Tag: wedding

  • ಮ್ಯಾರೇಜ್ ಆಫರ್ ಕೊಟ್ಟವನಿಗೆ ನೋ ನೋ ಎಂದ ಅನುಶ್ರೀ

    ಮ್ಯಾರೇಜ್ ಆಫರ್ ಕೊಟ್ಟವನಿಗೆ ನೋ ನೋ ಎಂದ ಅನುಶ್ರೀ

    ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಸದಾ ಒಂದಲ್ಲಾ ಒಂದು ವಿಷ್ಯವಾಗಿ ಸುದ್ದಿಯಲ್ಲಿರುತ್ತಾರೆ. ತಮ್ಮ ವಿಭಿನ್ನ ನಿರೂಪಣೆ ಮೂಲಕ ಕರ್ನಾಟಕ ಜನತೆಯ ಮನಗೆದ್ದಿದ್ದಾರೆ. ಇಂದಿಗೂ ನಟಿಗೆ ಮದುವೆಯ ಬಗ್ಗೆ ಪ್ರಶ್ನೆ ಎದುರಾಗುತ್ತಲೇ ಬಂದಿದೆ. ಇದೀಗ ಚಿಕ್ಕಬಳ್ಳಾಪುರ ಉತ್ಸವದಲ್ಲಿ ಅನುಶ್ರೀಗೆ ಮದುವೆಗೆ ಪ್ರಪೋಸಲ್ (Wedding Praposal) ಅರಸಿ ಬಂದಿದೆ. ಈ ವೇಳೆ ಅನುಶ್ರೀ, ತಮ್ಮ ಶೈಲಿಯಲ್ಲಿ ಉತ್ತರ ನೀಡಿದ್ದರು.

    ಚಂದನವನದಲ್ಲಿ ಸದ್ಯ ಸಖತ್ ಸದ್ದು ಮಾಡ್ತಿರುವ ವಿಚಾರ ಅಂದ್ರೆ `ಚಿಕ್ಕಬಳ್ಳಾಪುರ ಉತ್ಸವ’ (Chikkaballapura Utsava). ಈ ಕಾರ್ಯಕ್ರಮಕ್ಕೆ ಚಿತ್ರರಂಗದ ದಂಡೇ ಬಂದಿದೆ. ಈ ವೇಳೆ ಯುವಕನೊಬ್ಬ ಅನುಶ್ರೀಗೆ ಮದುವೆ ಪ್ರಪೋಸಲ್ ಆಫರ್ ಮಾಡಿದ್ದಾರೆ.

    ಕಾರ್ಯಕ್ರಮದಲ್ಲಿ ಯುವಕ ಅನುಶ್ರೀಯನ್ನು ಮದುವೆಯಾಗಲು ನಾನು ರೆಡಿ ಎಂದು ಕುರ್ಚಿ ಮೇಲತ್ತಿ ನಿಂತು ಕೈ ಬೀಸಿದ್ದ. ಇದನ್ನು ಕಂಡ ಅನುಶ್ರೀ ಏಯ್ ಕೂತ್ಕೊಳೋ. ತಲೆಯಲ್ಲಿ ಕೂದಲಿಲ್ಲ ನೀನು ನನ್ನನ್ನು ಮದುವೆ ಆಗ್ತೀಯಾ? ಎಂದು ಕಾಲೆಳೆದಿದ್ದಾರೆ. ಯುವಕನ ಪ್ರಪೋಸಲ್ ಅನ್ನ ನಟಿ ನಿರಾಕರಿಸಿದ್ದಾರೆ. ಇದನ್ನೂ ಓದಿ: ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಅಷ್ಟೇ ಅಲ್ಲದೇ ಕಾಂತಾರದ (Kantara Film) ಜನಪ್ರಿಯ ಡೈಲಾಗ್ `ಕಾಡಲ್ಲೊಂದು ಸೊಪ್ಪು ಸಿಗ್ತದೆ’ ಡೈಲಾಗ್ ಅನ್ನು ಹೇಳಿ ಆ ಯುವಕನ ಕಾಲೆಳೆದರು. ಇನ್ನೂ ಮುಂದುವರಿದು ಆ ಹುಡುಗನಿಗೆ ಪರವಾಗಿಲ್ಲ, ಚೆನ್ನಾಗಿದ್ದೀಯಾ, ಮುಂದೆ ನೋಡೋಣ ಮದುವೆ ಎಂದರೆ ಸಮಾಧಾನಕರವಾಗಿ ಯೋಚಿಸಬೇಕು ಎಂದು ತಮಾಷೆಯಾಗಿ ಹೇಳಿಕೆ ನೀಡಿದರು. ಈ ರೀತಿ ಅನುಶ್ರೀ ಮದುವೆ ವಿಚಾರದ ಬಗ್ಗೆ ತಮಾಷೆ ಮಾಡಿ ಮನರಂಜನೆ ನೀಡಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಪ್ರೀತಿಯ ಬಗ್ಗೆ ಸೀಕ್ರೆಟ್‌ ಬಿಚ್ಚಿಟ್ರು ನಟಿ ರಜಿನಿ: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್‌

    ಕಿರುತೆರೆಯ ಸೂಪರ್ ಹಿಟ್ ಸೀರಿಯಲ್ `ಅಮೃತವರ್ಷಿಣಿ’ (Amruthavarshini) ಮೂಲಕ ಕರ್ನಾಟಕ ಜನತೆಯ ಮನಗೆದ್ದ ಚಲುವೆ ನಟಿ ರಜಿನಿ (Actress Rajini) ಇದೀಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪ್ರೀತಿಯ ಹುಡುಗನ ಬಗ್ಗೆ ನಟಿ ಮಾತನಾಡಿದ್ದಾರೆ.

    ಕೆಲ ವರ್ಷಗಳ `ಅಮೃತವರ್ಷಿಣಿ’ ಎಂಬ ಸೀರಿಯಲ್ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಧಾರಾವಾಹಿಯಲ್ಲಿ ರಜಿನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈಗ ಸಿನಿಮಾಗಳ ಜೊತೆ ʻಸೂಪರ್ ಕ್ವೀನ್ಸ್ʼಎಂಬ ರಿಯಾಲಿಟಿ ಶೋನಲ್ಲಿ ನಟಿ ಬ್ಯುಸಿಯಾಗಿದ್ದಾರೆ. ಸಂಕ್ರಾಂತಿ ಹಬ್ಬದ ಶುಭ ವೇಳೆಯಲ್ಲಿ ರಜಿನಿ ತಮ್ಮ ಫ್ಯಾನ್ಸ್ ಸಿಹಿಸುದ್ದಿ ಕೊಟ್ಟಿದ್ದಾರೆ.

