ಅಹಮದಾಬಾದ್: ವ್ಯಕ್ತಿಯೊಬ್ಬ ಮದುವೆಯೊಂದರಲ್ಲಿ (Wedding) ಮನೆಯ ಮೇಲಿನಿಂದ 500ರೂ. ನೋಟಿನ ಹಣಗಳನ್ನು (Money) ಕೆಳಗೆ ಸುರಿದ ಘಟನೆ ಗುಜರಾತ್‍ನ (Gujarat) ಮೆಹ್ಸಾನಾ ಜಿಲ್ಲೆಯಲ್ಲಿ ನಡೆದಿದೆ.
ಗುಜರಾತ್‍ನ ಮೆಹ್ಸಾನಾ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮಾಜಿ ಗ್ರಾಪಂ ಅಧ್ಯಕ್ಷ ಕರೀಂ ಯಾದವ್ ಹಣವನ್ನೆಲ್ಲ ಕೆಳಗೆ ಸುರಿದಿದ್ದಾನೆ.
Former sarpanch showers cash at wedding event in Gujarat’s Mehsana.
A former sarpanch of a village in Gujarat’s Mehsana showered money on people gathered to witness his nephew’s wedding celebrations.
pic.twitter.com/BjkeZgKW67— Ahmed Khabeer احمد خبیر (@AhmedKhabeer_) February 19, 2023
ಕರೀಂ ಯಾದವ್ ತನ್ನ ಸಹೋದರಳಿಯ ರಜಾಕ್‍ನ ಮದುವೆ ಮೆರವಣಿಗೆ ಗ್ರಾಮದ ಬೀದಿಗಳಲ್ಲಿ ಸಾಗುತ್ತಿದ್ದಂತೆ ನೂರಾರು ನಗದು ನೋಟುಗಳನ್ನು ಎಸೆದಿದ್ದಾನೆ. ಇದರಲ್ಲಿ ಅನೇಕ ನೋಟುಗಳು 500 ರೂ. ಮೌಲ್ಯದ್ದಾಗಿತ್ತು. ಕೆಳಗೆ ಬಿದ್ದಿದ್ದ ನೂರಾರು ನೋಟುಗಳನ್ನು ಬಾಚಿಕೊಳ್ಳಲು ಜನಸಮೂಹವೇ ಜಮಾಯಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಶಿವರಾತ್ರಿ ಆಚರಣೆ ವೇಳೆ ಜಾತಿ ಕಲಹ – 14 ಜನರಿಗೆ ಗಾಯ
ಈ ಹಿಂದೆ ಹೈದರಾಬಾದ್‍ನಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ವಿವಾಹ ಕಾರ್ಯಕ್ರಮದ ವೇಳೆ ವ್ಯಕ್ತಿಯೊಬ್ಬರು 500 ರೂ. ಮುಖಬೆಲೆಯ ನೋಟುಗಳನ್ನು ರಸ್ತೆಯಲ್ಲಿ ಎಸೆದಿದ್ದರು. ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬರು ಪ್ರಚಾರಕ್ಕಾಗಿ 10 ಮುಖ ಬೆಲೆಯ ನೋಟುಗಳನ್ನು ತೂರಿದ್ದರು. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರ ದರ್ಪ ನಡೆಯಲ್ಲ – ಕೇಂದ್ರ ಸಚಿವ ಗರಂ
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k




