Tag: wedding

  • ಭಗವಂತ್ ಮಾನ್ ಮದುವೆ ರೆಸಿಪಿ ಲಿಸ್ಟ್ ಏನು ಗೊತ್ತಾ?

    ಭಗವಂತ್ ಮಾನ್ ಮದುವೆ ರೆಸಿಪಿ ಲಿಸ್ಟ್ ಏನು ಗೊತ್ತಾ?

    ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಡಾ.ಗುರುಪ್ರೀತ್ ಕೌರ್ ಅವರನ್ನು ಇಂದು ಗುರು ಹಿರಿಯರ ಸಮ್ಮುಖದಲ್ಲಿ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ವಿಶೇಷವೆಂದರೆ ಈ ಮದುವೆ ಸಮಾರಂಭದಲ್ಲಿನ ಫುಡ್ ಮೆನು ಎಲ್ಲರ ಗಮನ ಸೆಳೆದಿದೆ.

    ಸಾಮಾನ್ಯವಾಗಿ ಮದುವೆ ಸಮಾರಂಭ ಊಟವಿಲ್ಲದೇ ಪರಿಪೂರ್ಣವಾಗುವುದಿಲ್ಲ. ಮದುವೆ ವೇಳೆ ಅನೇಕ ವಿವಿಧ ಖಾದ್ಯಗಳನ್ನು ಮಾಡಿಸಲಾಗಿರುತ್ತದೆ. ಸದ್ಯ ಭಗವಂತ್ ಮಾನ್ ಅವರು ತಮ್ಮ ಮದುವೆಗೆ ಆಗಮಿಸಿರುವ ಅಥಿತಿಗಳಿಗೆ ವಿಶೇಷ ಭೋಜನ ಕೂಟವನ್ನು ಏರ್ಪಡಿಸಿದ್ದಾರೆ. ಎಲ್ಲ ರೀತಿಯ ಖಾದ್ಯಗಳು ಎಲ್ಲರ ಬಾಯಿಯಲ್ಲಿ ನೀರು ತರಿಸುವಂತಿದೆ. ಇದನ್ನೂ ಓದಿ: ನಿಮ್ಮ ಮದುವೆ ಯಾವಾಗ – ರಾಘವ್ ಚಡ್ಡಾಗೆ ಪ್ರಶ್ನೆ

    Bhagwant Maan

    ಹೌದು ಭಗವಂತ್ ಮಾನ್ ಅವರ ಮದುವೆ ಸಮಾರಂಭದಲ್ಲಿ ಅತಿಥಿಗಳಿಗಾಗಿ ಕರಾಹಿ ಪನೀರ್, ತಂದೂರಿ ಕುಲ್ಚಾ, ದಾಲ್ ಮಖಾನಿ, ನವರತನ್ ಬಿರಿಯಾನಿ, ಮೌಸಮಿ ಸಬ್ಜಿಯಾನ್, ಏಪ್ರಿಕಾಟ್ ಸ್ಟಫ್ಡ್ ಕೋಫ್ತಾ, ಲಸಾಗ್ನಾ ಸಿಸಿಲಿಯಾನೋ ಮತ್ತು ಬಿರಿಯಾನಿ ರೈತಾ ಸೇರಿದಂತೆ ಭಾರತೀಯ ಮತ್ತು ಇಟಾಲಿಯನ್ ಫುಡ್‍ಗಳನ್ನು ಮಾಡಿಸಲಾಗಿದೆ. ಇದನ್ನೂ ಓದಿ: ನಾಳೆ ಪಂಜಾಬ್ ಸಿಎಂ 2ನೇ ಮದುವೆ – ಮತ್ತೆ ಹಸೆಮಣೆ ಏರಲಿದ್ದಾರೆ ಭಗವಂತ್ ಮಾನ್

    ಇನ್ನೂ ಸಿಹಿ ತಿಂಡಿ ವಿಚಾರಕ್ಕೆ ಬಂದರೆ ಫ್ರೆಶ್ ಫ್ರೂಟ್ ಟ್ರಫಲ್, ಮೂಂಗ್ ದಾಲ್ ಹಲ್ವಾ, ಶಾಹಿ ತುಕ್ಡಾ, ಅಂಗೂರಿ ರಸಮಲೈ ಮತ್ತು ಡ್ರೈ ಫ್ರೂಟ್ ರಬರಿ, ಬಿಸಿ ಗುಲಾಬ್ ಜಾಮೂನ್‍ನಂತಹ ವಿವಿಧ ಸಿಹಿತಿಂಡಿಗಳಿವೆ ಮತ್ತು ಆರೋಗ್ಯ ಸಮಸ್ಯೆಗೆ ಹೊಂದಿರುವವರಿಗೆ ವಿವಿಧ ರೀತಿಯ ಸಲಾಡ್‍ಗಳ ವ್ಯವಸ್ಥೆಗೊಳಿಸಲಾಗಿದೆ.

    ಸಿಎಂ ನಿವಾಸದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಕೂಡ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಎಲ್ಲರೆದುರು ಮದುವೆಯಲ್ಲಿ ವಧುವಿನ ಕಾಲಿಗೆ ಬಿದ್ದ ವರ

    ಎಲ್ಲರೆದುರು ಮದುವೆಯಲ್ಲಿ ವಧುವಿನ ಕಾಲಿಗೆ ಬಿದ್ದ ವರ

    ಸಾಮಾನ್ಯವಾಗಿ ವಿವಾಹ ಸಮಾರಂಭಗಳಲ್ಲಿ ವಧು, ವರ ಒಟ್ಟಿಗೆ ನೃತ್ಯ ಮಾಡುವುದು, ಹಾಡು ಹಾಡಿರುವ ಹಲವಾರು ವೀಡಿಯೋಗಳನ್ನು ನಾವು ನೋಡಿರುತ್ತೇವೆ. ಆದರೆ ವಿವಾಹ ಕಾರ್ಯಕ್ರಮವೊಂದರಲ್ಲಿ ವರ, ವಧುವಿನ ಕಾಲಿಗೆ ಬಿದ್ದಿರುವ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

    MARRIAGE

    ವರನ ಕಾಲಿಗೆ ವಧು ಬಿದ್ದು, ಆಶೀರ್ವಾದ ಪಡೆದುಕೊಳ್ಳುವ ವಾಡಿಕೆಯೂ ಇದೆ. ಆದರೆ ಅರ್ನವ್ ರಾಯ್ ಎಂಬ ವರ, ದಿತಿ ಗೊರಾಡಿಯಾ ಅವರ ಕಾಲಿಗೆ ಬೀಳುವ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ದಿತಿ ಗೊರಾಡಿಯಾ ಮತ್ತು ಅರ್ನವ್ ರಾಯ್ ವಿವಾಹವಾದರು. ಮದುವೆ ವೇಳೆ ವರ, ವಧುವಿನ ಕಾಲಿಗೆ ಬೀಳುತ್ತಾರೆ. ಈ ವೇಳೆ ವಧು ಬಹಳ ಆಶ್ಚರ್ಯದಿಂದ ವರನತ್ತ ನೋಡುತ್ತಿರುವಾಗ ಅರ್ನವ್ ಪ್ರೀತಿಯಿಂದ ದಿತಿ ಅವರನ್ನು ಬಿಗಿದಪ್ಪಿಕೊಂಡಾಗ ದಿತಿ ನಾಚಿ ನೀರಾಗುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಮಲಯಾಳಂ ನಟಿ ಅಂಬಿಕಾ ರಾವ್ ನಿಧನ

    ಈ ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ದಿತಿ ಗೊರಾಡಿಯಾ ಹಂಚಿಕೊಂಡಿದ್ದು, ಮೊದಲಿಗೆ ನಮ್ಮ ಪಂಡಿತರಿಗೆ ಇದು ಇಷ್ಟವಾಗಲಿಲ್ಲ. ಆದರೆ ಮದುವೆ ಸಮಾರಂಭದ ಅಂತ್ಯದ ವೇಳೆಗೆ ನೀನು ಬಹಳ ಅದೃಷ್ಟವಂತ ಹುಡುಗಿ ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ವೈರಲ್ ಆಗುತ್ತಿರುವ ಈ ವೀಡಿಯೋವನ್ನು 6 ಮಿಲಿಯನ್‍ಗಿಂತಲೂ ಹೆಚ್ಚು ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದು ಬರುತ್ತಿದೆ. ಇದನ್ನೂ ಓದಿ: ಕೂಸು ಹುಟ್ಟುವ ಮುಂಚೆ ವಿದೇಶದಲ್ಲಿ ಮಗುವಿಗೆ ಬಟ್ಟೆ ಶಾಪಿಂಗ್ ಮಾಡಿದ ರಣ್‌ಬೀರ್ ಕಪೂರ್

    Live Tv

  • ಪ್ಲೀಸ್ ಹುಡುಗಿ ಕೊಡಿ – ಮದುವೆಯಾಗಲು ವಧು ಬೇಕೆಂದು ಊರೆಲ್ಲಾ ಪೋಸ್ಟರ್ ಹಾಕಿದ ಯುವಕ

    ಪ್ಲೀಸ್ ಹುಡುಗಿ ಕೊಡಿ – ಮದುವೆಯಾಗಲು ವಧು ಬೇಕೆಂದು ಊರೆಲ್ಲಾ ಪೋಸ್ಟರ್ ಹಾಕಿದ ಯುವಕ

    ಚೆನ್ನೈ: ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುವುದು ಹೊಸ ಅಧ್ಯಾಯವಾಗಿರುತ್ತದೆ. ಸಾಮಾನ್ಯವಾಗಿ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಹೀಗಾಗಿ ಹಲವಾರು ಮಂದಿ ತಮಗೆ ಹೊಂದಿಕೊಳ್ಳುವAತಹ ಜೀವನ ಸಂಗಾತಿಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಬ್ರೋಕರ್, ಮ್ಯಾಟ್ರಿಮೋನಿಗಳಲ್ಲಿ ತಮ್ಮ ಪ್ರೋಫೈಲ್ ಅನ್ನು ಪೋಸ್ಟ್ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ವ್ಯಕ್ತಿಯೋರ್ವ ಹುಡುಗಿಗಾಗಿ ಊರು ತುಂಬಾ ತನ್ನ ಪ್ರೊಪೈಲ್‌ನನ್ನು ಪೋಸ್ಟರ್‌ನನ್ನು ಲಗತ್ತಿಸಿದ್ದಾನೆ.

    ಹೌದು, ತಮಿಳುನಾಡಿನ ಎಂ.ಎಸ್ ಜಗನ್ ಎಂಬವರು ಮದುವೆಯಾಗಲು ಹುಡುಗಿ ಬೇಕೆಂದು ಪೋಸ್ಟರ್ ಹಾಕಿದ್ದಾರೆ. ಸದ್ಯ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಂಜಿನಿಯರ್ ಆಗಿರುವ 27 ವರ್ಷದ ಎಂ.ಎಸ್ ಜಗನ್ ಹಲವಾರು ವರ್ಷಗಳಿಂದ ಹುಡುಗಿಯನ್ನು ಹುಡುಕುತ್ತಿದ್ದಾರೆ. ಹುಡುಗಿಗಾಗಿ ಬ್ರೋಕರ್‌ಗಳನ್ನು ಸಂಪರ್ಕಿಸಿ ತಮ್ಮ ಪ್ರೊಫೈಲ್‌ನ್ನು ನೀಡಿದ್ದರು. ಅಲ್ಲದೇ ಮ್ಯಾಟ್ರಿಮೋನಿ ಸೈಟ್‌ನಲ್ಲೂ ಪ್ರೊಫೈಲ್ ಅಟ್ಯಾಚ್ ಮಾಡಿದ್ದರು. ಆದರೆ ಯಾವ ರೀತಿಯಲ್ಲಿ ಹುಡುಕಿದರೂ ಸೂಕ್ತ ಸಂಗಾತಿ ಸಿಕ್ಕಿರಲ್ಲಿಲ್ಲ. ಹೀಗಾಗಿ ಮಧುರೈನ ವಿಲ್ಲುಪುರಂನ ಎಂಎಸ್ ಜಗನ್ ತಮ್ಮ ವೈಯಕ್ತಿಕ ವಿವರಗಳನ್ನು ಹೊಂದಿರುವ ದೊಡ್ಡ ಪೋಸ್ಟರ್‌ಗಳನ್ನು ತಮ್ಮ ಊರಿನ ಸುತ್ತಲೂ ಹಾಕಿದ್ದಾರೆ.