     

    View this post on Instagram

     

    A post shared by Rajini (@rajiniiofficial)

    `ಸೂಪರ್ ಕ್ವೀನ್ಸ್’ ಶೋನಲ್ಲಿ ತಮ್ಮ ಬದುಕಿನ ಕೆಲ ವಿಚಾರಗಳನ್ನ ನಟಿ ಹಂಚಿಕೊಂಡಿದ್ದಾರೆ. ಹಾಗೆಯೇ ಈಗ ತಮ್ಮ ಹುಡುಗನ ಬಗ್ಗೆ ನಟಿ ಹಿಂಟ್ ಕೊಟ್ಟಿದ್ದಾರೆ. ʻಹಿಟ್ಲರ್ ಕಲ್ಯಾಣʼ ಧಾರಾವಾಹಿಯಲ್ಲಿ ಅಂತರ ಎಂಬ ಪಾತ್ರಕ್ಕೆ ನಟಿ ಜೀವ ತುಂಬಿದ್ದಾರೆ. ಇದರಲ್ಲಿ ತಮ್ಮ ಪತ್ನಿ ಅಂತರಳನ್ನ ಎಜೆ ಪ್ರೀತಿಸುವ ರೀತಿಯನ್ನ ತೋರಿಸಲಾಗಿದೆ. ಇದನ್ನೂ ಓದಿ: ಸಾನ್ಯ ಜೊತೆ ರೂಪೇಶ್ ಶೆಟ್ಟಿ ಮೀಟಿಂಗ್:‌ ಮದುವೆ ಬಗ್ಗೆ ನೆಟ್ಟಿಗರಿಂದ ಪ್ರಶ್ನೆಗಳ ಸುರಿಮಳೆ

    ಹಾಗಾಗಿ ಶೋನಲ್ಲಿ `ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅಂತಾರಳನ್ನು ಎಜೆ ಪ್ರೀತಿಸುವ ರೀತಿ ನಿಮ್ಮನ್ನು ಪ್ರೀತಿಸುವ ವ್ಯಕ್ತಿ ಇದ್ದಾರಾ ಎಂದು ರಜಿನಿಗೆ ಕೇಳಲಾಗಿದೆ. ಇದಕ್ಕೆ ಉತ್ತರಿಸಿರುವ ನಟಿ ಹೌದು ಎಂದು ಹೇಳಿದ್ದಾರೆ. ಆದರೆ, ಯಾರವರು, ಮದುವೆ ಯಾವಾಗ ಎಂಬ ಯಾವ ವಿಚಾರವನ್ನು ಹೇಳಿಲ್ಲ. ಒಟ್ನಲ್ಲಿ ರಜಿನಿ ಅವರು ತಮ್ಮ ಪ್ರೀತಿಯ ಗುಟ್ಟನ್ನು ರಟ್ಟು ಮಾಡಿದ್ದಾರೆ. ಈ ವಿಚಾರ ತಿಳಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಮದುವೆ ಬಗ್ಗೆ ಮೌನ ಮುರಿದ ರಾಗಿಣಿ ದ್ವಿವೇದಿ

    ಚಂದನವನದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ (Actress Ragini Dwivedi) ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಬಾಲಿವುಡ್ (Bollywood) ಅಂಗಳಕ್ಕೂ ನಟಿ ಲಗ್ಗೆ ಇಡ್ತಿದ್ದಾರೆ. ಹೀಗಿರುವಾಗ ಮದುವೆ, ಸಂಸಾರಿಕ ಜೀವನದ ಬಗ್ಗೆ ರಾಗಿಣಿ ಮಾತನಾಡಿದ್ದಾರೆ.

    ಕನ್ನಡದ ಚಿತ್ರರಂಗದ ಬ್ಯುಸಿ ನಟಿಯರಲ್ಲಿ ರಾಗಿಣಿ ಕೂಡ ಒಬ್ಬರು. ಹಿಂದಿ ಸೇರಿದಂತೆ ಒಟ್ಟು ಏಳು ಸಿನಿಮಾಗಳು (7 Films) ರಾಗಿಣಿ ಕೈಯಲ್ಲಿದೆ. ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ಗಾಂಧಿನಗರದಲ್ಲಿ ಸ್ಟಾರ್ ಜೋಡಿಗಳ ಗಟ್ಟಿಮೇಳ ಕೂಡ ಜೋರಾಗಿದೆ. ಹರಿಪ್ರಿಯಾ ಮತ್ತು ವಸಿಷ್ಠ ಹಸೆಮಣೆ ಏರುತ್ತಿರುವ ಬೆನ್ನಲ್ಲೇ ರಾಗಿಣಿ ಅವರಿಗೂ ಕೂಡ ಮದುವೆ ಯಾವಾಗ ಎಂಬುದರ ಬಗ್ಗೆ ಪ್ರಶ್ನೆ ಎದುರಾಗಿದೆ. ಚಿತ್ರವೊಂದರ ಸುದ್ದಿಗೋಷ್ಠಿಯಲ್ಲಿ ನಟಿ ಈ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಹಿಂದಿ ಸೇರಿ ಏಳು ಸಿನಿಮಾಗಳಲ್ಲಿ ರಾಗಿಣಿ ದ್ವಿವೇದಿ ಬ್ಯುಸಿ

    ಸಾಕಷ್ಟು ಸಿನಿಮಾಗಳು ನನ್ನ ಕೈಯಲ್ಲಿದೆ. ಮದುವೆಯ ಬಗ್ಗೆ ಈಗ ನನಗೆ ಆಲೋಚನೆ ಇಲ್ಲ. ಸದ್ಯ ನನಗೆ ಕೆಲಸ ಖುಷಿ ಕೊಡ್ತಿದೆ ಎಂದು ಮಾತನಾಡಿದ್ದಾರೆ. ಎಲ್ಲರೂ ಎಂಜಾಯ್ ಮಾಡ್ತಾ ಮದುವೆಯಾಗಲಿ. ನಾನು ಮದುವೆಗೆ ಹೋಗಿ ಎಂಜಾಯ್ ಮಾಡುತ್ತೇನೆ ಎಂದು ರಾಗಿಣಿ ತಮ್ಮ ಮದುವೆಯ ಬಗ್ಗೆ ಇರುವ ಭಾವನೆಯನ್ನ ಮುಕ್ತವಾಗಿ ಮಾತನಾಡಿದ್ದಾರೆ. ಹಾಗೆಯೇ ಈ ವೇಳೆ, ಒಂದು ತಿಂಗಳು ಟೈಮ್ ಕೊಡಿ. ನಿಮಗೆ ಬಿಗ್ ಅನೌನ್ಸ್‌ಮೆಂಟ್ ಕೊಡುತ್ತೇನೆ ಎಂದು ಮಾತನಾಡಿದ್ದಾರೆ.

