Tag: wedding

  • 4ನೇ ಮದುವೆಗೆ ಸಜ್ಜಾದ ತಮಿಳು ನಟಿ ವನಿತಾ ವಿಜಯ್ ಕುಮಾರ್

    4ನೇ ಮದುವೆಗೆ ಸಜ್ಜಾದ ತಮಿಳು ನಟಿ ವನಿತಾ ವಿಜಯ್ ಕುಮಾರ್

    ಕಾಲಿವುಡ್‌ನ ಹಿರಿಯ ನಟ ವಿಜಯ್ ಕುಮಾರ್ ಅವರ ಪುತ್ರಿ ವನಿತಾ (Vanitha Vijay Kumar) 4ನೇ ಮದುವೆಗೆ ರೆಡಿಯಾಗಿದ್ದಾರೆ. ಡ್ಯಾನ್ಸ್ ಕೊರಿಯೋಗ್ರಾಫರ್ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಹೆರಿಗೆ ನಂತರ ಒಂಟಿಯಾದ್ರಾ ದೀಪಿಕಾ?- ರಣ್‌ವೀರ್‌ ಮೇಲೆ ಕಂಪ್ಲೆಂಟ್ ಮಾಡಿದ ನಟಿ

    ಇದೇ ಅಕ್ಟೋಬರ್ 5ರಂದು ಡ್ಯಾನ್ಸ್ ಕೊರಿಯೋಗ್ರಾಫರ್ ರಾಬರ್ಟ್ ಜೊತೆ ವನಿತಾ ಮದುವೆ ಆಗುತ್ತಿರುವ ಬಗ್ಗೆ ನಟಿಯೇ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಸೇವ್ ದಿ ಡೇಟ್ ಅಂತ ಹಾಕಿ ಅ.5ರಂದು ಮದುವೆ ಆಗುತ್ತಿರುವ ಮಾಹಿತಿ ನೀಡಿದ್ದಾರೆ. ರಾಬರ್ಟ್‌ಗೆ (Robert) ಮಂಡಿಯೂರಿ ಪ್ರಪೋಸ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಇಬ್ಬರೂ ಚರ್ಚ್‌ನಲ್ಲಿ ಮದುವೆ ಆಗಲಿದ್ದಾರೆ ಎನ್ನಲಾಗಿದೆ.

    ಇನ್ನೂ ವನಿತಾ 24 ವರ್ಷಗಳ ಹಿಂದೆ ಆಕಾಶ್ ಎಂಬುವವರ ಕೈ ಹಿಡಿದಿದ್ದರು. 7 ವರ್ಷಗಳ ಬಳಿಕ ಡಿವೋರ್ಸ್ ಪಡೆದು ದೂರಾಗಿದ್ದರು. ಬಳಿಕ ಅದೇ ವರ್ಷ ಆನಂದ್ ಜೊತೆ ಹಸೆಮಣೆ ಏರಿದ್ದರು. ಈ ಸಂಸಾರ ಕೂಡ ಬಹಳ ದಿನ ಉಳಿಯಲಿಲ್ಲ. 5 ವರ್ಷಗಳ ಬಳಿಕ ಡಿವೋರ್ಸ್ ಪಡೆದಿದ್ದರು. 2ನೇ ಡಿವೋರ್ಸ್ ಬಳಿಕ 8 ವರ್ಷ ವನಿತಾ ಒಬ್ಬೊಂಟಿಯಾಗಿದ್ದರು. ಆದರೆ 2020ರಲ್ಲಿ ಪೀಟರ್ ಪೌಲ್ ಎಂಬುವವರ ಜೊತೆ 3ನೇ ಮದುವೆ ಆಗಿದ್ದರು. ಆದರೆ ಅದೇ ವರ್ಷ ಅದು ಮುರಿದು ಬಿತ್ತು. 3ನೇ ಬಾರಿ ಡಿವೋರ್ಸ್ ಪಡೆದುಕೊಂಡಿದ್ದರು. ಪೀಟರ್‌ಗೆ ಅದಾಗಲೇ ಒಂದು ಮದುವೆ ಆಗಿ ಇಬ್ಬರು ಮಕ್ಕಳು ಇದ್ದರು. ಆತನ ಪತ್ನಿ ತನ್ನಿಂದ ಡಿವೋರ್ಸ್ ಪಡೆಯದೇ ಪೀಟರ್ ಎರಡನೇ ಮದುವೆ ಆಗಿದ್ದಾರೆ ಎಂದು ದೂರು ನೀಡಿದ್ದರು. ಹಾಗಾಗಿ ಆತನಿಂದಲೂ ವನಿತಾ ಡಿವೋರ್ಸ್ ಪಡೆದು ದೂರಾಗುವಂತಾಯಿತು.

