Tag: wedding

  • ಮದುವೆಯಾಗಲು ವಧು ಹುಡುಕಿಕೊಡಿ- ಮರೆವಣಿಗೆಯಲ್ಲಿ ವರರಂತೆ ಬಂದು ಸರ್ಕಾರಕ್ಕೆ ಮನವಿ ಮಾಡಿದ ಯುವಕರು

    ಮದುವೆಯಾಗಲು ವಧು ಹುಡುಕಿಕೊಡಿ- ಮರೆವಣಿಗೆಯಲ್ಲಿ ವರರಂತೆ ಬಂದು ಸರ್ಕಾರಕ್ಕೆ ಮನವಿ ಮಾಡಿದ ಯುವಕರು

    ಮುಂಬೈ: ಅವಿವಾಹಿತ ಯುವಕರು (Bachelors) ಸಂಘವೊಂದು ವಿವಾಹವಾಗಲು (Wedding) ಹೆಣ್ಣು ಸಿಗುತ್ತಿಲ್ಲ, ವಧುವನ್ನು (Brides) ಹುಡುಕಿಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿ ಮಹಾರಾಷ್ಟ್ರದ (Maharashtra) ಸೋಲಾಪುರದಲ್ಲಿ ಮೆರವಣಿಗೆ ನಡೆಸಿದರು.

    ವಧು-ವರ ಮೋರ್ಚಾ ಎಂಬ ಸಂಘಟನೆಯೊಂದು ಈ ಮೆರವಣಿಗೆಯನ್ನು ನಡೆಸಿದೆ. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಅವಿವಾಹಿತರು ವಧುವನ್ನು ಹುಡುಕಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದೆ.

    ಈ ವೇಳೆ ಹಲವಾರು ಮದುವೆಯಾಗದ ಹುಡುಗರು ವರನಂತೆ ವೇಷ ಧರಿಸಿ ಬ್ಯಾಂಡ್‍ನೊಂದಿಗೆ ಕುದುರೆ ಸವಾರಿ ಮಾಡಿರುವುದು ಕಂಡುಬಂತು. ಅಷ್ಟೇ ಅಲ್ಲದೇ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯ ಮೂಲಕವೇ ಹೋಗಿ ತಮಗಾಗಿ ಹುಡುಗಿಯರನ್ನು ಹುಡುಕಿಕೊಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಸಾಕು ತಂದೆಯ ವಚನ ಪಾಲಿಸಲು ಮುಂದಾಗಿ ಸಿಎಂ ಗೊಂದಲದಲ್ಲಿದ್ದಾರೆ – ಬಿಎಸ್‍ವೈ ವಿರುದ್ಧ ಯತ್ನಾಳ್ ಪರೋಕ್ಷ ವಾಗ್ದಾಳಿ

    ಪತ್ರದಲ್ಲಿ ಮಹಾರಾಷ್ಟ್ರದಲ್ಲಿ ಪುರುಷ- ಮಹಿಳೆಯರ ಅನುಪಾತವನ್ನು ಸುಧಾರಿಸಲು ಗರ್ಭಧಾರಣೆಯ ಪೂರ್ವ ಹಾಗೂ ಪ್ರಸವಪೂರ್ವ ನಿಯಂತ್ರಣ ತಂತ್ರಗಳ (ಪಿಸಿಪಿಎನ್‍ಡಿಟಿ) ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಕೋರಿದ್ದಾರೆ.

    ಮಹಾರಾಷ್ಟ್ರದ ಲಿಂಗ ಅನುಪಾತವು 1,000 ಹುಡುಗರಿಗೆ 889 ಹುಡುಗಿಯರಿದ್ದಾರೆ. ಹೆಣ್ಣು ಭ್ರೂಣಹತ್ಯೆಯಿಂದಾಗಿ ಈ ಅಸಮಾನತೆ ಉಂಟಾಗಿದ್ದು, ಇದಕ್ಕೆ ಸರಕಾರವೇ ಹೊಣೆಯಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು. ಇದನ್ನೂ ಓದಿ: ನಿಷೇಧಿತ ಕೋಳಿ ಜೂಜಾಟ – ಬಿಜೆಪಿ ಮುಖಂಡನ ವಿರುದ್ಧ ಎಫ್‌ಐಆರ್‌

    Live Tv
    [brid partner=56869869 player=32851 video=960834 autoplay=true]

  • 3 ಮದುವೆಯಾದ್ರೂ ಅಪ್ರಾಪ್ತೆ ಜೊತೆ ಎಸ್ಕೇಪ್ ಆದ ಆಟೋ ಚಾಲಕ

    3 ಮದುವೆಯಾದ್ರೂ ಅಪ್ರಾಪ್ತೆ ಜೊತೆ ಎಸ್ಕೇಪ್ ಆದ ಆಟೋ ಚಾಲಕ

    ಕೋಲಾರ: ಆಟೋ ಓಡಿಸಿಕೊಂಡೆ ಈಗಾಗಲೇ ಮೂರು ಹುಡುಗಿಯರನ್ನು ಮದುವೆಯಾಗಿ ಮೋಸ ಮಾಡಿರುವ ಚಪಲ ಚೆನ್ನಿಗರಾಯ ಈಗ ಅಪ್ರಾಪ್ತ ಬಾಲಕಿಯೊಂದಿಗೆ ಪರಾರಿಯಾಗಿರುವ ಘಟನೆ ಕೋಲಾರ ತಾಲೂಕಿನ ನರಸಾಪುರದಲ್ಲಿ ನಡೆದಿದೆ.