    ಇನ್ನೂ ರಾಗಿಣಿ, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻಸಿಂಹಪ್ರಿಯʼ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

    ʻಸಿಂಹಪ್ರಿಯʼ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಹೇಗಿದೆ ಗೊತ್ತಾ?

    ಸ್ಯಾಂಡಲ್‌ವುಡ್‌ನ (Sandalwood) `ಸಿಂಹಪ್ರಿಯ’ (Simhapriya) ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಸದ್ಯ ಹರಿಪ್ರಿಯಾ (Haripriya) ಮತ್ತು ವಸಿಷ್ಠ (Vasista Simha) ಮದುವೆ ಆಮಂತ್ರಣ ಪತ್ರಿಕೆ ಭಿನ್ನವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಎರಡೂವರೆ ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿಯ ಮೇರೆಗೆ ವಸಿಷ್ಠ ಮತ್ತು ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಜನವರಿ 26ಕ್ಕೆ ಮೈಸೂರಿನಲ್ಲಿ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಜ.28ಕ್ಕೆ ಬೆಂಗಳೂರಿನಲ್ಲಿ ಸಿನಿಮಾರಂಗದ ಸ್ನೇಹಿತರು, ಗಣ್ಯರಿಗೆ ಆರತಕ್ಷತೆ ಇರಲಿದೆ. ಸದ್ಯ ಈ ಜೋಡಿಯ ಮದುವೆ ಪತ್ರಿಕೆ ನೆಟ್ಟಿಗರ ಗಮನ ಸೆಳೆಯುತ್ತಿದೆ.

    ಮದುವೆಯ ಆಮಂತ್ರಣ (Wedding Card) ಕಾರ್ಡ್‌ನಲ್ಲಿ ಸಿಂಹಪ್ರಿಯ (Simhapriya) ಎಂಬ ಟ್ಯಾಗ್‌ಲೈನ್ ಇದೆ. ಅಭಿಮಾನಿಗಳು ಪ್ರೀತಿಯಿಂದ ಈ ಜೋಡಿಗೆ ಕೊಟ್ಟಿರುವ ಸಿಂಹ ಪ್ರಿಯ ಟ್ಯಾಗ್ ಅನ್ನೇ ಪತ್ರಿಕೆಯಲ್ಲೂ ಮುದ್ರಿಸಲಾಗಿದೆ. ಪತ್ರಿಕೆಯ ಜೊತೆ ಮೇಣದ ಬತ್ತಿ ಮತ್ತು ವಿಶೇಷವಾಗಿರುವ ಗಿಡವೊಂದನ್ನ ನೀಡಲಾಗಿದೆ. ಇದನ್ನೂ ಓದಿ: ಸಂಕ್ರಾಂತಿ ಸಂಭ್ರಮಕ್ಕಾಗಿ ಮತ್ತೆ ಜೊತೆಯಾದ ಬಿಗ್ ಬಾಸ್ ಸ್ಪರ್ಧಿಗಳು

    ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ತಮ್ಮಿಬ್ಬರಿಗೂ ಹೇಗೆ ಪ್ರೇಮಾಂಕುರವಾಯಿತು ಎಂಬುದನ್ನ ಈ ಜೋಡಿ ರಿವೀಲ್ ಮಾಡಿದ್ದಾರೆ. ಎಂಗೇಜ್‌ಮೆಂಟ್ ಫೋಟೋ ಹೊರ ಬಂದಿದ್ದು ನೋಡಿದೆ. ನಾನು ನಾಯಿ ಮರಿ ಕೊಟ್ಟು ಪಟಾಯಿಸಿ ಬಿಟ್ಟೆ ಅಂತ ಅಂದ್ರು. ನಾನು ಪ್ರೀತಿಸಿ ಆ ನಂತರ ನಾಯಿಮರಿ ಕೊಟ್ಟೆ. 2016ರಲ್ಲಿ ಇಬ್ಬರ ಸ್ನೇಹ ಶುರುವಾಯ್ತು. ನನ್ನ ಗೋಧಿಬಣ್ಣ ಸಿನಿಮಾ ನೋಡಿ ಬಂದು ಹರಿಪ್ರಿಯಾ ವಿಶ್ ಮಾಡಿದ್ರು. ಆ ನಂತರ ಇಬ್ರ ಮಧ್ಯೆ ಪ್ರೀತಿ ಶುರುವಾಯ್ತು. ಮದುವೆ ಪ್ರೀತಿ ವಿಚಾರದಲ್ಲಿ ನಮ್ಮದೇ ಪ್ಯಾಟ್ರನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ ಹಾಗಾಗಿ ಅಲ್ಲೆ ಮದುವೆ ಆಗುತ್ತೇನೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ಎಂದು ಸಿಂಹ ತಿಳಿಸಿದರು.

    ಹರಿಪ್ರಿಯಾಗೆ ನಾನೆ ಮೊದಲು ಪ್ರಪೋಸ್ ಮಾಡಿದೆ. ಸಿಂಹ ಪ್ರಪೋಸ್ ಮಾಡಿದಾಗ ನನಗೂ ಹೇಳಿಕೊಳ್ಳಬೇಕು ಅಂತ ಇತ್ತು.ಅಪ್ಪ ತೀರಿ ಹೋದ ದಿನ ನನಗೆ ಸಿಂಹ ಪ್ರಪೋಸ್ ಮಾಡಿದ್ರು. ಯಾರಿಗೂ ಗೊತ್ತಾಗದ ಹಾಗೆ ಬಹಳ ಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡುವರೆ ಮೂರು ವರ್ಷ ಆಗಿದೆ. ನಾಯಿ ಕೊಟ್ಟು ನಾನು ಹರಿಪ್ರಿಯಾರನ್ನ ಪಟಾಯಿಸಿಲ್ಲ ಎಂದು ವಸಿಷ್ಠ ಸಿಂಹ ಹೇಳಿದರು. ಇನ್ನು ನನಗೆ ತುಂಬಾ ಖುಷಿ ಆಗುತ್ತಿದೆ. ಇವತ್ತು ಮದುವೆ ಬಗ್ಗೆ ಮಾತಾಡೋಕೆ ತುಂಬಾ ಭಯ ಆಗ್ತಿದೆ. ನಮ್ಮಿಬ್ಬರ ಬೆಳವಣಿಗೆಯಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸಿದೆ. ನಮ್ಮ ಎಂಗೇಂಜ್‌ಮೆಂಟ್ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ. ಆದರೆ ಅದು ಆಗಲಿಲ್ಲ ಎಂದು ಹರಿಪ್ರಿಯಾ ತಿಳಿಸಿದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಥಿಯಾ- ರಾಹುಲ್ ಮದುವೆ ಸಂಭ್ರಮದಲ್ಲಿ ಯಾರೆಲ್ಲಾ ಭಾಗಿಯಾಗುತ್ತಿದ್ದಾರೆ: ಇಲ್ಲಿದೆ ಮಾಹಿತಿ

    ಅಥಿಯಾ- ರಾಹುಲ್ ಮದುವೆ ಸಂಭ್ರಮದಲ್ಲಿ ಯಾರೆಲ್ಲಾ ಭಾಗಿಯಾಗುತ್ತಿದ್ದಾರೆ: ಇಲ್ಲಿದೆ ಮಾಹಿತಿ

    ಬಾಲಿವುಡ್‌ನಲ್ಲಿ ಗಟ್ಟಿಮೇಳದ ಸೌಂಡ್‌ ಜೋರಾಗಿದೆ. ನಟಿ ಅಥಿಯಾ (Athiya Shetty) ಮತ್ತು ರಾಹುಲ್ (K.L Rahul) ಮದುವೆ (Wedding) ಬಗ್ಗೆ ಫ್ಯಾನ್ಸ್‌ಗೆ ಕುತೂಹಲ ಕೆರಳಿಸಿದೆ. ಮದುವೆ ಯಾವಾಗ? ಸಮಾರಂಭಕ್ಕೆ ಯಾರೆಲ್ಲಾ ಗೆಸ್ಟ್‌ಗಳು ಭಾಗಿಯಾಗುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್ ಕ್ಯೂರಿಯಸ್ ಆಗಿದ್ದಾರೆ. ಈ ಬಗ್ಗೆ ಕಂಪ್ಲಿಟ್ ಡಿಟೈಲ್ಸ್ ಇಲ್ಲಿದೆ.

    ಸಾಕಷ್ಟು ವರ್ಷಗಳ ಡೇಟಿಂಗ್ (Dating)ನಂತರ ಇದೀಗ ಮದುವೆಯೆಂಬ ಮುದ್ರೆ ಒತ್ತಲು ಅಥಿಯಾ ಶೆಟ್ಟಿ, ರಾಹುಲ್ ರೆಡಿಯಾಗಿದ್ದಾರೆ. ಜನವರಿ 23ಕ್ಕೆ ಸುನೀಲ್ ಶೆಟ್ಟಿ (Suniel Shetty) ಖಂಡಾಲಾ ಬಂಗಲೆಯಲ್ಲಿ ಅಥಿಯಾ(Athiya Shetty) ಮದುವೆ ನಡೆಯಲಿದ್ಬಾದು, ಬಾಲಿವುಡ್ ಮತ್ತು ಕ್ರಿಕೆಟ್ ಕ್ಷೇತ್ರದ ಆಪ್ತರ ದಂಡೇ ಇರಲಿದೆ.

    ಜನವರಿ 21ರಿಂದ ಮದುವೆ ಸಮಾರಂಭ ಪ್ರಾರಂಭವಾಗುತ್ತಿದೆ. ಮೂರು ದಿನಗಳು ನಡೆಯುವ ಅದ್ದೂರಿ ಮದುವೆಯಲ್ಲಿ ಕುಟುಂಬದವರು, ಆಪ್ತರು ಮತ್ತು ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ. ಇನ್ನೂ ಮದುವೆಗೆ ಕೆಲವೇ ದಿನಗಳು ಮಾತ್ರ ಬಾಕಿ ಇರುವ ಕಾರಣ ಈಗಾಗಲೇ ಸಿದ್ಧತೆ ಜೋರಾಗಿ ನಡೆಯುತ್ತಿದೆ.

    ಅಥಿಯಾ ಜೋಡಿ ಮದುವೆಯಲ್ಲಿ ಹೈ-ಪ್ರೋಫೈಲ್ ಸಲ್ಮಾನ್ ಖಾನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣ್‌ವೀರ್ ಕಪೂರ್ ಜಾಕಿ ಶ್ರಾಫ್, ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ದಂಪತಿ ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: `ಬಘೀರ’ ಸಿನಿಮಾದ ಶೂಟಿಂಗ್ ವೇಳೆ ಅವಗಢ: ನಟ ಶ್ರೀಮುರಳಿಗೆ ಪೆಟ್ಟು

    ಹೊಸ ವರ್ಷ ಜ.21ರಿಂದ ಮದುವೆ ಶಾಸ್ತ್ರಗಳು ಪ್ರಾರಂಭವಾಗಲಿದೆ, ಮೆಹಂದಿ, ಹಳದಿ, ಸಂಗೀತ ಸಮಾರಂಭ ಸೇರಿದ್ದಂತೆ ಎಲ್ಲಾ ಶಾಸ್ತçಗಳನ್ನು ಸಂಪ್ರದಾಯ ಬದ್ಧವಾಗಿ ಮದುವೆ ಕಾರ್ಯ ಮಾಡಲು ಎರಡು ಕುಟುಂಬಗಳು ನಿರ್ಧರಿಸಿದೆ. ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಪಕ್ಕ ದಕ್ಷಿಣ ಭಾರತದ ಶೈಲಿಯಲ್ಲಿ ನಡೆಸಲು ಎರಡು ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ. ಖಂಡಾಲ ಬಂಗಲೆ ಜಹಾನ್‌ನಲ್ಲೇ ಜ.23ಕ್ಕೆ ಮದುವೆ ಅದ್ದೂರಿಯಾಗಿ ನಡೆಯಲಿದೆ.

    ಪ್ರಸ್ತುತ ಕೆ.ಎಲ್ ರಾಹುಲ್ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಈ ಸರಣಿಯು ಜ.15ಕ್ಕೆ ಅಂತ್ಯವಾಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಆದ್ಮೇಲೆ ಸಿನಿಮಾಗೆ ಬ್ರೇಕ್- ಹರಿಪ್ರಿಯಾ ಹೇಳೋದೇನು?

    ಮದುವೆ ಆದ್ಮೇಲೆ ಸಿನಿಮಾಗೆ ಬ್ರೇಕ್- ಹರಿಪ್ರಿಯಾ ಹೇಳೋದೇನು?

    ಚಂದನವನದಲ್ಲಿ ಗಟ್ಟಿಮೇಳದ (Gattimela) ಸದ್ದು ಜೋರಾಗಿದೆ. ಅದಿತಿ ಪ್ರಭುದೇವ ಮತ್ತು ಯಶಸ್ ಮದುವೆ ಸಂಭ್ರಮದ ಬಳಿಕ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ಹಸೆಮಣೆ ಏರಲು ರೆಡಿಯಾಗಿದ್ದಾರೆ. ಈ ಬಗ್ಗೆ ವಸಿಷ್ಠ ಜೋಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಬಳಿಕ ಮದುವೆಯ ನಂತರವೂ ಹರಿಪ್ರಿಯಾ ಸಿನಿಮಾದಲ್ಲಿ ಆಕ್ಟೀವ್ ಆಗಿರುತ್ತಾ ಎಂಬುದರ ಬಗ್ಗೆ ಮಾತನಾಡಿದ್ದಾರೆ.

    ಕಳೆದ ಎರಡೂವರೆ ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ `ಸಿಂಹಪ್ರಿಯಾ’ (SimhaPriya) ಜೋಡಿ ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. 2016ರಲ್ಲಿ ಸಿನಿಮಾ ಪ್ರಿಮಿಯರ್ ಶೋನಲ್ಲಿ ಪರಿಚಯವಾದ ಸ್ನೇಹ ಈಗ ಮದುವೆಯೆಂಬ ಮುದ್ರೆ ಒತ್ತಲು ಈ ಜೋಡಿ ರೆಡಿಯಾಗಿದ್ದಾರೆ. ತಮ್ಮ ಪ್ರೀತಿಯ ವಿಚಾರ, ಮದುವೆ ಯಾವಾಗ ಎಲ್ಲಿ ಎಂಬೆಲ್ಲಾ ಪ್ರಶ್ನೆಗಳಿಗೆ ವಸಿಷ್ಠ ಜೋಡಿ ಉತ್ತರ ನೀಡಿದ್ದಾರೆ. ಈ ವೇಳೆ ಮದುವೆಯ ಬಳಿಕ ಹರಿಪ್ರಿಯಾ ಸಿನಿಮಾದಲ್ಲಿ ನಟಿಸುತ್ತಾರಾ ಅಥವಾ ಸಂಸಾರದತ್ತ ಗಮನ ಕೊಡುತ್ತಾರೆ ಎಂಬುದರ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಗೆಳೆಯ ವಸಿಷ್ಠ ಸಿಂಹಗೆ ವಿಭಿನ್ನವಾಗಿ ವಿಶ್ ಮಾಡಿದ ಡಾಲಿ ಧನಂಜಯ್

    ಮದುವೆ ಎಂಬುದು ಡಿಫರೆಂಟ್ ಫೇಸ್, ಹೆಂಡತಿಯ ಸ್ಥಾನ ಪಡೆಯುತ್ತಿರುವೆ. ಇದನ್ನೆಲ್ಲ ನಾನು ಅರ್ಥ ಮಾಡಿಕೊಳ್ಳಬೇಕು ಜೊತೆ ಎಂಜಾಯ್ ಮಾಡಲು ಬ್ರೇಕ್ ಬೇಕು. 16 ವರ್ಷಗಳಿಂದ ಚಿತ್ರರಂಗದಲ್ಲಿರುವೆ ಮನೆ ಮತ್ತು ಶೂಟಿಂಗ್ ಅಂತಾನೇ ಆಗೋಯ್ತು. ಹೆಂಡತಿಯ ಸ್ಥಾನ ಪಡೆಯುತ್ತಿರುವೆ ಸ್ವಲ್ಪ ಬ್ರೇಕ್ ಬೇಕು. ಬಳಿಕ ಒಳ್ಳೆಯ ಸ್ಕ್ರಿಪ್ಟ್ ಬಂದರೆ ಖಂಡಿತಾ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹರಿಪ್ರಿಯಾ ಮಾತನಾಡಿದ್ದಾರೆ.

    ಮದುವೆಯ ಬಳಿಕ ಸಿನಿಮಾ ಮಾಡುವ ವಿಚಾರದಲ್ಲಿ ನನ್ನ ಬೆಂಬಲ ಖಂಡಿತವಾಗಿಯೂ ಇದೆ. ನಾನು ಅವರ ಫ್ಯಾನ್ ಆಗಿ ಪರಿಚಯವಾಗಿ ಆಮೇಲೆ ನನ್ನ ಮದುವೆಯಾದ್ಮೇಲೆ ನಟಿಸಬಾರದು ಅಂತೆಲ್ಲಾ ಹೇಳಲ್ಲ. ನಾನು ಒಬ್ಬ ನಟನಾಗಿ ಅವರು ನಟಿಸಬೇಕು ಅಂತಾ ಇಷ್ಟಪಡುತ್ತೇನೆ ಎಂದು ವಸಿಷ್ಠ ಸಿಂಹ ಮಾತನಾಡಿದರು.

    ಇನ್ನೂ ವಸಿಷ್ಠ ಮತ್ತು ಹರಿಪ್ರಿಯಾ ಜೋಡಿ, ಗುರುಹಿರಿಯರ ಸಮ್ಮುಖದಲ್ಲಿ ಜನವರಿ 26ರಂದು ಮದುವೆಯಾಗುತ್ತಿದ್ದಾರೆ. ಸಿನಿಮಾರಂಗದ ಸ್ನೇಹಿತರಿಗೆ ಮತ್ತು ಗಣ್ಯರಿಗೆ ಜ.28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಇರಲಿದೆ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹನಿಮೂನ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಹರಿಪ್ರಿಯಾ- ವಸಿಷ್ಠ

    ಹನಿಮೂನ್ ಬಗ್ಗೆ ಕೇಳಿದ್ದಕ್ಕೆ ನಾಚಿ ನೀರಾದ ಹರಿಪ್ರಿಯಾ- ವಸಿಷ್ಠ

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಈಗ `ಸಿಂಹಪ್ರಿಯಾ’ (Simhapriya) ಜೋಡಿಯದ್ದೇ ಹಾವಳಿ. ವಸಿಷ್ಠ ಮತ್ತು ಹರಿಪ್ರಿಯಾ ತಮ್ಮ ಮದುವೆ ದಿನಾಂಕ ರಿವೀಲ್ ಮಾಡೋದರ ಜೊತೆಗೆ ಹನಿಮೂನ್‌ಗೆ ಎಲ್ಲಿಗೆ ಹೋಗ್ತೀವಿ ಅನ್ನೋದನ್ನ ಕೂಡ ಮಾತನಾಡಿದ್ದಾರೆ.

