Tag: wedding

  • ಪ್ರಿಯಕರನನ್ನು ವರಿಸಿದ ನಟಿ ಕರೀಷ್ಮಾ ತನ್ನಾ

    ಪ್ರಿಯಕರನನ್ನು ವರಿಸಿದ ನಟಿ ಕರೀಷ್ಮಾ ತನ್ನಾ

    ಬೆಂಗಳೂರು: ನಟಿ ಕರೀಷ್ಮಾ ತನ್ನಾ ಅವರು ಪ್ರಿಯಕರ ವರುಣ್ ಬಂಗೇರಾ ಜೊತೆಗೆ ನಿನ್ನೆ ಹಸೆಮಣೆ ಏರಿದ್ದಾರೆ.

    ನಿನ್ನೆ ಸಂಜೆ ವೇಳೆಗೆ ಕರೀಷ್ಮಾ ಹಾಗೂ ವರುಣ್ ಮದುವೆ ನೆರವೇರಿದೆ. ವರುಣ್ ಅವರು ಕರೀಷ್ಮಾ ಹಣೆಗೆ ಕುಂಕುಮ ಇಡುತ್ತಿರುವ ಫೋಟೋ ವೈರಲ್ ಆಗಿದೆ. ಮದುವೆಯ ಫೋಟೋ ಹಾಗೂ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ  ಹರಿದಾಡುತ್ತಿವೆ.

    ಗುರುವಾರದಿಂದಲೇ ಕರೀಷ್ಮಾ ಹಾಗೂ ವರುಣ್ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿತ್ತು. ಈ ಬಗ್ಗೆ ಕರೀಷ್ಮಾ ಅಪ್‍ಡೇಟ್ ನೀಡುತ್ತಲೇ ಬಂದಿದ್ದರು. ಗುರುವಾರ ಹಳದಿ ಕಾರ್ಯಕ್ರಮಗಳು ಜೋರಾಗಿ ನಡೆದಿತ್ತು. ಆ ಬಳಿಕ ಮೆಹಂದಿ ಕಾರ್ಯಕ್ರಮ ಕೂಡ ಅದ್ದೂರಿಯಾಗಿ ನಡೆದಿತ್ತು. ಇದನ್ನೂ ಓದಿ: ಪ್ಯಾಡಿಂಗ್ ಧರಿಸುವುದರ ಹಿಂದಿನ ಕಾರಣ ಬಿಚ್ಚಿಟ್ಟ ‘ನಿನ್ನಿಂದಲೇ’ ಹೀರೋಯಿನ್

     

    View this post on Instagram

     

    A post shared by @karishmatanna.queen.portugal


    ಕೆಲವು ವರ್ಷಗಳ ಹಿಂದೆ ಪಾರ್ಟಿ ಒಂದರಲ್ಲಿ ವರುಣ್ ಹಾಗೂ ಕರೀಷ್ಮಾ ಭೇಟಿ ಆಗಿದ್ದರು. ಆ ಬಳಿಕ ಇವರ ನಡುವೆ ಫ್ರೆಂಡ್‍ಶಿಪ್ ಬೆಳೆದಿತ್ತು. ಅದು ಪ್ರೀತಿಗೆ ತಿರುಗಿ ಈ ಜೋಡಿ ನವೆಂಬರ್‌ನಲ್ಲಿ ನಿಶ್ಚಿತಾರ್ಥ್ ಮಾಡಿಕೊಂಡಿತ್ತು. ಇದೀಗ ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

    2001ರಲ್ಲೇ ಕರೀಷ್ಮಾ ಕಿರುತೆರೆ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಹಲವು ಸೀರಿಯಲ್ ನಟಿಸಿದ್ದಾರೆ. ನಂತರ ಇವರಿಗೆ ಸಿನಿಮಾದಲ್ಲಿ ನಟಿಸುವ ಹಲವು ಅವಕಾಶಗಳು ಬಂದಿದ್ದವು. ಕನ್ನಡದಲ್ಲಿ ಐ ಆ್ಯಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರದಲ್ಲಿ ಪ್ರೇಮ್‍ಗೆ ಜೊತೆಯಾಗಿ ನಟಿಸಿದ್ದಾರೆ.

  • ಕೊರೊನಾದಿಂದ ಅಣ್ಣ ಸಾವು- ಅತ್ತಿಗೆಯನ್ನು ವರಿಸಿದ ಸಹೋದರ

    ಕೊರೊನಾದಿಂದ ಅಣ್ಣ ಸಾವು- ಅತ್ತಿಗೆಯನ್ನು ವರಿಸಿದ ಸಹೋದರ

    ಮುಂಬೈ: ಕೊರೊನಾ ಸೋಂಕುನಿಂದ ಅಣ್ಣ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಸಹೋದರ ಅತ್ತಿಗೆಯನ್ನು ಮದುವೆಯಾಗಿದ್ದು, ವಿಧವೆಗೆ  ಬಾಳು  ಕೊಟ್ಟಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