     

    ಪೋಸ್ಟರ್‌ನಲ್ಲಿ ಜಗನ್ ಅವರ ಫೋಟೋ ಮತ್ತು ಅವರ ಹೆಸರು, ಜಾತಿ, ಸಂಬಳ, ವೃತ್ತಿ, ವಿಳಾಸ ಮತ್ತು ಅವರು ತುಂಡು ಭೂಮಿ ಹೊಂದಿರುವ ಎಂಬ ವಿವರಗಳನ್ನು ನೀಡಿರುವುದನನು ಕಾಣಬಹುದಾಗಿದೆ. ಇದನ್ನೂ ಓದಿ:  ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

    MARRIAGE

    ಈ ಬಗ್ಗೆ ಪ್ರತಿಕ್ರಿಯಿಸಿದ ಜಗನ್ ಅವರು, ನಾನು ಕಳೆದ ಐದು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದೇನೆ, ಆದರೆ ಸೂಕ್ತವಧು ಸಿಕ್ಕಿಲ್ಲ. ಹೀಗಾಗಿ ನಾನು ಅನೇಕ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಿದ್ದೇನೆ. ಆದರೆ ಈ ಪ್ಲ್ಯಾನ್ ಯಾಕೋ ವರ್ಕೌಟ್ ಆಗುತ್ತಿಲ್ಲ. 27 ವರ್ಷದೊಳಗಿನ ವಧು ಕುಟುಂಬಗಳಿಂದ ಕರೆಬರಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದೆ. ಆದರೆ ಬದಲಿಗೆ ಬ್ರೋಕರ್‌ಗಳಿಂದ ಕರೆ ಬರುತ್ತಿದೆ. ಮತ್ತೆ ಕೆಲವರು ಪೋಸ್ಟರ್ ನೋಡಿ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ಅವರು ನನ್ನ ಪೋಸ್ಟರ್‌ನಿಂದ ಮೀಮ್‌ಗಳನ್ನು ಮಾಡುತ್ತಿದ್ದಾರೆ, ಆದರೆ ನಾನು ಅದರಿಂದ ಪ್ರಭಾವಿತನಾಗುವುದಿಲ್ಲ. ಅವರ ಖರ್ಚಿನಿಂದ ನಾನು ವೈರಲ್ ಆಗುತ್ತಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

    Live Tv

  • ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ

    ಮದುವೆ ಸಂಭ್ರಮಾಚರಣೆಯಲ್ಲಿ ವರನಿಂದ ಸ್ನೇಹಿತನ ಹತ್ಯೆ

    ಲಕ್ನೋ: ಮದುವೆ ಮೆರವಣಿಗೆ ಸಂದರ್ಭದಲ್ಲಿ ವರನೊಬ್ಬ ಖುಷಿಯಿಂದ ಗುಂಡು ಹಾರಿಸಿದಾಗ ಅಲ್ಲೇ ಇದ್ದ ಸ್ನೇಹಿತನಿಗೆ ತಗುಲಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

    ಮನೀಶ್ ಮಧೇಶಿಯಾ ವರ ಹಾಗೂ ಬಾಬು ಲಾಲ್ ಯಾದವ್ ಮೃತ ಸ್ನೇಹಿತ. ಸೋನಭದ್ರ ಜಿಲ್ಲೆಯ ಬ್ರಹ್ಮನಗರ ಪ್ರದೇಶದಲ್ಲಿ ಈತನನ್ನು ಕುದುರೆ ಮೇಲೆ ಮರೆವಣಿಗೆ ಮಾಡಿದ್ದರು. ಆ ಸಂದರ್ಭದಲ್ಲಿ ಸುತ್ತಲೂ ಜನರು ಕೂಡಿಕೊಂಡಿದ್ದರು.

    ಖುಷಿಯಿಂದ ಸಂಭ್ರಮಿಸುತ್ತಿದ್ದ ವರ ಮನೀಶ್ ಮಧೇಶಿಯಾ ತನ್ನ ಬಳಿ ಇದ್ದ ಸ್ನೇಹಿತ ಯಾದವ್‍ ಅವರ ಗನ್‍ನ್ನು ತೆಗೆದು ಗುಂಡು ಹಾರಿಸಿದ್ದಾನೆ. ಅಲ್ಲೇ ಇದ್ದ ಬಾಬು ಲಾಲ್ ಯಾದವ್‍ಗೆ ಗುಂಡು ತಗುಲಿ ಸಾವನ್ನಪ್ಪಿದ್ದಾರೆ. ಬಾಬು ಲಾಲಾ ಯಾದವ್ ಯೋಧರಾಗಿದ್ದರು. ಈ ಘಟನೆ ಸಂಬಂಧಿಸಿದಂತೆ ಕ್ಯಾಮರಾದಲ್ಲಿ ದಾಖಲಾಗಿದೆ. ಇದನ್ನೂ ಓದಿ: ಚರ್ಚ್‌ಗಳೂ ಸೇರಿ 4 ತಿಂಗಳಲ್ಲಿ 150ಕ್ಕೂ ಹೆಚ್ಚು ಸ್ಮಾರಕಗಳು ನೆಲಸಮ – ಯುನೆಸ್ಕೋ ವರದಿ