    ಅದಿತಿ ಪ್ರಭುದೇವ ಜೋಡಿಯ ನಂತರ ಚಂದನವನದ ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರೋದಕ್ಕೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಲವ್ ಹೇಗೆ ಆಯ್ತು? ಮದುವೆ ಯಾವಾಗ ಎಂಬ ವಿವರ ಜೊತೆ ಹನಿಮೂನ್ ಬಗ್ಗೆ ಮಾತನಾಡಿ ನಕ್ಕಿದ್ದಾರೆ. ಹರಿಪ್ರಿಯಾಗೆ ನಾನು ನಾಯಿಮರಿ ಕೊಟ್ಟು ಪಟ್ಟಾಯಿಸಿಲ್ಲ. ಆದರೆ ಹರಿಪ್ರಿಯಾ ತಂದೆ ಕಾರ್ಯದ ದಿನ ಅವರಿಗೆ ಪ್ರಪೋಸ್ ಮಾಡಿದ್ದೆ, ಹೌದು ನಾನೇ ಮೊದಲು ಪ್ರಪೋಸ್ ಮಾಡಿದ್ದು ಎಂದು ತಮ್ಮ ಪ್ರೀತಿಯ ಬಗ್ಗೆ ವಸಿಷ್ಠ ಸಿಂಹ ಮಾತನಾಡಿದ್ದಾರೆ. ಇದನ್ನೂ ಓದಿ: ನಾನು ಆಡಿದ ಮಾತು ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತಿದೆ: ವಿವಾದಗಳ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ

    ಈ ವೇಳೆ ಹನಿಮೂನ್‌ಗೆ ಹೋಗುವ ಬಗ್ಗೆ ಕೇಳಲಾಗಿದೆ. ಅದಕ್ಕೆ ವಸಿಷ್ಠ ಹನಿಮೂನ್‌ಗೆ (Honeymoon) ಎಲ್ಲಿಗೆ ಹೋಗ್ತೀವಿ ಅಂತ ಹೇಳ್ಬೇಕಾ? ಅದನ್ನೂ ಮಾಡಬೇಕಾ ಎಂದು ನಕ್ಕಿದ್ದಾರೆ. ವಸಿಷ್ಠನ (Vasista)ಮಾತಿಗೆ ಹರಿಪ್ರಿಯಾ (Haripriya) ಕೂಡ ನಾಚಿ ನೀರಾಗಿದ್ದಾರೆ.

    ಇನ್ನೂ ವಸಿಷ್ಠ ಮತ್ತು ಹರಿಪ್ರಿಯಾ ಜೋಡಿ, ಗುರುಹಿರಿಯರ ಸಮ್ಮುಖದಲ್ಲಿ ಜನವರಿ 26ರಂದು ಮದುವೆಯಾಗುತ್ತಿದ್ದಾರೆ. ಸಿನಿಮಾರಂಗದ ಸ್ನೇಹಿತರಿಗೆ ಮತ್ತು ಗಣ್ಯರಿಗೆ ಜ.28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಇರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹರಿಪ್ರಿಯಾ ತಂದೆ ಕಾರ್ಯದ ದಿನ ನಾನು ಪ್ರಪೋಸ್ ಮಾಡಿದೆ:ವಸಿಷ್ಠ ಸಿಂಹ

    ಹರಿಪ್ರಿಯಾ ತಂದೆ ಕಾರ್ಯದ ದಿನ ನಾನು ಪ್ರಪೋಸ್ ಮಾಡಿದೆ:ವಸಿಷ್ಠ ಸಿಂಹ

    ಸ್ಯಾಂಡಲ್‌ವುಡ್‌ನ (Sandalwood) ಸಿಂಹಪ್ರಿಯಾ (Simha Priya) ಜೋಡಿ ಹಸೆಮಣೆ ಏರೋದಕ್ಕೆ ಸಜ್ಜಾಗಿದ್ದಾರೆ. ಈ ಕುರಿತು ಮಾಧ್ಯಮ ಸುದ್ದಿಗೋಷ್ಠಿ ಕೂಡ ಮಾಡಲಾಯಿತು. ಈ ವೇಳೆ ತಮ್ಮ ಲವ್ ಕಹಾನಿ ಬಗ್ಗೆ ಇಂಟ್ರರೆಸ್ಟಿಂಗ್ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

    ಚಂದನವನದ ಚೆಂದದ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಈ ವೇಳೆ ತಮ್ಮಿಬ್ಬರಿಗೂ ಹೇಗೆ ಪ್ರೇಮಾಂಕುರವಾಯಿತು ಎಂಬುದನ್ನ ಈ ಜೋಡಿ ರಿವೀಲ್ ಮಾಡಿದ್ದಾರೆ. ಎಂಗೇಜ್‌ಮೆಂಟ್ ಫೋಟೋ ಹೊರ ಬಂದಿದ್ದು ನೋಡಿದೆ. ನಾನು ನಾಯಿ ಮರಿ ಕೊಟ್ಟು ಪಟಾಯಿಸಿ ಬಿಟ್ಟೆ ಅಂತ ಅಂದ್ರು. ನಾನು ಪ್ರೀತಿಸಿ ಆ ನಂತರ ನಾಯಿಮರಿ ಕೊಟ್ಟೆ. 2016ರಲ್ಲಿ ಇಬ್ಬರ ಸ್ನೇಹ ಶುರುವಾಯ್ತು. ನನ್ನ ಗೋಧಿಬಣ್ಣ ಸಿನಿಮಾ ನೋಡಿ ಬಂದು ಹರಿಪ್ರಿಯಾ ವಿಶ್ ಮಾಡಿದ್ರು. ಆ ನಂತರ ಇಬ್ರ ಮಧ್ಯೆ ಪ್ರೀತಿ ಶುರುವಾಯ್ತು. ಮದುವೆ ಪ್ರೀತಿ ವಿಚಾರದಲ್ಲಿ ನಮ್ಮದೇ ಪ್ಯಾಟ್ರನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ ಹಾಗಾಗಿ ಅಲ್ಲೆ ಮದುವೆ ಆಗುತ್ತೇನೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ಎಂದು ಸಿಂಹ ತಿಳಿಸಿದರು. ಇದನ್ನೂ ಓದಿ: ಸಿಂಹಪ್ರಿಯ ಮ್ಯಾರೇಜ್: ಜನವರಿ 26ಕ್ಕೆ ಮದುವೆ, 28ಕ್ಕೆ ಆರತಕ್ಷತೆ

    ಗೋಧಿಬಣ್ಣ ಸಿನಿಮಾ ನೋಡಿ ನಾನು ಕುಟುಂಬದ ಜೊತೆ ವಸಿಷ್ಠ ಸಿಂಹನ ಬಗ್ಗೆ ಹೇಳಿದ್ದೆ. ನಮ್ಮಿಬ್ಬರ ಪ್ರೀತಿಗೆ ಲಾಕ್‌ಡೌನ್ ಕೂಡ ಕಾರಣ ಆಯಿತು. ಸಮಯ ಸಿಕ್ತಾ ಇತ್ತು. ದಿನ ಮಾತಾಡುತ್ತಿದ್ವಿ. ಹರಿಪ್ರಿಯಾ ಮಾತು ಅವರ ನಡವಳಿಕೆ, ಅವರಲ್ಲಿರೋ ಟ್ಯಾಲೆಂಟ್ ನನ್ನನ್ನ ತುಂಬಾ ಇಂಪ್ರೆಸ್ ಮಾಡಿದೆ. ನಾನು ಮಾನಸಿಕವಾಗಿ ಕಷ್ಟದಲ್ಲಿದ್ದಾಗ ಅದರಿಂದ ಹೊರಗೆ ಕರೆದುಕೊಂಡು ಬಂದಿದ್ದು ಹರಿಪ್ರಿಯಾ. ಇಬ್ಬರಿಗೂ ಇಷ್ಟ ಇತ್ತು. ಲಾಕ್‌ಡೌನ್‌ನಲ್ಲಿ ಇಬ್ಬರು ಪ್ರೀತಿಯನ್ನ ಹೇಳಿಕೊಂಡ್ವಿ.

    ಹರಿಪ್ರಿಯಾಗೆ ನಾನೆ ಮೊದಲು ಪ್ರಪೋಸ್ ಮಾಡಿದೆ. ಸಿಂಹ ಪ್ರಪೋಸ್ ಮಾಡಿದಾಗ ನನಗೂ ಹೇಳಿಕೊಳ್ಳಬೇಕು ಅಂತ ಇತ್ತು.ಅಪ್ಪ ತೀರಿ ಹೋದ ದಿನ ನನಗೆ ಸಿಂಹ ಪ್ರಪೋಸ್ ಮಾಡಿದ್ರು. ಯಾರಿಗೂ ಗೊತ್ತಾಗದ ಹಾಗೆ ಬಹಳ ಪಟ್ಟು ಪ್ರೀತಿ ಕಾಪಾಡಿಕೊಂಡು ಬಂದಿದ್ದೇವೆ. ನಮ್ಮ ಪ್ರೀತಿಗೆ ಎರಡುವರೆ ಮೂರು ವರ್ಷ ಆಗಿದೆ. ನಾಯಿ ಕೊಟ್ಟು ನಾನು ಹರಿಪ್ರಿಯಾರನ್ನ ಪಟಾಯಿಸಿಲ್ಲ ಎಂದು ವಸಿಷ್ಠ ಸಿಂಹ ಹೇಳಿದರು. ಇನ್ನು ನನಗೆ ತುಂಬಾ ಖುಷಿ ಆಗುತ್ತಿದೆ. ಇವತ್ತು ಮದುವೆ ಬಗ್ಗೆ ಮಾತಾಡೋಕೆ ತುಂಬಾ ಭಯ ಆಗ್ತಿದೆ. ನಮ್ಮಿಬ್ಬರ ಬೆಳವಣಿಗೆಯಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸಿದೆ. ನಮ್ಮ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ. ಆದರೆ ಅದು ಆಗಲಿಲ್ಲ ಎಂದು ಹರಿಪ್ರಿಯಾ ತಿಳಿಸಿದರು.

    ಇನ್ನು ನಾನು ಏನೆ ಕೆಲಸ ಮಾಡಿದ್ರು ನನ್ನನ್ನ ನಾನು ತೊಡಗಿಸಿಕೊಳ್ತೇನೆ. ನಾನು ಮದುವೆ ಆದ ಮೇಲೆ ಒಳ್ಳೆ ಕಥೆ ಬಂದ್ರೆ ಸಿನಿಮಾ ಮಾಡುತ್ತೇನೆ. ಮೊದಲು ಹೆಂಡತಿಯಾಗಿ ಮಾನು ಸಕ್ಸಸ್ ಆಗುತ್ತೇನೆ. ಮದುವೆ ಆದ ಮೇಲೆ ಚಿಕ್ಕ ಬ್ರೇಕ್ ನನಗೆ ಬೇಕು. ಸದ್ಯಕ್ಕೆ ನಾನು ಮದುವೆ ಸಂಸಾರವನ್ನ ಎಂಜಾಯ್ ಮಾಡುತ್ತೇವೆ. ಮನಸುಗಳ ಮಾತು ಮಧುರ ಸಿನಿಮಾದ ಹಾಡು ನೋಡಿದಾಗಿನಿಂದ ನಾನು ಹರಿಪ್ರಿಯಾ ಅಭಿಮಾನಿ. ʻಉಗ್ರಂʼ (Ugram) ಸಿನಿಮಾ ನೋಡಿದಾಗ್ಲು ಹರಿಪ್ರಿಯಾ ಮೇಲೆ ಅಭಿಮಾನ ಹೆಚ್ಚಾಯ್ತು. ಸೂಜಿದಾರ ಸಿನಿಮಾ ನೋಡಿ ನಾನು ಕಳೆದು ಹೋಗಿದ್ದೆ ಎಂದು ಸಿಂಹ ತಿಳಿಸಿದರು.

    ಇನ್ನೂ ಗುರುಹಿರಿಯರ ಸಮ್ಮುಖದಲ್ಲಿ ಇದೇ ಜನವರಿ 26ರಂದು ಮೈಸೂರಿನಲ್ಲಿ ಸಿಂಹಪ್ರಿಯಾ ಜೋಡಿ ಹಸೆಮಣೆ ಏರುತ್ತಿದ್ದಾರೆ. ಜನವರಿ 28ರಂದು ಬೆಂಗಳೂರಿನಲ್ಲಿ ಸಿನಿಮಾರಂಗ ಸ್ನೇಹಿತರಿಗೆ, ಗಣ್ಯರಿಗೆ ಆರತಕ್ಷತೆ ಇರಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪ್ರಭಾಸ್ ನಂತರ ನನ್ನ ಮದುವೆ ಎಂದಿದ್ದ ನಟ ಶರ್ವಾನಂದ್ ಕಾಲೆಳೆದ ನೆಟ್ಟಿಗರು

    ಪ್ರಭಾಸ್ ನಂತರ ನನ್ನ ಮದುವೆ ಎಂದಿದ್ದ ನಟ ಶರ್ವಾನಂದ್ ಕಾಲೆಳೆದ ನೆಟ್ಟಿಗರು

    ಟಾಲಿವುಡ್ (Tollywood) ನಟ ಶರ್ವಾನಂದ್ಮ (Sharwanand) ನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದೆ. ನಟನ ಮದುವೆಯ ತಯಾರಿ ಬೆನ್ನಲ್ಲೇ ಶರ್ವಾನಂದ್ ಹೇಳಿದ್ದ ಹೇಳಿಕೆ ಸಖತ್ ಸದ್ದು ಮಾಡ್ತಿದೆ. ಪ್ರಭಾಸ್ (Actor Prabhas) ನಂತರ ನಾನು ಮದುವೆ ಆಗ್ತೀನಿ ಎಂದಿದ್ದ ಶರ್ವಾನಂದ್ ನೆಟ್ಟಿಗರು ಕಾಲೆಳೆದಿದ್ದಾರೆ.

