Tag: wedding

  • ಮದುವೆ ಬೇಡವೆಂದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದಳು

    ಮದುವೆ ಬೇಡವೆಂದ ಪ್ರಿಯಕರನ ಮೇಲೆ ಆ್ಯಸಿಡ್ ಎರಚಿದಳು

    ತಿರುವನಂತಪುರ: ಪ್ರೇಮ ವೈಫಲ್ಯದಿಂದ ಕುಪಿತಗೊಂಡ ಯುವತಿಯೊಬ್ಬಳು ಯುವಕನ ಮೇಲೆ ಆ್ಯಸಿಡ್ ಎರಚಿದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿಯಲ್ಲಿ ನಡೆದಿದೆ.

    ತಿರುವನಂತಪುರಂ ಜಿಲ್ಲೆಯ ಅರುಣ್ ಕುಮಾರ್ ಹಲ್ಲೆಗೊಳಗಾದ ವ್ಯಕ್ತಿ. ಇಡುಕ್ಕಿ ಜಿಲ್ಲೆಯ ಆದಿಮಾಲಿಯ ಶಿಬಾ ಹಲ್ಲೆ ಮಾಡಿದ ಯುವತಿಯಾಗಿದ್ದಾಳೆ. ಅರುಣ್ ಕುಮಾರ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತನ್ನ ದೃಷ್ಟಿಯನ್ನು ಕಳೆದುಕೊಂಡಿದ್ದಾನೆ. ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ನವೆಂಬರ್ 16ರಂದು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 1.5 ಕೋಟಿ ರೂ. ಮೌಲ್ಯದ ಹಾವಿನ ವಿಷ ಮಾರಾಟ – ಇಬ್ಬರು ಅರೆಸ್ಟ್

    ಶಿಬಾ ಅರುಣ್‍ಕುಮಾರ್ ಅವರ ಮಾಜಿ ಗೆಳತಿಯಾಗಿದ್ದರು. ಇವರಿಬ್ಬರು ಸಾಮಾಜಿಕ ಜಾಲತಾಣದಲ್ಲಿ ಭೇಟಿಯಾಗಿ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆದರೆ ಅರುಣ್‍ಕುಮಾರ್ ಬೇರೆಯೊಬ್ಬರನ್ನು ಮದುವೆಯಾಗುತ್ತಿರುವ ಸುದ್ದಿ ಕೇಳಿದ್ದ ಶಿಬಾ ಕೋಪಗೊಂಡಿದ್ದಳು. ಅಷ್ಟೇ ಅಲ್ಲದೇ ಬ್ರೆಕಪ್‍ನಿಂದಾಗಿ ಮಾನಸಿಕವಾಗಿ ಕುಗ್ಗಿದ್ದಳು. ನವೆಂಬರ್ 16ರಂದು ಸುಮಾರು 10 ಗಂಟೆ ವೇಳೆಗೆ ಆದಿಮಾಲಿ ಇರುಂಪುಪಾಲಂ ಕ್ರಿಶ್ಚಿಯನ್ ಚರ್ಚ್‍ಗೆ ಕಕರೆಸಿದ ಶಿಬಾ, ಅರುಣ್‍ಕುಮಾರ್ ಅವರ ಮುಖಕ್ಕೆ ಆ್ಯಸಿಡ್ ಎರಚಿದ್ದಾಳೆ ಎಂದು ಪೊಲೀಸರು ತಿಳಿಸಿದರು. ಇದನ್ನೂ ಓದಿ: ರೈತರು ಸ್ಮಾರ್ಟ್‍ಫೋನ್ ಕೊಳ್ಳಲು 1500 ರೂ. ಆರ್ಥಿಕ ನೆರವು ಕೊಟ್ಟ ಸರ್ಕಾರ

    ಈ ಕುರಿತಾದ ಪ್ರಕರಣದ ವೀಡಿಯೋ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಆದಿಮಾಲಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಶಿಬಾಳನ್ನು ಬಂಧಿಸಿದ್ದಾರೆ. ಅರುಣ್ ತಿರುವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಚಿಂತಾಜನಕವಾಗಿದೆ.

  • ಸೀರೆ ಧರಿಸಿ ಬರಲು ಹೋದವಳು ಪ್ರಿಯಕರನೊಂದಿಗೆ ಜೂಟ್

    ಸೀರೆ ಧರಿಸಿ ಬರಲು ಹೋದವಳು ಪ್ರಿಯಕರನೊಂದಿಗೆ ಜೂಟ್

    ಹೈದರಾಬಾದ್: ತಾಳಿ ಕಟ್ಟಲು ಕೆಲವು ಗಂಟೆ ಬಾಕಿ ಇರುವಾಗ ವಧು ವರನಿಗೆ ಕೈ ಕೊಟ್ಟು ತನ್ನ ಪ್ರಿಯಕರನ ಜೊತೆಗೆ ಹೋಗಿರುವ ಘಟನೆ  ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ ನಡೆದಿದೆ.

    ಮದನಪಲ್ಲಿ ವಲಯದ ತಟ್ಟಿವರಿಪಲ್ಲಿ ನಿವಾಸಿಯಾದ ರಾಮಕೃಷ್ಣ ಮತ್ತು ಮಲ್ಲಿಕಾ ದಂಪತಿ ಪುತ್ರಿ ಸೋನಿಕಾ ಮತ್ತು ಮದನಪಲ್ಲಿ ಪಟ್ಟಣದ ಕಾಲನಿಯೊಂದರ ಯುವಕನಿಗೂ ಮದುವೆ ನಿಶ್ಚಯವಾಗಿತ್ತು. ಇಬ್ಬರ ಕುಟುಂಬಸ್ಥರು ಒಟ್ಟಿಗೆ ಕುಳಿತು ಜಾತಕಫಲವನ್ನು ನೋಡಿ ಒಂದು ತಿಂಗಳ ಹಿಂದೆಯೇ ಮದುವೆಗೆ ನಿಶ್ಚಯ ಮಾಡಿದ್ದರು. ಇದನ್ನೂ ಓದಿ:  ದಲಿತರೊಂದಿಗೆ ಚಹಾ ಸೇವಿಸಿ, ಬಿಜೆಪಿಗೆ ಮತ ಹಾಕುವಂತೆ ಮನವೊಲಿಸಿ: ಸ್ವತಂತ್ರ ದೇವ್