    ತಕ್ಷಣ ಯಾದವ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿ ಯಾದವ್ ಕುಟುಂಬ ದೂರು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮನೀಶ್‍ನನ್ನು ಬಂಧಿಸಿದ್ದಾರೆ ಹಾಗೂ ಗುಂಡಿನ ದಾಳಿಗೆ ಬಳಸಿದ್ದ ಬಂದೂಕನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: 24 ಗಂಟೆಯೊಗಳಗೆ ವಾಪಸ್‌ ಬಂದ್ರೆ, ಶಿವಸೇನೆ ಮೈತ್ರಿ ಬಿಡಲು ಸಿದ್ಧ: ಸಂಜಯ್‌ ರಾವತ್

    Live Tv

  • ಮದುವೆಗೆ ಬುಲ್ಡೋಜರ್‌ನಲ್ಲಿ ಬಂದ ವರ

    ಮದುವೆಗೆ ಬುಲ್ಡೋಜರ್‌ನಲ್ಲಿ ಬಂದ ವರ

    ಭೂಪಾಲ್: ವರನೊಬ್ಬ ತನ್ನ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಕಾರು, ಕುದುರೆ ಬದಲಿಗೆ ಬುಲ್ಡೋಜರ್ ಮೇಲೆ ಬಂದಿರುವ ವಿಚಿತ್ರ ಘಟನೆ ಮಧ್ಯಪ್ರದೇಶದ ಬೆತುಲ್ ಮುನ್ಸಿಪಾಲಿಟಿಯಲ್ಲಿ ನಡೆದಿದೆ.

    ಅಂಕುಶ್ ಜೈಸ್ವಾಲ್ ವರ. ಅಂಕುಶ್ ಕೆಲವು ಕುಟುಂಬ ಸದಸ್ಯರೊಂದಿಗೆ ಬುಲ್ಡೋಜರ್ ಮುಂದಿರುವ ಬ್ಲೇಡ್‍ಗಳ ಮೇಲೆ ಕುಳಿತು ಅವರ ಮದುವೆಗೆ ಆಗಮಿಸಿದರು.

    MARRIAGE

    ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿರುವ ಅಂಕುಶ್ ಟಾಟಾ ಕನ್ಸಲ್ಟೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈತ ಮದುವೆ ಸಮಾರಂಭದಲ್ಲಿ ಬುಲ್ಡೋಜರ್‌ನಲ್ಲಿ ಆಗಮಿಸುವ ಕನಸನ್ನು ಹೊಂದಿದ್ದರು. ಈ ಹಿನ್ನೆಲೆಯಲ್ಲಿ ಅಂಕುಶ್ ಈ ವಿಷಯವನ್ನು ತನ್ನ ಮನೆಯವರಿಗೆ ತಿಳಿಸಿದ್ದಾನೆ. ಇದನ್ನು ಅವನ ಕುಟುಂಬದವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: 6 ವರ್ಷದ ಹಿಂದೆ ಮದುವೆ- 4ನೇ ಪತ್ನಿಗೆ ಡಿವೋರ್ಸ್ ಕೊಟ್ಟ 91ರ ರೂಪರ್ಟ್ ಮುರ್ಡೋಕ್

    ವೀಡಿಯೋದಲ್ಲಿ, ಅವನು ತನ್ನ ಸ್ನೇಹಿತರೊಂದಿಗೆ ಬ್ಲೇಡ್‍ಗಳ ಮೇಲೆ ಕುಳಿತು ಸವಾರಿ ಮಾಡಿದ್ದಾನೆ. ಮದುವೆಗೆ ಆಗಮಿಸಿದ್ದ ಜನರು ಈ ವಿಶಿಷ್ಟ ವಿಧಾನವನ್ನು ಕಂಡು ಬೆರಗಾದರು. ಇದನ್ನೂ ಓದಿ: ಹೊಳೆನರಸೀಪುರ ತಾಲೂಕಿನಲ್ಲಿ 3.4 ತೀವ್ರತೆಯ ಭೂಕಂಪ – ಭಯಪಡುವ ಅಗತ್ಯವಿಲ್ಲ ಎಂದ KSNDMC

    Live Tv

  • ಯಾರೂ ಮಾಹಿತಿ ನೀಡಿಲ್ಲವೆಂದು ತನ್ನ ಮದುವೆಗೆ ವರ ಶಾಸಕ ಗೈರು-  ವಧು ಕೇಸ್‌

    ಯಾರೂ ಮಾಹಿತಿ ನೀಡಿಲ್ಲವೆಂದು ತನ್ನ ಮದುವೆಗೆ ವರ ಶಾಸಕ ಗೈರು- ವಧು ಕೇಸ್‌

    ಭುವನೇಶ್ವರ್: ಬಿಜೆಡಿ ಶಾಸಕನೊಬ್ಬ ತನ್ನ ಮದುವೆಗೆ ಹೋಗದ ಹಿನ್ನೆಲೆಯಲ್ಲಿ ವಧು ಪ್ರಕರಣ ದಾಖಲಿಸಿದ ಘಟನೆ ಒಡಿಶಾದಲ್ಲಿ ನಡೆದಿದೆ.

