Tag: WestIndies

  • ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್‌ ಪಡೆದು ಅಶ್ವಿನ್‌ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ

    ಒಂದೇ ಮ್ಯಾಚ್‌ನಲ್ಲಿ 12 ವಿಕೆಟ್‌ ಪಡೆದು ಅಶ್ವಿನ್‌ ಸಾಧನೆ – ವಿಂಡೀಸ್ ವಿರುದ್ಧ ಭಾರತಕ್ಕೆ ಜಯದ ಮುನ್ನಡೆ

    ಡೊಮಿನಿಕಾ: ಯಶಸ್ವಿ ಜೈಸ್ವಾಲ್‌ (Yashasvi Jaiswal, ರೋಹಿತ್‌ ಶರ್ಮಾ (Rohit Sharma) ಶತಕದ ಬ್ಯಾಟಿಂಗ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ಸ್ಪಿನ್‌ ಮೋಡಿ ನೆರವಿನಿಂದ ಭಾರತ, ವೆಸ್ಟ್‌ ಇಂಡೀಸ್‌ ವಿರುದ್ಧ ಮೊದಲ ಟೆಸ್ಟ್‌ ಪಂದ್ಯದಲ್ಲಿ 141 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಟೀಂ ಇಂಡಿಯಾ ಪರ ಮೊದಲ ಟೆಸ್ಟ್‌ ಮ್ಯಾಚ್‌ನಲ್ಲೇ 12 ವಿಕೆಟ್‌ ಉಡೀಸ್‌ ಮಾಡಿರುವ ಅಶ್ವಿನ್‌ (Ravichandran Ashwin) ಮತ್ತೊಂದು ದಾಖಲೆ ಬರೆದಿದ್ದಾರೆ. ಇದನ್ನೂ ಓದಿ: ತೂಕದಿಂದಲೇ ಗಮನ ಸೆಳೆದ ಕಾರ್ನ್‍ವಾಲ್ ವಿಂಡೀಸ್‌ ತಂಡಕ್ಕೆ ಆಯ್ಕೆಯಾಗಿದ್ದು ಹೇಗೆ?

    ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಚಾಂಪಿಯನ್‌ ಶಿಪ್‌ (WTC) ಫೈನಲ್‌ ಪಂದ್ಯದಲ್ಲಿ ಬೆಂಚ್‌ ಕಾದಿದ್ದ ಅಶ್ವಿನ್‌, ವೆಸ್ಟ್ ಇಂಡೀಸ್‌ (West Indies) ವಿರುದ್ಧ ಮೊದಲ ಪಂದ್ಯದಲ್ಲಿಯೇ ಮಿಂಚಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ 24.3 ಓವರ್‌ಗಳಲ್ಲಿ 60 ರನ್‌ ನೀಡಿ 5 ವಿಕೆಟ್‌ ಪಡೆದಿದ್ದ ಅಶ್ವಿನ್‌, 2ನೇ ಇನ್ನಿಂಗ್ಸ್‌ನಲ್ಲಿ 21.3 ಓವರ್‌ಗಳಲ್ಲಿ 71 ರನ್‌ ನೀಡಿ 7 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ಟೆಸ್ಟ್ ವೃತ್ತಿ ಜೀವನದಲ್ಲಿ 6ನೇ ಬಾರಿ ಟೆಸ್ಟ್‌ ಕ್ರಿಕೆಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ 5 ವಿಕೆಟ್‌ ಸಾಧನೆ ಮಾಡಿದ ಬೌಲರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: Asian Games 2023ಗೆ ಟೀಂ ಇಂಡಿಯಾ ರೆಡಿ – ರಿಂಕುಗೆ ಕೊನೆಗೂ ಸಿಕ್ತು ಚಾನ್ಸ್, ಫಸ್ಟ್ ರಿಯಾಕ್ಷನ್ ಏನು?

    150, 130ಕ್ಕೆ ಆಲೌಟ್‌:
    ಮೊದಲ ಇನ್ನಿಂಗ್ಸ್‌ನಲ್ಲಿ 150 ರನ್‌ ಗಳಿಗೆ ವಿಕೆಟ್‌ ಕಳೆದುಕೊಂಡಿದ್ದ ವಿಂಡೀಸ್‌ ತಂಡ 2ನೇ ಇನ್ನಿಂಗ್ಸ್‌ನಲ್ಲೂ ಭಾರತದ ಸ್ಪಿನ್‌ ಬೌಲರ್‌ಗ ದಾಳಿಗೆ ಮಕಾಡೆ ಮಲಗಿತು. ಇದರಿಂದ ಐದು ದಿನಗಳ ಕಾಲ ನಡೆಯಬೇಕಿದ್ದ ಮೊದಲ ಟೆಸ್ಟ್‌ ಪಂದ್ಯ ಮೂರೇ ದಿನಗಳಲ್ಲಿ ಮುಕ್ತಾಯವಾಯಿತು.

    ದ್ವಿತೀಯ ಇನಿಂಗ್ಸ್ ಆರಂಭಿಸಿದ ವೆಸ್ಟ್ ಇಂಡೀಸ್‌ ತಂಡಕ್ಕೆ ಮತ್ತೊಮ್ಮೆ ಅಶ್ವಿನ್‌ ತಮ್ಮ ಸ್ಪಿನ್‌ ಮೋಡಿಯಿಂದ ಆಘಾತ ನೀಡಿದರು. ವಿಂಡೀಸ್‌ ಪರ ಅಲಿಕ್ ಅಥಾನಾಜೆ 28 ರನ್‌, ಜೇಸನ್‌ ಹೋಲ್ಡರ್‌ ಅಜೇಯ 20 ರನ್‌ ಗಳಿಸಿದ್ದು ಬಿಟ್ಟರೆ ಉಳಿದೆಲ್ಲರೂ 20 ರನ್‌ಗಳ ಗಡಿ ದಾಟಲೂ ಆಗದೇ ವಿಕೆಟ್‌ ಕೈಚೆಲ್ಲಿದರು. ಅಂತಿಮವಾಗಿ 50.3 ಓವರ್‌ಗಳಿಗೆ ವಿಂಡೀಸ್‌ ತಂಡ ಕೇವಲ 130 ರನ್‌ಗಳಿಗೆ ಆಲೌಟ್‌ ಆಯಿತು. ಭಾರತ 141 ರನ್‌ಗಳಿಂದ ಗೆದ್ದು ಬೀಗಿತು. ಇದಕ್ಕೂ ಮುನ್ನ ಪ್ರಥಮ ಇನಿಂಗ್ಸ್‌ನಲ್ಲಿ ವೆಸ್ಟ್ ಇಂಡೀಸ್‌ ಕೇವಲ 150 ರನ್‌ಗಳಿಗೆ ಆಲ್‌ಔಟ್‌ ಆಗಿತ್ತು.

    ಇನ್ನೂ 2ನೇ ದಿನದಾಟದಲ್ಲಿ ಚೊಚ್ಚಲ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ 3ನೇ ದಿನ ಚೊಚ್ಚಲ ದ್ವಿಶತಕ ಸಿಡಿಸಿ ಹಲವು ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದರು. ಆದ್ರೆ 387 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 16 ಬೌಂಡರಿಗಳೊಂದಿಗೆ 171 ರನ್‌ ಗಳಿಸಿ ಆಡುತ್ತಿದ್ದಾಗ ಸುಲಭ ಕ್ಯಾಚ್‌ಗೆ ತುತ್ತಾದರು. ಆ ನಂತರ ವಿರಾಟ್‌ ಕೊಹ್ಲಿ 182 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 76 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ರವೀಂದ್ರ ಜಡೇಜಾ ಅಜೇಯ 37 ರನ್‌, ಇಶಾನ್‌ ಕಿಶನ್‌ ಅಜೇಯ 1 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. 3ನೇ ದಿನ ಕ್ರೀಸ್‌ಗಿಳಿದ ಉಪ ನಾಯಕ ಅಜಿಂಕ್ಯ ರಹಾನೆ ಕೇವಲ 3 ರನ್‌ಗಳಿಗೆ ಔಟಾಗಿ ನಿರಾಸೆ ಅನುಭವಿಸಿದರು.

