Tag: weightlifter

  • ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್

    ಚಿನ್ನದ ಪದಕ ಗೆಲ್ಲಲು ಭಾರತದ ಮೀರಾಬಾಯಿ ಚಾನು ನನಗೆ ಸ್ಫೂರ್ತಿ ಎಂದ ಪಾಕ್ ವೇಟ್ ಲಿಫ್ಟರ್

    ಲಂಡನ್: ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಬಳಿಕ ಪಾಕಿಸ್ತಾನದ ವೇಟ್ ಲಿಫ್ಟರ್ ದಸ್ತಗೀರ್ ಭಟ್ ನನ್ನ ಈ ಸಾಧನೆಗೆ ಭಾರತದ ಮೀರಾಬಾಯಿ ಚಾನು ಸ್ಫೂರ್ತಿ ಎಂದು ಹಾಡಿ ಹೊಗಳಿದ್ದಾರೆ.

    22ನೇ ಕಾಮನ್‍ವೆಲ್ತ್ ಗೇಮ್ಸ್‌ನ 109 ಕೆಜಿ ವಿಭಾಗದ ವೇಟ್ ಲಿಫ್ಟಿಂಗ್‍ನಲ್ಲಿ ಪಾಕಿಸ್ತಾನದ ವೇಟ್ ಲಿಫ್ಟರ್ ದಸ್ತಗೀರ್ ಭಟ್ ಒಟ್ಟು 405 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದರು. ಇದು ಪಾಕಿಸ್ತಾನಕ್ಕೆ ಬರ್ಮಿಂಗ್ ಹ್ಯಾಮ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಸಿಕ್ಕಿರುವ ಮೊದಲ ಚಿನ್ನದ ಪದಕವಾಗಿದೆ. ಇದನ್ನೂ ಓದಿ: ರೇಣುಕಾ ಸಿಂಗ್ ಇನ್‍ಸ್ವಿಂಗ್ – ಜಸ್ಟ್ ವಾವ್ ಎಂದ ಕ್ರಿಕೆಟ್ ಪ್ರಿಯರು

    24ರ ಹರೆಯದ ದಸ್ತಗೀರ್ ಭಟ್ ಸ್ನ್ಯಾಚ್‍ನಲ್ಲಿ 173 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‍ನಲ್ಲಿ 232 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕ ಗೆದ್ದುಕೊಂಡರು. ಆ ಬಳಿಕ ಪದಕ ಗೆದ್ದ ಸಂಭ್ರಮ ಹಂಚಿಕೊಂಡ ದಸ್ತಗೀರ್ ಭಟ್, ನನ್ನ ಈ ಸಾಧನೆಗೆ ನಮ್ಮ ಪಕ್ಕದ ದೇಶ ಭಾರತದ ಮಹಿಳಾ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಸ್ಫೂರ್ತಿ. ನಾನು ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ್ದೇನೆ. ಆ ಸಂದರ್ಭ ನನಗೆ ತುಂಬಾ ಸಂತೋಷ ನೀಡಿತ್ತು. ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿರುವ ಭಾರತದ ವೇಟ್ ಲಿಫ್ಟರ್‌ಗಳಾದ ಗುರ್‌ದೀಪ್ ಸಿಂಗ್ ಸಹಿತ ಹಲವರು ನನ್ನ ಸ್ನೇಹಿತರು. ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇನೆ ಎಂದರು. ಇದನ್ನೂ ಓದಿ: ಹೈಜಂಪ್‌ನಲ್ಲಿ ತೇಜಸ್ವಿನ್ ತೇಜಸ್ಸು, ವೇಟ್‌ಲಿಫ್ಟಿಂಗ್‌ನಲ್ಲಿ ಗುರ್‌ದೀಪ್ ಪರಾಕ್ರಮ- ಭಾರತಕ್ಕೆ ಮತ್ತೆರಡು ಕಂಚು

    ಮಹಿಳೆಯರ ವಿಭಾಗದ 49 ಕೆಜಿ ವೇಟ್‍ಲಿಫ್ಟಿಂಗ್‍ನಲ್ಲಿ 201 ಕೆಜಿ ಭಾರ ಎತ್ತುವ ಮೂಲಕ ಮೀರಾಬಾಯಿ ಚಾನು ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದರು. ಸ್ನ್ಯಾಚ್‍ನಲ್ಲಿ 88 ಕೆಜಿ ಮತ್ತು ಕ್ಲೀನ್ ಮತ್ತು ಜರ್ಕ್‍ನಲ್ಲಿ 113 ಕೆಜಿ ಭಾರ ಎತ್ತುವ ಮೂಲಕ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟಿದ್ದರು. ಮೀರಾಬಾಯಿ ಚಾನು 2014ರ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ, 2018ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅಲ್ಲದೇ 2017ರ ವಿಶ್ವ ಚಾಂಪಿಯನ್‍ಶಿಪ್‍ನಲ್ಲೂ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ

    ಭಾರತಕ್ಕೆ ಮತ್ತೊಂದು ಚಿನ್ನ ತಂದುಕೊಟ್ಟ ವೈಟ್‍ಲಿಫ್ಟರ್ ‘ಅಚಿಂತಾ ಶೆಯುಲಿ’ – ಮೋದಿಯಿಂದ ಅಭಿನಂದನೆ

    ಬರ್ಮಿಂಗ್‍ಹ್ಯಾಮ್: ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಭಾರತ 3ನೇ ಚಿನ್ನದ ಪದಕವನ್ನು ತನ್ನದಾಗಿಸಿಕೊಂಡಿದೆ. ಭಾರತದ ವೈಟ್‍ಲಿಫ್ಟರ್ ಅಚಿಂತಾ ಶೆಯುಲಿ ಪುರುಷರ 73 ಕೆಜಿ ವಿಭಾಗದಲ್ಲಿ ಚಿನ್ನ ಗೆದ್ದಿದ್ದಾರೆ.

    143 ಕೆಜಿ ಭಾರ ಎತ್ತುವ ಮೂಲಕ ಅತ್ಯಧಿಕ ವೈಟ್‍ಲಿಫ್ಟ್ ಮಾಡಿದ ಅಚಿಂತಾ ಶೆಯುಲಿ ಕಾಮನ್‍ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಹೊಸ ದಾಖಲೆಯನ್ನು ಬರೆದಿದ್ದಾರೆ. ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 170 ಕೆಜಿ ಎತ್ತುವ ಮೂಲಕ ಒಟ್ಟು 313 ಕೆಜಿ ವೈಟ್‍ಲಿಫ್ಟ್ ಮಾಡಿ ಭಾರತಕ್ಕೆ ಚಿನ್ನದ ಕಿರೀಟ ತೊಡಿಸಿದರು.

    ಅಚಿಂತಾ ಭಾರತೀಯರ ನಿರೀಕ್ಷೆಗಳನ್ನು ಉಳಿಸಿಕೊಂಡಿದ್ದು ಮಾತ್ರವಲ್ಲದೇ ಹೊಸ ದಾಖಲೆ ಬರೆದಿದ್ದಾರೆ. ಅಚಿಂತಾ ಚಿನ್ನದ ಪದಕ ಸಾಧನೆಯೊಂದಿಗೆ ಭಾರತ ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ 6 ಪದಕ ಬಾಚಿಕೊಂಡಿದೆ. ಇದನ್ನೂ ಓದಿ: ನಾಡದೇವಿ ಚಾಮುಂಡೇಶ್ವರಿ ಹಬ್ಬಕ್ಕೆ ದಿನಗಣನೆ – ಮೈಸೂರು ದಸರಾಕ್ಕೆ ಬಹಿಷ್ಕಾರ ಹಾಕಿದ ಮಾವುತ ಕಾವಾಡಿಗಳು 

    ವಿಷಯ ತಿಳಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಅಚಿಂತಾ ಶೆಯುಲಿ ಅವರಿಗೆ ಶುಭಾಕೋರಿದ್ದಾರೆ. ಟ್ವೀಟ್ ಮಾಡಿದ ಅವರು, ನಮ್ಮ ತಂಡವು ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಹೊರಡುವ ಮೊದಲು, ನಾನು ಅಚಿಂತಾ ಶೆಯುಲಿ ಅವರೊಂದಿಗೆ ಮಾತನಾಡಿದ್ದೆ. ಅವರ ತಾಯಿ ಮತ್ತು ಸಹೋದರರಿಂದ ಅವರು ಪಡೆದ ಬೆಂಬಲದ ಬಗ್ಗೆ ನಾವು ಚರ್ಚಿಸಿದ್ದೇವೆ. ಪದಕವನ್ನು ಗೆದ್ದ ನಂತರ ಸಿನಿಮಾ ನೋಡಲು ಅವರಿಗೆ ಸಮಯ ಸಿಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಬರದುಕೊಂಡಿದ್ದಾರೆ.

    ಮಹಿಳಾ ವೈಟ್‍ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು, ಪುರುಷರ 67 ಕೆಜಿ ವಿಭಾಗದಲ್ಲಿ ಜೆರೆಮಿ ಲಾಲ್ರಿನ್ನುಂಗಾ ಬಳಿಕ ಅಚಿಂತಾ ಶುಯೆಲಿ 3ನೇ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸದ್ಯ ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನದಲ್ಲಿದೆ. 3 ಚಿನ್ನ, 2 ಬೆಳ್ಳಿ ಹಾಗೂ 1 ಕಂಚಿನ ಪದಕದ ಮೂಲಕ ಒಟ್ಟು 6 ಪದಕ ಗೆದ್ದುಕೊಂಡಿದೆ. ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ 22 ಚಿನ್ನ, 13 ಬೆಳ್ಳಿ ಹಾಗೂ 17 ಕಂಚಿನ ಪದಕದ ಜೊತೆ ಒಟ್ಟು 52 ಪದಕಗಳನ್ನು ಗೆದ್ದುಕೊಂಡಿದೆ. ಇದನ್ನೂ ಓದಿ: ನಾಲ್ಕು ದಿನ ಗಾಳಿ, ಮಳೆಗೆ ಬೆಟ್ಟದ ಪೊದೆಯಲ್ಲಿ ಸಿಲುಕಿದ ವೃದ್ಧೆ ರಕ್ಷಣೆ

    Live Tv
    [brid partner=56869869 player=32851 video=960834 autoplay=true]

  • ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಮೀರಾಬಾಯಿ ಗೆದ್ದಿರುವ ಬೆಳ್ಳಿ ಪದಕ ಚಿನ್ನದ್ದಾಗುವ ಸಾಧ್ಯತೆ

    ಟೋಕಿಯೋ: ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ವೇಟ್‍ಲಿಫ್ಟರ್ ಮೀರಾಬಾಯಿ ಅವರ ಬೆಳ್ಳಿ ಪದಕ ಇದೀಗ ಚಿನ್ನದ ಪದಕವಾಗುವ ಸಾಧ್ಯತೆಯೊಂದು ದಟ್ಟವಾಗಿದೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ ಚೀನಾದ ಹೊ ಜಿಹೂಹು ಒಟ್ಟು 210 ಕೆಜಿ (94+116 ಕೆಜಿ) ಭಾರ ಎತ್ತಿ ಚಿನ್ನದ ಪದಕ ಬೇಟೆಯಾಡಿದರೆ, ಮೀರಾಬಾಯಿ ಚಾನು 202 ಕೆಜಿ (87+115 ಕೆಜಿ) ಭಾರ ಎತ್ತಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಇಂಡೋನೇಷ್ಯಾದ ಐಸಾಹ್ ವಿಂಡಿ ಕಾಂಟಿಕಾ ವಿಂಡಿ 194 ಕೆಜಿ (84+110ಕೆಜಿ) ಕಂಚಿನ ಪದಕ ಪಡೆದಿದ್ದರು. ಆದರೆ ಇದೀಗ ಚೀನಾದ ಹೊ ಜಿಹೂಹು ಡೋಪಿಂಗ್ ಪರೀಕ್ಷೆಯಲ್ಲಿ ಫೈಲ್ ಆಗಿರುವುದರಿಂದಾಗಿ ಅವರು ಅನರ್ಹರಾಗಿ ಅವರ ಬಳಿಕ ದ್ವೀತಿಯ ಸ್ಥಾನ ಪಡೆದ ಮೀರಾಬಾಯಿಗೆ ಚಿನ್ನದ ಪದಕ ಸಿಗುವ ಕುರಿತು ವರದಿಯಾಗಿದೆ.

    ಟೋಕಿಯೋ ಒಲಿಂಪಿಕ್ಸ್ ಸಮಿತಿ ತಿಳಿಸಿರುವಂತೆ, ಹೊ ಜಿಹೂಹು ಮೊದಲ ಡೋಪಿಂಗ್ ಪರೀಕ್ಷೆಯಲ್ಲಿ ಫೈಲ್ ಆಗಿದ್ದು, ಅವರು ಸ್ಪರ್ಧೆಗು ಮುಂಚೆ ಯಾವುದಾದರು ಔಷಧಿಯನ್ನು ತೆಗೆದುಕೊಂಡಿದ್ದಾರಾ ಎಂದು ತಿಳಿಯಲು ಎರಡನೇ ಪರೀಕ್ಷೆ ನಡೆಸಲು ತೀರ್ಮಾನಿಸಿದೆ.

    ಟೋಕಿಯೋ ಒಲಿಂಪಿಕ್ಸ್‌ನಲ್ಲಿ 49 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್‍ನಲ್ಲಿ 26 ವರ್ಷದ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದರು. ಈ ಮೂಲಕ ಯಶಸ್ವಿಯಾಗಿ ತನ್ನ ಸ್ಪರ್ಧೆ ಮುಗಿಸಿರುವ ಮೀರಾಬಾಯಿ ಚಾನು ಇಂದು ನವದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಅವರು ಬರುತ್ತಿದ್ದಂತೆ ದೇಶದಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದನ್ನೂ ಓದಿ: ಬೆಳ್ಳಿ ಪದಕ ಗೆದ್ದ ಮೀರಾಬಾಯಿಗೆ ಡೊಮಿನೊಸ್ ಕಡೆಯಿಂದ ಜೀವನ ಪೂರ್ತಿ ಪಿಜ್ಜಾ

    49 ಕೆಜಿ ವಿಭಾಗದ ಭಾರ ಎತ್ತುವ ಸ್ಪರ್ಧೆಯಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದು ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ಗಳಿಸಿ ಕೊಟ್ಟ ಕೀರ್ತಿಗೆ ಭಾಜನರಾಗಿದ್ದಾರೆ. 84 ಕೆಜಿ ಮತ್ತು 87 ಕೆಜಿ ಭಾರವನ್ನು ಯಶಸ್ವಿಯಾಗಿ ಎತ್ತಿದ ಮಿರಾಬಾಯ್ ಚಾನು 89 ಕೆಜಿ ಭಾರ ಎತ್ತುವಲ್ಲಿ ವಿಫಲರಾದರು. ಆದರೆ ಚೀನಾದ ಸ್ಪರ್ಧಿ ಜಿಹೂಹು 94 ಕೆಜಿ ಭಾರ ಎತ್ತಿ ಒಲಿಂಪಿಕ್ ದಾಖಲೆ ಬರೆದರು. ಇದು ಒಲಿಂಪಿಕ್ಸ್‍ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಶ್ರೇಷ್ಠ ಸಾಧನೆಯಾಗಿದೆ. ಈ ಹಿಂದೆ ಸಿಡ್ನಿ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕರ್ಣಂ ಮಲ್ಲೇಶ್ವರಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿದ್ದರು. 69 ಕೆಜಿ ವಿಭಾಗದಲ್ಲಿ ಕರ್ಣಂ ಮಲ್ಲೇಶ್ವರಿ ಅವರು ಕಂಚಿನ ಪದಕ ಗಳಿಸಿದ್ದರು.