ಇನ್ನು ಹನ್ಸಿಕಾ ತಾಯಿ ಮೋನಾ (Mona) ಮೋಟ್ವಾನಿ ಕೂಡ ಪ್ರತಿಕ್ರಿಯಿಸಿದ್ದು, ಆ ರೀತಿ ಹಾರ್ಮೋನ್ ಇಂಜೆಕ್ಷನ್ ಖರೀದಿ ಮಾಡಬೇಕೆಂದರೆ, ನಾವು ಟಾಟಾ, ಬಿರ್ಲಾಗಿಂತ ಜಾಸ್ತಿ ಶ್ರೀಮಂತರಾಗಿರಬೇಕು ಅಥವಾ ನಾನು ಮಿಲಿಯನೇರ್ ಆಗಿರಬೇಕು. ಈ ರೀತಿಯ ವದಂತಿಗಳು ಹೇಗೆ ಹುಟ್ಟುತ್ತವೆ ಎಂದು ನನಗೆ ತಿಳಿದಿಲ್ಲ. ಇದನ್ನು ಹಬ್ಬಿಸುವ ಜನರಿಗೆ ಸಾಮಾನ್ಯ ಜ್ಞಾನವಿಲ್ಲ. ನಾವು ಪಂಜಾಬಿಗಳು, ನಮ್ಮ ಹುಡುಗಿಯರು 12 ರಿಂದ 16 ವರ್ಷಗಳ ನಡುವೆ ವೇಗವಾಗಿ ಬೆಳೆಯುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ:
ಇನ್ನೂ ಹನ್ಸಿಕಾ ಮೋಟ್ವಾನಿ ಬಾಲನಟಿಯಾಗಿ ಐದಾರು ಸಿನಿಮಾ ಮಾಡಿದ್ದರು. 16ನೇ ವಯಸ್ಸಿಗೆ ನಾಯಕಿಯಾಗಿ ಹನ್ಸಿಕಾ ಮಿಂಚಿದ್ದರು. ಹಾಗಾಗಿ ಈ ತರಹದ ಸುದ್ದಿಗಳು ಹರಿದಾಡಿತ್ತು.
ನಟಿ ಶುಭಾ (Actress Shubha) ಅವರು ಸುಮಂತ್ (Sumanth)ಜೊತೆ 2020ರಲ್ಲಿ ಹಸೆಮಣೆ (Wedding) ಏರಿದ್ದರು. ಮಂಗಳೂರಿನಲ್ಲಿ ಸರಳವಾಗಿ ವಿವಾಹವಾಗಿದ್ದರು. ಪ್ರೇಮಿಗಳ ದಿನದಂದು ನೀಡಿದ ವಿಶೇಷ ಸಂದರ್ಶನವೊಂದರಲ್ಲಿ ಮದುವೆ ದಿಢೀರ್ ಅಂತಾ ಯಾಕಾಯಿತು. ಅಂದು ಆ ಸಂದರ್ಭ ಹೇಗಿತ್ತು. ಮನೆಯವರ ಮದುವೆ ಬಗೆಗಿನ ಒತ್ತಾಯದ ಬಗ್ಗೆ ನಟಿ ಮಾತನಾಡಿದ್ದಾರೆ.




ಇನ್ನೂ ಕಳೆದ 2019ರಿಂದ ಫಹಾದ್ ಮತ್ತು ಸ್ವರಾ ಡೇಟಿಂಗ್ ಮಾಡ್ತಿದ್ದರು. ಈ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡದೇ, ಹಲವು ವರ್ಷಗಳ ಪ್ರೀತಿಗೆ ಮದುವೆಯಾಗುವ ಮೂಲಕ ಗುಡ್ ನ್ಯೂಸ್ ನೀಡಿದ್ದಾರೆ. ಸಮಾಜವಾದಿ ಪಕ್ಷದ ಮಹಾರಾಷ್ಟ್ರ ಘಟಕದಲ್ಲಿ ಅಧ್ಯಕ್ಷರಾಗಿ ಫಹಾದ್ ಕಾರ್ಯ ನಿರ್ವಹಿಸುತ್ತಿದ್ದಾರೆ. ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ನಾಗಮಂಡಲ, ಕಸ್ತೂರಿ ನಿವಾಸ, ಜೊತೆ ಜೊತೆಯಲಿ, ಒಲಿವಿನ ನಿಲ್ದಾಣ ಸೀರಿಯಲ್ ಮೂಲಕ ಮೋಡಿ ಮಾಡಿರುವ ನಟಿ ಶಿಲ್ಪಾ ಅಯ್ಯರ್ ಅವರು ಇತ್ತೀಚಿಗೆ ಸಚಿನ್ ವಿಶ್ವನಾಥ್ (Sachin Vishwanath) ಜೊತೆ ಎಂಗೇಜ್ ಆಗಿದ್ದಾರೆ.
