ಬಾಲಿವುಡ್‌ನ (Bollywood) 90ರ ದಶಕದಲ್ಲಿ ತೆರೆಮೇಲೆ ಅಕ್ಷಯ್ ಕುಮಾರ್- ರವೀನಾ ಟಂಡನ್ (Raveena Tandon) ಜೋಡಿ ಕಮಾಲ್ ಮಾಡಿದ್ದರು. ತೆರೆಯ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡ ಇಬ್ಬರೂ ಪ್ರೀತಿಸುತ್ತಿದ್ದರು. ಇಬ್ಬರ ಲವ್ವಿ-ಡವ್ವಿ ಮದುವೆ ಹಂತದವೆರೆಗೂ ಬಂದು ಮುರಿದು ಬಿದ್ದಿತ್ತು. ಇದೀಗ ಈ ಬಗ್ಗೆ `ಕೆಜಿಎಫ್ 2′ (KGF 2) ನಟಿ ರವೀನಾ ಮೌನ ಮುರಿದ್ದಾರೆ.

1994ರಲ್ಲಿ `ಮೊಹ್ರಾ’ ಎಂಬ ಸಿನಿಮಾದಲ್ಲಿ ಅಕ್ಷಯ್ ಕುಮಾರ್ (Akshay Kumar) ಮತ್ತು ರವೀನಾ ಜೋಡಿಯಾಗಿ ನಟಿಸಿದ್ದರು. ಚಿತ್ರದಲ್ಲಿ `ಟಿಪ್ ಟಿಪ್ ಬರ್ಸಾ ಪಾನಿ’ ಹಾಡು ಅಂದು ಪಡ್ಡೆಹುಡುಗರ ನಿದ್ದೆಗೆಡಿಸಿತ್ತು. ಈ ಜೋಡಿಯ ಕೆಮಿಸ್ಟ್ರಿಗೆ ಸಿನಿಪ್ರೇಕ್ಷಕರು ಫಿದಾ ಆಗಿದ್ದರು. ಇಬ್ಬರಿಗೂ ಒಂದೊಳ್ಳೆ ಜನಪ್ರಿಯತೆ ಕೂಡ ಈ ಸಿನಿಮಾ ತಂದುಕೊಟ್ಟಿತ್ತು. ತೆರೆಹಿಂದೆ ಸತಿ-ಪತಿಗಳಾಗಿ ಹೊಸ ಬಾಳಿಗೆ ಕಾಲಿಡಲು ಎಲ್ಲಾ ತಯಾರಿಯಾಗಿತ್ತು. ಹಲವು ಡೇಟಿಂಗ್‌ಗೆ ಮದುವೆಯೆಂಬ ಮುದ್ರೆ ಒತ್ತಲು ರೆಡಿಯಾಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಈ ಸಂಬಂಧಕ್ಕೆ ಬ್ರೇಕ್ ಬಿದ್ದಿತ್ತು.

