Tag: wedding

  • ಲಂಡನ್ ಉದ್ಯಮಿ ಜೊತೆ ಸಾರಾ ಅಲಿ ಖಾನ್ ಮದುವೆ

    ಲಂಡನ್ ಉದ್ಯಮಿ ಜೊತೆ ಸಾರಾ ಅಲಿ ಖಾನ್ ಮದುವೆ

    ಬಾಲಿವುಡ್ ಬೆಡಗಿ ಸಾರಾ ಅಲಿ ಖಾನ್ (Sara Ali Khan) ಸಿನಿಮಾಗಿಂತ ವೈಯಕ್ತಿಕ ವಿಚಾರದಲ್ಲಿ ಹೆಚ್ಚೆಚ್ಚು ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ಲಂಡನ್ ಉದ್ಯಮಿ ಜೊತೆ ಸಾರಾ ಮದುವೆ (Wedding) ಫಿಕ್ಸ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಮರ್ಡರ್ ಮಿಸ್ಟ್ರಿ ಸಿನಿಮಾದಲ್ಲಿ ‘ಜಿಂಗೋ’ ಆದ ಡಾಲಿ

    ನಟಿ ಸಾರಾ ಸಿನಿಮಾ ಅವಕಾಶಗಳು ಕಮ್ಮಿಯಾಗಿರೋದ್ರಿಂದ ಮದುವೆಗೆ ತೆರೆಮರೆಯಲ್ಲಿ ಸಿದ್ಧತೆ ನಡೆಯುತ್ತಿದೆ ಎಂಬುದು ಲೇಟೆಸ್ಟ್ ನ್ಯೂಸ್. ಲಂಡನ್ ಉದ್ಯಮಿಯೋರ್ವನ (London Businessman) ಜೊತೆ ಸದ್ಯದಲ್ಲೇ ನಿಶ್ಚಿತಾರ್ಥ ಫಿಕ್ಸ್ ಆಗಿದ್ದು, ಮುಂದಿನ ವರ್ಷ ಅಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

    ಈ ಹಿಂದೆ ಅನೇಕರೊಂದಿಗೆ ನಟಿಯ ಹೆಸರು ಕೇಳಿ ಬಂದಿತ್ತು. ಸುಶಾಂತ್ ಸಿಂಗ್ ರಜಪೂತ್, ಕಾರ್ತಿಕ್ ಆರ್ಯನ್, ಶುಭಮನ್ ಗಿಲ್ ಸೇರಿದಂತೆ ಅನೇಕರ ಜೊತೆ ನಟಿ ಡೇಟಿಂಗ್ ಸುದ್ದಿ ಹರಿದಾಡಿತ್ತು. ಆದರೆ ಯಾವುದಕ್ಕೂ ಸ್ಪಷ್ಟನೆ ಸಿಕ್ಕಿರಲಿಲ್ಲ. ಈಗ ಲಂಡನ್ ಉದ್ಯಮಿ ಜೊತೆಗಿನ ಮದುವೆ ಮ್ಯಾಟರ್ ಜಸ್ಟ್ ಗಾಸಿಪ್ ಅಥವಾ ನಿಜವಾಗಲೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರಾ? ಎಂದು ಸಾರಾ ಹೇಳುವವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಸಿಂಬಾ, ಲವ್ ಆಜ್ ಕಲ್, ಮರ್ಡರ್ ಮುಬಾರಕ್ ಸೇರಿದಂತೆ ಹಲವು ಚಿತ್ರಗಳಲ್ಲಿ ಸಾರಾ ನಟಿಸಿದ್ದಾರೆ. ಕೆರಿಯರ್‌ನಲ್ಲಿ ಹೇಳಿಕೊಳ್ಳುವಂತಹ ಬ್ರೇಕ್ ಸೈಫ್ ಪುತ್ರಿಗೆ ಸಿಗಲಿಲ್ಲ.

  • ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ನಾಗಚೈತನ್ಯ ಮದುವೆ ಡೇಟ್ ಫಿಕ್ಸ್- ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಭರ್ಜರಿ ಪ್ಲ್ಯಾನ್

    ಸೌತ್‌ನ ನಟಿ ಸಮಂತಾರ ಮಾಜಿ ಪತಿ ನಾಗ ಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಮದುವೆಗೆ (Wedding) ದಿನಾಂಕ ನಿಗದಿಯಾಗಿದೆ. ಅದಷ್ಟೇ ಅಲ್ಲ, ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ತೆರೆಮರೆಯಲ್ಲಿ ತಯಾರಿ ಕೂಡ ಜೋರಾಗಿ ನಡೆಯುತ್ತಿದೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು

    ಈ ವರ್ಷದ ಅಂತ್ಯದಲ್ಲಿ ನಾಗ ಚೈತನ್ಯ ಮತ್ತು ಶೋಭಿತಾ ಹಸೆಮಣೆ ಏರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ಅಥವಾ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್ ಮಾಡಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಕಲ ತಯಾರಿ ಕೂಡ ನಡೆಯುತ್ತಿದೆಯಂತೆ. ಇನ್ನೂ ಇತ್ತೀಚೆಗೆ ಮಗನ ನಿಶ್ಚಿತಾರ್ಥದ ಕುರಿತು ನಾಗರ್ಜುನ ಅಕ್ಕಿನೇನಿ ಘೋಷಿಸಿದ್ದರು. ಈಗ ಮದುವೆ ಬಗ್ಗೆ ಕೂಡ ಅಧಿಕೃತ ಮಾಹಿತಿ ನೀಡ್ತಾರಾ? ಕಾದುನೋಡಬೇಕಿದೆ.

    ಆ.8ರಂದು ಸೈಲೆಂಟ್ ಆಗಿ ನಟಿ ಶೋಭಿತಾಗೆ ರಿಂಗ್ ತೊಡಿಸಿ ಸಮಂತಾ ಫ್ಯಾನ್ಸ್‌ಗೆ ನಾಗಚೈತನ್ಯ ಶಾಕ್ ಕೊಟ್ಟಿದ್ದರು. ಈಗ ಮದುವೆ ಮುಹೂರ್ತ ಫಿಕ್ಸ್ ಮಾಡುವ ಮೂಲಕ ಮತ್ತೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ.

