Tag: Weekend Curfew

  • ಉಡುಪಿಯ ವಾರಾಂತ್ಯ ಕರ್ಫ್ಯೂ ಬಗ್ಗೆ ಸಿಎಂ ಪುನರ್ ಪರಿಶೀಲಿಸಲಿ- ಸಚಿವ ಕೋಟ

    ಉಡುಪಿಯ ವಾರಾಂತ್ಯ ಕರ್ಫ್ಯೂ ಬಗ್ಗೆ ಸಿಎಂ ಪುನರ್ ಪರಿಶೀಲಿಸಲಿ- ಸಚಿವ ಕೋಟ

    ಉಡುಪಿ: ಈ ವಾರಾಂತ್ಯದಿಂದ ಉಡುಪಿ ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರ ಪುನರ್ ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿಗಳು ಮತ್ತು ಆರೋಗ್ಯ ಸಚಿವರಿಗೆ ಕೋಟ ಶ್ರೀನಿವಾಸ್ ಪೂಜಾರಿ ವಿನಂತಿಸಿದ್ದಾರೆ.

    ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕುಂದಾಪುರದಲ್ಲಿ ಮಾಧ್ಯಮಗಳು ಮಾತನಾಡಿದರು. ಕೊರೊನಾ ಪಾಸಿಟಿವ್ ರೇಟ್ ಗಮನಿಸಿ ವೀಕೆಂಡ್ ಕರ್ಫ್ಯೂ ವಿಧಿಸಲಾಗಿದೆ. ಉನ್ನತ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ಮಾಡಿ ಪರಿಹಾರ ಕಂಡುಕೊಳ್ಳುತ್ತೇವೆ ಜನಸಾಮಾನ್ಯರಿಗೆ ಇದರಿಂದ ಸಮಸ್ಯೆಯಾಗುತ್ತದೆ ಎನ್ನುವುದು ಸತ್ಯ ಎಂದರು. ಇದನ್ನೂ ಓದಿ: ಘೋಲ್ ಮೀನು ಹಿಡಿದು ಒಂದೇ ದಿನದಲ್ಲಿ ಕೋಟ್ಯಧಿಪತಿಯಾದ ಮೀನುಗಾರ

    ಪಾಸಿಟಿವಿಟಿ ರೇಟ್ ಕಡಿಮೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆರೋಗ್ಯ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳ ಜೊತೆ ಈ ಬಗ್ಗೆ ಚರ್ಚಿಸುತ್ತೇನೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ. ಕಡ್ಡಾಯವಾಗಿ ಅನುಸರಿಸಬೇಕು. ಶಾಲೆಗಳು ಪ್ರಾರಂಭವಾಗುತ್ತಿದ್ದು ಮಕ್ಕಳು ಪೋಷಕರಲ್ಲಿ ಕೊರೊನಾ ಜಾಗೃತಿ ಮೂಡಿಸಬೇಕು. ಶಾಲೆಗಳಲ್ಲೂ ಕೂಡ ಅಂತರವನ್ನು ಕಾಪಾಡಿಕೊಂಡು ಸಾಂಕ್ರಾಮಿಕ ರೋಗವನ್ನು ಹಬ್ಬಲು ಬಿಡಬಾರದು ಎಂದು ಸಚಿವ ಕೋಟ ಹೇಳಿದರು. ಇದನ್ನೂ ಓದಿ: ನಾನು ಜನರ ಬಳಿಗೆ ಹೋಗಿ ಕೆಲಸ ಮಾಡುವೆ-ಶಾಲೆ ಭೇಟಿ ಮೂಲಕ ಉಡುಪಿ ಡಿಸಿ ಅಧಿಕಾರ ಸ್ವೀಕಾ

  • ಸೆ. 6ರಿಂದ 6 ರಿಂದ 8ನೇ ತರಗತಿ ಆರಂಭ – ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಕೆ

    ಸೆ. 6ರಿಂದ 6 ರಿಂದ 8ನೇ ತರಗತಿ ಆರಂಭ – ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಕೆ

    ಬೆಂಗಳೂರು: ಶೇ.2ಕ್ಕಿಂತ ಕಡಿಮೆ ಕೊರೊನಾ ಪಾಸಿಟಿವಿಟಿ ದರ ಕಡಿಮೆ ಇರುವ ತಾಲೂಕುಗಳಲ್ಲಿ ಸೆಪ್ಟೆಂಬರ್ 6ರಿಂದ 6 ರಿಂದ 2ನೇ ತರಗತಿ ಆರಂಭಿಸಲು ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ತರಗತಿ ದಿನ ಬಿಟ್ಟು ದಿನ ತರಗತಿಗಳು ನಡೆಯಲಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದರು. ಸೋಮವಾರದಿಂದ ಶುಕ್ರವಾರದವರೆಗೆ ಶಾಲೆ ನಡೆಯಲಿದ್ದು, ಶನಿವಾರ ಮತ್ತು ಭಾನುವಾರ ಶಾಲೆಗಳ ಸ್ಯಾನಿಟೈಸಿಂಗ್ ಕೆಲಸ ಮಾಡಲಾಗುವುದು.

    ಕೇರಳದಲ್ಲಿ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಅಲ್ಲಿಂದ ಬರುವ ಜನರಿಗೆ ಏಳು ದಿನ ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್. ಏಳು ದಿನಗಳ ಬಳಿಕ ಕೋವಿಡ್ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಕೇರಳ ಗಡಿಯಲ್ಲಿರುವ ದಕ್ಷಿಣ ಕನ್ನಡ, ಕೊಡಗಿನಲ್ಲಿ ನಿರ್ಬಂಧ ಮುಂದುವರಿಯಲಿದೆ. ಉಡುಪಿ, ಚಿಕ್ಕಮಗಳೂರು, ಮೈಸೂರು, ಹಾಸನ, ಕೋಲಾರ, ಕಲಬುರಗಿಗಳಲ್ಲಿ ಕೋವಿಡ್ ಸೋಂಕು ಹರಡುವಿಕೆ ಪ್ರಮಾಣ ಶೇ.1.5ಕ್ಕಿಂತ ಕಡಿಮೆ ಇರುವ ಕಾರಣ ವೀಕೆಂಡ್ ಕರ್ಫ್ಯೂ ತೆರವುಗೊಳಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ವೀಕೆಂಡ್ ಕರ್ಫ್ಯೂ  ಮುಂದುವರಿಯಲಿದೆ.

    ಮದುವೆ ಸಮಾರಂಭಕ್ಕೆ ಶೇ. 50 ರಷ್ಟು ಅನುಮತಿ ನೀಡಲಾಗಿದೆ. ಕಲ್ಯಾಣ ಮಂಟಪಗಳಲ್ಲಿ ಗರಿಷ್ಠ 400 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಈ ಸಂಬಂಧ ಕಲ್ಯಾಣ ಮಂಟಪಗಳ ಮಾಲೀಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ. ಇದನ್ನೂ ಓದಿ: ಭಾರತದಲ್ಲಿರೋದು ಬ್ರಿಟಿಷರ ಗುಲಾಮಗಿರಿ ಎಜುಕೇಶನ್ ಸಿಸ್ಟಮ್: ರಿಷಬ್ ಶೆಟ್ಟಿ ಆಕ್ರೋಶ

    2,912 ಗ್ರಾಮ ಪಂಚಾಯತಿ ಗಳಲ್ಲಿ ಪಾಸಿಟಿವ್ ದರ ಶೂನ್ಯವಿದೆ. 6,472 ಮಕ್ಕಳ ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, ಇದರಲ್ಲಿ 14 ಮಕ್ಕಳಿಗೆ ಮಾತ್ರ ಪಾಸಿಟಿವ್ ಬಂದಿದೆ. ಗಣೇಶ ಹಬ್ಬಕ್ಕೂ ಮುನ್ನವೇ ಆರರಿಂದ ಎಂಟನೇ ತರಗತಿಗಳು ಶೇ.50ರಷ್ಟು ಸಾಮರ್ಥ್ಯದೊಂದಿಗೆ ಆರಂಭಿಸಲಾಗುತ್ತದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದರು.

  • ವೀಕೆಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

    ವೀಕೆಂಡ್ ಕರ್ಫ್ಯೂ – ಕೊಡಗಿನಲ್ಲಿ ಉತ್ತಮ ಸ್ಪಂದನೆ, ಬೀದರ್ ನಲ್ಲಿ ಡೋಂಟ್ ಕೇರ್

    ಬೀದರ್/ಕೊಡಗು: ವೀಕೆಂಡ್ ಕರ್ಫ್ಯೂಗೆ ಕೊಡಗಿನಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಆದ್ರೆ ಬೀದರ್ ನಗರದಲ್ಲಿ ಎಂದಿನಂತೆ ಜನಸಂಚಾರವಿದೆ.

    ಬಿದರ್ ನಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದ್ದರೂ ವಾಹನ ಸವಾರರು ಮಾತ್ರ ಡೊಂಟ್ ಕೇರ್ ಮಾಸ್ಟರ್ ರೀತಿ ವರ್ತನೆ ಮಾಡುತ್ತಿದ್ದಾರೆ. ಅನಾವಶ್ಯಕವಾಗಿ ಹೊರ ಬಂದಿರುವ ಜನರು ಕೋವಿಡ್ ನಿಯಮಗಳ ಉಲ್ಲಂಘನೆ ಮಾಡುತ್ತಿದ್ದಾರೆ. ಮಾಸ್ಕ್ ಹಾಕದೇ ಗುಂಪು ಗುಂಪಾಗಿ ನಿಂತು ಮಾತನಾಡುತ್ತಿರುವ ದೃಶ್ಯಗಳು ಬೀದರ್ ನಲ್ಲಿ ಕಂಡು ಬರುತ್ತಿವೆ.

    ಕೊಡಗಿನಲ್ಲಿ ಉತ್ತಮ ಸ್ಪಂದನೆ: ಪಕ್ಕದ ದೇವರನಾಡು ಕೇರಳದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿಯೂ ದಿನೇ ದಿನೇ ಕೊರೊನಾ ಮೂರನೇ ಅಲೆಯ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಕೊರೊನಾ ಮಹಾಮಾರಿಗೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಕೊಡಗು ಸೇರಿದಂತೆ ರಾಜ್ಯ ಎಂಟು ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂಗೆ ಉತ್ತಮ ರೀತಿಯಲ್ಲಿ ಈ ವಾರವು ಸ್ಪಂದನೆ ದೊರೆತಿದೆ.

    ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರಸ್ತೆಗಳು ಬೀಕೋ ಎನ್ನುತ್ತಿದೆ. ಅಗತ್ಯ ವಸ್ತುಗಳ ಖರೀದಿಸಲು ಬೆರಳೆಣಿಕೆಯಷ್ಟು ಮಾತ್ರ ಜನ ಕಂಡು ಬರುತ್ತಿದ್ದಾರೆ. ಅದರೆ ವಾರಾಂತ್ಯ ಕರ್ಫ್ಯೂ ಮಾಡಿರುವುದು ಅವ್ಯಜ್ಞಾನಿಕವಾಗಿದೆ ಎಂದು ಪ್ರವಾಸೋದ್ಯಮ ಅವಲಂಬಿಸಿಕೊಂಡು ಬದುಕು ನಡೆಸುತ್ತಿರುವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಕೇರಳದಿಂದ ಅಸ್ಸಾಂ ಕೂಲಿ ಕಾರ್ಮಿಕರು ಜಿಲ್ಲೆಗೆ ಅಗಮಿಸುತ್ತಿದ್ದಾರೆ. ಯಾವುದೇ ಕೋವಿಡ್ ನಿಯಮಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಎಂದಿನಂತೆ ಇರುವ ದೃಶ್ಯಗಳು ಮಡಿಕೇರಿ ನಗರದ ಬಸ್ ನಿಲ್ದಾಣದಲ್ಲಿ ಕಂಡು ಬರುತ್ತಿದೆ. ಇದನ್ನೂ ಓದಿ: ಬೆಲೆ ಏರಿಕೆ ವಿರುದ್ಧ ಅಸಮಾಧಾನ – ಖಾಲಿ ಸಿಲಿಂಡರ್ ಪ್ರದರ್ಶನ

    ರಾತ್ರಿ ಯಾವುದೇ ಕೊರೊನಾ ಪರೀಕ್ಷೆ ವರದಿ ಇಲ್ಲದೇ ಜಿಲ್ಲೆಯ ವಿರಾಜಪೇಟೆ ತಾಲೂಕಿನ ಮಾಕುಟ್ಟ ಚೆಕ್ ಪೋಸ್ಟ್ ಮೂಲಕ ಅಸ್ಸಾಂದ ಕಾರ್ಮಿಕರು ಕೊಡಗಿಗೆ ಬಂದಿದ್ದಾರೆ. ಇದೀಗ ಮಡಿಕೇರಿ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿರುವ ಕಾರ್ಮಿಕರು ಗೋಣಿಕೊಪ್ಪಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಇದನ್ನೂ ಓದಿ: ನಮ್ಮ ಸೈನಿಕರ ಮೇಲೆ ದಾಳಿಯಾದ ಮರು ಕ್ಷಣವೇ ಪ್ರತಿದಾಳಿ – ಅಮೆರಿಕ ಅಧ್ಯಕ್ಷ ಬೈಡನ್ ಎಚ್ಚರಿಕೆ

  • ಚಾಮರಾಜನಗರದಲ್ಲಿ ಆ.30ರವರೆಗೆ ವೀಕೆಂಡ್ ಕರ್ಫ್ಯೂ ವಿಸ್ತರಣೆ – ಡಿಸಿ ಆದೇಶ

    ಚಾಮರಾಜನಗರದಲ್ಲಿ ಆ.30ರವರೆಗೆ ವೀಕೆಂಡ್ ಕರ್ಫ್ಯೂ ವಿಸ್ತರಣೆ – ಡಿಸಿ ಆದೇಶ

    ಚಾಮರಾಜನಗರ: ನೆರೆಯ ಕೇರಳ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಕಡಿಮೆಯಾಗದ ಹಿನ್ನೆಲೆಯಲ್ಲಿ, ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಆಗಸ್ಟ್ 30ರ ಬೆಳಗ್ಗೆ 6 ಗಂಟೆ ತನಕ ವೀಕೆಂಡ್ ಕರ್ಫ್ಯೂ ಸೇರಿದಂತೆ ಕೆಲವು ಹೆಚ್ಚುವರಿ ನಿರ್ಬಂಧಗಳನ್ನು ವಿಧಿಸಲಾಗಿದೆ.

    ದೈನಂದಿನ ಬಳಕೆಗೆ ಅಗತ್ಯ ಇರುವ ಕೆಲವು ಚಟುವಟಿಕೆ ಹಾಗೂ ವೈದ್ಯಕೀಯ ಸೇವೆಗಳನ್ನು ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಥಿಯೇಟರ್, ಸಿನಿಮಾ ಹಾಲ್, ಪಬ್ ಗಳಿಗೆ ಅವಕಾಶ ಇರುವುದಿಲ್ಲ. ತರಬೇತಿ ಉದ್ದೇಶ ಹೊರತುಪಡಿಸಿ ಸ್ವಿಮ್ಮಿಂಗ್ ಪೂಲ್ ಗಳಿಗೂ ಸಹ ನಿರ್ಬಂಧ ಹೇರಲಾಗಿದೆ. ಸಾಮಾಜಿಕ, ಸಾಂಸ್ಕೃತಿಕ, ಮನರಂಜನೆ, ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಮದುವೆಗಳಿಗೆ ನೂರು ಜನರು ಹಾಗೂ ಅಂತ್ಯಕ್ರಿಯೆಗೆ 20 ಜನರು ಮಾತ್ರ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ಡಾ.ಜಿ ಪರಮೇಶ್ವರ್ ಮುಂದಿನ ಮುಖ್ಯಮಂತ್ರಿಯಾಗಬೇಕು: ಜೆಡಿಎಸ್ ಶಾಸಕ

    ಜಿಲ್ಲೆಯ ಮಲೈ ಮಹದೇಶ್ವರ ಬೆಟ್ಟ, ಮುಜರಾಯಿ ಇಲಾಖೆ ಹಾಗೂ ಖಾಸಗಿ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ದರ್ಶನಕ್ಕೆ ಅವಕಾಶ ಇರಲಿದೆ. ಎಲ್ಲಾ ರೀತಿಯ ಉತ್ಸವ, ಸೇವೆ, ತೀರ್ಥ ಪ್ರಸಾದ, ದಾಸೋಹ, ಮುಡಿ-ಸೇವೆಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶನಿವಾರ ಮತ್ತು ಭಾನುವಾರ ಅರ್ಚಕರಿಂದ ಸಾಂಪ್ರದಾಯಿಕ ಪೂಜೆಗೆ ಅವಕಾಶ ನೀಡಲಾಗಿದ್ದು, ಭಕ್ತರ ಪ್ರವೇಶ ನಿಷೇಧಿಸಲಾಗಿದೆ. ಇದನ್ನೂ ಓದಿ: ಕೇಂದ್ರ ಸಚಿವ ಖೂಬಾಗೆ ಗನ್ ಸ್ವಾಗತ

    ಶನಿವಾರ ಭಾನುವಾರ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಾದ ಭರಚುಕ್ಕಿ ಜಲಪಾತ, ಹೊಗೇನಕಲ್ ಜಲಪಾತಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದೆ. ಬಂಡೀಪುರ ಹಾಗೂ ಬಿ.ಆರ್ .ಟಿ ಹುಲಿರಕ್ಷಿತಾರಣ್ಯಗಳಲ್ಲಿ ವಾರಾಂತ್ಯದಲ್ಲಿ ಸಫಾರಿ ನಿಷೇಧಿಸಲಾಗಿದೆ. ರೆಸಾರ್ಟ್, ಲಾಡ್ಜ್, ಹೋಂಸ್ಟೇ, ಅರಣ್ಯ ವಸತಿಗೃಹಗಳಲ್ಲಿ ತಂಗುವವರು, ಸಫಾರಿಗೆ ತೆರಳುವವರು 72 ಗಂಟೆಯೊಳಗೆ ಮಾಡಿಸಿರುವ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ಪ್ರಮಾಣ ಪತ್ರ ಹೊಂದಿರಬೇಕು.

