ನಟಿ ಕಿಯಾರಾ-ಸಿದ್ (Kiara-Siddarth) ಮದುವೆಯ ಬೆನ್ನಲ್ಲೇ ಬಾಲಿವುಡ್‌ನ ಮತ್ತೊಂದು ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಕನ್ನಡದ `ಗಿಲ್ಲಿ’ (Gilli Film) ಸಿನಿಮಾದ ನಟಿ ರಾಕುಲ್ ಸಿಂಗ್ ಪ್ರೀತ್ ಬಹುಕಾಲದ ಗೆಳೆಯನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.

ಚಿತ್ರರಂಗದಲ್ಲಿ ಗಟ್ಟಿವೇಳದ ಸೌಂಡ್ ಜೋರಾಗಿದೆ. ಅಥಿಯಾ ಶೆಟ್ಟಿ (Athiya Shetty) ಜೋಡಿ ನಂತರ ಸಿದ್-ಕಿಯಾರಾ ಮದುವೆಯಾಗುವ ಮೂಲಕ ಸಿಹಿ ಸುದ್ದಿ ನೀಡಿದ್ದರು. ಈಗ ಅದೇ ಹಾದಿಯಲ್ಲಿ ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಕೂಡ ಇದ್ದಾರೆ.
ಬಾಲಿವುಡ್‌ನ (Bollywood) ಯುವ ನಿರ್ಮಾಪಕ ಜಾಕಿ ಭಗ್ನಾನಿ(Jackky Bhagnani)- ರಾಕುಲ್ ಹಲವು ವರ್ಷಗಳಿಂದ ಡೇಟಿಂಗ್ ಮಾಡ್ತಿದ್ದಾರೆ. ಇತ್ತೀಚಿಗೆ ಗೆಳೆಯ ಜಾಕಿ ಬರ್ತಡೇ ಕೂಡ ರಾಕುಲ್ ಅದ್ದೂರಿಯಾಗಿ ಮುಂಬೈ ರೆಸಾರ್ಟ್‌ವೊಂದರಲ್ಲಿ ಆಚರಿಸಿದ್ದರು. ಇದನ್ನೂ ಓದಿ: ಬೆಡ್‌ರೂಮ್‌ನಿಂದಲೇ ವ್ಯಾಲೆಂಟೈನ್ ಸೀಕ್ರೆಟ್ ರಿವೀಲ್ ಮಾಡಿದ ರಶ್ಮಿಕಾ ಮಂದಣ್ಣ

ಈಗ ಸಿದ್-ಕಿಯಾರಾ ಮದುವೆಯ ಬೆನ್ನಲ್ಲೇ ಜಾಕಿ ಭಗ್ನಾನಿ-ರಾಕುಲ್ ಮದುವೆಯ (Wedding) ಸುದ್ದಿ ಮುಂಚೂಣಿಯಲ್ಲಿದೆ. ಮದುವೆಗೆ ತೆರೆಮರೆಯಲ್ಲಿ ಸಕಲ ಸಿದ್ಧತೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ ಅಷ್ಟಕ್ಕೂ ಈ ಸುದ್ದಿ ನಿಜಾನಾ ಎಂಬುದನ್ನ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k





ಇನ್ನೂ ರಾಖಿ ಕೂಡ ಇತ್ತೀಚಿಗೆ ಮೈಸೂರು ಮೂಲದ ಆದಿಲ್ ಜೊತೆ ಹೊಸ ಬಾಳಿಗೆ ಕಾಲಿಟ್ಟಿದ್ದರು. ರಾಖಿ ನೀಡಿರುವ ದೂರಿನ ಮೇರೆಗೆ ಕಂಬಿ ಹಿಂದೆ ಆದಿಲ್ ದಿನ ಕಳೆಯುತ್ತಿದ್ದಾರೆ.


ದಕ್ಷಿಣ ಭಾರತದ ಪಗತಿಭಾನ್ವಿತ ನಟಿ ಹನ್ಸಿಕಾ ಮೋಟ್ವಾನಿ ಅವರು ಕಳೆದ ವರ್ಷದ ಅಂತ್ಯದಲ್ಲಿ ಡಿ.4ರಂದು ಸೋಹೈಲ್ (Sohael Katuriya) ಜೊತೆಗೆ ಹೊಸ ಬಾಳಿಗೆಬ ಕಾಲಿಟ್ಟರು. ಸಾಕಷ್ಟು ವರ್ಷಗಳ ಡೇಟಿಂಗ್ ನಂತರ ಮದುವೆಯೆಂಬ ಮುದ್ರೆ ಒತ್ತುವ ಮೂಲಕ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟರು. ಇನ್ನೂ ಸೆಲೆಬ್ರಿಟಿಗಳ ವೈಯಕ್ತಿಕ ವಿಚಾರಗಳನ್ನ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಿಗೆ ಇರುತ್ತದೆ. ಹೀಗಿರುವಾಗ ತಮ್ಮ ಸಂಭ್ರಮವನ್ನ ಫ್ಯಾನ್ಸ್ ಮುಂಡಿಡಲು ನಟಿ ಭಿನ್ನ ಪ್ರಯತ್ನ ಮಾಡಿದ್ದಾರೆ.
ಒಟಿಟಿ ಮೂಲಕ ಹನ್ಸಿಕಾ-ಸೋಹೈಲ್ ಜೋಡಿಗಳ ಲವ್ ಲೈಫ್ ಬಗ್ಗೆ ಒಂದಷ್ಟು ರಹಸ್ಯಗಳನ್ನು ಜನರ ಮುಂದೆ ತೆರೆದಿಟ್ಟು, ಮದುವೆಯ ಝಲಕ್ ತೋರಿಸಲಾಗುತ್ತಿದೆ. ಈಗ ಖಾಸಗಿ ಒಟಿಟಿಯಲ್ಲಿ ಹನ್ಸಿಕಾ- ಸೋಹೈಲ್ ಮದುವೆ ವಿಡಿಯೋ ಪ್ರಸಾರ ಆಗುತ್ತಿದೆ. ಇದರ ಮೊದಲ ಎಪಿಸೋಡ್‌ನಲ್ಲಿ ಒಂದಷ್ಟು ವಿಚಾರಗಳನ್ನು ಹನ್ಸಿಕಾ ಹೇಳಿಕೊಂಡಿದ್ದಾರೆ. ಉದ್ಯಮಿ ಸೋಹೈಲ್ ಈ ಮೊದಲೇ ಒಂದು ಮದುವೆ ಆಗಿದ್ದರು. ಅವರ ಮಾಜಿ ಪತ್ನಿಯ ಹೆಸರು ರಿಂಕಿ. ರಿಂಕಿ ಮತ್ತು ಹನ್ಸಿಕಾ ಫ್ರೆಂಡ್ಸ್ ಆಗಿದ್ದರು. ಸೋಹೈಲ್ ಹಾಗೂ ರಿಂಕಿ ಮದುವೆಯಲ್ಲಿ ಹನ್ಸಿಕಾ ಕೂಡ ಭಾಗಿ ಆಗಿದ್ದರು. ಸೋಹೈಲ್ ಜತೆ ಹನ್ಸಿಕಾ ಮದುವೆ ಘೋಷಣೆ ಮಾಡಿಕೊಳ್ಳುತ್ತಿದ್ದಂತೆಯೇ ಒಂದಷ್ಟು ಮಂದಿ `ಆಪ್ತ ಸ್ನೇಹಿತೆಯ ಗಂಡನನ್ನೇ ಕದ್ದಳು’ ಎಂದು ಹನ್ಸಿಕಾ ಅವರನ್ನು ಟೀಕೆ ಮಾಡಿದರು. ಲವ್ ಶಾದಿ ಡ್ರಾಮಾದಲ್ಲಿ ಹನ್ಸಿಕಾ ಈ ಬಗ್ಗೆ ಅಸಲಿ ಮಾತನ್ನ ಬಿಚ್ಚಿಟ್ಟಿದ್ದಾರೆ.







ಸಿದ್- ಕಿಯಾರಾ ಮದುವೆ ಸಂಭ್ರಮದಲ್ಲಿ ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ, ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ದಂಪತಿ (Prithviraj Sukumaran) ಬಾಲಿವುಡ್ ನಟಿ ಜೂಹಿ ಚಾವ್ಲಾ, ನಿರ್ಮಾಪಕ ಕರಣ್ ಜೋಹರ್ ಭಾಗಿಯಾಗಿದ್ದರು. ಅಂದ್ಹಾಗೆ ಸಿದ್ಧಾರ್ಥ್ ಮೊದಲ ಸಿನಿಮಾಗೆ ಕರಣ್ ಜೋಹರ್ ನಿರ್ದೇಶನದಲ್ಲಿ ಮೂಡಿ ಬಂದಿತ್ತು.
