Tag: weddings

  • ವಧುವಾದ ಗಾಯಕಿ ಸುಹಾನಾ ಸಯ್ಯದ್ – ʻಭಲೇ ಜೋಡಿʼ ಎಂದ ಫ್ಯಾನ್ಸ್‌

    ವಧುವಾದ ಗಾಯಕಿ ಸುಹಾನಾ ಸಯ್ಯದ್ – ʻಭಲೇ ಜೋಡಿʼ ಎಂದ ಫ್ಯಾನ್ಸ್‌

    ‘ಸರಿಗಮಪ’ ಖ್ಯಾತಿಯ ಗಾಯಕಿ ಸುಹಾನಾ ಸಯ್ಯದ್ ಅವರು ತಮ್ಮ 16 ವರ್ಷಗಳ ಸ್ನೇಹಿತ, ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ವರಿಸುತ್ತಿದ್ದಾರೆ. ಈ ಜೋಡಿ ಕುವೆಂಪು ಅವರ ಮಂತ್ರ ಮಾಂಗಲ್ಯದ ಆಶಯದಂತೆ ಸರಳವಾಗಿ ಅಂತರ್ ಧರ್ಮೀಯ ವಿವಾಹವಾಗುತ್ತಿದ್ದಾರೆ.

    ಅಂತರ್‌ಧರ್ಮೀಯ ಸರಳ ವಿವಾಹ ಕಾರ್ಯಕ್ರಮದಲ್ಲಿ ಆಪ್ತ ವರ್ಗದವರಷ್ಟೇ ಪಾಲ್ಗೊಳ್ಳುತ್ತಿದ್ದಾರೆ. ರಂಗಭೂಮಿ ಕಲಾವಿದ ನಿತಿನ್ ಜೊತೆ ಸುಹಾನಾ ಹೊಸ ಮನ್ವಂತರಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಮದುವೆಗೂ ಮುನ್ನ ಭಾವಿ ಪತಿ ಜೊತೆ ಫೋಟೋಗೆ ಫೋಸ್ ಕೊಡುವಾಗ ಫೋಟೋಗಳು ರಿವೀಲ್ ಆಗಿದೆ. ಇದನ್ನೂ ಓದಿ: ರಘು ದೀಕ್ಷಿತ್, ವಾರಿಜಶ್ರೀ ಮದುವೆ ಡೇಟ್ ಫಿಕ್ಸ್

    ವಧುವಾಗಿ ಮಿಂಚುತ್ತಿರುವ ಸುಹಾನಾ ಫೋಟೋಗಳು ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಸುಹಾನಾ ಗೋಲ್ಡನ್‌ ಬಾರ್ಡರ್‌ ಇರುವ ರೆಡ್‌ ಸೀರೆಯಲ್ಲಿ ಕಂಗೊಳಿಸಿದ್ರೆ, ನಿತಿನ್ ಶಿವಾಂಶ್ ಶೇರ್ವಾನಿಯಲ್ಲಿ ಶೈನ್‌ ಆಗ್ತಿದ್ದಾರೆ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರೋ ಸುಹಾನಾ ಅಭಿಮಾನಿಗಳು ʻಸೂಪರ್‌ ಜೋಡಿʼ ಎಂದು ಹೊಗಳಿದ್ದಾರೆ. ಇದನ್ನೂ ಓದಿ: ವೃಷಭ ಟೈಟಲ್ ಸಮಸ್ಯೆ – ದಿಕ್ಕು ತೋಚದಂತೆ ಕೂತಿರುವ ಟೀಮ್

