Tag: Weekend Lockdown

  • ಬಿಜೆಪಿಯವರಿಂದಲೇ ಹೆಚ್ಚು ಕೊರೊನಾ ನಿಯಮ ಉಲ್ಲಂಘನೆ : ಸಿದ್ದು

    ಬಿಜೆಪಿಯವರಿಂದಲೇ ಹೆಚ್ಚು ಕೊರೊನಾ ನಿಯಮ ಉಲ್ಲಂಘನೆ : ಸಿದ್ದು

    – ಪದೇ ಪದೇ ವೀಕೆಂಡ್ ಲಾಕ್‍ಡೌನ್ ಮಾಡುವುದು ಸರಿಯಲ್ಲ

    ಮಂಡ್ಯ: ರಾಜ್ಯದಲ್ಲಿ ಹಾಗೂ ದೇಶದಲ್ಲಿ ಕೊರೊನಾ ನಿಯಮಗಳು ಅತೀ ಹೆಚ್ಚು ಉಲ್ಲಂಘನೆ ಆಗಿದ್ದರೆ ಅದು ಬಿಜೆಪಿ ಅವರಿಂದನೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು.

    ಮಂಡ್ಯದ ಗೌಡಹಳ್ಳಿ ಗೇಟ್ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಮಗಳನ್ನು ಅತೀ ಹೆಚ್ಚು ಉಲ್ಲಂಘನೆ ಮಾಡುತ್ತಿರುವುದು ಬಿಜೆಪಿ ಅವರು. ಬಿಜೆಪಿ ಅವರದ್ದು, ಡಬಲ್ ಸ್ಟ್ಯಾಂಡ್.  ಹೇಳುವುದೇ ಒಂದು ಮಾಡುವುದು ಇನ್ನೊಂದು ಎಂದು ಹೇಳಿದರು. ಇದನ್ನೂ ಓದಿ:  ಮಹಿಳಾ ಉದ್ದೇಶಿತ ಆಯವ್ಯಯದಡಿ ಮುದ್ರಣ, ವಿದ್ಯುನ್ಮಾನ ಮಾಧ್ಯಮ ವೃತ್ತಿಪರ ತರಬೇತಿಗಾಗಿ ಅರ್ಜಿ ಆಹ್ವಾನ

    ಉಮೇಶ್ ಕತ್ತಿ ವಿಚಾರವಾಗಿ ಮಾತನಾಡಿದ ಅವರು, ಅವನ್ಯಾರೋ ಕತ್ತಿ ಇದಾನಲ್ಲಾ ಅವನು ಮಾಸ್ಕ್ ಹಾಕೋದೇ ಇಲ್ಲ. ಕೇಳಿದ್ರೆ ಅದು ಅವರವರ ಇಷ್ಟ ಅಂತಾನೇ. ಮಂತ್ರಿಯಾದವನು ಹೀಗೆ ಹೇಳ್ತಾನೆ ಅಂದ್ರೆ, ಆತ ಮಂತ್ರಿ ಆಗಲು ಲಾಯಕ್ಕಾ? ಬೇರೆಯವರು ಮಾಸ್ಕ್ ಹಾಕದೇ ಇದ್ದರೆ ಫೈನ್ ಹಾಕ್ತಾರೆ, ಮಂತ್ರಿಗೆ ಯಾಕ್ ಫೈನ್ ಹಾಕಿಲ್ಲ ಎಂದು ಕಿಡಿಕಾರಿದರು.

    ವೀಕೆಂಡ್ ಲಾಕ್‍ಡೌನ್ ಕುರಿತು ಮಾತನಾಡಿದ ಅವರು, ವೀಕೆಂಡ್ ಕರ್ಫ್ಯೂನಿಂದ ಕೊರೊನಾ ತಡೆಯಲು ಅಸಾಧ್ಯ. ರಾಜ್ಯ ಸರ್ಕಾರ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಕ್ಸಿನ್ ಮಾಡಲಿ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದು ಅವುಗಳು ಸರಿಯಾಗಿ ಪಾಲನೆಯಾಗುವಂತೆ ಕ್ರಮವಹಿಸಬೇಕು. ಅದನ್ನು ಬಿಟ್ಟು ಹೀಗೆ ವೀಕೆಂಡ್ ಲಾಕ್‍ಡೌನ್ ಎಂದು ಪದೇ ಪದೇ ಹೇಳುವುದು ಸರಿಯಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಾಂಶುಪಾಲರಿಗೆ ಕಪಾಳಮೋಕ್ಷ ಮಾಡಿದ ಪ್ರಾಧ್ಯಾಪಕರು!

  • ವೀಕೆಂಡ್ ಕರ್ಫ್ಯೂ ವಿರೋಧಿಸಿ ಮೈಸೂರಲ್ಲಿ ಪ್ರತಿಭಟನೆ

    ವೀಕೆಂಡ್ ಕರ್ಫ್ಯೂ ವಿರೋಧಿಸಿ ಮೈಸೂರಲ್ಲಿ ಪ್ರತಿಭಟನೆ

    ಮೈಸೂರು: ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆ ವಿವಿಧ ಸಂಘ, ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿ ನಗರದ ದೇವರಾಜ ಅರಸು ರಸ್ತೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿವೆ.

    ದೇವರಾಜ ಅರಸು ರಸ್ತೆಯ ಮಳಿಗೆಗಳ ಮುಂಭಾಗದಲ್ಲಿ ಕಪ್ಪು ಬಟ್ಟೆ ಹಾಗೂ ಕಪ್ಪು ಪಟ್ಟಿಯನ್ನ ಧರಿಸಿ ಪ್ರತಿಭಟನೆ ನಡೆಸಿದರು. ವೀಕೆಂಡ್ ಕರ್ಫ್ಯೂ ಅನಗತ್ಯ ಹಾಗೂ ಅವೈಜ್ಞಾನಿಕವಾದದ್ದು, ಹೀಗಾಗಿ ಯಾವುದೇ ಕಾರಣಕ್ಕೂ ವೀಕೆಂಡ್ ಕರ್ಫ್ಯೂ ಮುಂದುವರಿಸಬಾರದು. ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿ ವ್ಯಾಪಾರಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಇಂದು 1,453 ಹೊಸ ಕೊರೊನಾ ಪ್ರಕರಣ, 17 ಮಂದಿ ಸಾವು

    ತಕ್ಷಣವೇ ವೀಕೆಂಡ್ ಕರ್ಫ್ಯೂ ರದ್ದುಗೊಳಿಸಬೇಕು, ಶನಿವಾರ ಹಾಗೂ ಭಾನುವಾರ ವ್ಯಾಪಾರ ಹೆಚ್ಚಾಗಿರುತ್ತದೆ. ಈ ಎರಡು ದಿನಗಳ ವ್ಯಾರ ಒಂದೇ, ವಾರದ ಉಳಿದ ಐದು ದಿನಗಳ ವ್ಯಾಪಾರವೂ ಒಂದೇ. ಮದುವೆ ಸಮಾರಂಭ ನಡೆಸುವ ಹಾಲ್‍ಗಳಿಗೂ ತೊಂದರೆಯಾಗಿದೆ. ಸರ್ಕಾರ ಈ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