    ಸಂಕ್ಷಿಪ್ತ ಸ್ಕೋರ್‌
    ವೆಸ್ಟ್‌ ಇಂಡೀಸ್‌ ಮೊದಲ ಇನ್ನಿಂಗ್ಸ್‌ 150/10
    ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್‌ 421/5ಡಿ
    ವೆಸ್ಟ್‌ ಇಂಡೀಸ್‌ 2ನೇ ಇನ್ನಿಂಗ್ಸ್‌ 130/10

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

    `ಸೂರ್ಯ’ನ ಶಾಖಕ್ಕೆ ಕರಗಿದ ವಿಂಡೀಸ್ – ಭಾರತಕ್ಕೆ 7 ವಿಕೆಟ್‌ಗಳ ಭರ್ಜರಿ ಜಯ

    ಟ್ರೆನಿನಾಡ್: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಅಬ್ಬರ ಹಾಗೂ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಬಲದಿಂದ ಭಾರತ ತಂಡ 3ನೇ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು 7 ವಿಕೆಟ್ ಭರ್ಜರಿ ಸಾಧಿಸಿದೆ.

    ಇಲ್ಲಿನ ವಾರ್ನರ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿ, ಭಾರತಕ್ಕೆ 165 ರನ್‌ಗಳ ಗುರಿ ನೀಡಿತು. ಸಾಧಾರಣ ರನ್‌ಗಳ ಗುರಿ ಬೆನ್ನತ್ತಿದ ಭಾರತ 19 ಓವರ್‌ಗಳಲ್ಲೇ 3 ವಿಕೆಟ್ ನಷ್ಟಕ್ಕೆ 165 ರನ್‌ಗಳಿಸಿ ಮುನ್ನಡೆ ಸಾಧಿಸಿತು. ರೋಹಿತ್ ಶರ್ಮಾ ಬಳಗ ಈ ಗೆಲುವಿನ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-1ರ ಮುನ್ನಡೆ ಸಾಧಿಸಿದೆ.

    https://twitter.com/Abdullah__Neaz/status/1554541514750959616

    165 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆರಂಭಿಕ ಆಘಾತ ಎದುರಾಯಿತು. ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಅವರು ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ 11 ರನ್‌ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

    ಈ ವೇಳೆ ಮತ್ತೊಬ್ಬ ಆರಂಭಿಕನಾಗಿದ್ದ ಸೂರ್ಯಕುಮಾರ್ ಯಾದವ್‌ಗೆ 2ನೇ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಸಾಥ್ ನೀಡಿದರು. ಸೂರ್ಯಕುಮಾರ್ ಮತ್ತು ಶ್ರೇಯಸ್ ಅಯ್ಯರ್ 86 ರನ್ ಜೊತೆಯಾಟ ಆಡಿದರು.

    ವಿಂಡೀಸ್ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಸೂರ್ಯಕುಮಾರ್ 8 ಬೌಂಡರಿ ಮತ್ತು 4 ಸಿಕ್ಸರ್ ಚಚ್ಚಿದರು. ಡೊಮಿನಿಕ್ ಡ್ರೇಕ್ಸ್ ಎಸೆತದಲ್ಲಿ ಔಟಾಗುವ ಮುನ್ನ ಅವರು ತಂಡವನ್ನು ಉತ್ತಮ ಸ್ಥಿತಿಗೆ ತಂದು ನಿಲ್ಲಿಸಿದ್ದರು. ಇದನ್ನೂ ಓದಿ: ಮೆಕಾಯ್ ಮ್ಯಾಜಿಕ್, 2ನೇ T20ಯಲ್ಲಿ ವಿಂಡೀಸ್‌ಗೆ ರೋಚಕ ಜಯ – ಹೋರಾಡಿ ಸೋತ ಭಾರತ

    ಮಧ್ಯಮ ಕ್ರಮಾಂಕದಲ್ಲಿ ಟೀಂ ಇಂಡಿಯಾಕ್ಕೆ ಆಸರೆಯಾದ ರಿಷಭ್ ಪಂತ್ 26 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ನೊಂದಿಗೆ ಅಜೇಯ 33 ರನ್‌ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ದೀಪಕ್ ಹೂಡಾ ಅಜೇಯ 10 ಹಾಗೂ ಹಾರ್ದಿಕ್ ಪಾಂಡ್ಯ 4 ರನ್ ಗಳಿಸಿದರು. ಟೀಂ ಇಂಡಿಯಾ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ 4 ಓವರ್‌ಗಳಲ್ಲಿ 35 ರನ್ ನೀಡಿ 2 ವಿಕೆಟ್ ಉರುಳಿಸಿದರು. ಹಾರ್ದಿಕ್ ಪಾಂಡ್ಯ, ಅರ್ಶ್ದೀಪ್ ಸಿಂಗ್ ತಲಾ ಒದೊಂದು ವಿಕೆಟ್ ಪಡೆದರು.