    ಅಂದಹಾಗೆ, ಮಾಣಿಕ್ಕಂ, ಮಳ್ಳಿ ಪೆಳ್ಳಿ, ಅನೀತಿ, ಹಾರ ಹೀಗೆ ಒಂದಿಷ್ಟು ಸಿನಿಮಾಗಳಲ್ಲಿ ವನಿತಾ ವಿಜಯ್ ಕುಮಾರ್ ನಟಿಸಿದ್ದಾರೆ.

  • ಫೆ.10ರಂದು ‘ಗರುಡ’ ಚಿತ್ರದ ನಟ ಸಿದ್ಧಾರ್ಥ್ ಮಹೇಶ್ ಮದುವೆ

    ಫೆ.10ರಂದು ‘ಗರುಡ’ ಚಿತ್ರದ ನಟ ಸಿದ್ಧಾರ್ಥ್ ಮಹೇಶ್ ಮದುವೆ

    ‘ಸಿಪಾಯಿ’, ‘ಗರುಡ’ ಚಿತ್ರಗಳ ನಟ ಸಿದ್ಧಾರ್ಥ್ ಮಹೇಶ್ (Siddarth Mahesh) ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮುಂದಿನ ವರ್ಷ ಫೆಬ್ರವರಿಯಲ್ಲಿ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದನ್ನೂ ಓದಿ:ಮುದ್ದಾದ ಮಗಳ ಮುಖ ರಿವೀಲ್ ಮಾಡಿದ ಮಿಲನಾ ದಂಪತಿ

    ನಟ ಕಮ್ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಸಿದ್ಧಾರ್ಥ್ ಮಹೇಶ್ ಇದೇ ಫೆ.10ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ವೈಷ್ಣವಿ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಮೂಲತಃ ವೈಷ್ಣವಿ (Vaishnavi) ಅವರು ಆಂಧ್ರಪ್ರದೇಶದವರಾಗಿದ್ದು, ಇಂಜಿನಿಯರಿಂಗ್ ಓದಿದ್ದಾರೆ.

    ಸಿದ್ಧಾರ್ಥ್ ಮತ್ತು ವೈಷ್ಣವಿ ಅವರದ್ದು, ಗುರುಹಿರಿಯರು ನಿಶ್ಚಯಿಸಿದ ಅರೆಂಜ್ ಮ್ಯಾರೇಜ್ ಆಗಿದೆ. ಈ ಮದುವೆಗೆ ಸ್ಯಾಂಡಲ್‌ವುಡ್‌ನ ಕಲಾವಿದರು ಮತ್ತು ರಾಜಕೀಯ ಗಣ್ಯರು ಭಾಗಿಯಾಗಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿರುವ ನಟನಿಗೆ ಫ್ಯಾನ್ಸ್ ಶುಭಹಾರೈಸಿದ್ದಾರೆ.

  • ಸಮಂತಾ ಮನೆಯಲ್ಲಿ ಮದುವೆ ಸಡಗರ- ಹೂಗುಚ್ಛ ಹಿಡಿದು ನಿಂತ ನಟಿ

    ಸಮಂತಾ ಮನೆಯಲ್ಲಿ ಮದುವೆ ಸಡಗರ- ಹೂಗುಚ್ಛ ಹಿಡಿದು ನಿಂತ ನಟಿ

    ಸೌತ್ ನಟಿ ಸಮಂತಾ (Samantha) ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ಸಹೋದರ ಮದುವೆಯಲ್ಲಿ (Wedding) ನಟಿ ಮಿರ ಮಿರ ಅಂತ ಮಿಂಚಿದ್ದಾರೆ. ಮದುವೆ ಸಡಗರದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಲಾಂಚ್ ಆಯ್ತು ಟ್ರೈಲರ್

