Tag: wedding

  • ನಟ ವಿಜಯ್ ಜೊತೆಗಿನ ಮದುವೆ ಬಗ್ಗೆ ಕೀರ್ತಿ ಸುರೇಶ್ ತಾಯಿ ಸ್ಪಷ್ಟನೆ

    ನಟ ವಿಜಯ್ ಜೊತೆಗಿನ ಮದುವೆ ಬಗ್ಗೆ ಕೀರ್ತಿ ಸುರೇಶ್ ತಾಯಿ ಸ್ಪಷ್ಟನೆ

    ಸೌತ್ ನಟಿ ಕೀರ್ತಿ ಸುರೇಶ್ (Keerthy Suresh), ದಳಪತಿ ವಿಜಯ್ (Thalapathy Vijay) ಜೊತೆಗಿನ ಮದುವೆ ವಿಚಾರವಾಗಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಈ ಬೆನ್ನಲ್ಲೇ ಕೀರ್ತಿ ಸುರೇಶ್, ತಾಯಿ ಮೇನಕಾ (Menaka) ಮಗಳ ಮದುವೆ ಸುದ್ದಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

    ತಮಿಳಿನ ಸಾಕಷ್ಟು ಸಿನಿಮಾಗಳ ಮೂಲಕ ಛಾಪೂ ಮೂಡಿಸಿರುವ ಕೀರ್ತಿ ಅವರು ಸಿನಿಮಾಗಿಂತ ತಮ್ಮ ವೈಯಕ್ತಿಕ ಬದುಕಿನ ವಿಷ್ಯವಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಕೆಲ ದಿನಗಳಿಂದ ದಳಪತಿ ವಿಜಯ್ ಜೊತೆ ನಟಿ ಕೀರ್ತಿ ಹಸೆಮಣೆ ಏರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾರು ಈ ಬಗ್ಗೆ ಸ್ಪಷ್ಟನೆ ನೀಡಿರಲಿಲ್ಲ. ಆದರೆ ಈಗ ಕೀರ್ತಿ ಅವರ ತಾಯಿ ಸ್ಪಷ್ಟನೆ ನೀಡಿದ್ದಾರೆ.

    ಭೈರವ, ಸರ್ಕಾರ್ ಸಿನಿಮಾಗಳಲ್ಲಿ ಜೋಡಿಯಾಗಿ ವಿಜಯ್- ಕೀರ್ತಿ ನಟಿಸಿದ್ದರು. ಹಾಗಾಗಿ ಈ ಮದುವೆ ಸುದ್ದಿ ಹಬ್ಬಿತ್ತು. ಈ ಕಡೆ ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್ ಕೊಡುತ್ತಾರೆ ಎಂಬ ಸುದ್ದಿ ವೈರಲ್ ಆಗ್ತಿದ್ದಂತೆ ಕೀರ್ತಿ ಜೊತೆ 2ನೇ ಮದುವೆ ವಿಚಾರ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿತ್ತು.

    ಒಂದು ಕಡೆ ನಟ ವಿಜಯ್ ಜೊತೆಗಿನ ಮದುವೆ ಸುದ್ದಿ, ಇನ್ನೊಂದು ಕಡೆ ನಟಿಯ ಹೈಸ್ಕೂಲ್ ಸ್ನೇಹಿತನ ಮದುವೆ ಎಂದು ಕೂಡ ಸುದ್ದಿ ಹಬ್ಬಿತ್ತು ಅದಕ್ಕೆಲ್ಲಾ ಇದೀಗ ಉತ್ತರ ಸಿಕ್ಕಿದೆ. ಇದನ್ನೂ ಓದಿ: ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    ಕೆಲವು ದಿನಗಳಿಂದ ಓಡಾಡುತ್ತಿರುವ ಸುದ್ದಿಯಲ್ಲಿ ಹುರುಳಿಲ್ಲ. ಇದು ಕೇವಲ ಪ್ರಚಾರಕಷ್ಟೇ. ಇದೆಲ್ಲಾ ಕೇವಲ ಗಾಳಿ ಸುದ್ದಿ ಅಷ್ಟೇ ಎಂದು ಕೀರ್ತಿ ಅವರ ತಾಯಿ ಮೇನಕಾ ಸುರೇಶ್ ಮದುವೆಯ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮದುವೆ ಬಗ್ಗೆ ಯಾವುದೇ ರೀತಿಯ ಪ್ಲ್ಯಾನ್‌ ಮಾಡಿಲ್ಲ ಎಂಬುದನ್ನ ಸ್ಪಷ್ಟಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ನಟಿ ಅದಿತಿಯ ಮಾಜಿ ಪತಿ‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿಸೈನರ್ ಮಸಾಬಾ

    ನಟಿ ಅದಿತಿಯ ಮಾಜಿ ಪತಿ‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಡಿಸೈನರ್ ಮಸಾಬಾ

    ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ, ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಪುತ್ರಿ ಮಸಾಬಾ ಗುಪ್ತಾ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ನಟ ಸತ್ಯದೀಪ್ ಮಿಶ್ರಾ (Sathyadeep Misra) ಜೊತೆ ಮಸಾಬಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಕುರಿತು ನವಜೋಡಿ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

     

    View this post on Instagram

     

    A post shared by Masaba (@masabagupta)

    ಚಿತ್ರರಂಗದಲ್ಲಿ ಗಟ್ಟಿಮೇಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ ಮತ್ತು ಕ್ರಿಕೆಟಿಗ ರಾಹುಲ್ ನಂತರ ಬಿಟೌನ್ ಮತ್ತೊಂದು ಜೋಡಿ, ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ ಶುಕ್ರವಾರ (ಜ.26) ಮದುವೆಯಾಗಿದ್ದಾರೆ. ಅಂದಹಾಗೆ ಸತ್ಯದೀಪ್ ಅವರಿಗೆ ಇದು 2ನೇ ಮದುವೆ. ಈ ಹಿಂದೆ ಸತ್ಯದೀಪ್, ನಟಿ ಅದಿತಿ ರಾವ್ ಹೈದರಿಯನ್ನು (Aditi Rao Hydari) ಜೊತೆ ಮದುವೆಯಾಗಿತ್ತು. ಮದುವೆಯಾಗಿ ಕೆಲವೇ ತಿಂಗಳಲ್ಲಿ ಇಬ್ಬರೂ ಬೇರೆ ಬೇರೆ ಆದರು. 2013ರಲ್ಲಿ ಅದಿತಿ ಮತ್ತು ಸತ್ಯದೀಪ್ ಡಿವೋರ್ಸ್ ಪಡೆದು ದೂರ ಆದರು. ಇದೀಗ ಮಸಾಬಾ ಗುಪ್ತಾ ಜೊತೆ 2ನೇ ಮದುವೆಯಾಗಿದ್ದಾರೆ.‌ ಇದನ್ನೂ ಓದಿ: ನಂದಮೂರಿ ತಾರಕ ರತ್ನಗೆ ಹೃದಯಾಘಾತ: ಆಸ್ಪತ್ರೆಗೆ ದಾಖಲು

     

    View this post on Instagram

     

    A post shared by Masaba (@masabagupta)

    ಮಸಾಬಾ ಗುಪ್ತಾ ಅವರಿಗೂ ಇದು 2ನೇ ಮದುವೆ. ಈ ಮೊದಲು 2015ರಲ್ಲಿ ನಿರ್ಮಾಪಕ ಮಧು ಮಂಟೇನಾ ಅವರನ್ನು ಮದುವೆಯಾಗಿದ್ದರು. ಆದರೆ ಕೆಲವೇ ವರ್ಷಗಳಲ್ಲಿ ಅಂದರೆ 2019ರಲ್ಲಿ ಡಿವೋರ್ಸ್ ನೀಡುವ ಮೂಲಕ ದೂರ ದೂರ ಆದರು.

     

    View this post on Instagram

     

    A post shared by Masaba (@masabagupta)

    ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಸರಳವಾಗಿ ನಡೆದ ಮದುವೆ ಸಮಾರಂಭದ ಫೋಟೋಗಳು ಈಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಬಹುಕಾಲದ ಗೆಳತಿ ಜೊತೆ ತೆಲುಗು ನಟ ಶರ್ವಾನಂದ್ ಎಂಗೇಜ್‌ಮೆಂಟ್

    ಟಾಲಿವುಡ್ ನಟ ಶರ್ವಾನಂದ್ (Sharwanand) ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ರಕ್ಷಿತಾ ರೆಡ್ಡಿ ಜೊತೆ ಶರ್ವಾನಂದ್ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ. ನಟ ಶರ್ವಾನಂದ್‌ಗೆ  ಶುಭಹಾರೈಸಲು ಟಾಲಿವುಡ್‌ನ ನಟ-ನಟಿಯರು ಕೂಡ ಭಾಗಿಯಾಗಿದ್ದಾರೆ.