    ಮಹಾರಾಷ್ಟ್ರದ ಅಹಮದ್‍ನಗರದ ಅಕೋಲೆ ತಾಲೂಕಿನಲ್ಲಿ ಈ ಆದರ್ಶ ವಿವಾಹ ನಡೆದಿದೆ. ಅಕೋಲೆ ತಾಲೂಕಿನ ಧೋಕ್ರಿಯ 31 ವರ್ಷದ ನೀಲೇಶ್ ಶೇಟೆ ಕೋವಿಡ್‍ನಿಂದಾಗಿ ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸಾವನ್ನಪ್ಪಿದ್ದರು. ಈತನ ಸಾವಿನಿಂದಾಗಿ ಹೆಂಡತಿ, ಮಗಳು ಬೀದಿಗೆ ಬೀಳುತ್ತಾರೆ. 19 ತಿಂಗಳ ಮಗಳು ಹಾಗೂ ಪತ್ನಿ ಪೂನಂ ನೋಡಿಕೊಳ್ಳುವವರು ಯಾರೂ ಇಲ್ಲದಂತಾಗುತ್ತದೆ. ಇದನ್ನೂ ಓದಿ: ಆಧಾರ್ ಪೌರತ್ವದ ಪುರಾವೆಯಲ್ಲ: ಸಂಸತ್‌ನಲ್ಲಿ ಕೇಂದ್ರ ಸ್ಪಷ್ಟನೆ

    ಕೋವಿಡ್‍ನಿಂದ ನೀಲೇಶ್ ಸಾವನ್ನಪ್ಪುತ್ತಿದ್ದಂತೆ ಆತನ ಸಹೋದರ ಸಮಾಧಾನ್ 23 ವರ್ಷದ ಪೂನಂ ಜೊತೆ ಮರು ವಿವಾಹ ಮಾಡಿಕೊಳ್ಳಲು ಒಪ್ಪಿಗೆ ಸೂಚಿಸುತ್ತಾರೆ. ಗ್ರಾಮದ ಹಿರಿಯರು, ಎರಡು ಕುಟುಂಬದವರು ಮದುವೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದು, ಕಳೆದ ಎರಡು ದಿನಗಳ ಹಿಂದೆ ಸರಳ ಮದುವೆ ಸಮಾರಂಭ ನಡೆದಿದೆ. ಅಕೋಲಾದ ಖಂಡೋಬಾ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆದಿದ್ದು, 26 ವರ್ಷದ ಸಮಾಧಾನ್ ಇದೀಗ ಪೂನಂ ಜೊತೆ ಸಪ್ತಪದಿ ತುಳಿದಿದ್ದಾರೆ

  • ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

    ಹಾರವನ್ನು ಕುತ್ತಿಗೆಗೆ ಎಸೆದ ವರ- ಮದುವೆ ಕ್ಯಾನ್ಸಲ್‌ ಮಾಡಿದ ವಧು

    ಲಕ್ನೋ: ಇತ್ತೀಚಿನ ಮದುವೆಗಳು ಮಂಟಪಕ್ಕೆ ಬಂದು ಮುರಿದು ಬೀಳುವುದು ಹೆಚ್ಚಾಗಿದೆ. ಸಿನಿಮಾ ಸ್ಟೈಲ್‍ನಲ್ಲಿ ಮದುವೆ ನಡೆದ ಉದಾಹರಣೆಗಳಿವೆ. ಆದರೆ ಇಲ್ಲೊಂದು ಜೋಡಿ ಕುತ್ತಿಗೆಗೆ ಹಾರ ಹಾಕುವ ಬದಲಾಗಿ, ಎಸೆದಿದ್ದಾನೆ ಎಂದು ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆ ಉತ್ತರ ಪ್ರದೇಶದ ಔರೈಯಾ ಜಿಲ್ಲೆಯಲ್ಲಿ ನಡೆದಿದೆ.

    ಸಂಪ್ರದಾಯದಂತೆ ವರನು, ವಧು ಕುತ್ತಿಗೆಗೆ ಹಾರವನ್ನು ಹಾಕುವ ಬದಲು ಎಸೆದಿದ್ದಾನೆ. ವರನ ವರ್ತನೆಯಿಂದ ಅಸಮಾಧಾನಗೊಂಡ ವಧು, ಅವನನ್ನು ಮದುವೆಯಾಗಲು ನಿರಾಕರಿಸಿದಳು.  ಈ ಘಟನೆ ಬಿದುನಾ ಪೊಲೀಸ್ ವೃತ್ತದ ವ್ಯಾಪ್ತಿಯ ನವೀನ್ ಬಸ್ತಿಯಲ್ಲಿ ಈ ಘಟನೆ ನಡೆದಿದೆ. ಇದನ್ನೂ ಓದಿ: ಶೀಘ್ರವೇ 50 ದೇಶಗಳಲ್ಲಿ ಲಭ್ಯವಾಗಲಿದೆ ಡಿಸ್ನಿ ಪ್ಲಸ್

     

    ವಧು ಆತನೊಂದಿಗೆ ಮದುವೆ ಬೇಡ ಎಂದು ಹೇಳಿದ್ದಾಳೆ. ಈ ವೇಳೆ ಎರಡೂ ಕುಟುಂಬಗಳ ನಡುವೆ ಜಗಳವಾಗಿದೆ. ಮದುವೆ ಮುಂದುವರಿಸಲು ವಧುವಿನ ಮನವೊಲಿಸಲು ಕುಟುಂಬದವರು ಪ್ರಯತ್ನಿಸಿದರು. ಆದರೆ ವಧು ಈ ವಿಚಾರವಾಗಿ ಯಾರ ಮಾತನ್ನೂ ಕೇಳಿಲ್ಲ. ಕೊನೆಗೆ ಈ ಸ್ಥಳಕ್ಕೆ ಪೊಲೀಸರು ಬಂದಿದ್ದಾರೆ. 2 ಕುಟುಂಬಗಳ ನಡುವೆ ರಾಜಿ ಮಾಡಲು ಪ್ರಯತ್ನಿಸಿದ್ದಾರೆ. ಸಾಧ್ಯವಾಗದೇ ಇದ್ದಾಗ ಎರಡು ಕುಟುಂಬಗಳು ವಿನಿಮಯ ಮಾಡಿಕೊಂಡ ಉಡುಗೊರೆಗಳನ್ನು ಹಿಂದಿರುಗಿಸಿ, ಮದುವೆ ಮುರಿದುಕೊಂಡು ಹೋಗಿದ್ದಾರೆ. ಇದನ್ನೂ ಓದಿ: ಮಿಲ್ಕಿ ವೇಯಲ್ಲಿ 18 ನಿಮಿಷಗಳಿಗೊಮ್ಮೆ ಸ್ಫೋಟವಾಗುವ ವಸ್ತು ಪತ್ತೆ

    ಮದುವೆ ಮಂಟಪದವರೆಗೆ ಬಂದು ಮುರಿದುಕೊಂಡು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಕೆಲವು ದಿನಗಳ ಹಿಂದೆ ತಮಿಳುನಾಡಿನ ಕಡಲೂರಿನಲ್ಲಿ, ಸೋದರ ಸಂಬಂಧಿಯೊಂದಿಗೆ ವಧು ನೃತ್ಯ ಮಾಡಿದ್ದಕ್ಕಾಗಿ ವರನು ಆಕೆಯ ಕೆನ್ನೆಗೆ ಹೊಡೆದಿದ್ದನು, ನಂತರ ಈ ವಿಚಾರವಾಗಿ ಕೋಪಗೊಂಡ ವಧು ಅದೇ ಮುಹೂರ್ತದಲ್ಲಿ ಇನ್ನೊಬ್ಬನನ್ನು ಮದುವೆಯಾಗಿದ್ದಳು.

  • ಮುಚ್ಚಿದ ದೇಗುಲದ ಮುಂದಿನ ರಸ್ತೆಯಲ್ಲೇ 91 ಜೋಡಿ ವಿವಾಹ!

    ಮುಚ್ಚಿದ ದೇಗುಲದ ಮುಂದಿನ ರಸ್ತೆಯಲ್ಲೇ 91 ಜೋಡಿ ವಿವಾಹ!

    ಚೆನ್ನೈ: ಕೋವಿಡ್ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್‍ಡೌನ್ ನಡುವೆಯೂ ತಿರುವಂತಿಪುರಂ ಶ್ರೀ ದೇವನಾಥಸ್ವಾಮಿ ದೇಗುಲದ ಹೊರಗೆ 91 ಜೋಡಿ ದಾಂಪತ್ಯ ಬದುಕಿಗೆ ಕಾಲಿಟ್ಟಿದೆ.

    ಸೋಂಕು ನಿಯಂತ್ರಣ ಕ್ರಮವಾಗಿ ಸರ್ಕಾರ ವಾರಾಂತ್ಯ ಲಾಕ್‍ಡೌನ್ ಜಾರಿಗೊಳಿಸಿದೆ. ಹೀಗಾಗಿ ಭಾನುವಾರ ದೇಗುಲವನ್ನು ಬಂದ್ ಮಾಡಲಾಗಿತ್ತು. ಆದರೆ ಶುಭ ಮುಹೂರ್ತವಿದ್ದ ಕಾರಣ ಅರ್ಚಕರು ದೇಗುಲದ ಹೊರಗಿನ ರಸ್ತೆಯಲ್ಲಿಯೇ ವಿವಾಹ ನಡೆಸಿಕೊಟ್ಟರು ಎಂದು ದೇಗುಲದ ಆಡಳಿತ ಮಂಡಳಿ ಅಧಿಕಾರಿ ಎ.ವೀರಬತೀರನ್ ಮತ್ತು ಕಾರ್ಯದರ್ಶಿ ರತೀನಾ ಸಭಾಪತಿ ಅವರು ತಿಳಿಸಿದರು. ಇದನ್ನೂ ಓದಿ: ಎರಡೂ ಡೋಸ್‌ ಲಸಿಕೆ ಪಡೆದ ಪ್ರಯಾಣಿಕರಿಗೆ ಕೋವಿಡ್‌ ಪರೀಕ್ಷೆ ಕಡ್ಡಾಯವಲ್ಲ: ಬ್ರಿಟನ್‌ ಪ್ರಧಾನಿ

    ಶುಭ ಮುಹೂರ್ತವಿದ್ದ ಕಾರಣ 110 ಜೋಡಿ ಮದುವೆಗೆ ನೋಂದಣಿ ಮಾಡಿಸಿದ್ದರು. ಬೆಳಗ್ಗೆ 4.30ರಿಂದ 11ರ ನಡುವಿನ ಅವಧಿಯಲ್ಲಿ ವಿವಾಹ ನೆರವೇರಿತು. ವಿಷ್ಣುವಿನ ಈ ದೇವಸ್ಥಾನದಲ್ಲಿ ಮದುವೆಯಾದರೆ ಒಳ್ಳೆಯದು ಎಂಬ ನಂಬಿಕೆಯಿದೆ. ವಿವಿಧ ಭಾಗಗಳ ಜನರು ಬಂದು ಇಲ್ಲಿ ಮದುವೆಯಾಗುತ್ತಾರೆ. ದೇಗುಲದ ಸಭಾಂಗಣದಲ್ಲಿ ಒಟ್ಟಿಗೆ 40 ಜೋಡಿ ವಿವಾಹವಾಗಲು ಅವಕಾಶವಿದೆ. ದೇಗುಲ ತೆರೆದಿರುವ ಸಾಮಾನ್ಯ ದಿನಗಳಲ್ಲಿ ಮದುವೆಯಾಗುವ ಜೋಡಿಗಳಿಗೆ ಯಾವುದೇ ಮಿತಿ ಇಲ್ಲ. ತಮಿಳುನಾಡಿನಲ್ಲಿ ಹೊಸದಾಗಿ 30,850 ಕೊರೊನಾ ಪ್ರಕರಣ ದೃಢಪಟ್ಟಿವೆ. ಇದನ್ನೂ ಓದಿ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

  • ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

    ಡ್ಯಾನ್ಸ್ ಮಾಡಿದ್ದಕ್ಕೆ ವರ ಕೆನ್ನೆಗೆ ಹೊಡೆದನೆಂದು ಬೇರೊಬ್ಬನ ವರಿಸಿದ ವಧು!

    ಚೆನ್ನೈ: ಆರತಕ್ಷತೆಯ ವೇದಿಕೆಯಲ್ಲಿ ಡಾನ್ಸ್ ಮಾಡಿದ ವಧುವಿ ಕೆನ್ನೆಗೆ ವರ ಕಪಾಳಮೋಕ್ಷ ಮಾಡಿದ್ದಾನೆ. ಈ ಕುರಿತಾಗಿ ಸಿಟ್ಟಿಗೆದ್ದ ವಧು ಮದುವೆಯನ್ನು ಕ್ಯಾನ್ಸಲ್ ಮಾಡಿಕೊಂಡು ಹೋಗಿರುವ ಘಟನೆಯೊಂದು ನಡೆದಿದೆ.

    ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಪ್ರದೇಶದಲ್ಲಿ ಇಂಜಿನಿಯರ್ ವರನೊಂದಿಗೆ ಸ್ನಾತಕೋತ್ತರ ಪದವೀಧರೆಯ ಮದುವೆ ಆಗುತ್ತಿದ್ದರು. ಜನವರಿ 20ರಂದು ನಿಶ್ವಯವಾಗಿತ್ತು. ವಿವಾಹದ ಹಿಂದಿನ ದಿನ ಅಂದರೆ ಆರತಕ್ಷತೆಯಲ್ಲಿ ಎರಡೂ ಕುಟುಂಬದವರು ಸಂಭ್ರಮದಲ್ಲಿ ಮುಳುಗಿರುತ್ತಾರೆ. ಆದರೆ ವಧು, ವರ ಮಧ್ಯೆ ನಡೆದ ಜಗಳ ಮದುವೆಯನ್ನು ಮುರಿದು ಕೊಳ್ಳುವಂತಾಗಿದೆ. ಇದನ್ನೂ ಓದಿ:   ಉದ್ದೇಶಪೂರ್ವಕವಾಗಿಯೇ ಕೋವಿಡ್ ಸೋಂಕು ತಗುಲಿಸಿಕೊಂಡು ಗಾಯಕಿ ನಿಧನ

    ವಧು ಸ್ನೇಹಿತರು, ಸಂಬಂಧಿಕರೊಂದಿಗೆ ವೇದಿಕೆಯ ಕೆಳಗೆ ಡಿಜೆ ಹಾಡಿಗೆ ಡ್ಯಾನ್ಸ್ ಮಾಡುತ್ತಿರುತ್ತಾಳೆ. ಮದುಮಗನು ಆಕೆಗೆ ನೃತ್ಯ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದಾನೆ. ಆಕೆಯನ್ನು ವೇದಿಕೆಯ ಮೇಲೆ ಕರೆದು ಕಪಾಳಮೋಕ್ಷ ಮಾಡಿದ್ದಾನೆ. ಈ ವಿಚಾರವಾಗಿ ಬೇಸರ ಗೊಂಡ ವಧು ಮದುವೆ ಬೇಡಾ ಎಂದು ಕಲ್ಯಾಣ ಮಂಟಪದಿಂದ ಹೊರಗೆ ಹೋಗಿದ್ದಾಳೆ. ಅವಳ ನಿರ್ಧಾರಕ್ಕೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ. ಬಳಿಕ ಅದೇ ಮುಹೂರ್ತದಲ್ಲಿ ಆಕೆಯ ಸಂಬಂಧಿ ಯುವಕನೊಬ್ಬನ ಜೊತೆ ಪೋಷಕರು ದೇವಸ್ಥಾನದಲ್ಲಿ ಮಗಳ ವಿವಾಹ ಮಾಡಿದ್ದಾರೆ. ಇದನ್ನೂ ಓದಿ: ಮಾವನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಅಪರ್ಣಾ ಯಾದವ್

  • ಗೂಗಲ್ ಮೀಟ್‍ನಲ್ಲಿ ಮದುವೆ – ಝೊಮ್ಯಾಟೊ ಊಟ

    ಗೂಗಲ್ ಮೀಟ್‍ನಲ್ಲಿ ಮದುವೆ – ಝೊಮ್ಯಾಟೊ ಊಟ

    ಕೋಲ್ಕತ್ತಾ: ಕೊರೊನಾ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಎಷ್ಟೋ ಮದುವೆ, ಸಭೆ, ಸಮಾರಂಭಗಳು ಮುಂದೂಡಲಾಗಿದೆ. ಆದರೆ ಇಲ್ಲೋಂದು ಜೋಡಿಯು  ಅದ್ದೂರಿಯಾಗಿ ಮದವೆ ಆಗಿ ಕುಟುಂಬಸ್ಥರಿಗೆ ಊಟವನ್ನು ಹಾಕಿಸಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

    ಸಂದೀಪನ್ ಹಾಗೂ ಅಧಿತಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಿಗೆ 200 ಜನರ ಮಿತಿಯನ್ನು ನಿಗದಿಪಡಿಸಿದೆ. ಈ ಜೋಡಿ ಇದೇ ಜನವರ 24ರಂದು ಹಸೆಮಣೆ ಏರಲು ನಿರ್ಧರಿಸಿದ್ದಾರೆ ಗೂಗಲ್ ಮೀಟ್ ಮೂಲಕ ಸಂಬಂಧಿಕರನ್ನು ಆಹ್ವಾನಿಸಿ, ಊಟವನ್ನು ಝೊಮ್ಯಾಟೊ ಮೂಲಕ ಅವರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.  ಇದನ್ನೂ ಓದಿ: ಕ್ಯೂನಲ್ಲಿ ನಿಂತೆ 16 ಸಾವಿರ ರೂಪಾಯಿ ಸಂಪಾದಿಸುತ್ತಾನೆ

    ಮದುವೆಯ ಕುರಿತಾಗಿ ಖಾಸಗಿ ವಾಹಿನಿ ಜೊತೆಗೆ ಮಾತನಾಡಿದ ವರ ಸಂದೀಪ ಕಳೆದ ವರ್ಷವೇ ಮದುವೆಯಾಗಲು ನಿರ್ಧರಿಸಿದ್ದೆವು. ಈ ಬಾರಿಯೂ ಕೊರೊನಾ ಕಾಡುತ್ತಿದೆ. ಹೀಗಾಗಿ ವರ್ಚುವಲ್ ಮೂಲಕ ಮದುವೆಯಾಗಲು ನಿರ್ಧರಿಸದ್ದೇವೆ. ಮದುವೆಗೆ 450 ಜನರಿಗೆ ಗೂಗಲ್ ಮೀಟ್ ಲಿಂಕ್‍ಅನ್ನು ಕಳುಹಿಸಲಾಗುವುದು. ಊಟವನ್ನು ಝೊಮ್ಯಾಟೊ ಮೂಲಕ ಸಂಬಂಧಿಕರ ಮನೆಗಳಿಗೇ ತಲುಪಿಸುವ ವ್ಯಸವಸ್ಥೆ ಮಾಡಲಾಗಿದೆ ಮದುವೆಯನ್ನು ಗೂಗಲ್ ಮೀಟ್‍ನಲ್ಲಿ ಪ್ರಸಾರ ಮಾಡಲು ಅಧಿತಿ ಹಾಗೂ ಸಂದೀಪ್ ಟೆಕ್ನಿಕಲ್ ಟೀಮ್ ಅನ್ನು ನೇಮಿಸಿದ್ದಾರೆ ಎಂದು ಮದುವೆ ಕುರಿತಾಗಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಸಲಿಂಗ ಸಂಗಾತಿ ಜೊತೆಗೆ ವಧು ಎಸ್ಕೇಪ್

     

  • ಬಣ್ಣದ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆ

    ಬಣ್ಣದ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆ

    ಸ್ಯಾಕ್ರಮೆಂಟೊ: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಯಾರ ಹಣೆಯ ಬರಹದಲ್ಲಿ ಯಾರು, ಯಾರ ಬಾಳಲ್ಲಿ ಯಾರು ಬರಬೇಕು ಎಂದು ಬರೆದಿರುತ್ತದೆ ಎಂದು ಹಿರಿಯರು ಹೇಳುತ್ತಾರೆ. ಒಂದು ಹೆಣ್ಣಿಗೆ, ಗಂಡು ಎಂದು ದೇವರು ಬರೆದಿರುತ್ತಾನೆ. ಆದರೆ ಇಲ್ಲೊಬ್ಬ ಮಹಿಳೆ ತಾನು ತುಂಬಾ ಇಷ್ಟಪಡುವ ಬಣ್ಣದ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾಳೆ. ಈ ವಿಚಾರ ಇದೀಗ ಸಖತ್ ಸುದ್ದಿಯಲ್ಲಿದೆ.

    ಕ್ಯಾಲಿಫೋರ್ನಿಯಾದ ಕಿಟನ್ ಕೇಸೆರಾ ಎನ್ನುವ ಮಹಿಳೆಗೆ ಗುಲಾಬಿ ಬಣ್ಣ ಕಂಡರೆ ಎಲ್ಲಿಲ್ಲದ ಪ್ರೀತಿ. 40 ವರ್ಷಗಳ ಡೇಟಿಂಗ್ ನಂತರ ಮದುವೆಯಾಗಿದ್ದಾರೆ. ಈ ಬಣ್ಣದ ಜೊತೆಗೆ ತುಂಬಾ ಆತ್ಮೀಯವಾದ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ಹೀಗಾಗಿ ಬಣ್ಣದ ಜೊತೆಗೆ ಮದುವೆಯಾಗಿದ್ದಾರೆ. ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಪರ್ಷಿಯನ್ ಬೆಕ್ಕುಗಳಿಗೆ ಸೀಮಂತ ಮಾಡಿ ಸುದ್ದಿಯಾದ ಉದ್ಯಮಿ!

     

    View this post on Instagram

     

    A post shared by Kitten Kay Sera (@kittenkaysera)

    ನಾನು ಪಿಂಕ್ ಬಣ್ಣದ ಜೊತೆಗೆ ವಿವಾಹವಾಗಿದ್ದೇನೆ. 40 ವರ್ಷಗಳ ಡೇಟಿಂಗ್ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದೇನೆ. ನನಗೆ ಗುಲಾಬಿ ಬಣ್ಣ ಎಂದರೆ ಮೊದಲಿನಿಂದ ಪ್ರೀತಿ, ಆದರೆ ಯಾಕೆ ಈ ಬಣ್ಣ ಇಷ್ಟೊಂದು ಪ್ರೀತಿ ಎಂದು ನನಗೆ ಗೊತ್ತಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: BBMP ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ

    ಕಿಟನ್ ಕೇಸೆರಾ ಇತ್ತೀಚೆಗೆ ತಮ್ಮ ನೆಚ್ಚಿನ ಗುಲಾಬಿ ಬಣ್ಣದ ಜೊತೆಗೆ ಲಾಸ್ ವೇಗಾಸ್‍ನಲ್ಲಿ ವಿವಾಹವಾಗಿದ್ದಾರೆ. ಇವರ ಮದುವೆಯಲ್ಲಿ ಬಟ್ಟೆಯಿಂದ ಹಿಡಿದು ಕೇಕ್‍ವರೆಗೂ ಎಲ್ಲದರ ಬಣ್ಣವೂ ಪಿಂಕ್ ಆಗಿರುವುದು ವಿಶೇಷವಾಗಿತ್ತು. ತಮ್ಮ ವಿವಾಹವನ್ನು ಗುಲಾಬಿ ಬಣ್ಣದ ಗೌನ್, ಗುಲಾಬಿ ಬಣ್ಣದ ಕೋಟ್ ಮತ್ತು ಗುಲಾಬಿ ಕಿರೀಟವನ್ನು ಧರಿಸಿದ್ದರು. ಕೂದಲಿಗೆ ಕೂಡ ಪಿಂಕ್ ಬಣ್ಣವನ್ನು ಹಾಕಿಕೊಂಡಿದ್ದಾರೆ. ಮದುವೆ ಅಲಂಕಾರ ಸಂಪೂರ್ಣವಾಗಿ ಗುಲಾಬಿ ಬಣ್ಣದಿಂದ ತುಂಬಿತ್ತು.

  • ಸ್ಕೇಲಿನಲ್ಲಿ ಮದುವೆ ಊಟದ ಮೆನು- ನೆಟ್ಟಿಗರು ಹೇಳಿದ್ದೇನು?

    ಸ್ಕೇಲಿನಲ್ಲಿ ಮದುವೆ ಊಟದ ಮೆನು- ನೆಟ್ಟಿಗರು ಹೇಳಿದ್ದೇನು?

    ದುವೆ ಮನೆಯ ಊಟ ಎಂದರೆ ಎಲ್ಲರಿಗೂ ಇಷ್ಟ. ತರಹೇವಾರಿ ಸಿಹಿತಿಂಡಿಗಳು ಸವಿಯಲು ಸಿಗುತ್ತವೆ. ಇತ್ತೀಚೆಗೆ ಮದುವೆಯನ್ನು ವಿಶೇಷವಾಗಿ ಮಾಡಬೇಕು, ವಿಶೇಷವಾಗಿ ಕಾಣಿಸಿಕೊಳ್ಳಬೇಕು ಎಂದು ವಧು, ವರರು ಪ್ರಯತ್ನಿಸುತ್ತಾರೆ. ಇಲ್ಲೊಂದು ಕುಟುಂಬ ಮರದ ಸ್ಕೇಲ್‍ನಲ್ಲಿ ಮದುವೆಯ ಊಟದ ಮೆನು ಬರೆಸಿರುವುದು ಸಖತ್ ವೈರಲ್ ಆಗಿದೆ.

    2013ರಲ್ಲಿ ನಡೆದ ಬೆಂಗಾಲಿ ಮದುವೆಯೊಂದರ ಊಟದ ಮೆನು ಕಾರ್ಡ್ ಇದಾಗಿದೆ.  ಸುಶ್ಮಿತಾ ಹಾಗೂ ಅನಿಮೇಶ್ ಅವರ ಮದುವೆಯಲ್ಲಿ ಈ ರೀತಿ ಮೆನು ಕಾರ್ಡ್ ತಯಾರಿಸಲಾಗಿದೆ. ಇದನ್ನೂ ಓದಿ: ಹಸುಗೂಸನ್ನು ಹೊತ್ತೊಯ್ದು ವಾಟರ್ ಟ್ಯಾಂಕ್‍ಗೆ ಹಾಕಿದ ಖತರ್ನಾಕ್ ಕೋತಿಗಳು

    ಮೆನು ಕಾರ್ಡ್‍ನಲ್ಲಿ ಏನಿದೆ?: 30 ಸೆಂ ಮೀ ಉದ್ದದ ಸ್ಕೇಲ್‍ನಲ್ಲಿ ಊಟದ ಮೆನುವನ್ನು ಬರೆಯಲಾಗಿದೆ. ಮೆನುವುನಲ್ಲಿ ಫ್ರೈಡ್ ರೈಸ್, ಮಟನ್ ಮಸಾಲಾ, ಫಿಶ್ ಕಲಿಯಾ ಸೇರದಂತೆ ವಿವಿಧ ರೀತಿಯ ಖಾದ್ಯಗಳನ್ನು ಪಟ್ಟಿ ಮಾಡಲಾಗಿದೆ. ಸ್ಟೀರಿಯೋ ಟೈಪ್‍ರೈಟರ್ ಎನ್ನುವ ಟ್ವಿಟರ್ ಖಾತೆಯಲ್ಲಿ ಈ ಸ್ಕೆಲ್ ಮೆನುವಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಆಹಾರ ತಿಂದಿದ್ದಕ್ಕೆ ಇದೇ ಸ್ಕೇಲಿನಿಂದ ತಿರುಗಿಸಿ ಹೊಡೆಯಬೇಡಿ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.  ಇದನ್ನೂ ಓದಿ: ಪಂಜಾಬ್‌ ಚುನಾವಣೆ – ನಟ ಸೋನು ಸೂದ್‌ ಸಹೋದರಿ ಕಾಂಗ್ರೆಸ್‌ ಸೇರ್ಪಡೆ

  • ತಂದೆ ಬರೆದ ಪತ್ರವನ್ನೇ ವೆಡ್ಡಿಂಗ್ ಡ್ರೆಸ್‌ಗೆ ಡಿಸೈನ್ ಮಾಡಿಕೊಂಡ ವಧು

    ತಂದೆ ಬರೆದ ಪತ್ರವನ್ನೇ ವೆಡ್ಡಿಂಗ್ ಡ್ರೆಸ್‌ಗೆ ಡಿಸೈನ್ ಮಾಡಿಕೊಂಡ ವಧು

    ಜೈಪುರ: ಮದುವೆಗೆ ವಧು, ವರ ಹಾಕುವ ಡ್ರೆಸ್, ಆಭರಣಗಳನ್ನು ಡಿಸೈನರ್ ಬಳಿಯಲ್ಲಿ ವಿಶೇಷವಾಗಿ ಮಾಡಿಸುತ್ತಾರೆ. ಆದರೆ ಈ ಮದುವೆಯಲ್ಲಿ ವಧು ತೊಟ್ಟಿರುವ ಡ್ರೆಸ್‌ ಸಖತ್‌ ಸ್ಟೆಷಲ್‌ ಆಗಿದೆ.  ವಧು, ತಂದೆ ಬರೆದಿರುವ ಸಾಲುಗಳನ್ನು ಮದುವೆ ದಿನ ಧರಿಸುವ ದುಪಟ್ಟಕ್ಕೆ ಕಸೂತಿ ಮಾಡಲಾಗಿದೆ.

    ವಧು ಸುವನ್ಯಾ, ಇತ್ತೀಚೆಗೆ ರಾಜಸ್ಥಾನದಲ್ಲಿ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಸಿಂಪಲ್ ಆಗಿರುವ ಉಡುಗೆಯನ್ನು ತೊಟ್ಟುಕೊಂಡಿದ್ದಾರೆ. ವಧುವಿನ ಲೆಹೆಂಗಾವನ್ನು ಡಿಸೈನರ್ ಸುನೈನಾ ಖೇರಾ ವಿನ್ಯಾಸಗೊಳಿಸಿದ್ದಾರೆ. ಸುವನ್ಯಾ ತಂದೆ ಸಾವನ್ನಪ್ಪಿದ್ದಾರೆ. ಆದರೆ ಅವರು ಎಂದಿಗೂ ಜೊತೆಗೆ ಇರುತ್ತಾರೆ ಎನ್ನುವ ಸಂದೇಶವವನ್ನು ವಧು ವಿಭಿನ್ನವಾಗಿ ಸಾರಿದ್ದಾಳೆ. ಇದನ್ನೂ ಓದಿ: ಆಸ್ಕರ್‌ ವಿಜೇತ ಮೊದಲ ಕಪ್ಪುವರ್ಣೀಯ ಸಿಡ್ನಿ ಪೊಯ್ಟಿಯರ್‌ ನಿಧನ

     

    View this post on Instagram

     

    A post shared by Shaadi Ek Baar (@shaadiekbaar)

    ವೀಡಿಯೋದಲ್ಲಿ ಏನಿದೆ?: ಸುವನ್ಯಾ ತೊಟ್ಟಿರುವ ಕೆಂಪು ಬಣ್ಣದ ಲೆಹೆಂಗಾ ಸುಂದರವಾಗಿದೆ. ಲೆಹೆಂಗಾದೊಂದಿಗೆ ನೆಟ್ ರೀತಿ ಕಾಣುವ ಬಟ್ಟೆಯಿಂದ ಮಾಡಿರುವ ಕೆಂಪು ದುಪಟ್ಟ ಧರಿಸಿದ್ದಾರೆ. ಆದರೆ ಇದರಲ್ಲೊಂದು ವಿಶೇಷತೆ ಇದೆ. ಸುವನ್ಯಾ ತಂದೆ ಜನ್ಮದಿನದಂದು ತನಗಾಗಿ ಬರೆದ ಪತ್ರದಲ್ಲಿನ ಸಾಲುಗಳನ್ನು ಮದುವೆ ದಿನ ಧರಿಸುವ ದುಪಟ್ಟದಲ್ಲಿ ಕಸೂತಿ ಮೂಲಕ ಬಳಸಿಕೊಂಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಂದೆ, ಮಗಳ ಬಾಂಧವ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ಇದನ್ನೂ ಓದಿ: ಡ್ರ್ಯಾಗನ್ ಫ್ರೂಟ್‍ನಲ್ಲಿ ಕೊರೊನಾ!

  • ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ವಧು ಬೇಕಾಗಿದ್ದಾಳೆ- ರಸ್ತೆ ಬದಿ ಜಾಹೀರಾತು ಹಾಕಿದ ವರ

    ಲಂಡನ್: ಮದುವೆಯಾಗಲು ವಧು, ವರ ಸಾಕಷ್ಟು ಕಷ್ಟ ಪಟ್ಟಿರುವ ಎಷ್ಟೋ ಉದಾಹರಣೆಗಳು ಇವೆ. ಅದರೆ ಇಲ್ಲೊಬ್ಬ ಯುವಕ, ವಧು ಹುಡುಕಾಟಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿ ಅಚ್ಚರಿ ಮೂಡಿಸಿದ್ದಾನೆ.

    ಮುಹಮ್ಮದ್ ಮಲಿಕ್, ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಜಾಹೀರಾತು ನೀಡಿದ್ದಾನೆ. ಅಷ್ಟೇ ಅಲ್ಲದೇ ಆ ಜಾಹೀರಾತಿನಲ್ಲಿ ಅವನೇ ಕಾಣಿಸಿಕೊಂಡಿದ್ದು, ಸಂಗಾತಿ ಹುಡುಕಾಟದಲ್ಲಿ ತೊಡಗಿಕೊಂಡಿದ್ದಾನೆ ಎಂದು ಬರೆಯಲಾಗಿದೆ. 29ರ ಹರೆಯದ ಬರ್ಮಿಂಗ್‍ ಹ್ಯಾಮ್ ಮೂಲದ ಈ ಯುವಕ ಸದ್ಯ ಮದುವೆಯಾಗಲು ವಧು ಹುಡುಕಾಟದಲ್ಲಿ ಸಾಹಸ ಮಾಡುತ್ತಿದ್ದಾನೆ. ಇದನ್ನೂ ಓದಿ: ನನ್ನ ಹೆಸರು Kovid, ಆದ್ರೆ ನಾನು ವೈರಸ್ ಅಲ್ಲ: ಬೆಂಗಳೂರು ಉದ್ಯಮಿ

    ಜನಸಂಚಾರ ದಟ್ಟಣೆ ಇರೋ ಪ್ರದೇಶಗಳಲ್ಲಿ ಭಿತ್ತಿ ಚಿತ್ರ ಮೂಲಕ ನನಗೆ ಮದುವೆಯಾಗಲು ಕನ್ಯೆ ಬೇಕೆಂದು ವಿನಂತಿಸುತ್ತಿದ್ದಾನೆ.  ಜೊತೆಗೆ ಈ ಕುರಿತು ಅಗತ್ಯ ಮಾಹಿತಿ ಬೇಕಿದ್ದರೆ ನನ್ನ ಸಂಪರ್ಕಿಸಿ ಎಂದು ತನ್ನ ವೆಬ್‍ಸೈಟ್‍ನ್ನು ಕೂಡಾ ನಮೂದಿಸಿದ್ದಾನೆ. ಇದನ್ನೂ ಓದಿ: ವಯೋಮಿತಿ ಏರಿಕೆ ಭೀತಿ- ಮುಸ್ಲಿಮರು ತರಾತುರಿ ಲಗ್ನ

    ವಧುಗೆ ಕೆಲವು ಕಂಡಿಷನ್ಸ್ ಕೂಡಾ ಹಾಕಿದ್ದಾನೆ. ಈ ಬೃಹತ್‌ ಜಾಹೀರಾತುಗಳನ್ನು ಕಂಡ ನೆಟ್ಟಿಗರು ಯುವಕನ ಕ್ರಿಯೇಟಿವ್ ಪ್ಲ್ಯಾನ್‍ಗೆ ಫಿದಾ ಆಗಿದ್ದು, ಕಾಮೆಂಟ್‍ಗಳ ಸುರಿಮಳೆಗೈದಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಗರ್ಭಿಣಿ ಅಂತಾ ಸುಳ್ಳಿ ಹೇಳಿ ಮಗುವಿಗೆ ಜನ್ಮ ಕೊಟ್ಟಳು- ಆದರೆ ಕಂದಮ್ಮ ಇಲ್ಲ