ನವದೆಹಲಿ: ಮದುವೆಗೆ ಬರುವ ಅತಿಥಿಗಳಿಗೆ ಊಟ ಮಾಡಿಕೊಂಡು ಹೋಗಿ ಎಂದು ಹೇಳುತ್ತಾರೆ. ಆದರೆ ಮದುವೆಗೆ ಬರುವ ಫೋಟೋಗ್ರಾಫರ್ ಅಥವಾ ಇನ್ನಿತರ ಕೆಲಸಗಾರರನ್ನು ಕಡೆಗಣಿಸಲಾಗುತ್ತದೆ. ಊಟ, ತಿಂಡಿ ವೇಳೆಯಾದರೂ ಫೋಟೋ ತೆಗೆದುಕೊಳ್ಳುವಲ್ಲಿ ಬಿಜಿಯಾಗಿರುವ ಮದುಮಕ್ಕಳು, ಕುಟುಂಬಸ್ಥರು ಅವರಿಗೆ ಊಟ ಮಾಡಿದ್ರಾ ಎಂದು ಕೇಳುವುದು ಕಡಿಮೆ. ಇದಕ್ಕೆ ಊದಾಹರಣೆ ಎನ್ನುವಂತಹ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.
ಹಣವನ್ನು ಊಳಿಸುವುದಕ್ಕಾಗಿ ಮುಮಗ ತನ್ನ ಸ್ನೇಹಿತನಿಗೆ ಫೋಟೋಗ್ರಾಫರ್ ಆಗಿ ಬರಲು ಹೇಳಿದ್ದಾನೆ. ನಾಯಿಯ ಫೋಟೋ ತೆಗೆದು ಸಾಮಾಜಿ ಜಾಲತಾಣದಲ್ಲಿ ಅವುಗಳನ್ನು ಶೇರ್ ಮಾಡುವುದರಲ್ಲಿ ಪಳಗಿರುವ ಸ್ನೇಹಿತ ತಾನು ಮದುವೆ ಫೋಟೋಗ್ರಾಫಿಗೆ ಬರುವುದಿಲ್ಲ ಎಂದರೂ ಕೇಳದೇ ಮದುಮಗ ಒತ್ತಾಯ ಮಾಡಿದ್ದಾನೆ. ಕೊನೆಗೆ ಇಂತಿಷ್ಟು ದುಡ್ಡು ಎಂದು ಮಾತುಕತೆ ನಡೆಸಿ ಸ್ನೇಹಿತ ಒಪ್ಪಿಕೊಂಡಿದ್ದಾನೆ.
ಬೆಳಗಿನ ಜಾವದಿಂದ ಸಂಜೆಯವರೆಗೂ ಮದುವೆ ಕಾರ್ಯಕ್ರಮ ನಡೆದಿದೆ. ಆದರೆ ಒಂದೇ ಒಂದು ಸಲವು ಯಾರೂ ಫೋಟೋಗ್ರಾಫರ್‍ನನ್ನು ಮಾತನಾಡಿಸಿಲ್ಲ. ಊಟ, ತಿಂಡಿಗೂ ಕೇಳಿಲ್ಲ. ಈತ ಅಲ್ಲಿರುವವರ ಬಳಿ ಬಾಯಿಬಿಟ್ಟು ಹೇಳಿದರು ಇದೊಂದು ಫೋಟೋ ಎನ್ನುತ್ತಲೇ ಕಾಲ ಕಳೇದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಫೋಟೋಗ್ರಾಫರ್ ಮದುವೆ ಕಾರ್ಯಕ್ರಮ ಮುಗಿಯುವವರೆಗೆ ಕಾದು ನಂತರ ಸಂಪೂರ್ಣ ಫೋಟೋ ಡಿಲೀಟ್ ಮಾಡಿ ಸೇಡು ತೀರಿಸಿಕೊಂಡಿದ್ದಾನೆ.ಸಂಜೆಯವರೆಗೂ ಊಟ, ತಿಂಡಿ ನೀಡಿಲ್ಲ. ಸಿಕ್ಕಾಪಟ್ಟೆ ಶಕೆ ಇದೆ. ಯಾರು ಒಂದು ಲೋಟ ನೀರನ್ನು ಕೊಟ್ಟಿಲ್ಲ. ಆದ್ದರಿಂದ ಹೀಗೆ ಮಾಡಿದೆ ಎಂದು ತನಗಾಗಿರುವ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾನೆ. ಇದಕ್ಕೆ ನೂರಾರು ಕಾಮೆಂಟ್‍ಗಳು ಬಂದಿದೆ.
ಮುಂಬೈ: ಕೆಜಿಎಫ್ ಚಾಪ್ಟರ್ 1 ಗಲಿ ಗಲಿ ಹಾಡಿಗೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದಿದ್ದ ಮೌನಿ ರಾಯ್ ಅವರು ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಮೌನಿ 2022ರ ಜನವರಿ ತಿಂಗಳಲ್ಲಿ ಬಾಯ್‍ಫ್ರೆಂಡ್ ಜೊತೆಗೆ ಮದುವೆ ಆಗಲಿದ್ದಾರಂತೆ. ಹೀಗೊಂದು ವಿಚಾರ ಬಾಲಿವುಡ್ ಅಂಗಳದಲ್ಲಿ ಜೋರಾಗಿದೆ.
ಮೌನಿ ರಾಯ್ ಅವರು ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಜೊತೆ ರಿಲೇಶನ್‍ಶಿಪ್‍ನಲ್ಲಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಾಗಲಿ ಅಥವಾ ಮಾಧ್ಯಮದ ಎದುರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡಿಲ್ಲ. ಆದರೆ ಅವರ ಪ್ರೇಮ ವಿಚಾರ ಸದಾ ಸುದ್ದಿಯಲ್ಲಿರುತ್ತದೆ. ಜನವರಿಯಲ್ಲಿ ಮೌನಿ ಅವರು ವಿವಾಹವಾಗಲಿದ್ದಾರೆ ಎನ್ನುವ ಸುದ್ದಿ ಜೋರಾಗಿದೆ. ಈ ಬಗ್ಗೆ ಮೌನಿ ರಾಯ್ ಸೋದರ ಸಂಬಂಧಿ ವಿದ್ಯುತ್ ರಾಯ್‍ಸರ್ಕಾರ್ ಸ್ಥಳೀಯ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಾಂಜ್ರಾ ನದಿಗೆ ಮತ್ತೆ ಭಾರೀ ಪ್ರಮಾಣದ ನೀರು ಬಿಡುಗಡೆ – ನೆರೆ ಭೀತಿ
ದುಬೈ ಅಥವಾ ಇಟಲಿಯಲ್ಲಿ ಮದುವೆ ಆಗುವ ಆಲೋಚನೆ ನಟಿಯದ್ದು. ನಂತರ ಮೌನಿ ರಾಯ್ ಊರಾದ ಪಶ್ಚಿಮ ಬಂಗಾಳದ ಕೂಚ್ ಬೆಹರ್‍ನಲ್ಲಿ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲು ಚಿಂತಿಸಲಾಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪ್ರೇಮ ವೈಫಲ್ಯ, ಯುವಕ ಸಾವು- ಆತ್ಮಹತ್ಯೆಯೋ, ಕೊಲೆಯೋ?
ಸೂರಜ್ ಜತೆ ಮೌನಿ ಡೇಟಿಂಗ್ ನಡೆಸೋಕೆ ಆರಂಭಿಸಿ ಎರಡು ವರ್ಷ ಕಳೆದಿದೆ. 2019ರಲ್ಲಿ ಮೌನಿ ಮತ್ತು ಸೂರಜ್ ಮೊಟ್ಟ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. 2020ರಲ್ಲಿ ಮೌನಿ ದುಬೈಗೆ ತೆರಳಿದ್ದರು. ಈ ವೇಳೆ ಕೆಲ ಸಮಯ ಅಲ್ಲಿಯೇ ಉಳಿದುಕೊಂಡಿದ್ದರು. ಇದೀಗ ಜನವರಿಯಲ್ಲಿ ಮದುವೆಯಾಗುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಗಾಂಧಿನಗರ: ಯುವತಿಯೊಬ್ಬಳು ಪ್ರಿಯಕರನೊಂದಿಗೆ ಓಡಿಹೋಗಲು ಹೆತ್ತ ತಂದೆ ತಾಯಿಗೆ ವಿಷ ಪ್ರಾಶನ ಮಾಡಿಸಿದ ಘಟನೆ ಸೂರತ್‍ನಲ್ಲಿ ನಡೆದಿದೆ.
ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ಹೆತ್ತ ತಂದೆ ತಾಯಿಗೆ ವಿಷ ಹಾಕಿದ್ದಾಳೆ. ಆರೋಪಿತ ಯುವತಿಯನ್ನು ಖುಷ್ಬು ಎಂದು ಗುರುತಿಸಲಾಗಿದೆ. ಈಕೆಯ ಪ್ರಿಯಕರ ಸಚಿನ್ ಆಗಿದ್ದಾನೆ. ಪ್ರಿಯಕರ ಸಚಿನ್ ಜೊತೆ ಓಡಿ ಹೋಗಲು ನಿರ್ಧಾರ ಮಾಡಿದ್ದಳು. ಇದಕ್ಕೆ ಪೋಷಕರು ಅಡ್ಡಿಯಾದ್ದರಿಂದ, ಆಹಾರದಲ್ಲಿ ವಿಷ ಹಾಕಿ ನೀಡಿದ್ದಾಳೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರು ಘಟನೆ ಮಾಸುವ ಮುನ್ನವೇ ದಾವಣಗೆರೆಯಲ್ಲಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ
ಖುಷ್ಬು, ಸಚಿನ್ ಕುಟುಂಬವು ಸೂರತ್‍ನ ದಿಂಡೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಆ ಸಮಯದಲ್ಲಿ ಇಬ್ಬರಿಗೂ ಸ್ನೇಹ ಬೆಳೆದಿದೆ. ದಿನ ಕಳೆಯುತ್ತಿದ್ದಂತೆ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಖುಷ್ಬು ಅಪ್ರಾಪ್ತ ವಯಸ್ಸಿನವಳಾದ್ದರಿಂದ ಪೋಷಕರು ಆ ಸಂಬಂಧವನ್ನು ನಿರಾಕರಿಸಿದ್ದಾರೆ. ಇದರಿಂದಾಗಿ ಬೇಸರಗೊಂಡ ಖುಷ್ಬು ಸಚಿನ್‍ನೊಡನೆ ಮನೆಬಿಟ್ಟು ಓಡಿ ಹೋಗಿದ್ದಳು. ಖುಷ್ಬು ಕುಟುಂಬ ಅವರಿರುವ ಜಾಗವನ್ನು ಹುಡುಕಿ ಮರಳಿ ಮನೆಗೆ ಕರೆತಂದಿದ್ದರು. ಪ್ರೀತಿಯ ಮೋಹದಿಂದ ಖುಷ್ಬುವಿನ ಮನ ಬದಲಾಯಿಸಲು ಆ ನಗರವನ್ನು ಬಿಟ್ಟು ಬೇರೆಡೆಗೆ ಹೋಗಿ ಕುಟುಂಬ ವಾಸವಿದ್ದರು. ಇದನ್ನೂ ಓದಿ: 40 ಕೆಜಿ ತೂಕ ಇಳಿಸಿಕೊಂಡ ಬಾಲಿವುಡ್‍ನ ನೃತ್ಯ ನಿರ್ದೇಶಕ ರೆಮೋ ಡಿಸೋಜಾ ಪತ್ನಿ
