Tag: wedding

  • ಕೀರ್ತಿ ಸುರೇಶ್ ಮದುವೆ ಸಂಭ್ರಮದಲ್ಲಿ ವಿಜಯ್- ಫೋಟೋ ಹಂಚಿಕೊಂಡ ನಟಿ

    ಕೀರ್ತಿ ಸುರೇಶ್ ಮದುವೆ ಸಂಭ್ರಮದಲ್ಲಿ ವಿಜಯ್- ಫೋಟೋ ಹಂಚಿಕೊಂಡ ನಟಿ

    ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಡಿ.12ರಂದು ಆ್ಯಂಟೋನಿ (Antony Thattil) ಜೊತೆ ಗೋವಾದಲ್ಲಿ ಅದ್ಧೂರಿಯಾಗಿ ಮದುವೆಯಾದರು. ಈ ಸಂಭ್ರಮದಲ್ಲಿ ಸ್ಟಾರ್ ನಟ ದಳಪತಿ ವಿಜಯ್ (Vijay Thalapathy) ಕೂಡ ಭಾಗಿಯಾಗಿದ್ದರು. ನಟ ಭಾಗಿಯಾಗಿ ಶುಭಹಾರೈಸಿದ್ದರ ಬಗ್ಗೆ ಫೋಟೋ ಶೇರ್ ಮಾಡಿ ನಟಿ ಸಂತಸ ವ್ಯಕ್ತಪಡಿಸಿದ್ದಾರೆ.

    ‘ನನ್ನ ಕನಸಿನ ಮದುವೆಯಲ್ಲಿ ನಮ್ಮ ಡ್ರೀಮ್ ಐಕಾನ್ ನಮ್ಮನ್ನು ಆಶೀರ್ವದಿಸಿದಾಗ’ ಎಂದು ನಟಿ ಅಡಿಬರಹ ನೀಡಿ, ವಿಜಯ್ ಜೊತೆಗಿನ ಫೋಟೋ ಹಂಚಿಕೊಂಡಿದ್ದಾರೆ. ಅವರ ಉಪಸ್ಥಿತಿಯನ್ನು ನಟಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ:BBK 11: ಗೌತಮಿ ಪಕ್ಷಪಾತಿ ಎಂದು ದೂರಿದ ಮೋಕ್ಷಿತಾ

     ಇನ್ನೂ ವಿಜಯ್ ಮತ್ತು ಕೀರ್ತಿ ಸುರೇಶ್ ನಡುವೆ ಉತ್ತಮ ಒಡನಾಟವಿದೆ. ‘ಭೈರವ’ ಮತ್ತು ‘ಸರ್ಕಾರ್’ ಸಿನಿಮಾಗಳಲ್ಲಿ ವಿಜಯ್‌ಗೆ ಕೀರ್ತಿ ನಾಯಕಿಯಾಗಿ ನಟಿಸಿದರು.

    ಅಂದಹಾಗೆ, ಆ್ಯಂಟೋನಿ ತಟ್ಟಿಲ್ ಮತ್ತು ಕೀರ್ತಿ 15 ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಹಿಂದೂ ಮತ್ತು ಕ್ರೈಸ್ತ ಪದ್ಧತಿಯಂತೆ ಮದುವೆಯಾದರು. ಕುಟುಂಬಸ್ಥರು ಮತ್ತು ನಟಿಯ ಆಪ್ತ ಕಲಾವಿದರು ಈ ಮದುವೆಯಲ್ಲಿ ಭಾಗಿಯಾದರು.

  • ಭಾವಿ ಪತ್ನಿ ಜೊತೆ ಆಗಮಿಸಿ ಸಿಎಂಗೆ ಮೊದಲ ಮದುವೆ ಆಮಂತ್ರಣ ನೀಡಿದ ಡಾಲಿ

    ಭಾವಿ ಪತ್ನಿ ಜೊತೆ ಆಗಮಿಸಿ ಸಿಎಂಗೆ ಮೊದಲ ಮದುವೆ ಆಮಂತ್ರಣ ನೀಡಿದ ಡಾಲಿ

    ಬೆಂಗಳೂರು: ಫೆ.15ರಂದು ಮೈಸೂರಿನಲ್ಲಿ ನಡೆಯುವ ತಮ್ಮ ವಿವಾಹಕ್ಕೆ ಚಿತ್ರನಟ ಡಾಲಿ ಧನಂಜಯ (Daali Dhananjaya) ಭಾವಿ ಪತ್ನಿ ಧನ್ಯತಾ ಜೊತೆ ಆಗಮಿಸಿ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ಮೊದಲ ಆಮಂತ್ರಣ ನೀಡಿದ್ದಾರೆ.

    ಭಾವಿ ಪತ್ನಿ ಜೊತೆ ಕಾವೇರಿ ನಿವಾಸಕ್ಕೆ ಆಗಮಿಸಿದ ಡಾಲಿ ಸಿಎಂ ಸಿದ್ದರಾಮಯ್ಯನವರನ್ನು ಮದುವೆಗೆ ಆಹ್ವಾನಿಸಿದ್ದಾರೆ. ಆ ಬಳಿಕ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರಿಗೂ ಲಗ್ನಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ: ನನ್ನ ಮೊಮ್ಮಗ ಬದುಕಿದ್ದಾನಾ? – ಮಾಧ್ಯಮದ ಮುಂದೆ ಕಣ್ಣೀರಿಟ್ಟ ಅತುಲ್‌ ತಂದೆ

    ಡಾಲಿ ಹಾಗೂ ಧನ್ಯತಾ ಆಮಂತ್ರಣ ಪತ್ರಿಕೆ ‘ಓಲ್ಡ್ ಇಸ್ ಗೋಲ್ಡ್’ ಥೀಮ್‌ನಲ್ಲಿದೆ. ಅಂಚೆ ಪತ್ರದಲ್ಲಿ ವಿಶೇಷವಾಗಿ ಲಗ್ನಪತ್ರಿಕೆ ಮೂಡಿಬಂದಿದೆ. ಫೆ.15ರಂದು ಆರತಕ್ಷತೆ ಕಾರ್ಯಕ್ರಮ ನಡೆಯಲಿದ್ದು, ಫೆ.16ರಂದು ಡಾಲಿ-ಧನ್ಯತಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗದ ವಸ್ತು ಪ್ರದರ್ಶನ ಮೈದಾನದಲ್ಲಿ ಕಲ್ಯಾಣ ನಡೆಯಲಿದೆ. ಇದನ್ನೂ ಓದಿ: ಹಾಸ್ಟೆಲ್ ಊಟದ ವಿಚಾರಕ್ಕೆ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದ ಪ್ರಿನ್ಸಿಪಲ್, ವಾರ್ಡನ್ ಅಮಾನತು

  • ಮದುವೆಯ ಬಳಿಕ ಕಾಕ್‌ಟೈಲ್ ಪಾರ್ಟಿಯಲ್ಲಿ ಮಿಂಚಿದ ನಾಗಚೈತನ್ಯ ಪತ್ನಿ

    ಮದುವೆಯ ಬಳಿಕ ಕಾಕ್‌ಟೈಲ್ ಪಾರ್ಟಿಯಲ್ಲಿ ಮಿಂಚಿದ ನಾಗಚೈತನ್ಯ ಪತ್ನಿ

    ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಜೊತೆ ಶೋಭಿತಾ ಧುಲಿಪಾಲ (Sobhita Dhulipala) ಮದುವೆ ಇತ್ತೀಚೆಗೆ ಅದ್ಧೂರಿಯಾಗಿ ನೆರವೇರಿತು. ಈ ಬೆನ್ನಲ್ಲೇ ನವ ಜೋಡಿ ಕಾಕ್‌ಟೈಲ್ ಪಾರ್ಟಿ ಆಯೋಜಿಸಿದ್ದಾರೆ. ಈ ಪಾರ್ಟಿಯಲ್ಲಿ ಶೋಭಿತಾ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ.

    ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ಶೋಭಿತಾ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್‌ಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.

    ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿ.4ರಂದು ರಾತ್ರಿ 8:15ಕ್ಕೆ ಶೋಭಿತಾ ಮತ್ತು ನಾಗಚೈತನ್ಯ ಹಸೆಮಣೆ ಏರಿದರು. ಖುಷಿ ಖುಷಿಯಾಗಿ ಇಬ್ಬರೂ ಮದುವೆಯಾಗಿದ್ದಾರೆ.

    ಮದುವೆಯಲ್ಲಿ ಶೋಭಿತಾ ಮತ್ತು ನಾಗಚೈತನ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ.