    ಸಮಂತಾ ಅಣ್ಣ ಡೇವಿಡ್ ಪ್ರಭು (David Prabhu) ಫಾರಿನ್‌ನಲ್ಲಿ ವಿದೇಶಿ ಮಹಿಳೆಯೊಟ್ಟಿಗೆ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಕುಟುಂಬದ ಜೊತೆ ಸಮಯ ಕಳೆದು ಎಂಜಾಯ್ ಮಾಡಿದ್ದಾರೆ. ನೇರಳೆ ಬಣ್ಣದ ಗೌನ್ ಧರಿಸಿ ನಟಿ ಕಂಗೊಳಿಸಿದ್ದಾರೆ. ಹೂಗುಚ್ಛ ಹಿಡಿದು ನಟಿ ಮಿಂಚಿದ್ದಾರೆ.

     

    View this post on Instagram

     

    A post shared by Samantha (@samantharuthprabhuoffl)

    ನಟಿಗೆ ಇಬ್ಬರೂ ಸಹೋದರರು ಇದ್ದಾರೆ. ಅದರಲ್ಲಿ ಅಣ್ಣ ಡೇವಿಡ್ ಅಮೆರಿಕದಲ್ಲಿ ನೆಲೆಸಿದ್ದು, ನಗರದ ಗ್ರೇಟ್ ಲೇಕ್ ಬಳಿ ನಿಖೊಲೆ ಅವರನ್ನು ವಿವಾಹವಾಗಿದ್ದಾರೆ. ಇದನ್ನೂ ಓದಿ:ದರ್ಶನ್ ‍ಪ್ರಕರಣ ವೈಯಕ್ತಿಕ: ಡಾ.ರಾಜ್ ನೆನಪಿಸಿಕೊಂಡ ಗುರುಕಿರಣ್

    ಅಂದಹಾಗೆ, ಆದಿತ್ಯಾ ರಾಯ್ ಕಪೂರ್ ಜೊತೆ ಸಮಂತಾ ಹೊಸ ಬಾಲಿವುಡ್ ಪ್ರಾಜೆಕ್ಟ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರವನ್ನು ರಾಜ್ ಮತ್ತು ಡಿಕೆ ನಿರ್ಮಾಣ ಮಾಡಿದ್ದಾರೆ.

  • 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ

    400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಮದುವೆಯಾದ ಸಿದ್ಧಾರ್ಥ್, ಅದಿತಿ

    ಮಿಳಿನ ಸ್ಟಾರ್ ನಟ ಸಿದ್ಧಾರ್ಥ್ (Actor Siddarth) ಮತ್ತು ಅದಿತಿ ರಾವ್ ಹೈದರಿ (Aditi Rao Hydari) ಇಂದು (ಸೆ.16)  ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. 400 ವರ್ಷಗಳ ಹಿಂದಿನ ಪುರಾತನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಮದುವೆಯ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

     

    View this post on Instagram

     

    A post shared by Aditi Rao Hydari (@aditiraohydari)

    ಹಲವು ವರ್ಷಗಳ ಪ್ರೀತಿಗೆ ಇಂದು ಸಿದ್ಧಾರ್ಥ್‌, ಅದಿತಿ ರಾವ್‌ ಮದುವೆಯ ಮುದ್ರೆ ಒತ್ತಿದ್ದಾರೆ. 400 ವರ್ಷಗಳ ಹಿಂದಿನ ವನಪರ್ತಿ ಪುರಾತನ ದೇವಸ್ಥಾನದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಇನ್ನೂ ಸಿದ್ಧಾರ್ಥ್‌ ಜೊತೆಗಿನ ಅದಿತಿ ಮದುವೆಯ ಫೋಟೋ ಶೇರ್‌ ಮಾಡಿ, ನೀವೇ ನನ್ನ ಸೂರ್ಯ, ನೀವೇ ನನ್ನ ಚಂದ್ರ ಮತ್ತು ನನ್ನ ಎಲ್ಲಾ ನಕ್ಷತ್ರಗಳು ಎಂದು ಬರೆದುಕೊಂಡಿದ್ದಾರೆ. ಶಾಶ್ವತ ಪ್ರೀತಿ, ಬೆಳಕು, ಮ್ಯಾಜಿಕ್‌ ಪ್ರಾರಂಭ ಎಂದಿದ್ದಾರೆ ನಟಿ.

    ಅದಿತಿ ಮತ್ತು ಸಿದ್ಧಾರ್ಥ್‌ ಇಬ್ಬರಿಗೂ ಇದು 2ನೇ ಮದುವೆಯಾಗಿದೆ. ಮೊದಲ ಮದುವೆಗೆ ಡಿವೋರ್ಸ್‌ ನೀಡಿದ ಬಳಿಕ ಸಿನಿಮಾವೊಂದರ ಚಿತ್ರೀಕರಣದಲ್ಲಿ ಪರಿಚಯವಾಗಿ ಇಂದು ಮದುವೆ ಮುನ್ನುಡಿ ಬರೆದಿದೆ. ಹೊಸ ಜೋಡಿಗೆ ಸಿನಿಮಾ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಪೆಟ್ಟಾ’ ಚಿತ್ರದ ನಟಿ ಮೇಘಾ

    ಮಿಳಿನ ‘ಪೆಟ್ಟಾ’ (Petta) ಖ್ಯಾತಿಯ ಮೇಘಾ ಆಕಾಶ್ (Megha Akash) ಅವರು ಇಂದು (ಸೆ.15) ಬಹುಕಾಲದ ಗೆಳೆಯ ಸಾಯಿ ವಿಷ್ಣು ಜೊತೆ ಮದುವೆಯಾಗಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಇದನ್ನೂ ಓದಿ:ರವಿಕೆ ಧರಿಸದೆ ಸೀರೆಯುಟ್ಟ ಚೈತ್ರಾ ಆಚಾರ್

    ಚೆನ್ನೈನಲ್ಲಿ ಸಾಯಿ ವಿಷ್ಣು (Saai Vishnu) ಜೊತೆ ಅದ್ಧೂರಿಯಾಗಿ ಮೇಘಾ ಮದುವೆಯಾದರು. 6 ವರ್ಷಗಳು ಪ್ರೀತಿಗೆ ಮದುವೆಯ (Wedding) ಮುದ್ರೆ ಒತ್ತಿದ್ದರು. ಈ ಮದುವೆಗೆ ಕುಟುಂಬಸ್ಥರು, ಸ್ಟಾರ್ ಕಲಾವಿದರಿಗೆ, ಆಪ್ತರಿಗೆ ಆಹ್ವಾನ ನೀಡಲಾಗಿತ್ತು.

     

    View this post on Instagram

     

    A post shared by Megha Akash (@meghaakash)

    ಇನ್ನೂ ರಾಜಕೀಯ ಹಿನ್ನೆಲೆಯಿಂದ ಬಂದಿರುವ ಸಾಯಿ ವಿಷ್ಣು ಜೋಡಿಯ ಆರತಕ್ಷತೆಗೆ ತಮಿಳುನಾಡಿನ ಸಿಎಂ ಸ್ಟಾಲಿನ್ ಕೂಡ ಭಾಗವಹಿಸಿದ್ದರು. ಹೊಸ ಜೋಡಿಗೆ ಆಶೀರ್ವಾದ ಮಾಡಿದರು.

    ಅಂದಹಾಗೆ, ಪೆಟ್ಟಾ, ಕುಟ್ಟಿ ಸ್ಟೋರಿ, ರಾಧೆ, ಡಿಯರ್ ಮೇಘಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

  • Video | ಕೊನೆಗೂ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ಮೋಹಕ ತಾರೆ ರಮ್ಯಾ!

    Video | ಕೊನೆಗೂ ಮದುವೆ ಬಗ್ಗೆ ಸ್ಪಷ್ಟನೆ ಕೊಟ್ಟ ಮೋಹಕ ತಾರೆ ರಮ್ಯಾ!

    ಕೊನೆಗೂ ಮೋಹಕ ತಾರೆ ರಮ್ಯಾ (Ramya) ಮದುವೆ (Wedding) ವಿಚಾರದ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಹಲವಾರು ಬಾರಿ ರಮ್ಯಾ ಮದುವೆ ವಿಚಾರ ಹಾಟ್ ಟಾಪಿಕ್ ಕೂಡ ಆಗಿತ್ತು. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗಿಯೇ ಆಗುತ್ತಿತ್ತು. ಈ ವೀಕೆಂಡ್ ನಲ್ಲೂ ರಮ್ಯಾ ಮದುವೆ ವಿಷ್ಯ ಬ್ರೇಕಿಂಗ್ ಆಗಿತ್ತು.