    ಮೇಯರ್ಸ್ ಆಸರೆ: ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ ಕೈಲ್ ಮೇಯರ್ಸ್ ಅವರ ಅರ್ಧಶತಕದ ನೆರವಿನಿಂದ ಉತ್ತಮ ಮೊತ್ತ ಕಲೆಹಾಕಿತ್ತು. 50 ಎಸೆತಗಳನ್ನು ಎದುರಿಸಿದ ಮೇಯರ್ಸ್ 8 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 73 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಬ್ರೆಂಡನ್ ಕಿಂಗ್ 20 ರನ್, ನಾಯಕ ನಿಕೊಲಸ್ ಪೂರನ್ 22 ರನ್ ಸೇರಿಸಿ ತಂಡಕ್ಕೆ ಆಸರೆಯಾದರು.

    ಒಟ್ಟಿನಲ್ಲಿ ಟೀಂ ಇಂಡಿಯಾವನ್ನು ಕಟ್ಟಿಹಾಕುವಲ್ಲಿ ವೆಸ್ಟ್ ಇಂಡೀಸ್ ಬೌಲರ್‌ಗಳು ವಿಫಲವಾದ್ದರಿಂದ ಗೆಲುವು ಟೀಂ ಇಂಡಿಯಾ ಪಾಲಾಯಿತು.

    Live Tv
    [brid partner=56869869 player=32851 video=960834 autoplay=true]

  • ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

    ಪೋಲಾರ್ಡ್ ವಿದಾಯ ಹೇಳಿದ್ದು ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ: ಕ್ರಿಸ್‌ಗೇಲ್

    ಮುಂಬೈ: 15 ವರ್ಷಗಳ ಕಾಲ ವೆಸ್ಟ್ಇಂಡೀಸ್ ತಂಡದಲ್ಲಿ ಕ್ರಿಕೆಟ್ ಆಡಿದ 34 ವರ್ಷದ ಕೀರನ್ ಪೊಲಾರ್ಡ್ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದು, ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ಕ್ರಿಕೆಟರ್‌ಗಳು ಅಭಿನಂದನೆ ಸಲ್ಲಿಸಿದ್ದಾರೆ. ತಮ್ಮ ಜಾಲತಾಣಗಳಲ್ಲಿ ಪೊಲಾರ್ಡ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ವಿದಾಯದ ಶುಭಾಶಯ ಕೋರಿದ್ದಾರೆ.

    IPL 2022 MI (1)

    ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಸಹ ತಮ್ಮ ಟ್ವೀಟ್‌ನಲ್ಲಿ ಪೋಲಾರ್ಡ್ ಅವರ ಫೋಟೋ ಹಂಚಿಕೊಂಡಿದ್ದು, ಅವರನ್ನು `ಆಲ್‌ರೌಂಡರ್, ಚಾಲೆಂಜರ್, ಫೈಟರ್’ ಎಂದು ಕರೆದಿದ್ದಾರೆ. ಇದನ್ನೂ ಓದಿ: ಡೆಲ್ಲಿ ದರ್ಬಾರ್‌ಗೆ ಪಂಜಾಬ್ ಪಂಚರ್ – 10 ಓವರ್‌ಗಳಲ್ಲಿ ಟಾರ್ಗೆಟ್ ಉಡೀಸ್

    ವೆಸ್ಟ್ಇಂಡೀಸ್ ತಂಡದ ಕ್ರಿಕೆಟಿಗ ಕ್ರಿಸ್‌ಗೇಲ್, ನನಗಿಂತಲೂ ಮುಂಚಿತವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿರುವುದು ನನಗೆ ನಂಬಲಾಗುತ್ತಿಲ್ಲ. ನಿಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಅಭಿನಂದನೆಗಳು. ನಿಮ್ಮ ಜೊತೆಯಲ್ಲಿ ಆಡಿದ ಆಟಗಳು ತುಂಬಾ ಚೆನ್ನಾಗಿವೆ ಎಂದು ನೆನಪಿಸಿಕೊಂಡಿದ್ದಾರೆ.

    ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ಪರ ಪೊಲಾರ್ಡ್ ಅವರು ಆಡುತ್ತಿದ್ದಾರೆ. T20 ಫ್ರಾಂಚೈಸಿ ಹಾಗೂ T-10 ಲೀಗ್ ಟೂರ್ನಿಗಳಲ್ಲೂ ತಮ್ಮ ಆಟ ಮುಂದುವರಿಸಲಿದ್ದಾರೆ. ಬಹಳಷ್ಟು ಯೋಚಿಸಿದ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರ ಕೈಗೊಂಡಿದ್ದೇನೆ ಎಂದು ಅವರು ಮಾಧ್ಯಮಗಳ ಮೂಲಕ ತಿಳಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್-2 ಡೈಲಾಗ್ ಮೂಲಕ ಮುಂಬೈ ಇಂಡಿಯನ್ಸ್ ತಂಡಕ್ಕೆ ವ್ಯಂಗ್ಯ

    Kieron Pollard a

    34 ವರ್ಷ ವಯಸ್ಸಿನ ಪೊಲಾರ್ಡ್ 2007ರಲ್ಲಿ ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಕೊನೆಯ ಸರಣಿಯನ್ನು ಭಾರತ ತಂಡದ ವಿರುದ್ಧ ಆಡಿದರು. ಈವರೆಗೆ 123 ಏಕದಿನ ಪಂದ್ಯಗಳು ಹಾಗೂ ಹಾಗೂ 101 ಟಿ20 ಪಂದ್ಯಗಳಲ್ಲಿ ಮಿಂಚಿರುವ ಪೊಲಾರ್ಡ್ ಏಕದಿನ ಪಂದ್ಯಗಳಲ್ಲಿ 2706 (13 ಅರ್ಧ ಶತಕ, 3 ಶತಕ) ಹಾಗೂ T20 ಪಂದ್ಯಗಳಲ್ಲಿ 1569 ರನ್ (6 ಅರ್ಧಶತಕ) ಗಳನ್ನು ಗಳಿಸಿದ್ದಾರೆ. ಏಕದಿನ ಪಂದ್ಯದಲ್ಲಿ 119 ಗರಿಷ್ಠ ರನ್ ಗಳಿಸಿರುವ ಅವರು T20 ನಲ್ಲಿ 75 ಗರಿಷ್ಠ ರನ್‌ಗಳನ್ನು ಪೇರಿಸಿದ್ದಾರೆ.

    ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿರುವ ಅವರು, ಅನೇಕ ಪಂದ್ಯಗಳಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಗೆಲುವಿನ ದಡ ಸೇರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟಿಗರ ಸ್ಪೋಟಕ ಆಟಗಾರರ ಪಟ್ಟಿಯಲ್ಲೂ ಸ್ಥಾನ ಗಳಿಸಿದ್ದಾರೆ.

  • ಶತಮಾನದ ಅದ್ಭುತ ಕ್ಯಾಚ್ – ಎತ್ತರಕ್ಕೆ ಜಿಗಿದು ಬೌಂಡರಿ ಬಳಿ ಒಂದೇ ಕೈಯಲ್ಲಿ ಹಿಡಿದ ಹರ್ಮನ್‌ಪ್ರೀತ್

    ಶತಮಾನದ ಅದ್ಭುತ ಕ್ಯಾಚ್ – ಎತ್ತರಕ್ಕೆ ಜಿಗಿದು ಬೌಂಡರಿ ಬಳಿ ಒಂದೇ ಕೈಯಲ್ಲಿ ಹಿಡಿದ ಹರ್ಮನ್‌ಪ್ರೀತ್

    ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಹರ್ಮನ್‌ಪ್ರೀತ್ ಕೌರ್ ಅದ್ಭುತ ಕ್ಯಾಚ್ ಹಿಡಿದು ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ.

