Tag: wedding

  • ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

    ಉದ್ಯಮಿ ಪ್ರತ್ಯಕ್ಷ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಂದನಾ ಅನಂತಕೃಷ್ಣ

    ‘ಲಕ್ಷ್ಮಿ ನಿವಾಸ’ (Lakshmi Nivasa) ನಟಿ ಚಂದನಾ ಅನಂತಕೃಷ್ಣ (Chandana Ananthakrishna) ಅವರು ಇಂದು (ನ.28) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಟಿಯ ಮದುವೆ (Wedding) ಜರುಗಿದೆ. ಈ ಸಂಭ್ರಮದಲ್ಲಿ ಕಿರುತೆರೆಯ ಕಲಾವಿದರು ಭಾಗಿಯಾಗಿ ಹೊಸ ಜೋಡಿಗೆ ಶುಭಹಾರೈಸಿದ್ದಾರೆ.

    ಗುರುಹಿರಿಯರು ನಿಶ್ಚಿಯಿಸಿದ ಮದುವೆ ಇದಾಗಿದ್ದು, ಇತ್ತೀಚೆಗೆ ಕುಟುಂಬಸ್ಥರು ಸಮ್ಮುಖದಲ್ಲಿ ನಟಿಯ ನಿಶ್ಚಿತಾರ್ಥ ಸರಳವಾಗಿ ನಡೆದಿತ್ತು. ಇಂದು ಅದ್ಧೂರಿಯಾಗಿ ಚಂದನಾ ಮತ್ತು ಪ್ರತ್ಯಕ್ಷ್ ಮದುವೆ ನಡೆದಿದೆ. ಇದನ್ನೂ ಓದಿ:ನಿಮ್ಮ ಪ್ರೀತಿಯನ್ನು ಹೃದಯದಲ್ಲಿ ಬಚ್ಚಿಟ್ಟುಕೊಳ್ಳುತ್ತೀನಿ- ರಶ್ಮಿಕಾರನ್ನು ಹೊಗಳಿದ ಅಲ್ಲು ಅರ್ಜುನ್

    ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • 47ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಾಹುಬಲಿ’ ನಟ ಸುಬ್ಬರಾಜು

    47ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಾಹುಬಲಿ’ ನಟ ಸುಬ್ಬರಾಜು

    ‘ಬಾಹುಬಲಿ’ (Baahubali) ಖ್ಯಾತಿಯ ನಟ ಸುಬ್ಬರಾಜು (Subbaraju) ಅವರು 47ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯಾಗಿರುವ (Wedding) ಮಾಹಿತಿಯನ್ನು ನಟ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್

    ಪತ್ನಿ ಜೊತೆ ಬೀಚ್ ಬಳಿ ವಧು- ವರರ ಕ್ಯಾಸ್ಟೂಮ್‌ನಲ್ಲಿ ನಿಂತಿರುವ ಫೋಟೋ ಶೇರ್ ಮಾಡಿ, ‘ಕೊನೆಗೂ ಮದುವೆಯಾದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ತೆಲುಗು ಪದ್ಧತಿಯಂತೆ ಈ ಮದುವೆ ಜರುಗಿದೆ. ಹೊಸ ಜೋಡಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಶುಭಕೋರಿದ್ದಾರೆ.

     

    View this post on Instagram

     

    A post shared by Subba Raju (@actorsubbaraju)

    ಇನ್ನೂ ಹಲವು ಸಿನಿಮಾದಲ್ಲಿ ಸುಬ್ಬರಾಜು ಅವರು ಖಳನಟನ ಪಾತ್ರದಲ್ಲಿ ಮಿಂಚಿದ್ದಾರೆ. ಮಿರ್ಚಿ, ಪೋಕರಿ, ಬಾಹುಬಲಿ, ಕುಮಾರವರ್ಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಕನ್ನಡದ ಗಜ, ನಮ್ಮಣ್ಣ, ಸತ್ಯ ಇನ್ ಲವ್, ಸಂಚಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಬ್ಬರಾಜು ನಟಿಸಿದ್ದಾರೆ.

  • ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಎಂದು ಭಾವಿ ಪತಿ ಜೊತೆ ಚಂದನಾ ಭರ್ಜರಿ ಡ್ಯಾನ್ಸ್

    ‘ಲಕ್ಷ್ಮಿ ನಿವಾಸ’ದ ನಟಿ ಚಂದನಾ ಅನಂತಕೃಷ್ಣ (Chandana Ananthakrishna) ನ.28ರಂದು ಉದ್ಯಮಿ ಪ್ರತ್ಯಕ್ಷ್ ಜೊತೆ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಸದ್ಯ ಮೆಹೆಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮವು ಅದ್ಧೂರಿಯಾಗಿ ಜರುಗಿದ್ದು, ಭಾವಿ ಪತಿ ಜೊತೆ ‘ಬಾರೇ ಬಾರೇ ಕಲ್ಯಾಣ ಮಂಟಪಕೆ ಬಾ’ ಎಂದು ನಟಿ ಭರ್ಜರಿಯಾಗಿ ಹೆಜ್ಜೆ ಹಾಕಿದ್ದಾರೆ.

    ಬೆಂಗಳೂರಿನಲ್ಲಿ ಮೆಹಂದಿ ಶಾಸ್ತ್ರ, ಸಂಗೀತ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿದ್ದು, ಕ್ಯೂಟ್ ಜೋಡಿ ಚಂದನಾ ಮತ್ತು ಪ್ರತ್ಯಕ್ಷ್ ‘ಬಾರೇ ಬಾರೇ ಕಲ್ಯಾಣ ಮಂಟಪಕ್ಕೆ ಬಾ’ ಅಂತ ಹೆಜ್ಜೆ ಹಾಕಿ ಸಂಭ್ರಮಿಸಿದೆ. ಅಪ್ಪು ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿ ಖುಷಿಪಟ್ಟಿದ್ದಾರೆ. ಈ ಸಂಭ್ರಮದಲ್ಲಿ ‘ಲಕ್ಷ್ಮಿ ನಿವಾಸ’ ಸೀರಿಯಲ್ ತಂಡ ಕೂಡ ಜೊತೆಯಾಗಿದೆ. ಮಾನಸಾ ದಂಪತಿ, ದಿಶಾ ಮದನ್ ದಂಪತಿ, ನಟ ಮಧು, ಕ್ಲೋಸ್ ಫ್ರೆಂಡ್ ನಯನಾ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಆತ್ಮಿಯರು ಭಾಗಿಯಾಗಿದರು.

    ಇನ್ನೂ ನ.28ರಂದು ಉದ್ಯಮಿ ಪ್ರತ್ಯಕ್ಷ್ ಜೊತೆ ಪ್ಯಾಲೇಸ್ ಗ್ರೌಂಡ್‌ನಲ್ಲಿ ನಟಿ ಮದುವೆಯಾಗಲಿದ್ದಾರೆ. ಈ ಮದುವೆಗೆ (Wedding) ಬಿಗ್ ಬಾಸ್ ಮನೆಯ ಮಾಜಿ ಸ್ಪರ್ಧಿಗಳು, ಕಿರುತೆರೆಯ ಕಲಾವಿದರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ:ಬಾಲಿವುಡ್ ನೆಪೋಟಿಸಂ ಬಗ್ಗೆ ಕೃತಿ ಸನೋನ್ ಶಾಕಿಂಗ್ ಕಾಮೆಂಟ್

     

    View this post on Instagram

     

    A post shared by Prathima Bhat (@prathima.ashoka.18)

    ಪ್ರತ್ಯಕ್ಷ್ ಅವರು ಉದ್ಯಮಿಯಾಗಿದ್ದಾರೆ. ವಿಶೇಷ ಅಂದರೆ, ಪ್ರತ್ಯಕ್ಷ್ ಪೋಷಕರು ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ದಿವಂಗತ ಉದಯ್ ಹುತ್ತಿನಗದ್ದೆ ಅವರು ಡಾ.ರಾಜ್‌ಕುಮಾರ್ ಜೊತೆ ದೇವತಾ ಮನುಷ್ಯ ಚಿತ್ರದಲ್ಲಿ ನಟಿಸಿದ್ದರು. ಆರಂಭ, ಅಗ್ನಿಪರ್ವ, ಶುಭ ಮಿಲನ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದರು. ಅವರ ಪತ್ನಿ ಲಲಿತಾಂಜಲಿ ಉದಯ್ ಕೂಡ ಹಿರಿತೆರೆ, ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ.

    ಇನ್ನೂ ರಾಜ ರಾಣಿ, ಹೂ ಮಳೆ, ಬಿಗ್ ಬಾಸ್ ಕನ್ನಡ ಸೀಸನ್ 7 ಶೋ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳಲ್ಲಿ ಚಂದನಾ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ‘ಲಕ್ಷ್ಮಿ ನಿವಾಸ’ (Lakshmi Nivasa) ಸೀರಿಯಲ್‌ನಲ್ಲಿ ಜಾಹ್ನವಿ ಪಾತ್ರದ ಮೂಲಕ ಅಭಿಮಾನಿಗಳ ಮನಗೆದ್ದಿದ್ದಾರೆ. ಜೊತೆಗೆ ‘ಭಾವ ತೀರ ಯಾನ’ ಸಿನಿಮಾದಲ್ಲಿ ಧೃತಿ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ.

  • ಮದುವೆಗೆ ಸಜ್ಜಾದ ನಟಿ- ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಕೀರ್ತಿ ಸುರೇಶ್‌

    ಮದುವೆಗೆ ಸಜ್ಜಾದ ನಟಿ- ಕೊನೆಗೂ ಭಾವಿ ಪತಿಯನ್ನು ಪರಿಚಯಿಸಿದ ಕೀರ್ತಿ ಸುರೇಶ್‌

    ಸೌತ್‌ನ ಸ್ಟಾರ್ ನಟಿ ಕೀರ್ತಿ ಸುರೇಶ್ (Keerthy Suresh) ಕೊನೆಗೂ ಮದುವೆ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ. ಲೈಫ್ ಪಾರ್ಟ್ನರ್ ಜೊತೆಗಿನ ಫೋಟೋ ಹಂಚಿಕೊಂಡು ಕೀರ್ತಿ ಸುರೇಶ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.‌ ಇದನ್ನೂ ಓದಿ:ಝೈನಾಬ್ ಜೊತೆ ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡ ಅಖಿಲ್ ಅಕ್ಕಿನೇನಿ

    ಕಳೆದ ಕೆಲವು ದಿನಗಳಿಂದ ಉದ್ಯಮಿ ಆಂಟೋನಿ (Antony Thattil) ಜೊತೆ ಕೀರ್ತಿ ಮದುವೆ (Wedding) ಸುದ್ದಿ ಸಖತ್ ಸದ್ದು ಮಾಡಿತ್ತು. ಇದು ಯಾವದ್ದಕ್ಕೂ ನಟಿ ಉತ್ತರ ಕೊಟ್ಟಿರಲಿಲ್ಲ. ಇದೀಗ ಭಾವಿ ಪತಿ ಆಂಟೋನಿ ಜೊತೆಗಿನ ಫೋಟೋ ಶೇರ್ ಮಾಡಿ, 15 ವರ್ಷಗಳ ಬಂಧ ಎಂಬುದನ್ನು ನಟಿ ತಿಳಿಸಿದ್ದಾರೆ. ಯಾವಾಗಲೂ ಆಂಟೋನಿ ಮತ್ತು ಕೀರ್ತಿ ಎಂದು ಕ್ಯಾಪ್ಷನ್ ನೀಡಿದ್ದಾರೆ. ಅದಕ್ಕೆ ನಟಿ ರಾಶಿ ಖನ್ನಾ, ನಮಗೆ ಈಗ ತಿಳಿದಿದೆ. ಅಭಿನಂದನೆಗಳು ಲವ್ ಎಂದು ಕೀರ್ತಿಗೆ ವಿಶ್ ಮಾಡಿದ್ದಾರೆ.

    15 ವರ್ಷಗಳ ಪ್ರೀತಿಗೆ ಕೀರ್ತಿ ಸುರೇಶ್ ಅವರು ಡಿ.11ರಂದು ಮದುವೆಯ ಮುದ್ರೆ ಒತ್ತಲಿದ್ದಾರೆ. ಬಹುಕಾಲದ ಗೆಳೆಯ ಆಂಟೋನಿ ಕೀರ್ತಿ ಗೋವಾದಲ್ಲಿ ಮದುವೆಯಾಗಲಿದ್ದಾರೆ. ಗೋವಾದಲ್ಲಿ (Goa) ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿದ್ದು, ಸಿನಿಮಾ ಸ್ಟಾರ್ಸ್ ಮತ್ತು ರಾಜಕೀಯದ ಗಣ್ಯರಿಗೆ ಮದುವೆ ಆಹ್ವಾನ ನೀಡಲಿದ್ದಾರೆ ಎನ್ನಲಾಗಿದೆ.

    ಇನ್ನೂ ಡಿಸೆಂಬರ್‌ನಲ್ಲಿ ನಟಿಗೆ ಡಬಲ್ ಸಂಭ್ರಮ. ಡಿ.11ರಂದು ಕೀರ್ತಿ ಮದುವೆ ಜೊತೆಗೆ ಡಿ.25ರಂದು ವರುಣ್ ಧವನ್ ಜೊತೆಗಿನ ಮೊದಲ ಬಾಲಿವುಡ್ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಈ ಸಿನಿಮಾವನ್ನು ‘ಜವಾನ್’ ಡೈರೆಕ್ಟರ್ ಅಟ್ಲಿ ನಿರ್ದೇಶನ ಮಾಡಿದ್ದಾರೆ.

  • ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್

    ಸ್ನೇಹಿತರ ಜೊತೆ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯಗೆ (Daali Dhananjay) ಸಿನಿಮಾ ಕೆಲಸದಲ್ಲಿ ಬ್ರೇಕ್ ಸಿಕ್ಕ ಬೆನ್ನಲ್ಲೇ ಸ್ನೇಹಿತರ ಜೊತೆ ಟ್ರಿಪ್‌ಗೆ ತೆರಳಿದ್ದಾರೆ. ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್ (Scuba Diving) ಮಾಡಿ ಎಂಜಾಯ್ ಮಾಡಿದ್ದಾರೆ. ಈ ಕುರಿತ ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.

    ಮುರುಡೇಶ್ವರದಿಂದ 10 ಕಿ.ಮೀ ದೂರವಿರುವ ನೇತ್ರಾಣಿ ದ್ವೀಪಕ್ಕೆ ಡಾಲಿ ಭೇಟಿ ನೀಡಿದ್ದಾರೆ. ಸುಮಾರು 45 ನಿಮಿಷಗಳ ಕಾಲ ನೇತ್ರಾಣಿಯಲ್ಲಿ ಡಾಲಿ ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಡಾಲಿ ಟ್ರಿಪ್‌ಗೆ ಮೈಸೂರಿನ ಸ್ನೇಹಿತರು ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಮುಂದಿನ ತಿಂಗಳು ಆಪರೇಷನ್ ಇದೆ, ಯುಎಸ್‌ಎಗೆ ಹೋಗುತ್ತಿದ್ದೇನೆ: ಶಿವರಾಜ್ ಕುಮಾರ್

    ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಫೆ.16ರಂದು ಮೈಸೂರಿನಲ್ಲಿ ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ಧನ್ಯತಾ ಜೊತೆಗಿನ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.

  • ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೀರ್ತಿ ಸುರೇಶ್?- ಫೋಟೋ ವೈರಲ್

    ಬಹುಕಾಲದ ಗೆಳೆಯನ ಜೊತೆ ಮದುವೆಗೆ ರೆಡಿಯಾದ್ರಾ ಕೀರ್ತಿ ಸುರೇಶ್?- ಫೋಟೋ ವೈರಲ್

    ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಬಹುಕಾಲದ ಗೆಳೆಯ ಆಂಟೋನಿ ತಟ್ಟಿಲ್ ಜೊತೆ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಸುದ್ದಿ ಕೇಳಿ ನಟಿ ಕೀರ್ತಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಇದನ್ನೂ ಓದಿ:BBK 11: ನಿಮ್ಮಲ್ಲಿ ಪಾಸಿಟಿವಿಟಿ ಇಲ್ಲ, ಇರೋದೆಲ್ಲ ನೆಗೆಟಿವ್‌: ಗೌತಮಿ ವಿರುದ್ಧ ಶೋಭಾ ರಾಂಗ್

    ಉದ್ಯಮಿ ಆಂಟೋನಿ ತಟ್ಟಿಲ್ (Antony Thattil) ಅವರು ನಟಿ ಕೀರ್ತಿರವರ ಸ್ಕೂಲ್ ಫ್ರೆಂಡ್ ಆಗಿದ್ದು, ಕಳೆದ 15 ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಎರಡು ಕುಟುಂಬದ ಒಪ್ಪಿಗೆಯ ಮೇರೆಗೆ ಇದೇ ಡಿ.11 ಮತ್ತು 12ರಂದು ಗೋವಾದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆಯಂತೆ. ಇದೀಗ ತೆರೆಮರೆಯಲ್ಲಿ ಭರ್ಜರಿಯಾಗಿ ಮದುವೆಗೆ ತಯಾರಿ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

    ಈ ಮದುವೆಯ ಕುರಿತು ನಟಿಯ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸದ್ಯದಲ್ಲೇ ಮದುವೆ ಬಗ್ಗೆ ಅವರು ಘೋಷಿಸಲಿದ್ದಾರೆ ಎನ್ನಲಾಗಿದೆ. ಇದೀಗ ಹುಡುಗನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ.

    ಅಂದಹಾಗೆ, ಕೀರ್ತಿ ಸುರೇಶ್ ಅವರು ವರುಣ್ ಧವನ್‌ಗೆ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ‘ಬೇಬಿ ಜಾನ್’ (Baby John) ಎಂಬ ಚಿತ್ರದ ಮೂಲಕ ನಟಿ ಎಂಟ್ರಿ ಕೊಡಲಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸಿರಿ ಪ್ರಹ್ಲಾದ್

    ‘ಯುಗಳಗೀತೆ’ ಸೀರಿಯಲ್ ಮೂಲಕ ಗಮನ ಸೆಳೆದ ನಟಿ ಸಿರಿ ಪ್ರಹ್ಲಾದ್ (Siri Prahlad) ಅವರು ವೈವಾಹಿಕ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ನಟ ಮಧುಸೂದನ್ ಜೊತೆ ನಟಿ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ:ಟೈಗರ್ ಶ್ರಾಫ್‌ಗೆ ‘ಭಜರಂಗಿ’ ಹರ್ಷ ಆ್ಯಕ್ಷನ್ ಕಟ್- ಪೋಸ್ಟರ್ ಔಟ್

    ‘ಯುಗಳಗೀತೆ’ ಸೀರಿಯಲ್‌ನಲ್ಲಿ ಜೊತೆಯಾಗಿ ಸಿರಿ ಮತ್ತು ಮಧುಸೂದನ್ ನಟಿಸಿದರು. ಈ ಪರಿಚಯವೇ ಪ್ರೀತಿಗೆ ತಿರುಗಿತ್ತು. ಹಲವು ವರ್ಷಗಳ ಪ್ರೀತಿಗೆ ಈ ಜೋಡಿ ಮದುವೆಯ ಮುದ್ರೆ ಒತ್ತಿದ್ದಾರೆ. ಈ ಮದುವೆಗೆ ‘ದಿಯಾ’ ನಟಿ ಖುಷಿ ರವಿ, ಆಶಿಕಾ ರಂಗನಾಥ್ ಕುಟುಂಬ, ತೇಜಸ್ವಿನಿ ಶರ್ಮಾ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by Eva Photo & Films (@evaphotofilms)

    ಇನ್ನೂ ಲಾ, ಇಷ್ಟ, ಬಡ್ಡೀಸ್, ಒಂದು ಶಿಕಾರಿಯ ಕಥೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಸಿರಿ ಪ್ರಹ್ಲಾದ್ ನಟಿಸಿದ್ದಾರೆ. ಮಧುಸೂದನ್ ಮೇಡ್ ಇನ್ ಬೆಂಗಳೂರು ಚಿತ್ರದಲ್ಲಿ ನಟಿಸಿದ್ದಾರೆ.

  • ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

    ಡಿ.4ರಂದು ನಾಗಚೈತನ್ಯ, ಶೋಭಿತಾ ಮದುವೆ- ಆಮಂತ್ರಣ ಪತ್ರಿಕೆ ವೈರಲ್

    ಟಾಲಿವುಡ್ ನಟ ನಾಗಚೈತನ್ಯ (Nagachaitanya) ಮತ್ತು ಶೋಭಿತಾ ಧುಲಿಪಾಲ್ (Sobhita Dhulipala) ಹಸೆಮಣೆ (Wedding) ಏರೋಕೆ ರೆಡಿಯಾಗಿದ್ದಾರೆ. ಡಿ.4ರಂದು ನಾಗಚೈತನ್ಯ ಮದುವೆ ಡೇಟ್ ನಿಗದಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್ ಆಗಿದೆ. ಇದನ್ನೂ ಓದಿ:BBK 11: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಶೋಭಾ ಶೆಟ್ಟಿ, ರಜತ್ ಬುಜ್ಜಿ

    ಸಮಂತಾ ಮಾಜಿ ಪತಿ ನಾಗಚೈತನ್ಯ ಅವರು ಶೋಭಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದೇ ಡಿಸೆಂಬರ್ 4ರಂದು ಬಂಜಾರಾ ಹಿಲ್ಸ್ನಲ್ಲಿರುವ ಅನುಪಮಾ ಸ್ಟುಡಿಯೋದಲ್ಲಿ ಮದುವೆಯಾಗುತ್ತಿದ್ದಾರೆ. ಇದು ನಾಗಾರ್ಜುನ ಅಕ್ಕಿನೇನಿ ಅವರ ಒಡೆತನದಲ್ಲಿದೆ. ಈ ಮದುವೆಗೆ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರಿಗೆ ಆಹ್ವಾನ ನೀಡಲಾಗಿದೆ.

    ಅಂದಹಾಗೆ, ನಟಿ ಸಮಂತಾ (Samantha) ಜೊತೆ ನಾಗಚೈತನ್ಯ 2017ರಲ್ಲಿ ಮದುವೆಯಾದರು. 2021ರಲ್ಲಿ ಇಬ್ಬರೂ ಡಿವೋರ್ಸ್ ಘೋಷಿಸಿದರು. ಹಲವು ವರ್ಷಗಳು ಪ್ರೀತಿ, ಮದುವೆಯ ಮುದ್ರೆ ಒತ್ತಿದ್ದ ಜೋಡಿ ಆ ನಂತರ ಡಿವೋರ್ಸ್ ಮೂಲಕ ವೈವಾಹಿಕ ಬದುಕಿಗೆ ಪೂರ್ಣ ವಿರಾಮವಿಟ್ಟರು.

  • ಗೋವಾದಲ್ಲಿ ಹಸೆಮಣೆ ಏರಲು ರೆಡಿಯಾದ್ರಾ ಕೀರ್ತಿ ಸುರೇಶ್‌?

    ಗೋವಾದಲ್ಲಿ ಹಸೆಮಣೆ ಏರಲು ರೆಡಿಯಾದ್ರಾ ಕೀರ್ತಿ ಸುರೇಶ್‌?

    ‘ಮಹಾನಟಿ’ ಕೀರ್ತಿ ಸುರೇಶ್ (Keerthy Suresh) ಅವರ ಬಳಿ ಕೈತುಂಬಾ ಸಿನಿಮಾಗಳಿವೆ. ಇದೀಗ ಅವರು ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಕೀರ್ತಿ ಸುರೇಶ್ ಸದ್ಯದಲ್ಲೇ ದಾಂಪತ್ಯ (Wedding) ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ನಟಿಯ ಮದುವೆ ಮ್ಯಾಟರ್ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:‘ಮಹಾವತಾರ ನರಸಿಂಹ’ ಚಿತ್ರದ ಮೋಷನ್ ಪೋಸ್ಟರ್ ರಿವೀಲ್ ಮಾಡಿದ ಹೊಂಬಾಳೆ ಫಿಲ್ಮ್ಸ್‌

    ಮೂಲಗಳ ಪ್ರಕಾರ, ಕುಟುಂಬಸ್ಥರು ನೋಡಿದ ಹುಡುಗನ ಜೊತೆ ಕೀರ್ತಿ ಮದುವೆಯಾಗಲು ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ. ಇದೇ ಡಿಸೆಂಬರ್‌ನಲ್ಲಿ ಗೋವಾದಲ್ಲಿ ಕೀರ್ತಿ ಸುರೇಶ್ ಮದುವೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ವರ ಕೂಡ ನಟಿಯ ಸಂಬಂಧಿ ಎಂದು ಹೇಳಲಾಗುತ್ತಿದೆ. ಇದು ವಿಚಾರ ಅದೆಷ್ಟರ ಮಟ್ಟಿಗೆ ನಿಜ ಎಂಬುದನ್ನು ಕಾದುನೋಡಬೇಕಿದೆ.

    ಕೀರ್ತಿ ಸುರೇಶ್ ಅವರ ಹೆಸರು ಅನೇಕರೊಂದಿಗೆ ತಳುಕು ಹಾಕಿಕೊಂಡಿದೆ. ಈ ಹಿಂದೆ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಜೊತೆ ಕೂಡ ತಳುಕು ಹಾಕಿಕೊಂಡಿತ್ತು. ಆ ನಂತರ ನಟಿ ಇದು ಸುಳ್ಳು ಸುದ್ದಿ. ನಾವಿಬ್ಬರೂ ಫ್ರೆಂಡ್ಸ್ ಎಂದು ಪ್ರತಿಕ್ರಿಯೆ ನೀಡಿದರು. ಹಾಗಾಗಿ ಈ ಬಾರಿ ಹರಿದಾಡುತ್ತಿರುವ ಮದುವೆ ವಿಚಾರಕ್ಕೆ ನಟಿ ಏನು ಹೇಳ್ತಾರೋ? ಕಾಯಬೇಕಿದೆ.

    ಇನ್ನೂ `ಬೇಬಿ ಜಾನ್’ ಸಿನಿಮಾ ಮೂಲಕ ನಟಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಎಂಟ್ರಿ ಕೊಡುತ್ತಿದ್ದಾರೆ.

  • ಅದ್ಧೂರಿಯಾಗಿ ಮದುವೆಯಾದ ‘ಬಿಗ್‌ ಬಾಸ್‌ ಕನ್ನಡ 8’ರ ವಿನ್ನರ್‌ ಮಂಜು ಪಾವಗಡ

    ಅದ್ಧೂರಿಯಾಗಿ ಮದುವೆಯಾದ ‘ಬಿಗ್‌ ಬಾಸ್‌ ಕನ್ನಡ 8’ರ ವಿನ್ನರ್‌ ಮಂಜು ಪಾವಗಡ

    ‘ಬಿಗ್ ಬಾಸ್ ಕನ್ನಡ 8’ರ ವಿನ್ನರ್ ಮಂಜು ಪಾವಗಡ (Manju Pavagada) ಅವರು ಹುಟ್ಟುರಾದ ಪಾವಗಡದಲ್ಲಿ ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ನಂದಿನಿ (Nandini) ಎಂಬುವವರ ಜೊತೆ ಮಂಜು ಪಾವಗಡ ದಾಂಪತ್ಯ  (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಾವಗಡದಲ್ಲಿ ನ.13ರಂದು ನಂದಿನಿ- ಮಂಜು ಅವರ ಆರತಕ್ಷತೆ ಕಾರ್ಯಕ್ರಮ ಜರುಗಿತು. ಇಂದು (ನ.14) ಅದ್ಧೂರಿಯಾಗಿ ನಟ ಮದುವೆಯಾಗಿದ್ದಾರೆ. ಈ ಸಂಭ್ರಮದಲ್ಲಿ ಶುಭ ಪೂಂಜಾ, ಮಾನಸಾ, ರಾಘವೇಂದ್ರ, ಜಗ್ಗಪ್ಪ ದಂಪತಿ ಸೇರಿದಂತೆ ಕಿರುತೆರೆಯ ಕಲಾವಿದರು ಭಾಗಿಯಾಗಿ ಶುಭಕೋರಿದ್ದಾರೆ.

     

    View this post on Instagram

     

    A post shared by shubha Poonja . (@shubhapoonja)

    ಇನ್ನೂ ಮಂಜು ಪಾವಗಡ ಅವರು ಬಿಗ್ ಬಾಸ್ ಕನ್ನಡ 8ರ ವಿನ್ನರ್ ಆಗಿದ್ದರು. ಬಳಿಕ ‘ಅಂತರಪಟ’ ಎಂಬ ಸೀರಿಯಲ್‌ನಲ್ಲಿ ವಿಲನ್ ಆಗಿ ನಟಿಸಿದ್ದರು. ರುದ್ರಾಕ್ಷಿಪುರ, ಚಂದನ್ ಶೆಟ್ಟಿ ಜೊತೆ ಎಲ್ರ ಕಾಲೆಳಿಯುತ್ತೆ ಕಾಲ, 45, ಕೋಮಲ್ ಜೊತೆ ಎಲಾ ಕುನ್ನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಮಂಜು ನಟಿಸಿದ್ದಾರೆ.