     

  • ಮೈಸೂರಿನಲ್ಲಿ ವೀಕೆಂಡ್ ಲಾಕ್‍ಡೌನ್ ಬೇಡ: ಸೋಮಶೇಖರ್

    ಮೈಸೂರಿನಲ್ಲಿ ವೀಕೆಂಡ್ ಲಾಕ್‍ಡೌನ್ ಬೇಡ: ಸೋಮಶೇಖರ್

    ಮಡಿಕೇರಿ: ಮೈಸೂರಿನಲ್ಲಿ ವಾರಾಂತ್ಯದ ಲಾಕ್‍ಡೌನ್ ಗೆ ಈಗಾಗಲೇ ಅನೇಕ ಸಂಘ-ಸಂಸ್ಥೆಗಳು, ವರ್ತಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್‍ಡೌನ್ ಬೇಡ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದು ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

    ಮಡಿಕೇರಿಯಲ್ಲಿ ಮಾತಾನಾಡಿದ ಅವರು, ಮೈಸೂರಿನಲ್ಲಿ ವೀಕೆಂಡ್ ಕಫ್ರ್ಯೂಗೆ ವರ್ತಕರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಅದನ್ನು ಮುಖ್ಯಮಂತ್ರಿಗಳ ಗಮನಕ್ಕೂ ತಂದಿದ್ದೇನೆ. ಮೈಸೂರಿನಲ್ಲಿ ಈಗಾಗಲೇ ಪಾಸಿಟಿವಿಟಿ ರೇಟ್ ಶೇ.1ಕ್ಕಿಂತ ಒಳಗಿದೆ. ಹೀಗಾಗಿ ವೀಕೆಂಡ್ ಕಫ್ರ್ಯೂ ಬೇಡವೆಂದು ಹೇಳಿದ್ದೇನೆ. ಒಂದು ವಾರ ಪಾಸಿಟಿವಿಟಿ ರೇಟ್ ಶೇ.1ರ ಒಳಗಿದ್ದರೆ ವಾರಾಂತ್ಯದ ಲಾಕ್‍ಡೌನ್ ತೆರವು ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದು ಸೋಮಶೇಖರ್ ಹೇಳಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟದಲ್ಲಿ ಜನಸ್ತೋಮ – ಇಂದು ಸೇರಿದಂತೆ 3 ದಿನ ಭಕ್ತರ ಪ್ರವೇಶಕ್ಕೆ ನಿರ್ಬಂಧ

    ಸಚಿವ ಅನಂದ್ ಸಿಂಗ್ ಅಸಮಾಧಾನದ ಕುರಿತು ಮಾತನಾಡಿದ ಅವರು, ಆನಂದ್ ಸಿಂಗ್ ಅವರಿಗೆ ಯಾವುದೇ ಅಸಮಾಧಾನ ಮುನಿಸು ಇಲ್ಲ, ಸಿಎಂ ಮಾತನಾಡಿ ಎಲ್ಲವನ್ನೂ ಸರಿಮಾಡಿದ್ದಾರೆ. ಯಾವುದೇ ಸಮಸ್ಯೆ ಇಲ್ಲ, ಸಚಿವ ಸಂಪುಟ ಸಭೆಗೆ ಗೈರಾಗುವ ಬಗ್ಗೆ ಅನಂದ್ ಸಿಂಗ್ ಸಿಎಂ ಅವರ ಪರ್ಮಿಷನ್ ತೆಗೆದುಕೊಂಡಿದ್ದರು. ಆನಂದ ಸಿಂಗ್ ಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.

  • ಕೊರೊನಾ ಪ್ರಕರಣಗಳು ಹೆಚ್ಚಳ, ವೀಕೆಂಡ್ ಲಾಕ್‍ಡೌನ್ ಸೂಕ್ತ: ಕೆ.ಜಿ.ಬೋಪಯ್ಯ

    ಕೊರೊನಾ ಪ್ರಕರಣಗಳು ಹೆಚ್ಚಳ, ವೀಕೆಂಡ್ ಲಾಕ್‍ಡೌನ್ ಸೂಕ್ತ: ಕೆ.ಜಿ.ಬೋಪಯ್ಯ

    ಮಡಿಕೇರಿ: ಕೇರಳ, ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವೀಕೆಂಡ್ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅಭಿಪ್ರಾಯ ಪಟ್ಟಿದ್ದಾರೆ.

    ಕೊಡಗಿನ ಕುಟ್ಟ ಚಕ್ ಪೋಸ್ಟ್ ಬಳಿ ಮಾತಾನಾಡಿದ ಅವರು, ಈಗಾಗಲೇ ರಾಜ್ಯದ ಗಡಿ ಭಾಗದಲ್ಲಿ ಸಾಕಷ್ಟು ಟೈಟ್ ಮಾಡಿದ್ದಾರೆ, ಸೋಂಕಿನ ಪ್ರಕರಣಗಳು ಹೆಚ್ಚಾದರೆ ಕಳೆದ ಬಾರಿಯಂತೆ ವೀಕೆಂಡ್ ಲಾಕ್‍ಡೌನ್ ಮಾಡಬೇಕಾಗುವ ಸಾಧ್ಯತೆ ಬರಬಹುದು. ಇದರಿಂದ ಪ್ರವಾಸಿಗರ ಸಂಖ್ಯೆ ಕಡಿಮೆ ಅಗಬಹುದು. ಸದ್ಯದಲ್ಲೇ ರಾಜ್ಯ ಸರ್ಕಾರ ಮಾಡಬಹುದು ನಾನು ಕೂಡ ವೀಕೆಂಡ್ ಲಾಕ್‍ಡೌನ್ ಮಾಡುವುದು ಸೂಕ್ತ ಎಂದು ಸರ್ಕಾರಕ್ಕೆ ಸಲಹೆ ಕೋಡುತ್ತೇನೆ ಎಂದರು. ಇದನ್ನೂ ಓದಿ: ಕರಾವಳಿಯಲ್ಲಿ ಕೊರೊನಾ ಹೆಚ್ಚಳ- ಜನರಿಗೆ ಸಿಗುತ್ತಿಲ್ಲ ಲಸಿಕೆ

    ಕೊಡಗು ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ಶೇ.5ಕ್ಕೆ ತಲುಪಿಲ್ಲ, ಈಗಲೂ ಜಿಲ್ಲೆ ಕೋವಿಡ್ ನಿಯಂತ್ರಣದಲ್ಲಿದೆ. ಪಾಸಿಟಿವ್ ರೇಟ್ 5 ಮೇಲೆ ಹೋಗಬರದು ಎಂದು ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಮುಖ್ಯಮಂತ್ರಿಗಳು ದೆಹಲಿಯಿಂದ ಬರುತ್ತಿದ್ದಂತೆ ಮತ್ತೆ ಕೋವಿಡ್ ನಿಯಂತ್ರಣದ ಬಗ್ಗೆ ಸಭೆ ನಡೆಸಲ್ಲಿದ್ದಾರೆ. ಎಲ್ಲ ಜಿಲ್ಲೆಗಳ ವರದಿ ತರಿಸಿಕೊಂಡು ಎನು ಮಾಡಬಹುದು ಎಂದು ಸೂಚನೆ ನೀಡುತ್ತಾರೆ ಎಂದರು.

