Tag: #WeddingGiftKannadaMovie

  • ರಸಗುಲ್ಲ ತಿನ್ನುವ ವಿಚಾರಕ್ಕೆ ಗಲಾಟೆ – ವ್ಯಕ್ತಿ ಸಾವು

    ರಸಗುಲ್ಲ ತಿನ್ನುವ ವಿಚಾರಕ್ಕೆ ಗಲಾಟೆ – ವ್ಯಕ್ತಿ ಸಾವು

    ಲಕ್ನೋ: ಮದುವೆಯೊಂದರಲ್ಲಿ (Wedding) ರಸಗುಲ್ಲ (Rasgulla) ತಿನ್ನುವ ವಿಚಾರವಾಗಿ ನಡೆದ ಜಗಳವು ವಿಕೋಪಕ್ಕೆ ತಿರುಗಿ, ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttara Pradesh) ಮೈನ್‍ಪುರಿಯಲ್ಲಿ ನಡೆದಿದೆ.

    ಮೃತನನ್ನು ಹರ್ಯಾಣದ ರಣವೀರ್ ಸಿಂಗ್ (50) ಎಂದು ಗುರುತಿಸಲಾಗಿದೆ. ಮೈನ್‍ಪುರಿ ಜಿಲ್ಲೆಯ ಕುರವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

    ಮದುವೆಯೊಂದರಲ್ಲಿ ರಸಗುಲ್ಲ ತಿನ್ನುವ ವಿಚಾರಕ್ಕೆ ಜಗಳ ನಡೆದಿದೆ. ಮೊದಲಿಗೆ ವಧು ಹಾಗೂ ವರನ ಕಡೆಯವರಿಗೆ ಜಗಳ ನಡೆದಿದ್ದು, ಬಳಿಕ ಒಬ್ಬರಿಗೊಬ್ಬರು ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಇದು ವಿಕೋಪಕ್ಕೆ ಹೋಗಿದ್ದು, ಅಲ್ಲಿದ್ದ ರಣವೀರ್ ಸಿಂಗ್‍ಗೆ ಕಬ್ಬಿಣದ ರಾಡ್‍ನಿಂದ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡ ರಣವೀರ್ ಸಿಂಗ್‍ನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

    ಘಟನೆ ವೇಳೆ ರಣವೀರ್‌ ಸಹೋದರ ಸಂಬಂಧಿ ರಾಮ್‌ ಕಿಶೋರ್‌ ಮೇಲೆಯೂ ನಾಲ್ವರು ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ರಜತ್‌, ಅಜಯ್‌, ಸತ್ಯಭಾನ್‌ ಹಾಗೂ ಭರತ್‌ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಕಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ರಾಮ್‌ ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಕಡೆಗಣನೆ – ರಾಜ್ಯ ಸರ್ಕಾರಕ್ಕೆ ಈಡಿಗ ಸಮುದಾಯದಿಂದ ಎಚ್ಚರಿಕೆ

    ಈ ಬಗ್ಗೆ ರಣ್‍ವೀರ್ ಪುತ್ರ ಸಚಿನ್ ಕುಮಾರ್ ಮಾತನಾಡಿ, ಮದುವೆ ವೇಳೆ ಬಂದ ಅತಿಥಿಗಳಿಗೆ ನೀಡಲು ಬಕೆಟ್‍ಗಳಲ್ಲಿ ರಸಗುಲ್ಲವನ್ನು ಹಾಕಿ ಇಡಲಾಗಿತ್ತು. ಆದರೆ, ಇಲ್ಲಿಗೆ ಬಂದಿದ್ದ ವರನ ಕಡೆಯ ರಜತ್ ಎಂಬಾತ, ಇದನ್ನು ಕದ್ದು ತಿಂದಿದ್ದಲ್ಲದೆ, ಇನ್ನೊಂದು ಬಕೆಟ್‍ನಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದ. ಇದನ್ನು ರಾಮ್‍ಕಿಶೋರ್ ಆಕ್ಷೇಪಿಸಿದ್ದು, ಇದಕ್ಕಾಗಿ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿತು. ಸ್ವಲ್ಪವೇ ಹೊತ್ತಿನಲ್ಲಿ ರಜತ್ ಜೊತೆ ಆತನ ಮೂವರು ಸ್ನೇಹಿತರು ಸೇರಿಕೊಂಡು ಗಲಾಟೆ ಮಾಡಲು ಆರಂಭ ಮಾಡಿದರು ಎಂದು ತಿಳಿಸಿದ್ದಾನೆ. ಇದನ್ನೂ ಓದಿ: ಯೋಗಿಯಿಂದಲೇ ರಾಮ ಮಂದಿರ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಬಿಜೆಪಿ ಪ್ಲಾನ್‌

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆಗೂ ಮುನ್ನ ನಯನತಾರಾ ಭಾವಿ ಪತಿ ಕೊಟ್ರು ಗುಡ್ ನ್ಯೂಸ್

    ಮದುವೆಗೂ ಮುನ್ನ ನಯನತಾರಾ ಭಾವಿ ಪತಿ ಕೊಟ್ರು ಗುಡ್ ನ್ಯೂಸ್

    ಕಾಲಿವುಡ್‌ನಲ್ಲಿ ಸದ್ಯದ ಹಾಟ್ ಟಾಪಿಕ್ ಅಂದ್ರೆ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ವಿಚಾರ. ಈ ಜೋಡಿ ಈವರೆಗೂ ಮದುವೆಯ ಕುರಿತು ಎಲ್ಲಿಯೂ ಮಾತನಾಡಿರಲಿಲ್ಲ. ಈಗ ಸುದ್ದಿಗೋಷ್ಠಿಯಲ್ಲಿ ವಿಘ್ನೇಶ್ ಶಿವನ್ ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಜತೆಗೆ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ದಕ್ಷಿಣದ ಚಿತ್ರರಂಗದಲ್ಲಿ ಸದ್ಯ ಹಸೆಮಣೆ ಏರುತ್ತಿರೋ ಜೋಡಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ದಿನಗಣನೆ ಶುರುವಾಗಿದೆ. ಅಭಿಮಾನಿಗಳು ಈ ಜೋಡಿಯ ಮದುವೆಯ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಇದೀಗ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಘ್ನೇಶ್, ತಾವು ಮತ್ತು ನಯನತಾರಾ ಮದುವೆಯಾಗುತ್ತಿರುವ ಕುರಿತು ಅಧಿಕೃತವಾಗಿ ಹೇಳಿದ್ದಾರೆ.

    ʻರೌಡಿ ಧಾನ್ʼ ಚಿತ್ರದ ಸೆಟ್‌ನಲ್ಲಿ ಮೊದಲ ಬಾರಿಗೆ ಭೇಟಿಯಾದ ಜೋಡಿ, ಅಲ್ಲಿಂದ ಶುರುವಾದ ಸ್ನೇಹ ನಂತರ ಪ್ರೀತಿಗೆ ತಿರುಗಿ ಇದೀಗ 7 ವರ್ಷಗಳ ನಂತರ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಕುರಿತು ಮಾತನಾಡಿರುವ ವಿಘ್ನೇಶ್, ಇಲ್ಲಿಯವರೆಗೂ ತಮ್ಮ ಸಿನಿಮಾಗೆ ಮತ್ತು ನಮ್ಮ ಖಾಸಗಿ ಜೀವನಕ್ಕೆ ಬೆಂಬಲಿಸಿದ ಅಭಿಮಾನಿಗಳಿಗೆ ಮತ್ತು ಮಾಧ್ಯಮದವರಿಗೆ ಧನ್ಯವಾದ ತಿಳಿಸಿದ್ದಾರೆ. ಇನ್ನು ಈ ವೇಳೆ, ಕಾಲಿವುಡ್ ಸ್ಟಾರ್ ಅಜಿತ್ ಕುಮಾರ್‌ಗೆ ನಿರ್ದೇಶನ ಮಾಡುವ ಕುರಿತು ಅಧಿಕೃತವಾಗಿ ನಿರ್ದೇಶಕ ವಿಘ್ನೇಶ್ ಶಿವನ್ ಅನೌನ್ಸ್ ಮಾಡಿದ್ದಾರೆ. ಇದನ್ನೂ ಓದಿ: ಡೊಳ್ಳು ಚಿತ್ರಕ್ಕೆ ಪ್ರಶಸ್ತಿಗಳ ಸುರಿಮಳೆ : ದಾಖಲೆಯ ರೀತಿಯಲ್ಲಿ ಪ್ರಶಸ್ತಿ ಪಡೆದ ಪವನ್ ಒಡೆಯರ್

    ಇದೇ ಜೂನ್ 9ರಂದು ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಹಾಬಲಿಪುರಂನಲ್ಲಿ ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರೆ. ಜೂನ್ 7 ಮತ್ತು 8ರಂದು ಹಳದಿ ಶಾಸ್ತ್ರ ಮತ್ತು ಮೆಹೆಂದಿ ಶಾಸ್ತ್ರವಿದ್ದು, ಮದುವೆಯ ಬಳಿಕ ಚೆನ್ನೈನಲ್ಲಿ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಏರ್ಪಡಿಸಲಾಗಿದೆ. ಇನ್ನು ನೆಚ್ಚಿನ ಜೋಡಿಯ ಮದುವೆಯನ್ನ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾಯ್ತಿದ್ದಾರೆ.

  • ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್

    ಕುಟುಂಬ ಕಲಹದ ಕಥೆ ಹೊತ್ತು ಬಂದ ವೆಡ್ಡಿಂಗ್ ಗಿಫ್ಟ್ ಟೀಸರ್

    ಕೆಲವೊಂದಷ್ಟು ಸಿನಿಮಾಗಳು ಟೈಟಲ್‍ಗಳಿಂದ, ಮತ್ತೊಂದಷ್ಟು ಸಿನಿಮಾಗಳು ಸ್ಯಾಂಪಲ್ಸ್‍ನಲ್ಲಿಯೇ ಪ್ರೇಕ್ಷಕರನ್ನು ಆಕರ್ಷಿಸುತ್ತವೆ. ಆದರೆ ವೆಡ್ಡಿಂಗ್ ಗಿಫ್ಟ್ ಸಿನಿಮಾ ಈ ಎರಡು ಬಗೆಯಿಂದಲೂ ಚಿತ್ರರಸಿಕರನ್ನು ಸೆಳೆಯುತ್ತಿದೆ. ಅದರಲ್ಲಿಯೂ ಈಗಷ್ಟೇ ಯೂಟ್ಯೂಬ್ ಪ್ರಪಂಚಕ್ಕೆ ಲಗ್ಗೆ ಇಟ್ಟ ವೆಡ್ಡಿಂಗ್ ಗಿಫ್ಟ್ ಟೀಸರ್ ಸಿನಿಮಾದ ಗಟ್ಟಿತನವನ್ನು ತೋರಿಸಿದೆ.

    ಮದುವೆ ನಂತರ ಗಂಡ-ಹೆಂಡತಿ ಸಂಬಂಧದಲ್ಲಿ ಬಿರುಕು ಮೂಡುವುದು. ನಾನು ಎಂಬುವುದು ಸಂಸಾರದಲ್ಲಿ ಬಂದಾಗ ಅದು ಯಾವೆಲ್ಲಾ ರೀತಿ ಬದುಕಿಗೆ ತಿರುವು ನೀಡುತ್ತದೆ. ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ಬಳಸಿಕೊಂಡು ಗಂಡು ಮಕ್ಕಳಿಗೆ ಹೇಗೆಲ್ಲಾ ಹೆಣ್ಣುಮಕ್ಕಳು ಹಿಂಸೆ ನೀಡುತ್ತಾರೆ ಎಂಬ ಸೂಕ್ಷ್ಮ ಕಂಟೆಂಟನ್ನು ಟೀಸರ್‍ನಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಡಲಾಗಿದೆ. ಇದನ್ನೂ ಓದಿ: ಕನ್ನಡದ ಬಹುತೇಕ ದಿಗ್ಗಜರ ಜೊತೆ ನಟಿಸಿರುವ ನಟ ಉದಯ್ ಹುತ್ತಿನಗದ್ದೆ ನಿಧನ

    ವಿಕ್ರಂ ಪ್ರಭು ಚೊಚ್ಚಲ ನಿರ್ದೇಶನವಾದರೂ ಪಳಗಿದ ನಿರ್ದೇಶಕನಂತೆ ತಮ್ಮ ಚಾಕಚಕ್ಯತೆ ತೋರಿಸಿದ್ದು, ನಿರ್ದೇಶನದ ಜೊತೆಗೆ ಸಿನಿಮಾ ನಿರ್ಮಾಣದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡು ನಿಭಾಯಿಸಿದ್ದಾರೆ. ಸೋನು ಗೌಡ, ನಿಶಾನ್ ನಾಣಯ್ಯ ನಾಯಕಿ-ನಾಯಕನಾಗಿ ಅಭಿನಯಿಸಿದ್ದು, ಪವಿತ್ರಾ ಲೋಕೇಶ್, ಅಚ್ಯುತ್ ಕುಮಾರ್ ಸೇರಿದಂತೆ ಅನುಭವಿ ಕಲಾಬಳಗ ಈ ಸಿನಿಮಾದಲ್ಲಿದೆ. ಇದನ್ನೂ ಓದಿ: ಅಣ್ಣಾವ್ರ ಕುಟುಂಬದ ಜೊತೆಗಿನ ನೆನಪು ಹಂಚಿಕೊಂಡ ಕಮಲ್ ಹಾಸನ್

    ಸ್ಯಾಂಡಲ್‍ವುಡ್‍ನಿಂದ ಕೆಲ ವರ್ಷ ದೂರವೇ ಉಳಿದಿದ್ದ ಪ್ರೇಮಾ ವೆಡ್ಡಿಂಗ್ ಗಿಫ್ಟ್ ಮೂಲಕ ಮತ್ತೆ ವಾಪಸ್ ಆಗಿದ್ದು, ಲಾಯರ್ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಹಾಜರಾಗಲಿದ್ದಾರೆ. ಬಾಲಚಂದ್ರ ಪ್ರಭು ಸಂಗೀತ ನಿರ್ದೇಶನ, ಉದಯಲೀಲ ಛಾಯಾಗ್ರಹಣ ಹಾಗೂ ವಿಜೇತ್ ಚಂದ್ರ ಸಂಕಲನ ಸಿನಿಮಾಕ್ಕಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಹಾಡುಗಳ ಹವಾ ಹಾಗೇ ಇರುವ ಹೊತ್ತಿನಲ್ಲಿ ವೆಡ್ಡಿಂಗ್ ಗಿಫ್ಟ್ ಅಂಗಳದಿಂದ ಹೊರ ಬಂದಿರುವ ಟೀಸರ್ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.