ಸ್ಯಾಂಡಲ್‌ವುಡ್‌ನ `ಮೈನಾ’ ಬ್ಯೂಟಿ ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ನಿತ್ಯಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವದಂತಿಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಜತೆಗೆ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುವುದರ ಬಗ್ಗೆ ನಿತ್ಯಾ ಮಾತನಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಕನ್ನಡ ಸಿನಿಮಾದಿಂದ ಸಿನಿ ಪಯಣ ಶುರು ಮಾಡಿ, ಸದ್ಯ ಬಹುಭಾಷಾ ನಟಿಯಾಗಿ ಮಿಂಚ್ತಿರುವ ನಿತ್ಯಾ ಮೆನನ್ ಸದ್ಯ ಬಾರಿ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಜತೆ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ, ಕಾಣಿಸಿಕೊಳ್ತಿದ್ದಾರೆ. ಇತ್ತೀಚೆಗೆ ನಿತ್ಯಾ ದಕ್ಷಿಣ ಸ್ಟಾರ್ ನಟನನ್ನ ಮದುವೆಯಾಗಲಿದ್ದಾರೆ ಎಂಬ ವದಂತಿಗೆ ವಿಡಿಯೋ ಮೂಲಕ ಎಲ್ಲಾ ಊಹಾಪೋಹಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ನಾನು ಮದುವೆಯಾಗುತ್ತಿಲ್ಲ, ಈ ವಿಚಾರ ಸತ್ಯಕ್ಕೆ ಹತ್ತಿರವಾಗಿಲ್ಲ. ಸದ್ಯ ನನಗೆ ಮದುವೆಯಾಗುವ ಯಾವುದೇ ಆಲೋಚನೆ ಇಲ್ಲ. ಯಾರೋ ಬೇಸರ ಬಂದಿರುವವರು ಆರ್ಟಿಕಲ್ ಬರೆದಿರಬೇಕು ಎಂದು ಹೇಳುವ ಮೂಲಕ ವದಂತಿಗೆ ತೆರೆ ಎಳೆದಿದ್ದಾರೆ. ನಿತ್ಯಾ ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ ಎಂಬ ವದಂತಿ ಇತ್ತು. ಈ ವಿಚಾರವಾಗಿಯೂ ಮಾತನಾಡಿದ್ದಾರೆ. ಇದನ್ನೂ ಓದಿ:10 ಪರ್ಸೆಂಟ್ ಕೂಡ ನೆಮ್ಮದಿ ಇಲ್ಲಾ ಎಂದ ತಲೈವಾ: ಮಗಳ ಡಿವೋರ್ಸ್ ವಿಚಾರದಲ್ಲಿ ಕುಗ್ಗಿದ್ರಾ ರಜನಿಕಾಂತ್
View this post on Instagram
ನಾನು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತೇನೆ. ಪ್ರತಿ ಸಿನಿಮಾದ ನಂತರ ನಾನು ಬ್ರೇಕ್ ತೆಗೆದುಕೊಳ್ಳುತ್ತೇನೆ. ನನಗೆ ರೋಬೋಟ್ ರೀತಿ ನನಗೆ ಕೆಲಸ ಮಾಡಲು ಬರುವುದಿಲ್ಲ. ಒಂದು ವರ್ಷದಿಂದ ವಿರಾಮವಿಲ್ಲದೇ ಕೆಲಸ ಮಾಡಿದ್ದೇನೆ. ನನ್ನ ನಟನೆಯ ಐದಾರು ಸಿನಿಮಾಗಳು ತೆರೆಗೆ ಬರಲು ರೆಡಿಯಿದೆ. ಹಾಗಾಗಿ ನನಗೆ ವಿರಾಮ ಬೇಕಿದೆ ಎಂದು ಮಾತನಾಡಿದ್ದಾರೆ.
Live Tv
[brid partner=56869869 player=32851 video=960834 autoplay=true]




ಮನೋರಂಜನ್ ಕೂಡ ಸಾಕಷ್ಟು ಸಿನಿಮಾಗಳ ಮೂಲಕ ಚಂದನವನದಲ್ಲಿ ಗಮನ ಸೆಳೆದಿದ್ದಾರೆ. ಈಗ ತಮ್ಮ ವಯಕ್ತಿಕ ಬದುಕಿನ ವಿಚಾರವಾಗಿ ಸೌಂಡ್ ಮಾಡ್ತಿದ್ದಾರೆ. ಮನೋರಂಜನ್ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಸದ್ಯ ಮದುವೆಯ ಇನ್ವಿಟೇಶನ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಪತ್ರಿಕೆಯಲ್ಲಿ ರವಿಚಂದ್ರನ್ ಅವರ ಫೋಟೋ ಇರುವುದು ಹೈಲೆಟ್ ಆಗಿದೆ.
ʻಮುಗಿಲುಪೇಟೆʼ ನಟ ಮನು, ಸಂಗೀತಾ ದೀಪಕ್ ಅವರ ಜತೆ ಹಸೆಮಣೆ ಏರುತ್ತಿದ್ದಾರೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ವೈಟ್ ಪೆಟಲ್ಸ್‌ನಲ್ಲಿ ವಿವಾಹ ಸಮಾರಂಭ ಜರುಗಲಿದೆ. ಆಗಸ್ಟ್ 20 ಮತ್ತು 21ರಂದು ಅದ್ದೂರಿಯಾಗಿ ಮದುವೆ ನಡೆಯಲಿದೆ. ಸ್ಯಾಂಡಲ್‌ವುಡ್ ಜತೆ ಪರಭಾಷಾ ಚಿತ್ರರಂಗದ ಸ್ಟಾರ್ಸ್ ದಂಡೇ ಈ ಮದುವೆಗೆ ಸಾಕ್ಷಿಯಾಗಲಿದೆ.


ಮುಂದಿನ ದಿನಗಳಲ್ಲಿ ಅನುಷ್ಕಾ ಮದುವೆ ವಿಚಾರ ನಿಜವಾಗುತ್ತಾ ಅಂತಾ ಅನುಷ್ಕಾ ಕುಟುಂಬದಿಂದ ಅಧಿಕೃತ ಮಾಹಿತಿ ನೀಡುವವರೆಗೂ ಕಾದುನೋಡಬೇಕಿದೆ.

ಜಿಕೆವಿಕೆ ಕೃಷಿ ವಿದ್ಯಾಲಯದಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುವ ಇವರು ನೂತನ ತಂತ್ರಜ್ಞಾನ ಉಪಯೋಗಿಸುವಲ್ಲಿ ಮುಂದು. ಶಶಿಕುಮಾರ್ ಚಿಕ್ಕಬಳ್ಳಾಪುರದ ಚಿಂತಾಮಣಿ ಮೂಲದವರಾಗಿದ್ದು, ಸದ್ದಿಲ್ಲದೇ ಮದುವೆಯ ಬಗ್ಗೆ ಗುಡ್ ನ್ಯೂಸ್ ನೀಡಿದ್ದಾರೆ. ಶಶಿ ಈಗ `ಮೆಹಬೂಬ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಡ್ತಿದ್ದಾರೆ.









ನಾನು ಈ ಹೇಳಿಕೆ ನೀಡಿ ಒಂದು ವಾರ ಕಳೆದಿದೆ. ಆದರೆ, ನಾನು ಹೇಳಿಕೆ ನೀಡಿರುವುದು ಕೇವಲ ತಮಾಷೆಗಾಗಿ ಅಷ್ಟೇ ನಿತ್ಯಾನಂದ ಬಗ್ಗೆ ಮಾಡೋ ಟ್ರೋಲ್ಸ್, ಮಿಮ್ಸ್, ವಿಡಿಯೋಗಳು ನನಗೆ ತುಂಬಾ ಇಷ್ಟ. ನಾನು ಮದುವೆ ಆಗುತ್ತೀನಿ ಎಂದಿದ್ದು ಜಸ್ಟ್ ಕಾಮಿಡಿ ಎಂದು ಪ್ರಿಯಾ ಆನಂದ್ ಸ್ಪಷ್ಟನೆ ನೀಡಿದ್ದಾರೆ. ಇದನ್ನು ದೊಡ್ಡದು ಮಾಡೋ ಅಗತ್ಯವಿಲ್ಲ ಎಂದು ಮಾತನಾಡಿದ್ದಾರೆ.