    ಗೆಳತಿ ರಕ್ಷಿತಾ ರೆಡ್ಡಿ ಜೊತೆ ಗುರುವಾರ (ಜ.26)ರಂದು ಶರ್ವಾನಂದ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಉಂಗುರ ತೊಡಿಸಿದ್ದಾರೆ. ಸಾಕಷ್ಟು ವರ್ಷಗಳಿಂದ ಶರ್ವಾನಂದ್ ಮತ್ತು ರಕ್ಷಿತಾ ಪ್ರೀತಿಸುತ್ತಿದ್ದರು. ಈಗ ಹಿರಿಯರ ಒಪ್ಪಿಗೆಯ ಮೇರೆಗೆ ಎಂಗೇಜ್ ಆಗಿದ್ದಾರೆ.

     

    View this post on Instagram

     

    A post shared by Sharwanand (@imsharwanand)

    ನಟ ಶರ್ವಾನಂದ್ ಕೈ ಹಿಡಿಯುತ್ತಿರುವ ಹುಡುಗಿಯ ಹೆಸರು ರಕ್ಷಿತಾ ರೆಡ್ಡಿ (Raskshitha Reddy). ಸಾಫ್‌ವೇರ್ ಇಂಜಿನಿಯರ್ ಆಗಿ ಆಕೆ ಕೆಲಸ ಮಾಡುತ್ತಿದ್ದಾರೆ. ತಂದೆ ಮಧುಸೂದನ ರೆಡ್ಡಿ ತೆಲಂಗಾಣ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದಾರೆ. ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಎಂಗೇಜ್‌ಮೆಂಟ್ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಇನ್ನೂ ನಟ ಶರ್ವಾನಂದ್ ಎಂಗೇಜ್‌ಮೆಂಟ್‌ಗೆ ರಾಮ್ ಚರಣ್ (Ramcharan) ದಂಪತಿ, ಸಿದ್ಧಾರ್ಥ್- ಅದಿತಿ ಜೋಡಿ, ನಟ ಚಿರಂಜೀವಿ, ನಾನಿ, ನಟ ನಾಗಾರ್ಜುನ ದಂಪತಿ ಸೇರಿದಂತೆ ಹಲವರು ಭಾಗಿಯಾಗಿ ಶುಭಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಸತ್ಯʼ ಸೀರಿಯಲ್ ನಟ ಸಾಗರ್- ಸಿರಿ ರಾಜು

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಸತ್ಯʼ ಸೀರಿಯಲ್ ನಟ ಸಾಗರ್- ಸಿರಿ ರಾಜು

    `ಸತ್ಯ’ ಸೀರಿಯಲ್ (Sathya Serial) ಸಾಗರ್ ಬಿಳಿಗೌಡ (Sagar Biligowda) ಮತ್ತು ನಟಿ ಸಿರಿ ರಾಜು (Siriraju) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಯ ದಿನವೇ ಕಿರುತೆರೆ ನಟ ಸಾಗರ್ ಬಿಳಿಗೌಡ ಮತ್ತು ಸಿರಿ ಕೂಡ (ಜ.26)ರಂದು ಮದುವೆ (Wedding) ಆಗಿದ್ದಾರೆ.

    ಸಾಗರ್ ಮತ್ತು ಸಿರಿ ರಾಜು ಭೇಟಿ ಅನಿರಿಕ್ಷಿತ ಭೇಟಿಯೇ, ಮದುವೆ ಎಂಬ ಬಂಧದವರೆಗೂ ತಂದು ನಿಲ್ಲಿಸಿದೆ. ಖಾಸಗಿ ವಾಹಿನಿಯ ಇವೆಂಟ್‌ನಲ್ಲಿ ಸಾಗರ್- ಸಿರಿ ಪರಿಚಯವಾಯ್ತು. ಇಬ್ಬರ ನಡುವೆ ಒಳ್ಳೆಯ ಫ್ರೆಂಡ್‌ಶಿಪ್‌ಯಿತ್ತು. ಆದರೆ ಮದುವೆ ಆಗುವ ಆಲೋಚನೆ ಇಬ್ಬರಿಗೂ ಇರಲಿಲ್ಲ. ಇದು ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ. ಇದನ್ನೂ ಓದಿ: ವಸಿಷ್ಠ ಸಿಂಹ- ಹರಿಪ್ರಿಯಾ ಮದುವೆಗೆ ಸಾಕ್ಷಿಯಾದ ಸೆಲೆಬ್ರಿಟಿಗಳು