    ಇನ್ನೂ ಹಲವು ವರ್ಷಗಳು ಪ್ರೀತಿಸಿ ಸಮಂತಾರನ್ನು (Actress Samantha) 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆ ಜರುಗಿತ್ತು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದರು.

  • ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ಸಂಗಾತಿ ಇಲ್ಲದೆ ಬದುಕೋದು ಕಷ್ಟ- ಮದುವೆ ಬಗ್ಗೆ ಮಾತನಾಡಿದ ಕಂಗನಾ

    ಬಾಲಿವುಡ್ ಬೆಡಗಿ ಕಂಗನಾ ರಣಾವತ್ (Kangana Ranaut) ಸದ್ಯ ‘ಎಮರ್ಜೆನ್ಸಿ’ (Emergency Film) ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಸಂದರ್ಶನದ ವೇಳೆ, ಎಲ್ಲರಿಗೂ ಸಂಗಾತಿ ಇರಬೇಕು. ನಾನು ಕೂಡ ಮದುವೆಯಾಗುತ್ತೇನೆ (Wedding) ಎಂದು ನಟಿ ಮಾತನಾಡಿದ್ದಾರೆ.

    ಸಂದರ್ಶನದಲ್ಲಿ ಮದುವೆ ಕುರಿತು ಎದುರಾದ ಪ್ರಶ್ನೆಗೆ ಎಲ್ಲರಿಗೂ ಸಂಗಾತಿ ಇರಬೇಕು ಎಂದು ನಾನು ಭಾವಿಸುತ್ತೇನೆ. ಸಂಗಾತಿ ಇಲ್ಲದೆ ಬದುಕೋದು ಕಷ್ಟ ಎಂದಿದ್ದಾರೆ ಕಂಗನಾ. ಆದರೆ ಸಂಗಾತಿಯನ್ನು ಹುಡುಕುವುದೇ ದೊಡ್ಡ ಸವಾಲು. ನಾನು ಕೂಡ ಮದುವೆಗೆ ಸಿದ್ಧವಾಗಿದ್ದೇನೆ. ಆದರೆ ಆರ್ಗೆನಿಕ್ ಆಗಿ ಲವ್ ಆಗಲಿ ಎಂದು ಭವಿಷ್ಯದ ಬಗ್ಗೆ ಕಂಗನಾ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ನೋಡಲು ಪುತ್ರನ ಜೊತೆ ಜೈಲಿಗೆ ಬಂದ ವಿಜಯಲಕ್ಷ್ಮಿ

    ಈ ವೇಳೆ, ಚಿಕ್ಕ ವಯಸ್ಸಿನಲ್ಲಿ ಮದುವೆಯಾಗುವ ಪ್ರಯೋಜನಗಳನ್ನು ವಿವರಿಸಿದ್ದಾರೆ. ನೀವು ವಯಸ್ಸಾದಂತೆ, ಪರಸ್ಪರ ಹೊಂದಿಕೊಳ್ಳಲು ನಿಮಗೆ ಹೆಚ್ಚು ಕಷ್ಟವಾಗುತ್ತದೆ ಎಂದಿದ್ದಾರೆ. ನೀವು ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೆ ಹೊಂದಿಕೊಳ್ಳೋದು ಅದು ತುಂಬಾ ಸುಲಭ. ಹಳ್ಳಿಗಳಲ್ಲಿ ಜನರು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗುತ್ತಾರೆ. ಆ ಸಮಯದಲ್ಲಿ ನಿಮ್ಮ ಉತ್ಸಾಹವು ತುಂಬಾ ತೀವ್ರವಾಗಿರುತ್ತದೆ ಎಂದು ನಟಿ ಮಾತನಾಡಿದ್ದಾರೆ.

    ಅಂದಹಾಗೆ, ಕಂಗನಾ ನಟಿಸಿ, ನಿರ್ದೇಶನ ಮಾಡಿರುವ ‘ಎಮರ್ಜೆನ್ಸಿ’ ಸಿನಿಮಾ ಇದೇ ಸೆ.6ರಂದು ರಿಲೀಸ್ ಆಗ್ತಿದೆ. ಇಂದಿರಾ ಗಾಂಧಿ ಪಾತ್ರದಲ್ಲಿ ನಟಿ ಜೀವ ತುಂಬಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ಜನರ ಮನಗೆದ್ದಿದೆ.‌ ಸಿನಿಮಾಗಾಗಿ ಎದುರು ನೋಡ್ತಿದ್ದಾರೆ.

  • ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಮದುವೆ ಆಮಂತ್ರಣ ನೀಡಿದ ‘ಕಾಟೇರ’ ಡೈರೆಕ್ಟರ್

    ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೆ ಮದುವೆ ಆಮಂತ್ರಣ ನೀಡಿದ ‘ಕಾಟೇರ’ ಡೈರೆಕ್ಟರ್

    ಕಾಟೇರ, ರಾಬರ್ಟ್ ಸಿನಿಮಾ ನಿರ್ದೇಶಕ ತರುಣ್ ಸುಧೀರ್ (Tharun Sudhir) ಅವರು ನಟಿ ಸೋನಲ್ (Actress Sonal) ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಂಭ್ರಮಕ್ಕೆ ಸಾಕ್ಷಿಯಾಗಲು ಸ್ಯಾಂಡಲ್‌ವುಡ್ ತಾರೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ಕೊಡುವುದರಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ:ಧನುಷ್ ನಟನೆಯ ಬಾಲಿವುಡ್ ಸಿನಿಮಾದಲ್ಲಿ ಕೃತಿ ಸನೋನ್ ನಾಯಕಿ

    ಸೋನಲ್ ಜೊತೆ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿರುವ ಡೈರೆಕ್ಟರ್ ತರುಣ್ ಸುಧೀರ್ ಈಗ ಸಿನಿಮಾ ಸೆಲೆಬ್ರಿಟಿಗಳ ಮನೆಗೆ ಹೋಗಿ ಮದುವೆ ಪತ್ರಿಕೆ ನೀಡಿದ್ದಾರೆ. ವಸಂತನಗರದಲ್ಲಿರುವ ಶ್ರೀಮುರಳಿ ಮನೆಗೆ ಭೇಟಿ ನೀಡಿ ಮದುವೆಯ ಕರೆಯೋಲೆ ಕೊಟ್ಟು ಬಂದಿದ್ದಾರೆ ತರುಣ್.

    ಜೆಪಿ ನಗರದಲ್ಲಿರುವ ಆಪ್ತರಾದ ಸುದೀಪ್ (Sudeep) ಮನೆಗೆ ಭೇಟಿ ಕೊಟ್ಟು ಮದುವೆಗೆ ಕರೆದಿದ್ದಾರೆ. ಬಳಿಕ ಸುದೀಪ್ ಜೊತೆ ಕೆಲ ಸಮಯ ಕಳೆದಿದ್ದಾರೆ.

    ಯಶ್ (Yash) ಮತ್ತು ರಾಧಿಕಾ ಪಂಡಿತ್ (Radhika Pandit) ನಿವಾಸಕ್ಕೆ ಭೇಟಿ ನೀಡಿ ಮದುವೆ ಪತ್ರಿಕೆ ನೀಡಿದ ಬಳಿಕ ‘ಕೆಜಿಎಫ್’ ನಿರ್ದೇಶಕ ಪ್ರಶಾಂತ್ ನೀಲ್ (Prashanth Neel) ದಂಪತಿಗೂ ಮದುವೆಗೆ ಬರಲು ಪ್ರೀತಿಯಿಂದ ಕರೆಯೋಲೆ ಕೊಟ್ಟಿದ್ದಾರೆ.

    ದರ್ಶನ್ ಸಹೋದರ ದಿನಕರ್ ಮನೆಗೆ ಭೇಟಿ ನೀಡಿ ಮದುವೆ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅದಷ್ಟೇ ಅಲ್ಲ, ರಿಯಲ್ ಸ್ಟಾರ್ ಉಪೇಂದ್ರ, ರಮೇಶ್ ಅರವಿಂದ್ ದಂಪತಿ, ಹಂಸಲೇಖ, ಸುಮಲತಾ, ಜಗ್ಗೇಶ್, ರಾಘವೇಂದ್ರ ರಾಜ್‌ಕುಮಾರ್, ಅಶ್ವಿನಿ ಪುನೀತ್ ರಾಜ್‌ಕುಮಾರ್, ಲವ್ಲಿ ಸ್ಟಾರ್ ಪ್ರೇಮ್ ಕುಟುಂಬಕ್ಕೆ ಮದುವೆ ಪತ್ರಿಕೆ ನೀಡಿದ್ದಾರೆ. ಈ ವೇಳೆ, ಎಲ್ಲಾ ಸ್ಟಾರ್ಸ್‌ಗೆ ಪರಿಸರ ಸ್ನೇಹಿ ಆಹ್ವಾನ ಪತ್ರಿಕೆ ನೀಡಿದ್ದು, ಎಲ್ಲರ ಗಮನ ಸೆಳೆದಿದೆ.

    ಇದಷ್ಟೇ ಅಲ್ಲ, ರಾಜಕೀಯ ರಂಗದಲ್ಲಿ ಗುರುತಿಸಿಕೊಂಡಿರುವ ಆರ್. ಅಶೋಕ್, ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ, ಡಿ.ಕೆ ಶಿವಕುಮಾರ್ ಅವರಿಗೂ ತರುಣ್ ಸುಧೀರ್ ವಿವಾಹದ ಪತ್ರಿಕೆ ನೀಡಿದ್ದಾರೆ.

    ಇನ್ನೂ ತರುಣ್ ಸುಧೀರ್ ಮತ್ತು ಸೋನಲ್ ಜೋಡಿ ಇದೇ ಆಗಸ್ಟ್ 10, 11ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಆಗಸ್ಟ್ 10ರಂದು ಸಂಜೆ 6:30 ನಂತರ ಆರತಕ್ಷತೆ ಕಾರ್ಯಕ್ರಮ, ಆ.11ರಂದು ಬೆಳಗ್ಗೆ 10:50 ರಿಂದ 11:35ರ ಶುಭ ಮುಹೂರ್ತದಲ್ಲಿ ಮದುವೆ ನಡೆಯಲಿದೆ. ಹಿಂದೂ ಸಂಪ್ರದಾಯದಂತೆ ಮದುವೆ ಜರುಗಲಿದೆ.

  • ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ

    ಸೋನಲ್-ತರುಣ್ ಮದುವೆ ಸಂಭ್ರಮ: ಬ್ಯಾಚುಲರೇಟ್ ಪಾರ್ಟಿಯ ಗುಂಗಲಿ ನಟಿ

    ಕಾಟೇರ ಚಿತ್ರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ ಮತ್ತು ನಟಿ ಸೋನಲ್ ಮದುವೆ ಕಾರ್ಯಕ್ರಮಗಳು ಶುರುವಾಗಿವೆ. ಮದುವೆಗೂ ಮುನ್ನ ಫ್ಯಾಮಿಲಿ ಜೊತೆ ಸೋನಲ್ ಪಾರ್ಟಿ ಮಾಡಿದ್ದಾರೆ. ಕುಟುಂಬದ ಜೊತೆ ಬ್ಯಾಚುಲರೇಟ್ ಪಾರ್ಟಿಯಲ್ಲಿ ಸೋನಲ್ ಕುಣಿದು ಕುಪ್ಪಳಿಸಿದ್ದಾರೆ.  ಮಗಳಿಗಾಗಿ ಸರ್ಪ್ರೈಸ್ ಪಾರ್ಟಿ ಕೊಟ್ಟ ಸಂಭ್ರಮಕ್ಕೆ ಕಾರಣರಾಗಿದ್ದಾರೆ ಸೋನಲ್ ತಾಯಿ ಮತ್ತು ತಂಗಿ.

    ಗಸ್ಟ್ 10 ಮತ್ತು 11ನೇ ತಾರೀಖು ಬೆಂಗಳೂರಿನಲ್ಲಿ ಹೊಸ ಜೀವನಕ್ಕೆ ಕಾಲಿಡುತ್ತಿದ್ದಾರೆ  ಕಾಟೇರ ಖ್ಯಾತಿಯ ನಿರ್ದೇಶಕ ತರುಣ್ ಸುಧೀರ್ (Tarun Sudhir) ಮತ್ತು ನಟಿ ಸೋನಲ್‍ (Sonal). 10ನೇ ತಾರೀಖು ಆರತಕ್ಷತೆ ಕಾರ್ಯಕ್ರಮವಿದ್ದರೆ 11ನೇ ತಾರೀಖು ಈ ಜೋಡಿ ಸಪ್ತಪದಿ ತುಳಿಯಲಿದೆ. ಮದುವೆ (Marriage) ಕುರಿತಾಗಿ ಮಾಧ್ಯಮಗಳ ಜೊತೆ ಅನೇಕ ವಿಷಯಗಳನ್ನು ಹಂಚಿಕೊಂಡಿದೆ ಈ ಜೋಡಿ.

    ಲವ್‍ ಸ್ಟೋರಿಗೆ ದರ್ಶನ್ ಕಾರಣ

    ಈ ಜೋಡಿಯ ಲವ್ ಸ್ಟೋರಿಗೆ ದರ್ಶನ್ ಕಾರಣವಂತೆ. ಈ ಕುರಿತಂತೆ ಮಾತನಾಡಿದ್ದಾರೆ ತರುಣ್. ‘ರಾಬರ್ಟ್‌ ಸೆಟ್ ನಲ್ಲಿ ದರ್ಶನ್ ಸರ್ ತಮಾಷೆಯಾಗಿ ರೇಗಿಸ್ತಿದ್ರು. ಸೋನಾಲ್ ಮದುವೆ ಮಾಡಿಕೊಳ್ತಿಯಾ ಅಂತ ರೇಗಿಸ್ತಿದ್ರು.  ಸೋನಾಲ್ ಯಾವ ಸೆಟ್ ಗೆ ಹೋದ್ರೂ ಮದ್ವೆ ಬಗ್ಗೆ ಕೇಳ್ತಿದ್ರಂತೆ. ಸೋನಾಲ್ ಫೋನ್ ಮಾಡಿ ಅವತ್ತು ರೂಮರ್ಸ್ ಬಗ್ಗೆ ಹೇಳಿದ್ರು. 2023 ಜನವರಿಯಲ್ಲಿ ಮತ್ತಷ್ಟು ಕ್ಲೋಸ್ ಆಗ್ತಾ ಹೋದ್ವಿ. ಅವ್ರ ಪ್ರೂಚರ್, ಫ್ಯಾಮಿಲಿ ಬಗ್ಗೆ ನೋಡ್ತಾ ಬಂದ್ವಿ. ಕಾಟೇರ ರಿಲೀಸ್ ಆಗೋವರೆಗೂ ಮದುವೆಗೆ ಟೈಂ ಕೇಳಿದ್ದೆ. ಕಾಟೇರ ಸಿನಿಮಾ ರೆಸ್ಪಾನ್ಸ್ ಮೇಲೆ ನನ್ ಮದ್ವೆಗೆ ಡಿಸೈಡ್ ಮಾಡಿದ್ದು. ದರ್ಶನ್ ಸರ್ ಕೂಡಾ ಸೋನಲ್ ಮನೇಲಿ ಮಾತಾಡಿದ್ರು. ಫೈನಲಿ ಈಗ ಫ್ಯಾಮಿಲಿಯಲ್ಲಿ ಮಾತುಕತೆ ಮಾಡಿ ಮದುವೆಗೆ ನಿರ್ಧಾರ ಮಾಡಿದ್ವಿ’ ಅಂತಾರೆ.

    ತಮಾಷೆನೇ ನಿಜಾ ಆಯ್ತು..

    ಲವ್ ಮತ್ತು ಮದುವೆ ಕುರಿತಂತೆ ಮಾತಾಡಿದ ಸೋನಲ್ ಮಂಥೆರೋ ‘ನಾವು ಟಚ್ ಅಲ್ಲಿ ಇರ್ತಿರಲಿಲ್ಲ. ರಾಬರ್ಟ್ ಸಿನಿಮಾ ಟೈಮ್ ನಲ್ಲಿ  ದರ್ಶನ್ ಸರ್ ತಮಾಷೆ ಮಾಡ್ತಿದ್ರು. ರೀಸೆಂಟ್ ಆಗಿ ಎಲ್ರು ಹೇಳೋದನ್ನ ಒಮ್ಮೆ ಥಿಂಕ್ ಮಾಡೋಣ ಅಂತ ಟ್ರೈ ಮಾಡಿದ್ವಿ. ನಾವು ನಮ್ಮ ಲವ್ ನ ಸೀಕ್ರೆಟ್ ಆಗಿ ಇಡೋದು ನನ್ನ ಡಿಸಿಷನ್ ಆಗಿತ್ತು. ಮದ್ವೆ ಆದ್ಮೇಲೂ ಸಿನಿಮಾ ನಿಲ್ಲಸಲ್ಲ ಮಾಡ್ತೀನಿ. ದರ್ಶನ್ ಸರ್ ನ ತರುಣ್ ಮೀಟ್ ಆಗಿದ್ದಾರೆ. ನನಗೆ ಅಲ್ಲಿ‌ಹೋಗೋಕೆ ಅವ್ರನ್ನ ಆತರ ನೋಡೋಕೆ ಇಷ್ಟ ಇಲ್ಲ. ಅವ್ರು ಅಷ್ಟರಲ್ಲಿ ಬರ್ತಾರೆ ಅನ್ನಿಸುತ್ತೆ ನೋಡೋಣ’ ಅಂತಾರೆ.

     

    ದರ್ಶನ್ ಸರ್ ನ ಮಿಸ್ ಮಾಡ್ಕೋತೀವಿ ಅಂತಾರೆ ತರುಣ್ ಮತ್ತು ಸೋನಲ್.  ದರ್ಶನ್ ಸರ್ ಎಲ್ಲಿದ್ರೂ ಅವ್ರ ವಿಶಸ್ ಇರುತ್ತೆ.  ದರ್ಶನ್ ಸರ್ ಆಶೀರ್ವಾದ ಯಾವಾಗ್ಲೂ ಇರುತ್ತೆ. ನಮ್ ತಂದೆಯಷ್ಟೇ ದರ್ಶನ್ ಸರ್ ನ ಗೌರವಿಸ್ತೀನಿ. ಬಾಬಿಗೆ (ವಿಜಯಲಕ್ಷ್ಮಿ) ಇನ್ವಿಟೇಷನ್ ಕೊಟ್ಟಿದ್ದೀನಿ. ಅವ್ರು ಬರ್ತೀನಿ ಅಂದಿದಾರೆ. ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗ್ತೀವಿ. ಬೆಂಗಳೂರಿನಲ್ಲಿ ಮದುವೆ ನಂತರ ಮಂಗಳೂರಿನಲ್ಲೂ ಒಂದು ಫಂಕ್ಷನ್ ಮಾಡ್ತಾರಂತೆ ತರುಣ್ ಮತ್ತು ಸೋನಲ್.

  • 4500 ಕೋಟಿ ಒಡೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೃತಿ ಸನೋನ್?

    4500 ಕೋಟಿ ಒಡೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೃತಿ ಸನೋನ್?

    ಬಾಲಿವುಡ್ ಬೆಡಗಿ ಕೃತಿ ಸನೋನ್ (Kriti Sanon) ಪಡ್ಡೆಹುಡುಗರಿಗೆ ಬ್ಯಾಡ್ ನ್ಯೂಸ್ ಕೊಟ್ಟಿದ್ದಾರೆ. ಉದ್ಯಮಿ ಕಬೀರ್ ಜೊತೆ ಕೃತಿ ಮದುವೆ ಎಂದು ಸುದ್ದಿಯೊಂದು ಹೊರಬಿದ್ದಿದೆ. ಸದ್ಯದಲ್ಲೇ ಗೆಳೆಯನ ಜೊತೆ ದಾಂಪತ್ಯ  ಜೀವನಕ್ಕೆ (Wedding) ಕಾಲಿಡಲು ತಯಾರಿ ಮಾಡಿಕೊಳ್ತಿದ್ದಾರೆ ಎಂಬ ಸುದ್ದಿಯೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

    ‘ಆದಿಪುರುಷ್’ ಹೀರೋಯಿನ್ ಕೃತಿ ಇತ್ತೀಚಿನ ದಿನಗಳಲ್ಲಿ ಸಿನಿಮಾಗಿಂತ ಖಾಸಗಿ ವಿಚಾರವಾಗಿಯೇ ಭಾರೀ ಸುದ್ದಿಯಾಗ್ತಿದ್ದಾರೆ. ಸದ್ಯ ಉದ್ಯಮಿ ಕಬೀರ್ ಬಹಿಯಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದಾರೆ. ಇತ್ತೀಚೆಗೆ ಬಾಯ್‌ಫ್ರೆಂಡ್ ಜೊತೆ ಗ್ರೀಸ್‌ನಲ್ಲಿ ಕೃತಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಇದು ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದೆ. ಇದನ್ನೂ ಓದಿ:ಜ್ಯೂ.ಎನ್‌ಟಿಆರ್ ಫ್ಯಾನ್ಸ್‌ಗೆ ಸಿಹಿಸುದ್ದಿ- ಆ.5ರಂದು ಹೊರಬೀಳಲಿದೆ ‘ದೇವರ’ ಚಿತ್ರದ ಅಪ್‌ಡೇಟ್

    ಈಗ ಲೇಟೆಸ್ಟ್ ವಿಚಾರ ಏನೆಂದರೆ, 4500 ಕೋಟಿ ಒಡೆಯ ಕಬೀರ್ ಜೊತೆ ಮದುವೆಗೆ ನಟಿ ಸಜ್ಜಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಡೇಟಿಂಗ್ ವಿಷ್ಯ ಹೊರಬಿದ್ದ ಬೆನ್ನಲ್ಲೇ ಕೃತಿ ಮದುವೆ ಬಗ್ಗೆ ಗುಸು ಗುಸು ಶುರುವಾಗಿದೆ.

    ಎಂ.ಎಸ್ ಧೋನಿ ದಂಪತಿ ಜೊತೆ ಉತ್ತಮ ಒಡನಾಟ ಹೊಂದಿರುವ ಕಬೀರ್ ಬಹಿಯಾ ಅವರ ಕುಟುಂಬದ ಆಸ್ತಿಯ ಮೌಲ್ಯ 4500 ಕೋಟಿ ರೂ. ಎನ್ನಲಾಗಿದೆ. ಶ್ರೀಮಂತ ಕುಟುಂಬಗಳಲ್ಲಿ ಬಹಿಯಾ ಫ್ಯಾಮಿಲಿ ಕೂಡ ಒಂದಾಗಿದ್ದು, ಈ ಮನೆಗೆ ನಟಿ ಸೊಸೆಯಾಗ್ತಾರೆ ಎನ್ನಲಾಗಿದೆ. ಈ ಸುದ್ದಿ ನಿಜನಾ? ಎಂದು ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.

    ಅಂದಹಾಗೆ, ಕಳೆದ ವರ್ಷ ‘ಬಾಹುಬಲಿ’ ಹೀರೋ ಪ್ರಭಾಸ್ (Prabhas) ಜೊತೆ ಕೃತಿ ಸನೋನ್ ಹೆಸರು ಕೇಳಿ ಬಂದಿತ್ತು. ಇನ್ನೇನು ಮದುವೆ ಆಗಿಯೇ ಬಿಡುತ್ತಾರೆ ಎಂದೇ ಹೇಳಲಾಗಿತ್ತು. ಆ ಮೇಲೆ ಈ ವಿಚಾರ ಸುಳ್ಳು ಎಂದು ಎಲ್ಲರ ಅರಿವಿಗೆ ಬಂದಿತ್ತು.

