Tag: wedding

  • ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋ ಹಂಚಿಕೊಂಡ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಸ್ಯಾಂಡಲ್‌ವುಡ್ (Sandalwood) ನಟಿ ಶುಭ್ರ ಅಯ್ಯಪ್ಪ (Shubra Aiyappa) ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬಹುಕಾಲದ ಗೆಳೆಯ ವಿಶಾಲ್ (Vishal)  ಜೊತೆ ಸಂಸಾರಿಕ ಜೀವನ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಪತಿ ಜೊತೆಗಿನ ರೊಮ್ಯಾಂಟಿಕ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ.

     

    View this post on Instagram

     

    A post shared by Shubra Aiyappa (@shubra.aiyappa)

    `ವಜ್ರಕಾಯ’ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿ ಶುಭ್ರ ಅಯ್ಯಪ್ಪ ನಟಿಸಿದ್ದಾರೆ. ಉದ್ಯಮಿ ವಿಶಾಲ್ ಶಿವಪ್ಪ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸತತ ಆರು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಮದುವೆಯ ಬಳಿಕ ಶುಭ್ರ ದಂಪತಿ, ಕುಟುಂಬ ಮತ್ತು ಸ್ನೇಹಿತರ ಜೊತೆ ಕಾಕ್‌ಟೈಲ್ ಪಾರ್ಟಿ ಮಾಡಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

     

    View this post on Instagram

     

    A post shared by Shubra Aiyappa (@shubra.aiyappa)

    ವಿಶಾಲ್ ಬ್ಲಾö್ಯಕ್ ಸೂಟ್‌ನಲ್ಲಿ ಮಿಂಚಿದ್ರೆ, ಶುಭ್ರ ಲೈಟ್ ಅರೆಂಜ್ ಡ್ರೆಸ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಲಲಿತ್ ಮಹಲ್ ಪ್ಯಾಲೇಸ್ ಮೈಸೂರಿನಲ್ಲಿ ಕಾಕ್‌ಟೈಲ್ ಪಾರ್ಟಿ ನಡೆದಿದೆ.

     

    View this post on Instagram

     

    A post shared by Shubra Aiyappa (@shubra.aiyappa)

    ನಟಿ ಶುಭ್ರ ಮದುವೆ ಜನವರಿ 18ರಂದು ಕೂರ್ಗ್ನ ದೊಡ್ಮನೆ ಎಂಬ 150 ವರ್ಷದ ಹಳೆಯ ಮನೆಯಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಕುಟುಂಬಸ್ಥರು, ಆಪ್ತರು ಅಷ್ಟೇ ಭಾಗವಹಿಸಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ `ಪಾರು’ ಖ್ಯಾತಿಯ ಶರತ್ ಪದ್ಮನಾಭ್

    ಕಿರುತೆರೆಯ ಜನಪ್ರಿಯ ಧಾರಾವಾಹಿ `ಪಾರು’ (Paaru) ಮೂಲಕ ಮನೆ ಮಾತಾದ ನಟ ಶರತ್ ಪದ್ಮನಾಭ್ (Sharath Padmanabh) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟ ಶರತ್ ಬಹುಕಾಲದ ಗೆಳತಿ ದಿವ್ಯಶ್ರೀ (Divyashree) ಜೊತೆ ಹಸೆಮಣೆ ಏರಿದ್ದಾರೆ.

    ಜಸ್ಟ್ ಮಾತ್ ಮಾತಲ್ಲಿ, ಪುಟ್ಮಲ್ಲಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮಿಂಚಿದ್ದ ಪ್ರತಿಭಾನ್ವಿತ ನಟ ಶರತ್ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಆಪ್ತರು, ಗುರುಹಿರಿಯರ ಸಮ್ಮುಖದಲ್ಲಿ (ಜ.22)ರಂದು ಶರತ್ ಮತ್ತು ದಿವ್ಯಶ್ರೀ ಮದುವೆಯಾಗಿದ್ದಾರೆ.

    ಮದುವೆಗೆ `ಪಾರು’ ಸೀರಿಯಲ್ ತಂಡ ಮತ್ತು ವಾಹಿನಿ ಕೆಲ ಸ್ನೇಹಿತರಿಗಷ್ಟೇ ಆಹ್ವಾನ ನೀಡಲಾಗಿತ್ತು. ನಟ ಅನಿರುದ್ಧ, ʻಗಟ್ಟಿಮೇಳʼ ಖ್ಯಾತಿಯ ರಕ್ಷ್, ‌ʻಹಿಟ್ಲರ್‌ ಕಲ್ಯಾಣʼ ಸೀರಿಯಲ್‌ ದಿಲೀಪ್‌ ರಾಜ್ ಸೇರಿದಂತೆ ಹಲವರು ಮದುವೆ (Wedding) ಸಂಭ್ರಮದಲ್ಲಿ ಭಾಗಿಯಾಗಿದ್ದರು.