    ಈಗಾಗಲೇ ಕೊಡಗು ಜಿಲ್ಲೆಯು ಹೈರಿಸ್ಕ್ ಎಂದು ಹೇಳಲಾಗುತ್ತಿದೆ. ಹೀಗಾಗಿ ವರದಿ ತರಿಸಿಕೊಂಡು ಮಾರ್ಗಸೂಚಿಗಳನ್ನು ನೀಡಬಹುದು. ಅದನ್ನು ಎಲ್ಲರೂ ಪಾಲಸಬೇಕಾಗುತ್ತದೆ. ಈಗಾಗಲೇ ನಾಗರಹೊಳೆ ಭಾಗಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ಕೇರಳದ ಮೂಲದವರು ಬಂದು ಹೋಗುತ್ತಿದ್ದಾರೆ ಎಂಬ ಮಾಹಿತಿ ಇದೆ. ಹೀಗಾಗಿ ಅಲ್ಲಿನ ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ತಪಾಸಣೆ ಮಾಡಬೇಕು. ಆರ್ ಟಿಪಿಸಿಆರ್ ವರದಿ ಇದ್ದರೆ ಮಾತ್ರ ಒಳಗೆ ಬೀಡಬೇಕು ಎಂದು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

  • ರಾಜಧಾನಿಗೆ ಕಾದಿದ್ಯಾ ಮಹಾವಲಸೆ ಆಪತ್ತು? – ಸರ್ಕಾರದ ನಿರ್ಲಕ್ಷ್ಯಕ್ಕೆ ಮೊದಲಿನಂತಾಗುತ್ತಾ ಬೆಂಗಳೂರು?

    ರಾಜಧಾನಿಗೆ ಕಾದಿದ್ಯಾ ಮಹಾವಲಸೆ ಆಪತ್ತು? – ಸರ್ಕಾರದ ನಿರ್ಲಕ್ಷ್ಯಕ್ಕೆ ಮೊದಲಿನಂತಾಗುತ್ತಾ ಬೆಂಗಳೂರು?

    – ಅನ್‍ಲಾಕ್‍ಗೂ ಮುನ್ನವೇ ಬೆಂಗಳೂರಿಗೆ ಬಂದ್ರು ಲಕ್ಷಾಂತರ ಜನ!
    – ಬೆಂಗಳೂರಿನಲ್ಲಿ ಕೊರೊನಾ ಟೆಸ್ಟಿಂಗ್ ಕಳ್ಳಾಟ

    ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ಕರ್ನಾಟಕದ ಮೂರನೇ ಎರಡು ಭಾಗದಲ್ಲಿ ನಾಳೆಯಿಂದ ಅನ್‍ಲಾಕ್ ಪ್ರಕ್ರಿಯೆ ಶುರುವಾಗ್ತಿದೆ. ಪಾಸಿಟಿವಿಟಿ ಪ್ರಮಾಣವನ್ನು ಅಚ್ಚರಿಯ ರೀತಿಯಲ್ಲಿ ಇಳಿಸಿಕೊಂಡಿರುವ ಬೆಂಗಳೂರು ಕೂಡ ನಾಳೆಯಿಂದ ಹಾಫ್ ಲಾಕ್ ಆಗುತ್ತಿದೆ. ಬೆಳಗ್ಗೆ ಹತ್ತರ ಬದಲು ಮಧ್ಯಾಹ್ನ 2 ಗಂಟೆಯವರೆಗೂ ಅಗತ್ಯ ವಸ್ತುಗಳ ವ್ಯಾಪಾರ ವಹಿವಾಟಿಗೆ ಅವಕಾಶ ಸಿಗುತ್ತಿದೆ. ಆದ್ರೆ ಇದಕ್ಕೂ ಮೊದಲೇ ಬೆಂಗಳೂರಲ್ಲಿ ಕೊರೋನಾ ಮಹಾಮಾರಿ ಮತ್ತೆ ಸ್ಫೋಟಗೊಳ್ಳುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ.

    ಅನ್‍ಲಾಕ್ ಸುಳಿವು ಸಿಕ್ಕ ದಿನದಿಂದಲೇ ಹಳ್ಳಿಗಳಿಂದ ಬೆಂಗಳೂರಿಗೆ ಮರು ವಲಸೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಕಳೆದೊಂದು ವಾರದಲ್ಲಿ ಲಕ್ಷಾಂತರ ಜನ ಗಂಟು ಮೂಟೆ ಸಮೇತ ಮತ್ತೆ ಬೆಂಗಳೂರಿಗೆ ದೌಡಾಯಸಿದ್ದಾರೆ. ಅಟೋ, ಕಾರು, ಮಿನಿ ಲಗ್ಗೇಜ್ ಆಟೋ, ಟ್ರ್ಯಾಕ್ಟರ್.. ಹೀಗೆ ಸಿಕ್ಕ ಸಿಕ್ಕ ವಾಹನಗಳಲ್ಲಿ ರಾಜಧಾನಿ ಸೇರಿಸಿಕೊಂಡಿದ್ದಾರೆ.

    ಉತ್ತರ ಭಾರತ, ಈಶಾನ್ಯ ರಾಜ್ಯಗಳಿಂದ ಸಾವಿರಾರು ಮಂದಿ ರೈಲುಗಳ ಮೂಲಕ ಬೆಂಗಳೂರಿಗೆ ಧಾವಿಸಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಚಾರ ಅಂದ್ರೆ ಬೆಂಗಳೂರಿಗೆ ಇವರೆಲ್ಲಾ ಬರುವಾಗ ಯಾರಿಗೂ ಕೋವಿಡ್ ಟೆಸ್ಟ್ ನಡೆದಿಲ್ಲ. ರಸ್ತೆ ಬದಿಗಳಲ್ಲಿ ನಾಮ್ ಕೆ ವಾಸ್ತೆಗೆ ಎಂಬಂತೆ ಇದ್ದ ತಪಾಸಣಾ ಕೇಂದ್ರಗಳು ಕೂಡ ಬಂದ್ ಆಗಿವೆ. ಪೊಲೀಸರು ಕೂಡ ಕನಿಷ್ಠ ಪಕ್ಷ ವಾಹನ ತಪಾಸಣೆ ನಡೆಸಿಲ್ಲ. ಕೋವಿಡ್ ರಿಪೋರ್ಟ್ ಕೂಡ ಕೇಳ್ತಿಲ್ಲ. ಬಿಬಿಎಂಪಿಯವರು ಹಳ್ಳಿಗಳಿಂದ ಬಂದವರಿಗೆ ಕೋವಿಡ್ ಟೆಸ್ಟ್ ಮಾಡಿಲ್ಲ. ಹಳ್ಳಿಗಳಿಂದ ಬಂದವರು ಕ್ವಾರಂಟೇನ್ ಕೂಡ ಆಗ್ತಿಲ್ಲ. ಬದಲಾಗಿ ನೇರವಾಗಿ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ರಾಕೆಟ್ ವೇಗದಲ್ಲಿ ಹೇಗೆ ಸೋಂಕು ಇಳಿಯಿತೋ ಅದೇ ವೇಗದಲ್ಲಿ ಸೋಂಕು ಸ್ಫೋಟಗೊಳ್ಳುವ ಆತಂಕ ಎದುರಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ಸುದ್ದಿ ಬಿತ್ತರವಾಗುತ್ತಲೇ ಎಚ್ಚೆತ್ತ ಸಿಎಂ ಯಡಿಯೂರಪ್ಪ, ವಲಸೆ ಕಾರ್ಮಿಕರು, ಉದ್ಯೋಗಿಗಳಿಗೆ ಕಡ್ಡಾಯ ಕೋವಿಡ್ ಟೆಸ್ಟ್ ಮಾಡಿ ಎಂದು ಆರೋಗ್ಯ ಇಲಾಖೆಗೆ ಸೂಚನೆ ನೀಡಿದ್ದಾರೆ. ಸಚಿವ ಸುಧಾಕರ್ ಸಹ ಸೋಂಕು ಹೆಚ್ಚಾಗುವ ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ತುಂಬಾ ಜನರು ಬರುತ್ತಿದ್ದಾರೆ. ಟೆಸ್ಟಿಂಗ್ ಹೆಚ್ಚಳ ಮಾಡ್ತಿದ್ದೇವೆ.. ನಮ್ಮ ರಕ್ಷಣೆ ನಮ್ಮ ಕೈಯಲ್ಲಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ.

    ಸರ್ಕಾರ, ಬಿಬಿಎಂಪಿ ತಪ್ಪೇನು?
    ಪಾಸಿಟಿವಿಟಿ ಕಡಿಮೆ.. ಸ್ಥಿರತೆ ಸಾಧಿಸುವ ಮುನ್ನವೇ ಆತುರವಾಗಿ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಳ್ಳದೇ ಅನ್‍ಲಾಕ್ ಘೋಷಣೆ ಮಾಡಿರೋದು. ಬೆಂಗಳೂರಿಗೆ ಬರುವವರಿಗೆ ಟೆಸ್ಟ್ ರಿಪೋರ್ಟ್ ಕಡ್ಡಾಯ ಮಾಡಲಿಲ್ಲ. ಬೆಂಗಳೂರು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಚೆಕ್‍ಪೋಸ್ಟ್ ಹಾಕಲಿಲ್ಲ. ಬೆಂಗಳೂರಿಗೆ ಮರು ವಲಸೆ ಬರುವವರಿಗೆ ಯಾವುದೇ ನಿಯಮ ರೂಪಿಸಲಿಲ್ಲ. ತಜ್ಞರ ಸಲಹೆ ಕಡೆಗಣಿಸಿ ಅಂತರ್ ಜಿಲ್ಲೆ ಓಡಾಟಕ್ಕೆ ಅನುಮತಿ ನೀಡಿದ್ದರಿಂದ ವಲಸೆ ಹೆಚ್ಚಾಗಿದೆ. ಈ ಎಲ್ಲಾ ಕಾರಣಗಳಿಂದ ಮತ್ತೆ ರಾಜಧಾನಿಯಲ್ಲಿ ಸೋಂಕು ಸ್ಫೋಟ ಸಾಧ್ಯತೆಗಳಿವೆ. ಇದನ್ನೂ ಓದಿ: ಹತ್ತೊಂಬತ್ತು ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಸಡಿಲ – ಏನಿರುತ್ತೆ? ಏನಿರಲ್ಲ?

    ಸರ್ಕಾರ ಮುಂದಿರುವ ಆಯ್ಕೆಗಳೇನು?:
    * ಬೆಂಗಳೂರಲ್ಲಿ ಟೆಸ್ಟಿಂಗ್ ಹೆಚ್ಚಳ ಮಾಡಬೇಕು
    * ಪ್ರತ್ಯೇಕ ಟೀಂ ಮೂಲಕ ಟ್ರೇಸ್, ಟೆಸ್ಟ್, ಟ್ರೀಟ್ಮೆಂಟ್..!
    * ಮನೆ ಮನೆ ಆರೋಗ್ಯ ಸರ್ವೇ ನಡೆಸಬೇಕು
    * ವಾಹನ ಸಂಚಾರ ಹೆಚ್ಚಿರುವ ಕಡೆ ರ್ಯಾಂಡಮ್ ಟೆಸ್ಟ್
    * ಕೋವಿಡ್ ವ್ಯಾಕ್ಸಿನೇಷನ್‍ಗೆ ಹೆಚ್ಚು ಒತ್ತು ಕೊಡುವುದು

    ನಾಳೆಯಿಂದ ಬೆಂಗಳೂರು ಅನ್‍ಲಾಕ್ ಆಗ್ತಿದೆ. ಆದರೆ, ಅನ್‍ಲಾಕ್‍ಗೂ ಮುನ್ನವೇ ಜನರೇ ಅನ್‍ಲಾಕ್ ಮಾಡಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ಊರು ಸೇರಿದ್ದವರೆಲ್ಲ ಗಂಟುಮೂಟೆ, ಕುಟುಂಬ ಸಮೇತ ಮತ್ತೆ ಬೆಂಗಳೂರು ಗೂಡು ಸೇರುತ್ತಿದ್ದಾರೆ. ಇವತ್ತು ಇಡೀ ದಿನ ಬೆಂಗಳೂರು ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಿತ್ತು. ಬೆಂಗಳೂರಲ್ಲಿ ಕೊರೊನಾ ಪೀಕ್‍ಗೆ ಹೋದಾಗ ಜೀವ ಉಳಿದರೆ ಸಾಕು ಎಂದು ಊರುಗಳಿಗೆ ಹೋಗಿದ್ದ ಜನರು ಈಗ ಮತ್ತೆ ಜೀವ ಕಟ್ಟಿಕೊಳ್ಳಲು ಬೆಂಗಳೂರು ಸೇರುತ್ತಿದ್ದಾರೆ. ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಅನ್‍ಲಾಕ್‍ಗೂ ಮುನ್ನವೇ ಜನರು ಲಗೇಜ್ ಸಮೇತ ವಾಪಾಸಾಗುತ್ತಿದ್ದಾರೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ

    ಬೆಂಗಳೂರಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ಸೋಂಕು ಇಳಿದಿದೆ. ಇಳಿಯುತ್ತಿದೆ ಕೂಡ. ಹೆಲ್ತ್ ಬುಲೆಟಿನ್ ನೋಡಿದ್ರೆ ಇದು ಗೊತಾಗುತ್ತಲ್ವಾ ಅಂತಾ ನೀವು ಅಂದ್ಕೋಬಹುದು. ಆದ್ರೆ ಇದರ ಅಸಲಿಯತ್ತು ಬೇರೇನೆ ಇದೆ.. ರಾಜ್ಯದ ವಿವಿಧೆಡೆಗಳಿಂದ ಕಾರ್ಮಿಕರು ಬೆಂಗಳೂರಿಗೆ ಮತ್ತೆ ಬರ್ತಿರೋ ಬಗ್ಗೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಸಿಎಂ ಯಡಿಯೂರಪ್ಪ, ಅವರನ್ನು ಬರ್ಬೇಡಿ ಅಂತಾ ಹೇಳೋಕೆ ಆಗಲ್ಲ. ಕಂಪನಿಗಳಲ್ಲಿ ಕೋವಿಡ್ ಟೆಸ್ಟ್ ಮಾಡಿಸೋದಾಗಿ ಹೇಳಿದ್ರು. ಆದ್ರೆ ಕಳೆದ ಒಂದು ವಾರದಲ್ಲಿ ಬೆಂಗಳೂರಲ್ಲಿ ನಡೆದ ಕೋವಿಡ್ ಟೆಸ್ಟ್ ಗಳ ಸಂಖ್ಯೆ ಮೇಲೆ ಕಣ್ಣಾಡಿಸಿದ್ರೆ, ಸಿಎಂ ಮಾತು ಮಾತಾಗಿಯೇ ಉಳಿದಿದೆ ಅನ್ನೋದು ಗೊತ್ತಾಗುತ್ತೆ. ಕೋವಿಡ್ ಟೆಸ್ಟ್ ಹೆಚ್ಚಾಗುವ ಬದಲು ಕ್ರಮೇಣ ಇಳಿಕೆ ಆಗುತ್ತಾ ಬರುತ್ತಿದೆ. ಹೀಗಾಗಿಯೇ ಬೆಂಗಳೂರಲ್ಲಿ ಕಡಿಮೆ ಕೇಸ್ ಬರುತ್ತಿವೆಯಾ ಎಂಬ ಪ್ರಶ್ನೆ ಎದುರಾಗಿದೆ. ಜೊತೆಗೆ ಟೆಸ್ಟಿಂಗ್ ಕಳ್ಳಾಟ ಮುಂದುವರೆದಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಇದನ್ನೂ ಓದಿ: ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

  • ಹತ್ತೊಂಬತ್ತು ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಸಡಿಲ – ಏನಿರುತ್ತೆ? ಏನಿರಲ್ಲ?

    ಹತ್ತೊಂಬತ್ತು ಜಿಲ್ಲೆಗಳಲ್ಲಿ ನಾಳೆಯಿಂದ ಲಾಕ್ ಸಡಿಲ – ಏನಿರುತ್ತೆ? ಏನಿರಲ್ಲ?

    – ಮಧ್ಯಾಹ್ನ 2ರವರೆಗೂ ದಿನಸಿ ಮಾರಾಟ
    – 11 ಜಿಲ್ಲೆಗಳಲ್ಲಿ ಲಾಕ್‍ಡೌನ್ ಕಂಟಿನ್ಯೂ

    ಬೆಂಗಳೂರು: ಕರ್ನಾಟಕದಲ್ಲಿ ನಾಳೆಯಿಂದ ಹೊಸ ದುನಿಯಾ ಆರಂಭವಾಗುತ್ತಿದೆ. ಕಳೆದ 48 ದಿನದ ಲಾಕ್‍ಡೌನ್ ವನವಾಸಕ್ಕೆ ಬ್ರೇಕ್ ಬೀಳುತ್ತಿದೆ. ಕೊರೊನಾ ಕಂಟ್ರೋಲ್‍ಗಾಗಿ ಸರ್ಕಾರ ವಿಧಿಸಿದ್ದ ಟಫ್ ಲಾಕ್‍ಡೌನ್ 19 ಜಿಲ್ಲೆಗಳಲ್ಲಿ ನಾಳೆ ಬೆಳಗ್ಗೆ 6 ಗಂಟೆಗೆ ಅಂತ್ಯವಾಗಲಿದೆ. ಅನ್‍ಲಾಕ್ ಪ್ರಕ್ರಿಯೆ ಆರಂಭವಾಗಲಿದೆ.

    ಕೊರೊನಾ ಎರಡನೇ ಅಲೆ ತೀವ್ರಗೊಂಡಿದ್ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅನಿವಾರ್ಯವಾಗಿ ಮೊದಲ ಬಾರಿಗೆ ಏಪ್ರಿಲ್ 27ರಂದು ಇಡೀ ರಾಜ್ಯವನ್ನು 14 ದಿನ ಲಾಕ್‍ಡೌನ್ ಮಾಡಲಾಗಿತ್ತು. ನಂತರ ಇದು ಹಲವು ಬಾರಿ ವಿಸ್ತರಣೆ ಆಗಿತ್ತು. ಆದ್ರೆ ಈಗ ರಾಜ್ಯದ ಬಹುತೇಕ ಕಡೆ ಕೊರೋನಾ ಪಾಸಿಟಿವಿಟಿ ಪ್ರಮಾಣ ಕುಸಿದಿರುವ ಹಿನ್ನೆಲೆಯಲ್ಲಿ ಜೂನ್ 14ರಿಂದ ಅನ್‍ಲಾಕ್ ಪ್ರಕ್ರಿಯೆ ಶುರು ಮಾಡೋದಾಗಿ ತಿಳಿಸಿತ್ತು.