  • ‘ಕಾಟೇರ’ ಡೈರೆಕ್ಟರ್ ತರುಣ್ ಜೊತೆ ಸೋನಲ್ ಮದುವೆ ಡೇಟ್ ಫಿಕ್ಸ್

    ‘ಕಾಟೇರ’ ಡೈರೆಕ್ಟರ್ ತರುಣ್ ಜೊತೆ ಸೋನಲ್ ಮದುವೆ ಡೇಟ್ ಫಿಕ್ಸ್

    ಪ್ರತಿ ಸಿನಿಮಾದಲ್ಲಿಯೂ ತಮ್ಮ ಕ್ರಿಯೆಟಿವಿಟಿ ಮೂಲಕ ಪ್ರೇಕ್ಷಕರ ಮುಂದೆ ಹೊಸ ಕಥೆ ತರುವ ನಿರ್ದೇಶಕ ತರುಣ್ ಸುಧೀರ್ (Tharun Sudhir) ಈಗ ತಮ್ಮ ಜೀವನದ ರಿಯಲ್ ನಾಯಕಿಯನ್ನ ಆಯ್ಕೆ ಮಾಡಿಕೊಂಡಿದ್ದಾರೆ. ಈ ವಿಚಾರವನ್ನ ತಮ್ಮದೇ ಸ್ಟೈಲಿನಲ್ಲಿ ಕ್ರಿಯೆಟಿವ್ ಆಗಿ ಅಭಿಮಾನಿಗಳು ಮತ್ತು ಸ್ನೇಹಿತರ ಮುಂದೆ ಪ್ರಸೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಪ್ರಭಾಸ್ ಹೊಸ ಚಿತ್ರಕ್ಕೆ ನಾಯಕಿಯಾದ ಪಾಕಿಸ್ತಾನಿ ನಟಿ

    ಡೈರೆಕ್ಟರ್ ತರುಣ್ ಸುಧೀರ್ ಮತ್ತು ಸೋನಲ್ (Actress Sonal) ಇಬ್ಬರು ದಾಂಪತ್ಯ (Wedding) ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ವಿಚಾರವನ್ನ ಬ್ಯೂಟಿಫುಲ್ ಆಗಿರೋ ವಿಡಿಯೋ ಮೂಲಕ ತಿಳಿಸಿದ್ದಾರೆ. ತರುಣ್ ಮತ್ತು ಸೋನಲ್ ಇಬ್ಬರು ಸಿನಿಮಾ ಇಂಡಸ್ಟ್ರಿಯವರೇ ಆಗಿರೋದ್ರಿಂದ ತಮ್ಮ ಪ್ರಿ ವೆಡ್ಡಿಂಗ್ ವಿಡಿಯೋವನ್ನ ಥಿಯೇಟರ್‌ನಲ್ಲಿಯೇ ಶೂಟ್ ಮಾಡಿದ್ದಾರೆ.

    ನವರಂಗ್ ಥಿಯೇಟರ್‌ನಲ್ಲಿ ಈ ವಿಡಿಯೋ ಶೂಟ್ ಮಾಡಿದ್ದು, ಸಿನಿಮಾ ಸೀನ್ ರೀತಿಯೇ ತರುಣ್ ಮತ್ತು ಸೋನಲ್ ವಿಡಿಯೋ ಮೂಡಿ ಬಂದಿದೆ. ಸಿನಿಮಾಟೋಗ್ರಾಫರ್ ಎ.ಜೆ ಶೆಟ್ಟಿ ಈ ವಿಡಿಯೋ ಶೂಟ್ ಮಾಡಿದ್ದಾರೆ. ಆಗಸ್ಟ್ 10, 11ರಂದು ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಫ್ಯಾಲೆಸ್‌ನಲ್ಲಿ ವಿವಾಹ ಜರುಗಲಿದೆ.

    ಸಾಮಾನ್ಯವಾಗಿ ಪ್ರಿ ವೆಡ್ಡಿಂಗ್ ಅಂದರೆ ಜನರು ಸಿನಿಮಾ ಶೈಲಿಯಲ್ಲಿ ಇರಬೇಕು ಅಂತ ಸಿನಿಮ್ಯಾಟಿಕ್ ಆಗಿ ಶೂಟ್ ಮಾಡ್ತಾರೆ. ಆದರೆ ತರುಣ್ ಮತ್ತು ಸೋನಲ್ ಇಬ್ಬರೂ ಸಿನಿಮಾದವರೇ ಆಗಿರೋದ್ರಿಂದ ಬೇರೆಯದ್ದೇ ಸ್ಟೈಲಿನಲ್ಲಿ ಇರಲಿ ಅಂತ ಥಿಯೇಟರ್‌ನಲ್ಲಿ ಶೂಟ್ ಮಾಡಿದ್ದಾರೆ. ಅದಷ್ಟೇ ಅಲ್ಲದೆ, ಸಿನಿಮಾ ಅಂದರೆ ಸಿಂಗಲ್ ಸ್ಕ್ರಿನ್ ಥಿಯೇಟರ್ ಅದರಲ್ಲೂ ನಿರ್ದೇಶಕ ತರುಣ್ ಚಿಕ್ಕ ವಯಸ್ಸಿನಿಂದಲೂ ನವರಂಗ್ ಥಿಯೇಟರ್‌ನಲ್ಲಿ ಸಿನಿಮಾಗಳನ್ನ ನೋಡಿಕೊಂಡು ಬಂದವರು. ಈಗ ತಮ್ಮ ನಿರ್ದೇಶನದ ಸಿನಿಮಾಗಳು ನವರಂಗ್ ಥಿಯೇಟರ್‌ನಲ್ಲಿ ಶತದಿನೋತ್ಸವ ಪೂರೈಸಿವೆ. ಹಾಗಾಗಿ ನವರಂಗ್ ಥಿಯೇಟರ್‌ನಲ್ಲೇ ತಮ್ಮ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ್ದಾರೆ.

    ಇನ್ನು ಪ್ರಿ ವೆಡ್ಡಿಂಗ್ ಶೂಟ್‌ನಲ್ಲಿ ತರುಣ್ ಮತ್ತು ಸೋನಲ್ ಬ್ಲ್ಯಾಕ್ ಬಣ್ಣದ ಔಟ್ ಫಿಟ್‌ನಲ್ಲಿ ಕಾಣಿಸಿಕೊಂಡಿದ್ದು, ತರುಣ್‌ಗೆ ಡಿಸೈನರ್ ಚೇತನ್ ಕಾಸ್ಟ್ಯೂಮ್ ಡಿಸೈನ್ ಮಾಡಿದ್ದಾರೆ. ಸೋನಲ್‌ಗೆ ರಶ್ಮಿ ಎಂಬುವವರು ಡಿಸೈನ್ ಮಾಡಿದ್ದಾರೆ. ಸದ್ಯ ತರುಣ್ ಮದುವೆ ಸಂಭ್ರಮ ಜೋರಾಗಿದ್ದು, ಇಷ್ಟು ದಿನ ಹೀರೋಯಿನ್ ಮತ್ತು ಡೈರೆಕ್ಟರ್ ಆಗಿದ್ದ ಸೋನಲ್ ಮತ್ತು ತರುಣ್ ಇನ್ನು ಕೆಲವೇ ದಿನಗಳಲ್ಲಿ ಸತಿ ಪತಿಗಳಾಗಿ ಜೀವನ ಶುರು ಮಾಡಲಿದ್ದಾರೆ.

  • ಸೋನಲ್‌ ಜೊತೆ ತರುಣ್‌ ರೊಮ್ಯಾಂಟಿಕ್‌ ಫೋಟೋಶೂಟ್‌- ಮದುವೆ ಬಗ್ಗೆ ಕೊಟ್ರು ಗುಡ್‌ ನ್ಯೂಸ್

    ಸೋನಲ್‌ ಜೊತೆ ತರುಣ್‌ ರೊಮ್ಯಾಂಟಿಕ್‌ ಫೋಟೋಶೂಟ್‌- ಮದುವೆ ಬಗ್ಗೆ ಕೊಟ್ರು ಗುಡ್‌ ನ್ಯೂಸ್

    ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir)  ಮತ್ತು ಸೋನಲ್ (Sonal) ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಿಶೇಷ ಫೋಟೋಶೂಟ್ ಮೂಲಕ ಮದುವೆ ಬಗ್ಗೆ ಈ ಜೋಡಿ ಸೋಷಿಯಲ್‌ ಮೀಡಿಯಾದಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ:‘ರಾಜಾ ರಾಣಿ’ ಶೋಗೆ ಬಂದ್ಮೇಲೆ ನನ್ನ ಅಸ್ತಿತ್ವ ಕಾಣಿಸುತ್ತಿದೆ: ಅದಿತಿ ಪ್ರಭುದೇವ

    ಕಪ್ಪು ಬಣ್ಣ ಮತ್ತು ಲೈಟ್ ಬಣ್ಣದ ಉಡುಗೆಯಲ್ಲಿ ಚೆಂದದ ಫೋಟೋಶೂಟ್ ಮಾಡಿಸಿ ಮದುವೆ ಬಗ್ಗೆ ಇಬ್ಬರೂ ಅಧಿಕೃತ ಘೋಷಣೆ ಮಾಡಿದ್ದಾರೆ. ಈ ಮೂಲಕ ವದಂತಿಗಳಿಗೆ ತರುಣ್ ಮತ್ತು ಸೋನಲ್ ತೆರೆ ಎಳೆದಿದ್ದಾರೆ.

    ಇದೇ ಆಗಸ್ಟ್ 10ರಂದು ಸೋನಲ್ ಮತ್ತು ತರುಣ್ ಸುಧೀರ್ ಆರತಕ್ಷತೆ, ಆ.11ರಂದು ಮದುವೆ ನಿಶ್ಚಯವಾಗಿದೆ. ಬೆಂಗಳೂರಿನ ಕೆಂಗೇರಿ ಬಳಿ ಇರುವ ಪೂರ್ಣಿಮಾ ಕನ್ವೆಷನ್ ಹಾಲ್‌ನಲ್ಲಿ ಈ ಜೋಡಿಯ ಮದುವೆ ಸಂಭ್ರಮ ಜರುಗಲಿದೆ.

    ಅಂದಹಾಗೆ, ‘ರಾಬರ್ಟ್’ (Robert) ಸಿನಿಮಾ ಸೆಟ್‌ನಲ್ಲಿ ಸೋನಲ್ ಜೊತೆಗಿನ ಪರಿಚಯವೇ ಇಂದು ಮದುವೆಗೆ ಮುನ್ನುಡಿ ಬರೆದಿದೆ. ಇಬ್ಬರ ಮದುವೆಗೆ ಮುನ್ನುಡಿ ಬರೆದಿದ್ದೇ ದರ್ಶನ್. ಈಗ ಬದುಕಿನ ಹೊಸ ಹೆಜ್ಜೆ ಇಡೋದಕ್ಕೆ ಈ ಜೋಡಿ ರೆಡಿಯಾಗಿದ್ದಾರೆ. ಗುಡ್ ನ್ಯೂಸ್ ಕೊಟ್ಟಿರುವ ಈ ಕಪಲ್‌ಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

  • ಜೀವನದ ರಿಯಲ್ ಹೀರೋಯಿನ್ ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾದ ‘ಕಾಟೇರ’ ಡೈರೆಕ್ಟರ್

    ಜೀವನದ ರಿಯಲ್ ಹೀರೋಯಿನ್ ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾದ ‘ಕಾಟೇರ’ ಡೈರೆಕ್ಟರ್

    ಸ್ಯಾಂಡಲ್‌ವುಡ್ ನಿರ್ದೇಶಕ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ (Sonal) ಮದುವೆ ವಿಚಾರ ಕೆಲದಿನಗಳಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಮದುವೆ ಯಾವಾಗ? ಯಾರ ಜೊತೆ ಎಂಬುದು ತರುಣ್ ನೇರವಾಗಿ ಮಾತನಾಡಿರಲಿಲ್ಲ. ಈಗ ಜೀವನದ ರಿಯಲ್ ಹೀರೋಯಿನ್ ಬಗ್ಗೆ ‘ಕಾಟೇರ’ ನಿರ್ದೇಶಕ ತರುಣ್ ಘೋಷಣೆ ಮಾಡೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಅದೆಷ್ಟೋ ಜನರಿಗೆ ವಿನೋದ್ ಬದುಕಿನ ದಾರಿ ಹೇಳಿ ಕೊಟ್ಟಿದ್ದಾರೆ: ನಟಿ ಲಕ್ಷ್ಮಿ ಸಿದ್ದಯ್ಯ

    ದರ್ಶನ್‌ರನ್ನು ತರುಣ್ ಜೈಲಿನಲ್ಲಿ ಭೇಟಿಯಾದ ಬೆನ್ನಲ್ಲೇ ಮದುವೆ (Wedding) ಬಗ್ಗೆ ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ. ಮದುವೆ ಹಾಗೂ ತನ್ನ ಬದುಕಿನ ಹೀರೋಯಿನ್ ಕುರಿತು ನಾಳೆ (ಜು.22) ಬೆಳಗ್ಗೆ 11:08ಕ್ಕೆ ಮಾಹಿತಿ ನೀಡುವುದಾಗಿ ನಿರ್ದೇಶಕ ತರುಣ್ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

     

    View this post on Instagram

     

    A post shared by Tharun Kishore Sudhir (@tharunsudhir)

    ಈವರೆಗೂ ವದಂತಿ ಬಿಟ್ಟರೇ ತರುಣ್ ಆಗಲಿ, ಸೋನಲ್ ಆಗಲಿ ಪ್ರೀತಿ ಅಥವಾ ಮದುವೆ ಕುರಿತು ಮಾತಾಡಿರಲಿಲ್ಲ. ಜು.22ರಂದು ವಿಶೇಷ ವಿಡಿಯೋವೊಂದನ್ನ ಪೋಸ್ಟ್ ಮಾಡಿ ಸೋನಲ್ ಜೊತೆಗಿನ ಮದುವೆ ವದಂತಿಗೆ ತೆರೆ ಎಳೆಯಲಿದ್ದಾರೆ ‘ರಾಬರ್ಟ್’ ನಿರ್ದೇಶಕ ತರುಣ್. ಸೋನಲ್ ಮತ್ತು ತರುಣ್ ಒಂದೇ ರೀತಿಯ ಪೋಸ್ಟ್ ಶೇರ್ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.

    ಅಂದಹಾಗೆ, ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಿ ಸೋನಲ್ ಜೊತೆಗಿನ ಪರಿಚಯವೇ ಇಂದು ಮದುವೆಗೆ ಮುನ್ನಡಿ ಬರೆದಿದೆ. ಇಬ್ಬರ ಮದುವೆಗೆ ಮುನ್ನುಡಿ ಬರೆದಿದ್ದೇ ದರ್ಶನ್. ಇದೀಗ ಇದೇ ಆಗಸ್ಟ್ 10, 11ರಂದು ಹೊಸ ಬಾಳಿಗೆ ಸೋನಲ್ ಮತ್ತು ತರುಣ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಈ ಕುರಿತು ನಾಳೆ ಅಧಿಕೃತ ಘೋಷಣೆ ಆಗಲಿದೆ.

  • ಮದುವೆ ಬಗ್ಗೆ ಮೌನ ಮುರಿದ ಶ್ರದ್ಧಾ ಕಪೂರ್

    ಮದುವೆ ಬಗ್ಗೆ ಮೌನ ಮುರಿದ ಶ್ರದ್ಧಾ ಕಪೂರ್

    ‘ಆಶಿಕಿ 2′ ಬೆಡಗಿ ಶ್ರದ್ಧಾ ಕಪೂರ್ (Sharddha Kapoor)  ‘ಸ್ತ್ರಿ -2’ ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್‌ಗೆ (Rajkumar Rao) ನಾಯಕಿಯಾಗಿದ್ದಾರೆ. ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ, ಮದುವೆ (Wedding) ಬಗ್ಗೆ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಳಿಕ ಇನ್ಸ್ಟಾಗ್ರಾಂನಲ್ಲಿ ಮೊದಲ ಪೋಸ್ಟ್ ಹಂಚಿಕೊಂಡ ನಟಿ ನತಾಶಾ

    ಯಶಸ್ಸಿಗಾಗಿ ಎದುರು ನೋಡ್ತಿರುವ ಶ್ರದ್ಧಾ ಕಪೂರ್ ಸದ್ಯ ಸ್ತ್ರಿ ಪಾರ್ಟ್‌ 2 ಸಿನಿಮಾದ ಪ್ರಮೋಷನ್‌ನಲ್ಲಿ ನಿರತರಾಗಿದ್ದಾರೆ. ಪ್ರಚಾರದ ವೇಳೆ, ಮದುವೆ ಕುರಿತು ಎದುರಾದ ಪ್ರಶ್ನೆಗೆ ಜಾಣತನದಿಂದ ಶ್ರದ್ಧಾ ಉತ್ತರಿಸಿದ್ದಾರೆ. ಆಕೆ ಸ್ತ್ರಿ, ಆಕೆಗೆ ಇಷ್ಟ ಬಂದಾಗ ಮದುಮಗಳು ಆಗುತ್ತಾಳೆ ಎಂದು ನಟಿ ಉತ್ತರಿಸಿದ್ದಾರೆ.

    ಇನ್ನೂ ಶ್ರದ್ಧಾ ಹೆಸರು ಪ್ರಸ್ತುತ ರಾಹುಲ್‌ ಮೋದಿ (Rahul Mody) ಜೊತೆ ಕೇಳಿ ಬರುತ್ತಿದೆ. ಇಬ್ಬರ ಕುರಿತು ಡೇಟಿಂಗ್‌ ಸುದ್ದಿ ಹಬ್ಬಿದೆ. ಅದಕ್ಕೆ ಪೂರಕವೆಂಬಂತೆ, ಅಂಬಾನಿ ಮಗನ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗಾಗಿ ಶೀಘ್ರದಲ್ಲಿಯೇ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

    ಅಂದಹಾಗೆ, 2018ರಲ್ಲಿ ‘ಸ್ತ್ರಿ’ ಮೊದಲ ಭಾಗ ರಿಲೀಸ್ ಆಗಿ ಸಕ್ಸಸ್ ಕಂಡಿತ್ತು. ಈಗ ‘ಸ್ತ್ರಿ 2’ ಸಿನಿಮಾ ಇದೇ ಆಗಸ್ಟ್ 15ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಶ್ರದ್ಧಾ ಕೆರಿಯರ್‌ಗೆ ಗೆಲುವು ತಂದು ಕೊಡುತ್ತಾ ಕಾಯಬೇಕಿದೆ.