    ತೆಲುಗಿನ ನಟ ಶರ್ವಾನಂದ್ ತಮ್ಮ 38ನೇ ವಯಸ್ಸಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದೇ ಶರ್ವಾನಂದ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದ ಹೇಳಿಕೆ ಕೂಡ ಈಗ ಸದ್ದು ಮಾಡ್ತಿದೆ. ಮದುವೆಯ ಬಗ್ಗೆ ಪ್ರಶ್ನೆ ಎದುರಾದಾಗ, ಪ್ರಭಾಸ್ ನಂತರ ನನ್ನ ಮದುವೆ (Wedding) ಎಂದಿದ್ದರು. ಆಮೇಲೆ ಮದುವೆ ಆಗ್ತೀನಿ ಎಂದು ಮಾತನಾಡಿದ್ದರು. ಪ್ರಭಾಸ್ ಮದುವೆ ಆಗೋಲ್ಲ ಬಿಡಿ. ಅದಕ್ಕೆ ನೀವು ಸೈಲೆಂಟ್ ಆಗಿ ಹುಡುಗಿ ಹುಡುಕಿಕೊಂಡ್ರಾ ಎಂದು ನೆಟ್ಟಿಗರು ನಟನ ಕಾಲೆಳೆಯುತ್ತಿದ್ದಾರೆ. ಇದನ್ನೂ ಓದಿ: `ಜೈಲರ್’ ರಜನಿಕಾಂತ್‌ಗೆ ಮೋಹನ್ ಲಾಲ್ ಸಾಥ್

    ಟಿಡಿಪಿ ಪಕ್ಷದ ರಾಜಕಾರಣಿ ಬೊಜ್ಜಲ ಗೋಪಾಲ ಕೃಷ್ಣಾ ರೆಡ್ಡಿ ಮೊಮ್ಮಗಳು ಪದ್ಮಾ (Padma) ಅವರ ಜೊತೆ ಶರ್ವಾನಂದ್ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

    ಇದೇ ಜನವರಿ 26ರಂದು ಹೈದರಾಬಾದ್‌ನ ಪಾರ್ಕ್ ಹಯಾತ್‌ನಲ್ಲಿ ಶರ್ವಾನಂದ್ ಮತ್ತು ಪದ್ಮಾ ಎಂಗೇಜ್‌ಮೆಂಟ್ ನಡೆಯಲಿದೆ. ಎರಡು ಕುಟುಂಬದವರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಲಿದೆ. ಶರ್ವಾನಂದ್ ಅವರದ್ದು, ಗುರುಹಿರಿಯರು ನಿಗದಿಪಡಿಸಿರುವ ಅರೇಂಜ್ ಮ್ಯಾರೇಜ್ ಆಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    `ವಜ್ರಕಾಯ’ (Vajrakaya) ಸಿನಿಮಾ ಖ್ಯಾತಿಯ ಶುಭ್ರಾ ಅಯ್ಯಪ್ಪ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ (Vishal Sivappa) ಜೊತೆ ನಟಿ ಶುಭ್ರಾ ಹಸೆಮಣೆ (Wedding) ಏರಲು ಸಜ್ಜಾಗಿದ್ದಾರೆ.

    ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಕೂರ್ಗ್ ಬ್ಯೂಟಿ ಶುಭ್ರಾ (Shubra Aiyappa) ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿದ್ದರು. ಇದೀಗ ಸಿನಿಮಾ ಅವಕಾಶಗಳು ಅರಸಿ ಬರುತ್ತಿರುವ ಬೆನ್ನಲ್ಲೇ ಉದ್ಯಮಿ ವಿಶಾಲ್ (Businessmen Vishal) ಜೊತೆ ಮದುವೆಗೆ ಸಿದ್ಧರಾಗಿದ್ದಾರೆ.

    ಸತತ 6 ವರ್ಷಗಳ ಡೇಟಿಂಗ್ (Dating) ನಂತರ ಗುರುಹಿರಿಯರ ಸಮ್ಮುಖದಲ್ಲಿ ಶುಭ್ರಾ ಅಯ್ಯಪ್ಪ ಮತ್ತು ವಿಶಾಲ್ ಶಿವಪ್ಪ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಉದ್ಯಮಿ ವಿಶಾಲ್ ಮೊದಲು ಶುಭ್ರಾಗೆ ಪ್ರಪೋಸ್ ಮಾಡಿದ್ರಂತೆ, ಕೊಂಚ ಸಮಯಾವಕಾಶದ ನಂತರ ವಿಶಾಲ್ ಪ್ರೀತಿಗೆ ನಟಿ ಗ್ರೀನ್ ಸಿಗ್ನಲ್ ಕೊಟ್ಟರು. ಇದನ್ನೂ ಓದಿ: ಡಿವೋರ್ಸ್ ನಂತರ ಆಧ್ಯಾತ್ಮದತ್ತ ಹೊರಳಿದ್ರಾ ನಟಿ ಸಮಂತಾ

    ಇದೀಗ ಜನವರಿ 18ರಂದು ಫ್ಯಾಮಿಲಿ ಜೊತೆ ಕೂರ್ಗ್‌ನಲ್ಲಿ ವಿಶಾಲ್ ಮತ್ತು ಶುಭ್ರಾ ಸರಳವಾಗಿ ಮದುವೆಯಾಗುತ್ತಿದ್ದಾರೆ. ಇನ್ನೂ ಜ.20 ಮತ್ತು 21ರಂದು ಮೈಸೂರಿನಲ್ಲಿ ಸಿನಿಮಾ ರಂಗದ ಸ್ನೇಹಿತರಿಗೆ, ಗಣ್ಯರಿಗೆ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k