    ನಾಳೆಯಿಂದ ಒಂದು ವಾರದ ಮಟ್ಟಿಗೆ ಸೋಂಕು ಪ್ರಮಾಣ ಕಡಿಮೆ ಇರುವ 19 ಜಿಲ್ಲೆಗಳಲ್ಲಿ ಮೊದಲ ಹಂತದ ಅನ್‍ಲಾಕ್ ಶುರುವಾಗಲಿದೆ. ನಿರೀಕ್ಷಿತ ಪ್ರಮಾಣದಲ್ಲಿ ಸೋಂಕು ಇಳಿಯದ 11 ಜಿಲ್ಲೆಗಳಲ್ಲಿ ಈಗಿರುವ ಲಾಕ್‍ಡೌನ್ ನಿಯಮಗಳನ್ನೇ ಮುಂದುವರಿಸಲು ಸರ್ಕಾರ ತೀರ್ಮಾನಿಸಿದೆ. ಇದನ್ನೂ ಓದಿ: ನಾಳೆಯಿಂದ ಅನ್‍ಲಾಕ್ – ಗಂಟು, ಮೂಟೆ ಹೊತ್ತು ಕುಟುಂಬ ಸಮೇತ ಬೆಂಗಳೂರಿನತ್ತ ಜನ

    ಲಾಕ್ ಜಿಲ್ಲೆಗಳು:
    ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂ.ಗ್ರಾಮಾಂತರ, ಮಂಡ್ಯ, ಬೆಳಗಾವಿ, ಕೊಡಗು

    ಅನ್‍ಲಾಕ್ ಜಿಲ್ಲೆಗಳು:
    ಬೆಂಗಳೂರು, ರಾಮನಗರ, ಬಾಗಲಕೋಟೆ, ಚಿಕ್ಕಬಳ್ಳಾಪುರ, ಕೋಲಾರ, ವಿಜಯಪುರ, ಚಿತ್ರದುರ್ಗ, ರಾಯಚೂರು, ಹಾವೇರಿ, ಉಡುಪಿ, ಬಳ್ಳಾರಿ, ಧಾರವಾಡ, ಗದಗ, ಕೊಪ್ಪಳ ಬೀದರ್, ಕಲಬುರಗಿ, ಉತ್ತರ ಕನ್ನಡ, ಯಾದಗಿರಿ, ತುಮಕೂರು

    ನಾಳೆಯಿಂದ ಕರ್ನಾಟಕದ 19 ಜಿಲ್ಲೆಗಳು ಹಾಫ್ ಲಾಕ್‍ಡೌನ್ ಆಗಲಿದೆ. ಹಾಗಾದರೆ ಈ 19 ಜಿಲ್ಲೆಗಳಲ್ಲಿ ಏನೇನಕ್ಕೆ ಪರ್ಮಿಷನ್ ನೀಡಲಾಗಿದೆ..? ಯಾವುದಕ್ಕೆ ನಿರ್ಬಂಧ ಮುಂದುವರಿದಿದೆ..? ಮುಂದಿನ 1 ವಾರ ಏನಿರುತ್ತೆ..? ಏನಿರಲ್ಲ? ಇಲ್ಲಿದೆ ಮಾಹಿತಿ

    19 ಜಿಲ್ಲೆ ಹಾಫ್ ಲಾಕ್.. ನಾಳೆಯಿಂದ ಏನಿರುತ್ತೆ..?
    * ದಿನಸಿ, ಮಾಂಸ, ಹಣ್ಣು, ತರಕಾರಿ, ಮದ್ಯ ಮಾರಾಟ ಅವಧಿ ವಿಸ್ತರಣೆ
    * ಬೆಳಗ್ಗೆ 10 ಗಂಟೆ ಬದಲು ಮಧ್ಯಾಹ್ನ 2ರವರೆಗೆ ಮಾರಾಟಕ್ಕೆ ಅವಕಾಶ
    * ಬೀದಿಬದಿ ವ್ಯಾಪಾರ ವ್ಯಾಪಾರಕ್ಕೂ ಅವಕಾಶ
    * ಸಂಜೆಯವರೆಗೆ ತಳ್ಳುಗಾಡಿಗಳಲ್ಲಿ ಹಣ್ಣು, ತರಕಾರಿ ಮಾರಾಟಕ್ಕೆ ಅವಕಾಶ
    * ರೆಸ್ಟೋರೆಂಟ್, ಹೋಟೆಲ್‍ಗಳಲ್ಲಿ ಕೇವಲ ಪಾರ್ಸೆಲ್‍ಗಷ್ಟೇ ಅನುಮತಿ
    * ಅಂತರ್ ಜಿಲ್ಲೆ ಪ್ರಯಾಣಕ್ಕೆ ಅವಕಾಶ.. 19 ಜಿಲ್ಲೆಗಳಲ್ಲಿ ಮಾತ್ರ
    * ಆಟೋ, ಕಾರ್, ಟ್ಯಾಕ್ಸಿಗಳಲ್ಲಿ ಕೇವಲ ಇಬ್ಬರು ಪ್ರಯಾಣಿಸಲು ಅವಕಾಶ
    * ಬೆಳಗ್ಗೆ 5ರಿಂದ ಬೆಳಗ್ಗೆ 10 ಗಂಟೆವರೆಗೆ ಪಾರ್ಕ್ ಓಪನ್
    * ಪಾರ್ಕ್ ನಲ್ಲಿ ವಾಕಿಂಗ್, ಜಾಗಿಂಗ್‍ಗೆ ಅವಕಾಶ, ಬೆಂಚ್ ಮೇಲೆ ಕುಳಿತುಕೊಳ್ಳುವಂತಿಲ್ಲ
    * ಹಾಫ್ ಲಾಕ್ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ಕೈಗಾರಿಕೆಗಳನ್ನು ತೆರೆಯಬಹುದು
    * ಕೈಗಾರಿಕೆಗಳಲ್ಲಿ ಶೇ.50ರಷ್ಟು ಕಾರ್ಮಿಕರ ಹಾಜರಾತಿಗೆ ಅವಕಾಶ
    * ಗಾರ್ಮೆಂಟ್ಸ್‍ನಲ್ಲಿ ಶೇ.30ರಷ್ಟು ಸಿಬ್ಬಂದಿಯಿಂದ ಕೆಲಸ ಮಾಡಿಸಬಹುದು
    * ಎಲ್ಲ ರೀತಿಯ ಸಿವಿಲ್ ಕಟ್ಟಡ ಕಾಮಗಾರಿಗಳಿಗೆ ಅನುಮತಿ
    * ಸ್ಟೀಲ್, ಸಿಮೆಂಟ್, ಹಾರ್ಡ್‍ವೇರ್, ಎಲೆಕ್ಟ್ರಿಕಲ್ಸ್ ಶಾಪ್‍ಗೆ ಪರ್ಮಿಷನ್
    * ಮದುವೆಯಲ್ಲಿ 20 ಮಂದಿ ಬದಲು 40 ಮಂದಿವರೆಗೂ ಪಾಲ್ಗೊಳ್ಳಬಹುದು

    19 ಜಿಲ್ಲೆ ಹಾಫ್ ಲಾಕ್.. ನಾಳೆಯಿಂದ ಏನಿರಲ್ಲ..?
    * ಬೆಂಗಳೂರಲ್ಲಿ ಬಿಎಂಟಿಸಿ, ಮೆಟ್ರೋ ರೈಲು ಸಂಚರಿಸಲ್ಲ
    * ಜಿಲ್ಲೆಗಳಲ್ಲಿ ಕೆಎಸ್‍ಆರ್‍ಟಿಸಿ, ಖಾಸಗಿ ಬಸ್‍ಗಳ ಓಡಾಟ ಇಲ್ಲ
    * ಚಿನ್ನಾಭರಣ, ಬಟ್ಟೆ, ಪುಸ್ತಕದ ಅಂಗಡಿ ತೆರೆಯುವಂತಿಲ್ಲ
    * ಮೊಬೈಲ್, ಚಪ್ಪಲಿ, ಪಾತ್ರೆ ಅಂಗಡಿಗಳು ತೆರೆಯುವಂತಿಲ್ಲ
    * ಥಿಯೇಟರ್, ಮಾಲ್, ಈಜುಕೊಳ, ಜಿಮ್ ಬಂದ್
    * ದೇವಸ್ಥಾನ, ಮಸೀದಿ, ಚರ್ಚ್‍ಗಳಲ್ಲಿ ಭಕ್ತರಿಗೆ ನಿಷಿದ್ಧ
    * ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನಿರ್ಬಂಧ

    ಮುಂದಿನ ಒಂದು ವಾರ?
    ನಾಳೆಯಿಂದ ರಾಜ್ಯಾದ್ಯಂತ ಸಂಜೆಯಿಂದ ನೈಟ್ ಕರ್ಫ್ಯೂ  ಜಾರಿಗೆ ಬರಲಿದೆ. ಪ್ರತಿ ದಿನ ಸಂಜೆ 7ರಿಂದ ಬೆಳಗಿನ ಜಾವ 5 ಗಂಟೆವರೆಗೆ ನೈಟ್‍ಕರ್ಫ್ಯೂ  ಜಾರಿಗೆ ಬರುತ್ತೆ. ವೀಕೆಂಡ್ ಕರ್ಫ್ಯೂ  – ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಗ್ಗೆ 5 ಗಂಟೆಗೆ ಬಂದ್ ಆಗಿರುತ್ತದೆ. ಆದರೆ, ಶನಿವಾರ, ಭಾನುವಾರವೂ ಮ.2ರವರೆಗೂ ವ್ಯಾಪಾರ ವಹಿವಾಟು ನಡೆಸಲು ಅನುಮತಿ ನೀಡಲಾಗಿದೆ. ಇದನ್ನೂ ಓದಿ: ಶಿವಮೊಗ್ಗ ಜಿಲ್ಲೆಯಲ್ಲಿ ಜೂ.21 ರವರೆಗೆ ಲಾಕ್‍ಡೌನ್ ಮುಂದುವರಿಕೆ: ಸಚಿವ ಕೆ.ಎಸ್.ಈಶ್ವರಪ್ಪ

  • 11 ಜಿಲ್ಲೆಗಳು ಲಾಕ್ – ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್

    11 ಜಿಲ್ಲೆಗಳು ಲಾಕ್ – ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್

    – ಅನ್‍ಲಾಕ್ ಜಿಲ್ಲೆಗಳಲ್ಲಿ ಷರತ್ತುಗಳು ಅನ್ವಯ

    ಬೆಂಗಳೂರು: ಕೊರೊನಾ ಸೋಂಕು ಪ್ರಮಾಣ ಕಡಿಮೆ ಇರುವ 19 ಜಿಲ್ಲೆಗಳನ್ನು ಅನ್‍ಲಾಕ್ ಮಾಡಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಅನ್‍ಲಾಕ್ ಆಗಿರುವ ಜಿಲ್ಲೆಗಳಲ್ಲಿ ನೈಟ್ ಕರ್ಫ್ಯೂ ಜೊತೆಯಲ್ಲಿ ವೀಕೆಂಡ್ ಲಾಕ್‍ಡೌನ್ ಇರಲಿದೆ.

    11 ಜಿಲ್ಲೆಗಳು ಲಾಕ್: ರಾಜ್ಯದಲ್ಲಿ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಮೈಸೂರು, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ, ಮಂಡ್ಯ ಬೆಳಗಾವಿ ಹಾಗೂ ಕೊಡಗು ಜಿಲ್ಲೆಗಳಿಗೆ ಅನ್ವಯವಾಗುವಂತೆ ಈಗಿರುವ ಮಾರ್ಗಸೂಚಿಗಳಲ್ಲಿ ಯಾವುದೇ ರೀತಿಯ ಬದಲಾವಣೆ ಇರುವುದಿಲ್ಲ. ಈ ಜಿಲ್ಲೆಗಳಲ್ಲಿ ಯಥಾಸ್ಥಿತಿ ಮುಂದುವರೆಯುತ್ತದೆ.

    ಅನ್‍ಲಾಕ್ ಜಿಲ್ಲೆಗಳಲ್ಲಿ ಏನು ಸಡಿಲಿಕೆ:
    ಉಳಿದ ಎಲ್ಲಾ ಜಿಲ್ಲೆಗಳಲ್ಲಿ ಈಗಾಗಲೇ ಸರ್ಕಾರವು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ಈ ಕೆಳಕಂಡ ಸಡಿಲಿಕೆಗಳೊಂದಿಗೆ ದಿನಾಂಕ: 14-06-2021 ರ ಬೆಳಿಗ್ಗೆ 6 ಗಂಟೆಯಿಂದ ದಿನಾಂಕ: 21-06-2021 ಬೆಳಿಗ್ಗೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

    1. ಎಲ್ಲಾ ಕಾರ್ಖಾನೆಗಳನ್ನು ಶೇ. 50 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ. ಆದರೆ, ಗಾರ್ಮೆಂಟ್ ಇಂಡಸ್ಟ್ರೀಗಳು ಶೇ. 30 ರಷ್ಟು ಸಿಬ್ಬಂದಿಯ ಹಾಜರಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿಸಿದೆ.
    2. ಎಲ್ಲಾ ಅಗತ್ಯ ಅಂಗಡಿಗಳನ್ನು ಈಗಿರುವ ಸಮಯ ಬೆಳಿಗ್ಗೆ 6 ರಿಂದ 10 ಗಂಟೆಯನ್ನು ವಿಸ್ತರಿಸಿ ಮಧ್ಯಾಹ್ನ 2 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
    3. ಎಲ್ಲಾ ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಲು ಅನುಮತಿಸಲಾಗಿದೆ. ಹಾಗೂ ನಿಮಾಣ ಚಟುವಟಿಕೆ ಸಂಬಂದಿಸಿದ ಅಂಗಡಿಗಳನ್ನು ವಿಶೇಷವಾಗಿ ಸಿಮೆಂಟ್ ಹಾಗೂ ಸ್ಟೀಲ್ ತೆರೆಯಲು ಅವಕಾಶ ನಿಡಲಾಗಿದೆ.
    4. ಪಾರ್ಕ್ ಗಳನ್ನು ಬೆಳಿಗ್ಗೆ 5 ರಿಂದ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ.
    5. ಬೀದಿ ಬದಿ ವ್ಯಾಪಾರಿಗಳು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ.
    6. ಆಟೋ ಮತ್ತು ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಅವಕಾಶ ನೀಡಲಾಗಿದೆ.
    7. ಕೋವಿಡ್ ಕರ್ಫ್ಯೂ ರಾತ್ರಿ 7 ಗಂಟೆಯಿಂದ ಬೆಳಿಗ್ಗ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
    8. ವಾರಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

