ್ಸಪ್ ಬಂದ ಲಿಂಕ್ ಓಪನ್ ಮಾಡಿದ್ದರೆ ಆಗ ಫೋನ್‌ಗಳು ಹ್ಯಾಕ್ ಆಗುತ್ತಿದ್ದವು. ಆದರೆ ಈಗ ಹ್ಯಾಕರ್‌ಗಳು ಇನ್ನು ಮುಂದೆ ಹೋಗಿದ್ದು ಲಿಂಕ್ ಓಪನ್ ಮಾಡದೇ ಹ್ಯಾಕ್ ಮಾಡಲು ಆರಂಭಿಸಿದ್ದಾರೆ.
ಪ್ಯಾರಾಗಾನ್‌ನ ಸ್ಪೈವೇರ್ ಅನ್ನು ಸರ್ಕಾರಗಳಿಗೆ ಮಾರಾಟ ಮಾಡಲಾಗುತ್ತದೆ. ಅಪರಾಧಿಗಳ ವಿರುದ್ಧ ಮತ್ತು ರಾಷ್ಟ್ರೀಯ ಭದ್ರತೆ ಸಂಬಂಧ ಪಟ್ಟ ಪ್ರಕರಣಗಳು ಬಂದಾಗ ಸರ್ಕಾರ ಈ ಸ್ಪೈವೇರ್ ಬಳಸಿ ಮಾಹಿತಿಗಳನ್ನು ಕಲೆ ಹಾಕುತ್ತವೆ.
ಈ ಸ್ಪೈವೇರ್ ಪೀಡಿತ ಬಳಕೆದಾರರ ಸಾಧನಗಳು ಅಪಾಯಕ್ಕೆ ಸಿಲುಕಿರಬಹುದು ಎಂದು ವಾಟ್ಸಾಪ್ ದೃಢಪಡಿಸಿದೆ. ಸುಮಾರು 90 ಬಳಕೆದಾರರನ್ನು ಹ್ಯಾಕ್ ಮಾಡುವ ಪ್ರಯತ್ನವನ್ನು ಪತ್ತೆಹಚ್ಚಿರುವುದಾಗಿ ವಾಟ್ಸಾಪ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಿರ್ದಿಷ್ಟವಾಗಿ ಯಾರನ್ನು ಗುರಿಯಾಗಿಸಿ ಈ ಸ್ಪೈವೇರ್ ಬಿಡಲಾಗಿದೆ ಎಂದು ಹೇಳಲು ವಾಟ್ಸಪ್ ಅಧಿಕಾರಿಗಳು ನಿರಾಕರಿಸಿದ್ದಾರೆ. ಯುರೋಪಿನ ಹಲವಾರು ಜನ ಸೇರಿದಂತೆ 12 ಹೆಚ್ಚು ದೇಶಗಳ ಜನರನ್ನು ಗುರಿಯಾಗಿ ಈ ಸೈಬರ್ ದಾಳಿ ನಡೆದಿದೆ.
ಲಕ್ನೋ: ಉತ್ತರ ಪ್ರದೇಶದ (Uttar Pradesh) ಅಮೇಥಿಯಲ್ಲಿ (Amethi Horror) ನಡೆದ ಶಿಕ್ಷಕ, ಅವರ ಪತ್ನಿ ಮತ್ತು ಇಬ್ಬರು ಚಿಕ್ಕ ಮಕ್ಕಳ ಹತ್ಯೆಯ ಶಂಕಿತ ಆರೋಪಿ ಸುಮಾರು ಒಂದು ತಿಂಗಳಿನಿಂದ ಹತ್ಯೆಗೆ ಸಂಚು ರೂಪಿಸಿದ್ದ ಎಂದು ತಿಳಿದು ಬಂದಿದೆ. ಕೊಲೆ ಮಾಡುವ ಉದ್ದೇಶವನ್ನು ವಾಟ್ಸಾಪ್‌ನ ( WhatsApp) ಬಯೋದಲ್ಲಿ ಹಾಕಿಕೊಂಡಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.