ಸಚಿನ್ ವಿಶ್ವನಾಥ್ ಅವರು ಲಾಯರ್ (Advocate) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯದಲ್ಲೇ ಶಿಲ್ಪಾ ಅಯ್ಯರ್- ಸಚಿನ್ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇನ್ನೂ ಶಿಲ್ಪಾ ಅವರ ಎಂಗೇಜ್‌ಮೆಂಟ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದ್ದು, Classy Captures ಅವರ ಕ್ಯಾಮೆರಾ ಕಣ್ಣಲ್ಲಿ ಸುಂದರ ಫೋಟೋಗಳು ಸೆರೆಯಾಗಿದೆ. ಇದನ್ನೂ ಓದಿ:
ಸುದ್ದಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಶಿಲ್ಪಾ ಅವರು ಇದೀಗ ಕಿರುತೆರೆಯಲ್ಲಿ ನಟಿಯಾಗಿ ಛಾಪು ಮೂಡಿಸುತ್ತಿದ್ದಾರೆ. ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಸ್ತುತ `ಒಲವಿನ ನಿಲ್ದಾಣ’ ಸೀರಿಯಲ್‌ನಲ್ಲಿ ಶಿಲ್ಪಾ ನಟಿಸುತ್ತಿದ್ದಾರೆ.
ನಟಿ ಸ್ವರಾ ಬಾಲಿವುಡ್‌ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ತೆರೆಯ ಮೇಲೆ ಸೈ ಎನಿಸಿಕೊಂಡಿದ್ದರು. ಈಗ ಸದ್ದಿಲ್ಲದೇ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದಾರೆ. ಪೊಲಿಟಿಕಲ್ ಲೀಡರ್ ಫಹಾದ್ ಜೊತೆ ನಟಿ ಸ್ವರಾ ಅವರು ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ವರ್ಷ ಜ.6ರಂದು ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಈ ಸಿಹಿಸುದ್ದಿಯನ್ನು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪತಿ ಫಹಾದ್ ಜೊತೆಗಿನ ಫೋಟೋ ಶೇರ್ ಮಾಡಿ, ನನ್ನ ಹೃದಯಕ್ಕೆ ಸ್ವಾಗತ, ಇದು ಅಸ್ತವ್ಯಸ್ತವಾಗಿದೆ, ಆದರೆ ಅದು ನಿಮ್ಮದು ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮದುವೆ ನಂತರ ಕೂಡ ಮತ್ತೆ ಸಿನಿಮಾಗಳಲ್ಲಿ (Films) ಅದಿತಿ ಪ್ರಭುದೇವ ಆಕ್ಟೀವ್ ಆಗಿದ್ದಾರೆ. ಪತಿ ಯಶಸ್ ಅವರನ್ನ ಕೂಡ ಇತ್ತೀಚಿಗೆ ತನ್ನ ಸಿನಿಮಾ ಸೆಟ್‌ಗೆ ಕರೆದುಕೊಂಡು ಹೋಗಿದ್ದರು. ವೈವಾಹಿಕ ಬದುಕು ಮತ್ತು ನಟನೆ ಎರಡನ್ನ ಬ್ಯಾಲೆನ್ಸ್ ಮಾಡ್ತಿದ್ದಾರೆ. ಪತ್ನಿ ಅದಿತಿ ಸಿನಿಮಾ ಕಾರ್ಯಕ್ಕೆ ಪತಿ ಯಶಸ್ ಕೂಡ ಬೆಂಬಲಿಸುತ್ತಿದ್ದಾರೆ. ಹೀಗಿರುವಾಗ ಮಗಳ ಬಗ್ಗೆ ಅದಿತಿ ತಾಯಿ ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.
