Tag: wedding

  • ಮದುವೆ ಆಗಿಲ್ಲ ಎಂದು ಕಿಚಾಯಿಸಿದ ಸ್ನೇಹಿತನ ಕೊಲೆ

    ಮದುವೆ ಆಗಿಲ್ಲ ಎಂದು ಕಿಚಾಯಿಸಿದ ಸ್ನೇಹಿತನ ಕೊಲೆ

    ಮೈಸೂರು: ಕುಡಿದ ಮತ್ತಿನಲ್ಲಿ ಸ್ನೇಹಿತರ (Friend) ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾದ ಘಟನೆ ಮೈಸೂರು (Mysuru) ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ನಡೆದಿದೆ.

    ಹುಣಸೂರು ತಾಲೂಕು ತಾಲೂಕಿನ ಹರವೆ ಗ್ರಾಮದ ಸಣ್ಣಸ್ವಾಮಿ ನಾಯಕ (48) ಮೃತ ವ್ಯಕ್ತಿ ಹಾಗೂ ಕುಮಾರ ನಾಯಕ ಕೊಲೆ ಮಾಡಿದ ಆರೋಪಿ. ಕುಮಾರನಿಗೆ ಸಣ್ಣಸ್ವಾಮಿ ನಾಯಕ ನಿನಗೆ 37 ವರ್ಷವಾದರೂ ಮದುವೆಯಾಗಿಲ್ಲ. (Wedding) ನಿನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಕಿಚಾಯಿಸಿದ್ದ. ಇದರಿಂದಾಗಿ ಮಾತಿಗೆ ಮಾತು ಬೆಳೆದು ಇಬ್ಬರ ನಡುವೆಯೂ ಜಗಳ ನಡೆದಿದೆ. ಈ ಜಗಳವೇ ದೊಡ್ಡದಾಗಿ, ಈ ವೇಳೆ ಸಣ್ಣಸ್ವಾಮಿಗೆ ಕುಮಾರ ನಾಯಕ ಚಾಕು ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ಇದನ್ನೂ ಓದಿ: 244 ಮಂದಿಯಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ- ತುರ್ತು ಭೂಸ್ಪರ್ಶ

    ಘಟನೆಗೆ ಸಂಬಂಧಿಸಿದಂತೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ (Police Station) ಪ್ರಕರಣ ದಾಖಲಾಗಿದ್ದು, ಆರೋಪಿ ಕುಮಾರ್ ನಾಯಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೇಮಾವತಿ ದಡದಲ್ಲಿ ಮೀನು ಹಿಡಿಯಲು ಹೋಗಿದ್ದವರಿಗೆ ಗುಂಡೇಟು- ಓರ್ವ ಸಾವು, ಇಬ್ಬರು ಗಂಭೀರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    ಸಾನ್ಯ ಮನೆಯಿಂದ ಮದುವೆ ಪ್ರಪೋಸಲ್‌ ಬಂದ್ರೆ ರೂಪೇಶ್‌ ಶೆಟ್ಟಿ ಉತ್ತರವೇನು?

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದ್ದೂರಿಯಾಗಿ ನಡೆಯಲಿದೆ ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ

    ಅದ್ದೂರಿಯಾಗಿ ನಡೆಯಲಿದೆ ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮದುವೆ

    ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Suniel Shetty) ಪುತ್ರಿ ಅಥಿಯಾ (Athiya) ಮತ್ತು ಕೆ.ಎಲ್ ರಾಹುಲ್ (K.l Rahul) ಮದುವೆಗೆ (Wedding) ತೆರೆಮರೆಯಲ್ಲಿ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಹೊಸ ವರ್ಷದ ಸಂಭ್ರಮದ ನಡುವೆ ಹೊಸ ಬಾಳಿಗೆ ಕಾಲಿಡಲು ಅಥಿಯಾ, ರಾಹುಲ್ ಜೋಡಿ ರೆಡಿಯಾಗಿದ್ದಾರೆ.

    ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ಕೆ.ಎಲ್ ರಾಹುಲ್ ತಮ್ಮ ಹಲವು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಲು ಸಜ್ಜಾಗಿದ್ದಾರೆ. 2023 ಜನವರಿಯಲ್ಲಿ ಇಬ್ಬರೂ ಹಸೆಮಣೆ ಏರುತ್ತಿರುವುದು ಕನ್ಫರ್ಮ್ ಎನ್ನುತ್ತಿವೆ ಮೂಲಗಳು. ಜನವರಿ 23ಕ್ಕೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸುನೀಲ್ ಶೆಟ್ಟಿ ಮತ್ತು ರಾಹುಲ್ ಕುಟುಂಬ ಸದ್ಯ ಮದುವೆ ದಿನಾಂಕ ಅಂತಿಮ ಗೊಳಿಸಿದೆ.