    ಇನ್ನೂ ನಟ ಶರತ್ ತಮ್ಮ ಎಂಗೇಜ್‌ಮೆಂಟ್ ಬಗ್ಗೆಯಾಗಲಿ, ಅಥವಾ ಮದುವೆ ಬಗ್ಗೆಯಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ – ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ

    ಮದುವೆ ಬಳಿಕ ಮಕ್ಕಳನ್ನು ಕರೆದುಕೊಂಡು ಬರುತ್ತೇನೆ – ಪಾಪರಾಜಿಗಳಿಗೆ ಸುನೀಲ್ ಶೆಟ್ಟಿ ಭರವಸೆ

    ಬಾಲಿವುಡ್  (Bollywood) ನಟ ಸುನೀಲ್ ಶೆಟ್ಟಿ (Suniel Shetty) ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಪುತ್ರಿ ಅಥಿಯಾ ಶೆಟ್ಟಿ ಮತ್ತು ರಾಹುಲ್ ಮದುವೆಗೆ ಈಗಾಗಲೇ ಕೌಂಟ್‌ಡೌನ್ ಶುರುವಾಗಿದೆ. ಮದುವೆ ನಡೆಯುವ ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಈ ವೇಳೆ ಪಾಪರಾಜಿಗಳಿಗೆ ನಟ ಸುನೀಲ್ ಶೆಟ್ಟಿ ಭರವಸೆ ನೀಡಿದ್ದಾರೆ.

    ಚಿತ್ರರಂಗದಲ್ಲಿ ಸದ್ಯ ಗಟ್ಟಿಮೇಳದ ಸದ್ದು ಜೋರಾಗಿದೆ. ಖಂಡಾಲದಲ್ಲಿ ಬಂಗಲೆ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ (Athiya Shetty) ಮದುವೆ (Wedding) ಕಾರ್ಯಗಳು ನಡೆಯುತ್ತಿವೆ. ಫಾರ್ಮ್ ಹೌಸ್ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಅವರನ್ನು ನೋಡಿದ ಸುನೀಲ್ ಶೆಟ್ಟಿ ಅವರು ಕಾರಿನಿಂದ ಕೆಳಗೆ ಇಳಿದು ಬಂದು ಮಾತನಾಡಿದ್ದಾರೆ. ನಾವು ನಾಳೆ ಬರುತ್ತೇವೆ. ಮಕ್ಕಳನ್ನು ನಾನು ಕರೆದುಕೊಂಡು ಬರುತ್ತೇನೆ ಎಂದು ಪಾಪರಾಜಿಗಳಿಗೆ ವಿನಯತೆಯಿಂದ ಸುನೀಲ್ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ

    ಮಗಳ ಮದುವೆಯ ಸಂಭ್ರಮದ ನಡುವೆ ಸುನೀಲ್ ಶೆಟ್ಟಿಗೆ ಪಾಪರಾಜಿಗಳು ಧನ್ಯವಾದಗಳನ್ನ ತಿಳಿಸಿದ್ದಾರೆ. ಅವರೆಲ್ಲರಿಗೂ ಸುನೀಲ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಮೇಲೆ ನೀವೆಲ್ಲ ಪ್ರೀತಿ ತೋರಿಸಿದ್ದಕ್ಕೆ ಬಹಳ ಥ್ಯಾಂಕ್ಸ್ ಎಂದು ಅವರು ಹೇಳಿದ್ದಾರೆ. ಪಾಪರಾಜಿಗಳ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

     

    View this post on Instagram

     

    A post shared by Viral Bhayani (@viralbhayani)

    ಕ್ರಿಕೆಟಿಗ ರಾಹುಲ್ (Kl Rahul) ಮತ್ತು ಅಥಿಯಾ ಶೆಟ್ಟಿ ಅವರು ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಸಪ್ತಪದಿ ತುಳಿದು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜನವರಿ 23ಕ್ಕೆ ಹಸೆಮಣೆ ಏರುತ್ತಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆಯಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಯುವತಿಯರ ಬೆಕ್ಕಿನ ನಡಿಗೆಗೆ ಕಂಫರ್ಟ್ ನೀಡುವ ಬಗೆಬಗೆಯ ಸ್ಯಾಂಡಲ್ – ಯಾವೆಲ್ಲಾ ಬಗೆಗಳಿವೆ ನೋಡಿ

    ಯುವತಿಯರ ಬೆಕ್ಕಿನ ನಡಿಗೆಗೆ ಕಂಫರ್ಟ್ ನೀಡುವ ಬಗೆಬಗೆಯ ಸ್ಯಾಂಡಲ್ – ಯಾವೆಲ್ಲಾ ಬಗೆಗಳಿವೆ ನೋಡಿ

    ಪ್ರಸ್ತುತ ಎಲ್ಲ ವಯೋಮಾನದ ಯುವತಿಯರು (Girls) ಹಾಗೂ ಮಹಿಳೆಯರು ತಮ್ಮ ಸ್ಟೈಲಿಶ್‌ ಉಡುಗೆಗೆ ಸ್ಯೂಟ್ ಆಗುವಂತ ಸ್ಯಾಂಡಲ್‌ಗಳನ್ನೇ (ಚಪ್ಪಲಿ) (Ladies Sandal) ಧರಿಸಲು ಇಷ್ಟಪಡ್ತಾರೆ. ಕಂಪನಿಗಳು ಸಹ ಅವರ ಅಭಿರುಚಿಗೆ ತಕ್ಕಂತೆ ಬಗೆ-ಬಗೆ ವಿನ್ಯಾಸದ ಆಕರ್ಷಕ ಚಪ್ಪಲಿಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿವೆ.

    ನೂತನ ವಿನ್ಯಾಸದ ಚಪ್ಪಲಿಗಳು (Sandals Footwear) ಸಂಗ್ರಹದ ಶ್ರೀಮಂತಿಕೆಯನ್ನೂ ಹೆಚ್ಚಿಸುವ ಜೊತೆಗೆ, ಕಂಫರ್ಟ್ ನಡಿಗೆಗೆ ಸಹಕರಿಸುತ್ತವೆ. ಕಾಲಿನ ಅಂದವನ್ನು ಡಬಲ್ ಮಾಡುವ ಸ್ಯಾಂಡಲ್‌ಗಳಲ್ಲೂ ಯಾವೆಲ್ಲಾ ಬಗೆಗಳಿವೆ ಎಂಬ ವಿವರಣೆಯನ್ನು ಇಲ್ಲಿ ನೀಡಲಾಗಿದೆ. ಇದನ್ನೂ ಓದಿ: ಹಳೆಯ ಆಭರಣಗಳಿಗೆ ಹೊಸ ಹುರುಪು – ಟ್ರೆಂಡಿಯಾಗಿ ಧರಿಸುವ ಬೆಳ್ಳಿ ಒಡವೆಗಳ ಬಗ್ಗೆ ಇಲ್ಲಿದೆ ಸಿಂಪಲ್ ಟಿಪ್ಸ್

    ಕೆಂಪು ಬಣ್ಣದ ಕಂಪು:
    ಕೆಂಪು ಬಣ್ಣದಲ್ಲಿ ಇರುವ ಚಪ್ಪಲಿ ಬಹಳ ಆಕರ್ಷಕ ವಿನ್ಯಾಸಗಳಿಂದ ಕೂಡಿದೆ. ವಧು ಹಾಗೂ ವಿಶೇಷ ಸಮಾರಂಭಗಳಲ್ಲಿ ಧರಿಸಲು ಇದು ಅತ್ಯುತ್ತಮ ಆಯ್ಕೆ. ಸೀರೆ, ಲೆಹೆಂಗಾದಂತಹ ಸಾಂಪ್ರದಾಯಿಕ ಉಡುಗೆ ಹಾಗೂ ಬಾಡಿಕಾರ್ನ್ ಡ್ರೆಸ್‌ಗಳೊಂದಿಗೆ ಧರಿಸೋದ್ರಿಂದ ಇನ್ನಷ್ಟು ಫ್ರೆಶ್ ಲುಕ್ ಸಿಗುತ್ತದೆ. ಇದನ್ನೂ ಓದಿ: ಯೂತ್ಸ್‌ಗೆ ಹೆಚ್ಚಾಯ್ತು ಕನ್ನಡಕದ ಮೇಲೆ ಕ್ರಶ್‌ – ಟ್ರೆಂಡಿ ಕನ್ನಡಕಗಳ ವಿನ್ಯಾಸ ನೋಡಿ…

    ಗೋಲ್ಡ್ ಪೇಂಟೆಡ್ ಸ್ಯಾಂಡಲ್:
    ಚಿನ್ನದ ಬಣ್ಣದಲ್ಲಿ ಲಭ್ಯವಿರುವ ಚಪ್ಪಲಿಗಳು ಮಹಿಳೆಯರ ಇತ್ತೀಚಿನ ಫ್ಯಾಷನ್ ಆಗಿದೆ. ಹೊಸ ವಿನ್ಯಾಸದಿಂದ ಕೂಡಿರುವ ಈ ಸ್ಯಾಂಡಲ್ ಸಾಂಪ್ರದಾಯಿಕ ಹಾಗೂ ಪಾರ್ಟಿವೇರ್ ಡ್ರೆಸ್‌ಗಳಿಗೆ ಧರಿಸಬಹುದು. ಇದನ್ನೂ ಓದಿ: ಚುಮು ಚುಮು ಚಳಿಯಲ್ಲೂ ಬೆಚ್ಚನೆಯ ಅನುಭವ ನೀಡುವ ಬಗೆಬಗೆಯ ಸ್ವೆಟರ್

    ಶಾರ್ಟ್ ಹೀಲ್ಸ್:
    ಇದೊಂದು ಹೊಸ ಶೈಲಿಯ ಮಹಿಳೆಯರ ಸ್ಯಾಂಡಲ್. ಗುಣಮಟ್ಟದ ಈ ಆಕರ್ಷಕ ಸ್ಯಾಂಡಲ್ ದೀರ್ಘಕಾಲ ಬಾಳಿಕೆ ಬರುವುದು. 3.5 ಇಂಚಷ್ಟು ಹಿಮ್ಮಡಿಯ ಎತ್ತರವನ್ನು ಪಡೆದುಕೊಂಡಿದೆ. ಫ್ರೆಂಡ್ಸ್ ಪಾರ್ಟಿ, ಮದುವೆ ಸಮಾರಂಭಗಳಿಗೂ ಧರಿಸಬಹುದು.

    ಕಪ್ಪು ಹೀಲ್ಸ್:
    ಬಹುಪಾಲು ಯುವತಿಯರು, ಮಧ್ಯವಯಸ್ಸಿನ ಮಹಿಳೆಯರು ಇಷ್ಟಪಡುವ ಈ ಕಪ್ಪು ಹೀಲ್ಸ್ ಸ್ಯಾಂಡಲ್ ಕೆಂಪುಬಣ್ಣದ ಲೆಗೆಂಹಾ, ಬಾಡಿಕಾರ್ನ್ ಡ್ರೆಸ್, ಸ್ಯಾರಿ, ಕುರ್ತಾ, ಸ್ಲೀವ್‌ಲೆಸ್ ಡ್ರೆಸ್‌ಗಳಿಗೆ ಸ್ಯೂಟ್ ಆಗುತ್ತದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾದ `ಸತ್ಯ’ ಸೀರಿಯಲ್ ಖ್ಯಾತಿಯ ಸಾಗರ್- ಸಿರಿ ರಾಜು

    `ಸತ್ಯ’ ಸೀರಿಯಲ್ (Sathya Serial) ಸಾಗರ್ ಬಿಳಿಗೌಡ (Sagar Biligowda) ಮತ್ತು ಮಾಡೆಲ್ ಕಮ್ ನಟಿ ಸಿರಿ ರಾಜು (Siri Raju) ವೈವಾಹಿಕ ಬದುಕಿಗೆ ಕಾಲಿಡಲು ರೆಡಿಯಾಗಿದ್ದಾರೆ. ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ ಕೂಡ ನೆರವೇರಿತ್ತು. ಇದೀಗ ಮದುವೆಯ (Wedding) ದಿನಾಂಕ ಕೂಡ ಫಿಕ್ಸ್ ಆಗಿದೆ. ಈ ಕುರಿತು ನಟಿ ಸಿರಿ ರಾಜು ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ, ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್-‌ ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ (Arrange Marriage) ಆಗಿದ್ದು, ಗುರುಹಿರಿಯರು ನಿಶ್ಚಿಯಿಸಿದ ಮದುವೆ ಎಂದು ಸಿರಿ ರಾಜು ತಿಳಿಸಿದ್ದಾರೆ.

    ಕಳೆದ ತಿಂಗಳು ನವೆಂಬರ್‌ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ (Engagemnet) ನಡೆದಿತ್ತು. ಇದೀಗ ಇದೇ ಜನವರಿ 26ರಂದು ಹಸೆಮಣೆ ಏರಲು ರೆಡಿಯಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸಾಗರ್, ಸಿರಿ ಜೋಡಿ ಮದುವೆಯಾಗುತ್ತಿದೆ. ಜ.25ರಂದು ಆರತಕ್ಷತೆ ನಡೆಯಲಿದೆ. ಅದಕ್ಕೂ ಮುನ್ನ ವಿವಾಹ ಪೂರ್ವ ಕಾರ್ಯಗಳು ಜರುಗಲಿದೆ.

    ಸಾಗರ್ ಬಿಳಿಗೌಡ ಮದುವೆಯಾಗುತ್ತಿರುವ ಹುಡುಗಿ ಸಿರಿ ರಾಜು ಕೂಡ ಕಲಾವಿದೆ. ಸಿರಿ ರಾಜು ಉದ್ಯಮಿ ಕೂಡ ಹೌದು. ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ಸಿರಿ ರಾಜು ಅಭಿನಯಿಸಿದ್ದಾರೆ. ಸದ್ಯ ವಿಜಯ್ ರಾಘವೇಂದ್ರ (Vijay Raghavendra) ಜೊತೆಗೆ `FIR 6 to 6′ ಸಿನಿಮಾದಲ್ಲಿ ಸಿರಿ ರಾಜು ನಟಿಸಿದ್ದಾರೆ. ಸಾಗರ್ ಬಿಳಿಗೌಡ ಪ್ರಸ್ತುತ `ಸತ್ಯ’ ಸೀರಿಯಲ್‌ನಲ್ಲಿ ನಾಯಕ ನಟನಾಗಿ ಜನಮನ ಗೆದ್ದಿದ್ದಾರೆ. ಇದನ್ನೂ ಓದಿ:ಒಂದೇ ದಿನ ತೆರೆಗೆ ಅಬ್ಬರಿಸುತ್ತಿದೆ ರಣ್‌ಬೀರ್- ಆಲಿಯಾ ಭಟ್ ಸಿನಿಮಾ: ಬಾಕ್ಸಾಫೀಸ್‌ ಫೈಟ್‌

    ಇನ್ನೂ ವೈವಾಹಿಕ ಬದುಕಿಗೆ ಕಾಲಿಡುತ್ತಿರುವ ಸಾಗರ್ ಮತ್ತು ಸಿರಿ ರಾಜುಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಉದ್ಯಮಿ ವಿಶಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಉದ್ಯಮಿ ವಿಶಾಲ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ `ವಜ್ರಕಾಯ’ ನಟಿ ಶುಭ್ರ ಅಯ್ಯಪ್ಪ

    ಶಿವರಾಜ್‌ಕುಮಾರ್‌ಗೆ (Shivarajkumar) ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಕೊಡಗಿನ ಕುವರಿ ಶುಭ್ರ ಅಯ್ಯಪ್ಪ (Shubra Aiyyappa) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳೆಯ ವಿಶಾಲ್ ಶಿವಪ್ಪ (Vishal Aiyyappa) ಜೊತೆ ಸಪ್ತಪದಿ ತುಳಿದಿದ್ದಾರೆ. ಇದನ್ನೂ ಓದಿ: ಖ್ಯಾತ ನಟ ವಿಜಯ್ ಆಂಟನಿ ಅಪಘಾತ: ಸ್ಥಿತಿ ಚಿಂತಾಜನಕ

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಅದಿತಿ ಪ್ರಭುದೇವ ಹಸೆಮಣೆ ಏರಿದ್ದ ಬೆನ್ನಲ್ಲೇ ಇದೀಗ ನಟಿ ಶುಭ್ರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಒಪ್ಪಿಗೆಯ ಮೇರೆಗೆ ಶುಭ್ರ ಮತ್ತು ವಿಶಾಲ್ ಮದುವೆಯಾಗಿದ್ದಾರೆ.

    ಉದ್ಯಮಿ ವಿಶಾಲ್ ಮತ್ತು ಶುಭ್ರ ಮದುವೆ ಜನವರಿ 18ರಂದು ಕೂರ್ಗ್‌ನ `ದೊಡ್ಮನೆ’ (Doddamane) ಎಂಬ 150 ವರ್ಷದ ಹಳೆಯ ಮನೆಯಲ್ಲಿ ಮದುವೆಯಾಗಿದ್ದಾರೆ. ಈ ಮದುವೆಗೆ ಕುಟುಂಬಸ್ಥರು, ಆಪ್ತರು ಅಷ್ಟೇ ಭಾಗವಹಿಸಿದ್ದರು. ಇನ್ನೂ ಜ.20 ಮತ್ತು 21ರಂದು ಸಿನಿಮಾ ರಂಗದ ಸ್ನೇಹಿತರಿಗೆ ಆಪ್ತರಿಗೆ ಮೈಸೂರಿನಲ್ಲಿ ಆರತಕ್ಷತೆ ಇರಲಿದೆ.

    ಇನ್ನೂ ಶುಭ್ರ ಮದುವೆ ಫಂಕ್ಷನ್‌ನಲ್ಲಿ ನಟಿ ನಿಧಿ ಸುಬ್ಬಯ್ಯ, `ಮುಂಗಾರು ಮಳೆ 2′ ನಟಿ ನೇಹಾ ಶೆಟ್ಟಿ ಕೂಡ ಭಾಗಿಯಾಗಿದ್ದಾರೆ. ನವಜೋಡಿಗೆ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ

    ಕೆ.ಎಲ್ ರಾಹುಲ್- ಅಥಿಯಾ ಶೆಟ್ಟಿ ಮನೆಯಲ್ಲಿ ಮದುವೆ ಸಂಭ್ರಮ

    ಬಾಲಿವುಡ್ (Bollywood)  ನಟಿ ಅಥಿಯಾ ಶೆಟ್ಟಿ (Athiya Shetty) ಹಾಗೂ ಕ್ರಿಕೆಟಿಗ ಕೆ.ಎಲ್ ರಾಹುಲ್ (K.l Rahul) ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆಯ ಈಗಾಗಲೇ ತಯಾರಿ ಶುರುವಾಗಿದ್ದು, ರಾಹುಲ್ ಅವರ ಮುಂಬೈನ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.

    ಸುನೀಲ್ ಶೆಟ್ಟಿ (Suniel Shetty) ಅವರ ಖಂಡಾಲ ಬಂಗಲೆಯಲ್ಲಿ ಅಥಿಯಾ ಮತ್ತು ರಾಹುಲ್ ಮದುವೆ (Wedding) ಅದ್ದೂರಿಯಾಗಿ ನಡೆಯಲಿದೆ. ಜ.21ರಿಂದ ಮದುವೆ ಕಾರ್ಯಕ್ರಮ ಜರುಗಲಿದೆ. ಜ.23ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಮದುವೆ ಸಿದ್ಧತೆಯಲ್ಲಿ ಕೆ.ಎಲ್ ರಾಹುಲ್ ಕೂಡ ಬ್ಯುಸಿಯಿದ್ದಾರೆ. ರಾಹುಲ್ ಅವರ ಮುಂಬೈ ಮನೆಯಲ್ಲಿ ಮದುವೆ ಜೋರಾಗಿ ಸಿದ್ಧತೆ ನಡೆಯುತ್ತಿದೆ.