    ವರ ಮತ್ತು ವಧುವಿನ ಕಡೆಯ ಸಂಬಂಧಿಕರು ಮತ್ತು ಆಪ್ತರು ಮದುವೆಗೆ ಆಗಮಿಸಿದ್ದರು. ಭಾನುವಾರ ಮದುವೆಯಾಗಬೇಕಿತ್ತು. ಶನಿವಾರ ರಾತ್ರಿ ರಿಸೆಪ್ಷನ್‍ಗೆಂದು ಸೀರೆ ಧರಿಸಿ ಬರುವುದಾಗಿ ಹೇಳಿ ವಧುವಿನ ಕೊಠಡಿಗೆ ತೆರಳಿದ್ದ ಸೋನಿಕಾ ಮರಳಿ ಬರಲೇ ಇಲ್ಲ. ಎಲ್ಲಿ ಹೋದಳು ಎಂದು ವಿಚಾರಿಸುತ್ತಲೇ ಇಡೀ ರಾತ್ರಿ ಕಳೆದಿದೆ. ಆದರೆ ಇತ್ತ ಮನೆಯವರು ಹುಡುಕುತ್ತಿದ್ದರೆ ಸೋನಿಕಾ ತನ್ನ ಪ್ರಿಯಕರ ಚರಣ್ ಜೊತೆ ದೇವಸ್ಥಾನದಲ್ಲಿ ಮದುವೆಯಾಗಿದ್ದಾಳೆ.ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ

    ವರನ ಕಡೆಯವರು ಈ ವಿಚಾರವಾಗಿ ಮದನಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮದುವೆಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇವೆ, ಸಬಂಧಿಕರು ಮುಂದೆ ನಮಗೆ ಅವಮಾನವಾಗಿದೆ ಎಂದೂ ದೂರು ನೀಡಿದ್ದಾರೆ. ಸದ್ಯ ಪ್ರಕರಣ ಕುರಿತಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಸೋನಿಕಾ ಎಂಬಿಎ ಓದಿದ್ದು, ಸ್ಥಳೀಯ ಗುರುಕುಲ ಶಾಳೆಯಲ್ಲಿ ಸೂಪರ್‍ವೈಸ್ ಆಗಿ ಕೆಲಸ ಮಾಡುತ್ತಿದ್ದಾಳೆ. ನನ್ನ ಇಚ್ಛೆಗೆ ವಿರುದ್ಧವಾಗಿ ಮದುವೆ ಮಾಡಲು ಮುಂದಾಗಿದ್ದರು. ನನ್ನನ್ನು ಗೃಹಬಂಧನದಲ್ಲಿ ಇರಿಸಿದ್ದರು ಎಂದು ಆಕೆಯೂ ಅವಳ ಕುಟುಂಬಸ್ಥರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದಾಳೆ.

  • ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು

    ಮದುವೆಗೆ ಆಗಮಿಸಿದ ಅತಿಥಿಗಳಿಗೆ ಊಟದ ಬಿಲ್ ಕೇಳಿದ ವಧು

    ದುವೆಯ ಆರತಕ್ಷತೆಯ ವೆಚ್ಚವನ್ನು ಭರಿಸಲು ಆಗದೇ ವಧು ತನ್ನ ಅತಿಥಿಗಳಿಗೆ ಅಂದಾಜು 7,370ರೂ. (ಅಮೇರಿಕನ್ ಡಾಲರ್ 99)ಗಳನ್ನು ಪಾವತಿಸುವಂತೆ ಕೇಳಿದ್ದಾರೆ.

    ಈ ವಿಚಿತ್ರ ಘಟನೆ ಕುರಿತಂತೆ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ವ್ಯಕ್ತಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಾನು ಕೆಲ ದಿನಗಳ ಹಿಂದೆ ಮದುವೆಯೊಂದಕ್ಕೆ ಹೋಗಿದ್ದೆ. ಈ ವೇಳೆ ಆರತಕ್ಷತೆಗೆ ಆಗಮಿಸಿದ ಅತಿಥಿಗಳಿಗೆಲ್ಲಾ ವಧು 7,300 ರೂಪಾಯಿಯನ್ನು ಪಾವತಿಸಿ ಊಟ ಮಾಡುವಂತೆ ಹೇಳಿದಳು. ಕಾರಣ ವಧು ಮತ್ತು ವರ ಮದುವೆಗೆ ಹಣ ಖರ್ಚು ಮಾಡಲು ಶಕ್ತರಾಗಿರಲಿಲ್ಲ.

    ಆಹ್ವಾನ ಪತ್ರಿಕೆಯಲ್ಲಿ ವಧು, ತನಗೆ ಊಟದ ವೆಚ್ಚ ಭರಿಸುವ ಸಾಮರ್ಥ್ಯ ಇಲ್ಲ. ಹಾಗಾಗಿ ಮದುವೆಗೆ ಆಗಮಿಸುವ ಅತಿಥಿಗಳು ತಮ್ಮ ಊಟದ ಬಿಲ್ ಪಾವತಿಸಬೇಕು ಎಂದು ಮನವಿ ಮಾಡಿಕೊಂಡಿದ್ದರು, ಮದುವೆಗೆ ಆಗಮಿಸುವ ಅತಿಥಿಗಳಿಗೆ 7,300 ರೂಪಾಯಿ ಕೇಳಿದ್ದರು. ಇದನ್ನೂ ಓದಿ: ಕೇರಳದಲ್ಲಿ 13 ನೊರೊವೈರಸ್ ಪ್ರಕರಣ ಪತ್ತೆ – ನೀರಿನಿಂದ ಹರಡುವ ಹೊಸ ಕಾಯಿಲೆ

