Tag: west delhi

  • ಪತಿ ಇಲ್ಲದಾಗ ಆಗಾಗ ಬರುತ್ತಿದ್ದ ಯುವಕ- ಅನೈತಿಕ ಸಂಬಂಧ ಶಂಕೆಗೆ ಬಲಿ

    ಪತಿ ಇಲ್ಲದಾಗ ಆಗಾಗ ಬರುತ್ತಿದ್ದ ಯುವಕ- ಅನೈತಿಕ ಸಂಬಂಧ ಶಂಕೆಗೆ ಬಲಿ

    ನವದೆಹಲಿ: ತನ್ನ ಪತ್ನಿಯೊಂದಿಗೆ (Wife) ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ವ್ಯಕ್ತಿಯೊಬ್ಬನಿಗೆ ಚಾಕು ಇರಿದು ಹತ್ಯೆ ಮಾಡಿರುವ ಘಟನೆ ಪಶ್ಚಿಮ ದೆಹಲಿಯ (West Delhi) ಮುಂಡ್ಕಾದಲ್ಲಿ ನಡೆದಿದೆ.

    ಪ್ರದೀಪ್ (25) ಕೊಲೆಯಾದ ಯುವಕ. ಪ್ರದೀಪ್ ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ಮಹಿಳೆಯೊಬ್ಬರ ಜೊತೆ ಸಲುಗೆಯಿಂದ ಇದ್ದ. ಅಲ್ಲದೆ ಆಗಾಗ ಅವರ ಮನೆಗೆ ಹೋಗುತ್ತಿದ್ದ. ಈ ವಿಚಾರವಾಗಿ ಮಹಿಳೆಯ ಪತಿ (Husband) ಚರಣ್ ಸಿಂಗ್ ಆಗಾಗ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಇದನ್ನೂ ಓದಿ: ಬಸ್‌ನಲ್ಲಿ ಪ್ರಯಾಣಿಸುವಾಗ ಹೃದಯಾಘಾತ- ವೃದ್ಧೆ ಸಾವು

    ಚರಣ್ ಸಿಂಗ್ ತನ್ನ ಸಹೋದರಿಯನ್ನು ಭೇಟಿಯಾಗಲು ಉತ್ತರ ಪ್ರದೇಶದ (Uttar Pradesh) ಸೈಫೈಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋಗಿದ್ದ. ಆದರೆ ಕೆಲವು ಗಂಟೆಗಳ ನಂತರ ಮನೆಗೆ ವಾಪಸ್ ಆಗಿದ್ದ. ಈ ವೇಳೆ ಕೊಲೆಯಾದ ಪ್ರದೀಪ್ ಮನೆಯಲ್ಲಿದ್ದ. ಚರಣ್ ಸಿಂಗ್ ಆತನನ್ನು ಮನೆಯಲ್ಲಿಯೇ ಉಳಿದುಕೊಳ್ಳುವಂತೆ ಹೇಳಿದ್ದಾನೆ. ಬೆಳಗ್ಗಿನ ಜಾವ 5.30ರ ವೇಳೆಗೆ ಚಾಕುವಿನಿಂದ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿ ಚರಣ್ ಸಿಂಗ್‍ನನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಚಾಕುವನ್ನು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಆಕ್ಸಿಜನ್ ಕೊರತೆಯಿಂದ ಕ್ಯಾನ್ಸರ್ ರೋಗಿ ಸಾವು- ಕಾರಣ ಅದಲ್ಲ ಅಂತ ವೈದ್ಯರ ವಾದ

  • 5 ಅಂತಸ್ತಿನ ಕಟ್ಟಡ ಕುಸಿತ- ಹಲವರಿಗೆ ಗಾಯ

    5 ಅಂತಸ್ತಿನ ಕಟ್ಟಡ ಕುಸಿತ- ಹಲವರಿಗೆ ಗಾಯ

    ನವದೆಹಲಿ: 5 ಅಂತಸ್ತಿನ ಕಟ್ಟಡವೊಂದು ಕುಸಿದ ಪರಿಣಾಮ ಕನಿಷ್ಠ 5 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಿಗ್ಗೆ ಪಶ್ಚಿಮ ದೆಹಲಿಯ ಇಂದರ್‍ಪುರಿಯಲ್ಲಿ ನಡೆದಿದೆ.

    ಸಣ್ಣ ಓಣಿಯೊಂದರಲ್ಲಿದ್ದ ಕಟ್ಟಡ ಕುಸಿದಿದ್ದು, ಅಪಾಯಕರ ಸ್ಥಿತಿಯಲ್ಲಿ ಪಕ್ಕದ ಕಟ್ಟಡದ ಮೇಲೆ ವಾಲಿ ಬಿದ್ದಿರುವುದನ್ನು ಫೋಟೋಗಳಲ್ಲಿ ನೋಡಬಹುದು. ಘಟನೆಯಲ್ಲಿ ಪ್ರಾಣಾಪಾಯವಾದ ಬಗ್ಗೆ ಈವರೆಗೆ ಯಾವುದೇ ವರದಿಯಾಗಿಲ್ಲ

    ಸದ್ಯಕ್ಕೆ ರಕ್ಷಣಾ ಪಡೆ ಸ್ಥಳಕ್ಕೆ ಧಾವಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ನಿವಾಸಿಗಳನ್ನ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ನಿರ್ಮಾಣ ಮಾಡಿರುವ ಕಾರಣ ಕಟ್ಟಡ ಕುಸಿದಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ:ಗ್ಯಾಸ್ ಸೋರಿಕೆ- ಸರ್ಕಾರಿ ಶಾಲೆಯ 100ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು