Tag: wedding

  • ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

    ಹನ್ಸಿಕಾ ಮೋಟ್ವಾನಿಗೆ ರೊಮ್ಯಾಂಟಿಕ್‌ ಆಗಿ ಪ್ರಪೋಸ್‌ ಮಾಡಿದ ಭಾವಿ ಪತಿ

    ಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ನಟಿಯ ಮನೆಯಲ್ಲಿ ಮದುವೆ ಸದ್ದು ಜೋರಾಗಿದೆ. ಇದೀಗ ಭಾವಿ ಪತಿ ಪ್ರಪೋಸ್ ಮಾಡುತ್ತಿರುವ ಫೋಟೋ ಶೇರ್ ಮಾಡಿದ್ದಾರೆ. ಈ ಮೂಲಕ ಭಾವಿ ಪತಿಯ ಜೊತೆಗಿನ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

    ಕನ್ನಡದ ಬಿಂದಾಸ್ ಚಿತ್ರದಲ್ಲಿ ಅಪ್ಪುಗೆ ನಾಯಕಿಯಾಗಿ ನಟಿಸಿದ್ದ ಹನ್ಸಿಕಾ ಮೋಟ್ವಾನಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊನೆಗೂ ಭಾವಿ ಪತಿಯ ಫೋಟೋ ಹಂಚಿಕೊಂಡು ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಭಾವಿ ಪತಿ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಬೀದಿ ನಾಯಿ ರಾನುಗೆ ʻಐ ಲವ್‌ ಯೂʼ ಹೇಳಿದ ರಮ್ಯಾ: ರಾನು ಜೊತೆಗಿನ ವರ್ಷದ ನೆನಪು

    ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಹನ್ಸಿಕಾಗೆ ಮದುವೆ(Wedding) ನಿಶ್ಚಯವಾಗಿದೆ. ಮದುವೆಗೂ ಮುನ್ನ ಹೈಫಿಲ್ ಟವರ್ ಬಳಿ ಮಂಡಿಯೂರಿ ಮ್ಯಾರಿ ಮೀ ಎಂದು ಪ್ರಪೋಸ್ ಮಾಡಿದ್ದಾರೆ. ಹನ್ಸಿಕಾ ಕೂಡ ಖುಷಿಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಖತ್ ವೈರಲ್ ಆಗುತ್ತಿದೆ.

     

    View this post on Instagram

     

    A post shared by Hansika Motwani (@ihansika)

    ಇನ್ನೂ ಡಿಸೆಂಬರ್ 3ರಂದು ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಡಿ.4ರಂದು ರಾಜಸ್ತಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಸದ್ಯ ನೆಚ್ಚಿನ ನಟಿಯ ಹೊಸ ಬಾಳಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ

    ಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಸಾಕಷ್ಟು ಸಿನಿಮಾಗಳ ಮೋಡಿ ಮಾಡಿರುವ ನಟಿ ತೆರೆಮರೆಯಲ್ಲಿ ಸೈಲೆಂಟ್ ಆಗಿ ತಮ್ಮ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ತಮ್ಮ ಅಭಿಮಾನಿಗಳಿಗೆ ನಟಿ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ತಮಿಳು, ತೆಲುಗು, ಕನ್ನಡ ಸಿನಿಮಾಗಳ ಮೂಲಕ ಗಮನ ಸೆಳೆದ ಪ್ರತಿಭಾನ್ವಿತ ನಟಿ ಹನ್ಸಿಕಾ ಹೊಸ ಬಾಳಿಗೆ(Wedding) ಕಾಲಿಡುತ್ತಿದ್ದಾರೆ. ತಮ್ಮ ಮಾದಕ ನೋಟದಿಂದ ಪಡ್ಡೆಹುಡುಗರ ನಿದ್ದೆಗೆಡಿಸಿದ್ದ ಚೆಲುವೆ ಹನ್ಸಿಕಾ ಕೈಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿವೆ. ಚಿತ್ರರಂಗದಲ್ಲಿ ಡಿಮ್ಯಾಂಡ್ ಇರುವ ಸಮಯದಲ್ಲೇ ನಟಿ ಹೊಸ ಬಾಳಿಗೆ ಕಾಲಿಡಲು ಸಜ್ಜಾಗಿದ್ದಾರೆ.‌ ಇದನ್ನೂ ಓದಿ:ಕೊಟ್ಟ ಮಾತಿನಂತೆ ದಾವಣಗೆರೆ ಬೆಣ್ಣೆದೋಸೆ ಸವಿದ ಸ್ಯಾಂಡಲ್ ವುಡ್ ಕ್ವೀನ್

    ದಕ್ಷಿಣ ಭಾರತದ ರಾಜಕೀಯ ಮುಖಂಡರೊಬ್ಬರ(Politician) ಮಗನೊಂದಿಗೆ ಮದುವೆಗೆ ನಟಿ ರೆಡಿಯಾಗಿದ್ದಾರೆ. ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರೆ ನಟಿ ಹನ್ಸಿಕಾ ಮೋಟ್ವಾನಿ. ಈಗಾಗಲೇ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆದಿದ್ದು, ಡಿಸೆಂಬರ್‌ನಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಪುನೀತ್‌ ರಾಜ್‌ಕುಮಾರ್‌ ನಟನೆಯ ʻಬಿಂದಾಸ್‌ʼ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದರು. ಈ ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಛಾಪೂ ಮೂಡಿಸಿದ್ದರು.

    450 ವರ್ಷದ ಹಳೆಯ ಜೈಪುರದ ಪ್ಯಾಲೇಸ್‌ನಲ್ಲಿ(Jaipur Palace) ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಪ್ಲ್ಯಾನ್ ಮಾಡಲಾಗಿತ್ತು. ಇದಕ್ಕಾಗಿ ಸಕಲ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಈ ವರ್ಷದ ಅಂತ್ಯದಲ್ಲಿ ಹನ್ಸಿಕಾ ಮೋಟ್ವಾನಿ ಉದ್ಯಮಿಯ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸದ್ಯದಲ್ಲೇ ಈ ವಿಚಾರವನ್ನ ಅಧಿಕೃತವಾಗಿ ಹೇಳಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ನಯನತಾರಾ- ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನದ ಕೇಸ್‌ಗೆ ಬಿಗ್ ಟ್ವಿಸ್ಟ್

    ಕಾಲಿವುಡ್‌ನ ಕ್ಯೂಟ್ ಕಪಲ್ ನಯನತಾರಾ(Nayanatara) ಮತ್ತು ವಿಘ್ನೇಶ್ ಶಿವನ್ (Vignesh Shivan) ದಂಪತಿ ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ಬಾಡಿಗೆ ತಾಯ್ತನದ ಪ್ರಕರಣ ಭಾರೀ ರೋಚಕ ತಿರುವು ಪಡೆದುಕೊಂಡಿದೆ. ಅವಳಿ ಮಕ್ಕಳನ್ನು ಪಡೆದ (Surrogate Mother)( ನಯನತಾರಾ ದಂಪತಿಗೆ ವಿವಾದವೊಂದು ಸೃಷ್ಟಿಯಾಗಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

    ಕೆಲ ದಿನಗಳಿಂದ ನಯನತಾರಾ ದಂಪತಿ(Nayanatara Couple) ಸಖತ್ ಸುದ್ದಿಯಲ್ಲಿದ್ದಾರೆ. ಬಾಡಿಗೆ ತಾಯ್ತನದ ವಿಚಾರವಾಗಿ ತೀವ್ರ ಆಕ್ಷೇಪ ಎದುರಿಸುತ್ತಿದ್ದಾರೆ. ಕಳೆದ ಜೂನ್ 2ರಂದು ಮದುವೆಯಾದ ಈ ಜೋಡಿಗೆ 4 ತಿಂಗಳಲ್ಲಿ ಮಗು ಹೇಗೆ ಸಾಧ್ಯ ಎಂದು ಅಭಿಮಾನಿಗಳ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ, ಇವರು ಬಾಡಿಗೆ ತಾಯ್ತನದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಎಂಬ ಮಾತು ಹರಿದಾಡಿತ್ತು. ನಂತರ ಈ ದಂಪತಿಯ ವಿರುದ್ಧ ದೂರು ದಾಖಲಾಗಿತ್ತು. ಆದರೆ ಈಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದನ್ನೂ ಓದಿ:ಈ ಮನೆ ಅದಕ್ಕಲ್ಲ; ಮಿತಿ ಮೀರಿದ ರೂಪೇಶ್, ಸಾನ್ಯ ರೊಮ್ಯಾನ್ಸ್‌ಗೆ ಕಿಚ್ಚ ವಾರ್ನಿಂಗ್

    ಮೂಲಗಳ ಪ್ರಕಾರ ಕಾನೂನು ಬದ್ಧವಾಗಿ ದಾಖಲೆಗಳನ್ನು ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ನಯನತಾರಾ ದಂಪತಿಗಳು ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್‌ ಮದುವೆಯಾಗಿದ್ದು, ಇದಕ್ಕೆ ಸಂಬಂಧಿಸಿದ ಕಾನೂನಾತ್ಮಕ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
    ಅಷ್ಟೇ ಅಲ್ಲದೇ, 2021ರಲ್ಲೇ ಬಾಡಿಗೆ ತಾಯ್ತನದ(Surrogate Mother) ಒಪ್ಪಂದಕ್ಕೆ ದಂಪತಿ ಸಹಿ ಹಾಕಿರುವುದಕ್ಕೆ ಸಂಬಂಧಿಸಿದ ದಾಖಲೆ ಕೂಡ ಸಲ್ಲಿಸಿದ್ದಾರೆ.