ಈಗ ಅಕ್ಷಯ್ ಜೊತೆಗಿನ ನಿಶ್ಚಿತಾರ್ಥ ಬ್ರೇಕಪ್ (Breakup) ಈ ಬಗ್ಗೆ ರವೀನಾ ಮಾತನಾಡಿದ್ದಾರೆ. ಎಲ್ಲರೂ ಮುಂದೆ ಸಾಗಿದ್ದಾರೆ ಆದರೆ ಜನರು ಮಾತ್ರ ಇನ್ನೂ ಮುರಿದ ನಿಶ್ಚಿತಾರ್ಥದ (Engagement) ಬಗ್ಗೆಯೇ ಯಾಕೆ ಮಾತನಾಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಆ ಸಮಯದಲ್ಲಿ ಬ್ರೇಕಪ್‌ನಿಂದ ಹೊರಬರಲು ತನಗೆ ಸಾಧ್ಯವಾಗಿರಲಿಲ್ಲ ಎಂದು ಹೇಳಿದ್ದಾರೆ. ಒಮ್ಮೆ ನಾನು ಅವರ ಜೀವನದಿಂದ ಹೊರಬಂದ ಬಳಿಕ ಮತ್ತೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಅವರು ಕೂಡ ಆಗಲೇ ಬೇರೆ ಯುವತಿ ಜೊತೆ ಡೇಟಿಂಗ್ ಮಾಡುತ್ತಿದ್ದರು. ಹಾಗಿದ್ದ ಮೇಲೆ ಅಸೂಯೆ ಎಲ್ಲಿಂದ ಬರುತ್ತೆ ಎಂದು ರವೀನಾ ಮಾತನಾಡಿದ್ದಾರೆ. ಇದನ್ನೂ ಓದಿ: ಹೊಸ ಕಥೆ ಇದ್ದರೆ ಜನ ಒಪ್ಪಿಕೊಳ್ತಾರೆ, `ಕಾಂತಾರ’ ಸಕ್ಸಸ್ ಬಗ್ಗೆ ಕಿಚ್ಚನ ಮಾತು
ನಾವು `ಮೊಹ್ರಾ’ ಸಮಯದಲ್ಲಿ ಹಿಟ್ ಪೇರ್ ಆಗಿದ್ದೆವು. ಈಗಲೂ ನಾವು ಭೇಟಿಯಾಗುತ್ತೇವೆ. ಮಾತನಾಡುತ್ತೇವೆ. ನಾವು ಮುಂದೆ ಸಾಗಿದ್ದೇವೆ. ಅನೇಕರು ವಿಚ್ಛೇದನ ಪಡೆದಿದ್ದಾರೆ ಅವರೂ ಮೂವ್ ಆನ್ ಆಗಿದ್ದಾರೆ. ಅದೇನು ದೊಡ್ಡ ವಿಷಯವಲ್ಲ ಎಂದು ಹೇಳಿದ್ದಾರೆ.
ಇನ್ನೂ ಅಕ್ಷಯ್ ಕುಮಾರ್ (Akshay Kumar) ಅವರು ಟ್ವಿಂಕಲ್ ಖನ್ನಾ (Twinkle Khanna) ಜೊತೆ ವೈವಾಹಿಕ ಬದುಕಿನಲ್ಲಿ ಖುಷಿಯಾಗಿದ್ದಾರೆ. ಇಬ್ಬರೂ ಮಕ್ಕಳು ಕೂಡ ಇದ್ದಾರೆ. ನಟಿ ರವೀನಾ ಅವರು ಉದ್ಯಮಿ ಅನಿಲ್ ಥಡಾನಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದಾರೆ. ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k


ಸಿದ್- ಕಿಯಾರಾ ಲವ್ (Love) ಬಗ್ಗೆ ಗಾಸಿಪ್ ಕೇಳಿ ಬರುತ್ತಲೆ ಇತ್ತು. ಆದರೆ ತುಟಿಕ್ ಪಿಟಿಕ್ ಎನ್ನದೇ ಸೈಲೆಂಟ್ ಆಗಿದ್ದರು. ಈಗ ನೇರವಾಗಿ ಮದುವೆ ಫೋಟೋ ಹಂಚಿಕೊಂಡು ಈ ಜೋಡಿ ಸಂಭ್ರಮಿಸಿದ್ದಾರೆ. ಈಗ ನಮ್ಮ ಪರ್ಮನೆಂಟ್ ಬುಕ್ಕಿಂಗ್ ಆಗಿದೆ. ನಮ್ಮ ಪ್ರೀತಿ ಹಾಗೂ ಮುಂದಿನ ಪಯಣಕ್ಕೆ ನಿಮ್ಮೆಲ್ಲರ ಆಶೀರ್ವಾದ ಬೇಕಾಗಿದೆ ಎಂದು ಕಿಯಾರಾ ಹಾಗೂ ಸಿದ್ಧಾರ್ಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 

ಶ್ಯಾನೆ ಟಾಪ್ ನಟಿ ಅದಿತಿ ಇತ್ತೀಚಿಗೆ ಯಶಸ್ (Yashas) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆ ಬಳಿಕ ‘Once Upon A Time In Jamaligudda’ ಸಿನಿಮಾ ಮೂಲಕ ಮೋಡಿದ್ದರು. ಇನ್ನೂ ಅದಿತಿ ನಟನೆಯ ಸಾಕಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಿದೆ. ಕೋಟ್ಯಧಿಪತಿ ಯುವಕನ ಕೈಹಿಡಿದಿದ್ದೀರಾ ಅನ್ನೋರಿಗೆ ನಟಿ ತಿರುಗೇಟು ನೀಡಿದ್ದಾರೆ.