    ಇನ್ನೂ ಶೋಭಿತಾ ಮತ್ತು ನಾಗಚೈತನ್ಯ ಕಾಲೇಜು ದಿನಗಳಿಂದ ಪರಿಚಿತರು. ಸಮಂತಾ ಜೊತೆಗಿನ ದಾಂಪತ್ಯಕ್ಕೆ ಪೂರ್ಣ ವಿರಾಮ ಬಿದ್ಮೇಲೆ ಶೋಭಿತಾ ಎಂಟ್ರಿ ಕೊಟ್ಟರು.

    ಎರಡೂವರೆ ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ನಾಗಚೈತನ್ಯ ಮತ್ತು ಶೋಭಿತಾ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಈ ಜೋಡಿಗೆ ಶುಭಕೋರಲು ನ್ಯಾಚುರಲ್ ಸ್ಟಾರ್ ನಾನಿ ದಂಪತಿ, ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಈ ವರ್ಷ ಆಗಸ್ಟ್ 8ರಂದು ಈ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮ ನಟನ ನಿವಾಸದಲ್ಲಿ ಸರಳವಾಗಿ ಜರುಗಿತು. ನಾಗಾರ್ಜುನ ಅಕ್ಕಿನೇನಿ ಅವರು ಸೊಸೆಯನ್ನು ಫ್ಯಾನ್ಸ್‌ಗೆ ಪರಿಚಿಯಿಸಿದರು.

    ಅಂದಹಾಗೆ, ‘ಯೇ ಮಾಯ ಚೇಸಾವೆ’ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿ ನಟಿಸಿದರು. ಈ ವೇಳೆ, ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ 2017ರಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮದಂತೆ ಇಬ್ಬರ ಮದುವೆ ನಡೆದಿತ್ತು.

    ಕೆಲ ಮನಸ್ತಾಪಗಳಿಂದ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಘೋಷಿಸಿದರು. 4 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಅಂತ್ಯ ಹಾಡಿದರು.

    ಇನ್ನೂ ಸಮಂತಾ ಡಿವೋರ್ಸ್ ವಿಚಾರ ತಂದೆ ಜೋಸೆಫ್ ಪ್ರಭುಗೆ ನೋವುಂಟು ಮಾಡಿತ್ತು. ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡಿದರು. ನಾಗಚೈತನ್ಯ ಮದುವೆಯ 1 ವಾರಗಳ ಮುನ್ನ ಅಂದರೆ ನ.29ರಂದು ಸಮಂತಾ ತಂದೆ ನಿಧನರಾದರು.

  • ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ

    ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ: ತಾಯ್ತನದ ಖುಷಿಯಲ್ಲಿ ಹರಿಪ್ರಿಯಾ

    ಸ್ಯಾಂಡಲ್‌ವುಡ್ ನಟಿ ಹರಿಪ್ರಿಯಾ (Haripriya) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಾಯ್ತನದ ಕುರಿತು ನಟಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಮ್ಮನ ಮಡಿಲಲ್ಲಿ ಹರಿಪ್ರಿಯಾ ನಿದ್ದೆ ಮಾಡುತ್ತಿರುವ ವಿಶೇಷ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಗರ್ಲ್‌ಫ್ರೆಂಡ್‌ ರಶ್ಮಿಕಾ ಮಂದಣ್ಣಗೆ ಲಕ್ಕಿ ಚಾರ್ಮ್‌ ಎಂದ ವಿಜಯ್‌ ದೇವರಕೊಂಡ

    ಕಂದ ನನ್ನ ಒಡಲಲ್ಲಿ, ನಾನು ಅಮ್ಮನ ಮಡಿಲಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ. ಮನೆಗೆ ಆಗಮಿಸಲಿರುವ ಕಂದನ ಮೇಲಿನ ಮತ್ತು ಅಮ್ಮನ ಮೇಲಿನ ಮಮತೆಯನ್ನು ಈ ಫೋಟೋ ಮೂಲಕ ನಟಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

     

    View this post on Instagram

     

    A post shared by Hariprriya Simha (@iamhariprriya)

    ಇನ್ನೂ ನವೆಂಬರ್ 1ರಂದು ವಸಿಷ್ಠ ಸಿಂಹ (Vasishta Simha) ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ವಿಚಾರವನ್ನು ರಿವೀಲ್ ಮಾಡಿದ್ದರು. ಮದುವೆಯ ಬಳಿಕ ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡಿದ್ದಾರೆ. ಈಗ ಹೊಸ ಅತಿಥಿ ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ.

