Tag: West Indies

  • ಉಮೇಶ್ ಯಾದವ್‍ಗೆ 10 ವಿಕೆಟ್ – ಸರಣಿ ಕ್ಲೀನ್ ಸ್ವೀಪ್‍ಗೈದ ಟೀಂ ಇಂಡಿಯಾ

    ಉಮೇಶ್ ಯಾದವ್‍ಗೆ 10 ವಿಕೆಟ್ – ಸರಣಿ ಕ್ಲೀನ್ ಸ್ವೀಪ್‍ಗೈದ ಟೀಂ ಇಂಡಿಯಾ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವಿಂಡಿಸ್ ವಿರುದ್ಧ 10 ವಿಕೆಟ್‍ಗಳ ಜಯವನ್ನು ಸಾಧಿಸುವುದರೊಂದಿಗೆ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದೆ.

    3ನೇ ದಿನದ ಆಟದಲ್ಲಿ 56 ರನ್ ಹಿನ್ನಡೆಯೊಂದಿಗೆ ಬ್ಯಾಟಿಂಗ್ ಆರಂಭಿಸಿದ ವೆಸ್ಟ್ ಇಂಡೀಸ್ ಟೀಂ ಇಂಡಿಯಾ ವೇಗಿ ಉಮೇಶ್ ಯಾದವ್ ದಾಳಿಗೆ ಸಿಲುಕಿ ಕೇವಲ 46.1 ಓವರ್ ಗಳಲ್ಲಿ 127 ರನ್ ಗಳಿಗೆ ಅಲೌಟ್ ಆಯಿತು. ಈ ಮೂಲಕ ಭಾರತಕ್ಕೆ 72 ರನ್ ಗೆಲುವಿನ ಗುರಿ ನೀಡಿತು.

    ಇದಕ್ಕೂ ಮುನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ 6 ರನ್ ಗಳಿಸುವ ವೇಳೆಗೆ ಯಾದವ್ ಹಾಗೂ ಅಶ್ವಿನ್ ಆರಂಭಿಕ ಆಟಗಾರರ ವಿಕೆಟ್ ಪಡೆದು ಅಘಾತ ನೀಡಿದರು. ಆರಂಭಿಕರಾದ ಕ್ರೇಗ್ ಬ್ರೇಥ್‍ವೈಟ್, ಕೀರನ್ ಪೊವೆಲ್ ಶೂನ್ಯ ಸುತ್ತಿ ಔಟಾದರು. ಬಳಿಕ ತಂಡಕ್ಕೆ ಆಸರೆಯಾಗುವ ನಿರೀಕ್ಷೆ ಮೂಡಿಸಿದ್ದ ಶಾಯ್ ಹೋಪ್ 28 ರನ್ ಹಾಗೂ ಶಿಮೊನ್ ಹೇಟ್ಮೆಯರ್ 17 ರನ್ ಗಳಿಸಿದ್ದ ವೇಳೆ ಪೆವಿಲಿಯನ್ ಸೇರಿದರು.

    ಇದಕ್ಕೂ ಮುನ್ನ  2ನೇ ಇನ್ನಿಂಗ್ಸ್ ನಲ್ಲಿ ಸರಳ ಗುರಿ ಬೆನ್ನತ್ತಿದ್ದ ಭಾರತ ಆರಂಭಿಕರಾದ ಕೆಎಲ್ ರಾಹುಲ್ 33 ರನ್ ಹಾಗೂ ಮೊದಲ ಇನ್ನಿಂಗ್ಸ್ ನಲ್ಲಿ ಅರ್ಧ ಶತಕ ಸಿಡಿಸಿ ಮಿಂಚಿದ್ದ ಪೃಥ್ವಿ ಶಾ 33 ರನ್ ಗಳಿಸಿ ಭಾರತಕ್ಕೆ ಗೆಲುವು ತಂದರು.

    ವಿಂಡೀಸ್ ಪರ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಮಿಂಚಿದ್ದ ರಾಸ್ಟರ್ ಚೇಸ್ (6 ರನ್)ರನ್ನು ಯಾದವ್ ಬಲಿ ಪಡೆದರು. ಈ ವೇಳೆಗೆ 12 ರನ್ ಮಾತ್ರ ಮುನ್ನಡೆ ಪಡೆದಿದ್ದ ವಿಂಡೀಸ್ 68 ರನ್ ಗಳಿಗೆ ಪ್ರಮುಖ 5 ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಈ ಹಂತದಲ್ಲಿ ಬಂದ ಶೇನ್ ಡೊರಿಚ್ (0 ರನ್), ನಾಯಕ ಜೇಸನ್ ಹೋಲ್ಡರ್ (19 ರನ್), ಜಾರ್ನೆಲ್ ವಾರಿಕಾನ್ (7 ರನ್), ಗ್ಯಾಬ್ರಿಯಲ್ (1 ರನ್) ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿದರು. ಅಂತಿಮವಾಗಿ ದೇವೇಂದ್ರ ಬಿಷೊ 10 ರನ್ ಗಳಿಸಿ ಔಟಾಗದೆ ಉಳಿದರು. 46.1 ಓವರ್‍ಗಳಲ್ಲಿ 127 ರನ್‍ಗಳಿಗೆ ಸರ್ವಪತನವನ್ನು ಕಂಡಿತು.

    ಟೀಂ ಇಂಡಿಯಾ ಪರ ಮೊದಲ ಇನ್ನಿಂಗ್ಸ್ ನಲ್ಲಿ 6 ವಿಕೆಟ್ ಪಡೆದು ಮಿಂಚಿದ್ದ ಉಮೇಶ್ ಯಾದವ್ 2ನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಪಡೆದು ವಿಂಡೀಸ್ ಗೆ ಪತನಕ್ಕೆ ಕಾರಣರಾದರು. ಉಳಿದಂತೆ ರವೀಂದ್ರ ಜಡೇಜಾ 3, ಆರ್ ಅಶ್ವಿನ್ 2, ಕುಲ್ದೀಪ್ ಯಾದವ್ 1 ವಿಕೆಟ್ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಿಸ್ಬಾ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ

    ಮಿಸ್ಬಾ ಉಲ್ ಹಕ್ ದಾಖಲೆ ಮುರಿದ ಕೊಹ್ಲಿ

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಹೊಸ ದಾಖಲೆ ನಿರ್ಮಾಣ ಮಾಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ರನ್ ಸಿಡಿಸಿದ ಏಷ್ಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ಪಾಕಿಸ್ತಾನದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ 56 ಪಂದ್ಯ 99 ಇನ್ನಿಂಗ್ಸ್ ಗಳಲ್ಲಿ 4,214 ರನ್ ಗಳಿಸಿದ್ದರು. ಸದ್ಯ ಕೊಹ್ಲಿ ಕೇವಲ 42 ಪಂದ್ಯ 69 ಇನ್ನಿಂಗ್ಸ್ ಗಳಲ್ಲಿ 4,233 ರನ್ ಸಿಡಿಸಿದ್ದಾರೆ. ಈ ಪಂದ್ಯದಲ್ಲಿ 26 ರನ್ ಗಳಿಸಿದ್ದ ವೇಳೆ ಕೊಹ್ಲಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾ ಆಟಗಾರ ಜಯವರ್ಧನೆ 3,665 ರನ್ ಗಳಿಸಿ 3ನೇ ಸ್ಥಾನದಲ್ಲಿದ್ದು, ನಂತರದಲ್ಲಿ ಧೋನಿ 3,454 ರನ್, ಗವಾಸ್ಕರ್ 3,449 ರನ್ ಗಳಿಸಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.

    ದಕ್ಷಿಣ ಆಫ್ರಿಕಾ ಆಟಗಾರ ಗ್ರೇಮ್ ಸ್ಮಿತ್ ಟೆಸ್ಟ್ ಕ್ರಿಕೆಟ್ ತಂಡ ನಾಯಕನಾಗಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಹೊಂದಿದ್ದು, 109 ಪಂದ್ಯಗಳಲ್ಲಿ 8,659 ರನ್ ಸಿಡಿಸಿದ್ದಾರೆ. ಇದರಲ್ಲಿ 25 ಶತಕಗಳು ಸೇರಿದೆ. ವಿರಾಟ್ ಕೊಹ್ಲಿ ತಂಡದ ನಾಯಕನಾಗಿ ಈಗಾಗಲೇ 24 ಶತಕಗಳನ್ನು ಪೂರೈಸಿದ್ದು, 25 ಶತಕ ಪೂರೈಸಿದರೆ ವೇಗವಾಗಿ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ದಾಖಲೆಗೆ ನಿರ್ಮಿಸಲಿದ್ದಾರೆ. ಸದ್ಯ ಬ್ರಾಡ್ ಮನ್ 68 ಇನ್ನಿಂಗ್ಸ್ ಗಳಲ್ಲಿ 25 ಶತಕಗಳನ್ನು ಪೂರೈಸಿದ ಆಟಗಾರ ಎಂಬ ಹೆಗ್ಗಳಿಕೆ ಪಡೆದಿದ್ದಾರೆ.

    ವಿಂಡೀಸ್ ವಿರುದ್ಧ 2ನೇ ಟೆಸ್ಟ್ ನಲ್ಲಿ ಅರ್ಧಶತಕದ ಅಂಚಿನಲ್ಲಿ ಎಡವಿದ ಕೊಹ್ಲಿ 78 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಿಂದ 45 ರನ್ ಗಳಿಸಿ ಹೊಲ್ಡರ್ ಬೌಲಿಂಗ್ ನಲ್ಲಿ ಎಲ್‍ಬಿ ಬಲೆಗೆ ಬಿದ್ದು ಪೆವಿಲಿಯನ್ ಸೇರಿದರು. ಇದಕ್ಕೂ ಮುನ್ನ ಆರಂಭಿಕರಾಗಿ ಕಣಕ್ಕೆ ಇಳಿದ ಪೃಥ್ವಿ ಶಾ ಅರ್ಧಶತಕ ಸಿಡಿಸಿ ಮಿಂಚಿದರೆ, ಕೆಎಲ್ ರಾಹುಲ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೃಥ್ವಿ ಶಾ ಆಟಕ್ಕೆ ಆಕರ್ಷಿತನಾಗಿದ್ದೇನೆ : ಕನ್ನಡಿಗ ಗುಂಡಪ್ಪ ವಿಶ್ವನಾಥ್

    ಪೃಥ್ವಿ ಶಾ ಆಟಕ್ಕೆ ಆಕರ್ಷಿತನಾಗಿದ್ದೇನೆ : ಕನ್ನಡಿಗ ಗುಂಡಪ್ಪ ವಿಶ್ವನಾಥ್

    ಚೆನ್ನೈ: ಟೀಂ ಇಂಡಿಯಾ ಯುವ ಆಟಗಾರರ ಪೃಥ್ವಿ ಶಾ ಅವರ ಆಟದ ಶೈಲಿಗೆ ನಾನು ಬಹಳ ಆಕರ್ಷಿತನಾಗಿದ್ದು, ಇದು ಶಾ ವೃತ್ತಿಜೀವನದ ಆರಂಭ ದಿನಗಳಾದರೂ ಅವರ ಆಟವನ್ನು ನೋಡಲು ಇಷ್ಟವಾಗುತ್ತದೆ ಎಂದು ಮಾಜಿ ಕ್ರಿಕೆಟ್ ಆಟಗಾರ ಜಿಆರ್ ವಿಶ್ವನಾಥ್ ಹೇಳಿದ್ದಾರೆ.

    ಚೆನ್ನೈನಲ್ಲಿ ಈ ಕುರಿತು ಮಾತನಾಡಿದ ವಿಶ್ವನಾಥ್ ಅವರು, ಶಾ ಆಟವನ್ನು ನಾನು ಕಳೆದ ಕೆಲ ಸಮಯದಿಂದ ನೋಡುತ್ತಿದ್ದೇನೆ. ರಣಜಿ ಇನ್ನಿಂಗ್ಸ್‍ನಲ್ಲೂ ಶಾ ಬ್ಯಾಟಿಂಗ್ ಶೈಲಿಯನ್ನು ಗಮನಿಸಿದ್ದೇನೆ. ಟೆಸ್ಟ್ ಕ್ರಿಕೆಟ್‍ನಲ್ಲೂ ಅವರು ಶೈಲಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದು ಅವರಲ್ಲಿನ ಸಾಮಥ್ರ್ಯವನ್ನು ತೋರಿಸುತ್ತದೆ ಎಂದು ತಿಳಿಸಿದ್ದಾರೆ.