    ಮದುವೆ ಸಮಾರಂಭ ಮನೆಯಿಂದ ದೂರದಲ್ಲಿದ್ದು, 4 ಗಂಟೆಗಳ ಕಾಲ ಪ್ರಯಾಣ ಮಾಡಬೇಕಾಯಿತು. ಹೆಚ್ಚು ಸಮಯದ ಜೊತೆಗೆ ಪೆಟ್ರೋಲ್ ಹಾಗೂ ಹಣ ಕೂಡ ವ್ಯಯ ಮಾಡಲಾಯಿತು. ಅಲ್ಲದೇ ಮದುವೆಯಲ್ಲಿ ಊಟ ಮಾಡಲು ನಮ್ಮ ಹಣವನ್ನೇ ಪಾವತಿಸಬೇಕಾಯಿತು. ಮದುವೆ ದಿನ ವೇದಿಕೆ ಮುಂಭಾಗ ಬಾಕ್ಸ್ ಇಟ್ಟು ಡಬ್ಬದ ಮೇಲೆ ಅತಿಥಿಗಳಿಗೆ ಹಣ ಹಾಕುವಂತೆ ಮನವಿ ಮಾಡಲಾಗಿತ್ತು. ಜೋಡಿಯ ಹನಿಮೂನ್ ಮತ್ತು ಒಳ್ಳೆಯ ಭವಿಷ್ಯ ಹಾಗೂ ಹೊಸ ಮನೆಗಾಗಿ ಹಣ ನೀಡಬೇಕೆಂದು ಡಬ್ಬದ ಮೇಲೆ ಬರೆಯಲಾಗಿತ್ತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್‍ಗೆ ಹೊಸ ಟ್ವಿಸ್ಟ್ – ಸೀಜೇ ಮಾಡಿಲ್ಲವೆಂದು ಕೋರ್ಟಿಗೆ ಸಿಸಿಬಿ ರಿಪೋರ್ಟ್

    ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದ್ದು, ಹಲವಾರು ಮಂದಿ ಕಾಮೆಂಟ್ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ತಾವು ಅಂತಹ ಮದುವೆಗೆ ಹೋಗುವುದಿಲ್ಲ ಎಂದರೆ ಮತ್ತೆ ಕೆಲವರು ಅದ್ದೂರಿಯಾಗಿ ಮದುವೆಯಾಗಲು ಸಾಧ್ಯವಾಗದಿದ್ದರೆ ಸರಳವಾಗಿ ವಿವಾಹವಾಗಬಹುದಾಗಿತ್ತು ಎಂದು ಕಾಮೆಂಟ್ ಮಾಡುತ್ತಿದ್ದಾರೆ.

  • ಮಗನ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆತ್ತವರು

    ಮಗನ ಮುಂದೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹೆತ್ತವರು

    ಹೈದರಾಬಾದ್: ತಂದೆ ತಾಯಿ ಇಬ್ಬರೂ ಮಗು ಹುಟ್ಟಿದ ಮೇಲೆ ಮದುವೆಯಾಗಿರುವ ಘಟನೆ ತಮಿಳುನಾಡಿನ ಕುಡಲ್ಲೋರು ಊರಿನಲ್ಲಿ ನಡೆದಿದೆ.

    ವೆಲ್ಮುರುಗನ್ ಯುವತಿಯನ್ನು ಪ್ರೀತಿಸಿ ಗರ್ಭವತಿಯನ್ನಾಗಿ ಮಾಡಿದ್ದ. ಆದರೆ ಅದಾದ ನಂತರ ಮೋಸ ಮಾಡಿದ್ದ. ಆದರೆ ಮಗು ಜನಿಸಿದ ನಂತರ ಪೊಲೀಸರ ಭಯಕ್ಕೆ ಯುವತಿಯನ್ನು ಮದುವೆಯಾಗಿದ್ದಾನೆ.

    ಈ ಜೋಡಿ ಪ್ರಿತಿಸುತ್ತಿದ್ದರು. ಮದುವೆಯಾಗುತ್ತೇನೆ ಎಂದು ಹೇಳಿ ವೆಲ್ಮುರುಗನ್ ಲೈಂಗಿಕ ಸಂಪರ್ಕ ನಡೆಸಿದ್ದನು. ಯುವತಿ ಗರ್ಭವತಿಯಾಗಿದ್ದಾಳೆ, ಅದಾದ ನಂತರ ವೆಲ್ಮುರುಗನ್ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ಯುವತಿ ಆತನ ಮನೆಗೆ ಹೋಗಿ ಗಲಾಟೆ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಆಕೆ ಅನಿವಾರ್ಯವಾಗಿ ಪೊಲೀಸರ ಮೊರೆ ಹೋಗಬೇಕಾಯಿತು. ಇದನ್ನೂ ಓದಿ:  ಪುನೀತ್ ರಾಜ್‌ಕುಮಾರ್‌ಗೆ ಲಘು ಹೃದಯಾಘಾತ

