Tag: wedding

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯ ಶಾ-ನಿರ್ಮಾಪಕ ವರುಣ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯ ಶಾ-ನಿರ್ಮಾಪಕ ವರುಣ್

    ಸ್ಯಾಂಡಲ್‌ವುಡ್ ನಟಿ ಕಾವ್ಯ ಶಾ ಕೊನೆಗೂ ಹಸೆಮಣೆ ಏರಿದ್ದಾರೆ. ಇಂದು ಗುರುಹಿರಿಯರ ಸಮ್ಮುಖದಲ್ಲಿ ಕಾವ್ಯ ಶಾ ಮತ್ತು ವರುಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾವಿ ಪತಿ ತಂದೆಯ ಅಕಾಲಿಕ ಮರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಈ ಜೋಡಿ ಹಸೆಮಣೆ ಏರಿದ್ದಾರೆ.

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಎರಡು ಬಾರಿ ಮದುವೆ ಮುಂದೂಡಲಾಗಿತ್ತು. ಇಂದು ಕಾವ್ಯ ಮತ್ತು ನಿರ್ಮಾಪಕ ವರುಣ್ ಹಸೆಮಣೆ ಏರಿದ್ದಾರೆ. ಪುನೀತ್ ರಾಜ್‌ಕುಮಾರ್ ಜತೆ ಒಳ್ಳೆಯ ಒಡನಾಟ ಹೊಂದಿದ್ದ ವರುಣ್, ಪುನೀತ್ ಅಕಾಲಿಕ ನಿಧನದ ನಿಮಿತ್ತ ಮದುವೆ ಮುಂದೂಡಲಾಗಿತ್ತು. ಬಳಿಕ ಏಪ್ರಿಲ್ 18ರಂದು ಕಾವ್ಯ ಮತ್ತು ವರುಣ್ ಮದುವೆ ನಿಶ್ಚಯವಾಗಿತ್ತು. ಮದುವೆ ಹಿಂದಿನ ದಿನ ವರುಣ್ ತಂದೆ ಅಕಾಲಿಕ ನಿಧನದಿಂದ ಮತ್ತೆ ಮದುವೆ ಮುಂದೂಡಲಾಗಿತ್ತು. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?

    ಕಾವ್ಯ ಶಾ ಮತ್ತು ನಿರ್ಮಾಪಕ ವರುಣ್ ಇಂದು (ಜೂ.9) ಬೆಂಗಳೂರಿನ ನಂದಿ ಗ್ರೌಂಡ್ಸ್‌ನಲ್ಲಿ ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಮದುವೆಗೆ ಲೂಸ್ ಮಾದ ಯೋಗಿ ಅವರು ಕೂಡ ಬಂದು ಶುಭ ಹಾರೈಸಿದ್ದಾರೆ. ಸಾಕಷ್ಟು ಚಿತ್ರರಂಗದ ಗಣ್ಯರು ಮದುವೆ ಸಂಭ್ರಮಕ್ಕೆ ಸಾಕ್ಷಿಯಾಗಿ ಶುಭಹಾರೈಸಿದ್ದಾರೆ. ಒಟ್ನಲ್ಲಿ ಈ ಸುದ್ದಿ ಕೇಳಿ ಫ್ಯಾನ್ಸ್ ಕೂಡ ಥ್ರಿಲ್ ಆಗಿದ್ದಾರೆ.

  • ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

    ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಸಮಂತಾ ಮಿಸ್ಸಿಂಗ್?

    ಕಾಲಿವುಡ್‌ನ ಸದ್ಯದ ಗುಡ್ ನ್ಯೂಸ್ ಅಂದ್ರೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಸಂಭ್ರಮ. ಆ ಸಂಭ್ರಮಕ್ಕೆ ಚಿತ್ರರಂಗದ ಸಾಕಷ್ಟು ಮಂದಿ ಸಾಕ್ಷಿಯಾಗಲಿದ್ದಾರೆ. ಅದರಲ್ಲಿ ನಿರೀಕ್ಷಿಸುವ ಸ್ಟಾರ್ ಅಂದ್ರೆ `ಪುಷ್ಪ’ ಬ್ಯೂಟಿ ಸಮಂತಾ, ಆದರೆ ಕಾರಣಾಂತರದಿಂದ ಸಮಂತಾ ಮದುವೆಗೆ ಬರಲು ಸಾಧ್ಯವಾಗುತ್ತಿಲ್ಲ.

    ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ಈಗಾಗಲೇ ಕ್ಷಣಗಣನೆ ಶುರುವಾಗಿದೆ. ನಾಳೆಯೇ ಹಸೆಮಣೆ ಏರಲು ಈ ಜೋಡಿ ಸಜ್ಜಾಗಿದೆ. ಇನ್ನು ಸಾಕಷ್ಟು ವರ್ಷಗಳಿಂದ ನಯನತಾರಾ ಮತ್ತು ಸಮಂತಾ ಸ್ನೇಹಿತರು. ಅದಲ್ಲದೇ ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ `ಕಾತುವಾಕುಲ ರೆಂಡು ಕಾದಲ್’ ಚಿತ್ರದಲ್ಲಿ ವಿಜಯ್ ಸೇತುಪತಿಗೆ ಜೋಡಿಯಾಗಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರಕ್ಕೆ ವಿಘ್ನೇಶ್ ಶಿವನ್ ನಿರ್ದೇಶನ ಮಾಡಿದ್ದರು. ಆದರೆ ಈಗ ಈ ಮದುವೆಗೆ ಶೂಟಿಂಗ್ ನಿಮಿತ್ತ ಮದುವೆಗೆ ಬರಲಾಗುತ್ತಿಲ್ಲ. ಇದನ್ನೂ ಓದಿ: ನಯನತಾರಾ- ವಿಘ್ನೇಶ್ ಶಿವನ್ ಮದುವೆಗೆ ಕ್ಷಣಗಣನೆ

    ನಯನತಾರಾ ಮತ್ತು ಸಮಂತಾ ನಡುವೆ ಒಳ್ಳೆಯ ಬಾಂಧವ್ಯವಿದೆ. ಸಾಕಷ್ಟು ವರ್ಷಗಳಿಂದ ಒಳ್ಳೆಯ ಗೆಳೆತನವಿದೆ.  ಸದ್ಯ `ಖುಷಿ’ ಚಿತ್ರದಲ್ಲಿ ಸಮಂತಾ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡಗೆ ನಾಯಕಿಯಾಗಿ ಸಮಂತಾ ನಟಿಸುತ್ತಿದ್ದಾರೆ. ಈ ಚಿತ್ರದ ಎರಡನೇ ಹಂತದ ಶೂಟಿಂಗ್ ನಡೆಯಲಿದೆ. ಹಾಗಾಗಿ ನಯನತಾರಾ ಮದುವೆಗೆ ಬರಲಾಗುತ್ತಿಲ್ಲ. ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಯಾರೆಲ್ಲಾ ತಾರೆಯರು ಸಾಕ್ಷಿಯಾಗಲಿದ್ದಾರೆ ಎಂಬುದನ್ನ ಕಾದುನೋಡಬೇಕಿದೆ.

  • ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್

    ಗೆಳತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ಕ್ರಿಕೆಟಿಗ ದೀಪಕ್ ಚಹರ್

    ನವದೆಹಲಿ: ಭಾರತ ಕ್ರಿಕೆಟ್ ಟೀಮ್‌ನ ಆಲ್‌ರೌಂಡರ್ ದೀಪಕ್ ಚಹರ್ ತಮ್ಮ ಗೆಳತಿ ಜಯಾ ಭಾರದ್ವಾಜ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಬುಧವಾರ ತಮ್ಮ ಗೆಳತಿಯೊಂದಿಗೆ ವಿವಾಹವಾದ ಚಹರ್, ಗುರುವಾರ ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಹಾಗೂ ಪತ್ನಿ ಬಗ್ಗೆ ತಮ್ಮ ಮನದಾಳದ ಮಾತನ್ನು ವಿವರಿಸಿದ್ದಾರೆ.

    ನಾನು ನಿನ್ನನ್ನು ಮೊದಲ ಬಾರಿ ಭೇಟಿಯಾದಾಗ ನನ್ನ ಜೀವನಕ್ಕೆ ನೀನೇ ಸರಿಯಾದ ವ್ಯಕ್ತಿ ಎಂದು ತಿಳಿದಿದ್ದೆ. ನಾವು ನಮ್ಮ ಜೀವನದ ಪ್ರತಿಯೊಂದು ಕ್ಷಣವನ್ನು ಜೊತೆಯಲ್ಲಿ ಆನಂದಿಸಿದ್ದೇವೆ ಹಾಗೂ ನಿನ್ನನ್ನು ಯಾವಾಗಲೂ ಹೀಗೇ ಸಂತೋಷವಾಗಿಡಲು ಬಯಸುತ್ತೇನೆ. ಇದು ನನ್ನ ಜೀವನದ ಅತ್ಯುತ್ತಮ ಕ್ಷಣಗಳಲ್ಲಿ ಒಂದು. ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನಮಗೆ ಎಲ್ಲರ ಆಶೀರ್ವಾದ ಬೇಕು ಎಂದು ಬರೆದಿದ್ದಾರೆ. ಇದನ್ನೂ ಓದಿ: ಒಂದೇ ಒಂದು ಪಂದ್ಯವಾಡದೇ 2 ಐಪಿಎಲ್ ಕಪ್ ಗೆದ್ದ ವಿದೇಶಿ ಆಟಗಾರ

     

    View this post on Instagram

     

    A post shared by Deepak Chahar (@deepak_chahar9)