    ಇದೇ ವೇಳೆ ವಿದೇಶಿ ನೆಲದಲ್ಲಿ ಶಾ ಯಶಸ್ವಿ ಆಗುತ್ತಾರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದೇ ಒಬ್ಬ ಆಟಗಾರ ಪ್ರದರ್ಶನವನ್ನು ನೋಡಿ ಅವರ ಈ ಕುರಿತು ನಿರ್ಧರಿಸಬೇಕಾಗುತ್ತದೆ. ಯಾರೂ ಪ್ರದರ್ಶನಕ್ಕೆ ಮುನ್ನವೇ ತಿಳಿಯಲು ಸಾಧ್ಯವಿಲ್ಲ. ಆದರೆ ಶಾ ರಣಜಿ, ದುಲೀಪ್ ಟ್ರೋಫಿಯಲ್ಲಿ ಉತ್ತಮ ರನ್ ಗಳಿಸಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲೂ ರನ್ ಗಳಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

    ಈಗಾಗಲೇ ಶಾ ತಾವು ಉತ್ತಮ ಆರಂಭಿಕ ಆಟಗಾರ ಎಂದು ಸಾಬೀತು ಪಡಿಸಿದ್ದಾರೆ. ಒಬ್ಬ ಆರಂಭಿಕನಾಗಿ ಅವರ ಬ್ಯಾಟಿಂಗ್ ಶೈಲಿ ಅತ್ಯುತ್ತಮವಾಗಿದೆ. ಅದ್ದರಿಂದ ಅವರು ಹೆಚ್ಚಿನ ಅವಕಾಶಗಳನ್ನು ಪಡೆಯುವ ಆರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಶಾ 2ನೇ ಟೆಸ್ಟ್ ನಲ್ಲೂ ಬಿರುಸಿನ ಆಟವಾಡಿದ್ದು, ಕೇವಲ 39 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿ ಮಿಂಚಿದ್ದರು. 70 ಎಸೆತಗಳಲ್ಲಿ 11 ಅಕರ್ಷಕ ಬೌಂಡರಿ, 1 ಸಿಕ್ಸರ್ ನೆರವಿನಿಂದ 70 ರನ್ ಸಿಡಿಸಿ ಜಾರ್ನೆಲ್ ವಾರಿಕಾನ್ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದ್ದಾರೆ. ಈ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆನ್ ಫೀಲ್ಡ್ ನಲ್ಲೇ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ!

    ಆನ್ ಫೀಲ್ಡ್ ನಲ್ಲೇ ಕೊಹ್ಲಿಗೆ ಮುತ್ತು ಕೊಡಲು ಮುಂದಾದ ಅಭಿಮಾನಿ!

    ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅಭಿಮಾನಿಯೊಬ್ಬ ನಾಯಕ ವಿರಾಟ್ ಕೊಹ್ಲಿಗೆ ಮುತ್ತು ನೀಡಲು ಯತ್ನಿಸಿದ ಘಟನೆ ನಡೆದಿದೆ.

    ಕ್ರೀಡಾಂಗಣದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆ ಇದ್ದರೂ ಕೂಡ ಸಿಬ್ಬಂದಿಯ ಕಣ್ತಪ್ಪಿಸಿ ಅಭಿಮಾನಿಯೊಬ್ಬ ಪಂದ್ಯದ 15ನೇ ಓವರ್ ವೇಳೆ ಮೈದಾನಕ್ಕೆ ಪ್ರವೇಶ ಮಾಡಿದ್ದ. ಈ ವೇಳೆ ನೇರ ಕೊಹ್ಲಿ ಬಳಿ ತೆರಳಿದ ಆತ ಸೆಲ್ಫಿ ತೆಗೆದುಕೊಂಡಿದ್ದಾನೆ. ಆದರೆ ಬಳಿಕ ಕೊಹ್ಲಿಯನ್ನು ಅಪ್ಪಿಕೊಂಡು ಕಿಸ್ ಮಾಡಲು ಯತ್ನಿಸಿದ್ದು, ಅಭಿಮಾನಿಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    https://twitter.com/cricketdrug/status/1050659963322818560

    ಘಟನೆ ವೇಳೆ ಅಭಿಮಾನಿಯಿಂದ ಅಂತರ ಕಾಯ್ದುಕೊಂಡ ಕೊಹ್ಲಿ ಭದ್ರತಾ ಸಿಬ್ಬಂದಿ ಬರುವವರೆಗೂ ಅಲ್ಲಿಯೇ ನಿಂತಿದ್ದರು. ಇದರಿಂದ ಕೊಹ್ಲಿ ಕೆಲ ಕಾಲ ಮುಜುಗರಕ್ಕೆ ಒಳಗಾಗಿದ್ದರು. ಅಭಿಮಾನಿಯ ಹುಚ್ಚಾಟಕ್ಕೆ ಕೆಲ ಕಾಲ ಆಟ ಮುಂದುವರಿಸಲು ಅಡ್ಡಿ ಉಂಟಾಯಿತು. ಈ ಹಿಂದೆ ರಾಜ್ ಕೋಟ್ ಸೌರಾಷ್ಟ್ರ ಆಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲೂ ಅಭಿಮಾನಿಯೊಬ್ಬ ರಕ್ಷಣಾ ಸಿಬ್ಬಂದಿ ಕಣ್ತಪಿಸಿ ಮೈದಾನ ಪ್ರವೇಶಿಸಿದನ್ನು ನೆನಪಿಸಬಹುದಾಗಿದೆ.

    ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡ ಉತ್ತಮ ಆರಂಭ ಪಡೆಯಿತು. ಆದರೆ ಟೀಂ ಇಂಡಿಯಾ ಸ್ಪಿನ್ನರ್ ಗಳು ಮತ್ತೊಮ್ಮೆ ಎದುರಾಳಿ ತಂಡಕ್ಕೆ ಮುಳುವಾದರು. ವಿಂಡೀಸ್ ಬ್ಯಾಟ್ಸ್ ಮನ್‍ಗಳ ಪ್ರಮುಖ 3 ವಿಕೆಟ್ ಉರುಳಿದ ಕುಲ್ದೀಪ್ ಯಾದವ್ ರಿಂದ ಭಾರತ ಮೇಲುಗೈ ಸಾಧಿಸಿದೆ.

    ಇತ್ತೀಚಿನ ವರದಿ ಬಂದಾಗ ವಿಂಡೀಸ್ 61.3 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 184 ರನ್ ಗಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

    ವಿಂಡೀಸ್ ವಿರುದ್ಧದ 2 ಏಕದಿನ ಪಂದ್ಯಗಳಿಗೆ ಟೀಂ ಇಂಡಿಯಾ ಪ್ರಕಟ- ದಿನೇಶ್‍ಗೆ ಕೋಕ್, ರಿಷಭ್ ಪಂತ್ ಇನ್

    ಮುಂಬೈ: ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಟೂರ್ನಿಯ 2 ಪಂದ್ಯಗಳಿಗೆ ಬಿಸಿಸಿಐ ಟೀಂ ಇಂಡಿಯಾ ತಂಡವನ್ನು ಪ್ರಕಟ ಮಾಡಿದ್ದು, ಆಯ್ಕೆ ಸಮಿತಿ ದಿನೇಶ್ ಕಾರ್ತಿಕ್ ಅವರಿಗೆ ಕೋಕ್ ನೀಡಿ ಯುವ ಆಟಗಾರ ರಿಷಭ್ ಪಂತ್‍ರನ್ನು ಆಯ್ಕೆ ಮಾಡಿದೆ.