    ಕೋಲಾರ (Kolar) ತಾಲೂಕಿನ ನರಸಾಪುರ ಗ್ರಾಮದ ಆಟೋ ಚಾಲಕ (Auto Driver) ಅಲಿಯಾಸ್ ಸಂತೋಷ್ ಎಂಬಾತ ನಿತ್ಯ ಕೂಲಿ ಕೆಲಸಕ್ಕೆಂದು ಕರೆದುಕೊಂಡು ಹೋಗುತ್ತಿದ್ದ ಬಾಲಕಿಯನ್ನು (Girl) ಪುಸಲಾಯಿಸಿ ಆಕೆಯನ್ನು ಕರೆದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.

    ಸಂತೋಷ್ ನರಸಾಪುರ ಗ್ರಾಮದಲ್ಲೇ ಆಟೋ ಓಡಿಸಿಕೊಂಡಿದ್ದು, ನಿತ್ಯ ಕೂಲಿ ಕೆಲಸದವರನ್ನು ಕೆರೆದುಕೊಂಡು ಹೋಗುತ್ತಿದ್ದ. ಅದರಲ್ಲಿ ಈ ಬಾಲಕಿ ಹಾಗೂ ಆಕೆಯ ಅಜ್ಜಿ ಕೂಡಾ ನಿತ್ಯ ಕೂಲಿ ಕೆಲಸಕ್ಕೆ ಹೋಗಿ ಬರುತ್ತಿದ್ದರು. ಡಿ. 5ರಂದು ಬಾಲಕಿಯ ಅಜ್ಜಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೆಲಸಕ್ಕೆ ಹೋಗಿರಲಿಲ್ಲ. ಈ ವೇಳೆ ಬಾಲಕಿಯನ್ನು ಪುಸಲಾಯಿಸಿರುವ ಸಂತೋಷ್ ಕರೆದುಕೊಂಡು ನಾಪತ್ತೆಯಾಗಿದ್ದಾನೆ.

    ಕೆಲಸಕ್ಕೆಂದು ಹೋದ 17 ವರ್ಷದ ಬಾಲಕಿ ಮತ್ತೆ ವಾಪಸ್ ಬಂದಿಲ್ಲ, ಎಲ್ಲಿ ಹೋಗಿದ್ದಾಳೆ ಎಂದು ಪರಿಶೀಲನೆ ನಡೆಸಲಾಗಿ, ಬಾಲಕಿಯನ್ನು ಆಟೋ ಡ್ರೈವರ್ ಸಂತೋಷ್ ಆಕೆಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿದ್ದಾನೆ ಎನ್ನುವುದು ತಿಳಿದು ಬಂದಿದೆ. ವಿಷಯ ತಿಳಿದ ಕೂಡಲೇ ಬಾಲಕಿಯ ಪೊಷಕರು ವೇಮಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಬಾಲಕಿಯನ್ನು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ.

    ಸಂತೋಷ್ ಹೀಗೆ ಮಾಡಿರುವುದು ಮೊದಲೇನಲ್ಲ. ಈ ಮೊದಲು ಇದೇ ರೀತಿ ಹುಡುಗಿಯರನ್ನು ಪುಸಲಾಯಿಸಿ ಈಗಾಗಲೇ ಮೂರು ಜನರನ್ನು ಮದುವೆಯಾಗಿದ್ದಾನಂತೆ. ಅದರಲ್ಲಿ ಒಬ್ಬ ಹೆಂಡತಿ ಮೃತಪಟ್ಟಿದ್ದು, ಉಳಿದ ಇಬ್ಬರು ಇವನೊಂದಿಗೆ ಸಂಸಾರ ಮಾಡಲಾರದೆ ಬಿಟ್ಟು ಹೋಗಿದ್ದಾರೆ. ಇದನ್ನೂ ಓದಿ: ಇಂದು ಮಂಡ್ಯ ನಗರ ಬಂದ್‌ – ಕೆಎಸ್‍ಆರ್‌ಟಿಸಿ ಸಂಚಾರ ಇಳಿಮುಖ

    ಈತನ ಮೂರನೇ ಪತ್ನಿ ಕೂಡಾ ಬಾಲಕಿಯೊಂದಿಗೆ ನಾಪತ್ತೆಯಾಗಿರುವ ತನ್ನ ಗಂಡನ ಕುರಿತು ಪೊಲೀಸ್ ಠಾಣೆಗೆ ಹೋಗಿ ಹೇಳಿಕೆ ನೀಡಿ ಬಂದಿದ್ದಾರೆ. ಸದ್ಯ ಬಾಲಕಿಯೊಂದಿಗೆ ನಾಪತ್ತೆಯಾಗಿರುವ ಸಂತೋಷ್ ಆಕೆಯೊಂದಿಗೆ ಇರುವ ಕೆಲವು ಪೋಟೋಗಳನ್ನು ಸ್ಥಳೀಯ ಸ್ನೇಹಿತರಿಗೆ ಕಳುಹಿಸಿದ್ದಾನೆ. ಹಾಗಾಗಿ ನಮ್ಮ ಹುಡುಗಿಯನ್ನು ಕಿಡ್ನ್ಯಾಪ್ ಮಾಡಿರುವ ಸಂತೋಷನನ್ನು ಬಂಧಿಸಿ ನಮ್ಮ ಮಗುವನ್ನು ಹುಡುಕಿಕೊಡಿ ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಡಿ.25ಕ್ಕೆ ಜನಾರ್ದನ ರೆಡ್ಡಿಯಿಂದ ಹೊಸ ಪಕ್ಷ ಘೋಷಣೆ?

    Live Tv
    [brid partner=56869869 player=32851 video=960834 autoplay=true]

  • ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ದೆವೊಲೀನಾ

    ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ಕೇಳಿದವರಿಗೆ ಖಡಕ್ ಉತ್ತರ ಕೊಟ್ಟ ನಟಿ ದೆವೊಲೀನಾ

    ಟಿ ದೆವೊಲೀನಾ ಭಟ್ಟಾಚಾರ್ಜಿ (Devoleena) ಇತ್ತೀಚಿಗಷ್ಟೆ ದಾಂಪತ್ಯಕ್ಕೆ ಕಾಲಿಟ್ಟರು. ಜಿಮ್ ಟ್ರೈನರ್ ಶಹನವಾಜ್ ಶೇಖ್ (Shanawaz) ಜೊತೆ ನಟಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ದೆವೊಲೀನಾ ಮದುವೆಯಾದ ಬೆನ್ನಲ್ಲೇ ಟ್ರೋಲ್‌ಗೆ ಗುರಿಯಾದರು. ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. ಮುಸ್ಲಿಂ ಧರ್ಮದ ವ್ಯಕ್ತಿಯನ್ನು ನಟಿ ಮದುವೆಯಾಗಿದ್ದಕ್ಕೆ ನಿಮ್ಮ ಮಕ್ಕಳು ಯಾವ ಧರ್ಮಕ್ಕೆ ಸೇರುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪೋಸ್ಟ್ ಮೂಲಕ ನಟಿ ಕೂಡ ಖಡಕ್ ಉತ್ತರ ಕೊಟ್ಟಿದ್ದಾರೆ.

    ನಾನು ಚೆನ್ನಾಗಿದ್ದೇನೆ ಅಥವಾ ಇಲ್ಲವಾ ಎಂದು ಯಾರೂ ಕೂಡ ತಲೆಕೆಡಿಸಿಕೊಳ್ಳದಿರುವಾಗ ನೀನು ನನ್ನ ಜೊತೆಗಿದ್ದಕ್ಕಾಗಿ ಧನ್ಯವಾದಗಳು ಶೋನು. ನಾನು ಬಯಸಿದ ರೀತಿಯಲ್ಲಿ ಸಿಕ್ಕಿದ್ದಕ್ಕೆ ಧನ್ಯವಾದಗಳು. ನಿನ್ನ ಕಾಳಜಿ ಮತ್ತು ಪ್ರೀತಿಗಾಗಿ ಧನ್ಯವಾದಗಳು ಎಂದು ಹೇಳುದ್ದಾರೆ. ಈ ಮೂಲಕ ತುಂಬಾ ಪ್ರೀತಿ ನೀಡುತ್ತಿರುವ ಪತಿಗೆ ಧನ್ಯವಾದ ಹೇಳುವ ಮೂಲಕ ಟ್ರೋಲಿಗೆ ಉತ್ತರ ನೀಡಿದ್ದಾರೆ. ನಟಿ ದೆವೊಲೀನಾ ಡಿ.14ಕ್ಕೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

     

    View this post on Instagram

     

    A post shared by Devoleena Bhattacharjee (@devoleena)

    ಇನ್ನೂ ಮದುವೆ (Wedding) ಫೋಟೋ ಶೇರ್ ಮಾಡುತ್ತಿದ್ದಂತೆ ಅನೇಕರು ಟ್ರೋಲ್ ಮಾಡಿದ್ದರು. ಮುಸ್ಲಿಂ ವ್ಯಕ್ತಿ ಮದುವೆಯಾಗಿದ್ದೀರಾ, ಮುಂದೆ ನಿಮ್ಮ ಮಗು ಯಾವ ಧರ್ಮಕ್ಕೆ ಸೇರುತ್ತೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದರು. ಇದಕ್ಕೆ ದೆವೊಲೀನಾ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: `ಯಶ್ ಇಸ್ ವಾವ್’ ಎಂದ ಶಾರುಖ್ ಖಾನ್ ರಿಯಾಕ್ಷನ್‌ಗೆ ಯಶ್ ಫ್ಯಾನ್ಸ್ ಫಿದಾ

     

    View this post on Instagram

     

    A post shared by Devoleena Bhattacharjee (@devoleena)

    ನನ್ನ ಮಕ್ಕಳು ಹಿಂದೂ ಅಥವಾ ಮುಸ್ಲಿಂ ಎಂದು ಕೇಳುವುದಕ್ಕೆ ನೀವು ಯಾರು? ನಿಮಗೆ ನಿಜವಾಗಿಯೂ ಮಕ್ಕಳ ಬಗ್ಗೆ ಕಾಳಜಿ ಇದ್ದರೆ, ಅನೇಕ ಅನಾಥಾಶ್ರಮಗಳಿವೆ. ನೀವು ಅಲ್ಲಿಗೆ ಹೋಗಿ. ಮಗುವನ್ನು ದತ್ತು ಪಡೆಯಿರಿ ಬಳಿಕ ಹೆಸರು ಮತ್ತು ಧರ್ಮವನ್ನು ನಿರ್ಧರಿಸಿ. ನನ್ನ ಪತಿ, ನನ್ನ ಮಕ್ಕಳು, ನನ್ನ ಧರ್ಮ. ನೀವು ಯಾರು ಕೇಳೋಕೆ ಎಂದು ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ದೆವೋಲೀನಾ ಭಟ್ಟಾಚಾರ್ಜಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆ ನಟಿ ದೆವೋಲೀನಾ ಭಟ್ಟಾಚಾರ್ಜಿ

    ಹಿಂದಿ ಕಿರುತೆರೆಯಲ್ಲಿ (Hindi Television) ಸಾಕಷ್ಟು ಸೀರಿಯಲ್‌ಗಳ ಮೂಲಕ ಮೋಡಿ ಮಾಡಿರುವ ನಟಿ ದೆವೋಲೀನಾ ಭಟ್ಟಾಚಾರ್ಜಿ (Devoleena Bhattacharjee) ಬಹುಕಾಲದ ಗೆಳೆಯ ಶಹನವಾಜ್ ಶೇಖ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

     

    View this post on Instagram

     

    A post shared by Devoleena Bhattacharjee (@devoleena)

    `ಸಾಥ್ ನಿಭಾನಾ ಸಾಥಿಯಾ’ (Sath Nibhana Sathiya) ಜನಪ್ರಿಯ ಧಾರಾವಾಹಿಯಲ್ಲಿ ಪ್ರಮುಖ ಪಾತ್ರಧಾರಿಯಾಗಿ ಕಿರುತೆರೆಯಲ್ಲಿ ಗಮನ ಸೆಳೆದ ನಟಿ ದೆವೋಲೀನಾ, ಶಹನವಾಜ್ ಜೊತೆ 7 ವರ್ಷಗಳಿಂದ ಸ್ನೇಹಿತರಾಗಿದ್ದರು. ಬಳಿಕ 3 ವರ್ಷಗಳ ಡೇಟಿಂಗ್ ನಂತರ ಇದೀಗ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ.‌ ಇದನ್ನೂ ಓದಿ: ಬಾಡಿಗೆ ತಾಯಿಯ ಮೂಲಕ ಮಗು ಪಡೆಯುತ್ತಿದ್ದಾರಾ ರಾಮ್‌ಚರಣ್ ದಂಪತಿ?

     

    View this post on Instagram

     

    A post shared by Devoleena Bhattacharjee (@devoleena)

    ಶಹನವಾಜ್ ಶೇಖ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ದೆವೋಲೀನಾಗೂ ಕೂಡ ಇವರೇ ಫಿಟ್‌ನೆಸ್‌ ಟ್ರೈನರ್ ಆಗಿದ್ದರು. ಈ ವೇಳೆ ಪ್ರೇಮಾಂಕುರವಾಗಿ, ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಮದುವೆ ಆಗಿದ್ದಾರೆ. ನವಜೋಡಿಯ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದ್ದು, ಅಭಿಮಾನಿಗಳು ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಥಿಯಾ-ರಾಹುಲ್ ಮದುವೆ ವದಂತಿಗೆ ಬಿಗ್ ಟ್ವಿಸ್ಟ್ ಕೊಟ್ಟ ಸುನೀಲ್ ಶೆಟ್ಟಿ

    ಅಥಿಯಾ-ರಾಹುಲ್ ಮದುವೆ ವದಂತಿಗೆ ಬಿಗ್ ಟ್ವಿಸ್ಟ್ ಕೊಟ್ಟ ಸುನೀಲ್ ಶೆಟ್ಟಿ

    ಬಿಟೌನ್ ಗಲ್ಲಿಯಲ್ಲಿ ಸದ್ಯ ಸದ್ದು ಮಾಡ್ತಿರುವ ವಿಚಾರ ಅಂದರೆ ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (K.l Rahul) ಮದುವೆ ವಿಷ್ಯ. ಈ ಮದುವೆ ವದಂತಿಗೆ ನಟ ಸುನೀಲ್ ಶೆಟ್ಟಿ (Suniel Shetty) ಬಿಗ್ ಟ್ವಿಸ್ಟ್ ಕೊಟ್ಟಿದ್ದಾರೆ. ಡೇಟ್ ಫಿಕ್ಸ್ ಆದ್ಮೇಲೆ ನನ್ ಮಗಳ ಮದುವೆಗೆ ನನ್ನನ್ನು ಕರೆಯಿರಿ ಎಂದು ಸುನೀಲ್ ಶೆಟ್ಟಿ ರಿಯಾಕ್ಟ್ ಮಾಡಿದ್ದಾರೆ.

    ಅಥಿಯಾ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ಸಾಕಷ್ಟು ವರ್ಷಗಳಿಂದ ಡೇಟಿಂಗ್ (Dating) ಮಾಡ್ತಿದ್ದಾರೆ. ಹಾಗಾಗಿ ಮದುವೆ (Wedding) ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚೆಗೆ ಮುಂದಿನ ವರ್ಷ ಜನವರಿಯಲ್ಲಿ ಮದುವೆ ಎಂದು ವರದಿಯಾಗಿತ್ತು. ಈ ವಿಚಾರಕ್ಕೆ ಅಥಿಯಾ ತಂದೆ ಸುನೀಲ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಮದುವೆ ವದಂತಿಯನ್ನು ಅವರು ಅಲ್ಲಗೆಳೆದಿದ್ದಾರೆ. ಇದನ್ನೂ ಓದಿ: ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

    ಈ ಕುರಿತು ಮಾತನಾಡಿರುವ ಅವರು, ನೀವುಗಳೇ ಅಥಿಯಾ ಮತ್ತು ರಾಹುಲ್ ವಿವಾಹದ ದಿನಾಂಕವನ್ನು ಖಚಿತಪಡಿಸಿದ ಮೇಲೆ ನನಗೂ ತಿಳಿಸಿ. ನಾನು ಸಹ ನನ್ನ ಮಗಳ ಮದುವೆಗೆ ಬರಲು ಸಹಾಯಕವಾಗುತ್ತದೆ ಎಂದು ತಮಾಷೆಯಾಗಿ ಹೇಳುವ ಮೂಲಕ ಇನ್ನೂ ಸಹ ಯಾವುದೇ ದಿನಾಂಕವನ್ನು ಫಿಕ್ಸ್ ಮಾಡಿಲ್ಲ ಎಂದು ಹೇಳಿದ್ದಾರೆ.

    ಅಥಿಯಾ ಮತ್ತು ರಾಹುಲ್ ಅವರು ತಮ್ಮ ಕೆಲಸಗಳಿಂದ ಕೊಂಚ ಬ್ರೇಕ್ ಪಡೆದ ನಂತರದಲ್ಲಿ ಮಾತ್ರ ಅವರ ವಿವಾಹದ ಮಾತುಕಥೆಗಳು ನಡೆಸಲಾಗುತ್ತದೆ. ಇನ್ನೂ ಸಹ ಇಬ್ಬರ ನಿಶ್ಛಿತಾರ್ಥವಾಗಿಲ್ಲ. ಇವುಗಳು ಆದ ಮೇಳೆ ಮದುವೆಯ ಮಾತು ಎಂದು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಗಳ ಮದುವೆಯೆಂದು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ತಂದೆ ಕುಸಿದುಬಿದ್ದು ಸಾವು

    ಮಗಳ ಮದುವೆಯೆಂದು ಖುಷಿಯಿಂದ ಡ್ಯಾನ್ಸ್ ಮಾಡುತ್ತಿದ್ದ ತಂದೆ ಕುಸಿದುಬಿದ್ದು ಸಾವು

    ಡೆಹ್ರಾಡೂನ್: ಮೆಹಂದಿ ಸಮಾರಂಭದಲ್ಲಿ ವಧುವಿನ (Bride) ತಂದೆ (Father) ಡ್ಯಾನ್ಸ್ (Dance) ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಉತ್ತರಾಖಂಡದಲ್ಲಿ ನಡೆದಿದೆ.

    ಉತ್ತರಾಖಂಡದ (Uttarakhand) ಅಲ್ಮೋರಾದಲ್ಲಿರುವ ವಧುವಿನ ಮನೆಯಲ್ಲಿ ಈ ಘಟನೆ ನಡೆದಿದೆ. ವಧುವಿನ ತಂದೆ ಮೆಹೆಂದಿ ಸಮಾರಂಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗ ಏಕಾಏಕಿ ಡ್ಯಾನ್ಸ್ ಫ್ಲೋರ್‌ ಮೇಲೆ ಬಿದ್ದಿದ್ದಾರೆ. ಅರಿಶಿಣ ಶಾಸ್ತ್ರದ ಬಳಿಕ ಕೆಲವು ಕುಟುಂಬಸ್ಥರು ಮನೆಗೆ ತೆರಳಿದ ಬಳಿಕ ಈ ಘಟನೆ ನಡೆದಿದೆ.  ಇದನ್ನೂ ಓದಿ: BMTC ಬಸ್ ಟಯರ್ ಅಡಿಗೆ ಬಿದ್ದು ಬೈಕ್ ಸವಾರ ಸಾವು

    ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅವರು ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು. ಪೊಲೀಸರು ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಘಟನೆ ಮರುದಿನ ಸರಳವಾಗಿ ವಧು ವಿವಾಹವಾದರು (Wedding). ವಧುವಿನ ಕನ್ಯಾದಾನವನ್ನು ಆಕೆಯ ತಾಯಿಯ ಚಿಕ್ಕಪ್ಪ ಮಾಡಿದರು. ಇದನ್ನೂ ಓದಿ: ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ

    Live Tv
    [brid partner=56869869 player=32851 video=960834 autoplay=true]

  • ಪತ್ನಿಗೆ ಇಷ್ಟವೆಂದು ಕತ್ತೆಯನ್ನೇ ಗಿಫ್ಟ್ ಮಾಡಿದ ಪತಿ

    ಪತ್ನಿಗೆ ಇಷ್ಟವೆಂದು ಕತ್ತೆಯನ್ನೇ ಗಿಫ್ಟ್ ಮಾಡಿದ ಪತಿ

    ಇಸ್ಲಾಮಾಬಾದ್: ಪಾಕಿಸ್ತಾನದ ಯೂಟ್ಯೂಬರ್ (Pakistani Youtuber) ಒಬ್ಬರು ತಮ್ಮ ಮದುವೆಯ ದಿನದಂದು ತನ್ನ ಪತ್ನಿಗೆ (Wife) ಕತ್ತೆಯನ್ನು (Donkey) ಉಡುಗೊರೆಯಾಗಿ (Gift) ನೀಡಿದ್ದಾರೆ.

    ಕರಾಚಿಯ ಯೂಟ್ಯೂಬರ್ ಅಜ್ಲಾನ್ ಶಾ ಅವರು ಆರತಕ್ಷತೆಯಲ್ಲಿ ಕತ್ತೆ ಮರಿಯೊಂದನ್ನು ತಂದು, ತನ್ನ ಪತ್ನಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ನೋಡಿದ ಪತ್ನಿ ವಾರಿಷಾ ಮೊದಲು ಆಶ್ಚರ್ಯ ಹಾಗೂ ಸಂತೋಷಗೊಂಡಿದ್ದಾರೆ.

     

    View this post on Instagram

     

    A post shared by Azlan Shah (@azlanshahofficial)

    ವಾರಿಷಾ ಕತ್ತೆ ಮರಿಗಳನ್ನು ಪ್ರೀತಿಸುತ್ತಾಳೆ ಎಂದು ನನಗೆ ತಿಳಿದಿತ್ತು. ಈ ಹಿನ್ನೆಲೆಯಲ್ಲಿ ಆಕೆಗೆ ಮದುವೆಯ ಉಡುಗೊರೆಯಾಗಿ ಕತ್ತೆ ಮರಿಯನ್ನು ತಂದಿದ್ದೇನೆ. ಜೊತೆಗೆ ಕತ್ತೆಯೂ ವಿಶ್ವದ ಅತ್ಯಂತ ಶ್ರಮಶೀಲ ಹಾಗೂ ಪ್ರೀತಿಯ ಪ್ರಾಣಿಯಾಗಿದೆ ಎಂದು ಅಜ್ಲಾನ್ ಶಾ ತಿಳಿಸಿದರು. ವಾರಿಷಾಗೆ ಕತ್ತೆ ಮರಿಯನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೋವನ್ನು ಶಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ರಾತ್ರಿ 11 ಗಂಟೆ ನಂತ್ರ ಓಡಾಡಿದ್ದಕ್ಕೆ ದಂಪತಿಗೆ ದಂಡ ಹಾಕಿದ್ದ ಪೊಲೀಸರು ಸಸ್ಪೆಂಡ್‌

    ಈ ವೀಡಿಯೋದಲ್ಲಿ ಕತ್ತೆಯನ್ನು ಅಜ್ಲಾನ್ ಶಾ ವರಿಷಾಗೆ ನೀಡುತ್ತಿದ್ದಾರೆ. ಇನ್‍ಸ್ಟಾಗ್ರಾಮ್‍ನಲ್ಲಿ ಹಾಕಿರುವ ಫೋಟೋಕ್ಕೆ ನೆಟ್ಟಿಗರು ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಒಬ್ಬಾತ ಒಂದು ಕತ್ತೆಯ ಜೊತೆ ಇನ್ನೊಂದು ಕತ್ತೆ ಫ್ರೀ ಎಂದು ತಿಳಿಸಿದ್ದಾರೆ. ಕತ್ತೆ ಮುಗ್ಧ ಪ್ರಾಣಿ ಎಂದು ಇನ್ನೊಬ್ಬಾತ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ: ಅಂಬೇಡ್ಕರ್‌ಗೆ ಅಪಮಾನ – ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ ಮುಖಕ್ಕೆ ಮಸಿ ಬಳಿದು ಆಕ್ರೋಶ

    Live Tv
    [brid partner=56869869 player=32851 video=960834 autoplay=true]

  • ವಧುವಿನ ಕಡೆಯವರು ಬೈಕ್ ಕೊಡಿಸಿಲ್ಲವೆಂದು ಮದುವೆ ಮಂಟಪದಿಂದ ಓಡಿ ಹೋದ ವರ

    ವಧುವಿನ ಕಡೆಯವರು ಬೈಕ್ ಕೊಡಿಸಿಲ್ಲವೆಂದು ಮದುವೆ ಮಂಟಪದಿಂದ ಓಡಿ ಹೋದ ವರ

    ಲಕ್ನೋ: ವಧುವಿನ ಕಡೆಯವರು ಬೈಕ್ (Bike) ಕೊಡಿಸಿಲ್ಲ ಎಂದು ವರನೊಬ್ಬ ಮದುವೆ (Wedding) ಮಂಟಪದಿಂದ ಓಡಿ ಹೋದ ಘಟನೆ ಉತ್ತರಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಉತ್ತರಪ್ರದೇಶದ ಬಾರಾಬಂಕಿಯ ವಧುವಿಗೆ ಅಯೋಧ್ಯೆಯ ಮಾವಿಯ ವರನ ಜೊತೆ ವಿವಾಹ ಏರ್ಪಟ್ಟಿತ್ತು. ಈ ವೇಳೆ ವರದಕ್ಷಿಣೆಯಾಗಿ (Dowry) ಬೈಕ್‍ನ್ನು ಕೇಳಿದ್ದರು. ಆದರೆ ವಧುವಿನ ಕಡೆಯವರಿಗೆ ಬೈಕ್‍ನ್ನು ನೀಡಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲೇ ಮದುವೆ ಮಂಟಪದಲ್ಲೇ ವರನ ಕಡೆಯವರಿಗೂ ವಧುವಿನ ಕಡೆಯವರಿಗೂ ವಾಗ್ವಾದ ನಡೆದಿದೆ.

    ಈ ವೇಳೆ ವಧುವಿನ ತಂದೆ ಬೈಕ್ ಕೊಡಿಸುವಷ್ಟು ಹಣವಿಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ವರನ ತಂದೆ ಶ್ಯಾಮ್ ಲಾಲ್ ವರದಕ್ಷಿಣೆಯನ್ನು ಸರಿಯಾಗಿ ನೀಡಿಲ್ಲ ಎಂದು ಮದುವೆಯನ್ನು ರದ್ದುಗೊಳಿಸಿ ವರನೊಂದಿಗೆ ಮದುವೆ ಮಂಟಪದಿಂದ ಹೊರಟು ಹೋಗಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪಾಲಿಟಿಕ್ಸ್ ಜಿದ್ದಾ ಜಿದ್ದಿ – ಬಿಜೆಪಿಗೆ ವಲಸೆ ಹೋಗಲು ಕಾಯ್ತಿವೆ ಹಕ್ಕಿಗಳು?

    ಘಟನೆಗೆ ಸಂಬಂಧಿಸಿ ವಧುವಿನ ಮನೆಯವರು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದರು. ಅಷ್ಟೇ ಅಲ್ಲದೇ ವಧು ಮದುವೆ ನಡೆಯದಿದ್ದರೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾಳೆ. ಈ ವೇಳೆ ಪೊಲೀಸರು ವರ ಶೀಘ್ರದಲ್ಲೇ ಬರುತ್ತಾನೆ. ಮದುವೆ ನಡೆಯುತ್ತದೆ ಎಂದು ವಧುವಿನ ಮನೆಯವರನ್ನು ಮನೆಗೆ ಕಳುಹಿಸಲು ಪ್ರಯತ್ನಿಸಿದ್ದಾರೆ.

    ಇದಕ್ಕೆ ಒಪ್ಪದ ವಧು ತನ್ನ ತಂದೆ- ತಾಯಿ ಬಡವರು. ಶಾಸ್ತ್ರೋಕ್ತ ವಿವಾಹಕ್ಕೆ ಚಿನ್ನ ಉಂಗುರು ಹಾಗೂ 5,000 ಅಗತ್ಯವಿತ್ತು. ಅದನ್ನು ಕೊಟ್ಟಿದ್ದೆವು. ಆದರೂ ವರದಕ್ಷಿಣೆ ಕೇಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ ಆಕೆ ತನಗೆ ಮದುವೆ ಮಾಡಿಸುವಂತೆ ಪೊಲೀಸರ ಬಳಿ ವಿನಂತಿಸಿದ್ದಾಳೆ. ಅಷ್ಟೇ ಅಲ್ಲದೇ ಮದುವೆಯಾಗದಿದ್ದರೆ ನಾನು ನನ್ನ ಜೀವವನ್ನೇ ತೆಗೆದುಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾಗಿ ತಿಳಿಸಿದರು. ಇದನ್ನೂ ಓದಿ: ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್

    Live Tv
    [brid partner=56869869 player=32851 video=960834 autoplay=true]

  • ಕೊನೆಗೂ ಗುಡ್ ನ್ಯೂಸ್ ಕೊಟ್ರು ಬುಲ್ ಬುಲ್ ಬೆಡಗಿ ರಚಿತಾ

    ಕೊನೆಗೂ ಗುಡ್ ನ್ಯೂಸ್ ಕೊಟ್ರು ಬುಲ್ ಬುಲ್ ಬೆಡಗಿ ರಚಿತಾ

    ಕಿರುತೆರೆ ಮತ್ತು ಹಿರಿತೆರೆ ಕಲಾವಿದರು ಒಬ್ಬಬ್ಬೊರಾಗಿ ಹಸೆಮಣೆ ಏರುತ್ತಿದ್ದಾರೆ. ಸದ್ಯ ಗಾಂಧಿನಗರದಲ್ಲಿ ಬುಲ್ ಬುಲ್ ಕ್ವೀನ್ ರಚಿತಾ ರಾಮ್ (Rachitha Ram) ಮದುವೆ ಸುದ್ದಿ ಭಾರಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಡಿಂಪಲ್ ಕ್ವೀನ್ ಮದುವೆಯಾಗುತ್ತಿರುವ ಹುಡುಗ ಯಾರು? ಅಷ್ಟಕ್ಕೂ ಅಸಲಿ ವಿಚಾರವೇನು ಎಂಬುದಕ್ಕೆ ಇಲ್ಲಿದೆ ಉತ್ತರ.

    `ಬುಲ್ ಬುಲ್’ ಬೆಡಗಿ ರಚಿತಾ ರಾಮ್ ಸಿನಿಮಾರಂಗಕ್ಕೆ ಬಂದು 10 ವರ್ಷವಾಯ್ತು. ಇವತ್ತಿಗೂ ಅವರನ್ನ ಕೇಳೋ ಒಂದು ಪ್ರಶ್ನೆ ಅಂದ್ರೆ ಮದುವೆ ಯಾವಾಗ ಅಂತಾ ಅದಕ್ಕೆಲ್ಲಾ ಉತ್ತರ ಇದೀಗ ಸಿಕ್ಕಿದೆ. ಇತ್ತೀಚೆಗೆ ಅದಿತಿ ಪ್ರಭುದೇವಾ (Aditi Prabhudeva) ಮದುವೆ ಮತ್ತು ವಸಿಷ್ಠ- ಹರಿಪ್ರಿಯಾ ಎಂಗೇಜ್‌ಮೆಂಟ್ ಆಯ್ತು, ಅಂಬಿ ಪುತ್ರ ಅಭಿಷೇಕ್ ಮದುವೆಯ ಸುದ್ದಿಯ ಬೆನ್ನಲ್ಲೇ ರಚಿತಾ ರಾಮ್ ಮದುವೆ ಸುದ್ದಿ ಸೌಂಡ್ ಮಾಡುತ್ತಿದೆ. ಇದನ್ನೂ ಓದಿ: ರಶ್ಮಿಕಾ ಕನ್ನಡದ ಹುಡುಗಿ, ಬ್ಯಾನ್ ಯಾಕೆ ಮಾಡಬೇಕು: ಧನಂಜಯ್

    ರಚಿತಾ ರಾಮ್ ಮನೆಯಲ್ಲಿ ಹುಡುಗ ಹುಡುಕುತ್ತಿದ್ದಾರಂತೆ. 2019ರಲ್ಲಿ ರಚಿತಾ ಸಹೋದರಿ ನಿತ್ಯಾ ರಾಮ್ (Nithya Ram) ಅವರ ಮದುವೆಯನ್ನು ಅದ್ದೂರಿಯಾಗಿ ನೆರವೇರಿಸಿದ್ದರು. ಇದೀಗ ಅದೇ ರೀತಿ ಗೌಡ್ರ ಮನೆಯ ಹುಡುಗನನ್ನು ರಚಿತಾಗೆ ಹುಡುಕುತ್ತಿದ್ದಾರೆ. ಫಾರಿನ್‌ನಲ್ಲಿ ಮದುವೆ ಮಾಡುವ ಫ್ಲ್ಯಾನ್‌ನಲ್ಲಿದ್ದಾರೆ. ಫಿಕ್ಸ್ ಆಯ್ತು ಅಂದ್ರೆ ಆದಷ್ಟು ಬೇಗ ಗಟ್ಟಿಮೇಳ ಬಾರಿಸೋದೆ ಅಂತಾ ರಚ್ಚು ಫ್ಯಾಮಿಲಿ ನಿರ್ಧರಿಸಿದ್ದಾರೆ.

    ಅಷ್ಟಕ್ಕೂ ರಚಿತಾ ಕುಟುಂಬ ಅಂದುಕೊಂಡಂತೆ ಆಯ್ತು ಅಂದರೆ ಸದ್ಯದಲ್ಲೇ ನಟಿ ಮದುವೆಯ ಗುಡ್ ನ್ಯೂಸ್ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆ ಡೇಟ್ ಫಿಕ್ಸ್

    ಚಂದನವನದ ಸದ್ಯ ಹಾಟ್ ಟಾಪಿಕ್ ಅಂದ್ರೆ ವಸಿಷ್ಠ ಸಿಂಹ (Vasistasimha) ಮತ್ತು ಹರಿಪ್ರಿಯಾ (Haripriya)  ಜೋಡಿ. ಇತ್ತೀಚೆಗೆ ಸೈಲೆಂಟ್ ಆಗಿ ಎಂಗೇಜ್ ಆಗಿದ್ದ ಸಿಂಹಪ್ರಿಯಾ ಜೋಡಿಯ ಮೊದಲ ಭೇಟಿ ಎಲ್ಲಿ? ತೆರೆಮರೆಯ ಕಹಾನಿಯೇನು? ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆಲ್ಲಾ ಉತ್ತರ ಇದೀಗ ಸಿಕ್ಕಿದೆ.

    ಸ್ಯಾಂಡಲ್ವುಡ್‌ನ (Sandalwood) ಮತ್ತೊಂದು ಜೋಡಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಇವರಿಬ್ಬರ ಮೊದಲ ಭೇಟಿಯ ಕಥೆ ಇಲ್ಲಿದೆ. `ಗೋಧಿ ಬಣ್ಣ ಸಾಧಾರಣ ಮೈಕಟ್ಟು'(Godhi Banna Sadarana Maikattu) ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ವಸಿಷ್ಠ ಮತ್ತು ಹರಿಪ್ರಿಯಾ ಅವರ ಭೇಟಿಯಾಗಿತ್ತು. ಇದಾದ ಬಳಿಕ ತೆಲುಗಿನ `ಎವರು’ ರಿಮೇಕ್‌ನಲ್ಲಿ ಇಬ್ಬರು ಜೋಡಿಯಾಗಿ ನಟಿಸಿದ್ದಾರೆ. ʻಎವರುʼ ಸಿನಿಮಾ ಕನ್ನಡಕ್ಕೆ ಡಬ್‌ ಆಗಿದ್ದು, ಸಿಂಹಪ್ರಿಯಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

    ಈ ಸಿನಿಮಾನೇ ಒಂದರ್ಥದಲ್ಲಿ ಪ್ರೀತಿಗೆ ತಿರುಗಲು ಕಾರಣ ಎಂದರೆ ತಪ್ಪಾಗಲಾರದು. ಬಳಿಕ ವಸಿಷ್ಠ ನಾಯಿಮರಿಯೊಂದನ್ನ ಗಿಫ್ಟ್ ಆಗಿ ಹರಿಪ್ರಿಯಾಗೆ ಕೊಟ್ಟಿದ್ದರು. ಹೀಗೆ ತಮ್ಮ ಗೆಳೆತನ ಮತ್ತಷ್ಟು ಗಟ್ಟಿಯಾದ ನಂತರದಲ್ಲಿ ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ಎಂಗೇಜ್‌ಮೆಂಟ್ ಮಾಡಿಕೊಂಡರು. 2023ರಲ್ಲಿ ಫೆಬ್ರವರಿ ಅಥವಾ ಮಾರ್ಚ್‌ನ ಶುಭ ಮುಹೂರ್ತದಲ್ಲಿ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿದ್ದಾರೆ. ಇದನ್ನೂ ಓದಿ: ಎಂಗೇಜ್ ಮೆಂಟ್ ವಿಚಾರದಲ್ಲಿ ನಾನು ಡಿಪ್ರೆಷನ್ ಗೆ ಹೋಗಿರಲಿಲ್ಲ: ನಟಿ ವೈಷ್ಣವಿ

    ಇನ್ನೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟನೆಯ ಸಿನಿಮಾ ಮುಂದಿನ 2023ರಲ್ಲಿ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ರಿಲೀಸ್ ಜೊತೆ ಮದುವೆಯ ಗುಡ್ ನ್ಯೂಸ್ ಕೂಡ ಸಿಂಹಪ್ರಿಯ ಜೋಡಿ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]