  • ಮತ್ತೆ ಲಾಕ್ ಆಗುತ್ತಾ ಬೆಂಗಳೂರು? – ಇಂದು ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ಚರ್ಚೆ

    ಮತ್ತೆ ಲಾಕ್ ಆಗುತ್ತಾ ಬೆಂಗಳೂರು? – ಇಂದು ಕ್ಯಾಬಿನೆಟ್ ಸಭೆಯಲ್ಲಿ ಮಹತ್ವದ ಚರ್ಚೆ

    ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಮಾಡಿದ್ದ ವೀಕೆಂಡ್ ಲಾಕ್‍ಡೌನ್ ಇಂದು ಬೆಳಗ್ಗೆ 6 ಗಂಟೆಗೆ ಅಂತ್ಯವಾಗಿದೆ. ಬೆಳಗ್ಗೆ 6ರಿಂದ ಯಥಾಸ್ಥಿತಿಗೆ ಅಂದ್ರೆ ಹಾಫ್ ಲಾಕ್‍ಡೌನ್‍ಗೆ ರಾಜ್ಯ ಮರಳಿದೆ. ರಾಜ್ಯಾದ್ಯಂತ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಸಂಚಾರ, ಮೆಟ್ರೋ ಸಂಚಾರ ಎಂದಿನಂತೆ ಆರಂಭಗೊಂಡಿದೆ.

    ಕೊರೋನಾ ಸೋಂಕಿನ ಚೈನ್ ಲಿಂಕ್ ಕಟ್ ಮಾಡಲು ಕೇವಲ ವೀಕೆಂಡ್ ಅಲ್ಲ, ವಾರ ಪೂರ್ತಿ ಲಾಕ್‍ಡೌನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆಯಲಿದೆ. ಈ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ಅದರ ಹಿಂದಿನ ಎರಡು ದಿನ ಜಾರಿಯಾಗಿದ್ದ ಹಾಫ್ ಲಾಕ್‍ಡೌನ್‍ನಿಂದ ಆಗಿರುವ ಲಾಭ ನಷ್ಟಗಳೇನು ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ದೆಹಲಿ ಮಾದರಿಯಲ್ಲಿ ಲಾಕ್‍ಡೌನ್ ಮಾಡಲಾಗುತ್ತಾ ಎಂಬ ಚರ್ಚೆಗಳು ನಡೆದಿವೆ.

    ಕ್ಯಾಬಿನೆಟ್‍ನಲ್ಲಿ ಏನಾಗಬಹುದು?
    ಕಳೆದ 4 ದಿನಗಳಿಂದ ಚೈನ್ ಲಿಂಕ್ ಕಟ್ ಆಗಿದ್ಯಾ? ಇಲ್ವಾ ಎಂಬ ವರದಿ ಪರಿಶೀಲನೆ ನಡೆಸಲಾಗುತ್ತದೆ. ವಾರಾಂತ್ಯದ ಕರ್ಫ್ಯೂನಲ್ಲೇ ಚೈನ್‍ಲಿಂಕ್ ಕಟ್ಟಾಗ್ತಿದೆ ಎಂದಿದ್ರೆ ಈಗಿನ ರೂಲ್ಸ್ ಮುಂದುವರಿಕೆಯಾಗುವ ಸಾಧ್ಯತೆಗಳಿವೆ. ವಾರಾಂತ್ಯದ ಕರ್ಫ್ಯೂ ಜೊತೆ ಇಡೀ ವಾರ ಲಾಕ್‍ಡೌನ್ ಬೇಕು ಎಂದರೇ, ಅದರ ಮೇಲೆ ಚರ್ಚೆ ನಡೆಯಬಹುದು.

    ಲಾಕ್ ಅನಿವಾರ್ಯ ಎಂದಾದರೇ ಮಂಗಳವಾರದಿಂದ 10ರಿಂದ 12 ದಿನಗಳ ಕಾಲ ಬಿಗಿ ಕ್ರಮಕ್ಕೆ ಮುಂದಾಗಬಹುದು. ‘ಲಾಕ್’ಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕರೆ ವೀಕೆಂಡ್ ಕರ್ಫ್ಯೂ ಮಾದರಿ ರೂಲ್ಸ್ ಮುಂದುವರಿಕೆ ಮಾಡಿ ಅಗತ್ಯ ವಸ್ತುಗಳ ಖರೀದಿಗೆ ವೀಕೆಂಡ್‍ನಂತೆಯೇ ಬೆಳಗ್ಗೆ 6ರಿಂದ 10ರ ಸಮಯ ನಿಗದಿಯಾಗುವ ಸಾಧ್ಯತೆಗಳಿವೆ.

    ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಓಡಾಟಕ್ಕೂ ನಿರ್ಬಂಧ ಹಾಕಬಹುದು. ಬೆಂಗಳೂರು ಸೋಂಕು ಗ್ರಾಮೀಣ ಭಾಗಕ್ಕೆ ಹಬ್ಬುವುದನ್ನು ತಡೆಯಲು ಈ ನಿರ್ಬಂಧ ಸಾಧ್ಯತೆ ಇದೆ.18 ವರ್ಷ ಮೇಲ್ಪಟ್ಟ ಸರ್ವರಿಗೂ ಫ್ರೀ ವ್ಯಾಕ್ಸಿನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

    ಸಚಿವರು ಹೇಳಿದ್ದೇನು?: ರಾಜ್ಯದಲ್ಲಿ ವೀಕೆಂಡ್ ಮಾತ್ರವಲ್ಲ. ಉಳಿದ ದಿನಗಳಲ್ಲಿಯೂ ಕರ್ಫ್ಯೂ ಹೇರಿಕೆ ಬಗ್ಗೆ ಚರ್ಚೆ ನಡೆದಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ಹಿರಿಯ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮೇ 4ರವರೆಗೆ ಕಠಿಣ ನಿಯಮ ಇರಲಿದೆ. ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ ಎಂದಿದ್ದಾರೆ.

    ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ, ವಾರಪೂರ್ತಿ ವೀಕೆಂಡ್ ಮಾದರಿಯ ಕರ್ಫ್ಯೂ ಮುಂದುವರೆಸುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಸಿಎಂ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಯಾವುದೇ ಊಹಾಪೋಹ ಬೇಡ. ಸದ್ಯಕ್ಕೆ ಈಗಿರುವ ಮಾರ್ಗಸೂಚಿಗಳೇ ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ನಂಗೇನು ಗೊತ್ತಿಲ್ಲ.ಟ ವಾರಪೂರ್ತಿ ಕರ್ಫ್ಯೂ ವಿಧಿಸೋದನ್ನು ಅಥ್ವಾ ಬಿಡೋದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಕೇಂದ್ರ ಮಂತ್ರಿ ಡಿವಿ ಸದಾನಂದಗೌಡ ತಿಳಿಸಿದ್ದಾರೆ.