    ಏಷ್ಯಾಕಪ್‍ನಲ್ಲಿ ವಿಶ್ರಾಂತಿ ಪಡೆದಿದ್ದ ನಾಯಕ ವಿರಾಟ್ ಕೊಹ್ಲಿ ಅವರು ಮತ್ತೆ ತಂಡದ ನಾಯಕತ್ವ ವಹಿಸಿದ್ದಾರೆ. ಸದ್ಯ 14 ಆಟಗಾರರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ತಂಡದಲ್ಲಿ ದಿನೇಶ್ ಕಾರ್ತಿಕ್, ಕೇದರ್ ಜಾದವ್, ಬುಮ್ರಾ, ಭುವನೇಶ್ವರ್, ಹಾರ್ದಿಕ್ ಪಾಂಡ್ಯ ಅವರಿಗೆ ಮೊದಲ ಎರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಹಾರ್ದಿಕ್ ಪಾಂಡ್ಯ, ಕೇದರ್ ಜಾದವ್ ಗಾಯದ ಸಮಸ್ಯೆಯಿಂದ ಚೇತರಿಕೆ ಪಡೆಯುತ್ತಿದ್ದಾರೆ. ಏಷ್ಯಾಕಪ್ ಕಪ್ ಕ್ರಿಕೆಟ್ ಟೂರ್ನಿಯ ವೇಳೆ ಇಬ್ಬರು ಆಟಗಾರರು ಗಾಯಗೊಂಡಿದ್ದರು.

    ಏಷ್ಯಾಕಪ್ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸ್ಥಾನ ಪಡೆದಿದ್ದ ದಿನೇಶ್ ಕಾರ್ತಿಕ್ 5 ಇನ್ನಿಂಗ್ಸ್ ಗಳಿಂದ 146 ರನ್ ಮಾತ್ರ ಗಳಿಸಿದ್ದರು. ಆದರೆ ಇತ್ತೀಚಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ ರಿಷಭ್ ಪಂತ್ ಉತ್ತಮ ಪ್ರದರ್ಶನ ನೀಡುತ್ತಿದ್ದು, ಇದರ ಹಿನ್ನೆಲೆಯಲ್ಲಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಏಕದಿನ ಟೂರ್ನಿ ಅಕ್ಟೋಬರ್ 21 ರಿಂದ ನವೆಂಬರ್ 1ವರೆಗೂ ನಡೆಯಲಿದೆ.

    ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಟಿ ರಾಯುಡು, ಮನೀಷ್ ಪಾಂಡೆ, ಧೋನಿ (ಕೀಪರ್), ರಿಷಭ್ ಪಂತ್, ಆರ್ ಜಡೇಜಾ, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಖಲೀಲ್ ಅಹ್ಮದ್, ಶಾರ್ದೂಲ್ ಠಾಕೂರ್, ಕೆಎಲ್ ರಾಹುಲ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ವಿಂಡೀಸ್ 2ನೇ ಟೆಸ್ಟ್ ಪಂದ್ಯದಲ್ಲೂ ಮಾಯಾಂಕ್‍ಗೆ ಸಿಗದ ಅವಕಾಶ- ನೆಟ್ಟಿಗರು ಗರಂ

    ವಿಂಡೀಸ್ 2ನೇ ಟೆಸ್ಟ್ ಪಂದ್ಯದಲ್ಲೂ ಮಾಯಾಂಕ್‍ಗೆ ಸಿಗದ ಅವಕಾಶ- ನೆಟ್ಟಿಗರು ಗರಂ

    ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ 2ನೇ ಹಾಗೂ ಅಂತಿಮ ಪಂದ್ಯಕ್ಕೆ ಬಿಸಿಸಿಐ ಟೀಂ ಇಂಡಿಯಾವನ್ನು ಪ್ರಕಟಿಸಿದೆ. ಈ ಪಂದ್ಯದಲ್ಲಿ ಅವಕಾಶ ಪಡೆಯುವ ನಿರೀಕ್ಷೆಯಲ್ಲಿದ್ದ ಮಯಾಂಕ್ ಮತ್ತೆ ಬೆಂಚ್ ಕಾಯಬೇಕಿದೆ.

    ಆ.12 ರಿಂದ ಹೈದರಾಬಾದ್ ಕ್ರೀಡಾಂಗಣದಲ್ಲಿ ಟೆಸ್ಟ್ ಆರಂಭವಾಗಲಿದ್ದು, 12 ಸದಸ್ಯರ ತಂಡದ ಪಟ್ಟಿಯಲ್ಲಿ ಶರ್ದೂಲ್ ಠಾಕೂರ್ ಅವಕಾಶ ಪಡೆದಿದ್ದು, ಮೊಹಮ್ಮದ್ ಸಿರಾಜ್‍ರನ್ನು ಕೈಬಿಡಲಾಗಿದೆ.

    ಮೊದಲ ಟೆಸ್ಟ್ ಪಂದ್ಯದಂತೆ ಪೃಥ್ವಿ ಶಾ, ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ರಾಜ್ ಕೋಟ್‍ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪೃಥ್ವಿ ಮೊದಲ ಶತಕ ಸಿಡಿಸಿ ಮಿಂಚಿದ್ದರು. ಆದರೆ ಟೀಂ ಇಂಡಿಯಾ ಮಧ್ಯಮ ಕ್ರಮಾಂಕದ ಸಮಸ್ಯೆಗೆ ಪರಿಹಾರವಾಗಿ ಮಯಾಂಕ್ ಗೆ ಅವಕಾಶ ನೀಡಬೇಕು ಎಂದು ಹಲವು ಹಿರಿಯ ಆಟಗಾರರು ಅಭಿಪ್ರಾಯ ಪಟ್ಟಿದ್ದರು.

    ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡುವ ಆಸೆ ಹೊಂದಿದ್ದ ಮಯಾಂಕ್ ರೊಂದಿಗೆ ಹನುಮ ವಿಹಾರಿ ಕೂಡ ಅವಕಾಶ ವಂಚಿತರಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿದ್ದ ವಿಹಾರಿ 3 ವಿಕೆಟ್ ಪಡೆದು ಮಿಂಚಿದ್ದರು.

    ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಪೃಥ್ವಿ ಶಾ , ಕೆಎಲ್ ರಾಹುಲ್, ಚೇತೇಶ್ವರ ಪೂಜಾರ, ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಆರ್ ಅಶ್ವಿನ್, ಕಲ್ದೀಪ್ ಯಾದವ್, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಶಾದೂಲ್ ಠಾಕೂರ್.