    ಇನ್ನೂ ವಸಿಷ್ಠ ಸಿಂಹ ಜೊತೆ ಹರಿಪ್ರಿಯಾ ಕಳೆದ ವರ್ಷ ಜ.26ರಂದು ಹಸೆಮಣೆ ಏರಿದರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಿದ್ದರು.

  • ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ಮದುವೆ ಸಂಭ್ರಮದ ಫೋಟೋ ಹಂಚಿಕೊಂಡ ನಾಗಚೈತನ್ಯ

    ತೆಲುಗಿನ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಡಿ.4ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರೂ ಸಂಭ್ರಮದಿಂದ ಮದುವೆಯಾಗಿರುವ (Wedding) ಬ್ಯೂಟಿಫುಲ್ ಫೋಟೋವನ್ನು ಈ ಜೋಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

    ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿ.4ರಂದು ರಾತ್ರಿ 8:15ಕ್ಕೆ ಶೋಭಿತಾ ಮತ್ತು ನಾಗಚೈತನ್ಯ ಹಸೆಮಣೆ ಏರಿದರು. ಖುಷಿ ಖುಷಿಯಾಗಿ ಇಬ್ಬರೂ ಮದುವೆಯಾಗಿದ್ದಾರೆ.

    ಮದುವೆಯಲ್ಲಿ ಶೋಭಿತಾ ಮತ್ತು ನಾಗಚೈತನ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ.

    ಇನ್ನೂ ಶೋಭಿತಾ ಮತ್ತು ನಾಗಚೈತನ್ಯ ಕಾಲೇಜು ದಿನಗಳಿಂದ ಪರಿಚಿತರು. ಸಮಂತಾ (Samantha) ಜೊತೆಗಿನ ದಾಂಪತ್ಯಕ್ಕೆ ಪೂರ್ಣ ವಿರಾಮ ಬಿದ್ಮೇಲೆ ಶೋಭಿತಾ ಎಂಟ್ರಿ ಕೊಟ್ಟರು. ಇದನ್ನೂ ಓದಿ:ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್?

    ಎರಡೂವರೆ ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ನಾಗಚೈತನ್ಯ ಮತ್ತು ಶೋಭಿತಾ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಈ ಜೋಡಿಗೆ ಶುಭಕೋರಲು ನ್ಯಾಚುರಲ್‌ ಸ್ಟಾರ್‌ ನಾನಿ ದಂಪತಿ, ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.

    ಈ ವರ್ಷ ಆಗಸ್ಟ್ 8ರಂದು ಈ ಜೋಡಿ ನಿಶ್ಚಿತಾರ್ಥ ಕಾರ್ಯಕ್ರಮ ನಟನ ನಿವಾಸದಲ್ಲಿ ಸರಳವಾಗಿ ಜರುಗಿತು. ನಾಗಾರ್ಜುನ ಅಕ್ಕಿನೇನಿ (Nagarjuna Akkineni) ಅವರು ಸೊಸೆಯನ್ನು ಫ್ಯಾನ್ಸ್‌ಗೆ ಪರಿಚಿಯಿಸಿದರು.

    ಅಂದಹಾಗೆ, ‘ಯೇ ಮಾಯ ಚೇಸಾವೆ’ ಸಿನಿಮಾದಲ್ಲಿ ನಾಗಚೈತನ್ಯ ಮತ್ತು ಸಮಂತಾ ಜೊತೆಯಾಗಿ ನಟಿಸಿದರು. ಈ ವೇಳೆ, ಇಬ್ಬರಿಗೂ ಪ್ರೇಮಾಂಕುರವಾಗಿತ್ತು. ಹಲವು ವರ್ಷಗಳ ಡೇಟಿಂಗ್ ನಂತರ 2017ರಲ್ಲಿ ಹಿಂದೂ ಮತ್ತು ಕ್ರೈಸ್ತ ಧರ್ಮದಂತೆ ಇಬ್ಬರ ಮದುವೆ ನಡೆದಿತ್ತು.

    ಕೆಲ ಮನಸ್ತಾಪಗಳಿಂದ 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್ ಘೋಷಿಸಿದರು. 4 ವರ್ಷಗಳ ದಾಂಪತ್ಯಕ್ಕೆ ಈ ಜೋಡಿ ಅಂತ್ಯ ಹಾಡಿದರು.

     

    View this post on Instagram

     

    A post shared by Sobhita (@sobhitad)

    ಇನ್ನೂ ಸಮಂತಾ ಡಿವೋರ್ಸ್ ವಿಚಾರ ತಂದೆ ಜೋಸೆಫ್ ಪ್ರಭುಗೆ ನೋವುಂಟು ಮಾಡಿತ್ತು. ಈ ನೋವಿನಿಂದ ಹೊರಬರಲು ಸಾಕಷ್ಟು ಸಮಯ ತೆಗೆದುಕೊಂಡಿದರು. ನಾಗಚೈತನ್ಯ ಮದುವೆಯ 1 ವಾರಗಳ ಮುನ್ನ ಅಂದರೆ ನ.29ರಂದು ಸಮಂತಾ ತಂದೆ ನಿಧನರಾದರು.

  • ಭಾವಿ ಪತಿಯನ್ನು ಪರಿಚಯಿಸಿದ ‘ಸೀತಾ ರಾಮ’ ನಟಿ ಮೇಘನಾ

    ಭಾವಿ ಪತಿಯನ್ನು ಪರಿಚಯಿಸಿದ ‘ಸೀತಾ ರಾಮ’ ನಟಿ ಮೇಘನಾ

    ‘ಸೀತಾ ರಾಮ’, ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ಮನಗೆದ್ದಿರುವ ನಟಿ ಮೇಘನಾ ಶಂಕರಪ್ಪ (Meghana Shankarappa) ಅವರು ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ಜಯಂತ್ (Jayanth) ಜೊತೆಗಿನ ಫೋಟೋ ಹಂಚಿಕೊಂಡು ಎಂಗೇಜ್ ಆಗಿರೋದಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ವದಂತಿಗೆ ಫುಲ್ ಸ್ಟಾಪ್- ಜೊತೆಯಾಗಿ ಕಾಣಿಸಿಕೊಂಡ ಅಭಿಷೇಕ್, ಐಶ್ವರ್ಯಾ ರೈ

    ಸದ್ಯದಲ್ಲೇ ನಟಿ ಹಸೆಮಣೆ ಏರೋದಕ್ಕೆ ರೆಡಿಯಾಗಿದ್ದಾರೆ. ಭಾವಿ ಪತಿ ಜೊತೆಗಿನ ವಿಶೇಷ ವಿಡಿಯೋ ಹಂಚಿಕೊಂಡು ಫ್ಯಾನ್ಸ್‌ಗೆ ಪರಿಚಯಿಸಿದ್ದಾರೆ. ಹೊಸ ಜೋಡಿಗೆ ಅಭಿಮಾನಿಗಳು ಶುಭಕೋರುತ್ತಿದ್ದಾರೆ. ಸಿನಿಮಾ ಸ್ಟೈಲಿನಲ್ಲಿ ಭಾವಿ ಪತಿಯನ್ನು ನಟಿ ಪರಿಚಯಿಸಿದ್ದಾರೆ. ರೆಸ್ಟೋರೆಂಟ್‌ವೊಂದರಲ್ಲಿ ಕಾಫಿ ಕುಡಿಯಲು ಬಂದು ಆ ನಂತರ ಪಾರ್ಟ್ನರ್‌ ಮುಖವನ್ನು ನಟಿ ರಿವೀಲ್‌ ಮಾಡಿದ್ದಾರೆ.

    ಇನ್ನೂ ಈ ಹಿಂದೆ ನಮ್ಮನೆ ಯುವರಾಣಿ, ಕಿನ್ನರಿ, ರತ್ನಗಿರಿ ರಹಸ್ಯ, ಸಿಂಧೂರ, ಕೃಷ್ಣ ತುಳಸಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಅವರು ನಟಿಸಿದ್ದಾರೆ. ಪ್ರಸ್ತುತ ಸೀತಾ ರಾಮ ಧಾರಾವಾಹಿಯಲ್ಲಿ ನಾಯಕಿ ಸೀತಾ ಫ್ರೆಂಡ್ ಪ್ರಿಯಾ ಪಾತ್ರದ ಮೂಲಕ ಮೇಘನಾ ಎಲ್ಲರ ಮನ ಗೆದ್ದಿದ್ದಾರೆ.

  • ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

    ಹಸೆಮಣೆ ಏರಿದ ‘ಸಿಂಗಾರ ಸಿರಿಯೇ’ ಖ್ಯಾತಿಯ ಪ್ರಮೋದ್ ಮರವಂತೆ

    ‘ಕಾಂತಾರ’ ಸಿನಿಮಾದಲ್ಲಿ ‘ಸಿಂಗಾರ ಸಿರಿಯೇ’ ಸಾಹಿತಿ ಪ್ರಮೋದ್ ಮರವಂತೆ (Pramod Maravante) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ‘ಕೆಜಿಎಫ್ 2’ (KGF 2) ಸಿಂಗರ್ ಸುಚೇತ (Suchetha Basrur) ಜೊತೆ ಹೊಸ ಬಾಳಿಗೆ ಪ್ರಮೋದ್ ಕಾಲಿಟ್ಟಿದ್ದಾರೆ. ಇದನ್ನೂ ಓದಿ:ರಿಲೇಷನ್‌ಶಿಪ್ ವದಂತಿ ನಡುವೆ ವಿಜಯ್ ದೇವರಕೊಂಡ ಫ್ಯಾಮಿಲಿಗೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ

    ಡಿ.5ರಂದು ಕುಂದಾಪುರದಲ್ಲಿ ಸಿಂಗರ್ ಸುಚೇತ ಜೊತೆ ಪ್ರಮೋದ್ ಮರವಂತೆ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಇನ್ನೂ ಇತ್ತೀಚೆಗೆ ನಿಶ್ಚಿತಾರ್ಥದ ಸಂಭ್ರಮದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ‘ರಾಗಕ್ಕೆ ಪದ ಸೇರಿದೆ ಬದುಕೊಂದು ಹಾಡಾಗಿದೆ’ ಎಂದು ಸಾಲುಗಳನ್ನು ಬರೆದು ಭಾವಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು.

    ಪ್ರಮೋದ್ ಭಾವಿ ಪತ್ನಿಯ ಹೆಸರು ಸುಚೇತ ಬಸ್ರೂರು, ಕೆಜಿಎಫ್ 2 ಚಿತ್ರದಲ್ಲಿ ‘ಗಗನ ನೀ ಭುವನ ನೀ’ ಎಂಬ ಹಾಡನ್ನು ಸೊಗಸಾಗಿ ಹಾಡುವ ಮೂಲಕ ಸದ್ದು ಮಾಡಿದ್ದರು. ಇವರು ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸೊಸೆಯಾಗಿದ್ದಾರೆ. ಅವರ ರವಿ ಬಸ್ರೂರು ಅವರ ಅಕ್ಕನ ಮಗಳು ಸುಚೇತ.

    ಅಂದಹಾಗೆ, ಸಿಂಗಾರ ಸಿರಿಯೇ, ಚೆಂದ ಚೆಂದ ನನ್ನ ಹೆಂಡ್ತಿ, ಮತ್ತು ‘ಸೀತಾರಾಮ’ ಸೀರಿಯಲ್‌ನ ಟೈಟಲ್ ಟ್ರ‍್ಯಾಕ್‌ಗೆ ಪ್ರಮೋದ್ ಸಾಹಿತ್ಯ ಬರೆದಿದ್ದಾರೆ. ಸಾಕಷ್ಟು ಸಿನಿಮಾಗಳ ಹಾಡಿಗೆ ಲಿರಿಕ್ಸ್ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.

  • ನಾಗಚೈತನ್ಯ, ಶೋಭಿತಾ ಮದುವೆಗೆ ಯಾರೆಲ್ಲಾ ಬರಲಿದ್ದಾರೆ?- ಗೆಸ್ಟ್ ಲಿಸ್ಟ್ ಔಟ್

    ನಾಗಚೈತನ್ಯ, ಶೋಭಿತಾ ಮದುವೆಗೆ ಯಾರೆಲ್ಲಾ ಬರಲಿದ್ದಾರೆ?- ಗೆಸ್ಟ್ ಲಿಸ್ಟ್ ಔಟ್

    ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಮತ್ತು ಶೋಭಿತಾ (Sobhita Dhulipala) ಅವರು ಇಂದು (ಡಿ.4) ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗುತ್ತಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ಮದುವೆಗೆ ಯಾರೆಲ್ಲಾ ಬರಲಿದ್ದಾರೆ ಎಂಬ ಅತಿಥಿಗಳ ಲಿಸ್ಟ್ ರಿವೀಲ್ ಆಗಿದೆ.