ನಟಿ ಅದಿತಿ ಅವರು ತಮ್ಮ ಯೂಟ್ಯೂಬ್‌ನಲ್ಲಿ ತಾಯಿ ಜೊತೆ ಪುಟ್ಟ ಚಿಟ್ ಚಾಟ್ ಮಾಡಿದ್ದಾರೆ. ತುಂಬಾ ಜನ ಹೆಣ್ಣು ಮಕ್ಕಳಿಗೆ ಮದುವೆಯಾಗಿ ಗಂಡನ ಮನೆಗೆ ಹೋಗುವಾಗ ತಾಯಂದಿರು ಸಲಹೆ ಸೂಚನೆಗಳನ್ನು ಕೊಡುತ್ತಾರೆ. ಹಾಗೆ ಮಾಡಬೇಡ ಹೀಗೆ ಮಾಡು ಅಂತ ಹೇಳಿ ಕಳುಹಿಸುತ್ತಾರೆ ಆದರೆ ನನ್ನ ಅಮ್ಮ ನನಗೆ ಏನೂ ಹೇಳಿಲ್ಲ. ಮದುವೆಯಾಗಿ 2 ತಿಂಗಳು ಕಳೆದಿದೆ ಅದಿಕ್ಕೆ ಈಗ ಕೇಳುತ್ತಿರುವೆ ನೀವು ನನಗೆ ಏನಾದರೂ ಸಲಹೆ ಕೊಡಬೇಕು ಅಂತಿದ್ದರೆ ಏನು ಹೇಳುತ್ತೀರಾ ಎಂದು ಅದಿತಿ ಪ್ರಭುದೇವ ತಾಯಿಯನ್ನ ಕೇಳಿದ್ದಾರೆ. ನನ್ನ ಮಗಳಿಗೆ ನಾನು ಯಾವ ಸಲಹೆನೂ ಕೊಡುವುದಿಲ್ಲ. ಚಿತ್ರರಂಗಕ್ಕೆ ಬರುವಾಗ ಏನೂ ಸಲಹೆ ಕೊಟ್ಟಿಲ್ಲ ನೀನು ಹೇಗಿದ್ಯಾ ಹಾಗೆ ಇರಮ್ಮ ಅಂತ ಹೇಳಿದೆ. ಈಗಲೂ ನೀನು ಹೇಗೆ ಇರ್ತೀಯಾ ಹಾಗೆ ಇರು. ಸಲಹೆ ಕೊಡುವುದು ಏನೂ ಇಲ್ಲ ಎಂದು ಅದಿತಿ ತಾಯಿ ಹೇಳುತ್ತಾರೆ. ಇದನ್ನೂ ಓದಿ: 


ನಟ ನಿಹಾಲ್- ರಿಷಿಕಾ ಶರ್ಮಾ ಮದುವೆ (ಫೆ.15)ರಂದು ಬೆಂಗಳೂರಿನ ಮಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನದಲ್ಲಿ ನಡೆದಿದೆ. ಕುಟುಂಬಸ್ಥರು ಮತ್ತು ಆಪ್ತರು ಮದುವೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನಿಹಾಲ್ ಮತ್ತು ರಿಷಿಕಾ ಅವರದ್ದು ಪಕ್ಕಾ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದೆ. 9 ವರ್ಷಗಳ ಪ್ರೀತಿಯನ್ನು ಕುಟುಂಬಸ್ಥರಿಗೆ (Family) ತಿಳಿಸಿ, ಹಿರಿಯರ ಒಪ್ಪಿಗೆಯ ಮೇರೆಗೆ ದಾಂಪತ್ಯ (Wedding) ಜೀವನಕ್ಕೆ ಕಾಲಿಟ್ಟಿದ್ದಾರೆ. ಇದನ್ನೂ ಓದಿ: 

ಬಿಗ್ ಬಾಸ್ ಒಟಿಟಿಗೆ (Bigg Boss OTT) ಕಾಲಿಡುವ ಮೂಲಕ ಅಪಾರ ಅಭಿಮಾನಿಗಳ ಮನಗೆದ್ದ ಸ್ಪರ್ಧಿ ಅಕ್ಷತಾ ಕುಕ್ಕಿ ಅವರು ಸೀರಿಯಲ್ ಮತ್ತು ಒಂದಿಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. `ಮಾರ್ಟಿನ್’ (Martin Film) ಚಿತ್ರದಲ್ಲಿ ಧ್ರುವ ಸರ್ಜಾ (Dhruva Sarja) ಜೊತೆ ಅಕ್ಷತಾ ಕುಕ್ಕಿ (Akshatha Kuki) ನಟಿಸಿದ್ದಾರೆ. ಇದನ್ನೂ ಓದಿ:
