Tag: wedding

  • ಫಾರಿನ್ ಹುಡ್ಗನ ಜೊತೆ ಹಸೆಮಣೆ ಏರಬೇಕಿದ್ದ ನವ ವಧು ಜೂಟ್

    ಫಾರಿನ್ ಹುಡ್ಗನ ಜೊತೆ ಹಸೆಮಣೆ ಏರಬೇಕಿದ್ದ ನವ ವಧು ಜೂಟ್

    ಮಂಗಳೂರು: ಹಸೆಮಣೆ ಏರಬೇಕಾಗಿದ್ದ ವಧು ನಾಪತ್ತೆಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಮೂಡಬಿದಿರೆ ದರೆಗುಡ್ಡೆಯಲ್ಲಿ ನಡೆದಿದೆ.

    ಪ್ರಿಯಾಂಕ (25) ನಾಪತ್ತೆಯಾದ ನವ ವಧು. ಇವರ ಮದುವೆ ಡಿ.11ರಂದು ವಿದೇಶದಲ್ಲಿ ಉದ್ಯೋಗದಲ್ಲಿರುವ ಯುವಕನ ಜೊತೆ ನಿಶ್ಚಯವಾಗಿತ್ತು.

    ಶನಿವಾರ ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆದರೆ ಮದುವೆಗೆ ಮುನ್ನ ಶುಕ್ರವಾರ ರಾತ್ರಿ ಪ್ರಿಯಾಂಕ ಪರಾರಿಯಾಗಿದ್ದಾರೆ. ಅಲ್ಲದೇ ದರೆಗುಡ್ಡೆಯಲ್ಲಿರುವ ತನ್ನ ಮನೆಯಿಂದ ಚಿನ್ನಾಭರಣ, ಪಾಸ್ ಪೋರ್ಟ್, ಆಧಾರ್ ಕಾರ್ಡ್ ಹಾಗೂ ತನ್ನ ವಸ್ತುಗಳೊಂದಿಗೆ ಪರಾರಿಯಾಗಿದ್ದು ಕುಟುಂಬ ಸದಸ್ಯರು ಕಂಗಾಲಾಗಿದ್ದಾರೆ.

    ತಂದೆ ಇಲ್ಲದ ಮಗಳನ್ನು ತಾಯಿ ಕಷ್ಟಪಟ್ಟು ಸಾಕಿದ್ದು ಈಗ ಮಗಳೇ ಮರ್ಯಾದೆಯನ್ನು ಹರಾಜು ಹಾಕಿ ಪರಾರಿಯಾಗಿದ್ದು ತಾಯಿಯ ನೆಮ್ಮದಿ ಕೆಡಿಸಿದೆ. ಇದೆಲ್ಲದರ ನಡುವೆ ಪ್ರಕರಣ ಲವ್ ಜಿಹಾದ್ ತಿರುವನ್ನು ಪಡೆಯುತ್ತಿದ್ದು ಪ್ರಿಯಾಂಕ ಕೆಲ ತಿಂಗಳ ಹಿಂದೆಯಿಂದ ಫರಂಗಿಪೇಟೆಯ ಹೈದರ್ ಎಂಬಾತನ ಜೊತೆ ಸಂಪರ್ಕದಲ್ಲಿದ್ದರು ಎನ್ನಲಾಗಿದ್ದು, ಹೀಗಾಗಿ ಆತನೊಂದಿಗೆ ಪ್ರಿಯಾಂಕ ಪರಾರಿಯಾಗಿದ್ದಾಳೆಂಬ ಶಂಕೆ ವ್ಯಕ್ತವಾಗಿದೆ.

    ಪ್ರಸ್ತುತ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ವಧು ಪರಾರಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.

  • ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಅರ್ಚಕ ಯುವಕರನನ್ನು ಮದ್ವೆಯಾದ್ರೆ ಸರ್ಕಾರದಿಂದ 3 ಲಕ್ಷ ರೂ. ಗಿಫ್ಟ್

    ಹೈದರಾಬಾದ್: ತೆಲಂಗಾಣ ರಾಜ್ಯ ಸರ್ಕಾರವು ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿರವ ಯುವಕರನ್ನು ಮದುವೆಯಾದರೆ ಮೂರು ಲಕ್ಷ ರೂ. ಹಣವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೊಳಿಸಿದೆ.

    ದೇವಾಲಯಗಳಲ್ಲಿ ಅರ್ಚರಕಾಗಿ ಸೇವೆ ಸಲ್ಲಿಸುತ್ತಿರುವ ಯುವಕರ ಆದಾಯ ಅತ್ಯಂತ ಕಡಿಮೆ ಎಂಬ ಕಾರಣದಿಂದ ಅವರನ್ನು ಮದುವೆಯಾಗಲು ಯಾರು ಒಪ್ಪುತ್ತಿಲ್ಲ ಎಂಬ ಕಾರಣಕ್ಕೆ `ಕಲ್ಯಾಣ ಮಸ್ತು’ ಯೋಜನೆಯನ್ನು ಮುಂದಿನ ತಿಂಗಳಿಂನಿಂದ ಆರಂಭಿಸುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಸರ್ಕಾರ ಮೊದಲು ಒಂದು ಲಕ್ಷ ರೂ.ಯನ್ನು ಮದುವೆಯ ಖರ್ಚಿಗಾಗಿ ನೀಡುತ್ತದೆ. ಮದುವೆ ಬಳಿಕ  ಉಳಿದ ಹಣವನ್ನು ದಂಪತಿಯ ಹೆಸರಿನಲ್ಲಿ ಜಂಟಿಯಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸ್ಥಿರ ಠೇವಣಿಯನ್ನು ಇಡುತ್ತದೆ. ಈ ಹಣವು ಮೂರು ವರ್ಷಗಳ ನಂತರ ದಂಪತಿಗಳಿಗೆ ಕೈಸೇರುತ್ತದೆ.

    ಪ್ರಸ್ತುತ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಮದುವೆಯ ವಿಚಾರದಲ್ಲಿ ಸ್ವತಂತ್ರರಾಗಿದ್ದು ತಮ್ಮ ಸಂಗತಿಯ ಆಯ್ಕೆಯಲ್ಲಿ ಹೆಚ್ಚು ಜಾಗೃತರಾಗಿದ್ದಾರೆ. ಸಾಪ್ಟ್ವೇರ್ ಇಂಜಿನಿಯರ್ ಯುವಕರ ಉದ್ಯೋಗದಲ್ಲೂ ಸ್ಥಿರತೆ ಇಲ್ಲದ ಕಾರಣ ಅವರ ಮದುವೆಯಾಗಲು ಕಷ್ಟವಾಗುತ್ತಿದೆ. ಇನ್ನೂ ದೇವಾಲಯಗಳಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುವ ಯುವಕರ ಆದಾಯ ಕಡಿಮೆ ಇರುವುದರಿಂದ ಸಮಾಜದಲ್ಲಿ ಗೌರವ ಸಿಗುತ್ತಿಲ್ಲ ಎಂದು ಸಿಎಂ ಸಲಹೆಗಾರರಾದ ಕೆ.ವಿ ರಮಣಚಾರಿ ಹೇಳಿದ್ದಾರೆ.

    ಹೆಣ್ಣು ಮಕ್ಕಳ ಪೋಷಕರು ಸಹ ಇಂತಹ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಲು ಇಷ್ಟಪಡುವುದಿಲ್ಲ, ಇದರಿಂದ ಹಲವು ಯುವಕರು ಮದುವೆಯಾಗದೆ ಉಳಿಯುತ್ತಿದ್ದಾರೆ. ಸರ್ಕಾರದ ಯೋಜನೆಯಿಂದ ಇಂತಹ ಯುವಕರ ಆರ್ಥಿಕ ಜೀವನ ಉತ್ತಮಗೊಳ್ಳಲಿದೆ. ಅಲ್ಲದೇ ಹೆಣ್ಣು ಮಕ್ಕಳ ಪೋಷಕರಿಗೆ ಉತ್ತಮ ಭಾವನೆ ಮೂಡಲಿದೆ ಎಂದು ತಿಳಿಸಿದರು.