    ನಾಗಚೈತನ್ಯ ಮದುವೆಗೆ ರಾಮ್ ಚರಣ್ ದಂಪತಿ, ಮಹೇಶ್ ಬಾಬು (Mahesh Babu) ದಂಪತಿ, ರಾಜಮೌಳಿ, ನಯನತಾರಾ, ಪ್ರಭಾಸ್(Prabhas), ಅಲ್ಲು ಅರ್ಜುನ್, ಸುಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಲಿದ್ದಾರೆ. ಒಟ್ಟು 300 ಸ್ಟಾರ್ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಲಾಗಿದೆಯಂತೆ.

    ನಾಗಾರ್ಜುನ ಅಕ್ಕಿನೇನಿ ಒಡೆತನದ ಅನ್ನಪೂರ್ಣ ಸ್ಪುಡಿಯೋದಲ್ಲಿ ಇಂದು (ಡಿ.4) ಮದುವೆ ನಡೆಯಲಿದೆ. ರಾತ್ರಿ 8:15 ವೇಳೆ ಮದುವೆ ಮುಹೂರ್ತ ಕಾರ್ಯಕ್ರಮ ಜರುಗಲಿದೆ. ಈಗಾಗಲೇ ವಿವಾಹ ಪೂರ್ವ ಕಾರ್ಯಗಳು ಕೂಡ ಸಂಭ್ರಮದಿಂದ ನೆರವೇರಿದೆ. ಇದನ್ನೂ ಓದಿ:ಪವನ್ ಕಲ್ಯಾಣ್‌ಗೆ ಥ್ಯಾಂಕ್ಯೂ ಎಂದ ಐಕಾನ್‌ ಸ್ಟಾರ್‌

    ಅಂದಹಾಗೆ, ಸಮಂತಾ (Samantha) ಜೊತೆ 2017ರಲ್ಲಿ ನಾಗಚೈತನ್ಯ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರೂ ಡಿವೋರ್ಸ್ ಪಡೆದುಕೊಳ್ಳುವುದಾಗಿ 2021ರಲ್ಲಿ ಅನೌನ್ಸ್ ಮಾಡಿದರು. ಈಗ ಶೋಭಿತಾ ಜೊತೆ ನಟ 2ನೇ ಮದುವೆಗೆ ರೆಡಿಯಾಗಿದ್ದಾರೆ.

  • ತಿಮ್ಮಪ್ಪನ ದೇವಸ್ಥಾನದಲ್ಲಿ ಮದುವೆ ಸುದ್ದಿ ಖಚಿತಪಡಿಸಿದ ಕೀರ್ತಿ ಸುರೇಶ್

    ತಿಮ್ಮಪ್ಪನ ದೇವಸ್ಥಾನದಲ್ಲಿ ಮದುವೆ ಸುದ್ದಿ ಖಚಿತಪಡಿಸಿದ ಕೀರ್ತಿ ಸುರೇಶ್

    ಸೌತ್ ನಟಿ ಕೀರ್ತಿ ಸುರೇಶ್ (Keerthy Suresh) ಅವರು ಪೋಷಕರ ಜೊತೆ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಭೇಟಿ ಕೊಟ್ಟಿದ್ದಾರೆ. ತಿಮ್ಮಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮದುವೆ (Wedding) ಸುದ್ದಿ ನಿಜ ಎಂದು ಅಧಿಕೃತವಾಗಿ ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ಮತ್ತೆ ಹಾಟ್ ಅವತಾರ ತಾಳಿದ ‘ಟೋಬಿ’ ಬೆಡಗಿ ಚೈತ್ರಾ