    ಕೇರಳ ಹಾಗೂ ತಮಿಳುನಾಡಿನಿಂದ ಬರುವವರು ಸಹ ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿದ್ದರೂ 72 ಗಂಟೆಯೊಳಗಿನ ಆರ್.ಟಿ.ಪಿ.ಸಿ.ಆರ್ ನೆಗೆಟಿವ್ ವರದಿ ಇದ್ದರೆ ಮಾತ್ರ ಪ್ರವೇಶಾವಕಾಶ ಇರಲಿದೆ. ಸರ್ಕಾರಿ ಇಲಾಖೆಗಳಿಗೆ ಸಂಬಂಧಿಸಿದಂತೆ ಶಂಕುಸ್ಥಾಪನೆ, ಉದ್ಘಾಟನೆ, ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಗಿದೆ.

  • ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ ಜಾರಿಯಾಗುತ್ತಾ?

    ಕೊರೊನಾ ನಿಯಂತ್ರಣಕ್ಕೆ ರಾಜ್ಯದಲ್ಲಿ ಮತ್ತೆ ಟಫ್ ರೂಲ್ಸ್ ಜಾರಿಯಾಗುತ್ತಾ?

    ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 3ನೇ ಅಲೆಯ ಆತಂಕ ದಟ್ಟವಾಗ್ತಿದೆ. ಯಾವುದೇ ಕ್ಷಣದಲ್ಲಿ ಅಪ್ಪಳಿಸಬಹುದು ಎಂಬ ಭಯ ಎಲ್ಲರನ್ನು ಕಾಡ್ತಿದೆ. ಇದರ ಬೆನ್ನಲ್ಲೇ ಎಚ್ಚೆತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ, ನಾಳೆ ಸಂಜೆ ಕೋವಿಡ್ ತಜ್ಞರ ಸಭೆ ಕರೆದಿದ್ದಾರೆ. ಬೆಂಗಳೂರು ಸೇರಿ ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಆಗಸ್ಟ್ 16ರಿಂದ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಸಂಬಂಧ ಚರ್ಚೆ ನಡೆಸಲಿದ್ದಾರೆ. ಸಭೆ ಮುಗಿದ ಕೂಡಲೇ ಹೊಸ ಮಾರ್ಗಸೂಚಿ ಪ್ರಕಟವಾಗುವ ಸಂಭವ ಇದೆ.

    8 ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿ ಇರುವ ಮಾದರಿಯಲ್ಲೇ ಬೆಂಗಳೂರಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗುವ ಸಾಧ್ಯತೆಗಳೂ ಹೆಚ್ಚಾಗಿವೆ. ಆದ್ರೆ ಏಕಾಏಕಿ ಲಾಕ್‍ಡೌನ್ ಮಾಡುವ ಯಾವುದೇ ಪ್ರಸ್ತಾವನೆ ರಾಜ್ಯ ಸರ್ಕಾರದ ಮುಂದೆ ಇಲ್ಲ ಅಂತ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಕಂದಾಯ ಮಂತ್ರಿ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ. ಎಲ್ಲದಕ್ಕೂ ಲಾಕ್‍ಡೌನ್ ಪರಿಹಾರ ಅಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಬಿಬಿಎಂಪಿ ವಿಶೇಷ ಆಯುಕ್ತ ಗೌರವ್ ಗುಪ್ತಾ ಕೂಡ ವೀಕೆಂಡ್ ಲಾಕ್‍ಡೌನ್ ಬಗ್ಗೆ ಸುಳಿವು ಕೊಟ್ಟಿದ್ದಾರೆ.

    ಬೆಂಗಳೂರಿಗೆ ಕಠಿಣ ನಿಯಮಗಳು:
    ಆಗಸ್ಟ್ 15 ನಂತರ ವೀಕೆಂಡ್ ಲಾಕ್ ಜೊತೆಗೆ ನೈಟ್ ಕರ್ಫ್ಯೂ ಅವಧಿ ವಿಸ್ತರಿಸುವ ಸಾಧ್ಯತೆಗಳಿವೆ. ಮಾರುಕಟ್ಟೆ, ಮಾಲ್ ಗಳಿಗೆ ನಿರ್ಬಂಧ ಹಾಕಿ ದೇವಸ್ಥಾನಗಳಿಗೆ ಮತ್ತಷ್ಟು ಕಠಿಣ ನಿಯಮಗಳನ್ನು ಪ್ರಕಟಿಸಬಹುದು. ಸೋಂಕಿತರ ಪತ್ತೆಗೆ ಹೊಸ ನಿಯಮಗಳನ್ನು ತರಬಹುದು. ಬೆಂಗಳೂರಲ್ಲೂ ಒಬ್ಬರಿಗೆ 20 ಮಂದಿ ಪ್ರಾಥಮಿಕ ಸಂಪರ್ಕಿತರ ಪತ್ತೆ ಮಾಡುವ ಗುರಿ ನೀಡಬಹುದು. ನೆರೆ ರಾಜ್ಯಗಳಿಗೆ ಬಸ್ ಸಂಚಾರ ಜೊತೆ ಕೆಲ ನಿರ್ಬಂಧ ಹಾಕುವ ಸಾಧ್ಯತೆಗಳಿವೆ. ಖಾಸಗಿ, ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಸಿಬ್ಬಂದಿ ಮತ್ತು ಮದುವೆ, ಸಮಾರಂಭಗಳಲ್ಲಿ ಜನರಿಗೆ ಮಿತಿ ಹಾಕಬಹುದು. ಇದನ್ನೂ ಓದಿ: ವೃದ್ಧೆಯಿಂದ ಅನಾಥಾಶ್ರಮಕ್ಕೆ ಲಕ್ಷಾಂತರ ಬೆಲೆ ಬಾಳುವ ಜಾಗ ದಾನ

    ಕೋವಿಡ್ ತಜ್ಞರ ಸಲಹೆ:
    ಶನಿವಾರ ಕೋವಿಡ್ ತಜ್ಞರ ಸಭೆ ನಡೆಯುತ್ತಿರೋ ಬೆನ್ನಲ್ಲೇ ಸರ್ಕಾರಕ್ಕೆ ತಜ್ಞರು ಕೆಲವೊಂದು ಸಲಹೆ ಕೊಟ್ಟಿದ್ದಾರೆ. ರಾಜ್ಯಕ್ಕೆ ಮುಂದಿನ 18 ದಿನ ನಿರ್ಣಾಯಕವಾಗಿದ್ದು, ಕೆಲವು ಟಫ್ ರೂಲ್ಸ್ ತರೋದು ಅನಿವಾರ್ಯ. ಪಾಸಿಟಿವಿಟಿ ದರ ಶೇ.2 ಅಥವಾ 3 ಆದ ಕೂಡಲೇ ಲಾಕ್ ಅಸ್ತ್ರ ಪ್ರಯೋಗಿಸಬೇಕು. ಪಾಸಿಟಿವಿಟಿ ದರ ಶೇ.5ರಷ್ಟು ಆದ್ರೆ ಅದು ಕಂಟಕವಾಗಲಿದೆ. ಅದು ಕೇವಲ 15 ರಿಂದ20 ದಿನದಲ್ಲಿ ಶೇ.25ಕ್ಕೆ ಏರಿಕೆಯಾಗಬಹುದು. ರಿಸ್ಕ್ ಬೇಡವೇ ಬೇಡ ‘ಹಾಫ್ ಲಾಕ್ ಮಾಡಿ ಎಂದು ತಜ್ಞರು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ತಾಲಿಬಾನಿಗಳ ಅಟ್ಟಹಾಸ, ನರಕವಾದ ಅಫ್ಘಾನಿಸ್ತಾನ- ರಾಜ್ಯಪಾಲ, ಸರ್ಕಾರಿ ಅಧಿಕಾರಿಗಳು ಶರಣಾಗತಿ

  • ಕೆ.ಆರ್.ಮಾರ್ಕೆಟ್‍ನಲ್ಲಿ ಜನವೋ ಜನ – ನೈಟ್ ಕರ್ಫ್ಯೂನಲ್ಲಿ ಪೊಲೀಸರು ಫುಲ್ ಅಲರ್ಟ್

    ಕೆ.ಆರ್.ಮಾರ್ಕೆಟ್‍ನಲ್ಲಿ ಜನವೋ ಜನ – ನೈಟ್ ಕರ್ಫ್ಯೂನಲ್ಲಿ ಪೊಲೀಸರು ಫುಲ್ ಅಲರ್ಟ್

    ಬೆಂಗಳೂರು: ನಗರದಲ್ಲಿ ಮೂರನೇ ಅಲೆಯ ಭೀತಿಯ ಮಧ್ಯೆಯೂ ಜನ ಮೈ ಮರೆಯುತ್ತಿದ್ದಾರೆ. ಕೆ.ಆರ್.ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವ ಧಾವಂತದಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಾಮಾಜಿಕ ಅಂತರವನ್ನ ಉಲ್ಲಂಘಿಸಿ, ಹಬ್ಬುವಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ.

    ಕಾಲಿಡೋದಕ್ಕೂ ಜಾಗವಿಲ್ಲದಷ್ಟು ಜನಸಂದಣಿ ಕೆ. ಆರ್ ಮಾರ್ಕೆಟ್ ನಲ್ಲಿ ಸೇರಿತ್ತು. ಮಾರ್ಷಲ್ಸ್ ಗಳು ಫೀಲ್ಡ್ ಗಿಳಿದು ದಂಡ ಪ್ರಯೋಗಕ್ಕೆ ಮುಂದಾದ್ರೂ ಜನ ಡೋಂಟ್ ಕೇರ್ ಅಂತಿದ್ದಾರೆ. ಮಾರ್ಕೆಟ್ ನಲ್ಲಿ ಹೆಚ್ಚು ಜನರ ಸೇರಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಉಂಟಾಯ್ತು.

    ನೈಟ್ ಕರ್ಫ್ಯೂ ವೇಳೆ ರಾಜಾಜಿನಗರದಿಂದ ಶಂಕರಮಠಕ್ಕೆ ಹೋಗುವ ರಸ್ತೆಯಲ್ಲಿ, ಬಸವೇಶ್ವರ ನಗರ ಠಾಣೆಯ ಪೊಲೀಸರು ಫುಲ್ ಅಲರ್ಟ್ ಆಗಿದ್ರು. ಪ್ರತಿಯೊಂದು ವಾಹನಗಳನ್ನು ತಡೆದು ತಪಾಸಣೆ ಮಾಡಿ, ಅನಗತ್ಯವಾಗಿ ರಸ್ತೆಗಳಿದಿದ್ದ ವಾಹನಗಳ ಸವಾರರಿಗೆ, ವಾಹನಗಳನ್ನ ಸೀಜ್ ಮಾಡುವ ಎಚ್ಚರಿಕೆ ನೀಡಿದ್ರು. ಅವಧಿ ಮುಗಿದ ಬಳಿಕವೂ ಬಾರ್ ಗಳತ್ತ ಬರುತ್ತಿದ್ದ ಜನರಿಗೆ ಕ್ಲಾಸ್ ತೊಗೊಂಡು ವಾರ್ನ್ ಮಾಡಿ ಕಳಿಸಿದ್ರು.

    ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. 8 ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಪ್ರಕಟಿಸಲಾಗಿರುವ ವಾರಾಂತ್ಯ ಮಾರ್ಗಸೂಚಿ ಆಗಸ್ಟ್ 16ರವರೆಗೂ ಜಾರಿಯಲ್ಲಿ ಇರುತ್ತದೆ. ಇದೀಗ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಅಲ್ಲದೇ, ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ರಾತ್ರಿ ಕರ್ಫ್ಯೂ ಅವಧಿಯನ್ನು ಹೆಚ್ಚಿಸಲಾಗಿದೆ.

  • ವೀಕೆಂಡ್ ಕರ್ಫ್ಯೂ – ತರಕಾರಿ ರಸ್ತೆಗೆ ಎಸೆದು ವರ್ತಕರ ಆಕ್ರೋಶ

    ವೀಕೆಂಡ್ ಕರ್ಫ್ಯೂ – ತರಕಾರಿ ರಸ್ತೆಗೆ ಎಸೆದು ವರ್ತಕರ ಆಕ್ರೋಶ

    ಕಲಬುರಗಿ: ಕೊರೊನಾ ಮೂರನೇ ಅಲೆ ಆತಂಕದ ಹಿನ್ನೆಲೆ ರಾಜ್ಯ ಸರ್ಕಾರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಿದೆ. ಕರ್ಫ್ಯೂ ಇರೋದರಿಂದ ಮಾರುಕಟ್ಟೆಗೆ ಗ್ರಾಹಕರು ಆಗಮಿಸದ ಹಿನ್ನೆಲೆಯಲ್ಲಿ ಕಲಬುರಗಿಯ ವರ್ತಕರು ತರಕಾರಿ ರಸ್ತೆಗೆ ಎಸೆದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.

    ಬೆಳಗ್ಗೆ 5 ಗಂಟೆಗೆ ಬಂದು ತರಕಾರಿ ಖರೀದಿ ಮಾಡಿದ್ದೇವೆ. ಆದ್ರೆ ವೀಕೆಂಡ್ ಕರ್ಫ್ಯೂ ಹಾಕಿದ್ದರಿಂದ ಮಾರುಕಟ್ಟೆಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ. ಹಾಕಿದ ಬಂಡವಾಳವೂ ಬರುವ ನಿರೀಕ್ಷೆಗಳಿಲ್ಲ. ಸರ್ಕಾರ ಹೀಗೆ ದಿಢೀರ್ ನಿರ್ಧಾರ ತೆಗೆದುಕೊಳ್ಳುವುದು ಎಷ್ಟು ಸರಿ ಎಂದು ವ್ಯಾಪಾರಸ್ಥರು ಪ್ರಶ್ನೆ ಮಾಡಿದರು. ಸವತೆಕಾಯಿ, ಕೋತಂಬರಿ ಸೊಪ್ಪು, ಬದನೆಕಾಯಿ ರಸ್ತೆಗೆ ಎಸೆದ ದೃಶ್ಯಗಳು ಕಲಬುರಗಿಯ ಮಾರುಕಟ್ಟೆಯಲ್ಲಿ ಕಂಡು ಬಂದವು.

    ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ 8 ಜಿಲ್ಲೆಗಳಲ್ಲಿ ವೀಕೆಂಡ್ ಕಫ್ರ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. 8 ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಪ್ರಕಟಿಸಲಾಗಿರುವ ವಾರಾಂತ್ಯ ಮಾರ್ಗಸೂಚಿ ಆಗಸ್ಟ್ 16ರವರೆಗೂ ಜಾರಿಯಲ್ಲಿ ಇರುತ್ತದೆ. ಇದೀಗ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಅಲ್ಲದೇ, ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ರಾತ್ರಿ ಕಫ್ರ್ಯೂ ಅವಧಿಯನ್ನು ಹೆಚ್ಚಿಸಲಾಗಿದೆ. ಇದನ್ನೂ ಓದಿ: ನೈಟ್ ಕರ್ಫ್ಯೂ- ಮೆಟ್ರೋ ಓಡಾಟ ಸಮಯದಲ್ಲಿ ಬದಲಾವಣೆ

  • ದಕ್ಷಿಣ ಕನ್ನಡ ಸೇರಿದಂತೆ ಹೈ ರಿಸ್ಕ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ

    ದಕ್ಷಿಣ ಕನ್ನಡ ಸೇರಿದಂತೆ ಹೈ ರಿಸ್ಕ್ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ

    – ಕೇರಳ ಗಡಿ ಜಿಲ್ಲೆಗಳಲ್ಲಿ ಕೊರೊನಾ
    – ಮದುವೆ, ಜಾತ್ರೆಗಳಿಗೆ ನಿರ್ಬಂಧ ಹೇರಿ
    – ಸರ್ಕಾರಕ್ಕೆ ತಜ್ಞರ ಶಿಫಾರಸು

    ಬೆಂಗಳೂರು: ರಾಜಧಾನಿ ಬೆಂಗಳೂರು ಮತ್ತು ಕೇರಳ ಗಡಿ ಹಂಚಿಕೊಂಡಿರುವ ಜಿಲ್ಲೆಗಳಲ್ಲಿ ಮತ್ತೆ ಸೋಂಕು, ಪಾಸಿಟಿವಿಟಿ ದರ ಹೆಚ್ಚುತ್ತಿರುವುದು ಈಗ ಆತಂಕಕ್ಕೆ ಕಾರಣವಾಗಿದೆ.

    ಸೋಂಕು ನಿಯಂತ್ರಣಕ್ಕಾಗಿ ಪಾಸಿಟಿವಿಟಿ ಹೆಚ್ಚಿರುವ ಜಿಲ್ಲೆಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದೆ ಕಷ್ಟ ಆಗಲಿದೆ ಎಂದು ಕೊರೊನಾ ತಜ್ಞರು ಸರ್ಕಾರವನ್ನು ಎಚ್ಚರಿಸಿದ್ದಾರೆ. ಜೊತೆಗೆ ಒಂದಿಷ್ಟು ಟಫ್ ರೂಲ್ಸ್ ಜಾರಿಗೆ ಶಿಫಾರಸು ಮಾಡಿದ್ದಾರೆ.

    ಕೇರಳದಿಂದಲೇ ಮೂರನೇ ಅಲೆಯ ಎಫೆಕ್ಟ್ ಕರ್ನಾಟಕದಲ್ಲಿ ಕಾಣಿಸಿಕೊಂಡಿದೆ. ಮುಂದಿನ ಮೂರು ವಾರದಲ್ಲಿ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಡಾ.ಸಿಎನ್ ಮಂಜುನಾಥ್ ತಿಳಿಸಿದ್ದಾರೆ.

    ದಕ್ಷಿಣ ಕನ್ನಡ ಸೇರಿ ಹೈರಿಸ್ಕ್ ಇರುವ ಜಿಲ್ಲೆಗಳಲ್ಲಿ ಕೂಡಲೇ ವೀಕೆಂಡ್ ಕರ್ಫ್ಯೂ ಜಾರಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಬಿಬಿಎಂಪಿ ಕೂಡ, ವೀಕೆಂಡ್ ಕರ್ಫ್ಯೂಗೆ ಶಿಫಾರಸು ಮಾಡಲು ಮುಂದಾಗಿದೆ. ಆದರೆ ಸರ್ಕಾರ ಮಾತ್ರ ಇದಕ್ಕೆ ತಯಾರಿಲ್ಲ. ರಾಜ್ಯದ ಆರ್ಥಿಕ ಸ್ಥಿತಿಗತಿಯನ್ನು ಗಮನದಲ್ಲಿ ಇರಿಸಿಕೊಂಡು ಕಾದು ನೋಡುವ ತಂತ್ರಕ್ಕೆ ಶರಣಾಗಿದೆ. ಇದನ್ನೂ ಓದಿ : ರಾಜ್ಯದಲ್ಲಿ ಇಂದು ಕಡಿಮೆ ಕೇಸ್ ದಾಖಲು – ಪಾಸಿಟಿವಿಟಿ ರೇಟ್ ಸಂಪೂರ್ಣ ಇಳಿಕೆ

    ಚಾಮರಾಜನಗರದಲ್ಲಿ ಟಫ್ ರೂಲ್ಸ್ ಜಾರಿಯಾಗಿದೆ. ಮಲೆ ಮಹದೇಶ್ವರ ಬೆಟ್ಟದಲ್ಲಿ ಎಲ್ಲಾ ಸೇವೆ ರದ್ದು ಮಾಡಲಾಗಿದೆ. ವೀಕೆಂಡ್‍ನಲ್ಲಿ ಮಾದಪ್ಪನ ದರ್ಶನವೂ ಸಿಗಲ್ಲ. ಭರಚುಕ್ಕಿ ಹಾಗೂ ಹೊಗೆನಕಲ್ ಫಾಲ್ಸ್‍ಗೆ ವಾರಾಂತ್ಯದಲ್ಲಿ ಪ್ರವಾಸಿಗರು ಭೇಟಿಗೆ ನಿಷೇಧಿಸಲಾಗಿದೆ. ಬಂಡೀಪುರ, ಕೆ.ಗುಡಿಯಲ್ಲಿ ವೀಕೆಂಡ್ ಸಫಾರಿಗೂ ಬ್ರೇಕ್ ಹಾಕಲಾಗಿದೆ.

    ಶಿಫಾರಸು ಏನು?
    ಪಾಸಿಟಿವಿಟಿ ರೇಟ್ 2%ಕ್ಕಿಂತ ಹೆಚ್ಚಿರುವ ಜಿಲ್ಲೆಗಳಲ್ಲಿ ಟಫ್ ರೂಲ್ಸ್ ಪಾಲನೆಯಾಗಬೇಕು.  ಸಂಜೆ 7ರಿಂದ ಬೆಳಗ್ಗೆ 6ರ ವರೆಗೆ ನೈಟ್ ಕರ್ಫ್ಯೂ ಜಾರಿಯಾಗಬೇಕು. ವೀಕೆಂಡ್ ಕರ್ಫ್ಯೂ ಮತ್ತೆ ಜಾರಿ ಮಾಡಬೇಕು.

    ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಅರ್ಧದಷ್ಟು ಸಿಬ್ಬಂದಿ ಮಾತ್ರ ಕೆಲಸ ಮಾಡಲು ಅನುಮತಿ ನೀಡಬೇಕು. ಮಾರ್ಕೆಟ್ ಸೇರಿ ಹೆಚ್ಚು ಜನ ಸೇರುವ ಜಾಗಗಳ ಪ್ರವೇಶಕ್ಕೆ ನಿರ್ಬಂಧ ಹೇರಬೇಕು. ಮದುವೆ, ಜಾತ್ರೆ , ಹಬ್ಬ ಹರಿದಿನಗಳ ಮೇಲೆ ಮತ್ತೆ ಕಠಿಣ ನಿರ್ಬಂಧ ಹೇರಬೇಕು.

  • ಪೊಲೀಸ್ ವಾಹನದ ಮೇಲೆ ಪುಂಡರ ಗುಂಪಿನಿಂದ ಕಲ್ಲು ತೂರಾಟ

    ಪೊಲೀಸ್ ವಾಹನದ ಮೇಲೆ ಪುಂಡರ ಗುಂಪಿನಿಂದ ಕಲ್ಲು ತೂರಾಟ

    ತುಮಕೂರು: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿದವರ ಮೇಲೆ ಕ್ರಮ ಕೈಗೊಳ್ಳಲು ಮುಂದಾದ ಪೊಲೀಸರ ಮೇಲೆಯೇ ಪುಂಡರ ಗುಂಪೊಂದು ಹಲ್ಲೆ ನಡೆಸಿರುವ ಘಟನೆ ಗುಬ್ಬಿ ತಾಲೂಕಿನ ಕುನ್ನಾಲದಲ್ಲಿ ನಡೆದಿದೆ.

    ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಸಿ.ಎಸ್ ಪುರ ಠಾಣೆ ಪಿಎಸ್‍ಐ ರೌಂಡ್ಸ್ ತೆರಳಿದ್ದರು. ಈ ವೇಳೆ ವ್ಯಕ್ತಿಯೋರ್ವ ಅಂಗಡಿ ಬಾಗಿಲು ತೆರೆದು ಅಕ್ರಮವಾಗಿ ಪೆಟ್ರೋಲ್ ಮಾರುತ್ತಿದ್ದನು. ಇದನ್ನು ಗಮನಿಸಿದ ಪಿಎಸ್‍ಐ, ಅಂಗಡಿ ಬಾಗಿಲು ಮುಚ್ಚಿಸಿ ಪೆಟ್ರೋಲ್ ಕ್ಯಾನ್ ವಶಕ್ಕೆ ಪಡೆದುಕೊಂಡು ಠಾಣೆಗೆ ತೆರಳಿದ್ದರು. ಇದರಿಂದ ಕುಪಿತಗೊಂಡಿದ್ದ ಅಂಗಡಿ ಮಾಲೀಕ ಹಾಗೂ ಕೆಲವು ಪುಂಡರು ಎರಡನೇ ಬಾರಿಗೆ ಗಸ್ತು ತೆರಳಿದ್ದ ಬೇರೊಬ್ಬಪೊಲೀಸ್ ಪೇದೆ ಕುಮಾರಪ್ಪ ಎಂಬವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಬಾಟಲ್, ದೊಣ್ಣೆ ಹಿಡಿದು ಪೊಲೀಸ್ ಪೇದೆಯನ್ನು ಥಳಿಸಲು ಮುಂದಾಗಿದ್ದಾರೆ. ಕೂಡಲೇ ಅಲ್ಲಿಂದ ತಪ್ಪಿಸಿಕೊಂಡ ಕುಮಾರಪ್ಪ ಅವರು ಸರ್ಕಲ್ ಇನ್ಸ್ ಪೆಕ್ಟರ್ ಠಾಣೆಗೆ ಬಂದಿದ್ದಾರೆ. ಇದನ್ನೂ ಓದಿ: ಮಂಗಳ ಮುಖಿಯರಿಂದ ಗ್ರಾ.ಪಂ ಸದಸ್ಯನ ಮೇಲೆ ಹಲ್ಲೆ

    ವಿಷಯ ತಿಳಿದ ಸಿಎಸ್‍ಪುರ ಎಸ್.ಐ ಮೋಹನ್ ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸ್ ವಾಹನ ಬರುತ್ತಿದ್ದಂತೆ ಕುನ್ನಾಲ ಗ್ರಾಮದಲ್ಲಿ ಪುಂಡರ  ಗುಂಪೊಂದು ಏಕಾಏಕಿ ಪೊಲೀಸ್ ವಾಹನದ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ ಪೊಲೀಸ್ ವಾಹನದ ಗಾಜು ಪುಡಿಯಾಗಿದೆ. ಕೂಡಲೇ ಸ್ಥಳಕ್ಕೆ ಎಎಸ್ಪಿ ಉದೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, ಡಿ.ಆರ್ ತುಕಡಿ ಸ್ಥಳಕ್ಕೆ ದೌಡಾಯಿಸಿದೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಹಲ್ಲೆಗೆ ಯತ್ನಿಸಿದ ಕಿಡಿಗೇಡಿಗಳನ್ನು ಬಂಧಿಸಲಾಗಿದೆ.

  • ಸರ್ಕಾರದ ರೂಲ್ಸ್ ಬ್ರೇಕ್ – ಬಿಎಂಟಿಸಿಯಲ್ಲಿ ಶೇ.100 ಪ್ರಯಾಣಿಕರ ಪ್ರಯಾಣ

    ಸರ್ಕಾರದ ರೂಲ್ಸ್ ಬ್ರೇಕ್ – ಬಿಎಂಟಿಸಿಯಲ್ಲಿ ಶೇ.100 ಪ್ರಯಾಣಿಕರ ಪ್ರಯಾಣ

    ಬೆಂಗಳೂರು: ಕೊರೊನಾ ಅನ್‍ಲಾಕ್ 2 ನಲ್ಲಿ ರಾಜ್ಯ ಸರ್ಕಾರ ಬಿಎಂಟಿಸಿ ಮತ್ತು ಕೆ.ಎಸ್.ಆರ್.ಟಿಸಿ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ವೀಕೆಂಡ್ ಕರ್ಫ್ಯೂ ಬಳಿಕ ಬಿಎಂಟಿಸಿ ಬಸ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿದೆ. ಈ ಮಧ್ಯೆ ಬಿಎಂಟಿಸಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಿ ಶೇ.100 ಪ್ರಯಾಣಿಕರನ್ನು ಬಸ್‍ನಲ್ಲಿ ತುಂಬಿಕೊಂಡು ಸಾಗುತ್ತಿದೆ.

    ಶುಕ್ರವಾರ ಸಂಜೆಯಿಂದ ವೀಕೆಂಡ್ ಕರ್ಫ್ಯೂ ಶುರುವಾದ ಬಳಿಕ ಬಿಎಂಟಿಸಿ ಬಸ್‍ಗಳ ಸಂಖ್ಯೆಯನ್ನು ಶೇ.30 ರಷ್ಟು ಕಡಿಮೆ ಮಾಡಿ 1000 – 1200 ಬಸ್ ಗಳನ್ನು ರಸ್ತೆಗೆ ಇಳಿಸಿತ್ತು. ಇಂದು ವೀಕೆಂಡ್ ಕರ್ಫ್ಯೂ ಕೊನೆಗೊಂಡಿದ್ದು, 3500 ರಿಂದ 4000 ಬಿಎಂಟಿಸಿ ಬಸ್‍ಗಳನ್ನು ರಸ್ತೆಗೆ ಇಳಿಸಿದೆ. ಸರ್ಕಾರ ಶೇ. 50 ರಷ್ಟು ಪ್ರಯಾಣಿಕರನ್ನು ಮಾತ್ರ ಕರೆದುಕೊಂಡು ಹೋಗಲು ಆದೇಶ ನೀಡಿದೆ. ಆದರೆ ಸರ್ಕಾರ ಹೇಳಿದ್ದ ರೂಲ್ಸ್ ನ್ನು ಸಂಪೂರ್ಣವಾಗಿ ಬಿಎಂಟಿಸಿ ಬಸ್ ಸಿಬ್ಬಂದಿ ಉಲ್ಲಂಘನೆ ಮಾಡುತ್ತಿರುವುದು ಕಂಡು ಬಂದಿದೆ. ಇದನ್ನೂ ಓದಿ: ವಾರಾಂತ್ಯದ ಕರ್ಫ್ಯೂ ಸಮಯದಲ್ಲಿ ಬಿಎಂಟಿಸಿ ಸೇವೆಗಳ ಕಾರ್ಯಾಚರಣೆ ಕಡಿತ 

    ಶೇ.50 ರಷ್ಟು ಮಾತ್ರ ಪ್ರಯಾಣಿಕರನ್ನು ಕರೆದುಕೊಂಡು ಹೋಗುವಂತೆ ಸರ್ಕಾರ ಆದೇಶ ಮಾಡಿದೆ. ಆದರೆ ಬಿಎಂಟಿಸಿಯಲ್ಲಿ ಶೇ.100 ರಷ್ಟು ಪ್ರಯಾಣಿಕರು ಪ್ರಯಾಣ ಮಾಡುವ ಮೂಲಕ ಸರ್ಕಾರದ ಆದೇಶ ಒಂದೇ ವಾರಕ್ಕೆ ಹಳ್ಳ ಹಿಡಿದಿದೆ. ಕೊರೊನಾ ಇನ್ನೂ ಮುಗಿದಿಲ್ಲ, ಎರಡನೇ ಅಲೆ ಅಬ್ಬರ ಕಡಿಮೆಯಾಗಿದೆ. ಜೊತೆಗೆ ಮೂರನೇ ಅಲೆಯ ಆತಂಕದೊಂದಿಗೆ ಡೆಲ್ಟಾ ಪ್ಲಸ್ ವೈರಾಣುವಿನ ಭಯ ಕೂಡ ಶುರುವಾಗಿದೆ. ಇತಂಹ ಸಮಯದಲ್ಲಿ ಬಿಎಂಟಿಸಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಮತ್ತೆ ಕೊರೊನಾ ಕೇಸ್ ಹೆಚ್ಚಾಗಲು ಕಾರಣವಾಗುವ ಸಾಧ್ಯತೆಯಿದೆ.