     

    View this post on Instagram

     

    A post shared by Viral Bhayani (@viralbhayani)

    ಇನ್ನೂ ಅಥಿಯಾ ಜೋಡಿ ಮದುವೆಯಲ್ಲಿ ಹೈ-ಪ್ರೋಫೈಲ್ ಸಲ್ಮಾನ್ ಖಾನ್, ಶಾರುಖ್ ಖಾನ್, ದೀಪಿಕಾ ಪಡುಕೋಣೆ, ರಣ್‌ವೀರ್ ಕಪೂರ್ ಜಾಕಿ ಶ್ರಾಫ್, ಅಕ್ಷಯ್ ಕುಮಾರ್, ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ ದಂಪತಿ ಸೇರಿದಂತೆ ಹಲವರು ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದಾರೆ. ಸುನೀಲ್‌ ಶೆಟ್ಟಿ ಅವರ ಭವ್ಯ ಬಂಗಲೆಯಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ: ಶಿವಣ್ಣನ `ಪುಷ್ಪಾ’ ಹಾಡಿಗೆ ಹೆಜ್ಜೆ ಹಾಕಿದ ಅರ್ಜುನ್ ಜನ್ಯ- ಅನುಶ್ರೀ

    ಸಾಕಷ್ಟು ವರ್ಷಗಳು ಡೇಟಿಂಗ್ ನಂತರ ಗುರುಹಿರಿಯರ ಸಮ್ಮುಖದಲ್ಲಿ ರಾಹುಲ್ ಮತ್ತು ಅಥಿಯಾ ಹಸೆಮಣೆ ಏರುತ್ತಿದ್ದಾರೆ. ಜ.23ರಂದು ಹೊಸ ಬಾಳಿಗೆ ಈ ಜೋಡಿ ಕಾಲಿಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಸ್ಯಾಂಡಲ್‌ವುಡ್ ತಾರೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿದ ʻಸಿಂಹಪ್ರಿಯʼ ಜೋಡಿ

    ಸ್ಯಾಂಡಲ್‌ವುಡ್ ತಾರೆಯರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿದ ʻಸಿಂಹಪ್ರಿಯʼ ಜೋಡಿ

    ಸ್ಯಾಂಡಲ್‌ವುಡ್‌ನ (Sandalwood) ಪ್ರತಿಭಾವಂತ ನಟ ವಸಿಷ್ಠ ಸಿಂಹ (Vasista simha) ಮತ್ತು ಹರಿಪ್ರಿಯಾ (Haripriya) ಜೋಡಿ ಹಸೆಮಣೆ ಏರಲು ಕೌಂಟ್ ಶುರುವಾಗಿದೆ. ಕನ್ನಡದ ಸಿನಿ ತಾರೆಯರಿಗೆ ಮದುವೆ ಆಮಂತ್ರಣ (Wedding Card) ಪತ್ರಿಕೆ ನೀಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.


    ಎರಡೂವರೆ ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಲು ವಸಿಷ್ಠ ಮತ್ತು ಹರಿಪ್ರಿಯಾ ರೆಡಿಯಾಗಿದ್ದಾರೆ. ಈ ಮದುವೆ ಸಂಭ್ರಮಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳಿಗೆ ಪ್ರೀತಿಯಿಂದ ಈ ಜೋಡಿ ಆಹ್ವಾನ ನೀಡಿದೆ.

    ಸ್ಯಾಂಡಲ್‌ವುಡ್‌ನ ಹಿರಿಯ ನಟ ಅನಂತ್ ನಾಗ್ (Ananthnag) ಮತ್ತು ನಟ ಕಿಚ್ಚ ಸುದೀಪ್ (Kiccha sudeep) ನಿವಾಸಕ್ಕೆ ತೆರಳಿ ಹರಿಪ್ರಿಯಾ ಜೋಡಿ ಆಮಂತ್ರಣ ನೀಡಿದ್ದಾರೆ.

    `ಕಾಂತಾರ’ ಚಿತ್ರದ ಸೂಪರ್ ಸ್ಟಾರ್ ರಿಷಬ್ ಶೆಟ್ಟಿ (Rishab Shetty) ದಂಪತಿ ಮತ್ತು ಜಗ್ಗೇಶ್ (Actor Jaggesh) ದಂಪತಿಗೆ ಮದುವೆಗೆ ಆಹ್ವಾನ ನೀಡಿದ್ದಾರೆ.

    ಶಿವರಾಜ್‌ ಕುಮಾರ್‌ ದಂಪತಿ, ಉಪೇಂದ್ರ ದಂಪತಿ ಮತ್ತು ನಟಿ ಕಮ್ ಸಂಸದೆ ಸುಮಲತಾ, ನಟಿ ಶ್ರುತಿ, ಮಾಲಾಶ್ರೀ, ನಟ ಪ್ರೇಮ್‌ ದಂಪತಿ, ಗಿರಿಜಾ ಲೋಕೇಶ್‌ ಕುಟುಂಬ ಸೇರಿದಂತೆ ಹಲವರಿಗೆ ಮದುವೆ ಪತ್ರಿಕೆ ಈಗಾಗಲೇ ನೀಡಿದ್ದಾರೆ.

    ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಅಮೂಲ್ಯ ಜಗದೀಶ್ ಜೋಡಿಗೆ ಆಮಂತ್ರಣ ಪತ್ರಿಕೆ ಕೊಟ್ಟಿದ್ದಾರೆ. ಮದುವೆ ಮತ್ತು ಆರತಕ್ಷತೆ ದಿನ ಸ್ಯಾಂಡಲ್‌ವುಡ್ ಜೊತೆ ಪರಭಾಷೆಯ ಸ್ಟಾರ್ಸ್‌ ಕೂಡ ಬರಲಿದ್ದಾರೆ. ಹರಿಪ್ರಿಯಾ ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿರುವ ಕಾರಣ ಪಕ್ಕದ ರಾಜ್ಯ ಸ್ಟಾರ್ ಕಲಾವಿದರ ದಂಡೇ ಸಿಂಹಪ್ರಿಯ ಮದುವೆಯಲ್ಲಿ ಮಿಂಚಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮದುವೆ ಬಗ್ಗೆ ನಟಿ ರಚಿತಾ ರಾಮ್ ಮನದಾಳದ ಮಾತು

    ಮದುವೆ ಬಗ್ಗೆ ನಟಿ ರಚಿತಾ ರಾಮ್ ಮನದಾಳದ ಮಾತು

    ಸ್ಯಾಂಡಲ್‌ವುಡ್ (Sandalwood) ನಟಿ ರಚಿತಾ ರಾಮ್ (Rachitha Ram) ಅದ್ಯಾವಾಗ ಮದುವೆಯ ಬಗ್ಗೆ ಸಿಹಿ ಸುದ್ದಿ ಕೊಡುತ್ತಾರೆ ಅಂತಾ ಅಭಿಮಾನಿಗಳು ಕಾಯ್ತಿದ್ದಾರೆ. ಈ ಬೆನ್ನಲ್ಲೇ ರಚ್ಚು ಮದುವೆಯ ಬಗ್ಗೆ ಮಾತನಾಡಿದ್ದಾರೆ.

    ರಚಿತಾ ರಾಮ್ ಸಹೋದರಿ ನಿತ್ಯಾ ರಾಮ್ ಅವರ ಮದುವೆ 2019ರಲ್ಲಿ ಹಸೆಮಣೆ ಏರಿದ್ದರು. ನಿತ್ಯಾ ಮದುವೆ ನಂತರ ರಚಿತಾ ಮದುವೆಗೆ ಇಡೀ ರಾಜ್ಯವೇ ಕಾಯುತ್ತಿದೆ. ರಚಿತಾನಾ ಮದುವೆಯಾಗಲು ಸಾಲಾಗಿ ಹುಡುಗರು ನಿಲ್ತಾರೆ ಆದರೆ ರಚ್ಚುನೇ ಮದುವೆಗೆ ಗ್ರೀನ್ ಸಿಗ್ನಲ್ ಕೊಡುತ್ತಿಲ್ಲ. ಹೀಗಿರುವಾಗ ಮಾಧ್ಯಮದ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ನಟಿ ಮಾತನಾಡಿದ್ದಾರೆ.

    ಮದುವೆ ಅನ್ನೋದು ಸುಂದರವಾದ ಕ್ಷಣ ನನಗೆ. ಮದುವೆ ಯಾವಾಗ ಆಗುತ್ತೀನಿ ಎಂದು ನನಗೆ ಗೊತ್ತಿಲ್ಲ. ಮದುವೆಯಾಗುವ ಪ್ಲ್ಯಾನ್ ಮಾಡಿಲ್ಲ. ಮದುವೆ ಆಗ್ತೀನಿ ಅನ್ನೋ ವಿಚಾರವನ್ನ ಖುಷಿಯಾಗಿ ಹಂಚಿಕೊಳ್ತೀನಿ. ದೇವಸ್ಥಾನದಲ್ಲಿ ಮದುವೆಯಾಗಬೇಕು ಅಥವಾ ಮನೆಯಲ್ಲಿ ದೇವರ ಮನೆ ಮುಂದೆ ಮದುವೆಯಾಗಬೇಕು. ಏಕೆಂದರೆ ನಾವು ವಾಸ ಮಾಡುವ ಮನೆಯಲ್ಲಿ ಎನರ್ಜಿ ಇರುತ್ತದೆ. ಇದನ್ನೂ ಓದಿ: ತಂದೆಯ ಹುಟ್ಟುಹಬ್ಬಕ್ಕೆ ವಿಶೇಷ ಫೋಟೋ ಹಂಚಿಕೊಂಡ ನಟಿ ರಾಧಿಕಾ ಪಂಡಿತ್

    ಆಡಂಬರದಲ್ಲಿ ಮದುವೆ ಮಾಡಿಕೊಂಡು ಆಮೇಲೆ ಲೈಫ್‌ನಲ್ಲಿ ಅಯ್ಯೋ ಎನ್ನುವ ಹಾಗೆ ಆದರೆ ಏನು ಮಾಡೋದು ಎಂದು ರಚ್ಚು ಮಾತನಾಡಿದ್ದಾರೆ. ನಾನು ಮದುವೆಯಾಗಿ ಜೀವನ ಶುರು ಮಾಡೋದು ನನ್ನ ಸಂಗಾತಿ ಜೊತೆ ಹಾಗಾಗಿ ಮದುವೆ ನನ್ನ ಇಷ್ಟದ ಪ್ರಕಾರ ನಡೆಯಬೇಕು ಎಂದು ಮದುವೆಯ ಬಗ್ಗೆ ನಟಿ ಮಾತನಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಖಿ ಗೋಳಾಟದ ಬಳಿಕ ಮದುವೆ ಬಗ್ಗೆ ಅಧಿಕೃತ ಪೋಸ್ಟ್ ಹಂಚಿಕೊಂಡ ಆದಿಲ್ ಖಾನ್