ಬೇರೆಡೆಗೆ ವಾಸವಿದ್ದಾಗಲೂ ಸಹ ಖುಷ್ಬು ಮನ ಬದಲಾಗಿಲ್ಲ. ಸಚಿನ್ ಜೊತೆಗಿನ ಪ್ರೀತಿಯನ್ನು ಮತ್ತೆ ಮುಂದುವರೆಸಿದ್ದಳು. ಆದರೆ 18 ವರ್ಷ ವಯಸ್ಸಾಗುವುದನ್ನೇ ಕಾಯುತ್ತಿದ್ದು, ತನ್ನ 18ನೇ ವರ್ಷದ ಜನ್ಮದಿನದ ಎರಡು ದಿನಗಳ ಬಳಿಕ ಸಚಿನ್ ಜೊತೆಗೆ ಓಡಿ ಹೋಗಿ ಮದುವೆಯಾಗಲು ನಿರ್ಧರಿಸಿದ್ದಾಳೆ. ಸೆಪ್ಟೆಂಬರ್ 12ನೇ ತಾರೀಕಿನಂದು ಮೆಡಿಕಲ್ ಸ್ಟೋರ್ಸ್‍ನಿಂದ ಒಂದಿಷ್ಟು ಮಾತ್ರೆಗಳನ್ನು ತಂದು ಆಹಾರದಲ್ಲಿ ಬೆರೆಸಿ ಮನೆಯವರಿಗೆಲ್ಲಾ ನೀಡಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯವರು ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಿದ್ದಂತೆಯೇ ಸಚಿನ್ ಆಕೆಯ ಮನೆಗೆ ಬಂದು ಖುಷ್ಬುಳನ್ನು ಕರೆದುಕೊಂಡು ಪರಾರಿಯಾಗಿದ್ದಾನೆ. ಇದನ್ನೂ ಓದಿ: ನಾಲಿಗೆ ಚಪ್ಪರಿಸಿ ತಿನ್ನುವ ಶುಂಠಿ ಉಪ್ಪಿನಕಾಯಿ ಮಾಡುವ ವಿಧಾನ
ಆಕೆಯ ತಂದೆ ವಂಜಾರಾ ಅವರಿಗೆ ಎಚ್ಚರವಾದ ಬಳಿಕ, ಎಚ್ಚರ ತಪ್ಪಿ ಬಿದ್ದಿದ್ದ ಮನೆಯವರನ್ನು ಎದ್ದೇಳಿಸಲು ಪ್ರಯತ್ನಿಸಿದ್ದಾರೆ. ಈ ಕಡೆ ಖುಷ್ಬು ಮತ್ತು ಸಚಿನ್ ಮದುವೆಯಾಗಲು ಪೊಲೀಸ್ ಠಾಣೆಯನ್ನು ತಲುಪಿದ್ದಾರೆ. ಖುಷ್ಬು ತಾಯಿ ಮತ್ತು ಸಹೋದರನ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು ಆಸ್ಪತ್ರೆಗೆ ಕರೆತರಲಾಗಿದೆ. ತಂದೆ ವಂಜಾರಾ ಅವರು ಖುಷ್ಬು, ಸಚಿನ್ ಮತ್ತು ಸಚಿನ್ ತಂದೆ ಅಶೋಕ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಿರುವನಂತಪುರಂ: ಮದುವೆಗೆ ವಧು ಬೇಕೆಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಹಳ್ಳಿ ಹೈದನಿಗೆ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಆಫರ್ ಬಂದಿರುವುದು ಕೇರಳದಲ್ಲಿ ಸುದ್ದಿಯಾಗಿದೆ.
ಕೇರಳದ ವಲ್ಲಾಚಿರ ಎಂಬ ಊರಿನವರಾದ 33 ವರ್ಷದ ಎನ್.ಎನ್. ಉನ್ನಿಕೃಷ್ಣನ್ ಮದುವೆಯಾಗಲು ಹುಡುಗಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿದ್ದರು. ಆದರೆ ಯಾವ ಹುಡುಗಿಯೂ ಹೊಂದಿಕೆಯಾಗಿರಲಿಲ್ಲ. ವಲ್ಲಾಚಿರದಲ್ಲಿ ತನ್ನದೇ ಆದ ಅಂಗಡಿಯನ್ನು ಇಟ್ಟುಕೊಂಡಿರುವ ಉನ್ನಿಕೃಷ್ಣನ್ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ತಾನೇ ಹುಡುಗಿಯನ್ನು ಹುಡುಕಿಕೊಳ್ಳಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ಅಂಗಡಿಯ ಮುಂದೆ ವಧು ಬೇಕಾಗಿದ್ದಾಳೆ ಎಂದು ಬೋರ್ಡ್ ಒಂದನ್ನು ಹಾಕಿ ಅದರ ಕೆಳಗೆ ತಮ್ಮ ನಂಬರನ್ನು ನಮೂದಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ
ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದೇನೆ. ಜಾತಿ, ಧರ್ಮ ಯಾವುದಾದರೂ ತೊಂದರೆಯಿಲ್ಲ ಎಂದು ಉನ್ನಿಕೃಷ್ಣನ್ ಫಲಕದಲ್ಲಿ ಬರೆದು, ಅಂಗಡಿ ಎದುರು ನೇತು ಹಾಕಿದ್ದಾರೆ. ಇತ್ತೀಚೆಗೆ ಈ ಅಂಗಡಿಗೆ ಬಂದಿದ್ದ ಅವರ ಗೆಳೆಯರೊಬ್ಬರು ಈ ಫಲಕವನ್ನು ನೋಡಿ ಅದರ ಫೋಟೋ ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದರು. ಅದುವರೆಗೂ ಸುತ್ತಮುತ್ತಲಿನ ಊರುಗಳಲ್ಲಿ ಹುಡುಗಿಗಾಗಿ ಹುಡುಕಾಡುತ್ತಿದ್ದ ಉನ್ನಿಕೃಷ್ಣನ್‍ಗೆ ಈ ಒಂದು ಪೋಸ್ಟ್ನಿಂದ ಈಗ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದಲೂ ಫೋನ್ ಕಾಲ್‍ಗಳು ಬಂದಿವೆಯಂತೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ – ಬಿಡುಗಡೆಯಾಗಲಿದೆ ಆಡಿಯೋ ಬುಕ್
ನನ್ನ ತಲೆಬುರುಡೆಯಲ್ಲಿ ಗೆಡ್ಡೆ ಬೆಳೆದಿದ್ದರಿಂದ ಈಗಾಗಲೇ ಆಪರೇಷನ್ ಆಗಿದೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಇನ್ನಾದರೂ ಜೀವನದಲ್ಲಿ ಸೆಟಲ್ ಆಗಬೇಕೆಂದು ಮದುವೆಯಾಗಲು ನಿರ್ಧರಿಸಿದೆ. ಆದರೆ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರಲಿಲ್ಲ. ನನಗೆ ನನ್ನದೇ ಸ್ವಂತದ್ದೊಂದು ಅಂಗಡಿಯಿದೆ. ನಮ್ಮ ಮನೆ ಬಳಿಯೇ ಲಾಟರಿ ಅಂಗಡಿಯೊಂದನ್ನು ತೆರೆದಿದ್ದೇನೆ. ಅಲ್ಲಿಯೇ ಟೀಯನ್ನು ಕೂಡ ಮಾರುತ್ತೇನೆ. ಬ್ರೋಕರ್ ಮೂಲಕ ಹುಡುಗಿಯನ್ನು ಹುಡುಕುವುದು ಇಷ್ಟವಿಲ್ಲದ ಕಾರಣಕ್ಕೆ ಈ ರೀತಿ ಅಂಗಡಿಯೆದುರು ನನಗೆ ನಾನೇ ಜಾಹೀರಾತು ಕೊಟ್ಟುಕೊಂಡಿದ್ದೇನೆ. ನಮ್ಮ ಮನೆಯವರು ಕೂಡ ಹುಡುಗಿಯನ್ನು ಹುಡುಕುತ್ತಿದ್ದಾರೆ. ಆದರೆ ಇನ್ನೂ ನನಗೆ ಸರಿಯೆನಿಸುವ ಹುಡುಗಿ ಸಿಕ್ಕಿಲ್ಲ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಸುದೀಪ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನೀರಜ್ ಚೋಪ್ರಾ
ಈ ಬೋರ್ಡ್‍ನ ಫೋಟೋ ತೆಗೆದು ಉನ್ನಿಕೃಷ್ಣನ್ ಅವರ ಸ್ನೇಹಿತ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಹಾಕಿಕೊಂಡಿದ್ದರು. ಮಲಯಾಳಂನಲ್ಲಿ ಬರೆದಿದ್ದ ಆ ಬೋರ್ಡ್‍ನ ಅರ್ಥವನ್ನು ಇಂಗ್ಲಿಷ್‍ನಲ್ಲಿ ಅನುವಾದಿಸಿ ಫೋಸ್ಟ್ ಮಾಡಿದ್ದರು. ನನ್ನನ್ನು ಮದುವೆಯಾಗಲು ಇಚ್ಛಿಸುವ ಯಾವುದೇ ಧರ್ಮ, ಜಾತಿಯ ಹುಡುಗಿ ಈ ನಂಬರ್‍ಗೆ ಸಂಪರ್ಕಿಸಿ ಎಂದು ಬರೆದಿದ್ದ ಆ ಬೋರ್ಡ್ ಅನ್ನು ನೋಡಿ ಅನೇಕರು ಇಂಪ್ರೆಸ್ ಆಗಿದ್ದಾರೆ. ಇದೀಗ ಆ ಫೋಸ್ಟ್ ನೋಡಿದ ಆಸ್ಟ್ರೇಲಿಯ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ಫೋನ್ ಮಾಡಿ ತಮ್ಮ ಕುಟುಂಬದಲ್ಲಿ ಹುಡುಗಿ ಇರುವುದಾಗಿ ತಿಳಿಸುತ್ತಿದ್ದಾರೆ. ಹಲವರು ಫೋನ್ ಮಾಡಿ ಜಾತಿ, ಧರ್ಮವನ್ನು ಲೆಕ್ಕಿಸದೆ ಮದುವೆಯಾಗಲು ಬಯಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಮದುವೆಗೆ ಹುಡುಗಿಯನ್ನು ಹುಡುಕಲು ಬ್ರೋಕರ್ ಬಳಿ ಹೋಗಬೇಕು, ನೆಂಟರಿಷ್ಟರ ಬಳಿ ವಿಚಾರಣೆ ಮಾಡಬೇಕೆಂಬ ಕಾಲವೆಲ್ಲ ಹಳೆಯದಾಯ್ತು. ಈಗೇನಿದ್ದರೂ ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಬೇಕಾದಷ್ಟು ಹೊಸ ಹೊಸ ಆಯ್ಕೆಗಳಿವೆ.
ಬೆಂಗಳೂರು: ಬುಹುಭಾಷಾ ನಟ ಪ್ರಕಾಶ್ ರೈ ತಮ್ಮ ಮಗನ ಆಸೆಯಂತೆ ವಾರ್ಷಿಕೋತ್ಸವದ ದಿನ ಮಕ್ಕಳ ಎದರುರಲ್ಲಿ ಮತ್ತೆ ಮದುವೆಯಾದೆ ಎಂದು ಹೇಳುವ ಮೂಲಕವಾಗಿ ಮತ್ತೆ ಸುದ್ದಿಯಾಗಿದ್ದಾರೆ.
