Tag: wedding

  • ಮದುವೆಗೆ ನಿರಾಕರಣೆ- ಗೆಳತಿಯನ್ನೇ ಕೊಲೆ ಮಾಡಿದ ಟೆಕ್ಕಿ

    ಮದುವೆಗೆ ನಿರಾಕರಣೆ- ಗೆಳತಿಯನ್ನೇ ಕೊಲೆ ಮಾಡಿದ ಟೆಕ್ಕಿ

    ಅಮರಾವತಿ: ಗೆಳತಿ (Friend)) ಮದುವೆಗೆ (Wedding) ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಆಕೆಯನ್ನು ಕೊಲೆ ಮಾಡಿ ಆತ್ಮಹತ್ಯೆಗೆ ಉಯತ್ನಿಸಿದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪೆದಕಕಣಿ ಮಂಡಲದ ತಕ್ಕೆಲ್ಲಪಾಡು ಗ್ರಾಮದಲ್ಲಿ ನಡೆದಿದೆ.

    ಕೃಷ್ಣಾ ಜಿಲ್ಲೆಯ ವುಯ್ಯೂರು ಮಂಡಲದ ಕೃಷ್ಣಾಪುರಂ ಗ್ರಾಮದ ತಪಸ್ವಿ (20) ಮೃತ ಯುವತಿ (Girl). 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ತಪಸ್ವಿಗೆ ವಿಜಯವಾಡ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಜ್ಞಾನೇಶ್ವರ್ ಪರಿಚಯವಾಗಿದ್ದ. ಇತ್ತೀಚೆಗೆ ತಪಸ್ವಿಯನ್ನು ಜ್ಞಾನೇಶ್ವರ್ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ ತಪಸ್ವಿ ನಿರಾಕರಿಸಿದ್ದಳು.

    ತಪಸ್ವಿ ಮದುವೆಗೆ ನಿರಾಕರಿಸಿದ್ದಕ್ಕೆ ಕೋಪಗೊಂಡ ಜ್ಞಾನೇಶ್ವರ್ ಆಕೆಯನ್ನು ಕೊಲ್ಲುವ ಉದ್ದೇಶದಿಂದ ಆಕೆಯ ಕೋಣೆಗೆ ತೆರಳಿ ತನ್ನನ್ನು ಮದುವೆಯಾಗುವಂತೆ ಮನವೊಲಿಸಲು ಯತ್ನಿಸಿದ್ದ. ಆ ವೇಳೆ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಜ್ಞಾನೇಶ್ವರ್ ಚಾಕುವಿನಿಂದ ಆಕೆಯ ಕತ್ತು ಸೀಳಿದ್ದಾನೆ. ಇದನ್ನು ನೋಡಿದ ತಪಸ್ವಿಯ ರೂಮ್‍ಮೇಟ್ ಸಹಾಯ ಪಡೆಯಲು ಹೊರಗೆ ಧಾವಿಸಿದ್ದಾಳೆ. ತಪಸ್ವಿಯು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ.

    ಆದರೆ ಇದೇ ವೇಳೆ ಜ್ಞಾನೇಂದ್ರ ತೀವ್ರಗೊಂಡು ಗಾಯಗೊಂಡಿದ್ದ ತಪಸ್ವಿಯನ್ನು ಕೊಣೆಗೆ ಎಳೆದೊಯ್ದು ಬೀಗ ಹಾಕಿದ್ದಾನೆ. ಅದಾದ ಬಳಿಕ ತಾನು ಚಾಕುವಿನಲ್ಲಿ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

    ಗಲಾಟೆ ಕೇಳಿದ ಸ್ಥಳೀಯರು ಮನೆಗೆ ಧಾವಿಸಿ ತಪಸ್ವಿಯನ್ನು ಗುಂಟೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಆರೋಪಿ ಜ್ಞಾನೇಶ್ವರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನಿಗೆ ಪ್ರಥಮ ಚಿಕಿತ್ಸೆ ನೀಡಿಸಿದ್ದಾರೆ. ಇದನ್ನೂ ಓದಿ: ಪ್ರಿಯಕರನ ಪತ್ನಿ, ಮಗುವಿಗೆ ಆ್ಯಸಿಡ್ ಎರೆಚಿದ ಮಹಿಳೆ

    ಈ ಮಧ್ಯೆ ತಪಸ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜ್ಞಾನೇಶ್ವರನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

    Live Tv
    [brid partner=56869869 player=32851 video=960834 autoplay=true]

  • ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ಉದ್ಯಮಿ ಸೋಹೈಲ್ ಕೈಹಿಡಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    `ಬಿಂದಾಸ್’ (Bindas Kannada) ನಟಿ ಹನ್ಸಿಕಾ ಮೋಟ್ವಾನಿ (Hansika Motwani)  ತನ್ನ ಬಹುಕಾಲದ ಗೆಳೆಯ ಸೋಹೈಲ್ ಕಥುರಿಯಾ(Sohael Kathuriya) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೈಪುರದ ಮುಂಡೋಟಾ ಕೋಟೆಯಲ್ಲಿ ಈ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

