ನಟಿ ಮಹಾಲಕ್ಷ್ಮಿ (Mahalakshmi) ಅವರನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಜಟ್ ನಲ್ಲಿ ಹನಿಮೂನಿಗೆ ಹೋಗುವ ಮುನ್ನ ಅವರು ಮನೆದೇವರ ಗುಡಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

ಮಿಸ್ ಮ್ಯಾಚ್ ಜೋಡಿ ಎಂದೇ ಟ್ರೋಲ್ ಆಗುತ್ತಿರುವ ನಟಿ ಮಹಾಲಕ್ಷ್ಮಿ ಹಾಗೂ ನಿರ್ಮಾಪಕ ರವೀಂದರ್ (Ravinder Chandrasekaran) ಜೋಡಿಯ ಹನಿಮೂನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮದುವೆಯಾಗಿ ಅಚ್ಚರಿ ಮೂಡಿಸಿದ್ದ ಈ ಜೋಡಿ, ಮದುವೆಯಾದ (Wedding)ಮೂರನೇ ದಿನಕ್ಕೆ ಹನಿಮೂನ್ ಟೂರ್ ಮಾಡಿದ್ದಾರೆ. ಹನಿಮೂನ್ ಸ್ಪಾಟ್ ನಿಂದಲೇ ಅವರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಆ ಫೋಟೋ ಸಖತ್ ವೈರಲ್ ಕೂಡ ಆಗಿವೆ. ಇದನ್ನೂ ಓದಿ:ನಂದಿನಿ ಔಟ್ ಆದ್ಮೇಲೆ ಸಾನ್ಯ ಜೊತೆ ಜಶ್ವಂತ್ ಲವ್ವಿ-ಡವ್ವಿ: ರೂಪೇಶ್‌ಗೆ ಟೆನ್ಷನ್ ಶುರು

ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಮೇಲೆ ಸಾಕಷ್ಟು ಜೋಕ್ ಗಳು ಹರಿದಾಡುತ್ತಿದ್ದರೂ, ಗಾಸಿಪ್ ಗಳು ಸೃಷ್ಟಿ ಆಗುತ್ತಿದ್ದರೂ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳದೇ ಹನಿಮೂನ್ (Honeymoon) ಎಂಜಾಯ್ ಮಾಡುತ್ತಿದೆ ಈ ಜೋಡಿ. ಸದ್ಯ ಈ ದಂಪತಿ ಮಹಾಬಲಿಪುರಂ ಇಂಟರ್ ಕಾಂಟಿನೆಂಟಲ್ ರೆಸಾರ್ಟ್ ನಲ್ಲಿ ತಂಗಿದ್ದು, ಅಲ್ಲಿಂದಲೇ ಅಭಿಮಾನಿಗಳು ಸಂದೇಶ ರವಾನಿಸಿದ್ದಾರೆ. ಮಹಾಲಕ್ಷ್ಮಿ ‘ಲೈಫ್ ಇಸ್ ಬ್ಯೂಟಿಫುಲ್’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರೆ, ರವೀಂದರ್ ‘ಲೈಫ್ ಗೆ ಪ್ರೀತಿ ಬೇಕು, ಈ ಪ್ರೀತಿಗೆ ಮಹಾಲಕ್ಷ್ಮಿ ಇರಬೇಕು’ ಎಂದು ಕಾವ್ಯಾತ್ಮಕವಾಗಿ ಭಾವನೆ ಹೊರ ಹಾಕಿದ್ದಾರೆ.