ಈ ರಾತ್ರಿ ನನ್ನ ಮಗನಿಗಾಗಿ ಮತ್ತೆ ಮದುವೆಯಾದೆವು. ಮಗ ವೇದಾಂತ್ ತನ್ನ ಹೆತ್ತವರ ಮದುವೆಗೆ ಸಾಕ್ಷಿಯಾಗಲು ಬಯಸಿದನು ಮತ್ತು ಅದನ್ನೇ ವ್ಯಕ್ತಪಡಿಸಿದನು. ನಾವು ನಮ್ಮ ಮಕ್ಕಳ ಮುಂದೆ ಉಂಗುರ, ಮುತ್ತು ವಿನಿಮಯ ಮಾಡಿಕೊಂಡೆವು ಎಂದು ಬರೆದುಕೊಂಡು ಕೆಲವು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ಪ್ರಕಾಶ್ ರೈ ಅವರು ಎರಡನೇ ಮದುವೆಯಾದ ವಿಷಯ ತುಂಬಾ ಹಳೆಯದು. ಮೊದಲ ಪತ್ನಿಯಿಂದ ದೂರಾಗಿ ರೈ ನಂತರ ಪೋನಿ ಅವರನ್ನು ವಿವಾಹವಾದರು. ಪೋನಿಯವರು ಬಾಲಿವುಡ್‍ನಲ್ಲಿ ಕೊರಿಯೋಗ್ರಾಫರ್ ಆಗಿದ್ದರು. ಈ ವೇಳೆ ಪ್ರಕಾಶ್ ರೈ, ಪೋನಿ ಅವರನ್ನು ಪ್ರೀತಿಸಿ ಮದುವೆಯಾದರು. ಈ ಜೋಡಿಗೆ ಮುದ್ದಾದ ಮಗನಿದ್ದಾನೆ. ನಿನ್ನೆ 11 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಮಗನ ಆಸೆಯಂತೆ ಮತ್ತೆ ಮದುವೆಯಾಗಿದ್ದಾರೆ.
ಪ್ರಕಾಶ್ ರೈ ಮಗ ವೇದಾಂತ್ ತನ್ನ ತಂದೆ ತಾಯಿಯರನ್ನು ತನ್ನ ಮುಂದೆ ಮದುವೆ ಮಾಡಿಕೊಳ್ಳುವುದನ್ನು ನೋಡಲು ಬಯಸಿದ್ದನು. ತಮ್ಮ 11 ನೇ ವಾರ್ಷಿಕೋತ್ಸವದಂದು, ಪ್ರಕಾಶ್ ರಾಜ್ ಮತ್ತು ಪೋನಿ ವರ್ಮಾ ಮತ್ತೊಮ್ಮೆ ವಿವಾಹವಾದರು. ಈ ಬಾರಿ, ಅದು ಅವರ ಮಕ್ಕಳ ಸಮ್ಮುಖದಲ್ಲಿ ಇದ್ದಿದ್ದರಿಂದ ಸಾಕಷ್ಟು ಭಿನ್ನವಾಗಿತ್ತು. ಅವರ ಮೊದಲ ಪತ್ನಿಯ ಮಕ್ಕಳಾದ ಮೇಘನಾ, ಪೂಜಾ ಕೂಡ ಹಾಜರಿದ್ದರು. ಇದನ್ನೂ ಓದಿ: ಮದುವೆ ವಾರ್ಷಿಕೋತ್ಸವ ಸಂಭ್ರಮದಲ್ಲಿ ನಟ ಪ್ರಕಾಶ್ ರೈ
ಮದುವೆ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪತ್ನಿ ಜೊತೆಗಿನ ಮದುವೆ ಫೋಟೋ ಅಪ್ಲೋಡ್ ಮಾಡಿಕೊಂಡಿರುವ ಪ್ರಕಾಶ್ ರೈ, ಪತ್ನಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನ್ನ ಜೀವನ ಪಯಣದಲ್ಲಿ ಒಬ್ಬ ಒಳ್ಳೆಯ ಗೆಳತಿ, ಪ್ರಿಯತಮೆ ಹಾಗೂ ಜೀವನದ ಸಹ ಪ್ರಯಾಣಿಕೆಯಾಗಿ ಇರುವುದಕ್ಕೆ ತುಂಬಾ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
ಚೆನ್ನೈ: ಮದುವೆಗಾಗಿ ದೇವಸ್ಥಾನಕ್ಕೆ ಬಂದ 2 ಕುಟುಂಬಗಳ ಮಧ್ಯೆ ಹೊಡೆದಾಟವಾಗಿರುವ ಘಟನೆ ತಮಿಳುನಾಡಿನ ಕುಂದ್ರತ್ತೂರಿನ ಮುರುಗನ್ ದೇವಸ್ಥಾನದಲ್ಲಿ ನಡೆದಿದೆ.
ಮುರುಗನ್ ದೇವಸ್ಥಾನದಲ್ಲಿ ಮದುವೆ ಮಾಡಲು ಎರಡು ಬೇರೆಬೇರೆ ಕುಟುಂಬದವರು ಆಗಮಿಸಿದ್ದರು. ಆದರೆ ಒಂದು ಬಾರಿಗೆ ಇಲ್ಲಿ ಒಂದು ಕುಟುಂಬ ಮಾತ್ರ ಮದುವೆ ಮಾಡಬಹುದು. ಆದರೆ ಈ ಎರಡೂ ಕುಟುಂಬಗಳು ತಾವು ಮೊದಲು ಎಂದು ಕೂಗಾಡಿಕೊಂಡಿದ್ದಾರೆ. ಒಂದು ಕುಟುಂಬಕ್ಕೆ ಸೇರಿದ ವಧುವನ್ನು ಹಿಡಿದು ಎಳೆದಾಡಲಾಗಿದೆ. ಅದನ್ನು ನೋಡಲಾಗದೆ ಇನ್ನೊಂದು ಕುಟುಂಬದ ವರ ಹೋಗಿ ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆಗ ಆತನಿಗೂ ಏಟು ಬಿದ್ದಿದೆ.