    ಕನ್ನಡದ `ಬಿಂದಾಸ್’ ಸಿನಿಮಾ ಮೂಲಕ ಕನ್ನಡಿಗರಿಗೆ ಪರಿಚಿತರಾದ ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ, ಸೋಹೈಲ್ ಕಥುರಿಯಾ ಜೊತೆ ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರಾದಯದ ಪ್ರಕಾರ ಮದುವೆ ಆಗಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಜೈಪುರದಲ್ಲಿ ಮದುವೆ (Wedding) ನಡೆದಿದೆ. ಇದನ್ನೂ ಓದಿ: ಸ್ಯಾಂಡಲ್ ವುಡ್ ನಲ್ಲಿ ಎರಡು ದಿನ ಟೆಲಿವಿಷನ್ ಕ್ರಿಕೆಟ್ ಲೀಗ್

    ಇನ್ನೂ ಕೆಲ ದಿನಗಳ ಹಿಂದೆ ಪ್ಯಾರೀಸ್‌ನಲ್ಲಿ ಹನ್ಸಿಕಾಗೆ ಸೋಹೈಲ್ ಪ್ರಪೋಸ್ ಮಾಡಿದ್ದರು. ಈ ಕುರಿತ ಫೋಟೋಗಳನ್ನ ಶೇರ್ ತನ್ನ ಜೀವನ ಸಂಗಾತಿಯನ್ನ ಸೋಷಿಯಲ್ ಮೀಡಿಯಾ ಮೂಲಕ ನಟಿ ಪರಿಚಯಿಸಿದ್ದರು.

    ಹೊಸ ಬಾಳಿಗೆ ಕಾಲಿಟ್ಟಿರುವ ನವಜೋಡಿಗೆ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಶುಭಹಾರೈಸುತ್ತಿದ್ದಾರೆ. ಸದ್ಯ ತಮ್ಮ ಮದುವೆಯ ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ಪ್ರೀ ವೆಡ್ಡಿಂಗ್ ಪಾರ್ಟಿಯಲ್ಲಿ ಮಿಂಚಿದ `ಬಿಂದಾಸ್’ ನಟಿ ಹನ್ಸಿಕಾ ಮೋಟ್ವಾನಿ

    ನ್ನಡದ `ಬಿಂದಾಸ್’ (Bindas Kannada) ಚಿತ್ರದ ನಾಯಕಿ ಹನ್ಸಿಕಾ ಮೋಟ್ವಾನಿ(Hansika Motwani)  ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಬ್ಯುಸಿನೆಸ್‌ಮ್ಯಾನ್ ಸೊಹೈಲ್ (Sohael) ಜೊತೆ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಸದ್ಯ ಈ ಜೋಡಿ ಪ್ರೀ ವೆಡ್ಡಿಂಗ್ ಸಂಭ್ರಮದಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತ ಫೋಟೋಗಳು ಸದ್ದು ಮಾಡುತ್ತಿದೆ. ಮದುವೆಯ ಪೂರ್ವ ತಯಾರಿ ಫೋಟೋ ನೆಟ್ಟಿಗರಿಗೆ ಮೋಡಿ ಮಾಡ್ತಿದೆ.

     

    View this post on Instagram

     

    A post shared by hansika???? (@ihansika_addicted)

    ಬಾಲನಟಿಯಾಗಿ ಎಂಟ್ರಿ ಕೊಟ್ಟು, ಬಹುಭಾಷೆಗಳಲ್ಲಿ ನಾಯಕಿಯಾಗಿ ಮಿಂಚಿದ ಹನ್ಸಿಕಾ ಮೋಟ್ವಾನಿ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಸದ್ಯ ಪ್ರೀ ವೆಡ್ಡಿಂಗ್ ಶೂಟ್ ಸಂಭ್ರಮದಲ್ಲಿ ಈ ಜೋಡಿ ಮಿಂಚಿದ್ದಾರೆ. ಡಿಸೆಂಬರ್ 4ರಂದು ರಾತ್ರಿ ಹೊಸ ಬಾಳಿಗೆ ಕಾಲಿಡಲಿದ್ದಾರೆ.