    ನಂತರ ಯುವತಿ ಒಂಭತ್ತು ತಿಂಗಳು ನೋವಿನಲ್ಲೇ ಕಳೆದು ಗಂಡು ಮಗುವನ್ನು ಹೆತ್ತಳು ಆಸ್ಪತ್ರೆಯಲ್ಲಿ ಮಗುವಿನ ತಂದೆಯ ಹೆಸರು ಕೇಳಿದಾಗ, ಅವಳು ಅನಿವಾರ್ಯವಾಗಿ ವೆಲ್ಮುರುಗನ್ ಹೆಸರು ಹೇಳಬೇಕಾಯ್ತು. ಜೊತೆಗೆ ತಾನು ಅನುಭವಿಸಿದ ನೋವನ್ನು ಕೂಡ ನರ್ಸ್‍ಗೆ ಯುವತಿ ಹೇಳಿದ್ದಳು. ಆಗ ಈ ವಿಚಾರವಾಗಿ ಅದಾದ ನಂತರ ನರ್ಸ್ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವೆಲ್ಮುರುಗನ್‍ಗೆ ಕಿವಿ ಮಾತು ಹೇಳಿದ್ದಾರೆ. ಆಗ ಜೈಲಿಗೆ ಹೋಗುವ ಭಯಕ್ಕೋ, ತಪ್ಪಿನ ಅರಿವಾಗಿಯೋ ವೆಲ್ಮುರುಗನ್ ಮದುವೆಯಾಗಲು ಒಪ್ಪಿಕೊಂಡಿದ್ದಾನೆ. ಹಸುಗೂಸಿನ ಮುಂದೆಯೇ ಇಬ್ಬರೂ ಮದುವೆಯಾಗಿದ್ದಾರೆ.ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ಬಿರುಗಾಳಿ – 10 ಸಾವಿರ ಕೋಟಿ ರೂ. ಹಗರಣ!

  • ಮರದ ಜೊತೆ ನಟಿ ನಯನತಾರಾ ಮದುವೆ

    ಮರದ ಜೊತೆ ನಟಿ ನಯನತಾರಾ ಮದುವೆ

    ಹೈದರಾಬಾದ್: ಸಿನಿಮಾ ಮತ್ತು ಬಾಯ್‍ಫ್ರೆಂಡ್ ವಿಘ್ನೇಶ್ ಶಿವನ್ ಜೊತೆಗೆ ಕಾಣಿಸಿಕೊಳ್ಳುವ ಮೂಲಕವಾಗಿ ನಟಿ ನಯನತಾರಾ ಸುದ್ದಿಯಲ್ಲಿರುತ್ತಿದ್ದರು. ಆದರೆ ಇದೀಗ ಇವರು ಮದುವೇಯ ವಿಚಾರವಾಗಿ ಸಖತ್ ಸುದ್ದಿಯಲ್ಲಿದ್ದಾರೆ.

    ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಅವರು ಬಹುಕಾಲದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಶೀಘ್ರವೇ ಇವರ ಮದುವೆ ನಡೆಯಲಿದೆ. ಅಚ್ಚರಿ ಎಂದರೆ, ವಿಘ್ನೇಶ್ ಜತೆ ಮದುವೆ ಆಗುವುದಕ್ಕೂ ಮೊದಲು ಅವರು ಮರವನ್ನು ಮದುವೆ ಆಗಲಿದ್ದಾರಂತೆ.

    ವಿಘ್ನೇಶ್ ಶಿವನ್ ಮತ್ತು ನಯನತಾರಾ ನಡುವಿನ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ. ಪರಸ್ಪರ ಜೊತೆಯಾಗಿ ಕಾಲ ಕಳೆಯುತ್ತಿರುವ ಅವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಬಹಿರಂಗ ಪಡಿಸಿದ್ದಾರೆ. ಅವರಿಬ್ಬರ ಮದುವೆ ಪ್ಲ್ಯಾನ್ ಬಗ್ಗೆ ಪದೇಪದೇ ಸುದ್ದಿ ಕೇಳಿಬರುತ್ತಲೇ ಇರುತ್ತದೆ. ಈಗ ಮದುವೆ ಬಗ್ಗೆ ಅಚ್ಚರಿಯ ಸುದ್ದಿ ಕೇಳಿ ಬಂದಿದೆ. ಇದನ್ನೂ ಓದಿ: ಬಿಜೆಪಿ ಸಾಧನೆ ಶೂನ್ಯ, ಅವಹೇಳನಕಾರಿ ಮಾತಾಡ್ತಿದ್ದಾರೆ: ಡಿಕೆಶಿ ಕಿಡಿ

    ನಯನತಾರಾ ಹಾಗೂ ವಿಘ್ನೇಶ್ ಜ್ಯೋತಿಷ್ಯವನ್ನು ಹೆಚ್ಚು ನಂಬುತ್ತಾರೆ. ಈ ಕಾರಣಕ್ಕೆ ಮದುವೆಗೂ ಮೊದಲು ತಮ್ಮ ಜಾತಕವನ್ನು ಅವರು ತೋರಿಸಿದ್ದಾರೆ. ಇದರಲ್ಲಿ ಕೆಲ ದೋಷಗಳು ಕಂಡಿವೆ. ಈ ಕಾರಣಕ್ಕೆ, ಮೊದಲು ಮರವನ್ನು ಮದುವೆ ಆಗಿ ನಂತರ ವಿಘ್ನೇಶ್ ಅವರನ್ನು ಮದುವೆ ಆಗುವಂತೆ ಜ್ಯೋತಿಷಿಗಳು ಸೂಚಿಸಿದ್ದಾರೆ. ಹಿಂದೂ ಧರ್ಮದ ಪ್ರಕಾರ ಮರ ಅಥವಾ ಪ್ರಾಣಿಯನ್ನು ಮದುವೆ ಆದರೆ ದೋಷ ನಿವಾರಣೆ ಆಗುತ್ತದೆ. ಈ ಕೆಲವರು ಇದನ್ನು ನಂಬುತ್ತಾರೆ. ಅದೇ ರೀತಿ ನಯತಾರಾ ಮತ್ತು ಅವರ ಭಾವಿ ಪತಿ ಕೂಡ ಈ ಶಾಸ್ತ್ರದ ಮೇಲೆ ನಂಬಿಕೆ ಇಟ್ಟಿದ್ದಾರೆ. ಹೀಗಾಗಿ ಅದನ್ನು ಆಚರಿಸೋಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರ ಓಲೈಕೆಗಾಗಿ RSS ವಿರುದ್ಧ ಕಾಂಗ್ರೆಸ್ ಹೇಳಿಕೆ ನೀಡುತ್ತಿದೆ: ಬೊಮ್ಮಾಯಿ