    ತಿರುಮಲದಲ್ಲಿ ತಿಮ್ಮಪ್ಪನ ಸನ್ನಿಧಿಯಲ್ಲಿ ನಟಿ ಮಾತನಾಡಿ, ಮುಂದಿನ ತಿಂಗಳು ವರುಣ್ ಧವನ್ ಜೊತೆಗಿನ ನನ್ನ ಮೊದಲ ಬಾಲಿವುಡ್ ಸಿನಿಮಾ ರಿಲೀಸ್ ಆಗುತ್ತಿದೆ. ಜೊತೆಗೆ ನನ್ನ ಮದುವೆ ಮುಂದಿನ ತಿಂಗಳು ನಡೆಯಲಿದೆ. ಗೋವಾದಲ್ಲಿ ಮದುವೆ ನಡೆಯುತ್ತಿದೆ. ಅದಕ್ಕಾಗಿ ದೇವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೇನೆ ಎಂದಿದ್ದಾರೆ. ಈ ಮೂಲಕ ಆಂಟೋನಿ ತಟ್ಟಿಲ್ ಜೊತೆಗಿನ ಮದುವೆ ಸುದ್ದಿಯನ್ನು ನಟಿ ಖಚಿತಪಡಿಸಿದರು.

    ಅಂದಹಾಗೆ, 15 ವರ್ಷಗಳ ಬಂಧಕ್ಕೆ ಇದೇ ಡಿ.11ರಂದು ಮದುವೆಯ ಮುದ್ರೆ ಒತ್ತಲಿದ್ದಾರೆ. ಆಂಟೋನಿ ತಟ್ಟಿಲ್ (Antony Thattil) ಜೊತೆ ಕೀರ್ತಿ ಮದುವೆ ಡಿ.11 ಮತ್ತು 12ರಂದು ಗೋವಾದಲ್ಲಿ ಅದ್ಧೂರಿಯಾಗಿ ಜರುಗಲಿದೆ.

  • Kodagu | ವಧುವಿಗೆ ತೊಡಿಸಲು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

    Kodagu | ವಧುವಿಗೆ ತೊಡಿಸಲು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

    ಮಡಿಕೇರಿ: ವಧುವಿಗೆ ತೊಡಿಸಲೆಂದು ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ (Gold jewellery) ಮದುವೆ ಮನೆಯಲ್ಲೇ ಕಳ್ಳತನವಾಗಿರುವ ಘಟನೆ ಕೊಡಗು (Kodagu) ಜಿಲ್ಲೆಯ ಕುಶಾಲನಗರ ತಾಲೂಕಿನ ರೈತ ಭವನದಲ್ಲಿ ನಡೆದಿದೆ.

    ಸಂಬಂಧಿಕರ ಸೋಗಿನಲ್ಲಿ ಬಂದ ಯುವಕನಿಂದಲೇ ಕಳ್ಳತನ ಆಗಿದೆ. ಅಂದಾಜು 45,000 ರೂ. ಮೌಲ್ಯದ ಚಿನ್ನ, 50 ಸಾವಿರ ರೂ. ಮೌಲ್ಯದ ಚಿನ್ನದ ಕಡಗ, 23,000 ಮೌಲ್ಯದ ಒಂದು ಜೊತೆ ಚಿನ್ನದ ಓಲೆ, ಜೊತೆಗೆ 5,000 ರೂ. ಕದ್ದು ಪರಾರಿಯಾಗಿದ್ದಾನೆ ಎಂದು ವಧುವಿನ ಕುಟುಂಬಸ್ಥರು ಆರೋಪಿಸಿದ್ದಾರೆ. ಇದನ್ನೂ ಓದಿ: ಡಿ.1 ರಿಂದ ಒಟಿಪಿ ಬರುತ್ತಾ? ಬರಲ್ವಾ? – ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಟ್ರಾಯ್‌

    ಘಟನೆ ಸಂಬಂಧ ಕುಶಾಲನಗರ ನಗರ ಠಾಣೆಗೆ ವಧುವಿನ ಪೋಷಕರು ದೂರು ನೀಡಿದ್ದಾರೆ. ನಂತರ ಮದುವೆ ಮಂಟಪಕ್ಕೆ ತೆರಳಿದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನ ಪರಿಶೀಲಿಸಿದ್ದಾರೆ. ಮುಂದಿನ ತನಿಖೆ ಕೈಗೊಂಡಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ. ಇದನ್ನೂ ಓದಿ: ಒಳ್ಳೆಯ ರಾಜಕಾರಣದ ಬಗ್ಗೆ ಮಾನ ಮರ್ಯಾದೆ ಇರುವವರ ಬಳಿ ಪ್ರಶ್ನೆ ಕೇಳಿ – ಯತ್ನಾಳ್ ಟಾಂಗ್