ಸುನೀಲ್ ಕುಮಾರ್, ಅವರ ಪತ್ನಿ ಪೂನಂ ಭಾರತಿ ಮತ್ತು ಅವರ ಕೇವಲ ಒಂದು ಮತ್ತು ಆರು ವರ್ಷದವರು ಇಬ್ಬರು ಹೆಣ್ಣುಮಕ್ಕಳನ್ನು ಗುರುವಾರ ಅಮೇಥಿಯ ಭವಾನಿ ನಗರದಲ್ಲಿರುವ ಅವರ ಮನೆಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಂತರ ಹತ್ಯೆಗೀಡಾದ ಭಾರತಿ 2 ತಿಂಗಳ ಹಿಂದೆ ಚಂದನ್ ವರ್ಮಾ ಎಂಬಾತನ ವಿರುದ್ಧ ದೂರು ನೀಡಿರುವುದು ಬೆಳಕಿಗೆ ಬಂದಿದೆ. ಅದರಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಆತ ಕೊಲೆ ಬೆದರಿಕೆ ಹಾಕಿದ್ದ, ಏನಾದರೂ ಜೀವ ಹಾನಿ ಸಂಭವಿಸಿದರೆ ಆತನೆ ಹೊಣೆಗಾರ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಅಲ್ಲದೇ ಭಾರತಿ ಅವರು ಆಗಸ್ಟ್ 18 ರಂದು ರಾಯ್ ಬರೇಲಿಯ ಆಸ್ಪತ್ರೆಗೆ ಹೋಗಿದ್ದರು. ಈ ವೇಳೆ ವರ್ಮಾ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ತನ್ನ ಮತ್ತು ತನ್ನ ಪತಿಗೆ ಕಪಾಳಮೋಕ್ಷ ಮಾಡಿದ್ದ. ಇದನ್ನು ಯಾರಿಗಾದರೂ ತಿಳಿಸಿದರೆ ನಿನ್ನನ್ನು ಸಾಯಿಸುತ್ತೇನೆ ಎಂದಿದ್ದ. ಇದಕ್ಕೂ ಮೊದಲು ಸಹ ನನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ನನ್ನ ಕುಟುಂಬ ಅಪಾಯದಲ್ಲಿದೆ ಎಂದು ದೂರು ನೀಡಿದ್ದರು. ಈ ಮಾಹಿತಿ ಆಧಾರದ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದರು.
ಪೊಲೀಸರು ಚಂದನ್ ವರ್ಮಾನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಸೆಪ್ಟೆಂಬರ್ 12 ಆತನ ವಾಟ್ಸಾಪ್ ಬಯೋದಲ್ಲಿ ʻ5 ಜನರು ಸಾಯುತ್ತಾರೆ, ನಾನು ಶೀಘ್ರದಲ್ಲೇ ನಿಮಗೆ ತೋರಿಸುತ್ತೇನೆʼಎಂದು ಬರೆದುಕೊಂಡಿರುವುದು ಪತ್ತೆಯಾಗಿದೆ. ಹತ್ಯೆ ಬಳಿಕ ಅದನ್ನು ಆತ ಸ್ಕ್ರೀನ್‌ಶಾಟ್ ಮಾಡಿ ಇಟ್ಟುಕೊಂಡಿದ್ದ. ಇದು ಆತನ ಯೋಜನೆಯನ್ನು ಬಯಲು ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆಯುವ ಮುನ್ನ ಅಮೇಥಿಯ ಪ್ರಸಿದ್ಧ ದೇವಸ್ಥಾನಕ್ಕೂ ಭೇಟಿ ನೀಡಿದ್ದ. ಅಲ್ಲದೇ ಹತ್ಯೆ ಬಳಿಕ ಆತ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶ ಹೊಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಚಂಡೀಗಢ: ಪ್ರಕರಣ ಒಂದರ ತನಿಖೆಗೆ ಸಂಬಂಧಿಸಿದ ಮಾಹಿತಿ ನೀಡಲು ನಿರಾಕರಿಸಿದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್‍ನ (WhatsApp) ನಿರ್ದೇಶಕ ಮತ್ತು ನೋಡಲ್ ಅಧಿಕಾರಿಗಳ ವಿರುದ್ಧ ಗುರುಗ್ರಾಮ್ (Gurugram) ಪೊಲೀಸರು (Police) ಎಫ್‍ಐಆರ್ ದಾಖಲಿಸಿದ್ದಾರೆ.
ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಆರೋಪದ ಅಡಿಯಲ್ಲಿ ದೂರೊಂದು ದಾಖಲಾಗಿತ್ತು. ಅದರ ತನಿಖೆಯ ಭಾಗವಾಗಿ, ಗುರುಗ್ರಾಮ್ ಪೊಲೀಸರು, ಆರೋಪಿಗಳು ಬಳಸುತ್ತಿದ್ದ ನಾಲ್ಕು ಸಂಖ್ಯೆಗಳ ಬಗ್ಗೆ ಮಾಹಿತಿಗಾಗಿ ವಾಟ್ಸಾಪ್ ನಿರ್ದೇಶಕರ ಬಳಿ ಮಾಹಿತಿ ಕೇಳಿದ್ದರು. ಈ ಸಂಬಂಧ ಇಮೇಲ್ ಮೂಲಕ ನೋಟಿಸ್ ಸಹ ಕಳುಹಿಸಲಾಗಿತ್ತು.
ಪೊಲೀಸರು ಕೇಳಿದ್ದ ಮಾಹಿತಿಯನ್ನು ನೀಡಲು ವಾಟ್ಸಾಪ್ ತಿರಸ್ಕರಿಸಿದೆ. ಈ ನಿರಾಕರಣೆಯು ಕಾನೂನನ್ನು ನಿರ್ಲಕ್ಷಿಸುವ ಉದ್ದೇಶವಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಅದರಂತೆ ಪೊಲೀಸರು ಭಾರತೀಯ ನ್ಯಾಯ ಸಂಹಿತಾ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಇಂದು ಪ್ರಮಾಣವಚನ
ರಾಮನಗರ: ಶಾಸಕ ಇಕ್ಬಾಲ್ ಹುಸೇನ್ (Ikbal Hussain) ಮತ್ತು ಯುವತಿಯ ವಾಟ್ಸಪ್ ವಿಡಿಯೋ ಕಾಲ್ (Whatsapp Video Call) ವೈರಲ್ ಆದ ಬೆನ್ನಲ್ಲೇ ರಾಮನಗರ ಮೂಲದ ಯುವತಿ ಸೆನ್ ಪೊಲೀಸ್ ಠಾಣೆಗೆ (Cyber Economic and Narcotics Crime Police Station) ದೂರು ನೀಡಿದ್ದಾರೆ.
ನನ್ನ ಹಾಗೂ ಶಾಸಕರ ವೀಡಿಯೋವನ್ನ ಅಶ್ಲೀಲವಾಗಿ ಸೃಷ್ಟಿಸಿ ಹರಿಬಿಟ್ಟಿದ್ದಾರೆ. ಫೇಸ್‌ಬುಕ್‌ನಲ್ಲಿ (Facebook) ವೀಡಿಯೋ ಹರಿಬಿಟ್ಟು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಇದರಿಂದ ನನ್ನ ಮಾನಹಾನಿಯಾಗಿದ್ದು ವೀಡಿಯೋ ಹರಿಬಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಇದನ್ನೂ ಓದಿ: ಮತ ಪ್ರಮಾಣ ದಿಢೀರ್ ಹೆಚ್ಚಳ – ಮತ್ತೆ ಇವಿಎಂ ವಿಶ್ವಾಸರ್ಹತೆಯನ್ನು ಪ್ರಶ್ನಿಸಿದ ಮಮತಾ
ಬಾಲಿವುಡ್ (Bollywood) ನಟಿ ಕಂಗನಾ ರಣಾವತ್ (Kangana Ranaut) ವಿವಾದವನ್ನು ಮೈಮೇಲೆ ಎಳೆದುಕೊಳ್ಳುವುದರಲ್ಲಿ ಸದಾ ಮುಂದು. ಮುಲಾಜಿಲ್ಲದೇ ಯಾರ ಬಗ್ಗೆ ಬೇಕಾದರೂ ಮಾತನಾಡಬಲ್ಲ ತಾಕತ್ತು ಅವರಿಗೆ ಇದೆ. ತಮ್ಮ ಸಹ ನಟರ ಮೇಲೂ ಸಾಕಷ್ಟು ಆರೋಪ ಮಾಡಿದ್ದಾರೆ. ಇದೀಗ ಮತ್ತೆ ಬಾಲಿವುಡ್ ಸೆಲೆಬ್ರಿಟಿಗಳ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತಂತೆ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದು, ಸೆಲೆಬ್ರಿಟಿಗಳ ವಾಟ್ಸಪ್ ಹ್ಯಾಕ್ ಮಾಡುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಸೆಲೆಬ್ರಿಟಿಗಳೇ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೆ. ಕೇಂದ್ರ ಸರಕಾರ ಸರಿಯಾದ ತನಿಖೆಯನ್ನು ಮಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಸೆಲೆಬ್ರಿಟಿಗಳ ವಾಟ್ಸಪ್ ಅನ್ನು ಸೆಲೆಬ್ರಿಟಿಗಳೇ ಹ್ಯಾಕ್ ಮಾಡಿ, ಇತರರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎನ್ನುವುದು ಕಂಗನಾ ಗಂಭೀರ ಆರೋಪ. ಕೇವಲ ವಾಟ್ಸಪ್ ಮಾತ್ರವಲ್ಲ ಮೇಲ್ ಕೂಡ ಹ್ಯಾಕ್ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರ ಇದನ್ನು ಗಂಭೀರವಾಘಿ ತೆಗೆದುಕೊಳ್ಳಬೇಕು ಎಂದಿದ್ದಾರೆ.
ಕಂಗನಾ ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ. ಅವರು ಯಾರ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿಲ್ಲವಾದ್ದರಿಂದ ಈ ಕೆಲಸವನ್ನು ಯಾರು ಮಾಡುತ್ತಿದ್ದಾರೆ ಎನ್ನುವ ಅನುಮಾನವಂತೂ ಮೂಡಿದೆ.
ಭಾರತ (India) ಸರ್ಕಾರ ಸೋಶಿಯಲ್ ಮೀಡಿಯಾ ಕಂಪನಿಗಳ ಮೇಲೆ ಹೊಸ ನಿಯಮಗಳನ್ನು ಪರಿಷ್ಕರಿಸಿದ ಬಳಿಕ, ಮೆಸೇಜಿಂಗ್ ಪ್ಲಾಟ್‍ಫಾರ್ಮ್ ವಾಟ್ಸಪ್ (Whatsapp) ಆಗಸ್ಟ್‌ನಲ್ಲಿ ಸುಮಾರು 74.2 ಲಕ್ಷ ಖಾತೆಗಳನ್ನು ನಿಷೇಧಿಸಿದೆ. 2021ರ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ವಾಟ್ಸಪ್ ಈ ನಿರ್ಧಾರ ಕೈಗೊಂಡಿದೆ.
ಹೊಸ ಐಟಿ ನಿಯಮದ (IT Act 2021) ಅನ್ವಯ ಪ್ರತಿ ತಿಂಗಳ ವರದಿ ನೀಡುವ ವಾಟ್ಸಪ್ ಇದೀಗ ಆಗಸ್ಟ್ 2023ರ ಮಾಸಿಕ ವರದಿ ಪ್ರಕಟಿಸಿದೆ. ಈ ವರದಿಯಲ್ಲಿ ಹಿಂದೆಂದಿಗಿಂತಲೂ ಈ ಬಾರಿಯ ಮಾಸಿಕ ವರದಿಯಲ್ಲಿ ಭಾರತೀಯರ ವಾಟ್ಸಪ್ ಖಾತೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಷೇಧಿಸಲಾಗಿದೆ. ಹೊಸ ಐಟಿ ನಿಯಮ 2021ರ ನಿಯಮ 4(1)(ಡಿ) ಯ ಅನುಸಾರವಾಗಿ ವಾಟ್ಸಪ್ ಖಾತೆಗಳನ್ನು ಬ್ಲಾಕ್ ಮಾಡಿದೆ. ಹೀಗೆ ಬ್ಲಾಕ್ ಮಾಡಿದ ಖಾತೆಗಳಲ್ಲಿ ಬಳಕೆದಾರರಿಂದ ಸ್ವೀಕರಿಸಿದ ಕುಂದುಕೊರತೆಗಳ ರಿಪೋರ್ಟ್‌ಗಳು ಸೇರಿವೆ. ಬಳಕೆದಾರರಿಂದ ಪಡೆದ ಕುಂದುಕೊರತೆಗಳಿಗೆ ಪ್ರತಿಕ್ರಿಯೆಯಾಗಿ ಈ ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವರದಿ ಮಾಡಿದೆ.
ಅಹಿತಕರ ಸಂದೇಶ ತಡೆಗಟ್ಟುವಲ್ಲಿ ಮತ್ತು ಎದುರಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ನಮ್ಮ ಸುರಕ್ಷತಾ ವೈಶಿಷ್ಟ್ಯತೆಗಳು ಮತ್ತು ನಿಯಂತ್ರಣಗಳ ಜೊತೆಗೆ ಈ ಪ್ರಯತ್ನಗಳನ್ನು ಮೇಲ್ವಿಚಾರಣೆ ಮಾಡಲು ಎಂಜಿನಿಯರ್‌ಗಳು, ಡೇಟಾ ವಿಜ್ಞಾನಿಗಳು, ವಿಶ್ಲೇಷಕರು, ಸಂಶೋಧಕರು ಮತ್ತು ಕಾನೂನು ತಜ್ಞರನ್ನು ನೇಮಿಸಿಕೊಳ್ಳುವುದಾಗಿ ವಾಟ್ಸಪ್ ತಿಳಿಸಿದೆ.
ಭಾರತೀಯರ ಸಾಂವಿಧಾನಿಕ ಹಕ್ಕುಗಳನ್ನು ರಕ್ಷಿಸಲು ಈ ನಿಯಮಗಳು ಅವಶ್ಯಕವಾಗಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ಹೇಳಿತ್ತು. ಈ ಹೊಸ ಐಟಿ ನಿಯಮಗಳು ಜಾರಿಗೆ ಬಂದ ನಂತರ ಸೋಶಿಯಲ್ ಮೀಡಿಯಾ ಕಂಪನಿಗಳು ಹಾಗೂ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರ ನಡುವೆ ನಿಯಮಗಳಿಗೆ ಹೊಸ ಪರಿಷ್ಕರಣೆಯನ್ನು ಸರ್ಕಾರ ಯಶಸ್ವಿಯಾಗಿ ಮಾಡಿ ಮುಗಿಸಿದೆ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವನ್ನು ಸಂಗ್ರಹಿಸಿ ಮಾಹಿತಿ ಕಲೆಹಾಕಿದೆ.
ವಾಟ್ಸಪ್ ಮೂಲಕ ಸುಳ್ಳು ಸುದ್ದಿ ಮತ್ತು ನಕಲಿ ಸಂದೇಶ ರವಾನೆಯಾಗಿ, ಅದರಿಂದ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವುದನ್ನು ತಡೆಯಲು ಕೇಂದ್ರ ಸರ್ಕಾರ ಮುಂದಾಗಿದೆ. ಅಂತಹ ಸುದ್ದಿಗಳ ಮೂಲ ಪತ್ತೆ ಹಚ್ಚಲು ಕ್ರಮ ಕೈಗೊಳ್ಳುವಂತೆ ವಾಟ್ಸಪ್‍ಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ವಾಟ್ಸಪ್ ಸುಳ್ಳು ಸುದ್ದಿಗಳ ಮೂಲ ಪತ್ತೆ ಹಚ್ಚುವಲ್ಲಿ ವಿಫಲವಾದರೆ ದೇಶದಲ್ಲಿ ವಾಟ್ಸಪ್ ನಿಷೇಧಕ್ಕೆ ಒಳಗಾಗಬಹುದು ಎಂದು ಗಂಭೀರ ಎಚ್ಚರಿಕೆ ನೀಡಲಾಗಿದೆ. ಆದರೆ ಕೇಂದ್ರದ ಬೇಡಿಕೆಗೆ ವಾಟ್ಸಪ್ ಸಮ್ಮತಿ ಸೂಚಿಸಿರಲಿಲ್ಲ. ಬದಲಾಗಿ ಬಳಕೆದಾರರ ಸಂದೇಶವನ್ನು ಕಂಪನಿ ನೋಡುವುದಿಲ್ಲ ಎಂದು ಹೇಳಿಕೊಂಡಿತ್ತು. ಬಳಕೆದಾರರ ವೈಯಕ್ತಿಕ ಮಾಹಿತಿ ಮತ್ತು ಹಿತಾಸಕ್ತಿ ರಕ್ಷಿಸುವುದು ಕಂಪನಿಯ ನಿಯಮವಾಗಿದ್ದು, ಅದನ್ನು ಮೀರಲಾಗದು ಎಂದು ಕಂಪನಿ ಸ್ಪಷ್ಟಪಡಿಸಿತ್ತು.
ವಾಟ್ಸಪ್ ಬಳಸಿ ಕಳುಹಿಸಲಾಗುವ ಎಲ್ಲಾ ಸಂದೇಶಗಳು ಎಂಡ್ ಟು ಎಂಡ್ ಎನ್‍ಕ್ರಿಪ್ಷನ್‍ಗೆ ಒಳಪಟ್ಟಿವೆ. ಇದರಿಂದ ಸಂದೇಶ ಸೋರಿಕೆಯಾಗುವುದಿಲ್ಲ. ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗುವುದಿಲ್ಲ ಎಂದು ವಾಟ್ಸಪ್ ಹೇಳಿತ್ತು. ಆದರೆ ದೇಶದಲ್ಲಿ ಕೆಲವೊಂದು ಪ್ರಕರಣಗಳಲ್ಲಿ ವಾಟ್ಸಪ್ ಮೂಲಕ ಹರಡಲಾದ ಸಂದೇಶಗಳೇ ಗಲಭೆಗೆ ಮೂಲ ಎಂದು ತನಿಖೆಯ ವೇಳೆ ಪತ್ತೆಯಾಗಿತ್ತು. ಹೀಗಾಗಿ ಅದನ್ನು ಪತ್ತೆ ಹಚ್ಚಲು ವಾಟ್ಸಪ್ ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಕೇಂದ್ರ ಸರ್ಕಾರ ವಾದಿಸಿತ್ತು.
ಹೊಸ ಐಟಿ ನಿಯಮ ಜಾರಿಗೆ ಬಂದ ನಂತರ ಅನೇಕ ತಂತ್ರಜ್ಞಾನ ಮಧ್ಯವರ್ತಿಗಳು ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರ್ಕಾರ ಹೇಳಿತ್ತು. ಯಾವುದೇ ನಿರ್ಧಿಷ್ಟ ಕಂಪನಿ ಅಥವಾ ನಿರ್ಧಿಷ್ಟ ವಿಚಾರವನ್ನು ಹೇಳದೇ ಕೇವಲ ಮಾಹಿತಿಯನ್ನು ಉಲ್ಲೇಖಿಸಿತ್ತು. ಈ ವಿಚಾರವಾಗಿ ಟ್ವಿಟ್ಟರ್ ಮತ್ತು ಕೇಂದ್ರ ಸರ್ಕಾರದ ನಡುವೆ ತಿಕ್ಕಾಟ ನಡೆಯುತ್ತಲೇ ಇದೆ. ಇದರೊಂದಿಗೆ ಫೇಸ್‍ಬುಕ್ ಮತ್ತು ಯೂಟ್ಯೂಬ್ ನಡುವೆಯೂ ಆಗಾಗ ತಿಕ್ಕಾಟ ನಡೆಯುತ್ತಿದೆ.