     

    View this post on Instagram

     

    A post shared by hansika???? (@ihansika_addicted)

    ಮೆಹೆಂದಿ ಮತ್ತು ಅರಿಶಿನ ಶಾಸ್ತ್ರದ ಸಂಭ್ರಮ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಹೊಸ ಬಾಳಿಗೆ ಹೆಜ್ಜೆ ಇಡುತ್ತಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ. ಇದನ್ನೂ ಓದಿ: `ಅವತಾರ್ 2′ ಚಿತ್ರದ ಬಗ್ಗೆ ಭಾರಿ ನಿರೀಕ್ಷೆ: 2 ಕೋಟಿ ಟಿಕೆಟ್ ಸೋಲ್ಡ್ ಔಟ್

    ಜೈಪುರದ 450 ವರ್ಷದ ಹಳೆಯ ಕಟ್ಟಡದಲ್ಲಿ ಈ ಜೋಡಿ ಹಸೆಮಣೆ ಏರಲಿದೆ. ಆಪ್ತರ ಸಮ್ಮುಖದಲ್ಲಿ ಈ ಮದುವೆ ಜರುಗಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಮೂಡ್‌ನಲ್ಲಿ `ಸಿಂಹಪ್ರಿಯ’

    ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಮೂಡ್‌ನಲ್ಲಿ `ಸಿಂಹಪ್ರಿಯ’

    ಶದಿಕ್ಕುಗಳಲ್ಲೂ ಸೌಂಡ್ ಮಾಡುತ್ತಿರುವ ಸುದ್ದಿ ಏನಪ್ಪಾ ಅಂದ್ರೆ ಹರಿಪ್ರಿಯಾ(Haripriya) ಮತ್ತು ವಸಿಷ್ಠ ಸಿಂಹ (Vasista simha) ಜೋಡಿಯ ಮದುವೆ ಸುದ್ದಿ. ಎಲ್ಲರ ಊಹೆಗೂ ಮೀರಿ ಸೈಲೆಂಟ್ ಆಗಿ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಇಬ್ಬರು ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಮೂಡ್‌ನಲ್ಲಿದ್ದಾರೆ. ರೊಮ್ಯಾಂಟಿಕ್ ಪೋಸ್ಟ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

    ಸಾಕಷ್ಟು ಸಮಯದಿಂದ ಇಬ್ಬರು ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಿನ್ನೆಯಷ್ಟೇ ಗುರುಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಾಯಿಸುವ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿದ್ದರು. ಬಳಿಕ ಎಂಗೇಜ್‌ಮೆಂಟ್(Engagement) ಫೋಟೋ ಔಟ್ ಆಗಿರುವ ಬೆನ್ನಲ್ಲೇ ದುಬೈನ(Dubai) ಮರುಭೂಮಿ ಪ್ರದೇಶದಲ್ಲಿ ತೆಗೆದ ತಮ್ಮ ರೊಮ್ಯಾಂಟಿಕ್ ಫೋಟೋವನ್ನ ಹಂಚಿಕೊಂಡಿದ್ದಾರೆ. ಕಣ್ ಕಣ್ ಸಲಿಗೆ ಅಂತಾ ಡ್ಯುಯೆಟ್ ಶುರು ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಸಿನಿಮಾ, ಐರಾ ಪ್ರೊಡಕ್ಷನ್ ಹೌಸ್ ಬಗ್ಗೆ ಕೊನೆಗೂ ಸಿಕ್ತು ಗುಡ್ ನ್ಯೂಸ್

     

    View this post on Instagram

     

    A post shared by Hariprriya (@iamhariprriya)

    ಇತ್ತೀಚೆಗಷ್ಟೇ ಹರಿಪ್ರಿಯಾ, ವಸಿಷ್ಠ ಜೋಡಿ ದುಬೈಗೆ ಹಾರಿದ್ದರು. ಈ ವೇಳೆ ತೆಗೆದ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹೊಸ ಜೋಡಿಗೆ ಶುಭವಾಗಲಿ ಅಂತಾ ಫ್ಯಾನ್ಸ್ ಮನಸಾರೆ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹನ್ಸಿಕಾ ಮದುವೆಗೆ ಕೌಂಟ್‌ಡೌನ್:‌ ಜೈಪುರಗೆ ಹಾರಿದ ʻಬಿಂದಾಸ್‌ʼ ನಟಿ

    ಹನ್ಸಿಕಾ ಮದುವೆಗೆ ಕೌಂಟ್‌ಡೌನ್:‌ ಜೈಪುರಗೆ ಹಾರಿದ ʻಬಿಂದಾಸ್‌ʼ ನಟಿ

    ಪುನೀತ್ ರಾಜ್‌ಕುಮಾರ್ (Puneeth Rajkumar) ನಟನೆಯ `ಬಿಂದಾಸ್’ (Bindas) ಚಿತ್ರಕ್ಕೆ ನಾಯಕಿಯಾಗುವ ಮೂಲಕ ಕನ್ನಡ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಹನ್ಸಿಕಾ ಮೋಟ್ವಾನಿ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಮದುವೆ ಸಿದ್ಧತೆಗೆ ಕುಟುಂಬದ ಜೊತೆ ಜೈಪುರಗೆ ಹನ್ಸಿಕಾ(Hansika Motwani) ಹಾರಿದ್ದಾರೆ.