    ಜನವರಿ 21ರಿಂದ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆಯಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಇನ್ನೂ ಮದುವೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಇದನ್ನೂ ಓದಿ:ಬೆಳಕು, ಆದರೆ ಇದು ಬೆಳಕಲ್ಲ 100 ದಿನದ ದರ್ಶನ: ಸಕ್ಸಸ್ ಬಗ್ಗೆ ರಿಷಬ್ ಸ್ಪೆಷಲ್ ನೋಟ್

    ಹೊಸ ವರ್ಷ ಜ.21ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ, ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದ್ದಂತೆ ಎಲ್ಲಾ ಶಾಸ್ತ್ರಗಳನ್ನು ಸಂಪ್ರದಾಯ ಬದ್ಧವಾಗಿ ಮದುವೆ ಕಾರ್ಯ ಮಾಡಲು ಎರಡು ಕುಟುಂಬಗಳು ನಿರ್ಧರಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ (Athiya Shetty)ಮದುವೆ ಪಕ್ಕ ದಕ್ಷಿಣ ಭಾರತದ ಶೈಲಿಯಲ್ಲಿ ನಡೆಸಲು ಎರಡು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ. ಇನ್ನು ವಿಶೇಷ ಎಂದರೆ ಇಬ್ಬರ ಮದುವೆ ಯಾವುದೇ ಖಾಸಗಿ ಹೋಟೆಲ್ ಅಥವಾ ವಿದೇಶದಲ್ಲಿ ನಡೆಯುತ್ತಿಲ್ಲ. ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆ ಜಹಾನ್‌ನಲ್ಲೇ ಜ.23ಕ್ಕೆ ಮದುವೆ ನಡೆಯಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • 46ನೇ ವಯಸ್ಸಿಗೆ ಸಿಹಿ ಸುದ್ದಿ ಕೊಟ್ರು ತೆಲುಗಿನ ನಟಿ ಪ್ರಗತಿ

    46ನೇ ವಯಸ್ಸಿಗೆ ಸಿಹಿ ಸುದ್ದಿ ಕೊಟ್ರು ತೆಲುಗಿನ ನಟಿ ಪ್ರಗತಿ

    ಟಾಲಿವುಡ್‌ನಲ್ಲಿ (Tollywood) ಸದ್ಯ ಚಾಲ್ತಿಯಲ್ಲಿರುವ ಸುದ್ದಿ ಅಂದ್ರೆ ನರೇಶ್ (Naresh) ಮತ್ತು ಪವಿತ್ರಾ (Pavitra Lokesh)  ಕಿಸ್ಸಿಂಗ್ ವೀಡಿಯೋ ವಿಚಾರ. ಈ ಬೆನ್ನಲ್ಲೇ ಮತ್ತೊಂದು ಅಚ್ಚರಿಯ ಸುದ್ದಿಯೊಂದು ಟಿಟೌನ್‌ನಲ್ಲಿ ಹರಿದಾಡುತ್ತಿದೆ. ನನಗೂ ಸಂಗಾತಿ ಬೇಕು ಎಂದು ನಟಿ ಪ್ರಗತಿ ಹೇಳಿದ್ದಾರೆ.

    ತೆಲುಗು ಸಿನಿಮಾರಂಗದಲ್ಲಿ ನರೇಶ್ ಮತ್ತು ಪವಿತ್ರಾ ಲೋಕೇಶ್ ಕಿಸ್ಸಿಂಗ್ ವೀಡಿಯೋ 9Kissing Video) ಭಾರಿ ಸದ್ದು ಮಾಡಿದ ಬೆನ್ನಲ್ಲೇ ನಟಿ ಪ್ರಗತಿ (Actress Pragathi) ತಮ್ಮ ಮಹಾದಾಸೆಯನ್ನ ವ್ಯಕ್ತಪಡಿಸಿದ್ದಾರೆ. ನನಗೂ ಕೂಡ ಸಂಗತಿ(Partner) ಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಇದನ್ನೂ ಓದಿ: ಸೋನು ಗೌಡ ಜೊತೆಗಿನ ಮದುವೆ ಬಗ್ಗೆ ರಾಕೇಶ್ ಅಡಿಗ ಹೇಳೋದೇನು?

    ತೆಲುಗಿನ ನಟಿ ಪ್ರಗತಿ 46ನೇ ವಯಸ್ಸಿಗೆ ಮರುಮದುವೆಗೆ ಮನಸ್ಸು ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ತಮ್ಮ ಆಪ್ತ ವಲಯದಲ್ಲಿ ನನಗೂ ಜೋಡಿ ಬೇಕು ಎಂದು ಹೇಳಿರುವ ಮಾತು ಈಗ ಎಲ್ಲಾ ಕಡೆ ಸಂಚಲನ ಸೃಷ್ಟಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದೆ. ಪ್ರಗತಿ ಅವರ ಹೇಳಿಕೆ ಕೇಳಿ, ಎಲ್ಲಾ ಪವಿತ್ರಾ ಮತ್ತು ನರೇಶ್ ಮಹಿಮೆ ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದಾರೆ.

    ನಟಿ ಪ್ರಗತಿ ಸಾಫ್ಟ್‌ವೇರ್ ಇಂಜಿನಿಯರ್ ಅವರನ್ನ ಮದುವೆಯಾಗಿದ್ದರು. ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ವೈಯಕ್ತಿಕ ಕಾರಣಗಳಿಂದ ಕೆಲ ವರ್ಷಗಳ ಹಿಂದೆ ಇಬ್ಬರು ಡಿವೋರ್ಸ್ ಪಡೆದಿದ್ದರು. ಇದೀಗ ಮತ್ತೆ ಮರುಮದುವೆಗೆ ನಟಿ ಮನಸ್ಸು ಮಾಡಿದ್ದಾರಂತೆ. ಅಷಕ್ಕೂ ಈಗ ಹಬ್ಬಿರುವ ಸುದ್ದಿ ನಿಜಾನಾ, ಸುಳ್ಳಾ ಎಂಬುದನ್ನ ನಟಿಯೇ ಸ್ಪಷ್ಟಪಡಿಸಬೇಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ

    ಸಿದ್-ಕಿಯಾರಾ ಮದುವೆ, ತೆರೆಮರೆಯಲ್ಲಿ ಭರ್ಜರಿ ತಯಾರಿ

    ಬಾಲಿವುಡ್‌ನಲ್ಲಿ (Bollywood) ಗಟ್ಟಿಮೇಳ ಸೌಂಡ್ ಜೋರಾಗಿದೆ. ಸಿದ್ಧಾರ್ಥ್ (Siddarth Malhotra) ಮತ್ತು ಕಿಯಾರಾ (Kiara Advani)) ಮದುವೆಗೆ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಆದರೂ ಮದುವೆ (Wedding) ಬಗ್ಗೆ ಯಾವುದೇ ಅಪ್‌ಡೇಟ್ ಬಿಟ್ಟು ಕೊಡದೇ ಸೈಲೆಂಟ್ ಆಗಿದ್ದಾರೆ. ಬಿಟೌನ್‌ನ ಕೆಲವೇ ಕೆಲವು ಗಣ್ಯರಿಗೆ ಮಾತ್ರ ಮದುವೆಗೆ ಬರಲು ಆಹ್ವಾನ ನೀಡಿದ್ದಾರೆ.

    ಸಾಕಷ್ಟು ವರ್ಷಗಳಿಂದ ಸಿದ್ ಮತ್ತು ಕಿಯಾರಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದುವರೆಗೂ ಈ ಬಗ್ಗೆ ಮಾತನಾಡದೇ ಸೀಕ್ರೆಟ್ ಮೈನ್‌ಟೈನ್ ಮಾಡ್ತಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ತೆರೆಮರೆಯಲ್ಲಿ ವೇದಿಕೆ ರೆಡಿಯಾಗುತ್ತಿದೆ. 2023ರ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ.

    ಅಧಿಕೃತವಾಗಿ ತಮ್ಮ ಮದುವೆಯ ಬಗ್ಗೆ ಸಿದ್, ಕಿಯಾರಾ ಹೇಳದೇ ಇದ್ದರೂ ಸದ್ಯಕ್ಕೆ ನಿರ್ಮಾಪಕ ಕರಣ್ ಜೋಹರ್ ಮತ್ತು ನಿರ್ಮಾಪಕಿ ಅಶ್ವಿನಿ ವರ್ಧಿ ಅವರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಿದ್ದಾರಂತೆ. ಎರಡು ಕಡೆಯಿಂದ 100 ಜನರಿಗೆ ಮಾತ್ರ ಮದುವೆಗೆ ಹಾಜರಾಗಲಿದ್ದಾರೆ. ಇದನ್ನೂ ಓದಿ: ಮಲಯಾಳಂ ನಟಿಯ ಎಂಟ್ರಿಯಿಂದ ವಿಜಯ್- ಸಂಗೀತಾ ದಾಂಪತ್ಯದಲ್ಲಿ ಬಿರುಕು?

    ಜೈಸಲ್ಮೇರ್ ಪ್ಯಾಲೇಸ್‌ನಲ್ಲಿ ಮದುವೆ ನಡೆಯುತ್ತಿದೆ. ಫೆ.4 ಮತ್ತು 5ರಂದು ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಸಿದ್ಧಾರ್ಥ್, ಕಿಯಾರಾ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆರತಕ್ಷತೆ ಇರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಫೆ.6ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್-ಕಿಯಾರಾ ಜೋಡಿ

    ಫೆ.6ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸಿದ್-ಕಿಯಾರಾ ಜೋಡಿ

    ಬಾಲಿವುಡ್‌ನ (Bollywood) ಮತ್ತೊಂದು ಕ್ಯೂಟ್ ಕಪಲ್ ಸಪ್ತಪದಿ ತುಳಿಯಲು ರೆಡಿಯಾಗಿದ್ದಾರೆ. ಸಿದ್ಧಾರ್ಥ್ (Siddarth) ಮತ್ತು ಕಿಯಾರಾ ಅಡ್ವಾಣಿ (Kiara Advani) ಹೊಸ ವರ್ಷಕ್ಕೆ ಹೊಸ ಬಾಳಿಗೆ ಕಾಲಿಡಲು ನಿರ್ಧರಿಸಿದ್ದಾರೆ.

    ಸಾಕಷ್ಟು ವರ್ಷಗಳಿಂದ ಸಿದ್ ಮತ್ತು ಕಿಯಾರಾ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಇದುವರೆಗೂ ಈ ಬಗ್ಗೆ ಮಾತನಾಡದೇ ಸೀಕ್ರೆಟ್ ಮೈನ್‌ಟೈನ್ ಮಾಡ್ತಿದ್ದಾರೆ. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ತೆರೆಮರೆಯಲ್ಲಿ ವೇದಿಕೆ ರೆಡಿಯಾಗುತ್ತಿದೆ. 2023ರ ಫೆಬ್ರವರಿಯಲ್ಲಿ ಈ ಜೋಡಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ: ಅದೃಷ್ಟದಿಂದಲೇ ಇಷ್ಟು ದಿನ ಬಿಗ್ ಬಾಸ್‌ನಲ್ಲಿದ್ದರು: ದಿವ್ಯಾಗೆ ಸಂಬರ್ಗಿ ಟಾಂಗ್

    ಜೈಸಲ್ಮೇರ್ ಪ್ಯಾಲೇಸ್‌ನಲ್ಲಿ ನಡೆಯುತ್ತಿದೆ. ಫೆ.4 ಮತ್ತು 5ರಂದು ಸಂಗೀತ್ ಮತ್ತು ಮೆಹೆಂದಿ ಕಾರ್ಯಕ್ರಮ ನಡೆಯಲಿದೆ. ಫೆ.6ರಂದು ಗುರುಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ತಿಳಿದು ಬಂದಿದೆ. ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆರತಕ್ಷತೆ ಇರಲಿದೆ.

    Live Tv
    [brid partner=56869869 player=32851 video=960834 autoplay=true]

  • BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ (Tollywood) ಇತ್ತೀಚೆಗೆ ಸಂಚಲನ ಮೂಡಿಸಿದ ವಿಚಾರ ಅಂದರೆ ಪವಿತ್ರಾ (Pavitra) ಮತ್ತು ನರೇಶ್ (Actor Naresh) ಲವ್ವಿ -ಡವ್ವಿ ವಿಚಾರ. ಇದೀಗ ಹೊಸ ವರ್ಷ ಬರುವಿಕೆಯ ಸಂಭ್ರಮದ ವೇಳೆ ತಮ್ಮ ಮದುವೆ ಬಗ್ಗೆ ಈ ಜೋಡಿ ಅನೌನ್ಸ್ ಮಾಡಿದ್ದಾರೆ.

    ಟಾಲಿವುಡ್ ನಟ ನರೇಶ್, ರಮ್ಯಾ ದಾಂಪತ್ಯ ಜೀವನದ ವಿಚಾರ ಬಗ್ಗೆ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಸಂಸಾರದ ಜಗಳ ಬೀದಿಗೆ ಬಂದು ಸದ್ದು ಮಾಡಿತ್ತು. ಪವಿತ್ರಾ ಲೋಕೇಶ್ (Pavitra Lokesh) ಮತ್ತು ನರೇಶ್ ರಿಲೇಷನ್‌ಶಿಪ್ ವಿಚಾರ ಕೂಡ ಚರ್ಚೆಗೆ ಗ್ರಾಸವಾಗಿತ್ತು. ಈಗ ಈ ಎಲ್ಲಾ ವಿವಾದಕ್ಕೂ ಪವಿತ್ರಾ, ನರೇಶ್ ಫುಲ್ ಸ್ಟಾಪ್ ಇಟ್ಟಿದ್ದಾರೆ. ಸಪ್ತಪದಿ ತುಳಿಯಲು ಈ ಜೋಡಿ ಸಜ್ಜಾಗಿದ್ದಾರೆ.

    ಕೇಕ್ ಕಟ್ ಮಾಡಿ, ಸಿಹಿ ಚುಂಬನ ನೀಡುವ ಮೂಲಕ ಯೆಸ್ ನಾವು ಮದುವೆಯಾಗುತ್ತಿದ್ದೇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ನಟ ನರೇಶ್ ಅನೌನ್ಸ್ ಮಾಡಿದ್ದಾರೆ. ಈ ಕುರಿತ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಹೊಸ ವರ್ಷ, ಹೊಸ ಹೆಜ್ಜೆ ನಿಮ್ಮ ಹಾರೈಕೆಯಿರಲಿ ಎಂದು ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ಮದುವೆ ಎಂದು ತಿಳಿಸಿದ್ದಾರೆ.

    ಮದುವೆ ಸುದ್ದಿ ಕೇಳ್ತಿದ್ದಂತೆ ಅಭಿಮಾನಿಗಳು ನರೇಶ್, ಪವಿತ್ರಾಗೆ ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಚನಾ ದಶರಥ್, ಲೋಕೇಶ್ ಬಸವಟ್ಟಿ ಮದುವೆ ಡೇಟ್ ಫಿಕ್ಸ್

    ರಚನಾ ದಶರಥ್, ಲೋಕೇಶ್ ಬಸವಟ್ಟಿ ಮದುವೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್ (Sandalwood) ನಟಿ ರಚನಾ ದಶರಥ್ (Rachana Dashrath) ಮತ್ತು ಲೋಕೇಶ್ ಬಸವಟ್ಟಿ (Lokesh Basavatti) ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದರು. ಇದೀಗ ಮದುವೆಯ (Wedding) ಡೇಟ್ ಅನೌನ್ಸ್ ಮಾಡುವ ಮೂಲಕ ಈ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ನಟಿ ರಚನಾ ದಶರಥ್ ಮಾತನಾಡಿದ್ದಾರೆ.

    ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿರುವ ಕಾರಣ, ರಚನಾ ಮತ್ತು ಲೋಕೇಶ್ ಎಂಗೇಜ್‌ಮೆಂಟ್ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಸಾಕಷ್ಟು ಜನ ಇದು ಲವ್ ಮ್ಯಾರೇಜ್ ಎಂದೇ ಭಾವಿಸಿದ್ದರು. ಆದರೆ ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ನಟಿ ರಚನಾ ಹೇಳಿದ್ದಾರೆ. ಎಂಗೇಜ್‌ಮೆಂಟ್ ಬಳಿಕ ಮದುವೆ ಡೇಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ಕೈಕೊಟ್ಟ ಅದೃಷ್ಟ: ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಔಟ್

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಗೌರಿಪುರದ ಗಯ್ಯಾಳಿಗಳು’ ಎಂಬ ಸೀರಿಯಲ್‌ನಲ್ಲಿ ರಚನಾ ಮತ್ತು ಲೋಕೇಶ್ ಇಬ್ಬರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಚನಾ ನಡೆ, ನುಡಿ ಇಷ್ಟವಾಗಿರುವ ಕಾರಣ ನಟ ಲೋಕೇಶ್ ತಂದೆ, ತಾಯಿ ಮದುವೆ ಬಗ್ಗೆ ಪ್ರಸ್ತಾಪಿಸಿದರಂತೆ ಆದರೆ ನಟಿ ರಚನಾ ನಾನು ನೇಪಾಳಿ ಕುಟುಂಬದ ಹುಡುಗಿ, ನೀವು ಲಿಂಗಾಯತರು ಬೇರೆ ಬೇರೆ ಜಾತಿಯಾಗುತ್ತದೆ. ಈ ವಿಚಾರದಲ್ಲಿ ನನ್ನ ಕುಟುಂಬದ (Family) ನಿರ್ಧಾರವೇ ಅಂತಿಮ ಎಂದಿದ್ದರು ರಚನಾ. ಬಳಿಕ ಎರಡು ಕುಟುಂಬಗಳು ಈ ಮದುವೆಯ ಬಗ್ಗೆ ಮಾತನಾಡಿ, ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ರಚನಾ ಮತ್ತು ಲೋಕೇಶ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಖುಷಿಯಿಂದಲೇ ಮದುವೆಗೆ ರಚನಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇದೀಗ ಲೋಕೇಶ್ ಅವರು ಮೂಲತಃ ಚಾಮರಾಜನಗರದ ಬಸವಟ್ಟಿ ಗ್ರಾಮದವರು. ಹಾಗಾಗಿ ಚಾಮರಾಜನಗರದ ಅನುಭವ ಮಂಟಪದಲ್ಲಿ (Anubava Mantapa) 2023, ಜನವರಿ 26, 27ರಂದು ಮದುವೆ ನಡೆಯಲಿದೆ. ನೇಪಾಳಿ ಮತ್ತು ಲಿಂಗಾಯತ ಪದ್ಧತಿ ಪ್ರಕಾರ ಮದುವೆ ಜರುಗಲಿದೆ. ಗುರುಹಿರಿಯರ ಸಮ್ಮುಖದಲ್ಲಿ ರಚನಾ ಮತ್ತು ಲೋಕೇಶ್ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಒಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿರುವ ಹೊಸ ಜೋಡಿಗೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

    ನಟಿ ರಚನಾ ದಶರಥ್ ಮದುವೆ ನಂತರವೂ ಚಿತ್ರರಂಗದಲ್ಲಿ  ಆಕ್ಟೀವ್‌ ಆಗಿರಲಿದ್ದಾರೆ. ಇನ್ನೂ ರಚನಾ ನಟಸಿರುವ `ಅಗ್ರಸೇನಾ’ ಮತ್ತು ಎಬಿ ಪಾಸಿಟಿವ್ ಚಿತ್ರಗಳು ತೆರೆಗೆ ಅಬ್ಬರಿಸಲು ರೆಡಿಯಾಗಿದೆ.

    ನಟನೆಯಲ್ಲಿ ಆಸಕ್ತಿ ಹೊಂದಿದ್ದ ಲೋಕೇಶ್ ಬಸವಟ್ಟಿ ನಟನಾ ಸಂಸ್ಥೆ ಸೇರಿದರು. ಕೆಲ ನಾಟಕಗಳಲ್ಲಿ ಅಭಿನಯಿಸಿದರು. ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳಾ, ಪಾರ್ವತಿ ಪರಮೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಲೋಕೇಶ್ ಬಸವಟ್ಟಿ ನಟಿಸಿದ್ದಾರೆ. ಪಾರ್ವತಿ ಪರಮೇಶ್ವರ ಸೀರಿಯಲ್‌ನಲ್ಲಿನ ಲಾಯರ್ ಗುಂಡಣ್ಣ ಪಾತ್ರ ಲೋಕೇಶ್ ಬಸವಟ್ಟಿ ಅವರಿಗೆ ಖ್ಯಾತಿ ತಂದುಕೊಡ್ತು. ಚತುರ್ಭುಜ, ಡಿಂಗ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಲೋಕೇಶ್ ಬಸವಟ್ಟಿ ಮಿಂಚಿದ್ದಾರೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

    Live Tv
    [brid partner=56869869 player=32851 video=960834 autoplay=true]

  • ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ತಮಿಳು ನಿರ್ದೇಶಕನ ಜೊತೆ ಸದ್ದಿಲ್ಲದೇ ಮದುವೆಯಾದ ಕನ್ನಡದ ನಟಿ ಧನ್ಯಾ ಬಾಲಕೃಷ್ಣ

    ನ್ನಡದ `ನೋಡಿ ಸ್ವಾಮಿ ನಾವಿರೋದೆ ಹೀಗೆ’, `ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದ ನಟಿ ಧನ್ಯಾ ಬಾಲಕೃಷ್ಣ (Dhanya Balakrishna) ಸದ್ದಿಲ್ಲದೇ ತಮಿಳು ನಿರ್ದೇಶಕ ಬಾಲಾಜಿ ಮೋಹನ್ (Balaji Mohan) ಜೊತೆ ಸಪ್ತಪದಿ ತುಳಿದಿದ್ದಾರೆ. ಈ ಕುರಿತು ಇದೀಗ ಮಾಹಿತಿ ಹೊರಬಿದ್ದಿದೆ.

    ನಟಿ ಧನ್ಯಾ ಮೂಲತಃ ಬೆಂಗಳೂರಿನವರಾಗಿದ್ದು, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡದ ಚಿತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ವರ್ಷದ ಆರಂಭದಲ್ಲೇ ತಮಿಳಿನ ʻಮಾರಿʼ, ʻಮಾರಿ 2ʼ ಖ್ಯಾತಿಯ ನಿರ್ದೇಶಕ ಬಾಲಾಜಿ ಜೊತೆ ಧನ್ಯಾ ಮದುವೆ ಆಗಿದೆ. ಈ ಬಗ್ಗೆ ಅಧಿಕೃತವಾಗಿ ಬಾಲಾಜಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: `ಪೊನ್ನಿಯಿನ್ ಸೆಲ್ವನ್’ ಪಾರ್ಟ್ 2ಗೆ ಡೇಟ್ ಫಿಕ್ಸ್

    ಇನ್ನೂ 2023ರಲ್ಲಿ ಅರುಣಾ (Aruna) ಎಂಬುವವರ ಜೊತೆ ಬಾಲಾಜಿ ಮದುವೆ ಆಗಿತ್ತು. ಆದರೆ ಮದುವೆ ಆಗಿ ಒಂದೇ ವರ್ಷಕ್ಕೆ ಈ ಸಂಬಂಧ ಮುರಿದು ಬಿತ್ತು. ಇಬ್ಬರು ಡಿವೋರ್ಸ್ ಪಡೆದರು. ಜನವರಿ 23ರಂದು ಈ ವರ್ಷ ಧನ್ಯಾ ಜೊತೆ ಬಾಲಾಜಿ ಎರಡನೇ ಮದುವೆ ಆಗಿದ್ದಾರೆ. ಇಲ್ಲಿಯವರೆಗೆ ರಿವೀಲ್ ಆಗದ ಈ ಮದುವೆ ಸುದ್ದಿ ಚರ್ಚೆಗೆ ಬಂದಿರುವುದಕ್ಕೆ ಕಾರಣ ನಟಿ ಕಲ್ಪಿಕಾ ಗಣೇಶ್.

    ಇತ್ತೀಚೆಗೆ ನಟಿ ಕಲ್ಪಿಕಾ (Kalpika Ganesh) ತಮ್ಮ ಯೂಟ್ಯೂಬ್‌ನಲ್ಲಿ ಧನ್ಯಾ ಮತ್ತು ಬಾಲಾಜಿ ಮದುವೆ ಆಗಿರುವ ಬಗ್ಗೆ ಮಾತನಾಡಿದ್ದರು. ಬಳಿಕ ಈ ಸುದ್ದಿ ಎಲ್ಲೆಡೆ ಚರ್ಚೆಗೆ ಗ್ರಾಸವಾಯಿತು. ಇದನ್ನ ಗಂಭೀರವಾಗಿ ಪರಿಗಣಿಸಿ, ಬಾಲಾಜಿ ಮೋಹನ್ ಕೋರ್ಟ್ ಮೆಟ್ಟಿಲೇರಿದ್ದಾರೆ. ನಟಿ ಕಲ್ಪಿಕಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

    ಈ ಬಗ್ಗೆ ಅರ್ಜಿಯನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶ ಸೆಂಥಿಲ್ ಕುಮಾರ್ ರಾಮಮೂರ್ತಿ, ನಿರ್ದೇಶಕ ಬಾಲಾಜಿ ವೈಯಕ್ತಿಕ ಜೀವನದ ಬಗ್ಗೆ ಕಾಮೆಂಟ್ ಮಾಡುವುದನ್ನು ಕಲ್ಪಿಕಾ ನಿಲ್ಲಿಸಬೇಕು ಎಂದು ಆದೇಶ ನೀಡಿದ್ದಾರೆ. ಈ ಜೊತೆಗೆ ಈ ಪ್ರಕರಣದ ತೀರ್ಪನ್ನು 2023ರ ಜನವರಿ 23ಕ್ಕೆ ನೀಡುವುದಾಗಿ ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್‌ಗಾಗಿ ಬೇಡಿಕೆಯಿಟ್ಟ ದಿವ್ಯಾ ಉರುಡುಗ

    ದೊಡ್ಮನೆಯಲ್ಲಿ ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಹಾಗಾಗಿ ಸ್ಪರ್ಧಿಗಳಿಗೆ ವಿಶೇಷ ಅವಕಾಶವೊಂದನ್ನ ಬಿಗ್ ಬಾಸ್ (Bigg Boss) ನೀಡಿದ್ದಾರೆ. ಸ್ಪರ್ಧಿಗಳ ಒಂದು ಆಸೆಯನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆ.

    ಬಿಗ್ ಬಾಸ್ ಸೀಸನ್‌ 9ರ ಫಿನಾಲೆಗೆ ನಾಲ್ಕು ದಿನ ಬಾಕಿಯಿದೆ. ಈ ಅಂತಿಮ ಹಂತದಲ್ಲಿ ಬಿಗ್ ಬಾಸ್ ಮನೆಯಲ್ಲಿ ಪೂರೈಸದೇ ಉಳಿದ ಆಸೆಯನ್ನ ಪೂರೈಸುವ ಭರವಸೆಯನ್ನು ಬಿಗ್ ಬಾಸ್ ನೀಡಿದ್ದಾರೆ. ಅವುಗಳ ಪೈಕಿ ಸಾಧ್ಯವಿರುವ ಒಂದು ಆಸೆಯನ್ನು ಬಿಗ್ ಬಾಸ್ ಪೂರೈಸುತ್ತಾರೆ. ಒಬ್ಬಬ್ಬರಾಗಿ ತಮ್ಮ ಆಸೆಗಳನ್ನ ಸ್ಪರ್ಧಿಗಳು ಬಿಚ್ಚಿಟ್ಟಿದ್ದಾರೆ. ಈ ವೇಳೆ ದಿವ್ಯಾ (Divya Uruduga) ಇಟ್ಟಿರುವ ಬೇಡಿಕೆ ವೀಕ್ಷಕರಿಗೆ ಖುಷಿ ಕೊಟ್ಟಿದೆ.‌ ಇದನ್ನೂ ಓದಿ: ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ಪ್ರತಿಯೊಬ್ಬರು ಆಕ್ಟಿವಿಟಿ ರೂಮಿಗೆ ತೆರಳಿ, ಅಲ್ಲಿರುವ ಆಶಾ ಭಾವಿಯ ಎದುರು ತಮ್ಮ ಮೂರು ಆಸೆಗಳನ್ನ ಕೋರಿಕೊಂಡು ಆ ನಾಣ್ಯವನ್ನು ಭಾವಿಯೊಳಗೆ ಎಸೆಯಬೇಕು. ಅದರಂತೆ ಎಲ್ಲಾ ಸ್ಪರ್ಧಿಗಳು ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ವೇಳೆ ದಿವ್ಯಾ, ಮನೆಯೊಳಗೆ ಜಾತ್ರೆ ನಡೆಯಬೇಕು. ಸುದೀಪ್ ಸರ್ (Kiccha Sudeep) ಮನೆಯೊಳಗೆ ಬಂದು ಅಡುಗೆ ಮಾಡಿ. ಅವರೊಂದಿಗೆ ಊಟ ಮಾಡಬೇಕು. ಹಾಗೆಯೇ ಬಿಗ್ ಬಾಸ್ 8ರ ದಿವ್ಯಾ ಸಹಸ್ಪರ್ಧಿ ಅರವಿಂದ್ ಕೆ.ಪಿ (Aravind Kp) ಮನೆಯೊಳಗೆ ಬರಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮನವಿ ಮಾಡಿ, ಬಾವಿಯೊಳಗೆ ನಾಣ್ಯವನ್ನ ಎಸೆದಿದ್ದಾರೆ. ಈ ಎಲ್ಲದರ ಪೈಕಿ ಬಿಗ್ ಬಾಸ್ ಯಾರ ಆಸೆಯನ್ನು ಪೂರೈಸುತ್ತಾರೆ ಎಂಬುದನ್ನ ಕಾದುನೋಡಬೇಕಿದೆ.

    ಬಿಗ್ ಬಾಸ್ ಸೀಸನ್ 8ರಲ್ಲಿ ಅರವಿಂದ್ ಮತ್ತು ದಿವ್ಯಾ ಕಾಣಿಸಿಕೊಂಡಿದ್ದರು. ಈ ಶೋನಿಂದ ಪರಿಚಯವಾದ ಸ್ನೇಹ, ಪ್ರೇಮಕ್ಕೆ ತಿರುಗಿದೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದೆ.

    Live Tv
    [brid partner=56869869 player=32851 video=960834 autoplay=true]