ʻಷೇರ್‌ಷಾʼ ಕಪಲ್ ಮದುವೆಗೆ ಬಾಲಿವುಡ್‌ನಿಂದ ಅಂದಾಜು 100 ಜನರು ಈ ವಿವಾಹದಲ್ಲಿ ಭಾಗಿ ಆಗುವ ಸಾಧ್ಯತೆ ಇದೆ. ಕರಣ್ ಜೋಹರ್, ಮನೀಶ್ ಮಲ್ಹೋತ್ರಾ, ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮುಂತಾದವರು ಭಾಗಿಯಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರೂ ಕೂಡ ಮದುವೆ ಬಗ್ಗೆ ಬಾಯಿ ಬಿಡುತ್ತಿಲ್ಲ. ಹೀಗಿರುವಾಗ ಕಂಗನಾ ಅವರು ವಿಡಿಯೋ ಹಂಚಿಕೊಂಡು ಮೆಚ್ಚುಗೆ ಸೂಚಿಸಿದ್ದು ಕುತೂಹಲ ಮೂಡಿಸಿದೆ.
ಬ್ಯಾಚುಲರ್ ಲೈಫ್‌ಗೆ ಸೆಲೆಬ್ರಿಟಿಗಳು ಈಗ ಗುಡ್ ಬೈ ಹೇಳ್ತಿದ್ದಾರೆ. ಇತ್ತೀಚಿಗೆ ನಾಗಶೌರ್ಯ (Nagashourya) ಕನ್ನಡದ ಹುಡುಗಿ ಅನುಷಾ ಶೆಟ್ಟಿ ಅವರನ್ನು ಮದುವೆಯಾದರು. ಈ ವರ್ಷದ ಆರಂಭದಲ್ಲಿಯೇ ರಕ್ಷಿತಾ ರೆಡ್ಡಿ ಜೊತೆ ನಟ ಶರ್ವಾನಂದ್ (Sharwanand) ಎಂಗೇಜ್‌ಮೆಂಟ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದರು. ಶರ್ವಾನಂದ್ ನಿಶ್ಚಿತಾರ್ಥಕ್ಕೆ ಜೋಡಿಯಾಗಿ ಸಿದ್ಧಾರ್ಥ್ ಮತ್ತು ಅದಿತಿ ರಾವ್ ಹೈದರಿ (Aditi Rao Hydari) ಎಂಟ್ರಿ ಕೊಟ್ಟಿದ್ದರು. ಹಾಗಾಗಿ ಈ ಸೆಲೆಬ್ರಿಟಿ ಜೋಡಿ ಬಗ್ಗೆ ಮದುವೆ (Wedding) ಬಗ್ಗೆ ಚರ್ಚೆ ನಡೆಯುತ್ತಿದೆ.
ಹೋದಲೆಲ್ಲಾ ಒಟ್ಟಿಗೆ ಕಾಣಿಸಿಕೊಳ್ಳುವ ಸಿದ್ಧಾರ್ಥ್ ಮತ್ತು ಅದಿತಿ ತಮ್ಮ ಏನಿಲ್ಲಾ ಅಂತಲೇ ಮೌನವಾಗಿ ಬಿಟ್ಟಿದ್ದಾರೆ. ಆದರೆ ಇತ್ತೀಚಿನ ಶರ್ವಾನಂದ್ ನಿಶ್ಚಿತಾರ್ಥಕ್ಕೆ ಇವರು ಜೊತೆಯಾಗಿ ಹೋಗಿರೋದು ಅನೇಕರ ಚರ್ಚೆಗೆ ಗ್ರಾಸವಾಗಿದೆ. ಸದ್ಯದಲ್ಲೇ ಸಿದ್ಧಾಥ್- ಅದಿತಿ ಕೂಡ ಮದುವೆ ಬಗ್ಗೆ ಬ್ರೇಕಿಂಗ್ ನ್ಯೂಸ್ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: 

ಸಿದ್ ಜೋಡಿಯ ಮದುವೆ ಸಂಭ್ರಮ ಫೆ.4ರಿಂದ 6ರವರೆಗೆ ಇರಲಿದೆ. ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ಮದುವೆ ನಡೆಯಲಿದೆ. ಇದನ್ನೂ ಓದಿ:
ಇನ್ನೂ ಕಿಯಾರಾ-ಸಿದ್ಧಾರ್ಥ್ ಮದುವೆ 100 ಜನ ಅತಿಥಿಗಳಿಗಷ್ಟೇ ಆಹ್ವಾನ ನೀಡಲಾಗಿದೆ. ಕರಣ್ ಜೋಹರ್, ಶಾಹಿದ್ ಕಪೂರ್ ದಂಪತಿ, ಮನೀಷ್ ಮಲ್ಹೋತ್ರಾ, ರಶ್ಮಿಕಾ ಮಂದಣ್ಣ (Rashmika Mandanna) ಸೇರಿದಂತೆ ಹಲವರಿಗೆ ಆಹ್ವಾನ ನೀಡಿದ್ದಾರೆ. ನೆಚ್ಚಿನ ಜೋಡಿಯ ಮದುವೆ ಸಂಭ್ರಮ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.