    ವಿವಾಹ ನೋಂದಣಾಧಿಕಾರಿ ಕಚೇರಿಗೆ ಬಾರದ ಕಾರಣ ವಂಚಿಸಿದ್ದಾರೆ ಎಂದು ಬಿಜೆಡಿ ಶಾಸಕ ಬಿಜಯ್ ಶಂಕರ್ ದಾಸ್ (30) ಅವರ ವಿರುದ್ಧ ವಧು ಜಗತ್‍ಸಿಂಗ್‍ಪುರ ಸದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಮೇ 17ರಂದು ದಂಪತಿ ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ 30 ದಿನಗಳ ನಂತರ ಮದುವೆಕಾರ್ಯಕ್ಕೆ ವಧು ತನ್ನ ಕುಟುಂಬದೊಂದಿಗೆ ಅಲ್ಲಿಗೆ ತಲುಪಿದ್ದರೂ ವರನಾದ ಶಾಸಕ ಬಂದಿರಲಿಲ್ಲ. ಇದರಿಂದಾಗಿ ಮಹಿಳೆ ಶಾಸಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಗುರುದ್ವಾರದ ಮೇಲೆ ದಾಳಿ: 100ಕ್ಕೂ ಹೆಚ್ಚು ಸಿಖ್ಖರು, ಹಿಂದೂಗಳಿಗೆ E-ವೀಸಾ

    ಈ ಬಗ್ಗೆ ಮಾತನಾಡಿದ ವಧು, ಕಳೆದ 3 ವರ್ಷಗಳಿಂದ ಬಿಜಯ್ ಶಂಕರ್ ದಾಸ್ ಜೊತೆ ಸಂಬಂಧ ಹೊಂದಿದ್ದೇನೆ. ನಿಗದಿತ ದಿನಾಂಕದಂದು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅಂದು ರಿಜಿಸ್ಟರ್ ಕಚೇರಿಗೆ ಬಂದಿರಲಿಲ್ಲ. ಜೊತೆಗೆ ಶಾಸಕರ ಸಹೋದರ ಮತ್ತು ಕುಟುಂಬದ ಸದಸ್ಯರು ನನಗೆ ಬೆದರಿಕೆ ಹಾಕುತ್ತಿದ್ದಾರೆ. ಶಾಸಕರು ನನ್ನ  ಫೋನ್ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ವಧು ಆರೋಪಿಸಿದ್ದಾರೆ.

    ಬಿಜಯ್ ಶಂಕರ್ ದಾಸ್ ಈ ಬಗ್ಗೆ ಮಾತನಾಡಿ, ಆಕೆಯನ್ನು ಮದುವೆಯಾಗುವುದನ್ನು ನಿರಾಕರಿಸಿಲ್ಲ. ಮದುವೆ ನೋಂದಣಿಗೆ ಇನ್ನೂ 60 ದಿನಗಳು ಇವೆ. ಆದ್ದರಿಂದ ನಾನು ಬಂದಿಲ್ಲ. ಮದುವೆ ರಿಜಿಸ್ಟರ್ ಕಚೇರಿಗೆ ಹೋಗಲು ಯಾರೂ ನನಗೆ ತಿಳಿಸಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಗ್ನಿಪಥ್ ಬಗ್ಗೆ ಆಸಕ್ತಿ ಇದ್ದವರು ದೇಶ ಸೇವೆ ಮಾಡಿ ಅಂದ್ರೆ ಇವರಿಗ್ಯಾಕೆ ಇಷ್ಟೊಂದು ಉರಿತಿದೆ:  ಬಿ.ಶ್ರೀರಾಮುಲು

    Live Tv

  • ಫಿಲ್ಮ್ ಮೇಕರ್ ಕರಣ್ ಜೋಹರ್ ಇನ್ನೂ ಯಾಕೆ ಮದುವೆಯಾಗಿಲ್ಲ.?

    ಫಿಲ್ಮ್ ಮೇಕರ್ ಕರಣ್ ಜೋಹರ್ ಇನ್ನೂ ಯಾಕೆ ಮದುವೆಯಾಗಿಲ್ಲ.?

    ಬಾಲಿವುಡ್‌ನ ನಿರ್ಮಾಪಕ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ 50ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಬಾಲಿವುಡ್‌ನ ತಮ್ಮ ಸ್ನೇಹಿತರಿಗೆಲ್ಲಾ ಕರಣ್ ಜೋಹರ್ ಪಾರ್ಟಿ ಆಯೋಜಿಸಿದ್ದರು. ಇತ್ತೀಚೆಗಷ್ಟೇ ನೀಡಿದ ಸಂದರ್ಶನವೊಂದನ್ನು ತಮಗೆ ಜೀವನ ಸಂಗಾತಿ ಇಲ್ಲದಿರುವುದು ದೊಡ್ಡ ವಿಷಾದ ಎಂದು ಸಂದರ್ಶನದಲ್ಲಿ ಕರಣ್ ಜೋಹರ್ ಮಾತನಾಡಿದ್ದಾರೆ.

    ಹಿಂದಿ ಚಿತ್ರರಂಗದ ಫಿಲ್ಮ್ ಮೇಕರ್ ಕರಣ್ ಜೋಹರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಕರಣ್ ಜೋಹರ್ ಇತ್ತೀಚೆಗಷ್ಟೇ ತಮ್ಮ ೫೦ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಇಡೀ ಬಾಲಿವುಡ್‌ಯೇ ಕರಣ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಸಾಥ್ ನೀಡಿದ್ದರು. ಇನ್ನು ವೃತ್ತಿ ಬದುಕಿನ ಮೇಲೆ ಹೆಚ್ಚು ಆಸಕ್ತಿ ಹೊಂದಿರುವ ಕರಣ್ ಜೋಹರ್ ಇತ್ತೀಚೆಗಷ್ಟೇ ಸಂದರ್ಶನವೊಂದನ್ನು ನೀಡಿದ್ದಾರೆ. ತಮ್ಮ ಜೀವನ ಸಂಗಾತಿಯ ಕುರಿತು ಸಂದರ್ಶನದಲ್ಲಿ ಕರಣ್ ಜೋಹರ್ ಮಾತನಾಡಿದ್ದಾರೆ. ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಉಡೀಸ್ ಮಾಡಿದ `ಆರ್‌ಆರ್‌ಆರ್’ ಕಲೆಕ್ಷನ್: 1100 ಕೋಟಿ ಬಾಚಿದ ಚಿತ್ರ