ಈ ಹಿಂದೆ ದೆಹಲಿಯಲ್ಲಿ ನಡೆದ ರೈತರ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿಯನ್ನು ಹರಡುತ್ತಿರುವ ಖಾತೆಗಳ ಮೇಲೆ ಕ್ರಮಕೈಗೊಳ್ಳುವಂತೆ ಸರ್ಕಾರ ಟ್ವಿಟ್ಟರ್‌ರ್‌ಗೆ ಹೇಳಿತ್ತು. ಆದರೆ ಟ್ವಿಟ್ಟರ್ ಸರ್ಕಾರ ಹೇಳಿದ ಆದೇಶಗಳನ್ನು ಸಂಪೂರ್ಣವಾಗಿ ಅನುಸರಿಸಲು ನಿರಾಕರಿಸಿತ್ತು. ಇದರಿಂದ ಟ್ವಿಟ್ಟರ್ ಭಾರತದಲ್ಲಿ ಹಿನ್ನಡೆಯನ್ನು ಕೂಡ ಅನುಭವಿಸುತ್ತಿದೆ.
ಏನಿದು ಮಾಹಿತಿ ತಂತ್ರಜ್ಞಾನ ಕಾಯ್ದೆ – 2021
ಮಾಹಿತಿ ತಂತ್ರಜ್ಞಾನ ಕಾಯ್ದೆ ಡಿಜಿಟಲ್ ಮಾಧ್ಯಮ ನೀತಿ ಸಂಹಿತೆಯಾಗಿದೆ. 2021 ಭಾರತ ಸರ್ಕಾರ ಇದನ್ನು ತಿದ್ದುಪಡಿ ಮಾಡಿತು.
ಈ ಹೊಸ ನಿಯಮದ ಪ್ರಕಾರ ದೇಶದಲ್ಲಿ ಸಾಮಾಜಿಕ ಜಾಲತಾಣಗಳು ಕುಂದುಕೊರತೆ ನಿವಾರಣಾ ಕಚೇರಿಯನ್ನು ಸ್ಥಾಪಿಸುವುದು ಕಡ್ಡಾಯವಾಗಿದೆ. ಇದರ ಅನ್ವಯ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅಧಿಕಾರಿ ಮತ್ತು ಸಂಪರ್ಕ ಅಧಿಕಾರಿಯನ್ನು ನೇಮಿಸಬೇಕು. ಅವರು ಕಾನೂನು ಜಾರಿ ಸಂಸ್ಥೆಗಳೊಂದಿಗೆ 24/7 ಸಂಪರ್ಕದಲ್ಲಿರಬೇಕು. ದಾಖಲಾದ ದೂರುಗಳನ್ನು ಅವರು 15 ದಿನಗಳಲ್ಲಿ ವಿಲೇವಾರಿ ಮಾಡಬೇಕು.
ಸಾಮಾಜಿಕ ಮಾಧ್ಯಮ ಬಳಕೆದಾರರ ಘನತೆಗೆ ವಿರುದ್ಧವಾಗಿ ದೂರುಗಳಿದ್ದರೆ, ನಿರ್ದಿಷ್ಟವಾಗಿ ಮಹಿಳೆಯರು – ವ್ಯಕ್ತಿಗಳ ಖಾಸಗಿ ಭಾಗಗಳು, ನಗ್ನತೆ ಅಥವಾ ಲೈಂಗಿಕ ಕ್ರಿಯೆ ಇತ್ಯಾದಿಗಳ ಬಗ್ಗೆ ದೂರುಗಳಿದ್ದರೆ 24 ಗಂಟೆಗಳ ಒಳಗೆ ಅಂತಹ ವಿಷಯವನ್ನು ತೆಗೆದುಹಾಕಬೇಕು. ಸಾಮಾಜಿಕ ಮಾಧ್ಯಮ ವೇದಿಕೆಗಳು ಸ್ವೀಕರಿಸಿದ ದೂರುಗಳ ಸಂಖ್ಯೆ ಮತ್ತು ಪರಿಹಾರದ ಸ್ಥಿತಿಯ ಮಾಸಿಕ ವರದಿಯನ್ನು ಸಲ್ಲಿಸಬೇಕು.