    ತೆಲಂಗಾಣ ಸರ್ಕಾರವು ಈ ಯೋಜನೆಗೆ `ಕಲ್ಯಾಣ ಮಸ್ತು’ ಎಂಬ ಹೆಸರನ್ನು ಇಟ್ಟಿದ್ದು, ನವೆಂಬರ್ ತಿಂಗಳಿನಿಂದ ಅನುಷ್ಠಾನಗೊಳಿಸುತ್ತಿದೆ. ದಂಪತಿಯ ಮದುವೆಯಾದ ಮೂರು ವರ್ಷಗಳ ನಂತರ ಸ್ಥಿರ ಠೇವಣಿ ಹಣವು ಅವರ ಕೈಸೇರಲಿದ್ದು, ಅವರ ಮಕ್ಕಳ ಉತ್ತಮ ಜೀವನಕ್ಕೆ ಸಹಾಯಕವಾಗಲಿದೆ ಎಂಬುವುದೇ ಸರ್ಕಾರ ಉದ್ದೇಶವಾಗಿದೆ ಎಂದರು.

    ಅರ್ಚಕ ಯುವಕರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡವು ಪೋಷಕರು ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದ್ದು, ವಧು-ವರರ ಸ್ವ ವಿವರಗಳನ್ನು ಅರ್ಜಿಯೊಂದಿಗೆ ನೀಡಬೇಕಿದೆ. ಸರ್ಕಾರವು ಈ ಯೋಜನೆಗೆ ವಾರ್ಷಿಕವಾಗಿ ಇಷ್ಟೇ ದಂಪತಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಯಾವುದೇ ನಿಯಮವನ್ನು ವಿಧಿಸಿಲ್ಲ. ಅರ್ಹ ಎಲ್ಲಾ ದಂಪತಿಗಳೂ ಈ ಯೋಜನೆಯ ಸೌಲಭ್ಯವನ್ನು ಪಡೆಯಬಹುದಾಗಿದೆ.

  • ಮದುವೆಯ ದಿನ ವರ ನಾಗಿಣಿ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್

    ಮದುವೆಯ ದಿನ ವರ ನಾಗಿಣಿ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆಯೇ ಕ್ಯಾನ್ಸಲ್

    ಶಹಜಹಾನ್‍ಪುರ: ಮದುವೆಗಳಲ್ಲಿ ವಧು-ವರರು ಡ್ಯಾನ್ಸ್ ಮಾಡುವುದು ಸಾಮಾನ್ಯ. ಆದ್ರೆ ಇಲ್ಲೊಬ್ಬ ವರ ತನ್ನ ಮದುವೆಯಲ್ಲಿ ನಾಗಿಣಿ ಡ್ಯಾನ್ಸ್ ಮಾಡಿದ್ದರಿಂದ ವಧು ಮದುವೆಯನ್ನೇ ತಿರಸ್ಕರಿಸಿದ ಘಟನೆ ಉತ್ತರಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಹೌದು. ಪ್ರಿಯಾಂಕಾ ತ್ರಿಪಾಠಿ ಮತ್ತು ಅನುಭವ್ ಮಿಶ್ರಾ ಅವರ ಮದುವೆಯನ್ನು ಕುಟುಂಬಸ್ಥರು ನಿಗದಿ ಮಾಡಿದ್ದರು. ಎಲ್ಲಾ ಸುಸೂತ್ರವಾಗಿ ನಡೆದುಕೊಂಡು ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ವರನು ಕುಡಿದ ಸ್ಥಿತಿಯಲ್ಲಿ ನಾಗಿಣಿ ಡ್ಯಾನ್ಸ್ ಮಾಡಿ ದೊಡ್ಡ ಯಡವಟ್ಟು ಮಾಡಿದ್ದಾನೆ.

    ವರ ಅನುಭವ್ ಮಿಶ್ರಾ ಮಾಡಿದ ನಾಗಿಣಿ ಡ್ಯಾನ್ಸ್‍ನಿಂದ ಮುಜುಗರವಾದ ಕಾರಣ ಇನ್ನೇನು ಮದುವೆಯ ಶಾಸ್ತ್ರಗಳು ಆರಂಭವಾಗಬೇಕಿದ್ದ ಕೆಲವೇ ಸಮಯದ ಮುಂಚೆ ವಧು ಮದುವೆ ನಿರಾಕರಿಸಿದ್ದಾಳೆ.

    ವರನ ಸಂಬಂಧಿಕರು ಹಾಗೂ ಸ್ನೇಹಿತರು ವಧು ಪ್ರಿಯಾಂಕಾಳ ಮನವೊಲಿಸಲು ಪ್ರಯತ್ನಿಸಿದರಾದ್ರೂ ಆಕೆ ತನ್ನ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ವಧುವಿನ ತಂದೆಯೂ ಕೂಡ ಮಗಳ ನಿರ್ಧಾರವನ್ನು ಬೆಂಬಲಿಸಿದ್ದಾರೆ. ವರ ಮಾಡಿದ ಕೆಲಸದಿಂದ ನಿಜಕ್ಕೂ ಮುಜುಗರ ಅನುಭವಿಸಬೇಕಾಯ್ತು. ಆದ್ದರಿಂದ ನಾನು ನನ್ನ ಮಗಳ ಪರ ನಿಲ್ಲಬೇಕಾಯ್ತು ಎಂದು ಅವರು ಹೇಳಿದ್ದಾರೆ.

    ಕೊನೆಗೆ ಪ್ರಿಯಾಂಕಾ ಮರುದಿನವೇ ಬೇರೊಬ್ಬ ವ್ಯಕ್ತಿಯೊಂದಿಗೆ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.

  • ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ವರಿಸಿದ ಮೆಡಿಕಲ್ ವಿದ್ಯಾರ್ಥಿನಿ!

    ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ವರಿಸಿದ ಮೆಡಿಕಲ್ ವಿದ್ಯಾರ್ಥಿನಿ!

    ನವದೆಹಲಿ: ಉತ್ತರಪ್ರದೇಶದಲ್ಲಿ ಮೆಡಿಕಲ್ ಓದುತ್ತಿದ್ದ 24 ವರ್ಷದ ವಿದ್ಯಾರ್ಥಿನಿಯೊಬ್ಬಳು ಮೊಬೈಲ್ ಫೋನ್ ಮೂಲಕ ಐಸಿಸ್ ಉಗ್ರನನ್ನು ಮದುವೆಯಾಗಿರುವ ವಿಚಾರ ರಾಷ್ಟ್ರೀಯ ತನಿಖಾ ದಳದ(ಎನ್‍ಐಎ) ತನಿಖೆಯ ವೇಳೆ ಬೆಳಕಿಗೆ ಬಂದಿದೆ.

    2016ರ ಮೇ ತಿಂಗಳಿನಲ್ಲಿ ಮುಸ್ಲಿಮ್ ಸಂಪ್ರದಾಯದಂತೆ ಐಸಿಸ್ ಉಗ್ರ ಅಮ್ಜಾದ್ ಖಾನ್ ಎಂಬಾತನ್ನು ಅಜಮ್ ಘರ್‍ನ ಜಿಲ್ಲೆಯ ಸರೈ ಮೀರ್ ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಮೊಬೈಲ್ ಫೋನಿನ ಮೂಲಕ ಮದುವೆಯಾಗಿದ್ದಾಳೆ.

    ಅಮ್ಜಾದ್ ಖಾನ್ ಯಾರು?
    ರಾಜಸ್ಥಾನ ಮೂಲದ ಅಮ್ಜಾದ್ ಖಾನ್ 2005ರಲ್ಲಿ ಯುಎಇಗೆ ತೆರಳಿದ್ದ. 2014ರಲ್ಲಿ ಅಲ್ಲಿಂದ ಸೌದಿಗೆ ತೆರಳಿದ್ದ ಈತ ಐಸಿಸ್ ಉಗ್ರ ಸಂಘಟನೆಗೆ ಭಾರತೀಯ ವ್ಯಕ್ತಿಗಳನ್ನು ನೇಮಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತಿದ್ದ. ಉಗ್ರ ಚಟುವಟಿಕೆ ಪತ್ತೆಯಾದ ಹಿನ್ನೆಲೆಯಲ್ಲಿ ಸೌದಿ ಸರ್ಕಾರ ಈತನನ್ನು ಗಡೀಪಾರು ಮಾಡಿತ್ತು. ಈಗ ಎನ್‍ಐಎ ಈತನನ್ನು ವಿಚಾರಣೆ ನಡೆಸುತ್ತಿದ್ದಾಗ ಈ ಮದುವೆಯ ವಿಚಾರ ಬೆಳಕಿಗೆ ಬಂದಿದೆ.

