Tag: West Indies

  • ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆದ್ದ ವಿಂಡೀಸ್‌ – ಭಾರತಕ್ಕೆ ವಿರೋಚಿತ ಸೋಲು

    ಕೊನೆಯಲ್ಲಿ ಸಿಕ್ಸರ್‌, ಬೌಂಡರಿ ಸಿಡಿಸಿ ಗೆದ್ದ ವಿಂಡೀಸ್‌ – ಭಾರತಕ್ಕೆ ವಿರೋಚಿತ ಸೋಲು

    ಜಾರ್ಜ್‌ಟೌನ್ (ಗಯಾನಾ): ಕೊನೆಯಲ್ಲಿ ಅಕೇಲ್ ಹೊಸೈನ್ (Akeal Hosein) ಹಾಗೂ ಅಲ್ಜರಿ ಜೋಸೆಫ್‌ (Alzarri Joseph) ಬ್ಯಾಟಿಂಗ್‌ ನೆರವಿನಿಂದ ವೆಸ್ಟ್‌ ಇಂಡೀಸ್‌ (West Indies) ಭಾರತದ ವಿರುದ್ಧ ಸತತ 2ನೇ ಜಯ ಸಾಧಿಸಿತು. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಸಾಧಿಸಿದೆ. ಇನ್ನೂ ಮೊದಲ ಸೋಲಿನ ಸೇಡು ತೀರಿಸಿಕೊಳ್ಳುವ ಕಾತುರದಲ್ಲಿದ್ದ ಟೀಂ ಇಂಡಿಯಾ ವಿರೋಚಿತ ಸೋಲನುಭವಿಸಿದೆ.

    ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ (Team India) 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 152 ರನ್‌ ಗಳಿಸಿತ್ತು. ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ ನಿಗದಿತ 18.5 ಓವರ್‌ಗಳಲ್ಲೇ 8 ವಿಕೆಟ್‌ ನಷ್ಟಕ್ಕೆ 155 ರನ್‌ ಬಾರಿಸಿ ರೋಚಕ ಗೆಲುವು ಸಾಧಿಸಿದೆ.

    ಬೌಲಿಂಗ್‌ನಲ್ಲಿ ಶುಭಾರಂಭ ಮಾಡಿದ ಭಾರತ ಮೊದಲ ಓವರ್‌ನಲ್ಲಿ ಕೇವಲ 2 ರನ್‌ಗಳಿಗೆ 2 ವಿಕೆಟ್‌ ಉರುಳಿಸಿತ್ತು. ಬ್ರ್ಯಾಂಡನ್ ಕಿಂಗ್ ಹಾಗೂ ಬ್ರ್ಯಾಂಡನ್ ಕಿಂಗ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್‌ಗೆ ಮರಳಿದರು. ಬಳಿಕ 3ನೇ ವಿಕೆಟ್‌ಗೆ ಜೊತೆಯಾದ ಕೇಲ್‌ ಮೇಯರ್ಸ್‌ ಹಾಗೂ ನಿಕೋಲಸ್‌ ಪೂರನ್‌ (Nicholas Pooran) ಸ್ಫೋಟಕ ಪ್ರದರ್ಶನ ನೀಡಿದರು. ಟೀಂ ಇಂಡಿಯಾ ಬೌಲರ್‌ಗಳನ್ನ ಹಿಗ್ಗಾಮುಗ್ಗಾ ದಂಡಿಸಿದ ಈ ಜೋಡಿ 37 ಎಸೆತಗಳಲ್ಲಿ 57 ರನ್‌ ಬಾರಿಸಿತು. ಇದರಿಂದ ಭಾರತದ ಸೋಲು ಖಚಿತವಾಗಿತ್ತು.

    ನಿಕೋಲಸ್‌ ಪೂರನ್‌ 67 ರನ್‌ (40 ಎಸೆತ, 6 ಬೌಂಡರಿ, 4 ಸಿಕ್ಸರ್‌) ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕ ರೋವ್ಮನ್‌ ಪೋವೆಲ್‌ (Rovman Powell) 21 ರನ್‌, ಆಲ್‌ರೌಂಡರ್‌ ಶಿಮ್ರಾನ್‌ ಹೆಟ್ಮೇಯರ್‌ 22 ರನ್‌ ಗಳಿಸಿ ಔಟಾದರು. 15 ನೇ ಓವರ್‌ನಲ್ಲಿ ವಿಂಡೀಸ್‌ ಮೂರು ವಿಕೆಟ್‌ ಕಳೆದುಕೊಂಡಾಗ ಪಂದ್ಯಕ್ಕೆ ರೋಚಕ ತಿರುವು ಸಿಕ್ಕಿತ್ತು. ಕೊನೆಯಲ್ಲಿ ಬೌಲರ್‌ಗಳಾದ ಅಕೇಲ್ ಹೊಸೈನ್ (16 ರನ್‌) ಹಾಗೂ ಅಲ್ಜರಿ ಜೋಸೆಫ್‌ (10 ರನ್‌) ಸಿಕ್ಸರ್‌, ಬೌಂಡರಿ ಬಾರಿಸುವ ಮೂಲಕ ಜಯದ ದಡ ಸೇರಿಸಿದರು.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಟೀಂ ಇಂಡಿಯಾ ಆರಂಭದಲ್ಲಿ ಆಘಾತ ಅನುಭವಿಸಿತು. ಮೊದಲ ಸೋಲಿನ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ ಭಾರತಕ್ಕೆ ನಿರಾಸೆಯಾಗಿತ್ತು. ಏಕೆಂದರೆ ಆರಂಭಿಕ ಶುಭಮನ್‌ ಗಿಲ್‌ (Shubman Gill)  ಮತ್ತೆ ಕಳಪೆ ಪ್ರದರ್ಶನ ತೋರಿದರು. ಗಿಲ್ ಈ ಪಂದ್ಯದಲ್ಲಿ ಕೇವಲ 7 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

    ಈ ಬೆನ್ನಲ್ಲೇ ಸೂರ್ಯಕುಮಾರ್‌ ಯಾದವ್‌ (Suryakumar Yadav) ಅನಗತ್ಯ ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾಗಿ ಆಘಾತ ನೀಡಿದರು. ನಂತರ ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಜವಾಬ್ಧಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದರು. 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 42 ರನ್‌ ಕಲೆಹಾಕಿತು. ಅಷ್ಟರಲ್ಲೇ ಇಶಾನ್ 27 ರನ್‌ (2 ಸಿಕ್ಸರ್‌, 2 ಬೌಂಡರಿ, 23 ಎಸೆತ) ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ನಂತರ ಸಂಜು ಸ್ಯಾಮ್ಸನ್ ಸಿಕ್ಸ್‌ ಬಾರಿಸುವ ಯತ್ನದಲ್ಲಿ 7 ರನ್‌ಗೆ ಸ್ಟಂಪ್ ಔಟ್ ಆದರು.

    ತಿಲಕ್ ವರ್ಮಾ ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದು ಜವಾಬ್ದಾರಿ ಆಟ ನೀಡಿದರು. 41 ಎಸೆತಗಳಲ್ಲಿ ತಿಲಕ್ 51 ರನ್‌ (1 ಸಿಕ್ಸರ್‌, 5 ಬೌಂಡರಿ) ಬಾರಿಸಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಅರ್ಧಶತಕ ದಾಖಲಿಸಿದರು. ನಾಯಕ ಹಾರ್ದಿಕ್‌ ಪಾಂಡ್ಯ 24 ರನ್‌, ಅಕ್ಷರ್‌ ಪಟೇಲ್‌ 14 ರನ್‌, ರವಿ ಬಿಷ್ಣೋಯಿ 8 ರನ್‌ ಹಾಗೂ ಅರ್ಷ್‌ದೀಪ್‌ ಸಿಂಗ್‌ 6 ರನ್‌ಗಳ ಕೊಡುಗೆ ನೀಡುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IND vs WI T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹಾರ್ದಿಕ್‌ ಪಡೆ – ವಿಂಡೀಸ್‌ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?

    IND vs WI T20: ಮೊದಲ ಪಂದ್ಯದಲ್ಲೇ ಮುಗ್ಗರಿಸಿದ ಹಾರ್ದಿಕ್‌ ಪಡೆ – ವಿಂಡೀಸ್‌ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?

    ಟ್ರಿನಿಡಾಡ್‌: ವೆಸ್ಟ್‌ ಇಂಡೀಸ್‌ (West Indies) ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಭಾರತ (Team India) ವಿರೋಚಿತ ಸೋಲನುಭವಿಸಿದೆ. ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿದ್ರೂ, ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ 4 ರನ್‌ಗಳ ವಿರೋಚಿತ ಸೋಲನುಭವಿಸಿದೆ.

    ಸುಲಭ ಗೆಲುವಿನ ಅತ್ಯುತ್ಸಾಹದಲ್ಲಿದ್ದ ಟೀಂ ಇಂಡಿಯಾಕ್ಕೆ (Team India) ವಿರೋಚಿತ ಸೋಲು ಭಾರೀ ನಿರಾಸೆ ಮೂಡಿಸಿದೆ. ಈ ನಡುವೆ ವಿಂಡೀಸ್‌ ತಂಡದ ಗೆಲುವಿಗೆ ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ ಅಂತಾ ವೇಗಿ ಜೇಸನ್‌ ಹೋಲ್ಡರ್‌ ತಿಳಿಸಿದ್ದಾರೆ. ಇದನ್ನೂ ಓದಿ: IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

    ಮೊದಲ 10 ಓವರ್‌ಗಳ ನಂತರ ಪಂದ್ಯ ರೋಚಕ ಹಂತಕ್ಕೆ ತಲುಪಿತ್ತು. ನಮ್ಮ ತಂಡ ಫೀಲ್ಡಿಂಗ್‌ ಬಿಗಿಗೊಳಿಸಿತ್ತು. ಆದ್ರೆ 16ನೇ ಓವರ್‌ನಲ್ಲಿ ಬೌಲಿಂಗ್‌ಗೆ ಇಳಿದಾಗ ಮೊದಲ ಎಸೆತದಲ್ಲೇ ಹಾರ್ದಿಕ್‌ ಪಾಂಡ್ಯ (Hardik Pandya) ಬೌಲ್ಡ್‌ ಆದರು. ಮರು ಎಸೆತದಲ್ಲಿ ಅಕ್ಷರ್‌ ಪಟೇಲ್‌ (Axar Patel) ಬೇಡದ ರನ್‌ ಕದಿಯಲು ಯತ್ನಿಸಿ ಸಂಜು ಸ್ಯಾಮ್ಸನ್‌ರನ್ನ (Sanju Samson) ರನೌಟ್‌ ಆಗುವಂತೆ ಮಾಡಿದ್ರು. ಇದು ಟೀಂ ಇಂಡಿಯಾ ಗೆಲುವಿನ ಮೇಲೆ ಪರಿಣಾಮ ಬೀರಿತ್ತು. ಆ ನಂತರದಲ್ಲಿ ಅಕ್ಷರ್‌ ಪಟೇಲ್‌ ಸಹ ಸಿಕ್ಸರ್‌ ಸಿಡಿಸುವ ಬರದಲ್ಲಿ ಕ್ಯಾಚ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು. ಇದು ವಿಂಡೀಸ್‌ ರೋಚಕ ಗೆಲುವಿಗೆ ಕಾರಣವಾಯ್ತು ಅಂತಾ ಜೇಸನ್‌ ಹೋಲ್ಡರ್‌ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಹೇಳಿದ್ದಾರೆ.

    ನಿವೃತ್ತಿ ಸುಳಿವು ನೀಡಿದ ಜೇಸನ್‌ ಹೋಲ್ಡರ್‌: ಮುಂದುವರಿದು ಮಾತನಾಡುತ್ತಾ, ಜೇಸನ್‌ ಹೋಲ್ಡರ್‌ ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡುವ ಸುಳಿವು ನೀಡಿದರು. ನಾನು ಸ್ವಲ್ಪ ವಿರಾಮ ಬಯಸುತ್ತಿದ್ದೇನೆ ಅಂತಾ ಹೇಳಿದ್ದಾರೆ.  ಇದನ್ನೂ ಓದಿ: ಹೊಸ ಕೋಚ್ ನೇಮಿಸಿದ RCB – ಮುಂದಿನ ಸಲ ಕಪ್ ನಮ್ದೆ ಅಂತಿದ್ದಾರೆ ಫ್ಯಾನ್ಸ್

    ಗುರುವಾರ ನಡೆದ ಮೊದಲ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 149 ರನ್‌ ಕಲೆಹಾಕಿತ್ತು. ಈ ರನ್‌ಗಳ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಲಷ್ಟೇ ಸಾಧ್ಯವಾಗಿ 4 ರನ್‌ಗಳ ವಿರೋಚಿತ ಸೋಲನುಭವಿಸಿತು. ಭಾನುವಾರ ವೆಸ್ಟ್ ಇಂಡೀಸ್ ವಿರುದ್ಧ ಭಾರತ 2ನೇ ಟಿ20 ಪಂದ್ಯವನ್ನಾಡಲಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

    `ಮಹಿ’ಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರಾ `ಪಾಂಡ್ಯ’?

    ಈತ ಎಂಟ್ರಿ ಕೊಟ್ರೆ ಸಾಕು ಯಾವಾಗ ಸಿಕ್ಸ್ ಬಾರಿಸ್ತಾನೋ? ಅರ್ಧಕ್ಕೆ ಕೈಕೋಡ್ತಾನೋ? ಅನ್ನೂ ಟೆನ್ಷನ್, ಒಮ್ಮೆ ಇದ್ದಕ್ಕಿದ್ದಂತೆ ಸಿಕ್ಸರ್-ಬೌಂಡರಿ ಬಾರಿಸೋದು ಮತ್ತೊಮ್ಮೆ ಬೇಗನೇ ಔಟಾಗಿ ನಿರಾಸೆ ಮೂಡಿಸುತ್ತಿದ್ದ ಕ್ರಿಕೆಟಿಗ ಈಗ ಟೀಂ ಇಂಡಿಯಾ ತಂಡಕ್ಕೆ ನಾಯಕನಾಗುವ ರೇಸ್‌ನಲ್ಲಿದ್ದಾರೆ. ಹೌದು. ವೆಸ್ಟ್ ಇಂಡೀಸ್ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನದೊಂದಿಗೆ ಟೀಂ ಇಂಡಿಯಾಕ್ಕೆ ಸರಣಿ ಜಯ ತಂದುಕೊಟ್ಟ ಹಾರ್ದಿಕ್ ಪಾಂಡ್ಯ (Hardik Pandya), ಎಂ.ಎಸ್ ಧೋನಿಯಂತೆ (MS Dhoni) ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಅನ್ನೋ ಕೂಗು ಕೇಳಿಬರ್ತಿದೆ.

    ಟೀಂ ಇಂಡಿಯಾದಲ್ಲಿ (Team India) ಸಂಪೂರ್ಣವಾಗಿ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ (West Indies) ವಿರುದ್ಧ ಕೊನೆಯ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು ಬ್ಯಾಟಿಂಗ್ ಮಾಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾಗಿ ಕೊಹ್ಲಿ, ರೋಹಿತ್ ಶರ್ಮಾ ಬಳಿಕ ಹೊಸ ನಾಯಕತ್ವಕ್ಕೆ ಹುಡುಕಾಟ ನಡೆಸಿರುವ ಬಿಸಿಸಿಐಗೆ ಹಾರ್ದಿಕ್ ಪಾಂಡ್ಯ ಪರ ಕೂಗು ಕೇಳಿಬಂದಿದೆ. ಇದನ್ನೂ ಓದಿ: 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

    2016ರ ಜನವರಿಯಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ ಅಂತಾರಾಷ್ಟ್ರೀಯ ಟಿ20 ಸರಣಿ ಮೂಲಕ ಟೀಂ ಇಂಡಿಯಾಕ್ಕೆ ಎಂಟ್ರಿಕೊಟ್ಟ ಹಾರ್ದಿಕ್ ಪಾಂಡ್ಯ, ಅದೇ ವರ್ಷ ಅಕ್ಟೋಬರ್‌ನಲ್ಲಿ ಏಕದಿನ ತಂಡಕ್ಕೂ ಪದಾರ್ಪಣೆ ಮಾಡಿದ್ರು. 2017ರಲ್ಲಿ ಟೆಸ್ಟ್ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೂ ಫಾರ್ಮ್ ಕಂಡುಕೊಳ್ಳದ ಕಾರಣ 2018ರ ಆಗಸ್ಟ್ ನಂತ್ರ ಟೆಸ್ಟ್ ಕ್ರಿಕೆಟ್‌ನಿಂದ ಹೊರಗುಳಿದರು. ಈವರೆಗೆ 11 ಟೆಸ್ಟ್, 77 ಏಕದಿನ ಪಂದ್ಯ, 87 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಪಾಂಡ್ಯ 123 ಐಪಿಎಲ್ ಪಂದ್ಯಗಳನ್ನಾಡಿದ್ದಾರೆ.

