Tag: wedding

  • ವರನಿಗೆ ನಿಂಬೆ ಹಣ್ಣು ಗಿಫ್ಟ್ ನೀಡಿದ ಸ್ನೇಹಿತರು

    ವರನಿಗೆ ನಿಂಬೆ ಹಣ್ಣು ಗಿಫ್ಟ್ ನೀಡಿದ ಸ್ನೇಹಿತರು

    ಗಾಂಧಿನಗರ: ಗುಜರಾತ್‍ನ ರಾಜ್‍ಕೋಟ್‍ನಲ್ಲಿ ಮದುವೆ ಸಮಾರಂಭದಲ್ಲಿ ಸ್ನೇಹಿತರು ಮತ್ತು ಸಂಬಂಧಿಗಳು ಸೇರಿ ವರನಿಗೆ ಉಡುಗೊರೆಯಾಗಿ ನಿಂಬೆ ಹಣ್ಣನ್ನು ನೀಡಿದ್ದಾರೆ. ಇದೀಗ ಈ ಫೋಟೋ ವೈರಲ್‌ ಆಗುತ್ತಿದೆ.

    ದಿನೇ ದಿನೇ ನಿಂಬೆ ಬೆಲೆ ಗಗನಕ್ಕೇರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್‍ಕೋಟ್‍ನ ಧರೋಜಿ ಪಟ್ಟಣದಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನಿಗೆ ಉಡುಗೋರೆ ನೀಡಲು ಆತನ ಸ್ನೇಹಿತರು ನಿಂಬೆ ಹಣ್ಣನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದೀಗ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌  ಆಗುತ್ತಿದೆ.

    ವರನ ಸಂಬಂಧಿಕರು ಈ ಬಗ್ಗೆ ಮಾತನಾಡಿ, ರಾಜ್ಯ ಮತ್ತು ದೇಶದಲ್ಲಿ ನಿಂಬೆ ಹಣ್ಣಿನ ಬೆಲೆ ಸಾಕಷ್ಟು ಹೆಚ್ಚಾಗಿದೆ. ರಾಜ್‍ಕೋಟ್‍ನಲ್ಲಿ ಕೆಜಿಗೆ 250 ರೂ.ವನ್ನು ದಾಟಿದೆ. ಆದರೆ ಬೇಸಿಗೆ ಕಾಲದಲ್ಲಿ ನಿಂಬೆ ಹಣ್ಣಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿಯೇ ನಿಂಬೆ ಹಣ್ಣುಗಳನ್ನು ನೀಡಿದ್ದೇವೆ ಎಂದರು. ಇದನ್ನೂ ಓದಿ: 1 ಗಂಟೆ ಪುಸ್ತಕ ಓದಿದರೆ ಒಂದು ಉಡುಗೊರೆ – ಶಿಕ್ಷಣ ಪ್ರೇಮಿಯ ವಿನೂತನ ಪ್ರಯತ್ನ

    ಪ್ರಸ್ತುತ ಬೇಸಿಗೆ ಕಾಲದಲ್ಲಿ ಪೂರೈಕೆಯಲ್ಲಿನ ಕೊರತೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ನಿಂಬೆ ಬೆಲೆ ಏರಿಕೆಯಾಗಿದೆ. ಈ ಬಾರಿ ನಿಂಬೆ ಹಣ್ಣಿನ ಉತ್ಪಾದನೆ ಕಡಿಮೆಯಾಗಿದ್ದು, ಹೆಚ್ಚುತ್ತಿರುವ ತಾಪಮಾನ ಹಾಗೂ ಹಬ್ಬ ಹರಿದಿನಗಳಿಂದ ಬೇಡಿಕೆ ಹೆಚ್ಚಿದೆ. ಇದನ್ನೂ ಓದಿ: ನೇಣು ಬಿಗಿದ ಸ್ಥಿತಿಯಲ್ಲಿ ಶಿವಸೇನೆ ಶಾಸಕನ ಪತ್ನಿ ಶವ ಪತ್ತೆ

    ತೆಲಂಗಾಣ, ರಾಜಸ್ಥಾನ ಮತ್ತು ದೇಶದ ಹಲವಾರು ಭಾಗಗಳಲ್ಲಿ ನಿಂಬೆ ಬೆಲೆ ಗಗನಕ್ಕೇರಿದೆ. ದೆಹಲಿಯ ಅತಿದೊಡ್ಡ ಸಗಟು ಮಾರುಕಟ್ಟೆಯಾಗಿರುವ ಆಜಾದ್‍ಪುರ ಮಂಡಿಯಲ್ಲಿ ನಿಂಬೆಹಣ್ಣು ಕೆಜಿಗೆ 70 ರಿಂದ 90 ರೂ.ಗೆ ಮಾರಾಟವಾಗುತ್ತಿದೆ. ನಿಂಬೆ ಹಣ್ಣಿನ ಬೆಲೆ ಗುಜರಾತ್‍ನಲ್ಲಿ ಕೆಜಿಗೆ 240 ರೂ.ಗೆ ಏರಿಕೆಯಾಗಿದ್ದು, ಕರ್ನಾಟಕದಲ್ಲಿ ಹಾಗೂ ಜೈಪುರದಲ್ಲಿ ನಿಂಬೆಹಣ್ಣು ಕೆಜಿಗೆ 200 ರೂ.ಕ್ಕೂ ಅಧಿಕ ಬೆಲೆಗೂ ದಾಟಿದೆ

  • ಕುರೂಪಿ ಹೆಣ್ಣುಮಕ್ಕಳಿಗೆ ವರದಕ್ಷಿಣೆ ಸಹಕಾರಿ- ಪಠ್ಯಪುಸ್ತಕದಲ್ಲಿ ಪಾಠ

    ಕುರೂಪಿ ಹೆಣ್ಣುಮಕ್ಕಳಿಗೆ ವರದಕ್ಷಿಣೆ ಸಹಕಾರಿ- ಪಠ್ಯಪುಸ್ತಕದಲ್ಲಿ ಪಾಠ

    ನವದೆಹಲಿ: ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಪುಸ್ತಕವೊಂದರಲ್ಲಿ ನಮೂದಿಸಲಾಗಿದೆ. ಈ ಪುಸ್ತಕ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.