ಮಹಾಲಕ್ಷ್ಮಿ ಮತ್ತು ರವೀಂದರ್ ಜೋಡಿ ಹನಿಮೂನ್ ಅನ್ನು ಎಂಜಾಯ್ ಮಾಡುತ್ತಿದ್ದರೆ ಈ ನಡುವೆ ಮತ್ತೊಂದು ಸ್ಪೂಟಕ ಸುದ್ದಿ ಹೊರ ಬಂದಿದ್ದು, ಮಹಾಲಕ್ಷ್ಮಿಗೆ ಈ ಮೊದಲೇ ಮದುವೆ ಆಗಿತ್ತು. ಎರಡು ಮಕ್ಕಳು ಕೂಡ ಇವೆ. ಮೊದಲ ಗಂಡನಿಂದ ಡಿವೋರ್ಸ್ ಪಡೆದ ನಂತರ ತಮ್ಮೊಂದಿಗೆ ನಟಿಸುತ್ತಿದ್ದ ಸಹ ನಟ ಈಶ್ವರ್ ಎನ್ನುವವರ ಜತೆ ಅಫೇರ್ ಇಟ್ಟುಕೊಂಡಿದ್ದರು ಎಂದು ಸ್ವತಃ ಈಶ್ವರ್ ಅವರ ಪತ್ನಿಯೇ ಆರೋಪ ಮಾಡಿದ್ದಾರೆ. ನನ್ನ ಗಂಡನ ಜೊತೆ ಮಹಾಲಕ್ಷ್ಮಿ ದಿನ ರಾತ್ರಿಯೂ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದಳು. ಅದಕ್ಕೆ ಬೇಕಾದ ಸಾಕ್ಷಿ ನನ್ನ ಬಳಿ ಇದೆ ಎಂದು ಈಶ್ವರ್ ಪತ್ನಿ ಜಯಶ್ರೀ ಆರೋಪ ಮಾಡಿದ್ದರು.

ರವೀಂದರ್ ಚಂದ್ರಶೇಖರನ್ ಜೊತೆ ಮಹಾಲಕ್ಷ್ಮಿ ಮದುವೆ ಆಗುತ್ತಿದ್ದಂತೆಯೇ ಈ ವಿಷಯ ತಮಿಳು ಮಾಧ್ಯಮದಲ್ಲಿ ಮತ್ತೆ ಪ್ರಮುಖ ಸುದ್ದಿಯಾಗಿದೆ. ಮಹಾಲಕ್ಷ್ಮಿ ಮತ್ತು ಈಶ್ವರ್ ಲವ್ವಿ ಡವ್ವಿ ವಿಚಾರ ರವೀಂದರ್ ಅವರಿಗೂ ಗೊತ್ತಿತ್ತು ಎಂದು ವರದಿಯಾಗಿದೆ. ಎಲ್ಲ ಗೊತ್ತಿದ್ದರೂ ಮಹಾಲಕ್ಷ್ಮಿಯನ್ನು ರವೀಂದರ್ ಮದುವೆ ಆಗಿದ್ದಾರೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗುತ್ತಿದೆ. ಮದುವೆ ಅವರ ಸ್ವಂತ ವಿಚಾರ. ಅಷ್ಟಕ್ಕೂ ಇಬ್ಬರೂ ಕಾನೂನು ಬದ್ಧವಾಗಿಯೇ ಮದುವೆಯಾಗಿದ್ದಾರೆ. ಆದರೂ, ಜಯಶ್ರೀ ಆರೋಪ ಇದೀಗ ಮುನ್ನೆಲೆಗೆ ಬಂದಿದೆ.







ಈ ಹಿಂದೆಯೂ ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ್ದ ಸುನೀಲ್ ಶೆಟ್ಟಿ, ನನ್ನ ಆಶೀರ್ವಾದ ಯಾವಾಗಲೂ ಅವರೊಂದಿಗೆ ಇರುತ್ತದೆ. ಈಗ ಕಾಲ ಬದಲಾಗಿದೆ ಅವರವರ ಇಚ್ಛೆಗೆ ಅನುಗುಣವಾಗಿ ಏನು ಮಾಡಬೇಕೆಂದು ಅವರೇ ನಿರ್ಧರಿಸುತ್ತಾರೆ. ನನ್ನ ಮಗಳು ಮತ್ತು ಮಗ ಇಬ್ಬರೂ ಜವಾಬ್ದಾರಿಯುತರಾಗಿದ್ದಾರೆ. ಅವರ ಭವಿಷ್ಯದ ನಿರ್ಧಾರ ಅವರೇ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನನ್ನ ಆಶೀರ್ವಾದ ಅವರಿಗೆ ಯಾವಾಗಲೂ ಇರುತ್ತದೆ ಎಂದಿದ್ದರು.


ಕನ್ನಡ ಚಿತ್ರರಂಗದ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 21 ರಂದು 8.30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತಾ ಎಂಬವರ ಕೈ ಹಿಡಿದಿದ್ದಾರೆ. ಇದನ್ನೂ ಓದಿ:
ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್‌ನಲ್ಲಿನ ವೈಟ್ ಪೆಟಲ್ಸ್ ತ್ರಿಪುರವಾಸಿನಿಯಲ್ಲಿ ನಡೆದ ಶುಭಘಳಿಗೆಯಲ್ಲಿ ಚಿತ್ರರಂಗದ ಕೆಲ ಗಣ್ಯವ್ಯಕ್ತಿಗಳು ಭಾಗವಹಿಸಿದ್ದರು.








ಈ ಜೋಡಿ `ಕಮಲಿ’ ಸೀರಿಯಲ್‌ನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅನಿಕಾ ಪಾತ್ರಧಾರಿಯಾಗಿ ಗೇಬ್ರಿಯೆಲಾ ಕಾಣಿಸಿಕೊಂಡ್ರೆ, ಸುಹಾಸ್ ಅವರು ಶಂಭು ಪಾತ್ರ ಮಾಡುತ್ತಿದ್ದಾರೆ. ಆರಂಭದಲ್ಲಿ ಇಬ್ಬರೂ ಸ್ನೇಹಿತರಾಗಿದ್ದರು ನಂತರ ಔಟ್‌ಡೋರ್ ಶೂಟಿಂಗ್ ವೇಳೆಯಲ್ಲಿ ಸುಹಾಸ್ ಮತ್ತು ಅನಿಕಾ ಮಧ್ಯೆ ಮಾತು ಹೆಚ್ಚಾಗಿ ಸ್ನೇಹ ಬೆಳೆದು, ಪ್ರೀತಿಯಾಗಿ ತಿರುಗಿತು. ಕಳೆದ ೩ ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.
ಮಹಾನಟಿ ಕೀರ್ತಿ ಸುರೇಶ್ ಸದ್ಯದಲ್ಲೇ ಮದುವೆಯಾಗಲಿದ್ದಾರಂತೆ. ನಟಿಯ ಮದುವೆಯ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಎಂದಿನಂತೆ ಸೋಷಿಯಲ್ ಮೀಡಿಯಾದಲ್ಲಿ ನಾಯಕಿಯರ ಮದುವೆ ಬಗ್ಗೆ ಆಗಾಗ ಸುದ್ದಿಗಳು ಹರಿದಾಡುತ್ತಿವೆ. ಸೌತ್ ಅಂಗಳದ ಚೆಲುವೆ ಕೀರ್ತಿ ಸುರೇಶ್ ವಿವಾಹವಾಗಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಇದನ್ನೂ ಓದಿ:
ಗುರು ಹಿರಿಯರು ನಿಶ್ಚಯಿಸಿದ ವರನೊಂದಿಗೆ ಏಳು ಹೆಜ್ಜೆ ಇಡಲು ಕೀರ್ತಿ ಸುರೇಶ್ ಒಪ್ಪಿಗೆ ನೀಡಿದ್ದಾರಂತೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರ ಬೀಳಲಿದೆ ಎನ್ನಲಾಗಿದೆ. ಇನ್ನು ಕೀರ್ತಿ ಸುರೇಶ್ ಮದುವೆ ಆಗುತ್ತಿರುವುದು ಉದ್ಯಮಿಯೋರ್ವನಾಗಿದ್ದು, ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ನಟಿಮಣಿಯರು ಲವ್ ಮ್ಯಾರೇಜ್ ಆಗೋದೆ ಹೆಚ್ಚು. ಆದರೆ, ಕೀರ್ತಿ ಸುರೇಶ್ ಮಾತ್ರ ಅರೇಂಜ್ ಮ್ಯಾರೇಜ್‌ಗೆ ಒಪ್ಪಿಗೆ ನೀಡಿದ್ದಾರೆ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಶೇರ್ ಮಾಡುತ್ತಿದ್ದಾರೆ. ಜತೆಗೆ ಈ ಸುದ್ದಿ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.