    2022ರಲ್ಲಿ ಐಪಿಎಲ್‌ಗೆ ಸೇರ್ಪಡೆಯಾದ ಗುಜರಾತ್ ಟೈಟಾನ್ಸ್ (Gujarat Taitans) ತಂಡದ ಮೂಲಕ ನಾಯಕತ್ವದ ಜವಾಬ್ದಾರಿ ಹೊತ್ತ ಪಾಂಡ್ಯ ಚೊಚ್ಚಲ ಆವೃತ್ತಿಯಲ್ಲೇ ಟ್ರೋಫಿ ಗೆದ್ದು ನಂಬಿಕೆ ಉಳಿಸಿಕೊಂಡರು. 2023ರ ಆವೃತ್ತಿಯಲ್ಲಿ ಸತತ 2ನೇ ಬಾರಿಗೆ ತಂಡವನ್ನ ಫೈನಲ್ ಹಾದಿಗೆ ಕೊಂಡೊಯ್ದರು. ಪ್ರಸಕ್ತ ವರ್ಷದ ಆರಂಭದಿಂದಲೂ ಸಂಪೂರ್ಣ ಟಿ20 ನಾಯಕತ್ವ ವಹಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಸರಣಿ ಜಯ ತಂದುಕೊಟ್ಟಿದ್ದರು. ಇದೀಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ವಿಂಡೀಸ್ ಪರ ಜವಾಬ್ದಾರಿಯುತ ಆಟವಾಡಿದ ಪಾಂಡ್ಯ ಗೆಲುವು ತಂದುಕೊಡುವ ಮೂಲಕ ಯಶಸ್ವಿ ನಾಯಕ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ

    ಮಹಿಯಂತೆ ಮೈಂಡ್‌ಗೇಮ್ ಆಡಿದ್ರಾ ಪಾಂಡ್ಯ?
    ಹಾರ್ದಿಕ್ ಪಾಂಡ್ಯ ಬೆಳವಣಿಗೆಯಿಂದ ಟೀಂ ಇಂಡಿಯಾದಲ್ಲಿ ಹೊಸ ಅಲೆ ಶುರುವಾಗಿದೆ. 2007ರಲ್ಲಿ ಟಿ20 ವಿಶ್ವಕಪ್, 2011ರಲ್ಲಿ ಏಕದಿನ ವಿಶ್ವಕಪ್, 2010ರಲ್ಲಿ ಏಷ್ಯಾಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ತಂದುಕೊಟ್ಟ ಮಹಿ ಅವರ ಸ್ಥಾನ ತುಂಬಲು ಪಾಂಡ್ಯ ಸೂಕ್ತ ಅನ್ನೋ ಅಭಿಪ್ರಾಯಗಳೂ ಕೇಳಿ ಬರ್ತಿವೆ. ಏಕೆಂದರೆ ವಿಂಡೀಸ್ ಕೊನೆಯ ಪಂದ್ಯದಲ್ಲಿ ಮೈಂಡ್‌ಗೇಮ್ ಆಡಿದ ಪಾಂಡ್ಯ ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟರು. ಆರಂಭಿಕ ಇಶಾನ್ ಕಿಶನ್ ಔಟಾಗುತ್ತಿದ್ದಂತೆ ಋತುರಾಜ್ ಗಾಯಕ್ವಾಡ್‌ಗೆ ಚಾನ್ಸ್ ಕೊಟ್ಟರು. ನಂತರ 4ನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಿದರು. ನಂತ್ರ ಪಕ್ಕಾ ಪ್ಲ್ಯಾನ್‌ನೊಂದಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ ಪಾಂಡ್ಯ ಅದ್ಭುತ ಪ್ರದರ್ಶನ ನೀಡಿದರು. ಇದರಿಂದ ಪಾಂಡ್ಯ ಸಹ ಮಹಿಯಂತೆ ಸಕ್ಸಸ್‌ಫುಲ್ ಕ್ಯಾಪ್ಟನ್ ಆಗ್ತಾರೆ ಎನ್ನಲಾಗುತ್ತಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ

    ಐಷಾರಾಮಿ ಬೇಡ, ಕನಿಷ್ಠ ಸೌಲಭ್ಯವನ್ನು ವೆಸ್ಟ್ ಇಂಡೀಸ್ ಮಾಡಿಲ್ಲ – ಹಾರ್ದಿಕ್ ಪಾಂಡ್ಯ ಗರಂ

    ನವದೆಹಲಿ: ತಮ್ಮ ಪ್ರವಾಸದ ವೇಳೆ ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ಮಂಡಳಿ ಮೂಲಭೂತ ವ್ಯವಸ್ಥೆಗಳನ್ನು ಒದಗಿಸಿಲ್ಲ ಎಂದು ಟೀಂ ಇಂಡಿಯಾ (eam India) ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಆರೋಪಿಸಿದ್ದಾರೆ.

    ಹಾರ್ದಿಕ್ ಕ್ರೀಡಾಂಗಣವನ್ನು ಅತ್ಯುತ್ತಮವಾದ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಆದರೆ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ನ್ಯೂನತೆಗಳನ್ನು ಇದೇ ವೇಳೆ ಎತ್ತಿ ತೋರಿಸಿದ್ದಾರೆ. ಕ್ರಿಕೆಟ್ ಮಂಡಳಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಲ್ಲ. ಭವಿಷ್ಯದಲ್ಲಿ ಆತಿಥೇಯರು ಈ ಬಗ್ಗೆ ಎಚ್ಚರವನ್ನು ಹೊಂದಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

    ಇದು ನಾವು ಆಡಿದ ಉತ್ತಮ ಮೈದಾನಗಳಲ್ಲಿ ಒಂದಾಗಿದೆ. ನಾವು ಮುಂದಿನ ಬಾರಿ ವೆಸ್ಟ್ ಇಂಡೀಸ್‍ಗೆ ಬಂದಾಗ ಎಲ್ಲವೂ ಉತ್ತಮವಾಗಬಹುದು. ಕಳೆದ ವರ್ಷವೂ ಕೆಲವು ಬಿಕ್ಕಟ್ಟುಗಳು ಸಂಭವಿಸಿದ್ದವು. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ನಾವು ಐಷಾರಾಮಿ ಸೌಲಭ್ಯವನ್ನು ಕೇಳುವುದಿಲ್ಲ. ಆದರೆ ನಮಗೆ ಕೆಲವು ಮೂಲಭೂತ ಅವಶ್ಯಕತೆಗಳನ್ನು ಒದಗಿಸಬೇಕು ಎಂದು ಬಯಸುತ್ತೇನೆ ಎಂದಿದ್ದಾರೆ.

    ಟ್ರಿನಿಡಾಡ್‍ನಿಂದ ಬಾರ್ಬಡೋಸ್‍ಗೆ ತಡರಾತ್ರಿಯ ವಿಮಾನವು ಸುಮಾರು ನಾಲ್ಕು ಗಂಟೆಗಳಷ್ಟು ವಿಳಂಬವಾದ ನಂತರ ಭಾರತೀಯ ಕ್ರಿಕೆಟಿಗರು ಬಿಸಿಸಿಐಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು. ಇದರಿಂದಾಗಿ ಪಂದ್ಯದ ವೇಳೆ ಆಟಗಾರರು ನಿದ್ರಾಹೀನರಾಗಿದ್ದರು. ಪಂದ್ಯಗಳ ನಡುವೆ ಕಡಿಮೆ ಅಂತರವಿರುವಾಗ ತಡರಾತ್ರಿ ವಿಮಾನಗಳನ್ನು ಇರಿಸದಂತೆ ಹಿರಿಯ ಕ್ರಿಕೆಟಿಗರು ಬಿಸಿಸಿಐಗೆ ವಿನಂತಿಸಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭರ್ಜರಿ 200 ರನ್‍ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 351 ರನ್ ಗಳಿಸಿತು. ಕಠಿಣ ಸವಾಲನ್ನು ಬೆನ್ನತ್ತಿದ ವಿಂಡೀಸ್ 151 ರನ್‍ಗಳಿಗೆ ಆಲೌಟ್ ಆಯ್ತು. ಈ ಮೂಲಕ ತವರಿನಲ್ಲಿ ವಿಂಡೀಸ್ ಸತತ 6ನೇ ಸರಣಿ ಸೋತರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಗೆದ್ದುಕೊಂಡಂತಾಗಿದೆ.

    ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಮತ್ತು ರುತುರಾಜ್ ಗಾಯಕ್ವಾಡ್ ಅವರಂತಹ ಕಿರಿಯ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗಿದೆ. ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಪಂದ್ಯದಲ್ಲಿ ವಿಶ್ರಾಂತಿ ನೀಡಿದ್ದರಿಂದ ಹಾರ್ದಿಕ್ ಸತತ ಎರಡನೇ ಬಾರಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಇದೇ ಮೈದಾನದಲ್ಲಿ ಗುರುವಾರ ಆರಂಭವಾಗಲಿರುವ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಹಾರ್ದಿಕ್ ನಾಯಕತ್ವ ವಹಿಸಲಿದ್ದಾರೆ. ಇದನ್ನೂ ಓದಿ: IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

    200 ರನ್‌ಗಳ ಭರ್ಜರಿ ಗೆಲುವು – ವಿಂಡೀಸ್‌ ವಿರುದ್ಧ ಸತತ 13ನೇ ಏಕದಿನ ಸರಣಿ ಗೆದ್ದ ಭಾರತ

    ತರೌಬಾ (ಟ್ರಿನಿಡಾಡ್): ವೆಸ್ಟ್‌ ಇಂಡೀಸ್‌ (West Indies) ವಿರುದ್ಧದ ಮೂರನೇ ಏಕದಿನ ಪಂದ್ಯವನ್ನು ಭರ್ಜರಿ 200 ರನ್‌ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ (Team India) ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 351 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನತ್ತಿದ ವಿಂಡೀಸ್‌ 151 ರನ್‌ಗಳಿಗೆ ಆಲೌಟ್‌ ಆಯ್ತು. ಈ ಮೂಲಕ ತವರಿನಲ್ಲಿ ವಿಂಡೀಸ್‌ ಸತತ 6ನೇ ಸರಣಿ ಸೋತರೆ, ವಿಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ (One Day Series) ಗೆದ್ದುಕೊಂಡಂತಾಗಿದೆ.

    ಬ್ಯಾಟಿಂಗ್‌ ಆರಂಭಿಸಿದ ವಿಂಡೀಸ್‌ ಮೊದಲ ಓವರ್‌ನಿಂದಲೇ ವಿಕೆಟ್‌ ಕಳೆದುಕೊಳ್ಳಲು ಆರಂಭಿಸಿತ್ತು. ಒಂದು ಹಂತದಲ್ಲಿ 88 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೆಯಲ್ಲಿ ಬೌಲರ್‌ಗಳಾದ ಅಲ್ಜಾರಿ ಜೋಸೆಫ್ 26 ರನ್‌, ಗುಡಾಕೇಶ್ ಮೋತಿ ಔಟಾಗದೇ 39 ರನ್‌ ಚಚ್ಚಿದ ಪರಿಣಾಮ ತಂಡದ ಮೊತ್ತ 150 ರನ್‌ಗಳ ಗಡಿ ದಾಟಿತು.

    ಶಾರ್ದೂಲ್‌ ಠಾಕೂರ್‌ 4, ಮುಕೇಶ್‌ ಕುಮಾರ್‌ 3 ವಿಕೆಟ್‌ ಪಡೆದರೆ ಕುಲದೀಪ್‌ ಯಾದವ್‌ 2, ಜಯದೆವ್‌ ಉನದ್ಕತ್‌ 1 ವಿಕೆಟ್‌ ಪಡೆದರು. ಇದನ್ನೂ ಓದಿ: IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

    ಭಾರತದ ಭರ್ಜರಿ ಮೊತ್ತ:
    ಎರಡು ಪಂದ್ಯಗಳಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ಬೇಗನೇ ಔಟಾಗಿದ್ದು ಬಹಳ ಟೀಕೆಗೆ ಗುರಿಯಾಗಿತ್ತು. ಆದರೆ ಈ ಪಂದ್ಯದಲ್ಲಿ ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ ಬಂದಿತ್ತು. ಇಶಾನ್‌ ಕಿಶನ್‌ (Ishan Kishan) ಮತ್ತು ಶುಭಮನ್‌ ಗಿಲ್‌ (Shubman Gill) ಮೊದಲ ವಿಕೆಟಿಗೆ 118 ಎಸೆತಗಳಲ್ಲಿ 143 ರನ್‌ ಜೊತೆಯಾಟವಾಡಿದರು.

    ಇಶಾನ್‌ ಕಿಶನ್‌ 77 ರನ್‌ (64 ಎಸೆತ, 8 ಬೌಂಡರಿ, 3 ಸಿಕ್ಸರ್)‌ ಹೊಡೆದು ಔಟಾದರು. ಋತ್‌ರಾಜ್‌ ಗಾಯಕ್‌ವಾಡ್‌ 8 ರನ್‌ ಗಳಿಸಿ ಔಟಾದದರೂ ನಂತರ ಸಂಜು ಸ್ಯಾಮ್ಸನ್‌ ಸ್ಫೋಟಕ ಬ್ಯಾಟಿಂಗ್‌ ಮಾಡಿದರು. ಸ್ಯಾಮ್ಸನ್‌ 51 ರನ್‌ (41 ಎಸೆತ, 2 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದ ಬೆನ್ನಲ್ಲೇ ಶುಭಮನ್‌ ಗಿಲ್‌ 85 ರನ್‌ (92 ಎಸೆತ, 11 ಬೌಂಡರಿ) ಗಳಿಸಿ ಔಟಾದರು.

    ಹಾರ್ದಿಕ್‌ ಪಾಂಡ್ಯ (Hardik Pandya) ಮತ್ತು ಸೂರ್ಯಕುಮಾರ್‌ ಯಾದವ್‌ (Suryakumar Yadav) 49 ಎಸೆತಗಳಲ್ಲಿ 65 ರನ್‌ ಚಚ್ಚಿದರು. ಸೂರ್ಯಕುಮಾರ್‌ ಔಟಾದ ಬಳಿಕ ನಾಯಕ ಪಾಂಡ್ಯ ವಿಂಡೀಸ್‌ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಪರಿಣಾಮ ಮುರಿಯದ 6ನೇ ವಿಕೆಟಿಗೆ ಜಡೇಜಾ ಜೊತೆಗೂಡಿ ಕೇವಲ 19 ಎಸೆತಗಳಲ್ಲಿ 42 ರನ್‌ ಜೊತೆಯಾಟವಾಡಿದರು. ಈ ಪೈಕಿ ಜಡೇಜಾ 7 ಎಸೆತ ಎದುರಿಸಿ 8 ರನ್‌ ಹೊಡೆದರೆ ಪಾಂಡ್ಯ 12 ಎಸೆತಗಳಲ್ಲಿ 34 ರನ್‌ ಹೊಡೆದರು. ಅಂತಿಮವಾಗಿ ಪಾಂಡ್ಯ ಔಟಾಗದೇ 70 ರನ್‌ (52 ಎಸೆತ, 4 ಬೌಂಡರಿ, 5 ಸಿಕ್ಸರ್‌) ಹೊಡೆದು ತಂಡದ ಮೊತ್ತವನ್ನು 350 ರನ್‌ಗಳ ಗಡಿಯನ್ನು ದಾಟಿಸುವಲ್ಲಿ ಸಫಲರಾದರು.