    ಕಳೆದ ವರ್ಷ ದುಬೈನಲ್ಲಿ ನಡೆದ ಐಪಿಎಲ್‌ನಲ್ಲಿ ದೀಪಕ್ ಜಯಾಗೆ ಸ್ಟೇಡಿಯಂನಲ್ಲೇ ಪ್ರಪೋಸ್ ಮಾಡಿದ್ದರು. ದೀಪಕ್ ತಮ್ಮ ಗೆಳತಿಗೆ ಪ್ರೇಮನಿವೇದನೆ ಮಾಡಿದ್ದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಸಿಎಸ್‌ಕೆ ತಂಡದಲ್ಲಿದ್ದ ದೀಪಕ್ ಪಂಜಾಬ್ ತಂಡದ ವಿರುದ್ಧ ಪಂದ್ಯವನ್ನು ಗೆದ್ದ ಬಳಿಕ ಎಲ್ಲರೆದುರು ಗೆಳತಿಗೆ ಉಂಗುರ ತೊಡಿಸಿದ್ದರು. ಇದನ್ನೂ ಓದಿ: ಭಾರತ, ದಕ್ಷಿಣ ಆಫ್ರಿಕಾ T20 ಪಂದ್ಯ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ

    ಜಯಾ ಬಾರದ್ವಾಜ್ ನಟ ಹಾಗೂ ಬಿಗ್‌ಬಾಸ್ 13ರ ವಿಜೇತ ಸಿದ್ಧಾರ್ಥ್ ಭಾರದ್ವಾಜ್ ಅವರ ಸಹೋದರಿಯಾಗಿದ್ದು, ದೆಹಲಿಯ ಕಾರ್ಪೊರೇಟ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

  • ಹಸೆಮಣೆ ಏರಿದ `ಕನ್ಯಾಕುಮಾರಿ’ ಧಾರಾವಾಹಿ ನಟಿ ರಶ್ಮಿತಾ ಶೆಟ್ಟಿ

    ಹಸೆಮಣೆ ಏರಿದ `ಕನ್ಯಾಕುಮಾರಿ’ ಧಾರಾವಾಹಿ ನಟಿ ರಶ್ಮಿತಾ ಶೆಟ್ಟಿ

    ಕಿರುತೆರೆ ನಟಿ ರಶ್ಮಿತಾ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವತ್ತಿರುವ ಕನ್ಯಾಕುಮಾರಿ ಧಾರಾವಾಹಿ ನಟಿ ಯಾಮಿನಿ ಅಲಿಯಾಸ್ ರಶ್ಮಿತಾ ಶೆಟ್ಟಿ ಹಸೆಮಣೆ ಏರಿದ್ದಾರೆ. ಈ ಅದ್ದೂರಿ ಮದುವೆಗೆ ಕಿರುತೆರೆ ನಟ ನಟಿರು ಸಾಕ್ಷಿಯಾಗಿದ್ದಾರೆ.

    ತ್ರಿವೇಣಿ ಸಂಗಮ, ಸುಬ್ಬಲಕ್ಷ್ಮಿ ಸಂಸಾರ, ಬ್ರಹ್ಮಾಸ್ತ್ರ, ಹೀಗೆ ಸಾಕಷ್ಟು ಧಾರಾವಾಹಿ ಮೂಲಕ ಮೋಡಿ ಮಾಡಿರುವ ನಟಿ ರಶ್ಮಿತಾ ಜೆ ಶೆಟ್ಟಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಕನ್ಯಾಕುಮಾರಿ ಧಾರಾವಾಹಿಯಲ್ಲಿ ಮಿಂಚ್ತಿರುವ ರಶ್ಮಿತಾ ಖಳನಾಯಕಿಯಾಗಿ ಯಾಮಿನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 2019ರ `ಕೃಷ್ಣ ಗಾರ್ಮೆಟ್ಸ್’ ಚಿತ್ರದಲ್ಲೂ ನಟಿಸಿ ರಶ್ಮಿತಾ ಸೈ ಎನಿಸಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆ ಉಪೇಂದ್ರ ಹೊಸ ಸಿನಿಮಾಗೆ ಮುಹೂರ್ತ : ಅತಿಥಿಗಳಾದ ನಾಲ್ವರು ಸ್ಟಾರ್ ನಟರು

    ರಶ್ಮಿತಾ ಶೆಟ್ಟಿ ಗುರು ಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಿದ್ದು, ಇದೀಗ ಮದುವೆಯ ಫೋಟೋಗಳು ಭಾರೀ ವೈರಲ್ ಆಗುತ್ತಿದೆ. ಈ ಮದುವೆ ಕನ್ಯಾಕುಮಾರಿ ಧಾರಾವಾಹಿ ತಂಡ ಕೂಡ ಸಾಕ್ಷಿಯಾಗಿದೆ. ಸಾಕಷ್ಟು ಕಿರುತೆರೆ ಕಲಾವಿದರು ನವದಂಪತಿಗೆ ಶುಭಹಾರೈಸಿದ್ದಾರೆ.

  • ಹಸೆಮಣೆ ಏರಲು ಸಜ್ಜಾದ `ಜೋಶ್’ ನಟಿ ಪೂರ್ಣ

    ಹಸೆಮಣೆ ಏರಲು ಸಜ್ಜಾದ `ಜೋಶ್’ ನಟಿ ಪೂರ್ಣ

    ನ್ನಡ ಚಿತ್ರರಂಗಕ್ಕೆ `ಜೋಶ್’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಪೂರ್ಣ ಈಗ ಹಸೆಮಣೆ ಏರಲು ಸಜ್ಜಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, ಪತಿಯನ್ನು ಪರಿಚಯಿಸುವ ಮೂಲಕ ತಮ್ಮ ಮದುವೆಯ ಕುರಿತು ನಟಿ ಪೂರ್ಣ ರಿವೀಲ್ ಮಾಡಿದ್ದಾರೆ.

    `ಜೋಶ್’ ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. ಬಹುಭಾಷಾ ಸಿನಿಮಾಗಳಲ್ಲಿ ಛಾಪೂ ಮೂಡಿಸಿರುವ ನಟಿ ಪೂರ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಶಾಮ್ನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

    `ನನ್ನ ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ’ ಎಂದು ಸಂತಸದ ವಿಚಾರವನ್ನು ನಟಿ ಪೂರ್ಣ ಹಂಚಿಕೊಂಡಿದ್ದಾರೆ. ಜೊತೆಗೆ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಪೂರ್ಣ ಮದುವೆಯಾಗುತ್ತಿರುವ ಹುಡುಗ ಶಾನಿದ್ ಆಸಿಫ್ ಅಲಿ.

    ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ. ನೆಚ್ಚಿನ ನಟಿಯ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.

  • ಒಂಟಿ ಜೀವನಕ್ಕೆ ಜೆಕೆ ಗುಡ್ ಬೈ : ಇವರೇ ಜೆಕೆ ಮದುವೆ ಆಗುತ್ತಿರುವ ಹುಡುಗಿ

    ಒಂಟಿ ಜೀವನಕ್ಕೆ ಜೆಕೆ ಗುಡ್ ಬೈ : ಇವರೇ ಜೆಕೆ ಮದುವೆ ಆಗುತ್ತಿರುವ ಹುಡುಗಿ

    ಸ್ಯಾಂಡಲ್ ವುಡ್ ನಲ್ಲಿ ಜೆಕೆ ಅಲಿಯಾಸ್ ಕಾರ್ತಿಕ್ ಜಯರಾಮ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಸದ್ಯದಲ್ಲೇ ಅವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಿರುತೆರೆಯ ಅತ್ಯಂತ ಜನಪ್ರಿಯ ಧಾರಾವಾಹಿ ‘ಅಶ್ವಿನಿ ನಕ್ಷತ್ರ’ದಲ್ಲಿ ‘ಹೆಂಡ್ತಿ..’ ಡೈಲಾಗ್ ಮೂಲಕವೇ ಇವರು ಫೇಮಸ್ ಆಗಿದ್ದರು. ಈಗ ಹೆಂಡತಿಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಸಪ್ತಪದಿ ತುಳಿಯುತ್ತಿದ್ದಾರೆ. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

    ಜೆಕೆ ಅಭಿಮಾನಿಗಳು ಅವರನ್ನು ಕೇಳುತ್ತಿದ್ದ ಪ್ರಶ್ನೆ ಎಂದರೆ, ‘ಯಾವಾಗ ಮದುವೆ ಆಗುತ್ತೀರಿ?’ ಎಂದು. ಈ ಪ್ರಶ್ನೆಗೆ ಜೆಕೆ ಫ್ಯಾಷನ್ ಡಿಸೈನರ್ ಚೆಲುವೆಯನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಉತ್ತರಿಸಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಳ್ಳುವ ಮೂಲಕ ಭಾವಿ ಪತ್ನಿಯನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ. ಇದನ್ನೂ ಓದಿ : ಅಕ್ಟೋಬರ್ 3ಕ್ಕೆ ಅಭಿಷೇಕ್ ಅಂಬರೀಶ್ ಹೊಸ ಸಿನಿಮಾಗೆ ಮುಹೂರ್ತ

    ಅಂದಹಾಗೆ ಜೆಕೆ ಮದುವೆ ಆಗುತ್ತಿರುವ ಹುಡುಗಿಯ ಹೆಸರು ಅರ್ಪಣ. ವೃತ್ತಿಯಲ್ಲಿ ನುರಿತ ಫ್ಯಾಷನ್ ಡಿಸೈನರ್. ಫ್ಯಾಷನ್ ಲೋಕಕ್ಕೆ ಈಗಾಗಲೇ ಚಿರಪರಿಚಿತ ಆಗಿರುವ ಅಪರ್ಣ, ಸಾಕಷ್ಟು ಮಾಡೆಲ್ ಗಳಿಗೆ ಹೊಸ ರೀತಿಯ ಫ್ಯಾಷನ್ ಡಿಸೈನ್ ಮಾಡಿದ್ದಾರೆ. ಅಲ್ಲದೇ, ಸಿಲೆಬ್ರಿಟಿಗಳ ನೆಚ್ಚಿನ ಡಿಸೈನರ್ ಕೂಡ ಇವರಾಗಿದ್ದಾರೆ. ಇದನ್ನೂ ಓದಿ : ‘ಮಾ ಇಷ್ಟಂ’ ಸಿನಿಮಾಗೆ ತಡೆಯಾಜ್ಞೆ ತಂದವರ ವಿರುದ್ಧವೇ ನಕಲಿ ಸಹಿ ದೂರು ನೀಡಿದ ವರ್ಮಾ

    ತಾವು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅಪರ್ಣ ಸಮಂತ್, ತಮ್ಮಿಬ್ಬರ ಫೋಟೋ ಜೊತೆಗೆ ಲೈಫ್ ಲೈನ್ ಎಂದು ಬರೆದುಕೊಂಡು, ಮದುವೆ ಆಗುತ್ತಿರುವ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ.

  • ಟ್ರ್ಯಾಕ್ಟರ್ ಚಲಾಯಿಸಿ ಮದುವೆ ಮಂಟಪಕ್ಕೆ ಆಗಮಿಸಿದ ವಧು

    ಟ್ರ್ಯಾಕ್ಟರ್ ಚಲಾಯಿಸಿ ಮದುವೆ ಮಂಟಪಕ್ಕೆ ಆಗಮಿಸಿದ ವಧು

    ಭೋಪಾಲ್: ಸಾಮಾನ್ಯವಾಗಿ ಮದುವೆ ಮಂಟಪಕ್ಕೆ ವಧು ಪಲ್ಲಕ್ಕಿಯಲ್ಲಾಗಲಿ, ಕಾರಿನಲ್ಲಾಗಲಿ ಬರುವುದು ರೂಢಿ. ಆದರೆ ಇಲ್ಲೊಂದು ವಧು ತನ್ನ ಮದುವೆಗೆ ಟ್ರ್ಯಾಕ್ಟರ್‌ನ್ನು ತಾನೇ ಚಲಾಯಿಸಿಕೊಂಡು ಮಂಟಪಕ್ಕೆ ಆಗಮಿಸಿದ್ದಾಳೆ.

    ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಜಾವ್ರಾ ಗ್ರಾಮದಲ್ಲಿ ಮದುವೆ ನಡೆದಿದೆ. ಭಾರತಿ ತಾಗ್ಡೆ ವಧು. ಇವರು ಕಪ್ಪು ಕನ್ನಡಕವನ್ನು ಧರಿಸಿ ಟ್ರ್ಯಾಕ್ಟರ್‌ನ್ನು ತಾನೇ ಚಲಾಯಿಸಿ ಮದುವೆ ಮಂಟಪಕ್ಕೆ ಬಂದಳು. ಟ್ರ್ಯಾಕ್ಟರ್‌ನಲ್ಲಿ ಆಕೆಯ ಇಬ್ಬರು ಸಹೋದರರು ಪಕ್ಕದಲ್ಲಿ ಕುಳಿತಿದ್ದರು. ಈ ರೀತಿಯಾಗಿ ವಧುವಿನ ಪ್ರವೇಶವನ್ನು ನೋಡಿದ ಅಲ್ಲಿ ನೆರೆದಿದ್ದ ಜನರನ್ನು ಆಶ್ಚರ್ಯಗೊಳಿಸಿತು.

    ಪಲ್ಲಕ್ಕಿ ಅಥವಾ ಕಾರಿನಲ್ಲಿ ಪ್ರವೇಶಿಸುವ ಪ್ರವೃತ್ತಿ ಹಳೆಯದಾಗಿದೆ. ಇದಿರಿಂದಾಗಿ ವಿಭಿನ್ನವಾಗಿ ಏನನ್ನಾದರೂ ಮಾಡಲು ಬಯಸುತ್ತಿದ್ದೆ ಎಂದು ಭಾರತಿ ತಾಗ್ದೆ ತಿಳಿಸಿದರು. ಇದೀಗ ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸಾಮಾನ್ಯರಂತೆ ಬರಿಗಾಲಲ್ಲೇ ಕೆಸರಲ್ಲಿ ನಡೆದು ಸಂತ್ರಸ್ತರಿಗೆ ಸ್ಪಂದಿಸಿದ ಐಎಎಸ್ ಅಧಿಕಾರಿ

    ಈ ವರ್ಷದ ಆರಂಭದಲ್ಲಿ, ಹರಿಯಾಣದ ಅಂಬಾಲಾದಲ್ಲಿ ನಡೆದ ಮದುವೆಯೊಂದರಲ್ಲಿ ವಧು ತನ್ನ ಕೈಯಲ್ಲಿ ಕತ್ತಿಯೊಂದಿಗೆ ಕುದುರೆಯ ಮೇಲೆ ಸವಾರಿ ಮಾಡುತ್ತಾ ವರನ ಮನೆಗೆ ಹೋಗಿ ಮದುವೆಯಾದಳು. ಇದನ್ನೂ ಓದಿ: ಮದುವೆ ಸಮಾರಂಭದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ಕುಣಿದ ಗ್ರಾಪಂ ಸದಸ್ಯರು

  • ಮೊದಲ ಪತಿಗೆ ಡಿವೋರ್ಸ್- ಮಕ್ಕಳ ಎದುರೇ 10 ವರ್ಷಗಳ ಬಳಿಕ ಹಸೆಮಣೆ ಏರಿದ ಗಾಯಕಿ ಕನ್ನಿಕಾ

    ಮೊದಲ ಪತಿಗೆ ಡಿವೋರ್ಸ್- ಮಕ್ಕಳ ಎದುರೇ 10 ವರ್ಷಗಳ ಬಳಿಕ ಹಸೆಮಣೆ ಏರಿದ ಗಾಯಕಿ ಕನ್ನಿಕಾ

    ಬಾಲಿವುಡ್ ಗಾಯಕಿ ಕನ್ನಿಕಾ ಕಪೂರ್ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಪತಿಗೆ ಡಿವೋರ್ಸ್ ನೀಡಿ, ಹತ್ತು ವರ್ಷಗಳ ನಂತರ ಉದ್ಯಮಿ ಗೌತಮ್ ಜೊತೆ ಕನ್ನಿಕಾ ಕಪೂರ್ ಹಸೆಮಣೆ ಏರಿದ್ದಾರೆ. ಈ ಮದುವೆಯಲ್ಲಿ ಕನ್ನಿಕಾ ಮಕ್ಕಳು ಸಾಕ್ಷಿಯಾಗಿದ್ದಾರೆ.

    ಸಾಕಷ್ಟು ಬಾಲಿವುಡ್ ಹಾಡುಗಳಿಗೆ ಧ್ವನಿಯಾಗಿದ್ದ ಕನ್ನಿಕಾ, ತಮ್ಮ ವಯಕ್ತಿಕ ವಿಚಾರದಲ್ಲಿ ಕುಸಿದಿದ್ದರು. 1998ರಲ್ಲಿ ರಾಜ್ ಎಂಬುವವರ ಜೊತೆ ಕನ್ನಿಕಾ ಮದುವೆ ನಡೆದಿತ್ತು. ಈ ಜೋಡಿಗೆ ಇಬ್ಬರು ಹೆಣ್ಣು ಮಕ್ಕಳು, ಓರ್ವ ಗಂಡು ಮಗು ಇದೆ. 2012ರಲ್ಲಿ ಕನಿಕಾ, ರಾಜ್ ವಿಚ್ಛೇದನ ಪಡೆದರು. ನಂತರ ಮೂವರು ಮಕ್ಕಳನ್ನು ಕನಿಕಾ ಅವರೇ ಬೆಳೆಸಿದರು. ಇದೀಗ ಮಕ್ಕಳ ಸಮ್ಮತಿ ಪಡೆದು, ಗುರುಹಿರಿಯರ ಸಮ್ಮುಖದಲ್ಲಿ ಉದ್ಯಮಿ ಗೌತಮ್ ಜೊತೆ ಹಸೆಮಣೆ ಏರಿದ್ದಾರೆ. ಅಷ್ಟೇ ಅಲ್ಲ, ತಾಯಿ ಸಪ್ತಪದಿ ತುಳಿಯುವ ವೇಳೆ ಮಕ್ಕಳು ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಬಾಂಡ್ ರವಿಗಾಗಿ ಭರ್ಜರಿ ಹೊಡೆದಾಡಿದ ಪ್ರಮೋದ್

     

    View this post on Instagram

     

    A post shared by Kanika Kapoor (@kanik4kapoor)

    ಕನ್ನಿಕಾ ಅವರ ಮದುವೆ ಪ್ರತಿಯೊಂದು ಶಾಸ್ತ್ರದಲ್ಲೂ ಕನ್ನಿಕಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇನ್ನು ಕನಿಕಾ ಸಪ್ತಪದಿ ತುಳಿಯುವ ವೇಳೆ ಕನ್ನಿಕಾ ಹೆಣ್ಣು ಮಕ್ಕಳು ತಾಯಿಯ ಲೆಹೆಂಗಾವು ಅವರಿಗೆ ನಡೆಯಲು ಕಷ್ಟವಾಗದಂತೆ ನೋಡಿಕೊಂಡಿದ್ದರು. ಇನ್ನು ತಮ್ಮ ಪತಿ ಗೌತಮ್ ಬಗ್ಗೆ ಚೆಂದದ ಸಾಲುಗಳ ಜೊತೆ ಮದುವೆಯ ಫೋಟೋ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ:ಸ್ನೇಹಿತೆಯ ಮದುವೆಗಾಗಿ ಬೆಂಗಳೂರಿಗೆ ಬಂದಿಳಿದ ರಶ್ಮಿಕಾ ಮಂದಣ್ಣ

