Tag: West Bengal

  • Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

    Darjeeling Flood | 24/7 ಕಂಟ್ರೋಲ್‌ ರೂಮ್‌ ಓಪನ್‌ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ (Darjeeling) ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಸಾವಿನ ಸಂಖ್ಯೆ 14ಕ್ಕೆ ಏರಿಕೆಯಾಗುತ್ತಿದ್ದಂತೆ ಪಶ್ಚಿಮ ಬಂಗಾಳ ಸರ್ಕಾರ ಎಚ್ಚೆತ್ತುಕೊಂಡಿದೆ. ಸಾರ್ವಜನಿಕರ ಸಹಾಯಕ್ಕಾಗಿ ಸಿಎಂ ಮಮತಾ ಬ್ಯಾನರ್ಜಿ (Mamata Banerjee), 24/7 ಕಂಟ್ರೋಲ್‌ ರೂಮ್‌ ತೆರೆದಿದ್ದಾರೆ.

    ಈಗಾಗಲೇ‌ ಪರಿಸ್ಥಿತಿಯನ್ನು ಕಂಟ್ರೋಲ್‌ ರೂಮ್‌ (Control Room) ಮೂಲಕ ಮೇಲ್ವಿಚಾರಣೆ ಮಾಡುತ್ತಿದ್ದು, ಸೋಮವಾರ (ಅ.6) ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

    ಶನಿವಾರ ರಾತ್ರಿ ಸುರಿದ ಹಠಾತ್‌ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಬಂಗಾಳದ ಉತ್ತರ ಮತ್ತು ದಕ್ಷಿಣದ ಹಲವಾರು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಇದು ನಿಜಕ್ಕೂ ದುಃಖಕರವಾಗಿದೆ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬೇಸರ ಹೊರಹಾಕಿದ್ದಾರೆ.

    ಉತ್ತರ ಬಂಗಾಳದಲ್ಲಿ 12 ಗಂಟೆಗಳಲ್ಲಿ 300 MMಗೂ ಅಧಿಕ ಮಳೆಯಾಗಿದೆ. ಇದರಿಂದ ಸಂಕೋಶ್ ನದಿ, ಭೂತಾನ್ ಮತ್ತು ಸಿಕ್ಕಿಂನಿಂದ ನದಿ ನೀರಿನ ಹರಿವಿನಲ್ಲೂ ಏರಿಕೆಯಾಗಿದೆ. ಹಠಾತ್ ಪ್ರವಾಹದಿಂದ ನಮ್ಮ ಕೆಲ ಸಹೋದರ-ಸಹೋದರಿಯರನ್ನ ಕಳೆದುಕೊಂಡಿದ್ದೇವೆ. ಮೃತರ ಕುಟುಂಬಗಳಿಗೆ ನನ್ನ ಸಂತಾಪ ತಿಳಿಸುತ್ತೇನೆ. ಅಲ್ಲದೇ ಆ ಕುಟುಂಬಗಳಿಗೆ ಅಗತ್ಯ ಸಹಾಯ ನೀಡುವುದಾಗಿ ತಿಳಿಸಿದ್ದಾರೆ.

    ಸಿಕ್ಕಿಂ ಸಂಪರ್ಕ ಕಡಿತ
    ಡಾರ್ಜಲಿಂಗ್‌ನಲ್ಲಿ ಸಂಭವಿಸಿದ ಈ ವಿಪತ್ತು ಹಿಮಾಲಯ ರಾಜ್ಯವಾದ ಸಿಕ್ಕಿಂ ಜೊತೆಗಿನ ಸಂಪರ್ಕ ಕಡಿತಗೊಳಿಸಿದೆ. ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ, ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಗಳು ರಸ್ತೆ ತಡೆಗಳಿಗೆ ಕಾರಣವಾಗಿವೆ. ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ. ಈ ವಿಪತ್ತಿನಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಳ್ಳುವ ಸಾಧ್ಯತೆಯಿದೆ.

  • ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಗೆ ಭೂಕುಸಿತ; 14 ಮಂದಿ ಸಾವು – ಸಿಕ್ಕಿಂ ಸಂಪರ್ಕ ಕಡಿತ

    ಡಾರ್ಜಿಲಿಂಗ್‌ನಲ್ಲಿ ಭಾರೀ ಮಳೆಗೆ ಭೂಕುಸಿತ; 14 ಮಂದಿ ಸಾವು – ಸಿಕ್ಕಿಂ ಸಂಪರ್ಕ ಕಡಿತ

    ಕೋಲ್ಕತ್ತಾ: ಪಶ್ಚಿಮ ಬಂಗಾಳದ ಡಾರ್ಜಿಲಿಂಗ್‌ನಲ್ಲಿ (Darjeeling) ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಹದಿನಾಲ್ಕು ಜನರು ಸಾವನ್ನಪ್ಪಿದ್ದಾರೆ.

    ಪ್ರಮುಖ ಮಾರ್ಗಗಳಲ್ಲಿ ರಸ್ತೆ ಸಂಪರ್ಕ ಕಡಿತಗೊಂಡ ಪರಿಣಾಮ ಜನ ಮೃತಪಟ್ಟಿದ್ದಾರೆ. ಈ ವಿಪತ್ತು ಹಿಮಾಲಯ ರಾಜ್ಯವಾದ ಸಿಕ್ಕಿಂ ಜೊತೆಗಿನ ಸಂಪರ್ಕ ಕಡಿತಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಉತ್ತರ ಬಂಗಾಳದ ಡಾರ್ಜಿಲಿಂಗ್‌ನಲ್ಲಿ ನಿನ್ನೆ ರಾತ್ರಿ ಭಾರೀ ಮಳೆಯಾಗಿದ್ದು, ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

    ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ, ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಗಳು ರಸ್ತೆ ತಡೆಗಳಿಗೆ ಕಾರಣವಾಗಿವೆ.

    ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ. ಈ ವಿಪತ್ತಿನಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಳ್ಳುವ ಸಾಧ್ಯತೆಯಿದೆ.

    ಯಾವುದೇ ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಡಾರ್ಜಿಲಿಂಗ್‌ನ ಟೈಗರ್ ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಿದೆ. ಆಟಿಕೆ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ.

  • ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ – ಪಶ್ಚಿಮ ಬಂಗಾಳದ ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ಅರೆಸ್ಟ್‌

    ಭಾರತೀಯ ಸೇನೆಯ ವಿರುದ್ಧ ಅವಹೇಳನಕಾರಿ ಹೇಳಿಕೆ – ಪಶ್ಚಿಮ ಬಂಗಾಳದ ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ ಅರೆಸ್ಟ್‌

    ಕೋಲ್ಕತ್ತಾ: ಭಾರತೀಯ ಸೇನೆಯ (Indian Army) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಪಶ್ಚಿಮ ಬಂಗಾಳದ (West Bengal) ಸೋಶಿಯಲ್‌ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ನನ್ನು (Social Media Influencer) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ನಾಡಿಯಾ ಜಿಲ್ಲೆಯ ಆರಂಗಟಾದ ಬಿಸ್ವಾಜಿತ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಆರೋಪಿ ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದ. ಆತನನ್ನು ಬಂಧಿಸಿ ಶನಿವಾರ ಮಧ್ಯಾಹ್ನ ನಾಡಿಯಾ ಜಿಲ್ಲೆಯ ಜಿಲ್ಲಾ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ಈ ವೇಳೆ ಆರೋಪಿ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದಾನೆ. ಇದನ್ನೂ ಓದಿ: ನನ್ನ ಹೃದಯ ಚೂರಾಗಿದೆ.. ನೋವು, ದುಃಖದಲ್ಲಿ ನರಳುತ್ತಿದ್ದೇನೆ: ಕಾಲ್ತುಳಿತ ದುರಂತಕ್ಕೆ ವಿಜಯ್‌ ಮೊದಲ ಪ್ರತಿಕ್ರಿಯೆ

    ಬಿಸ್ವಾಸ್ ಆಗಾಗ ಫೇಸ್‌ಬುಕ್ ಲೈವ್‌ನಲ್ಲಿ ಬರುತ್ತಿದ್ದ. ಆಗೆಲ್ಲ ಸಶಸ್ತ್ರ ಪಡೆಗಳು ಮತ್ತು ಸಿಬ್ಬಂದಿಯನ್ನು ಅತ್ಯಂತ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಭಾಷೆ ಬಳಸಿ ನಿಂದಿಸುತ್ತಿದ್ದ. ಈ ಬಗ್ಗೆ ಆತನ ನೆರೆಹೊರೆಯವರು ಹಾಗೂ ಸಾಮಾಜಿಕ ಮಾಧ್ಯಮದಲ್ಲಿದ್ದ ಕೆಲವು ಸ್ನೇಹಿತರು ಪೊಲೀಸರಿಗೆ ದೂರು ನೀಡಿದ್ದರು. ದೂರಿನಡಿ ಆತನನ್ನು ಬಂಧಿಸಲಾಗಿದೆ. ಆರೋಪಿ ಯಾವ ಉದ್ದೇಶಕ್ಕೆ ಈ ರೀತಿ ವರ್ತಿಸಿದ್ದಾನೆ ಎಂದು ಇನ್ನೂ ತಿಳಿದು ಬಂದಿಲ್ಲ.

    ಆಪರೇಷನ್ ಸಿಂದೂರ್ ಸಮಯದಲ್ಲಿ ಸಹ ಪಶ್ಚಿಮ ಬಂಗಾಳದ ಕೆಲವು ಜನರು ಭಾರತೀಯ ಸೇನೆಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದರು. ಈ ಬಗ್ಗೆ ಪೊಲೀಸರು ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಂಡಿದ್ದರು. ಇದನ್ನೂ ಓದಿ: Vijay Rally Stampede | ಸಾವಿನ ಸಂಖ್ಯೆ 39ಕ್ಕೆ ಏರಿಕೆ – 48 ಮಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ

  • ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ – 7 ಮಂದಿ ಬಲಿ

    ಪಶ್ಚಿಮ ಬಂಗಾಳದಲ್ಲಿ ಭಾರೀ ಮಳೆ – 7 ಮಂದಿ ಬಲಿ

    – ಜನವಸತಿ ಪ್ರದೇಶಕ್ಕೆ ನುಗ್ಗಿದ ನೀರು, ದುರ್ಗಾ ಪೂಜೆಗೆ ಅಡ್ಡಿ

    ಕೋಲ್ಕತ್ತಾ: ಸೋಮವಾರ ರಾತ್ರಿಯಿಡೀ ಪಶ್ಚಿಮ ಬಂಗಾಳದ ಕೋಲ್ಕತ್ತಾ (Kolkata) ಹಾಗೂ ಉಪನಗರಗಳಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಗೆ (Rain) ಹಲವು ಪ್ರದೇಶಗಳು ಜಲಾವೃತವಾಗಿದೆ. ಮಳೆಯ ಅವಾಂತರಕ್ಕೆ ಒಟ್ಟು 7 ಮಂದಿ ಮೃತಪಟ್ಟಿದ್ದಾರೆ.

    ಈ ಮಳೆಯು ನವರಾತ್ರಿಯ ದುರ್ಗಾ ಪೂಜೆ ಆಚರಣೆಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ. ಹವಾಮಾನ ಇಲಾಖೆ ಪ್ರಕಾರ ಕೊಲ್ಕತ್ತಾ ನಗರದಲ್ಲಿ ಕೇವಲ ಮೂರು ಗಂಟೆಗಳಲ್ಲಿ 185 ಮಿ.ಮೀ ಮಳೆಯಾಗಿದ್ದು, ಈ ವರ್ಷದಲ್ಲೇ ಇದು ಅತಿ ಹೆಚ್ಚು ಮಳೆ ಎನ್ನಲಾಗಿದೆ. ಜಲಾವೃತ ಪ್ರದೇಶಗಳಲ್ಲಿ ವಿದ್ಯುತ್ ಆಘಾತದಿಂದ ಐದು ಜನರು ಸೇರಿ ಮಳೆಯಿಂದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 2 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

    ರಸ್ತೆ ತುಂಬೆಲ್ಲ ಮಳೆ ನೀರು ನಿಂತಿದ್ದರಿಂದ ಸಂಚಾರಕ್ಕೆ ಅಡ್ಡಿಯಾಗಿ, ವಾಹನ ಸವಾರರು ಪರದಾಡಿದ್ದಾರೆ. ಜೊತೆಗೆ ಉಪನಗರ ರೈಲು ಮತ್ತು ಮೆಟ್ರೋ ಸೇವೆಗಳಿಗೂ ಅಡ್ಡಿಯಾಗಿದೆ. ಮಳೆ ನೀರು ನಗರದ ತಗ್ಗು ಪ್ರದೇಶಗಳಿಗೆ ನುಗ್ಗಿ ಅಪಾರ ನಷ್ಟ ಉಂಟಾಗಿದೆ. ಭಾರೀ ಮಳೆ ಹಿನ್ನೆಲೆ ನಗರದ ಹಲವೆಡೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಪ್ಯಾಲೆಸ್ಟೈನ್ ಪ್ರತ್ಯೇಕ ದೇಶಕ್ಕಾಗಿ ಇಟಲಿಯಲ್ಲಿ ತೀವ್ರ ಪ್ರತಿಭಟನೆ – ಬಂದರಿಗೆ ಬೆಂಕಿ, 60 ಪೊಲೀಸರಿಗೆ ಗಾಯ

    ಕೋಲ್ಕತ್ತಾದ ದಕ್ಷಿಣ ಮತ್ತು ಪೂರ್ವ ಭಾಗಗಳು ಅತಿ ಹೆಚ್ಚು ಹಾನಿಗೊಳಗಾಗಿದ್ದು, ಗರಿಯಾ ಕಾಮದಹರಿಯಲ್ಲಿ 332 ಮಿಮೀ ಮಳೆಯಾಗಿದೆ. ಜೋಧ್‌ಪುರ ಪಾರ್ಕ್ನಲ್ಲಿ 285 ಮಿ.ಮೀ, ಕಾಳಿಘಾಟ್‌ನಲ್ಲಿ 280 ಮಿ.ಮೀ, ಟಾಪ್ಸಿಯಾದಲ್ಲಿ 275 ಮಿ.ಮೀ, ಬ್ಯಾಲಿಗಂಜ್‌ನಲ್ಲಿ 264 ಮಿ.ಮೀ ಮತ್ತು ಉತ್ತರ ಕೋಲ್ಕತ್ತಾದ ಥಂಟಾನಿಯಾದಲ್ಲಿ 195 ಮಿ.ಮೀ ಮಳೆಯಾಗಿದೆ ಕೋಲ್ಕತ್ತಾ ಮಹಾನಗರ ಪಾಲಿಕೆ ಮಾಹಿತಿ ನೀಡಿದೆ.

    ಜನ ವಸತಿ ಪ್ರದೇಶಗಳಿಗೆ ಮಳೆ ನೀರು ನುಗ್ಗಿದ ಪರಿಣಾಮ ದುರ್ಗಾ ಪೂಜೆಯ ಸಿದ್ಧತೆಗಳಿಗೆ ಅಡ್ಡಿಯುಂಟಾಗಿದೆ. ಮನೆಗಳು, ಮಾರುಕಟ್ಟೆಗಳು ಮತ್ತು ಪೆಂಡಲ್ ನಿರ್ಮಾಣ ಸ್ಥಳಗಳು ಸಹ ಜಲಾವೃತವಾಗಿದೆ.

    ಕೋಲ್ಕತ್ತಾ ವಿಮಾನ ನಿಲ್ದಾಣದ ರನ್ ವೇಗಳಲ್ಲೂ ನೀರು ನಿಂತಿದ್ದು, ಏರ್ ಇಂಡಿಯಾ ಹಾಗೂ ಇಂಡಿಗೋ ವಿಮಾನ ಹಾರಾಟದಲ್ಲಿ ವಿಳಂಬವಾಗಬಹುದು ಎಂದು ಗ್ರಾಹಕರಿಗೆ ಮಾಹಿತಿ ನೀಡಿದೆ.

    ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಪೂರ್ವ ಮತ್ತು ಪಶ್ಚಿಮ ಮೇದಿನಿಪುರ, ದಕ್ಷಿಣ 24 ಪರಗಣ, ಜಾರ್ಗ್ರಾಮ್ ಮತ್ತು ಬಂಕುರಾ ಸೇರಿದಂತೆ ದಕ್ಷಿಣ ಬಂಗಾಳ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗಲಿದೆ. ಸೆ.25 ವರೆಗೂ ಮಳೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಮಾನ ಇಲಾಖೆ ಎಚ್ಚರಿಸಿದೆ.

  • ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟುಬಿಡ್ತೀನಿ – ಬಿಜೆಪಿ ಶಾಸಕನಿಗೆ ಟಿಎಂಸಿ ನಾಯಕ ಬೆದರಿಕೆ

    ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟುಬಿಡ್ತೀನಿ – ಬಿಜೆಪಿ ಶಾಸಕನಿಗೆ ಟಿಎಂಸಿ ನಾಯಕ ಬೆದರಿಕೆ

    ಕೋಲ್ಕತ್ತಾ: ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟು ಬಿಡ್ತೀನಿ ಎಂದು ಬಿಜೆಪಿ ಶಾಸಕ ಶಂಕರ್ ಘೋಷ್ (Shankar Ghosh) ಅವರಿಗೆ ಟಿಎಂಸಿ ನಾಯಕ ಅಬ್ದುರ್‌ ರಹೀಮ್ ಬಕ್ಷಿ (Abdur Rahim Bakshi) ಬೆದರಿಕೆ ಹಾಕಿದ್ದಾರೆ.

    ಶನಿವಾರ (ಸೆ.6) ನಡೆದ ಪ್ರತಿಭಟನಾ ಸಭೆಯಲ್ಲಿ ಮಾಲ್ಡಾ ಜಿಲ್ಲೆಯ ಟಿಎಂಸಿ ಅಧ್ಯಕ್ಷರಾಗಿರುವ ಅಬ್ದುರ್ ಭಾಗಿಯಾಗಿದ್ದರು. ಈ ವೇಳೆ ದೇಶದ ಇತರ ಭಾಗಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ವಿರುದ್ಧ ನಡೆದ ದೌರ್ಜನ್ಯವನ್ನು ವಿರೋಧಿಸಿ ಮಾತನಾಡುತ್ತಿದ್ದಾಗ ಬಿಜೆಪಿ ಶಾಸಕ ಶಂಕರ್ ಘೋಷ್ ಅವರ ಹೆಸರು ಉಲ್ಲೇಖಿಸದೇ ಬೆದರಿಕೆ ಹಾಕಿ, ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.ಇದನ್ನೂ ಓದಿ: ಹಣ ಕೇಳಿದ್ರೆ ರೇಪ್ ಮಾಡೋದಾಗಿ ಬೆದರಿಕೆ – ನೆರೆಯವನೆಂದು ನಂಬಿ 3.71 ಲಕ್ಷ ಸಾಲ ಕೊಡಿಸಿದ್ದವಳಿಗೆ ವಂಚನೆ

    ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಶಂಕರ್ ಘೋಷ್ ಅವರು ರಾಜ್ಯದಿಂದ ವಲಸೆ ಬಂದ ಕಾರ್ಮಿಕರನ್ನು ರೋಹಿಂಗ್ಯರು ಅಥವಾ ಬಾಂಗ್ಲಾದೇಶಿಗಳು ಎಂದಿದ್ದರು. ಇದನ್ನು ಉಲ್ಲೇಖಿಸಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಹೊರಗೆ ಕೆಲಸ ಮಾಡುವ 30 ಲಕ್ಷ ವಲಸೆ ಕಾರ್ಮಿಕರು ಬಂಗಾಳಿಗಳಲ್ಲ. ಅವರು ರೋಹಿಂಗ್ಯರು. ಆದರೆ ಅವರನ್ನು ಬಾಂಗ್ಲಾದೇಶಿಯರು ಎಂದು ನಾಚಿಕೆಯಿಲ್ಲದೆ ಹೇಳಿದ್ದಾನೆ. ಈ ಕುರಿತು ಈ ಮೊದಲು ಹೇಳಿದ್ದೆ. ಈಗಲೂ ಹೇಳುತ್ತಿದ್ದೇನೆ. ನೀವು ಈ ರೀತಿಯಾಗಿ ಮತ್ತೆ ಹೇಳುವುದನ್ನು ನಾನು ಕೇಳಿದರೆ ಬಾಯಿಗೆ ಆ್ಯಸಿಡ್ ಹಾಕಿ ಸುಟ್ಟು ಬಿಡ್ತೀನಿ ಎಂದಿರುವುದಾಗಿ ವರದಿಯಾಗಿದೆ.

    ಹೇಳಿಕೆ ಬೆನ್ನಲ್ಲೇ ಬಿಜೆಪಿ, ಟಿಸಿಎಂಯನ್ನು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೂ ಮುನ್ನ ಟಿಎಂಸಿ ಪಕ್ಷದವರು ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಕಾರ್ಯಕರ್ತರ ಕೈಕಾಲುಗಳನ್ನು ಕತ್ತರಿಸುವುದಾಗಿ ಬೆದರಿಕೆ ಹಾಕಿದ್ದರು. ಟಿಎಂಸಿಗೆ ಇದು ಹೊಸದೇನಲ್ಲ. ಇದು ಅವರ ರಾಜಕೀಯ ಸಂಸ್ಕೃತಿ. ಈ ರೀತಿಯ ಬೆದರಿಕೆಗಳ ಮೂಲಕ ಟಿಎಂಸಿ ರಾಜಕೀಯ ನಡೆಸುತ್ತದೆ ಎಂದು ಕಿಡಿಕಾರಿದೆ.

    ಇದು ತೃಣಮೂಲ ಕಾಂಗ್ರೆಸ್‌ನ ಸಂಸ್ಕೃತಿ. ಜನರನ್ನು ಬೆದರಿಸುವುದೇ ಅವರ ಕೆಲಸ. ಮಾಲ್ಡಾದಲ್ಲಿ ಇಂತಹ ಹೇಳಿಕೆಗಳು ಯಾವಾಗಲೂ ಕೇಳುತ್ತಿರುತ್ತವೆ. ಇದರಿಂದಲೇ ಟಿಎಂಸಿ ಅಧ್ಯಕ್ಷರು ಸುದ್ದಿಯಲ್ಲಿರುತ್ತಾರೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲುತ್ತದೆ ಎಂಬ ಭಯದಿಂದಾಗಿ ಈ ರೀತಿ ಮಾಡುತ್ತಿದೆ ಎಂದು ಬಿಜೆಪಿಯವರು ಹೇಳಿಕೊಂಡಿದ್ದಾರೆ.ಇದನ್ನೂ ಓದಿ: ನ್ಯಾ. ವರ್ಮಾ ವಿರುದ್ಧದ ಕೇಸ್‌ ತನಿಖಾ ಸಮಿತಿಗೆ ಉತ್ತರ ಕನ್ನಡದ ಗಣಪತಿ ಭಟ್‌ ನೇಮಕ

  • ಬರ್ತ್‌ಡೇ ಪಾರ್ಟಿಗೆ ಕರೆದೊಯ್ದು ಪರಿಚಯಸ್ಥರಿಂದಲೆ ಮಹಿಳೆಯ ಗ್ಯಾಂಗ್‌ ರೇಪ್‌

    ಬರ್ತ್‌ಡೇ ಪಾರ್ಟಿಗೆ ಕರೆದೊಯ್ದು ಪರಿಚಯಸ್ಥರಿಂದಲೆ ಮಹಿಳೆಯ ಗ್ಯಾಂಗ್‌ ರೇಪ್‌

    ಕೋಲ್ಕತ್ತಾ: ಮಹಿಳೆಯೊಬ್ಬಳ ಹುಟ್ಟುಹಬ್ಬದ (Birthday) ದಿನವೇ ಆಕೆಯ ಮೇಲೆ ಇಬ್ಬರು ಪರಿಚಯಸ್ಥರು ಸೇರಿ ಸಾಮೂಹಿಕ ಅತ್ಯಾಚಾರ (Gang-Rape) ಎಸಗಿರುವುದು ಕೋಲ್ಕತ್ತಾದಲ್ಲಿ (Kolkata) ನಡೆದಿದೆ.

    ಶುಕ್ರವಾರ ನಗರದ ದಕ್ಷಿಣ ಹೊರವಲಯದಲ್ಲಿರುವ ರೀಜೆಂಟ್ ಪಾರ್ಕ್ ಪ್ರದೇಶದಲ್ಲಿ ಅತ್ಯಾಚಾರ ನಡೆದಿದೆ. ಕೃತ್ಯ ಎಸಗಿ ನಾಪತ್ತೆಯಾಗಿದ್ದ ಇಬ್ಬರು ಆರೋಪಿಗಳನ್ನು ಚಂದನ್ ಮಲಿಕ್ ಮತ್ತು ದೀಪ್ ಎಂದು ಗುರುತಿಸಲಾಗಿದೆ. ದೀಪ್ ಸರ್ಕಾರಿ ಉದ್ಯೋಗಿ ಎಂದು ವರದಿಯಾಗಿದೆ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು

    ಹರಿದೇವ್‌ಪುರದ ಮಹಿಳೆಯನ್ನು ಹುಟ್ಟುಹಬ್ಬದ ಆಚರಣೆ ನೆಪದಲ್ಲಿ ಚಂದನ್, ದೀಪ್ ಮನೆಗೆ ಕರೆದುಕೊಂಡು ಹೋಗಿದ್ದ. ಈ ವೇಳೆ ಹಲ್ಲೆ ನಡೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಲಾಗಿದೆ. ಬಳಿಕ ಶನಿವಾರ ಬೆಳಗ್ಗೆ ಮಹಿಳೆ ಅಲ್ಲಿಂದ ತಪ್ಪಿಸಿಕೊಂಡು ಬಂದು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಳು.

    ಈ ಸಂಬಂಧ ಮಹಿಳೆಯ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದು, ಎಫ್‌ಐಆರ್‌ ದಾಖಲಾಗಿದೆ. ದೂರಿನಲ್ಲಿ, ಮಹಿಳೆಗೆ ಚಂದನ್ ಹಲವು ದಿನಗಳಿಂದ ಪರಿಚಯವಾಗಿದ್ದ. ಆತ ತನ್ನನ್ನು ದಕ್ಷಿಣ ಕೋಲ್ಕತ್ತಾದಲ್ಲಿರುವ ದುರ್ಗಾ ಪೂಜಾ ಸಮಿತಿಯ ಮುಖ್ಯಸ್ಥ ಎಂದು ಹೇಳಿಕೊಂಡಿದ್ದ. ಅಲ್ಲದೇ ಆತ ದೀಪ್‌ನನ್ನು ಪರಿಚಯ ಮಾಡಿಕೊಟ್ಟಿದ್ದ. ಮಹಿಳೆಯನ್ನೂ ಸಮಿತಿಯಲ್ಲಿ ಸೇರಿಸಿಕೊಳ್ಳುವುದಾಗಿ ಭರವಸೆ ನೀಡಿದ್ರು ಎಂದು ಉಲ್ಲೇಖಿಸಲಾಗಿದೆ.

    ಜೂನ್ 25 ರಂದು ದಕ್ಷಿಣ ಕಲ್ಕತ್ತಾ ಕಾನೂನು ಕಾಲೇಜು ಆವರಣದಲ್ಲಿ ಕಾನೂನು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿತ್ತು. ಈ ಸಂಬಂಧ ಕಾಲೇಜಿನ ಹಳೆಯ ವಿದ್ಯಾರ್ಥಿ ಮೋನೋಜಿತ್ ಮಿಶ್ರಾನನ್ನು ಬಂಧಿಸಲಾಗಿತ್ತು. ಇನ್ನೂ ಕಳೆದ ವರ್ಷ ಆರ್‌ಜಿಕರ್‌ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇತ್ತೀಚೆಗೆ ನಗರದಲ್ಲಿ ಹೆಚ್ಚಾಗಿರುವ ಅತ್ಯಾಚಾರ, ಅಪರಾಧ ಪ್ರಕರಣಗಳ ಬಗ್ಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಆರೋಪ – ಎಸ್‌ಎಎಫ್ ಪೊಲೀಸ್ ಕಾನ್‌ಸ್ಟೆಬಲ್ ಅರೆಸ್ಟ್

  • ಬಾಲಕನ ಕೊಲೆ ಆರೋಪ – ಹಿಗ್ಗಾಮುಗ್ಗಾ ಥಳಿಸಿ ದಂಪತಿಯ ಹತ್ಯೆ

    ಬಾಲಕನ ಕೊಲೆ ಆರೋಪ – ಹಿಗ್ಗಾಮುಗ್ಗಾ ಥಳಿಸಿ ದಂಪತಿಯ ಹತ್ಯೆ

    ಕೋಲ್ಕತ್ತಾ: 8 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ ಬಾಲಕನ ಕುಟುಂಬಸ್ಥರು ದಂಪತಿಯನ್ನು ಮನಸೋ ಇಚ್ಛೆ ಥಳಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ನಾಡಿಯಾ ಜಿಲ್ಲೆಯಲ್ಲಿ ನಡೆದಿದೆ.

    ಉತ್ಪಲ್ ಬಿಸ್ವಾಸ್, ಪತ್ನಿ ಸೋಮ ಬಿಸ್ವಾಸ್ ಮೃತ ದಂಪತಿ. ಸ್ವರ್ಣಭ್ ಮಂಡಲ್ ಎಂಬ ಬಾಲಕ ಶುಕ್ರವಾರ ಆಟವಾಡಲು ಹೋಗುತ್ತೇನೆ ಎಂದು ಹೇಳಿ ನಾಪತ್ತೆಯಾಗಿದ್ದ. ಆತನ ಮನೆಯವರು ಸುತ್ತಮುತ್ತ ಹುಡುಕಾಡಿದರೂ ಬಾಲಕ ಪತ್ತೆಯಾಗಿರಲಿಲ್ಲ. ಇದನ್ನೂ ಓದಿ: ಅಪ್ರಾಪ್ತೆ ಮೇಲೆ 2 ಮಕ್ಕಳ ತಂದೆಯಿಂದ ನಿರಂತರ ಅತ್ಯಾಚಾರ – ಹೆರಿಗೆಯಾದ ಅರ್ಧ ಗಂಟೆಯಲ್ಲೇ ಮಗು ಸಾವು

    ಬಳಿಕ ಬಾಲಕ ಕಾಣೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಶನಿವಾರ ಬಾಲಕನ ಮೃತದೇಹವು ಹತ್ತಿರದ ಕೆರೆಯಲ್ಲಿ ಟಾರ್ಪಲ್‌ನಿಂದ ಸುತ್ತಿದ್ದ ರೀತಿಯಲ್ಲಿ ಪತ್ತೆಯಾಗಿತ್ತು. ಈ ವೇಳೆ ಬಾಲಕ ಕುಟುಂಬಸ್ಥರು ಕೆರೆಯ ಪಕ್ಕದಲ್ಲೇ ಇರುವ ಮನೆಯ ಉತ್ಪಲ್ ಹಾಗೂ ಆತನ ಪತ್ನಿ ಸೇರಿ ಸ್ವರ್ಣಭ್‌ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಇದನ್ನೂ ಓದಿ: ರಾಹುಗ್ರಸ್ತ ರಕ್ತಚಂದ್ರಗ್ರಹಣ – ರಾಯರ ಮಠದಲ್ಲಿ ಮಧ್ಯಾಹ್ನದಿಂದ ತೀರ್ಥ, ಪ್ರಸಾದ ಬಂದ್

    ಈ ವೇಳೆ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟು, ಬಾಲಕನ ಕುಟುಂಬಸ್ಥರು ಉತ್ಪಲ್ ಮನೆ ಮೇಲೆ ದಾಳಿ ಮಾಡಿ, ಆತನಿಗೆ ಹಾಗೂ ಆತನ ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗಂಭೀರ ಗಾಯಗೊಂಡ ದಂಪತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

     ಘಟನೆ ಕುರಿತು ಪ್ರಾಥಮಿಕ ವರದಿಯಲ್ಲಿ ಬಾಲಕನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿರುವುದು ಬೆಳಕಿಗೆ ಬಂದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹೆಚ್ಚಿನ ತನಿಖೆಯನ್ನು ಮುಂದುವರಿಸಿದ್ದಾರೆ.

  • ಬಿಹಾರ, ಬಂಗಾಳಕ್ಕಿಂದು ಮೋದಿ ಭೇಟಿ – 18,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

    ಬಿಹಾರ, ಬಂಗಾಳಕ್ಕಿಂದು ಮೋದಿ ಭೇಟಿ – 18,000 ಕೋಟಿ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

    ಪಾಟ್ನಾ: ಬಿಹಾರ ವಿಧಾನಸಭೆಯ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ರಾಜಕೀಯ ಕಾವು ಜೋರಾಗುತ್ತಿದೆ. ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಪ್ರವಾಸ ಕೂಡ ಹೆಚ್ಚಾಗಿ ನಡೆಯುತ್ತಿದೆ. ಇಂದು ಪಶ್ಚಿಮ ಬಂಗಾಳ, ಬಿಹಾರಕ್ಕೆ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, 18,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳ (Development Projects) ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

    ಹೌದು. ಬಿಹಾರದ ಚಂಪಾರಣ್‌ ಬಳಿಕ ಪ್ರಧಾನಿ ಅವರ ಕಣ್ಣು ಈಗ ಮಗಧ ಪ್ರದೇಶದ ಮೇಲಿದೆ. ಹೀಗಾಗಿ ʻಮಿಷನ್‌ ಮಗಧʼ ಸಾಧಿಸುವ ಪ್ರಯತ್ನದ ಭಾಗವಾಗಿಯೂ ಇಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.  ಇದನ್ನೂ ಓದಿ: ಅಡಿಕೆ ಬೆಳೆ GST ವ್ಯಾಪ್ತಿಯಿಂದ ಹೊರಗಿಡಿ, ಹಳದಿ ಎಲೆ ರೋಗ ಬಿದ್ದ ಭೂಮಿಗೆ ಪರಿಹಾರ ನೀಡಿ – ರಾಜ್ಯ ಸಂಸದರ ನಿಯೋಗ ಮನವಿ

    18,000 ಸಾವಿರ ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ಪೈಕಿ ಬಿಹಾರದ ಗಯಾದಲ್ಲಿ ಸುಮಾರು 13,000 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಹಾಗೂ ಕೋಲ್ಕತ್ತಾದಲ್ಲಿ 5,200 ಕೋಟಿಗೂ ಅಧಿಕ ಮೌಲ್ಯದ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದನ್ನೂ ಓದಿ: ಡಿಎಂಕೆ, ಬಿಜೆಪಿ ಯಾವುದೇ ಪಕ್ಷದ ಜೊತೆಗೂ ಮೈತ್ರಿ ಮಾಡಿಕೊಳ್ಳಲ್ಲ – ಟಿವಿಕೆ ವಿಜಯ್ ಘೋಷಣೆ

    ಇದರಲ್ಲಿ ವಿದ್ಯುತ್, ಸಂಪರ್ಕ, ಆರೋಗ್ಯ ಮತ್ತು ಸಾರ್ವಜನಿಕರಿಗೆ ಸಂಬಂಧಿಸಿದ ಹಲವು ಯೋಜನೆಗಳು ಸೇರಿವೆ. ಇದರ ಹೊರತಾಗಿ, ಎರಡು ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಲಿದ್ದಾರೆ. ಇದರಲ್ಲಿ ಒಂದು ರೈಲು ದೆಹಲಿ ಮತ್ತು ಗಯಾ ನಡುವೆ ಚಲಿಸಿದ್ರೆ, ಮತ್ತೊಂದು ರೈಲು ಬಿಹಾರ ಮತ್ತು ಜಾರ್ಖಂಡ್ ನಡುವೆ ಚಲಿಸುತ್ತದೆ. ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿ ಭೇಟಿಯಾದ ಹೆಚ್‌ಡಿಕೆ

    ಬಿಹಾರ ಭೇಟಿ ಸಮಯದಲ್ಲಿ ಮೋದಿ ಅವರು ಗಯಾದ ಜೊತೆಗೆ ಪಾಟ್ನಾ ಮತ್ತು ಬೇಗುಸರಾಯ್ ಜಿಲ್ಲೆಗಳಿಗೂ ಭೇಟಿ ನೀಡಲಿದ್ದು, ಮಗಧ ವಿಶ್ವವಿದ್ಯಾಲಯದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಿಹಾರದ ಮಗಧ ಪ್ರದೇಶವು ಬಿಹಾರದಲ್ಲಿ ಬಿಜೆಪಿಯ ಅತ್ಯಂತ ದುರ್ಬಲ ಕೋಟೆ ಎಂದು ಪರಿಗಣಿಸಲಾಗಿದೆ. ಇದರ ಮೇಲೆ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಲೇ ಇದೆ. ಇದರ ಭಾಗವಾಗಿ ಇಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದಾರೆ. ಪ್ರಧಾನಿ ಅವರ ಭೇಟಿ ಬಿಗ್‌ ಬೂಸ್ಟ್‌ ನೀಡಲಿದೆಯೇ ಅನ್ನೋದನ್ನ ಕಾದುನೋಡಬೇಕಿದೆ.

    ಒಟ್ಟಿನಲ್ಲಿ ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ತೇಜಸ್ವಿ ಯಾದವ್ ಬಿಹಾರದಲ್ಲಿ ʻಮತದಾರರ ಹಕ್ಕುಗಳ ಯಾತ್ರೆʼ ನಡೆಸುತ್ತಿರುವ ಹೊತ್ತಿನಲ್ಲೇ ಪ್ರಧಾನಿಯವರ ಭೇಟಿ ರಾಜಕೀಯ ಕಾವು ಹೆಚ್ಚಿಸಿದೆ.

  • ಪಶ್ಚಿಮ ಬಂಗಾಳ | ಶಾಲೆಯ ಬಳಿಯೇ ಬಾಂಬ್‌ ಸ್ಫೋಟ – ಓರ್ವ ಸಾವು

    ಪಶ್ಚಿಮ ಬಂಗಾಳ | ಶಾಲೆಯ ಬಳಿಯೇ ಬಾಂಬ್‌ ಸ್ಫೋಟ – ಓರ್ವ ಸಾವು

    ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಶಾಲೆಯೊಂದರ (School) ಬಳಿಯೇ ಬಾಂಬ್‌ ಸ್ಫೋಟಗೊಂಡು (Bomb Blast) ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.

    ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ್ ಪ್ರೌಢಶಾಲೆಯ ಬಳಿ ಸೋಮವಾರ (ಆ.18) ಮುಂಜಾನೆ ಈ ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದ. ಆತನನ್ನು ಬರಾಸತ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಪ್ರತೀಕ್ಷಾ ಜಾರ್ಖರಿಯಾ ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಮತ್ತೆ ಶಾಲೆಗಳಿಗೆ ಬಾಂಬ್‌ ಬೆದರಿಕೆ – ತೀವ್ರ ಶೋಧ

    ಬಾಂಬ್‌ ಸ್ಫೋಟಗೊಂಡ ಸ್ಥಳಕ್ಕೆ ಪಶ್ಚಿಮ ಬಂಗಾಳ ಸರ್ಕಾರದ ಆಹಾರ ಮತ್ತು ಸರಬರಾಜು ಸಚಿವ ರತಿನ್ ಘೋಷ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

    ಸಾವನ್ನಪ್ಪಿದ ವ್ಯಕ್ತಿ ಬೇರೆ ರಾಜ್ಯದ ನಿವಾಸಿಯಾಗಿದ್ದಾನೆ. ಸ್ಫೋಟ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮೈಸೂರು | ಕುಡಿತಕ್ಕೆ ಹಣ ನೀಡದ ಪತ್ನಿಯನ್ನ ಕೊಂದೇಬಿಟ್ಟ ಪತಿ

  • ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ ಡಿಕ್ಕಿ – 10 ಮಂದಿ ಯಾತ್ರಿಕರು ಸಾವು

    – ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಬಿಹಾರ ಸಿಎಂ

    ಕೋಲ್ಕತ್ತಾ: ರಸ್ತೆ ಬದಿ ನಿಲ್ಲಿಸಿದ್ದ ಟ್ರಕ್‌ಗೆ ಬಸ್ (Bus) ಗುದ್ದಿದ್ದ ಪರಿಣಾಮ ಬಸ್ಸಿನಲ್ಲಿದ್ದ 10 ಮಂದಿ ಯಾತ್ರಿಕರು ಸಾವನ್ನಪ್ಪಿದ್ದು, 35 ಜನರು ಗಾಯಗೊಂಡಿರುವ ಘಟನೆ ಪಶ್ಚಿಮ ಬಂಗಾಳದ (West Bengal) ಬುರ್ದ್ವಾನ್‌ನಲ್ಲಿ ನಡೆದಿದೆ.

    ಬಿಹಾರದ (Bihar) ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿನ ಯಾತ್ರಿಕರು ದಕ್ಷಿಣ 24 ಪರಗಣ ಜಿಲ್ಲೆಯ ಗಂಗಾಸಾಗರ್‌ಗೆ ಭೇಟಿ ನೀಡಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತರಲ್ಲಿ ಎಂಟು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಕೇಸ್‌| ಜೈನ ಧರ್ಮದ ಬಗ್ಗೆ ಅವಹೇಳನ – ಯುವಕ ಅರೆಸ್ಟ್‌

    ಅಪಘಾತದಲ್ಲಿ 6 ಮಕ್ಕಳು ಸೇರಿ 35 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಗಸ್ಟ್ 8 ರಂದು ಮೋತಿಹಾರಿಯಿಂದ ಯಾತ್ರಿಕರು ದಿಯೋಘರ್‌ಗೆ ಭೇಟಿ ನೀಡಿ, ನಂತರ ಗಂಗಾಸಾಗರ್‌ಗೆ ತೆರಳಿ ಹಿಂತಿರುಗುತ್ತಿದ್ದರು ಎನ್ನಲಾಗುತ್ತಿದೆ. ಇದನ್ನೂ ಓದಿ: ರಾಜಕೀಯದ ಬಗ್ಗೆ ಚರ್ಚೆ ಬೇಡ – ರಾಜಣ್ಣ ಬಗ್ಗೆ ಕೇಳಿದ್ದಕ್ಕೆ ಜಾರಕಿಹೊಳಿ ಉತ್ತರ

    ಘಟನೆ ಕುರಿತು ಬಿಹಾರ ಸಿಎಂ ನಿತೀಶ್ ಕುಮಾರ್ (Nitish Kumar) ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ. ಅಲ್ಲದೇ ಗಾಯಾಳುಗಳಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ.