Tag: Wellington

  • ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ರಾಸ್ ಟೇಲರ್

    ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ ರಾಸ್ ಟೇಲರ್

    ವೆಲ್ಲಿಂಗ್ಟನ್: 16 ವರ್ಷಗಳ ಕ್ರಿಕೆಟ್ ವೃತ್ತಿಜೀವನಕ್ಕೆ ನ್ಯೂಜಿಲೆಂಡ್ ತಂಡದ ಖ್ಯಾತ ಆಟಗಾರ ರಾಸ್ ಟೇಲರ್ ವಿದಾಯ ಹೇಳಿದ್ದಾರೆ.

    ಸೋಮವಾರ ನಡೆದ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಪಂದ್ಯದ ಬಳಿಕ ಟೇಲರ್ ವಿದಾಯ ಹೇಳಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮುಖ್ಯಸ್ಥ ಮಾರ್ಟಿನ್ ಸ್ನೇಡನ್ ಅವರು ಟೇಲರ್‌ಗೆ ಬೀಳ್ಕೊಡುಗೆ ನೀಡಿ, ಸನ್ಮಾನಿಸಿದರು. ಇದನ್ನೂ ಓದಿ: ಜನಾಂಗ, ಧರ್ಮ, ಪಕ್ಷವನ್ನು ಬದಿಗಿರಿಸಿ ದೇಶಕ್ಕಾಗಿ ಒಂದಾಗಿ: ಮುತ್ತಯ್ಯ ಮುರುಳೀಧರನ್

    ಸೇಡಾನ್ ಪಾರ್ಕ್‍ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು 115 ರನ್‍ಗಳಿಂದ ಜಯಗಳಿಸಿತು. ತಮ್ಮ ವೃತ್ತಿಜೀವನದ ಕೊನೆಯ ಪಂದ್ಯವನ್ನಾಡಿದ ಅವರು ಕೇವಲ 14 ರನಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಹಿಂದೆ ಜನವರಿಯಲ್ಲಿ ಅವರು ಬಾಂಗ್ಲಾ ವಿರುದ್ಧದ ಸರಣಿಯ ನಂತರ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಹೇಳಿದ್ದರು. ಇದನ್ನೂ ಓದಿ: ರಂಜಾನ್ ಸಮಯದಲ್ಲಿ ಮಧುಮೇಹ ನಿರ್ವಹಣೆ ಹೇಗೆ?

    2006ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದ ಅವರು, ನಂತರದಲ್ಲಿ ನ್ಯೂಜಿಲೆಂಡ್ ತಂಡದ ಬೆಸ್ಟ್ ಬ್ಯಾಟರ್ ಆಗಿ ಹೊರಹೊಮ್ಮಿದರು. ಟೆಸ್ಟ್ ಹಾಗೂ ಸೀಮಿತ ಓವರ್‌ಗಳ ಕ್ರಿಕೆಟ್‍ನಲ್ಲಿ ಹಲವು ಸಾಧನೆಗಳನ್ನು ಮಾಡಿದ್ದಾರೆ. 2015 ರಲ್ಲಿ ಪರ್ತ್‍ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 290 ವೈಯಕ್ತಿಕ ರನ್‍ಗಳನ್ನು ಗಳಿಸಿದ್ದು, ಅದು ಅವರ ಜೀವನಶ್ರೇಷ್ಠ ಪಂದ್ಯವಾಗಿದೆ.

    ಈ ಕುರಿತು ಮಾತನಾಡಿದ ಅವರು, ನನ್ನ ಈ 16 ವರ್ಷಗಳಲ್ಲಿ ಅದ್ಭುತವಾದ ಹಲವಾರು ಕ್ಷಣಗಳನ್ನು ಅನುಭವಿಸಿದ್ದೇನೆ. ಅದರಲ್ಲಿ ಕೆಲ ಸುಂದರ ನೆನಪುಗಳು ಇವೆ. ಕ್ರಿಕೆಟ್ ಆಟವೀಗ ಜಾಗತಿಕ ಮಟ್ಟದಲ್ಲಿ ಉತ್ತಮ ಕ್ರೀಡೆಯಾಗಿ ಮಿಂಚುತ್ತಿದೆ. ಇಂದಿನ ಎಲ್ಲ ನವ ಆಟಗಾರರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ನನ್ನ ಸಹ ಆಟಗಾರರು ಮತ್ತು ನ್ಯೂಜಿಲೆಂಡ್ ತಂಡದ ಕ್ರಿಕೆಟ್ ಬೋರ್ಡ್‍ಗೆ ನಾನು ಧನ್ಯವಾದ ಅರ್ಪಿಸಲು ಇಷ್ಟಪಡುತ್ತೇನೆ. ನ್ಯೂಜಿಲೆಂಡ್ ತಂಡದ ಅಭಿಮಾನಿಗಳಿಗೆ ನಾನು ಸದಾ ಚಿರಋಣಿ ಆಗಿ ಇರುತ್ತೇನೆ ಎಂದರು. ಈ ಹಿಂದೆ ರಾಸ್ ಟೇಲರ್ ಅವರು ಐಪಿಎಲ್‍ನಲ್ಲಿ ನಮ್ಮ ಆರ್‍ಸಿಬಿ ತಂಡದ ಪರವಾಗಿ ಆಡಿದ್ದರು.

  • ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್ ಪಡೆದು ದಾಖಲೆ ಬರೆದ ಜೂಲನ್ ಗೋಸ್ವಾಮಿ

    ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್ ಪಡೆದು ದಾಖಲೆ ಬರೆದ ಜೂಲನ್ ಗೋಸ್ವಾಮಿ

    ವೆಲ್ಲಿಂಗಟನ್: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್‍ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

    ಜೂಲನ್, ಇಂಗ್ಲೆಂಡ್‍ನ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಅವರನ್ನು ಎಲ್‍ಬಿಡಬ್ಲ್ಯೂ ಮಾಡುವ ಮೂಲಕ ಈ ಮೈಲಿಗಲ್ಲನ್ನು ನೆಟ್ಟರು. ಏಕದಿನ ಮಾದರಿ ಪಂದ್ಯದಲ್ಲಿ ಜೂಲನ್ 250 ವಿಕೆಟ್ ಪಡೆದರೆ, ಈ ಪಟ್ಟಿಯಲ್ಲಿ ಜೂಲನ್ ನಂತರ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್‍ಪ್ಯಾಟ್ರಿಕ್ 180 ವಿಕೆಟ್ ಮತ್ತು ವೆಸ್ಟ್ ಇಂಡೀಸ್‍ನ ಅನಿಸಾ ಮೊಹಮ್ಮದ್ 180 ವಿಕೆಟ್‍ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಇಂಗ್ಲೆಂಡ್‍ನ ಕ್ಯಾಥರೀನ್ ಬ್ರಂಟ್ ಕ್ರಮವಾಗಿ 168 ಮತ್ತು 164 ವಿಕೆಟ್‍ಗಳನ್ನು ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

    ಜೂಲನ್, ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಅವರನ್ನು ಹಿಂದಿಕ್ಕಿ ಮಹಿಳಾ ವಿಶ್ವಕಪ್‍ನಲ್ಲಿ 40 ವಿಕೆಟ್‍ಗಳನ್ನು ಪಡೆದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಆದಾಗ್ಯೂ, ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಮೊದಲು ಬ್ಯಾಟಿಂಗ್ ಮಾಡಿದ ನಂತರ ಕೇವಲ 134 ರನ್‍ಗಳಿಗೆ ಆಲೌಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ವನಿತೆಯರು ಇನ್ನೂ 112 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‍ಗಳ ಜಯ ಸಾಧಿಸಿದರು. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

    ಬೇ ಓವಲ್‍ನಲ್ಲಿ 2022ರ ಐಸಿಸಿ ಮಹಿಳಾ ವಿಶ್ವಕಪ್‍ನ ಗೆಲ್ಲಲೇಬೇಕಾದ ಲೀಗ್ ಪಂದ್ಯದಲ್ಲಿ ಭಾರತವು ಸೋಲನ್ನು ಅನುಭವಿಸಿದೆ. ಭಾರತದ ಬ್ಯಾಟರ್‌ಗಳಿಗೆ ಇಂಗ್ಲೆಂಡ್ ತಂಡದ ಬೌಲರ್ ಚಾರ್ಲಿ ಡಿನ್ ಕಂಟಕವಾದರು. 8.2 ಓವರ್‌ಗಳನ್ನು ಎಸೆದ ಚಾರ್ಲಿ ಡಿನ್, ಕೇವಲ 23 ರನ್ ನೀಡಿ 4 ವಿಕೆಟ್‍ಗಳನ್ನು ಪಡೆದು ಮಿಂಚಿದರು.

  • ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ಐಸಿಸಿ ಮಹಿಳಾ ವಿಶ್ವಕಪ್ 2022: ಬೃಹತ್ ದಾಖಲೆ ಬರೆದ ಮಿಥಾಲಿ ರಾಜ್

    ವೆಲ್ಲಿಂಗ್ಟನ್: ಭಾರತ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಪ್ರಸ್ತುತ ನಡೆಯುತ್ತಿರುವ ಮಹಿಳಾ ವಿಶ್ವಕಪ್‍ನಲ್ಲಿ ಬೃಹತ್ ದಾಖಲೆ ಬರೆದಿದ್ದಾರೆ.

    ಹ್ಯಾಮಿಲ್ಟನ್‍ನ ಸೆಡನ್ ಪಾರ್ಕ್‍ನಲ್ಲಿ ನಡೆದ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮಿಥಾಲಿ ಈಗ ಮಹಿಳಾ ವಿಶ್ವಕಪ್ ಇತಿಹಾಸದಲ್ಲಿ ಭಾರತ ತಂಡದ ನಾಯಕಿಯಾಗಿ 23 ಪಂದ್ಯಗಳಲ್ಲಿ ತಮ್ಮ ತಂಡವನ್ನು ಮುನ್ನಡೆಸಿದ್ದಾರೆ. ಈ ದಾಖಲೆಯಿಂದಾಗಿ ಅವರು, ಆಸ್ಟ್ರೇಲಿಯಾದ ಮಹಿಳಾ ತಂಡದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ದಾಖಲೆಯನ್ನು ಹಿಂದಿಕ್ಕಿದರು. ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದೊಂದಿಗೆ ಮಿಥಾಲಿ ವಿಶ್ವಕಪ್‍ನಲ್ಲಿ 24ನೇ ಬಾರಿಗೆ ಭಾರತವನ್ನು ಮುನ್ನಡೆಸುತ್ತಿದ್ದಾರೆ. ಇದನ್ನೂ ಓದಿ:  ಭೂದಾಖಲೆಗಳನ್ನು ‘ರೈತನ ಮನೆ ಬಾಗಿಲಿಗೆ’ ತಲುಪಿಸುವುದು ಒಂದು ಅತ್ಯುತ್ತಮ ಸೇವೆ: ಆರ್.ಅಶೋಕ್

    ವೆಸ್ಟ್ ಇಂಡೀಸ್ ವಿರುದ್ಧದ ಗೆಲುವಿನೊಂದಿಗೆ ಮಿಥಾಲಿ ದಾಖಲೆ ಬರೆಯುವ ನಿರೀಕ್ಷೆಯಲ್ಲಿದ್ದಾರೆ. ಭಾರತ ಇದುವರೆಗೆ ನಡೆದ ಪಂದ್ಯಾವಳಿಯಲ್ಲಿ ಒಂದು ಪಂದ್ಯವನ್ನು ಕಳೆದುಕೊಂಡು ಒಂದು ಪಂದ್ಯವನ್ನು ಗೆದ್ದಿದೆ. ಇದನ್ನೂ ಓದಿ: ಮಂಕಡ್‌ಗೆ ಸಮ್ಮತಿ – ಬಾಲ್‌ ಎಸೆಯುವ ಮುನ್ನ ನಾನ್‍ಸ್ಟ್ರೈಕ್‍ ಬಿಟ್ಟರೆ ಉಳಿಗಾಲವಿಲ್ಲ

    ಭಾರತವು ಈವರೆಗೆ ಆಡಿದ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿತು. ಆದರೆ ತನ್ನ ಮುಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 62 ರನ್‍ಗಳಿಂದ ಭಾರೀ ಅಂತರದಲ್ಲಿ ಸೋಲನುಭವಿಸಿತು. ನ್ಯೂಜಿಲೆಂಡ್ 50 ಓವರ್‍ಗಳಲ್ಲಿ 9 ವಿಕೆಟ್‍ಗೆ 260 ರನ್ ಗಳಿಸಿ ಭಾರತಕ್ಕೆ 261 ರನ್‍ಗಳ ಗುರಿಯನ್ನು ನೀಡಿತ್ತು. ಆಮಿ ಸ್ಯಾಟರ್ಥ್‍ವೈಟ್ 84 ಎಸೆತಗಳಲ್ಲಿ 75 ರನ್ ಗಳಿಸಿ ತಮ್ಮ ತಂಡದ ಪರ ಗರಿಷ್ಠ ರನ್‍ಗಳನ್ನು ಗಳಿಸಿದ್ದರು. ನಂತರದಲ್ಲಿ ಅಮೆಲಿಯಾ ಕೆರ್ 64 ಎಸೆತಗಳಲ್ಲಿ 50 ರನ್ ಗಳಿಸಿದ್ದರು.

    ಭಾರತದ ಬೌಲಿಂಗ್ ವಿಭಾಗದ ಪರ ಪೂಜಾ ವಸ್ತ್ರಕರ್ ನಾಲ್ಕು ವಿಕೆಟ್ ಪಡೆದು ಉತ್ತಮ ಫಾರ್ಮ್ ನಲ್ಲಿದ್ದಾರೆ. ಇದೇ ವೇಳೆ ರಾಜೇಶ್ವರಿ ಗಾಯಕ್ವಾಡ್ ಕೂಡ ಎರಡು ವಿಕೆಟ್ ಪಡೆದಿದ್ದರು. 261 ರನ್‍ಗಳ ಗುರಿ ಬೆನ್ನತ್ತಿದ ಭಾರತ 46.4 ಓವರ್‍ಗಳಲ್ಲಿ 198 ರನ್‍ಗಳಿಗೆ ಆಲೌಟಾಯಿತು. ಹ್ಯಾಮಿಲ್ಟನ್‍ನ ಸೆಡನ್ ಪಾರ್ಕ್‍ನಲ್ಲಿ ಹರ್ಮನ್‍ಪ್ರೀತ್ ಕೌರ್ ಅವರು 63 ಎಸೆತಗಳಲ್ಲಿ 71 ರನ್ ಗಳಿಸಿದ ಹೊರತಾಗಿಯೂ ಭಾರತವು ಗೆಲುವನ್ನು ಸಾಧಿಸಲು ವಿಫಲವಾಯಿತು. ಇದೇ ವೇಳೆ ಮಿಥಾಲಿ 56 ಎಸೆತಗಳಲ್ಲಿ 31 ರನ್ ಗಳಿಸಲು ಯಶಸ್ವಿಯಾಗಿದ್ದರು.

  • ಕ್ಯಾಚ್‍ನ್ನು ಒಂದೇ ಕೈಯಲ್ಲಿ ಹಿಡಿದು ಗಮನಸೆಳೆದ ಡಾಟಿನ್

    ಕ್ಯಾಚ್‍ನ್ನು ಒಂದೇ ಕೈಯಲ್ಲಿ ಹಿಡಿದು ಗಮನಸೆಳೆದ ಡಾಟಿನ್

    ವೆಲ್ಲಿಂಗ್ಟನ್: ಮಹಿಳಾ ವಿಶ್ವಕಪ್‍ನಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ತಂಡವನ್ನು ವೆಸ್ಟ್‌ ಇಂಡೀಸ್ ಸೋಲಿಸಿದೆ.

    ವಿಂಡೀಸ್ ನೀಡಿದ 226 ರನ್‍ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 47.4 ಓವರ್ ಗಳಲ್ಲಿ 218 ರನ್ ಗಳಿಸಲಷ್ಟೇ ಶಕ್ತವಾಯಿತು. ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಕೊನೆಯ 18 ಎಸೆತಗಳಲ್ಲಿ 9 ರನ್ ಗಳಿಸಲು ಸಾಧ್ಯವಾಗಿಲ್ಲ ಎಂಬುದೇ ಅಚ್ಚರಿ. ಮತ್ತೊಂದೆಡೆ ಸತತ ಎರಡು ಗೆಲುವು ದಾಖಲಿಸುವ ಮೂಲಕ ವೆಸ್ಟ್ ಇಂಡೀಸ್ ವನಿತೆಯರು ಗೆಲುವಿನ ನಾಗಾಲೋಟ ಮುಂದುವರೆಸಿದ್ದಾರೆ. ಈ ಗೆಲುವಿನಲ್ಲಿ ಎಲ್ಲರನ್ನೂ ಗಮನಸೆಳೆದಿದ್ದು, ವಿಂಡೀಸ್ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಹಿಡಿದ ಅದ್ಭುತ ಕ್ಯಾಚ್.

    ಇಂಗ್ಲೆಂಡ್ ಇನಿಂಗ್ಸ್‍ನ 9ನೇ ಓವರ್‍ನಲ್ಲಿ ಶ್ಯಾಮಿಲಿಯಾ ಅವರ ಮೊದಲ ಎಸೆತವನ್ನು ವಿನ್‍ಫೀಲ್ಡ್ ಹಿಲ್ ಬ್ಯಾಕ್‍ವರ್ಡ್ ಪಾಯಿಂಟ್ ಕಡೆಗೆ ಕಟ್ ಮಾಡಿದರು. ವಿಂಡೀಸ್ ಪರ ಡಿಯಾಂಡ್ರಾ ಡಾಟಿನ್ ಅದೇ ಭಾಗದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ತಕ್ಷಣವೇ ಜಿಗಿಯುವ ಮೂಲಕ ಗಾಳಿಯಲ್ಲಿ ಕ್ಯಾಚ್ ಹಿಡಿದು ಎಲ್ಲರನ್ನೂ ಚಕಿತಗೊಳಿಸಿದರು. ಡಿಯಾಂಡ್ರಾ ಡಾಟಿನ್ ಅವರ ಈ ಅತ್ಯಾದ್ಭುತ ಕ್ಯಾಚ್ ವೀಡಿಯೊವನ್ನು ಐಸಿಸಿ ತನ್ನ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಅಷ್ಟೇ ಅಲ್ಲದೆ ಡಾಟಿನ್ ಅವರ ಈ ಕ್ಯಾಚ್‍ಗೆ ಕ್ರಿಕೆಟ್ ಪ್ರೇಮಿಗಳು ಬಹುಪರಾಕ್ ಅನ್ನುತ್ತಿದ್ದಾರೆ.

    ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ 6 ವಿಕೆಟ್‍ಗೆ 225 ರನ್ ಗಳಿಸಿತು. ವಿಂಡೀಸ್ ಪರ ವಿಕೆಟ್‍ಕೀಪರ್ ಶೆಮನ್ ಕ್ಯಾಂಪ್‍ಬೆಲ್ ಅವರು 66 ರನ್‍ಗಳನ್ನು ಬಾರಿಸಿ ಮಿಂಚಿದರೆ, ಚಾಡೆನ್ ನೇಷನ್ 49 ರನ್ ಗಳಿಸಿ ಔಟಾದರು. ಆರಂಭಿಕ ಆಟಗಾರ್ತಿ ಹೀಲಿ ಮ್ಯಾಥ್ಯೂಸ್ 45 ರನ್ ಗಳಿಸಿದರೆ, ಡಾಟಿನ್ 31 ರನ್ ಗಳಿಸಿದ್ದರು. ಇಂಗ್ಲೆಂಡ್ ಪರ ಎಕ್ಲೆಸ್ಟೋನ್ 3 ವಿಕೆಟ್ ಪಡೆದಿದ್ದರು.

    226 ರನ್‍ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡ 218 ರನ್‍ಗಳಿಗೆ ಆಲೌಟ್ ಆಯಿತು. ಇಂಗ್ಲೆಂಡ್ ಪರ ಟಮ್ಮಿ ಬ್ಯೂಮಾಂಟ್ 76 ಎಸೆತಗಳಲ್ಲಿ 46 ರನ್ ಗಳಿಸಿದರೆ, ಸೋಫಿಯಾ ಡಂಕ್ಲಿ 35 ಎಸೆತಗಳಲ್ಲಿ 38 ರನ್ ಗಳಿಸಿದರು. ಡೇನಿಯಲ್ ವೇಟ್ 33 ರನ್ ಗಳ ಕೊಡುಗೆ ನೀಡಿದರು. ಸೋಫಿ ಎಕ್ಲೆಸ್ಟೋನ್ 33 ರನ್ ಗಳಿಸಿ ಅಜೇಯರಾಗಿ ಉಳಿದರು. ವಿಂಡೀಸ್ ಪರ ಶ್ಯಾಮಿಲಿಯಾ ಕಾನೆಲ್ ಮೂರು ವಿಕೆಟ್ ಪಡೆದರೆ, ಮ್ಯಾಥ್ಯೂಸ್ ಮತ್ತು ಅನಿಸಾ ಮೊಹಮ್ಮದ್ ತಲಾ ಎರಡು ವಿಕೆಟ್ ಪಡೆದು ಮಿಂಚಿದರು.

  • ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange  ಇಲ್ಲವೆಂದ ಪತ್ನಿ..!

    ಪತಿಯನ್ನು ಹರಾಜಿಗಿಟ್ಟು, ಯಾವುದೇ ಕಾರಣಕ್ಕೂ Exchange ಇಲ್ಲವೆಂದ ಪತ್ನಿ..!

    ವೆಲ್ಲಿಂಗ್ಟನ್: ಐರಿಶ್ ಮಹಿಳೆಯೊಬ್ಬರು ಗಂಡನನ್ನು ಮಾರಾಟಕ್ಕಿಟ್ಟು, ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾಳೆ. ವಿಷಯ ತಿಳಿದ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

    ಐರಿಶ್ ಮಹಿಳೆಯೊಬ್ಬರು ತನ್ನ ಪತಿಯನ್ನು ಹರಾಜು ವೆಬ್‍ನಲ್ಲಿ ‘ಮಾರಾಟ’ ಮಾಡುತ್ತಿದ್ದು, ಇವರನ್ನು ಖರೀದಿಸಿದ ನಂತರ ಯಾವುದೇ ರೀತಿಯಲ್ಲಿ ಎಕ್ಸ್​ಚೇಂಜ್ ಇಲ್ಲ ಎಂದು ಬರೆದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ನಲ್ಲಿ ಪತಿಯ ಸಂಪೂರ್ಣ ವಿವರವಿದ್ದು, ನನ್ನ ಪತಿಯ ಹೆಸರು ಜಾನ್, ಎತ್ತರ 6.1, 37 ವರ್ಷ, ಕೃಷಿಕ, ಶೂಟಿಂಗ್ ಮತ್ತು ಮೀನುಗಾರಿಕೆ ಸಹವರ್ತಿ ಎಂದು ಬರೆದಿದ್ದಾರೆ. ಪೋಸ್ಟ್ ನೋಡಿದ ನೆಟ್ಟಿಗರು ಏನಿದು ವಿಚಿತ್ರ ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಜಾನ್‍ನನ್ನು ಖರೀದಿಸಲು ಆಸಕ್ತಿಯನ್ನು ತೋರಿಸಿದ್ದಾರೆ. ಇದನ್ನೂ ಓದಿ: ಕರಡಿ ಬಾಯಿಗೆ 3 ವರ್ಷದ ಮಗಳನ್ನೇ ನೂಕಿದ ತಾಯಿ!

    ಕಾರಣವೇನು?
    ಐರಿಶ್ ಮಹಿಳೆ ಲಿಂಡಾ ಮ್ಯಾಕ್‍ಅಲಿಸ್ಟರ್ ಟ್ರೇಡ್ ಮಿ ಎಂಬ ವೆಬ್ ನಲ್ಲಿ ಪತಿಯನ್ನು ಮಾರಾಟ ಮಾಡಲು ಹೊರಟಿದ್ದಾರೆ. ಜಾನ್ ಮ್ಯಾಕ್‍ಅಲಿಸ್ಟರ್, ನನ್ನನ್ನು ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಮೀನುಗಾರಿಕೆ ಮಾಡಿ ಎಂದು ಹೇಳಿ ಹೊರಟು ಹೋಗಿದ್ದಾರೆ ಎಂದು ಬರೆದುಕೊಂಡು ಜಾಹೀರಾತು ಕೊಟ್ಟಿದ್ದಾರೆ.

    ಈ ಪಟ್ಟಿಯಲ್ಲಿ ಲಿಂಡಾ, ಜಾನ್ ಬಗ್ಗೆ ಪೂರ್ಣ ವಿವರವನ್ನು ಕೊಟ್ಟಿದ್ದಾರೆ. ಇವರಿಗೆ ಶೂಟಿಂಗ್ ಮತ್ತು ಮೀನುಗಾರಿಕೆಯ ಹಲವು ಮಾಲೀಕರ ಪರಿಚಯವಿದೆ. ಆದರೆ ನೀವು ಇವರನ್ನು ಚೆನ್ನಾಗಿ ನೋಡಿಕೊಂಡರೆ ನಿಮಗೆ ನಿಷ್ಠರಾಗಿರುತ್ತಾರೆ ಎಂದು ಬರೆದುಕೊಂಡಿದ್ದಾರೆ. ಜಾನ್ ಅವರನ್ನು ಖರೀದಿಸಿದ ಮೇಲೆ ಯಾವುದೇ ರಿಟನ್ರ್ಸ್ ಅಥವಾ ವಿನಿಮಯವಿಲ್ಲ ಎಂದು ಜಾಹೀರಾತಿನಲ್ಲಿ ತಿಳಿಸಿದ್ದಾರೆ.

    ಜಾನ್ ಹೆಚ್ಚು ಕೆಲಸದ ಕಡೆಯೇ ಗಮನ ಕೊಡುವುದು ನನ್ನನ್ನು ಕಾಡುತ್ತಿದೆ. ಮಕ್ಕಳಿಗೆ ರಜೆ ಇದ್ದಾಗಲೂ, ಮನೆಯಲ್ಲಿ ಮಲಗಿದ್ದಾಗಲೂ ಅವರು ಕೆಲಸದ ಬಗ್ಗೆಯೇ ಯೋಚಿಸುತ್ತಿರುತ್ತಾರೆ ಎಂದು ಜಾಹೀರಾತಿನಲ್ಲಿ ವಿವರಿಸಿದ್ದಾರೆ. ದಂಪತಿ 2019 ರಲ್ಲಿ ಐರ್ಲೆಂಡ್‍ನಲ್ಲಿ ವಿವಾಹವಾದ್ದು, ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

    ಜಾನ್ ಅವರಿಗೆ ವಿಷಯ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಆದರೆ ಜಾನ್ ಸ್ನೇಹಿತರು, ನಿನ್ನನ್ನು ಲಂಡಾ ಹರಾಜಿಗೆ ಇಟ್ಟಿದ್ದಾಳೆ ಎಂದು ಜಾನ್‍ಗೆ ತಿಳಿಸಿದ್ದಾರೆ. ವಿಷಯ ತಿಳಿದ ಜಾನ್, ಏನಿಂದು ತಮಾಷೆ ಎಂದು ನಕ್ಕಿದ್ದಾರೆ ಎಂದು ವರದಿಗಳ ಪ್ರಕಾರ ತಿಳಿದುಬಂದಿದೆ.

    ಲಿಂಡಾ ಅವರ ಪಟ್ಟಿಯಲ್ಲಿ ಜಾನ್ ಬಗ್ಗೆ ಪೂರ್ಣ ವಿವರವಿದ್ದು, ಬಿಡ್ಡಿಂಗ್ ಕೆಲವೇ ಗಂಟೆಗಳಲ್ಲಿ 5,000 ರೂ. ಗೆ ಏರಿತು. ಖರೀದಿದಾರರು ತಮ್ಮ ಗಂಡನಾಗಬಹುದಾದ ಜಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಕುತೂಹಲ ವ್ಯಕ್ತಪಡಿಸಿದರು. ಜಾನ್ ಅವರಿಗೆ ಯಾವುದದರೂ ದುರ್ಗುಣಗಳಿದೆಯಾ ಎಂದು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಇದಕ್ಕೆಲ್ಲ ಲಿಂಡಾ ತಾಳ್ಮೆಯಿಂದ ಉತ್ತರ ಕೊಟ್ಟಿದ್ದಾರೆ. ಇದನ್ನೂ ಓದಿ: ಮುಂದಿನ ವಾರ ಕನ್ನಡಪರ ಸಂಘಟನೆಗಳ ಸಭೆ ಕರೆದ ಹೆಚ್.ಡಿ.ಕುಮಾರಸ್ವಾಮಿ

    ಲಿಂಡಾ ಅವರು ಹರಾಜು ವೆಬ್‍ನ ಕೆಲವು ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಟ್ರೇಡ್ ಮಿ ಪೋಸ್ಟ್ ತೆಗೆದುಹಾಕಿದೆ. ಈ ಕುರಿತು ಪ್ರತಿಕ್ರಿಯಿಸಿದ ಟ್ರೇಡ್ ಮಿ ಸಿಬ್ಬಂದಿ, ಸಂಗಾತಿಯನ್ನೆ ಮಾರಾಟಕ್ಕೆ ಇಟ್ಟಿದ್ದು ಇದೇ ಮೊದಲಬಾರಿ. ನಮಗೂ ಇದು ವಿಚಿತ್ರ ಎನ್ನಿಸಿದೆ. ನಾವು ಜನರ ಮಸ್ತಿ-ಮೋಜನ್ನು ಇಷ್ಟಪಡುತ್ತೇವೆ. ಟ್ರೇಡ್ ಮಿ ಮೂಲಕ ಜನರು ಉತ್ತಮ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದಿದ್ದಾರೆ

  • 91 ದಿನದಲ್ಲಿ 19 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕ ಸಿಡಿಸದ ವಿರಾಟ್

    91 ದಿನದಲ್ಲಿ 19 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕ ಸಿಡಿಸದ ವಿರಾಟ್

    – ಕಿವೀಸ್ ನೆಲದಲ್ಲಿ ಇತಿಹಾಸ ಮರುಕಳಿಸಿದ ಕನ್ನಡಿಗ

    ವೆಲ್ಲಿಂಗ್ಟನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನ್ಯೂಜಿಲೆಂಡ್ ಪ್ರವಾಸದಲ್ಲಿ ಕಳಪೆ ಫಾರ್ಮ್ ಮುಂದುವರಿಸಿದ್ದಾರೆ. ಕ್ರಿಕೆಟ್‍ನ ಎಲ್ಲಾ ಮಾದರಿ ಟೆಸ್ಟ್, ಏಕದಿನ ಮತ್ತು ಟಿ20 ಸೇರಿ ಕಳೆದ 19 ಇನ್ನಿಂಗ್ಸ್ ಗಳಲ್ಲಿ ವಿರಾಟ್ ಒಂದೇ ಒಂದು ಶತಕ ಸಿಡಿಸಿಲ್ಲ.

    ವೆಲ್ಲಿಂಗ್ಟನ್‍ನಲ್ಲಿ ಶುಕ್ರವಾರ ಆರಂಭವಾದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 7 ಎಸೆತಗಳನ್ನು ಎದುರಿಸಿ 2 ರನ್‍ಗಳಿಗೆ ವಿಕೆಟ್ ಒಪ್ಪಿಸಿದರು. ಕಳೆದ ವರ್ಷ ನವೆಂಬರ್ ನಲ್ಲಿ ಬಾಂಗ್ಲಾದೇಶ ವಿರುದ್ಧದ ಕೋಲ್ಕತಾ ಟೆಸ್ಟ್‍ನಲ್ಲಿ ಕೊಹ್ಲಿ ತಮ್ಮ ಕೊನೆಯ ಶತಕವನ್ನು ಗಳಿಸಿದ್ದರು. ಅಂದ್ರೆ 91 ದಿನಗಳ ಹಿಂದೆ ನಡೆದ ಈ ಪಂದ್ಯದಲ್ಲಿ ಅವರು 136 ರನ್ ದಾಖಲಿಸಿದ್ದರು.

    https://twitter.com/imtheguy007/status/1230862746503274497

    ಪ್ರಸ್ತುತ ನ್ಯೂಜಿಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಏಕದಿನ ಮತ್ತು ಟಿ20 7 ಪಂದ್ಯಗಳಲ್ಲಿ ಕೇವಲ 180 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ ಒಂದು ಅರ್ಧಶತಕ ಸೇರಿದೆ. ಟಿ20 ಯ 4 ಪಂದ್ಯಗಳಲ್ಲಿ ವಿರಾಟ್ 125 ರನ್ ಹಾಗೂ 3 ಏಕದಿನ ಪಂದ್ಯಗಳಲ್ಲಿ 75 ರನ್ ಗಳಿಸಿದ್ದಾರೆ. ಕೊಹ್ಲಿ ಕಳಪೆ ಫಾರ್ಮ್ ನೊಂದಿಗೆ ಹೋರಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ 2014ರ ಫೆಬ್ರವರಿ ಹಾಗೂ 2014ರ ಅಕ್ಟೋಬರ್ ಮಧ್ಯೆ ವಿರಾಟ್ ಮೂರು ಮಾದರಿಯ ಕ್ರಿಕೆಟ್‍ನಲ್ಲಿ 25 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕ ಗಳಿಸಿರಲಿಲ್ಲ. ಇದರಲ್ಲಿ ಇಂಗ್ಲೆಂಡ್ ಪ್ರವಾಸವೂ ಸೇರಿದೆ. ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ 5 ಟೆಸ್ಟ್ ಪಂದ್ಯಗಳಲ್ಲಿ ಕೇವಲ 134 ರನ್ ಗಳಿಸಿದ್ದರು.

    2011ರಲ್ಲಿಯೂ ಕಳಪೆ ಪ್ರದರ್ಶನ:
    ವಿರಾಟ್ ಕೊಹ್ಲಿ 2011ರ ಫೆಬ್ರವರಿ ಹಾಗೂ ಸೆಪ್ಟೆಂಬರ್ ನಡುವೆಯೂ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ವೇಳೆ ಅವರು ಸತತ 24 ಇನ್ನಿಂಗ್ಸ್ ಆಡಿ ಒಂದೇ ಒಂದು ಶತಕವನ್ನು ಗಳಿಸಲಿಲ್ಲ. ಕೊಹ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಇದುವರೆಗೆ 70 ಶತಕಗಳನ್ನು ಗಳಿಸಿದ್ದಾರೆ. 84 ಟೆಸ್ಟ್ ಪಂದ್ಯಗಳಲ್ಲಿ 27 ಶತಕ ಹಾಗೂ 248 ಏಕದಿನ ಪಂದ್ಯಗಳಲ್ಲಿ 43 ಶತಕಗಳನ್ನು ಗಳಿಸಿದ್ದಾರೆ. ಆದರೆ ಈವರೆಗೂ ಅವರು ಟಿ20 ಕ್ರಿಕೆಟ್‍ನಲ್ಲಿ ಶತಕದ ಖಾತೆ ತೆರೆದಿಲ್ಲ.

    ಮಯಾಂಕ್ ಸಾಧನೆ:
    ನ್ಯೂಜಿಲೆಂಡ್ ನೆಲದಲ್ಲಿ ಟೆಸ್ಟ್ ಪಂದ್ಯವೊಂದರ ಮೊದಲ ಅವಧಿಯಲ್ಲಿ ಔಟಾಗದೇ ಉಳಿದ ಎರಡನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಕನ್ನಡಿಗ ಮಯಾಂಕ್ ಭಾಜನವಾಗಿದ್ದಾರೆ.

    ವೆಲ್ಲಿಂಗ್ಟನ್‍ನ ಬಾಸಿನ್ ರಿಸರ್ವ್ ಮೈದಾನದಲ್ಲಿರುವ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಬ್ಯಾಟ್ಸ್‌ಮನ್‍ಗಳು ರನ್ ಗಳಿಸಲು ಪರದಾಡಿದರು. ಆದರೆ ವಿಕೆಟ್ ಕಾಯ್ದುಕೊಂಡು ಮಯಾಂಕ್ ಅವಧಿಯಲ್ಲಿ ಔಟಾಗದೇ ಉಳಿದರು. ಈ ಸಾಧನೆಯನ್ನು 30 ವರ್ಷಗಳ ಹಿಂದೆ ಅಂದ್ರೆ 1990ರಲ್ಲಿ ಆಲ್‍ರೌಂಡರ್ ಮನೋಜ್ ಪ್ರಭಾಕರ್ ನ್ಯೂಜಿಲೆಂಡ್ ವಿರುದ್ಧ ನೇಪಿಯರ್ ಟೆಸ್ಟ್ ಪಂದ್ಯದಲ್ಲಿ ಇದೇ ಸಾಧನೆ ಮಾಡಿದ್ದರು.

    ಊಟದ ವಿರಾಮದ ವೇಳೆಗೆ ಮಯಾಂಕ್ ಅಜೇಯ 29 ರನ್ ಗಳಿಸಿದ್ದರು. ಆದರೆ ಭೋಜನ ವಿರಾಮದ ಬಳಿಕ ಮಯಾಂಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳಿದರು. ಮಯಾಂಕ್ 34 ರನ್ (84 ಎಸೆತ, ಐದು ಬೌಂಡರಿ) ಗಳಿಸಿದರು. ಈ ಮೂಲಕ ಭಾರತ ಮೊದಲ ದಿನದ ಆಟದ ಅಂತ್ಯಕ್ಕೆ 55 ಓವರ್ ಗಳಲ್ಲಿ 5 ವಿಕೆಟ್ ನಷ್ಟದಿಂದ 122 ರನ್ ಪೇರಿಸಿದೆ.

  • ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ನ್ಯೂಜಿಲ್ಯಾಂಡ್ ಜ್ವಾಲಾಮುಖಿಯಲ್ಲಿ ಭಾರತೀಯ ಮೂಲದ ಅಮೆರಿಕ ದಂಪತಿ ಸಾವು

    ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‍ನಲ್ಲಿ ಸಂಭವಿಸಿದ ಜ್ವಾಲಾಮುಖಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭಾರತೀಯ ಮೂಲದ ಅಮೆರಿಕ ದಂಪತಿ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಜೋಡಿಯ ಮೂವರು ಮಕ್ಕಳು ಅನಾಥರಾಗಿದ್ದಾರೆ.

    ಪ್ರತಾಪ್ ಸಿಂಗ್ ಹಾಗೂ ಮಯೂರಿ ಸಿಂಗ್ ಮೃತಪಟ್ಟ ದಂಪತಿ. ಪ್ರತಾಪ್ ಹಾಗೂ ಮಯೂರಿ ಡಿ. 9ರಂದು ರಜೆ ದಿನಗಳನ್ನು ಕಳೆಯಲು ನ್ಯೂಜಿಲೆಂಡ್‍ನ ವೈಟ್ ಐಲ್ಯಾಂಡ್‍ಗೆ ತೆರೆಳಿದ್ದರು. ಈ ವೇಳೆ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಮಯೂರಿ ಹಾಗೂ ಪ್ರತಾಪ್ ಗಂಭೀರವಾಗಿ ಗಾಯಗೊಂಡಿದ್ದರು. ಮಯೂರಿ ಡಿ. 22ರಂದು ಮೃತಪಟ್ಟರೆ, ಪ್ರತಾಪ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಈಗ ಪ್ರತಾಪ್ ಅವರು ಕೂಡ ಆಕ್ಲೆಂಡ್ ನಲ್ಲಿರುವ ಮಿಡಿಲ್‍ಮೋರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

    ಪ್ರತಾಪ್ ಅವರ ಸಾವಿನ ನಂತರ ಜ್ವಾಲಾಮುಖಿಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿದೆ. ಮಯೂರಿ ಮೃತಪಟ್ಟ ಆಸ್ಪತ್ರೆಯಲ್ಲೇ ಪ್ರತಾಪ್ ಕೂಡ ಮೃತಪಟ್ಟಿದ್ದಾರೆ. ಈ ಘಟನೆಯಿಂದ ಪ್ರತಾಪ್ ಅವರ ದೇಹ ಅರ್ಧದಷ್ಟು ಸುಟ್ಟು ಹೋಗಿದೆ. ಜ್ವಾಲಾಮುಖಿ ಸ್ಫೋಟಿಸಿದಾಗ ಅಲ್ಲಿ 47 ಮಂದಿ ಇದ್ದು, ಅದರಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಇನ್ನು ಹಲವು ಮಂದಿ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಾಗ ಮೃತಪಟ್ಟಿದ್ದಾರೆ.

    ಈ ಜೋಡಿಯ 11 ವರ್ಷ ಮಗ ಹಾಗೂ 6 ವರ್ಷದ ಅವಳಿ ಹೆಣ್ಣು ಮಕ್ಕಳು ರಾಯಲ್ ಕೆರಿಬಿಯನ್ ಕ್ರೂಸ್ ಶಿಪ್‍ನಲ್ಲಿ ಸಂಚರಿಸುವ ಮೂಲಕ ತಮ್ಮ ಪ್ರಾಣವನ್ನು ಉಳಿಸಿಕೊಂಡಿದ್ದಾರೆ. ಈಗ ತಂದೆ-ತಾಯಿ ಇಬ್ಬರು ಮೃತಪಟ್ಟಿದ್ದು, ಮಕ್ಕಳು ಅನಾಥರಾಗಿದ್ದಾರೆ.

  • ಕೊಹ್ಲಿ ಕಾಲೆಳೆಯಲು ಯತ್ನಿಸಿ ಟ್ರೋಲಾದ ಜಿಮ್ಮಿ ನೀಶಮ್

    ಕೊಹ್ಲಿ ಕಾಲೆಳೆಯಲು ಯತ್ನಿಸಿ ಟ್ರೋಲಾದ ಜಿಮ್ಮಿ ನೀಶಮ್

    ವೆಲ್ಲಿಂಗ್ಟನ್: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಆಸಕ್ತಿಯುತ ಟ್ವೀಟ್‍ಗಳನ್ನು ಮಾಡುತ್ತಿರುವ ನ್ಯೂಜಿಲೆಂಡ್ ಕ್ರಿಕೆಟರ್ ಜಿಮ್ಮಿ ನೀಶಮ್ ಟೀಂ ಇಂಡಿಯಾ ನಾಯಕ ಕೊಹ್ಲಿರನ್ನ ಕಾಲೆಳೆಯಲು ಯತ್ನಿಸಿ ಟ್ರೋಲ್ ಆಗಿದ್ದಾರೆ.

    ಸದ್ಯ ನಡೆಯುತ್ತಿರುವ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಆರಂಭಿಕ ಆಟಗಾರ ರೋರಿ ಬರ್ನ್ಸ್ ಟೆಸ್ಟ್ ಕ್ರಿಕೆಟ್ ಪಂದ್ಯದ 2ನೇ ದಿನದ ವೇಳೆ 125 ರನ್ ಸಿಡಿಸಿದ್ದರು. ಈ ವಿಚಾರವನ್ನು ಪ್ರಸ್ತಾಪ ಮಾಡಿದ್ದ ನಿಶಾಮ್, ಪ್ರತಿಷ್ಟಿತ ಸರಣಿಯಲ್ಲಿ ಕೊಹ್ಲಿಗಿಂತ ರೋರಿ ಬರ್ನ್ಸ್ ಹೆಚ್ಚು ರನ್ ಮಾಡಿದ್ದಾರೆ ಎಂದು ಟ್ವೀಟ್ ಮಾಡಿದ್ದರು. ಈ ಟ್ವೀಟ್ ಭಾರತ ಅಭಿಮಾನಿಗಳನ್ನು ಕೆರಳುವಂತೆ ಮಾಡಿದೆ.

    ಈ ಹಿಂದೆ ವಿಶ್ವಕಪ್ ಫೈನಲ್ ಪಂದ್ಯದ ಸಂದರ್ಭದಲ್ಲಿ ಪಂದ್ಯದ ಟಿಕೆಟ್ ನೀಡುವಂತೆ ಭಾರತೀಯ ಅಭಿಮಾನಿಗಳನ್ನು ಮನವಿ ಮಾಡಿದ್ದ ನೀನು, ಇಂದು ಕೊಹ್ಲಿಯನ್ನ ರೋರಿ ಬರ್ನ್ಸ್ ಗೆ ಹೋಲಿಕೆ ಮಾಡುತ್ತಿದ್ದೀಯಾ. ಇದು ಒಳ್ಳೆಯದಲ್ಲ ಎಂದು ಅಭಿಮಾನಿಯೊಬ್ಬರು ನಿಶಾಮ್ ಟ್ವೀಟ್‍ಗೆ ಕಿಡಿಕಾರಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ಆರಂಭಿಕ ಆಟಗಾರರೆಲ್ಲರೂ ಗಳಿಸಿರುವ ರನ್ ಮೊತ್ತಕ್ಕಿಂತ ಕೊಹ್ಲಿಯೇ ಹೆಚ್ಚು ರನ್ ಮಾಡಿದ್ದಾರೆ ಎಂಬುವುದನ್ನು ತಿಳಿದುಕೊಳ್ಳಿ ನೀಶಮ್ ಎಂದು ಮತ್ತೊಬ್ಬ ತಿರುಗೇಟು ನೀಡಿದ್ದಾರೆ. ಅಂದಹಾಗೇ ಆ್ಯಶಸ್ ಸರಣಿ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯುವ ಸರಣಿ ಆಗಿದ್ದರೂ ಕೂಡ ನೀಶಮ್ ಕೊಹ್ಲಿರನ್ನ ಎಳೆದು ತಂದು ಟ್ರೋಲ್ ಆಗಿದ್ದಾರೆ. ಆದರೆ ಇದಾದ ಬಳಿಕ ಸ್ಪಷ್ಟನೆ ನೀಡಿ ತಾನು ಜೋಕ್ ಮಾಡಿದ್ದೇನೆ ಎಂದು ಹೇಳಿ ನೀಶಮ್ ಜಾರಿಕೊಂಡಿದ್ದಾರೆ.

    https://twitter.com/JimmyNeesh/status/1157499602825695233

  • ಟೀಂ ಇಂಡಿಯಾ ಪರ ಐತಿಹಾಸಿಕ ದಾಖಲೆ ನಿರ್ಮಿಸಿದ  ಸ್ಮೃತಿ ಮಂದಾನ

    ಟೀಂ ಇಂಡಿಯಾ ಪರ ಐತಿಹಾಸಿಕ ದಾಖಲೆ ನಿರ್ಮಿಸಿದ ಸ್ಮೃತಿ ಮಂದಾನ

    ವೆಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮಹಿಳಾ ಟಿ20ಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರ್ತಿ ಸ್ಮೃತಿ ಮಂದಾನ ಕೇವಲ 24 ಎಸೆತಗಳಲ್ಲೇ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಟೀಂ ಇಂಡಿಯಾ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ದಾಖಲಾದ ವೇಗದ ಅರ್ಧ ಶತಕ ಇದಾಗಿದ್ದು, ಈ ಮೂಲಕ ಮಂದಾನ ದಾಖಲೆ ಬರೆದಿದ್ದಾರೆ. ಆದರೆ ಮಂದಾನರ ಬಿರುಸಿನ ಆಟದ ಬಳಿವೂ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋಲುಂಡಿದೆ. ಪಂದ್ಯದಲ್ಲಿ 34 ಎಸೆತಗಳನ್ನ ಎದುರಿಸಿದ ಮಂದಾನ 3 ಬೌಂಡರಿ ಹಾಗೂ 7 ಸಿಕ್ಸರ್ ನೆರವಿನಿಂದ 58 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಈ ವೇಳೆ ತಂಡದ ಗೆಲುವಿಗೆ 58 ರನ್ ಗಳ ಅಗತ್ಯವಿತ್ತು. 102 ರನ್ ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ತಂಡ ಬಳಿಕ 34 ರನ್ ಕಲೆ ಹಾಕಲು ಮಾತ್ರ ಶಕ್ತವಾಯಿತು.

    ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್ ತಂಡ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 159 ರನ್ ಸಿಡಿಸಿತ್ತು. ಉತ್ತರವಾಗಿ ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ತಂಡ 19.1 ಓವರ್ ಗಳಲ್ಲಿ 136 ರನ್ ಗಳಿಗೆ ಅಲೌಟ್ ಆಗುವ ಮೂಲಕ 23 ರನ್ ಗಳ ಸೋಲುಂಡಿತು. ಇದರೊಂದಿಗೆ ಏಕದಿನ ಕ್ರಿಕೆಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು ಸಂಭ್ರಮಿಸಿದ್ದ ಟೀಂ ಇಂಡಿಯಾ ಮಹಿಳಾ ತಂಡ ಟಿ20 ಸರಣಿಯ ಮೊದಲ ಪಂದ್ಯದಲ್ಲೇ ಸೋಲಿನ ಆರಂಭ ಮಾಡಿದೆ.

    ಉಳಿದಂತೆ ಕಳೆದ ಕೆಲ ದಿನಗಳ ಹಿಂದೆ ಬಿಡುಗಡೆಯಾಗಿದ್ದ ಐಸಿಸಿ ಏಕದಿನ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ಮಂದಾನ ನಂ.1 ಸ್ಥಾನ ಪಡೆದಿದ್ದರು. 2018 ಬಳಿಕ 15 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿರುವ ಮಂದಾನ 2 ಶತಕ ಹಾಗೂ 8 ಅರ್ಧ ಶತಕಗಳನ್ನು ಸಿಡಿಸಿದ್ದಾರೆ. ಈ ಹಿಂದೆ ಐಸಿಸಿ ಘೋಷಣೆ ಮಾಡಿದ್ದ 2018ರ ರ ವಾರ್ಷಿಕ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಯನ್ನು ಪಡೆದಿದ್ದರು. 22 ವರ್ಷದ ಮಂದಾನ 47 ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, 1,798 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 14 ಅರ್ಧ ಶತಕಗಳು ಸೇರಿದೆ. ಉಳಿದಂತೆ 52 ಟಿ20 ಪಂದ್ಯಗಳನ್ನು ಆಡಿದ್ದು, 6 ಅರ್ಧ ಶತಕಗಳೊಂದಿಗೆ 1,046 ರನ್ ಸಿಡಿಸಿದ್ದಾರೆ. 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ಧೋನಿ ಸ್ಮಾರ್ಟ್ ವಿಕೆಟ್ ಕೀಪಿಂಗ್‍ಗೆ ದಂಗಾದ ನೀಶಮ್ – ವಿಡಿಯೋ

    ವೆಲಿಂಗ್ಟನ್: ಟೀಂ ಇಂಡಿಯಾ ಮಾಜಿ ನಾಯಕ 37 ವರ್ಷದ ಧೋನಿ ವಿಕೆಟ್ ಹಿಂದಿನ ತಮ್ಮ ಅನುಭವದ ಕೌಶಲ್ಯಗಳನ್ನು ಮತ್ತೆ ಸಾಬೀತುಪಡಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಅಂತಿಮ ಪಂದ್ಯದಲ್ಲೂ ಸ್ಮಾರ್ಟ್ ರನೌಟ್ ಮಾಡಿ ಪ್ರಶಂಸೆ ಪಡೆದಿದ್ದಾರೆ.

    ಪಂದ್ಯದ 37 ಓವರ್ ನಲ್ಲಿ ಸ್ಟ್ರೈಕ್ ನಲ್ಲಿದ್ದ ನೀಶಮ್ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಲು ರಕ್ಷಣಾತ್ಮಕ ಆಟಕ್ಕೆ ಮೊರೆ ಹೋಗಿದ್ದರು. ಆದರೆ ಕೇದಾರ್ ಜಾಧವ್ ತಮ್ಮ ಬೌಲಿಂಗ್ ನಲ್ಲಿ ಎಲ್‍ಬಿಡಬ್ಲೂ ಗೆ ಅಂಪೈರ್ ಗೆ ಮನವಿ ಸಲ್ಲಿಸಿದರು. ಇದೇ ವೇಳೆ ಸಮಯ ಪ್ರಜ್ಞೆ ತೋರಿದ ಧೋನಿ ಮಿಂಚಿನ ವೇಗದಲ್ಲಿ ಬಾಲ್ ಪಡೆದು ಬ್ಯಾಟ್ಸ್ ಮನ್ ಕ್ರಿಸ್‍ಗೆ ಬರುವ ಮುನ್ನವೇ ಬೆಲ್ಸ್ ಉರುಳಿಸಲು ಯಶಸ್ವಿಯಾಗಿದರು. ಇದನ್ನು ಕಂಡ ಕ್ಷಣ ಕಾಲ ದಂಗಾದ ನೀಶಮ್ ನಿರಾಸೆಯಿಂದ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು.

    ಗಾಯದ ಸಮಸ್ಯೆಯಿಂದ ಕಳೆದ ಎರಡು ಪಂದ್ಯಗಳಿಂದ ಹೊರಗುಳಿದಿದ್ದ ಧೋನಿ, ಅಂತಿಮ ಪಂದ್ಯದ ವೇಳೆಗೆ ಚೇತರಿಸಿಕೊಂಡು ಕಣಕ್ಕೆ ಇಳಿದಿದ್ದರು. ಆದರೆ ಬ್ಯಾಟಿಂಗ್ ನಲ್ಲಿ 1 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರೂ ಕೂಡ ವಿಕೆಟ್ ಹಿಂದೆ ನಿಂತು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು.

    ಧೋನಿ ತಮ್ಮ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮಾತ್ರ ಗಮನ ಸೆಳೆಯದೆ, ತಂಡದ ಬೌಲರ್ ಗಳಿಗೆ ಸೂಕ್ತ ಸಲಹೆ ನೀಡುವ ಮೂಲಕ ಸ್ಪಿನ್ನರ್ ಗಳ ಯಶಸ್ವಿಗೆ ಕಾರಣರಾಗಿದ್ದಾರೆ. ರವೀಂದ್ರ ಜಡೇಜಾ, ಕೇದಾರ್ ಜಾಧವ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್‍ರ ಯಶಸ್ಸಿನ ಹಿಂದೆ ಧೋನಿ ನೀಡಿದ ಸಲಹೆಗಳು ಮುಖ್ಯವಾಗಿದೆ. 2018 ಇಂಗ್ಲೆಂಡ್ ಸರಣಿಯಲ್ಲೂ ಧೋನಿ ಪ್ರಮುಖರಾಗಿದ್ದರು, ಏಕೆಂದರೆ ಈ ಸರಣಿಯ 6 ಪಂದ್ಯಗಳಲ್ಲಿ ಚಹಲ್, ಕುಲ್ದೀಪ್ 33 ವಿಕೆಟ್ ಪಡೆದಿದ್ದರು. ಪ್ರತಿ ಸಂದರ್ಭದಲ್ಲೂ ಧೋನಿ ನೀಡಿದ ಸಲಹೆ ಬಗ್ಗೆ ಬೌಲರ್ ಗಳು ಪ್ರಶಂಸೆ ವ್ಯಕ್ತಡಿಸುವಂತೆ ಬೌಲ್ ಮಾಡಿ ವಿಕೆಟ್ ಪಡೆಯುತ್ತಿದ್ದರು. ನ್ಯೂಜಿಲೆಂಡ್ ಸರಣಿಯಲ್ಲೂ ಧೋನಿ ಅವರ ಮಾಸ್ಟರ್ ಮೈಂಡ್ ಕೆಲಸ ಮಾಡಿತ್ತು.

    https://twitter.com/DoctorrSays/status/1091984081695367169

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv