Tag: weightlifting

  • CommonwealthGames: ಚಿನ್ನದ ಬೇಟೆಯೊಂದಿಗೆ ದಾಖಲೆ ಬರೆದ ಮೀರಾಬಾಯಿ ಚಾನು

    CommonwealthGames: ಚಿನ್ನದ ಬೇಟೆಯೊಂದಿಗೆ ದಾಖಲೆ ಬರೆದ ಮೀರಾಬಾಯಿ ಚಾನು

    ಬರ್ಮಿಂಗ್ ಹ್ಯಾಮ್: 2020ರ ಟೋಕಿಯೋ ಒಲಿಂಪಿಕ್ಸ್‌ ನಲ್ಲಿ ಬೆಳ್ಳಿ ಕಿರೀಟ ಮುಡಿಗೇರಿಸಿಕೊಂಡಿದ್ದ ಸಾಯಿಕೋಮ್ ಮೀರಾಬಾಯಿ ಚಾನು ಇದೀಗ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ.

    ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಮಹಿಳೆಯರ ವಿಭಾಗದ 49 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ 201 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಸ್ನ್ಯಾಚ್‌ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‌ನಲ್ಲಿ 113 ಕೆಜಿ ಭಾರ ಎತ್ತುವ ಮೂಲಕ ಸ್ಪರ್ಧೆಯಲ್ಲಿ ಮೈಲಿಗಲ್ಲು ಸಾಧಿಸಿದ್ದಾರೆ. ಈ ಮೂಲಕ ಭಾರತ ಮೊದಲ ದಿನದ ಅಥ್ಲೆಟಿಕ್ಸ್‌ ವಿಭಾಗದಲ್ಲಿ ಸತತ 3 ಪದಕಗಳ ಭರ್ಜರಿ ಬೇಟೆಯಾಡಿದೆ. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    55 ಕೆಜಿ ಪುರುಷರ ವಿಭಾಗದಲ್ಲಿ ಸಂಕೇತ್‌ ಸರ್ಗರ್‌ ಬೆಳ್ಳಿ ಪದಕ ಗೆಲ್ಲುವ ಮೂಲಕ ಖಾತೆ ತೆರೆದರು. ಈ ಬೆನ್ನಲ್ಲೇ ಕನ್ನಡಿಗ ಕುಂದಾಪುರದ ಗುರುರಾಜ್‌ ಪೂಜಾರಿ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದರು. ಒಲಿಂಪಿಕ್ಸ್‌ನಲ್ಲಿ ಬೆಳ್ಳಿಪದಕಕ್ಕೆ ಮುತ್ತಿಟ್ಟಿದ್ದ ಮೀರಾಬಾಯಿ ಚಾನು ಕಾಮನ್‌ವೆಲ್ತ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಇದನ್ನೂ ಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಮೀರಾಬಾಯಿ ಚಾನು 2014ರ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಬೆಳ್ಳಿ, 2018ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ 2017ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಚಿನ್ನದ ಪದಕ ನಂತರ ಏಷ್ಯನ್ ಚಾಂಪಿಯನ್‌ಶಿಪ್ ಪದಕಗಳನ್ನೂ ಬೇಟೆಯಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ

    ಸಾಧನೆ ಶಿಖರವೇರಿದ ಸಂಕೇತ್ – ಪಾನ್‌ಬೀಡಾ ಮಾರುತ್ತಿದ್ದ ಹುಡುಗನ `ಬೆಳ್ಳಿ’ ಸಾಧನೆ

    ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದ್ದು, ಈಗಾಗಲೇ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದುಕೊಂಡಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿ ಪದಕ ಪಡೆಯುವ ಮೂಲಕ ಭಾರತದ ಖಾತೆ ತೆರೆದಿದ್ದಾರೆ.

    ಸಂಕೇತ್ ಮಹಾದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ ಬೆಳ್ಳಿ ಕಿರೀಟ ಧರಿಸಿದ್ದಾರೆ. ಇಂದು ದೇಶವೇ ಹೆಮ್ಮೆ ಪಡುವ ಮಟ್ಟದಲ್ಲಿ ಅವರು ಸಾಧನೆ ಮಾಡಿದ್ದಾರೆ. ಆದರೆ ಸಂಕೇತ್ ಹಿನ್ನೆಲೆ ಕೇಳಿದ್ರೆ ಪ್ರತಿಯೊಬ್ಬರು ಅಚ್ಚರಿ ಪಡುತ್ತಾರೆ. ಜೀವನೋಪಾಯಕ್ಕಾಗಿ ಪಾನ್ ಬೀಡಾ, ಚಹಾ ಮಾರಿಕೊಂಡಿದ್ದ ಸಂಕೇತ್ ಇಂದು ದೇಶವೇ ಕೊಂಡಾಡುವ ಕ್ರೀಡಾಪಟುವಾಗಿದ್ದಾರೆ. ಇದನ್ನೂ ಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಯಾರಿದು ಸಂಕೇತ್ ಸರ್ಗರ್?
    1990ರ ದಶಕದಲ್ಲಿ ಜೀವನೋಪಾಯಕ್ಕಾಗಿ ಮಹಾರಾಷ್ಟ್ರದ ಸಾಂಗ್ಲಿಗೆ ಬಂದ ಸಂಕೇತ್ ಮೊದಲು ತಳ್ಳುಗಾಡಿಯಿಂದ ಹಣ್ಣುಗಳನ್ನು ಮಾರುವ ವೃತ್ತಿ ಆರಂಭಿಸಿದರು. ನಂತರದಲ್ಲಿ ಪಾನ್ ಶಾಪ್ ತೆರೆದು, ಇದರ ಪಕ್ಕದಲ್ಲೇ ಚಹಾ ಹಾಗೂ ಸಣ್ಣ ಉಪಾಹಾರ ಮಂದಿರವನ್ನೂ ತೆರೆದರು. ಇದರಿಂದಾಗಿ ಇವರ ಚಿತ್ತವೆಲ್ಲವೂ ವ್ಯವಹಾರವನ್ನು ನಡೆಸಲು ಸಹಾಯ ಮಾಡುವುದೇ ಆಗಿತ್ತು. ಸಂಕೇತ್ ಪಾನ್ ಸ್ಪೆಷಲಿಸ್ಟ್ ಎಂದೇ ಹೆಸರಾಗಿಬಿಟ್ಟಿದ್ದರು. ಚಿಕ್ಕ ವಯಸ್ಸಿನಲ್ಲೇ ಸಾದಾ ಪಾನ್, ಮೀಟಾ ಪಾನ್ (ಸ್ವೀಟ್ ಪಾನ್), ಮಸಾಲೆ ಪಾನ್ ಮಾಡುವುದರಲ್ಲಿ ನಿಸ್ಸೀಮರಾಗಿದ್ದರು. ಇದರೊಂದಿಗೆ ಚಾಯ್, ವಡಾ ಪಾವ್ ಹಾಗೂ ಕಂಡಪೋವಾ ಮಾಡುವುದರಲ್ಲೂ ಎತ್ತಿದ ಕೈ.

    ಸಂಕೇತ್ ಕ್ರೀಡಾಪಟು ಆಗಬೇಕು ಅನ್ನೋ ಕನಸೇ ಇರಲಿಲ್ಲ. ಅದು ಸಾಧ್ಯವಿಲ್ಲವೆಂದು ಅವರೇ ನಿರ್ಧರಿಸಿದ್ದರು. ಒಂದೊಮ್ಮೆ ಸಂಕೇತ್ ತಂದೆ ತಮ್ಮ ಅಂಗಡಿ ಪಕ್ಕದಲ್ಲೇ ವೇಟ್‌ಲಿಫ್ಟಿಂಗ್ ಜಿಮ್‌ಗೆ ಸೇರಿಸಿದರು. ಮಾರನೇ ದಿನ ಬೆಳಗ್ಗೆ 6.30ಕ್ಕೆ ತರಬೇತಿಗೆ ಬರಬೇಕು ಎಂದು ಕೋಚ್ ಹೇಳಿದರು. ಮಾರನೇ ದಿನದಿಂದ ನಿರಂತರ ಅಭ್ಯಾಸವಾಯಿತು. ‘ಮೊದಲು ಲಿಫ್ಟ್ ಮಾಡುವಾಗ ಅಷ್ಟೇನೂ ಪ್ರೀತಿ ಇರಲಿಲ್ಲ. ಏಕೆಂದರೆ ಅದು ಕಷ್ಟವೋ ಸುಲಭವೋ ಎಂದೂ ನಾನು ಯೋಚಿಸಿರಲಿಲ್ಲ. ಆದರೆ ಹೆಚ್ಚೆಚ್ಚು ಕಲಿಯುತ್ತಲೇ ಇದ್ದೆ. ಕಲಿತಷ್ಟು ಬಲಶಾಲಿಯಾಗುತ್ತಿದ್ದೆ’ ಎಂದು ಅವರು ಹೇಳಿಕೊಂಡಿದ್ದಾರೆ.

    ಜಿಮ್ ಪ್ರಾರಂಭವಾದ ಒಂದೆರಡು ವರ್ಷಗಳ ನಂತರ ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ಆ ವೇಳೆಗೆ ಜಿಲ್ಲಾಮಟ್ಟದ ಸ್ಪರ್ಧೆಗಳ ಬಗ್ಗೆಯೂ ಸಂಕೇತ್‌ಗೆ ತಿಳಿದಿರಲಿಲ್ಲ. ಇದರ ಹೊರತಾಗಿಯೂ 9ನೇ ತರಗತಿಯಲ್ಲಿದ್ದಾಗ ವಿಭಾಗೀಯ ಸ್ಪರ್ಧೆಯಲ್ಲಿ ಭಾಗವಹಿಸಿ, ತರಬೇತಿ ಇಲ್ಲದೆಯೇ ಬೆಳ್ಳಿ ಪಡೆದುಕೊಂಡಿದ್ದರು. ಸಂಕೇತ್ ಸರ್ಗರ್ 13 ವರ್ಷ ವಯಸ್ಸಿನವರಾಗಿದ್ದಾಗ ಕುಸ್ತಿ ಅಖಾಡಕ್ಕಿಳಿದರು. ಅಲ್ಲಿಂದ ಒಂದಿಲ್ಲೊಂದು ಪದಕಗಳನ್ನು ಮುಡಿಗೇರಿಸಿಕೊಂಡರು. ಇದನ್ನೂ ಓದಿ: ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಇವರು ಪ್ರಖ್ಯಾತ ವೇಟ್‌ಲಿಫ್ಟಿಂಗ್ ಕೋಚ್ ವಿಜಯ್ ಶರ್ಮಾ ಅವರ ನೆಚ್ಚಿನ ವಿದ್ಯಾರ್ಥಿಗಳಲ್ಲಿ ಒಬ್ಬರು. ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳಲು ಭಾರತ ಸರ್ಕಾರವು ಆತಿಥೇಯ ನಗರದಲ್ಲಿ ವೇಟ್‌ಲಿಫ್ಟರ್‌ಗಳಿಗೆ ಪೂರ್ವಸಿದ್ಧತಾ ಶಿಬಿರವನ್ನು ಏರ್ಪಡಿಸಿದ್ದರಿಂದ ಒಂದು ತಿಂಗಳ ಮುಂಚಿತವಾಗಿ ಬರ್ಮಿಂಗ್‌ಹ್ಯಾಮ್‌ಗೆ ಆಗಮಿಸಿ ತರಬೇತಿ ನಡೆಸಿದ್ದರು.

    ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಿರುವ 21ರ ತರುಣ ಮುಂದೆ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಕಾಮನ್‌ವೆಲ್ತ್‌ನಲ್ಲಿ ಕರ್ನಾಟಕದ ಗುರುರಾಜ್‌ಗೆ ಕಂಚು – ಭಾರತಕ್ಕೆ 2ನೇ ಪದಕ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕರ್ನಾಟಕ ಮೂಲದ ಕ್ರೀಡಾಪಟು ಕಂಚಿನ ಪದಕ ಗೆದ್ದಿದ್ದು, ಭಾರತಕ್ಕೆ 2ನೇ ಪದಕ ಲಭಿಸಿದೆ.

    ಕರ್ನಾಟಕದ ಗುರುರಾಜ್ ಪೂಜಾರಿ ವೇಟ್‌ಲಿಫ್ಟಿಂಗ್ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದನ್ನೂಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಗುರುರಾಜ್ ಒಟ್ಟು 269 ಕೆಜಿ ತೂಕ ಎತ್ತುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸ್ನ್ಯಾಚ್‌ ಸುತ್ತಿನ ಮುಕ್ತಾಯದ ನಂತರ ಅವರು ನಾಲ್ಕನೇ ಸ್ಥಾನದಲ್ಲಿದ್ದರು. ಇದಕ್ಕೂ ಮುನ್ನ ಮೊದಲ ಎರಡು ಪ್ರಯತ್ನದಲ್ಲಿ ಕ್ರಮವಾಗಿ 118, 115 ಕೆ.ಜಿ ಎತ್ತಿದ್ದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಗುರುರಾಜ್ 2ನೇ ಪದಕ ವಿಜೇತರಾದ ಸಾಧನೆ ಮಾಡಿದ್ದಾರೆ. ಈ ಹಿಂದೆ 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಬೆಳ್ಳಿ ಗೆದ್ದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ

    ಬರ್ಮಿಂಗ್‌ಹ್ಯಾಮ್: ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಆರಂಭಸಿದೆ. 21ರ ತರುಣ ಸಂಕೇತ್ ಮಹಾದೇವ್ ಸರ್ಗರ್ ಬೆಳ್ಳಿಪದಕ ಗೆದ್ದಿದ್ದಾರೆ.

    ಸಂಕೇತ್ ಮಹಾದೇವ್ ಸರ್ಗರ್ (21) ಪುರುಷರ ವಿಭಾಗದ 55 ಕೆಜಿ ವೇಟ್‌ಲಿಫ್ಟಿಂಗ್‌ನಲ್ಲಿ ಒಟ್ಟು 248 ಕೆಜಿ (113+135) ಭಾರ ಎತ್ತುವ ಮೂಲಕ ಬೆಳ್ಳಿ ಕಿರೀಟ ಧರಿಸಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್ 2022: ಎರಡನೇ ದಿನ ಪದಕದ ನಿರೀಕ್ಷೆಯಲ್ಲಿ ಭಾರತ – ಲವ್ಲಿನಾ, ಮೀರಾಬಾಯಿ ಚಾನು ಕಣಕ್ಕೆ

    ಚಿನ್ನಕ್ಕಾಗಿ ಸೆಟ್ಟೇರಿದ್ದ ಸಂಕೇತ್‌ಗೆ ಸರ್ಗರ್ ಕ್ಲೀನ್ ಮತ್ತು ಜರ್ಕ್ ಸುತ್ತಿನ 2ನೇ ಪ್ರಯತ್ನದಲ್ಲಿ ಚಿನ್ನ ಕೈತಪ್ಪಿತು. 139 ಕೆಜಿ ಎತ್ತಲು ಪ್ರಯತ್ನಿಸಿದರೂ ಸಾಧ್ಯವಾಗದ ಕಾರಣ ಬೆಳ್ಳಿ ಪದಕ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ದಾಳಿ!

    ಕಾಮನ್ ವೆಲ್ತ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ದಾಳಿ!

    ವಾರಣಾಸಿ: ಈ ಬಾರಿಯ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಪೂನಮ್ ಯಾದವ್ ಮೇಲೆ ಅಪರಿಚಿತ ವ್ಯಕ್ತಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

    ಶನಿವಾರ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಪೂನಮ್ ಯಾದವ್ ಮೇಲೆ ಕಲ್ಲೆಸೆದಿದ್ದಾರೆ. ಈ ವೇಳೆ ಪೂನಮ್ ಅವರನ್ನು ಕಾಪಾಡಲೆಂದು ಅವರ ಚಿಕ್ಕಪ್ಪ ಮತ್ತು ಸಹೋದರ ಸಂಬಂಧಿ ಬಂದಿದ್ದು, ಅವರ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಘಟನೆಯ ತೀವ್ರತೆಯನ್ನು ಅರಿತ ಕೂಡಲೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪೂನಮ್ ಯಾದವ್ ಅವರನ್ನು ರಕ್ಷಣೆ ಮಾಡಿದ್ದಾರೆ.

    ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ಕಳುಹಿಸಿ ಕೊಡಲಾಯಿತು. ಅಲ್ಲದೇ ದುಷ್ಕರ್ಮಿಗಳಿಂದ ಪೂನಮ್ ಅವರನ್ನು ಅಪಾಯದಿಂದ ಪಾರು ಮಾಡಲಾಗಿದೆ. ದಾಳಿ ನಡೆಸಿದವರು ಯಾರೆಂಬುದು ತಿಳಿದುಬಂದಿಲ್ಲ ಅಂತ ಪೊಲೀಸ್ ಅಧೀಕ್ಷಕ ಅಮಿತ್ ಕುಮಾರ್ ತಿಳಿಸಿದ್ದಾರೆ.

    ಪೂನಮ್ ಸಂಬಂಧಿಕರ ಮನೆಗೆ ತೆರಳಿದ್ದಾಗ ಅಲ್ಲಿಗೆ ಆಗಮಿಸಿದ ನೆರೆಮನೆಯವರು ಹಳೆಯ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಜಗಳ ಮಾಡಿದ್ದಾರೆ. ನೆರೆಮನೆಯವರು ತಮ್ಮ ಸಂಬಂಧಿಕರ ಮೇಲೆ ಜಗಳ ಮಾಡುತ್ತಿದ್ದಾಗ ಪೂನಮ್ ಯಾದವ್ ಅವರು ಮಧ್ಯಪ್ರವೇಶಿಸಿದ್ದು, ಈ ವೇಳೆ ಅವರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

    ಪೂನಮ್ ಯಾದವ್ ಅವರು ಆಸ್ಟ್ರೆಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ 2018ರ ಕಾಮನ್ ವೆಲ್ತ್ ಗೇಮ್ಸ್ ನ 69 ಕೆ.ಜಿ ವಿಭಾಗದ ವೇಟ್ ಲಿಫ್ಟ್ ಂಗ್ ಭಾರತದ ಪರ ಆಟವಾಡಿ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದರು.

  • ಕಾಮನ್‍ವೆಲ್ತ್ ಗೇಮ್ಸ್ 2018- ನಾಲ್ಕನೇ ದಿನ ಚಿನ್ನಕ್ಕೆ ಮುತ್ತಿಟ್ಟ 22 ವರ್ಷದ ಪೂನಮ್ ಯಾದವ್

    ಕಾಮನ್‍ವೆಲ್ತ್ ಗೇಮ್ಸ್ 2018- ನಾಲ್ಕನೇ ದಿನ ಚಿನ್ನಕ್ಕೆ ಮುತ್ತಿಟ್ಟ 22 ವರ್ಷದ ಪೂನಮ್ ಯಾದವ್

    ಗೋಲ್ಡ್ ಕೋಸ್ಟ್: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ಕಾಮನ್ ವೆಲ್ತ್ ಗೇಮ್ಸ್ ನಡೆಯುತ್ತಿದ್ದು, ನಾಲ್ಕನೇಯ ದಿನವೂ ಭಾರತಕ್ಕೆ ಚಿನ್ನದ ಪದಕ ಲಭಿಸಿದೆ.

    ವೇಟ್ ಲಿಫ್ಟಿಂಗ್ ಮಹಿಳೆಯರ 69 ಕೆಜಿ ವಿಭಾಗದಲ್ಲಿ ಭಾರತದ ಪೂನಮ್ ಯಾದವ್(22) ಅವರು ಒಟ್ಟು 222 ಕೆ.ಜಿ ಭಾರ ಎತ್ತುವ ಮೂಲಕ ಭಾರತಕ್ಕೆ ನಾಲ್ಕನೇ ಚಿನ್ನದ ಪದಕ ತಂದುಕೊಟ್ಟಿದ್ದಾರೆ. ಇದನ್ನೂ ಓದಿ: ಕಾಮನ್‍ವೆಲ್ತ್ ಗೇಮ್ಸ್: ಭಾರತಕ್ಕೆ ನಾಲ್ಕನೇ ಚಿನ್ನ ತಂದ ರಾಗಲ ವೆಂಕಟ್ ರಾಹುಲ್

    ಇದರಂತೆಯೇ ಶೂಟಿಂಗ್ ವಿಭಾಗದಲ್ಲಿ ಮನು ಭಾಕೇರ್(ಚಿನ್ನ), ಹೀನ ಸಿಧು(ಬೆಳ್ಳಿ) ಪದಕಕ್ಕೆ ಭಾಜನರಾಗಿದ್ದಾರೆ. ಒಟ್ಟಿನಲ್ಲಿ ಈವರೆಗೆ 6 ಚಿನ್ನ, 2 ಬೆಳ್ಳಿ ಹಾಗೂ ಇಂದು ಕಂಚಿನ ಪದಕ ಭಾರತಕ್ಕೆ ಒಲಿದಿದೆ. ಇದನ್ನೂ ಓದಿ:  ಕಾಮನ್‍ವೆಲ್ತ್ ನಲ್ಲಿ ಮುಂದುವರಿದ ಚಿನ್ನದ ಬೇಟೆ- ವೇಟ್ ಲಿಫ್ಟಿಂಗ್‍ನಲ್ಲಿ ಭಾರತದ ಸತೀಶ್ ಕುಮಾರ್ ಗೆ ಗೋಲ್ಡ್