Which couple will tie the knot first? Two families fight it out at the Murugan temple in Chennai’s Kundrathur area! Looks like the groom also got caught in between ????????♀️???? pic.twitter.com/AZlek8DUEN
ಕುಟುಂಬದವರು ಅದೆಷ್ಟರ ಮಟ್ಟಿಗೆ ಹೊಡೆದಾಟದಲ್ಲಿ ತಲ್ಲೀನರಾಗಿದ್ದಾರೆ ಎಂದರೆ ಅವರಿಗೆ ಕೊರೊನಾ ನಿಯಂತ್ರಣಾ ನಿಯಮಗಳನ್ನು ತಾವು ಪಾಲಿಸುತ್ತಿಲ್ಲ ಎಂಬ ವಿಷಯವೇ ಮರೆತುಹೋಗಿದೆ. 21 ಸೆಕೆಂಡ್‍ಗಳ ವೀಡಿಯೋಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ತಿಂಗಳಲ್ಲಿ ಇರುವ ಕೊನೆಯ ಒಳ್ಳೆಯ ಮುಹೂರ್ತ ಆಗಿದ್ದರಿಂದ ಎರಡೂ ಕುಟುಂಬಗಳೂ ಪರಸ್ಪರ ಕಿತ್ತಾಡಿಕೊಂಡಿವೆ. ಮುಹೂರ್ತ ತಪ್ಪಿದರೆ ಮತ್ತೆ ಮದುವೆ ವಿಳಂಬವಾಗುತ್ತದೆ ಎಂಬ ಆತಂಕದಲ್ಲಿ ದೈಹಿಕ ಹಿಂಸಾಚಾರ ನಡೆಸಿಕೊಂಡಿದ್ದಾರೆಂದು ವರದಿಯಾಗಿದೆ. ಈ ವೀಡಿಯೋಗೆ ವಿವಿಧ ರೂಪದ ಕಮೆಂಟ್‍ಗಳನ್ನು ನೆಟ್ಟಿಗರು ಬರೆದಿದ್ದಾರೆ.
ಮುಂಬೈ: ಬಾಲಿವುಡ್ ನಟ ಅನಿಲ್ ಕಪೂರ್ 2ನೇ ಪುತ್ರಿ, ನಿರ್ಮಾಪಕಿ, ಉದ್ಯಮಿ, ಫ್ಯಾಷನ್ ಸ್ಟೈಲಿಸ್ಟ್ ರಿಯಾ ಕಪೂರ್ ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ರಿಯಾ ಕಪೂರ್ ಹಂಚಿಕೊಂಡಿದ್ದಾರೆ.
ಆಗಸ್ಟ್ 14 ರಂದು ನೆರವೇರಿದ ರಿಯಾ ಕಪೂರ್-ಕರಣ್ ಬೂಲಾನಿ ಮದುವೆ ಸಮಾರಂಭದ ಫೋಟೋ ಈವರೆಗೂ ಬಹಿರಂಗವಾಗಿರಲಿಲ್ಲ. ಇದೀಗ ತಮ್ಮ ವಿವಾಹದ ಫೋಟೋಗಳನ್ನು ಸ್ವತಃ ನವ ದಂಪತಿ ರಿಯಾ ಕಪೂರ್ ಮತ್ತು ಕರಣ್ ಬೂಲಾನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಸೈಫ್ ಅಲಿ ಖಾನ್ ಹುಟ್ಟುಹಬ್ಬದ ದಿನ ಮಗನ ಫೋಟೋ ವೈರಲ್
ನಿನ್ನೆ ನಮ್ಮ ಪ್ರೀತಿ ಅಧಿಕೃತವಾಯಿತು. ಆದರೆ ನಾನು ಮತ್ತು ನೀನು ಕಳೆದ ಒಂದು ದಶಕದಿಂದ ಪ್ರೀತಿಯಲ್ಲಿದ್ದೇವೆ. ಇದಕ್ಕಾಗಿ ನಾನು ನಾಲ್ವರಿಗೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ. ಒಬ್ಬರು ಚಿತ್ರ ನಿರ್ಮಾಪಕಿ, ಎರಡನೇಯವರು ಫ್ಯಾಶನ್ ಸ್ಟೈಲಿಸ್ಟ್, ಮೂರನೇಯವರು ನನ್ನ ಮಗಳ ತಾಯಿ, ನಾಲ್ಕನೇಯವರು ಅದ್ಭುತವಾದ ಕುಕ್. ಅವರೆಲ್ಲರ ಹೆಸರೂ ರಿಯಾ ಕಪೂರ್. ಇದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರ ಎಂದು ರಿಯಾ ಕಪೂರ್ ಬಗ್ಗೆ ಕರಣ್ ಬೂಲಾನಿ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡು ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಕಳೆದ 12 ವರ್ಷಗಳಿಂದ ಪ್ರೀತಿಸುತ್ತಿದ್ದೇವು. ಇಬ್ಬರ ಪ್ರೀತಿಗೆ ಕುಟುಂಬಸ್ಥರು ಸಮ್ಮತಿ ನೀಡಿದ್ದು, ವಿವಾಹ ಮಹೋತ್ಸವ ಜರುಗಿದೆ ಎಂದು ಬರೆದುಕೊಂಡ ರಿಯಾ ಕಪೂರ್ ತಮ್ಮ ಮದುವೆಯ ಫೋಟೋವನ್ನು ಶೇರ್‍ಮಾಡಿಕೊಂಡಿದ್ದಾರೆ.
ಡೆಹ್ರಾಡೂನ್: ಮಹಿಳೆಯೊಬ್ಬಳು ಯುವಕನನ್ನು ಮದುವೆಯಾಗಲು ತನ್ನ ದಾಖಲೆಗಳನ್ನು ಫೋರ್ಜರಿ ಮಾಡಿ ಇದೀಗ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ.
ಮೂಲತಃ ಉತ್ತರ ಪ್ರದೇಶದವರಾದ ಮಹಿಳೆ ಮತ್ತೊಂದು ಮದುವೆಯಾಗಲು ಬಯಸಿದ್ದರು. ಇದಕ್ಕಾಗಿ ಸುರಸುಂದರಾಂಗ ಯುವಕನ ಹುಡುಕಾಟದಲ್ಲಿದ್ದಳು. ಇದೇ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಯುವಕನೊಬ್ಬ ಪರಿಚಿತನಾಗುತ್ತಾನೆ. ಆತನೇ ನನಗೆ ಸರಿಯಾದ ಜೋಡಿ ಎಂದು ಆಕೆ ನಿರ್ಧರಿಸಿದ್ದಳು. ಅದರಂತೆ ಯುವಕನಿಗೆ ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾಳೆ. ಆಗ ಯುವಕ ಮದುವೆಗೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಟಾಲೆಸ್ಟ್ ಲೀಡರ್‌ಗಳ ಬಗ್ಗೆ ಹೇಳಿಕೆ ನೀಡುವುದನ್ನು ಎಲ್ಲರೂ ನಿಲ್ಲಿಸಿ: ಶ್ರೀರಾಮುಲು
28 ವರ್ಷದ ಯುವಕ ಮದುವೆಯಾಗಲು ವಧುವಿಗಾಗಿ ಹುಡುಕಾಟ ನಡೆಸುತ್ತಿದ್ದನು. ಅದೇ ಸಮಯದಲ್ಲಿ ಈಕೆಯ ಪರಿಚಯವಾಗಿದೆ. ತನ್ನ ಪ್ರೋಫೈಲ್‍ನಲ್ಲಿ ಮಹಿಳೆ ತಾನು ಯುವತಿ ಎಂದು ಪರಿಚಯಿಸಿಕೊಂಡಿದ್ದಳು. ಅಲ್ಲದೆ ತನಗೆ ಇನ್ನು ಕೇವಲ 28 ವರ್ಷ ಎಂದು ತಿಳಿಸಿದ್ದಳು. ಇದೇ ಕಾರಣದಿಂದ ಆತ ಕೂಡ ತನಗೆ ಸರಿಯಾದ ಜೋಡಿ ಎಂದು ಒಪ್ಪಿಕೊಂಡಿದ್ದ. ಆದರೆ ಮದುವೆ 20 ದಿನವಿರುವಾಗ ಆಕೆಯ ಅಸಲಿಯತ್ತು ಬಹಿರಂಗವಾಗಿದೆ. ಆಕೆಗೆ 28 ಅಲ್ಲ 38 ವರ್ಷ ಎಂಬುದು ತಿಳಿದು ಬಂದಿದೆ. ಯುವಕನನ್ನು ಮದುವೆಯಾಗಲು ಆಂಟಿ ತನ್ನ ದಾಖಲಾತಿಗಳನ್ನು ಫೋರ್ಜರಿ ಮಾಡಿದ್ದಾರೆ. 1983ರಲ್ಲಿ ಹುಟ್ಟಿದ ದಿನಾಂಕವನ್ನು 1991 ಬದಲಿಸಿಕೊಂಡಿರುವುದು ಗೊತ್ತಾಗಿದೆ. ಆಗ ಯುವಕ ಮದುವೆಗೆ ನೀರಾಕರಿಸಿದ್ದಾನೆ.
ಆಗ ಯುವತಿಯ ಕುಟುಂಬಸ್ಥರಿಂದ ಯುವಕನಿಗೆ ಕೊಲೆ ಬೇದರಿಕೆಯ ಕರೆ ಬಂದಿದೆ. ಇದರಿಂದ ಮತ್ತಷ್ಟು ಹೆದರಿದ ಕುಟುಂಬಸ್ಥರು ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಈ ಕುರಿತಾಗಿ ತನಿಖೆ ಮಾಡುತ್ತಿದ್ದಾರೆ.
ಮುಂಬೈ: ನಟಿ ಯಾಮಿ ಗೌತಮ್ ಮದುವೆಯಾಗಿ ಕೆಲವು ದಿನಗಳ ನಂತರ ತಮ್ಮ ಮದುವೆಯ ಹಿಂದೆ ಇರುವ ವಿಚಾರವನ್ನು ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಮೊದಲು ಕೇವಲ ನಿಶ್ಚಿತಾರ್ಥವನ್ನಷ್ಟೇ ಮಾಡಿಕೊಳ್ಳಬೇಕು ಎಂದು ನಿರ್ಧಾರವಾಗಿತ್ತು, ಆದರೆ, ಅಜ್ಜಿಯ ಒತ್ತಾಯದಿಂದಾಗಿ ಮದುವೆ ಆಗಬೇಕಾಗಿ ಬಂತು ಎಂದು ಯಾಮಿ ಗೌತಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಹಾಟ್ ಫೋಟೋಶೂಟ್‍ನಲ್ಲಿ ಪಾರುಲ್ ಯಾದವ್ ಹವಾ
ನಾವು ಅದರ ಬಗ್ಗೆ ಪ್ಲಾನ್ ಮಾಡಿರಲಿಲ್ಲ, ಆದರೂ ಮದುವೆ ಸುಂದರ ರೀತಿಯಲ್ಲಿ ನಡೆದು ಹೋಯಿತು. ನನಗೆ ನಿಜವಾಗಿಯೂ ಬೇಕಾಗಿದ್ದು ಇದೇ. ನಾವಿರುವುದು ಹೀಗೆಯೇ. ಇದನ್ನು ಬಹಳಷ್ಟು ಜನ ಅರ್ಥಮಾಡಿಕೊಂಡಿದ್ದಾರೆ ಎಂಬುದು ನನಗೆ ಖುಷಿ ನೀಡಿದೆ. ನಾವು ಉರಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಹತ್ತಿರವಾಗಲು ಆರಂಭಿಸಿದೆವು. ಅಲ್ಲಿಂದ ನಮ್ಮ ಸ್ನೇಹ ಶುರುವಾಯಿತು. ಅದಾಗಿ ಎರಡು ವರ್ಷಗಳಾಯಿತು, ಮತ್ತು ನಾವು ಮದುವೆ ಆಗಲು ನಿರ್ಧರಿಸಿದೆವು. ನಮ್ಮಿಬ್ಬರ ಮನೆಯವರಿಗೂ ಇದರಿಂದ ಸಂತೋಷವಾಯಿತು ಎಂದು ಅವರು ಹೇಳಿದ್ದಾರೆ.
ಜೂನ್‍ನಲ್ಲಿ ನಟಿ ಯಾಮಿ ಗೌತಮ್ ನಿರ್ದೇಶಕ ಆದಿತ್ಯ ಧರ್ ಅವರನ್ನು ಮದುವೆಯಾದರು. ಯಾರೂ ಊಹಿಸಿಯೇ ಇರಲಿಲ್ಲ. ಯಾಮಿ ಗೌತಮ್ ಅವರ ಊರಾದ ಹಿಮಾಚಲ ಪ್ರದೇಶದ ಬಿಲಾಸ್‍ಪುರದಲ್ಲಿ ಮದುವೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿಕೊಂಡು ಮದುವೆಯಾಗಿರುವ ವಿಚಾರವನ್ನು ಹೇಳಿಕೊಂಡು ತಮ್ಮ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು. ಜೊತೆಗೆ ಮದುವೆಯ ವಿವಿಧ ಶಾಸ್ತ್ರಗಳ ಹಲವಾರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದೀಗ ಅವರು ಯಾವುದೇ ಸುಳಿವು ಕೊಡದೆ ಮದುವೆಯಾಗಿರುವುದರ ಹಿಂದೆ ಇವರು ವಿಚಾರವನ್ನು ಹೇಳಿಕೊಂಡಿದ್ದಾರೆ.
ಭೋಪಾಲ್: ಫಸ್ಟ್ ನೈಟ್ ದಿನ ವಧು ಟೆರೇಸ್‍ನಿಂದ ಹಾರಿ ಎಸ್ಕೇಪ್ ಆಗಿರುವ ಘಟನೆ ಮಧ್ಯಪ್ರದೇಶದ ಭಿಂಡ್ ಗ್ರಾಮದಲ್ಲಿ ನಡೆದಿದೆ.
ಸೋನು ಜೈನ್ ಎಂಬ ಯುವಕ ಮದುವೆಯಾಗಲು ಹುಡುಗಿ ಸಿಕ್ತಿಲ್ಲ ಎಂದು ಗೋಳಾಡಿದ್ದನು. ಹುಡುಗಿಗಾಗಿ ಹುಡುಕಿ ಸೋತ ಅವನಿಗೆ ಆತನ ಪರಿಚಯದವರೇ ಆದ ಉದಲ್ ಖಾತಿಕ್ ಹುಡುಗಿಯನ್ನು ನಾನು ಹುಡುಕುತ್ತೇನೆ. ಆದರೆ ಅವಳಿಗೆ ನೀನು ಒಂದು ಲಕ್ಷ ರೂಪಾಯಿ ಕೊಡಬೇಕು ಎಂದು ಹೇಳಿದ್ದಾರೆ. ಮದುವೆಯಾಗಲು ಹುಡಗಿ ಹುಡುಕಿ ಸೋತಿದ್ದ ಸೋನು ಇದಕ್ಕೆ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಕರ್ನಾಟಕದಲ್ಲಿ ತಗ್ಗಿತು ಮಳೆ – ಶೀಘ್ರವೇ ದುರ್ಬಲವಾಗಲಿದೆ ಮುಂಗಾರು
ನಂತರ ಉದಲ್ ತನ್ನಿಬ್ಬರು ಸ್ನೇಹಿತರ ಜೊತೆಗೂಡಿ ಅನಿತಾ ರತ್ನಾಕರ್ ಎಂಬ ಯುವತಿಯನ್ನು ಕರೆತಂದಿದ್ದಾನೆ. ಆಕೆಯ ಚೆಲುವನ್ನು ನೋಡಿ ಸೋನು ಮತ್ತು ಆತನ ಪೋಷಕರು ಮದುವೆಗೆ ಒಪ್ಪಿಕೊಂಡಿದ್ದಾರೆ. ಒಂದು ಲಕ್ಷ ರೂಪಾಯಿಗಳನ್ನೂ ಆಕೆಗೆ ನೀಡಿದ್ದಾರೆ. ಶಾಸ್ತ್ರೋಕ್ತವಾಗಿ ಮದುವೆಯಾಗಿದೆ. ಫಸ್ಟ್ ನೈಟ್‍ಗೆ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ತನಗೆ ಯಾಕೋ ಸುಸ್ತಾಗುತ್ತಿದೆ ಎಂದು ಅನಿತಾ ಟೆರೇಸ್ ಮೇಲೆ ಹೋಗಿದ್ದಾಳೆ. ಎಷ್ಟೂ ಹೊತ್ತಾದರೂ ಆಕೆ ಬರದೇ ಇದ್ದಾಗ ವರ ಹೋಗಿ ನೋಡಿದ್ದಾನೆ. ಆಗ ಆಕೆ ಅಲ್ಲಿ ಇರಲಿಲ್ಲ. ಎಲ್ಲಡೆ ಹುಡುಕಿದರೂ ಸಿಗಲಿಲ್ಲ. ನಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.
ಅಷ್ಟರಲ್ಲಿ ಓಡಿಹೋಗುತ್ತಿದ್ದ ಅನಿತಾ ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಆಕೆ ಹಣಕ್ಕಾಗಿ ಈ ರೀತಿ ಮೋಸ ಮಾಡಿರುವುದು ತಿಳಿದುಬಂದಿದೆ. ಈ ವಿಚಾರವಾಗಿ 5 ಮಂದಿಯ ವಿರುದ್ಧ ದೂರು ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.