ಸುದ್ದಿ ಪ್ರಕಾಶಕರಿಗೆ ಮೂರು ಹಂತದ ನಿಯಂತ್ರಣವಿರುತ್ತದೆ. ಸ್ವಯಂ ನಿಯಂತ್ರಣ, ಸ್ವಯಂ-ನಿಯಂತ್ರಣ ಸಂಸ್ಥೆ, ಇದು ನಿವೃತ್ತ ನ್ಯಾಯಾಧೀಶರು ಅಥವಾ ಅಧಿಕಾರಿಗಳ ನೇತೃತ್ವ ವಹಿಸುತ್ತದೆ. ಇದರ ಜೊತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೇಲ್ವಿಚಾರಣೆ ಇರಲಿದೆ.
50 ಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು `ಉನ್ನತ ಸಾಮಾಜಿಕ ಮಾಧ್ಯಮಗಳು’ ಎಂದು ಪರಿಗಣಿಸಲಾಗುತ್ತದೆ. ಅವರು ನಿಯಮಗಳನ್ನು ಅನುಸರಿಸದಿದ್ದರೆ ನಿಷೇಧವನ್ನು ಎದುರಿಸಬೇಕಾಗುತ್ತದೆ. ಅಲ್ಲದೇ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ.
ಮಾಹಿತಿ ತಂತ್ರಜ್ಞಾನ ಕಾಯಿದೆ – 2000
ಇದು ಇ-ಕಾಮರ್ಸ್ ಮತ್ತು ಸೈಬರ್ ಕ್ರೈಮ್‍ಗಳ ಕುರಿತು ಪ್ರತಿಯೊಂದು ದೇಶವೂ ತನ್ನದೇ ಆದ ಕಾನೂನುಗಳನ್ನು ಹೊಂದಲು ಕಡ್ಡಾಯವಾಯಿತು. ಇದರ ನಂತರ ಭಾರತ ಸರ್ಕಾರ 2000 ರಲ್ಲಿ ಐಟಿ ಕಾಯ್ದೆಯನ್ನು ಅಂಗೀಕರಿಸಿತು. ಭಾರತವು ಸೈಬರ್ ಅಪರಾಧಗಳಿಗೆ ಕಾನೂನನ್ನು ಅಂಗೀಕರಿಸಿದ ವಿಶ್ವದ 12 ನೇ ರಾಷ್ಟ್ರವಾಯಿತು.
ಈ ಕಾಯಿದೆಯ ಮುಖ್ಯ ಉದ್ದೇಶ:
ಎಲೆಕ್ಟ್ರಾನಿಕ್ ವಿಧಾನಗಳ ಮೂಲಕ ಮಾಡುವ ಎಲ್ಲಾ ವಹಿವಾಟುಗಳನ್ನು ರಕ್ಷಿಸುವುದು. ಯಾವುದೇ ರೀತಿಯ ಕಾನೂನು ದೃಢೀಕರಣಕ್ಕಾಗಿ ಬಳಸಲಾಗುವ ಡಿಜಿಟಲ್ ಸಹಿಗಳನ್ನು ಗುರುತಿಸುವುದು. ಸೈಬರ್ ವಿಚಾರವಾಗಿ ಮದ್ಯವರ್ತಿಗಳ ನಿಯಂತ್ರಣ ಮತ್ತು ಸೈಬರ್ ಅಪರಾಧದಿಂದ ನಾಗರಿಕರನ್ನು ರಕ್ಷಿಸುವುದಾಗಿದೆ.