    ಪಂದ್ಯ ಆರಂಭ: ಅಕ್ಟೋಬರ್ 12 ಬೆಳಗ್ಗೆ 9.30ಕ್ಕೆ
    ಸ್ಥಳ: ಹೈದರಾಬಾದ್, ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/mrasheedbabu/status/1050282559345635328?

  • ಕೊಹ್ಲಿಗೆ ವಿಶ್ರಾಂತಿ ನೀಡಿ ಮಯಾಂಕ್‍ಗೆ ಸ್ಥಾನ ನೀಡಿ

    ಕೊಹ್ಲಿಗೆ ವಿಶ್ರಾಂತಿ ನೀಡಿ ಮಯಾಂಕ್‍ಗೆ ಸ್ಥಾನ ನೀಡಿ

    ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ಆ.12 ರಿಂದ ಆರಂಭಗೊಳ್ಳಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ವಿಶ್ರಾಂತಿ ಪಡೆದು ಮಯಾಂಕ್ ಅಗರ್ವಾಲ್‍ಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡಬೇಕು ಎಂದು ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಮುರಳಿ ಕಾರ್ತಿಕ್ ಹೇಳಿದ್ದಾರೆ.

    ಮೊದಲ ಟೆಸ್ಟ್ ಪಂದ್ಯದಲ್ಲಿ ತಂಡ ಭರ್ಜರಿ ಜಯ ಪಡೆದಿರುವುದರಿಂದ ಆಡುವ 11ರ ಬಳಗದಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬಹುದು. ಇದೇ ವೇಳೆ ಮುಂದಿನ ಆಸೀಸ್ ಟೂರ್ನಿಗೂ ಮುನ್ನ ಮಯಾಂಕ್ ತನ್ನ ಸಾಮರ್ಥ್ಯ ಸಾಬೀತು ಪಡಿಸಲು 2ನೇ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಬೇಕು ಎಂದು ಕಾರ್ತಿಕ್ ಅಭಿಪ್ರಾಯ ಪಟ್ಟಿದ್ದಾರೆ.

    ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಮುರಳಿ ಕಾರ್ತಿಕ್, ವಿರಾಟ್ ಚಾಂಪಿಯನ್ ಪ್ಲೇಯರ್. ಆದರೆ ಈ ಸರಣಿಯನ್ನು ವಿರಾಟ್ ಕೊಹ್ಲಿ ಇಲ್ಲದೆಯೂ ಗೆಲುವು ಪಡೆಯಬಹುದು ಎಂದು ಮೊದಲ ಪಂದ್ಯದಲ್ಲಿ ಸಾಬೀತಾಗಿದೆ. ಅಲ್ಲದೇ ಏಷ್ಯಾ ಕಪ್ ಟೂರ್ನಿಯ ವೇಳೆಯೂ ವಿಶ್ರಾಂತಿ ನೀಡಲಾಗಿತ್ತು ಎಂದು ತಿಳಿಸಿದರು.

    ಕಾರ್ತಿಕ್ ತಮ್ಮ ಹೇಳಿಕೆಗೆ ಸಮರ್ಥನೆ ಕೂಡ ನೀಡಿದ್ದು, ಟೆಸ್ಟ್ ಕ್ರಿಕೆಟ್‍ನಲ್ಲಿ ಪೂಜಾರ, ಇಶಾಂತ್ ಶರ್ಮಾ ರಂತಹ ಆಟಗಾರರನ್ನು ಡ್ರಾಪ್ ಮಾಡಲು ಕಷ್ಟವಾಗುತ್ತದೆ. ಆದರೆ ನಾಯಕನಾಗಿ ಆಸೀಸ್ ಟೂರ್ನಿಗೆ ಉತ್ತಮ ತಂಡದೊಂದಿಗೆ ಪ್ರವಾಸ ಮಾಡಲು ಇದು ಸೂಕ್ತ ಆಯ್ಕೆ ಆಗಿದೆ. ಒಂದೊಮ್ಮೆ ಆಯ್ಕೆ ಸಮಿತಿ ಆಸೀಸ್ ಟೂರ್ನಿಗೆ ಮಾಯಾಂಕ್‍ರನ್ನ ಆಯ್ಕೆ ಮಾಡಬೇಕಾದರೆ ಇಲ್ಲಿ ಅವಕಾಶ ನೀಡಲೇಬೇಕು ಎಂದು ತಿಳಿಸಿದ್ದಾರೆ. ಇದನ್ನು ಓದಿ: ಕನ್ನಡಿಗ ಮಾಯಾಂಕ್ ಅಗರ್ವಾಲ್ ಪರ ಹರ್ಭಜನ್ ಬೌಲಿಂಗ್!

    ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಸ್ಥಾನದಲ್ಲಿ ಕನ್ನಡಿಗ ಮಾಯಾಂಕ್ ರನ್ನು ವಿಂಡೀಸ್ ಟೂರ್ನಿಗೆ ಆಯ್ಕೆ ಮಾಡಲಾಗಿತ್ತು. ಅಲ್ಲದೇ ದೇಶಿಯ ಕ್ರಿಕೆಟ್ ಟೂರ್ನಿಗಳಲ್ಲಿ ಮಾಯಾಂಕ್ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಕೂಡ ರಾಷ್ಟ್ರೀಯ ತಂಡದಲ್ಲಿ ಆಡಲು ಅವಕಾಶ ನೀಡದೇ ಆಯ್ಕೆ ಸಮಿತಿ ನಿರ್ಲಕ್ಷ್ಯ ಮಾಡಿತ್ತು.

    ವಿಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯ ಆ.12 ರಿಂದ ಹೈದರಾಬಾದ್ ನಲ್ಲಿ ಆರಂಭವಾಗಲಿದೆ. ಉಳಿದಂತೆ ಮುಂದಿನ ಸಿಮೀತ ಓವರ್ ಗಳ ಏಕದಿನ ಮತ್ತು ಟಿ20 ಸರಣಿಗೆ ವೆಸ್ಟ್ ಇಂಡೀಸ್ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ್ದು, ಬ್ರಾವೋ, ಪೋಲಾರ್ಡ್ ಕಾಮ್ ಬ್ಯಾಕ್ ಮಾಡಿದ್ದಾರೆ. ಆದರೆ ಸ್ಫೋಟಕ ಆಟಗಾರ ಕ್ರಿಸ್ ಗೇಲ್ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ದೂರ ಸರಿದಿದ್ದಾರೆ. ಇದನ್ನು ಓದಿ: ಭಾರತ, ಶ್ರೀಲಂಕಾ ಟಿ-20ಯಲ್ಲಿ ಟಾಸ್ ಗೆದ್ದವರು ಯಾರು: ಈ ವಿಡಿಯೋ ನೋಡಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ಎಸ್‍ಜಿ ಚೆಂಡಿನ ವಿರುದ್ಧ ಅಶ್ವಿನ್ ಅಸಮಾಧಾನ – 1 ಎಸ್‍ಜಿ ಚೆಂಡಿಗೆ ಎಷ್ಟು ರೂ.? ಯಾವ ದೇಶದಲ್ಲಿ ಯಾವ ಬಾಲ್ ಬಳಕೆಯಿದೆ?