    ಟೆಕ್ಸ್‌ಟೈಲ್ ಉದ್ಯಮಿ (Businessman) ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂಧಿನಗರದ ಗಲ್ಲಿಗಲ್ಲಿಗಳಲ್ಲಿ ಕೇಳಿ ಬಂದಿತ್ತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ ಎಂದು ಹೇಲಾಗಿತ್ತು. ಆದ್ರೆ ನಟಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳುವ ಮೂಲಕ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ದಯವಿಟ್ಟು ವದಂತಿ ಮತ್ತು ಸುಳ್ಳು ಸುದ್ದಿಗಳನ್ನ ಹಾಕಬೇಡಿ. ಮುಂದೆ ನಾನು ಮದುವೆ ಆಗೋವಾಗ ನಿಮಗೆ ಹೇಳುತ್ತೀನಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ..

  • ನವೆಂಬರ್‌ನಲ್ಲಿ ಉದ್ಯಮಿ ಜೊತೆ ರಮ್ಯಾ ಮದುವೆ: ಮೋಹಕತಾರೆ ಹೇಳಿದ್ದೇನು?

    ನವೆಂಬರ್‌ನಲ್ಲಿ ಉದ್ಯಮಿ ಜೊತೆ ರಮ್ಯಾ ಮದುವೆ: ಮೋಹಕತಾರೆ ಹೇಳಿದ್ದೇನು?

    ಮೋಹಕ ತಾರೆ ರಮ್ಯಾ (Ramya) ಮದುವೆ (Wedding) ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಲವಾರು ಬಾರಿ ರಮ್ಯಾ ಮದುವೆ ವಿಚಾರ ಹಾಟ್ ಟಾಪಿಕ್ ಕೂಡ ಆಗಿದೆ. ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಯಾವುದೇ ಕಾರ್ಯಕ್ರಮಕ್ಕೆ ಹೋಗಲಿ ಅಲ್ಲಿ ಮದುವೆ ವಿಷಯ ಪ್ರಸ್ತಾಪ ಆಗಿಯೇ ಆಗತ್ತೆ. ಈ ವೀಕೆಂಡ್ ನಲ್ಲೂ ರಮ್ಯಾ ಮದುವೆ ವಿಷ್ಯ ಬ್ರೇಕಿಂಗ್ ಆಗಿತ್ತು.

    ರಾಜಸ್ಥಾನ ಮೂಲದ ಟೆಕ್ಸ್‌ಟೈಲ್ ಉದ್ಯಮಿ (Businessman) ಜೊತೆ ರಮ್ಯಾ ನಿಶ್ಚಿತಾರ್ಥ ಆಗಿದೆ ಅನ್ನೋ ವಿಚಾರ ಗಾಂದಿನಗರದ ಗಲ್ಲಿಗಲ್ಲಿಗಳಲ್ಲಿ ಇವತ್ತು ಕೇಳಿ ಬಂತು. ಆಪ್ತರು ಹೇಳುವಂತೆ ಅಕ್ಟೋಬರ್ ನಲ್ಲಿ ಎಂಗೇಜ್‌ಮೆಂಟ್ ಆಗಲಿದ್ದಾರಂತೆ. ನವೆಂಬರ್‌ನಲ್ಲಿ ಬೆಂಗಳೂರಿನ ಅರಮನೆಯಲ್ಲಿ ಮದುವೆ ನಡೆಯಲಿದೆ. ರಾಜಸ್ಥಾನದ ಲ್ಲಿ ಆರತಕ್ಷತೆ ನಡೆಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಇದನ್ನು ಅವರ ಆಪ್ತರು ಕೂಡ ಖಚಿತ ಪಡಿಸಿದ್ದಾರೆ. ಇದನ್ನೂ ಓದಿ:ಕುಡಿದು ರಂಪಾಟ – ʻಜೈಲರ್ʼ ಸಿನಿಮಾ ವಿಲನ್ ವಿನಾಯಕನ್ ಅರೆಸ್ಟ್!

    ಉದ್ಯಮಿ ಜೊತೆ ಮದುವೆ ಆಗೋದು ಪಕ್ಕಾ, ಇಂದು ಉದ್ಯಮಿ ಕುಟುಂಬದ ಕಾರ್ಯಕ್ರಮದಲ್ಲಿ ರಮ್ಯಾ ಭಾಗಿ ಆಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಿಶ್ಚಿತಾರ್ಥ ನಡೆಯಲಿದೆ. ಹಾಗೂ ರಮ್ಯಾರ ಹುಟ್ಟು ಹಬ್ಬದ ದಿನದಂದೇ (ನ.29) ಈ ಜೋಡಿ ಹೊಸ ಬದುಕಿಗೆ ಕಾಲಿಡಲಿದೆ ಎಂದು ಅಂತ ಸುದ್ಧಿ ಅಪ್‌ಡೇಟ್ ಆಗಿತ್ತು.

    ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ರಮ್ಯಾ, ಇದೊಂದು ರೂಮರ್ಸ್ ಎಂದು ಹೇಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮಾಡಿದ್ದಾರೆ. ಹಲವಾರು ಬಾರಿಯೂ ಮದುವೆ ಸುದ್ದಿ ಬಂದಾಗ ಅದನ್ನು ರಮ್ಯಾ ಅಲ್ಲಗಳೆಯುತ್ತಲೇ ಬಂದಿದ್ದಾರೆ. ಎಂದಿನಂತೆ ಈ ಬಾರಿಯೂ ಅದನ್ನೇ ಮಾಡಿದ್ದಾರೆ.

  • ತರುಣ್ ಸುಧೀರ್, ಸೋನಲ್ ಚರ್ಚ್‌ ವೆಡ್ಡಿಂಗ್‌ ಆಲ್ಬಂ

    ತರುಣ್ ಸುಧೀರ್, ಸೋನಲ್ ಚರ್ಚ್‌ ವೆಡ್ಡಿಂಗ್‌ ಆಲ್ಬಂ

    ‘ಕಾಟೇರ’ ಡೈರೆಕ್ಟರ್ ತರುಣ್ ಸುಧೀರ್ (Tharun Sudhir) ಮತ್ತು ನಟಿ ಸೋನಲ್ ಮೊಂಥೆರೋ (Sonal Monteiro) ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿರುವ (Wedding) ಸುಂದರ ಫೋಟೋಗಳು ಇಲ್ಲಿವೆ.

    ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಉಂಗುರ ಬದಲಾಯಿಸಿಕೊಂಡ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿವೆ. ಇದನ್ನೂ ಓದಿ:ಬಾಲಿವುಡ್ ಸಿನಿಮಾ ಶೂಟಿಂಗ್‌ಗಾಗಿ ಹಂಪಿಗೆ ಬರಲಿದ್ದಾರೆ ರಶ್ಮಿಕಾ ಮಂದಣ್ಣ

    ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್‌ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ವೈಟ್ ಸೂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಂಗಳೂರಿನಲ್ಲಿ ನಡೆದ ಈ ಮದುವೆ ಸಂಭ್ರಮದಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಕುಟುಂಬ ಕೂಡ ಭಾಗಿಯಾಗಿತ್ತು.

    ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಸಹ ಮಾಡಿಕೊಂಡಿದೆ. ಈ ಅದ್ಧೂರಿ ಆರತಕ್ಷತೆನಲ್ಲಿ ತರುಣ್ ಸುಧೀರ್ ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ.

    ಇನ್ನೂ ‘ರಾಬರ್ಟ್’ ಸಿನಿಮಾ ಸೆಟ್‌ನಲ್ಲಾದ ಗೆಳೆತನ ಸೋನಲ್ ಮತ್ತು ತರುಣ್‌ ಮದುವೆಗೆ ಮುನ್ನುಡಿ ಬರೆಯಿತು. ಈ ಮದುವೆಗೆ ನೇತೃತ್ವ ವಹಿಸಿದ್ದೇ ದರ್ಶನ್.‌ ಆದರೆ ಜೈಲು ಪಾಲಾಗಿರುವ ದರ್ಶನ್ ಅನುಪಸ್ಥಿತಿ ನೆನೆದು ಮದುವೆ ದಿನ (ಆ.11) ಸೋನಲ್ ಮತ್ತು ತರುಣ್ ಭಾವುಕರಾಗಿದ್ದರು.

    ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಈ ನವ ಜೋಡಿ ಸಪ್ತಪದಿ ತುಳಿದಿತ್ತು.

  • ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ

    ಶೋಭಿತಾ ಜೊತೆ ಮದುವೆ ಹೇಗಿರಬೇಕು?- ರಿವೀಲ್ ಮಾಡಿದ ನಾಗಚೈತನ್ಯ

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಶೋಭಿತಾ (Sobhita) ಜೊತೆಗಿನ ಮದುವೆ ಹೇಗಿರಬೇಕು ಎಂದು ನಾಗಚೈತನ್ಯ ವಿವರಿಸಿದ್ದಾರೆ. ಮದುವೆ ಕುರಿತಾದ ಕನಸನ್ನು ನಟ ರಿವೀಲ್‌ ಮಾಡಿದ್ದಾರೆ. ಇದನ್ನೂ ಓದಿ:ಇಂದು ದರ್ಶನ್‌ಗೆ ಸಿಗಲಿದೆ 90 ಗ್ರಾಂ ಮಟನ್

    ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮದುಮಗನ ಗೆಟಪ್‌ನಲ್ಲಿ ಅತಿಥಿಯಾಗಿ ನಾಗಚೈತನ್ಯ ಭಾಗಿಯಾಗಿದ್ದರು. ಈ ವೇಳೆ, ಮದುವೆ ಹೇಗೆ ನಡೆಯಬೇಕು ಎಂದು ಎದುರಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಮದುವೆ ಯಾವಾಗಲೂ ದೊಡ್ಡದಾಗಿ ನಡೆಯಬೇಕು ಎಂದೇನು ಇಲ್ಲ. ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯದಂತೆ ಮದುವೆ (Wedding) ಆಗಬೇಕೆಂದು ನಾನು ಬಯಸುತ್ತೇನೆ ಎಂದಿದ್ದಾರೆ ನಾಗಚೈತನ್ಯ.

    ಇನ್ನೂ ಆ.8ರಂದು ಶೋಭಿತಾಗೆ ನಾಗಚೈತನ್ಯ ರಿಂಗ್ ತೊಡಿಸುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದರು. ಇನ್ನೂ ಮುಂದಿನ ವರ್ಷದ ಅಂತ್ಯದಲ್ಲಿ ಈ ಜೋಡಿ ವಿದೇಶದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಿದ್ದಾರೆ. ಅದಕ್ಕೂ ಮುನ್ನ ಇಬ್ಬರೂ ಒಪ್ಪಿಕೊಂಡಿರುವ ಸಿನಿಮಾಗಳನ್ನು ಪೂರ್ಣಗೊಳಿಸಬೇಕಿದೆ.

    ಅಂದಹಾಗೆ, 2017ರಲ್ಲಿ ಸ್ಟಾರ್ ನಟಿ ಸಮಂತಾ ಜೊತೆ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಇಬ್ಬರೂ ಡಿವೋರ್ಸ್ ಪಡೆದುಕೊಂಡರು.

  • ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ಇಟಲಿಯಲ್ಲಿ ಅದ್ಧೂರಿಯಾಗಿ ನಡೆಯಲಿದೆ ಆ್ಯಮಿ ಜಾಕ್ಸನ್ ಮದುವೆ

    ನ್ನಡದ ‘ವಿಲನ್’ ( The Villain) ಚಿತ್ರದ ನಟಿ ಆ್ಯಮಿ ಜಾಕ್ಸನ್ (Amy Jackson) ಅವರು ಗೆಳೆಯ ಎಡ್ ವೆಸ್ಟ್‌ವಿಕ್ (Ed Westwick) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇಟಲಿಯಲ್ಲಿ (Italy) ಅದ್ಧೂರಿಯಾಗಿ ನಟಿಯ ಮದುವೆ ನಡೆಯಲಿದೆ. ಇದನ್ನೂ ಓದಿ:‘ಸ್ತ್ರೀ 2’ ನಟಿಗೆ ಹೆಚ್ಚಿದ ಬೇಡಿಕೆ- ಹೃತಿಕ್ ರೋಷನ್‌ಗೆ ಶ್ರದ್ಧಾ ಕಪೂರ್ ಜೋಡಿ

    ಭಾವಿ ಪತಿಗೆ ಆ್ಯಮಿ ಲಿಪ್‌ಲಾಕ್ ಮಾಡುತ್ತಿರುವ ಫೋಟೋ ಶೇರ್ ಮಾಡಿ, ನಾವು ಮದುವೆಯಾಗೋಣ ಬೇಬಿ ಎಂದು ಅಡಿಬರಹ ನೀಡಿದ್ದಾರೆ. ಈ ಮೂಲಕ ಮದುವೆಯಾಗುವ ಬಗ್ಗೆ ನಟಿ ಸುಳಿವು ನೀಡಿದ್ದಾರೆ.

     

    View this post on Instagram

     

    A post shared by Amy Jackson (@iamamyjackson)

    ಬ್ರಿಟಿಷ್ ನಟಿ ಆ್ಯಮಿ ಮದುವೆ ಇಟಲಿಯಲ್ಲಿ ನಡೆಯಲಿದೆ ಎಂಬುದಷ್ಟೇ ರಿವೀಲ್ ಆಗಿದೆ. ಯಾವ ದಿನಾಂಕದಂದು ಮದುವೆ ಎಂಬುದನ್ನು ನಟಿ ಗೌಪ್ಯವಾಗಿಟ್ಟಿದ್ದಾರೆ. ಇದನ್ನೂ ಓದಿ:ನಾನು ಸೆಲೆಬ್ರಿಟಿಯೇ ಹೊರತು ಸಾರ್ವಜನಿಕರ ಆಸ್ತಿಯಲ್ಲ- ಟ್ರೋಲಿಗರಿಗೆ ತಾಪ್ಸಿ ಪನ್ನು ವಾರ್ನಿಂಗ್

    ಅಂದಹಾಗೆ, ಎಂಗೇಜ್‌ಮೆಂಟ್ ಬಳಿಕ ಜೂನ್‌ನಲ್ಲಿ ನಟಿ ಬ್ಯಾಚುರಲ್ ಪಾರ್ಟಿ ಮಾಡಿದ್ದರು. ಖಾಸಗಿ ಜೆಟ್‌ನಲ್ಲಿ ನಡೆಯ ಪಾರ್ಟಿ ಫೋಟೋಗಳನ್ನು ಆ್ಯಮಿ ಹಂಚಿಕೊಂಡಿದ್ದರು.

    2019ರಲ್ಲಿ ನಟ ಜಾರ್ಜ್ ಎಂಬುವವರ ಜೊತೆ ಆ್ಯಮಿ ಡೇಟಿಂಗ್ ಮಾಡುತ್ತಿದ್ದರು. ಇದೇ ವರ್ಷ ಸೆಪ್ಟೆಂಬರ್‌ನಲ್ಲಿ ಗಂಡು ಮಗುವನ್ನು ಈ ಜೋಡಿ ಸ್ವಾಗತಿಸಿದ್ದರು. ಕೆಲ ಮನಸ್ತಾಪಗಳಿಂದ 2021ರಲ್ಲಿ ಜಾರ್ಜ್ ಜೊತೆ ನಟಿ ಬ್ರೇಕಪ್ ಮಾಡಿಕೊಂಡರು. ಜಾರ್ಜ್ ಜೊತೆಗಿನ ಅಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಿಂದ ಡಿಲೀಟ್ ಮಾಡಿದರು. ಬಳಿಕ ಮಾಜಿ ಬಾಯ್ ಫ್ರೆಂಡ್‌ಗೆ ಮಗನ ಜವಾಬ್ದಾರಿಯನ್ನು ಬಿಟ್ಟು ಕೊಡದೇ ತಾವೇ ನೋಡಿಕೊಳ್ತಿದ್ದಾರೆ.

    ಇನ್ನೂ ಶಿವರಾಜ್‌ ಕುಮಾರ್‌, ಸುದೀಪ್‌ ನಟನೆಯ ‘ದಿ ವಿಲನ್‌’ ಸಿನಿಮಾದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಚಿತ್ರಕ್ಕೆ ಜೋಗಿ ಪ್ರೇಮ್‌ ನಿರ್ದೇಶನ ಮಾಡಿದರು.