    ಕಳೆದ ತಿಂಗಳು ನವೆಂಬರ್‌ನಲ್ಲಿ ಸಿರಿ ರಾಜು ಮತ್ತು ಸಾಗರ್ ಎಂಗೇಜ್‌ಮೆಂಟ್ ನಡೆದಿತ್ತು. ಇದೀಗ ಜ.26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ  ಗುರುಹಿರಿಯರ ಸಮ್ಮುಖದಲ್ಲಿ ಸಾಗರ್, ನಟಿ ಸಿರಿ ಜೋಡಿ ಮದುವೆಯಾಗಿದ್ದಾರೆ.

    `ಸತ್ಯ’ ಹೀರೋ ಸಾಗರ್ ಮತ್ತು ನಟಿ ಸಿರಿಗೆ ಇದೀಗ ಸೆಲೆಬ್ರಿಟಿ ಸ್ನೇಹಿತರು, ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯ ಜೋಡಿ

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿಂಹಪ್ರಿಯ ಜೋಡಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

    ಹಸೆಮಣೆ ಏರಿದ ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ- ಹರಿಪ್ರಿಯಾ

    ಸ್ಯಾಂಡಲ್‌ವುಡ್‌ನ (Sandalwood) ಸ್ಟಾರ್ ಜೋಡಿ ವಸಿಷ್ಠ ಸಿಂಹ (Vasista Simha) ಮತ್ತು ಹರಿಪ್ರಿಯಾ (Haripriya) ಇಂದು (ಜ.26)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಈ ಜೋಡಿ ಹಸೆಮಣೆ ಏರಿದ್ದಾರೆ.

    ಹಲವು ವರ್ಷಗಳ ಪ್ರೀತಿಗೆ ಇಂದು ಸಿಂಹಪ್ರಿಯ ಜೋಡಿ ಮದುವೆ ಎಂಬ ಮುದ್ರೆ ಒತ್ತಿದ್ದಾರೆ. ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಸಿಂಹಪ್ರಿಯ (Simhapriya) ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: ಪಠಾಣ್ ಹಿಂದಿಕ್ಕಿ ಟ್ರೆಂಡಿಂಗ್ ನಲ್ಲಿ ನಂ.1 ಸ್ಥಾನ ಪಡೆದ ಕನ್ನಡದ ‘ಕಬ್ಜ’

    ಇತ್ತೀಚಿಗೆಷ್ಟೇ ಸೈಲೆಂಟ್ ಆಗಿ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಇದೀಗ ವಸಿಷ್ಠ ಸಿಂಹ- ಹರಿಪ್ರಿಯಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನಲ್ಲಿ ಸರಳವಾಗಿ ವಿವಾಹವಾಗಿರುವ ಈ ಜೋಡಿ, (ಜ.28)ರಂದು ಸಿನಿಮಾರಂಗದ ಸ್ನೇಹಿತರಿಗೆ ಮತ್ತು ಗಣ್ಯರಿಗೆ ಬೆಂಗಳೂರಿನಲ್ಲಿ ಆರತಕ್ಷತೆ ಹಮ್ಮಿಕೊಂಡಿದ್ದಾರೆ.

    ಚಿತ್ರರಂಗದ ಈ ನವಜೋಡಿಗೆ ಅಭಿಮಾನಿಗಳು, ಸೆಲೆಬ್ರಿಟಿ ಸ್ನೇಹಿತರು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದ `ಸಿಂಹಪ್ರಿಯ’ ಜೋಡಿ

    ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಮಿಂದೆದ್ದ `ಸಿಂಹಪ್ರಿಯ’ ಜೋಡಿ

    ಸ್ಯಾಂಡಲ್‌ವುಡ್‌ನ (Sandalwood) ಮುದ್ದಾದ ಜೋಡಿ ಹರಿಪ್ರಿಯಾ (Haripriya) ಮತ್ತು ವಸಿಷ್ಠ ಸಿಂಹ (Vasishta simha) ಮದುವೆಗೆ ಕೌಂಟ್‌ಡೌನ್ ಶುರುವಾಗಿದೆ. ಈ ಬೆನ್ನಲ್ಲೇ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಮಿಂಚಿರುವ ಫೋಟೋವನ್ನು ಸಿಂಹಪ್ರಿಯ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

    ಸಾಕಷ್ಟು ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಲು ಹರಿಪ್ರಿಯಾ ಮತ್ತು ವಸಿಷ್ಠ ರೆಡಿಯಾಗಿದ್ದಾರೆ. ಈಗಾಗಲೇ ಈ ಜೋಡಿಯ ಮನೆಯಲ್ಲಿ ಮದುವೆಯ ಸಂಭ್ರಮ ಕಳೆಗಟ್ಟಿದೆ. ಮೈಸೂರಿನಲ್ಲಿ ಜನವರಿ 26ರಂದು ಸಿಂಹಪ್ರಿಯ ಜೋಡಿ ಹಸೆಮಣೆ (Wedding) ಏರಲು ರೆಡಿಯಾಗಿದೆ. ಇದನ್ನೂ ಓದಿ: ಪತ್ನಿ ಸಂಗೀತಾಗೆ ವಿಜಯ್ ಡಿವೋರ್ಸ್‌, ಕೀರ್ತಿ ಸುರೇಶ್‌ ಜೊತೆ 2ನೇ ಮದುವೆ?

    ಇದೀಗ ಅರಿಶಿನ ಶಾಸ್ತ್ರದ (Arashina Shastra) ಸುಂದರ ಕ್ಷಣಗಳ ಫೋಟೋವನ್ನು ಹರಿಪ್ರಿಯಾ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಹರಿಪ್ರಿಯಾ ಬಿಳಿ ಬಣ್ಣದ ಚೂಡಿದಾರ್‌ನಲ್ಲಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ವಸಿಷ್ಠ ಸಿಂಹ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಮಿಂಚಿದ್ದಾರೆ.

     

    View this post on Instagram

     

    A post shared by Hariprriya (@iamhariprriya)

    ಹರಿಪ್ರಿಯಾಗೆ ತಾಳಿ ಕಟ್ಟಲು ಕೌಂಟ್‌ಡೌನ್ ಶುರುವಾಗಿದೆ. ಸದ್ಯ ಅರಿಶಿನ ಶಾಸ್ತ್ರದ ಫೋಟೋಸ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಡ್ತಿರುವ ಸಿಂಹಪ್ರಿಯ (Simhapriya) ಜೋಡಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಸ್ಯಾಂಡಲ್‌ವುಡ್ (Sandalwood) ಬ್ಯೂಟಿ ಶುಭ್ರ ಅಯ್ಯಪ್ಪ (Shubra Aiyappa) ಇತ್ತೀಚಿಗಷ್ಟೇ ಉದ್ಯಮಿ ವಿಶಾಲ್ (Vishal Sivappa) ಜೊತೆ ಹಸೆಮಣೆ ಏರಿದ್ದರು. ಈ ಬೆನ್ನಲ್ಲೇ ಕೊಡವ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ನಟಿಯ ಲುಕ್ ಇದೀಗ ನೆಟ್ಟಿಗರ ಗಮನ ಸೆಳೆದಿದೆ.

     

    View this post on Instagram

     

    A post shared by Shubra Aiyappa (@shubra.aiyappa)

    ಸತತ ಆರು ವರ್ಷಗಳಿಂದ ಶುಭ್ರ ಮತ್ತು ವಿಶಾಲ್ ಶಿವಪ್ಪ ಡೇಟಿಂಗ್ ಮಾಡುತ್ತಿದ್ದರು. ಜನವರಿ 19ರಂದು ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದ್ದರು. ಕೂರ್ಗ್‌ನಲ್ಲಿ 150 ವರ್ಷದ ಹಳೆಯ ಮನೆ ʻದೊಡ್ಮನೆʼಯಲ್ಲಿ (Doddamane) ಅದ್ದೂರಿಯಾಗಿ ವಿವಾಹವಾಗಿದ್ದರು. ಕೊಡವ ಪದ್ಧತಿ ಪ್ರಕಾರ ಮದುವೆಯಾದರು. ಈಗ ಕೊಡವ ಲುಕ್‌ನಲ್ಲಿ ಶುಭ್ರ ಮತ್ತು ವಿಶಾಲ್ ಚೆಂದದ ಫೋಟೋಶೂಟ್‌ವೊಂದು ಮಾಡಿಸಿದ್ದಾರೆ. ಇದನ್ನೂ ಓದಿ: 10 ಸಾವಿರ ಗಂಟೆಗಳಲ್ಲಿ ರೆಡಿಯಾಯ್ತು ನಟಿ ಅಥಿಯಾ ಶೆಟ್ಟಿ ಧರಿಸಿದ್ದ ಲೆಹೆಂಗಾ

     

    View this post on Instagram

     

    A post shared by Shubra Aiyappa (@shubra.aiyappa)

    ನಟಿ ಶುಭ್ರ ಪಿಂಕ್ ಬಣ್ಣದ ಸೀರೆಯಲ್ಲಿ ಮಿರ ಮಿರ ಎಂದು ಮಿಂಚಿದ್ರೆ, ವರ ವಿಶಾಲ್ ಕೊಡವ ಲುಕ್‌ನಲ್ಲಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಈ ಜೋಡಿಯ ಫೋಟೋಶೂಟ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ.

     

    View this post on Instagram

     

    A post shared by Shubra Aiyappa (@shubra.aiyappa)

    ನವಜೋಡಿಗೆ ಚಿತ್ರರಂಗದ ಸ್ನೇಹಿತರಿಂದ, ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅದ್ದೂರಿಯಾಗಿ ನಡೆಯಿತು ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್ ಮದುವೆ

    ಅದ್ದೂರಿಯಾಗಿ ನಡೆಯಿತು ಅಥಿಯಾ ಶೆಟ್ಟಿ- ಕೆ.ಎಲ್ ರಾಹುಲ್ ಮದುವೆ

    ಬಾಲಿವುಡ್‌ನ (Bollywood) ಲವ್ ಬರ್ಡ್ಸ್ ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್  (KL Rahul) ಸೋಮವಾರ (ಜ.23)ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ವರ್ಷಗಳು ಪ್ರೀತಿಗೆ ಮದುವೆಯೆಂಬ (Wedding) ಮುದ್ರೆ ಒತ್ತಿದ್ದಾರೆ. ಈ ಚೆಂದದ ಜೋಡಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಹೀರೋ ಸಿನಿಮಾದ ನಟಿ ಅಥಿಯಾ ಶೆಟ್ಟಿ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೋಮವಾರ(ಜ.23)ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಸುನೀಲ್ ಶೆಟ್ಟಿ ಅವರ ಬಂಗಲೆಯಲ್ಲಿ ಮದುವೆ ನೆರವೇರಿದೆ. ಈ ಸಂಭ್ರಮಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಸಾಕ್ಷಿಯಾಗಿದೆ. ಇದನ್ನೂ ಓದಿ: ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

     

    View this post on Instagram

     

    A post shared by Manav Manglani (@manav.manglani)

    ಇನ್ನೂ ಕ್ರೀಮ್ ಬಣ್ಣದ ಲೆಹೆಂಗಾದಲ್ಲಿ ಅಥಿಯಾ ಮಿಂಚಿದ್ರೆ, ಬಳಿ ಬಣ್ಣದ ಕುರ್ತಾದಲ್ಲಿ ರಾಹುಲ್ ಧರಿಸಿದ್ದಾರೆ. ಹಲವು ವರ್ಷಗಳ ಪ್ರೀತಿಯನ್ನ ಮದುವೆಯೆಂಬ ಬಂಧದ ಮೂಲಕ ಈ ಜೋಡಿ ಸಂಭ್ರಮಿಸಿದ್ದಾರೆ. ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆದಿದೆ. ಇದನ್ನೂ ಓದಿ: ಅಥಿಯಾ- ಕೆ.ಎಲ್ ರಾಹುಲ್ ಮದುವೆ: ಅಫಿಷಿಯಲ್ ಆಗಿ ಮಾವ ಆಗಿದ್ದೇನೆ ಎಂದ ಸುನೀಲ್ ಶೆಟ್ಟಿ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಥಿಯಾ- ಕೆ.ಎಲ್ ರಾಹುಲ್ ಮದುವೆ: ಅಫಿಷಿಯಲ್ ಆಗಿ ಮಾವ ಆಗಿದ್ದೇನೆ ಎಂದ ಸುನೀಲ್ ಶೆಟ್ಟಿ