    ಸೌತ್ ಬ್ಯೂಟಿ ಹನ್ಸಿಕಾ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಇದೇ ಡಿಸೆಂಬರ್ 4ಕ್ಕೆ ಹಸೆಮಣೆ ಏರುತ್ತಿದ್ದಾರೆ. ಮದುವೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಕುಟುಂಬದ ಜೊತೆ ಜೈಪುರಗೆ ತೆರಳಿದ್ದಾರೆ. ಈ ವೇಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕ್ಯಾಮೆರಾ ಕಣ್ಣಿಗೆ ಈ ಜೋಡಿ ಸೆರೆಯಾಗಿದ್ದಾರೆ.

    ಜೈಪುರದ ಹಳೆಯ ಪ್ಯಾಲೇಸ್‌ನಲ್ಲಿ ಅದ್ದೂರಿಯಾಗಿ ಈ ಜೋಡಿ ಮದುವೆಯಾಗುತ್ತಿದ್ದಾರೆ. ಡಿಸೆಂಬರ್ 2ರಿಂದ ಮೆಹೆಂದಿ, ಸಂಗೀತ ಕಾರ್ಯಕ್ರಮ ಶುರುವಾಗಲಿದೆ. ಡಿ.4ರಂದು ಗುರುಹಿರಿಯರ ಸಮ್ಮುಖದಲ್ಲಿ ಮದುವೆ ಅದ್ದೂರಿಯಾಗಿ ನಡೆಯಲಿದೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಸುಳ್ಳು ಸಿನಿಮಾ ಎಂದು ಸಾಬೀತು ಪಡಿಸಿದರೆ ಚಿತ್ರರಂಗ ಬಿಡುತ್ತೇನೆ: ಅಗ್ನಿಹೋತ್ರಿ

    ಹನ್ಸಿಕಾ ಮತ್ತು ಸೊಹೈಲ್ ಹಲವು ವರ್ಷಗಳು ಪ್ರೀತಿಸಿ, ಇದೀಗ ಗುರುಹಿರಿಯರ ಸಮ್ಮುಖದಲ್ಲಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವೇದಿಕೆಯ ಮೇಲೆ ಚುಂಬಿಸಿದ ವರ – ಮದುವೆ ಮುರಿದು ಠಾಣೆಗೆ ದೂರು ನೀಡಿದ ವಧು

    ವೇದಿಕೆಯ ಮೇಲೆ ಚುಂಬಿಸಿದ ವರ – ಮದುವೆ ಮುರಿದು ಠಾಣೆಗೆ ದೂರು ನೀಡಿದ ವಧು

    ಬರೀಲಿ: ಅತಿಥಿಗಳ ಸಮ್ಮುಖದಲ್ಲಿ ವೇದಿಕೆಯ ಮೇಲೆ ವರನು (Groom)  ವಧುವನ್ನು (Bride) ಚುಂಬಿಸಿದ (Kiss) ಹಿನ್ನೆಲೆ ವಧು ಮದುವೆಯನ್ನು (Wedding)  ಮುರಿದುಕೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್‍ನಲ್ಲಿ ನಡೆದಿದೆ.

    23 ವರ್ಷದ ಯುವತಿ ಪೋಷಕರು ನೋಡಿದ 26 ವರ್ಷದ ವಿವೇಕ ಅಗ್ನಿಹೋತ್ರಿ ಎಂಬ ಯುವಕನನ್ನು ಮದುವೆಯಾಗುತ್ತಿದ್ದಳು. ಮದುವೆ ಕಾರ್ಯಕ್ರಮವೂ ನಡೆದಿತ್ತು. ಹಾರ ಬದಲಿಸಿದ ಬಳಿಕ ಮದುವೆಯಾಗುತ್ತಿದ್ದ ಯುವಕ ತನ್ನ ಪತ್ನಿಯಾಗಬೇಕಿದ್ದ ಯುವತಿಗೆ ವೇದಿಕೆಯ ಮೇಲೆ ಚುಂಬಿಸಿದ. ಚುಂಬನದ ಬಳಿಕ ಯುವತಿ ಮದುವೆಯನ್ನೇ ಮುರಿದು ಪೊಲೀಸ್ (Police) ಠಾಣೆಗೆ ದೂರು ನೀಡಿದ್ದಾಳೆ. ಇದನ್ನೂ ಓದಿ: ಶಾಲೆಗೆ ಅಯ್ಯಪ್ಪ ಮಾಲೆ ಧರಿಸಿ ಬಂದ ವಿದ್ಯಾರ್ಥಿ – ನೋ ಎಂಟ್ರಿ ಎಂದ ಶಿಕ್ಷಕರು

    ವರ ತನ್ನ ಸ್ನೇಹಿತರ ಜೊತೆಗೆ ಬೆಟ್ಟಿಂಗ್‌ ಕಟ್ಟಿ ಎಲ್ಲರ ಎದುರು ನನಗೆ ಮುತ್ತು ನೀಡಿದ್ದಾನೆ. ವೇದಿಕೆಯ ಮೇಲೆ ಇದ್ದಾಗಲೇ ಅನುಚಿತವಾಗಿ ವರ್ತಿಸಿದ್ದಾನೆ. ನನ್ನ ಸ್ವಾಭಿಮಾನದ ಬಗ್ಗೆ ಯೋಚಿಸಿಲ್ಲ. ಅವನು ಭವಿಷ್ಯದಲ್ಲಿ ಹೇಗೆ ವರ್ತಿಸುತ್ತಾನೆ ಗೊತ್ತಿಲ್ಲ ಆದರೆ ಅವನ ನಡವಳಿಕೆಯಿಂದ ನಾನು ಆಘಾತಗೊಂಡಿದ್ದು, ಅನುಮಾನವೂ ಹೆಚ್ಚಿದೆ ಹೀಗಾಗಿ ನಾನು ಮದುವೆಯಾಗದಿರಲು ನಿರ್ಧರಿಸಿದ್ದೇನೆ ಎಂದು ವಧು ತನ್ನ ದೂರಿನಲ್ಲಿ ತಿಳಿಸಿದ್ದಾಳೆ.

    ಪ್ರಕರಣ ದಾಖಲಿಸಿಕೊಂಡಿರುವ ಬಹ್ಜೋಯ್ ಸ್ಟೇಷನ್ ಹೌಸ್ ಠಾಣೆ ಪೊಲೀಸರು ಕುಟುಂಬಸ್ಥರ ಸಮ್ಮುಖದಲ್ಲಿ ರಾಜಿ ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ ಯುವತಿ ಯಾವುದೇ ಸಂಧಾನಕ್ಕೆ ಒಪ್ಪಿಲ್ಲ. ಈ ಹಿನ್ನೆಲೆ ಕುಟುಂಬಸ್ಥರು ಕೆಲವು ದಿನಗಳ ಸಮಯ ನೀಡಲು ಮನವಿ ಮಾಡಿದ್ದು, ಆಘಾತದಿಂದ ಹೊರ ಬಂದ ಬಳಿಕ ಮನವೊಲಿಸುವ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್‌ ಇಲ್ಲದೇ ತ್ರಿಬಲ್‌ ರೈಡಿಂಗ್‌ ಬಂದ ಮಹಿಳಾ ಪೊಲೀಸರು – ಹಿಗ್ಗಾಮುಗ್ಗ ಕ್ಲಾಸ್‌ ತೆಗೆದುಕೊಂಡ ಮಹಿಳೆ

    ಈ ಬಗ್ಗೆ ಮಾಹಿತಿ ನೀಡಿರುವ ಎಸ್‍ಎಚ್‍ಒ ಪಂಕಜ್ ಲಾವಾನಿಯಾ ಯುವಕ ಯುವತಿ ತಾಂತ್ರಿಕವಾಗಿ ಮದುವೆಯಾಗಿದ್ದಾರೆ. ಮದುವೆಯ ಎಲ್ಲ ಕಾರ್ಯಕ್ರಮಗಳು ಅಂತ್ಯವಾಗಿದ್ದು, ಅಂತಿಮ ಘಟ್ಟದಲ್ಲಿ ಈ ಘಟನೆ ನಡೆದಿದೆ. ಪೋಷಕರು ಕಾಲಾವಕಾಶ ಕೇಳಿರುವ ಹಿನ್ನೆಲೆ ನಾವು ಯುವತಿಗೆ ಸಮಯ ನೀಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬ್ಯಾಚುಲರ್ ಪಾರ್ಟಿಯಲ್ಲಿ ಮಿಂಚಿದ ಬಿಂದಾಸ್ ಹುಡುಗಿ ಹನ್ಸಿಕಾ

    ಬ್ಯಾಚುಲರ್ ಪಾರ್ಟಿಯಲ್ಲಿ ಮಿಂಚಿದ ಬಿಂದಾಸ್ ಹುಡುಗಿ ಹನ್ಸಿಕಾ

    ಪುನೀತ್‌ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗುವ ಮೂಲಕ ಬಿಂದಾಸ್ ಹುಡುಗಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಹನ್ಸಿಕಾ ಮೋಟ್ವಾನಿ (Hansika Motwani) ಇದೀಗ ಹೊಸ ಬಾಳಿಗೆ ಕಾಲಿಡುವ ಸಂಭ್ರಮದಲ್ಲಿದ್ದಾರೆ. ಸದ್ಯ ಬ್ಯಾಚುಲರ್ ಪಾರ್ಟಿಯಲ್ಲಿ ನಟಿ ಸಂಭ್ರಮಿಸಿದ್ದಾರೆ. ಈ ಕುರಿತಾದ ವೀಡಿಯೋವೊಂದನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಉದ್ಯಮಿ ಸೊಹೈಲ್ (Sohael) ಜೊತೆ ಡಿಸೆಂಬರ್ ಮೊದಲ ವಾರದಲ್ಲಿ ನಟಿ ಹನ್ಸಿಕಾ ಹಸೆಮಣೆ ಏರುತ್ತಿದ್ದಾರೆ. ಹಾಗಾಗಿ ತಮ್ಮ ಬ್ಯಾಚುಲರ್ ಪಾರ್ಟಿಯಲ್ಲಿ ನಟಿ ಖುಷಿಯಿಂದ ಸಂಭ್ರಮಿಸಿದ್ದಾರೆ. ಈ ಪಾರ್ಟಿಗೆ ನಟಿಯ ಸ್ನೇಹಿತೆಯರು ಕೂಡ ಸಾಥ್ ನೀಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Hansika Motwani (@ihansika)