    ಕಳೆದ ಜೂನ್ ಸಂಪ್ರದಾಯಿಕವಾಗಿ ಮದುವೆ ಆಗಿದ್ದು, ಆರು ವರ್ಷಗಳ ಹಿಂದೆಯೇ ರಿಜಿಸ್ಟ್ರಾರ್ ಮದುವೆ(Register Wedding) ಆಗಿದ್ದಾರೆ. ಹೀಗಾಗಿ ಇದರಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎನ್ನಲಾಗುತ್ತಿದೆ. ಈ ಮೂಲಕ ಈ ಬಾಡಿಗೆ ತಾಯ್ತನದ ಪ್ರಕರಣಕ್ಕೆ ಅಂತ್ಯ ಕಾಣುವ ಎಲ್ಲಾ ಲಕ್ಷಣಗಳು ಇದೆ.

    Live Tv
    [brid partner=56869869 player=32851 video=960834 autoplay=true]

  • ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ

    ಮುಂದಿನ ವರ್ಷ ಹಸೆಮಣೆ ಏರಲಿದ್ದಾರೆ ಸಿದ್ಧಾರ್ಥ್-ಕಿಯಾರಾ

    ಬಾಲಿವುಡ್‌ನ(Bollywood) `ಶೆರ್ಶಾಹ್’ ಸಿದ್ಧಾರ್ಥ್ ಮಲ್ಹೋತ್ರಾ(Siddarth Malhotra) ಮತ್ತು ಕಿಯಾರಾ (Kaira Advani) ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬೆಳ್ಳಿಪರದೆಯಲ್ಲಿ ರಂಜಿಸಿದ್ದ ಈ ಜೋಡಿ, ಇದೀಗ ನಿಜ ಜೀವನದಲ್ಲೂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ʻಗಟ್ಟಿಮೇಳʼ ಮೊಳಗಿಸಲು ತೆರೆ ಹಿಂದೆ ಭರ್ಜರಿ ತಯಾರಿ ನಡೆಯುತ್ತಿದೆ.

    ಆನ್‌ಸ್ಕ್ರೀನ್‌ನ ರೊಮ್ಯಾಂಟಿಕ್ ಜೋಡಿ ಸಿದ್ಧಾರ್ಥ್ ಮತ್ತು ಕಿಯಾರಾ ಮತ್ತೆ ಸುದ್ದಿಯಲ್ಲಿದ್ದಾರೆ. ಸಾಕಷ್ಟು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಜೋಡಿ ಇದೀಗ ತಮ್ಮ ಮದುವೆಯ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಕಾಫಿ ವಿತ್ ಕರಣ್(Coffe With Karan) ಶೋನಲ್ಲಿ ತಾವು ಮದುವೆಗೆ ರೆಡಿಯಿದ್ದೇನೆ ಎಂದು ಕಿಯಾರಾ ರಿವೀಲ್ ಮಾಡಿದ್ದಾರೆ.

    ಬಿಟೌನ್‌ನಲ್ಲಿ ಸದ್ಯ ಹಾಟ್ ಟಾಪಿಕ್ ಆಗಿರುವ ವಿಚಾರ ಅಂದ್ರೆ ಸಿದ್ದಾಥ್, ಕಿಯಾರಾ ಮದುವೆಯ ವಿಚಾರ. ಇಷ್ಟು ದಿನ ಇಬ್ಬರೂ ಡೇಟಿಂಗ್‌ನಲ್ಲಿದ್ದಾರೆ ಎಂಬ ಸುದ್ದಿ ಇತ್ತು. ಈ ಬೆನ್ನಲ್ಲೇ ಮದುವೆ ವಿಷ್ಯ ಸದ್ದು ಮಾಡುತ್ತಿದೆ. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಶೆರ್ಶಾಹ್ ಜೋಡಿ, ಗುರುಹಿರಿಯರ ಸಮ್ಮುಖದಲ್ಲಿ ಹಸೆಮಣೆ ಏರಲಿದ್ದಾರಂತೆ. ದೆಹಲಿಯಲ್ಲಿ ಸಿಂಪಲ್ ಮದುವೆಯ ಬಳಿಕ ಚಿತ್ರರಂಗದ ಸ್ನೇಹಿತರಿಗೆ ಅದ್ದೂರಿ ಆರತಕ್ಷತೆ ಇಟ್ಟುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಬಾಲಿವುಡ್ ಬದುಕಿಸಿದ ಶಾರುಖ್ ಖಾನ್ ಚಿತ್ರ: 100 ಕೋಟಿ ರೂಪಾಯಿಗೆ ಸೇಲ್

    ಇದಕ್ಕೆ ಪೂರಕವಾಗಿ ಇತ್ತೀಚೆಗೆ ನಡೆದ ʻಕಾಫಿ ವಿತ್ ಕರಣ್ʼ ಕಾರ್ಯಕ್ರಮದಲ್ಲಿ ಕಿಯಾರಾ ಮದುವೆಗೆ(Wedding) ರೆಡಿಯಿದ್ದೇನೆ ಎಂದು ಸುಳಿವು ನೀಡಿದ್ದರು. ಹಾಗಾಗಿ ಬಿಟೌನ್‌ನಲ್ಲಿ ಸಿದ್ಧಾರ್ಥ್, ಕಿಯಾರಾ ಶಾದಿ ಸುದ್ದಿ ಸಖತ್ ಸದ್ದು ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಆರತಕ್ಷತೆ ಪಾರ್ಟಿಯಲ್ಲಿ ಮಿಂಚಿದ ಗೇಬ್ರಿಯೆಲ್ಲಾ -ನಟ ಸುಹಾಸ್

    ಆರತಕ್ಷತೆ ಪಾರ್ಟಿಯಲ್ಲಿ ಮಿಂಚಿದ ಗೇಬ್ರಿಯೆಲ್ಲಾ -ನಟ ಸುಹಾಸ್

    `ಕಮಲಿ'(Kamali Serial) ಧಾರಾವಾಹಿ ಮೂಲಕ ಖಳನಾಯಕಿಯಾಗಿ ಮಿಂಚಿದ ಅನಿಕಾ ಅಲಿಯಾಸ್ ಗೇಬ್ರಿಯೆಲ್ಲಾ (Gabriella) ಮತ್ತು ನಟ ಸುಹಾಸ್(Suhas) ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದೇ ಖುಷಿಯಲ್ಲಿ ಸ್ನೇಹಿತರ ಜೊತೆ ಅದ್ದೂರಿ ಆರತಕ್ಷತೆ ನೆರವೇರಿಸಿಕೊಂಡಿದ್ದಾರೆ. ಸದ್ಯ ರಿಸೆಪ್ಷನ್‌(Reception) ಫೋಟೋ ಸಖತ್ ವೈರಲ್ ಆಗುತ್ತಿದೆ.

    ಕಿರುತೆರೆ ಜನಪ್ರಿಯ ಸೀರಿಯಲ್ `ಕಮಲಿ’ ಕಲಾವಿದರಾದ ಅನಿಕಾ ಮತ್ತು ಸುಹಾಸ್ ಇದೀಗ ರಿಯಲ್ ಲೈಫ್‌ನಲ್ಲಿ ಒಂದಾಗಿದ್ದಾರೆ. ಈ ಸೀರಿಯಲ್ ಮೂಲಕ ಪರಿಚಿತರಾದ ಗೇಬ್ರಿಯೆಲ್ಲಾ, ಸುಹಾಸ್ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು.

     

    View this post on Instagram

     

    A post shared by Suhas Athreyas (@suhas_athreyas)

    ಇದೀಗ ಗುರು ಹಿರಿಯರ ಸಮ್ಮತಿಯ ಮೇರೆಗೆ ಸರಳವಾಗಿ ರಿಜಿಸ್ಟರ್‌ ಮ್ಯಾರೇಜ್(Wedding) ಆಗಿದ್ದಾರೆ. ಇದೀಗ ಕುಟುಂಬಸ್ಥರು, ಚಿತ್ರರಂಗದ ಸ್ನೇಹಿತರಿಗಾಗಿ ಆರತಕ್ಷತೆ ಆಯೋಜಿಸಿದ್ದಾರೆ. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಕೀರ್ತಿ ಸುರೇಶ್

    ನವಜೋಡಿಗೆ ಶುಭಹಾರೈಸಲು `ಕಮಲಿ’ ಸೀರಿಯಲ್ ತಂಡ ಮತ್ತು ವಾಹಿನಿಯ ಇತರೆ ಸೀರಿಯಲ್‌ನ ಕಲಾವಿದರು ಆರತಕ್ಷತೆಗೆ ಆಗಮಿಸಿ ಶುಭಹಾರೈಸಿದ್ದಾರೆ. ಇನ್ನೂ ನೆಚ್ಚಿನ ಜೋಡಿಗೆ ಸಾಮಾಜಿಕ ಜಾಲತಾಣದ ಮೂಲಕ ಫ್ಯಾನ್ಸ್ ವಿಶ್ಸ್ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಸೆಟ್ ಆಯ್ತು ಅನುಷ್ಕಾ ಶೆಟ್ಟಿ ಕಲ್ಯಾಣ

    ಕೊನೆಗೂ ಸೆಟ್ ಆಯ್ತು ಅನುಷ್ಕಾ ಶೆಟ್ಟಿ ಕಲ್ಯಾಣ

    ಸೌತ್ ಸಿನಿಮಾಗಳ ಮೂಲಕ ಮೋಡಿ ಮಾಡಿರುವ ಚೆಲುವೆ ಅನುಷ್ಕಾ ಶೆಟ್ಟಿಗೆ (Anushka Shetty) ನಲವತ್ತು ವರ್ಷವಾಗಿದ್ದರೂ ಆಕೆಯ ಮೇಲಿರುವ ಕ್ರೇಜ್ ಒಂದು ಚೂರು ಕಮ್ಮಿಯಾಗಿಲ್ಲ. ಸ್ವೀಟಿ ಹಸೆಮಣೆ ಏರಲಿದ್ದಾರೆ ಅಂದ್ರೆ ಅನುಷ್ಕಾ ಅಭಿಮಾನಿಗಳು ನಂಬಲು ಸಿದ್ಧರಿಲ್ಲ. ಕರಾವಳಿ ಬ್ಯೂಟಿಗೆ ತೆರೆಮರೆಯಲ್ಲಿ ಮದುವೆಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.