    ರಾಖಿ ಗೋಳಾಟದ ಬಳಿಕ ಮದುವೆ ಬಗ್ಗೆ ಅಧಿಕೃತ ಪೋಸ್ಟ್ ಹಂಚಿಕೊಂಡ ಆದಿಲ್ ಖಾನ್

    ಮೈಸೂರು ಹುಡುಗ (Mysore) ಆದಿಲ್ ಖಾನ್ (Adil Khan) ಜೊತೆ ರಾಖಿ ಸಾವಂತ್ (Rakhi Sawant) ಮದುವೆ ಮ್ಯಾಟರ್ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ತಮ್ಮ ಮದುವೆ ಆಗಿದ್ರು ಕೂಡ ಒಪ್ಪಿಕೊಳ್ತಿಲ್ಲ ಅಂತಾ ರಾಖಿ ಗೋಳಾಡಿದ್ದರು. ಈ ಬೆನ್ಲಲ್ಲೇ ತಮ್ಮ ಮದುವೆಯ (Wedding) ಬಗ್ಗೆ ಆದಿಲ್ ಖಾನ್ ಮೌನ ಮುರಿದಿದ್ದಾರೆ. ಈ ಕುರಿತು ಅಧಿಕೃತ ಪೋಸ್ಟ್‌ವೊಂದನ್ನ ಹಂಚಿಕೊಂಡಿದ್ದಾರೆ.

    ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘವಾಗಿ ಮಾಹಿತಿ ನೀಡಿರುವ ರಾಖಿ, ಆರು ತಿಂಗಳ ಹಿಂದೆಯೇ ನಾವಿಬ್ಬರೂ ಮದುವೆ ಆಗಿದ್ದೇವೆ. ತಮ್ಮ ತಂಗಿಯ ಮದುವೆ ಆಗೋವರೆಗೂ ಈ ವಿಷಯವನ್ನು ಯಾರಿಗೂ ಹೇಳಬೇಡಿ ಎಂದು ಆದಿಲ್ ಹೇಳಿದ್ದ. ಹಾಗಾಗಿ ಸುಮ್ಮನಿದ್ದೆ. ಆದಿಲ್ ಮನೆ ಮಂದಿಗೆ ನಾನು ಅಂದರೆ ಇಷ್ಟವಿಲ್ಲ. ಹಾಗಾಗಿ ಅವರೂ ಅಡ್ಡಿಪಡಿಸುತ್ತಿದ್ದಾರೆ. ಆದಿಲ್ ಇಷ್ಟದಂತೆ ನಾನು ಫಾತಿಮಾ ಆಗಿಯೂ ಬದಲಾಗಿದ್ದೆ. ಇಷ್ಟೆಲ್ಲ ಹೊಂದಾಣಿಕೆ ಮಾಡಿಕೊಂಡರೂ, ಅವನು ನನಗೆ ಮೋಸ ಮಾಡುತ್ತಿದ್ದಾನೆ ಎಂದು ರಾಖಿ ಹೇಳಿಕೊಂಡಿದ್ದರು. ರಾಖಿ ಅರಚಾಟ ಗೋಳಾಟ ನಂತರ ಆದಿಲ್ (Adil Khan) ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ನಾನು ಯಾವತ್ತೂ ರಾಖಿಯನ್ನು ಮದುವೆಯಾಗಿದ್ದಾಗಿ ಹೇಳಿರಲಿಲ್ಲ. ಅದಕ್ಕೆ ಕೆಲವು ಕಾರಣಗಳಿತ್ತು. ಕೆಲವೊಂದು ಕಾರಣಗಳಿಂದ ನಮ್ಮ ಮದುವೆ ವಿಚಾರವನ್ನು ಮುಚ್ಚಿಟ್ಟೆ. ರಾಖಿ ನಮಗೆ `ಹ್ಯಾಪಿ ಮ್ಯಾರೀಡ್ ಲೈಫ್’ ಎಂದು ಬರೆದಿದ್ದಾರೆ. ತಮ್ಮ ಮದುವೆ ಫೋಟೋ ಶೇರ್ ಮಾಡಿ, ಅಧಿಕೃತವಾಗಿ ಹೇಳಿದ್ದಾರೆ. ಪತಿಯ ಪೋಸ್ಟ್‌ಗೆ ಲವ್‌ ಯೂ ಜಾನ್‌ ಎಂದು ರಾಖಿ ಪ್ರತಿಕ್ರಿಯೆ ನೀಡಿದ್ದಾರೆ.

    ಒಟ್ನಲ್ಲಿ ರಾಖಿ ಮದುವೆ (Wedding) ಪ್ರಸಂಗಕ್ಕೆ ಈಗ ಅಂತ್ಯವಾಗಿದೆ. ಹೊಸ ಬಾಳಿಗೆ ಕಾಲಿಟ್ಟಿರುವ ನವ ಜೋಡಿಗೆ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k