    ಹರ್ಮನ್‌ಪ್ರೀತ್ ಕೌರ್ ವಿಂಡೀಸ್ ನಾಯಕಿ ಸ್ಟೆಫಾನಿ ಟೇಲರ್ ಅವರ ಕ್ಯಾಚನ್ನು ಬೌಂಡರಿ ಬಳಿ ಹಾರಿ ಹಿಡಿದಿದ್ದಾರೆ. ಜೂಲನ್ ಗೋಸ್ವಾಮಿ ಎಸೆದ 50ನೇ ಓವರಿನ ಕೊನೆಯ ಎಸೆತವನ್ನು 94 ರನ್(91 ಎಸೆತ, 8 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ಸ್ಟೆಫಾನಿ ಟೇಲರ್ ಸಿಕ್ಸ್ ಹೊಡೆಯುಲು ಲಾಂಗ್ ಆನ್ ಕಡೆ ಬಲವಾಗಿ ಹೊಡೆದಿದ್ದರು. ಈ ವೇಳೆ ಓಡಿಕೊಂಡು ಬಂದ ಹರ್ಮನ್‌ಪ್ರೀತ್ ಕೌರ್ ಹಾರಿ ಎಡಗೈಯಲ್ಲಿ ಹಿಡಿದು ಬೌಂಡರಿ ಗೆರೆಯ ಬಳಿ ಬಿದ್ದರು. ಕೆಳಗಡೆ ಬಿದ್ದರೂ ಬಾಲನ್ನು ಮಾತ್ರ ಕೈಯಿಂದ ಬಿಟ್ಟಿರಲಿಲ್ಲ. ಒಂದು ವೇಳೆ ಈ ಕ್ಯಾಚ್ ಹಿಡಿಯದೇ ಇದ್ದರೆ ಸಿಕ್ಸ್ ಹೊಡೆಯುವ ಮೂಲಕ ಸ್ಟೆಫಾನಿ ಟೇಲರ್ ಶತಕ ಹೊಡೆಯುತ್ತಿದ್ದರು.

    ಹರ್ಮನ್‌ಪ್ರೀತ್ ಕೌರ್ ಹಿಡಿದ ಕ್ಯಾಚ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಈ ಶತಮಾನದ ಅದ್ಭುತ ಕ್ಯಾಚ್, ಪುರುಷರಿಂದಲೂ ಈ ರೀತಿಯ ಕ್ಯಾಚ್ ಹಿಡಿಯಲು ಸಾಧ್ಯವಿಲ್ಲ ಎಂದು ಬಣ್ಣಿಸಿ ಕಮೆಂಟ್ ಮಾಡಿ ಹರ್ಮನ್ ಪ್ರೀತ್ ಅವರನ್ನು ಅಭಿನಂದಿಸುತ್ತಿದ್ದಾರೆ.

    ಹರ್ಮನ್ ಪ್ರೀತ್ ಉತ್ತಮ ಕ್ಯಾಚ್ ಹಿಡಿದರೂ ಭಾರತ ಈ ಪಂದ್ಯವನ್ನು ಕೇವಲ 1 ರನ್ ಅಂತರದಿಂದ ಸೋತಿದೆ. ವಿಂಡೀಸ್ 7 ವಿಕೆಟ್ ನಷ್ಟಕ್ಕೆ 225 ರನ್ ಗಳಿಸಿದರೆ ಭಾರತ 224 ರನ್ ಗಳಿಗೆ ಆಲೌಟ್ ಆಯ್ತು. ಒಂದು ರನ್ ನಿಂದ ಪಂದ್ಯ ಗೆದ್ದಿರುವ ವಿಂಡೀಸ್ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಭಾರತದ ಪರ ಆರಂಭಿಕ ಆಟಗಾರ್ತಿಯರಾದ ಪ್ರಿಯಾ ಪುನಿಯಾ 75 ರನ್(107 ಎಸೆತ, 6 ಬೌಂಡರಿ) ಜೆಮಿಮಾ ರೊಡ್ರಿಗಾಸ್ 41 ರನ್(67 ಎಸೆತ, 6 ಬೌಂಡರಿ,1 ಸಿಕ್ಸರ್) ಹೊಡೆದು ಔಟಾದರು. ಫೀಲ್ಡಿಂಗ್‍ನಲ್ಲಿ ಮಿಂಚಿದ ಹರ್ಮನ್ ಪ್ರೀತ್ 12 ಎಸೆತಗಳಲ್ಲಿ 5 ರನ್ ಗಳಿಸಿ ಕ್ಯಾಚ್ ನೀಡಿ ಹೊರ ನಡೆದರು.