    ಅರುಂಧತಿ, ಭಾಗಮತಿ, ಬಾಹುಬಲಿ ಅಂತಾ ಸೂಪರ್ ಡೂಪರ್ ಸಿನಿಮಾಗಳನ್ನ ಕೊಟ್ಟಿರುವ ಪ್ರತಿಭಾನ್ವಿತ ನಟಿ ಅನುಷ್ಕಾ, ನವೀನ್ ಪೋಲಿ ಶೆಟ್ಟಿಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಮಧ್ಯೆ ಕರಾವಳಿ ನಟಿಯ ಮದುವೆ ವದಂತಿ ಕೂಡ ಸಖತ್ ಸೌಂಡ್ ಮಾಡುತ್ತಿದೆ. ಗುರುಹಿರಿಯರು ನಿಶ್ಚಯಿಸಿದ ವರನೊಂದಿಗೆ ಮದುವೆಯಾಗಲು ಅನುಷ್ಕಾ ಕೂಡ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದನ್ನೂ ಓದಿ:ನಟ ವಿಶಾಲ್ ಮನೆ ಮೇಲೆ ದುಷ್ಕರ್ಮಿಗಳಿಂದ ಕಲ್ಲು ತೂರಾಟ

    `ಬಾಹುಬಲಿ’ ನಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರೋದು ಪಕ್ಕಾ ಎನ್ನಲಾಗುತ್ತಿದೆ. ತಮ್ಮ ಕುಟುಂಬ ನೋಡಿರುವ ವರನೊಂದಿಗೆ ಸ್ವೀಟಿ ಅನುಷ್ಕಾ ಸದ್ಯದಲ್ಲೇ ಹಸೆಮಣೆ ಏರಲಿದ್ದಾರೆ. ಈ ಕುರಿತ ಗುಡ್ ನ್ಯೂಸ್ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಯನತಾರಾ ಮದುವೆ ವಿಡಿಯೋ ನೋಡ್ಬೇಕಾ, ಹಾಗಾದರೆ ದುಡ್ಡು ಕೊಡಲೇಬೇಕು

    ನಯನತಾರಾ ಮದುವೆ ವಿಡಿಯೋ ನೋಡ್ಬೇಕಾ, ಹಾಗಾದರೆ ದುಡ್ಡು ಕೊಡಲೇಬೇಕು

    ಕೆಲ ತಿಂಗಳ ಹಿಂದೆಯಷ್ಟೇ ಮದುವೆಯಾಗಿರುವ ತಮಿಳಿನ ಖ್ಯಾತ ನಟಿ ನಯನತಾರಾ (Nayantara) ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಮದುವೆ ವಿಡಿಯೋ ನೋಡಬೇಕಾದರೆ, ಓಟಿಟಿಗೆ ಸಬ್ ಸ್ಕ್ರೈಬ್ ಆಗಿರಲೇಬೇಕು. ಇಲ್ಲದಿದ್ದರೆ ಆ ವಿಡಿಯೋವನ್ನು ಖಂಡಿತಾ ನೋಡಲು ಸಾಧ್ಯವಿಲ್ಲ. ಈ ಜೋಡಿಯ ಮದುವೆ ವಿಡಿಯೋವನ್ನು ಎಕ್ಸ್ ಕ್ಲೂಸಿವ್ ಆಗಿ ನೆಟ್ ‍ಫ್ಲಿಕ್ಸ್ ಖರೀದಿಸಿದ್ದು, ಹಾಗಾಗಿ ಆಚೆ ನೋಡುವುದಕ್ಕೆ ವಿಡಿಯೋ ಲಭ್ಯವಿರುವುದಿಲ್ಲ.

    ತಮಿಳಿನ ಖ್ಯಾತ ಜೋಡಿಯ ಮದುವೆ (Wedding) ಇದಾಗಿದ್ದರಿಂದ ನೆಟ್ ಫ್ಲಿಕ್ಸ್ ಭಾರೀ ಮೊತ್ತ ಕೊಟ್ಟು ಮದುವೆ ವಿಡಿಯೋವನ್ನು ಖರೀದಿಸಿತ್ತು. ಈ ಮದುವೆ ವಿಡಿಯೋವನ್ನು ಶೂಟ್ ಮಾಡುವುದಕ್ಕಾಗಿಯೇ ತಂಡವನ್ನು ರಚನೆ ಮಾಡಿತ್ತು. ಫೋಟೋ ಹೊರತಾಗಿ ಒಂದೇ ಒಂದು ವಿಡಿಯೋ ತುಣುಕು ಆಚೆ ಬರಕೂಡದು ಎಂದು ತಾಕೀತು ಮಾಡಿತ್ತು. ಹಾಗಾಗಿ ಫೋಟೋ ಹೊರತಾಗಿ ಯಾವುದೇ ವಿಡಿಯೋ (Video) ನೋಡುವುದಕ್ಕೆ ಸಿಕ್ಕಿರಲಿಲ್ಲ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?

    ಸದ್ಯ ಓಟಿಟಿಯಲ್ಲಿ ಮದುವೆ ಟೀಸರ್ ರಿಲೀಸ್ ಮಾಡಿದ್ದು, ಸದ್ಯದಲ್ಲೇ ವಿಡಿಯೋ ಕಂತುಗಳನ್ನು ರಿಲೀಸ್ ಮಾಡುವುದಾಗಿ ಓಟಿಟಿ ಹೇಳಿಕೊಂಡಿದೆ. ಮದುವೆ ಮುನ್ನ ಕ್ಷಣಗಳು ಮತ್ತು ಮದುವೆಯ ಅಷ್ಟೂ ಕ್ಷಣಗಳನ್ನು ಸೆರೆ ಹಿಡಿಯಲಾಗಿದೆ ಅಂತೆ. ಅಲ್ಲದೇ, ತಮ್ಮ ಮದುವೆಯ ಕುರಿತು ನಯನಾ ತಾರಾ ಮತ್ತು ವಿಘ್ನೇಶ್ ಶಿವನ್ (Vignesh Shivan) ಅಪರೂಪದ ಕ್ಷಣಗಳನ್ನೂ ಹಂಚಿಕೊಂಡಿದ್ದಾರಂತೆ. ಅವು ಕೂಡ ಓಟಿಟಿಯಲ್ಲಿ ಮಾತ್ರ ನೋಡಬಹುದಂತೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ- ಊಟ ಬೇಕಾದ್ರೆ ಆಧಾರ್ ತೋರಿಸಿ ಎಂದ ವಧು ಕಡೆಯವರು

    ಮದುವೆಯಲ್ಲಿ ನಿರೀಕ್ಷೆಗಿಂತ ಹೆಚ್ಚು ಜನ- ಊಟ ಬೇಕಾದ್ರೆ ಆಧಾರ್ ತೋರಿಸಿ ಎಂದ ವಧು ಕಡೆಯವರು

    ಲಕ್ನೋ: ಮದುವೆಯಂತಹ (Wedding) ಸಮಾರಂಭದಲ್ಲಿ ಹೆಚ್ಚು ಜನರು ಸೇರುವುದು ಸಹಜ. ಆದರೆ ಇಲ್ಲೊಂದು ಮದುವೆಗೆ ಆಧಾರ್ ಕಾರ್ಡ್ (Aadhar card) ಇದ್ದವರಿಗೆ ಮಾತ್ರ ಪ್ರವೇಶಿಸಲು ಅವಕಾಶ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಹೌದು.. ಉತ್ತರಪ್ರದೇಶದ (Uttar Pradesh) ಅಮ್ರೋಹಾದ ಹಸನ್‌ಪುರದಲ್ಲಿ ಮದುವೆ ನಡೆದದಿದೆ. ಈ ಸಂದರ್ಭದಲ್ಲಿ ನಿರೀಕ್ಷೆಗಿಂತಲೂ ಅತಿಥಿಗಳು ಹೆಚ್ಚು ಪಾಲ್ಗೊಂಡಿದ್ದಾರೆ. ಇದರಲ್ಲಿ ಪರಿಚಿತರು ಯಾರು ಅಪರಿಚಿತರು ಯಾರೂ ಎಂದು ತಿಳಿಯಲು ಅಸಾಧ್ಯವಾಗಿದೆ. ಇದರಿಂದಾಗಿ ವಧುವಿನ ಕಡೆಯವರು ನೆರೆದವರಿಗೆ ಆಧಾರ್ ಕಾರ್ಡ್ ತೋರಿಸುವುದು ಕಡ್ಡಾಯ. ಆಧಾರ್ ಕಾರ್ಡ್ ಇದ್ದವರಿಗೆ ಮಾತ್ರ ಮದುವೆ ಊಟ ಸಿಗುತ್ತದೆ ಎಂದು ಷರತ್ತನ್ನು ಹಾಕಿದರು. ಇದನ್ನೂ ಓದಿ: PFI, SDPI ಬೆಳೆಯಲು ಕಾರಣವೇ ಸಿದ್ದರಾಮಯ್ಯ: ನಳಿನ್ ಕುಮಾರ್ ಕಟೀಲ್

    ಈ ಷರತ್ತಿನ ಪ್ರಕಾರವಾಗಿ ಮದುವೆ ಮನೆಯ ಪ್ರವೇಶದಲ್ಲಿ ಆಧಾರ್ ಕಾರ್ಡ್‌ನ್ನು ಪರೀಕ್ಷಿಸಲು ಇಬ್ಬರನ್ನು ನಿಲ್ಲಿಸಲಾಯಿತು. ಆಧಾರ್ ಕಾರ್ಡ್ ತೊರಿಸಿ ಕೆಲವರು ಊಟ ಸವಿದರೆ, ಇನ್ನೂ ಕೆಲವರು ಅನುಮಾನ ಪಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಹಿಂದಿರುಗಿದರು. ಇದೀಗ ಆಧಾರ್ ಕಾರ್ಡ್ ತೋರಿಸಿ ಮದುವೆ ಮನೆಗೆ ಪ್ರವೇಶಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಮಗಳ ಮದುವೆಯ ಸಾಲ ತೀರಿಸಿಲ್ಲ ಅಂತ ಪೆಟ್ರೋಲ್ ಸುರಿದು ಬೆಂಕಿ ಇಟ್ರು

    Live Tv
    [brid partner=56869869 player=32851 video=960834 autoplay=true]

  • ಸದ್ಗುರು ಮಾತಿಗೆ ಮಣಿದು, ಮಾಜಿಪತಿಯನ್ನೇ ಮದುವೆಯಾಗಲಿದ್ದಾರಾ ಸಮಂತಾ

    ಸದ್ಗುರು ಮಾತಿಗೆ ಮಣಿದು, ಮಾಜಿಪತಿಯನ್ನೇ ಮದುವೆಯಾಗಲಿದ್ದಾರಾ ಸಮಂತಾ

    ಟಾಲಿವುಡ್ ಬ್ಯೂಟಿ ಸಮಂತಾ (Samantha) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.  ಮಾಜಿ ಪತಿ ನಾಗಚೈತನ್ಯ (Nagachaitanya) ಅವರನ್ನೇ ಮತ್ತೆ ಮರು ಮದುವೆಯಾಲಿದ್ದಾರೆ. ಹಾಗಂತ ಟಿಟೌನ್ ಗಲ್ಲಿಯಲ್ಲಿ ಈ ಸುದ್ದಿ ಹರಿದಾಡುತ್ತಿದೆ.

    ದಕ್ಷಿಣದ ಸಾಲು ಸಾಲು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದ ನಟಿ ಸಮಂತಾ (Samantha) ಕಳೆದ ವರ್ಷ ನಾಗಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಇಬ್ಬರು ತಮ್ಮ ತಮ್ಮ ವೃತ್ತಿ ಜೀವನದತ್ತ ಬ್ಯುಸಿಯಾಗಿದ್ದರು. ಈಗ ಮತ್ತೆ ಸಮಂತಾ ಮತ್ತು ನಾಗಚೈತನ್ಯ ಜೋಡಿ ಕಡೆಯಿಂದ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಜೋಡಿ ಮತ್ತೆ ಒಂದಾಗಲಿ ಅಂತಾ ಅದೆಷ್ಟೋ ಅಭಿಮಾನಿಗಳು ಆಶಿಸಿರುವುದುಂಟು. ಅದೀಗ ನಿಜವಾಗಲಿದೆ. ಇದನ್ನೂ ಓದಿ:‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಇನ್ಮುಂದೆ ಅನಿರುದ್ಧ ಫೋಟೋನೂ ಇರಲ್ಲ

     

    View this post on Instagram

     

    A post shared by Samantha (@samantharuthprabhuoffl)

    ಸಮಂತಾ ಮತ್ತು ನಾಗ್ ನಾನೊಂದು ತೀರಾ, ನೀನೊಂದು ತೀರಾ ಅಂತಾ ದೂರ ದೂರ ಆಗಿದ್ದರು. ಕೆರಿಯರ್‌ನತ್ತ ಗಮನ ಕೊಡುತ್ತಾ ನೋವನ್ನ ನುಂಗಿ ಬದುಕುತ್ತಿದ್ದರು. ಹೀಗಿರುವಾಗ ಸಮಂತಾ ಇತ್ತೀಚೆಗೆ ಸದ್ಗುರು ಅವರನ್ನ ಭೇಟಿಯಾಗಿದ್ದಾರೆ. ಸದ್ಗುರು ಅವರ ಸಲಹೆಯಂತೆ ಮತ್ತೆ ನಾಗಚೈತನ್ಯ ಅವರನ್ನ ಮರು ಮದುವೆಯಾಗಲು ಸಮಂತಾ ಯೋಚಿಸಿದ್ದಾರಂತೆ. ಅಷ್ಟಕ್ಕೂ ಈ ಗುಡ್ ನ್ಯೂಸ್ ನಿಜಾನಾ ಎಂಬುದನ್ನ ಈ ಮಾಜಿ ದಂಪತಿ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಪತ್ನಿ ಮಹಾಲಕ್ಷ್ಮಿಗಾಗಿ ಸ್ವರ್ಗವನ್ನೇ ಧರೆಗಿಳಿಸಿದ ನಿರ್ಮಾಪಕ ರವೀಂದರ್

    ಪತ್ನಿ ಮಹಾಲಕ್ಷ್ಮಿಗಾಗಿ ಸ್ವರ್ಗವನ್ನೇ ಧರೆಗಿಳಿಸಿದ ನಿರ್ಮಾಪಕ ರವೀಂದರ್

    ತ್ನಿ ಮಹಾಲಕ್ಷ್ಮಿ (Mahalakshmi) ಜೊತೆ ರೊಮ್ಯಾಂಟಿಕ್ ಆಗಿರುವಂಥ ಮತ್ತೊಂದು ಫೋಟೋ ಶೇರ್ ಮಾಡಿದ್ದಾರೆ ನಿರ್ಮಾಪಕ ರವೀಂದರ್. ತಾವು ಉಳಿದುಕೊಂಡಿರುವ ಹೊಟೆಲ್ ಅನ್ನೇ ಅಲಂಕರಿಸಿ ಹೆಂಡತಿಗಾಗಿ ಸ್ವರ್ಗವನ್ನೇ ಧರೆಗೆ ತಂದಿದ್ದಾರೆ. ಮದುವೆಯ ನಂತರ ಮನೆದೇವರ ಆಶೀರ್ವಾದ ಪಡೆದ ಬಂದಿದ್ದ ಈ ಜೋಡಿ ಇದೀಗ ಹನಿಮೂನ್ (Honeymoon) ಮೂಡ್ ನಲ್ಲಿದ್ದಾರೆ. ಪ್ರತಿ ವಿಷಯವನ್ನೂ ಅಭಿಮಾನಿಗೆ ತಿಳಿಸಲು ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದಾರೆ.

    ನಟಿ ಮಹಾಲಕ್ಷ್ಮಿ ಮತ್ತು ನಿರ್ಮಾಪಕ ರವೀಂದರ್ ಚಂದ್ರಶೇಖರನ್ (Ravinder Chandrasekaran) ಮದುವೆಯ (Wedding) ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇನ್ಸ್ಟಾ ಮತ್ತು ಫೇಸ್ ಬುಕ್ ಸೇರಿದಂತೆ ಸೋಷಿಯಲ್ ಖಾತೆಗಳಲ್ಲಿ ಅವರು ನಿತ್ಯವೂ ಪೋಸ್ಟ್ ಗಳನ್ನು ಹಾಕುತ್ತಿದ್ದಾರೆ. ಒಬ್ಬರಿಗೊಬ್ಬರು ಹೊಗಳುವ ಮತ್ತು ಟ್ರಾವೆಲ್ ಮಾಡುತ್ತಿರುವ ಫೋಟೋಗಳನ್ನೂ ಅಪ್ ಲೋಡ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂವಾದಿಸುತ್ತಿದ್ದಾರೆ. ಅಲ್ಲದೇ, ತಾವು ಹೊಸ ಬದುಕನ್ನು ಎಂಜಾಯ್ ಮಾಡುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದನ್ನೂ ಓದಿ:ಬಂಧನದ ಭೀತಿಯಿಂದ ಕೇರಳಕ್ಕೆ ಎಸ್ಕೇಪ್ ಆದ್ರಾ ನಟಿ ಶ್ರೀಲೀಲಾ ತಾಯಿ?: ಮನೆಗೆ ಬೀಗ, ಮೊಬೈಲ್ ಆಫ್

    ಈ ನಡುವೆ, ನನ್ನ ಪತಿ ದಪ್ಪ ಇದ್ದಾರೆ. ಹಾಗಂತ ಅವರನ್ನು ಅವಮಾನ ಮಾಡಬೇಡಿ ಎಂದು ನಟಿ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ಲೈವ್‍ ಗೆ ಬಂದು ಮನವಿ ಮಾಡಿಕೊಂಡಿದ್ದಾರೆ. ದಪ್ಪ ಇದ್ದಾರೆ ಅನ್ನುವ ಕಾರಣಕ್ಕೆ ಟ್ರೋಲ್ ಮಾಡುತ್ತಿದ್ದೀರಿ. ಕೆಟ್ಟದ್ದಾಗಿ ಕಾಮೆಂಟ್ ಮಾಡಲಾಗುತ್ತಿದೆ. ಇದರಿಂದಾಗಿ ಅವರಿಗೆ ನೋವಾಗುತ್ತದೆ. ನಮ್ಮ ಪಾಡಿಗೆ ನಮ್ಮನ್ನು ನೆಮ್ಮದಿಯಾಗಿ ಇರುವುದಕ್ಕೆ ಬಿಡಿ ಎಂದು ಮಹಾಲಕ್ಷ್ಮಿ ಮನವಿ ಮಾಡಿಕೊಂಡಿದ್ದಾರೆ.

    ನಟಿ ಮಹಾಲಕ್ಷ್ಮಿ ಅವರನ್ನು ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಮದುವೆಯಾದ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಪ್ರತಿಯೊಂದು ಸಂಗತಿಯನ್ನೂ ಅವರು ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಿದ್ದಾರೆ. ಪ್ರೈವೆಟ್ ಜಟ್ ನಲ್ಲಿ ಹನಿಮೂನಿಗೆ ಹೋಗುವ ಮುನ್ನ ಅವರು ಮನೆದೇವರ ಗುಡಿಗೆ ಹೋಗಿ ಆಶೀರ್ವಾದ ಪಡೆದಿದ್ದಾರೆ. ಆ ಫೋಟೋವನ್ನೂ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]