  • ಕಿಚ್ಚನ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ಕವನ

    ಕಿಚ್ಚನ ವಿವಾಹ ವಾರ್ಷಿಕೋತ್ಸವಕ್ಕೆ ವಿಶೇಷ ಕವನ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಸುದೀಪ್ ಮತ್ತು ಪ್ರಿಯಾ ದಾಂಪತ್ಯಕ್ಕೆ 20 ವರ್ಷ ತುಂಬಿದೆ. ಈ ಸಂಭ್ರಮವನ್ನು ಅವರು ಒಟ್ಟಾಗಿ ಆಚರಿಸಿದ್ದಾರೆ. ಆತ್ಮೀಯರು ಬರೆದ ಕವನವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ಸುದೀಪ್ ಈ ಕವನಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

    ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವಕ್ಕೆ ಆತ್ಮೀಯರು ಬರೆದ ಕವನವನ್ನು ಪ್ರಿಯಾ ಶೇರ್ ಮಾಡಿಕೊಂಡಿದ್ದಾರೆ. ಇಂಗ್ಲಿಷ್‍ನಲ್ಲಿರುವ ಈ ಕವನವನ್ನು ಅವರು ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಕಿಚ್ಚ ಸುದೀಪ್ ಮೆಚ್ಚುಗೆ ಸೂಚಿಸಿದ್ದಾರೆ. ಅಭಿಮಾನಿಗಳು, ಸ್ನೇಹಿತರು ಮತ್ತು ಸೆಲೆಬ್ರಿಟಿಗಳು ಈ ಜೋಡಿಗೆ ವೆಡ್ಡಿಂಗ್ ಆ್ಯನಿವರ್ಸರಿಯ ಶುಭಾಶಯ ಕೋರುತ್ತಿದ್ದಾರೆ. ಇದನ್ನೂ ಓದಿ: ಸುದೀಪ್ ದಂಪತಿಗೆ 20ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ – ಅಪ್ಪ, ಅಮ್ಮನಿಗೆ ಸಾನ್ವಿ ಹೇಳಿದ್ದೇನು?

    ಈಗಾಗಲೇ 20 ವರ್ಷ ಆಯ್ತು. ಸಮಯ ತುಂಬ ಬೇಗ ಸಾಗುತ್ತಿದೆ. ಖುಷಿಯ 20 ವರ್ಷಗಳು. ಧನ್ಯವಾದಗಳು ಪ್ರಿಯಾ. ಈ ಪ್ರೀತಿಯ ಕವನಕ್ಕೂ ಧನ್ಯವಾದ ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ. ಪತ್ನಿಯ ಜೊತೆಗಿರುವ ಫೋಟೋವನ್ನು ಅವರು ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

    2001ರ ಅಕ್ಟೋಬರ್‌ನಲ್ಲಿ ಸುದೀಪ್ ಮತ್ತು ಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅವರಿಗೆ 2004ರಲ್ಲಿ ಸಾನ್ವಿ ಜನಿಸಿದರು. ಅಪ್ಪ-ಅಮ್ಮನ ವಿವಾಹ ವಾರ್ಷಿಕೋತ್ಸವಕ್ಕೆ ಮಗಳು ಸಾನ್ವಿ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಳ್ಳುವ ಮೂಲಕ ವಿಶ್ ಮಾಡಿದ್ದಾರೆ. ವೆಡ್ಡಿಂಗ್ ಆ್ಯನಿವರ್ಸರಿ ಸಂಭ್ರಮಕ್ಕೆ ಕೇಕ್ ಕತ್ತರಿಸಲಾಗಿದೆ. ಆಪ್ತರ ಜೊತೆ ಸೇರಿ ಸಂಭ್ರಮಿಸಲಾಗಿದೆ.

  • ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೇಕ್ ಮೇಲೆ ಗಂಡ ಎಂದು ಬರೆಸಿದ ನುಸ್ರತ್ – ಯಶ್ ಜೊತೆಗಿನ ವಿವಾಹದ ಬಗ್ಗೆ ಸುಳಿವು ಕೊಟ್ರಾ?

    ಕೋಲ್ಕತ್ತಾ: ಬೆಂಗಾಲಿ ನಟಿ ಹಾಗೂ ಟಿಎಂಸಿ ಸಂಸದೆ ನುಸ್ರತ್ ಜಹಾನ್, 36ನೇ ವಸಂತಕ್ಕೆ ಕಾಲಿಟ್ಟ ಯಶ್‍ದಾಸ್‍ಗುಪ್ತಾ ಅವರ ಹುಟ್ಟುಹಬ್ಬವನ್ನು ವಿಶೇಷವಾದ ಕೇಕ್ ಕತ್ತರಿಸುವ ಮೂಲಕ ಸೆಲಬ್ರೆಟ್ ಮಾಡಿದ್ದಾರೆ. ಬರ್ತ್‍ಡೇ ಸೆಲಬ್ರೆಟ್ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ಕೇಕ್ ಮೇಲೆ ನುಸ್ರತ್ ಜಹಾನ್ ಗಂಡ ಎಂದು ಬರೆಸಿರುವ ಮೂಲಕ ನುಸ್ರತ್ ಹಾಗೂ ಯಶ್ ಮದುವೆಯಾಗಿರುವ ಬಗ್ಗೆ ಸುಳಿವು ನೀಡಿದ್ರಾ ಎಂಬ ಪ್ರಶ್ನೆ ಎದ್ದಿದೆ.

    nusrath jahan

    ಆಗಸ್ಟ್ 26ರಂದು ನುಸ್ರತ್ ಜಹಾನ್ ಗಂಡು ಮಗುವಿಗೆ ಜನ್ಮ ನೀಡಿದರು. ಅಲ್ಲದೇ ಮಗುವಿನ ಬರ್ತ್ ಸರ್ಟಿಫಿಕೇಟ್‍ನಲ್ಲಿ ಯಶ್ ದಾಸ್ ಗುಪ್ತಾ ಎಂದು ಉಲ್ಲೇಖಿಸಲಾಗಿತ್ತು. ಇದೀಗ ಯಶ್ ಬರ್ತ್‍ಡೇ ದಿನದಂದು ಇಬ್ಬರು ಒಟ್ಟಿಗೆ ಡಿನ್ನರ್ ಮಾಡುವುದರ ಮೂಲಕ ಸಖತ್ ಎಂಜಾಯ್ ಮಾಡಿದ್ದಾರೆ. ಬರ್ತ್‍ಡೇ ಕೇಕ್‍ನ ಒಂದು ಭಾಗದಲ್ಲಿ ಗಂಡ ಎಂದು ಬರೆಸಲಾಗಿದ್ದು, ಮತ್ತೊಂದು ಕಡೆ ಅಪ್ಪ ಎಂದು ಬರೆಸಲಾಗಿದೆ. ಜೊತೆಗೆ ಇಬ್ಬರು ಒಟ್ಟಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋಗಳನ್ನು ನುಸ್ರತ್ ತಮ್ಮ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಹೆರಿಗೆ ಬಳಿಕ ಕ್ಯಾಮೆರಾ ಮುಂದೆ ನುಸ್ರತ್ ಜಹಾನ್ – ಮಗುವಿನ ತಂದೆ ಬಗ್ಗೆ ಹೇಳಿದ್ದೇನು?

    nusrath jahan

    ಈ ಮುನ್ನ 2019ರ ಜೂನ್ 19ರಂದು ನುಸ್ರತ್ ಜಹಾನ್ ಮತ್ತು ನಿಖಿಲ್ ಜೈನ್ ಟರ್ಕಿಯಲ್ಲಿ ವಿವಾಹವಾಗಿದ್ದರು. ಟರ್ಕಿ ಕಾನೂನಿನ ಪ್ರಕಾರ ಇದಕ್ಕೆ ಮಾನ್ಯತೆ ಇಲ್ಲ. ಭಾರತದಲ್ಲೂ ಅಧಿಕೃತವಾಗಿ ಯಾವುದೇ ಕಾನೂನಿನ ಪ್ರಕಾರ ನಾವು ಮದುವೆ ಆಗಿಲ್ಲ ನಮ್ಮದು ಲಿವ್ ಇನ್ ರಿಲೇಷನ್ ಶಿಪ್ ಅಷ್ಟೇ ಎಂದಿದ್ದರು. ಇದನ್ನೂ ಓದಿ:  ಗಂಡು ಮಗುವಿಗೆ ಜನ್ಮ ನೀಡಿದ ಸಂಸದೆ ನುಸ್ರತ್ ಜಹಾನ್

    nusrath jahan

    ನಂತರ ನುಸ್ರತ್ ಹಾಗೂ ಯಶ್ ದಾಸ್‍ಗುಪ್ತಾ ರಿಲೇಶನ್ ಶಿಪ್‍ನಲ್ಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಮಗುವಿನ ತಂದೆ ಹೆಸರನ್ನು ನುಸ್ರತ್ ಇಲ್ಲಿಯವರೆಗೂ ಬಹಿರಂಗ ಪಡಿಸಿಲ್ಲ. ಆದರೆ ಮಗುವಿನ ಜನನದ ಪ್ರಮಾಣ ಪತ್ರದಲ್ಲಿ ಮಗುವಿನ ಯಶ್ ದಾಸ್‍ಗುಪ್ತಾ ಎಂದು ಹೆಸರಿಸಲಾಗಿದೆ.

  • ಮದುವೆಯಾಗಬೇಕೆಂದು ಹಠಕ್ಕೆ ಬಿದ್ದು ಪ್ರಾಣ ಬಿಟ್ಟ ಯುವಕ

    ಮದುವೆಯಾಗಬೇಕೆಂದು ಹಠಕ್ಕೆ ಬಿದ್ದು ಪ್ರಾಣ ಬಿಟ್ಟ ಯುವಕ

    – ಹೆಣ್ಣು ಸಿಗುತ್ತಿಲ್ಲ ಎಂದು ಖಿನ್ನತೆಗೆ ಒಳಗಾಗಿದ್ದ

    ಹೈದರಾಬಾದ್: ತನ್ನ ಸ್ನೇಹಿತರು ಹಾಗೂ ಜೊತೆಗೆ ಇದ್ದವರಿಗೆಲ್ಲ ಮದುವೆಯಾಗಿ ಮಕ್ಕಳಾಗಿದೆ. ನನಗೆ ಯಾಕೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂದು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

    ಸೈಯದ್ ಅಮ್ಜದ್( 30) ಮೃತ ಯುವಕ. ಈತ ಹೈದರಾಬಾದ್ ಫಲಕ್ನುಮಾದ ಸಂಜಯ್ ಗಾಂಧಿ ನಗರದ ನಿವಾಸಿಯಾಗಿದ್ದಾನೆ. ಸ್ನೇಹಿತರಿಗೆಲ್ಲ ಮದುವೆಯಾಗಿದೆ, ಆದರೆ ನನಗೆ ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ:   ಚಲಿಸುವ ರೈಲಿನಲ್ಲಿ ಸಾಮೂಹಿಕ ಅತ್ಯಾಚಾರ- ನಾಲ್ವರ ಬಂಧನ

    ಸೈಯದ್ ಅಮ್ಜದ್ ಸ್ವಂತ ಟೈಲರ್ ಶಾಪ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದ. ಕಳೆದ ಕೆಲವರ್ಷಗಳಿಂದ ಈತನಿಗೆ ಮದುವೆ ಮಾಡಲು ಕುಟುಂಬಸ್ಥರು ಹುಡುಗಿಯನ್ನು ಹುಡುಕುತ್ತಿದ್ದರು. ಆದರೆ ಯಾವುದೇ ಹುಡುಗಿ ಈತನಿಗೆ ಇಷ್ಟವಾಗುತ್ತಿರಲಿಲ್ಲವಂತೆ. ಕೆಲವರು ಇವನನ್ನು ಇಷ್ಟಪಟ್ಟರೆ ಇವನು ಬೇಡವೆಂದು ಹೇಳುತ್ತಿದ್ದನಂತೆ. ಮತ್ತೆ ಕೆಲವರು ಈತನಿಗೆ ಇಷ್ಟವಾದರೆ ಅವರು ಬೇಡ  ಎನ್ನುತ್ತಿದ್ದರಂತೆ. ಹೀಗಾಗಿ ಮದುವೆ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದ ಸೈಯದ್ ಅಮ್ಜದ್, ಹೇಗಾದರೂ ಮಾಡಿ ಈ ವರ್ಷ ಮದುವೆಯಾಗಬೇಕೆಂದು ಹಠಕ್ಕೆ ಬಿದ್ದಿದ್ದ. ಇದನ್ನೂ ಓದಿ:  ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ

    ಸ್ನೇಹಿತರು ಹಾಗೂ ಜೊತೆಗೆ ಇದ್ದವರಿಗೆಲ್ಲ ಮದುವೆಯಾಗಿ ಮಕ್ಕಳಾಗಿದೆ. ನನಗೆ ಯಾಕೆ ಇನ್ನೂ ಹೆಣ್ಣು ಸಿಗುತ್ತಿಲ್ಲ ಎಂಬ ಕೊರಗು ಸೈಯದ್ ಅಮ್ಜದ್ ತುಂಬಾ ಕಾಡುತ್ತಿತ್ತಂತೆ. ತನಗೆ ಪರಿಚಯ ಇರುವವರ ಬಳಿಯೆಲ್ಲಾ ಒಂದು ಹುಡುಗಿ ನೋಡಿ ಕೊಡುವಂತೆ ಮನವಿ ಮಾಡಿಕೊಂಡಿದ್ದ. ಮದುವೆ ವಿಚಾರದಲ್ಲಿ ತಲೆಕೆಡಿಸಿಕೊಂಡಿದ್ದ ಸೈಯದ್ ಅಮ್ಜದ್‌ಗೆ ತನ್ನ ಕೆಲಸದ ಕಡೆ ಗಮನ ಕೊಡಲು ಆಗುತ್ತಿರಲಿಲ್ಲ. ಮದುವೆ ವಿಚಾರದಿಂದಾಗಿ ಸೈಯದ್ ಖಿನ್ನತೆಗೆ ಒಳಗಾಗಿದ್ದ. ಸದಾ ಒಬ್ಬಂಟಿಯಾಗಿಯೇ ಇರುತ್ತಿದ್ದ ಈತನ ನಡವಳಿಕೆಯಿಂದ ಮನೆಯವರು ಬೇಸತ್ತು ಹೋಗಿದ್ದರು. ಗುರುವಾರ ರಾತ್ರಿ ಸೈಯದ್ ತನ್ನ ಅಂಗಡಿಯಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: ಏರ್ ಇಂಡಿಯಾ ನೌಕರರನ್ನು ಕನಿಷ್ಠ ಒಂದು ವರ್ಷ ಟಾಟಾ ಕಂಪನಿ ಮುಂದುವರಿಸಬೇಕು: ಕೇಂದ್ರ ಸರ್ಕಾರ

    ಬೆಳಗ್ಗೆ ಅಂಗಡಿಗೆ ಬಂದ ಅಕ್ಕಪಕ್ಕದ ಅಂಗಡಿಯವರು ಕಿಟಕಿಯಲ್ಲಿ ಇಣುಕಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರ ಬಳಿ ಆತನ ಮನೆಯವರೇ, ಮದುವೆಯಾಗಿಲ್ಲ ಎಂಬ ಕಾರಣಕ್ಕೆ ಸೈಯದ್ ಅಮ್ಜದ್‌ ಕೆಲದಿನಗಳಿಂದ ಖಿನ್ನತೆಗೆ ಒಳಗಾಗಿದ್ದ. ಇದಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಹೇಳಿದ್ದಾರೆ. ಫಲಕ್ನುಮಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಕಾರು ಬಿಟ್ಟು ಜೆಸಿಬಿಯಲ್ಲಿ ನವ ವಿವಾಹಿತ ದಂಪತಿ ಸವಾರಿ- ವೀಡಿಯೋ ವೈರಲ್

    ಕಾರು ಬಿಟ್ಟು ಜೆಸಿಬಿಯಲ್ಲಿ ನವ ವಿವಾಹಿತ ದಂಪತಿ ಸವಾರಿ- ವೀಡಿಯೋ ವೈರಲ್

    ಇಸ್ಲಾಮಾಬಾದ್: ಮದುವೆ ಕಾರನ್ನು ಬಿಟ್ಟು ಜೆಸಿಬಿಯಲ್ಲಿ ಸವಾರಿ ಮಾಡಿದ ನವ ವಿವಾಹಿತ ದಂಪತಿ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಸಾಮಾನ್ಯವಾಗಿ ಮದುವೆಯ ದಿನ ವಧು ಹಾಗೂ ವರ ಕಲ್ಯಾಣ ಮಂಟಪಕ್ಕೆ ಹೋಗಲು ಹಾಗೂ ಮನೆಗೆ ಹಿಂದಿರುಗಲು ಇಬ್ಬರೂ ಹೂವಿನಿಂದ ಅಲಂಕರಿಸಿದ ಐಷಾರಾಮಿ ಕಾರಿನಲ್ಲಿ ಹೋಗಿರುವುದನ್ನು ನೋಡಿರುತ್ತೇವೆ. ಆದರೆ ಪಾಕಿಸ್ತಾನದ ವಧು-ವರ ಆಯ್ಕೆ ಮಾಡಿಕೊಂಡ ವಾಹನವೇ ಬೇರೆಯಾಗಿದೆ.  ಇದನ್ನೂ ಓದಿ: ಮೂವರು ಪ್ರಭಾವಿಗಳು ಸೇರಿ 40 ಬಿಜೆಪಿ ಶಾಸಕರು ಶೀಘ್ರವೇ ಕಾಂಗ್ರೆಸ್‍ಗೆ ಬರುತ್ತಾರೆ: ರಾಜು ಕಾಗೆ