    ಶುಭಮನ್‌ ಗಿಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರೆ ಇಶಾನ್‌ ಕಿಶನ್‌ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    ರನ್‌ ಏರಿದ್ದು ಹೇಗೆ?
    50 ರನ್‌ – 47 ಎಸೆತ
    100 ರನ್‌ – 80 ಎಸೆತ
    150 ರನ್‌ – 134 ಎಸೆತ
    200 ರನ್‌ – 170 ಎಸೆತ
    250 ರನ್‌ – 243 ಎಸೆತ
    300 ರನ್‌ – 275 ಎಸೆತ
    350 ರನ್‌ – 300 ಎಸೆತ

     

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

    IND vs WI: ಹ್ಯಾಟ್ರಿಕ್‌ ಅರ್ಧ ಶತಕ ಸಿಡಿಸಿ ಮಹಿ ದಾಖಲೆ ಸರಿಗಟ್ಟಿದ ಇಶಾನ್‌ ಕಿಶನ್‌

    ಟ್ರಿನಿಡಾಡ್: ಇಲ್ಲಿನ ಬ್ರಿಯಾನ್ ಲಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ವೆಸ್ಟ್ ಇಂಡೀಸ್ (West Indies) ವಿರುದ್ಧದ 3ನೇ ಏಕದಿನ ಪಂದ್ಯದಲ್ಲೂ ಇಶಾನ್ ಕಿಶನ್ (Ishan Kishan) ಅರ್ಧಶತಕ ಬಾರಿಸಿ ಮಿಂಚಿದ್ದಾರೆ. ಸತತ ಮೂರು ಪಂದ್ಯಗಳಲ್ಲೂ ಅರ್ಧಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್‌ ಧೋನಿ (MS Dhoni) ಅವರ ದಾಖಲೆಯನ್ನ ಸರಿಗಟ್ಟಿದ್ದಾರೆ.

    ಈ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ 64 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 8 ಫೋರ್​ಗಳೊಂದಿಗೆ 77 ರನ್ ಬಾರಿಸಿದ್ದರು. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕ ಬಾರಿಸಿದ ಭಾರತದ 6ನೇ ಬ್ಯಾಟರ್ ಎನಿಸಿಕೊಂಡರು. ಅಲ್ಲದೇ, ಈ ಸಾಧನೆ ಮಾಡಿದ ಟೀಂ ಇಂಡಿಯಾದ (Team India) 2ನೇ ವಿಕೆಟ್ ಕೀಪರ್​ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇದಕ್ಕೂ ಮುನ್ನ ಇಂತಹದೊಂದು ವಿಶೇಷ ದಾಖಲೆಯನ್ನ ಲೆಜೆಂಡ್‌ ಮಹಿ ನಿರ್ಮಿಸಿದ್ದರು.

    2019 ರಲ್ಲಿ ಆಸ್ಟ್ರೇಲಿಯಾ (Australia) ವಿರುದ್ಧ ನಡೆದ 3 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮ್ಯಾನ್‌ ಧೋನಿ ಹ್ಯಾಟ್ರಿಕ್ ಅರ್ಧಶತಕ ಬಾರಿಸಿದ್ದರು. 1982ರಲ್ಲಿ ಕ್ರಿಸ್‌ ಶ್ರೀಕಾಂತ್‌, 1985ರಲ್ಲಿ ದಿಲೀಪ್‌ ವೆಂಗ್‌ ಸರ್ಕಾರ್, 1993ರಲ್ಲಿ ಮೊಹಮ್ಮದ್‌ ಅಜರುದ್ದೀನ್‌, 2020 ರಲ್ಲಿ ಶ್ರೇಯಸ್‌ ಅಯ್ಯರ್‌ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಅರ್ಧ ಶತಕ ಸಿಡಿಸಿದ ದಾಖಲೆ ಮಾಡಿದ್ದರು. ಈಗ ಇಶಾನ್‌ ಕಿಶನ್‌ ಈ ಸಾಧನೆ ಮಾಡಿದ 6ನೇ ಬ್ಯಾಟರ್‌ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: T20 ಸರಣಿಗೆ ವಿಂಡೀಸ್‌ ಬಲಿಷ್ಠ ತಂಡ ಪ್ರಕಟ – ನಿಕೋಲಸ್‌ ಪೂರನ್‌ ಈಸ್‌ ಬ್ಯಾಕ್‌

    ವಿಂಡೀಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ಇಶಾನ್‌ ಕಿಶನ್‌ 55 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್‌ ನೊಂದಿಗೆ 55 ರನ್‌, 2ನೇ ಏಕದಿನ ಪಂದ್ಯದಲ್ಲಿ 46 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್‌ನೊಂದಿಗೆ 52 ರನ್‌ ಗಳಿಸಿದ್ದರು. 3ನೇ ಪಂದ್ಯದಲ್ಲಿ 64 ಎಸೆತಗಳಲ್ಲಿ 77 ರನ್‌ ಚಚ್ಚುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ವಿಂಡೀಸ್‌ ವಿರುದ್ಧ ನಡೆದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 351 ರನ್‌ ಕಲೆಹಾಕಿತು. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್‌ – ಐರ್ಲೆಂಡ್‌ T20 ಸರಣಿಗೆ ಬುಮ್ರಾ ನಾಯಕ, ರಿಂಕು ಸಿಂಗ್‌ಗೆ ಚಾನ್ಸ್‌

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20 ಸರಣಿಗೆ ವಿಂಡೀಸ್‌ ಬಲಿಷ್ಠ ತಂಡ ಪ್ರಕಟ – ನಿಕೋಲಸ್‌ ಪೂರನ್‌ ಈಸ್‌ ಬ್ಯಾಕ್‌

    T20 ಸರಣಿಗೆ ವಿಂಡೀಸ್‌ ಬಲಿಷ್ಠ ತಂಡ ಪ್ರಕಟ – ನಿಕೋಲಸ್‌ ಪೂರನ್‌ ಈಸ್‌ ಬ್ಯಾಕ್‌

    ಬ್ರಿಡ್ಜ್‌ಟೌನ್‌: ಇದೇ ಆಗಸ್ಟ್‌ 3 ರಿಂದ 13ರ ವರೆಗೆ ಟೀಂ ಇಂಡಿಯಾ (Team India) ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ವೆಸ್ಟ್‌ ಇಂಡೀಸ್‌ ಬಲಿಷ್ಠ ತಂಡ ಪ್ರಕಟಿಸಿದ್ದು, ನಿಕೋಲಸ್‌ ಪೂರನ್‌ (Nicholas Pooran) ತಂಡಕ್ಕೆ ಕಂಬ್ಯಾಕ್‌ ಮಾಡಿದ್ದಾರೆ.

    ಯುಎಸ್‌ನಲ್ಲಿ (USA) ಮೇಜರ್‌ ಕ್ರಿಕೆಟ್‌ ಲೀಗ್‌ನಲ್ಲಿ ಪಾಲ್ಗೊಂಡಿದ್ದ ಕಾರಣ ಏಕದಿನ ಕ್ರಿಕೆಟ್‌ ಟೂರ್ನಿಯಿಂದ ನಿಕೋಲಸ್‌ ಪೂರನ್‌ ಹೊರಗುಳಿದಿದ್ದರು. ಮುಂಬೈ ಇಂಡಿಯನ್ಸ್‌ ನ್ಯೂಯಾರ್ಕ್‌ ತಂಡದ ಪರ ಫೈನಲ್‌ ಪಂದ್ಯದಲ್ಲಿ ಬ್ಯಾಟಿಂಗ್‌ ಮಾಡಿದ್ದ ಪೂರನ್‌ ಸ್ಫೋಟಕ ಶತಕ ಸಿಡಿಸಿ ಚಾಂಪಿಯನ್‌ ಪಟ್ಟ ಗೆದ್ದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಟೀಂ ಇಂಡಿಯಾ ವಿರುದ್ಧ ನಡೆಯಲಿರುವ 5 ಪಂದ್ಯಗಳ ಟಿ20 ಸರಣಿಗೆ ತಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

    ರೋವ್ಮನ್‌ ಪೋವೆಲ್‌ (Rovman Powell) ತಂಡದ ನಾಯಕತ್ವ ವಹಿಸಿಕೊಂಡಿದ್ದು, ಕೈಲ್‌ ಮೇಯರ್ಸ್‌ ಉಪನಾಯಕನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. ಶಿಮ್ರಾನ್‌ ಹೆಟ್ಮೇಯರ್‌, ಶಾಯ್‌ ಹೋಪ್‌, ಅಲ್ಝರಿ ಜೋಸೆಫ್‌, ಜೇಸನ್‌ ಹೋಲ್ಡರ್‌ ಮೊದಲಾದವರು ಬ್ಯಾಟಿಂಗ್‌ ಬಲ ತುಂಬುವ ನಿರೀಕ್ಷೆಯಲ್ಲಿದ್ದಾರೆ. 5 ಪಂದ್ಯಗಳ ಟಿ20 ಸರಣಿಯಲ್ಲಿ ಮೂರು ಪಂದ್ಯಗಳು ವೆಸ್ಟ್‌ ಇಂಡೀಸ್‌ನಲ್ಲಿ ನಡೆಯಲಿದ್ದು ಅಂತಿಮ ಎರಡು ಪಂದ್ಯಗಳು ಅಮೆರಿಕದಲ್ಲಿ ನಡೆಯಲಿದೆ. ಇದನ್ನೂ ಓದಿ: ಟೀಂ ಇಂಡಿಯಾಕ್ಕೆ ಭರ್ಜರಿ ಕಂಬ್ಯಾಕ್‌ – ಐರ್ಲೆಂಡ್‌ T20 ಸರಣಿಗೆ ಬುಮ್ರಾ ನಾಯಕ, ರಿಂಕು ಸಿಂಗ್‌ಗೆ ಚಾನ್ಸ್‌

    ವೆಸ್ಟ್​ ಇಂಡೀಸ್​ ತಂಡ
    ರೋವ್ಮನ್ ಪೊವೆಲ್‌ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರೋನ್ ಹೆಟ್​ಮೇರ್​, ಜೇಸನ್ ಹೋಲ್ಡರ್, ಶೈಯ್​ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರಾಂಡನ್ ಕಿಂಗ್, ಒಬೆಡ್ ಮೆಕಾಯ್, ನಿಕೋಲಸ್ ಪೂರನ್, ರೊಮಾರಿಯೋ ಶೆಫರ್ಡ್​, ಓಡಿಯನ್ ಸ್ಮಿತ್, ಒಶಾನೆ ಥಾಮಸ್. ಇದನ್ನೂ ಓದಿ: 10 ಬೌಂಡರಿ, 13 ಸಿಕ್ಸರ್ – ನಿಕೋಲಸ್ ಪೂರನ್ ಸ್ಫೋಟಕ ಶತಕ; ವಿದೇಶದಲ್ಲೂ ಮುಂಬೈ ಚಾಂಪಿಯನ್

    ಭಾರತ ಟಿ20 ತಂಡ
    ಇಶಾನ್​ ಕಿಶನ್​, ಶುಭಮನ್​ ಗಿಲ್​, ಯಶಸ್ವಿ ಜೈಸ್ವಾಲ್​, ತಿಲಕ್​ ವರ್ಮಾ, ಸೂರ್ಯಕುಮಾರ್​ ಯಾದವ್​, ಸಂಜು ಸ್ಯಾಮ್ಸನ್​, ಹಾರ್ದಿಕ್​​ ಪಾಂಡ್ಯ(ನಾಯಕ), ಅಕ್ಷರ್​ ಪಟೇಲ್, ಯಜುವೇಂದ್ರ ಚಾಹಲ್‌​, ಕುಲ್​ದೀಪ್​ ಯಾದವ್​, ರವಿ ಬಿಷ್ಣೋಯಿ, ಅರ್ಷ್‌​ದೀಪ್​ ಸಿಂಗ್​, ಉಮ್ರಾನ್​ ಮಲಿಕ್​, ಅವೇಶ್​ ಖಾನ್​, ಮುಖೇಶ್​ ಕುಮಾರ್​.

    ಯಾವ ದಿನ ಎಲ್ಲಿ ಪಂದ್ಯ:
    ಮೊದಲ ಟಿ20 ಪಂದ್ಯ ಆಗಸ್ಟ್​ 3, ಸ್ಥಳ: ಟ್ರಿನಿಡಾಡ್
    2ನೇ ಟಿ20 ಪಂದ್ಯ ಆಗಸ್ಟ್​ 6, ಸ್ಥಳ: ಗಯಾನಾ
    3ನೇ ಟಿ20 ಪಂದ್ಯ ಆಗಸ್ಟ್​ 8, ಸ್ಥಳ: ಗಯಾನಾ
    4ನೇ ಟಿ20 ಪಂದ್ಯ ಆಗಸ್ಟ್​ 12, ಸ್ಥಳ: ಫ್ಲೋರಿಡಾ
    5ನೇ ಟಿ20 ಪಂದ್ಯ ಆಗಸ್ಟ್​ 13, ಸ್ಥಳ: ಫ್ಲೋರಿಡಾ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    ವಿಂಡೀಸ್‌ ವಿರುದ್ಧ ಭಾರತಕ್ಕೆ ಹೀನಾಯ ಸೋಲು – ನಾಯಕತ್ವದ ಹೊಣೆ ಹೊತ್ತ ಪಾಂಡ್ಯ ರಿಯಾಕ್ಷನ್‌ ಏನು?

    ಬ್ರಿಡ್ಜ್‌ಟೌನ್‌: ಟೆಸ್ಟ್‌ ಪಂದ್ಯ ಹಾಗೂ ಮೊದಲ ಏಕದಿನ ಪಂದ್ಯದಲ್ಲಿ ಬಾಳೆಹಣ್ಣು ಸುಲಿದಂತೆ ವಿಂಡೀಸ್‌ (West Indies) ವಿರುದ್ಧ ಜಯ ಸಾಧಿಸಿದ್ದ ಟೀಂ ಇಂಡಿಯಾಕ್ಕೆ (Team India) 2ನೇ ಏಕದಿನ ಪಂದ್ಯದಲ್ಲಿ ಹೀನಾಯ ಸೋಲಾಗಿದೆ. ಈ ಮೂಲಕ ಸತತ 3 ಪಂದ್ಯಗಳಲ್ಲಿ ನೀರಸ ಪ್ರದರ್ಶನ ತೋರಿದ್ದ ವೆಸ್ಟ್ ಇಂಡೀಸ್ ತಂಡ ಕೊನೆಗೂ ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸಿ ಸರಣಿಯಲ್ಲಿ 1-1 ರ ಸಮಬಲ ಸಾಧಿಸಿದೆ.

    ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಏಕದಿನ ಸರಣಿಯ 2ನೇ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡಿತ್ತು. ಅಲ್ಪ ಮೊತ್ತದ ಗುರಿ ಬೆನ್ನತ್ತಿದ್ದ ವೆಸ್ಟ್‌ ಇಂಡೀಸ್‌ 36.4 ಓವರ್‌ಗಳಲ್ಲೇ 4 ವಿಕೆಟ್‌ ನಷ್ಟಕ್ಕೆ 182 ರನ್‌ಗಳಿಸಿ 6 ವಿಕೆಟ್‌ಗಳ ಜಯ ಸಾಧಿಸಿತು. ಇದನ್ನೂ ಓದಿ: T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

    ರೋಹಿತ್‌ ಶರ್ಮಾ (Rohit Sharm) ಹಾಗೂ ವಿರಾಟ್‌ ಕೊಹ್ಲಿ 2ನೇ ಪಂದ್ಯದಲ್ಲಿ ಹೊರಗುಳಿದಿದ್ದರಿಂದ ಹಾರ್ದಿಕ್‌ ಪಾಂಡ್ಯ (Hardik Pandya) ತಂಡದ ನಾಯಕತ್ವ ವಹಿಸಿಕೊಳ್ಳಬೇಕಾಯಿತು. ಆರಂಭಿಕರಾಗಿ ಕಣಕ್ಕಿಳಿದ ಶುಭಮನ್‌ ಗಿಲ್‌ ಹಾಗೂ ಇಶಾನ್‌ ಕಿಶನ್‌ ಜೋಡಿ 16.5 ಓವರ್‌ಗಳಲ್ಲಿ 90 ರನ್‌ಗಳ ಜೊತೆಯಾಟ ನೀಡಿತು. ನಂತರ ಕ್ರೀಸ್‌ಗಿಳಿದವರಲ್ಲಿ ಯಾರೊಬ್ಬರು ಸ್ಥಿರವಾಗಿ ಉಳಿಯದ ಕಾರಣ ಟೀಂ ಇಂಡಿಯಾ ಹೀನಾಯ ಸೋಲಿಗೆ ತುತ್ತಾಯಿತು.

