Tag: wedding

  • ನವ ಜೋಡಿಗೆ ಮದುವೆ ದಿನ ವೇದಿಕೆ ಮೇಲಿ ಕಾದಿತ್ತು ಬಿಗ್‍ಶಾಕ್- Video Viral

    ನವ ಜೋಡಿಗೆ ಮದುವೆ ದಿನ ವೇದಿಕೆ ಮೇಲಿ ಕಾದಿತ್ತು ಬಿಗ್‍ಶಾಕ್- Video Viral

    ರಾಯ್ಪುರ್: ಮದುವೆ ಕುರಿತಾಗಿ ವಿಭಿನ್ನವಾಗಿ ಕನಸುಕಂಡಿರುವ ಜೋಡಿಯೊಂದು ಮದುವೆ ದಿನವೇ ಅವಾಂತರ ಮಾಡಿಕೊಂಡಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಛತ್ತೀಸ್​ಘಡ್ ಜೋಡಿಯೊಂದು ಮದುವೆಯ ಸಂಭ್ರಮ ನೋಡುಗರಿಗೆ ಮತ್ತು ತಮಗೆ ರೋಮಾನಂಚನಕಾರಿ ಆಗಿರಬೇಕು ಎಂದು ಆಸೆಪಟ್ಟಿದ್ದರು. ಅದ್ದೂರಿಯಾಗಿ ವೇದಿಕೆ ಒಂದನ್ನು ಮಾಡಿದ್ದರು. ಈ ವೇಳೆ ಮದುವೆ ಕಾರ್ಯಕ್ರಮ ವೇದಿಕೆ ಮೇಲೆ ಮದುಮಕ್ಕಳು ಎಂಜಾಯ್ ಮಾಡುವಂತಹ ವ್ಯವಸ್ಥೆ ನಿರ್ಮಾಣ ಮಾಡಲಾಗಿತ್ತು. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ವೃತ್ತಾಕಾರದಲ್ಲಿ ಚಿಕ್ಕದಾದ ಮಂಟಪ ತಯಾರು ಮಾಡಿ, ಅವುಗಳಿಗೆ ದಾರ ಹಾಗೂ ವೈರ್‍ಗಳನ್ನು ಪೋಣಿಸಿ ಝಗಮಗಿಸುವ ತೂಗು ಮಂಟಪ ನಿರ್ಮಾಣಗೊಂಡಿತ್ತು. ಅಂತೆಯೇ ಪಟಾಕಿ ಸಿಡಿಯುತ್ತಿರುವ ಈ ಮಂಟಪದಿಂದ ನವವಧು,ವರರರು ಜೋಡಿ ಹಕ್ಕಿಗಳಂತೆ ದಾರದ ಸಹಾಯದಿಂದ ಮೇಲೆ ಹೋಗುತ್ತಾರೆ . ಈ ವೇಳೆ ಆಕ್ಸ್ಮಿಕವಾಗಿ ಅದು ತುಂಡಾಗಿದೆ. ಈ ಪರಿಣಾಮ ಇಬ್ಬರು ನೆಲಕ್ಕೆ ಬೀಳುತ್ತಾರೆ. ವಧು, ವರರಿಗೆ ಸಣ್ಣ ಪುಣ್ಣ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

  • ಪತಿ ಮೇಲೆ ಡೌಟ್‌ ಬಂದು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!

    ಪತಿ ಮೇಲೆ ಡೌಟ್‌ ಬಂದು ಹಿಂಬಾಲಿಸಿದ ಪತ್ನಿಗೆ ಕಾದಿತ್ತು ಶಾಕ್!

    ಹೈದರಾಬಾದ್: ಬೇರೆ ಹೆಂಗಸಿನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಪತಿ ರೆಡ್‍ಹ್ಯಾಂಡ್ ಆಗಿ ಪತ್ನಿಯ ಕೈಗೆ ಸಿಕ್ಕಿ ಬಿದ್ದಿರುವ ಘಟನೆ ಹೈದರಾಬಾದ್‍ನ ಜಗದ್ದಿರಿಗುಟ್ಟದಲ್ಲಿ ನಡೆದಿದೆ.

    ಅನಿಲ್ ಜಗದ್ದಿರಿಗುಟ್ಟದ ನಿವಾಸಿಯಾಗಿದ್ದಾನೆ. ಈತ ರಾಮೇಶ್ವರಿಯನ್ನು ಮದುವೆಯಾಗಿದ್ದನು. ಆದರೆ ಈತನ ನಡುವಳಿಕೆಯಲ್ಲಿ ಬದಲಾವಣೆ ಕಂಡಿರುವ ಪತ್ನಿ, ಆತನನ್ನು ಹಿಂಬಾಲಿಸಿದಾಗ ಆತನ ಅನೈತಿಕ ಸಂಬಂಧದ ಕುರಿತಾಗಿ ತಿಳಿದುಬಂದಿದೆ.  ಇದನ್ನೂ ಓದಿ: ಲವ್ ಇದ್ಮೇಲೆ ಜಿಹಾದ್ ಯಾಕೆ ಬರುತ್ತೆ – ಇಬ್ರಾಹಿಂ ತಿರುಗೇಟು

    ಅನಿಲ್ ಕುಟ್ಟಬಲ್‌ಪುರ್‌ ಬ್ಯಾಂಕ್ ಕಾಲನಿಯಲ್ಲಿರುವ ಮತ್ತೊಂದು ಮಹಿಳೆ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದನು. ಕಳೆದ ಕೆಲವು ದಿನಗಳಿಂದ ಗಂಡನ ನಡುವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಯನ್ನು ರಾಮೇಶ್ವರಿ ಗಮನಿಸಿದ್ದಾಳೆ. ಇದನ್ನೂ ಓದಿ: ಯೋಗಿ ಸರ್ಕಾರದಿಂದ ಇಲ್ಲಿಯವರೆಗೆ 15246 ಕಿ.ಮೀ.ಗೂ ಹೆಚ್ಚು ಗ್ರಾಮೀಣ ರಸ್ತೆಗಳನ್ನು ನಿರ್ಮಾಣ