    ಲವ್ ಆಗಿದ್ದು ಹೇಗೆ?
    ಸಾಮಾಜಿಕ ಜಾಲತಣದಲ್ಲಿ ಸಕ್ರಿಯವಾಗಿದ್ದ ಈತ ಸೌದಿಯಿಂದಲೇ ಭಾರತೀಯರಿಗೆ ಗಾಳ ಹಾಕುತ್ತಿದ್ದ. ಈ ವೇಳೆ ಫೇಸ್‍ಬುಕ್ ಮೂಲಕ ಮೆಡಿಕಲ್ ವಿದ್ಯಾರ್ಥಿನಿ ಪರಿಚಯವಾಗಿದ್ದಾಳೆ. ತನ್ನ ಚಾಟಿಂಗ್ ವೇಳೆ ಈತನ ಧಾರ್ಮಿಕ ಜ್ಞಾನಕ್ಕೆ ಮನಸೋತು ಪ್ರಭಾವಿತಳಾಗಿದ್ದಳು. ನೀನು ಐಸಿಸ್‍ಗೆ ಸೇರ್ಪಡೆಯಾಗಬೇಕು. ಇಸ್ಲಾಮಿಕ್ ಸಂಪ್ರದಾಯದಂತೆ ನೀನು ಸಿರಿಯಾದಲ್ಲಿ ಜೀವನ ಮಾಡಬೇಕು ಎಂದು ಮನವೊಲಿಸಿದ್ದ. ಆದರೆ 2015ರಲ್ಲಿ ಈತ ತನ್ನ ನಿಲುವು ಬದಲಾಯಿಸಿ ನೀನು ಸಿರಿಯಾಗೆ ಹೋಗುವುದು ಬೇಡ, ನನ್ನ ಜೊತೆಗೆ ಸೌದಿಯಲ್ಲಿ ಇದ್ದು ಬಿಡು ಎಂದು ಹೇಳಿದ್ದ.

    ಅಮ್ಜಾದ್ ಹೆಚ್ಚಾಗಿ ಫೇಸ್‍ಬುಕ್ ಮತ್ತು ನಿಂಬುಜ್ ಅಪ್ಲಿಕೇಶನ್ ಮೂಲಕ ಸಂವಹನ ನಡೆಸುತ್ತಿದ್ದ. ಮೆಡಿಕಲ್ ಓದುತ್ತಿದ್ದ ವಿದ್ಯಾರ್ಥಿನಿ ತನ್ನ ಅಧ್ಯಯನ ಮುಗಿದ ಬಳಿಕ ಸೌದಿಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಳು. ಅಷ್ಟರಲ್ಲಾಗಲೇ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಮ್ಜಾದ್ ಬಂಧನವಾಗಿದ್ದ.

    ಮೆಡಿಕಲ್ ವಿದ್ಯಾರ್ಥಿನಿಯ ಜೊತೆ ಚಾಟ್ ಮಾಡುವ ಮೊದಲೇ ಅಮ್ಜಾದ್ ಖಾನ್‍ಗೆ ಮದುವೆಯಾಗಿತ್ತು. ಎರಡೂ ಮಕ್ಕಳಿದ್ದರೂ ಈತ ವಿದ್ಯಾರ್ಥಿನಿಯನ್ನು ಐಸಿಸ್ ಖೆಡ್ಡಾಕ್ಕೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಸಾಕ್ಷಿ ಮಲಿಕ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕುಸ್ತಿಪಟು ಸಾಕ್ಷಿ ಮಲಿಕ್

    ನವದೆಹಲಿ: 2016ರ ರಿಯೋ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಕಂಚು ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದ ಸಾಕ್ಷಿ ಮಲಿಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 22 ವರ್ಷದ ಸತ್ಯವರ್ತ್ ಕಡಿಯಾನ್ ಜೊತೆ ರೊಹ್ಟಕ್ ನಲ್ಲಿ ಭಾನುವಾರ ಸಪ್ತಪದಿ ತುಳಿದಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‍ನಲ್ಲಿ ಸಾಕ್ಷಿ ಅವರಿಗೆ ಸತ್ಯವರ್ತ್ ಜೊತೆ ನಿಶ್ಚಿತಾರ್ಥವಾಗಿತ್ತು. ಸಾಕ್ಷಿ ಅವರು ತಮ್ಮ ಮೆಹಂದಿ ಕಾರ್ಯಕ್ರಮದ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

    2008ರಲ್ಲಿ ಬೀಜಿಂಗ್ ಹಾಗೂ 2012ರಲ್ಲಿ ಲಂಡನ್ ಒಲಿಂಪಿಕ್ಸ್ ನಲ್ಲಿ ಕುಸ್ತಿಯಲ್ಲಿ ಪದಕಗಳನ್ನು ಗೆದ್ದಿದ್ದ ಸುಶಿಲ್ ಕುಮಾರ್ ಸಾಕ್ಷಿ ಮದುವೆಯಲ್ಲಿ ಭಾಗಿಯಾಗಿದ್ರು.

    ಸತ್ಯವರ್ತ್ ಕೂಡ ಕುಸ್ತಿಪಟುವಾಗಿದ್ದು, ಸಾಕ್ಷಿ ಮಲಿಕ್‍ಗಿಂತ 2 ವರ್ಷ ಚಿಕ್ಕವರು. ರೊಹ್ಟಕ್‍ನಲ್ಲಿ ತಂದೆಯ ಅಖಾಡಾದಲ್ಲಿ ಸತ್ಯವರ್ತ್ ತರಬೇತಿ ನೀಡ್ತಿದ್ದಾರೆ. ಸತ್ಯವರ್ತ್ ಕೂಡ ಒಬ್ಬ ಒಳ್ಳೆಯ ಆಟಗಾರರಾಗಿದ್ದು, ಗ್ಲಾಸ್ಗೋನಲ್ಲಿ ನಡೆದ ಕಾಮನ್‍ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಅದೇ ವರ್ಷ ಏಷ್ಯನ್ ಚಾಂಪಿಯನ್‍ಶಿಪ್‍ನಲ್ಲಿ ಕಂಚು ಗೆದ್ದಿದ್ದರು.

    ಕಳೆದ ವರ್ಷ ಬ್ರೆಜಿಲ್‍ನ ರಿಯೋ ಡಿ ಜನೈರೋದಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ಭಾವಹಿಸಿದ್ದ ಸಾಕ್ಷಿ ಕುಸ್ತಿಯಲ್ಲಿ ಭಾರತಕ್ಕೆ ಕಂಚು ತಂದುಕೊಟ್ಟಿದ್ದರು. ಈ ಮೂಲಕ ಒಲಿಪಿಂಕ್ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಸಾಕ್ಷಿ ಪಾತ್ರರಾದ್ರು. ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದ ಬಳಿಕ ಭಾರತದ ಧ್ವಜವನ್ನು ಹಿಡಿದು ಸಾಕ್ಷಿ ಸಂಭ್ರಮಿಸಿದ್ದರು.

    https://twitter.com/SakshiMalik/status/848026310446243841

  • ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ವೀಡಿಯೋ: ಸಿಂಹದ ಮೇಲೆ ಕುಳಿತು ವರನ ಮೆರವಣಿಗೆ!

    ಇಸ್ಲಾಮಾಬಾದ್: ಕುದುರೆ ಮೇಲೆ, ಬೈಕ್‍ನಲ್ಲಿ, ದುಬಾರಿ ಕಾರಿನಲ್ಲಿ ಅಥವಾ ಪಲ್ಲಕ್ಕಿಯಲ್ಲಿ ಕುಳಿತು ವಧು/ವರ ಮದುವೆ ಮಂಟಪಕ್ಕೆ ಬರೋದನ್ನ ನೋಡಿದ್ದೀವಿ. ಆದ್ರೆ ಪಾಕಿಸ್ತಾನದಲ್ಲಿ ಕೋಟ್ಯಾಧಿಪತಿ ವ್ಯಕ್ತಿಯೊಬ್ಬರ ಮಗ ಸಿಂಹದ ಮೇಲೆ ಕುಳಿತು ಮೆರವಣಿಗೆ ಮೂಲಕ ಮದುವೆ ಮಂಟಪಕ್ಕೆ ಬಂದಿದ್ದಾರೆ.

    ಏನು ಸಿಂಹನಾ ಅಂತ ಅಚ್ಚರಿ ಪಡಬೇಡಿ. ವರ ಕುಳಿತಿದ್ದು ಸಿಂಹ ಇದ್ದ ಬೋನಿನ ಮೇಲಷ್ಟೆ. ಚಿನ್ನಾಭರಣಗಳನ್ನ ಮೈಮೇಲೆ ಧರಿಸಿ ವರ ಸಿಂಹವಿದ್ದ ಬೋನಿನ ಮೇಲೆ ಕುಳಿತು, ಸ್ನೇಹಿತರು ಹಾಗೂ ಸಂಬಂಧಿಕರು ಕುಣಿಯುತ್ತಾ, ನೋಟುಗಳ ಸುರಿಮಳೆಗೈಯ್ಯುತ್ತಾ ಅದ್ಧೂರಿ ಮೆರವಣಿಗೆ ಮೂಲಕ ಮಂಟಪ ತಲುಪಿದ್ದಾರೆ. ಈ ಮದುವೆಯ ಬಗ್ಗೆ ಪಾಕಿಸ್ತಾನದ ಮಾಧ್ಯಮಗಳಲ್ಲೂ ವರದಿಯಾಗಿದೆ.

    ವರ ತಾನು ಸಿಂಹದ ಮೇಲೆ ಕುಳಿತು ಮದುವೆ ಮಂಟಪಕ್ಕೆ ಬರಬೇಕು ಅಂತ ಆಸೆ ಪಟ್ಟಿದ್ದರಂತೆ. ಮಗನ ಆಸೆ ಈಡೇರಿಸಬೇಕು ಎಂದು ವರನ ತಂದೆ ಅಂದುಕೊಂಡಿದ್ದರು. ಆದ್ರೆ ಸಿಂಹದ ಮೇಲೆ ಕುಳಿತು ಬರುವುದು ಸಾಧ್ಯವಿಲ್ಲದ ಮಾತು ಎಂದು ಅರಿತು ಬೋನಿನೊಳಗೆ ಹಾಕಲಾದ ಸಿಂಹವನ್ನ ತರಿಸಿದ್ದಾರೆ. ನಂತರ ಬೋನಿನ ಮೇಲೆ ಚೇರ್ ಹಾಕಿಸಿ ವರನನ್ನು ಅದರ ಮೇಲೆ ಕುಳ್ಳಿರಿಸಿ ಮೆರವಣಿಗೆ ಮಾಡಿದ್ದಾರೆ. ಮದುವೆಗೆ 15 ಸಾವಿರಕ್ಕೂ ಹೆಚ್ಚು ಅತಿಥಿಗಳನ್ನ ಆಹ್ವಾನಿಸಲಾಗಿತ್ತು ಎಂದು ವರದಿಯಾಗಿದೆ.

  • ಇಂದು ಸಂಜೆ ನಟಿ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ

    ಇಂದು ಸಂಜೆ ನಟಿ ಅಮೂಲ್ಯ-ಜಗದೀಶ್ ನಿಶ್ಚಿತಾರ್ಥ

    ಬೆಂಗಳೂರು: ಸ್ಯಾಂಡಲ್‍ವುಡ್‍ನ ನಟಿ ಅಮೂಲ್ಯಾರಿಗೆ ಕಂಕಣ ಬಲ ಕೂಡಿಬಂದಿದೆ. ಗುರು ಹಿರಿಯರ ಒಪ್ಪಿಗೆಯಂತೆ ಅಮೂಲ್ಯ ಜಗದೀಶ್ ಕೈ ಹಿಡಿಯೋಕೆ ನಿರ್ಧರಿಸಿದ್ದಾರೆ. ಇಂದು ಸಂಜೆ ಬೆಂಗಳೂರಿನಲ್ಲಿ ಇವರ ವಿವಾಹ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ.

    ಇಂದು ಸಂಜೆ 6 ಗಂಟೆಗೆ ನಗರದ ಶ್ರೀ ಸಾಯಿ ಪ್ಯಾಲೇಸ್‍ನಲ್ಲಿ ನಟಿ ಅಮೂಲ್ಯ ಜಗದೀಶ್ ಕೈಗೆ ಉಂಗುರ ತೊಡಿಸಲಿದ್ದಾರೆ. ಗುರು ಹಿರಿಯರ ಒಪ್ಪಿಗೆಯಂತೆ ನಿಶ್ಚಯವಾದ ಈ ಮದುವೆಗೆ ಕಳೆದ ವಾರ ಹೆಣ್ಣು ನೋಡುವ ಶಾಸ್ತ್ರ ಮಾಡಲಾಗಿತ್ತು. ಇದೀಗ ನಿಶ್ಚಿತಾರ್ಥ ಸಮಾರಂಭ ನಡೆಸಿ ಶೀಘ್ರದಲ್ಲೇ ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗುತ್ತೆ ಅನ್ನೋದನ್ನ ಕುಟುಂಬದ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಮದುವೆಯಾದ ಬಳಿಕ ಚಿತ್ರದಲ್ಲಿ ಆ್ಯಕ್ಟ್ ಮಾಡ್ತೀರಾ: ಅಮೂಲ್ಯ ಉತ್ತರ ಇದು 

    ಈ ನಿಶ್ಚಿತಾರ್ಥ ಸಮಾರಂಭದಲ್ಲಿ ಜರತಾರಿ ಸೀರೆಯುಡುವ ಅಮೂಲ್ಯ, ಜಗದೀಶ್ ಕೈಗೆ ಸಾಲಿಟೇರ್ ರಿಂಗ್ ತೊಡಿಸಲಿದ್ದಾರಂತೆ. ಅತ್ತ ಜಗದೀಶ್ ಅಮೂಲ್ಯಾರಿಗೆ ಡೈಮಂಡ್ ರಿಂಗ್ ತೊಡಿಸಲಿದ್ದಾರೆ.

    ಈ ವಿವಾಹ ನಿಶ್ಚಯ ಸಮಾರಂಭಕ್ಕೆ ಸಿನಿಮಾ ಹಾಗೂ ರಾಜಕೀಯ ಗಣ್ಯರು ಆಗಮಿಸುವ ನಿರೀಕ್ಷೆ ಇದೆ. ಅಮೂಲ್ಯ ಕೈ ಹಿಡಿಯಲಿರುವ ಜಗದೀಶ್ ಮಾಜಿ ಕಾರ್ಪೋರೇಟರ್ ಮಗ. ಲಂಡನ್‍ನಲ್ಲಿ ಎಂಬಿಎ ಮಾಡಿದ್ದು ಬೆಂಗಳೂರಿನ ಆರ್‍ಆರ್ ನಗರ ನಿವಾಸಿ. ಬಹು ಬೇಡಿಕೆಯಲ್ಲಿರುವಾಗಲೇ ಹಸೆಮಣೆ ಏರೋಕೆ ರೆಡಿಯಾಗಿರೋ ಅಮೂಲ್ಯಾರ ಮದುವೆ ದಿನಾಂಕ ಶೀಘ್ರದಲ್ಲೇ ಹೊರಬೀಳಲಿದೆ.

    ಇದನ್ನೂ ಓದಿ: ನಟಿ ಅಮೂಲ್ಯ, ಜಗದೀಶ್ ಪ್ರಪೋಸಲ್ ಹೇಗಾಯ್ತು: ನಟ ಗಣೇಶ್ ದಂಪತಿ ಹೇಳ್ತಾರೆ