     

    View this post on Instagram

     

    A post shared by Kanika Kapoor (@kanik4kapoor)

    ನಿಮ್ಮ ಬದುಕಲ್ಲೂ ಮ್ಯಾಜಿಕ್ ನಡೆಯುತ್ತದೆ, ಅದನ್ನು ನಂಬೋದನ್ನು ನೀವು ನಿಲ್ಲಿಸಬೇಡಿ. ಒಂದು ದಿನ ಕನಸುಗಳು ಈಡೇರುತ್ತವೆ. ನನ್ನ ರಾಜನನ್ನು ನಾನು ಹುಡುಕಿಕೊಂಡೆ. ನಮ್ಮಿಬ್ಬರನ್ನು ಭೇಟಿ ಮಾಡಿಸಿದ ಯುನಿವರ್ಸ್ಗೆ ಧನ್ಯವಾದಗಳು. ನಿನ್ನ ಜೊತೆ ಹೊಸ ಜರ್ನಿ ಮಾಡಲು, ನಿನ್ನ ಜೊತೆ ಜೊತೆ ಬೆಳೆಯಲು, ಕಲಿಯಲು, ನಿನ್ನ ಜೊತೆಗೆ ನಗಲು ಬಹಳ ಉತ್ಸುಕತೆಯಿಂದಿರುವೆ. ಪ್ರತಿದಿನ ನನ್ನನ್ನು ನಗಿಸುತ್ತಿರುವುದಕ್ಕೆ ಧನ್ಯವಾದಗಳು. ನನ್ನ ಸ್ನೇಹಿತ, ನನ್ನ ಸಂಗಾತಿ, ನನ್ನ ಹೀರೋ ಎಂದು ಪತಿ ಗೌತಮ್ ಕುರಿತು ಕನ್ನಿಕಾ ಕಪೂರ್ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇನ್ನು ಗಾಯಕಿ ಕನಿಕಾಗೆ ಅಭಿಮಾನಿಗಳು, ಚಿತ್ರರಂಗದ ಸ್ನೇಹಿತರು ಶುಭಹಾರೈಸಿದ್ದಾರೆ.

  • ಪತ್ನಿ ರಮ್ಯಾ ಜೊತೆ `ನಾಗಿಣಿ 2′ ಖ್ಯಾತಿಯ ನಿನಾದ್ ದಾಂಪತ್ಯಗೀತೆ

    ಪತ್ನಿ ರಮ್ಯಾ ಜೊತೆ `ನಾಗಿಣಿ 2′ ಖ್ಯಾತಿಯ ನಿನಾದ್ ದಾಂಪತ್ಯಗೀತೆ

    ನ್ನಡ ಕಿರುತೆರೆ ನಂಬರ್ ಒನ್ ಶೋಗಳಲ್ಲಿ ಒಂದಾಗಿರುವ `ನಾಗಿಣಿ 2′ ತ್ರಿಶೂಲ್ ಅಲಿಯಾಸ್ ನಿನಾದ್ ಹರಿತ್ಸ ಇತ್ತೀಚೆಗಷ್ಟೇ ಬಹುಕಾಲದ ಗೆಳತಿ ರಮ್ಯಾ ಜೊತೆ ಹಸೆಮಣೆ ಏರಿದ್ದರು. ಇದೀಗ ಪತ್ನಿಯ ಜೊತೆ ನಟ ನಿನಾದ್ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

    ಟಿವಿ ಪರದೆಯಲ್ಲಿ ನಿನಾದ್ ಮತ್ತು ನಮೃತಾ ಗೌಡ ಲವ್ ಸ್ಟೋರಿ ನೋಡಿ ಇಷ್ಟಪಟ್ಟಿದ್ದ ಅಭಿಮಾನಿಗಳಿಗೆ, ತನ್ನ ನಿಜ ಜೀವನದ ಸಂಗಾತಿಯನ್ನು ಪರಿಚಯಿಸಿದ್ದಾರೆ. ತಮ್ಮ ಕಾಮನ್ ಫ್ರೆಂಡ್ ಮೂಲಕ ಪರಿಚಯವಾಗಿರುವ ರಮ್ಯಾ ಜೊತೆ ಫ್ರೆಂಡ್‌ಶಿಪ್ ನಂತರ ಪ್ರೇಮಾಂಕುರವಾಗಿ ಇದೀಗ ಸತಿ ಪತಿಗಳಾಗಿ ಜೀವನ ನಡೆಸುತ್ತಿದ್ದಾರೆ.

    ನಿನಾದ್ ಮತ್ತು ರಮ್ಯಾ ಈ ವರ್ಷ ಫೆಬ್ರವರಿಯಲ್ಲಿ ಗುರು ಹಿರಿಯರ ಸಮ್ಮುಖದಲ್ಲಿ ಶಾಸ್ತ್ರದ ಪ್ರಕಾರ ನಿಶ್ಚತಾರ್ಥವಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಈ ಜೋಡಿ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಆರತಕ್ಷತೆ ಕೂಡ ಅದ್ದೂರಿಯಾಗಿ ನೆರವೇರಿತ್ತು. ಇದೀಗ ನಟ ನಿನಾದ್ ಪತ್ನಿ ರಮ್ಯಾ ಜೊತೆ ಚೆಂದದ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ. ಇದನ್ನೂ ಓದಿ: ಕೆಜಿಎಫ್ 2 ಪ್ರದರ್ಶನಕ್ಕೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

    ಇನ್ನು ನವ ಜೋಡಿಗೆ ಅಭಿಮಾನಿಗಳು, ಆಪ್ತರು ಸೋಷಿಯಲ್ ಮೀಡಿಯಾದಲ್ಲಿ ಶುಭ ಹಾರೈಸುತ್ತಿದ್ದಾರೆ.

  • ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಏರಿ ಬಂದ ವರ

    ಇಂಧನ ಬೆಲೆ ಏರಿಕೆ ವಿರೋಧಿಸಿ ಸೈಕಲ್ ಏರಿ ಬಂದ ವರ

    ಭುವನೇಶ್ವರ್: ದೇಶದಲ್ಲಿ ಹೆಚ್ಚುತ್ತಿರುವ ಇಂಧನ ಬೆಲೆಗಳ ವಿರುದ್ಧ ಪ್ರತಿಭಟನೆಗಾಗಿ ವರನೊಬ್ಬ ಮದುವೆಗೆ ಸೈಕಲ್‍ನಲ್ಲಿ ಬಂದ ಘಟನೆ ಒಡಿಶಾದ ಭುವನೇಶ್ವರ್‌ದಲ್ಲಿ ನಡೆದಿದೆ.

    ಸುಭ್ರಾಂಶು ಸಮಲ್ ಸೈಕಲ್ ಮೇಲೆ ಬಂದ ವರ. ಈತನ ಕುಟುಂಬವು ಮದುವೆ ಮರವಣಿಗೆಗೆ ಭಾರೀ ವ್ಯವಸ್ಥೆ ಮಾಡಿತ್ತು. ಆದರೆ ದೇಶದಲ್ಲಿ ಹೆಚ್ಚುತ್ತಿರವ ಇಂಧನ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸಲು ಸುಭ್ರಾಂಶು ಸೈಕಲ್‍ನ್ನು ಬಳಸುವ ನಿರ್ಧಾರವನ್ನು ಮಾಡಿದ್ದಾನೆ.

    ಇದರಂತೆ ಮದುವೆ ಬಟ್ಟೆಯನ್ನು ಧರಿಸಿ ಸೈಕಲ್‍ನಲ್ಲಿ ಸುಮಾರು ಒಂದು ಕಿ.ಮೀ ವರೆಗೆ ಸೈಕಲ್‍ನ್ನು ತುಳಿದು ಮಂಟಪಕ್ಕೆ ಬಂದಿದ್ದಾನೆ. ಅವನ ಜೊತೆಗೆ ಮದುವೆಗೆ ಆಗಮಿಸಿದ್ದ ಆತನ ಕುಟುಂಬ ಮತ್ತು ಸ್ನೇಹಿತರು ಕಾಲ್ನಡಿಗೆಯಲ್ಲೇ ಮದುವೆ ಮಂಟಪಕ್ಕೆ ತಲುಪಿದರು. ಇದನ್ನೂ ಓದಿ: ಸ್ಪಷ್ಟವಾಗಿ ಹೇಳ್ತೇನೆ ನಾರಾಯಣಗುರು ಪಠ್ಯ ಕೈಬಿಡುವ ಪ್ರಶ್ನೆಯೇ ಇಲ್ಲ: ಶ್ರೀನಿವಾಸ್ ಪೂಜಾರಿ

    petrol

    ನಿರಂತರವಾಗಿ ಪೆಟ್ರೋಲ್ ಹಾಗೂ ಡಿಸೇಲ್‍ಗಳ ಬೆಲೆ ಏರಿಕೆ ಆಗುತ್ತಿರುವುದರಿಂದ ಹಲವಾರು ಜನರು ಹತಾಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕ ಕಡೆ ಪ್ರತಿಭಟನೆ ನಡೆಯುತ್ತಿರುವುದು ಸಾಮಾನ್ಯ ಪ್ರತಿಕ್ರಿಯೆ ಆಗಿದೆ. ಆದರೆ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಸರ್ಕಾರವನ್ನು ಗಮನ ಸೆಳೆಯುವುದು ಉದ್ದೇಶವಾಗಿದೆ ಎಂದು ಸುಭ್ರಾಂಶು ತಿಳಿಸಿದರು. ಇದನ್ನೂ ಓದಿ: ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮೇಲಕ್ಕೆ ಹಾರಿದ ಪಾದಚಾರಿಗಳು – ಓರ್ವ ಸಾವು, ನಿರ್ದೇಶಕ ವಶಕ್ಕೆ