ಅಕ್ಷತಾ ಕುಕ್ಕಿ ಅವರು ಹಸೆಮಣೆ ಏರಲು ಸಜ್ಜಾಗಿದ್ದಾರೆ. ಗುರುಹಿರಿಯರು ನಿಶ್ಚಯಿಸಿದ ವರನ ಜೊತೆ ಈಗಾಗಲೇ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ನಟಿ ಮುಂದಿನ ತಿಂಗಳು ಮಾರ್ಚ್‌ನಲ್ಲಿ ಹಸೆಮಣೆ (Wedding) ಏರುತ್ತಿದ್ದಾರೆ. ಮದುವೆ ಪಕ್ಕಾ ಅರೆಂಜ್ ಮ್ಯಾರೇಜ್ ಆಗಿದೆ. ಅವಿನಾಶ್ (Avinash) ಜೊತೆ ಮಾರ್ಚ್ 27ರಂದು ಅಕ್ಷತಾ ಸಪ್ತಪದಿ ತುಳಿಯುತ್ತಿದ್ದಾರೆ. ಬೆಳಗಾವಿಯಲ್ಲಿ (Belagavi) ಗುರುಹಿರಿಯರು, ಆಪ್ತರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ನಟಿ ಅಕ್ಷತಾ ತಿಳಿಸಿದ್ದಾರೆ.
ಅಕ್ಷತಾ ಮದುವೆಯಾಗಿರುವ ವರ ಅವಿನಾಶ್, ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ (Engineer) ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಾಗಲೇ ಮದುವೆಗೆ ಸಕಲ ತಯಾರಿ ನಡೆಯುತ್ತಿದೆ. ಇನ್ನೂ ನಟಿ ಮದುವೆಗೆ ಕಿರುತೆರೆ ನಟ-ನಟಿಯರು ಬಿಗ್ ಬಾಸ್ ಸ್ಪರ್ಧಿಗಳು ಭಾಗಿಯಾಗಲಿದ್ದಾರೆ.


ಮದುವೆ ಹಾಗೂ ಆರತಕ್ಷತೆ ಸಂದರ್ಭದಲ್ಲಿ ಕರಣ್ ಜೋಹರ್ ಹಾಜರಿದ್ದರು. ಅವರು ಮದುವೆ ಸಂಭ್ರಮದಲ್ಲಿ ಭಾಗಿ ಆಗಿ ಎಂಜಾಯ್ ಮಾಡಿದ್ದಾರೆ. ಅಷ್ಟೇ ಅಲ್ಲ ನವದಂಪತಿ ಸಿದ್-ಕಿಯಾರಾ ಜೊತೆ ಅವರು ದೊಡ್ಡ ಡೀಲ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದಾರ್ಥ್- ಕಿಯಾರಾ ಜೋಡಿ ಜೊತೆಯಾಗಿ ಬ್ಯಾಕ್ ಟು ಬ್ಯಾಕ್ ಮೂರು ಸಿನಿಮಾಗಳಲ್ಲಿ ನಟಿಸಲು ಒಪ್ಪಿದ್ದಾರೆ. ಇದಕ್ಕೆ ಧರ್ಮ ಪ್ರೊಡಕ್ಷನ್ ಬಂಡವಾಳ ಹೂಡಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಈ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.