    ಮುಂಬೈ ಮೂಲದ ಉದ್ಯಮಿ ಸೊಹೈಲ್ ಕಥುರಿಯಾ ಜೊತೆ ಹನ್ಸಿಕಾಗೆ ಮದುವೆ ನಿಶ್ಚಯವಾಗಿದೆ. ಮದುವೆಗೂ ಮುನ್ನ ಹೈಫಿಲ್ ಟವರ್ ಬಳಿ ಮಂಡಿಯೂರಿ ಮ್ಯಾರಿ ಮೀ ಎಂದು ಪ್ರಪೋಸ್ ಮಾಡಿದ್ದರು. ಹನ್ಸಿಕಾ ಕೂಡ ಖುಷಿಯಿಂದ ಮದುವೆಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದೀಗ ಈ ಜೋಡಿಯ ರೊಮ್ಯಾಂಟಿಕ್ ಫೋಟೋಗಳು ಸಖತ್ ಸೌಂಡ್ ಮಾಡಿತ್ತು. ಇದನ್ನೂ ಓದಿ:`ಬಡವರ ಮಕ್ಕಳು ಬೆಳಿಬೇಕ್ ಕಣ್ರಯ್ಯ’ ಎಂದು ಶುರುವಾಯ್ತು ವಿನೋದ್ ಪರ ಅಭಿಯಾನ

    ಇನ್ನೂ ಡಿಸೆಂಬರ್ 3ರಂದು ಮೆಹೆಂದಿ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿದ್ದು, ಡಿ.4ರಂದು ರಾಜಸ್ತಾನದ ಜೈಪುರದ ಮುಂಡೋಟಾ ಕೋಟೆ ಮತ್ತು ಅರಮನೆಯಲ್ಲಿ ಮದುವೆ(Wedding) ನಡೆಯಲಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಜರುಗಲಿದೆ. ಸದ್ಯ ನೆಚ್ಚಿನ ನಟಿಯ ಹೊಸ ಬಾಳಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನು ಮದುವೆ ಆಗಲ್ಲ ಎಂದ ಮೋಹಕತಾರೆ ರಮ್ಯಾ

    ನಾನು ಮದುವೆ ಆಗಲ್ಲ ಎಂದ ಮೋಹಕತಾರೆ ರಮ್ಯಾ

    ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗಿದ್ದಾರೆ. ಸಿನಿಮಾ ತಯಾರಿಯಲ್ಲಿ ಬ್ಯುಸಿಯಿರುವ ನಟಿ ಇದೀಗ ಸಮಾರಂಭವೊಂದರಲ್ಲಿ ತಮ್ಮ ಮದುವೆಯ ಬಗ್ಗೆ ರಮ್ಯಾ ಮೌನ ಮುರಿದಿದ್ದಾರೆ.

    ಸಾಕಷ್ಟು ವರ್ಷಗಳ ನಂತರ ರಮ್ಯಾ ಮತ್ತೆ ಬಣ್ಣ ಹಚ್ತಿದ್ದಾರೆ. ಈ ಗುಡ್ ನ್ಯೂಸ್ ಮಧ್ಯೆ ತಮ್ಮ ಮದುವೆಯ ಬಗ್ಗೆ ಕೂಡ ನಟಿ ಮಾತನಾಡಿದ್ದಾರೆ. ಇತ್ತೀಚೆಗೆ ಬೆಂಗಳೂರು ಕಾಲೇಜುವೊಂದರಲ್ಲಿ ರಮ್ಯಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರಂಭದಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ನೆಚ್ಚಿನ ನಟಿ ರಮ್ಯಾಗೆ ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ.

    ಮದುವೆ ಏನುಕೇ ಆಗಬೇಕು ಎಂಬುದು ಅರ್ಥವಾಗುತ್ತಿಲ್ಲ. ಅದೇ ನಾವು ಹೇಳುತ್ತಿರೋದು ಮದುವೆ ಆಗಬೇಡಿ. ಅದೇ ನಮಗೆ ಬೇಕಾಗಿರೋದು ಎಂದು ಸಭೆಯಲ್ಲಿದ್ದ ವಿದ್ಯಾರ್ಥಿ ಹೇಳಿದ್ದಾರೆ. ಮದುವೆ ಆಗಬಾರದು ಅಲ್ವಾ ಯೆಸ್ ಆಗಲ್ಲಾ ಎಂದಿದ್ದಾರೆ. ಹ್ಯಾಪಿಯಾಗಿರೋದು ಅಥವಾ ಮದುವೆ ಎರಡರಲ್ಲಿ ಒಂದನ್ನ ಚೂಸ್ ಮಾಡಬೇಕು. ಅದಕ್ಕೆ ನಾನು ಹ್ಯಾಪಿಯಾಗಿರೋದನ್ನ ಚ್ಯೂಸ್ ಮಾಡ್ತೀನಿ ಎಂದಿದ್ದಾರೆ. ನಾನು ಮದುವೆ ಆಗಲ್ಲಾ ಎಂದು ರಮ್ಯಾ ರಿಯಾಕ್ಷನ್ ಕೊಟ್ಟಿದ್ದಾರೆ. ಇದನ್ನೂ ಓದಿ: ಅಭಿಷೇಕ್ ಮದುವೆ ಸುಳ್ಳು ಸುಳ್ಳು: ಸುಮಲತಾ ಅಂಬರೀಶ್ ಸ್ಪಷ್ಟನೆ

