Tag: wedding

  • ಫೆ.16ರಂದು ಹಸೆಮಣೆ ಏರಲು ಸಜ್ಜಾದ ‘ಪಾರು’ ನಟಿ ಮಾನಸಿ ಜೋಶಿ

    ಫೆ.16ರಂದು ಹಸೆಮಣೆ ಏರಲು ಸಜ್ಜಾದ ‘ಪಾರು’ ನಟಿ ಮಾನಸಿ ಜೋಶಿ

    ‘ಪಾರು’ (Paaru Serial) ಸೀರಿಯಲ್‌ನಲ್ಲಿ ವಿಲನ್ ಆಗಿ ಗಮನ ಸೆಳೆದ ನಟಿ ಮಾನಸಿ ಜೋಶಿ (Mansi Joshi) ಅವರು ದಾಂಪತ್ಯ (Wedding) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಮೂಲಕ ನಟಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದನ್ನೂ ಓದಿ:ಪ್ರಯಾಗ್‌ರಾಜ್‌ನಿಂದ ಕಾಶಿಗೆ ಬಂದ ರಾಜ್ ಬಿ ಶೆಟ್ಟಿ, ಆ್ಯಂಕರ್ ಅನುಶ್ರೀ

     

    View this post on Instagram

     

    A post shared by Mansi Joshi (@mansi._.joshi)

    ಕಳೆದ ವರ್ಷ ನಟಿ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಇದೀಗ ಇದೇ ಫೆ.16ರಂದು ರಾಘವ್ ಜೊತೆ ನಟಿ ಮದುವೆಗೆ ರೆಡಿಯಾಗಿದ್ದಾರೆ. ಬೆಂಗಳೂರಿನಲ್ಲಿ ಈ ಮದುವೆ ಜರುಗಲಿದೆ. ಸದ್ಯ ಸ್ಪೆಷಲ್ ಪ್ರೀ ವೆಡ್ಡಿಂಗ್ ಫೋಟೋಶೂಟ್ ಮೂಲಕ ನಟಿ ಡೇಟ್ ರಿವೀಲ್ ಮಾಡಿದ್ದಾರೆ. ಸೇವ್ ದಿ ಡೇಟ್ ಎಂದಿದ್ದಾರೆ.

     

    View this post on Instagram

     

    A post shared by Mansi Joshi (@mansi._.joshi)

    ಈ ಮದುವೆಗೆ ‘ಬಿಗ್ ಬಾಸ್’ ಖ್ಯಾತಿಯ ಮೋಕ್ಷಿತಾ ಪೈ (Mokshitha Pai), ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕರಿಗೆ ಮದುವೆಗೆ ಆಹ್ವಾನ ನೀಡಿದ್ದಾರೆ. ಇನ್ನೂ ಹೊಸ ಬದುಕಿಗೆ ಕಾಲಿಡುತ್ತಿರುವ ನಟಿಗೆ ಫ್ಯಾನ್ಸ್ ಶುಭಕೋರಿದ್ದಾರೆ.

  • BBK 11: ನಾನು ಮದುವೆಗೆ ರೆಡಿ, ಹುಡುಗಿ ಹುಡುಕಿ: ಅಪ್ಪನಿಗೆ ಮಾತು ಕೊಟ್ಟ ಮಂಜು

    BBK 11: ನಾನು ಮದುವೆಗೆ ರೆಡಿ, ಹುಡುಗಿ ಹುಡುಕಿ: ಅಪ್ಪನಿಗೆ ಮಾತು ಕೊಟ್ಟ ಮಂಜು

    ‘ಬಿಗ್‌ ಬಾಸ್‌ ಕನ್ನಡ 11’ರ (Bigg Boss Kannada 11) ಆಟ ಮುಗಿಯಲು ಕೌಂಟ್‌ಡೌನ್‌ ಶುರುವಾಗಿದೆ. ಸುದೀಪ್‌ ಅವರು ಗ್ರ್ಯಾಂಡ್‌ ಆಗಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಇದೆಲ್ಲದರ ನಡುವೆ ಫಿನಾಲೆಯಲ್ಲಿ ಮಂಜು ಮದುವೆ (Wedding) ಬಗ್ಗೆ ಚರ್ಚೆ ನಡೆದಿದೆ. ಸುದೀಪ್‌ ಮುಂದೆ ಅಪ್ಪನಿಗೆ ಮದುವೆಯಾಗುವುದಾಗಿ ಮಂಜು ಮಾತು ಕೊಟ್ಟಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್‌ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ

    ಫಿನಾಲೆಯಲ್ಲಿ ಉಗ್ರಂ ಮಂಜುಗಾಗಿ ಅವರ ತಂದೆ ಬಿಗ್ ಬಾಸ್ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಮಗನಿಗಾಗಿ ಕುಣಿದು ಕುಪ್ಪಳಿಸಿದ್ದಾರೆ. ನಿಮ್ಮ ತಂದೆ ನಿನಗಾಗಿ ಡ್ಯಾನ್ಸ್ ಮಾಡಿ ಗಿಫ್ಟ್ ಕೊಟ್ಟಿದ್ದಾರೆ. ನೀನು ಅಪ್ಪನಿಗೆ ಏನು ಗಿಫ್ಟ್ ಕೊಡುತ್ತೀರ ಎಂದು ಸುದೀಪ್ (Sudeep) ಅವರು ಮಂಜು ಅನ್ನು ಪ್ರಶ್ನೆ ಮಾಡಿದರು. ಅದಕ್ಕೆ ಮಂಜು, ಮದುವೆ ಆಗ್ತೀನಿ ಹುಡುಗಿ ಹುಡುಕಪ್ಪ ಎಂದರು. ಅದಕ್ಕೆ ಮಂಜು ಅವರ ತಂದೆ, ನಾವು ಮದುವೆಗೆ ರೆಡಿ ಇದ್ದೀನಿ. ಯಾರನ್ನಾದರೂ ಪ್ರೀತಿಸಿದ್ದರೆ ಹೇಳು ಅವರೊಟ್ಟಿಗೆ ಮದುವೆ ಮಾಡೋಣ ಎಂದರು.

    ಮುಂಚೆ ಪ್ರೀತಿಸಿದ್ದೆ ಆದರೆ ಈಗ ಇಲ್ಲ ಎಂದು ಉತ್ತರಿಸಿದರು ಮಂಜು. ಆ ವಿಷಯ ತಮಗೂ ಗೊತ್ತೆಂದು ಮಂಜು ಅವರ ತಂದೆ. ಆದರೆ ಆಗ ನಾನೇ ಬೇಡ ಅಂದಿದ್ದೆ. ಮೂರು ಜನ ಹೆಣ್ಣು ಮಕ್ಕಳಿದ್ದಾರೆ. ಮೊದಲು ಅವರ ಮದುವೆ ಆಗಬೇಕು ಅದಾದ ಮೇಲೆ ನೋಡೋಣ ಎಂದಿದ್ದೆ. ಹೆಣ್ಣು ಮಕ್ಕಳ ಮದುವೆ ಮಾಡಿ ಮುಗಿಸುವಷ್ಟರಲ್ಲಿ ಆ ಹುಡುಗಿಯ ಮದುವೆ ಆಗಿ ಹೋಗಿತ್ತು. ಅದಾದ ಮೇಲೆ ಎಷ್ಟು ಬಾರಿ ಸಂಬಂಧಗಳನ್ನು ನೋಡಿ ಬಂದರೂ ಎಲ್ಲರನ್ನೂ ಬೇಡ ಬೇಡ ಎನ್ನುತ್ತಲೇ ಇದ್ದ ಎಂದರು ಉಗ್ರಂ ಮಂಜು ಅವರ ತಂದೆ.

  • ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ: ಜಾನ್ವಿ ಕಪೂರ್

    ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ: ಜಾನ್ವಿ ಕಪೂರ್

    ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಅವರು ತಿರುಮಲದಲ್ಲಿ ಮದುವೆಯಾಗುವ (Wedding) ಪ್ಲ್ಯಾನ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಮಾತನಾಡಿ, ಮದುವೆಯ ಬಳಿಕ 3 ಮಕ್ಕಳೊಂದಿಗೆ ತಿರುಮಲದಲ್ಲಿ ಸೆಟಲ್ ಆಗುವ ಆಸೆ ಇದೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ:ಚಲನಚಿತ್ರ ರಾಜ್ಯ ಪ್ರಶಸ್ತಿ ನಿರಾಕರಿಸಿದ ನಟ ಸುದೀಪ್‌

    ಹಿರಿಯ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಅವರು ಕೂಡ ತಿರುಮಲ ತಿಮ್ಮಪ್ಪನ ಭಕ್ತೆಯಾಗಿದ್ದಾರೆ. ತಿಮ್ಮಪ್ಪ ದೇವರಲ್ಲಿ ಅಪಾರ ನಂಬಿಕೆ ಹೊಂದಿದ್ದಾರೆ. ಆಗಾಗ ನಟಿ ತಿರುಪತಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ಇದೀಗ ಜಾನ್ವಿ ಮದುವೆಯಾಗಿ ತಿರುಪತಿಯಲ್ಲೇ ನೆಲೆಸುವ ಆಸೆಯಿದೆ ಎಂದಿದ್ದಾರೆ.

    ಕರಣ್ ಜೋಹರ್ ಶೋನಲ್ಲಿ ಮಾತಾಡಿದ ಜಾನ್ವಿ, ಮದುವೆಯಾಗಿ ತಿರುಮಲದಲ್ಲಿ ಪತಿಯೊಂದಿಗೆ ಸೆಟಲ್ ಆಗ್ತೀನಿ ಎಂದಿದ್ದಾರೆ. ಮದುವೆ ಬಳಿಕ 3 ಮಕ್ಕಳೊಂದಿಗೆ ನೆಮ್ಮದಿಯಿಂದ ಬದುಕುವಾಸೆ ಇದೆ. ತಿರುಪತಿ ತಿರುಮಲದಲ್ಲಿ ಸೆಟಲ್ ಆಗಿ ದಿನವೂ ಬಾಳೆ ಎಲೆ ಊಟ ಮಾಡಬೇಕು ಎಂದು ಮನದಾಳದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

    ಗೋವಿಂದಾ ಗೋವಿಂದಾ ಎಂದು ಸ್ಮರಿಸಬೇಕು. ಮಣಿರತ್ನಂ ಅವರ ಸಿನಿಮಾಗಳ ಸಂಗೀತವನ್ನ ಕೇಳುತ್ತಾ ದಿನ ಕಳೆಯುವೆ ಎಂದು ನಟಿ ಹೇಳಿದ್ದಾರೆ. ಶಿಖರ್‌ ಪಹಾರಿಯಾ ಜೊತೆ ಜಾನ್ವಿ ಡೇಟಿಂಗ್‌ ವಿಚಾರ ಸಾಕಷ್ಟು ಭಾರೀ ಕೇಳಿ ಬಂದಿದೆ. ಇಬ್ಬರೂ ಜೊತೆಯಾಗಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಮದುವೆ ಬಳಿಕ ಜಾನ್ವಿ ನಟನೆಗೆ ಗುಡ್ ಬೈ ಹೇಳ್ತಾರಾ? ಎಂಬ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

  • BBK 11: ಗೆದ್ದರೆ ಅತ್ತೆ ಮನೆಗೆ ಹೋಗಿ ಹುಡುಗಿ ಕೇಳುತ್ತೇನೆ: ಹನುಮಂತ

    BBK 11: ಗೆದ್ದರೆ ಅತ್ತೆ ಮನೆಗೆ ಹೋಗಿ ಹುಡುಗಿ ಕೇಳುತ್ತೇನೆ: ಹನುಮಂತ

    ಬಿಗ್‌ ಬಾಸ್‌ ಮನೆಯಲ್ಲಿ ಹನುಮಂತ (Hanumantha) ಉತ್ತಮವಾಗಿ ಆಟ ಆಡುತ್ತಾ ಜನರ ಮನಗೆದ್ದಿದ್ದಾರೆ. ಫಿನಾಲೆ ವಾರಕ್ಕೆ ಮೊದಲ ಸ್ಪರ್ಧಿಯಾಗಿ ಈಗಾಗಲೇ ಎಂಟ್ರಿ ಕೊಟ್ಟಿರುವ ಹನುಮಂತ ಮೇಲೆ ಫ್ಯಾನ್ಸ್ ಅವರೇ ಗೆಲ್ಲಬಹುದು ಎಂದು ಭರವಸೆ ಇಟ್ಟುಕೊಂಡಿದ್ದಾರೆ. ಹೀಗಿರುವಾಗ ಗೆಳೆಯ ಧನರಾಜ್‌ (Dhanraj Achar) ಬಳಿ ಬಿಗ್‌ ಬಾಸ್‌ ಶೋ ಮುಗಿದ ಮೇಲೆ ಮದುವೆ (Wedding) ಪ್ಲ್ಯಾನ್‌ ಬಗ್ಗೆ ಹನುಮಂತ ಮೌನ ಮುರಿದಿದ್ದಾರೆ. ‘ಬಿಗ್‌ ಬಾಸ್‌’ ಟ್ರೋಫಿ ಗೆದ್ದರೆ ಅತ್ತೆ ಮನೆಗೆ ಹೋಗಿ ಮದುವೆಗೆ ಹೆಣ್ಣು ಕೇಳ್ತೀನಿ ಎಂದು ಮಾತನಾಡಿದ್ದಾರೆ.

    ಧನರಾಜ್ ಬಳಿ ಆಟದ ಬಗ್ಗೆ ಹನುಮಂತ ಚರ್ಚಿಸುತ್ತಾ, ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ತಾವು ಆಟ ಆಡಿರುವುದರ ಬಗ್ಗೆ ತಮಗೆ ನೆಮ್ಮದಿ ಇದೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಮುಂದಿನ ಪ್ಲ್ಯಾನ್ ಬಗ್ಗೆಯೂ ಮಾತನಾಡಿದ್ದಾರೆ. ಇಷ್ಟು ದಿನ ಚೆನ್ನಾಗಿ ಆಟ ಆಡಿದ್ದೇನೆ. ಒಂದು ವೇಳೆ ಔಟ್ ಆದರೆ ಖುಷಿಯಿಂದ ಹೊರಗೆ ಹೋಗುತ್ತೇನೆ. ಗೆದ್ದರೆ ನಮ್ಮ ಅತ್ತೆ ಮನೆಯ ಮುಂದೆ ಹೋಗಿ ನಿಲ್ಲುತ್ತೇನೆ. ಹುಡುಗಿ ಯಾಕೆ ಕೊಡಲ್ಲ ಅಂತ ಕೇಳುತ್ತೇನೆ ಎಂದು ಹನುಮಂತ (Hanumantha) ಮದುವೆ ಪ್ಲ್ಯಾನ್ ತಿಳಿಸಿದ್ದಾರೆ. ಇದನ್ನೂ ಓದಿ:ಸೈಫ್ ಅಲಿ ಖಾನ್ ಮೇಲಿನ ಹಲ್ಲೆಯಿಂದ ಶಾಕ್ ಆಗಿದೆ – ರಾಯಚೂರಿನಲ್ಲಿ ನಟಿ ಶಿಲ್ಪಾ ಶೆಟ್ಟಿ ಹೇಳಿಕೆ

    ಇನ್ನೂ ಅವರ ಆಸೆ ಈಡೇರುತ್ತೋ ಇಲ್ಲವೋ ಎಂಬುದನ್ನು ತಿಳಿಯುವ ಕೌತುಕ ಅಭಿಮಾನಿಗಳಲ್ಲಿ ಇದೆ. ಕೆಲವು ವಾರಗಳ ಹಿಂದೆ ಬಿಗ್ ಬಾಸ್ ಮನೆಗೆ ಹನುಮಂತ ಅವರ ತಂದೆ ತಾಯಿ ಬಂದಿದ್ದರು. ಆಗ ತಮ್ಮ ಸೊಸೆ ಹೇಗೆ ಇರಬೇಕು? ಎಂದು ಹನುಮಂತ ಅವರ ತಾಯಿ ಹೇಳಿದ್ದರು. ನಮ್ಮ ಮನೆಯ ಪದ್ಧತಿಯಂತೆಯೇ ಇರಬೇಕು ಎಂದು ದೊಡ್ಮನೆಯಲ್ಲಿ ಹನುಮಂತನ ಮುಂದೆ ಮಾತನಾಡಿದ್ದರು.

    ವೈಲ್ಡ್‌ ಕಾರ್ಡ್‌ ಎಂಟ್ರಿಯಾಗಿ ಬಿಗ್‌ ಬಾಸ್‌ಗೆ ಹನುಮಂತ ಬಂದಿದ್ದರೂ ಕೂಡ ಇತರೆ ಸ್ಪರ್ಧಿಗಳಿಗೆ ಠಕ್ಕರ್‌ ಕೊಟ್ಟು ಫಿನಾಲೆ ವಾರಕ್ಕೆ ಹೋಗಿದ್ದಾರೆ. ಇನ್ನೂ ಅಭಿಮಾನಿಗಳ ಆಸೆಯಂತೆ ಬಿಗ್‌ ಬಾಸ್‌ (Bigg Boss)  ಟ್ರೋಫಿ ಅವರ ಪಾಲಾಗುತ್ತಾ? ಎಂದು ಕಾಯಬೇಕಿದೆ.

  • ರಮ್ಯಾಗೆ ಮದುವೆಯ ಆಮಂತ್ರಣ ನೀಡಿದ ಡಾಲಿ

    ರಮ್ಯಾಗೆ ಮದುವೆಯ ಆಮಂತ್ರಣ ನೀಡಿದ ಡಾಲಿ

    ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ (Wedding) ಕಾಲಿಡಲು ಸಜ್ಜಾಗಿರುವ ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್‌ (Daali Dhananjay) ನಟಿ ರಮ್ಯಾಗೆ ಮದುವೆಯ ಆಮಂತ್ರಣ ಪತ್ರಿಕೆ ನೀಡಿದ್ದಾರೆ.

    ಇಂದು (ಶನಿವಾರ) ರಮ್ಯಾ ಅವರನ್ನು ಭೇಟಿಯಾಗಿ ಆಮಂತ್ರಣ ಪತ್ರಿಕೆ ನೀಡಿದ್ದಾರೆ. ಅಲ್ಲದೇ ಫೋಟೋವನ್ನು ರಮ್ಯಾಗೆ ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಟ್ಯಾಗ್‌  ಮಾಡಿ ಧನಂಜಯ್‌ ಹಂಚಿಕೊಂಡಿದ್ದಾರೆ. ಇದಕ್ಕೆ ಎಕ್ಸೈಟೆಡ್ ಫಾರ್ ಯುವರ್ ವೆಡ್ಡಿಂಗ್ ಧನಂಜಯ್ ಎಂದು ನಟಿ ಬರೆದುಕೊಂಡಿದ್ದಾರೆ.

    ಫೆ.16ರಂದು ಡಾಲಿ ಮದುವೆ ಹಿನ್ನೆಲೆ ಸ್ಯಾಂಡಲ್ ವುಡ್ ನಟ, ನಟಿಯರು ಹಾಗೂ ರಾಜಕೀಯ ಗಣ್ಯರಿಗೆ ಈಗಾಗಲೇ ಡಾಲಿ ಮದುವೆ ಆಮಂತ್ರಣ ನೀಡಿದ್ದಾರೆ. ಸದ್ಯ ಸಿನಿಮಾ ಕೆಲಸಕ್ಕೆ ಬ್ರೇಕ್ ನೀಡಿ ಮದುವೆ ತಯಾರಿಯಲ್ಲಿ ಬ್ಯುಸಿಯಾಗಿದ್ದಾರೆ.

    ಈಗಾಗಲೇ ಮಾಜಿ ಪಿಎಂ ದೇವೇಗೌಡ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಸೇರಿದಂತೆ ಅನೇಕರಿಗೆ ಮದುವೆಗೆ ಆಹ್ವಾನಿಸಿದ್ದಾರೆ.

  • ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik

    ಹಸೆಮಣೆ ಏರಿದ ‘ಸರಿಯಾಗಿ ನೆನಪಿದೆ ನನಗೆ’ ಗಾಯಕ Armaan Malik

    ‘ಮುಂಗಾರು ಮಳೆ 2′ (Mungarumale 2) ಚಿತ್ರದ ‘ಸರಿಯಾಗಿ ನೆನಪಿದೆ ನನಗೆ’ ಖ್ಯಾತಿಯ ಗಾಯಕ ಅರ್ಮಾನ್ ಮಲಿಕ್ (Armaan Malik) ಇಂದು (ಜ.2) ಹಸೆಮಣೆ ಏರಿದ್ದಾರೆ. ಮದುವೆಯ ಸುಂದರ ಫೋಟೋಗಳನ್ನು ಗಾಯಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಕುಟುಂಬಸ್ಥರ ಸಮ್ಮುಖದಲ್ಲಿ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜೊತೆ ಅರ್ಮಾನ್ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಗುಟ್ಟಾಗಿ ಮದುವೆಯಾಗುವ ಮೂಲಕ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಆಶ್ನಾ ಜೊತೆಗಿನ ಫೋಟೋ ಶೇರ್ ಮಾಡಿ ‘ನೀನೇ ನನ್ನ ಮನೆ’ ಎಂದು ಗಾಯಕ ಅಡಿಬರಹ ನೀಡಿದ್ದಾರೆ.

     

    View this post on Instagram

     

    A post shared by ARMAAN MALIK (@armaanmalik)

    ಆಶ್ನಾ ಕೇಸರಿ ಬಣ್ಣದ ಉಡುಗೆಯಲ್ಲಿ ಮಿಂಚಿದ್ರೆ, ಅರ್ಮಾನ್‌ ಲೈಟ್‌ ಬಣ್ಣ ಶೆರ್ವಾನಿಯಲ್ಲಿ ಧರಿಸಿದ್ದಾರೆ. ಖುಷಿ ಖುಷಿಯಾಗಿ ಹೊಸ ಬಾಳಿಗೆ ಕಾಲಿಟ್ಟಿರುವ ಅರ್ಮಾನ್ ದಂಪತಿಯ ಫೋಟೋ ನೋಡಿ ಫ್ಯಾನ್ಸ್, ಸೆಲೆಬ್ರಿಟಿಗಳು ಶುಭಕೋರುತ್ತಿದ್ದಾರೆ. ಅಂದಹಾಗೆ, ಕಳೆದ ವರ್ಷ ಆಶ್ನಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ರಿಲೇಷನ್‌ಶಿಪ್‌ನಲ್ಲಿ ಇರೋದಾಗಿ ಸಿಂಗರ್ ರಿವೀಲ್ ಮಾಡಿದರು.

    ಇನ್ನೂ ಬಹುಭಾಷೆಗಳಲ್ಲಿ ಹಾಡಿ ಸೈ ಎನಿಸಿಕೊಂಡಿರುವ ಗಾಯಕ ಅರ್ಮಾನ್ ಕನ್ನಡದಲ್ಲಿ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಡಿದ್ದಾರೆ.

  • ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ಶಿಶಿರ್‌ ತುಂಬಾ ಒಳ್ಳೆಯ ವ್ಯಕ್ತಿ: ಮದುವೆ ಬಗ್ಗೆ Bigg Boss ಐಶ್ವರ್ಯಾ ರಿಯಾಕ್ಷನ್‌

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟಕ್ಕೆ ತೆರೆ ಬೀಳಲು ಇನ್ನೇನು ಕೆಲವೇ ದಿನಗಳು ಬಾಕಿಯಿವೆ. ಈ ವಾರಾಂತ್ಯ ಐಶ್ವರ್ಯಾ ಶಿಂಧೋಗಿ ದೊಡ್ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಇನ್ನೂ ಬಿಗ್ ಬಾಸ್‌ನಲ್ಲಿ ಶಿಶಿರ್ ಶಾಸ್ತ್ರಿ ಜೊತೆ ಉತ್ತಮ ಒಡನಾಟ ಹೊಂದಿದ್ದ ಐಶ್ವರ್ಯಾ ಮದುವೆ ಕುರಿತಯ ಮಾತನಾಡಿದ್ದಾರೆ. ಶಿಶಿರ್ (Shishir Shastry) ಮನೆ ಕಡೆಯಿಂದ ಮದುವೆ ಪ್ರಪೋಸಲ್ ಬಂದ್ರೆ ಐಶ್ವರ್ಯಾ ರಿಯಾಕ್ಷನ್ ಏನು? ಎಂಬುದನ್ನು ಮಾತನಾಡಿದ್ದಾರೆ.

    ನನ್ನ ಮತ್ತು ಶಿಶಿರ್ ಮಧ್ಯೆ ಇರೋದು ಜೆನ್ಯೂನ್ ಆಗಿರುವಂತಹ ಫ್ರೆಂಡ್‌ಶಿಪ್. ಅದು ಬಿಟ್ಟು ಇನ್ನೇನು ಇಲ್ಲ. ನಾವಿಬ್ಬರೂ 2016ರಲ್ಲಿ ಒಟ್ಟಿಗೆ ಮೂವಿ ಮಾಡಿದ್ದೇವೆ. ಅಲ್ಲಿಂದ ನಾವಿಬ್ಬರಿಗೂ ಪರಿಚಯ ಆಗಿತ್ತು. ಆವಾಗ ಶಿಶಿರ್ ಅವರ ವ್ಯಕ್ತಿತ್ವ ಹೇಗಿತ್ತೋ, ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಬಂದಾಗಲೂ ಹಾಗೇ ಇತ್ತು. ಅದರ ನಂತರ ನಮಗೆ ಫೋನ್ ಸಂಪರ್ಕ ಏನು ಇರಲಿಲ್ಲ. ಬಿಗ್ ಬಾಸ್‌ಗೆ ಬಂದ್ಮೇಲೆಯೇ ಮತ್ತೆ ಪರಿಚಯ ಆಯ್ತು. ನನಗೆ ಅವರು ಸ್ಟ್ರಾಂಗ್ ಎಮೋಷನಲಿ ಬೆಂಬಲ ಕೊಟ್ಟಿದ್ದಾರೆ ಎಂದು ನಟಿ ತಿಳಿಸಿದ್ದಾರೆ. ಇದನ್ನೂ ಓದಿ:ನನ್ನ ಮನಸ್ಸಿಗೆ ನೋವು ಮಾಡಬೇಡಿ: ಫ್ಯಾನ್ಸ್‌ಗೆ ಶಾಕ್ ಕೊಟ್ಟ ಯಶ್

    ನನಗೆ ಹಲವಾರು ಕಡೆ ಅನ್ಯಾಯ ಆದಾಗ ನನ್ನ ಪರ ಶಿಶಿರ್ ನಿಂತಿದ್ದಾರೆ. ಅಷ್ಟು ಬಿಟ್ಟರೇ ನಮ್ಮ ನಡುವೆ ಏನಿಲ್ಲ. ಶಿಶಿರ್ ನನಗೆ ಕ್ಲೋಸ್ ಫ್ರೆಂಡ್ ಆಗಿದ್ದಾರೆ. ಫ್ಯಾನ್ಸ್‌ಗೆ ಬೇಸರ ಆಗಿದ್ರೆ ಸಾರಿ, ಅವರು ತುಂಬಾ ಒಳ್ಳೆಯ ವ್ಯಕ್ತಿ ಎಂದು ಐಶ್ವರ್ಯಾ ಶಿಂಧೋಗಿ (Aishwarya Shindogi) ಮಾತನಾಡಿದ್ದಾರೆ.

  • ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ಮದುವೆಯಾದ ವರ

    ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ಮದುವೆಯಾದ ವರ

    -ವರನ ವಿರುದ್ಧ ಮದುವೆಯಾಗಬೇಕಿದ್ದ ಯುವತಿ ದೂರು

    ಲಕ್ನೋ: ಮದುವೆಯಲ್ಲಿ ರೋಟಿ ಹಂಚಲು ತಡಮಾಡಿದ್ದಕ್ಕೆ ಬೇರೆ ಯುವತಿಯನ್ನು ವರ ಮದುವೆಯಾಗಿರುವ ವಿಚಿತ್ರ ಘಟನೆ ಉತ್ತರ ಪ್ರದೇಶದ (Uttar Pradesh) ಚಂದೌಲಿ ಜಿಲ್ಲೆಯ (Chandauli District) ಹಮೀದ್‌ಪುರ (Hamidpur) ಗ್ರಾಮದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ.

    ಊಟ ಬಡಿಸಲು ತಡವಾದ ಕಾರಣಕ್ಕೆ ವರನು ತನ್ನ ಮದುವೆಯಿಂದ ಹೊರನಡೆದು ಬೇರೆ ಯುವತಿಯೊಂದಿಗೆ ಮದುವೆಯಾಗಿದ್ದಾನೆ. ಇದನ್ನು ತಿಳಿದ ವಧು ಆತನ ವಿರುದ್ಧ ದೂರು ದಾಖಲಿಸಿದ್ದಾಳೆ.ಇದನ್ನೂ ಓದಿ: Mandya | ಠಾಣೆಯಲ್ಲೇ ಪೊಲೀಸ್ ಪೇದೆ ಮೇಲೆ ವ್ಯಕ್ತಿಯಿಂದ ಹಲ್ಲೆ

    ಏಳು ತಿಂಗಳ ಹಿಂದೆ ಮೆಹ್ತಾಬ್ ಎಂಬ ಯುವಕನೊಂದಿಗೆ ವಧುವಿನ ವಿವಾಹ ನಿಶ್ಚಯವಾಗಿತ್ತು. ಡಿ.22 ರಂದು ಕಾರ್ಯಕ್ರಮಗಳು ಪ್ರಾರಂಭವಾಗಿದ್ದವು. ಈ ವೇಳೆ ವರನ ಕಡೆಯವರಿಗೆ ಊಟವನ್ನು ತಡವಾಗಿ ಬಡಿಸಿದ್ದಕ್ಕೆ ಗಲಾಟೆ ಮಾಡಿದ್ದಾರೆ. ವಧುವಿನ ಕಡೆಯವರು ವರನ ಕುಟುಂಬಸ್ಥರನ್ನು ಸಮಾಧಾನಪಡಿಸಲು ಪ್ರಯತ್ನಪಟ್ಟರು. 1.5 ಲಕ್ಷ ರೂ. ವರದಕ್ಷಿಣೆ ಸೇರಿದಂತೆ 7 ಲಕ್ಷ ರೂ. ಆರ್ಥಿಕ ನಷ್ಟವನ್ನು ಹೇಳಿಕೊಂಡರು. ಆದರೆ ವರನ ಕಡೆಯವರು ವಧುವಿನ ಮನೆಯವರನ್ನು ದೂಷಿಸುತ್ತಾ ಅಲ್ಲಿಂದ ಹೊರನಡೆದಿದ್ದಾರೆ.

    ಬಳಿಕ ವರ ಬೇರೆ ಯುವತಿಯನ್ನು ಮದುವೆಯಾಗಿರುವುದನ್ನು ತಿಳಿದು ವಧು ಇಂಡಸ್ಟ್ರಿಯಲ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿದೆ. ಆದರೆ ವರನ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ಡಿ.24 ರಂದು ಪೊಲೀಸ್ ವರಿಷ್ಠಾಧಿಕಾರಿಗೆ ವಧು ಮನವಿ ಮಾಡಿಕೊಂಡಿದ್ದಾರೆ. ಆರ್ಥಿಕ ನಷ್ಟ ಹಾಗೂ ವರನ ಕಡೆಯ ಐದು ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

    ಕ್ರಮ ಕೈಗೊಳ್ಳುವುದಾಗಿ ಎಸ್‌ಪಿ ಭರವಸೆ ನೀಡಿದ್ದು, ಪೊಲೀಸರಿಗೆ ವರನ ಕುಟುಂಬಸ್ಥರನ್ನು ಸಂಪರ್ಕಿಸುವAತೆ ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಮನಮೋಹನ್ ಸಿಂಗ್‌ಗೆ ಕೇಂದ್ರ ಸರ್ಕಾರದಿಂದ ಅವಮಾನ – ರಾಹುಲ್ ಗಾಂಧಿ ಆರೋಪ

  • ಮಾಜಿ ಪಿಎಂ ದೇವೇಗೌಡರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಡಾಲಿ

    ಮಾಜಿ ಪಿಎಂ ದೇವೇಗೌಡರನ್ನು ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಡಾಲಿ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅವರು ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡರನ್ನು ಮದುವೆಯ (Wedding) ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ.

    ಭಾವಿ ಪತ್ನಿ ಧನ್ಯತಾ ಜೊತೆ ಮಾಜಿ ಪಿಎಂ ಹೆಚ್.ಡಿ. ದೇವೇಗೌಡ (H. D. Deve Gowda) ನಿವಾಸಕ್ಕೆ ಭೇಟಿ ನೀಡಿ, ಮದುವೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಇದನ್ನೂ ಓದಿ:ಚಿತ್ರರಂಗದ ವರ್ತನೆಗೆ ಆಕ್ಷೇಪ- ತೆಲುಗು ನಟರ ಕಿವಿ ಹಿಂಡಿದ ಸಿಎಂ ರೇವಂತ್ ರೆಡ್ಡಿ

    ಅಂದಹಾಗೆ, ಇತ್ತೀಚೆಗೆ ಡಿಕೆ ಶಿವಕುಮಾರ್, ಡಿಕೆ ಸುರೇಶ್‌ ಮತ್ತು ಸಿಎಂ ಸಿದ್ದರಾಮಯ್ಯ ಅವರನ್ನು ಕೂಡ ಭಾವಿ ಪತ್ನಿಯ ಜೊತೆ ಭೇಟಿಯಾಗಿ ಮದುವೆಗೆ ಆಹ್ವಾನ ನೀಡಿದ್ದರು.

    ಇನ್ನೂ ಡಾಕ್ಟರ್ ಧನ್ಯತಾ ಜೊತೆ ಡಾಲಿ ಮೈಸೂರಿನಲ್ಲಿ ಮದುವೆಯಾಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.

  • ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಡಿಕೆ ಬ್ರದರ್ಸ್‌ಗೆ ಮದುವೆ ಆಮಂತ್ರಣ ನೀಡಿದ ಡಾಲಿ

    ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ (Daali Dhananjay) ಅವರು ಫೆ.16ರಂದು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಹಿನ್ನೆಲೆ ಉಪಮುಖ್ಯಮಂತಿ ಡಿಕೆ ಶಿವಕುಮಾರ್ (DK Shivakumar) ಮತ್ತು ಡಿಕೆ ಸುರೇಶ್‌ಗೆ (DK Suresh) ಮದುವೆ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ:ವಿದೇಶದಲ್ಲೂ UI ಹವಾ: ಉಪ್ಪಿ ಸಿನಿಮಾಗೆ ಪ್ರೇಕ್ಷಕರು ಫಿದಾ

    ಡಿಕೆ ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ದಂಪತಿಗೆ ಮದುವೆ ಆಹ್ವಾನ ನೀಡಿದ್ದಾರೆ ಡಾಲಿ. ಕೆಲ ಕಾಲ ನಟ ಸಮಯ ಕಳೆದಿದ್ದಾರೆ. ಇದೇ ವೇಳೆ, ಡಿಕೆ ಸುರೇಶ್‌ರನ್ನು ಭೇಟಿಯಾಗಿ ಮದುವೆಗೆ ಆಮಂತ್ರಿಸಿದ್ದಾರೆ.

    ಅಂದಹಾಗೆ, ಡಾಕ್ಟರ್ ಧನ್ಯತಾ ಜೊತೆ ಡಾಲಿ ಮೈಸೂರಿನಲ್ಲಿ ಮದುವೆಯಾಗುತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಲಿದ್ದಾರೆ. ಈ ಮದುವೆಯಲ್ಲಿ ಸ್ಯಾಂಡಲ್‌ವುಡ್ ಕಲಾವಿದರು, ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.