    50 ಓವರ್ ಪೂರ್ಣ ಆಡಲಿಲ್ಲ:
    ಮೊದಲ ಪಂದ್ಯದಲ್ಲೂ ರೋಹಿತ್ ಮತ್ತು ಕೊಹ್ಲಿ ಅವರ ಬ್ಯಾಟಿಂಗ್ ಇಲ್ಲದೇ ಟೀಂ ಇಂಡಿಯಾ 115 ರನ್​ಗಳ ಗುರಿ ತಲುಪಲು ಸಾಕಷ್ಟು ಕಷ್ಟ ಪಡಬೇಕಾಯಿತು. ಮೊದಲ ಪಂದ್ಯದಲ್ಲಿ‌ ರೋಹಿತ್‌ 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಇಳಿದಿದ್ದು ವಿಶೇಷವಾಗಿತ್ತು. 2ನೇ ಏಕದಿನ ಪಂದ್ಯದಲ್ಲೂ ಭಾರತದ ಬ್ಯಾಟಿಂಗ್ ಮತ್ತೆ ಕಳಪೆ ಪ್ರದರ್ಶನ ನೀಡಿತು. ಈ ಬಾರಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 40.5 ಓವರ್‌ಗಳಲ್ಲಿ 181 ರನ್‌ಗಳಿಗೆ ಆಲೌಟ್ ಆಯಿತು. ಆದ್ರೆ ಆರಂಭಿಕ ಇಶಾನ್‌ ಕಿಶನ್‌ ಮಾತ್ರ ಬ್ಯಾಕ್‌ ಟು ಬ್ಯಾಕ್‌ ಅರ್ಧಶತಕ ಸಿಡಿಸಿ ಮಿಂಚಿದರು. ಇದನ್ನೂ ಓದಿ: ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

    ಟೀಂ ಇಂಡಿಯಾ ಪರ ಇಶಾನ್‌ ಕಿಶನ್‌ 55 ರನ್‌ (55 ಎಸೆತ, 6 ಬೌಂಡರಿ, 1 ಸಿಕ್ಸರ್)‌, ಶುಭಮನ್‌ ಗಿಲ್‌ 34 ರನ್‌ (49 ಎಸೆತ, 5 ಬೌಂಡರಿ) ಸೂರ್ಯಕುಮಾರ್‌ ಯಾದವ್‌ 24 ರನ್‌ ಗಳಿಸಿದರು. ಇನ್ನೂ ವಿಂಡೀಸ್‌ ಜವಾಬ್ದಾರಿಯುತ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಶಾಯ್‌ ಹೋಪ್‌ (Shai Hope) ಅಜೇಯ 63 ರನ್‌ (80 ಎಸೆತ, 2 ಬೌಂಡರಿ, 2 ಸಿಕ್ಸ್‌), ಕೈಲ್‌ ಮೇಯರ್ಸ್‌ 36 ರನ್‌ (28 ಎಸೆತ, 4 ಬೌಂಡರಿ, 2 ಸಿಕ್ಸರ್‌) ಗಳಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.

    ಈ ಪಂದ್ಯದಲ್ಲಿ ಎರಡೂ ತಂಡಗಳಲ್ಲಿಯೂ ಬೌಲರ್‌ಗಳು ಉತ್ತಮ ಹಿಡಿತ ಸಾಧಿಸಿದ್ದರು ವಿಂಡೀಸ್‌ ಪರ ಗುಡಾಕೇಶ್ ಮೋತಿ, ರೊಮಾರಿಯೋ ಶೆಫರ್ಡ್ ತಲಾ ಮೂರು ವಿಕೆಟ್‌ ಪಡೆದರೆ, ಟೀಂ ಇಂಡಿಯಾ ಪರ ಆಲ್‌ರೌಂಡರ್‌ ಶಾರ್ದೂಲ್‌ ಠಾಕೂರ್‌ 3 ವಿಕೆಟ್‌ ಪಡೆದು ಮಿಂಚಿದರು.

    ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ, ನಾವು ಅಂದುಕೊಂಡ ರೀತಿಯಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಮೊದಲ ಇನಿಂಗ್ಸ್‌ ಬಳಿಕ 2ನೇ ಇನ್ನಿಂಗ್ಸ್​ಗೆ ವಿಕೆಟ್‌ ಉತ್ತಮವಾಗಿತ್ತು. ಈ ಸೋಲಿನಿಂದ ನಿರಾಸೆಯಾಗಿದೆ. ಆದ್ರೆ ಅನೇಕ ವಿಷಯಗಳನ್ನ ಕಲಿತಿದ್ದೇವೆ. ವಿಶ್ವಕಪ್‌ಗೆ ಸಿದ್ಧವಾಗಲು ನಾನು ಇನ್ನಷ್ಟು ಹೆಚ್ಚು ಓವರ್‌ಗಳನ್ನ ಬೌಲ್ ಮಾಡಬೇಕಾಗಿದೆ. ವಿಶ್ವಕಪ್‌ ವೇಳೆಗೆ ಎಲ್ಲವೂ ಸರಿ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

    T20 WorldCup-2024 ಟೂರ್ನಿಯ ದಿನಾಂಕ ಬಹಿರಂಗ – USA, ವಿಂಡೀಸ್‌ ಆತಿಥ್ಯ

    ವಾಷಿಂಗ್ಟನ್‌: ಭಾರತದಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ (ODI WorldCup 2023) ಆರಂಭಕ್ಕೆ ಇನ್ನೂ 2 ತಿಂಗಳು ಬಾಕಿಯಿರುವ ಹೊತ್ತಿನಲ್ಲಿ 2024ರಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಯ (T20 World Cup 2024) ದಿನಾಂಕ ಬಹಿರಂಗಗೊಂಡಿದೆ.

    ಮುಂದಿನ ಬಾರಿ ಟಿ20 ವಿಶ್ವಕಪ್‌ ಚುಟುಕು ಸಮರಕ್ಕೆ ವೆಸ್ಟ್‌ ಇಂಡೀಸ್‌ (West Indies) ಮತ್ತು ಅಮೆರಿಕ (USA) ಜಂಟಿ ಆತಿಥ್ಯ ವಹಿಸಲಿವೆ. 2022ರ ಟಿ20 ವಿಶ್ವಕಪ್‌ ಟೂರ್ನಿಯು ಆಸ್ಟ್ರೇಲಿಯಾ (Australia) ಸಂಪೂರ್ಣ ಆತಿಥ್ಯ ವಹಿಸಿತ್ತು. ಇದನ್ನೂ ಓದಿ: ಇಂಡೋ-ಪಾಕ್‌ ಕದನಕ್ಕೆ ನವರಾತ್ರಿ ಅಡ್ಡಿಯಾಗುತ್ತಾ? – ಹೈವೋಲ್ಟೇಜ್‌ ಸಭೆಯಲ್ಲಿ BCCI ಹೇಳಿದ್ದೇನು?

    ಮಾಹಿತಿ ಪ್ರಕಾರ, 2024ರ T20 ವಿಶ್ವಕಪ್‌ ಟೂರ್ನಿಯು ಮುಂದಿನ ಜೂನ್‌ 4 ರಿಂದ ಜೂನ್‌ 30ರ ವರೆಗೆ ನಡೆಯಲಿದೆ. ಕಳೆದ ಎರಡು ಆವೃತ್ತಿಗಳಲ್ಲಿಯೂ ಅಕ್ಟೋಬರ್‌ನಲ್ಲಿ ಟೂರ್ನಿ ಆಯೋಜನೆ ಮಾಡಲಾಗಿತ್ತು. ಈಗಾಗಲೇ ಐಸಿಸಿ ಅಧಿಕಾರಿಗಳು ಅಮೆರಿಕದಲ್ಲಿ ಆತಿಥ್ಯ ವಹಿಸುವ ಸಂಭಾವ್ಯ ಸ್ಥಳಗಳ ಪರಿಶೀಲನೆ ನಡೆಸಿದ್ದಾರೆ. ಒಟ್ಟಾರೆ ಕೆರೆಬಿಯನ್‌ ಮತ್ತು ಯುಎಸ್‌ನ 10 ಸ್ಥಳಗಳಲ್ಲಿ ವಿಶ್ವಕಪ್‌ ಟೂರ್ನಿ ಜರುಗಲಿದ್ದು, ಯುನೈಟೆಡ್ ಸ್ಟೇಟ್ಸ್‌ನ ಲಾಡರ್‌ ಹಿಲ್‌, ಮೋರಿಸ್ವಿಲ್ಲೆ, ಡಲ್ಲಾಸ್, ನ್ಯೂಯಾರ್ಕ್ ಜೊತೆಗೆ ಫ್ಲೋರಿಡಾದಲ್ಲಿಯೂ ಪಂದ್ಯಗಳನ್ನ ಆಯೋಜಿಸಲಾಗುತ್ತಿದೆ ಎಂದು ತಿಳಿಬಂದಿದೆ.