    ಒಳ್ಳೆಯ ಸೋಲ್‌ಮೇಟ್ ಸಿಕ್ಕಿದ್ರೆ ಮದುವೆ ಆಗಿ ಎಂದಿದ್ದಾರೆ. ನನಗೆ ಇನ್ನೂ ಸಿಕ್ಕಿಲ್ಲ, ಸಿಕ್ಕಿದ್ರೆ ಮದುವೆ ಆಗುತ್ತೀನಿ ಎಂದು ರಮ್ಯಾ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ಕನ್ನಡತಿ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

    ತೆಲುಗಿನ ಸ್ಟಾರ್ ಹೀರೋ(Telagu Actor) ನಾಗಶೌರ್ಯ(Nagashourya) ಕನ್ನಡದ ಹುಡುಗಿ ಅನುಷಾ ಶೆಟ್ಟಿ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ನಾಗ್ ಮತ್ತು ಅನುಷಾ (Anusha Shetty) ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.

     

    View this post on Instagram

     

    A post shared by Naga Shaurya (@nagashaurya_universe)

    ಟಾಲಿವುಡ್‌ನ(Tollywood) ಸಾಕಷ್ಟು ಸಿನಿಮಾಗಳ ಮೂಲಕ ಮೋಡಿ ಮಾಡಿರುವ ನಟ ನಾಗಶೌರ್ಯ ಕರ್ನಾಟಕದ(Karnataka) ಅಳಿಯ ಆಗಿದ್ದಾರೆ. ಕುಂದಾಪುರದ ಮೂಲದ ಹುಡುಗಿ ಅನುಷಾ, ಬೆಂಗಳೂರಿನಲ್ಲಿ ಮನೆಯ ಒಳಾಂಗಣ ವಿನ್ಯಾಸಕಿಯಾಗಿ (Interior Design) ಕೆಲಸ ಮಾಡುತ್ತಿದ್ದಾರೆ. ತಮ್ಮದೇ ಸಂಸ್ಥೆಯನ್ನ ಕೂಡ ತೆರೆದಿದ್ದಾರೆ. ಇನ್ನೂ ನಾಗಶೌರ್ಯ ಕನ್ನಡದ ಹುಡುಗಿಯನ್ನು ಪ್ರೀತಿಸಿ, ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.

     

    View this post on Instagram

     

    A post shared by Naga Shaurya (@nagashaurya_universe)

    ನಾಗ್ ಮತ್ತು ಅನುಷಾ ಶೆಟ್ಟಿ ಮದುವೆ ನವೆಂಬರ್ 20ರಂದು ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆದಿದೆ. ನಾಗ್, ಅನುಷಾ ಮದುವೆ ಇಂದು 11.25ರ ಶುಭ ಮುಹೂರ್ತದಲ್ಲಿ ನಡೆದಿದೆ. ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಕೆಲವೇ ಮಂದಿಗೆ ನಾಗಶೌರ್ಯ ಮದುವೆಗೆ ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಸುಕೃತ ನಾಗ್ ಜೊತೆಗಿನ ಮದುವೆಯ ಸುದ್ದಿಗೆ ಸ್ಪಷ್ಟನೆ ನೀಡಿದ ಶೈನ್ ಶೆಟ್ಟಿ

     

    View this post on Instagram

     

    A post shared by Naga Shaurya (@nagashaurya_universe)

    ಸದ್ಯ ನವಜೋಡಿಗೆ ಅಭಿಮಾನಿಗಳು, ಆಪ್ತರು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮದುವೆಗೆ ಯೋಧರನ್ನು ಆಹ್ವಾನಿಸಿದ ಜೋಡಿ – ಕರೆಯೋಲೆ ಕಂಡು ಖುಷಿ ಪಟ್ಟ ಇಂಡಿಯನ್ ಆರ್ಮಿ

    ಮದುವೆಗೆ ಯೋಧರನ್ನು ಆಹ್ವಾನಿಸಿದ ಜೋಡಿ – ಕರೆಯೋಲೆ ಕಂಡು ಖುಷಿ ಪಟ್ಟ ಇಂಡಿಯನ್ ಆರ್ಮಿ

    ತಿರುವನಂತಪುರಂ: ಕೇರಳದ (Kerala) ಯುವ ಜೋಡಿಯೊಂದು (Couple) ತಮ್ಮ ಮದುವೆ ಆಮಂತ್ರಣ ಪತ್ರವನ್ನು ಭಾರತೀಯ ಸೈನ್ಯಕ್ಕೆ ಕಳುಹಿಸಿ ಮದುವೆಗೆ ಬರುವಂತೆ ಆಮಂತ್ರಣ ನೀಡಿದ ಆಮಂತ್ರಣ ಪತ್ರಿಕೆಯೊಂದು (Invitation) ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕೇರಳ ಮೂಲದ ರಾಹುಲ್ ಮತ್ತು ಕಾರ್ತಿಕಾ ತಮ್ಮ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಶೇಷ ಬರಹಗಳೊಂದಿಗೆ ಭಾರತೀಯ ಸೈನ್ಯಕ್ಕೆ (Indian Army) ಕಳುಹಿಸಿತ್ತು. ಆತ್ಮೀಯ ವೀರ ಸೈನಿಕರೇ ನಾವು ನ.10 ರಂದು ಮದುವೆಯಾಗುತ್ತಿದ್ದೇವೆ. ನಮ್ಮ ದೇಶದ ಮೇಲಿನ ಪ್ರೀತಿ, ದೇಶಭಕ್ತಿಗೆ ನಾವು ನಿಜವಾಗಿಯೂ ಕೃತಜ್ಞರಾಗಿದ್ದೇವೆ. ನಮ್ಮನ್ನು ಪ್ರತಿ ನಿಮಿಷ ಸುರಕ್ಷಿತವಾಗಿ ನೋಡಿಕೊಳ್ಳುತ್ತಿರುವುದಕ್ಕಾಗಿ ನಾವು ನಿಮಗೆ ಋಣಿಯಾಗಿದ್ದೇವೆ. ನಿಮ್ಮಿಂದಾಗಿ ನಾವು ನೆಮ್ಮದಿಯಿಂದ ಮಲಗಿದ್ದೇವೆ. ನಮ್ಮ ಆತ್ಮೀಯರೊಡನೆ ನಮಗೆ ಸಂತೋಷದ ದಿನಗಳನ್ನು ನೀಡಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದ ನಾವು ಸಂತೋಷದಿಂದ ಮದುವೆಯಾಗುತ್ತಿದ್ದೇವೆ. ಈ ವಿಶೇಷ ದಿನದಂದು ನಿಮ್ಮನ್ನು ಆಹ್ವಾನಿಸಲು ತುಂಬಾ ಸಂತೋಷವಾಗುತ್ತಿದೆ. ನಿಮ್ಮ ಉಪಸ್ಥಿತಿ ಮತ್ತು ಆಶೀರ್ವಾದ ಬೇಕೆಂದು ಈ ಆಮಂತ್ರಣ ಪತ್ರಿಕೆ ಕಳುಹಿಸುತ್ತಿದ್ದೇವೆ ಎಂದು ಪೋಸ್ಟ್ ಮಾಡಿ ಮದುವೆಗೆ ಬರುವಂತೆ ಕರೆದಿದ್ದರು. ಇದನ್ನೂ ಓದಿ: ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ, ಹೊತ್ತಿ ಉರಿದ ಆಟೋ – ಚಾಲಕ, ಸವಾರನಿಗೆ ಗಾಯ

     

    View this post on Instagram

     

    A post shared by Indian Army (@indianarmy.adgpi)

    ಈ ಪತ್ರವನ್ನು ಓದಿದ ಬಳಿಕ ಇಂಡಿಯನ್ ಆರ್ಮಿ ರಾಹುಲ್ ಮತ್ತು ಕಾರ್ತಿಕಾಗೆ ಶುಭ ಹಾರೈಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಆಮಂತ್ರಣ ಪತ್ರಿಕೆಯನ್ನು ಪೋಸ್ಟ್ ಮಾಡಿ ನಮ್ಮನ್ನು ಮದುವೆಗೆ ಆಮಂತ್ರಿಸಿದ್ದಕ್ಕಾಗಿ ಧನ್ಯವಾದಗಳು ನಿಮ್ಮ ನೂತನ ಜೀವನ ಸುಖಕರವಾಗಿರಲಿ ಜೊತೆಯಾಗಿರಿ ಎಂದು ಶುಭ ಹಾರೈಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಅಂತ್ಯಸಂಸ್ಕಾರದ ವೇಳೆ ಮೃತದೇಹಕ್ಕೆ ತಾಳಿ ಕಟ್ಟಿ ಗೆಳತಿಯ ಕೊನೆ ಆಸೆ ಈಡೇರಿಸಿದ ಪ್ರೇಮಿ

    Live Tv
    [brid partner=56869869 player=32851 video=960834 autoplay=true]