    ಹಿಜಬ್ (Hijab) ಧರಿಸಿ ಹಿಂದೂ ಭಜನೆ ಹಾಡುವ ಸುಹಾನಾಗೆ ತೀವ್ರ ವಿರೋಧ ವ್ಯಕ್ತವಾಗಿತ್ತು, ಆದರೀಗ ಎಲ್ಲಾ ಅಡೆತಡೆಗಳನ್ನ ದಾಟಿ ತಾವು ಬಹುವರ್ಷಗಳಿಂದ ಪ್ರೀತಿಸುತ್ತಿರುವ ಅಂತರ್ ಧರ್ಮದ ಹುಡುಗನ ಜೊತೆ ಮದುವೆಯಾಗಲು ಹೊರಟಿದ್ದಾರೆ. ಈ ಅಂತರ್‌ಧರ್ಮೀಯ ಮದುವೆ ವಿಶೇಷವಾಗಿದ್ದು ಅನೇಕ ಕಲಾವಿದರು ಗಾಯಕರು ಸಾಕ್ಷಿಯಾಗಲಿದ್ದಾರೆ. ಆಮಂತ್ರಣ ಪತ್ರಿಕೆಯಲ್ಲಿ, ಪ್ರೀತಿ ವಿಶ್ವದ ಭಾಷೆ, ಹೃದಯದಿಂದ ಹೊರಹೊಮ್ಮಿದ ಈ ಪ್ರೇಮ ಕಾವ್ಯ ದೇವ ವಿರಚಿತ. ಶ್ರೀ ಕುವೆಂಪುರವರ ಮಂತ್ರ ಮಾಂಗಲ್ಯದ ಆಶಯದಂತೆ ಸುಹಾನಾ ಹಾಗೂ ನಿತಿನ್ ಮದುವೆಯಾಗುತ್ತಿದ್ದೇವೆ. ನಮ್ಮ ನಡೆ ವಿಶ್ವಮಾನವತ್ವದೆಡೆಗೆ ಎಂದು ಹೇಳಿಕೊಂಡಿದ್ದಾರೆ.

  • ಕುಂದಾನಗರಿ ಮದುವೆಗಳಿಗೆ ಚಳಿಗಾಲ ಅಧಿವೇಶನದ ಕರಿನೆರಳು

    ಕುಂದಾನಗರಿ ಮದುವೆಗಳಿಗೆ ಚಳಿಗಾಲ ಅಧಿವೇಶನದ ಕರಿನೆರಳು

    -ನಿಯೋಜಿತ ಮದುವೆಗಳಿಗೆ ಶುರುವಾಗಿದೆ ಸಂಕಷ್ಟ!

    ಬೆಳಗಾವಿ: ಕುಂದಾ ನಗರರಯಲ್ಲಿ ನಿಗದಿಯಾದ 60 ಮದುವೆಗಳ ಮೇಲೆ ಅಧಿವೇಶನದ ಕರಿನೆರಳು ಬಿದ್ದಿದೆ. ಚಳಿಗಾಲದ ಅಧಿವೇಶನ ದಿನಾಂಕ ನಿಗದಿ ಆಗುತ್ತಿದ್ದಂತೆ ಮದುವೆ ಮಾಡೋರಿಗೆ ಟೆನ್ಶನ್ ಶುರುವಾಗಿದೆ.

    ಡಿಸೆಂಬರ್ 10ರಿಂದ 21ರವರೆಗೆ ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶ ನಡೆಯಲಿದೆ. ಡಿಸೆಂಬರ್ ತಿಂಗಳಿನ 09, 12, 14, 16, 17, 18, 23ರಂದು ಮದುವೆಗೆ ಒಳ್ಳೆಯ ಲಗ್ನ ಮುಹೂರ್ತಗಳಿದ್ದು, ಬೆಳಗಾವಿ ನಗರದಲ್ಲಿ ಮದುವೆಗಳು ಈಗಾಗಲೇ ಫಿಕ್ಸ್ ಆಗಿದೆ. ಈ ಸಮಯದಲ್ಲಿ ದೂರದ ಊರಿನಿಂದ ಮದುವೆಗೆ ಬರೋ ಬೀಗರಿಗೆ ವಸತಿ ವ್ಯವಸ್ಥೆ ಬೇಕು. ಆದರೆ ಅಧಿವೇಶನ ಇರೋದ್ರಿಂದ ಬೆಳಗಾವಿಯಲ್ಲಿನ ಎಲ್ಲಾ ವಸತಿ ನಿಲಯಗಳು, ಲಾಡ್ಜ್ ಗಳನ್ನು ಬೆಳಗಾವಿ ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

    ಅಧಿವೇಶನ ದಿನಾಂಕ ನಿಗದಿ ಆಗೋದಕ್ಕಿಂತ ಮುಂಚೆಯೇ ಎಲ್ಲಾ ಮದುವೆ ದಿನಾಂಕಗಳು ಫಿಕ್ಸ್ ಆಗಿದೆ. ಅದರಂತೆ ಮದುವೆ ಮನೆಯವರು ಆವತ್ತೆ ಎಲ್ಲಾ ಚೌಟರಿಗಳನ್ನು, ಲಾಡ್ಜ್ ಗಳನ್ನು ಬುಕ್ ಮಾಡಿದ್ದಾರೆ. ಜಿಲ್ಲಾಡಳಿತ ಎಲ್ಲಾ ಲಾಡ್ಜ್ ಮಾಲೀಕರ ಸಭೆ ಕರೆದು ರೂಂಗಳನ್ನು ವಶಕ್ಕೆ ಪಡೆದಿದೆ. ಹೀಗಾಗಿ 60ಕ್ಕೂ ಹೆಚ್ಚು ಮದ್ವೆಗಳಿಗೆ ಅಧಿವೇಶನದ ದಿನಾಂಕ ಅಡ್ಡಿಯಾಗಿದೆ. ಅಧಿವೇಶನ ದಿನಾಂಕ ನಿಗದಿಗೂ ಮುನ್ನ ಈ ವಿಚಾರವನ್ನು ಸ್ಥಳೀಯ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತರಬೇಕಿತ್ತು ಅಂತ ಆರ್ ಟಿಐ ಕಾರ್ಯಕರ್ತ ಭೀಮಶಿ ಆರೋಪಿಸಿದ್ದಾರೆ.

    ಮದುವೆ ಡೇಟ್ ಫಿಕ್ಸ್ ಮಾಡಿಕೊಂಡ ಕುಟುಂಬಗಳು ಈ ಸಮಸ್ಯೆಯನ್ನು ನೀವೆ ಬಗೆಹರಿಸಿ ಅಂತ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದಾರೆ. ಎಲ್ಲಾ ಲಾಡ್ಜ್ ಗಳು ಜಿಲ್ಲಾಡಳಿತದ ಸುಪರ್ದಿಯಲ್ಲಿದ್ದು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಬೇಕೆಂಬುದೇ ಯಕ್ಷ ಪ್ರಶ್ನೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವರುಣರಾಯನಿಗಾಗಿ ಕತ್ತೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು!

    ವರುಣರಾಯನಿಗಾಗಿ ಕತ್ತೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು!

    ದಾವಣಗೆರೆ: ರಾಜ್ಯದ ವಿವಿದೆಡೆ ಮಳೆ ಸುರಿಯುತ್ತಿದ್ದು. ಕೆರೆ ಕಟ್ಟೆಗಳು ತುಂಬಿದ್ದು ಡ್ಯಾಂಗಳಿಂದ ನೀರನ್ನು ಹೊರ ಬಿಡಲಾಗುತ್ತಿದೆ. ಆದರೆ ದಾವಣಗೆರೆಯ ಸುತ್ತಮುತ್ತಲೂ ಮಳೆಯ ಛಾಯೆ ಇಲ್ಲ. ಹಾಗಾಗಿ ಗ್ರಾಮಸ್ಥರು ಮೂಢನಂಬಿಕೆಯ ಮೊರೆ ಹೋಗಿ ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.

    ಹರಪ್ಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಪ್ರದೇಶದಲ್ಲಿ ಕತ್ತೆಗಳ ಮದುವೆ ಮಾಡಲಾಗಿದೆ. ಜಿಲ್ಲೆಯಲ್ಲಿ ಮಳೆ ಸುಳಿವಿಲ್ಲದ ಕಾರಣ ಮೂಢನಂಬಿಕೆಗಳ ಮೊರೆ ಹೋದ ಗ್ರಾಮಸ್ಥರು, ವರುಣದೇವ ಮುನಿಕೊಂಡಿದ್ದಾನೆ. ಕತ್ತೆಗಳಿಗೆ ಮದುವೆ ಮಾಡಿದರೆ ವರುಣ ದೇವ ಕೃಪೆ ತೋರಿ ರೈತರ ಮೇಲೆ ಕರುಣಿಸುತ್ತಾನೆ ಎನ್ನುವ ನಂಬಿಕೆಯನ್ನು ಹೊಂದಿದ್ದರು. ಇದರಿಂದ ಗ್ರಾಮದ ರೈತರು ಕತ್ತೆಗಳಿಗೆ ಮದುವೆ ಮಾಡಿಸಿ ಮೆರವಣಿಗೆ ನಡೆಸಿದ್ದಾರೆ.

    ಕೈಗೆ ಬಂದ ಫಸಲು ಸಹ ಮಳೆ ಇಲ್ಲದೆ ಒಣಗುತ್ತಿದ್ದು, ಆದಷ್ಟು ಬೇಗ ಮಳೆ ಬಂದರೆ ರೈತರ ಬೆಳೆಗಳು ಉಳಿಯುತ್ತವೆ. ಅದಕ್ಕೆ ವರುಣದೇವಾ ಕರುಣೆ ತೋರಲಿ ಎಂದು ರೈತರು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು.