Tag: wedding

  • ಕಾಂಗ್ರೆಸ್ ಮುಖಂಡನ ಮಗನ ಮದುವೆಯ ಊಟ ಸೇವಿಸಿ 1,200 ಮಂದಿ ಅಸ್ವಸ್ಥ

    ಕಾಂಗ್ರೆಸ್ ಮುಖಂಡನ ಮಗನ ಮದುವೆಯ ಊಟ ಸೇವಿಸಿ 1,200 ಮಂದಿ ಅಸ್ವಸ್ಥ

    ಗಾಂಧೀನಗರ: ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನ ವಿವಾಹದಲ್ಲಿ ಆಹಾರ ಸೇವಿಸಿದ ಬಳಿಕ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುಜರಾತ್‍ನ ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.

    ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮದುವೆಯಲ್ಲಿ ಆಹಾರ ಸೇವಿಸಿದ ನಂತರ 1,200 ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಇದೀಗ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೆಹ್ಸಾನಾ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥರಾಜ್‍ಸಿನ್ಹ್ ಗೋಹಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿ – ಕಲೆ ಮೂಲಕ ಸುದರ್ಶನ್ ಪಟ್ನಾಯಕ್ ಮನವಿ

    POLICE JEEP

    ಊಟದ ಬಳಿಕ ಜನರು ವಾಂತಿ ಮಾಡಲು ಪ್ರಾರಂಭಿಸಿದರು. ನಂತರ ಅವರನ್ನು ವಿಸ್ನಗರ, ಮೆಹ್ಸಾನಾ ಮತ್ತು ವಡ್ನಗರದ ವಿವಿಧ ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಇದೀಗ ಮದುವೆಯಲ್ಲಿ ನೀಡಲಾದ ಆಹಾರದ ಮಾದರಿಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಆಹಾರ ಮತ್ತು ಔಷಧ ಇಲಾಖೆಯಿಂದ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಗನಿಗಾಗಿ 1,400 ಕಿ.ಮೀ ಸ್ಕೂಟರ್ ಓಡಿಸಿದ್ದ ತಾಯಿಗೆ ಟೆನ್ಶನ್ – ಮೋದಿಗೆ ಪತ್ರ

    ಸಾವಳ ಗ್ರಾಮದಲ್ಲಿ ನಡೆದ ಸ್ಥಳೀಯ ಕಾಂಗ್ರೆಸ್ ಮುಖಂಡರೊಬ್ಬರ ಮಗನ ಮದುವೆ ಸಮಾರಂಭದಲ್ಲಿ ಹಲವಾರು ಜನರು ಪಾಲ್ಗೊಂಡಿದ್ದರು. ಕಾರ್ಯಕ್ರದಲ್ಲಿ ಮಾಂಸಾಹಾರ ಮೆನು ಕೂಡ ಇತ್ತು. ಸದ್ಯ ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ವಿಸ್ನಗರ ಗ್ರಾಮಾಂತರ ಪೊಲೀಸರು ತಿಳಿಸಿದ್ದಾರೆ.

  • ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಉಕ್ರೇನ್ ವಧು ಜೊತೆ ಹೈದರಾಬಾದ್ ವರನ ಮದುವೆ- ಆರಕ್ಷತೆಯಲ್ಲಿ ಉಕ್ರೇನ್ ರಕ್ಷಣೆಗೆ ಪ್ರಾರ್ಥಿಸಿದ ನವದಂಪತಿ

    ಹೈದರಾಬಾದ್: ಉಕ್ರೇನ್ ವಧು ಜೊತೆ ಹೈದರಾಬಾದ್ ವರ ಮದುವೆಯಾಗಿದ್ದಾರೆ. ಆರಕ್ಷತೆ ಸಮಾರಂಭದ ವೇಳೆ ಅರ್ಚಕರು ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳ್ಳಲಿ ಎಂದು ಪ್ರಾರ್ಥಿಸಿದ್ದಾರೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲಿ ಹರಿದಾಡುತ್ತಿದೆ.

    ಪ್ರತೀಕ್ ಮತ್ತು ಲ್ಯುಬೊವ್ ಉಕ್ರೇನ್‍ನಲ್ಲಿ ಮದುವೆಯಾಗಿದ್ದರು. ಆರಕ್ಷತೆಗಾಗಿ ಹೈದರಾಬಾದ್‍ಗೆ ಬಂದ ಮರುದಿನವೇ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಘೋಷಣೆ ಮಾಡಿತ್ತು. ಹೀಗಾಗಿ ವಧುವಿನ ಆತ್ಮಸ್ಥೈರ್ಯ ಕುಂದದಂತೆ ನೋಡಿಕೊಂಡ ಪ್ರತೀಕ್ ಪೋಷಕರು, ಆಕೆಗೆ ಮಾನಸಿಕವಾಗಿ ಬೆಂಬಲ ನೀಡಿದರು.

    ಇತ್ತೀಚೆಗೆ ಹೈದರಾಬಾದ್‍ನಲ್ಲಿ ಉಕ್ರೇನಿಯನ್ ವಧು ಲ್ಯುಬೊವ್ ಮತ್ತು ಹೈದರಬಾದ್‍ನ ವರ ಪ್ರತೀಕ್ಷ್ ಮದುವೆ ಆರತಕ್ಷತೆ ಸಮಾರಂಭದಲ್ಲಿ, ಅರ್ಚಕ ರಂಗರಾಜನ್ ಭಾಗವಹಿಸಿದ್ದರು. ದೇವರ ವಿಶೇಷ ವಸ್ತ್ರಗಳನ್ನ ಮತ್ತು ಸ್ಮರಣಿಕೆಗಳನ್ನು ವಧು ವರರಿಗೆ ನೀಡಿ ಅವರಿಗೆ ದೀರ್ಘಾಯುಷ್ಯ ಮತ್ತು ಸಂತಾನಫಲ ಸಿಗಲಿ ಎಂದು ನವವಿವಾಹಿತರನ್ನು ಆಶೀರ್ವದಿಸಿದರು. ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧ ಅಂತ್ಯವಾಗಿ, ಕೂಡಲೇ ಶಾಂತಿ ನೆಲೆಸುವಂತಾಗಲಿ ಎಂದು ಚಿಲುಕೂರಿನ ಬಾಲಾಜಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು ಎಂದು ಹೇಳಿದ್ದಾರೆ. ಇದನ್ನೂ ಓದಿ: ಊಟ ತರಲು ನನ್ನ ಬಳಿ ದುಡ್ಡಿಲ್ಲ, ಸ್ವಲ್ಪ ಹಣ ಹಾಕು ಅಂದ ಅದೇ ನವೀನ್‍ನ ಕೊನೆ ಮಾತು: ಶ್ರೀಕಾಂತ್

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧ ಶೀಘ್ರ ಅಂತ್ಯಗೊಳ್ಳಲಿ ಎಂದು ಚಿಲುಕೂರು ವೆಂಕಟೇಶ್ವರ ಸ್ವಾಮಿಯಲ್ಲಿ ಪ್ರಾರ್ಥಿಸುತ್ತೇವೆ. ಯುದ್ಧವು ಪ್ರಪಂಚದಾದ್ಯಂತ ರಕ್ತಪಾತ ಮತ್ತು ದುರಂತಕ್ಕೆ ಕಾರಣವಾಯಿತು. ಕೋವಿಡ್‍ನ ದುರತದಿಂದ ಚೇತರಿಕೊಳ್ಳುವುದಕ್ಕೂ ಮುಂಚೆಯೇ ರಷ್ಯಾ ಉಕ್ರೇನ್ ಮೇಲೆ ದಾಳಿ ಆತಂಕವನ್ನ ಸೃಷ್ಟಿಸಿದೆ ಆದಷ್ಟು ಬೇಗ ಯುದ್ದ ಕೊನೆಯಾಗಲಿ ಎಂದು ಹೇಳಿದ್ದಾರೆ.

  • ಊಟ ಬಡಿಸುವುದು ತಡವಾಗಿದೆ ಮದುವೆ ಬೇಡ- ವರ ಮಂಟಪದಿಂದ ಎಸ್ಕೇಪ್

    ಊಟ ಬಡಿಸುವುದು ತಡವಾಗಿದೆ ಮದುವೆ ಬೇಡ- ವರ ಮಂಟಪದಿಂದ ಎಸ್ಕೇಪ್

    ಪಾಟ್ನಾ: ಮದುವೆ ಹೀಗೆ ಇರಬೇಕು ಎನ್ನುವ ಕಸನು ಎಲ್ಲರಲ್ಲಿಯೂ ಇರುತ್ತದೆ. ಸಂಭ್ರಮದಲ್ಲಿದ್ದ ಮನೆಯಲ್ಲಿ ಕೊಂಚ ವ್ಯತ್ಯಾಸವಾದರೂ ಮದುವೆ ಕ್ಯಾನ್ಸಲ್ ಮಾಡುವ ಮಟ್ಟಿಗೆ ಜಗಳವಾಗಿದ್ದು, ಮಾತ್ರವಲ್ಲದೇ ಮಂಟಪದಲ್ಲಿಯೇ ಮದುವೆ ಮುರಿದು ಬಿದ್ದಿರುವ ಎಷ್ಟೋ ಉದಾಹರಣೆಗಳು ನಮ್ಮ ಮುಂದೆ ಇವೆ. ಇಲ್ಲೊಬ್ಬ ವರ ಊಟ ಬಡಿಸುವುದು ತಡವಾಗಿದೆ ಎಂದು ಮದುವೆಯನ್ನು ಮುರಿದುಕೊಂಡು ಜಾಗಾ ಖಾಲಿ ಮಾಡಿರುವ ಘಟನೆ ನಡೆದಿದೆ.

    ವರನೊಬ್ಬ ತನ್ನ ಕುಟುಂಬಕ್ಕೆ ತಡವಾಗಿ ಊಟ ಬಡಿಸಿದ್ದಾರೆ ಎನ್ನುವ ಕಾರಣಕ್ಕೆ ಮದುವೆಯಾಗಲು ನಿರಾಕರಿಸಿದ್ದಾನೆ. ಈ ಘಟನೆಯು ಪುರ್ನಿಯಾದ ಮೊಹಾನಿ ಪಂಚಾಯತ್‍ನ ಬಟೌನಾ ಗ್ರಾಮದ ಈಸ್ವರಿ ಟೋಲಾದಲ್ಲಿ ನಡೆದಿದೆ. ಇದನ್ನೂ ಓದಿ:  ನಾಲ್ಕನೇ ಮಹಡಿಯಲ್ಲಿ ಕಿಟಕಿ ಸ್ವಚ್ಛಗೊಳಿಸ್ತಿದ್ದ ಮಹಿಳೆಯ ವೀಡಿಯೋ ಮಾಡಿದ ಪಕ್ಕದ್ಮನೆ ಆಂಟಿ!

    ನಡೆದಿದ್ದೇನು?: ವಿವಾಹ ವಿಧಿ ವಿಧಾನಗಳು ನಡೆಯುತ್ತಿದ್ದರಿಂದ ವರನ ಕುಟುಂಬದ ಸದಸ್ಯರಿಗೆ ಊಟ ಬಡಿಸಲು ತಡವಾಗಿದೆ. ಇದು ವರನ ತಂದೆಯನ್ನು ತುಂಬಾ ಕೆರಳಿಸಿತು, ಅವರು ಮದುವೆ ಸಮಾರಂಭದಲ್ಲಿ ನಾನು ಇರುವುದಿಲ್ಲ, ಮನೆಗೆ ಹೋಗುತ್ತೇನೆ ಎಂದು ಹೇಳುತ್ತ ಸಿಟ್ಟಾಗಿದ್ದಾರೆ. ಈ ವೇಳೆ ಸ್ಥಳೀಯರು ಹಾಗೂ ಪಂಚಾಯಿತಿಯವರು ಮಧ್ಯ ಪ್ರವೇಶಿಸಿ ಎರಡು ಕಡೆಯವರ ನಡುವೆ ಸಮಸ್ಯೆ ಬಗೆಹರಿಸಲು ಯತ್ನಿಸಿದರು. ಆದರೆ ಅಷ್ಟೊತ್ತಿಗಾಗಲೇ ವರನು ಮಂಟಪದಿಂದ ಎದ್ದು ಹೋಗಿದ್ದನು. ಹೀಗಾಗಿ ಮದುವೆಯನ್ನು ನಿಲ್ಲಿಸಬೇಕಾಯಿತು. ಇದನ್ನೂ ಓದಿ: 2 ವರ್ಷದ ಹಿಂದೆಯೇ 10 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದರು: ಮೃತನ ಸಂಬಂಧಿ ಹೇಳಿಕೆ

    ವರನ ತಂದೆ ವಧುವಿನ ಕುಟುಂಬಕ್ಕೆ ಮದುವೆಗೆ ಅಡುಗೆ ಮಾಡಲು ತಗಲುವ ವೆಚ್ಚ, ಬೈಕ್ ಮತ್ತು ವರನಿಗೆ ಪಡೆದ ಇತರ ಎಲ್ಲಾ ಉಡುಗೊರೆಗಳನ್ನು ವಾಪಸ್ ನೀಡಿದ್ದಾರೆ. ವಧುವಿನ ತಾಯಿ ಇದೀಗ ವರ ಮತ್ತು ಆತನ ತಂದೆ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿಲ್ ಅಂಬಾನಿ ಪುತ್ರ ಅನ್ಮೋಲ್ ಅಂಬಾನಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅನಿಲ್ ಅಂಬಾನಿ ಪುತ್ರ ಅನ್ಮೋಲ್ ಅಂಬಾನಿ

    ಮುಂಬೈ: ಅನಿಲ್ ಅಂಬಾನಿ ಅವರ ಪುತ್ರ ಜೈ ಅನ್ಮೋಲ್ ಅಂಬಾನಿ, ಕ್ರಿಶಾ ಶಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಮದುವೆ ಅದ್ಧೂರಿತಯಾಗಿ ನಡೆದಿದೆ.

    ಜೈ ಅನ್ಮೋಲ್ ಅಂಬಾನಿ ಭಾನುವಾರ ಸಂಜೆ ಮುಂಬೈನ ಕಫೆ ಪರೇಡ್‍ನಲ್ಲಿರುವ ಅವರ ಕುಟುಂಬದ ಮನೆಯಾದ ಸೀ ವಿಂಡ್‍ನಲ್ಲಿ ಕ್ರಿಶಾ ಶಾ ಅವರನ್ನು ವಿವಾಹವಾದರು. ವರ ಬಿಳಿ ಶೆರ್ವಾನಿ, ವಧು ಕೆಂಪು ಮತ್ತು ಚಿನ್ನದ ಬಣ್ಣದ ಲೆಹೆಂಗಾವನ್ನು ತೊಟ್ಟಿದ್ದರು. ವಧು, ವರ ಸಾಕಷ್ಟು ವಜ್ರದ ಆಭರಣಗಳನ್ನು ತೊಟ್ಟುಕೊಂಡಿದ್ದರು. ಅದ್ಧೂರಿಯಾಗಿ ಮದುವೆ ನೆರವೆರಿದೆ. ಅಂಬಾನಿ ಕುಟುಂಬ ಸ್ನೇಹಿತರು, ಗಣ್ಯರು, ಬಾಲಿವುಡ್ ಸೆಲೆಬ್ರೆಟಿಗಳು ಮದುವೆಯಲ್ಲಿ ಭಾಗವಹಿಸಿದ್ದರು. ಅಂಬಾನಿ ಕುಟುಂಬ ಸೋಮವಾರ ತಮ್ಮ ಮನೆಯಲ್ಲಿ  ಪಾರ್ಟಿಯನ್ನು ನೀಡಲಿದ್ದು, ಅಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಸೋಶಿಯಲ್ ಮೀಡಿಯಾದಲ್ಲಿ ನವವಿವಾಹಿತರಿಗೆ ಅಭಿನಂದನೆಗಳು ಮಹಾಪೂರವೇ ಹರಿದು ಬರುತ್ತಿದೆ. ಇದನ್ನೂ ಓದಿ: ಬಣ್ಣದ ಲೋಕಕ್ಕೆ ಕಾಲಿಟ್ಟ ಬಿ.ಎಸ್ ಯಡಿಯೂರಪ್ಪ

     

    View this post on Instagram

     

    A post shared by WeddingSutra.com (@weddingsutra)

    ಕ್ರಿಶಾ ಶಾ ಯಾರು?: ಮುಂಬೈನಲ್ಲಿ ಹುಟ್ಟಿ ಬೆಳೆದ ಕ್ರಿಶಾ ಸಾಮಾಜಿಕ ಕಾರ್ಯಕರ್ತೆ, ಉದ್ಯಮಿಯಾಗಿದ್ದಾರೆ. ಅಂತರಾಷ್ಟ್ರೀಯ ನೆಟ್‍ವರ್ಕಿಂಗ್‍ನಲ್ಲಿ ಪರಿಣತಿ ಪಡೆದುಕೊಂಡಿದ್ದಾರೆ. ಸಾಮಾಜಿಕ ನೆಟ್‍ವರ್ಕಿಂಗ್ ಕಂಪನಿಯಾದ ಡಿಸ್ಕೋದ ಸಂಸ್ಥಾಪಕರೂ ಕೂಡ ಆಗಿದ್ದಾರೆ.

     

    View this post on Instagram

     

    A post shared by CELEBRITYSHALA (@celebrityshala)

    ಕ್ರಿಶಾ ಲಂಡನ್‍ನಲ್ಲಿ ಕೆಲಸ ಮಾಡುತ್ತಿದ್ದರು. ನಂತರ ಉದ್ಯಮಿಯಾಗಲು ದೇಶಕ್ಕೆ ಮರಳಿದರು. ಕೋವಿಡ್‍ನಿಂದರ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಲು ಕ್ಯಾಂಪಿನ್ ಕೈಗೊಂಡರು. ಕ್ಯಾಲಿಪೋರ್ನಿಯಾ ವುಶ್ವವಿದ್ಯಾಲಯದ ರಾಜಕೀಯ ಅರ್ಥಶಾಸ್ತ್ರದಲ್ಲಿ ಪದವೀಧರರಾಗಿದ್ದಾರೆ. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‍ನಲ್ಲಿ ಉನ್ನತ ಶಿಕ್ಷಣವನ್ನು ಪಡೆದರು. ಸೋಶಿಯಲ್ ಪಾಲಿಸಿ ಮತ್ತು ಡೆವಲ್ಪಮೆಂಟ್ ವಿಷಯದಲ್ಲೂ ಪದವಿ ಪಡೆದುಕೊಂಡಿದ್ದಾರೆ.

  • 6 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲೇ ಸೊಸೆ ಕರೆ ತಂದ ಮಾವ

    6 ಲಕ್ಷ ಖರ್ಚು ಮಾಡಿ ಹೆಲಿಕಾಪ್ಟರ್‌ನಲ್ಲೇ ಸೊಸೆ ಕರೆ ತಂದ ಮಾವ

    ಜೈಪುರ: ಭರ್ಜರಿಯಾಗಿ ವಿವಾಹವಾಗುವುದು ಇಂದಿನ ವಧು, ವರರ ಕನಸಾಗಿರುತ್ತದೆ. ವಿವಾಹದ ನಂತರ ವಧುವನ್ನು ವರನ ಮನೆಗೆ ಕರೆದುಕೊಂಡು ಹೋಗುವುದು ಸಂಪ್ರದಾಯ. ಬಸ್, ಕಾರು ಹೀಗೆ ಅವರ ಅನೂಕೂಲಕ್ಕೆ ತಕ್ಕಂತೆ ವಧುವನ್ನು ಕರೆದುಕೊಂಡು ಹೋಗುತ್ತಾರೆ. ಆದರೆ ಇಲ್ಲೊಬ್ಬ ಮಾವ ತನ್ನ ಸೊಸೆಯನ್ನು ಹೆಲಿಕಾಪ್ಟರ್‌ನಲ್ಲಿ ಕರೆದುಕೊಂಡು ಬಂದಿದ್ದಾರೆ.

    ರಾಜಸ್ತಾನದ ಕರೌಲಿ ಜಿಲ್ಲೆಯ ಕ್ಯಾಮ್ರಿ ಗ್ರಾಮದ ನಿವಾಸಿ ವಿಜೇಂದರ್ ಸೈನಿ ತನ್ನ ಪತ್ನಿಯನ್ನು ಕರೆದುಕೊಂಡು ಹೋಗಲು ಹೆಲಿಕಪ್ಟರ್‌ನಲ್ಲಿ ಬಂದಿದ್ದಾರೆ. ಮದುವೆಯಾದ ನಂತರ ವರ ವಜೇಂದರ್ ಸೈನಿ ಹೆಲಿಕಾಪ್ಟರ್‌ನಲ್ಲಿ ವಧುವನ್ನು ಕರೆದುಕೊಂಡು ಭರತ್‍ಪುರ ಗ್ರಾಮಕ್ಕೆ ಬಂದಿಳಿದಿದ್ದಾರೆ. ಇದನ್ನೂ ಓದಿ:  ‘ಡ್ಯಾಡಿಸ್ ಏಂಜೆಲ್’ – ಆಲಿಯಾ ವಿರುದ್ಧ ಸಿಡಿದೆದ್ದ ತಲೈವಿ

    ವಿಜೇಂದರ್, ಖುಷ್ಬೂಅವರನ್ನು ವಿವಾಹವಾಗಿದ್ದಾರೆ. ವಿಜೇಂದರ್ ಅವರ ತಂದೆ ರಾಧೇಶ್ಯಾಮ್ ಸೈನಿ ಅವರು ಒಂದು ದಿನ ತಮ್ಮ ಕುಟುಂಬದ ಮಗುನೊಂದಿಗೆ ಆಟವಾಡುತ್ತಿದ್ದಾಗ ಮಗುವಿನ ಬಳಿ ಒಂದು ಚಿಕ್ಕ ಆಟಿಕೆಯ ಹೆಲಿಕಾಪ್ಟರ್ ಇತ್ತು. ಅಲ್ಲಿಯ ಗ್ರಾಮಸ್ಥರೊಬ್ಬರು ರಾಧೇಶ್ಯಾಮ್ ಅವರುನ್ನು ಗೇಲಿ ಮಾಡಿದ್ದಾರೆ. ನಿನ್ನ ಮಗನ ಮದುವೆಗೆ ಹೆಲಿಕಾಪ್ಟರ್ ತರುವಂತೆ ಹೇಳಿದ್ದಾರೆ. ಈ ಗೇಲಿಯಿಂದಾಗಿ ವಿಜೇಂದರ್ ಅವರ ತಂದೆ ರಾಧೇಶ್ಯಾಮ್ ಸೈನಿ 6.5 ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ ಸೊಸೆಯನ್ನು ಕರೆದುಕೊಂಡು ಬಂದಿದ್ದಾರೆ.

  • ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ

    ಅನ್ಯ ಜಾತಿಯವನನ್ನು ಮದುವೆಯಾದ ಮಗಳು- ರುಬ್ಬುವ ಕಲ್ಲಿನಿಂದ ಚಚ್ಚಿ ಪತ್ನಿ, ಮಕ್ಕಳನ್ನು ಕೊಂದು ಪ್ರಾಣ ಬಿಟ್ಟ ತಂದೆ

    ಚೆನ್ನೈ: ಮಗಳು ಕೆಳಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎನ್ನುವ ಅವಮಾನ ತಾಳಲಾರದೆ ತಂದೆ ಮನೆಯವರನ್ನೆಲ್ಲ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯಲ್ಲಿ ನಡೆದಿದೆ.

    ಟೀ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣನ್ ತನ್ನ ಹಿರಿಯ ಮಗಳು ಪರಿಶಿಷ್ಟ ಜಾತಿಯ ವ್ಯಕ್ತಿಯನ್ನು ಮದುವೆಯಾಗಿದ್ದಕ್ಕಾಗಿ ಮನನೊಂದಿದ್ದರು. ಹೀಗಾಗಿ ಅವರು ತಮ್ಮ ಹೆಂಡತಿ, ಮಕ್ಕಳನ್ನು ಕೊಂದು, ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯವರ ವಿರೋಧದ ನಡುವೆ ಮದುವೆಯಾಗಿದ್ದ ಅವರ ಮಗಳು ಈಗ ಪತಿಯೊಂದಿಗೆ ವಾಸಿಸುತ್ತಿದ್ದು, ಸುರಕ್ಷಿತವಾಗಿದ್ದಾರೆ ಎಂದಿದ್ದಾರೆ ಎಂದು ನಾಗಪಟ್ಟಣಂ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಜಿ ಜವಾಹರ್ ಹೇಳಿದ್ದಾರೆ.  ಇದನ್ನೂ ಓದಿ:ಸಿಎಂ ಜಗನ್ ಆದೇಶಕ್ಕೆ ನಿಟ್ಟುಸಿರಿಟ್ಟ ತೆಲುಗು ಚಿತ್ರರಂಗ

    ನಡೆದಿದ್ದೇನು?: ಮಗಳ ಮದುವೆ ವಿಚಾರವಾಗಿ ನೊಂದ ಲಕ್ಷ್ಮಣನ್ ರಾತ್ರಿ ವೇಳೆ ರುಬ್ಬುವ ಕಲ್ಲನ್ನು ತೆಗೆದುಕೊಂಡು ತನ್ನ ಪತ್ನಿ ಭುವನೇಶ್ವರಿ ಮತ್ತು ಇಬ್ಬರು ಕಿರಿಯ ಪುತ್ರಿಯರಾದ ವಿನೋತಿನಿ ಮತ್ತು ಅಕ್ಷಯ ಅವರನ್ನು ಬರ್ಬರವಾಗಿ ಕೊಂದಿದ್ದಾರೆ. ನಂತರ ಲಕ್ಷ್ಮಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ಲಕ್ಷ್ಮಣನ್ ಟೀ ಅಂಗಡಿ ತೆರೆಯದ ಕಾರಣ ಅಕ್ಕಪಕ್ಕದ ಮನೆಯವರು ಬೆಳಗ್ಗೆ 7 ಗಂಟೆ ಸುಮಾರಿಗೆ ಅವರ ಮನೆ ಬಳಿ ಬಂದು ನೋಡಿದ್ದಾರೆ. ಆಗ ಲಕ್ಷ್ಮಣನ ಕುಟುಂಬಸ್ಥರು ಸಾವನ್ನಪ್ಪಿರುವುದು ತಿಳಿದಿದೆ.

    ಮಾಹಿತಿ ಪಡೆದ ಪೊಲೀಸರು ಶವಗಳನ್ನು ಶವಪರೀಕ್ಷೆಗಾಗಿ ನಾಗಪಟ್ಟಣಂ ಸರ್ಕಾರಿ ಜನರಲ್ ಆಸ್ಪತ್ರೆಗೆ ರವಾನಿಸಿದ್ದಾರೆ. ನಾಗಪಟ್ಟಣಂ ಜಿಲ್ಲೆಯ ಎಸ್‌ಪಿ ಜವಾಹರ್ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶಿಸಿದ್ದಾರೆ.

  • ಮದುವೆ ಮನೆಯಲ್ಲಿ ಬಾವಿಗೆ ಬಿದ್ದ ಅತಿಥಿಗಳು – 11 ಮಂದಿ ಸಾವು

    ಮದುವೆ ಮನೆಯಲ್ಲಿ ಬಾವಿಗೆ ಬಿದ್ದ ಅತಿಥಿಗಳು – 11 ಮಂದಿ ಸಾವು

    ಲಕ್ನೋ: ಮದುವೆ ಮನೆಯಲ್ಲಿ ಹಳೆಯ ಬಾವಿಯ ಸ್ಲ್ಯಾಬ್ ಕುಸಿತಗೊಂಡು ಮಹಿಳೆ, ಮಕ್ಕಳು ಸೇರಿ 11 ಮಂದಿ ಮರಣ ಹೊಂದಿರುವ ಘಟನೆ ಉತ್ತರ ಪ್ರದೇಶದ ಖುಷಿನಗರದಲ್ಲಿ ನಡೆದಿದೆ.

    ಸಾಂದರ್ಭಿಕ ಚಿತ್ರ

    ಮದುವೆ ಮನೆಯಲ್ಲಿ ಹಳೆಯ ಬಾವಿಗೆ ಸ್ಲ್ಯಾಬ್ ಅಳವಡಿಸಲಾಗಿತ್ತು. ಸ್ಲಾಬ್ ಮೇಲೆ ಕುಳಿತುಕೊಳ್ಳಲು ಕುರ್ಚಿಗಳನ್ನು ಹಾಕಿದ್ದರು. ಕುರ್ಚಿಗಳ ಮೇಲೆ ಮಹಿಳೆಯರು ಸೇರಿದಂತೆ ಮಕ್ಕಳು ಕುಳಿತುಗೊಂಡಿದ್ದರು. ಈ ವೇಳೆ ಭಾರ ಹೆಚ್ಚಾಗಿ ಸ್ಲ್ಯಾಬ್ ಏಕಾಏಕಿ ಕುಸಿತಗೊಂಡ ಪರಿಣಾಮ 11 ಮಂದಿ ಮರಣ ಹೊಂದಿರುವ ಬಗ್ಗೆ ವರದಿಯಾಗಿದೆ. ಇದನ್ನೂ ಓದಿ: ಫೋಟೋಶೂಟ್‍ಗೆಂದು ನದಿಗೆ ಹಾರಿ ಪ್ರಾಣ ಬಿಟ್ಟ ಯುವಕ

    ಈ ಬಗ್ಗೆ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ ಹಿರಿಯ ಅಧಿಕಾರಿಯೊಬ್ಬರು, ಘಟನೆಯಲ್ಲಿ ಸಾವನ್ನಪ್ಪಿದ ಮತ್ತು ತೀವ್ರ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿಲಾಗಿದೆ. ಮರಣ ಹೊಂದಿದ ಕುಟುಂಬಗಳಿಗೆ ಸರ್ಕಾರದಿಂದ ಈಗಾಗಲೇ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಾವಿಯಲ್ಲಿ ಬಿದ್ದು ವಿದ್ಯಾರ್ಥಿನಿ ಸಾವು – ತಾಯಿ ವಿರುದ್ಧವೇ ತಂದೆಯಿಂದ ಕೊಲೆ ಆರೋಪ

    ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ಘಟನೆಯ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಸಾಮಾಜಿಕ ಜಾಲತಾಣದ ಮೂಲಕ ಕಂಬನಿ ಮಿಡಿದಿದ್ದಾರೆ.

  • ಮದುವೆ ಮಾಡಿಸಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಮಗ

    ಮದುವೆ ಮಾಡಿಸಿಲ್ಲವೆಂದು ತಂದೆಯನ್ನೇ ಕೊಂದ ಪಾಪಿ ಮಗ

    ರಾಯಚೂರು: ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ. ಈ ಘಟನೆ ನಗರದ ಗೋಶಾಲಾ ರಸ್ತೆ ಬಳಿ ನಡೆದಿದೆ.

    ಬಸವರಾಜಪ್ಪ (75) ಮೃತನಾಗಿದ್ದಾನೆ. ಜಗದೀಶ್ ತಂದೆಯನ್ನು ಕೊಂದ ಆರೋಪಿಯಾಗಿದ್ದಾನೆ. ಇವರ ನಿವೃತ್ತ ಎಎಸ್‍ಐ ಆಗಿದ್ದಾರೆ. ತನ್ನ ಮದುವೆ ಮಾಡಿಸಿಲ್ಲ ಎನ್ನುವ ಕಾರಣಕ್ಕೆ ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ.

    ಹಣಕಾಸು ಹಾಗೂ ಆಸ್ತಿ ವಿಚಾರಕ್ಕೆ ಆಗಾಗ ತಂದೆಯೊಂದಿಗೆ ಜಗಳವಾಡುತ್ತಿದ್ದ. ಹಣಕ್ಕಾಗಿ ಕಿರಿಕಿರಿ ಮಾಡುತ್ತಿದ್ದರಿಂದ ಮಗನಿಂದ ತಂದೆ, ತಾಯಿ ದೂರವಿದ್ದರು. ದೇವದುರ್ಗ ತಾಲೂಕಿನ ಗಬ್ಬೂರಿನಲ್ಲಿ ದೊಡ್ಡಮಗನ ಜೊತೆ ವಾಸವಾಗಿದ್ದರು. ಕಳೆದ ಕೆಲದಿನಗಳಿಂದ ರಾಯಚೂರು ನಗರದಲ್ಲಿರುವ ಮಗಳ ಮನೆಗೆ ಬಂದಿದ್ದ ಬಸವರಾಜಪ್ಪ ತಮ್ಮ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಹೋಗುವುದಾಗಿ ಹಾಗೂ ಮಗ ಜಗದೀಶ್‍ನನ್ನ ಮಾತನಾಡಿಸಿಕೊಂಡು ಬರುವುದಾಗಿ ಹೇಳಿ ಹೋಗಿದ್ದವರು ಶವವಾಗಿ ಪತ್ತೆಯಾಗಿದ್ದಾರೆ. ಇದನ್ನೂ ಓದಿ: ಮಂಡ್ಯ ವಿದ್ಯಾರ್ಥಿನಿಗೆ ಐ ಫೋನ್, ಸ್ಮಾರ್ಟ್‍ವಾಚ್ ಗಿಫ್ಟ್ ಕೊಟ್ಟ ಕಾಂಗ್ರೆಸ್ ಶಾಸಕ

    POLICE JEEP

    ಹಮಾಲಿ ಕೆಲಸ ಮಾಡಿಕೊಂಡಿದ್ದ ಜಗದೀಶ್ 35 ವರ್ಷ ವಯಸ್ಸಾದರೂ ನನಗೆ ಮದುವೆ ಮಾಡಿಲ್ಲ, ಆಸ್ತಿಯಲ್ಲಿ ಪಾಲುಕೊಡುವಂತೆ ಜಗಳ ಮಾಡುತ್ತಿದ್ದ. ಜಗದೀಶ್ ಮದ್ಯದ ಅಮಲಿನಲ್ಲಿ ತಲೆ ಮೇಲೆ ಕಲ್ಲು ಎತ್ತಿಹಾಕಿ ತಂದೆಯನ್ನೇ ಕೊಲೆಮಾಡಿದ್ದಾನೆ. ಮಗ ಕುಡಿತದ ಚಟಕ್ಕೆ ದಾಸನಾಗಿ ದುಂದುವೆಚ್ಚ ಮಾಡುತ್ತಿದ್ದರಿಂದ ಬಸವರಾಜಪ್ಪ ಮಗನಿಂದ ದೂರವಿದ್ದರು. ತಂದೆಯನ್ನೇ ಕೊಂದ ಪಾಪಿಮಗ ಆರೋಪಿ ಜಗದೀಶ್‍ನನ್ನ ಮಾರ್ಕೆಟ್ ಯಾರ್ಡ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: Hijab Row – ಮಂಡ್ಯ ವಿದ್ಯಾರ್ಥಿನಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿದ ಜಮಾತೆ ಉಲೆಮಾ ಹಿಂದ್‌

  • ಶೌಚಾಲಯಕ್ಕೆ ಹೋಗಿ ಬರುತ್ತೇನೆಂದ ವಧು ಪ್ರೀಯಕರನ ಜೊತೆಗೆ ಎಸ್ಕೇಪ್

    ಶೌಚಾಲಯಕ್ಕೆ ಹೋಗಿ ಬರುತ್ತೇನೆಂದ ವಧು ಪ್ರೀಯಕರನ ಜೊತೆಗೆ ಎಸ್ಕೇಪ್

    ಭೋಪಾಲ್: ಮದುವೆಯಾದ ಕೆಲವೇ ಕ್ಷಣದಲ್ಲಿ ವಧು ಅವಳ ಪ್ರಿಯಕರನ ಜೊತೆಗೆ ಎಸ್ಕೇಪ್ ಆಗಿರುವ ಘಟನೆ ಚತ್ತೀಸ್‍ಘಡದಲ್ಲಿ ನಡೆದಿದೆ.

    ಚತ್ತೀಸ್‍ಘಡದ ದಾಂತೇವಾಡದಲ್ಲಿ ನಡೆದಿರುವ ಈ ಘಟನೆ ಸಿನಿಮಾ ಕಥೆಯನ್ನು ಮೀರಿಸುವಂತಿದೆ. ಪತಿ ಮನೆಗೆ ತೆರಳುವ ಮಾರ್ಗ ಮಧ್ಯದಲ್ಲೇ ವಧು  ಮಾಸ್ಟರ್ ಪ್ಲ್ಯಾನ್ ಮಾಡಿ ಎಸ್ಕೇಪ್ ಆಗಿದ್ದಾಳೆ. ಇದನ್ನೂ ಓದಿ: ಹಿಜಬ್- ಕೇಸರಿ ಶಾಲು ವಿವಾದ- ಹೋರಾಟಕ್ಕಾಗಿಯೇ ವಿದ್ಯಾರ್ಥಿಗಳು ಟ್ವಿಟ್ಟರ್ ಖಾತೆ ಓಪನ್..!

    ನಡೆದಿದ್ದೇನು?: ಫೆಬ್ರವರಿ 6ರಂದು ಹುಡುಗಿ ವಿವಾಹವಾಗಿತ್ತು. ವಿವಾಹದ ವಿಧಿವಿಧಾನಗಳು ಮುಗಿದ ನಂತರ, ವರನೊಂದಿಗೆ ಆತನ ಮನೆಗೆ ತೆರೆಳಿದಳು. ಆದರೆ ಮಾರ್ಗ ಮಧ್ಯದಲ್ಲಿ ವಧು ಶೌಚಾಲಯಕ್ಕೆ ಹೋಗಬೇಕು ಎಂದು ಹೇಳಿದ್ದಾಳೆ. ಇದನ್ನೂ ಓದಿ: ಕೇಸರಿ ಶಾಲು, ಹಿಜಬ್ ಧರಿಸುವಂತಿಲ್ಲ : ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಏನಿದೆ?

    ಶೌಚಾಲಯಕ್ಕೆ ಹೋದವಳು ಪ್ರೀಯಕರನ ಜೊತೆಗೆ ಪರಾರಿಯಾಗಿದ್ದಾಳೆ. ವಧು ನಾಪತ್ತೆಯಾಗಿರುವುದು ಅತ್ತೆ, ಮಾವನಲ್ಲಿ ಆತಂಕ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ವಧು ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬ್ಗಗೆ ಪರಿಶೀಲಿಸಿದ ಪೊಲೀಸರು ವಧು ಮತ್ತು ಆಕೆಯ ಪ್ರಿಯಕರನನ್ನು ಹಿಡಿದು ಬಂಧಿಸಿದ್ದಾರೆ.

  • ಮದುವೆ ಮನೆಯಲ್ಲಿ ಕನ್ನಡ ಧ್ವಜ- ಕನ್ನಡಾಭಿಮಾನ ಮೆರೆದ ನವ ದಂಪತಿ

    ಮದುವೆ ಮನೆಯಲ್ಲಿ ಕನ್ನಡ ಧ್ವಜ- ಕನ್ನಡಾಭಿಮಾನ ಮೆರೆದ ನವ ದಂಪತಿ

    ಚಿಕ್ಕೋಡಿ : ಮದುವೆ ಸಮಾರಂಭದಲ್ಲಿ ಸಾಮಾನ್ಯವಾಗಿ ಆಡಂಬರದ ಅಲಂಕಾರ ಮಾಡುವುದು ಸರ್ವೆ ಸಾಮಾನ್ಯ. ಆದರೆ ಇಲ್ಲೊಂದು ಮದುವೆಯಲ್ಲಿ ಕನ್ನಡದ ಕಂಪು ಸೂಸುವ ವಾತವರಣ ನಿರ್ಮಾಣವಾಗಿತ್ತು.

    ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಉಳ್ಳಾಗಡ್ಡಿ ಖಾನಾಪುರ ಗ್ರಾಮದ ನಾಗಯ್ಯಾ ತೇರಣಿಮಠ ಅವರು ಮದುವೆ ಸಮಾರಂಭದಲ್ಲಿ ಎಲ್ಲಿ ನೋಡಿದರಲ್ಲಿ ಕನ್ನಡದ ಧ್ವಜಗಳು, ಕನ್ನಡದ ಶಾಲುಗಳು ಕಂಡು ಬಂದವು.

    ನಾಗಯ್ಯಾ ತೇರಣಿಮಠ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ರೂಪಾ ಹಿರೇಮಠ ಅವರನ್ನು ಮದುವೆಯಾಗಿದ್ದಾರೆ. ಈ ಮದುವೆಯಲ್ಲಿ ಖಾನಾಪುರ ಗ್ರಾಮದ ಬ್ರಹ್ಮ ಮಠದ ಸಿದ್ದೇಶ್ವರ ಸ್ವಾಮಿಜಿ ಸೇರಿದಂತೆ ಹಲವಾರು ಮಠದ ಶ್ರಿಗಳು ಈ ಕನ್ನಡದ ಮದುವೆಗೆ ಸಾಕ್ಷಿಯಾಗಿದ್ದರು. ಇದನ್ನೂ ಓದಿ: ಲತಾ ಮಂಗೇಶ್ಕರ್‌ ಹಾಡು ಕೇಳಿ ವೇದಿಕೆಯಲ್ಲಿ ಕಣ್ಣೀರು ಹಾಕಿದ್ರು ಜವಾಹರ್‌ಲಾಲ್‌ ನೆಹರೂ

    ಮದುವೆಯ ಗಂಡು ಹೆಣ್ಣು ಹೂಮಾಲೆ ಜೊತೆಗೆ ಕನ್ನಡದ ಶಾಲು ಹಾಕಿಕೊಂಡು ಕನ್ನಡತನವನ್ನ ಪ್ರದರ್ಶನ ಮಾಡಿದರು. ಗಡಿಭಾಗದಲ್ಲಿ ಕನ್ನಡತನ ಮೆರೆಯುವ ಮೂಲಕ ಈ ಜೋಡಿ ಹೊಸತನಕ್ಕೆ ನಾಂದಿ ಹಾಡಿದೆ. ಇದನ್ನೂ ಓದಿ: ಇನ್ಮುಂದೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಹಾಕುವಂತಿಲ್ಲ: ಸುನಿಲ್ ಕುಮಾರ್