    ನಾನು ನನ್ನ ವೈಯಕ್ತಿಕ ಜೀವನದ ಬಗ್ಗೆ ಸ್ವಲ್ಪ ಹೆಚ್ಚು ಗಮನ ಹರಿಸಬೇಕಿತ್ತು ಎಂದೆನಿಸುತ್ತದೆ. ಪರ್ಸನಲ್ ಲೈಫ್ ಬಗ್ಗೆ ನಾನು ಹೆಚ್ಚು ಪ್ರಾಮುಖ್ಯತೆ ಕೊಟ್ಟಿಲ್ಲ. ನಿರ್ಮಾಪಕ ಹಾಗೂ ನಿರ್ದೇಶಕನ ಜವಾಬ್ದಾರಿಗಳು ಹೆಚ್ಚಾಗಿದ್ದ ಕಾರಣ ನನ್ನ ವೈಯಕ್ತಿಕ ಜೀವನಕ್ಕೆ ಹೆಜ್ಜೆ ಪ್ರಾಮುಖ್ಯತೆ ಕೊಡಲಾಗಲಿಲ್ಲ. ಪರ್ಸನಲ್ ಲೈಫ್‌ಗೆ ಸಮಯ ನೀಡದಿರುವುದು ನನ್ನ ಜೀವನದ ದೊಡ್ಡ ವಿಷಾದ. ಈಗ ಎಲ್ಲವೂ ತಡವಾಗಿದೆ. ಈಗ ಜೀವನ ಸಂಗಾತಿಯನ್ನು ಹುಡುಕಲು ಸಮಯ ಮೀರಿದೆ. ನನ್ನ ಜೀವನದಲ್ಲಿ ಆ ಸ್ಥಾನ ಯಾವಾಗಲೂ ಹಾಗೇ ಖಾಲಿ ಇರುತ್ತದೆ. ಇದೇ ನನ್ನ ಜೀವನದ ಆಳವಾದ ವಿಷಾದ ಎಂದು ಸಂದರ್ಶನದಲ್ಲಿ ಕರಣ್ ಜೋಹರ್ ಹೇಳಿದ್ದಾರೆ.

    ಇನ್ನು ಬಾಡಿಗೆ ತಾಯಿಯ ಮೂಲಕ ಕರಣ್ ಜೋಹರ್, ಅವಳಿ ಮಕ್ಕಳನ್ನು ಬರಮಾಡಿಕೊಂಡಿದ್ದರು. ತಮ್ಮ ತಂದೆ ತಾಯಿ ಹೆಸರನ್ನೇ ಆ ಮಕ್ಕಳಿಗೆ ಇಟ್ಟಿದ್ದಾರೆ. ಆ ಮಕ್ಕಳೇ ಇಂದು ಕರಣ್ ಜೋಹರ್ ಪ್ರಪಂಚವಾಗಿದ್ದಾರೆ.

    Live Tv

  • ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?

    ಮದುವೆಗೆ ಸಜ್ಜಾದ ನಿರೂಪಕಿ ಅನುಶ್ರೀ: ಹುಡುಗ ಯಾರು?

    ಸ್ಯಾಂಡಲ್‌ವುಡ್‌ನ ಖ್ಯಾತ ನಿರೂಪಕಿ ಅನುಶ್ರೀಗೆ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಮದುವೆಯಾಗಲೂ ಇದೀಗ ಮನಸ್ಸು ಮಾಡಿದ್ದಾರೆ. ಹಾಗಂತ ಸ್ವತಃ ಅನುಶ್ರೀ ಅವರೇ ಹೇಳಿಕೊಂಡಿದ್ದಾರೆ.

    ಸಾಕಷ್ಟು ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಅನುಶ್ರೀ, ತಮ್ಮ ವಿಭಿನ್ನ ನಿರೂಪಣೆಯ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಮನೆಮಾತಾಗಿದ್ದಾರೆ. ಚಿತ್ರರಂಗದ ಕಾರ್ಯಕ್ರಮಗಳ ಜೊತೆಗೆ ಟಿವಿ ಶೋ ಮುಖಾಂತರ ಅನುಶ್ರೀ, ಅಪಾರ ಅಭಿಮಾನಿಗಳ ಮನಗೆದ್ದಿದ್ದಾರೆ. ಇದೀಗ ಮತ್ತೆ ನಟಿ ಕಮ್ ನಿರೂಪಕಿ ಅನುಶ್ರೀ ಸುದ್ದಿಯಲ್ಲಿದ್ದಾರೆ. ಈ ಬಾರಿ ಮದುವೆಯ ವಿಚಾರದ ಮೂಲಕ ಗಾಂಧಿನಗರದಲ್ಲಿ ಸದ್ದು ಮಾಡ್ತಿದ್ದಾರೆ. ಇದನ್ನೂ ಓದಿ: ಮಾಲ್ಡೀವ್ಸ್ ಪ್ರವಾಸದಲ್ಲಿ `ಲವ್ ಮಾಕ್ಟೈಲ್’ ಜೋಡಿ

    ಅನುಶ್ರೀ ಅವರಿಗೆ ಮದುವೆಯಾಗಲು ಮನಸ್ಸು ಮಾಡಿದ್ದಾರೆ. ಮದುವೆ ಆಗುವುದಕ್ಕೆ ಆಸೆಯಾಗುತ್ತಿದೆ ಅಂತೆ ಹಾಗಂತ ಸ್ವತಃ ತಮ್ಮ ಮನದಾಳದ ಮಾತನ್ನ ಖಾಸಗಿ ಶೋವೊಂದರಲ್ಲಿ ಅನುಶ್ರೀ ಹೇಳಿಕೊಂಡಿದ್ದಾರೆ. ಖಾಸಗಿ ವಾಹಿನಿವೊಂದರಲ್ಲಿ ಜೋಡಿಗಳ ರಿಯಾಲಿಟಿ ಶೋ ನಡೆಯುತ್ತಿದ್ದು, ಆ ಜೋಡಿಗಳ ಪ್ರೀತಿ, ಬಾಂಧವ್ಯ ನೋಡಿ ಶೋನಲ್ಲಿ ತಾನು ಕೂಡ ಮದುವೆಯಾಗಬೇಕು ಅಂತಾ ಆಸೆಯಾಗುತ್ತದೆ ಅಂತಾ ಅನುಶ್ರೀ ಮುಕ್ತವಾಗಿ ಹಂಚಿಕೊಂಡಿದ್ದಾರೆ.

    ಹಸೆಮಣೆ ಏರೋದಕ್ಕೆ ಮನಸ್ಸು ಮಾಡಿರುವ ಈ ನಟಿಗೆ ಈಗಾಗಲೇ ಹುಡುಗ ಸಿಕ್ಕಿದ್ದಾನ, ಇಲ್ವಾ ಹಾಗೇ ಮಾತಿಗೆ ಹೇಳಿರೋದಾ ಅಂತಾ ಕಾದುನೋಡಬೇಕಿದೆ. ಒಟ್ನಲ್ಲಿ ನಿರೂಪಕಿ ಅನುಶ್ರೀ ಅವರು ಮದುವೆಯತ್ತ ಮನಸ್ಸು ಮಾಡಿರೋದಕ್ಕೆ ಪಡ್ಡೆಹುಡುಗರು ಖುಷಿಯಾಗಿದ್ದಾರೆ. ಸದ್ಯದಲ್ಲೇ ಅಭಿಮಾನಿಗಳಿಗೆ ಅನುಶ್ರೀ ಗುಡ್ ನ್ಯೂಸ್ ಕೊಡತ್ತಾರಾ ಅಂತಾ ಕಾದುನೋಡಬೇಕಿದೆ.

  • ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟ ಸಾಯಿಪಲ್ಲವಿ

    ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟ ಸಾಯಿಪಲ್ಲವಿ

    ಸೌತ್ ಸಿನಿಮಾರಂಗದ ಬ್ಯೂಟಿ ಸಾಯಿಪಲ್ಲವಿ, ತಮ್ಮ ಅಮೋಘ ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಇದೀಗ ತಮ್ಮ ಮದುವೆಯ ಬಗ್ಗೆ ಕನಸು ಬಿಚ್ಚಿಟ್ಟಿದ್ದಾರೆ. ತಮ್ಮ ಮದುವೆಯ ಕುರಿತು ಇದೀಗ ಮುಕ್ತವಾಗಿ ಸಾಯಿ ಪಲ್ಲವಿ ಮಾತನಾಡಿದ್ದಾರೆ.

    ದಕ್ಷಿಣದ ಚಿತ್ರರಂಗದಲ್ಲಿ ನಟನೆ ಮತ್ತು ಡ್ಯಾನ್ಸ್ ಎರಡರಲ್ಲೂ ಸೈ ಎನಿಸಿಕೊಂಡ ನಟಿ ಸಾಯಿಪಲ್ಲವಿಯ ಮದುವೆಯ ಕುರಿತು ಸಾಕಷ್ಟು ವಿಚಾರಗಳು ಕೇಳಿ ಬಂದಿತ್ತು. ಸಾಯಿಪಲ್ಲವಿ ಸದ್ಯದಲ್ಲೇ ಮದುವೆ ಆಗಲಿದ್ದಾರೆ ಎಂಬ ಸುದ್ದಿಗೆ ಸಾಲು ಸಾಲು ಚಿತ್ರಗಳ ಅನೌನ್ಸ್ ಮಾಡುವ ಮೂಲಕ ಮದುವೆಯ ಸುದ್ದಿಗೆ ಈ ನಟಿ ಬ್ರೇಕ್ ಹಾಕಿದ್ದರು. ಇದೀಗ ಸಂದರ್ಶನವೊಂದರಲ್ಲಿ ತಮ್ಮ ಮದುವೆ ಕನಸಿನ ಬಗ್ಗೆ ಸಾಯಿಪಲ್ಲವಿ ಮಾತನಾಡಿದ್ದಾರೆ.

    ಕೋವಿಡ್ ಸಮಯದಲ್ಲಿ ನನಗೆ ಮದುವೆ ಆಗುವಂತೆ ಪೋಷಕರಿಂದ ಒತ್ತಾಯವಿತ್ತು. ಅದಕ್ಕೂ ಮುನ್ನ ನಾನು ಸಾಕಷ್ಟು ಸಮಯ ಸಿನಿಮಾ ಶೂಟಿಂಗ್‌ನಲ್ಲಿಯೇ ಭಾಗವಹಿಸುತ್ತಿದ್ದೆ, ಹಾಗಾಗಿ ನನ್ನ ಪೋಷಕರಿಗೂ ಭಯವಾಗುತ್ತಿತ್ತು. ಜತೆಗೆ ಗ್ರಾಮದಲ್ಲಿ ನನ್ನ ಜೊತೆಗಿದ್ದ ಸಾಕಷ್ಟು ನನ್ನ ವಯಸ್ಸಿನ ಯುವತಿಯರಿಗೆ ಮದುವೆಯಾಗಿತ್ತು. ಸಹಜವಾಗಿ, ನನಗೂ ಮದುವೆಯಾಗುವಂತೆ ಮನೆಯಲ್ಲಿ ಒತ್ತಾಯಿಸುತ್ತಿದ್ದರು ಎಂದಿದ್ದಾರೆ.

    ನನಗೆ 18ನೇ ವಯಸ್ಸಿನಲ್ಲಿ ಒಂದು ಕನಸಿತ್ತು. ನನಗೆ 23 ವಯಸ್ಸಿಗೆ ಮದುಯಾಗುತ್ತದೆ, 30 ವಯಸ್ಸಿನಲ್ಲಿ ಇಬ್ಬರು ಮಕ್ಕಳಿರುತ್ತಾರೆ ಎಂದು ಕನಸು ಕಂಡಿದ್ದೆ. ಆದರೆ ಈಗ ದಾಂಪತ್ಯದ ಕುರಿತು ಯೋಚನೆ ಮಾಡಿದ್ರೆ, ನಾನು ಮದುವೆಯಾಗದಿದ್ದು ಒಳ್ಳೆಯದು ಅನಿಸುತ್ತಿದೆ. ಮದುವೆಯೆಂಬ ಜವಾಬ್ದಾರಿಯನ್ನ ತೆಗೆದುಕೊಳ್ಳಲು ಪರಿಪಕ್ವತೆ ಬೇಕು. ಮಡದಿಯಾಗಿ, ತಾಯಿಯಾಗಿ ಅವರ ಬೆಂಬಲಕ್ಕೆ ನಿಲ್ಲಬೇಕು. ಈಗ ಇಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಮದುವೆಯ ವಿಚಾರದಲ್ಲಿ ನನಗೆ ಸಂಪೂರ್ಣ ಸ್ವತಂತ್ರ್ಯವಿದೆ. ಆದರೆ ಹುಡುಗ ಯಾರು ಸೆಲೆಕ್ಟ್ ಮಾಡ್ತಾರೆ ಗೊತ್ತಿಲ್ಲ. ಪೋಷಕರು ಆದ್ರು ಓಕೆ, ನಾನು ಹೇಳಿದ್ರು ಸರಿ ಸದ್ಯ ಈ ಕುರಿತು ಯೋಚನೆ ಮಾಡಿಲ್ಲ ಅಂತಾ ಮುಕ್ತವಾಗಿ ಸಾಯಿಪಲ್ಲವಿ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಬಿಗ್‌ಬಿ ಮೊಮ್ಮಗಳ ಜೊತೆ `ಗಲ್ಲಿಬಾಯ್’ ನಟನ ಡೇಟಿಂಗ್ ಸ್ಟೋರಿ

    ಸದ್ಯ ಸಾಯಿಪಲ್ಲವಿ ನಟನೆಯ `ಗಾರ್ಗಿ’ ಮತ್ತು `ವಿರಾಟ ಪರ್ವಂ’ ಚಿತ್ರಗಳು ರಿಲೀಸ್‌ಗೆ ರೆಡಿಯಿದೆ. ಹೊಸ ಬಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲು `ಪ್ರೇಮಂ’ ಬೆಡಗಿ ರೆಡಿಯಾಗಿದ್ದಾರೆ.

  • ಕಾವ್ಯ ಶಾ- ನಿರ್ಮಾಪಕ ವರುಣ್ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

    ಕಾವ್ಯ ಶಾ- ನಿರ್ಮಾಪಕ ವರುಣ್ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

    ಸ್ಯಾಂಡಲ್‌ವುಡ್ ನಟಿ ಕಾವ್ಯ ಶಾ ಕೊನೆಗೂ ಹಸೆಮಣೆ ಏರಿದ್ದಾರೆ. ಇಂದು ಗುರುಹಿರಿಯರ ಸಮ್ಮುಖದಲ್ಲಿ ಕಾವ್ಯ ಶಾ ಮತ್ತು ವರುಣ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಭಾವಿ ಪತಿ ತಂದೆಯ ಅಕಾಲಿಕ ಮರಣದಿಂದ ಮದುವೆಯನ್ನು ಮುಂದೂಡಲಾಗಿತ್ತು. ಇದೀಗ ಈ ಜೋಡಿ ಹಸೆಮಣೆ ಏರಿದ್ದಾರೆ. ಈ ಸಂಭ್ರಮಕ್ಕೆ ಮೋಹಕತಾರೆ ರಮ್ಯಾ ಸಾಕ್ಷಿಯಾಗಿದ್ದಾರೆ.

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ಕಾವ್ಯ ಶಾ ಮತ್ತು ಸ್ಯಾಂಡಲ್‌ವುಡ್ ನಿರ್ಮಾಪಕ ವರುಣ್ ಇಂದು ಹಸೆಮಣೆ ಏರಿದ್ದಾರೆ. ವರುಣ್ ತಂದೆ ಅಕಾಲಿಕ ನಿಧನದಿಂದ ಮದುವೆ ಮುಂದೂಡಲಾಗಿತ್ತು. ಇಂದು ಗುರು ಹಿರಿಯರ ಸಮ್ಮುಖದಲ್ಲಿ ಹೊಸ ಬಾಳಿಗೆ ಈ ಜೋಡಿ ಕಾಲಿಟ್ಟಿದ್ದಾರೆ. ಈ ಜೋಡಿ ಶುಭಹಾರೈಸಲು ರಮ್ಯಾ ಕೂಡ ಬಂದಿದ್ದಾರೆ. ನವಜೋಡಿ ಶುಭ ಹಾರೈಸಿ ಬಂದಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾವ್ಯ ಶಾ-ನಿರ್ಮಾಪಕ ವರುಣ್

    ಕಾವ್ಯ ಶಾ ಮತ್ತು ನಿರ್ಮಾಪಕ ವರುಣ್ ಇಂದು (ಜೂ.9) ಬೆಂಗಳೂರಿನ ನಂದಿ ಗ್ರೌಂಡ್ಸ್‌ನಲ್ಲಿ ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಆಗಿದ್ದಾರೆ. ಮದುವೆಗೆ ಲೂಸ್ ಮಾದ ಯೋಗಿ ಮತ್ತು ನಿರ್ದೇಶಕ ಸಂತೋಷ್‌ ಆನಂದ್‌ ರಾಮ್ ಕೂಡ ಬಂದು ಶುಭ ಹಾರೈಸಿದ್ದಾರೆ. ವರುಣ್ ಮತ್ತು ರಮ್ಯಾ ಸಾಕಷ್ಟು ವರ್ಷಗಳಿಂದ ಪರಿಚಿಯವಿದ್ದು, ಸ್ನೇಹಿತನ ಮದುವೆಗೆ ಬಂದು ರಮ್ಯಾ ಶುಭ ಹಾರೈಸಿದ್ದರೆ. ಈ ವೇಳೆ ಸಾಕಷ್ಟು ಅಭಿಮಾನಿಗಳು ರಮ್ಯಾ ಜತೆ ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ.