Tag: West Indies

  • ವಿಂಡೀಸ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದರಾ ರೋಹಿತ್ ಶರ್ಮಾ!

    ವಿಂಡೀಸ್ ಪಂದ್ಯದಲ್ಲಿ ದಾಖಲೆ ಬರೆಯಲಿದ್ದರಾ ರೋಹಿತ್ ಶರ್ಮಾ!

    ಚೆನ್ನೈ: ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ವಿಂಡೀಸ್ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ ರೋಹಿತ್ ಮಹತ್ವದ ದಾಖಲೆ ಬರೆಯುವ ಸನೀಹದಲ್ಲಿದ್ದಾರೆ.

    ರೋಹಿತ್ ಈಗಾಗಲೇ ಟಿ20 ಮಾದರಿಯಲ್ಲಿ ಭಾರತದ ಪರ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದು, ವಿರಾಟ್ ಕೊಹ್ಲಿ ಅವರನ್ನು ಹಿಂದಿಕ್ಕಿದ್ದರು. ಭಾನುವಾರ ನಡೆಯುಲಿರುವ ಪಂದ್ಯದಲ್ಲಿ ರೋಹಿತ್ ಶರ್ಮಾ 67 ರನ್ ಗಳಿಸಿದರೆ ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆಯನ್ನ ಮಾಡಲಿದ್ದಾರೆ. ಸದ್ಯ ರೋಹಿತ್ ಶರ್ಮಾ 2,203 ರನ್ ಗಳಿಸಿದ್ದು, ನ್ಯೂಜಿಲೆಂಡ್ ತಂಡದ ಮಾರ್ಟಿನ್ ಗುಪ್ಟಿಲ್ ರನ್ನು ಹಿಂದಿಕ್ಕಲು ಕೇವಲ 67 ರನ್ ಗಳಿಸಬೇಕಿದೆ. ರೋಹಿತ್ ಈ ಸಾಧನೆ ಮಾಡಿದರೆ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಭಾರತೀಯರೆ ಅತಿಹೆಚ್ಚು ರನ್ ಗಳಿಸಿದ ಆಟಗಾರರು ಎನಿಸಿಕೊಳ್ಳಲಿದ್ದಾರೆ. ಸಚಿನ್ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ್ದಾರೆ.

    ಉಳಿದಂತೆ ಟಿ20 ಮಾದರಿಯಲ್ಲಿ ಪಾಕಿಸ್ತಾನದ ಶೋಯಿಬ್ ಮಲಿಕ್ 108 ಪಂದ್ಯಗಳಿಂದ 2,190 ರನ್ ಗಳಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ನ್ಯೂಜಿಲೆಂಡ್ ಬ್ರೆಂಡನ್ ಮೆಕಲಮ್ 71 ಪಂದ್ಯಗಳಿಂದ 2,140 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 62 ಪಂದ್ಯಗಳಿಂದ 2,102 ರನ್ ಸಿಡಿಸಿದ್ದಾರೆ.

    ಭಾರತದ ಪರ ಸುರೇಶ್ ರೈನಾ 1,605 ರನ್, ಧೋನಿ 1.487 ರನ್, ಯುವರಾಜ್ ಸಿಂಗ್ 1,177 ರನ್ ಗಳಿಸಿದ್ದಾರೆ. ರೋಹಿತ್ ಟಿ20 ಮಾದರಿಯಲ್ಲಿ 4 ಶತಕಗಳನ್ನು ಸಿಡಿಸಿದ ಸಾಧನೆಯನ್ನು ಮಾಡಿದ್ದು, ವಿಂಡೀಸ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ರೋಹಿತ್, ಧವನ್ ಜೋಡಿ 123 ಸಿಡಿಸಿದ್ದು, ಇದುವರೆಗೂ 39 ಇನ್ನಿಂಗ್ಸ್ ಗಳಿಂದ ಈ ಜೋಡಿ 1,154 ರನ್ ಸಿಡಿಸಿದೆ. ಈ ಪಟ್ಟಿಯಲ್ಲಿ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್ , ಶೇನ್ ವ್ಯಾಟ್ಸನ್ ಜೋಡಿ 37 ಇನ್ನಿಂಗ್ಸ್ ಗಳಿಂದ 1,154 ರನ್ ಗಳಿಸಿ ಮುಂಚೂಣಿಯಲ್ಲಿದೆ.

    ವಿಂಡೀಸ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳ ಟಿ20 ಟೂರ್ನಿಯಲ್ಲಿ 2 ಪಂದ್ಯಗಳನ್ನು ಗೆದ್ದು ಸರಣಿ ಕೈವಶ ಮಾಡಿಕೊಂಡಿರುವ ಟೀಂ ಸರಣಿ ಇಂಡಿಯಾ ಕ್ಲೀನ್ ಸ್ವಿಪ್ ಮಾಡುವತ್ತ ಗಮನ ಹರಿಸಿದೆ. ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಟಿ20 ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ರಾಹುಲ್ ಎಡವಟ್ಟು ಮಾಡಿದ್ರೂ, ಮನಿಷ್ ಪಾಂಡೆಯಿಂದ ಔಟ್ – ವೈರಲ್ ಕಾಮಿಡಿ ರನೌಟ್ ವಿಡಿಯೋ ನೋಡಿ

    ರಾಹುಲ್ ಎಡವಟ್ಟು ಮಾಡಿದ್ರೂ, ಮನಿಷ್ ಪಾಂಡೆಯಿಂದ ಔಟ್ – ವೈರಲ್ ಕಾಮಿಡಿ ರನೌಟ್ ವಿಡಿಯೋ ನೋಡಿ

    ಕೋಲ್ಕತ್ತಾ: ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಾಸ್ಯಾಸ್ಪದ ರನೌಟ್ ದಾಖಲಾಗಿದ್ದು, ಆದರೆ ಈ ವಿಡಿಯೋ ನೋಡಿದ ಅಭಿಮಾನಿಗಳು ಕೆಎಲ್ ರಾಹುಲ್‍ರನ್ನು ಟ್ರೋಲ್ ಮಾಡಿದ್ದಾರೆ.

    ಕೋಲ್ಕತ್ತಾ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆದ ಟಿ20 ಪಂದ್ಯದಲ್ಲಿ ವಿಂಡೀಸ್ ಆಟಗಾರ ಹೋಪ್ ರನೌಟ್ ಗೆ ಬಲಿಯಾಗಿದ್ದರು. ಪಂದ್ಯದ 4ನೇ ಓವರ್ ಖಲೀಲ್ ಅಹಮದ್ ಬೌಲಿಂಗ್ ಮೊದಲ ಎಸೆತದ ವೇಳೆ ಘಟನೆ ನಡೆದಿತ್ತು. ಈ ವೇಳೆ ಬಾಲ್ ಎದುರಿಸಿದ ಹೋಪ್ ಲೆಗ್ ಸೈಡ್ ನಲ್ಲಿ ಚೆಂಡನ್ನು ಬಾರಿಸಿ ರನ್ ಕಾದಿಯುವ ಯತ್ನ ಮಾಡಿದರು. ಆ ವೇಳೆ ಚೆಂಡು ಕೆಎಲ್ ರಾಹುಲ್ ಕೈ ಸೇರಿತ್ತು. ಈ ಹಂತದಲ್ಲಿ ಮತ್ತೊಂದು ಬದಿಯಲ್ಲಿ ಹೆಟ್ಮೆಯರ್ ರನ್‍ಗಾಗಿ ಓಡಿ ಮತ್ತೆ ವಾಪಸ್ ಆಗಿದ್ದರು.

    https://twitter.com/sukhiaatma69/status/1059093478653620230

    ರಾಹುಲ್ ಎಡವಟ್ಟು: ಹೋಪ್ ರನ್ ಓಡಲು ಯತ್ನಿಸಿದ್ದನ್ನು ಗಮನಿಸಿದ ಕೆಎಲ್ ರಾಹುಲ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‍ರತ್ತ ಚೆಂಡು ಎಸೆದರು. ಆದರೆ ರಾಹುಲ್ ಎಸೆದ ಚೆಂಡು ಕಾರ್ತಿಕ್ ಕೈಗೆ ಸಿಗದೆ ಹೋಗಿತ್ತು. ಆದರೆ ದಿನೇಶ್ ಹಿಂದೆಯೇ ನಿಂತಿದ್ದ ಮನೀಷ್ ಪಾಂಡೆ ಚೆಂಡನ್ನು ಹಿಡಿದು ರನೌಟ್ ಮಾಡಿದರು. ಇದರೊಂದಿಗೆ ಹೋಪ್ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

    ಸುಲಭವಾಗಿ ಹೋಪ್ ರನೌಟ್ ಆಗುವ ಅವಕಾಶ ಇದ್ದರೂ ಕ್ಷೇತ್ರ ರಕ್ಷಣೆಯಲ್ಲಿ ರಾಹುಲ್ ಎಡವಿದ್ದರು. ದಿನೇಶ್ ಕಾರ್ತಿಕ್ ಹಿಂದೆ ಪಾಂಡೆ ಇದ್ದ ಕಾರಣ ರನೌಟ್ ಸಾಧ್ಯವಾಯಿತು. ಈ ಕುರಿತಂತೆ ನೆಟ್ಟಿಗರು ಟ್ವಿಟ್ಟರ್‍ನಲ್ಲಿ ರಾಹುಲ್ ರನ್ನು ಟ್ರೋಲ್ ಮಾಡಿ ಗರಂ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

    ವಿಂಡೀಸ್ ವಿರುದ್ಧದ ಟಿ-20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

    ಕೋಲ್ಕತ್ತ: ವೆಸ್ಟ್ ಇಂಡೀಸ್ ವಿರುದ್ಧದ ಮೊದಲನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 5 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಶುಭಾರಂಭ ಪಡೆದಿದೆ.

    ವೆಸ್ಟ್ ಇಂಡೀಸ್ ವಿರುದ್ಧದ ಮೂರು ಟಿ-20 ಪಂದ್ಯಗಳ ಪೈಕಿ, ಮೊದಲನೇ ಪಂದ್ಯ ಕೋಲ್ಕತ್ತದ ಈಡನ್‍ಗಾರ್ಡ್ ಮೈದಾನದಲ್ಲಿ ಇಂದು ನಡೆದಿತ್ತು. ಮೊದಲು ಬ್ಯಾಟ್ ಮಾಡಿ ವಿಂಡೀಸ್ 109 ರನ್‍ಗಳಿಸಿತ್ತು. 110 ರನ್ ಗಳ ಸುಲಭ ಸವಾಲನ್ನು ಸ್ವೀಕರಿಸಿದ ಭಾರತ 17.5 ಓವರ್ ಗಳಲ್ಲಿ 110 ರನ್ ಗಳಿಸುವ ಮೂಲಕ 5 ವಿಕೆಟ್‍ಗಳಿಂದ ಗೆಲುವು ಸಾಧಿಸಿತು.

    ಪ್ರಾರಂಭದಲ್ಲೇ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ 6 ರನ್ ಹಾಗೂ ಆರಂಭಿಕ ಆಟಗಾರ ಶಿಖರ್ ಧವನ್ 3 ರನ್ ಗಳಿಸಿ ಔಟಾದರು. ನಂತರ ಬಂದ ಕ್ರುನಾಲ್ ಪಾಂಡ್ಯಾ 21 ರನ್ ಹಾಗೂ  ದಿನೇಶ್ ಕಾರ್ತಿಕ್‍  31 ರನ್ ಗಳು ಭಾರತದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದವು.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿ, ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ವಿಂಡೀಸ್ ಪರ ಫ್ಯಾಬಿಯನ್ ಅಲೆನ್ 27 ರನ್, ಕೀಮೊ ಪೌಲ್ 15 ರನ್ ಹೊಡೆಯುವ ಮೂಲಕ ಅತಿ ಹೆಚ್ಚು ರನ್ ಗಳಿಸಿದ್ದರು. ಟೀಂ ಇಂಡಿಯಾದ ಕುಲ್‍ದೀಪ್ ಯಾದವ್ 4 ಓವರ್ ಗಳಲ್ಲಿ 13 ರನ್ ನೀಡಿ 3 ವಿಕೆಟ್ ಪಡೆದರೆ, ಉಮೇಶ್ ಯಾದವ್, ಜಸ್ಪ್ರಿತ್ ಬೂಮ್ರಾ, ಕೆ ಖಲೀಲ್ ಅಹಮದ್ ಹಾಗೂ ಕ್ರುನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಪಡೆದುಕೊಂಡರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದ್ರಾವಿಡ್, ಗಂಗೂಲಿ ದಾಖಲೆ ಮುರಿದ ರೋಹಿತ್, ಕೊಹ್ಲಿ ಜೋಡಿ

    ದ್ರಾವಿಡ್, ಗಂಗೂಲಿ ದಾಖಲೆ ಮುರಿದ ರೋಹಿತ್, ಕೊಹ್ಲಿ ಜೋಡಿ

    ತಿರುವನಂತಪುರ: ಟೀಂ ಇಂಡಿಯಾ ಆರಂಭಿಕ ಆಟಗಾರ ರೋಹಿತ್ ಶರ್ಮಾ ಹಾಗೂ ನಾಯಕ ವಿರಾಟ್ ಕೊಹ್ಲಿ ಜಂಟಿ ದಾಖಲೆ ಬರೆದಿದ್ದು, ಏಕದಿನ ಕ್ರಿಕೆಟ್‍ನಲ್ಲಿ ಭಾರತ ಪರ ವೇಗವಾಗಿ 4 ಸಾವಿರ ರನ್ ಪೂರೈಸಿದ ಜೋಡಿ ಎಂಬ ಹೆಗ್ಗಳಿಕೆ ಪಡೆದಿದೆ.

    ವಿಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 99 ರನ್ ಜೊತೆಯಾಟ ನೀಡಿದ್ದ ಈ ಜೋಡಿ ಟೀಂ ಇಂಡಿಯಾ ಭರ್ಜರಿ ಗೆಲುವಿಗೆ ಕಾರಣವಾಗಿತ್ತು. ಈ ಹಿಂದೆ ಟೀಂ ಇಂಡಿಯಾ ಪರ ರಾಹುಲ್ ದ್ರಾವಿಡ್ ಹಾಗೂ ಸೌರವ್ ಗಂಗೂಲಿ 80 ಜೊತೆಯಾಟಗಳಲ್ಲಿ 4 ಸಾವಿರ ರನ್ ಪೂರೈಸಿದ್ದರು. ಆದರೆ ಕೊಹ್ಲಿ, ರೋಹಿತ್ ಜೋಡಿ ಕೇವಲ 66 ಜೊತೆಯಾಟಗಳಲ್ಲಿ ಈ ಸಾಧನೆ ಮಾಡಿದೆ.

    ವಿಂಡೀಸ್ ಟೂರ್ನಿಯಲ್ಲಿ ಭರ್ಜರಿ ಫಾರ್ಮ್‍ನಲ್ಲಿದ್ದ ಇಬ್ಬರು ಆಟಗಾರರು ರನ್ ಹೊಳೆ ಹರಿಸಿದ್ದರು. ಟೂರ್ನಿಯಲ್ಲಿ ಹ್ಯಾಟ್ರಿಕ್ ಶತಕ ಗಳಿಸಿದ್ದ ಕೊಹ್ಲಿ ಒಟ್ಟಾರೆ 453 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಇತ್ತ 2 ಶತಕ ಮತ್ತು ಒಂದು ಅರ್ಧಶತಕ ಸಿಡಿಸಿರುವ ರೋಹಿತ್ 389 ರನ್ ಕಲೆ ಹಾಕಿ ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ 2ನೇ ಆಟಗಾರ ಎನಿಸಿಕೊಂಡರು. ವಿಶೇಷವಾಗಿ ಇಬ್ಬರ ಜೋಡಿ ಇದುವರೆಗೂ 15 ಶತಕಗಳ ಜೊತೆಯಾಟದಲ್ಲಿ ಭಾಗಿಯಾಗಿದೆ. ಇದರೊಂದಿಗೆ 4 ಸಾವಿರ ರನ್ ಪೂರೈಸಿದ ವಿಶ್ವದ 13ನೇ ಹಾಗೂ ಭಾರತದ 6ನೇ ಜೋಡಿಯಾಗಿದೆ.

    ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ 899 ಅಂಕಗಳೊಂದಿಗೆ ಕೊಹ್ಲಿ ಮೊದಲ ಸ್ಥಾನ ಪಡೆದಿದ್ದು, ರೋಹಿತ್ ಶರ್ಮಾ 871 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಬ್ಬರ ನಡುವೆ 64 ಅಂಕಗಳ ವ್ಯತ್ಯಾಸವಿದೆ. ಉಳಿದಂತೆ ರೋಹಿತ್ ಏಕದಿನ ಕ್ರಿಕೆಟ್ ನಲ್ಲಿ 187 ಇನ್ನಿಂಗ್ಸ್ ಗಳಲ್ಲಿ 200 ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದು, ಈ ಹಿಂದೆ 195 ಇನ್ನಿಂಗ್ಸ್ ಗಳಲ್ಲಿ 200 ಸಿಕ್ಸರ್ ಸಿಡಿಸಿದ್ದ ಪಾಕಿಸ್ತಾನದ ಶಹೀದ್ ಆಫ್ರಿದಿ ದಾಖಲೆಯನ್ನು ಮುರಿದಿದ್ದಾರೆ.

    ಉಳಿದಂತೆ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಜಯಗಳಿಸಿದ ಟೀಂ ಇಂಡಿಯಾ 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಲ್ಲಿ ತನ್ನದಾಗಿಸಿಕೊಂಡಿದೆ. ಏಕದಿನ ಸರಣಿಗೂ ಮುನ್ನ ಟೆಸ್ಟ್ ಟೂರ್ನಿ ಗೆದ್ದು ಬೀಗಿದ್ದ ಟೀಂ ಇಂಡಿಯಾ ಸದ್ಯ ಮುಂದಿನ ಟಿ20 ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • 9 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಗೆದ್ದ ಟೀಂ ಇಂಡಿಯಾ

    9 ವಿಕೆಟ್‍ಗಳ ಭರ್ಜರಿ ಜಯದೊಂದಿಗೆ ಸರಣಿಗೆದ್ದ ಟೀಂ ಇಂಡಿಯಾ

    ತಿರುವನಂತಪುರಂ: ವಿಂಡೀಸ್ ವಿರುದ್ಧದ 5ನೇ ಏಕದಿನ ಪಂದ್ಯವನ್ನು 9 ವಿಕೆಟ್ ಗಳಿಂದ ಗೆಲ್ಲುವ ಮೂಲಕ ಟೀಂ ಇಂಡಿಯಾ 5 ಪಂದ್ಯಗಳ ಸರಣಿಯನ್ನು 3-1 ಅಂತರದಿಂದ ಗೆದ್ದುಕೊಂಡಿದೆ.

    105 ರನ್ ಗಳ ಸುಲಭ ಸವಾಲನ್ನು ಸ್ವೀಕರಿಸಿದ ಭಾರತ 1 ವಿಕೆಟ್ ಕಳೆದುಕೊಂಡು 14.5 ಓವರ್ ಗಳಲ್ಲಿ 105 ರನ್ ಗಳಿಸಿ ಗುರಿ ಮುಟ್ಟಿತು. ತಂಡದ ಮೊತ್ತ 6 ಆದಾಗ ಶಿಖರ್ ಧವನ್ ಔಟಾದಾಗ ವಿಂಡೀಸ್ ಮೇಲುಗೈ ಸಾಧಿಸಿತ್ತು. ಆದರೆ ಮುರಿಯದ ಎರಡನೇ ವಿಕೆಟ್ ಗೆ ರೋಹಿತ್ ಶರ್ಮಾ ಮತ್ತು ಕೊಹ್ಲಿ 99 ರನ್ ಜೊತೆಯಾಟವಾಡುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ರೋಹಿತ್ ಶರ್ಮಾ ಔಟಾಗದೇ 63 ರನ್(56 ಎಸೆತ, 5 ಬೌಂಡರಿ, 4 ಸಿಕ್ಸರ್) ವಿರಾಟ್ ಕೊಹ್ಲಿ ಔಟಾಗದೇ 33 ರನ್(29 ಎಸೆತ, 6 ಬೌಂಡರಿ) ಸಿಡಿಸಿದರು.

    ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ಪತನ ಮೊದಲ ಓವರ್ ನಿಂದಲೇ ಆರಂಭಗೊಂಡಿತ್ತು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರ್ ನಲ್ಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿದ ವಿಂಡೀಸ್ ಅಂತಿಮವಾಗಿ 31.5 ಓವರ್ ಗಳಲ್ಲಿ 104 ರನ್ ಗಳಿಗೆ ಆಲೌಟ್ ಆಗಿತ್ತು.

    ರವೀಂದ್ರ ಜಡೇಜಾ 9.5 ಓವರ್ ಎಸೆದು 34 ರನ್ ನೀಡಿ 4 ವಿಕೆಟ್ ಕಿತ್ತರು. ಜಸ್ ಪ್ರೀತ್ ಬುಮ್ರಾ ಮತ್ತು ಖಲೀಲ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ ಮತ್ತು ಕುಲ್ದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು. ವಿಂಡೀಸ್ ಪರವಾಗಿ ಮರ್ಲಾನ್ ಸಮ್ಯೂಯೆಲ್ಸ್ 24 ರನ್, ಹೋಲ್ಡರ್ 25 ರನ್ ಗಳಿಸಿದರು.

  • ಅನುಷ್ಕಾ, ಅನುಷ್ಕಾ ಎಂದು ಕರೆದು ಕೊಹ್ಲಿಯನ್ನು ಚಿಯರ್ ಮಾಡಿದ್ರು ಅಭಿಮಾನಿಗಳು- ವಿಡಿಯೋ

    ಅನುಷ್ಕಾ, ಅನುಷ್ಕಾ ಎಂದು ಕರೆದು ಕೊಹ್ಲಿಯನ್ನು ಚಿಯರ್ ಮಾಡಿದ್ರು ಅಭಿಮಾನಿಗಳು- ವಿಡಿಯೋ

    ಮುಂಬೈ: ವಿಂಡೀಸ್ ವಿರುದ್ಧದ ನಾಲ್ಕನೇಯ ಏಕದಿನ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಅನುಷ್ಕಾ ಶರ್ಮಾ ಹೆಸರನ್ನು ಹೇಳಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪ್ರೋತ್ಸಾಹಿಸಿದ್ದಾರೆ.

    ಹೌದು. ಅಭಿಮಾನಿಗಳು ಅನುಷ್ಕಾ ಶರ್ಮಾ ಹೆಸರನ್ನು ಹೇಳುತ್ತಿದ್ದಂತೆ ನಕ್ಕ ವಿರಾಟ್ ಕೊಹ್ಲಿ ಕೈ ಎತ್ತಿ ಥಂಪ್ಸ್ ಅಪ್ ಮಾಡಿ ಧನ್ಯವಾದ ಸೂಚಿಸಿದರು.

    ಈ ಹಿಂದೆ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದ್ದಾಗ ಅಭಿಮಾನಿಗಳು ಅನುಷ್ಕಾ ವಿರುದ್ಧ ಟ್ರೋಲ್ ಮಾಡಿ ಟೀಕಿಸುತ್ತಿದ್ದರು. ಕೊಹ್ಲಿ ಪ್ರದರ್ಶನ ಕಳಪೆಯಾಗಲು ಅನುಷ್ಕಾ ಕಾರಣ ಎಂದು ಬರೆದು ಟೀಕಿಸುತ್ತಿದ್ದರು. ಇದಕ್ಕೆ ಕಿಡಿಕಾರಿದ್ದ ಕೊಹ್ಲಿ ಅನುಷ್ಕಾ ಪರ ನಿಂತು ಅಭಿಮಾನಿಗಳಿಗೆ ಗರಂ ಆಗಿಯೇ ಉತ್ತರಿಸಿ ನನ್ನ ಆಟದ ವಿಚಾರಕ್ಕೆ ಬೇರೆಯವರನ್ನು ಎಳೆದು ತರಬೇಡಿ ಎಂದು ಗುಡುಗಿದ್ದರು.

    ಅನುಷ್ಕಾ ಮತ್ತು ಕೊಹ್ಲಿ ಈಗ ದಂಪತಿಯಾಗಿದ್ದು, ಅಭಿಮಾನಿಗಳು ಈ ಜೋಡಿಗೆ `ವಿರುಷ್ಕಾ’ ಎಂದು ಹೆಸರನ್ನು ಇಟ್ಟಿದ್ದಾರೆ. ಈಗ ಕ್ರೀಡಾಂಗಣದಲ್ಲಿ ಕೊಹ್ಲಿ ಬದಲು ಅನುಷ್ಕಾ ಎಂದು ಕರೆಯುತ್ತಿದ್ದು, ಕೊಹ್ಲಿ ಸಹ ಅಭಿಮಾನಿಗಳ ಈ ಪ್ರೋತ್ಸಾಹಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bpi7W2MBuW8/?taken-by=virat.kohlifans

  • ಪುಣೆ ಸೋಲಿಗೆ ಸೇಡು ತೀರಿಸಿ 224 ರನ್ ಗಳಿಂದ ಗೆದ್ದ ಭಾರತ

    ಪುಣೆ ಸೋಲಿಗೆ ಸೇಡು ತೀರಿಸಿ 224 ರನ್ ಗಳಿಂದ ಗೆದ್ದ ಭಾರತ

    ಮುಂಬೈ: 4ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್, ಬೌಲರ್ ಗಳ ಅಬ್ಬರಕ್ಕೆ ನಲುಗಿದ ವೆಸ್ಟ್ ಕೇವಲ 36.2 ಓವರ್ ಗಳಲ್ಲಿ 153 ರನ್ ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಟೀಂ ಇಂಡಿಯಾ 224 ರನ್ ಗಳ ಭರ್ಜರಿ ಗೆಲುವು ಪಡೆದು, ಪುಣೆ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು.

    5 ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾ 2-1 ಅಂತರದಲ್ಲಿ ಮುನ್ನಡೆ ಸಾಧಿಸಿದ್ದು, ಟೂರ್ನಿಯ ಅಂತಿಮ ಪಂದ್ಯಕ್ಕೆ ತಂಡದ ವಿಶ್ವಾಸವನ್ನು ಹೆಚ್ಚಿಸಿಕೊಂಡಿದೆ.

    ಟೀಂ ಇಂಡಿಯಾ ನೀಡಿದ 378 ರನ್ ಗಳ ಬೃಹತ್ ರನ್ ಬೆನ್ನತ್ತಿದ ವಿಂಡೀಸ್ ಯಾವುದೇ ಹಂತದಲ್ಲಿ ಟೀಂ ಇಂಡಿಯಾಗೆ ಸವಾಲು ನೀಡದೇ ಸುಲಭ ತುತ್ತಾಯಿತು. ವೆಸ್ಟ್ ಇಂಡೀಸ್ ಪರ ಹೇಮರಾಜ್ 14, ಸ್ಯಾಮುಯಲ್ 18, ಹೆಟ್ಮೆಯರ್ 13, ಅಲೆನ್ 10 ಮಾತ್ರ ಎರಡಂಕಿ ಮೊತ್ತ ದಾಟಿದರು. ಉಳಿದಂತೆ ಅಂತಿಮ ಹಂತದಲ್ಲಿ ಧವನ್ ಕೊಟ್ಟ ಜೀವದಾನದ ಲಾಭ ಪಡೆದ ಹೋಲ್ಡರ್ ಕೆಲ ಕಾಲ ಬಿರುಸಿನ ಬ್ಯಾಟಿಂಗ್ ನಡೆಸಿ ಔಟಾಗದೇ 54 ರನ್ ಸಿಡಿಸಿದರು.

    ಟೀಂ ಇಂಡಿಯಾ ಪರ ಯುವ ಬೌಲರ್ ಖಲೀಲ್ ಅಹ್ಮದ್ ಮತ್ತು ಕುಲದೀಪ್ ಯಾದವ್ 3 ವಿಕೆಟ್ ಪಡೆದು ಮಿಂಚಿದರೆ, ಭುವನೇಶ್ವರ್ ಕುಮಾರ್ ಮತ್ತು ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.

    ಇದಕ್ಕೂ ಮುನ್ನ ಟಾಸ್ಟ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‍ಗೆ ಆರಂಭಿಕ ಧವನ್, ರೋಹಿತ್ ಶರ್ಮಾ ಜೋಡಿ 71 ರನ್ ಜೊತೆಯಾಟ ನೀಡಿತು. ಈ ವೇಳೆ ಪೌಲ್ ಧವನ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು.

    ಕೊಹ್ಲಿಗೆ ಬ್ರೇಕ್: ಹ್ಯಾಟ್ರಿಕ್ ಶತಕ ಸಿಡಿಸಿ ದಾಖಲೆ ಬರೆದಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶತಕಗಳ ನಾಗಾಲೋಟಕ್ಕೆ ಬ್ರೇಕ್ ಬಿದ್ದಿದೆ. ವಿಂಡೀಸ್ ವಿರುದ್ಧ 4ನೇ ಏಕದಿನ ಪಂದ್ಯದಲ್ಲಿ ಕೇವಲ 16 ರನ್ ಔಟಾದರು. ಇಂದು ಶತಕ ಸಿಡಿಸಿದ್ದರೆ ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಕುಮಾರ ಸಂಗಕ್ಕರ ಅವರ ದಾಖಲೆಯನ್ನು ಸರಿಗಟ್ಟುತ್ತಿದ್ದರು. ಆದರೆ ಕೀಮರ್ ರೋಚ್ ಬೌಲಿಂಗ್ ನಲ್ಲಿ ಶೈ ಹೋಪ್ ಗೆ ಕ್ಯಾಚಿತ್ತು ಕೊಹ್ಲಿ ಪೆವಿಲಿಯನ್ ಸೇರಿದರು. 17 ಎಸೆತಗಳಲ್ಲಿ 2 ಬೌಂಡರಿ ಸಹಿತ 16 ರನ್ ಕೊಹ್ಲಿ ಬಾರಿಸಿದ್ದರು.

    ಈ ಹಂತದಲ್ಲಿ ರೋಹಿತ್ ರನ್ನು ಕೂಡಿಕೊಂಡ ಅಂಬಟಿ ರಾಯುಡು ಬಿರುಸಿನ ಬ್ಯಾಟಿಂಗ್ ನಡೆಸಿ ವಿಂಡೀಸ್ ಬೌಲರ್ ಗಳ ಬೆವರಿಳಿಸಿದರು. ಮೂರನೇ ವಿಕೆಟ್ ಗೆ ಬರೋಬ್ಬರಿ 211 ರನ್ ಗಳ ಜೊತೆಯಾಟ ನೀಡಿ ತಂಡ ಬೃಹತ್ ಮೊತ್ತಗಳಿಸಲು ಕಾರಣರಾದರು. ರೋಹಿತ್ ಶರ್ಮಾ 137 ಎಸೆತಗಳಲ್ಲಿ 20 ಬೌಂಡರಿ, ಆಕರ್ಷಕ 4 ಸಿಕ್ಸರ್ ಮೂಲಕ 162 ರನ್ ಸಿಡಿಸಿ ಮಿಂಚಿದರು.

    ರೋ`ಹಿಟ್’: ವಿಂಡೀಸ್ ಸರಣಿಯ ಮೊದಲ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ರೋಹಿತ್ ಈ ಪಂದ್ಯದಲ್ಲಿ ಆರಂಭದಿಂದಲೂ ರನ್ ವೇಗವಾಗಿ ರನ್ ಗಳಿಸುತ್ತಾ 60 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿದರು. ನಂತರದ 50 ರನ್ ಕೇವಲ 48 ಎಸೆಗಳಲ್ಲಿ ಗಳಿಸಿದರು. ಈ ಮೂಲಕ ರೋಹಿತ್ ತಮ್ಮ 21 ಏಕದಿನ ಶತಕವನ್ನು ಪೂರೈಸಿದರು. ಅಲ್ಲದೇ 186 ಇನ್ನಿಂಗ್ಸ್ ಗಳಲ್ಲೇ ಈ ಸಾಧನೆ ಮಾಡಿ ಸಚಿನ್ (200 ಇನ್ನಿಂಗ್ಸ್), ಸೌರವ್ ಗಂಗೂಲಿ (217 ಇನ್ನಿಂಗ್ಸ್) ರನ್ನು ಹಿಂದಿಕ್ಕಿದರು.

    ರೋಹಿತ್ 2013 ರಿಂದಲೂ ಭಾರತದ ಪರ ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತೀ ಹೆಚ್ಚು ರನ್ ಸಿಡಿಸಿದ ಹೆಗ್ಗಳಿಕೆ ಪಡೆದಿದ್ದು, ಈ ಪಂದ್ಯದಲ್ಲಿ 163 ರನ್ ಸಿಡಿಸಿ ಪ್ರಸಕ್ತ ವರ್ಷದಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರಾದರು. ಉಳಿದಂತೆ 2013 ರಿಂದ 2017 ಅಧಿಯಲ್ಲಿ ಕ್ರಮವಾಗಿ 209, 264, 150, 171*,208* ರನ್ ಸಿಡಿಸಿ ಮಿಂಚಿದ್ದಾರೆ.

    ಇತ್ತ ರೋಹಿತ್‍ಗೆ ಸಾಥ್ ನೀಡಿದ ಅಂಬಟಿ ರಾಯುಡು 8 ಬೌಂಡರಿ, 4 ಸಿಕ್ಸರ್ ಮೂಲಕ ಶತಕ ಸಿಡಿಸಿ ಆಯ್ಕೆ ಸಮಿತಿ ತಮ್ಮನ್ನು ಆಯ್ಕೆ ಮಾಡಿದನ್ನು ಸಮರ್ಥಿಸುವಂತೆ ಮಾಡಿದರು. ಬಳಿಕ ಬಂದ ಧೋನಿ 23 ರನ್, ಜಾದವ್ 16 ರನ್ ಸಿಡಿಸಿ ಟೀಂ ಇಂಡಿಯಾ 350 ರನ್ ಗಡಿದಾಟುವಂತೆ ಮಾಡಿದರು. ಅಂತಿಮವಾಗಿ ಟೀಂ ಇಂಡಿಯಾ 50 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 377 ರನ್ ಗಳ ಬೃಹತ್ ರನ್ ಮೊತ್ತ ಗಳಿಸಿತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊನೆಯ 10 ಓವರ್‌ಗಳಲ್ಲಿ  116 ರನ್- 377 ರನ್ ಬಂದಿದ್ದು ಹೀಗೆ

    ಕೊನೆಯ 10 ಓವರ್‌ಗಳಲ್ಲಿ 116 ರನ್- 377 ರನ್ ಬಂದಿದ್ದು ಹೀಗೆ

    ಮುಂಬೈ: ಕೊನೆಯ 10 ಓವರ್ ಗಳಲ್ಲಿ 116 ರನ್ ಚಚ್ಚಿದ ಪರಿಣಾಮ 4ನೇ ಏಕದಿನ ಪಂದ್ಯದಲ್ಲಿ ಭಾರತ ವಿಂಡೀಸ್ ಗೆ 378 ರನ್ ಗಳ ಕಠಿಣ ಗುರಿಯನ್ನು ಭಾರತ ನೀಡಿದೆ.

    40 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು 261 ರನ್ ಗಳಿಸಿದ್ದ ಭಾರತ ರನ್ ಏರಿಕೆಯಾಗಲು ಕಾರಣವಾಗಿದ್ದು ರೋಹಿತ್ ಶರ್ಮಾ ಮತ್ತು ಅಂಬಾಟಿ ರಾಯುಡು ಬಿರುಸಿನ ಬ್ಯಾಟಿಂಗ್. 60 ಎಸೆತಗಳಲ್ಲಿ ಅರ್ಧಶತಕ, 98 ಎಸೆತಗಳಲ್ಲಿ ಶತಕ ಪೂರ್ಣಗೊಳಿಸಿ ರೋಹಿತ್ ಅಂತಿಮವಾಗಿ 162 ರನ್(137 ಎಸೆತ, 20 ಬೌಂಡರಿ, 4 ಸಿಕ್ಸರ್) ಸಿಡಿಸಿ ಔಟಾದರು. 51 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅಂಬಾಟಿ ರಾಯುಡು 100 ರನ್(81 ಎಸೆತ, 8 ಬೌಂಡರಿ, 4 ಸಿಕ್ಸರ್) ರನೌಟ್ ಆದರು. ಇವರಿಬ್ಬರು ಮೂರನೇ ವಿಕೆಟಿಗೆ 211 ರನ್ ಜೊತೆಯಾಟವಾಡಿದ ಪರಿಣಾಮ ಭಾರತ ಭಾರೀ ಮೊತ್ತವನ್ನು ಪೇರಿಸಿತು.

    ಶಿಖರ್ ಧವನ್ 38 ರನ್, ಕೊಹ್ಲಿ 16 ರನ್, ಧೋನಿ 23 ರನ್, ಜಾಧವ್ ಔಟಾಗದೇ 16 ರನ್, ರವೀಂದ್ರ ಜಡೇಜಾ ಔಟಾಗದೇ 7 ರನ್ ಹೊಡೆದರು. ಉತ್ತಮ ಆಟದಿಂದಾಗಿ ಭಾರತ 50 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 377 ರನ್ ಗಳಿಸಿತು.

    ಭಾರತದ ರನ್ ಏರಿದ್ದು ಹೀಗೆ
    50 ರನ್ – 7.6 ಓವರ್
    100 ರನ್ – 16.2 ಓವರ್
    150 ರನ್ – 26.3 ಓವರ್
    200 ರನ್ – 33.1 ಓವರ್
    250 ರನ್ – 38.4 ಓವರ್
    300 ರನ್ – 42.4 ಓವರ್
    350 ರನ್ – 47.6 ಓವರ್
    377 ರನ್ – 50 ಓವರ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸತತ 3ನೇ ಶತಕ ದಾಖಲಿಸಿ ಕೊಹ್ಲಿ ರೆಕಾರ್ಡ್ – ಟೀಂ ಇಂಡಿಯಾಗೆ ಸೋಲು

    ಸತತ 3ನೇ ಶತಕ ದಾಖಲಿಸಿ ಕೊಹ್ಲಿ ರೆಕಾರ್ಡ್ – ಟೀಂ ಇಂಡಿಯಾಗೆ ಸೋಲು

    ಪುಣೆ: ಟೀಂ ಇಂಡಿಯಾದ ಸತತ 10 ಗೆಲುವಿನ ನಾಗಾಲೋಟಕ್ಕೆ ವಿಂಡೀಸ್ ತಂಡ ಬ್ರೇಕ್ ಹಾಕಿದೆ. ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದ್ದು, ಈ ಮೂಲಕ ವೆಸ್ಟ್ ಇಂಡೀಸ್ 5 ಪಂದ್ಯಗಳ ಏಕದಿನ ಟೂರ್ನಿಯಲ್ಲಿ 1-1 ಸಮಬಲ ಸಾಧಿಸಿದೆ.

    ನಾಯಕ ವಿರಾಟ್ ಕೊಹ್ಲಿ ಏಕಾಂಗಿ ಶತಕ ವ್ಯರ್ಥವಾಗಿದ್ದು, ಅಂತಿಮ 5 ವಿಕೆಟ್ ಗಳನ್ನು ಕೇವಲ 22 ರನ್ ಅಂತರದಲ್ಲಿ ಕಳೆದು ಕೊಂಡ ಟೀಂ ಇಂಡಿಯಾ 47.4 ಓವರ್ ಗಳಲ್ಲಿ 240 ರನ್ ಗಳಿಗೆ ಸರ್ವ ಪತನ ಕಂಡಿತು. ಈ ಮೂಲಕ ಟೀಂ ಇಂಡಿಯಾ ಸರಣಿ ಗೆಲುವು ಪಡೆಯಲು ಮುಂದಿನ 2 ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಕ್ಕೆ ಸಿಲುಕಿದೆ.

    ವಿರಾಟ್ ಕೊಹ್ಲಿ ಅಪರೂಪದ ರೆಕಾರ್ಡ್: ಸತತ ಮೂರು ಪಂದ್ಯಗಳಲ್ಲಿ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಕೀರ್ತಿಗೆ ನಾಯಕ ವಿರಾಟ್ ಕೊಹ್ಲಿ ಭಾಜನರಾದರು. ಅಲ್ಲದೇ ತವರು ನೆಲದಲ್ಲಿ ಬಾರಿಸಿದ ಸತತ 4ನೇ ಶತಕ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಅಲ್ಲದೇ ಈ ಪಂದ್ಯದಲ್ಲಿ ಬಾರಿಸಿದ ಶತಕ ಕೊಹ್ಲಿ ವೃತ್ತಿ ಜೀವನದ 38ನೇ ಶತಕವಾಗಿತ್ತು. ಏಕದಿನ ಪಂದ್ಯಗಳಲ್ಲಿ ಸತತ 4 ಶತಕ ಬಾರಿಸಿರುವ ರೆಕಾರ್ಡ್ ಸದ್ಯ ಶ್ರೀಲಂಕಾ ಆಟಗಾರ ಕುಮಾರ ಸಂಗಕ್ಕಾರ ಹೆಸರಲ್ಲಿದೆ. ಸಂಗಕ್ಕಾರ 2015ರಲ್ಲಿ ಈ ಸಾಧನೆ ಮಾಡಿದ್ದರು.

    ಈ ಸರಣಿಯ 4ನೇ ಏಕದಿನ ಪಂದ್ಯ ಸೋಮವಾರ ಮುಂಬೈಯಲ್ಲಿ ನಡೆಯಲಿದೆ. ಈ ಪಂದ್ಯದಲ್ಲೂ ಕೊಹ್ಲಿ ಶತಕ ಬಾರಿಸಿದರೆ ಸಂಗಕ್ಕಾರ ಸಾಧನೆಗೆ ಸರಿಸಮಾನರಾಗುತ್ತಾರೆ.

    ವಿಂಡೀಸ್ ನೀಡಿದ ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಟೀಂ ಇಂಡಿಯಾ ಆರಂಭದಲ್ಲೇ ಎಡವಿತು. ಆರಂಭಿಕ ರೋಹಿತ್ ಶರ್ಮಾ 8 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಶಿಖರ್ ಧವನ್ ರನ್ನು ಕೂಡಿಕೊಂಡ ನಾಯಕ ವಿರಾಟ್ ಕೊಹ್ಲಿ ಎಚ್ಚರಿಕೆಯ ಆಟಕ್ಕೆ ಮುಂದಾದರು. ಈ ಜೋಡಿ 2ನೇ ವಿಕೆಟ್‍ಗೆ 79 ರನ್ ಜೊತೆಯಾಟ ನೀಡಿತು. ಉತ್ತಮವಾಗಿ ಬ್ಯಾಟ್ ಬೀಸುತ್ತಿದ್ದ ಶಿಖರ್ ಧವನ್ 35 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಾಯುಡು 22 ರನ್ ಗಳಿಸಿ ಔಟಾಗುವ ಮೂಲಕ ನಿರೀಕ್ಷೆ ಹುಸಿಗೊಳಿಸಿದರು. ಈ ವೇಳೆಗೆ 25 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಟೀಂ ಇಂಡಿಯಾ 135 ರನ್ ಗಳಿಸಿತ್ತು.

    ಈ ಹಂತದಲ್ಲಿ ಯುವ ಆಟಗಾರ ರಿಷಭ್ ಪಂತ್ ಉತ್ತಮ ಬ್ಯಾಟಿಂಗ್ ನಡೆಸುವ ಮುನ್ಸೂಚನೆ ನೀಡಿದರೂ 18 ಎಸೆತಗಳಲ್ಲಿ 24 ರನ್ ಗಳಿಸಿ ಹೋಪ್ ಗೆ ವಿಕೆಟ್ ಒಪ್ಪಿಸಿದರು, ಬಳಿಕ ಬಂದ ಧೋನಿ ಕೇವಲ 7 ರನ್ ಗಳಿಸಿ ಔಟಾದರು. ಈ ವೇಳೆಗೆ ಟೀಂ ಇಂಡಿಯಾ 35.5 ಓವರ್ ಗಳಲ್ಲಿ 194 ರನ್ ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ತಂಡ ಸತತ ವಿಕೆಟ್ ಕಳೆದು ಕೊಳ್ಳುತ್ತಿದ್ದರೂ ತಮ್ಮ ಬ್ಯಾಟಿಂಗ್ ಫಾರ್ಮ್ ಮುಂದುವರಿಸಿದ ನಾಯಕ ವಿರಾಟ್ ಕೊಹ್ಲಿ 119 ಎಸೆತ ಎದುರಿಸಿ 10 ಬೌಂಡರಿ 1 ಸಿಕ್ಸರ್ ನೆರವಿನಿಂದ 38ನೇ ಶತಕ ಸಿಡಿಸಿದರು. ಸರಣಿಯಲ್ಲಿ ಕೊಹ್ಲಿ ಸಿಡಿಸಿದ ಸತತ ಮೂರನೇ ಹಾಗೂ ವೆಸ್ಟ್‍ಇಂಡೀಸ್ ವಿರುದ್ಧ ಸತತ ನಾಲ್ಕನೇ ಶತಕ ಇದಾಗಿದೆ. ಬಳಿಕ ಕೇವಲ 22 ರನ್ ಗಳಿಗೆ ಟೀಂ ಇಂಡಿಯಾ 5 ವಿಕೆಟ್ ಕಳೆದು ಕೊಂಡು ಸೋಲುಂಡಿತು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡದ ಪರ ಶಾಯ್ ಹೋಪ್ 95 ರನ್, ಆಶ್ಲೆ ನರ್ಸ್ 40 ರನ್ ಗಳ ನೆರವಿನಿಂದ ವೆಸ್ಟ್ ಇಂಡೀಸ್ 50 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 283 ರನ್ ಪೇರಿಸಿತ್ತು.

    ಇನ್ನಿಂಗ್ಸ್ ಆರಂಭದಲ್ಲೇ ಬೂಮ್ರಾ ಬೌಲಿಂಗ್ ದಾಳಿಗೆ ಸಿಲುಕಿದ ವಿಂಡೀಸ್ ಆರಂಭಿಕರಾದ ಪೊವೆಲ್ 21 ರನ್, ಹೇಮರಾಜ್ 15 ರನ್ ಗಳಿಸಿ ಔಟಾದರು. ಈ ವೇಳೆ ತಮ್ಮ ಕೀಪಿಂಗ್ ಮೂಲಕ ಗಮನ ಸೆಳೆದ ಧೋನಿ ಅದ್ಭುತ ಕ್ಯಾಚ್ ಪಡೆದು ಹೇಮ್‍ರಾಜ್ ಔಟಾಗಲು ಕಾರಣರಾದರು. ಬಳಿಕ ಬಂದ ಅನುಭವಿ ಆಟಗಾರ ಸ್ಯಾಮುವೆಲ್ಸ್ 9 ರನ್ ಗಳಿಸಿ ಖಲೀಲ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು.

    ಈ ಹಂತದಲ್ಲಿ ತಂಡಕ್ಕೆ ಆಸರೆಯಾದ ಹೋಪ್ ಹಾಗೂ ಶಿಮ್ರಾನ್ ಹೆಟ್ಮೆಯರ್ ಟೀಂ ಇಂಡಿಯಾ ಬೌಲರ್ ಗಳನ್ನು ಕೆಲ ಕಾಲ ಕಾಡಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಹೆಟ್ಮೆಯರ್ 37 ರನ್ ಗಳಿಸಿದ್ದ ವೇಳೆ ಧೋನಿ ಸ್ಟಂಪಿಂಗ್ ಗೆ ಪೆವಿಲಿಯನ್ ಸೇರಿದರು. ಇದರೊಂದಿಗೆ ಭಾರತಕ್ಕೆ ಆತಂಕ ಮೂಡಿಸಿದ್ದ ಜೋಡಿಯನ್ನು ಬೇರ್ಪಡಿಸಲು ಕುಲದೀಪ್ ಯಾದವ್ ಯಶಸ್ವಿಯಾದರು. ಅಲ್ಲದೇ ಬಳಿಕ ಬಂದ ರೋವ್ಮನ್ ಪೊವೆಲ್ (4 ರನ್) ಪಡೆದು ಮಿಂಚಿದರು. ಈ ವೇಳೆಗೆ 121 ರನ್ ಗಳಿಸಿದ್ದ ವಿಂಡೀಸ್ 5 ವಿಕೆಟ್ ಕಳೆದುಕೊಂಡಿತ್ತು.

    ಇತ್ತ ಹೋಪ್ ಹಾಗೂ ನಾಯಕ ಜಾಸನ್ ಹೋಲ್ಡರ್ ಜೋಡಿ 6ನೇ ವಿಕೆಟ್ ಗೆ 76 ರನ್ ಗಳ ಮಹತ್ವದ ಜೊತೆಯಾಟ ನೀಡಿತು. ಉತ್ತಮವಾಗಿ ಆಡುತ್ತಿದ್ದ ನಾಯಕ ಹೋಲ್ಡರ್ 32 ಗಳಿಸಿ ಔಟಾದರು, ಬಿರುಸಿನ ಬ್ಯಾಟಿಂಗ್ ಮೂಲಕ ಶತಕದತ್ತ ಮುನ್ನಡೆದಿದ್ದ ಹೋಪ್ 6 ಬೌಂಡರಿ, 3 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ಬೂಮ್ರಾಗೆ ವಿಕೆಟ್ ಒಪ್ಪಿಸಿದರು. ಕೊನೆಯ ಓವರ್ ಗಳಲ್ಲಿ ಬಿರುಸಿನ ಆಟವಾಡಿದ ಆಶ್ಲೆ ನರ್ಸ್ 22 ಎಸೆತಗಳಲ್ಲಿ 40 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರೆ, ಕೆಮರ್ 15 ರನ್ ಗಳಿಸಿ ಔಟಾಗದೇ ಉಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಧೋನಿ ಸೂಪರ್ ಕ್ಯಾಚ್‍ಗೆ ನೆಟ್ಟಿಗರು ಫಿದಾ – ವೈರಲ್ ವಿಡಿಯೋ

    ಧೋನಿ ಸೂಪರ್ ಕ್ಯಾಚ್‍ಗೆ ನೆಟ್ಟಿಗರು ಫಿದಾ – ವೈರಲ್ ವಿಡಿಯೋ

    ಪುಣೆ: ವೆಸ್ಟ್ ಇಂಡೀಸ್ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿಂಡೀಸ್ ಆಟಗಾರ ಹೇಮರಾಜ್ ನೀಡಿದ ಕ್ಯಾಚ್ ಪಡೆದ ಟೀಂ ಇಂಡಿಯಾ ವಿಕೆಟ್ ಕೀಪರ್ ಎಂಎಸ್ ಧೋನಿ ಅವರಿಗೆ ನೆಟ್ಟಿಗರು ಫಿದಾ ಆಗಿದ್ದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಪಂದ್ಯದ 6ನೇ ಓವರ್ ಬೂಮ್ರಾ ಬೌಲಿಂಗ್ ವೇಳೆ ವಿಂಡಿಸ್ ಆಟಗಾರ ಹೇಮರಾಜ್ ಭಾರೀ ಹೊಡೆತಕ್ಕೆ ಕೈ ಹಾಕಿದ್ದರು. ಆದರೆ ಬ್ಯಾಟಿಗೆ ತಾಗಿದ ಚೆಂಡು ನೇರ ವಿಕೆಟ್ ಕೀಪರ್ ಎಡಭಾಗಕ್ಕೆ ಚಿಮ್ಮಿತು. ಈ ವೇಳೆ ಧೋನಿ ಡೈವ್ ಮಾಡಿ ಕ್ಯಾಚ್ ಪಡೆದರು. ಸದ್ಯ ಧೋನಿ ಕ್ಯಾಚ್ ಪಡೆಯುತ್ತಿರುವ ಫೋಟೋವನ್ನು ಬಿಸಿಸಿಐ ಟ್ವೀಟ್ ಮಾಡಿ ಡೈವ್ ಮಾಡಿ ಎಂಎಸ್‍ಡಿ ಪಡೆದ ಕ್ಯಾಚ್ ಎಷ್ಟು ಉತ್ತಮವಾಗಿದೆ ಎಂದು ಪ್ರಶ್ನೆ ಮಾಡಿದೆ.

    ಧೋನಿ ಕ್ಯಾಚ್ ಕಂಡ ಅಭಿಮಾನಿಗಳು ಫಿದಾ ಆಗಿದ್ದು, ವಿಡಿಯೋ ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ಶುಕ್ರವಾರ ಬಿಸಿಸಿಐ ಧೋನಿ ಅವರಿಗೆ ಮುಂದಿನ ವಿಂಡೀಸ್ ಹಾಗೂ ಆಸೀಸ್ ಟೂರ್ನಿಗೆ ವಿಶ್ರಾಂತಿ ನೀಡಿ ತಂಡವನ್ನು ಪ್ರಕಟಿಸಿತ್ತು. ಆದರೆ ಆಯ್ಕೆ ಸಮಿತಿ ತೀರ್ಮಾನಕ್ಕೆ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿ ಟೀಕೆ ಮಾಡಿದ್ದರು.

    ಟೂರ್ನಿಯಲ್ಲಿ ಧೋನಿ ಬದಲಾಗಿ ಯುವ ಆಟಗಾರ ರಿಷಭ್ ಪಂತ್, ಅನುಭವಿ ಆಟಗಾರ ದಿನೇಶ್ ಕಾರ್ತಿಕ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್‍ಕೆ ಪ್ರಸಾದ್, ಧೋನಿ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, 2ನೇ ವಿಕೆಟ್ ಕೀಪರ್ ಆಯ್ಕೆಗೆ ಅವಕಾಶ ನೀಡಲು ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದರು.

    ಸೂಪರ್ ಸ್ಟಂಪಿಂಗ್:

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://twitter.com/IHitManOfficial/status/1056114400338305026

    https://twitter.com/kavitweetzzz/status/1056112554152316928