    ಒಂದು ದಿನ ಪತಿಯನ್ನು ಹಿಂಬಾಲಿಸಿದ್ದಾಳೆ. ಆಗ ಅನಿಲ್ ಬೇರೆ ಯುವತಿಯ ಜೊತೆಗೆ ಇರುವುದನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರ ವಶಕ್ಕೆ ನೀಡಿದ್ದಾಳೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

  • ಮದುವೆಯಾದ 6 ತಿಂಗಳಿನಲ್ಲೇ ಪತ್ನಿಯ ಕತ್ತು ಹಿಸುಕಿ ಕೊಲೆ

    ಮದುವೆಯಾದ 6 ತಿಂಗಳಿನಲ್ಲೇ ಪತ್ನಿಯ ಕತ್ತು ಹಿಸುಕಿ ಕೊಲೆ

    ಹೈದರಾಬಾದ್: ಮದುವೆಯಾದ ಆರು ತಿಂಗಳಲ್ಲೇ ಹೆಂಡತಿ ಮೇಲೆ ಅನುಮಾನಪಟ್ಟು, ಅವಳನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದ್‍ನ ಮೂಸಾಪೇಟೆಯಲ್ಲಿ ನಡೆದಿದೆ.

    ಪುಣ್ಯವತಿ(20) ಮೃತಳು, ಸಂತೋಷ್ ಕೊಲೆ ಮಾಡಿದ ಪತಿಯಾಗಿದ್ದಾನೆ. ಮದುವೆಯಾಗಿ ಆರು ತಿಂಗಳಲ್ಲೇ ಕಟ್ಟಿಕೊಂಡ ಹೆಂಡತಿ ಮೇಲೆ ಅನುಮಾನಪಟ್ಟು, ಅವಳನ್ನು ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಪತ್ನಿಯ ಶಿರಚ್ಛೇದ ಮಾಡಿ ಪೊಲೀಸ್ ಠಾಣೆಗೆ ಹೊತ್ತೊಯ್ದ

    ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯವನಾದ ಸಂತೋಷ್, ಬಾಲ್ಯದಿಂದಲೂ ಪೋಷಕರೊಂದಿಗೆ ಹೈದರಾಬಾದ್‍ನ ಮುಸಾಪೇಟೆಯಲ್ಲಿ ವಾಸವಾಗಿದ್ದನು. ವೆಲ್ಡಿಂಗ್‍ಶಾಪ್‍ನಲ್ಲಿ ಕೆಲಸ ಮಾಡುತ್ತಿದ್ದನು. ಕಳೆದ ಮೇ ತಿಂಗಳಲ್ಲಿ ಸ್ಥಳೀಯ ನಿವಾಸಿ ಪುಣ್ಯವತಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ. ಇದರ ಬೆನ್ನಲ್ಲೇ ಹೆಂಡತಿ ಜೊತೆ ಬೇರೆ ಮನೆ ಮಾಡಿಕೊಂಡು ವಾಸ ಮಾಡಲು ಶುರು ಮಾಡಿದ್ದನು. ಇದನ್ನೂ ಓದಿ: ಓಮಿಕ್ರಾನ್‌ ಸೋಂಕಿತನ ಪತ್ನಿ, ಬಾಮೈದುನನಿಗೂ ಸೋಂಕು- ಗುಜರಾತ್‌ನಲ್ಲಿ 3ಕ್ಕೇರಿದ ಸಂಖ್ಯೆ

    ಕೆಲ ತಿಂಗಳು ಕಳೆದ ಮೇಲೆ ಪುಣ್ಯವತಿ ಮೇಲೆ ಅನುಮಾನಪಡಲು ಶುರು ಮಾಡಿದ್ದ. ಕುಟುಂಬದ ಸದಸ್ಯರು ಸೇರಿದಂತೆ ಯಾರೊಂದಿಗೂ ಫೋನ್‍ನಲ್ಲಿ ಮಾತನಾಡದಂತೆ ತಿಳಿಸಿದ್ದನು. ಈ ವಿಚಾರವಾಗಿ ಮಾನಸಿಕವಾಗಿ ನೊಂದಿದ್ದ ಪುಣ್ಯವತಿ ತಮ್ಮ ಚಿಕ್ಕಪ್ಪ, ಚಿಕ್ಕಮ್ಮನ ಬಳಿ ಹೇಳಿಕೊಂಡಿದ್ದಳು. ಈ ವೇಳೆ, ಎರಡು ಕುಟುಂಬದವರು ಮಧ್ಯಪ್ರವೇಶ ಮಾಡಿ, ರಾಜಿ ಮಾಡಿಸಿ, ಸಂತೋಷ್‍ಗೆ ಬುದ್ಧಿವಾದ ಹೇಳಿದ್ದರು. ಇದಾದ ಬಳಿಕ ಕೆಲ ದಿನಗಳ ಕಾಲ ಚೆನ್ನಾಗಿದ್ದ ಆತ ಮತ್ತೆ ತನ್ನ ಹಳೇ ಚಾಳಿ ಮುಂದುವರೆಸಿದ್ದ. ಜೊತೆಗೆ ಮದ್ಯಪಾನ ಮಾಡಲು ಶುರು ಮಾಡಿ, ಪತ್ನಿ ಜೊತೆ ಜಗಳ ಮಾಡಲು ಆರಂಭಿಸಿದ್ದ.

    ಕಿರುಕುಳ ನೀಡಲು ಶುರು ಮಾಡಿರುವ ಸಂತೋಷ್ ನಿನ್ನೆ ಹೆಂಡತಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ತುಂಬಾ ಸಮಯವಾದರೂ ಮನೆಯ ಬೀಗ ಹಾಕಿದ್ದ ಕಾರಣ ಸ್ಥಳೀಯರು ಎರಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದು ನೋಡಿದಾಗ ಪುಣ್ಯವತಿ ಕೊಲೆಯಾಗಿದ್ದಳು. ಘಟನಾ ಸ್ಥಳಕ್ಕೆ ಕುಕ್ಕಟ್‍ಪಲ್ಲಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆರೋಪಿ ಸಂತೋಷ್ ಸ್ಥಳದಿಂದ ಪರಾರಿಯಾಗಿದ್ದಾನೆ.

  • ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

    ಮದುವೆ ಮನೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್

    ಅಹಮದಾಬಾದ್: ಓಮಿಕ್ರಾನ್ ಸೋಂಕು ಹಿನ್ನಲೆಯಲ್ಲಿ ಕೊರೊನಾ ವ್ಯಾಕ್ಸಿನ್ ಪಡೆಯುವಂತೆ ಆರೋಗ್ಯ ಇಲಾಖೆಗಳು ಜನರಲ್ಲಿ ಜಾಗೃತಿ ಮೂಡಿಸುತ್ತಿವೆ. ಹೊಲ, ಗದ್ದೆ, ಗ್ರಾಮ, ಮನೆಗೆ ಹೋಗಿ ಲಸಿಕೆ ನೀಡುತ್ತಿರುವ ಆರೋಗ್ಯ ಇಲಾಖೆ ಒಂದು ಹೆಜ್ಜೆ ಮುಂದೆ ಹೋಗಿ ಮದುವೆ ಮನೆಯಲ್ಲಿ ಕೋವಿಡ್ ನೀಡುವ ಮೂಲಕವಗಿ ಸುದ್ದಿಯಾಗಿದೆ.

    ಕೋವಿಡ್ ವ್ಯಾಕ್ಸಿನ್ ಕಡ್ಡಾಯವಾಗಿ ಪಡೆಯಬೇಕೆಂಬ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಅಹಮದಾಬಾದ್ ಮುನ್ಸಿಪಲ್  ಕಾರ್ಪೊರೇಷನ್​ (AMC) ಆರೋಗ್ಯ ಇಲಾಖೆಯ ತಂಡವು ಮದುವೆ ಮಂಟಪಗಳಿಗೆ ತೆರಳಿ ವ್ಯಾಕ್ಸಿನ್ ಪಡೆದವರ ಕುರಿತು ಮಾಹಿತಿ ಸಂಗ್ರಹಿಸುತ್ತಿದೆ. ಲಸಿಕೆ ಪಡೆಯದೇ ಇರುವಂಥವರಿಗೆ ಸ್ಥಳದಲ್ಲಿಯೇ ಲಸಿಕೆ ನೀಡುವ ಕೆಲಸವನ್ನು ಮಾಡುತ್ತಿದೆ. ಇದನ್ನೂ ಓದಿ:  ಓಮಿಕ್ರಾನ್‌ನಿಂದ ಗುಣಮುಖರಾಗಿ ಡಿಸ್ಚಾರ್ಜ್‌ ಆದವರಿಗೆ ಹೊಸ ಗೈಡ್‌ಲೈನ್ಸ್‌

    ಅರ್ಬನ್ ಹೆಲ್ತ್‍ಕೇರ್ ಸೆಂಟರ್ ವೈದ್ಯ ಡಾ.ಫಲ್ಗುನ್ ಈ ಕುರಿತು ಮಾತನಾಡಿ, ಎಲ್ಲರೂ ಎರಡನೇ ಡೋಸ್ ವ್ಯಾಕ್ಸಿನ್ ಪಡೆದ ಕುರಿತು ಪರೀಕ್ಷೆ ಮಾಡುತ್ತಿದ್ದೇವೆ. ನಗರದಲ್ಲಿ 70-80 ಹೆಲ್ತ್ ಕೇರ್ ಸೆಂಟರ್ ಕಾರ್ಯನಿರ್ವಹಿಸುತ್ತಿವೆ. ಇಲ್ಲಿ ನಡೆಯುವ ಮುದುವೆಗಳ ಬಗ್ಗೆ ವರದಿ ಪಡೆದು ಅಲ್ಲಿಗೆ ತೆರಳಿ ಪರೀಕ್ಷಿಸುತ್ತಿದ್ದೇವೆ ಎಂದರು.

    ಈ ತಂಡಗಳು ಗುರುವಾರ ವಿವಿಧ ವಿವಾಹ ಸ್ಥಳಗಳು ಮತ್ತು ಸಮುದಾಯ ಭವನಗಳಿಗೆ ತೆರಳಿ ಪರೀಕ್ಷೆ ಮಾಡುತ್ತಿವೆ. ಆರೋಗ್ಯ ಅಧಿಕಾರಿಗಳ ಕಾರ್ಯಕ್ಕೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಗುಜರಾತ್‍ನಲ್ಲಿ ಗುರುವಾರ 70 ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದೆ.

  • ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

    ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

    ವಾಷಿಂಗ್ಟನ್: ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಸಪ್ಲೈಯರ್ ಶಾಕ್ ಕೊಟ್ಟ ವೀಡಿಯೋ ಈಗ ಸೋಶಿಯಲ್ ವೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ವೀಡಿಯೋ ನೋಡಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ

    ಕ್ರಿಶ್ಚಿಯನ್ನ ಸಂಪ್ರದಾಯದಲ್ಲಿ ಯಾವುದೇ ಶುಭ ಕಾರ್ಯಗಳಿಗೂ ಕೇಕ್ ಕಟ್ ಮಾಡುತ್ತಾರೆ. ಇನ್ನು ಮದುವೆಯ ಸಂದರ್ಭದಲ್ಲಿ ಕೇಕ್ ಅವಿಭಾಜ್ಯ ಅಂಗವಾಗಿರುತ್ತೆ. ಇಂತಹ ಸಂದರ್ಭದಲ್ಲಿ ಹೋಟೆಲ್ ಸಪ್ಲೈಯರ್ ಮದುವೆಯ ಕೇಕ್ ಅನ್ನು ಬೀಳಿಸಿ ವಧು-ವರನಿಗೆ ಶಾಕ್ ಕೊಟ್ಟಿದ್ದಾನೆ. ಈ ದೃಶ್ಯ ನೋಡಿದ ಎಲ್ಲರೂ ಶಾಕ್ ಆಗಿದ್ದು, ನಂತರ ಇನ್ನೊಂದು ಕಡೆಯಿಂದ ಕೇಕ್ ಬರುತ್ತಿರುವುದನ್ನು ನೋಡಿದ ಜನರು ಸಪ್ಲೈಯರ್ ಬೇಕೆಂದು ಈ ರೀತಿ ಶಾಕ್ ನೀಡಿದ್ದಾನೆ ಎಂದು ಅರಿತುಕೊಂಡಿದ್ದಾರೆ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಕೋವಿಡ್-19 ಟೆಸ್ಟಿಂಗ್ ಹೆಚ್ಚಳ

    ಪ್ರಸ್ತುತ ಹೋಟೆಲ್ ಸಪ್ಲೈಯರ್ ಮದುವೆಯ ಕೇಕ್ ಬೀಳಿಸಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್ ನ ಶಿ_ಸೈಡಿಎಸ್ ಎಂಬ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, 20 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ನೆಟ್ಟಿಗರು ಈ ವೀಡಿಯೋವನ್ನು ಇಷ್ಟ ಪಡುತ್ತಿದ್ದಾರೆ.

    ವೀಡಿಯೋದಲ್ಲಿ ಏನಿದೆ?
    ವಧು ಮತ್ತು ವರರು ತಮ್ಮ ವೆಡ್ಡಿಂಗ್ ನಲ್ಲಿ ಸ್ಟೆಪ್ ಬೈ ಸ್ಟೆಪ್ ಕೇಕ್ ಅನ್ನು ಸಪ್ಲೈಯರ್ ತರುತ್ತಿರುವುದನ್ನು ನೋಡುತ್ತಿದ್ದು, ಕೇಕ್ ಕೈ ಜಾರಿ ಉರುಳಿ ನೆಲದ ಮೇಲೆ ಬೀಳುತ್ತದೆ. ಈ ದೃಶ್ಯ ನೋಡಿದ ಆ ದಂಪತಿ ಫುಲ್ ಶಾಕ್ ನಲ್ಲಿ ನಿಂತುಕೊಳ್ಳುತ್ತಾರೆ. ಆದರೆ ಸಪ್ಲೈಯರ್ ಅವರಿಬ್ಬರಿಗೆ ತಮಾಷೆ ಮಾಡುತ್ತಿದ್ದು, ಕೆಲವು ನಿಮಿಷಗಳಲ್ಲಿ ಇನ್ನೊಂದು ಕಡೆಯಿಂದ ಮತ್ತೊಬ್ಬ ಸಪ್ಲೈಯರ್ ನಿಜವಾದ ಕೇಕ್ ನೊಂದಿಗೆ ಬರುತ್ತಾನೆ. ಇದನ್ನೂ ಓದಿ: ಮದುವೆ ಮಂಟಪದೊಳಗೆ ನುಗ್ಗಿ ಪ್ರೇಯಸಿಗೆ ಸಿಂಧೂರವಿಟ್ಟ ಪಾಗಲ್ ಪ್ರೇಮಿ

    ಸಪ್ಲೈಯರ್ ಕೊಟ್ಟ ಟ್ವಿಸ್ಟ್ ನೋಡಿ ದಂಪತಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಕೇಕ್ ಕಟ್ ಮಾಡಿ ಸಂಭ್ರಮಿಸಿದರು. ವೀಡಿಯೋ ಶೇರ್ ಮಾಡಿದ ಅವರು, ದೇವರಿಗೆ ಧನ್ಯವಾದಗಳು. ಇದು ತಮಾಷೆಯಾಗಿತ್ತು. ನಮಗೆ ಈ ದೃಶ್ಯ ನೋಡಿ ಕಣ್ಣೀರು ಬಂದಿತ್ತು ಎಂದು ಬರೆದು ಪೋಸ್ಟ್ ಮಾಡಿದ್ದರು.

  • ಕತ್ರಿನಾ, ವಿಕ್ಕಿ ಮದುವೆ ಸಮಾರಂಭಕ್ಕೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಸೆಕ್ಯುರಿಟಿ!

    ಕತ್ರಿನಾ, ವಿಕ್ಕಿ ಮದುವೆ ಸಮಾರಂಭಕ್ಕೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಸೆಕ್ಯುರಿಟಿ!

    ನವದೆಹಲಿ: ಬಾಲಿವುಡ್‌ ತಾರೆಗಳಾದ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ ಜೋಡಿ ವಿವಾಹ ಸಮಾರಂಭ ರಾಜಸ್ಥಾನ್‌ನಲ್ಲಿ ಇದೇ ವಾರ ನಡೆಯಲಿದೆ. ಈ ಮದುವೆ ಸಮಾರಂಭಕ್ಕೆ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರ ವೈಯಕ್ತಿಕ ಬಾಡಿಗಾರ್ಡ್‌ ಭದ್ರತೆ ಒದಗಿಸಲಿದ್ದಾರೆ ಎನ್ನಲಾಗಿದೆ.

    ರಾಜಸ್ಥಾನ್‌ನ ಸಾವಿ ಮಾಧೋಪುರ್‌ನಲ್ಲಿರುವ ಸಿಕ್ಸ್‌ ಸೆನ್ಸಸ್‌ ಪೋರ್ಟ್‌ ಕತ್ರಿನಾ ಹಾಗೂ ವಿಕ್ಕಿ ಮದುವೆ ನಡೆಯಲಿದೆ. ಇದೇ ಡಿ.9ರಂದು ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಇಲ್ಲಿನ ಸಂಪೂರ್ಣ ಭದ್ರತೆ ನೇತೃತ್ವವನ್ನು ಸನ್ಮಾನ್‌ ಖಾನ್‌ ಅವರ ಅಂಗರಕ್ಷಕ ವಹಿಸಿಕೊಳ್ಳಲಿದ್ದಾರೆ ಎಂದು ಪಿಂಕ್‌ವಿಲ್ಲಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

    ಸಲ್ಮಾನ್‌ ಖಾನ್‌ ಅವರ ಬಾಡಿಗಾರ್ಡ್‌ ಗುರ್ಮಿತ್‌ ಸಿಂಗ್‌ ಅವರು ʼಟೈಗರ್‌ ಸೆಕ್ಯುರಿಟಿʼ ಎಂಬ ಹೆಸರಿನಲ್ಲಿ ತಮ್ಮದೇ ಆದ ಭದ್ರತಾ ಕಂಪೆನಿಯನ್ನು ನಡೆಸುತ್ತಿದ್ದಾರೆ. ಇವರ ಜೊತೆಗೆ ಭದ್ರತೆಗಾಗಿ ಸ್ಥಳೀಯ ಆಡಳಿತವು ಪೊಲೀಸ್‌ ವ್ಯವಸ್ಥೆ ಕಲ್ಪಿಸಿದೆ.

    ಕತ್ರಿನಾ ಕೈಫ್‌ ಅವರು ಸಲ್ಮಾನ್‌ ಖಾನ್‌ ಮತ್ತು ಅವರ ಕುಟುಂಬ ಆತ್ಮೀಯರಾಗಿದ್ದಾರೆ. ಇದರ ನಡೆವೆಯೂ ಕತ್ರಿನಾ ತಮ್ಮ ವಿವಾಹಕ್ಕೆ ನಮಗೆ ಯಾವುದೇ ಆಹ್ವಾನ ನೀಡಿಲ್ಲ ಎಂದು ಸಲ್ಮಾನ್‌ ಸಹೋದರಿ ಅರ್ಪಿತಾ ಖಾನ್‌ ಶರ್ಮಾ ಹೇಳಿದ್ದರು. ಇದನ್ನೂ ಓದಿ: ಸಿಎಂ ನಿಮಗೆ ನಾವು ಸದಾ ಆಭಾರಿ: ಅಶ್ವಿನಿ ಪುನೀತ್ ರಾಜ್‍ಕುಮಾರ್

    ತಮ್ಮ ಮದುವೆ ಪ್ರಚಾರವಾಗದಂತೆ ಸೂಕ್ತ ಭದ್ರತೆಯೊಂದಿಗೆ ನಡೆಯಬೇಕು ಎಂದು ಕತ್ರಿನಾ ಮತ್ತು ವಿಕ್ಕಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಸೂಕ್ತ ಭದ್ರತೆ ವ್ಯವಸ್ಥೆ ಕೂಡ ಮಾಡಿಕೊಂಡಿದ್ದಾರೆ.

  • ಕತ್ರಿನಾ, ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಸೀಕ್ರೆಟ್‌ ಕೋಡ್‌- ಯಾರ‍್ಯಾರಿಗೆ ಆಹ್ವಾನ?

    ಕತ್ರಿನಾ, ವಿಕ್ಕಿ ಮದುವೆಗೆ ಬರುವ ಅತಿಥಿಗಳಿಗೆ ಸೀಕ್ರೆಟ್‌ ಕೋಡ್‌- ಯಾರ‍್ಯಾರಿಗೆ ಆಹ್ವಾನ?

    ನವದೆಹಲಿ: ಬಾಲಿವುಡ್‌ ನಟಿ ಕತ್ರಿನಾ ಕೈಫ್‌ ಹಾಗೂ ನಟ ವಿಕ್ಕಿ ಕೌಶಲ್‌ ಜೋಡಿ ವಿವಾಹದ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗ್ತಿದೆ. ಮದುವೆ ಎಲ್ಲಿ ನಡೆಯುತ್ತೆ, ಎಷ್ಟು ಖರ್ಚಾಗುತ್ತೆ, ಅತಿಥಿಗಳು ಯಾರ‍್ಯಾರು ಬರ್ತಾರೆ. ಹೀಗೆ ನಾನಾ ವಿಷಯಗಳು ಚರ್ಚೆಯಾಗ್ತಿವೆ.

    ರಾಜಸ್ಥಾನದ ಸವಾಯ್‌ ಮಾಧೊಪುರ್‌ ಹೋಟೆಲ್‌ನಲ್ಲಿ ಮೂರು ದಿನಗಳ ಕಾಲ ಈ ಜೋಡಿಯ ವಿವಾಹ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಪತ್ನಿ ಡ್ರೆಸ್ ಸರಿಪಡಿಸೋದ್ರಲ್ಲಿ ಬ್ಯುಸಿಯಾದ ನಿಕ್ – ಪರ್ಫೆಕ್ಟ್ ಜಂಟಲ್ ಮ್ಯಾನ್ ಅಂದ ನೆಟ್ಟಿಗರು

    ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ವಿವಾಹ ಸಮಾರಂಭಕ್ಕೆ ಬರುವವರು ಮೊಬೈಲ್‌ ಬಳಸುವಂತಿಲ್ಲ ಎಂದು ಷರತ್ತು ವಿಧಿಸಿರುವ ಸುದ್ದಿ ಬಹಳ ಸದ್ದು ಮಾಡಿತ್ತು. ಅಂತೆಯೇ ಅತಿಥಿಗಳ ವಿಚಾರವಾಗಿ ಮತ್ತೊಂದು ಕುತೂಹಲಕಾರಿ ಸುದ್ದಿ ಹೊರಬಿದ್ದಿದೆ. ಈ ಜೋಡಿ ಮದುವೆಗೆ ಬರುವವರಿಗೆ ಸೀಕ್ರೆಟ್‌ ಕೋಡ್‌ ಇರುತ್ತಂತೆ. ಸೀಕ್ರೆಟ್‌ ಕೋಡ್‌ ಹೊಂದಿರುವವರು ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರ್ಹರು. ಕೋಡ್‌ ಇದ್ರೆ ಮಾತ್ರ ಅತಿಥಿಗಳಿಗೆ ಹೋಟೆಲ್‌ನಲ್ಲಿ ರೂಮ್‌ಗಳು ಸಿಗುತ್ತವೆ.

    ಇನ್ನು ಕತ್ರಿನಾ ಹಾಗೂ ವಿಕ್ಕಿ ತಮ್ಮ ವಿವಾಹಕ್ಕೆ ಯಾರ‍್ಯಾರನ್ನು ಆಹ್ವಾನಿಸಬೇಕು ಎಂದು ಲಿಸ್ಟ್‌ ಕೂಡ ರೆಡಿ ಮಾಡಿದ್ದಾರಂತೆ. ಕೋವಿಡ್‌ ರೂಪಾಂತರಿ ಓಮಿಕ್ರಾನ್‌ ಭೀತಿ ಇರುವುದರಿಂದ ಕೆಲವೇ ಪ್ರಮುಖ ಅತಿಥಿಗಳನ್ನು ಆಹ್ವಾನಿಸಲು ಇಬ್ಬರೂ ನಿರ್ಧರಿಸಿದ್ದಾರೆ. ಕತ್ರಿನಾ ಅವರಿಗೆ ಬಹಳ ಹತ್ತಿರದವರಾದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಮತ್ತು ಕುಟುಂಬದವರು ಗೆಸ್ಟ್‌ ಲಿಸ್ಟ್‌ನಲ್ಲಿದ್ದಾರೆ ಎನ್ನಲಾಗಿದೆ. ʼಕತ್ರಿನಾ ಇನ್‌ ನ್ಯೂಯಾರ್ಕ್‌ʼ ಸಿನಿಮಾ ನಿರ್ದೇಶಿಸಿರುವ ಕಬಿರ್ ಖಾನ್‌ ಅವರಿಗೂ ಆಹ್ವಾನ ನೀಡಲಾಗಿದೆಯಂತೆ. ಇದನ್ನೂ ಓದಿ: ಎವರ್ ಗ್ರೀನ್ ಹೀರೋಯಿನ್ ಸುಧಾರಾಣಿ ಇನ್ಮುಂದೆ ಡಾ.ಸುಧಾರಾಣಿ

    ಬಾಲಿವುಡ್‌ ನಟ ಶಾರೂಕ್‌ ಖಾನ್‌, ನಿರ್ದೇಶಕ ರೋಹಿತ್‌ ಶೆಟ್ಟಿ, ನಟಿಯರಾದ ಅನುಷ್ಕಾ ಶರ್ಮ ಹಾಗೂ ಆಲಿಯಾ ಭಟ್‌ ಅತಿಥಿಗಳ ಲಿಸ್ಟ್‌ನಲ್ಲಿ ಇದ್ದಾರೆ ಎನ್ನಲಾಗಿದೆ.

  • ವಿಕ್ಕಿ, ಕತ್ರಿನಾ ಮದುವೆಗೂ ತಟ್ಟಿದ ಹೊಸ ವೈರಸ್ ಬಿಸಿ

    ವಿಕ್ಕಿ, ಕತ್ರಿನಾ ಮದುವೆಗೂ ತಟ್ಟಿದ ಹೊಸ ವೈರಸ್ ಬಿಸಿ

    ಮುಂಬೈ: ಬಾಲಿವುಡ್ ಅಂಗಳದಲ್ಲಿ ಭರ್ಜರಿ ಸುದ್ದಿಯಲ್ಲಿರುವ ಕತ್ರಿನಾ ಕೈಫ್, ವಿಕ್ಕಿ ಕೌಶಲ್ ಮದುವೆಗೆ ಹೊಸ ವೈರಸ್ ಬಿಸಿ ತಟ್ಟಿದೆ.

    ಈ ಜೋಡಿ ಮದುವೆ ಆಗುತ್ತಿರುವ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ಮೂಲಗಳ ಪ್ರಕಾರ ಇವರು ಮದುವೆ ಆಗುತ್ತಿರುವ ವಿಚಾರ ಬಹುತೇಕ ಖಚಿತವಾಗಿದೆ. ರಾಜಸ್ಥಾನದ ಸವಾಯಿ ಮಾಧೋಪುರ್​ನಲ್ಲಿ ಮದುವೆ ಸಂಭ್ರಮಕ್ಕೆ ತಯಾರಿ ನಡೆಯುತ್ತಿದೆ. ಅದರೆ ಈ ಜೋಡಿ ಮದುವೆಗೆ ಕೊರೊನಾ ಕೆಂಗಣ್ಣು ಬಿದ್ದಿದೆ.

     

    ಡಿಸೆಂಬರ್ 7ರಿಂದ 9ರವರೆಗೆ ಈ ಜೋಡಿಯ ಮದುವೆ ನಡೆಯಲಿದೆ. ರಾಜಸ್ಥಾನದ ಸಿಕ್ಸ್ ಸೆನ್ಸಸ್  ಫೋರ್ಟ್ ಹೋಟೆಲ್‍ನಲ್ಲಿ ವಿವಾಹ ಸಮಾರಂಭ ಏರ್ಪಡಿಸಲಾಗಿದೆ ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬಾಲಿವುಡ್ ಸೆಲೆಬ್ರಿಟಿಗಳಿಗೆ ಮದುವೆ ಆಮಂತ್ರಣ ಹೋಗಿದೆ. ಹೀಗಿರುವಾಗಲೇ ಭಾರತದಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿದೆ. ಕೊರೊನಾದ ರೂಪಾಂತರಿಯೂ ಪತ್ತೆ ಆಗಿದೆ. ಈ ಕಾರಣಕ್ಕೆ ಮದುವೆಗೆ ಸಮಸ್ಯೆ ಎದುರಾಗುವ ಸೂಚನೆ ಈಗಾಗಲೇ ಸಿಕ್ಕಿದೆ.

    ಈ ಮದುವೆಗೆ ಬಾಲಿವುಡ್‍ನ ಅನೇಕ ಸ್ಟಾರ್ ಕಲಾವಿದರು ಅಟೆಂಟ್ ಆಗುತ್ತಾರೆ ಎನ್ನಲಾಗುತ್ತಿತ್ತು. 45 ಹೋಟೆಲ್ ಕೂಡಾ ಬುಕ್ ಮಾಡಲಾಗಿತ್ತು. ಆದರೆ ಹೊಸ ವೈರಸ್ ಕಾರಣದಿಂದಾಗಿ ಮದುವೆ ಬರುತ್ತಿರುವ ಗಣ್ಯರ ಸಂಖ್ಯೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎಂದು ತಿಳಿದು ಬಂದಿದೆ. ಕೋವಿಡ್ ರೂಪಾಂತರಿ ಓಮಿಕ್ರಾನ್ ವೈರಸ್ ಆತಂಕ ಹೆಚ್ಚಾಗಿದೆ. ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಅದ್ದೂರಿಯಾಗಿ ಮದುವೆ  ಆಗುತ್ತಾರ ಎನ್ನುವುದನ್ನು ಕಾದು ನೋಡಬೇಕಾಗಿದೆ.

  • ಮಾವ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಅಳಿಯ

    ಮಾವ ಕೊಟ್ಟ 75 ಲಕ್ಷ ರೂ. ವರದಕ್ಷಿಣೆ ಹಣವನ್ನು ಹಾಸ್ಟೆಲ್‌ ನಿರ್ಮಾಣಕ್ಕೆ ದೇಣಿಗೆ ಕೊಟ್ಟ ಅಳಿಯ

    ಜೈಪುರ್: ಮದುವೆಯಲ್ಲಿ ವರದಕ್ಷಿಣೆ ನೀಡಿದ್ದ 75 ಲಕ್ಷ ರೂಪಾಯಿ ಹಣದಲ್ಲಿ ವಧು, ವರ ಬಾಲಕಿಯರ ವಿದ್ಯಾರ್ಥಿನಿಲಯ (ಹಾಸ್ಟೆಲ್) ನಿರ್ಮಾಣ ಮಾಡಲು ಮುಂದಾಗಿರುವುದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಉದ್ಯಮಿ ಕಿಶೋರ್ ಸಿಂಗ್ ಕನೋದ್ ಇದೇ 21ರಂದು ತಮ್ಮ ಮಗಳಾದ ಅಂಜಲಿ ಕನ್ವಾರ್ ಅವರ ವಿವಾಹವನ್ನು ನೆರವೇರಿಸಿದ್ದರು. ಮದುವೆ ಸಂದರ್ಭದಲ್ಲಿ, ವರ ಪ್ರವೀಣ್ ಸಿಂಗ್‍ಗೆ ವರದಕ್ಷಿಣೆ ನೀಡಲು ಎಂದು ಕಿಶೋರ್ ಅವರು 75 ಲಕ್ಷವನ್ನು ತೆಗೆದಿರಿಸಿದ್ದರು. ಆದರೆ ಮದುವೆಯ ಮುನ್ನಾದಿನ ಅಂಜಲಿ, ವರದಕ್ಷಿಣೆ ನೀಡಲು ತೆಗೆದಿರಿಸಿರುವ ಹಣವನ್ನು ಬಾಲಕಿಯರ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ನೀಡಿ ಎಂದು ತಮ್ಮ ತಂದೆಯನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ಕಿಶೋರ್ ಸಹ ಸಮ್ಮತಿ ಸೂಚಿಸಿದ್ದಾರೆ. ಇದನ್ನೂ ಓದಿ: ಒಳ್ಳೆ ಬುದ್ಧಿ ಕಲಿಯಿರಿ ಎಂದಿದ್ದಕ್ಕೆ ಸಾಮಾಜಿಕ ಕಾರ್ಯಕರ್ತನ ಕೊಲೆಗೈದ ಬಾಲಕರು!