    ಈ ಪುಸ್ತಕದಲ್ಲಿ “ವರದಕ್ಷಿಣೆಯ ಉದ್ದೇಶ” ಎಂಬ ಉಪಶೀರ್ಷಿಕೆಯ ಅಡಿಯಲ್ಲಿ ಈ ಸಂಗತಿಗಳನ್ನು ಪಟ್ಟಿ ಮಾಡಲಾಗಿದ. ಈ ಪುಸ್ತಕವು ನಸಿರ್ಂಗ್ ವಿದ್ಯಾರ್ಥಿಗಳಿರುವ ಪುಸ್ತಕವಾಗಿದ್ದು ಭಾರತೀಯ ನಸಿರ್ಂಗ್ ಕೌನ್ಸಿಲ್ ಪಠ್ಯಕ್ರಮದ ಪ್ರಕಾರ ಬರೆಯಲಾಗಿದೆ ಎಂದು ಪುಸ್ತಕದ ಕವರ್ ಮೇಲಿದೆ. ಪುಟದ ಚಿತ್ರವನ್ನು ಹಂಚಿಕೊಂಡ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ಶಿವಸೇನಾ ನಾಯಕಿ ಮತ್ತು ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ಅವರಲ್ಲಿ ಈ ಪಠ್ಯವನ್ನು ತೆಗೆದುಹಾಕುವಂತೆ ಕರೆ ನೀಡಿದರು. ಇಂಥಾ ಪುಸ್ತಕಗಳು ಕಾಲೇಜು ಮಟ್ಟದ ವಿದ್ಯಾರ್ಥಿಗಳಿಗೆ ಪಠ್ಯಕ್ರಮದ ಭಾಗವಾಗಿರುವುದು ಭಯಾನಕವಾಗಿದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

    ಟಿಕೆ ಇಂದ್ರಾಣಿ ಅವರು ಬರೆದಿರುವ ದಾದಿಯರ ಸಮಾಜಶಾಸ್ತ್ರದ ಪಠ್ಯಪುಸ್ತಕದ (Textbook of Sociology for Nurses) ಪುಟ ಇದು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

    ಪುಸ್ತಕದಲ್ಲಿ ಏನಿದೆ?: ಪುಸ್ತಕದಲ್ಲಿ ಪಟ್ಟಿ ಮಾಡಿದ ವರದಕ್ಷಿಣೆಯ ಪ್ರಯೋಜನದ ಪಟ್ಟಿಯಲ್ಲಿ ಪೀಠೋಪಕರಣಗಳು, ರೆಫ್ರಿಜರೇಟರ್‌ಗಳು ಮತ್ತು ವಾಹನಗಳಂತಹ ಉಪಕರಣಗಳೊಂದಿಗೆ ಹೊಸ ಮನೆಯನ್ನು ಸಜ್ಜುಗೊಳಿಸಲು ವರದಕ್ಷಿಣೆ ಸಹಾಯಕವಾಗಿದೆ. ಪೋಷಕರ ಆಸ್ತಿಯಲ್ಲಿ ಪಾಲನ್ನು ಹುಡುಗಿಯರು ವರದಕ್ಷಿಣೆ ಮೂಲಕ ಪಡೆಯುತ್ತಾರೆ. ವರದಕ್ಷಿಣೆ ಎಂಬುದು ನಮ್ಮ ಸಾಮಾಜಿಕ ಪಾರಂಪರಿಕ ಪದ್ದತಿಯಾಗಿದ್ದು ಒಮ್ಮೆಗೇ ಪದ್ಧತಿಗಳನ್ನು ನಿರ್ಮೂಲನೆ ಮಾಡುವುದು ಅಸಾಧ್ಯ. ಇದನ್ನೂ ಓದಿ : ಪಾವನಾ ನಾಯಕಿಯಾಗಿ ನಟಿಸಿದ ‘ಇನ್’ ಚಿತ್ರದ ಟೀಸರ್ ರಿಲೀಸ್ ಮಾಡಿದ ಕಿಚ್ಚ

    ವರದಕ್ಷಿಣೆ ವ್ಯವಸ್ಥೆಯ ಪರೋಕ್ಷ ಪ್ರಯೋಜನ: ಪೋಷಕರು ಈಗ ತಮ್ಮ ಹೆಣ್ಣುಮಕ್ಕಳಿಗೆ ಕಡಿಮೆ ವರದಕ್ಷಿಣೆ ನೀಡುವ ಉದ್ದೇಶದಿಂದ ಶಿಕ್ಷಣವನ್ನು ನೀಡುತ್ತಿದ್ದಾರೆ. ಪುಟದ ಕೊನೆಯ ಅಂಶವು ವರದಕ್ಷಿಣೆ ವ್ಯವಸ್ಥೆಯು ಕುರೂಪಿ ಹುಡುಗಿಯರಿಗೆ ಮದುವೆಯಾಗಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ.

  • 2 ಬಾರಿ ಮದುವೆ ದಿನವೇ ವರ ನಾಪತ್ತೆ- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವಧು ಕುಟುಂಬಸ್ಥರು

    2 ಬಾರಿ ಮದುವೆ ದಿನವೇ ವರ ನಾಪತ್ತೆ- ಬೇಸತ್ತು ಪೊಲೀಸ್ ಠಾಣೆ ಮೆಟ್ಟಿಲೇರಿದ ವಧು ಕುಟುಂಬಸ್ಥರು

    ಪಾಟ್ನಾ: ಮದುವೆಯ ದಿನದಂದೇ ವರ ನಾಪತ್ತೆಯಾಗಿದ್ದು, ಎಷ್ಟೇ ಕಾದರೂ ವರ ಬಾರದಿದ್ದಕ್ಕೆ ವಧುವಿನ ಕಟುಂಬಸ್ಥರು ಪೊಲೀಸ್ ಠಾಣೆ ಮಟ್ಟಿಲು ಹತ್ತಿದ ಘಟನೆ ಬಿಹಾರದ ಧನ್‍ಬಾದ್ ಪ್ರದೇಶದಲ್ಲಿ ನಡೆದಿದೆ.

    ಧನ್ಬಾದ್‍ನ ಭುಲಿ ನಿವಾಸಿ ರತ್ನೇಶ್ ಕುಮಾರ್ ವರ. ಇವರು ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮದುವೆ ಸಮಯದಲ್ಲಿ ರತ್ನೇಶ್ ನಾಪತ್ತೆಯಾಗಿದ್ದು, ಎಷ್ಟು ಕಾದರೂ ಬಾರದೇ ಇದ್ದಾಗ ವಧುವಿನ ಕಡೆಯವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಧುವಿನ ಸಂಬಂಧಿಕರು, ವರ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ನಂತರದಲ್ಲಿ ವರ ವಾಪಸ್ ಬಂದಿದ್ದಾನೆ. ತಡರಾತ್ರಿ ಮದುವೆ ಮಾಡಲಾಯಿತು.

    ಕಳೆದ ವರ್ಷವೂ ಇದೇ ರೀತಿ ಆಗಿತ್ತು, ಮದುವೆಯ ದಿನಾಂಕ ನಿಗದಿಯಾಗಿತ್ತು. ಆದರೆ ವರ ರತ್ನೇಶ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ನಡುವೆ ಒಪ್ಪಂದವಾಗಿತ್ತು ಎಂದು ವಧು ಕಡೆಯವರು ತಿಳಿಸಿದ್ದಾರೆ.  ಇದನ್ನೂ ಓದಿ: ಮೂರು ವರ್ಷದ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಂದ ತಂದೆ

    ಆಗ ರತ್ನೇಶ್ ಕಡೆಯವರು ಪೊಲೀಸ್ ಸಮ್ಮುಖದಲ್ಲಿಯೇ ಮಾರ್ಚ್ 25ರಂದು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇದರಿಂದಾಗಿ ವಧು ಕಡೆಯವರು ಮದುವೆಗೆ  ಸಂಪೂರ್ಣ ತಯಾರಿ ಮಾಡಿಕೊಂಡಿದ್ದರು. ಆದರೆ ವರ ಬಾರದಿದ್ದಾಗ ವಧುವಿನ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.  ಇದನ್ನೂ ಓದಿ: ಒಬ್ಬರಿಗೊಬ್ಬರು ಬಡಿದಾಡಿಕೊಂಡ ಶಾಲಾ ಹುಡುಗರು – ವಿದ್ಯಾರ್ಥಿ ಬಲಿ

  • 68ರ ವೃದ್ಧೆ ಜೊತೆ 28ರ ಯುವಕ ಲಿವಿಂಗ್ ಟುಗೆದರ್- ಅಫಿಡೆವಿಟ್‍ಗೆ ಕೋರ್ಟ್‍ಗೆ ಬಂದ್ರು

    68ರ ವೃದ್ಧೆ ಜೊತೆ 28ರ ಯುವಕ ಲಿವಿಂಗ್ ಟುಗೆದರ್- ಅಫಿಡೆವಿಟ್‍ಗೆ ಕೋರ್ಟ್‍ಗೆ ಬಂದ್ರು

    ಭೋಪಾಲ್: 28ರ ಯುವಕ 67ರ ವೃದ್ಧೆ ಜೊತೆ ಲಿವಿಂಗ್ ಟುಗೆದರ್ ಸಂಬಂಧವನ್ನು ಹೊಂದಿದ್ದು, ಈ ಸಂಬಂಧ ಉಳಿಸಿಕೊಳ್ಳಲು ನ್ಯಾಯಾಲಯದಲ್ಲಿ ಅಫಿಡೆವಿಟ್ ಮಾಡಿಸಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆದಿದೆ.

    28 ವರ್ಷದ ಭೋಲುಮ್ ಮೊರನಾ ಜಿಲ್ಲೆಯ ನಿವಾಸಿಯಾಗಿದ್ದಾನೆ. ಈತ 68 ವರ್ಷದ ರಾಮಕಾಲಿ ಜೊತೆ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದನು. ಈ ಸಂಬಂಧವನ್ನು ಗ್ವಾಲಿಯರ್ ಜಿಲ್ಲಾ ನ್ಯಾಯಾಲಯದಲ್ಲಿ ನೋಟರಿ ( ಸರ್ಕಾರದಿಂದ ಅಧಿಕೃತ ಎಂದು ದಾಖಲಿಸುವುದು) ಮಾಡಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾನೆ. ಇದನ್ನೂ ಓದಿ: ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್

    ರಾಮಕಾಲಿ, ಭೋಲುಮ್ ಇಬ್ಬರು ಮದುವೆ ಮಾಡಿಕೊಳ್ಳಲು ಬಯಸಲಿಲ್ಲ. ಆದರೆ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಈ ಸಂಬಂಧಕ್ಕೆ ಅಧಿಕೃತ ಮುದ್ರೆಯನ್ನು ಒತ್ತಿಸಿಕೊಳ್ಳಲು ಹಾಗೂ ಭವಿಷ್ಯದಲ್ಲಿ ತಮ್ಮ ಸಂಬಂಧದ ಬಗ್ಗೆ ಯಾವುದೇ ಜಗಳಗಳು ಉಂಟಾಗಬಾರದು ಎಂದು ಮುಂಚಿತವಾಗಿಯೇ ನೋಟರಿ ಮಾಡಲು ಬಂದಿದ್ದೇವೆ ಎಂದು ಇಬ್ಬರು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: RRR ಬ್ಯಾನ್ ಮಾಡಿದ್ರೆ ಕೆಜಿಎಫ್‍ಗಿದೆ ಕಂಟಕ

    ನೋಟರಿ ಕುರಿತಾಗಿ ವಕೀಲ ಪ್ರದೀಪ್ ಅವರ ಜೊತೆಗೆ ಮಾತನಾಡಿದ್ದಾರೆ. ನೋಟರಿಯಂತಹ ದಾಖಲೆಗಳು ಬದ್ಧವಾಗಿಲ್ಲದಿದ್ದರೂ ವಿವಾದಗಳನ್ನು ತಪ್ಪಿಸಲು ಈ ಜೋಡಿ ರಿಲೇಶನ್‍ಶಿಪ್‍ನ್ನು ನೋಟರಿ ಮಾಡಿಸಿಕೊಂಡಿದ್ದಾರೆ.

  • ಗೆಳೆಯನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್

    ಗೆಳೆಯನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್

    ಸ್ಯಾಂಡಲ್ವುಡ್, ಟಾಲಿವುಡ್, ಕಿರುತೆರೆಯಲ್ಲಿ ವಿಭಿನ್ನವಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕವಾಗಿ ಜನಮನ್ನಣೆ ಪಡೆದಿರುವ ನಟಿ ತೇಜಸ್ವಿನಿ ಪ್ರಕಾಶ್, ಖಾಸಗಿ ಕಂಪನಿಯ ಉದ್ಯೋಗಿ ಪಣಿ ವರ್ಮಾ ಜೊತೆಗೆ ರವಿವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.


    ಪಣಿ ಮತ್ತು ತೇಜಸ್ವಿನಿ ಹಲವು ವರ್ಷಗಳಿಂದ ಸ್ನೇಹಿತರು, ಈ ಸ್ನೇಹವೇ ಪ್ರೀತಿಗೆ ತಿರುಗಿ ಇದೀ ಹೊಸ ಜೀವನಕ್ಕೆ ನಾಂದಿ ಹಾಡಿದೆ. ಈ ಜೋಡಿಯ ಮದುವೆ ಸಂಭ್ರಮದಲ್ಲಿ ವಧು, ವರರ ಕುಟುಂಬಸ್ಥರು, ಅನೇಕ ಸಿನಿ ಮತ್ತು ಕಿರುತೆರೆ ಕಲಾವಿದರು ಭಾಗಿಯಾಗಿದ್ದರು. ಮದುವೆ ಅದ್ಧೂರಿಯಾಗಿ ನಡೆದದ್ದು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ: ಹಸೆಮಣೆ ಏರಲಿದ್ದಾರೆ ನಟಿ ತೇಜಸ್ವಿನಿ ಪ್ರಕಾಶ್

    ಕೆಂಪು ಮತ್ತು ಗೋಲ್ಡ್ ಬಣ್ಣದ ರೇಶ್ಮೆ ಸೀರೆಯಲ್ಲಿ ತೇಜಸ್ವಿನಿ, ಪಣಿ ವರ್ಮಾ ಕ್ರೀಮ್ ಬಣ್ಣದ ರೇಶ್ಮೆ ಶರ್ಟ್, ಪಂಚೆಯಲ್ಲಿ ನವ ದಂಪತಿ ಕಾಣಿಸಿಕೊಂಡಿದ್ದಾರೆ. ತೇಜಸ್ವಿನಿ ಮದುವೆಯಲ್ಲಿ ಕಿರುತೆರೆ ಸ್ನೇಹಿತರು, ನಟ ಪ್ರೇಮ್ ನೆನಪಿರಲಿ, ಸಿಹಿ ಕಹಿ ಚಂದ್ರು ಮತ್ತು ನಿರ್ದೇಶಕ ತರುಣ್ ಸುಧೀರ್, ನಟಿ ಕಾರಣ್ಯ ರಾಮ್ ಸೇರಿದಂತೆ ಅನೇಕ ಕಲಾವಿದರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಮೌಳಿಯ ರಂಗೀನ್ ಲೋಕದಲ್ಲಿ ಮಿಂದೆದ್ದ ಜನಸಾಗರ… ಒಂದೇ ವೇದಿಕೆಯಲ್ಲಿ ಸೌತ್ ಸ್ಟಾರ್ಸ್‍ಗಳ ಸಮಾಗಮ

     

    View this post on Instagram

     

    A post shared by Karunya (@ikarunya)

    ನಟಿ ಕಾರುಣ್ಯ ರಾಮ್ ಅವರು ಸ್ನೇಹಿತೆ ತೇಜಸ್ವಿನಿ ಪ್ರಕಾಶ್ ಮದುವೆಯಲ್ಲಿ ಭಾಗಿಯಾದ್ದರ ವಿವಾಹದ ಫೋಟೋಗಳನ್ನು  ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದು, ಎರಡು ಹೃದಯಗಳು ಒಂದಾಗಿ ನಿಮ್ಮ ಭವಿಷ್ಯಕ್ಕಾಗಿ ಅತ್ಯುತ್ತಮವಾಗಿರಲಿ. ನಿಮ್ಮ ವಿವಾಹ ಜೀವನ ಸುಖಮಯವಾಗಿರಲಿ ಎಂದು ಹಾರೈಸಿ ಫೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ತೇಜಸ್ವಿನಿ ಪ್ರಕಾಶ್ ಅವರ ದಾಂಪತ್ಯ ಜೀವನಕ್ಕೆ ಶುಭ ಕೋರುತ್ತಿದ್ದಾರೆ.

    ತೇಜಸ್ವಿನಿ ಕನ್ನಡ ಚಿತ್ರರಂಗ, ಕಿರುತೆರೆ, ಮಾಡೆಲಿಂಗ್ನಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದವರು. 2016ರಲ್ಲಿ ಕಿರುತೆರೆ ಲೋಕಕ್ಕೆ ಪಾದಾರ್ಪಣೆ ಮಾಡಿ, ನಂತರದಲ್ಲಿ 2020ರಿಂದ ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ನನ್ನರಸಿ ರಾಧೆ’ ಧಾರಾವಾಹಿಯಲ್ಲಿ ಲಾವಣ್ಯ ಪಾತ್ರದ ಮೂಲಕ ಫೇಮಸ್ ಆದರು.

    ಮಾತಾಡ್ ಮಾತಾಡ್ ಮಲ್ಲಿಗೆ, ಪ್ರೀತಿ ಏಕೆ ಭೂಮಿ ಮೇಲಿದೆ, ಅರಮನೆ, ರಾಬರ್ಟ್, ಕೃಷ್ಣ ಸೇರಿದಂತೆ ಈವರೆಗೆ 22 ಚಿತ್ರಗಳಲ್ಲಿ ನಟಿಸಿದ್ದಾರೆ. 2017ರಲ್ಲಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 5ರಲ್ಲಿ ತೇಜಸ್ವಿನಿ ಸ್ಪರ್ಧಿಯಾಗಿದ್ದರು. ತಮ್ಮದೇ ಆಗಿರುವ ನಟನಾ ಶೈಲಿಯ ಮೂಲಕವಾಗಿ ಅಭಿಮಾನಿಗಳ ಬಳಗವನ್ನು ಸಂಪಾದಿಸಿದ್ದಾರೆ.

  • ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಭಾರತೀಯ ಮೂಲದ ಗೆಳತಿ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಗ್ಲೆನ್ ಮ್ಯಾಕ್ಸ್‌ವೆಲ್

    ಬೆಂಗಳೂರು: ಆಸ್ಟ್ರೇಲಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್‍ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಭಾರತೀಯ ಮೂಲದ ಗೆಳತಿ ವಿನಿ ರಾಮನ್ ಅವರೊಂದಿಗೆ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತು ನವವಿವಾಹಿತ ದಂಪತಿಯು ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

    ಇನ್‍ಸ್ಟಾಗ್ರಾಮ್‍ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದನ್ನು ಹಂಚಿಕೊಂಡ ವಿನಿ ರಾಮನ್, ಫೋಟೋದಲ್ಲಿ ದಂಪತಿ ಪರಸ್ಪರ ಚುಂಬಿಸುತ್ತಿರುವುದನ್ನು ಕಾಣಬಹುದು. ಫೋಟೋಗೆ ‘ಮಿಸ್ಟರ್ ಅಂಡ್ ಮಿಸಸ್ ಮ್ಯಾಕ್ಸ್‌ವೆಲ್ | 18.03.22’ ಎಂದು ಅಡಿಬರಹ ನೀಡಿ ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by VINI (@vini.raman)

    ಅಲ್ಲದೆ, ಮ್ಯಾಕ್ಸ್‌ವೆಲ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಅವರ ಪತ್ನಿ ವಿನಿ ರಾಮನ್ ಅವರ ಫೋಟೋಗೆ ಮರು-ಪೋಸ್ಟ್ ಮಾಡಿ, ತಮ್ಮ ಎಂಗೆಜ್‍ಮೆಂಟ್ ಉಂಗುರಗಳನ್ನು ಪ್ರದರ್ಶಿಸಿಸುತ್ತಿದ್ದಾರೆ. ‘ಪ್ರೀತಿಯು ಪೂರ್ಣಗೊಳ್ಳುವ ಹುಡುಕಾಟವಾಗಿದೆ ಮತ್ತು ನಿಮ್ಮೊಂದಿಗೆ ನಾನು ಸಂಪೂರ್ಣತೆಯನ್ನು ಅನುಭವಿಸುತ್ತೇನೆ ಎಂದು ಭಾವಿಸುವೆ’ ಎಂದು ವಿನಿ ಬರೆದುಕೊಂಡಿದ್ದ ಶಿರ್ಷಿಕೆಯ ಫೋಟೋವನ್ನು ಮ್ಯಾಕ್ಸ್‌ವೆಲ್ ಸ್ಕ್ರೀನ್‍ಶಾಟ್ ತೆಗೆದು ಶೇರ್ ಮಾಡಿಕೊಂಡಿದ್ದಾರೆ.‌‌ ಇದನ್ನೂ ಓದಿ: ಭಾರತ ಮೂಲದ ಯುವತಿಯೊಂದಿಗೆ ಮ್ಯಾಕ್ಸ್‌ವೆಲ್ ಡೇಟಿಂಗ್

    ದಂಪತಿಯು 2020ರಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಮ್ಯಾಕ್ಸ್‌ವೆಲ್ ಮತ್ತು ವಿನಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ದಂಪತಿಗಳು ಬಹಳ ಸಮಯದಿಂದ ಡೇಟಿಂಗ್ ಮಾಡಿದ್ದಾರೆ. ವಿನಿ ಆಸ್ಟ್ರೇಲಿಯಾದ ಮೆಂಟೋನ್ ಗಲ್ರ್ಸ್ ಸೆಕೆಂಡರಿ ಕಾಲೇಜಿನಲ್ಲಿ ವೈದ್ಯಕೀಯ ವಿಜ್ಞಾನ ಕ್ಷೇತ್ರದಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಪ್ರಸ್ತುತ ಅವರು ಮೆಲ್ಬೋರ್ನ್‍ನಲ್ಲಿ ಫಾರ್ಮಾಸಿಸ್ಟ್ ಆಗಿ ಅಭ್ಯಾಸ ಮಾಡುತ್ತಿದ್ದಾರೆ. ವಿನಿ ಆಸ್ಟ್ರೇಲಿಯಾ ನಗರದಲ್ಲಿ ನೆಲೆಸಿರುವ ತಮಿಳು ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಆಸ್ಟ್ರೇಲಿಯಾದ ಮ್ಯಾಕ್ಸ್‌ವೆಲ್ ತಮಿಳುನಾಡಿನ ಅಳಿಯ – ಆಮಂತ್ರಣ ಪತ್ರಿಕೆ ವೈರಲ್

    ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ತಂಡವು ಮ್ಯಾಕ್ಸ್‌ವೆಲ್ ಅವರನ್ನು 11 ಕೋಟಿ ರೂ. ನೀಡಿ ತಂಡದಲ್ಲಿಯೇ ಉಳಿಸಿಕೊಂಡಿದೆ. ತಂಡವು ಮಾರ್ಚ್ 27ರ ಭಾನುವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಐಪಿಎಲ್ 2022 ಅಭಿಯಾನವನ್ನು ಮುಂಬೈನಲ್ಲಿ ಆಡಲಿದೆ.

  • ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ

    ಬುರ್ಕಾ ಹಾಕಬೇಕು, ನಮಾಜ್ ಮಾಡಬೇಕು, ಮುಸ್ಲಿಂ ಸಂಸ್ಕೃತಿ ಪಾಲಿಸಬೇಕೆಂದು ಒತ್ತಾಯಿಸುತ್ತಿದ್ದ: ಪತ್ನಿ ನೇರ ಆರೋಪ

    – ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದ

    ಹುಬ್ಬಳ್ಳಿ: ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿನಿ ದಯವಿಟ್ಟು ರಾಜ್ಯದಲ್ಲಿ ಲವ್ ಜಿಹಾದ್‍ಗೆ ಕಠಿಣ ಕಾನೂನು ತನ್ನಿ. ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಲವ್ ಜಿಹಾದ್‍ಗೆ ಒಳಗಾಗಿ ಹಲ್ಲೆಗೊಳ್ಳಗಾದ ಅಪೂರ್ವ ಅಳಲು ತೋಡಿಕೊಂಡಿದ್ದಾರೆ.

    ಪತ್ನಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಅನ್ಯಧರ್ಮದ ಮದುವೆಯ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತೆಂಬ ಆರೋಪ ಕೇಳಿಬಂದಿದೆ. ಈ ಕುರಿತಾಗಿ ಲವ್ ಜಿಹಾದ್‍ಗೆ ಒಳಗಾಗಿರುವ ಅಪೂರ್ವ ಪುರಾಣಿಕ ಕೆಲವಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

    ಲವ್ ಜಿಹಾದ್‍ಗೆ ಒಳಗಾಗಿರುವ ಅಪೂರ್ವ ಪುರಾಣಿಕ ಅಲಿಯಾಸ್ ಆರ್ಫಾ ಬಾನು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿ, ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೆನೆ, ದಯವಿಟ್ಟು ರಾಜ್ಯದಲ್ಲಿ ಲವ್ ಜಿಹಾದ್‍ಗೆ ಕಠಿಣ ಕಾನೂನು ತೆಗೆದುಕೊಂಡು ಬನ್ನಿ. ಎಷ್ಟು ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ. ವಿದ್ಯಾಭ್ಯಾಸಕ್ಕೆಂದು ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಇದನ್ನು ದುರುಪಯೋಗ ಪಡಿಸಿಕೊಂಡು ಆತ ನನ್ನ ಮೇಲೆ ಅತ್ಯಾಚಾರ ಎಸಗಿದನು. ಅತ್ಯಾಚಾರದ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ. ತಾಯಿ ಮತ್ತಿತರರಿಗೆ ಹೇಳಿ, ವಿಡಿಯೋ ಬಹಿರಂಗಪಡಿಸೋದಾಗಿ ಎಚ್ಚರಿಸಿದನು.

    ಅನಿವಾರ್ಯವಾಗಿ ನಾನು ಮದುವೆಯಾಗೋಕೆ ಒಪ್ಪಿಕೊಂಡೆ. ಮದುವೆಯಾಗ್ತಿದ್ದಂತೆಯೇ ಹಿಜಜ್ ತನ್ನ ಮತ್ತೊಂದು ಮುಖ ತೋರಿಸಲಾರಂಭಿಸಿದೆ. ತನ್ನ ಧರ್ಮಕ್ಕೆ ಧರ್ಮಾಂತರ ಮಾಡಿಕೊಂಡರಷ್ಟೇ ಸಂಸಾರ ಮಾಡ್ತೇನೆ ಎಂದು ಹೇಳಿದ್ದನು. ಅನಿವಾರ್ಯವಾಗಿ ನಾನು ಧರ್ಮಾಂತರಗೊಂಡೆ. ಆದರೆ ಬುರ್ಕಾ ಹಾಕಬೇಕು, ಹಿಜಬ್ ಹಾಕಿಕೊಳ್ಳಬೇಕೆಂದು ಪೀಡಿಸುತ್ತಿದ್ದನು. ಮುಸ್ಲಿಂ ಜನರಿರುವ ಓಣಿಗೆ ಕರೆದ್ದೋಯ್ದು ಅವರ ಸಂಸ್ಕೃತ ಪಾಲಿಸುವಂತೆ ಒತ್ತಾಯಿಸಿದನು ಎಂದಿದ್ದಾನೆ. ಇದನ್ನೂ ಓದಿ: ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ನನ್ನ ಹೆಸರನ್ನು ಅರ್ಫಾ ಬಾನು ಎಂದೂ ಬದಲಾಯಿಸಿದನು. ನಿತ್ಯ ನಮಾಜ್ ಮಾಡುವಂತೆ ಒತ್ತಾಯಿಸುವುದರ ಜೊತೆಗೆ ನಾನ್ ವೆಜ್ ತಿನ್ನುವಂತೆ ಪೀಡಿಸುತ್ತಿದ್ದನು.ಮಗು ಹುಟ್ಟಿದ ನಂತರ ಅವನಿಗೂ ನಾನ್ ವೆಜ್ ಬಾಯಲ್ಲಿ ಇಟ್ಟು ತಿನ್ನುವಂತೆ ಪೀಡಿಸ್ತಿದ್ದನು. ನಿತ್ಯ ಕಿರುಕುಳ ಕೊಟ್ಟರೂ ಹೇಗೋ ಸಂಸಾರ ನಡೆಸುತ್ತಿದ್ದೆ. ಆದರೆ ಅವನಿಗೆ ಇನ್ನೊಂದು ಮದುವೆಯಾಗಿ ಮೂವರು ಮಕ್ಕಳಿರೋದು ನನ್ನ ಗಮನಕ್ಕೆ ಬಂತು. ತನ್ನ ಧರ್ಮೀಯಳನ್ನೇ ಪ್ರೀತಿಸೋ ನಾಟಕವಾಡಿ ಮದುವೆಯಾಗಿದ್ದು ತಿಳಿಯಿತು. ಇದಾದ ನಂತರ ನಾನು ಡೈವರ್ಸ್‍ಗೆ ಅಪ್ಲೈ ಮಾಡಿದೆ. ಇಷ್ಟರಲ್ಲಿಯೇ ಕೋರ್ಟ್‌ನಲ್ಲಿ ವಿಚಾರಣೆಗೆ ಬರೋದಿತ್ತು. ಆದರೆ ಅದಕ್ಕೂ ಮುಂಚಿತವಾಗಿಯೇ ನನ್ನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ಇದೆಲ್ಲವನ್ನೂ ನೋಡಿದಾಗ ಲವ್ ಜಿಹಾದ್ ದುರುದ್ದೇಶ ಇಟ್ಟುಕೊಂಡಿದ್ದ ಅನಿಸುತ್ತದೆ. ಬೇರೆ ಹೆಣ್ಣುಗಳ ಜೊತೆ ಚೆಲ್ಲಾಟವಾಡೋ ಇಂಥವನಿಗೆ ಕಠಿಣ ಶಿಕ್ಷೆಯಾಗಬೇಕು. ಆತನನ್ನು ಜೈಲಿನಿಂದ ಬಿಟ್ಟರೆ ನನಗೆ, ನನ್ನ ಮಗ ಮತ್ತು ತಾಯಿಗ ಜೀವ ಭಯಯಿದೆ. ಹೀಗಾಗಿ ಅವನನ್ನು ಜೈಲಿನಿಂದ ಹೊರಗೆ ಬಿಡದೆ, ಗಲ್ಲಿಗೇರಿಸಬೇಕೆಂದ ಅಪೂರ್ವ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

  • ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಪತಿ- ಪತ್ನಿಯಿಂದ ಲವ್ ಜಿಹಾದ್ ಆರೋಪ

    ಹುಬ್ಬಳ್ಳಿ: ಪತ್ನಿಯನ್ನು ಪತಿಯೇ ಮನಬಂದಂತೆ ಕೊಚ್ಚಿ ಕೊಲೆ ಮಾಡಲು ಯತ್ನ ಮಾಡಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಲವ್ ಜಿಹಾದ್ ಆಗಿದ್ದೇನೆ ಎಂದು ಪತ್ನಿಯೇ, ಪತಿ ವಿರುದ್ಧ ಆರೋಪ ಮಾಡಿದ್ದಾಳೆ.

    ಸದ್ಯ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಿತ್ತಿರುವ ಅಪೂರ್ವ ಚೇತರಿಸಿಕೊಳ್ಳುತ್ತಿದ್ದಾರೆ. ಅನ್ಯಧರ್ಮದ ವ್ಯಕ್ತಿಯನ್ನು ಮದುವೆಯಾಗಿರುವ ಹಿಂದೆ ಲವ್ ಜಿಹಾದ್ ಉದ್ದೇಶ ಅಡಗಿತ್ತೆಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಸ್ಕೂಟಿ ಕಲಿಯಲು ಹೋದ ಪತ್ನಿಯನ್ನು ಕೊಲ್ಲಲು ಮುಂದಾದ ಪತಿ

    ಅಪೂರ್ವ ಪುರಾಣಿಕ ಅಲಿಯಾಸ್ ಆರ್ಫಾ ಬಾನು ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ್ದು, ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಳ್ಳುತ್ತಿನಿ ದಯವಿಟ್ಟು ರಾಜ್ಯದಲ್ಲಿ ಲವ್‍ ಜಿಹಾದ್‍ಗೆ ಕಠಿಣ ಕಾನೂನು ತನ್ನಿ. ಎಷ್ಟೋ ಅಮಾಯಕ ಹೆಣ್ಣು ಮಕ್ಕಳು ಪ್ರೀತಿ ಹೆಸರಿನಲ್ಲಿ ಮೋಸ ಹೋಗುತ್ತಿದ್ದಾರೆ ಎಂದು ಲವ್ ಜಿಹಾದ್‍ಗೆ ಒಳಗಾಗಿ ಹಲ್ಲೆಗೊಳ್ಳಗಾದ ಅಪೂರ್ವ ಅಳಲು ತೋಡಿಕೊಂಡಿದ್ದಾರೆ.

    ವಿದ್ಯಾಭ್ಯಾಸಕ್ಕೆಂದು ನಾನು ಆಗಾಗ ಇಜಾಜ್ ಆಟೋದಲ್ಲಿ ಹೋಗುತ್ತಿದ್ದೆ. ಇದನ್ನು ದುರುಪಯೋಗ ಪಡಿಸಿಕೊಂಡು ಆತ ನನ್ನ ಮೇಲೆ ಅತ್ಯಾಚಾರ ಎಸಗಿದ ಅತ್ಯಾಚಾರದ ವೀಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡೋಕೆ ಶುರು ಮಾಡಿದ್ದನು ಎಂದಿದ್ದಾರೆ.

    ತಾಯಿ ಮತ್ತಿತರರಿಗೆ ಹೇಳಿ ವೀಡಿಯೋ ಬಹಿರಂಗಪಡಿಸೋದಾಗಿ ಎಚ್ಚರಿಸಿದ್ದನು. ಅನಿವಾರ್ಯವಾಗಿ ನಾನು ಮದುವೆಯಾಗೋಕೆ ಒಪ್ಪಿಕೊಂಡೆ ಬಳಿಕ ಆತ ನನಗೆ ನರಕ ತೋರಿಸಿದ್ದಾನೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

  • ಮದುವೆಗೆ ಒಪ್ಪದ ಹೆತ್ತವರನ್ನು ಕೊಂದ ಅಪ್ರಾಪ್ತ ಮಗಳು

    ಮದುವೆಗೆ ಒಪ್ಪದ ಹೆತ್ತವರನ್ನು ಕೊಂದ ಅಪ್ರಾಪ್ತ ಮಗಳು

    ಲಕ್ನೋ: ಮದುವೆಗೆ ಒಪ್ಪಿಗೆ ನೀಡಿಲ್ಲವೆಂದು ಕೋಪಗೊಂಡ ಹುಡುಗಿ ಹೆತ್ತವರನ್ನೆ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜನೋರ್‌ನಲ್ಲಿ  ನಡೆದಿದೆ. ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

    17 ವರ್ಷದ ಹುಡುಗಿ 20 ವರ್ಷದ ಯುವಕನನ್ನು ಪ್ರೀತಿ ಮಾಡುತ್ತಿದ್ದಳು ಇವರ ಪ್ರೀತಿಗೆ ಹೆತ್ತವರು ಒಪ್ಪಿಗೆ ನೀಡಿಲ್ಲ. ಇಬ್ಬರು ಸೇರಿಕೊಂಡು ಕೊಲೆ ಮಾಡಿದ್ದಾರೆ. ಮಾರ್ಚ್ 6ರಂದು ಹುಡುಗಿ ತಂದೆ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ನಂತರ ಕೆಲವು ದಿನಗಳ ನಂತರ ಆಕೆ ತಾಯಿ ಮೃತದೇಹ ಪತ್ತೆಯಾಗಿದೆ. ಆದರೆ ಕೊಲೆ ವಿಚಾರವಾಗಿ ಹುಡಗಿ ಕಥೆ ಕಟ್ಟಿ ನಂಬಿಸುವ ಪ್ರಯತ್ನ ಮಾಡಿದ್ದಾಳೆ. ಇದನ್ನೂ ಓದಿ: ಹಿರಿಯ ವಕೀಲರು ಕಾಂಗ್ರೆಸ್ ಸಂಸ್ಕೃತಿಯ ವ್ಯಕ್ತಿಯಲ್ಲ: ಕಪಿಲ್ ಸಿಬಲ್ ವಿರುದ್ಧ ಗೆಹ್ಲೋಟ್ ಕಿಡಿ

    ದಂಪತಿ ಒಂದೇ ರೀತಿ ಕೊಲೆಯಾಗಿರವ ವಿಚಾರವಾಗಿ ಅನುಮಾನಗೊಂಡು ತನಿಖೆ ನಡೆಸಿದಾಗ ಸತ್ಯ ಹೊರಗೆ ಬಂದಿದೆ. ಪರಿಯಸ್ಥರೇ ಕೊಲೆ ಮಾಡಿದ್ದಾರೆ ಎನ್ನುವ ಸಂದೇಹ ವ್ಯಕ್ತವಾಗಿತ್ತು. ನಂತರ ತನಿಖೆ ವೇಳೆ ಹುಡುಗಿ ತಾನೇ ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಹುಡುಗಿ ಅಪ್ರಾಪ್ತೆ ಆಗಿರುವುದರಿಂದ ಬಾಲಾರೋಪಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ.

  • ರಷ್ಯಾ-ಉಕ್ರೇನ್ ವಾರ್ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೈನಿಕ

    ರಷ್ಯಾ-ಉಕ್ರೇನ್ ವಾರ್ ನಡುವೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಸೈನಿಕ

    ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವೆ ಸಂಘರ್ಷ ಆರಂಭವಾಗಿ 11 ದಿನಗಳು ಕಳೆದಿದೆ. ಈ ಬಿಕ್ಕಟ್ಟಿನ ಪರಿಸ್ಥಿತಿ ನಡುವೆ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪ್ರಾದೇಶಿಕ ರಕ್ಷಣೆಯ 112 ಬ್ರಿಗೇಡ್‍ನ ಲೆಸ್ಯಾ ಮತ್ತು ವ್ಯಾಲೆರಿ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಇವರಿಬ್ಬರ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಇದನ್ನೂ ಓದಿ: ನಿಮ್ಮ ಎವ್ರಿಡೇ ಮೇಕಪ್ ಕಿಟ್‌ನಲ್ಲಿರಲಿ ಈ ವಸ್ತುಗಳು

    ಕೀವಿ ಎಂಬ ಟ್ವಿಟ್ಟರ್ ಖಾತೆಯಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, ಕ್ಯಾಪ್ಷನ್‍ನಲ್ಲಿ ಇಂದು ಪ್ರಾದೇಶಿಕ ರಕ್ಷಣೆಯ 112 ಬ್ರಿಗೇಡ್‍ನ ಉಕ್ರೇನ್ ರಷ್ಯಾ ಯುದ್ಧದ ಪ್ರದೇಶದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಲೆಸ್ಯಾ ಮತ್ತು ವ್ಯಾಲೆರಿ ವಿವಾಹವಾದರು ಎಂದು ಬರೆಯಲಾಗಿದೆ.

    ಈ ಮುನ್ನ ಕೆಲವು ದಿನಗಳ ಹಿಂದೆ ಇದೇ ರೀತಿ ಕ್ಲೆವೆಟ್ಸ್ ಮತ್ತು ನಟಾಲಿಯಾ ವ್ಲಾಡಿಸ್ಲೇವ್ ಎಂಬ ಮತ್ತೊಂದು ಜೋಡಿ ಉಕ್ರೇನ್‍ನ ಒಡೆಸ್ಸಾದಲ್ಲಿನ ಬಾಂಬ್ ಶೆಲ್ಟರ್​​ನಲ್ಲಿ ವಿವಾಹವಾಗಿದ್ದರು. ಈ ದಂಪತಿಯ ಮದುವೆ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಫೋಟೋದಲ್ಲಿ ವೇಳೆ ವರ ಸಮವಸ್ತ್ರ ಧರಿಸಿದ್ದರು ಮತ್ತು ವಧು ಹೂಗುಚ್ಛವನ್ನು ಹಿಡಿದುಕೊಂಡಿರುವುದನ್ನು ಕಾಣಬಹುದಾಗಿತ್ತು. ಇದನ್ನೂ ಓದಿ: ನಿಮ್ಮ ಬಜೆಟ್‌ನಲ್ಲಿ ಚಂದಕಾಣಿಸುವ ಟಿಪ್ಸ್

    ಸದ್ಯ ರಷ್ಯಾದ ಮಿಲಿಟರಿ ಉಕ್ರೇನ್‍ನ ವಿನ್ನಿಟ್ಸಿಯಾ ವಿಮಾನ ನಿಲ್ದಾಣವನ್ನು ನಾಶಪಡಿಸಿದೆ. ಅಧ್ಯಕ್ಷ ಝೆಲೆನ್ಸ್ಕಿ ಅವರು ಉಕ್ರೇನ್‍ನಲ್ಲಿ ವಿಮಾನ ಹಾರಾಟದ ಮೇಲೆ ನಿಷೇಧ ಹೇರಲು ವಿದೇಶಗಳಿಗೆ ಒತ್ತಾಯಿಸಿದ್ದಾರೆ. ಆದರೆ ಈ ಪ್ರಸ್ತಾವನೆಯನ್ನು ನ್ಯಾಟೋ ತಿರಸ್ಕರಿಸಿದೆ.