     Bride-Groom

    ಹೌದು, 40 ಸೆಕೆಂಡ್ ಇರುವ ಈ ವೀಡಿಯೋವನ್ನು ಗುಲಾಂ ಅಬ್ಬಾಸ್ ಶಾ ಎಂಬವರು ಟ್ವೀಟ​ರ್‌​ನಲ್ಲಿ ಶೇರ್ ಮಾಡಿಕೊಂಡಿದ್ದು, ನವ ವಿವಾಹಿತ ದಂಪತಿ ಹೂವಿನಿಂದ ಅಲಂಕರಿಸಿದ ಜೆಸಿಬಿಯಲ್ಲಿ ಸವಾರಿ ಮಾಡಿದ್ದಾರೆ. ಈ ವೇಳೆ ನವದಂಪತಿಯ ಮುಖದಲ್ಲಿ ಸಂತಸ ಎದ್ದು ಕಾಣುತ್ತಿರುವುದನ್ನು ನೋಡಬಹುದಾಗಿದೆ. ನಂತರ ಜೆಸಿಬಿಯಿಂದ ಇಬ್ಬರು ಕೆಳಗಿಳಿದು ಮುಂದೆ ಸಾಗುತ್ತಾರೆ. ಇದನ್ನೂ ಓದಿ:  ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈವರೆಗೂ 1.8 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದನ್ನೂ ಓದಿ: ಸಿಂದಗಿ, ಹಾನಗಲ್ ಉಪ ಚುಣಾವಣೆ- ಇಂದು ಹೈಕಮಾಂಡ್ ಕೈ ಸೇರಲಿದೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

  • ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಲಂಡನ್: ಮದುವೆ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ಕೇವಲ ಒಂದು ಪೀಸ್ ಕೇಕ್ ತಿಂದಿದ್ದಕ್ಕೆ ನವದಂಪತಿ ಹಣ ಪಾವತಿಸುವಂತೆ ಕೇಳಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದ ಮೇಲೆ ಬದುಕಿ ಪ್ರಯೋಜನವಿಲ್ಲ – ಡೆತ್‍ನೋಟ್ ಬರೆದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ನವದಂಪತಿಗಳು ತಮ್ಮ ಮದುವೆಯ ಸಿಸಿಟಿವಿ ದೃಶ್ಯವನ್ನು ವೀಕ್ಷಿಸಿದ್ದು, ಈ ವೇಳೆ ಅತಿಥಿಯೊಬ್ಬರು ಮದುವೆಯಲ್ಲಿ ಎರಡು ಕೇಕ್ ಪೀಸ್ ತಿಂದಿರುವುದನ್ನು ನೋಡಿದ್ದಾರೆ. ನಂತರ ಈ ವೀಡಿಯೋವನ್ನು ಅತಿಥಿಯ ವಾಟ್ಸಾಪ್‍ಗೆ ಕಳುಹಿಸಿದ್ದಾರೆ. ವೀಡಿಯೋದಲ್ಲಿ ಅತಿಥಿ ಎರಡನೇ ಬಾರಿ ಕೇಕ್ ಕತ್ತರಿಸಿ ತಿನ್ನುತ್ತಿರುವುದನ್ನು ನೋಡಿ. ಈ ವೀಡಿಯೋ ಕಳುಹಿಸಿದರ ಅರ್ಥವೇನು ಎಂದು ಕೇಳಿದ್ದಾರೆ.

    wedding

    ಆಗ, ನಾವು ಸಿಸಿಟಿವಿ ದೃಶ್ಯದಲ್ಲಿ ನೀವು ಎರಡು ಬಾರಿ ಕೇಕ್ ಪೀಸ್‍ನ್ನು ತಿನ್ನುತ್ತಿರುವುದನ್ನು ನೋಡಿದ್ದೇವೆ. ಮದುವೆಗೆ ಬಂದ ಪ್ರತಿ ಅತಿಥಿಗಳಿಗೆ ಒಂದು ಪೀಸ್ ಕೇಕ್‍ಗೆ ಹಣ ಪಾವತಿಸುವಂತೆ ಘೋಷಿಸಿದ್ದೇವೆ. ಆದರೆ ನೀವು ಒಂದು ಕೇಕ್ ಪೀಸ್‍ಗೆ ಮಾತ್ರ ಹಣ ಪಾವತಿಸಿದ್ದೀರಾ, ನೀವು ತಿಂದ ಮತ್ತೊಂದಕ್ಕೆ ಹಣ ಪಾವತಿಸಲಿಲ್ಲ. ಹೀಗಾಗಿ ದಯವಿಟ್ಟು 366 ರೂ.ವನ್ನು ಆದಷ್ಟು ಬೇಗ ಕಳುಹಿಸಿಕೊಡುತ್ತೀರಾ? ಎಂದು ಮೇಸೆಜ್ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಸದ್ಯ ಈ ಮೇಸೆಜ್ ನೋಡಿ ಶಾಕ್ ಆಗಿರುವ ನೆಟ್ಟಿಗರು, ನವದಂಪತಿ ಹನಿಮೂನ್‍ಗೆ ಹೋಗುವ ಬದಲು ಸಿಸಿಟಿವಿ ದೃಶ್ಯ ನೋಡಿ ಅತಿಥಿಗಳಿಗೆ ಹಣಪಾವತಿಸುವಂತೆ ಕೇಳುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನೂ ಈ ವಿಚಾರ ಅತಿಥಿಗಳಿಗೆ ಮುಜುಗರವನ್ನುಂಟು ಮಾಡಿದೆ.