    ಅಥಿಯಾ- ಕೆ.ಎಲ್ ರಾಹುಲ್ ಮದುವೆ: ಅಫಿಷಿಯಲ್ ಆಗಿ ಮಾವ ಆಗಿದ್ದೇನೆ ಎಂದ ಸುನೀಲ್ ಶೆಟ್ಟಿ

    ಬಾಲಿವುಡ್‌ನ (Bollywood) ಪ್ರೇಮ ಪಕ್ಷಿಗಳು ಅಥಿಯಾ ಶೆಟ್ಟಿ (Athiya Shetty) ಮತ್ತು ಕೆ.ಎಲ್ ರಾಹುಲ್ (Kl Rahul) ಸೋಮವಾರ (ಜ.23)ರಂದು ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಕಷ್ಟು ವರ್ಷಗಳು ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಮಗಳ ಮದುವೆಯ ಸಂಭ್ರಮದ ನಡುವೆ ನಟ ಸುನೀಲ್ ಶೆಟ್ಟಿ ಮಾಧ್ಯಮದ ಜೊತೆ ಮಾತನಾಡಿದ್ದಾರೆ.

    `ಹೀರೋ’ ಸಿನಿಮಾ ಮೂಲಕ ಬಾಲಿವುಡ್‌ಗೆ ಪರಿಚಿತರಾದ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಸಿನಿಮಾಗೆ ಬೈ ಹೇಳಿ ಹೊಸ ಬಾಳಿಗೆ ನಟಿ ಕಾಲಿಟ್ಟಿದ್ದಾರೆ.

    ಕ್ರಿಕೆಟಿಗ ಕೆ.ಎಲ್ ರಾಹುಲ್ ಮತ್ತು ಅಥಿಯಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಸೋಮವಾರ(ಜ.23)ರಂದು ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಈ ಜೋಡಿ ಹಸೆಮಣೆ ಏರಿದೆ. ಸುನೀಲ್ ಶೆಟ್ಟಿ (Suniel Shetty) ಅವರ ಬಂಗಲೆಯಲ್ಲಿ ಮದುವೆ ನೆರವೇರಿದೆ. ಈ ಸಂಭ್ರಮಕ್ಕೆ ಇಡೀ ಬಾಲಿವುಡ್ ಚಿತ್ರರಂಗವೇ ಸಾಕ್ಷಿಯಾಗಿದೆ.

     

    View this post on Instagram

     

    A post shared by Manav Manglani (@manav.manglani)

    ಇನ್ನೂ ಪುತ್ರಿ ಅಥಿಯಾ ಮದುವೆಯ ಬಳಿಕ ಸುನೀಲ್ ಶೆಟ್ಟಿ ಮತ್ತು ಮಗ ಆಹಾನ್ ಶೆಟ್ಟಿ (Ahan Shetty) ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮದುವೆ ಕುಟುಂಬಸ್ಥರ ಮುಂದೆ ಸಂಭ್ರಮದಿಂದ ನಡೆಯಿತು. ಮಕ್ಕಳು ಖುಷಿಯಾಗಿದ್ದಾರೆ. ಇದೀಗ ನಾನು ಅಫಿಷಿಯಲ್ ಆಗಿ ಮಾವ ಆಗಿದ್ದೇನೆ ಎಂದು ಸಂತಸದಿಂದ ಸುನೀಲ್ ಶೆಟ್ಟಿ ಮಾತನಾಡಿದ್ದಾರೆ. ಇನ್ನೂ ಐಪಿಎಲ್ ಮ್ಯಾಚ್ ಬಳಿಕ ಸಿನಿಮಾರಂಗದ ಸ್ನೇಹಿತರಿಗೆ ಆಪ್ತರಿಗೆ ಆರತಕ್ಷತೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಚಿತ್ರರಂಗ ನನ್ನ ಸ್ವತ್ತಲ್ಲ, ಕೆಸಿಸಿಗೆ ಎಲ್ಲರಿಗೂ ಆಹ್ವಾನವಿದೆ: ಕಿಚ್ಚ ಸುದೀಪ್

     

    View this post on Instagram

     

    A post shared by Manav Manglani (@manav.manglani)

    ಮುದ್ದು ಮಗಳು ಅಥಿಯಾ ಮದುವೆ ಖುಷಿಯಲ್ಲಿ ಮಾಧ್ಯಮ ಮಿತ್ರರಿಗೆ ಸುನೀಲ್ ಶೆಟ್ಟಿ ಮತ್ತು ಪುತ್ರ ಆಹಾನ್ ಶೆಟ್ಟಿ ಧನ್ಯವಾದ ತಿಳಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ನವಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k