    MONEY

    ಮದುವೆಯ ದಿನ ಮಂಟಪದಲ್ಲಿಯೇ ಈ ಬಗ್ಗೆ ಕಿಶೋರ್ ಘೋಷಣೆ ಮಾಡಿದ್ದಾರೆ. ತಮ್ಮ ಮಗಳಿಗೆ ಖಾಲಿ ಚೆಕ್ ನೀಡಿ, ಎಷ್ಟು ದೇಣಿಗೆ ನೀಡಬೇಕೊ ಅದನ್ನು ಚೆಕ್‍ನಲ್ಲಿ ನಮೂದಿಸು ಎಂದು ಹೇಳಿದ್ದಾರೆ. ಅಂಜಲಿ ಆ ಚೆಕ್‍ನಲ್ಲಿ 75 ಲಕ್ಷ ನಮೂದಿಸಿದ್ದಾರೆ. ಆ ಚೆಕ್ ಅನ್ನು ತಾರಾತರ ಮಠದ ಮುಖ್ಯಸ್ಥರಿಗೆ ಮಂಟಪದಲ್ಲಿಯೇ ಹಸ್ತಾಂತರಿಸಲಾಗಿದೆ. ಇದನ್ನೂ ಓದಿ: IND vs NZ ಟೆಸ್ಟ್ ಪಂದ್ಯದಲ್ಲಿ ಸುದ್ದಿಯಾದ ಪಾನ್ ಭಾಯ್ – ವೀಡಿಯೋ ವೈರಲ್

    BRIBE

    ನಾವು ನಿರ್ಮಿಸುತ್ತಿರುವ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಕಿಶೋರ್ ಅವರು ಈ ಮೊದಲೇ 1 ಕೋಟಿ ದೇಣಿಗೆ ನೀಡಿದ್ದರು. ಕಾಮಗಾರಿ ಪೂರ್ಣಗೊಳಿಸಲು ಇನ್ನೂ 50,75 ಲಕ್ಷದ ಅಗತ್ಯವಿತ್ತು. ಕಿಶೋರ್ ಅವರು ಈಗ ಅದನ್ನೂ ಒದಗಿಸಿದ್ದಾರೆ ಎಂದು ತಾರಾತರ ಮಠದವರು ಹೇಳಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಎಸ್.ನಾರಾಯಣ್ ಪುತ್ರ ಪಂಕಜ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ, ಖ್ಯಾತ ನಿರ್ದೇಶಕ ಎಸ್. ನಾರಾಯಣ್ ಅವರ ಕುಟುಂಬದಲ್ಲಿ ಶುಭ ಸಮಾರಂಭ ನೆರವೇರಿದೆ. ಇತ್ತೀಚೆಗೆ ಎರಡನೇ ಮಗ ಪವನ್ ಅವರ ಮದುವೆ ನಡೆದಿತ್ತು, ಈಗ ಪಂಕಜ್ ಅವರ ಮದುವೆ ನಡೆದಿದೆ.

    ಮೈಸೂರಿನಲ್ಲಿರುವ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‍ನಲ್ಲಿ ಪಂಕಜ್ ಅವರ ಮದುವೆ ನಡೆದಿದೆ. ಪಂಕಜ್ ಅವರನ್ನು ಮದುವೆ ಆಗಿರುವ ಹುಡುಗಿಯ ಹೆಸರು ರಕ್ಷಿತಾ ಸುರೇಂದರ್. ಕಳೆದ ತಿಂಗಳು ಪಂಕಜ್ ಮತ್ತು ರಕ್ಷಿತಾ ನಿಶ್ಚಿತಾರ್ಥ ನಡೆದಿತ್ತು. ಇದೀಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಅಪ್ಪು ಪುತ್ಥಳಿಗೆ ಮುತ್ತಿಟ್ಟು ರಾಘವೇಂದ್ರ ರಾಜ್‍ಕುಮಾರ್ ಭಾವುಕ

    ಗುರುಹಿರಿಯರು ಮತ್ತು ಕುಟುಂಬದವರ ಸಮ್ಮುಖದಲ್ಲಿ ಈ ಮದುವೆ ನಡೆದಿದೆ. ಸ್ಯಾಂಡಲ್‍ವುಡ್ ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿ ನವ ವಧು, ವರರನ್ನು ಆಶಿರ್ವದಿಸಿದ್ದಾರೆ. ಪಂಕಜ್ ಮತ್ತು ರಕ್ಷಿತಾ ದಂಪತಿಗೆ ಶುಭ ಕೋರಿ, ಆಶೀರ್ವಾದ ಮಾಡಲು ಕನ್ನಡ ಚಿತ್ರರಂಗದ ಗಣ್ಯರು ಮತ್ತು ಇಬ್ಬರ ಸ್ನೇಹಿತರು ಮತ್ತು ಕುಟುಂಬದವರು ಮದುವೆಗೆ ಬಂದು ಶುಭ ಕೋರಿದ್ದಾರೆ. ಇದನ್ನೂ ಓದಿ: ನಿಕ್ ಜೊತೆಗಿನ ವಿಚ್ಛೇದನ ಗಾಸಿಪ್​ಗೆ ಬ್ರೇಕ್ ಹಾಕಿದ ಪ್ರಿಯಾಂಕ ಚೋಪ್ರಾ

    ಪಂಕಜ್ ಅವರು ಚಂದನವನದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿದ್ದಾರೆ. ಪಂಕಜ್ ಮದುವೆಯ ಸುಂದರ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.