    ರಾಜ್‍ಕೋಟ್: ವಿಂಡೀಸ್ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಬಳಕೆ ಮಾಡಿರುವ ಎಸ್‍ಜಿ ಚೆಂಡಿನ ವಿರುದ್ಧ ಟೀಂ ಇಂಡಿಯಾ ಅನುಭವಿ ಆಟಗಾರ ಆರ್ ಅಶ್ವಿನ್ ಅಸಮಾಧಾನ ಹೊರಹಾಕಿದ್ದು, ಎಸ್‍ಜಿ ಚೆಂಡು ಈ ಹಿಂದೆ ನಾವು ಬಳಕೆ ಮಾಡಿದ ಗುಣಮಟ್ಟದಲ್ಲಿ ಇಲ್ಲ ಎಂದು ನೇರವಾಗಿಯೇ ಆರೋಪಿಸಿದ್ದಾರೆ.

    ಜಯಗಳಿಸಿದ ಬಳಿಕ ಮಾತನಾಡಿದ ಅಶ್ವಿನ್, ಪಂದ್ಯಕ್ಕೆ ಬಳಕೆ ಮಾಡಿದ ಎಸ್‍ಜಿ ಚೆಂಡು ಗುಣಮಟ್ಟ ನಿರಾಸೆ ಮೂಡಿಸಿದ್ದು, ಈ ಹಿಂದೆ ಬಳಕೆ ಮಾಡುತ್ತಿದ್ದ ಚೆಂಡು 70-80 ಓವರ್ ಗಳ ಬಳಿಕವೂ ಉತ್ತಮವಾಗಿರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಇದೇ ವೇಳೆ ಕುಕಾಬುರಾ ಹಾಗೂ ಡ್ಯೂಕ್ಸ್ ಚೆಂಡಿನ ಕುರಿತು ಪ್ರಶಂಸೆ ವ್ಯಕ್ತಪಡಿಸಿದ ಅಶ್ವಿನ್, ಕುಕಾಬುರಾ ಬಿಳಿ ಬಣ್ಣದ ಚೆಂಡು ಹೆಚ್ಚು ಸ್ವಿಂಗ್ ಆಗುವುದಿಲ್ಲ. ಆದರೆ ಕೆಂಪು ಬಣ್ಣದ ಚೆಂಡು ಉತ್ತಮವಾಗಿದೆ ಎಂದು ತಿಳಿಸಿದ್ದಾರೆ.

    ಈ ಟೆಸ್ಟ್ ಪಂದ್ಯದ 2 ಇನ್ನಿಂಗ್ಸ್ ಗಳಿಂದ 6 ವಿಕೆಟ್ ಪಡೆದ ಅಶ್ವಿನ್ ದಕ್ಷಿಣ ಆಫ್ರಿಕಾ ವೇಗಿ ಅಲನ್ ಡೊನಾಲ್ಡ್ (330 ವಿಕೆಟ್) ಅವರನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ ಮೊದಲ ಇನ್ನಿಂಗ್ಸ್ ನಲ್ಲಿ 37 ರನ್ ನೀಡಿ 4 ವಿಕೆಟ್, 2ನೇ ಇನ್ನಿಂಗ್ಸ್ ನಲ್ಲಿ 71 ರನ್ ನೀಡಿ 2 ಪಡೆಯುವ ಮೂಲಕ ಒಟ್ಟಾರೆ ಟೆಸ್ಟ್ ಪಂದ್ಯಗಳಲ್ಲಿ 333 ವಿಕೆಟ್ ಪಡೆದ ಸಾಧನೆ ಮಾಡಿದರು. ಇದರೊಂದಿಗೆ ವಿಶ್ವ ಟೆಸ್ಟ್ ಕ್ರಿಕೆಟ್‍ನಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಪಟ್ಟಿಯಲ್ಲಿ ಅಶ್ವಿನ್ 24ನೇ ಸ್ಥಾನ ಪಡೆದಿದ್ದಾರೆ.

    ಅಂದಹಾಗೇ ವಿಶ್ವ ಕ್ರಿಕೆಟ್‍ನಲ್ಲಿ ನಡೆಯುವ ಪಂದ್ಯದಲ್ಲಿ ವಿವಿಧ ದೇಶಗಳಲ್ಲಿ ಆಯಾ ಕಂಪೆನಿಗಳು ತಯಾರಿಸಿದ ಚೆಂಡು ಬಳಕೆ ಮಾಡುತ್ತಾರೆ. ಪ್ರಮುಖವಾಗಿ ಕುಕಾಬುರಾ ಚೆಂಡನ್ನು ಆಸ್ಟ್ರೇಲಿಯಾದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಈ ಚೆಂಡನ್ನು ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಜಿಂಬಾಂಬ್ವೆ ದೇಶಗಳಲ್ಲಿ ನಡೆಯುವ ಪಂದ್ಯದ ವೇಳೆ ಬಳಕೆ ಮಾಡಲಾಗುತ್ತದೆ.

    ಡ್ಯೂಕ್ಸ್ ಚೆಂಡನ್ನು ಇಂಗ್ಲೆಂಡ್‍ನಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಇದನ್ನು ಇಂಗ್ಲೆಂಡ್, ಯುಕೆ ಮತ್ತ ವೆಸ್ಟ್ ಇಂಡೀಸ್ ದೇಶಗಳಲ್ಲಿ ಬಳಕೆ ಮಾಡಲಾಗುತ್ತದೆ. ಉಳಿದಂತೆ ಎಸ್‍ಜಿ ಚೆಂಡನ್ನು ಭಾರತದಲ್ಲಿ ಉತ್ಪಾದನೆ ಮಾಡಿ ಇಲ್ಲಿನ ಪಂದ್ಯಗಳಲ್ಲಿ ಮಾತ್ರ ಬಳಕೆ ಮಾಡುತ್ತಾರೆ.

    ಈ ಮೂರು ಕಂಪೆನಿಗಳು ಉತ್ಪಾದನೆ ಮಾಡುವ ಚೆಂಡುಗಳಲ್ಲಿ ಪ್ರಮುಖವಾಗಿ ಚೆಂಡಿನ ಹೊಲಿಗೆ ಪ್ರಕ್ರಿಯೆಯಲ್ಲಿ ವ್ಯತ್ಯಾಸಗಳನ್ನು ಗುರುತಿಸಬಹುದಾಗಿದೆ. ಆಯಾ ದೇಶಗಳ ವಾತಾವರಣಕ್ಕೆ ಅನುಗುಣವಾಗಿ ಚೆಂಡನ್ನು ತಯಾರು ಮಾಡಲಾಗುತ್ತದೆ. ಎಸ್‍ಜಿ ಬಾಲಿನ ಸಮಸ್ಯೆ ಏನೆಂದರೆ ಅದಷ್ಟು ಬೇಗ ಬಾಲ್ ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಕುಕಾಬುರಾ ಚೆಂಡು 20 ಓವರ್, ಡ್ಯೂಕ್ಸ್ ಚೆಂಡು 50-55, ಎಸ್‍ಜಿ 10 ಓವರ್ ಗಳ ವರೆಗೂ ಸ್ವಿಂಗ್ ಆಗುವ ಸಾಮಥ್ರ್ಯ ಹೊಂದಿದೆ.

    ಸ್ಯಾನ್ಸ್ಪೆರೆಲ್ಸ್ ಗ್ರೀನ್ಸ್ ಲ್ಯಾಂಡ್ ಬಾಲ್ ಗಳನ್ನು ಸಂಕ್ಷಿಪ್ತವಾಗಿ ಎಸ್‍ಜಿ ಬಾಲ್ ಎಂದೇ ಕರೆಯಲಾಗುತ್ತದೆ. ಉತ್ತರ ಪ್ರದೇಶ ಮೀರತ್ ನಲ್ಲಿರುವ ಕಂಪೆನಿ ಈ ಬಾಲ್ ಗಳನ್ನು ತಯಾರಿಸುತ್ತದೆ. ಕುಕಾಬುರಾ ಬಾಲಿಗೆ ಹೋಲಿಸಿದರೆ ಭಾರತದಲ್ಲಿ ಒಂದು ಎಸ್‍ಜಿ ಬಾಲ್ ಬೆಲೆ ಕಡಿಮೆಯಿದೆ. ಒಂದು ಕುಕಾಬುರಾ ಚೆಂಡಿನ ಬೆಲೆ 2,299 ರೂ. ಇದ್ದರೆ ಎಸ್‍ಜಿ ಬಾಲಿನ ಬೆಲೆ 1,464 ರೂ. ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐತಿಹಾಸಿಕ ಗೆಲುವಿನ ಬಳಿಕ ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಅಸಮಾಧಾನ!

    ಐತಿಹಾಸಿಕ ಗೆಲುವಿನ ಬಳಿಕ ಐಸಿಸಿ ನಿಯಮದ ವಿರುದ್ಧ ಕೊಹ್ಲಿ ಅಸಮಾಧಾನ!

    ರಾಜ್‍ಕೋಟ್: ಇಲ್ಲಿನ ಸೌರಾಷ್ಟ್ರ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಶನಿವಾರ ಮುಕ್ತಾಯಗೊಂಡ ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಪಡೆಯುವ ಮೂಲಕ ತವರಿನಲ್ಲಿ ಆಡಿದ ಟೆಸ್ಟ್ ನಲ್ಲಿ 100ನೇ ಗೆಲುವು ತನ್ನದಾಗಿಸಿಕೊಂಡಿದೆ. ಇದರ ನಡುವೆ ನಾಯಕ ವಿರಾಟ್ ಕೊಹ್ಲಿ ಐಸಿಸಿ ನಿಯಮದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

    ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೊಹ್ಲಿ, ಪಂದ್ಯದ ವೇಳೆ ಆಟಗಾರರಿಗೆ ವಾಟರ್ ಬ್ರೇಕ್ ಅವಕಾಶವನ್ನು ವಿಕೆಟ್ ಉರುಳಿದ ವೇಳೆ ಹಾಗೂ ನಿಗದಿತ ಓವರ್ ಗಳ ಮುಕ್ತಾಯದ ವೇಳೆ ಅಂಪೈರ್ ನೀಡುವ ಸೂಚನೆ ಮೇರೆಗೆ ಮಾತ್ರ ಪಡೆಯಲು ಐಸಿಸಿ ಅವಕಾಶ ಕಲ್ಪಿಸಿದೆ. ಆದರೆ ಕೆಲ ಪಂದ್ಯಗಳ ವೇಳೆ ಅಧಿಕ ತಾಪಮಾನವಿದ್ದರೂ ಬ್ಯಾಟ್ಸ್ ಮನ್‍ಗಳಿಗೆ ಹೆಚ್ಚಿನ ಬ್ರೇಕ್ ಪಡೆಯಲು ಅವಕಾಶವಿಲ್ಲ. ಅದ್ದರಿಂದ ಈ ನಿಯಮವನ್ನು ಬದಲಿಸಬೇಕು ಎಂದು ಕೊಹ್ಲಿ ತಿಳಿಸಿದ್ದಾರೆ.

    ಬ್ಯಾಟ್ಸ್ ಮನ್ 40 ರಿಂದ 45 ನಿಮಿಷಗಳ ಅಂತರದಲ್ಲಿ ಅಂಪೈರ್ ಗಳ ಅನುಮತಿ ಮೇರೆಗೆ ಮಾತ್ರ ವಾಟರ್ ಬ್ರೇಕ್ ಪಡೆಯಲು ಅವಕಾಶವಿದೆ. ಇದರಿಂದ ಈ ಪಂದ್ಯದ ವೇಳೆಯೂ ಎರಡು ತಂಡದ ಆಟಗಾರರು ಸಾಕಷ್ಟು ಸಮಸ್ಯೆ ಎದುರಿಸಿದ್ದಾರೆ. ಈ ಕುರಿತು ಐಸಿಸಿ ಗಮನಹರಿಸಿ ಕ್ರಮಕೈಗೊಳ್ಳುವ ನಿರೀಕ್ಷೆ ಇದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದರು.

    ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರ ಚೇತೇಶ್ವರ ಪೂಜಾರ ತಮ್ಮ ಪಾಕೆಟ್‍ನಲ್ಲಿ ವಾಟರ್ ಬಾಟಲ್ ತೆಗೆದುಕೊಂಡು ಬಂದ ಘಟನೆಯನ್ನು ಇಲ್ಲಿ ನೆನಪು ಮಾಡಬಹುದಾಗಿದೆ. ಪಂದ್ಯದ ನಡುವೆ ವಿರಾಮ ಇಲ್ಲದಿದ್ದರೂ ನೀರಿನ ಬಾಟಲಿ ತಂದು ನೀರು ಕುಡಿದ ಚೇತೇಶ್ವರ ಪೂಜಾರ ಅವರನ್ನು ನೋಡಿ ಪ್ರೇಕ್ಷಕರು ಕ್ಷಣ ಕಾಲ ಅಚ್ಚರಿಗೊಂಡಿದ್ದರು. ಈ ವಿಡಿಯೋವನ್ನು ಬಿಸಿಸಿಐ ಕೂಡ ತನ್ನ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/KabaliOf/status/1047725468076531712

  • 3 ದಿನಕ್ಕೆ ಮುಕ್ತಾಯವಾದ ಇಂಡೋ, ವಿಂಡೀಸ್ ಟೆಸ್ಟ್ -ಟೀಂ ಇಂಡಿಯಾಗೆ ಭರ್ಜರಿ ಗೆಲುವು

    3 ದಿನಕ್ಕೆ ಮುಕ್ತಾಯವಾದ ಇಂಡೋ, ವಿಂಡೀಸ್ ಟೆಸ್ಟ್ -ಟೀಂ ಇಂಡಿಯಾಗೆ ಭರ್ಜರಿ ಗೆಲುವು

    ರಾಜ್‍ಕೋಟ್: ಇಲ್ಲಿನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ 3ನೇ ದಿನಕ್ಕೆ ಮುಕ್ತಾಯವಾಗಿದ್ದು ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 272 ರನ್ ಅಂತರದ ಭರ್ಜರಿ ಗೆಲುವು ಪಡೆದಿದೆ.

    2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಪಡೆದ ಟೀಂ ಇಂಡಿಯಾ ಸರಣಿ ಗೆಲುವಿನ ವಿಶ್ವಾಸ ತೋರಿದ್ದು, ಅತಿಥೇಯ ವಿಂಡೀಸ್ ತಂಡವನ್ನು ಒತ್ತಡಕ್ಕೆ ಸಿಲುಕಿದೆ.

    3ನೇ ದಿನದಾಟವನ್ನು 6 ವಿಕೆಟ್ 94 ರನ್ ನಿಂದ ಆರಂಭಿಸಿದ್ದ ವಿಂಡೀಸ್ 181 ರನ್ ಗಳಿಗೆ ಅಲೌಟ್ ಆಯಿತು. ಈ ವೇಳೆ ಟೀಂ ಇಂಡಿಯಾ 468 ರನ್‍ಗಳ ಬೃಹತ್ ಮುನ್ನಡೆ ದಾಖಲಿಸಿ ಫಾಲೋಆನ್ ಹೇರಿತ್ತು.

    2ನೇ ಇನ್ನಿಂಗ್ಸ್ ನಲ್ಲಿ ಏಕಾಂಗಿ ಹೋರಾಟ ನಡೆಸಿದ ಪೊವೆಲ್ 8 ಬೌಂಡರಿ, 4 ಸಿಕ್ಸರ್ ಸಿಡಿಸಿ ಅರ್ಧಶತಕ (83 ರನ್) ಗಳಿಸಿದರು. ಉಳಿದಂತೆ ವಿಂಡೀಸ್ ಪರ ನಾಯಕ ಕ್ರೇಗ್ ಬ್ರಾತ್ ವೇಟ್ (10), ಶಾಯ್ ಹೋಪ್ (17), ಹೇಟ್ಮಯರ್ (11), ಸುನಿಲ್ ಅಂಬ್ರಿಸ್ (0) ಹಾಗೂ ರೋಸ್ಟನ್ ಚೇಸ್ (20) ನಿರಾಸೆ ಮೂಡಿಸಿದರು. ವಿಂಡೀಸ್ ಬ್ಯಾಟ್ಸ್ ಮನ್‍ಗಳ ವಿರುದ್ಧ ಟೀಂ ಇಂಡಿಯಾ ಬೌಲರ್ ಗಳು ಉತ್ತಮ ದಾಳಿ ನಡೆಸಿ ಆರಂಭದಿಂದಲೂ ನಿರಂತರವಾಗಿ ವಿಕೆಟ್ ಪಡೆದರು. ಈ ಮೂಲಕ 2ನೇ ಇನ್ನಿಂಗ್ಸ್ ನಲ್ಲಿ ವಿಂಡೀಸ್ 196 ರನ್ ಗೆ ಅಲೌಟ್ ಮಾಡಿ ತಂಡ ಇನ್ನಿಂಗ್ಸ್ ಹಾಗೂ 272 ರನ್ ಗೆಲುವು ಪಡೆಯುವಂತೆ ಮಾಡಿದರು.

    ಟೀಂ ಇಂಡಿಯಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಕುಲ್ದೀಪ್ ಯಾದವ್ ಮೊದಲ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿ ಮಿಂಚಿದರು. ಉಳಿದಂತೆ ಜಡೇಜಾ 3, ಅಶ್ವಿನ್ 2 ವಿಕೆಟ್ ಪಡೆದರು. ಪಾದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿ ಮಿಂಚಿದ ಪೃಥ್ವಿ ಶಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.

    ಟೆಸ್ಟ್ ಪಂದ್ಯದ ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ಪೃಥ್ವಿ ಶಾ (134 ರನ್), ನಾಯಕ ವಿರಾಟ್ ಕೊಹ್ಲಿ (100 ರನ್) ಹಾಗೂ ರವೀಂದ್ರ ಜಡೇಜಾ (100* ರನ್) ಚೊಚ್ಚಲ ಶತಕಗ ಹಾಗೂ ಚೇತೇಶ್ವರ ಪೂಜಾರ (86 ರನ್), ಯುವ ಆಟಗಾರ ರಿಷಭ್ ಪಂತ್ (92ರನ್) ರ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೊದಲ ಇನ್ನಿಂಗ್ಸ್‍ನಲ್ಲಿ 9 ವಿಕೆಟ್ ನಷ್ಟಕ್ಕೆ 649 ರನ್‍ಗಳ ಬೃಹತ್ ಮೊತ್ತ ಗಳಿಸಿ ಡಿಕ್ಲೇರ್ ನೀಡಿತ್ತು.

    ಸ್ಕೋರ್ ವಿವರ:
    ಟೀಂ ಇಂಡಿಯಾ – ಮೊದಲ ಇನ್ನಿಂಗ್ಸ್ 649/9 ಡಿಕ್ಲೇರ್
    ವೆಸ್ಟ್ ಇಂಡೀಸ್ – ಮೊದಲ ಇನ್ನಿಂಗ್ಸ್ 181 ಅಲೌಟ್ / ದ್ವೀತಿಯ ಇನ್ನಿಂಗ್ಸ್ 196 ಅಲೌಟ್
    ಫಲಿತಾಂಶ  – ಟೀಂ ಇಂಡಿಯಾಗೆ ಇನ್ನಿಂಗ್ಸ್ ಹಾಗೂ 272 ರನ್ ಗೆಲುವು