    ಲಾಡರ್‌ಹೀಲ್‌ನಲ್ಲಿ ಈಗಾಗಲೇ ಅಂತಾರಾಷ್ಟ್ರೀಯ ಟಿ20 ಪಂದ್ಯಗಳು ಆಯೋಜನೆಗೊಂಡಿವೆ. ಪ್ರಸ್ತುತ ಮೇಜರ್‌ ಲೀಗ್‌ ಕ್ರಿಕೆಟ್‌ ಕೂಡ ಆಯೋಜನೆಗೊಂಡಿದೆ. ಆದ್ರೆ‌ ಡಲ್ಲಾರ್‌, ಮಾರಿಸ್ವಿಲ್ಲೆ ಮತ್ತು ನ್ಯೂಯಾರ್ಕ್‌ನ ಸ್ಥಳಗಳು ಐಸಿಸಿಯಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದುಕೊಂಡಿಲ್ಲ. ಹಾಗಾಗಿ ಸ್ಥಳ ಪರಿಶೀಲನೆ ನಡೆಸಿದ ಬಳಿಕ ಅಧಿಕೃತ ಸ್ಥಳಗಳ ಮಾಹಿತಿ ಹೊರಬೀಳಲಿದೆ. ಸದ್ಯ ಏಕದಿನ ವಿಶ್ವಕಪ್‌ ತಯಾರಿಯಲ್ಲಿರುವ ಬಿಸಿಸಿಐ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಈ ಬಾರಿ ಭಾರತದ ಸಂಪೂರ್ಣ ಆತಿಥ್ಯದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ಟೂರ್ನಿಯೂ ಅಕ್ಟೋಬರ್‌ 5 ರಿಂದ ನವೆಂಬರ್‌ 19ರ ವರೆಗೆ ದೇಶದ ವಿವಿಧ ಕ್ರೀಡಾಂಗಣಗಳಲ್ಲಿ ನಡೆಯಲಿದೆ. ಇದನ್ನೂ ಓದಿ: ಟೀಂ ಇಂಡಿಯಾ ರೋಹಿತ್‌, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

    ವಿಶ್ವಕಪ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ತಿಣುಕಾಡಿ ಗೆದ್ದ ಭಾರತ

    ಬ್ರಿಡ್ಜ್‌ಟೌನ್‌: ಬೌಲರ್‌ಗಳ ಅತ್ಯುತ್ತಮ ಪ್ರದರ್ಶನದ ನಡುವೆಯೂ ವಿಂಡೀಸ್‌ (West Indies) ವಿರುದ್ಧದ ಮೊದಲ ಏಕದಿನ ಕ್ರಿಕೆಟ್‌ ಪಂದ್ಯವನ್ನು ಭಾರತ ತಿಣುಕಾಡಿ (Team India) 5 ವಿಕೆಟ್‌ಗಳಿಂದ ಗೆದ್ದುಕೊಂಡಿದೆ.

    ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ ಕೇವಲ 23 ಓವರ್‌ಗಳಲ್ಲಿ 114 ರನ್‌ಗಳಿಗೆ ಆಲೌಟ್‌ ಆಯ್ತು. ಸುಲಭದ ಗುರಿಯನ್ನು ಬೆನ್ನಟ್ಟಿದ ಭಾರತ 22.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 118 ರನ್‌ ಗಳಿಸಿ ಗುರಿ ತಲುಪಿತು. ಏಕದಿನ ವಿಶ್ವಕಪ್ ಕ್ರಿಕೆಟ್‌ಗೆ ಅರ್ಹತೆ ಪಡೆಯದ ವಿಂಡೀಸ್‌ ವಿರುದ್ಧ ಟೀಂ ಇಂಡಿಯಾ 5 ವಿಕೆಟ್‌  ಕಳೆದುಕೊಂಡಿರುವುದರ ಬಗ್ಗೆ ಈಗ ಚರ್ಚೆ ಆರಂಭವಾಗಿದೆ.

    ಭಾರತದ ಪರ ಆರಂಭಿಕ ಆಟಗಾರ ಇಶನ್‌ ಕಿಶನ್‌ (Ishan Kishan) 4ನೇ ಅರ್ಧಶತಕ ಸಿಡಿಸಿ 52 ರನ್‌(46 ಎಸೆತ, 7 ಬೌಂಡರಿ, 1 ಸಿಕ್ಸರ್‌) ಸಿಡಿಸಿ ಔಟಾದರು. ಸೂರ್ಯಕುಮಾರ್‌ ಯಾದವ್‌ (Suryakumar Yadav) 19 ರನ್‌ ಹೊಡೆದರು. ನಾಯಕ ರೋಹಿತ್‌ ಶರ್ಮಾ (Rohith Sharma) 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದಿದ್ದು ವಿಶೇಷವಾಗಿತ್ತು. ರವೀಂದ್ರ ಜಡೇಜಾ ಔಟಾಗದೇ 16 ರನ್‌, ರೋಹಿತ್‌ ಶರ್ಮಾ ಔಟಾಗದೇ 12 ರನ್‌ ಹೊಡೆದರು. ಶುಭಮನ್‌ ಗಿಲ್‌ 7 ರನ್‌, ಹಾರ್ದಿಕ್‌ ಪಾಂಡ್ಯ 5, ಶಾರ್ದೂಲ್‌ ಠಾಕೂರ್‌ 1 ರನ್‌ ಗಳಿಸಿ ಔಟಾದರು. ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ಗೆ ಇಳಿದಿರಲಿಲ್ಲ.  ಇದನ್ನೂ ಓದಿ: ಟೀಂ ಇಂಡಿಯಾ ರೋಹಿತ್‌, ಕೊಹ್ಲಿಯನ್ನ ನೆಚ್ಚಿಕೊಂಡಿಲ್ಲ – ಶ್ರೀಲಂಕಾ ಮಾಜಿ ಕ್ರಿಕೆಟಿಗ ಹೀಗಂದಿದ್ಯಾಕೆ?

    3 ವಿಕೆಟ್‌ ನಷ್ಟಕ್ಕೆ 88 ರನ್‌ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ವಿಂಡೀಸ್‌ 26 ರನ್‌ಗಳಿಸುವಷ್ಟರಲ್ಲಿ 7 ವಿಕೆಟ್‌ ಕಳೆದುಕೊಂಡ ಪರಿಣಾಮ ಹೀನಾಯ ಸೋಲನ್ನು ಅನುಭವಿಸಿತು. ನಾಯಕ ಶಾಯ್ ಹೋಪ್ (Shai Hope) 43 ರನ್‌(45 ಎಸೆತ, 4 ಬೌಂಡರಿ, 1 ಸಿಕ್ಸರ್)‌, ಅಲಿಕ್ ಅಥಾನಾಜೆ 22 ರನ್‌(18 ಎಸೆತ, 3 ಬೌಂಡರಿ, 1 ಸಿಕ್ಸರ್)‌ ಹೊಡೆದು ಸ್ವಲ್ಪ ಪ್ರತಿರೋಧ ತೋರಿದರು.

    https://twitter.com/avnishtiwarii/status/1684625773926440965

    ಕುಲದೀಪ್‌ ಯಾದವ್‌ 4 ವಿಕೆಟ್‌ ಕಿತ್ತರೆ, ಜಡೇಜಾ 3 ವಿಕೆಟ್‌ ಪಡೆದರು. ಹಾರ್ದಿಕ್‌ ಪಾಂಡ್ಯ , ಮುಕೇಶ್‌ ಕುಮಾರ್‌, ಶಾರ್ದೂಲ್‌ ಠಾಕೂರ್‌ ತಲಾ ಒಂದೊಂದು ವಿಕೆಟ್‌ ಪಡೆದರು.


    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]